ನಮ್ಮ ನಡುವಲ್ಲೇ ಇದೆ ಒಂದು ‘ಸ್ಮಾರ್ಟ್ ವಿಲೇಜ್’

ನಮ್ಮ ನಡುವಲ್ಲೇ ಇದೆ ಒಂದು ‘ಸ್ಮಾರ್ಟ್ ವಿಲೇಜ್’

ಪ್ರತೀ ಬಾರಿ ಆದರ್ಶ ಗ್ರಾಮವೆಂದಾಗಲೆಲ್ಲ ನಾವು ಮಹಾರಾಷ್ಟ್ರದ, ಗುಜರಾತಿನ ಹಳ್ಳಿಗಳ ಉದಾಹರಣೆ ಕೊಡುತ್ತೇವೆ. ಆದರೆ ನಮ್ಮ ನಡುವೆಯೇ ರಾಷ್ಟ್ರಕ್ಕೆ ಮಾದರಿಯಾಗಬಲ್ಲ ಗ್ರಾಮವೊಂದು ಎದೆಯುಬ್ಬಿಸಿ ನಿಂತಿದೆ. ಮಾದರಿ ಗ್ರಾಮ ನಿಮರ್ಾಣಕ್ಕೆ ಜನಸಂಖ್ಯೆ ಕಡಿಮೆ ಇರಬೇಕೆಂದು ನಾವೆಲ್ಲರೂ ಭಾವಿಸಿದ್ದೇವೆ. ಆದರೆ ಹತ್ತು ಸಾವಿರ ಜನಸಂಖ್ಯೆಯುಳ್ಳ ಈ ಗ್ರಾಮದ ಎಲ್ಲರೂ ಸಕರ್ಾರಿ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿದ್ದಾರೆ, ಆಧಾರ್ ಕಾಡರ್್ ಪಡೆದುಕೊಂಡಿದ್ದಾರೆ, ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಗೆ ಹೊಂದಿಕೊಂಡಿದ್ದಾರೆ, ಮತ್ತೀಗ ನಗದು ರಹಿತ ವ್ಯವಸ್ಥೆಯತ್ತ ಪೂರ್ಣ ಬದಲಾಗಲು ಸಜ್ಜಾಗಿದ್ದಾರೆ.

