ಟ್ಯಾಗ್: ಭಾರತ

ಭಿಕಾರಿ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದವರು!

ಭಿಕಾರಿ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದವರು!

ಪಾಕಿಸ್ತಾನಕ್ಕೆ ಜೈಕಾರದ ಘೋಷಣೆಗಳು ರಾಜ್ಯದೆಲ್ಲೆಡೆ ಮೊಳಗುತ್ತಿವೆ. ಕಾಂಗ್ರೆಸ್ಸಿನ ಗೆಲುವಿನ ಹಿನ್ನೆಲೆಯಲ್ಲಿ ಈ ಘೋಷಣೆಗಳು ಎನ್ನುವುದು ನಿಜವಾದರೂ ಒಂದಷ್ಟು ಮುಸಲ್ಮಾನರ ಮಾನಸಿಕ ಸ್ಥಿತಿ ಬಹಳ ಕಾಲದಿಂದಲೂ ಹೀಗೆಯೇ ಇದೆ ಎನ್ನುವುದು ತಿಳಿಯದ ಸಂಗತಿ ಏನಲ್ಲ. ಎಡಪಂಥೀಯ ಬುದ್ಧಿಜೀವಿಗಳು, ಮುಸಲ್ಮಾನ ಪರ ಕೆಲವು ಹಿಂದೂ ಸಂಘಟನೆಗಳು ಮತ್ತು ಸ್ವತಃ ಮುಸಲ್ಮಾನರೊಂದಷ್ಟು ಜನ ಈ ಚಿಂತನೆಯನ್ನು ಪೋಷಿಸಿಕೊಂಡು ಬಂದಿದ್ದಾರೆ. ಆದರೆ ಅವರಿಗೆ ಸದ್ಯದ ಪಾಕಿಸ್ತಾನದ ಪರಿಸ್ಥಿತಿ ಎಂಥದ್ದಿದೆ ಎಂಬುದರ ಅರಿವು ಇರಲಿಕ್ಕಿಲ್ಲ. ಅಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ಜನ ಮತ್ತು ಸೇನೆಯ ನಡುವೆ ಕಾದಾಟ ಶುರುವಾಗಿದೆ. ಯಾವ ಸೇನೆಯ ವಿಶ್ವಾಸದಿಂದಲೇ ಭಾರತವನ್ನು ಎದುರಿಸುತ್ತೇವೆಂದು ಪಾಕಿಸ್ತಾನಿಗಳು ಹೇಳುತ್ತಿದ್ದರೋ ಇಂದು ಅದೇ ಸೇನೆಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ಘರ್ಷಣೆ ಎಲ್ಲಿಗೆ ಹೋಗಿ ನಿಲ್ಲುವುದೋ ತಿಳಿದಿಲ್ಲ ನಿಜ. ಆದರೆ ಪಾಕಿಸ್ತಾನವೇ ಚೂರು-ಚೂರಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಂಡರೂ ಅಚ್ಚರಿಯಿಲ್ಲ. 1971ರಲ್ಲಿ ಪಾಕಿಸ್ತಾನವನ್ನು ಎರಡು ತುಂಡು ಮಾಡಿ ಬಿಸಾಡಿದ ಇಂದಿರಾಗೆ ಸಿಕ್ಕ ಗೌರವದ ನೂರ್ಪಟ್ಟು ಪಾಕಿಸ್ತಾನವನ್ನು ನಾಲ್ಕು ಚೂರು ಮಾಡುವ ಮೋದಿಗೆ ಸಿಕ್ಕರೂ ಸಿಗಬಹುದು. ಪಾಕಿಸ್ತಾನವೇ ಬಲೂಚಿಸ್ತಾನ, ಸಿಂಧ್, ಪಂಜಾಬು, ಕಾಶ್ಮೀರವೆಂದು ನಾಲ್ಕು ಭಾಗಗಳಾಗಿ ವಿಭಜನೆಗೊಂಡರೆ ಇವರು ಜೈಕಾರ ಹಾಕುವ ಪಾಕಿಸ್ತಾನಕ್ಕೆ ಅಸ್ತಿತ್ವವೇ ಇರುವುದಿಲ್ಲ. ಮುಸಲ್ಮಾನರನ್ನು ಈ ದಿಕ್ಕಿನಲ್ಲಿ ಭಡಕಾಯಿಸಿ ಅವರಿಂದ ಜೈಕಾರ ಹೇಳಿಸುವ ಮಂದಿ, ನಾಳೆಯ ದಿನ ಅಸ್ತಿತ್ವವೇ ಇಲ್ಲದ ಪಾಕಿಸ್ತಾನದ ಕಾರಣಕ್ಕೆ ಇವರೆಲ್ಲ ಅತಂತ್ರರಾಗುವುದನ್ನು ನೋಡಿ ನಗಲಿರುವುದಂತೂ ಸತ್ಯ.

ಪಾಕಿಸ್ತಾನದ ದುರಂತ ಪರ್ವ ಆರಂಭವಾಗಿದ್ದು ಮೋದಿಯ ಆಗಮನದ ನಂತರವೇ. ಅಲ್ಲಿಯವರೆಗೂ ಭಾರತದಲ್ಲಿ ಎಲ್ಲೆಂದರಲ್ಲಿ ಬಾಂಬ್ ಸ್ಫೋಟಗಳನ್ನು ಮಾಡಿಸುತ್ತಿದ್ದ ಪಾಕಿಸ್ತಾನ ಏಕಾಕಿ ದಿಗ್ಬಂಧನಕ್ಕೆ ಒಳಗಾಯ್ತು. ಭಾರತೀಯ ಬೇಹುಗಾರಿಕೆ ಎಷ್ಟು ಚುರುಕಾಯ್ತೆಂದರೆ ಕಾಶ್ಮೀರದಲ್ಲಿ ಕಂಡ-ಕಂಡಲ್ಲಿ ಭಯೋತ್ಪಾದಕರನ್ನು ಗುಂಡಿಟ್ಟು ಕೊಲ್ಲಲಾಯ್ತು. ಭಯೋತ್ಪಾದನಾ ಕೃತ್ಯಕ್ಕೆ ತಮ್ಮ ತಾವು ಸಮರ್ಪಿಸಿಕೊಂಡ ಬುರ್ಹನ್ ವನಿಯಂಥವರನ್ನು ಹುಚ್ಚು ನಾಯಿಗಿಂತಲೂ ಕಡೆಯಾಗಿ ಕೊಲ್ಲಲಾಯ್ತು. ಅವನ ಶವವನ್ನು ಮನೆಯವರಿಗೆ ಕೊಟ್ಟು ಶವಯಾತ್ರೆಗೆಂದು ಬಂದಿದ್ದ ಮತ್ತಷ್ಟು ಭಯೋತ್ಪಾದಕ ನಾಯಕರನ್ನು ಹಿಂಬಾಲಿಸಿಕೊಂಡು ಹೋಗಿ ಕಾಶ್ಮೀರದ ಕೊಳ್ಳವನ್ನು ಇವರಿಂದ ಮುಕ್ತಗೊಳಿಸಲಾಯ್ತು. ಅತ್ತ ಬುರ್ಹನ್‌ವನಿಯ ಸಾವನ್ನು ಕಂಡು ಬೆದರಿದ ಹೊಸ ಪೀಳಿಗೆಯ ತರುಣರು ಭಯೋತ್ಪಾದನೆಯಿಂದ ದೂರ ಉಳಿಯಲು ನಿಶ್ಚಯಿಸಿದರು. ಪಾಕೀ ಸೇನೆಗೆ ಸಿಗಬಹುದಾಗಿದ್ದ ಕಚ್ಚಾ ವಸ್ತುಗಳೇ ಇಲ್ಲವಾಗಿ ಹೋದಮೇಲೆ ಸಂಕಟ ಎರಗಿದ್ದಂತೂ ನಿಜ. ನಿಧಾನವಾಗಿ ಕಾಶ್ಮೀರ ಶಾಂತವಾಯ್ತು, ದೇಶವೂ ಕೂಡ.

ಅತ್ತ ಪಾಕಿಸ್ತಾನದಲ್ಲಿ ನಿಧಾನವಾಗಿ ಅಸಹನೆ ಆರಂಭವಾಯ್ತು. ಭಾರತವನ್ನು ಅಶಾಂತವಾಗಿರಸಲೆಂದೇ ವಿದೇಶೀ ಹೂಡಿಕೆಯನ್ನು ಪಡೆಯುತ್ತಿದ್ದ ಪಾಕಿಸ್ತಾನಕ್ಕೆ ಈಗ ಬಲುದೊಡ್ಡ ಸಂಕಟ. ನೋಡ-ನೋಡುತ್ತಲೇ ಅವರ ವಿದೇಶೀ ವಿನಿಮಯ ಬರಿದಾಗುತ್ತಾ ಹೋಯ್ತು. ಮೋದಿ ಸರ್ಕಾರದ ನಿರಂತರ ಪ್ರಯಾಸದಿಂದಾಗಿ ಐಎಮ್ಎಫ್, ವಿಶ್ವಬ್ಯಾಂಕುಗಳು ಸಾಲ ಕೊಡುವುದನ್ನು ನಿಲ್ಲಿಸಿದವು. ಈ ಹೊತ್ತಿನಲ್ಲಿಯೇ ಭುಟ್ಟೋ ಮತ್ತು ಶರೀಫ್ ಕುಟುಂಬಗಳ ರಾಜಕಾರಣದಿಂದ ಬೇಸತ್ತಿದ್ದ ಸೇನೆಗೆ ಇವರಿಬ್ಬರನ್ನು ಬಿಟ್ಟು ಹೊಸಮುಖವೊಂದನ್ನು ಪಟ್ಟಕ್ಕೆ ಕೂರಿಸುವ ಆತುರವಿತ್ತು. ಆಗ ಕಣ್ಮುಂದೆ ಬಂದವನು ಇಮ್ರಾನ್ ಖಾನ್. ಪಾಕಿಸ್ತಾನ್ ತೆಹರೀಕ್-ಎ-ಇನ್ಸಾಫ್ ಪಕ್ಷವನ್ನು ಕಟ್ಟಿಕೊಂಡು ಓಡಾಟ ನಡೆಸುತ್ತಿದ್ದ ಆತ ಪರಿವಾರ ರಾಜಕಾರಣಕ್ಕೆ ಸಡ್ಡು ಹೊಡೆಯುವುದಾಗಿ ಸೇನೆಗೆ ಭರವಸೆ ಕೊಟ್ಟು ಮುನ್ನುಗ್ಗಿದ. 2018ರಲ್ಲಿ ಚುನಾವಣೆ ನಡೆದಾಗ ಇಮ್ರಾನ್ ಖಾನನಿಗೆ ಎಲ್ಲ ಬಗೆಯ ಸಹಕಾರವನ್ನು ಕೊಟ್ಟಿದ್ದು ಸೇನೆಯೇ. ಆತ ಚುನಾವಣೆಯನ್ನು ಗೆದ್ದು ಅಲ್ಪ ಬಹುಮತದೊಂದಿಗೆ ಪಾಕಿಸ್ತಾನದ ಚುಕ್ಕಾಣಿ ಹಿಡಿದುಬಿಟ್ಟ. ಆಗ ಸೇನೆಯ ಮುಖ್ಯಸ್ಥ ಕಾಶ್ಮೀರದ ವಿಚಾರದಲ್ಲಿ ವಿಶೇಷವಾದ ಪರಿಣಿತಿ ಹೊಂದಿದ್ದ ಜನರಲ್ ಕಮರ್ ಬಾಜ್ವಾ. ಇವರೀರ್ವರ ಸಂಬಂಧ ಎಷ್ಟು ಬಲವಾಗಿತ್ತೆಂದರೆ ನ್ಯೂಯಾರ್ಕ್ ಟೈಮ್ಸ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಇಮ್ರಾನ್ ‘ನಾನು ಗೆಳೆತನವಿಟ್ಟುಕೊಂಡಿರೋದು ಪಾಕಿಸ್ತಾನೀ ಸೇನೆಯೊಂದಿಗೆ, ಶತ್ರು ಸೇನೆಯೊಂದಿಗಲ್ಲ. ನಾವು ಜೊತೆಗೂಡಿಯೇ ನಡೆಯುತ್ತೇವೆ’ ಎಂದಿದ್ದ. ಪಾಕಿಸ್ತಾನದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಸಲು ಬಾಜ್ವಾನೇ ಕಾರಣ ಎಂದು ಹೇಳುವುದಕ್ಕೆ ಆತ ಹಿಂಜರಿಯಲಿಲ್ಲ. ಅಧಿಕಾರ ಪಡೆದೊಡನೆ ಒಂದೇ ಪುಸ್ತಕದ ಒಂದೇ ಪುಟದಲ್ಲಿ ನಾವಿಬ್ಬರೂ ಇದ್ದೇವೆ ಎಂದೂ ತನ್ನ ಚಟುವಟಿಕೆಗಳನ್ನು ಸಮರ್ಥಿಸಿಕೊಂಡಿದ್ದ. 2020ರಲ್ಲಿ ಅಲ್‌ಜಝೀರಾದೊಂದಿಗೆ ಮಾತನಾಡುತ್ತಾ ಸೇನೆ ಮತ್ತು ಸರ್ಕಾರದ ಸಂಬಂಧಗಳು ಬಲು ಸೌಹಾರ್ದಯುತವಾಗಿದೆ ಎಂದಿದ್ದ. ಸೇನೆಯೂ ಈತನ ಕಾಲದಲ್ಲಿ ಎಲ್ಲ ಅಧಿಕಾರವನ್ನು ಮುಕ್ತವಾಗಿ ಅನುಭವಿಸಿತು. ಅನೇಕ ಸರ್ಕಾರಿ ನಿರ್ಣಯಗಳಲ್ಲೂ ಅವರು ಮೂಗು ತೂರಿಸುತ್ತಿದ್ದುದು ಸಾಮಾನ್ಯವಾಗಿತ್ತು. ಇದರ ಹಿಂದೆ ಬಿದ್ದ ಇಮ್ರಾನ್ ಆಡಳಿತವನ್ನು ಕಡೆಗಣಿಸಿದ. ಪರಿಣಾಮ ಕೊವಿಡ್‌ನ ಸಂದರ್ಭದಲ್ಲಿ ಜನ ಹಾಹಾಕರ ಪಡುವಂತಾಯ್ತು. ಪಾಕಿಸ್ತಾನದ ಆರ್ಥಿಕ ಸ್ಥಿತಿಯೂ ಹದಗೆಟ್ಟು ಅದನ್ನು ಹಳಿಗೆ ತರುವಲ್ಲಿ ಇಮ್ರಾನ್ ಸೋತುಹೋದ. ಜನರ ಅರಚಾಟ ಆರಂಭವಾಯ್ತು. ಇಮ್ರಾನನ ಮೇಲಿದ್ದ ಆಕ್ರೋಶವೆಲ್ಲ ಸ್ವಲ್ಪಮಟ್ಟಿಗೆ ಸೇನೆಯತ್ತಲೂ ತಿರುಗಿತು. ಪದವಿಯಲ್ಲಿ ಬೇರೆ-ಬೇರೆಯವರನ್ನು ತಾನೇ ಕೂರಿಸಿ ಹಿಂದಿನಿಂದ ಅಧಿಕಾರ ನಡೆಸುವ ಪಾಕೀ ಸೇನೆ ಎಂದೂ ಜನರ ಬೈಗುಳವನ್ನು ತಿಂದಿರಲಿಲ್ಲ. ಅದಕ್ಕೆ ಎದುರಿಗೆ ಅಧ್ಯಕ್ಷನೋ ಪ್ರಧಾನಿಯೋ ಇರುತ್ತಿದ್ದ. ಇಮ್ರಾನ್ ಥೇಟು ಕೇಜ್ರಿವಾಲನಂತೆ. ಎಷ್ಟು ಬೇಕಾದರೂ ನಾಟಕಗಳನ್ನು ಮಾಡಬಲ್ಲ, ಯಾರ ಮೇಲಾದರೂ ಗೂಬೆ ಕೂರಿಸಬಲ್ಲ, ಒಟ್ಟಿನಲ್ಲಿ ತಾನು ಗೆಲ್ಲಬೇಕಷ್ಟೇ! ಹೀಗಾಗಿಯೇ ಆತನ ಮೇಲಿದ್ದ ಆಕ್ರೋಶವೆಲ್ಲ ಸೇನೆಯ ವಿರುದ್ಧ ತಿರುಗಿತು. ತಡಮಾಡದೇ ಸೇನೆ ಇಮ್ರಾನನೊಂದಿಗಿದ್ದ ಸ್ನೇಹಕ್ಕೆ ಎಳ್ಳು-ನೀರು ಬಿಟ್ಟು ಕುಂಡಿ ಝಾಡಿಸಿಕೊಂಡು ಎದ್ದುಬಿಟ್ಟಿತು. ಅಲ್ಲಿಗೆ ಇಮ್ರಾನ್ ಮತ್ತು ಸೇನೆ ಯುದ್ಧಕ್ಕೆ ನಿಂತರು. ಈ ವೇಳೆಗೆ ಜನರಲ್ ಬಾಜ್ವಾ ನಂತರ ಫೈಜ್ ಹಮೀದ್‌ನನ್ನು ಆ ಸ್ಥಾನಕ್ಕೆ ತರಬೇಕೆಂದು ಇಮ್ರಾನ್ ನಿಶ್ಚಯಿಸಿಕೊಂಡಿದ್ದ. ಅದಕ್ಕಾಗಿ ಆತನನ್ನು ಐಎಸ್ಐನ ನಿರ್ದೇಶಕನಾಗಿ ಮುಂದುವರೆಸಬೇಕೆಂದೂ ಆಗ್ರಹಿಸಿದ್ದ. ಆದರೆ ಬಾಜ್ವಾ ಹಮೀದ್‌ನನ್ನು ಪಕ್ಕಕ್ಕೆ ಸರಿಸಿ ಲೆಫ್ಟಿನೆಂಟ್ ಜನರಲ್ ನದೀಮ್ ಅಂಜುಂನನ್ನು ಕೂರಿಸಿದ. ಇದು ಸೇನೆ ಮತ್ತು ಇಮ್ರಾನ್‌ನ ನಡುವಿನ ಕಾದಾಟವನ್ನು ತೀವ್ರಗೊಳಿಸಿತು. ಸಾಲದೆಂಬಂತೆ ರಷ್ಯಾ-ಉಕ್ರೇನ್ ಯುದ್ಧದ ಹೊತ್ತಲ್ಲಿ ಪಶ್ಚಿಮದ ಒತ್ತಡಕ್ಕೆ ಮಣಿದು ರಷ್ಯಾ ವಿರೋಧಿಸುವ ನಿರ್ಣಯ ಕೈಗೊಳ್ಳಲಾರೆನೆಂದು ಇಮ್ರಾನ್ ಹೇಳಿಕೆ ಕೊಟ್ಟರೆ, ಬಾಜ್ವಾ ಉಕ್ರೇನ್‌ನ ಪರವಾದ ಹೇಳಿಕೆಯನ್ನು ಕೊಟ್ಟು ಸರ್ಕಾರದ ವಿರುದ್ಧ ನಿಂತ. ಅಲ್ಲಿಗೆ ಇವರಿಬ್ಬರ ನಡುವಿನ ಕಂದಕ ಜಗಜ್ಜಾಹೀರಾಗುವಷ್ಟು ದೊಡ್ಡದಾಗಿತ್ತು.

ಪಾಕಿಸ್ತಾನದಲ್ಲಿ ಸೇನೆ ಮನಸ್ಸು ಮಾಡಿದರೆ ಏನು ಬೇಕಿದ್ದರೂ ಮಾಡಬಲ್ಲದು. 2022ರಲ್ಲಿ ಇಮ್ರಾನನ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಾಯ್ತು. ಈ ಗೊತ್ತುವಳಿ ಕಾನೂನು ಬಾಹಿರವಾಗಿದೆ ಎಂದು ಇಮ್ರಾನ್ ವಾದಿಸುವ ಪ್ರಯತ್ನ ಮಾಡಿದರೂ ಅದು ಅರಣ್ಯ ರೋದನವಾಯ್ತು. ಮೊದಲೇ ಹೇಳಿದಂತೆ ನಾಟಕ ಮಾಡುವುದರಲ್ಲಿ ನಿಸ್ಸೀಮನಾಗಿರುವ ಇಮ್ರಾನ್ ಅವಿಶ್ವಾಸ ಗೊತ್ತುವಳಿಯನ್ನು ಹೈಡ್ರಾಮಾ ಆಗುವಂತೆ ನೋಡಿಕೊಂಡ. ಈತನದ್ದೇ ಪಾಕಿಸ್ತಾನ್ ತೆಹರೀಕ್-ಎ-ಇನ್ಸಾಫ್ ಪಕ್ಷದ ಕೆಲವು ಸದಸ್ಯರು ಇವನ ವಿರುದ್ಧ ತಿರುಗಿಬಿದ್ದು ಈತ ಅಧಿಕಾರದಿಂದ ಕೆಳಗಿಳಿಯುವಂತಾಯ್ತು. ಆನಂತರ ಇಮ್ರಾನ್ ತನಗನಿಸಿದ್ದನ್ನು ನೇರವಾಗಿ ಹೇಳುವ ಚಾಳಿ ಬೆಳೆಸಿಕೊಂಡುಬಿಟ್ಟ. ದಿನ ಬೆಳಗಾದರೆ ಆತ ಸೇನೆಯನ್ನು ವಾಚಾಮಗೋಚರವಾಗಿ ಬೈಯ್ಯುತ್ತಿದ್ದ. ಆತನ ಆರೋಪಗಳ ಕೇಂದ್ರಬಿಂದು ಸೇನಾಮುಖ್ಯಸ್ಥ ಬಾಜ್ವಾನೇ ಆಗಿರುತ್ತಿದ್ದ. ‘ಎಲ್ಲ ಬಗೆಯ ಕೆಟ್ಟ ಕೆಲಸಗಳನ್ನು ಮಾಡಿ ಅವನಿಗೆ ಅನುಭವವಿದೆ’, ‘ಸರ್ಕಾರದ ಹಿಂದೆನಿಂತು ಒತ್ತಡಹಾಕಿ ತಮಗೆ ಬೇಕಾದ ಕೆಲಸ ಮಾಡಿಸಿಕೊಳ್ಳುವವರು ಸೇನೆಯ ಮಂದಿ’ ಎಂದೆಲ್ಲ ಆರೋಪ ಮಾಡಿದ. ಈ ಹೊತ್ತಿಗೆ ಸರಿಯಾಗಿ ಪಾಕಿಸ್ತಾನದ ಪತ್ರಕರ್ತ ಅರ್ಷದ್ ಶರೀಫ್‌ನನ್ನು ಕೀನ್ಯಾದಲ್ಲಿ ಕೊಲೆ ಮಾಡಲಾಯ್ತು. ಆತ ಅವಿಶ್ವಾಸ ಗೊತ್ತುವಳಿಯ ಸಂದರ್ಭದಲ್ಲಿ ಸೇನೆಯ ವಿರುದ್ಧವಾಗಿ, ಇಮ್ರಾನನ ಪರವಾಗಿ ಸಾಕಷ್ಟು ವರದಿಗಳನ್ನು ಮಾಡಿದ್ದ. ಸೇನೆ ಅವನನ್ನು ಗುರಿಯಾಗಿಸಿಬಿಟ್ಟಿತ್ತು. ಬ್ರಿಗೇಡಿಯರ್ ಮೊಹಮ್ಮದ್ ಶಾಫಿಕ್, ಬ್ರಿಗೇಡಿಯರ್ ಫಹೀನ್ ರಜಾ ಮತ್ತು ಐಎಸ್ಐನ ಮೇಜರ್ ಜನರಲ್ ಫೈಜಲ್ ನಜೀರ್ ಇವರು ಆತನಿಗೆ ಬೆದರಿಕೆಯ ಕರೆ ಮಾಡಲಾರಂಭಿಸಿದರು. ಪತ್ರಕರ್ತ ಅರ್ಷದ್ ಶರೀಫ್ ಪಾಕಿಸ್ತಾನ ಬಿಟ್ಟು ಓಡಿದ. ಆತನ ಮಿತ್ರರೆಲ್ಲ ದುಬೈಯಲ್ಲೋ, ಲಂಡನ್ನಿನಲ್ಲೋ ಇದ್ದಾನೆ ಎಂದು ಭಾವಿಸಿಕೊಂಡಿದ್ದರೆ, ಕೀನ್ಯಾದಲ್ಲಿ ಹೆಣವಾಗಿದ್ದ. ನಿಸ್ಸಂಶಯವಾಗಿ ಇದು ಐಎಸ್ಐನ ಕೈವಾಡವೇ ಆಗಿತ್ತಲ್ಲದೇ ಫೈಜಲ್ ನಜೀರ್‌ನೇ ಇದರ ಹಿಂದಿದ್ದ ಎಂದು ಎಲ್ಲರೂ ನಂಬಿದರು. ಸ್ವತಃ ಶರೀಫ್ನ ತಾಯಿ ರಿಫಾತ್ ಅಲ್ವಿ ಪಾಕಿಸ್ತಾನದ ನ್ಯಾಯಾಧೀಶರಿಗೆ ಪತ್ರಬರೆದು ಅದರಲ್ಲಿ ಈ ವಿಚಾರವನ್ನು ಉಲ್ಲೇಖಿಸಿದರು. ಇಮ್ರಾನ್ ಇದನ್ನು ಬಲವಾಗಿ ಹಿಡಿದುಕೊಂಡ. ಆತ ಪದೇ-ಪದೇ ಡರ್ಟಿ ಹ್ಯಾರಿ ಎಂದು ಕರೆಯಲ್ಪಡುವ ಫೈಜಲ್ ನಜೀರ್‌ನ ವಿರುದ್ಧ ಮನಸೋ ಇಚ್ಛೆ ಮಾತನಾಡಲಾರಂಭಿಸಿದ. ಇದು ಐಎಸ್ಐಗೆ ಸರಿ ಕಾಣಲಿಲ್ಲ.


ಮತ್ತೊಂದೆಡೆ ತಾನು ಅಧಿಕಾರ ಕಳೆದುಕೊಂಡೊಡನೆ ಲಾಂಗ್‌ಮಾರ್ಚ್ ಆರಂಭಿಸಿದ ಇಮ್ರಾನ್ ದೊಡ್ಡ ಸಂಖ್ಯೆಯಲ್ಲಿ ಬೆಂಬಲಿಗರನ್ನು ಸೆಳೆಯತೊಡಗಿದ. ತನ್ನ ನಾಟಕೀಯ ಭಾಷಣಗಳಿಂದ ಅವರನ್ನು ಆಕರ್ಷಿಸುತ್ತಾ ಸೇನೆಯ ವಿರುದ್ಧ ಎತ್ತಿಕಟ್ಟುವಲ್ಲಿ ಸಫಲನಾಗುತ್ತಿದ್ದ. ಇದರ ಪರಿಣಾಮವೇ ಪಂಜಾಬಿನಲ್ಲಿ ಉಪ ಚುನಾವಣೆಗಳು ನಡೆದಾಗ ಇಮ್ರಾನ್ ಖಾನನ ಪಕ್ಷ ಜಯಭೇರಿ ಬಾರಿಸಿತು. ಸಹಜವಾಗಿಯೇ ಇದು ಆತಂಕದ ವಿಚಾರವಾಗಿತ್ತು. ಸೇನೆ, ಇಮ್ರಾನ್ ತಮ್ಮಿಂದ ಅಧಿಕಾರವನ್ನು ಕಸಿಯುತ್ತಾನೆ ಎಂಬುದು ಖಾತ್ರಿಯಾಗುತ್ತಿದ್ದಂತೆ ಆತನ ಭ್ರಷ್ಟಾಚಾರದ ಪ್ರಕರಣಗಳನ್ನು ಮುಂದಿಟ್ಟು ನ್ಯಾಯಾಲಯದ ಮೂಲಕ ಆತ ಐದು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ನಿಯಮಗಳನ್ನು ಹೇರಿಬಿಟ್ಟಿತು. ಆತನ ಲಾಂಗ್ ಮಾರ್ಚ್ ಮತ್ತೆ ಮುಂದುವರಿಯಿತು. ಜನ ಮೊದಲಿಗಿಂತ ಹೆಚ್ಚಾದರೇ ಹೊರತು ಕಡಿಮೆಯಾಗಲಿಲ್ಲ. ಆತ ರ್ಯಾಲಿಯಲ್ಲಿ ಭಾಗವಹಿಸಿರುವಾಗಲೇ ಆತನ ಮೇಲೆ ಗುಂಡು ಹಾರಿಸಲಾಯ್ತು. ಕಾಲಿಗೆ ಮೂರು ಗುಂಡು ಹೊಕ್ಕಿದವೆಂದು ಇಮ್ರಾನನ ಬೆಂಬಲಿಗರು ಹೇಳಿದರು. ಆದರೆ ನೋಡುಗರಿಗೆ ಚುನಾವಣೆಯ ಹೊತ್ತಲ್ಲಿ ಪಶ್ಚಿಮ ಬಂಗಾಳದಲ್ಲಿ ದೀದಿ ಕಾಲಿಗೆ ಬ್ಯಾಂಡೇಜು ಕಟ್ಟಿಕೊಂಡಂತೆ ಕಾಣುತ್ತಿತ್ತು. ತನ್ನ ಭಿನ್ನ-ಭಿನ್ನ ಸ್ವರೂಪದ ನಾಟಕಗಳಿಂದ ಆತ ಜನರನ್ನು ಸೆಳೆಯುತ್ತಲೇ ಹೋದ. ಇನ್ನು ಈತನನ್ನು ತಡೆಯಲಾಗದು ಎಂದೇ ಆತನನ್ನು ಏಕಾಕಿ ಬಂಧಿಸುವ ನಿರ್ದೇಶನವನ್ನು ಸೇನೆ ಅಲ್ಲಿನ ಅರೆ ಸೈನಿಕಪಡೆಗೆ ಆದೇಶಿಸಿತು. ಇಮ್ರಾನನ ವಿರುದ್ಧ ಭ್ರಷ್ಟಾಚಾರದ ಪ್ರಕರಣವೊಂದಿದೆ. ಆತ ವಿದೇಶಗಳಿಗೆ ಹೋದಾಗಲೆಲ್ಲ ಅಲ್ಲಿ ಸಿಗುತ್ತಿದ್ದ ಉಡುಗೊರೆಗಳನ್ನು ಸರ್ಕಾರದ ತೋಷ್ಖಾನಗಳಿಗೆ ಕೊಟ್ಟು ಅಲ್ಲಿಂದ ಕಡಿಮೆ ಬೆಲೆಗೆ ಖರೀದಿಸಿ ತಾನು ಹೆಚ್ಚಿನ ಬೆಲೆಗೆ ಬೇರೆಯವರಿಗೆ ಮಾರುತ್ತಿದ್ದ. ಪಾಕಿಸ್ತಾನದ ಪ್ರಧಾನಿ ಎಂದು ಸಾಬೀತುಪಡಿಸಬೇಕಲ್ಲ, ಮತ್ತೇನಿದೆ ಮಾರ್ಗ? ರಾಷ್ಟ್ರಪತಿ ಪ್ರತಿಭಾ ಪಾಟಿಲ್ ತಾನು ಮರಳಿ ಮನೆಗೆ ಹೋಗುವಾಗ ತನಗೆ ಬಂದಿದ್ದ ಉಡುಗೊರೆಗಳನ್ನೆಲ್ಲ ಗಂಟುಮೂಟೆ ಕಟ್ಟಿಕೊಂಡು ಒಯ್ದಿದ್ದಳಲ್ಲ, ಇದು ಅಂಥದ್ದೇ ಮತ್ತೊಂದು ಕಥೆ ಅಷ್ಟೇ.


ವಿಚಾರಣೆಗೆಂದು ಸಾಗುತ್ತಿರುವ ಇಮ್ರಾನ್ ಖಾನನ ಬಂಧನದೊಂದಿಗೆ ಪಾಕಿಸ್ತಾನದಲ್ಲಿ ಅಕ್ಷರಶಃ ಬೆಂಕಿ ಹೊತ್ತಿಕೊಂಡಿತು. ಜನ ಬೀದಿಗೆ ಬಂದರು. ಸೇನಾ ಮುಖ್ಯನೆಲೆಗಳನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡಿದರು. ಅಲ್ಲಿನ ರೇಡಿಯೊ ಕೇಂದ್ರ ಹೊತ್ತಿ ಉರಿಯಿತು. ಅನೇಕ ಸೇನಾ ನಾಯಕರ ಮನೆಗಳು ಲೂಟಿಯಾದವು. ಅದಕ್ಕೆ ಬೆಂಕಿ ಹಚ್ಚಿ ಜನ ಆನಂದಿಸಿದರು. ಲೂಟಿಗೈಯ್ಯುತ್ತಿರುವ ಜನರನ್ನು ಪ್ರಶ್ನಿಸಿದಾಗ,‌ ಇದು ನಮ್ಮದ್ದೇ ದುಡ್ಡು. ಅದಕ್ಕೇ ಒಯ್ಯುತ್ತಿದ್ದೇವೆ ಎಂದು ಹೇಳುವುದನ್ನು ಕಂಡಾಗ, ಅವರಲ್ಲಿದ್ದ ಆಕ್ರೋಶ ಎದ್ದು ಕಾಣುತ್ತಿತ್ತು. ಅಚ್ಚರಿ ಎಂದರೆ ಜನರ ಈ ಆಕ್ರೋಶವನ್ನು ತಡೆಯುವಲ್ಲಿ ಸೇನೆ ತೋರಿದ ದಿವ್ಯ ನಿರ್ಲಕ್ಷ್ಯ. ಕೆಲವು ಕಡೆಯಲ್ಲಂತೂ ನುಗ್ಗಿ ಬರುತ್ತಿರುವ ಜನರ ಮೇಲೆ ಗುಂಡು ಹಾರಿಸಲೆಂದು ಕೊಟ್ಟ ಆದೇಶವನ್ನೂ ಧಿಕ್ಕರಿಸಲಾಗಿತ್ತು. ಇದು ಸೇನೆಯೊಳಗಿನ ಕುರ್ಚಿಯ ಕಾರಣಕ್ಕಾಗಿ ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ. ಅಂದರೆ ಇಮ್ರಾನ್ ಹಚ್ಚಿದ ಬೆಂಕಿ ಸೇನೆಯನ್ನೂ ಸುಡುತ್ತಿದೆ. ಭಾರತವನ್ನು ನಾಶ ಮಾಡುತ್ತೇವೆಂದು ಬದುಕು ಆರಂಭಿಸಿದ ಪಾಕಿಸ್ತಾನ ಇಂದು ತನ್ನ ಅಂಗಡಿಯನ್ನು ಗಂಟು-ಮೂಟೆ ಕಟ್ಟಿಕೊಂಡು ಭಾರತದೆದುರು ಗೋಗರೆಯಬೇಕಾದ ಪರಿಸ್ಥಿತಿಗೆ ಬಂದಿದೆ. ಇವ್ಯಾವನ್ನೂ ಅರಿಯದ ಇಲ್ಲಿನ ಮುಸಲ್ಮಾನರು ಮಸೀದಿಯಲ್ಲಿ ಮೌಲ್ವಿಯ ಮಾತು ಕೇಳಿ, ಬೀದಿಗೆ ಬಂದು ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳುತ್ತಾರಲ್ಲ, ಅಯ್ಯೋ ಪಾಪ ಎನಿಸುತ್ತದೆ!

ಒಂದಂತೂ ಸತ್ಯ ಅಧಿಕಾರದಲ್ಲಿರುವ ಕಾಂಗ್ರೆಸ್ಸು ಬಿಟ್ಟಿ ಭಾಗ್ಯಗಳನ್ನು ಕೊಟ್ಟು, ಮೀಸಲಾತಿಯನ್ನೂ ವಿಸ್ತರಿಸಿ ಜಾತಿ-ಜಾತಿಗಳ ನಡುವಿನ ಕದನವನ್ನು ತೀವ್ರಗೊಳಿಸಿತೆಂದರೆ ಸುಭಿಕ್ಷವಾಗಿದ್ದ ಕರ್ನಾಟಕವೂ ಪಾಕಿಸ್ತಾನದಂತಾಗಲು ಐದು ವರ್ಷ ಸಾಕು! ಆಗ ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳುವ ಅಗತ್ಯವಿಲ್ಲ. ಮುಸಲ್ಮಾನರು ಕರ್ನಾಟಕವೂ ಪಾಕಿಸ್ತಾನವೇ ಎಂದು ಹೆಮ್ಮೆ ಪಡಬಹುದು!

ಸೋಲಿನ ಭೀತಿಯಿಂದ ಪತರಗುಟ್ಟಿದೆ ಕಾಂಗ್ರೆಸ್ಸು!

ಸೋಲಿನ ಭೀತಿಯಿಂದ ಪತರಗುಟ್ಟಿದೆ ಕಾಂಗ್ರೆಸ್ಸು!

ಮೋದಿಯ ಹವಾ ಶುರುವಾಗುತ್ತಿದೆ ಎಂದು ಎಲ್ಲರೂ ಭಾವಿಸಿಕೊಂಡಿದ್ದರು. ಆದರೆ ತಮ್ಮ ವಿಸ್ತಾರವಾದ ರ್ಯಾಲಿಯ ಮೂಲಕ ಅವರು ಬಿರುಗಾಳಿಯನ್ನೇ ಎಬ್ಬಿಸಿಬಿಟ್ಟಿದ್ದಾರೆ! ಅಣ್ಣಾಮಲೈಯವರು ಹೇಳಿದ್ದು ನಿಜ, ಮೋದಿ ಆಗಮನಕ್ಕಿಂತಲೂ ಮುಂಚೆ ಕಾಂಗ್ರೆಸ್ಸಿನ ಗೆಲುವು ಹೆಚ್ಚು-ಕಡಿಮೆ ನಿಶ್ಚಿತವಾಗಿತ್ತು. ಅವರು ತಮ್ಮದ್ದೇ ಆದ ಭಿನ್ನ-ಭಿನ್ನ ವಿಧಾನಗಳ ಮೂಲಕ ಜನರನ್ನು ಒಪ್ಪಿಸಿಬಿಟ್ಟಿದ್ದರು. ಮೋದಿಯ ಪ್ರಚಾರದ ಅಬ್ಬರ ಶುರುವಾಯ್ತು ನೋಡಿ, ದಿನೇ ದಿನೇ ಕಾಂಗ್ರೆಸ್ಸಿನ ಸಂಖ್ಯೆ ಕುಸಿಯುತ್ತಾ ಬಂದು, ಪ್ರಚಾರದ ಆರಂಭಕ್ಕೂ ಮುನ್ನ ಕಾಂಗ್ರೆಸ್ಸು ಯಾವ ಸ್ಥಿತಿಯಲ್ಲಿತ್ತೋ ಬಿಜೆಪಿ ಆ ಸ್ಥಿತಿಗೆ ತಲುಪಿತು ಮತ್ತು ನರೇಂದ್ರಮೋದಿ ಆಗಮನಕ್ಕೂ ಮುನ್ನ ಬಿಜೆಪಿಗೆ ಯಾವ ದೈನೇಸಿ ಸ್ಥಿತಿಯಿತ್ತೋ ಆ ಹಂತಕ್ಕೆ ಕಾಂಗ್ರೆಸ್ಸು ಇಳಿಯಿತು. ಬೆಂಗಳೂರಿನ ರ್ಯಾಲಿಯಂತೂ ಬಹುಶಃ ಈ ದೇಶದ ರಾಜಕಾರಣದ ಇತಿಹಾಸದಲ್ಲೇ ಅತ್ಯಂತ ಅದ್ದೂರಿಯಾದ್ದು ಮತ್ತು ಜಗತ್ತಿನ ರಾಜಕಾರಣವೇ ನೆನಪಿಟ್ಟುಕೊಳ್ಳುವಂಥದ್ದು. ನಾಡಿನಲ್ಲೆಲ್ಲ ಚರ್ಚೆ ರ್ಯಾಲಿಯದ್ದಷ್ಟೇ ಅಲ್ಲ, ಮೋದಿಗಿರುವ ಅಂತಃಶಕ್ತಿಯದ್ದೂ ಕೂಡ. ದಿನಕ್ಕೆ ಮೂರು ಕಾರ್ಯಕ್ರಮ, ರ್ಯಾಲಿಗಳು, ನಡು-ನಡುವೆ ಅತ್ಯಂತ ಪ್ರಮುಖವಾದ ಮೀಟಿಂಗುಗಳು, ರಾತ್ರಿ ಕಳೆದು ಬೆಳಿಗ್ಗೆ ಏಳುವಾಗ ಮತ್ತದೇ ಉತ್ಸಾಹ-ಉಲ್ಲಾಸ. ಈ ಮನುಷ್ಯ ದೇವಮಾನವನೇ ಸರಿ! ಕಾಂಗ್ರೆಸ್ಸು ಅನಿವಾರ್ಯವಾಗಿ ಸುಳ್ಳುಗಳನ್ನು ಹರಡಿಸುವ ಪರಿಸ್ಥಿತಿಗೆ ತಲುಪಿದೆ. ಬಿ.ಎಲ್ ಸಂತೋಷ್ ಅವರು ಲಿಂಗಾಯಿತರ ವಿರುದ್ಧ ಆಡಿದ್ದಾರೆ ಎನ್ನಲಾಗುವ ಮಾತಿನಿಂದ ಹಿಡಿದು ಮೋದಿಯ ಪರವಾಗಿ ಬ್ಯಾಟಿಂಗ್ ಮಾಡುವ ಭರದಲ್ಲಿ ನಾನು ಸಾಮಾನ್ಯ ನಾಗರೀಕರನ್ನು ಬೈದಿದ್ದೇನೆ ಎನ್ನುವವರೆಗೆ ಅವರು ಅತ್ಯಂತ ನೀಚಮಟ್ಟದ ಪ್ರಚಾರಕ್ಕೆ ಇಳಿದಿದ್ದಾರೆ. ಈ ಹತಾಶ ಮನೋಭಾವವೇ ಅವರ ಸೋಲಿಗೆ ಸಾಕ್ಷಿ ನೀಡುತ್ತಿದೆ. ಪ್ರತೀ ಹಂತದಲ್ಲೂ ಮೋದಿಗೆ ಮತ ಹಾಕುವುದೇ ಸರಿಯಾದ್ದು ಎಂದು ಜನರಲ್ಲಿ ವಿಶ್ವಾಸ ಮೂಡಿಸುತ್ತಿದೆ. 

ಆರಂಭದಿಂದಲೂ ಪ್ರಚಾರದ ವಿಚಾರದಲ್ಲಿ ಮೇಲುಗೈ ಇದ್ದದ್ದು ಕಾಂಗ್ರೆಸ್ಸಿನದ್ದೇ. ಭ್ರಷ್ಟಸರ್ಕಾರ ಎನ್ನುವ ವಿಚಾರವನ್ನು ಸಮಾಜದ ಮುಂದೆ ಯಾವ ಪುರಾವೆಯೂ ಇಲ್ಲದೇ ಒಪ್ಪಿಸಿಬಿಟ್ಟಿದ್ದರು. ಸರ್ಜಿಕಲ್ ಸ್ಟ್ರೈಕ್‌ಗೂ ಪ್ರೂಫ್ ಕೇಳುವ ಈ ಅಯೋಗ್ಯ ಕಾಂಗ್ರೆಸ್ಸಿಗರು ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಮಾಡುವಾಗ ಪುರಾವೆ ಕೊಡಬೇಕೆಂಬ ಸಾಮಾನ್ಯಜ್ಞಾನವೂ ಇಟ್ಟುಕೊಳ್ಳದಿದ್ದುದು ಅಚ್ಚರಿಯೇ ಸರಿ. ಹೀಗಾಗಿ ಅವರ ಪ್ರಚಾರದ ಭರಾಟೆ ಜೋರಾಗಿದ್ದರೂ ಜನಕ್ಕೆ ಅದು ರುಚಿಸಲಿಲ್ಲ. ಆರಂಭದಲ್ಲಿ ಬಿಜೆಪಿ ಕಾರ್ಯಕರ್ತರು ಹತಪ್ರಭರೆನಿಸಿದರೂ ಬರು-ಬರುತ್ತಾ ಅದನ್ನು ಮೀರಿ ಬೆಳೆಯಲು ಸಾಧ್ಯವಾಯ್ತು. ಇಷ್ಟಕ್ಕೂ ಭ್ರಷ್ಟಾಚಾರದ ಆರೋಪ ಮಾಡಿದ ಕಾಂಗ್ರೆಸ್ಸಿಗರು ಶುದ್ಧರಾಗಿದ್ದರೇನು? ಯುಪಿಎ-2 ಅವಧಿಯಲ್ಲಿ ಮಾಡಿರುವ ಭ್ರಷ್ಟಾಚಾರಗಳು ಇನ್ನೂ ಕನಿಷ್ಠ ಎರಡು ಅವಧಿಯವರೆಗೂ ಮೋದಿಯವರಿಗೆ ಗೆಲುವು ತಂದುಕೊಡಬಲ್ಲಷ್ಟಿದೆ. ಹೀಗಿರುವಾಗ ಮೋದಿಯನ್ನು, ಅವರ ಸರ್ಕಾರವನ್ನು ಭ್ರಷ್ಟರೆನ್ನುವುದಕ್ಕೆ ಕಾಂಗ್ರೆಸ್ಸಿಗೆ ನೈತಿಕವಾದ ಯಾವ ಅರ್ಹತೆಯೂ ಇಲ್ಲ. ಅದೇ ಅವರಿಗಾದ ಬಲುದೊಡ್ಡ ಹಿನ್ನಡೆ. ಇಂದು ನೆಲಮಟ್ಟದಲ್ಲಿ ಬಿಜೆಪಿಯ ಭ್ರಷ್ಟಾಚಾರ ಚರ್ಚೆಯ ವಸ್ತುವೇ ಅಲ್ಲ, ಏಕೆಂದರೆ ಇಂಧನಖಾತೆ ಸಚಿವರಾಗಿ ಡಿ.ಕೆ ಶಿವಕುಮಾರ್ ನಡೆಸಿದ್ದ ಕಾರುಬಾರೇನೆಂಬುದು ಜನರ ಮನಸ್ಸಿನಲ್ಲಿ ಇನ್ನೂ ಹಸಿರಾಗಿಯೇ ಉಳಿದಿದೆ. ಈ ಕಾರಣದಿಂದಲೇ ಹಂತ-ಹಂತಕ್ಕೂ ಭಿನ್ನ ಭಿನ್ನ ಪ್ರಚಾರ ತಂತ್ರವನ್ನು ಬಳಸಿದ ಕಾಂಗ್ರೆಸ್ಸು ಕಾರ್ಯಕರ್ತರ ಸ್ಫೂರ್ತಿಗಾಗಿ ಭಾರತ್ ಜೊಡೊ ಯಾತ್ರೆಯಲ್ಲಿ ತನ್ನ ಸಂಪೂರ್ಣ ಶ್ರಮವನ್ನು ವ್ಯಯಿಸಿತು, ಹಣವನ್ನೂ ಕೂಡ. ಆಯಾ ಕ್ಷೇತ್ರಗಳಲ್ಲಿ ರಾಹುಲ್ ಬಾಬಾನನ್ನು ಸ್ವಾಗತಿಸುವ ಜವಾಬ್ದಾರಿಯನ್ನು ಟಿಕೆಟ್ ಆಕಾಂಕ್ಷಿಗಳಿಗೆ ನೀಡಲಾಯ್ತು. ಸಹಜವಾಗಿಯೇ ಟಿಕೆಟ್ ತಪ್ಪಿದ ನಂತರ ಕೈಸುಟ್ಟುಕೊಂಡಿದ್ದ ಇವರೆಲ್ಲ ತಿರುಗಿನಿಂತರು. ಇಷ್ಟಾದರೂ ಕಾಂಗ್ರೆಸ್ಸು ಜನರ ಮುಂದೆ ಒಗ್ಗಟ್ಟಿನ ಮಂತ್ರವನ್ನು ಪಠಿಸುವಲ್ಲಿ ಯಶಸ್ವಿಯಾಯ್ತು. ಒಳಗಿನ ಬೆಂಕಿ ಮಾತ್ರ ಆರಿರಲಿಲ್ಲ. ಇತ್ತೀಚೆಗೆ ಪತ್ರಕರ್ತೆಯೊಬ್ಬರು ಈ ಕಾದಾಟದ ಕುರಿತಂತಹ ಪ್ರತ್ಯಕ್ಷ ಅನುಭವವನ್ನು ಹೇಳಿಕೊಂಡಿದ್ದಾರೆ. ವೇದಿಕೆಯ ಮೇಲೆ ರಾಹುಲ್ ಸಿದ್ದರಾಮಯ್ಯ, ಡಿಕೆಶಿ ಕೈ-ಕೈ ಹಿಡಿದು ನಿಲ್ಲುವಂತೆ ಮಾಡಿದ ನಂತರ ಸಿದ್ದರಾಮಯ್ಯ ಜನಮೆಚ್ಚುವ ಭಾಷಣ ಮಾಡಿದರಂತೆ. ಒಳಗೊಳಗೇ ಕುದಿಯುತ್ತಿದ್ದ ಡಿಕೆಶಿ ಆ ಪತ್ರಕರ್ತೆ ಮಾತನಾಡಿಸತೊಡಗಿದಾಗ, ‘ಹೋದೆಡೆಯೆಲ್ಲಾ ಇದನ್ನೇ ಮಾತನಾಡುತ್ತಾನೆ, ಹೊಸತೇನಿದೆ?’ ಎಂದು ಮೂದಲಿಸಿದರಂತೆ. ಆಕೆ ‘ಜನರ ಮುಂದೆ ಕೈ-ಕೈ ಹಿಡಿದವರು ಹಿಂದೆ ಉರಕೊಂಡು ಹೇಗೆ ಕೈ-ಕೈ ಮಿಲಾಯಿಸುತ್ತಾರೆ ನೋಡಿ’ ಎಂದು ಕುಹಕವಾಡಿರುವುದು ಟ್ವಿಟರ್‌ನಲ್ಲಿ ಭಾರೀ ದೊಡ್ಡ ಸದ್ದು ಮಾಡಿತು. ಇಷ್ಟಾದರೂ ಬಿಜೆಪಿಯವರಿಗಿಂತ ಹೆಚ್ಚು ಬಲವಾದ ಏಕತೆಯನ್ನು ಪ್ರದರ್ಶಿಸಿದ್ದು ಕಾಂಗ್ರೆಸ್ಸೇ! ಆದರೆ ಅವರು ಎಡವಿದ್ದು ಎಲ್ಲಿ ಗೊತ್ತೇ? ಆರಂಭದ ಮೋದಿಯ ಹವಾ ಬಿರುಗಾಳಿಯಾಗಿ ಪರಿವರ್ತಿತಗೊಳ್ಳುತ್ತಿದೆ ಎಂದರಿವಾದಾಗ. 

