ಚೀನಾದ ವೇಗವೇ ಅದನ್ನು ಕೊಲ್ಲಲಿದೆ!

ಚೀನಾದ ವೇಗವೇ ಅದನ್ನು ಕೊಲ್ಲಲಿದೆ!


ಅತಿಯಾದ ವೇಗ ಅಪಘಾತಕ್ಕೆ ಕಾರಣ ಎಂದು ಓದಿದ್ದೆವಲ್ಲ, ಅದೀಗ ಚೀನಾದ ವಿಷಯದಲ್ಲಿ ಸಾಬೀತಾಗೋದು ಕಂಡು ಬರುತ್ತಿದೆ. ನಿಸ್ಸಂಶಯವಾಗಿ ಕಳೆದ ಆರೇಳು ದಶಕದಲ್ಲಿ ಚೀನಾ ಬೆಳೆದಿರುವ ರೀತಿ ಅಮೋಘವಾದ್ದು. ನಿಶ್ಚಿತಮತಿಯಾಗಿ ಗುರಿಯನ್ನು ಸಾಧಿಸುವ ಛಲವಿದ್ದರೆ ಏನು ಮಾಡಬಹುದೆಂಬುದಕ್ಕೆ ಚೀನಾ ಸ್ಪಷ್ಟ ಉದಾಹರಣೆ. ಆದರೆ ಹೀಗೆ ಬೆಳೆಯುವಾಗ ಅನ್ಯರ ನಾಶದ ಕಲ್ಪನೆ ಇಟ್ಟುಕೊಂಡು ಮೇಲೇರುತ್ತಾರಲ್ಲ ಅವರು ಅಷ್ಟೇ ಬೇಗನೇ ನಾಶವೂ ಆಗಿಬಿಡುತ್ತಾರೆ. ಜಗತ್ತಿನ ಶ್ರೇಷ್ಠ ಸಂಸ್ಕೃತಿಗಳ ಸಾಲಿನಲ್ಲಿ ಗಣಿಸಲ್ಪಡುವ ಚೀನಾ ಮುಂದೆ ಯಾವ ಹಂತಕ್ಕೆ ಹೋಗಬಲ್ಲುದೋ ಎಂಬುದು ಸದ್ಯಕ್ಕಂತೂ ಪ್ರಶ್ನಾರ್ಥಕ ಚಿಹ್ನೆ!


ಷಿ ಅಧಿಕಾರಕ್ಕೆ ಬಂದಾಗಿನಿಂದಲೂ ಆತನ ಕಲ್ಪನೆಗಳು ಬಲುದೊಡ್ಡವೇ. ಚೀನಾದ ಕಮ್ಯುನಿಸ್ಟ್ ಪಾಟರ್ಿಯನ್ನು ಆತ ಬಲಗೊಳಿಸಿದ ಮತ್ತು ವಿಶ್ವವ್ಯಾಪಿಯಾಗಿಸಿದ ರೀತಿ ಯಾರೂ ಊಹಿಸಲೂ ಸಾಧ್ಯವಾಗದೇ ಇದ್ದಂಥದ್ದು. ಅಮೇರಿಕಾ ರಾಷ್ಟ್ರ-ರಾಷ್ಟ್ರಗಳನ್ನು ಕದನಕ್ಕೆ ಹಚ್ಚಿ ತಾನು ಹಿರಿಯಣ್ಣನಂತೆ ಸಂಧಾನಕ್ಕೆ ಹೋಗುವ ಮೂಲಕ ದೊಡ್ಡತನವನ್ನು ಮೆರೆಯುವ ಪ್ರಯತ್ನ ಮಾಡುತ್ತಿದ್ದರೆ, ಷಿ ಬೇರೊಂದು ದಾರಿಯನ್ನೇ ಹಾಕಿಕೊಟ್ಟ. ನೂರಾರು ಕಂಪೆನಿಗಳ ಮೂಲಕ ಜಗತ್ತಿಗೆ ಲಗ್ಗೆಯಿಟ್ಟ. ಚೀನಾವನ್ನು ಬಿಟ್ಟು ಬದುಕುವುದು ಸಾಧ್ಯವೇ ಇಲ್ಲ ಎಂಬಂತಹ ವಾತಾವರಣವನ್ನು ಸೃಷ್ಟಿಸಿಬಿಟ್ಟ. ಈ ಕಂಪೆನಿಗಳು ಸಾಧಾರಣವಾದವುಗಳಾಗಿರಲಿಲ್ಲ. ಚೀನಾದ ಸೈನ್ಯದ ಕನಸುಗಳನ್ನು ಸಾಕಾರ ಮಾಡುವ ಕಮ್ಯಾಂಡರ್ ಇನ್ ಚೀಫ್ಗಳಾಗಿದ್ದವು. ಚೀನಾದ ದೊಡ್ಡ-ದೊಡ್ಡ ಕಂಪೆನಿಗಳು ನಿಮರ್ಾಣವಾಗಿರುವ ಕಥೆ ರೋಚಕವಾದ್ದು. ಯಾವುದೂ ಸಹಜವಾಗಿ ಬೆಳೆದು ನಿಂತವಲ್ಲ, ಎಲ್ಲದರ ಹಿಂದೆಯೂ ಚೀನಾದ ಕಮ್ಯುನಿಸ್ಟ್ ಪಾಟರ್ಿಯದ್ದೇ ಕೈ! ಮೊದಲಿಗೆ ಕಮ್ಯುನಿಸ್ಟ್ ಪಕ್ಷ ಅಥವಾ ಸ್ವತಃ ಸಕರ್ಾರ ಈ ಕಂಪೆನಿಗಳಿಗೆ ಆರಂಭದಲ್ಲಿ ಸಕರ್ಾರಿ ಗುತ್ತಿಗೆಗಳನ್ನು ಕೊಡುತ್ತದೆ. ಆನಂತರ ಈ ಕಂಪೆನಿಗಳಿಗಿರಬಹುದಾದ ವಿದೇಶೀ ಸ್ಪಧರ್ೆಯನ್ನು ಆ ಕಂಪೆನಿಗಳನ್ನೇ ತನ್ನ ದೇಶದಲ್ಲಿ ಕಾಲಿಡದಂತೆ ಮಾಡುವ ಮೂಲಕ ನಿವಾರಿಸುತ್ತದೆ. ತನ್ನ ದೇಶದ ಕಂಪೆನಿಯನ್ನು ಚೀನಾದೊಳಗೆ ಏಕಮಾತ್ರ ಕಂಪೆನಿಯಾಗಿ ಬೆಳೆಸಿ ಸಮರ್ಥವಾದ ಮೇಲೆ ಜಗತ್ತಿಗೆ ವಿಸ್ತರಿಸಲು ಅನುಕೂಲ ಮಾಡಿಕೊಡುತ್ತದೆ. ಈ ಕಂಪೆನಿಗಳಿಗೆ ಬೇಕಾದ ಆರಂಭಿಕ ಹಣ, ಕೈತುಂಬ ಕೆಲಸ, ವಿಸ್ತಾರಗೊಳ್ಳಲು ಬೇಕಾಗಿರುವಂತಹ ವ್ಯವಸ್ಥೆ ಎಲ್ಲವನ್ನೂ ಸಕರ್ಾರವೇ ಒದಗಿಸಿಕೊಡುತ್ತದೆ. ಮುಂದಿನದ್ದೇ ಬಲು ಮಹತ್ವದ್ದು. ಈ ಕಂಪೆನಿಗಳನ್ನು ಮುಂದೆ ಮಿಲಿಟರಿ ಆಕಾಂಕ್ಷೆಗಳನ್ನು ಪೂರೈಸಲಿಕ್ಕಾಗಿ ಬೆಸೆಯಲಾಗುತ್ತದೆ. ಇದು ಷಿ ಜಿನ್ಪಿಂಗ್ನ ಮಿಲಿಟರಿ ಸಿವಿಲ್ ಫ್ಯೂಷನ್ ಎಂಬ ಕಲ್ಪನೆಯ ಕೂಸು. ಜಾಗತಿಕ ತಂತ್ರಜ್ಞಾನವನ್ನು ಈ ಕಂಪೆನಿಗಳ ಮೂಲಕ ತಮ್ಮದಾಗಿಸಿಕೊಂಡು 2050ರ ವೇಳೆಗೆ ಚೀನೀ ಮಿಲಿಟರಿಯನ್ನು ಜಗತ್ತಿನ ಅತ್ಯಂತ ಪ್ರಬಲ ಶಕ್ತಿಯಾಗಿ ಬೆಳೆಸುವ ಇರಾದೆ ಆತನದ್ದು. ಅದಕ್ಕಾಗಿ ನ್ಯಾಯಯುತವಾದ ಅನ್ಯಾಯಯುತವಾದ ಯಾವ ಮಾರ್ಗಗಳನ್ನಾದರೂ ಮುಲಾಜಿಲ್ಲದೇ ಬಳಸಲು ಈ ಕಂಪೆನಿಗಳಿಗೆ ಪರವಾನಗಿ ಇದೆ. ಮತ್ತು ಈ ಕಂಪೆನಿಗಳು ಸದಾ ಸಕರ್ಾರದ ಮಜರ್ಿಯಲ್ಲೇ ಇರುವುದರಿಂದ ಅವರು ಸಕರ್ಾರದ ವಿರುದ್ಧ ದನಿ ಎತ್ತುವುದಿರಲಿ ಮಿಸುಕಾಡುವಂತೆಯೂ ಇಲ್ಲ. ಅಲಿಬಾಬಾದ ಮುಖ್ಯಸ್ಥ ಜಾಕ್ಮಾ ಷಿ ವಿರುದ್ಧ ಮಾತನಾಡಿ ಕಾಣೆಯಾಗಿ ಹೋಗಿದ್ದು, ಆ ಕುರಿತಂತೆ ಚೀನಾದ ಜನ ಮಾತೂ ಆಡದೇ ಇರುವುದು ಈ ಕಾರಣಕ್ಕಾಗಿಯೇ ಅಚ್ಚರಿಯ ಸಂಗತಿಯೇನಲ್ಲ. ಬೆಳೆದು ನಿಂತ ಪ್ರತಿಯೊಂದು ಕಂಪೆನಿಯೂ ಚೀನಾದ ಸೈನ್ಯಕ್ಕೆ ಪ್ರತ್ಯುಪಕಾರ ಮಾಡಲೇಬೇಕು. ಹುವೈ ಕಂಪೆನಿ ಹಾಡರ್್ವೇರ್ ತಂತ್ರಜ್ಞಾನದಲ್ಲಿ ಜಗತ್ತಿನ ಮಟ್ಟಿಗೆ ಅನಿವಾರ್ಯವೆಂಬಂತೆ ಬೆಳೆದು ನಿಂತುಬಿಟ್ಟಿದೆ. ಚೀನಾದಲ್ಲಿ ಅವರು ರೂಪಿಸಿರುವ ತಂತ್ರಜ್ಞಾನ ಫೇಸ್ ಡಿಟೆಕ್ಷನ್ನಲ್ಲಿ ಅಗ್ರಣಿ. ಉಯ್ಘುರ್ ಮುಸಲ್ಮಾನರು ತಮ್ಮ ಪ್ರಾಂತ್ಯ ಬಿಟ್ಟು ಬೇರೆಲ್ಲೇ ಕಂಡುಬಂದರೂ ಅಳವಡಿಸಿರುವ ಕ್ಯಾಮೆರಾಗಳು ಸೈರನ್ ಮೊಳಗಿಸುವಂತೆ ಈ ಕಂಪೆನಿ ತಂತ್ರಜ್ಞಾನ ರೂಪಿಸಿದೆ. ಹಾಗಂತ ಅವರ ರಾಷ್ಟ್ರದೊಳಗೆ ಎಂದಷ್ಟೇ ತಿಳಿದುಕೊಳ್ಳಬೇಡಿ. ಆಫ್ರಿಕಾದ ರಾಷ್ಟ್ರಗಳಲ್ಲಿ ಇದೇ ಕಂಪೆನಿ ಅಲ್ಲಿನ ಡಾಟಾಗಳನ್ನು ಈ ರೀತಿಯಲ್ಲಿ ಕದ್ದು ತಲುಪಿಸುತ್ತಿದ್ದುದು ಜಗತ್ತಿಗೇ ಗೊತ್ತಿರುವ ವಿಚಾರ! ಹಾಗೆಂದೇ ಅಮೇರಿಕಾ, ಆಸ್ಟ್ರೇಲಿಯಾ, ಯುರೋಪಿಯನ್ ಯುನಿಯನ್ಗಳಲ್ಲದೇ ಭಾರತವೂ ಕೂಡ ಈ ಕಂಪೆನಿಯನ್ನು ಬಹುಷ್ಕರಿಸಿಬಿಟ್ಟಿದೆ. ಟೆನ್ಸೆಂಟ್ ಎಂಬ ಕಂಪೆನಿಯ ವಿ-ಚ್ಯಾಟ್ ಅಪ್ಲಿಕೇಶನ್ ಕೂಡ ಇದೇ ಆರೋಪವನ್ನು ಹೊಂದಿದೆ. ಕೆನಡಾದಲ್ಲಿ ಈ ಕುರಿತಂತೆ ಇತ್ತೀಚೆಗೆ ಸಾಕಷ್ಟು ಗದ್ದಲಗಳಾದ ಸುದ್ದಿ ಬಂದಿತ್ತು. ಎಲ್ಲಕ್ಕಿಂತಲೂ ಭಯಾನಕವಾದ ಸುದ್ದಿ ಏನೆಂದರೆ ಅಪ್ಲಿಕೇಶನ್ಗಳಲ್ಲದೇ ನಾವು ಬಳಸುವ ಹಾಡರ್್ವೇರ್ನಲ್ಲೇ ತನಗೆ ಬೇಕಾದ ಬದಲಾವಣೆ ಮಾಡಿಕೊಂಡು ಯಾರನ್ನು ಯಾವಾಗ ಎಲ್ಲಿಂದ ಬೇಕಿದ್ದರೂ ಪರಿವೀಕ್ಷಣೆ ನಡೆಸುವ ಸಾಮಥ್ರ್ಯ ಚೀನಾ ಪಡಕೊಂಡಿದೆ. ಅಮೇರಿಕಾದ ಸ್ಯಾನ್ಹೊಸೆಯಲ್ಲಿ ಸೂಪರ್ ಮೈಕ್ರೊ ಕಂಪ್ಯೂಟರ್ಸ್ ಎಂಬ ಕಂಪೆನಿ ಇದೆ. ಇದು ಸರ್ವರ್ಗಳ ಮದರ್ಬೋರ್ಡನ್ನು ಅಸೆಂಬಲ್ ಮಾಡುವ ಕೆಲಸ ಮಾಡುತ್ತದೆ. ಇದಕ್ಕೆ ಬೇಕಾಗಿರುವ ಬಿಡಿ ಭಾಗಗಳನ್ನು ಚೀನಾದ ಬೇರೆ-ಬೇರೆ ಕಂಪೆನಿಯಿಂದ ಅದು ತರಿಸಿಕೊಳ್ಳುತ್ತದೆ. ಇತ್ತೀಚೆಗೆ ಈ ಮದರ್ಬೋಡರ್್ ಸರ್ವರ್ಗಳನ್ನು ಪರೀಕ್ಷಿಸುತ್ತಿರುವಾಗ ಚೀನಾದ ಕಂಪೆನಿಗಳು ಇದರೊಳಗೆ ಪೆನ್ಸಿಲ್ನ ಮೊನೆಯಷ್ಟು ಚಿಕ್ಕದಾದ ಮೈಕ್ರೊ ಚಿಪ್ಗಳನ್ನು ಇಟ್ಟು ಕಳಿಸಿರುವುದು ಕಂಡು ಬಂತು. ಆ ಮೂಲಕ ಈ ಸರ್ವರ್ಗಳನ್ನು ಬಳಸುತ್ತಿರುವ ಅಮೇಜಾನ್, ಆ್ಯಪಲ್ನಂತಹ ಕಂಪೆನಿಗಳ ದತ್ತಾಂಶಗಳನ್ನೇ ಕದಿಯುವ ಅದರ ಕಾರ್ಯ ಬೆಳಕಿಗೆ ಬಂದಿತ್ತು. ಭಾರತವೂ ಇದಕ್ಕೆ ಹೊರತಲ್ಲ. ಅಲಿಬಾಬಾದ ಕ್ಲೌಡ್ ಸರ್ವರ್ಗಳು ಭಾರತದ ದತ್ತಾಂಶವನ್ನು ನೇರವಾಗಿ ಚೀನಾಕ್ಕೆ ಕಳಿಸುತ್ತಿದ್ದವು. ಚೀನಾದ ಹಾಡರ್್ವೇರ್ಗಳು ಭಾರತದ ಹತ್ತುಸಾವಿರ ಪ್ರಮುಖರ ನಿತ್ಯದ ಆಗು-ಹೋಗುಗಳನ್ನು ಗಮನಿಸುತ್ತಿದೆ ಎಂಬ ಸಂಗತಿಯೂ ಹೊಸತೇನೂ ಅಲ್ಲ. ಚೀನಾದ ಹ್ಯಾಕರ್ಗಳು ಭಾರತ್ ಬಯೋಟೆಕ್ನ ಸರ್ವರ್ಗೆ ಕಳ್ಳತನದಿಂದ ನುಗ್ಗಿ ವ್ಯಾಕ್ಸಿನ್ನ ದತ್ತಾಂಶವನ್ನು ಕದಿಯುವ ಪ್ರಯತ್ನ ಮಾಡಿದ್ದು ಬೆಳಕಿಗೆ ಬರುತ್ತಿದೆ. ಆತ್ಮನಿರ್ಭರತೆಯ ನೆಪದಲ್ಲಿ ಚೀನಾದ ಅಪ್ಲಿಕೇಶನ್ಗಳನ್ನು ಬ್ಯಾನ್ ಮಾಡಿದ್ದು ಇದೇ ಕಾರಣಕ್ಕೆ. ಮುಂದೆ ಹುವೈ 5ಜಿ ತಂತ್ರಜ್ಞಾನದೊಂದಿಗೆ ಭಾರತಕ್ಕೆ ಬರದಂತೆ ತಡೆಯುವ ಕೆಲಸವೂ ಆಗಿದೆ. ಅದಕ್ಕೆ ಪೂರಕವಾಗಿಯೇ ರಿಲಯನ್ಸ್ ಮಾತ್ರವಲ್ಲದೇ, ಏರ್ಟೆಲ್, ಟಾಟಾಗಳೂ ಶತ ಪ್ರತಿಶತ ಭಾರತೀಯವಾದ ತಂತ್ರಜ್ಞಾನವನ್ನು ರೂಪಿಸುತ್ತಿವೆ.