25

ಸುಮಾರು ಹತ್ತು-ಹದಿನೈದು ವರ್ಷಗಳ ಹಿಂದಿನ ಘಟನೆ. ಬೆಳಗಾವಿಯಿಂದ 150 ಕಿ.ಮೀ ದೂರದಲ್ಲಿರುವ ಚಿಕ್ಕೋಡಿ ತಾಲೂಕಿನ ಶಿರಗುಪ್ಪಿ ಎನ್ನುವ ಹಳ್ಳಿಗೆ ಕುಡಿಯುವ ನೀರಿನ ಬಲುದೊಡ್ಡ ಸಮಸ್ಯೆಯಿತ್ತು. ಕೊಳವೆ ಬಾವಿಗಳು ಬೇಕಾದಷ್ಟಿದ್ದರೂ ಶುದ್ಧ ನೀರಿರಲಿಲ್ಲ. ಹೆಣ್ಣುಮಕ್ಕಳು ಮೈಲುಗಟ್ಟಲೆ ದೂರದ ಹೊಲದಿಂದ ತಲೆಯ ಮೇಲೆ ಬಿಂದಿಗೆಗಳನ್ನು ಹೊತ್ತು ತರುತ್ತಿದ್ದರು. ಕುಡಿಯುವ ನೀರನ್ನು ಅರಸುತ್ತ ನಾಗರಿಕತೆಗಳೇ ಒಕ್ಕಲೆದ್ದು ಹೋಗಿವೆಯಂತೆ. ಇನ್ನು ಶಿರಗುಪ್ಪಿ ಯಾವ ಲೆಕ್ಕ! ಊರನ್ನು ಬಿಟ್ಟು ಹೊರಡಲು ಅನೇಕರು ಸಜ್ಜಾದರು. ಒಂದಷ್ಟು ಜನ ಈ ಪರಿಸ್ಥಿತಿಯನ್ನು ನಿಭಾಯಿಸಲೆಂದೇ ಕೃಷ್ಣಾ ನದಿಗೆ ಪೈಪ್ಲೈನ್ ಹಾಕಿಸಿ ನೀರು ತರುವ ಕೆಲಸಕ್ಕೆ ಪ್ರಯತ್ನ ಆರಂಭಿಸಿದರು. ಹೆಂಗಸರು ಮೈಮೇಲಿನ ಒಡವೆ ತೆಗೆದುಕೊಟ್ಟರೆ ಗಂಡಸರು ಬ್ಯಾಂಕಿನಲ್ಲಿಟ್ಟಿದ್ದ ಹಣವನ್ನಷ್ಟೂ ಸುರಿದರು. ಕೃಷ್ಣಾ ನದಿಯ ನೀರು ಊರಿಗೆ ಬಂದ ದಿನ ಸಂಭ್ರಮವೋ ಸಂಭ್ರಮ. ಆದರೆ, ಸಕ್ಕರೆ ಕಾಖರ್ಾನೆಗಳಿಂದ ಹೊರಬಂದ ರಾಸಾಯನಿಕಗಳ ವಿಷ ಪ್ರಾಶನವಾಗಿದ್ದ ಈ ನೀರನ್ನು ಕುಡಿಯಲು ಸಾಧ್ಯವೇ ಆಗುತ್ತಿರಲಿಲ್ಲ. ಪರಿಸ್ಥಿತಿ ಅದೆಷ್ಟು ಹದಗೆಟ್ಟಿತ್ತೆಂದರೆ ಊರಿನ ಗಂಡು ಮಕ್ಕಳಿಗೆ ಯಾರು ಹೆಣ್ಣನ್ನೂ ಕೊಡುತ್ತಿರಲಿಲ್ಲ. ಮುಂದೇನೆಂದು ತಲೆಯ ಮೇಲೆ ಕೈಹೊತ್ತುಕೊಂಡು