ಇಡಿಯ ಮಾಧ್ಯಮವನ್ನು ಮೋದಿಯಿಂದ ಬೇರೆಡೆಗೆ ಸೆಳೆಯುವ ಪ್ರಯತ್ನಕ್ಕೆ ಕಾಂಗ್ರೆಸ್ಸು ಬಜರಂಗದಳವನ್ನು ಬಳಸಿಕೊಂಡಿತು. ಅದಾಗಲೇ ಬಜರಂಗದಳದ ಕಾರ್ಯಕರ್ತರು ಅನೇಕ ಕಡೆಗಳಲ್ಲಿ ಬಿಜೆಪಿಯ ವಿರುದ್ಧ ಕೂಗಾಡಿದ್ದರಲ್ಲದೇ ಬಂಡಾಯದ ಬಾವುಟ ಬೀಸಿದ್ದರು. ಹಳೆಯ ಕಾರ್ಯಕರ್ತರು ತಟಸ್ಥವಾಗಿ ಚುನಾವಣೆಯೇ ಬೇಡವೆಂದು ಬದಿಗೆ ಸರಿದುಬಿಟ್ಟಿದ್ದರು. ಹೀಗಾಗಿ ಈ ಹೊತ್ತಿನಲ್ಲಿ ಬಜರಂಗದಳದ ಕುರಿತು ಮಾತನಾಡಿದರೆ ಆ ಕಾರ್ಯಕರ್ತರೇನು ಮುಂದೆ ಬರುವುದಿಲ್ಲ, ಬದಲಿಗೆ ಮಾಧ್ಯಮದ ಚರ್ಚೆಯೆಲ್ಲಾ ಹಿಂದುತ್ವದ ಕುಕೃತ್ಯದ ಕಡೆಗೆ ತಿರುಗುತ್ತದೆ. ಮೋದಿ ಅದಕ್ಕೆ ಉತ್ತರಿಸುವಲ್ಲಿ ಹೈರಾಣಾಗುತ್ತಾರೆ ಎಂಬುದು ಕಾಂಗ್ರೆಸ್ಸಿನ ಲೆಕ್ಕಾಚಾರವಾಗಿತ್ತು. ಒಂದು ವೇಳೆ ಬಜರಂಗಿಗಳು ಪ್ರತಿಭಟನೆಗೆಂದು ಬಂದರೂ ಕಾಂಗ್ರೆಸ್ ನಾಯಕರ ಘೇರಾವ್ ಮಾಡುವುದು, ಗಾಡಿಗಳ ಮೇಲೆ ಕಲ್ಲೆಸೆಯುವುದು ಮಾಡಿ ಕಾಂಗ್ರೆಸ್ಸಿಗರನ್ನು ಮಾಧ್ಯಮಗಳ ಮುಂದೆ ಅಳುವುದಕ್ಕೆ ಪ್ರೇರೇಪಿಸುತ್ತದೆ. ಮೋದಿಯವರ ಬಿರುಗಾಳಿಗೆ ಇದು ಪ್ರತಿದಾಳವೆಂಬುದು ಅವರ ಲೆಕ್ಕಾಚಾರವಾಗಿತ್ತು. ಸದಾ ಉಗ್ರವಾಗಿರುವ ಚಿಂತನೆ ಹೊಂದಿರುವ ಬಜರಂಗದಳದ ಕಾರ್ಯಕರ್ತರು ಈ ಬಾರಿ ಶಾಂತ ಪ್ರತಿಭಟನೆಗೆ ಮುಂದಾದದ್ದು ಕಾಂಗ್ರೆಸ್ಸಿನ ಪಾಲಿಗೆ ಔಟ್ ಆಫ್ ಸಿಲಬಸ್ಸು. ಮಂದಿರ ಮಂದಿರಗಳಲ್ಲಿ ಹನಮಾನ್ ಚಾಲಿಸಾ ಪಠಣ ಬಜರಂಗಿಯನ್ನು, ಬಜರಂಗದಳವನ್ನು ಸಮೀಕರಿಸಿಬಿಟ್ಟಿತು. ಪಿಎಫ್ಐನೊಂದಿಗೆ ಬಜರಂಗದಳವನ್ನು ಸಮೀಕರಿಸಿದ ಕಾಂಗ್ರೆಸ್ಸು ನಾಳೆ ಮಂದಿರಕ್ಕೆ ಹೋಗುವ ಸಾಮಾನ್ಯ ಕಾರ್ಯಕರ್ತರನ್ನು ಭಯೋತ್ಪಾದಕರೆನ್ನಲು ಹಿಂಜರಿಯುವುದಿಲ್ಲ ಎಂದೆನಿಸಿಬಿಟ್ಟಿತ್ತು ಜನರಿಗೆ. ಹೀಗಾಗಿ ಮನೆ-ಮನೆಯಲ್ಲೂ ಜನ ಆಕ್ರೋಶದಿಂದ ಕುದಿಯಲಾರಂಭಿಸಿದರು. ತನ್ನ ದಾಳ ತನಗೇ ತಿರುಮಂತ್ರವಾಗಿದ್ದು ಕಂಡು ಬೆಚ್ಚಿದ ಡಿಕೆಶಿ ಆಂಜನೇಯನ ಪಾದಗಳಿಗೆ ಹಣೆಹಚ್ಚಿ ‘ನಾನೂ ಹನುಮ ಭಕ್ತನೇ’ ಎಂದಿದ್ದು ಅವರ ಮೊದಲ ಸೋಲು. ಕಾಂಗ್ರೆಸ್ಸು ಎಂದಾದರು ಹಿಂದೂಗಳ ಪರವಾಗಿ ನಿಂತಿದ್ದು ನೆನಪಿದೆಯೇನು? ರಾಮ ಹುಟ್ಟಿದ್ದೇ ಸುಳ್ಳು ಎಂದು ಅವನ ಅಸ್ತಿತ್ವ ಪ್ರಶ್ನಿಸಿದವರು ಇವರು, ನ್ಯಾಯಾಲಯಕ್ಕೆ ಹಾಗೊಂದು ಅಫಿಡವಿಟ್ ಸಲ್ಲಿಸಿದರೂ ಕೂಡ. ರಾಮಸೇತು ಉಳಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎಂಬುದು ಅವರ ಭಾವನೆಯಾಗಿತ್ತು. ರಾಮ ಯಾವ ಇಂಜಿನಿಯರಿಂಗ್ ಕಾಲೇಜಿನ ಡಿಗ್ರಿ ಪಡೆದಿದ್ದಾನೆ ಎಂದು ಕುಹಕವಾಡಿದ್ದರು ಇವರೆಲ್ಲ. ರಾಮಮಂದಿರದ ನಿರ್ಮಾಣಕ್ಕೆಂದು ಮುಂದಡಿಯಿಟ್ಟಿದ್ದ ಕರಸೇವಕರ ಮೇಲೆ ಗೋಲಿಬಾರ್ ಮಾಡಿಸಿದವರು ಇವರು. ಗೋದ್ರಾದಲ್ಲಿ ಕರಸೇವೆ ಮುಗಿಸಿ ಮರಳಿ ಬರುತ್ತಿದ್ದ ರಾಮಭಕ್ತರನ್ನು ಮುಸಲ್ಮಾನರು ರೈಲಿನಲ್ಲಿ ಜೀವಂತ ದಹಿಸಿದಾಗ ಅವರ ಬೆಂಬಲಕ್ಕೆ ನಿಂತಿದ್ದು ಇದೇ ಮಂದಿ. ರಾಮನ ಕುರಿತಂತೆ ಅವಹೇಳನಕಾರಿ ಮಾತುಗಳನ್ನು ಟಿವಿ ಡಿಬೆಟ್‌ಗಳಲ್ಲಿ ಆಡುತ್ತಾ ಹಿಂದೂಗಳನ್ನು ಮತ್ತೆ-ಮತ್ತೆ ನೋಯಿಸಿದರು. ರಾಮಮಂದಿರ ಅಯೋಧ್ಯೆಯಲ್ಲಿ ನಿರ್ಮಾಣವಾಗುವುದಕ್ಕೆ ಅಡ್ಡಗಾಲು ಹಾಕಿ, ಅದನ್ನು ವಿವಾದಿತ ಪ್ರದೇಶವಾಗಿ ಉಳಿಸಿದ್ದಲ್ಲದೇ 67 ಎಕರೆ ಜಮೀನಿಗೆ ಮತ್ತೊಬ್ಬ ಫಲಾನುಭವಿಯನ್ನು ಸೃಷ್ಟಿಸುವ ಪ್ರಯತ್ನ ಮಾಡಿದ್ದೂ ಅವರೇ. ಹಿಂದೂಗಳಲ್ಲಿ ಒಡಕು ತಂದು ಮುಸಲ್ಮಾನರಿಗೆ ಲಾಭ ಮಾಡಿಕೊಡುವ ಅವರ ಪ್ರಯತ್ನ ಒಂದೆರಡೇನು? ರಾಮಮಂದಿರಕ್ಕೇ ಇಷ್ಟೆಲ್ಲ ವಿರೋಧ ಮಾಡಿದ್ದ ಈ ಮಂದಿ ಆಂಜನೇಯನ ಪಾದಗಳಿಗೆ ಹಣೆ ಹಚ್ಚಿದ್ದಾರೆಂದರೆ ಅದು ನರೇಂದ್ರಮೋದಿಯವರ ಬಜರಂಗಬಲಿ ಘೋಷಣೆಗಲ್ಲದೇ ಮತ್ಯಾವುದಕ್ಕೆ ಹೇಳಿ? ನಾವೆಲ್ಲ ಹನುಮ ನಾಡಿನವರು ನಿಜ. ಆದರೆ ಕಾಂಗ್ರೆಸ್ಸಿಗರ ಬಾಯಲ್ಲೂ ಹನುಮನ ನಾಮ ಬರುವಂತೆ ಮಾಡಿದ ಮೋದಿ ನಿಜಕ್ಕೂ ಶ್ರೇಷ್ಠ ಹನುಮ ಸೇವಕ. ಹೀಗಾಗಿಯೇ ಜನ ಊರೂರಲ್ಲೂ ಅವರನ್ನು ಅಪ್ಪಿಕೊಳ್ಳಲು ಸಿದ್ಧವಾಗಿಬಿಟ್ಟಿದ್ದಾರೆ. 

ತಾವು ಎಸೆದ ದಾಳ ಉಲ್ಟಾ ಹೊಡೆಯುತ್ತಿದೆ ಎಂದು ಗೊತ್ತಾದೊಡನೆ ಆಂಜನೇಯನಿಗೆ ಮಂದಿರ ಕಟ್ಟಿಕೊಡುವ, ಅಂಜನಾದ್ರಿಯನ್ನು ಅಭಿವೃದ್ಧಿಪಡಿಸುವ ಹಿಂದೂಗಳ ಓಲೈಕೆಯ ಮಂತ್ರವನ್ನು ಕಾಂಗ್ರೆಸ್ಸು ಪಠಿಸುತ್ತಿದ್ದಂತೆ ಮುಸಲ್ಮಾನರಿಗೆ ಅಸಮಾಧಾನವೂ ಅನುಮಾನವೂ ಶುರುವಾಯ್ತು. ಅವರೀಗ ಪೂರಾ ಗೊಂದಲದಲ್ಲಿದ್ದಾರೆ. ಅದಾಗಲೇ ಸತ್ತಿದ್ದ ಪಿಎಫ್ಐ ಅನ್ನು ಬ್ಯಾನ್ ಮಾಡುತ್ತೇನೆ ಎನ್ನುವುದು ಎಷ್ಟು ಮೂರ್ಖ ಸಂಗತಿಯಾಗಿತ್ತೋ, ಬಜರಂಗದಳ ಬ್ಯಾನ್ ಮಾಡುವುದು ಸ್ಥಳೀಯ ಸರ್ಕಾರಕ್ಕೆ ಅಸಾಧ್ಯವಾದ ಸಂಗತಿ ಎನ್ನುವುದು ಮುಸಲ್ಮಾನರಿಗೆ ತಿಳಿಯದುದೇನಾಗಿರಲಿಲ್ಲ. ಹೀಗಾಗಿ ಅವರೊಳಗೆ ಆಕ್ರೋಶದ ಬೀಜವಂತೂ ಬಿತ್ತಿದೆ. ಇತ್ತ ಹಿಂದೂ ಕಾರ್ಯಕರ್ತರು ಹಠಹಿಡಿದು ಅಖಾಡಕ್ಕೆ ಧುಮುಕಿದರೆ ಅತ್ತ ಮುಸಲ್ಮಾನರು ಕಾಂಗ್ರೆಸ್ಸಿನ ಪಲಾಯನವಾದಿ ರಾಜಕಾರಣ ಕಂಡು ಇವರಿಂದ ಒಂದು ಹೆಜ್ಜೆ ಹಿಂದೆ ಸರಿದಿರುವುದಂತೂ ಸ್ಪಷ್ಟ. ಈಗ ಕಾಂಗ್ರೆಸ್ಸಿಗೆ ಉಳಿದಿರುವುದು ಒಂದೇ ಮಾರ್ಗ. ಹಿಂದೂಗಳನ್ನು ಜಾತಿ-ಜಾತಿಗಳಲ್ಲಿ ಒಡೆದು ಬಿಸಾಡುವುದು ಮಾತ್ರ. ಹೀಗಾಗಿಯೇ ಬ್ರಾಹ್ಮಣ ಮತ್ತು ಲಿಂಗಾಯಿತರನ್ನು ಎತ್ತಿಕಟ್ಟುವ ಪ್ರಯತ್ನ ಆರಂಭಿಸಿದರು. ಬಿ.ಎಲ್ ಸಂತೋಷರನ್ನು ಇದಕ್ಕೆ ದಾಳವಾಗಿ ಉಪಯೋಗಿಸಬೇಕೆಂದು ಫೇಕ್ ಸುದ್ದಿಯನ್ನು ಸೃಷ್ಟಿಸಿದರು. ಇದ್ಯಾವುದಕ್ಕೂ ಎಂದಿಗೂ ತಲೆಕೆಡಿಸಿಕೊಳ್ಳದ ಅವರು ಈ ಬಾರಿ ಮಾತ್ರ ಹಠಕ್ಕೆ ಬಿದ್ದು ಸುದ್ದಿ ಹರಿದಾಡಿಸಿದವನ ವಿರುದ್ಧ ಕ್ರಮ ಕೈಗೊಂಡಿದ್ದಿದೆಯಲ್ಲ, ಇದು ಲಿಂಗಾಯಿತರ ಕಣ್ತೆರೆಸುವಂಥದ್ದು. ಹಾಗೆ ನೋಡಿದರೆ ವೀರಶೈವರನ್ನೂ ಲಿಂಗಾಯಿತರನ್ನೂ ಒಡೆದು ಮತಗಳನ್ನು ಬಾಚಿಕೊಳ್ಳಲು ಯತ್ನಿಸಿದ್ದು ಸಿದ್ದರಾಮಯ್ಯ ಮತ್ತವರ ತಂಡವೇ ಅಲ್ಲವೇನು? ಚುನಾವಣೆಯವರೆಗೂ ಹೋರಾಟಕ್ಕೆ ಕಾವು ತಂದುಕೊಡುವಲ್ಲಿ ದುಡಿದ ಈ ನಾಯಕರು ಆನಂತರ ಲಿಂಗಾಯಿತರ ಬಳಿಯೂ ಸುಳಿಯಲಿಲ್ಲವೆಂಬುದು ಸತ್ಯವಲ್ಲವೇನು? ಮೊದಲಾದರೆ ಜನ ಮರೆತುಬಿಡುತ್ತಿದ್ದರು. ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಮತ್ತೆ ಮತ್ತೆ ನೆನಪಿಸುವ ವ್ಯವಸ್ಥೆ ಇರುವುದರಿಂದ ಕಾಂಗ್ರೆಸ್ಸು ಕಂಗಾಲಾಗಿರುವುದು ಕಾಣುತ್ತದೆ. ಜಾತಿ-ಜಾತಿಗಳು ಮೋದಿ ರ್ಯಾಲಿಯ ನಂತರ ಜಾತಿಯನ್ನೇ ಮರೆತು ಮೋದಿಯ ಮಾತಿಗೆ ಮತಹಾಕುವ ಹಂತಕ್ಕೆ ಬಂದಿರುವುದು ಕಾಂಗ್ರೆಸ್ಸಿಗರಿಗೆ ಸಹಿಸಲಾಗದ ಸುದ್ದಿ. 

ನರೇಂದ್ರಮೋದಿ ಈ ಬಾರಿ ಬಹುಮತದ ಸರ್ಕಾರ ಕೇಳಿಕೊಂಡಿದ್ದಾರೆ. 104ಕ್ಕೆ ಪ್ರತೀಬಾರಿ ನಿಲ್ಲಿಸುತ್ತೇವಲ್ಲ, ಅದು ಬಿಜೆಪಿಯನ್ನು ಅನಿವಾರ್ಯವಾಗಿ ಕೆಡುಕಿನತ್ತ ದೂಡುತ್ತದೆ. ಆಪರೇಶನ್ ಕಮಲಕ್ಕೆ ಪ್ರೇರೇಪಿಸುತ್ತದೆ. ಒಮ್ಮೆ ಪೂರ್ಣ ಬಹುಮತ ಕೊಟ್ಟರೆ ಉತ್ತರ ಪ್ರದೇಶದಲ್ಲಿ ನೀಡಿದಂತಹ ಸಮರ್ಥ ಆಡಳಿತವನ್ನು ಕರ್ನಾಟಕಕ್ಕೂ ನೀಡಬಹುದೆಂದು ಅವರ ಬಯಕೆ. ಹೀಗಿರುವಾಗ ಜವಾಬ್ದಾರಿಯುತವಾಗಿ ಮತ ಸಲ್ಲಿಸುವುದು ನಮ್ಮ ಹೊಣೆ. ಅಷ್ಟೇ ಅಲ್ಲ, ಬಿಜೆಪಿ ಈ ಬಾರಿ 70ಕ್ಕೂ ಹೆಚ್ಚು ಹೊಸಮುಖಗಳನ್ನು ಪರಿಚಯಿಸಿದೆ. ಇವರಲ್ಲಿ ಬಹುತೇಕರು ಸಾಮಾನ್ಯ ಕಾರ್ಯಕರ್ತರು, ಕೆರೆದರೂ ಅಕೌಂಟಿನಲ್ಲಿ ನಾಲ್ಕಾರು ಲಕ್ಷ ಸಿಗದವರು. ಈ ಬಾರಿ ಬಿಜೆಪಿಯ ಈ ಪ್ರಯೋಗಕ್ಕೆ ಸೋಲಾದರೆ ಇನ್ನೆಂದೂ ಯಾರೂ ಕಾರ್ಯಕರ್ತರಿಗೆ ಟಿಕೆಟ್ ಕೊಡುವ ಯತ್ನ ಮಾಡಲಾರರು. ಟಿಕೆಟ್ ಕೊಡುವ ಮುನ್ನ ಅಪ್ಪ ಶಾಸಕನಾಗಿದ್ದಾನಾ ಎಂದು ಗುರುತಿಸಿಕೊಳ್ಳುವುದು ಅನಿವಾರ್ಯವಾಗಿಬಿಡುತ್ತದೆ. ಅಲ್ಲಿಗೆ ಕಾರ್ಯಕರ್ತನ ಸಮಾಧಿ. ಕಾಂಗ್ರೆಸ್ಸಿನ ಕಾರ್ಯಕರ್ತರೂ ಈ ಕುರಿತಂತೆ ಗಂಭೀರವಾಗಿ ಯೋಚಿಸಬೇಕಿದೆ. ಸಾಯುವ ಕೊನೆ ಕ್ಷಣದಲ್ಲೂ ಕುರ್ಚಿಯ ಮೇಲಿರಬೇಕೆಂದು ಬಯಸುವ ಮಂದಿಯ ಜೀತ ಮಾಡಬಾರದೆಂದರೆ ಈ ಬಾರಿ ಅವರೂ ಬಿಜೆಪಿಗೆ ಮತಹಾಕಿ ಕಾರ್ಯಕರ್ತರಿಗೆ ಟಿಕೆಟ್ ಕೊಡುವ ಈ ವಿಚಾರಧಾರೆಯನ್ನು ಗೆಲ್ಲಿಸಬೇಕಿದೆ. ಆಗಮಾತ್ರ ಕಾಂಗ್ರೆಸ್ ಕಾರ್ಯಕರ್ತರಿಗೆ ಮುಂದಿನ ಚುನಾವಣೆಯಲ್ಲಾದರೂ ಟಿಕೆಟ್ ಸಿಗುವ ಸಾಧ್ಯತೆ ಇದೆ. ಇಲ್ಲವಾದರೆ ಅಪ್ಪ, ಮಗ, ಮೊಮ್ಮಗ, ಮರಿಮಕ್ಕಳ ಪರಂಪರೆ ವರುಣಾದಲ್ಲಿ ಮುಂದುವರೆದಂತೆ ನಾಡಿನೆಲ್ಲೆಡೆಗೂ ಹಬ್ಬಲಿದೆ. 

ಈ ಕಾರಣಕ್ಕೇ ಮೇ 10 ಅತ್ಯಂತ ಪ್ರಮುಖವಾದ ದಿವಸ. ಮತ ಹಾಕಬೇಕೋ ಬೇಡವೋ ಎಂದು ಆಲೋಚಿಸುತ್ತಿರುವವರು ಮನೆಯಿಂದ ಹೊರಬನ್ನಿ. ಮೋದಿಯವರು ಕೇಳಿಕೊಂಡಂತೆ ಒಮ್ಮೆ ಅವರಿಗೆ ಬಹುಮತ ಕೊಡೋಣ. ಕರ್ನಾಟಕ ಅಭಿವೃದ್ಧಿಯ ಪಥದಲ್ಲಿ ಮೋದಿಗೆ ಬಲಗೈಯ್ಯಾಗಿ ಮುನ್ನುಗ್ಗಲೆಂದು ಪ್ರಾರ್ಥಿಸೋಣ ಮತ್ತು 2024ರ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿಯನ್ನು ಗೆಲ್ಲಿಸಲು ಈಗ ಅವರ ಗೆಲುವು ಮುಖ್ಯ ಎನ್ನುವುದನ್ನು ಮರೆಯದಿರೋಣ. ಹೌದಲ್ಲವೇ?

ಮೋದಿಗೆ ಮತ್ತೆಷ್ಟು ಬಾರಿ ಅಗ್ನಿಪರೀಕ್ಷೆ?!

ಮೋದಿಗೆ ಮತ್ತೆಷ್ಟು ಬಾರಿ ಅಗ್ನಿಪರೀಕ್ಷೆ?!

ಮೋದಿ ಇಪ್ಪತ್ತು ವರ್ಷಗಳ ನಂತರ ದೇಶದ ಸರ್ವೋಚ್ಚ ನ್ಯಾಯಾಲಯದಿಂದ ಕ್ಲೀನ್ ಚಿಟ್ ಪಡೆದುಕೊಂಡಿದ್ದಾರೆ. ಮೋದಿಯನ್ನು ರಕ್ಕಸನೆಂದು ಬಿಂಬಿಸಲು ಮಾಧ್ಯಮಗಳು, ರಾಜಕಾರಣಿಗಳು, ಅಧಿಕಾರಿಗಳು, ಕೆಲವು ಎನ್‌ಜಿಒಗಳು ಮಾಡಿದ ಪ್ರಯತ್ನ ಕೊನೆಗೂ ಮಣ್ಣುಗೂಡಿದೆ. ಪುಟವಿಟ್ಟ ಚಿನ್ನದಂತೆ ಮೋದಿ ಮತ್ತೊಮ್ಮೆ ಬೆಳಗಿದ್ದಾರೆ.

2002ರ ಫೆಬ್ರವರಿ 27. ಅಯೋಧ್ಯಾದಿಂದ ಬರುತ್ತಿದ್ದ ರೈಲೊಂದಕ್ಕೆ ಮುಸಲ್ಮಾನರು ಗುಜರಾತಿನ ಗೋದ್ರಾದಲ್ಲಿ ಬೆಂಕಿ ಹಚ್ಚಿದರು. ಇದು ಅಚಾನಕ್ಕಾಗಿ ನಡೆದ ದಾಳಿಯಲ್ಲ. ಎಂದಿನಂತೆ ಕೈಲಿ ಕಲ್ಲುಗಳನ್ನು ಹಿಡಿದು, ಪೆಟ್ರೋಲು ಬಾಂಬುಗಳನ್ನು ಹಿಡಿದು ಸಿದ್ಧವಾಗಿದ್ದ ಮುಸಲ್ಮಾನ ಪುಂಡರು ರೈಲು ನಿಂತೊಡನೆ ಏಕಾಕಿ ದಾಳಿ ಮಾಡಿದರು. ಕಲ್ಲೆಸೆದು ಜನರನ್ನು ರೈಲಿನಿಂದ ಹೊರಬರದಂತೆ ತಡೆದರು. ಪೆಟ್ರೋಲ್ ಬಾಂಬುಗಳನ್ನು ಎಸೆದು ಬೋಗಿಗಳು ಹೊತ್ತುರಿಯುವಂತೆ ಮಾಡಿದರು. ಬೇಗೆ ತಾಳಲಾರದೆ ತಪ್ಪಿಸಿಕೊಳ್ಳಲು ಯತ್ನಿಸಿದವರನ್ನು ಹೊರಗೆ ನಿಂತು ಕಲ್ಲಿನಲ್ಲಿ ಹೊಡೆಯಲಾಯ್ತು. ಇಡಿಯ ಬೋಗಿಗಳು ಸುಟ್ಟು ಕರಕಲಾದವಲ್ಲದೇ 59 ಜನ ಕರಸೇವಕರು ಬೆಂದುಹೋಗಿದ್ದರು. ಅವರ ದೇಹಗಳನ್ನು ಆಸ್ಪತ್ರೆಗೆ ಸಾಗಿಸುವಾಗ ಎಂಥವನ ರಕ್ತವೂ ಕುದಿಯುತ್ತಿತ್ತು. ಆದರೆ ಈ ದೇಶದ ಮಾಧ್ಯಮಗಳಲ್ಲಿದ್ದವರು ಅಂದೂ ಅದರ ಕುರಿತಂತೆ ತಲೆಕೆಡಿಸಿಕೊಳ್ಳಲಿಲ್ಲ, ಇಂದೂ ಕೂಡ! ಕಳೆದ ಮಾರ್ಚ್‌ನಲ್ಲಿ ಪ್ರೇಮ್ಶಂಕರ್ ಝಾ ಈ ಪ್ರಕರಣವನ್ನು ನೆನಪಿಸಿಕೊಳ್ಳುತ್ತಾ ವೈರ್ ಪತ್ರಿಕೆಗೆ ಬರೆದ ಲೇಖನದಲ್ಲಿ, 1100 ಜನ ಸಾಮಥ್ರ್ಯ ಹೊಂದಿದ್ದ ಆ ರೈಲು 2000ಕ್ಕೂ ಹೆಚ್ಚು ಜನ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದುದೇ ಮೊದಲ ತಪ್ಪು ಎಂಬುದನ್ನು ಬರೆದುಕೊಂಡಿದ್ದಾರೆ. ಎಸ್6 ಬೋಗಿ ಬೆಂಕಿ ಹೊತ್ತಿಸಿಕೊಂಡು ಉರಿದು ಕರಸೇವಕರು ಸಾಯಲು ಕಾರಣವಾಗಿದ್ದು ಅದು ಅಗತ್ಯಕ್ಕಿಂತ ಹೆಚ್ಚು ತುಂಬಿದ್ದುದರಿಂದ ಎಂದು ವಾದಿಸುವ ಪ್ರಯತ್ನ ಮಾಡಿದ್ದಾರೆ. ಬೆಂಕಿ ಹಚ್ಚಿದ ಮುಸಲ್ಮಾನರದ್ದು ಯಾವ ತಪ್ಪೂ ಇಲ್ಲ. ರೈಲಿನಲ್ಲಿ ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದ ಹಿಂದೂಗಳದ್ದೇ ತಪ್ಪು. ಅರುಂಧತಿ ರಾಯ್ ಅಂತೂ ಅಂದಿನ ದಿನಗಳಲ್ಲೇ ಬಾಬರಿ ಮಸೀದಿಯನ್ನು ಉರುಳಿಸಿ ಬರುತ್ತಿದ್ದ ಕರಸೇವಕರ ಮೇಲೆ ಮುಸಲ್ಮಾನರಿಗೆ ಆಕ್ರೋಶವಿತ್ತು, ಹೀಗಾಗಿ ಈ ರೀತಿ ಆಯ್ತು ಎಂದು ದಂಗೆಕೋರರಿಗೆ ಕವರಿಂಗ್ ಫೈರ್ ಕೊಡುವ ಪ್ರಯತ್ನ ಮಾಡಿದ್ದಳು! ಮಸೀದಿ ಉರುಳುವ ಮತ್ತು ಗೋದ್ರಾ ರೈಲಿಗೆ ಬೆಂಕಿ ಹಚ್ಚುವ ಘಟನೆಗಳ ನಡುವೆ ಹತ್ತು ವರ್ಷಗಳ ಅಂತರವಿತ್ತು ಎಂಬುದನ್ನು ಆಕೆ ಮರೆತೇ ಹೋಗಿದ್ದಳು. ಹತ್ತು ವರ್ಷಗಳ ಹಿಂದೆ ನಿರ್ಜೀವ ಕಟ್ಟಡವೊಂದನ್ನು ಉರುಳಿಸಿದ ಘಟನೆಗೆ ಮುಸಲ್ಮಾನರು 59 ಜನರ ಸಜೀವ ದಹನ ಮಾಡಿದ್ದು ಸಹಜ ಪ್ರತಿಕ್ರಿಯೆಯಾಗಬಹುದಾದರೆ, ಈ ರೈಲು ದಹನದ ನಂತರ ಹಿಂದೂಗಳು ಮುಸಲ್ಮಾನರ ವಿರುದ್ಧ ಆಕ್ರೋಶಗೊಂಡಿದ್ದು ಮಾತ್ರ ಅಸಹಜ ಹೇಗಾಯ್ತು? ಈ ಪ್ರಶ್ನೆಯನ್ನು ಆಗಲೂ ಯಾರೂ ಕೇಳಲಿಲ್ಲ, ಈಗಲೂ ಕೂಡ ವ್ಯವಸ್ಥಿತವಾಗಿ ಮರೆಯುತ್ತಾರೆ.