ಚೀನಾ ಇಲ್ಲಿಗೇ ನಿಂತಿಲ್ಲ. ಭಾರತದ ಸ್ಟಾಟರ್್ ಅಪ್ಗಳಲ್ಲಿ ಸುಮಾರು ನಾಲ್ಕು ಬಿಲಿಯನ್ ಡಾಲರ್ಗಳಷ್ಟು ಹಣ ಹೂಡಿಕೆ ಮಾಡುವ ಮೂಲಕ ಇಲ್ಲಿನ ಕಂಪೆನಿಗಳನ್ನೇ ತನಗೆ ಬೇಕಾದಂತೆ ರೂಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಪೇಟಿಎಮ್ನಲ್ಲಿ ಚೀನಾದ ಹಣ ಹೂಡಿಕೆಯಾಗಿದೆ ಎಂಬ ಗದ್ದಲ ಕೇಳಿಬಂದಿದ್ದು ನೀವು ಮರೆತಿರಲಿಕ್ಕಿಲ್ಲ. ನಮ್ಮೆಲ್ಲರ ದತ್ತಾಂಶ ಪೇಟಿಎಮ್ನ ಮೂಲಕ ಚೀನಾದ ಲ್ಯಾಪ್ಟಾಪ್ನಲ್ಲಿ ತೆರೆದುಕೊಳ್ಳುವಂತಿದ್ದರೆ ಕಥೆ ಏನು ಹೇಳಿ! ಭಾರತ ಎಚ್ಚರಗೊಂಡು ಇದರ ಮೇಲೊಂದು ಅಂಕುಶವನ್ನು ಹಾಕುವ ಪ್ರಯತ್ನ ಮಾಡಿದ ನಂತರ ಈಗ ನಮ್ಮೊಂದಿಗೆ ಸೌಹಾರ್ದತೆಯಿಂದ ಇರುವ ಅನೇಕ ರಾಷ್ಟ್ರಗಳು ಹಣ ಹೂಡುತ್ತಿವೆ. ಆದರೆ ಈ ಸಮಸ್ಯೆ ಭಾರತಕ್ಕೆ ಮಾತ್ರವಲ್ಲ. ಜಗತ್ತಿನ ಅನೇಕ ರಾಷ್ಟ್ರಗಳು ಇದನ್ನು ಅನುಭವಿಸಿವೆ. ಕರೋನಾದ ನಂತರ ಚೀನಾದ ಬೆಳವಣಿಗೆಯ ವೇಗ ಹೀಗೇ ನಡೆದರೆ ಜಗತ್ತು ಚೀನಾಕ್ಕೆ ದಾಸವಾಗಬೇಕಾದ ಅನಿವಾರ್ಯ ಪರಿಸ್ಥಿತಿ ನಿಮರ್ಾಣವಾಗಿದೆ ಎಂಬ ಅರಿವು ಎಲ್ಲರಿಗೂ ಬಂದಿದೆ. ಅದಕ್ಕೆ ಇತ್ತೀಚಿನ ದಿನಗಳಲ್ಲಿ ಚೀನಾದೊಂದಿಗಿನ ಅನೇಕ ರಾಷ್ಟ್ರಗಳ ಬಾಂಧವ್ಯ ಹಳಸುತ್ತಿರುವುದು ಗೋಚರವಾಗುತ್ತಿದೆ. ನಾಲ್ಕೇ ಪ್ರಕರಣಗಳನ್ನು ಗಮನಿಸಿ ನೋಡಿ. ಮೊದಲನೆಯದ್ದು ಇತ್ತೀಚೆಗೆ ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರ ಮತ್ತು ವ್ಯಾಪಾರಗಳ ಕಾರ್ಯದಶರ್ಿ ಫ್ರಾನ್ಸಸ್ ಅಡಾಮ್ಸನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಗಂಭೀರವಾದ ಮಾತೊಂದನ್ನು ಹೇಳಿದ್ದಾರೆ, ‘ಚೀನಾ ತನಗಿಲ್ಲದ ಶಕ್ತಿಯನ್ನು ತೋರ್ಪಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ’ ಎಂದಿದ್ದಾರೆ. ಇದರ ಹಿಂದು-ಹಿಂದೆಯೇ ಭಾರತದ ಸೇನಾ ಮುಖ್ಯಸ್ಥರಾಗಿರುವ ಜನರಲ್ ಬಿಪಿನ್ರಾವತ್ ‘ಗಲ್ವಾನ್ನಲ್ಲಿ ಭಾರತೀಯ ಸೈನಿಕರ ಬಳಿ ಏಟು ತಿಂದಮೇಲೆ ಚೀನಾಕ್ಕೆ ತನ್ನ ತಯಾರಿ ಸಾಲದು ಎನಿಸುತ್ತಿದೆ. ಹೀಗಾಗಿ ಸೈನಿಕರಿಗೆ ವಿಶೇಷ ತರಬೇತಿ ನೀಡಲು ಅದು ಪ್ರಯತ್ನಿಸುತ್ತಿದೆ’ ಎಂದಿದ್ದಾರೆ. ಎರಡೂ ಶಕ್ತ ರಾಷ್ಟ್ರಗಳೇ ಬಿಡಿ. ಮತ್ತು ಕಳೆದ ಎರಡು ವರ್ಷಗಳಿಂದ ಚೀನಾದ ವಿರುದ್ಧ ಗುಟುರು ಹಾಕುತ್ತಲೇ ಬಂದಿರುವ ರಾಷ್ಟ್ರಗಳು. ಆದರೆ ಅಚ್ಚರಿಯೇನು ಗೊತ್ತೇ? ಭಾರತ, ಆಸ್ಟ್ರೇಲಿಯಾ, ಅಮೇರಿಕಾ ಮತ್ತು ಜಪಾನ್ಗಳು ಸೇರಿ ರಚಿಸಿಕೊಂಡಿರುವ ಕ್ವಾಡ್ ಒಕ್ಕೂಟಕ್ಕೆ ಬಾಂಗ್ಲಾದೇಶವನ್ನು ಆಹ್ವಾನಿಸಿದಾಗ ಚೀನಾ ಕುಪಿತಗೊಂಡು ಪ್ರತಿಕ್ರಿಯೆ ಕೊಟ್ಟಿತ್ತು. ಈ ಒಕ್ಕೂಟದೊಂದಿಗೆ ಸೇರಿಕೊಂಡರೆ ತಾನು ಸಹಿಸಲಾರೆ ಎಂದು ಬಾಂಗ್ಲಾದೇಶಕ್ಕೆ ಎಚ್ಚರಿಕೆ ನೀಡಿತ್ತು. ಆಮೇಲೇನು ಗೊತ್ತೇ? ಬಾಂಗ್ಲಾ ಬಾಗುವುದು ಬಿಡಿ, ‘ಇದು ನಮ್ಮ ರಾಷ್ಟ್ರದ ಆಂತರಿಕ ಪ್ರಶ್ನೆ. ನೀನು ತಲೆಹಾಕುವುದು ಬೇಕಿಲ್ಲ’ ಎಂದು ಧಮಕಿಯನ್ನೇ ಹಾಕಿತ್ತು. ಇದರ ಹಿಂದು-ಹಿಂದೆಯೇ ಚೀನಾದ ವ್ಯಾಕ್ಸಿನ್ ಅನ್ನು