ಕುಳಿತಿರುವಾಗಲೇ ವಿಶ್ವಬ್ಯಾಂಕ್ ಕುಡಿಯುವ ನೀರಿನ ಕುರಿತಂತೆ ಪ್ರಸ್ತಾಪವಿಟ್ಟಿತು. ಆದರೆ ಒಟ್ಟೂ ಖಚರ್ಿನಲ್ಲಿ ಶೇಕಡಾ 30 ರಷ್ಟನ್ನು ಸ್ಥಳೀಯರೇ ಭರಿಸಬೇಕೆಂಬುದು ಅವರ ನಿಯಮವಾಗಿತ್ತು. ಜನ ಪಣತೊಟ್ಟರು. ಎಲ್ಲರ ಮನವೊಲಿಸಿ ಮನೆ-ಮನೆಗೆ ಭೇಟಿಕೊಟ್ಟು ಧನಸಂಗ್ರಹ ಮಾಡಲಾಯಿತು. ಯೋಜನೆಯೇನೊ ಬಂತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆ ಸಮಾಧಾನಕರವಾಗಲಿಲ್ಲ. ಪ್ರತಿಭಟನೆಗೆ ನಿಂತ ಗ್ರಾಮಸ್ಥರು ಸಕರ್ಾರದೊಂದಿಗೆ ಬಡಿದಾಡಿ ತಾವೇ ಮುಂದೆ ನಿಂತು ಯೋಜನೆ ಸಮರ್ಪಕವಾಗುವಂತೆ ನೋಡಿಕೊಂಡರು. ಎರಡೂವರೆ ಲಕ್ಷ ಲೀಟರ್ ಸಾಮಥ್ರ್ಯ ಹೊಂದಿದ ಎರಡು ಓವರ್ಹೆಡ್ ಟ್ಯಾಂಕ್ಗಳನ್ನು, ಕೃಷ್ಣಾ ನದಿಯಿಂದ ಬಂದ ಕೊಳಕು ನೀರನ್ನು ಶುದ್ಧೀಕರಿಸಲೆಂದು ಪಂಪ್ಹೌಸ್ಗಳನ್ನು, ಶುದ್ಧೀಕರಣ ತೊಟ್ಟಿಗಳನ್ನು ನಿಮರ್ಿಸಿಕೊಂಡರು. ಕೊನೆಗೆ ಪೈಪ್ಲೈನ್ಗಳನ್ನು ಅಳವಡಿಸಿ ಮನೆ-ಮನೆಗೂ ನಲ್ಲಿಯಲ್ಲಿ ನೀರು ಬರುವಂತೆ ವ್ಯವಸ್ಥೆ ಮಾಡಿಕೊಂಡರು. ಓಹ್! ಶಿರಗುಪ್ಪಿಯಲ್ಲಿ ಶುದ್ಧ ನೀರು ಕಂಡೊಡನೆ ಹಬ್ಬದ ವಾತಾವರಣ! ಇಂದು 24 ಗಂಟೆ ಶುದ್ಧ ಕುಡಿಯುವ ನೀರು ಶಿರಗುಪ್ಪಿಗೆ ಲಭ್ಯವಿದೆಯಲ್ಲದೇ ಬೇಸಿಗೆ ಕಾಲದಲ್ಲಿ ತಂಪು ನೀರನ್ನು ಮನೆ-ಮನೆಗೂ ತಲುಪಿಸುವ ವ್ಯವಸ್ಥೆ ಬಹುಶಃ ದೇಶದಲ್ಲಿಯೇ ಮೊದಲನೆಯದೆನಿಸುತ್ತದೆ.