ಆದರೆ ಗೋದ್ರಾ ನಂತರದ ಘಟನೆಗಳನ್ನು, ಮೋದಿಯನ್ನು ಶಾಶ್ವತವಾಗಿ ಮುಗಿಸುವ ಪ್ರಯತ್ನಕ್ಕೆ ಎಲ್ಲರೂ ರಣಹದ್ದುಗಳಂತೆ ಬಳಸಿಕೊಂಡರು. ಮೋದಿ ಮುಖ್ಯಮಂತ್ರಿಯ ಪಟ್ಟಕ್ಕೆ ಬಂದು ಆಗಷ್ಟೇ ನಾಲ್ಕು ತಿಂಗಳು ಕಳೆದಿದ್ದವು. ಕಚ್‌ನ ಭೂಕಂಪವನ್ನು ಎದುರಿಸಿ ನಿಂತು ಅವರು ಜನರಲ್ಲಿ ಮೂಡಿಸಿದ ವಿಶ್ವಾಸ ಪ್ರತಿಪಕ್ಷಗಳಲ್ಲಿ ಆತಂಕ ಹುಟ್ಟಿಸಿತ್ತು. ಈ ಅವಕಾಶವನ್ನು ಎಲ್ಲರೂ ಬಳಸಿಕೊಂಡರು. ರಾಷ್ಟ್ರಮಟ್ಟದಲ್ಲಿ ಹಿಂದೂಗಳನ್ನು ಅವಮಾನಗೊಳಿಸಲು ದಂಗೆಗಳನ್ನು ವ್ಯವಸ್ಥಿತವಾಗಿ ಉಪಯೋಗಿಸಲಾಯ್ತು. ಆಗಷ್ಟೇ ಅಧಿಕಾರಕ್ಕೆ ಬಂದಿದ್ದ ಮೋದಿ ದಂಗೆಗಳು ಕೈಮೀರುತ್ತವೆಂದು ಗೊತ್ತಾದೊಡನೆ ಪಕ್ಕದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮಧ್ಯಪ್ರದೇಶದ ದಿಗ್ವಿಜಯ್ ಸಿಂಗ್, ಮಹಾರಾಷ್ಟ್ರದ ವಿಲಾಸ್‌ರಾವ್ ದೇಶ್‌ಮುಖರಿಗೆ ಪತ್ರ ಬರೆದು ರಕ್ಷಣೆಯ ದೃಷ್ಟಿಯಿಂದ ಸಹಾಯ ಕೊಡುವಂತೆ ಕೇಳಿಕೊಂಡರು. ಕಾಂಗ್ರೆಸ್ಸಿಗೆ ಸೇರಿದ್ದ ಈ ಮೂರೂ ರಾಜ್ಯಗಳು ಅಂದು ಮೋದಿಯ ವಿನಂತಿಗೆ ಪ್ರತಿಕ್ರಿಯಿಸಲೇ ಇಲ್ಲ. ಇದಕ್ಕೆ ವಿಪರೀತವಾಗಿ ದಂಗೆ ನಿಯಂತ್ರಣ ಮಾಡುವಲ್ಲಿ ಮೋದಿ ಸೋತರೆಂದು ಅದೇ ಮುಖ್ಯಮಂತ್ರಿಗಳು ಆನಂತರ ಮಾತನಾಡಲಾರಂಭಿಸಿದರು. ಸುಳ್ಳು ಸುದ್ದಿ ಹಬ್ಬಿಸಿ ತಮಗೆ ಬೇಕಾದ ವಾತಾವರಣವನ್ನು ಸೃಷ್ಟಿಸುವಲ್ಲಿ ನಿಸ್ಸೀಮರಾದ ಎಡಪಂಥೀಯರು ಕೌಸರ್ ಬಾನೊ ಎಂಬ ಗರ್ಭಿಣಿ ಮುಸ್ಲೀಂ ಹೆಣ್ಣುಮಗಳ ಸಾವನ್ನೂ ಕೂಡ ತಮಗೆ ತಕ್ಕಂತೆ ಬಳಸಿಕೊಂಡರು. ಹಿಂದೂ ಪಡೆ ಆಕೆಯ ಮೇಲೆ ಅತ್ಯಾಚಾರ ಮಾಡಿ, ಆಕೆಯ ಹೊಟ್ಟೆಯನ್ನು ಸೀಳಿ, ಒಳಗಿದ್ದ ಮಗುವನ್ನು ಕತ್ತಿಯಿಂದ ಕತ್ತರಿಸಿದರು ಎಂದೆಲ್ಲ ಸುದ್ದಿ ಹಬ್ಬಿಸಿದರು. ಆ ಮೂಲಕ ಮುಸಲ್ಮಾನರನ್ನು ಮೋದಿ ಸರ್ಕಾರದಲ್ಲಿ ಹೇಗೆ ನಡೆಸಿಕೊಳ್ಳಲಾಗುತ್ತಿದೆ ಮತ್ತು ಹಿಂದೂಗಳು ಅದೆಷ್ಟು ಕ್ರೂರಿಗಳು ಎಂದು ಬಿಂಬಿಸುವ ಪ್ರಯತ್ನ ಅದಾಗಿತ್ತು. ಸಾಮಾಜಿಕ ಜಾಲತಾಣಗಳು ಈಗಿನಷ್ಟು ವ್ಯಾಪಕವಾಗಿಲ್ಲದ್ದಿದ್ದದ್ದರಿಂದ ಇದರ ಸತ್ಯಾಸತ್ಯತೆ ತಿಳಿಯಲು ಸಾಧ್ಯವಾಗಲೇ ಇಲ್ಲ. 2010ರಲ್ಲಿ ವಿಸ್ತಾರವಾದ ವರದಿ ಬಂದಾಗಲೇ ಇದೊಂದು ಸುಳ್ಳು ಪ್ರಕರಣ ಎಂಬುದು ಗೊತ್ತಾಗಿದ್ದು. ತೀರಿಕೊಂಡ ಗರ್ಭಿಣಿ ಹೆಣ್ಣುಮಗಳ ಮರಣೋತ್ತರ ಪರೀಕ್ಷೆ ನಡೆಸಿದ ಡಾಕ್ಟರ್ ಜೆ.ಎಸ್ ಕನೋರಿಯಾ ಮಗು ಹೊಟ್ಟೆಯೊಳಗೆ ಸುರಕ್ಷಿತವಾಗಿದ್ದುದನ್ನು, ಎರಡೂವರೆ ಕೆಜಿಯಷ್ಟು ತೂಕವಿದ್ದುದನ್ನು ದಾಖಲಿಸಿದ್ದರು. ಆದರೆ ಆ ವರದಿಯ ನಂತರವೂ ಕೌಸರ್ ಬಾನೊ ಕಥೆ ಮಾತ್ರ ಹಾಗೆಯೇ ಉಳಿಯಿತು!

ಈ ದಂಗೆಯ ಕ್ಷಣ-ಕ್ಷಣದ ಮಾಹಿತಿಗಳನ್ನು ಬಿತ್ತರಿಸುವ ಧಾವಂತಕ್ಕೆ ಬಿದ್ದ ಎಲೆಕ್ಟ್ರಾನಿಕ್ ಮಾಧ್ಯಮಗಳು ‘ನಮ್ಮಲ್ಲೇ ಮೊದಲು’ ಎಂದು ಹೇಳುತ್ತಾ ಸುಳ್ಳು ಸುದ್ದಿಗಳನ್ನೇ ವ್ಯಾಪಕವಾಗಿ ಪ್ರಚಾರ ಮಾಡಿ ದಂಗೆಗಳಿಗೆ ಪ್ರೇರಣೆಕೊಟ್ಟರು. ಬರ್ಖಾದತ್ ಸೂರತ್ತಿನ ವಜ್ರದ ಮಾರುಕಟ್ಟೆಯಲ್ಲಿ ನಿಂತು ‘ಇಲ್ಲಿ ಒಬ್ಬ ಪೊಲೀಸರೂ ಇಲ್ಲ. ಇಲ್ಲಿ ದಂಗೆ ವಿಸ್ತರಿಸಿದರೆ ಏನು ಕಥೆ?’ ಎಂದೆಲ್ಲಾ ವರದಿ ಮಾಡುತ್ತಿದ್ದಳು. ಕಚ್ ಭಾಗದಲ್ಲಿ ಹನುಮಾನ್ ಮಂದಿರವೊಂದನ್ನು ದುಷ್ಕರ್ಮಿಗಳು ಉರುಳಿಸಿದ್ದಾರೆ ಎಂಬ ಸುದ್ದಿಯನ್ನು ಆಕೆ ಜನರ ಮನಸ್ಸಿನಲ್ಲಿ ಬಿತ್ತುತ್ತಿದ್ದಳು. ಮುಖ್ಯಮಂತ್ರಿಯಾಗಿದ್ದ ಮೋದಿ ಆಕೆಗೆ ಕರೆಮಾಡಿ, ‘ವಜ್ರದ ಮಾರುಕಟ್ಟೆಯಲ್ಲಿ ಪೊಲೀಸರಿಲ್ಲ ಎಂದು ಹೇಳುವ ಮೂಲಕ ತಾವು ದಂಗೆಕೋರರನ್ನು ಆಹ್ವಾನಿಸುತ್ತಿದ್ದೀರಾ?’ ಎಂದು ಕೇಳಿದ್ದರಲ್ಲದೇ, ಕಚ್ ಭಾಗದಲ್ಲಿ ಆಕೆ ಹೇಳಿದ ಯಾವ ಮಂದಿರವೂ ಉರುಳಿರಲಿಲ್ಲವೆಂಬುದನ್ನು ಖಾತ್ರಿ ಪಡಿಸಿಕೊಂಡರು. ಅದರರ್ಥ ಹಿಂದೂ-ಮುಸಲ್ಮಾನರ ನಡುವಿನ ಕಂದಕವನ್ನು ವಿಸ್ತಾರಗೊಳಿಸಿ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂಬುದೇ ಅವರೆಲ್ಲರ ಪ್ರಯತ್ನವಾಗಿತ್ತು. ಅವರ ಗುರಿ ಮೋದಿಯಷ್ಟೇ ಆಗಿರಲಿಲ್ಲ. ಏಕೆಂದರೆ ಬಿಜೆಪಿಯಲ್ಲೇ ಅನೇಕ ಗೊಂದಲಗಳುಂಟಾಗಿ ಮೋದಿ ಅನಿವಾರ್ಯಕ್ಕೆ ಅಧಿಕಾರಕ್ಕೆ ಬಂದಿದ್ದರು. ಜನಸಾಮಾನ್ಯರು ರೋಸಿಹೋಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ವಿರುದ್ಧ ಮತ ಚಲಾಯಿಸಿದರೂ ಅಚ್ಚರಿ ಪಡಬೇಕಿರಲಿಲ್ಲ! ಎಲ್ಲ ಇಂಗ್ಲೀಷ್ ಮಾಧ್ಯಮಗಳಿಗೆ ಕಣ್ಣಿದ್ದುದು ಹಿಂದೂಗಳ ಮೇಲೆ. ಹಿಂದೂಗಳು ಆತಂಕವಾದಿಗಳು, ಕ್ರೂರಿಗಳು ಎಂದು ಬಿಂಬಿಸುವ ಜರೂರತ್ತು ಅವರಿಗಿತ್ತು. ಅದಕ್ಕೆ ಈ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡರು. ಮೋದಿ ಅನಿವಾರ್ಯವಾಗಿ ಎನ್ಡಿಟಿವಿಯನ್ನು ಗುಜರಾತಿನಲ್ಲಿ ತಡೆಹಿಡಿಯಬೇಕಾಯ್ತು. ಅಚ್ಚರಿ ಎಂದರೆ ಅಂದು ಅದೇ ಚಾನೆಲ್‌ನಲ್ಲಿದ್ದು ಈ ಇಡೀ ಸುಳ್ಳು ಸುದ್ದಿಯನ್ನು ಹರಡಿಸುವಲ್ಲಿ ನೇತಾರನಾಗಿದ್ದ ರಾಜ್‌ದೀಪ್ 17 ವರ್ಷಗಳ ನಂತರ 2019ರಲ್ಲಿ ಪತ್ರಕರ್ತ ಮನು ಜೋಸೆಫ್ ಕೇಳಿದ ಪ್ರಶ್ನೆಗೆ ‘ಈ ದಂಗೆಗೆ ಮೋದಿ ಕಾರಣರಲ್ಲವೇ ಅಲ್ಲ’ ಎಂದು ಉತ್ತರಿಸಿದ್ದ. ಹಾಗಿದ್ದರೆ ಅವತ್ತು ಹೇಳಿದ ಸುಳ್ಳುಗಳಿಗೆ ಯಾರು ಹೊಣೆ? ಅದರಿಂದಾಗಿ ಮೋದಿ ಸುದೀರ್ಘಕಾಲ ನರಕಯಾತನೆ ಅನುಭವಿಸಬೇಕಾಯ್ತಲ್ಲ, ಅದರ ಜವಾಬ್ದಾರಿ ಯಾರದ್ದು? ಈ ಪ್ರಶ್ನೆಗೆಲ್ಲ ಉತ್ತರಿಸಬೇಕಾದ್ದು ಯಾರು?


ಪತ್ರಕರ್ತರಷ್ಟೇ ಅಲ್ಲ, ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿದ್ದರು. ಐಪಿಎಸ್ ಅಧಿಕಾರಿಯಾಗಿದ್ದ ಸಂಜೀವ್ ಭಟ್ ಮೋದಿಯ ವಿರುದ್ಧ ತನ್ನೆಲ್ಲ ಆಕ್ರೋಶವನ್ನೂ ಹಂತ-ಹಂತವಾಗಿ ಹೊರಹಾಕಿದ. 2011ರಲ್ಲಿ ಆತ ಸ್ಫೋಟಕವಾದ ಮಾಹಿತಿಯೊಂದನ್ನು ಸಮಾಜದ ಮುಂದಿಟ್ಟ. ಕರಸೇವಕರನ್ನು ಸುಟ್ಟ ಪ್ರಕರಣದ ನಂತರ ಮೋದಿ ತುರ್ತು ಸಭೆಯೊಂದನ್ನು ಕರೆದು ಹಿಂದೂಗಳಿಗೆ ತಮ್ಮ ಆಕ್ರೋಶವನ್ನು ಹೊರಹಾಕಲು ಅವಕಾಶ ಮಾಡಿಕೊಡಬೇಕೆಂದೂ, ಈ ಬಾರಿ ಈ ಆಕ್ರೋಶ ಹೊರಹಾಕುವ ಪ್ರಕ್ರಿಯೆ ಹೇಗಿರಬೇಕೆಂದರೆ ಇನ್ನೆಂದೂ ಮುಸಲ್ಮಾನರು ಇಂತಹ ಕೃತ್ಯಕ್ಕೆ ಕೈ ಹಾಕದಂತಾಗಬೇಕೆಂದು ಹೇಳಿದ್ದರಂತೆ. ಅದಕ್ಕೆ ಪೂರಕವಾಗಿ ಆ ಸಭೆಯಲ್ಲಿ ಭಾಗವಹಿಸಲು ತನಗೂ ಆಹ್ವಾನವಿದ್ದ ಫ್ಯಾಕ್ಸ್ ಪ್ರತಿಯೊಂದನ್ನು ಆತ ಸಮಾಜದ ಮುಂದಿರಿಸಿದ. ಈ ಸಭೆಯಲ್ಲಿ ಎಂಟು ಜನ ಪ್ರಮುಖ ಪೊಲೀಸರಿದ್ದು ಅವರೆಲ್ಲರೂ ಈ ದಂಗೆ ನಿಲ್ಲದಂತೆ ನೋಡಿಕೊಂಡರು ಎಂದಿದ್ದ. ನಾನಾವತಿ ಮೆಹ್ತಾ ಕಮಿಷನ್ ಈ ಎಲ್ಲ ಆರೋಪಗಳನ್ನೂ ಅಲ್ಲಗಳೆಯಿತಲ್ಲದೇ ಆತ ಈ ಸಭೆಯಲ್ಲಿ ಭಾಗವಹಿಸಿರುವುದೇ ಸುಳ್ಳು ಎಂದಿತು. ಆತ ಹೇಳಿರುವ ಅಷ್ಟೂ ಹೇಳಿಕೆಯನ್ನು ಈ ಕಮಿಷನ್ ಸಾರಾಸಗಟಾಗಿ ತಿರಸ್ಕರಿಸಿತು. ಆತ ಮುಂದಿಟ್ಟಿರುವ ಫ್ಯಾಕ್ಸ್ ಪ್ರತಿಯೂ ಕೂಡ ಆ ಸಭೆಯದ್ದಲ್ಲವೆಂಬುದು ಇವರುಗಳ ತನಿಖೆಯ ಮೂಲಕ ಹೊರಬಂತು. ಮುಂದೆ ಇದೇ ಸಂಜೀವ್ ಭಟ್ ಸಾಮಾಜಿಕ ಜಾಲತಾಣಗಳಲ್ಲಿ ಮೋದಿಯನ್ನು ಟ್ರೋಲ್ ಮಾಡುತ್ತಾ ಮೋದಿ ವಿರೋಧಿಗಳ ಪಾಲಿನ ಹೀರೋ ಆಗಿ ಉಳಿದ.