ತನ್ನ ದೇಶದ ಜನರಿಗೆ ಕೊಟ್ಟಿದ್ದ ಯುಎಇ ಮತ್ತು ಬಹರೈನ್ಗಳು ಈ ವ್ಯಾಕ್ಸಿನ್ನಿಂದ ಕರೋನಾ ಪೀಡಿತರನ್ನು ರಕ್ಷಿಸುವುದು ಸಾಧ್ಯವಿಲ್ಲ ಎಂದು ಹೇಳಿ ಬೂಸ್ಟರ್ ಡೋಸ್ ಕೊಡುವ ಮಾತುಗಳನ್ನೂ ಆಡಿಬಿಟ್ಟವು. ಈಗಂತೂ ಆಫ್ರಿಕಾವೂ ಕೂಡ ಚೀನಾದ ವಿರುದ್ಧ ತಿರುಗಿ ಬೀಳುತ್ತಿದೆ. ಕಳೆದ ವಾರ ಭಾರತದ ವಿದೇಶಾಂಗ ಸಚಿವರಾದ ಜೈಶಂಕರ್ ಆಫ್ರಿಕಾದ ವಿದೇಶಾಂಗ ಸಚಿವೆ ರೇಷಲ್ ಒಮಾಮೊ ಅವರನ್ನು ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಆಫ್ರಿಕಾದಲ್ಲಿ ಚೀನಾದ ಸ್ಥಾನವನ್ನು ಭಾರತ ಆಕ್ರಮಿಸಲು ಇದು ಸದವಕಾಶ. ಚೀನಾ ಆಫ್ರಿಕಾದಲ್ಲಿ ಉದ್ಯಮಗಳನ್ನು ಹೆಚ್ಚಿಸುತ್ತೇನೆ ಎಂದು ಹೇಳುವ ಮೂಲಕ ಅಲ್ಲಿನ ಪ್ರಾಕೃತಿಕ ಸಂಪತ್ತನ್ನು ಲೂಟಿಮಾಡಿಬಿಟ್ಟಿದೆ. ಸ್ಥಳೀಯರಿಗೆ ಕೆಲಸವನ್ನೂ ಕೊಡದೇ ಚೀನಿಯರನ್ನೇ ಕೆಲಸಕ್ಕಿಟ್ಟು ತನ್ನ ಇಚ್ಛೆ ಪೂರೈಸಿಕೊಳ್ಳುತ್ತಿದೆ. ಭಾರತ ಆರೋಗ್ಯ, ಶಿಕ್ಷಣ, ಮಾಹಿತಿ ತಂತ್ರಜ್ಞಾನಗಳಲ್ಲಿ ಕೆಲಸ ಮಾಡುತ್ತಾ ಸ್ಥಳೀಯರಿಗೆ ಹೆಚ್ಚು-ಹೆಚ್ಚು ಉದ್ಯೋಗ ಕೊಡುವ ಕೆಲಸ ಮಾಡುತ್ತಿದೆ. ಆಫ್ರಿಕಾದಲ್ಲಿರುವ 30 ಲಕ್ಷಕ್ಕೂ ಹೆಚ್ಚು ಭಾರತೀಯರು ಈ ದೃಷ್ಟಿಯಿಂದ ಭಾರತದ ಪಾಲಿಗೆ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ. ಇಂಡೊ-ಪೆಸಿಫಿಕ್ ಪ್ರದೇಶದಲ್ಲಿ ಆಫ್ರಿಕಾ ನಮಗೆ ಬಲು ಅಗತ್ಯ ಮಿತ್ರನೂ ಆಗಿರುವುದರಿಂದ ಇದು ಚೀನಾಕ್ಕೆ ಎಚ್ಚರಿಕೆಯ ಗಂಟೆಯೇ.