 

ನೀರಿಗಾಗಿ ಶುರುವಾದ ಕದನ ಜನರನ್ನು ಪ್ರಜ್ಞಾವಂತಿಕೆಯ ಮುನ್ನೆಲೆಗೆ ತಂದು ನಿಲ್ಲಿಸಿತು. ಗ್ರಾಮಸ್ಥರು ಒಂದಾದರೆ ಗ್ರಾಮದ ಬದಲಾವಣೆ ಸಾಧ್ಯವೆಂದು ಊರಿನವರಿಗೆ ಈಗ ಮನದಟ್ಟಾಯ್ತು. ಅವರು ಗ್ರಾಮದ ಉನ್ನತಿಗೋಸ್ಕರ ತಮ್ಮ ತಾವು ಸಮಪರ್ಿಸಿಕೊಳ್ಳಲು ಸಿದ್ಧರಾದರು. ಶಿರಗುಪ್ಪಿಗೆ ಸಹಜವಾಗಿಯೇ ಒಂದು ವೈಶಿಷ್ಟ್ಯವಿದೆ. ಇದು ಮಹಾರಾಷ್ಟ್ರಕ್ಕೆ ಹತ್ತಿರದ ಹಳ್ಳಿಯಾದ್ದರಿಂದ ಮರಾಠಿ-ಕನ್ನಡ ಎರಡರ ನಡುವೆ ಸಾಮರಸ್ಯವಿದೆ. ಸೊಸೆಯಾಗಿ ಬಂದಿರುವ ಅನೇಕರು ಮರಾಠಿಗರೇ ಆಗಿದ್ದಾರೆ. ಗ್ರಾಮ ಪಂಚಾಯತ್ ಸದಸ್ಯರೊಬ್ಬರು ತಮಾಷೆಯಿಂದಲೇ ಹೇಳಿದ್ದರು, ಕನ್ನಡಕ್ಕಾಗಿ ಗಂಡ ಹೋರಾಟ ಮಾಡಿ ಮನೆಗೆ ಹೋದರೆ ಹೆಂಡತಿ ಊಟ ಹಾಕಲಾರಳುಅಂತ. ಭಾಷೆಯಷ್ಟೇ ಅಲ್ಲ, ಜಾತಿ-ಪಂಥಗಳ ವಿಚಾರದಲ್ಲೂ ಶಿರಗುಪ್ಪಿ ಮಾದರಿಯೇ. ಹಿಂದುಗಳಲ್ಲಿ ಎಲ್ಲ ಪ್ರಮುಖ ಜಾತಿಗಳೂ ಇಲ್ಲಿವೆ. ಬೇರೆ ಪಂಥಗಳ ವಿಚಾರಕ್ಕೆ ಬಂದರೆ ಶೇಕಡಾ ಹತ್ತರಷ್ಟು ಮುಸಲ್ಮಾನರೇ ಇದ್ದಾರೆ. ಆದರೆ ಇಲ್ಲಿ ಜಾತಿ-ಪಂಥಗಳ ನೆಪದಲ್ಲಿ ಕದನಗಳು ನಡೆದ ಉಲ್ಲೇಖವೇ ಇಲ್ಲ. ಇಷ್ಟಕ್ಕೂ ಇಲ್ಲಿನ ಗ್ರಾಮದೇವತೆಯೇ ಶ್ರೀ ಹಜರತ್ ಮಾ ಸಾಹೇಬಿ ದೇವಿ! ಅದೊಂದು ದಗರ್ಾ. ಈ ದಗರ್ಾಕ್ಕೆ ಎಲ್ಲ ಪಂಥದವರೂ ಗೌರವದಿಂದಲೇ ನಡೆದುಕೊಳ್ಳುತ್ತಾರೆ. ಪೂಜೆ ಮತ್ತು ನಮಾಜ್ ಜೊತೆ ಜೊತೆಯಲ್ಲೇ ನಡೆಯುವ ಅಪರೂಪದ ಜಾಗ ಇದು.