ಇವರೆಲ್ಲರೂ ಸೇರಿ ವಾತಾವರಣವನ್ನು ಹೇಗೆ ರೂಪಿಸಿಬಿಟ್ಟಿದ್ದರೆಂದರೆ 72 ಗಂಟೆಗಳ ಕಾಲ ಮೋದಿ ಹಿಂದೂಗಳಿಗೆ ಪೂರ್ಣ ಅವಕಾಶವನ್ನು ಕೊಟ್ಟಿದ್ದರೆಂದು, ಅಷ್ಟರೊಳಗೆ ಮಾಡಬೇಕಾದ್ದೆಲ್ಲವನ್ನೂ ಮಾಡಿ ಮುಗಿಸಲು ಮುಕ್ತ ಪರವಾನಗಿ ನೀಡಿದ್ದರೆಂದು ನಂಬಿಸಿಬಿಟ್ಟಿದ್ದರು. ಹೀಗಾಗಿಯೇ ಮೋದಿ ಸೈನ್ಯವನ್ನು ಕರೆಸಲಿಲ್ಲ ಎಂಬುದು ಅವರ ಮೇಲಿದ್ದ ಅಪವಾದ. ಆದರೆ ದಂಗೆಗಳು ಆರಂಭವಾಗಿವೆ ಎಂದು ಗೊತ್ತಾದೊಡನೆ ಸೈನ್ಯದ ಸಹಕಾರ ಬೇಕೆಂದು ಮೋದಿ ಕೇಂದ್ರಸರ್ಕಾರಕ್ಕೆ ಪತ್ರ ಬರೆದಿದ್ದುದು ನಿಚ್ಚಳವಾಗಿತ್ತು. ಆದರೆ ಸೇನೆ ಗಡಿಭಾಗದಿಂದ ರಕ್ಷಣೆಗೆಂದು ಬರಲು ಕೆಲವು ಗಂಟೆಗಳ ಸಮಯವಾದರೂ ಹಿಡಿಯುತ್ತದೆಂಬುದು ಎಂಥವನಿಗೂ ಗೊತ್ತಿರಬೇಕಾದ ಸಂಗತಿ. ಮೂರು ಸಾವಿರ ಸೈನಿಕರ ಪಡೆ ಘಟನೆಯಾದ ಎರಡು ದಿನಗಳ ನಂತರ ಮಾರ್ಚ್ ಒಂದಕ್ಕೆ ಅಹ್ಮದಾಬಾದಿಗೆ ಬಂದಿಳಿದಿತ್ತು. ಮೋದಿ ದಂಗೆಗಳು ಆರಂಭವಾದ ದಿನ ಸಂಜೆಯೇ ಸೈನ್ಯದ ಸಹಾಯಕ್ಕಾಗಿ ಕರೆಮಾಡಿದ್ದು ದಾಖಲಾಗಿತ್ತು. ಆನಂತರದ ದಿನಗಳಲ್ಲಿ ಅನೇಕ ಪತ್ರಿಕೆಗಳು ಇದನ್ನು ವರದಿ ಮಾಡಿದವು. ಅಷ್ಟರವೇಳೆಗೆ ಮೋದಿಯ ಕುರಿತಂತೆ ಹಬ್ಬಿಸಬೇಕಾದ ಸುಳ್ಳುಗಳನ್ನೆಲ್ಲಾ ಹೇಳಿಯಾಗಿತ್ತು. ಈ ಅಯೋಗ್ಯರ ಸಾಮಥ್ರ್ಯ ಎಂಥದ್ದಿತ್ತೆಂದರೆ ಇಡಿಯ ಜಗತ್ತು ದಂಗೆಯ ಹಿಂದಿನ ಕಾರಣ ಮೋದಿ ಎಂಬುದನ್ನು ನಂಬಿತ್ತೆನ್ನುವುದನ್ನು ಬಿಡಿ, ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರೂ ಕೂಡ ಇದನ್ನು ಒಪ್ಪಿಕೊಂಡು ಮೋದಿಯವರನ್ನು ಬದಲಾಯಿಸಿಬಿಡುವ ತವಕದಲ್ಲಿದ್ದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಅಟಲ್ಜಿ ರಾಜ್ಯಧರ್ಮದ ಪಾಲನೆಯ ಕುರಿತಂತೆ ಮೋದಿಗೆ ಕಿವಿಮಾತು ಹೇಳಿದ್ದೇನೆ ಎಂಬುದಂತೂ ಮೋದಿಯವರ ಪಾಲಿಗೆ ಕಂಟಕಪ್ರಾಯವೇ ಆಗಿತ್ತು!

ಮುಂದಿನ ಕನಿಷ್ಠ 12 ವರ್ಷಗಳ ಕಾಲ ಮೋದಿಯ ಪಾಲಿಗೆ ಇದು ವನವಾಸವೇ. ಅವರು ವಿದೇಶಕ್ಕೆ ಹೋಗುವಾಗ ಅಲ್ಲಿನ ಪತ್ರಿಕೆಗಳಲ್ಲಿ ಗೋದ್ರಾ ದಂಗೆಯ ಕುರಿತಂತೆ ಬರೆಸಲಾಗುತ್ತಿತ್ತು. ಚುನಾವಣೆಗೆ ಹೋಗುವ ಮುನ್ನ ಗೋದ್ರಾ ದಂಗೆಗಳನ್ನು ನೆನಪಿಸಿಕೊಡಲಾಗುತ್ತಿತ್ತು. ಗುಜರಾತಿನಲ್ಲಿ ಹೂಡಿಕೆದಾರರ ಸಮಾವೇಶ ನಡೆದರೆ ಮೋದಿಯನ್ನು ದಂಗೆಕೋರ ಎಂದು ಬಿಂಬಿಸಿ ಹೂಡಿಕೆದಾರರನ್ನು ಹಿಂದೆ ಸರಿಸುವ ಪ್ರಯತ್ನ ಮಾಡಲಾಗುತ್ತಿತ್ತು. ಈ ಮನುಷ್ಯ ಎಲ್ಲವನ್ನೂ ಎದುರಿಸಿದ. 12 ವರ್ಷಗಳ ಕಾಲ ತನಗಾದ ಅವಮಾನವನ್ನು ನುಂಗಿಕೊಂಡ, ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರಿದ. ಮತ್ತೆ-ಮತ್ತೆ ಚುನಾವಣೆಗಳನ್ನು ಗೆದ್ದು 2014ರಲ್ಲಿ ಯಾರೂ ಊಹಿಸದ ರೀತಿಯಲ್ಲಿ ಬಹುಮತ ಪಡೆದು ಪ್ರಧಾನಿಯೂ ಆದ. 2019ರಲ್ಲಿ ಮತ್ತೆ ಪ್ರಧಾನಿಯಾದ. ಈಗ ಅದೇ ನರೇಂದ್ರಮೋದಿ ಈ ಎಲ್ಲ ಆರೋಪಗಳಿಂದ ಮುಕ್ತರಾಗಿ ಬಂದಿದ್ದಾರೆ. ಒಮ್ಮೆ ಹಿಂದಿರುಗಿ ನೋಡಿದಾಗ ಎಲ್ಲ ಕಠಿಣ ಸಂದರ್ಭದಲ್ಲೂ ಜೊತೆಯಲ್ಲಿದ್ದ ನಿಜ ಭಾರತೀಯನನ್ನು ಕಂಡು ಸಂತೋಷ ಪಡಬಹುದು ಅಥವಾ ರಣಹದ್ದುಗಳಂತೆ ಹಿಂದೆ ಬಿದ್ದಿದ್ದವರನ್ನು ಕಂಡು ಅಸಹ್ಯವೆನಿಸಬಹುದು!

ಸ್ವಾಭಿಮಾನಿ ಕನ್ನಡಿಗ ‘ಕೈ’ ಚಾಚುವುದಿಲ್ಲ!

ಸ್ವಾಭಿಮಾನಿ ಕನ್ನಡಿಗ ‘ಕೈ’ ಚಾಚುವುದಿಲ್ಲ!

ರಾಮಾಯಣದಲ್ಲಿ ಎಲ್ಲೋ ಹೊರಗಿಂದ ನುಸುಳಿದ ಕಥೆಯಿದು. ಚೌಡೇಶ್ವರಿ ದೇವಿಯ ಬಳಿ ಭಾರತದ ಭವಿಷ್ಯದ ಕುರಿತಂತೆ ಕೆಲವಾರು ವರ್ಷಗಳ ಹಿಂದೆ ರಾಮಕೃಷ್ಣಾಶ್ರಮದ ಮಿತ್ರರೊಬ್ಬರು ಕೇಳಿದಾಗ ದೇವಿ ಹೇಳಿದ್ದಂತೆ, ‘ಇಂದ್ರಜಿತ್ ಸಾಯುವ ಮುನ್ನ ರಾಮನನ್ನು ಬಲು ದೈನ್ಯದಿಂದ ಕೇಳಿದನಂತೆ. ತಂದೆ ರಾವಣನಾದರೋ ತಪ್ಪಿತಸ್ಥ, ನಿಜ. ಆತ ಶಿವಭಕ್ತನಾದರೂ ರಾಕ್ಷಸನಂತೆ ವರ್ತಿಸಿದ್ದಾನೆ. ಸೀತೆಯನ್ನು ಅಪಹರಿಸಿಕೊಂಡು ಬಂದು ತಪ್ಪೆಸಗಿದ್ದಾನೆ. ಅವನಿಗೆ ಶಿಕ್ಷೆ ಕೊಡುವ ಭರದಲ್ಲಿ ಯಾವ ತಪ್ಪನ್ನೂ ಮಾಡದ ನನಗೇಕೆ ಈ ಶಿಕ್ಷೆ? ದೇವರ ದೇವ ನೀನೆನ್ನುತ್ತಾರೆ. ನಾನು ಒಂದು ದಿನವಾದರೂ ಲಂಕೆಯನ್ನು ಆಳದೇ ಪ್ರಾಣ ಬಿಡುತ್ತಿದ್ದೇನಲ್ಲ, ಇದು ನ್ಯಾಯವೇ? ಎಂದನಂತೆ. ರಾಮನ ಮನ ಕರಗಿತು. ಆತ ಮೈದಡವಿ ಕಲಿಯುಗದಲ್ಲಿ ನೂರು ವರ್ಷಗಳ ಕಾಲ ನೀನು ಮತ್ತು ನಿನ್ನ ಪರಿವಾರ ಭಾರತವನ್ನೇ ಆಳುವಂತಾಗಲಿ’ ಎಂದುಬಿಟ್ಟನಂತೆ. ಈ ಕಥೆಯನ್ನು ಕೇಳಿದೊಡನೆ ನಾನು ಅಚ್ಚರಿಯಿಂದ ಅತ್ತ ತಿರುಗಿ, ಹಾಗಾಯಿತೇನು? ಎಂದಾಗ, ಕಾಂಗ್ರೆಸ್ಸಿನ ಆಳ್ವಿಕೆಯ ಒಂದು ಕುಟುಂಬದ ಅಧಿಕಾರಕ್ಕೆ ನೂರು ವರ್ಷ ಕಳೆಯುತ್ತಾ ಬಂತಲ್ಲ, ಎಂದರು. ತಲೆಕೆರೆದುಕೊಂಡು ನೋಡಿದರೆ ಮೋತಿಲಾಲ್ ನೆಹರೂ ಕಾಂಗ್ರೆಸ್ಸಿನ ಅಧ್ಯಕ್ಷರಾದದ್ದು 1919ರಲ್ಲಿ. ಮತ್ತೀಗ ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂಬ ಸ್ಪಷ್ಟತೆ ಬಂದಿದ್ದು 2019ರಲ್ಲಿ. ಬರೋಬ್ಬರಿ ನೂರು ವರ್ಷ! ಹೇಳಿದ ಪುಣ್ಯಾತ್ಮನ ಕಪೋಲಕಲ್ಪಿತ ಕಥೆಯೋ ಅಥವಾ ನಿಜವಾಗಿಯೂ ದೇವಿಯೇ ಹೇಳಿದ್ದಳೋ ನನಗಂತೂ ಗೊತ್ತಿಲ್ಲ. ಆದರೆ ಅಕ್ಷರಶಃ ಹೊಂದಾಣಿಕೆಯಂತೂ ಆಗುತ್ತಿದೆ. ಬೀದಿ-ಬೀದಿಗಳಲ್ಲಿ ರಾಹುಲ್ ಪಾದಯಾತ್ರೆ ಮಾಡುತ್ತಾ ಭಾರತವನ್ನು ಜೋಡಿಸುತ್ತೇನೆ ಎನ್ನುವಾಗ ಕಾಂಗ್ರೆಸ್ಸಿಗರ ಉತ್ಸಾಹ ಮುಗಿಲು ಮುಟ್ಟಿತ್ತು. ಕಾರ್ಯಕರ್ತರ ಗಡಣ ಬೀದಿಗಿಳಿದು ಅರಚಾಡುವಾಗ ಮುಂದಿನ ಐದ್ಹತ್ತು ವರ್ಷ ಇವರನ್ನು ಅಲುಗಾಡಿಸಲು ಸಾಧ್ಯವೇ ಇಲ್ಲವೇನೋ ಎನಿಸುತ್ತಿತ್ತು. ಮೋದಿ ಬೀದರ್‌ಗೆ ಕಾಲಿಟ್ಟರು ನೋಡಿ, ಎಲ್ಲರೂ ಚಡಪಡಿಸಲಾರಂಭಿಸಿದ್ದಾರೆ. ರಾಹುಲ್‌ನ ಯಾತ್ರೆಗೆ ಜನರನ್ನು ಕಷ್ಟಪಟ್ಟು ಕರೆತರುವುದಕ್ಕೂ, ಮೋದಿಯ ರ್ಯಾಲಿಗೆ ಜನ ಇಷ್ಟಪಟ್ಟು ಬರುವುದಕ್ಕೂ ಅಜಗಜಾಂತರವಿದೆ. ನಿಸ್ಸಂಶಯವಾಗಿ ಮೋದಿ ಭಾರತದ ಜನರ ಪಾಲಿನ ಸೂಪರ್ ಸ್ಟಾರ್. ಬಹುಶಃ ಅಟಲ್ ಬಿಹಾರಿ ವಾಜಪೇಯಿಯ ನಂತರ ಇಷ್ಟು ಜನಾನುರಾಗಕ್ಕೆ ಪಾತ್ರರಾದ ಮತ್ತೊಬ್ಬ ವ್ಯಕ್ತಿ ಬಂದಿರಲಿಕ್ಕಿಲ್ಲ. ವಾಜಪೇಯಿ ತಮ್ಮ ಖ್ಯಾತಿಯನ್ನು ಮತವಾಗಿ ಪರಿವರ್ತಿಸಿಕೊಳ್ಳುವಲ್ಲಿ ಸೋತರು. ಮೋದಿಯ ಹೆಗ್ಗಳಿಕೆಯೇನು ಗೊತ್ತೇ? ಅವರು ರ್ಯಾಲಿಗೆ ಬಂದ ಪ್ರತಿಯೊಬ್ಬ ವ್ಯಕ್ತಿಯನ್ನೂ ರಾಷ್ಟ್ರಭಕ್ತನಾಗಿಬಿಡುವಂತೆ ಮಾಡಿಬಿಡುವರು, ಅಲ್ಲಿಗೆ ಬಿಜೆಪಿಗೆ ಮತ ಖಾತ್ರಿ.