ಕಳೆದ ಒಂದು ದಶಕದಿಂದ ಚೀನಾ ಮುನ್ನುಗ್ಗುವ ಪ್ರವೃತ್ತಿಯ ರಾಜತಂತ್ರಿಕತೆಯನ್ನು ಬಳಸಿಕೊಂಡಿದೆ. ರಾಷ್ಟ್ರಗಳಿಗೆ ಅಭಿವೃದ್ಧಿಯ ನೆಪದಲ್ಲಿ ಸಾಲ ಕೊಡುವುದು, ಅವುಗಳನ್ನು ತೀರಿಸಲಿಕ್ಕೆ ಸಾಧ್ಯವಾಗದಾದಾಗ ತನ್ನ ಕಪಿಮುಷ್ಠಿಗೆ ತೆಗೆದುಕೊಂಡು ಜೋರು, ಜಬರ್ದಸ್ತಿನಿಂದಲೇ ಕೆಲಸ ಮಾಡಿಸಿಕೊಳ್ಳುವುದು. ಹಾಗೆ ನಡೆದಿತ್ತು ಅದರ ಓಟ. ಕರೋನಾ ನಂತರ ಎಲ್ಲವೂ ಬದಲಾದಂತೆ ಕಾಣುತ್ತಿದೆ. ಟ್ರಂಪ್ ಈ ವಿಚಾರದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದ. ಈಗ ಅದು ವ್ಯಾಪಕಗೊಳ್ಳುತ್ತಿದೆ ಅಷ್ಟೇ. ಬೈಡನ್ಗೆ ಟ್ರಂಪ್ನ ಈ ನೀತಿಯನ್ನು ಮುಂದುವರೆಸುವ ಅನಿವಾರ್ಯತೆ ಗೋಚರಿಸುತ್ತಿದೆ. ಹೀಗಾಗಿಯೇ ಆತ ಅಧಿಕಾರಕ್ಕೆ ಬಂದಮೇಲೆ ಚೀನಾದ ಮತ್ತೈದು ಕಂಪೆನಿಗಳೊಂದಿಗೆ ವ್ಯಾಪಾರ ನಿರ್ಬಂಧಿಸಿದ್ದಾನೆ. ಇತ್ತೀಚೆಗೆ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುಕೆ ಮತ್ತು ಯುಎಸ್ಗಳ ಜಿ7 ಸಭೆ ನಡೆದಿತ್ತಲ್ಲ, ಅದರಲ್ಲಿ ಭಾರತ, ಆಸ್ಟ್ರೇಲಿಯಾ, ಕೊರಿಯಾ ಮತ್ತು ದಕ್ಷಿಣ ಆಫ್ರಿಕಾಗಳಿಗೂ ಅತಿಥಿಯಾಗಿ ಆಹ್ವಾನವಿತ್ತು. ಹಾಗೇ ಮೇಲ್ನೋಟಕ್ಕೆ ಗಮನಿಸಿ ನೋಡಿದರೂ ಗೋಚರವಾಗುವ ಸಂಗತಿ ಎಂದರೆ ಚೀನಾ ವಿರೋಧಿಗಳೆಲ್ಲ ಒಂದಾಗುತ್ತಿದ್ದಾರೆ ಎನ್ನೋದು. ಚೀನಾಕ್ಕೆ ಇದು ಗೊತ್ತಾಗದ ಸಂಗತಿಯೇನಲ್ಲ. ಅದಕ್ಕೆ ಷಿ ಜಿನ್ಪಿಂಗ್ ಇಡಿಯ ರಾಜತಾಂತ್ರಿಕ ರಣನೀತಿಯನ್ನು ಬದಲಾಯಿಸಿಕೊಳ್ಳುವ ಯೋಚನೆ ಮಾಡುತ್ತಿದ್ದಾನೆ. ಹಷರ್್ಪಂತ್ ಇತ್ತೀಚೆಗೆ ಹಿಂದೂಸ್ತಾನ್ ಟೈಮ್ಸ್ನಲ್ಲಿ ಬರೆದಿರುವ ಲೇಖನದಲ್ಲಿ ಈ ರಾಜತಾಂತ್ರಿಕ ಬದಲಾವಣೆಯ ಕುರಿತಂತೆ ಗಮನ ಸೆಳೆದಿದ್ದಾರೆ. ‘ಎಲ್ಲರೂ ನಂಬಬಹುದಾದ, ಪ್ರೀತಿಸಬಹುದಾದ, ಗೌರವಿಸಬಹುದಾದ ರಾಷ್ಟ್ರ ಚೀನಾ’ ಎಂಬಂತೆ ತಮ್ಮ ನಡೆಯನ್ನು ಪುನರ್ ರೂಪಿಸಿಕೊಳ್ಳಲು ಯೋಜಿಸುತ್ತಿರುವ ಸಂಗತಿಯನ್ನು ಅವರು ಉಲ್ಲೇಖಿಸಿದ್ದಾರೆ. ಆದರೆ ಇದು ಅಷ್ಟು ಸುಲಭವೇನು? ಭಯಾನಕ ಕೊವಿಡ್ ಮಹಾಮಾರಿಯನ್ನು ಜಗತ್ತಿಗೆ ಹಂಚಿ ಆನಂದಿಸುತ್ತಿರುವ ರಾಷ್ಟ್ರವೊಂದನ್ನು ಸದ್ಯದಮಟ್ಟಿಗಂತೂ ಮತ್ತೆ ಒಪ್ಪಿಕೊಳ್ಳುವುದು ಬಲುಕಷ್ಟ. ಈ ಬಾರಿ ಚೀನಾಕ್ಕೆ ಅಪಘಾತವಾದರೆ ಬೇರೆ ಯಾರೂ ಕಾರಣರಲ್ಲ, ಅದರ ಅವಸರವೇ ಕಾರಣ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s