2

ಶಿರಗುಪ್ಪಿ ಮಾದರಿಯಾಗಲಿಕ್ಕೆ ಬೇಕಿದ್ದ ಎಲ್ಲವೂ ಇತ್ತು. ಕೊರತೆಯಿದ್ದದ್ದು ಇಚ್ಛಾಶಕ್ತಿಯದ್ದು ಮಾತ್ರ. ಕುಡಿಯುವ ನೀರಿನ ಹೋರಾಟದ ನೆಪದಲ್ಲಿ ಈಗ ಅದೂ ದೊರಕಿತ್ತು. ಊರಿನವರು ಹೊಸ ಇತಿಹಾಸ ರಚಿಸಲು ಹೊರಟಿದ್ದರು. ಪಂಚಾಯತಿಯನ್ನು ಊರಿನ ಜನರ ಬವಣೆಗಳಿಗೆ ಸಮರ್ಥ ಉತ್ತರ ಕೊಡುವ ತಾಣವಾಗಿ ರೂಪಿಸಲು ಅವರು ಸನ್ನದ್ಧರಾದರು. ಎಲ್ಲಕ್ಕೂ ಮೊದಲು ಊರನ್ನು ಸಮರ್ಥವಾಗಿ ರೂಪಿಸಲು ತೆರಿಗೆ ಸಂಗ್ರಹ ಹೆಚ್ಚಿಸುವ ಅನಿವಾರ್ಯತೆ ಇತ್ತು. ಅದಕ್ಕಾಗಿ ಎಲ್ಲ ಪ್ರಯತ್ನ ಶುರುವಾಯ್ತು. ಮೊದಲು ಜನರ ನಂಬಿಕೆ ಗಳಿಸಲೆಂದು ಪಂಚಾಯಿತಿ ಕ್ಯಾಶ್ಲೆಸ್ ವ್ವಸ್ಥೆಯನ್ನು ಜಾರಿಗೆ ತಂದು ಪಾರದರ್ಶಕ ವ್ಯವಸ್ಥೆ ರೂಪಿಸಿತು. ಹೌದು. ನರೇಂದ್ರಮೋದಿ ಕ್ಯಾಶ್ಲೆಸ್ ಭಾರತದ ಕುರಿತಂತೆ ಮಾತನಾಡುವುದಕ್ಕೂ ಬಲು ಹಿಂದೆಯೇ ಶಿರಗುಪ್ಪಿ ಕ್ಯಾಶ್ಲೆಸ್ ಆಗಿತ್ತು. ಇಲ್ಲಿನ ಪಂಚಾಯತಿಯಲ್ಲಿ ಹಣದ ವಹಿವಾಟೇ ಇಲ್ಲ. ಜನರು ತೆರಿಗೆಯ ಹಣಕ್ಕೆ ಸಂಬಂಧಿಸಿದ ಚಲನ್ ಅನ್ನು ಪಡೆದು ಬ್ಯಾಂಕಿಗೆ ಹಣ ಕಟ್ಟಿ ಚಲನ್ ತಲುಪಿಸಿದರಾಯ್ತು. ಜೊತೆಗೆ ಪ್ರತಿ ಪಂಚಾಯತಿ ಸಭೆಗೂ ಮುನ್ನ ಹಳೆಯ ತಿಂಗಳ ಆದಾಯ ಮತ್ತು ವ್ಯಯದ ಪಟ್ಟಿಯನ್ನು ಪ್ರತಿಯೊಬ್ಬ ಸದಸ್ಯರಿಗೂ ಮೊದಲೇ ತಲುಪಿಸುವ ಮತ್ತು ಯಾರು ಬೇಕಾದರೂ ಅದನ್ನು ಅವಲೋಕಿಸುವ ವ್ಯವಸ್ಥೆ ಜಾರಿಗೆ ತಂದರು. ಆಮೇಲೆ ಆದದ್ದು ಅಕ್ಷರಶಃ ಮ್ಯಾಜಿಕ್ಕು. 2780 ಕುಟುಂಬಗಳ ಈ ಹಳ್ಳಿ ಸುಮಾರು 10,000 ದಷ್ಟು ಜನಸಂಖ್ಯೆಯನ್ನು ಹೊಂದಿದೆ. ಆರಂಭದಲ್ಲಿ 7 ಲಕ್ಷದಷ್ಟು ಸಂಗ್ರಹವಾಗುತ್ತಿದ್ದ ತೆರಿಗೆ ಈಗ 33 ಲಕ್ಷಕ್ಕೇರಿದೆ! ತೆರಿಗೆ ಸಂಗ್ರಹಕ್ಕೆ ಯಾರನ್ನೂ ಹುಡುಕಿಕೊಂಡು ಹೋಗಬೇಕಾದ ಪ್ರಮೇಯವೇ ಇಲ್ಲ. ಖುದ್ದಾಗಿ ಆಸ್ತಿಯ ಮಾಲೀಕರೇ ಬಂದು ತೆರಿಗೆ ಕಟ್ಟಿ ಹೋಗುತ್ತಾರೆ.

4

ಗ್ರಾಮ ಪಂಚಾಯತಿಯ ಕಟ್ಟಡದೊಳಗೂ ಹಾಗೆಯೇ ಇದೆ ವ್ಯವಸ್ಥೆ. ಜಗತ್ತಿನ ಮುಂದುವರಿದ ದೇಶಗಳಲ್ಲಿರಬಹುದಾದಂತ ವ್ಯವಸ್ಥೆಗಳನ್ನು ರೂಪಿಸಿಬಿಟ್ಟಿದ್ದಾರೆ. ಸ್ಥಳೀಯನೊಬ್ಬ ತನ್ನ ಸಮಸ್ಯೆಯನ್ನು ಹೊತ್ತುಕೊಂಡು ಬಂದರೆ ಎಲ್ಲಿಗೆ ಹೋಗಬೇಕೆಂದು ತಡಕಾಡಬೇಕಾಗಿಲ್ಲ. ಆಯಾ ಸಮಸ್ಯೆಗಳನ್ನಾಲಿಸಲು ಅಲ್ಲಿರುವ ನಿಧರ್ಾರಿತ ವ್ಯಕ್ತಿಗಳ ಬಳಿ ಹೋಗಿ ಕುಳಿತರಾಯ್ತು. ಅವರೇ ಪರಿಹಾರ ಹುಡುಕಿಕೊಡುತ್ತಾರೆ. ಬಹುಶಃ ಎಲ್ಲಿಯೂ ಕಂಡ ಬರದ ಮತ್ತೊಂದು ಅಪರೂಪದ ವೈಶಿಷ್ಟ್ಯವೆಂದರೆ ಈ ಪಂಚಾಯತಿಯಲ್ಲಿ ನಡೆಯುವ ಪ್ರತಿಯೊಂದು ಚಚರ್ೆಯೂ ಗ್ರಾಮಸ್ಥರು ತಮ್ಮ ಮನೆಯಲ್ಲಿಯೇ ಕುಳಿತು ಟಿ.ವಿಯಲ್ಲಿ ನೋಡಬಹುದಾದ ವ್ಯವಸ್ಥೆಯನ್ನು ಮಾಡಲಾಗಿದೆ. ಇದಕ್ಕಾಗಿ ಕೇಬಲ್ ನೆಟ್ವಕರ್್ ಅನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಶಿರಗುಪ್ಪಿಯುದ್ದಕ್ಕೂ ಅಳವಡಿಸಿರುವ ಸ್ಪೀಕರ್ಗಳು ಖಂಡಿತವಾಗಿಯೂ ನಿಮ್ಮನ್ನು ಆಕಷರ್ಿಸುತ್ತವೆ. ಪಂಚಾಯತಿಯಿಂದ ನೇರ ಸಂಪರ್ಕ ಹೊಂದಿರುವ ಈ ಸ್ಪೀಕರ್ಗಳಲ್ಲಿ ಯಾವುದೇ ತುತರ್ು ಸಂದೇಶಗಳಿದ್ದಲ್ಲಿ ಬಿತ್ತರಿಸುವ ವ್ಯವಸ್ಥೆ ಮಾಡಲಾಗಿದೆ. ಗ್ಯಾಸ್ ಸಿಲಿಂಡರ್ ಊರಿಗೆ ಬಂತೆಂದರೆ ಆ ಕ್ಷಣಕ್ಕೆ ಮಾಹಿತಿ ಎಲ್ಲರಿಗೂ ತಲುಪುವಂತ ವ್ಯವಸ್ಥೆ ಇದೆ. ಊರಿಗೆ ಯಾರಾದರೂ ಗಣ್ಯರು ಬಂದರೆ ಅವರು ಪಂಚಾಯತಿ ಕಛೇರಿಯಲ್ಲಿ ಕುಳಿತು ಮಾತನಾಡಿದರೆ ಸಾಕು ಅವರ ದನಿ ಸ್ಪೀಕರ್ಗಳ ಮೂಲಕ ಊರಿಗೆಲ್ಲ ತಲುಪುತ್ತದೆ. ಟಿವಿಯ ಮೂಲಕ ಕುಳಿತಲ್ಲಿಯೇ ನೋಡಬಹುದು ಕೂಡ.

31

ತೀರಾ ಇತ್ತೀಚೆಗೆ ಶಿರಗುಪ್ಪಿಯ ಜನರೇ ವಂತಿಗೆ ಸಂಗ್ರಹಿಸಿ ಆ್ಯಂಬುಲೆನ್ಸ್ ಅನ್ನು ತರಿಸಿಕೊಂಡಿದ್ದಾರೆ. ಗ್ರಾಮ ಪಂಚಾಯತಿಯೇ ಡಿಜಿಟಲ್ ಗ್ರಂಥಾಲಯವನ್ನು ರೂಪಿಸಿದ್ದು ಅತ್ಯಾಧುನಿಕ ವ್ಯವಸ್ಥೆಯನ್ನು ಒದಗಿಸಿಕೊಡುವ ಪ್ರಯತ್ನ ಮಾಡಿದೆ. ಅದಾಗಲೇ ಈ ಗ್ರಾಮ ತನ್ನದ್ದೇ ಆದ ಮೊಬೈಲ್ ಅಪ್ಲಿಕೇಶನ್ ರೂಪಿಸಿ ಜನರಿಗೆ ಸಕರ್ಾರದ ಆದೇಶಗಳು, ಗ್ರಾಮದ ಕುಂದು-ಕೊರತೆ, ಅಭಿವೃದ್ಧಿ ಕಾಮಗಾರಿ ಇತ್ಯಾದಿ ವಿಚಾರಗಳ ಕುರಿತಾಗಿ ನೇರವಾಗಿ ತಲುಪಿಸುವ ವ್ಯವಸ್ಥೆ ಮಾಡಲಿದೆ. ಬಿಎಸ್ಎನ್ಎಲ್ ನ ಕಛೇರಿಯಲ್ಲಿನ ಸಮಸ್ಯೆ ಸರಿಹೋದರೆ ಕೆಲವೇ ದಿನಗಳಲ್ಲಿ ಗ್ರಾಮಕ್ಕೆ ವೈಫಿಯೂ ಸಿದ್ಧಿಸಲಿದೆ. ಗ್ರಾಮದ ಎಲ್ಲ ಆಸ್ತಿಗಳನ್ನು ಸವರ್ೇ ಮಾಡಿ ಅದನ್ನು ಕಂಪ್ಯೂಟರೀಕೃತಗೊಳಿಸಿ ಇರಿಸಲಾಗಿದೆ. ಆಸ್ತಿ ಮಾಲೀಕರು ಮರಣ ಹೊಂದಿದರೆ ಅಂತಹ ಕುಟುಂಬಕ್ಕೆ ಹತ್ತು ಸಾವಿರ ರೂಪಾಯಿಗಳನ್ನು ಕಲ್ಯಾಣ ನಿಧಿ ಎಂದು ಕೊಡಲಾಗುತ್ತದೆ. ಎಲ್ಲಕ್ಕಿಂತಲೂ ಅಚ್ಚರಿ ಏನು ಗೊತ್ತೇ? ಈ ಗ್ರಾಮದಲ್ಲಿ ಚುನಾವಣೆಗಿಂತ ಹೆಚ್ಚು ಅವಿರೋಧ ಆಯ್ಕೆಯತ್ತ ಜನ ಗಮನ ಹರಿಸಿದ್ದಾರೆ. ಸಕರ್ಾರದ ನೀತಿ-ನಿಯಮಗಳಂತೆ ಆಯಾ ಮೀಸಲಾತಿಗೆ ಸೇರಿದ ಜನ ತಾವೇ ಸಮರ್ಥ ನಾಯಕನನ್ನು ಆರಿಸಿ, ಗುರುತಿಸಿ ಕಳಿಸಿಬಿಡುತ್ತಾರೆ. ಇಷ್ಟಾಗಿಯೂ ಕೆಲವೊಮ್ಮೆ ಚುನಾವಣೆಗಳು ನಡೆಯುತ್ತವೆ. ಹಾಗೆ ನಡೆದಾಗ ಸಂಜೆ 5 ಗಂಟೆಯವರೆಗೆ ಚುನಾವಣೆ ಪಕ್ಷ, ಜಾತಿ, ಎಲ್ಲ. ಚುನಾವಣೆ ಮುಗಿದೊಡನೆ ಎಲ್ಲರಿಗೂ ಶಿರಗುಪ್ಪಿಯದಷ್ಟೇ ಚಿಂತೆ. ಊರನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕಲ್ಪನೆಯಷ್ಟೇ. 2005 ರವರೆಗೆ ಇದ್ದ ಬಯಲು ಶೌಚಾಲಯದ ಸಮಸ್ಯೆ ಈಗ ಶಿರಗುಪ್ಪಿಗಿಲ್ಲ. ಇದು ಈಗ ಪರಿಪೂರ್ಣ ಸ್ವಚ್ಛಗ್ರಾಮ! ಶಿರಗುಪ್ಪಿ ಗ್ರಾಮ ಪಂಚಾಯತಿಗೆ ಸಂದಿರುವ ಪ್ರಶಸ್ತಿಗಳು ಒಂದೆರಡಲ್ಲ. ಅಂತರರಾಷ್ಟ್ರೀಯ ಗೂಗಲ್ ಪ್ರಶಸ್ತಿ, ರಾಷ್ಟ್ರೀಯ ಗೌರವ ಗ್ರಾಮಸಭಾ ಪ್ರಶಸ್ತಿ, ಪಂಚಾಯತ್ ಸಶಕ್ತೀಕರಣ ಪುರಸ್ಕಾರ, ಗಾಂಧಿಗ್ರಾಮ ಪುರಸ್ಕಾರ, ಬಯಲು ಬಹಿದರ್ೆಸೆ ಮುಕ್ತ ಗ್ರಾಮ ಪುರಸ್ಕಾರ, ಹೀಗೆ ಹತ್ತಾರು ಪ್ರಶಸ್ತಿಗಳು, ಲಕ್ಷಾಂತರ ರೂಪಾಯಿ ಬಹುಮಾನ ಅವರ ಬಗಲಿಗೆ ಬಿದ್ದಿದೆ. ಹೀಗೆ ಬಂದಿರುವ ಹಣವನ್ನು ಗ್ರಾಮದ ಅಭಿವೃದ್ಧಿಗೆ ಪೂರ್ಣ ಪ್ರಮಾಣದಲ್ಲಿ ಬಳಸಿ ಗೌರವಕ್ಕೆ ಪಾತ್ರರಾಗಿದ್ದಾರೆ ಶಿರಗುಪ್ಪಿಯ ಜನ.

ಪ್ರತೀ ಬಾರಿ ಆದರ್ಶ ಗ್ರಾಮವೆಂದಾಗಲೆಲ್ಲ ನಾವು ಮಹಾರಾಷ್ಟ್ರದ, ಗುಜರಾತಿನ ಹಳ್ಳಿಗಳ ಉದಾಹರಣೆ ಕೊಡುತ್ತೇವೆ. ಆದರೆ ನಮ್ಮ ನಡುವೆಯೇ ರಾಷ್ಟ್ರಕ್ಕೆ ಮಾದರಿಯಾಗಬಲ್ಲ ಗ್ರಾಮವೊಂದು ಎದೆಯುಬ್ಬಿಸಿ ನಿಂತಿದೆ. ಮಾದರಿ ಗ್ರಾಮ ನಿಮರ್ಾಣಕ್ಕೆ ಜನಸಂಖ್ಯೆ ಕಡಿಮೆ ಇರಬೇಕೆಂದು ನಾವೆಲ್ಲರೂ ಭಾವಿಸಿದ್ದೇವೆ. ಆದರೆ ಹತ್ತು ಸಾವಿರ ಜನಸಂಖ್ಯೆಯುಳ್ಳ ಈ ಗ್ರಾಮದ ಎಲ್ಲರೂ ಸಕರ್ಾರಿ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿದ್ದಾರೆ, ಆಧಾರ್ ಕಾಡರ್್ ಪಡೆದುಕೊಂಡಿದ್ದಾರೆ, ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಗೆ ಹೊಂದಿಕೊಂಡಿದ್ದಾರೆ, ಮತ್ತೀಗ ನಗದು ರಹಿತ ವ್ಯವಸ್ಥೆಯತ್ತ ಪೂರ್ಣ ಬದಲಾಗಲು ಸಜ್ಜಾಗಿದ್ದಾರೆ. ತಮ್ಮನ್ನು ತಾವು ಬುದ್ಧಿವಂತರೆಂದುಕೊಳ್ಳುವ ಪಟ್ಟಣಿಗರಿಗೂ, ನಗದು ರಹಿತ ವ್ಯವಸ್ಥೆಗೆ ಹಳ್ಳಿಗರು ಹೊಂದಿಕೊಳ್ಳಲಾರರೆಂಬ ವಾದ ಮಂಡಿಸುವ ಬುದ್ಧಿಜೀವಿಗಳಿಗೂ ಶಿರಗುಪ್ಪಿ ಸರಿಯಾದ ಪಾಠ ಕಲಿಸಬಲ್ಲದು.

ಕನರ್ಾಟಕದ ಕುರಿತಂತೆ ಇನ್ನೂ ಹೆಚ್ಚಿನ ಕನಸನ್ನು ಕಟ್ಟಿಕೊಳ್ಳಲು ಶಿರಗುಪ್ಪಿ ನನಗಂತೂ ಪ್ರೇರಣೆ ನೀಡಿತು. ಎಂದಾದರೊಮ್ಮೆ ಅವಕಾಶ ಸಿಕ್ಕಾಗ ಶಿರಗುಪ್ಪಿಗೆ ಭೇಟಿ ನೀಡೋಣ. ನಮ್ಮೂರಿನ ನಿಮರ್ಾಣಕ್ಕೂ ಒಂದಷ್ಟು ಪ್ರೇರಣೆ ಪಡೆಯೋಣ. ಏನಂತೀರಿ!

2 thoughts on “ನಮ್ಮ ನಡುವಲ್ಲೇ ಇದೆ ಒಂದು ‘ಸ್ಮಾರ್ಟ್ ವಿಲೇಜ್’

  1. ಕಟ್ಟುವೆವು ನಾವು ನಾಡೊಂದನ್ನ
    ರಸದ ಬೀಡೊಂದನ್ನ. -ಡಿ.ವಿ.ಜಿ
    ನನಗಂತೂ ಈ ಶಿರಗುಪ್ಪ ಗ್ರಾಮದ ನೈಜತೆಯನ್ನು ತಿಳಿದು ತುಂಬಾ ಹರ್ಷ ಮೂಡಿದೆ… ಮುಂದಿನ ದಿನಗಳಲ್ಲಿ ನನ್ನ ಭಾರತದ ಪ್ರತಿ ಹಳ್ಳಿಯೂ ಹೀಗೆ ಆಗಬೇಕು. ನಾವು ಕಂಡ “ವಿಶ್ವಗುರು ಭಾರತ “ದ ಕನಸು ಸಾಕಾರಗೊಳ್ಳಬೇಕು.
    ಸ್ವಾಮಿ ವಿವೇಕಾನಂದರ ಆದರ್ಶಗಳೇ ನಮಗೆ ಪ್ರೇರಣೆಯಾಗಬೇಕು. ‘ವಿಕಾಸ್’ಎಂಬ ಬಹುದೊಡ್ಡ ಕಲ್ಪನೆ ಸಾಕಾರವಾಗುವುದಕ್ಕೆ ಇದುವೇ ಪ್ರೇರಣೆಯಾಗಲಿ….

ನಿಮ್ಮ ಟಿಪ್ಪಣಿ ಬರೆಯಿರಿ