ನೀವು ಯೋಜನೆಗಳನ್ನು ರೂಪಿಸಿ, ಒಂದಷ್ಟು ಉಚಿತಗಳ ಘೋಷಣೆಮಾಡಿ, ಒಮ್ಮೆಯೋ ಎರಡು ಬಾರಿಯೋ ಮತಗಳಿಸಿಬಿಡಬಹುದು. ಆದರೆ ನಿಮ್ಮ ಸಾನಿಧ್ಯ ಮಾತ್ರದಿಂದಲೇ ಜನರ ಒಲವನ್ನು ತಮ್ಮೆಡೆಗೆ ಸೆಳೆದುಕೊಳ್ಳಬೇಕೆಂದರೆ ಅದಕ್ಕೆ ದೈವೀಶಕ್ತಿಯೂ ಬೇಕು. ಕಾಂಗ್ರೆಸ್ಸು ಕೋಟಿಗಟ್ಟಲೆ ರೂಪಾಯಿ ಸುರಿದು ರಣನೀತಿ ರೂಪಿಸಲು ಜನರನ್ನು ಇಟ್ಟುಕೊಂಡಿದೆ. ಮೋದಿ ಸುಮ್ಮನೆ ನಾಲ್ಕು ಸುತ್ತು ತಿರುಗಾಡುತ್ತಾರೆ, ಜನ ಪ್ರೀತಿಯಿಂದ ಬಂದು ಮತಹಾಕಿ ಹೋಗುತ್ತಾರೆ. ಎಷ್ಟು ವಿಚಿತ್ರ ಅಲ್ಲವೇ?

ಮೋದಿಗಿರುವ ಶಕ್ತಿಯೇ ಅದು. ಅವರು ಜನರ ಹೃದಯದೊಂದಿಗೆ ನೇರವಾಗಿ ಮಾತನಾಡಬಲ್ಲರು. ಅವರು ಏನೇ ಮಾಡಿದರೂ ಅದು ನಾಟಕವೆನಿಸುವುದಿಲ್ಲ. ರಾಹುಲ್ ಅಪರೂಪಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದರೂ ಅದು ಸತ್ಯವೆನಿಸುವುದಿಲ್ಲ. ಮೋದಿಯನ್ನು ಶಾಲೆಗೇ ಹೋಗದವರೆಂದು ಇವರೆಲ್ಲ ಜರಿದರೂ ಮೋದಿ ಬುದ್ಧಿವಂತರೆಂಬುದನ್ನು ಇಡಿಯ ಜಗತ್ತು ಒಪ್ಪುತ್ತದೆ. ರಾಹುಲ್ ಕೇಂಬ್ರಿಡ್ಜ್ ನಿಂದಲೇ ಬಂದಿದ್ದಾರೆ ಎಂದು ಇವರೆಲ್ಲ ಬಡಾಯಿ ಕೊಚ್ಚಿಕೊಂಡರೂ ಆತ ಏನೂ ಅರಿಯದ ಮುಗ್ದನೆಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ, ಸ್ವತಃ ಕಾಂಗ್ರೆಸ್ಸಿಗರಿಗೂ! ಮೋದಿ ಈ ದೇಶದ ಜನರ ಮೇಲಿನ ತಮ್ಮ ನಿಷ್ಕಳಂಕ ಪ್ರೀತಿಯಿಂದಲೇ ಗೆಲುವು ಸಾಧಿಸಿಬಿಟ್ಟರು. ಬಡತನವನ್ನು ಅನುಭವಿಸಿಯೇ ಮೇಲಕ್ಕೆ ಬಂದ ಆ ಪುಣ್ಯಾತ್ಮ ಅವರ ಬದುಕನ್ನು ಸುಂದರಗೊಳಿಸಲೆಂದೇ ಯೋಜನೆಗಳನ್ನು ರೂಪಿಸಿದರು. ಅದನ್ನು ಜಾರಿಗೆ ತರಲು ಹಗಲು-ರಾತ್ರಿ ಶ್ರಮಿಸಿದರು. ಹೀಗಾಗಿ ಪ್ರತೀ ಊರಿನ, ಪ್ರತಿ ವ್ಯಕ್ತಿಯೂ ಒಂದಲ್ಲ ಒಂದು ರೀತಿಯಲ್ಲಿ ಮೋದಿ ಯೋಜನೆಯಿಂದ ಉಪಕೃತನಾದವನೇ. ಬೇರೆಲ್ಲವನ್ನು ಬದಿಗಿಟ್ಟು ಕರೋನಾ ಕಾಲದ ಮೋದಿಯನ್ನು ಒಮ್ಮೆ ನೆನಪಿಸಿಕೊಳ್ಳಿ. ಗಡ್ಡ ಬಿಟ್ಟು, ಋಷಿಯಂತಾಗಿಬಿಟ್ಟಿದ್ದರು ಅವರು. ಅನೇಕ ರಾತ್ರಿಗಳನ್ನು ನಿದ್ದೆಮಾಡದೇ ಕಳೆಯುತ್ತಿದ್ದ ಅವರು ಸಭೆಗಳಿಗೆಂದು ಬಂದಾಗ ಕಣ್ಣು ಸೊರಗಿ ಹೋಗಿರುತ್ತಿತ್ತು. ತನ್ನವರನ್ನು ಕಳೆದುಕೊಳ್ಳುವ ಆತಂಕ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಸದಾಕಾಲ ಉತ್ಸಾಹದ ಚಿಲುಮೆಯಂತಿರುತ್ತಿದ್ದ ಮೋದಿ ಆ ಸಂದರ್ಭದಲ್ಲಿ ಮಾತ್ರ ಸೋತು ಸುಣ್ಣವಾದವರಂತೆ ಕಾಣುತ್ತಿದ್ದರು. ದೀರ್ಘಕಾಲದಿಂದ ಕಾಡುತ್ತಿದ್ದ ಯಾವುದೋ ರೋಗ ಉಲ್ಬಣವಾದರೆ ನಮ್ಮ ಸ್ಥಿತಿ ಹೇಗಿರುತ್ತದೆಯೋ ಹಾಗೆ. ಆದರೆ ಮೋದಿ ಎಲ್ಲ ಭಾರವನ್ನೂ ತಾನೇ ಹೊತ್ತರು, ತನ್ನ ಶಿಲುಬೆಯನ್ನು ತಾನೇ ಹೊತ್ತ ಏಸುವಿಗಿಂತ ಕೆಟ್ಟದ್ದಾಗಿ. ಕಾಂಗ್ರೆಸ್ಸಿಗರಾದಿಯಾಗಿ ಬುದ್ಧಿಜೀವಿಗಳೂ ಸೇರಿದಂತೆ ಕೆಲವು ಮುಂಚೂಣಿಯ ನಾಯಕರು ವಿದೇಶೀ ವ್ಯಾಕ್ಸಿನ್‌ಗಳನ್ನು ಕೊಂಡುಕೊಳ್ಳುವುದೊಳಿತು ಎಂದು ಮುಗಿಬಿದ್ದಾಗ ಮೋದಿ ಎಲ್ಲ ನೋವನ್ನೂ ಸಹಿಸಿಕೊಂಡರು. ಎಲ್ಲವನ್ನೂ ಮೈಮೇಲೆಳೆದುಕೊಂಡು ಸಂಕಟ ಜನಸಾಮಾನ್ಯರಿಗೆ ತಲುಪದಂತೆ ತಾವೇ ನುಂಗಿದರು, ವಿಷಕಂಠನಂತೆ. ಅವರ ಈ ಸಾಹಸದ ಪ್ರತಿಫಲವಾಗಿಯೇ ಭಾರತದಲ್ಲಿ ವ್ಯಾಕ್ಸಿನ್‌ಗಳು ತಯಾರಾಗಿದ್ದು. ನಿಮಗೆ ನೆನಪಿರಬೇಕು, ಈ ವ್ಯಾಕ್ಸಿನ್ ಮೇಲೆ ವಿಶ್ವಾಸವಿಲ್ಲ ಎಂದಿದ್ದರು ಕಾಂಗ್ರೆಸ್ಸಿಗರು. ನಂಬಿಕಸ್ಥ ಅಮೇರಿಕನ್ ವ್ಯಾಕ್ಸಿನ್ ಬಳಸುವುದು ದೇಸೀ ವ್ಯಾಕ್ಸಿನ್ ಬಳಕೆಗಿಂತ ಉತ್ತಮ ಎಂದಿದ್ದರೂ ಕೂಡ. ಮೋದಿ ತಲೆಕೆಡಿಸಿಕೊಳ್ಳಲಿಲ್ಲ. ಈ ನಾಡಿನ ವಿಜ್ಞಾನಿಗಳ ಮೇಲೆ ಅಪಾರವಾದ ಭರವಸೆಯನ್ನಿಟ್ಟು ವ್ಯಾಕ್ಸಿನ್ ಅನ್ನು ಮಾರುಕಟ್ಟೆಗೆ ತರಲು ಶ್ರಮಿಸಿದರು. ಅತ್ತ ಅಮೇರಿಕಾದ ವ್ಯಾಕ್ಸಿನ್ಗಳು ಈಗ ಜನರ ಮೇಲೆ ವಿಪರೀತ ಪರಿಣಾಮವನ್ನು ಉಂಟುಮಾಡುತ್ತಿದ್ದರೆ ಭಾರತದ ವ್ಯಾಕ್ಸಿನ್‌ಗಳು ಕರೋನಾಕ್ಕೆ ಇತಿಶ್ರೀ ಹಾಡಿ, ಜಗತ್ತಿನ ಹುಬ್ಬೇರುವಂತೆ ಮಾಡಿವೆ. ಹಾಗೆ ಸುಮ್ಮನೆ ಕರೋನಾ ಕಾಲದಲ್ಲಿ ಮೋದಿಯ ಜಾಗದಲ್ಲಿ ರಾಹುಲ್ ಇದ್ದಿದ್ದರೆ ಏನಾಗುತ್ತಿತ್ತೆಂಬುದನ್ನು ಊಹಿಸಿ ನೋಡಿ, ಗಾಬರಿಯಾಯ್ತಲ್ಲವೇ? ಮೋದಿ ಅಂಥದ್ದೊಂದು ಬಲವಾದ ಛಾಪನ್ನು ಭಾರತೀಯರ ಹೃದಯದೊಳಗೆ ಒತ್ತಿಬಿಟ್ಟಿದ್ದಾರೆ.

ಕಾಂಗ್ರೆಸ್ಸಿಗೆ ಬಡವರ ಕುರಿತಂತೆ ಮಾತನಾಡುವುದೆಂದರೆ ಆನಂದವೋ ಆನಂದ. ದೇಶದಲ್ಲಿ ಹೆಚ್ಚು-ಹೆಚ್ಚು ಬಡವರಿದ್ದಷ್ಟೂ ಅವರ ಮತಗಳಿಗೆ ಹೆಚ್ಚುತ್ತದೆ. ಬಡತನ ಎನ್ನುವುದು ಸಂಪತ್ತಿನ ಕೊರತೆಯಿಂದ ಉಂಟಾಗುವಂಥದ್ದಲ್ಲ. ಅದೊಂದು ಅತೃಪ್ತ ಮಾನಸಿಕತೆ. ದಿನಕ್ಕೆ ಒಂದು ಹೊತ್ತು ಊಟ ಮಾಡುವವನು ತನ್ನ ತಾನು ಸುಖಿ ಎಂದು ಭಾವಿಸಿ ಆನಂದದಿಂದ ಕಾಲ ಕಳೆದುಬಿಡುತ್ತಾನೆ. ಅದೇ ವೇಳೆಗೆ ತಿಂಗಳಿಗೆ ಎರಡು ಲಕ್ಷ ಸಂಪಾದಿಸುವ ವ್ಯಕ್ತಿಯೂ ತನಗೆ ಸಾಕಾದಷ್ಟು ಸಿಗುತ್ತಿಲ್ಲವೆಂದು ಗೋಳಾಡುತ್ತಲೇ ಇರುತ್ತಾನೆ. ಕಾಂಗ್ರೆಸ್ಸು ಬಿಟ್ಟಿ ಭಾಗ್ಯಗಳನ್ನು ಕೊಡುವ ನೆಪದಲ್ಲಿ ಹೀಗೆ ಗೋಳಾಡುವವರ ಸಂಖ್ಯೆಯನ್ನು ಹೆಚ್ಚಿಸುತ್ತಲೇ ಹೋಗುತ್ತದೆ. ಬಡವರು ಹೆಚ್ಚಾದಷ್ಟು ಅವರ ಬೇಳೆ ಚೆನ್ನಾಗಿ ಬೇಯುತ್ತದೆ. ಮುಸಲ್ಮಾನರು ಹೆಚ್ಚಾದಷ್ಟು ಏಕತ್ರಗೊಂಡ ಹಿಂದೂಗಳ ಭೀತಿಯನ್ನು ಅವರ ಹೃದಯದೊಳಗೆ ತುಂಬಿ ಮತ ಪಡೆಯಲು ಅವರಿಗೆ ಅನುಕೂಲವಾಗುತ್ತದೆ. ಒಟ್ಟಿನಲ್ಲಿ ಸಮಾಜ ಮೇಲು-ಕೀಳು, ಬಡವ-ಸಿರಿವಂತ, ಹಿಂದೂ-ಮುಸ್ಲೀಂ ಎಂದು ಒಡೆದಂತೆಲ್ಲ ಆನಂದವಾಗೋದು ಕಾಂಗ್ರೆಸ್ಸಿಗೇ. ಆದರೆ ಮೋದಿ ಇದನ್ನು ಪೂರ್ಣ ಬದಲಾಯಿಸಿದರು. ಅವರು ಬಡವರೆನಿಸಿಕೊಂಡವರ ಆತ್ಮಗೌರವವನ್ನು ಯಾವ ಮಟ್ಟಕ್ಕೊಯ್ದರೆಂದರೆ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತೆ. ಜನವರಿ 26ಕ್ಕೆ ವಿಶ್ವವಿಖ್ಯಾತ ಪರೇಡ್ ನಡೆಯುತ್ತಲ್ಲ, ಪ್ರತಿವರ್ಷ ಅದನ್ನು ನೋಡಲು ವಿಐಪಿಗಳೆಲ್ಲ ಮುಂದಿನ ಸಾಲಿನಲ್ಲಿ ಕುಳಿತಿರುತ್ತಾರೆ. ಈ ವರ್ಷ ಮೋದಿ ಅಲ್ಲಿ ಕೂರಲು ಜಾಗಮಾಡಿಕೊಟ್ಟದ್ದು ಯಾರಿಗೆ ಗೊತ್ತೇನು? ಸೆಂಟ್ರಲ್ ವಿಸ್ತಾ ಯೋಜನೆಯಲ್ಲಿ ಕೆಲಸ ಮಾಡಿದ, ಕಾಶಿ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿದ ಕಾರಕೂನರ ಕುಟುಂಬಗಳಿಗೆ. ಇಂದು ಕಾರ್ಮಿಕರ ದಿನ ಬೇರೆ. ವರ್ಷಗಟ್ಟಲೆ ಕಾರ್ಮಿಕರ ಹೆಸರು ಹೇಳುತ್ತಾ ಪ್ರತಿಭಟನೆಗೆ ಬೀದಿಗೆ ಬಂದು ನಿಲ್ಲುವ ಕಮ್ಯುನಿಸ್ಟ್ ಮಂದಿಯೂ ಅಧಿಕಾರದಲ್ಲಿದ್ದಾಗ ಇಂಥದ್ದೊಂದು ಆಲೋಚನೆ ಮಾಡಿರಲಿಲ್ಲ. ಕೈಯ್ಯಲ್ಲಿ ಕರಣಿ ಹಿಡಿದ ಪ್ರತಿಯೊಬ್ಬ ಕಾರ್ಮಿಕನಿಗೂ ತಾನು ಈ ಕೆಲಸ ಮಾಡುತ್ತಿರುವುದಕ್ಕೆ ಈಗ ಬೇಸರವೂ ಇಲ್ಲ, ಅವಮಾನ ಎನಿಸುವುದೂ ಇಲ್ಲ. ಏಕೆಂದರೆ ತಮ್ಮದ್ದೇ ಸಂಕುಲದ ಮಂದಿ ವಿಐಪಿಗಳಂತೆ ಗಣರಾಜ್ಯೋತ್ಸವದ ಪರೇಡ್ ನೋಡಲು ಕುಳಿತಿದ್ದಾರಲ್ಲ. ಇಂದು ಯಾರನ್ನು ಕಾರಕೂನರೆಂದು ಕರೆಯುತ್ತೇವಲ್ಲ, ಅವರು ಕಡಿಮೆ ದುಡಿಯುತ್ತಿಲ್ಲ. ನೀವು ಕೊಡುವ ಉಚಿತ ಕೊಡುಗೆ ಅವರಿಗೆ ಬೇಕೇ ಇಲ್ಲ. ಅವರ ವೃತ್ತಿಯನ್ನು ಜನ ಆಯ್ದುಕೊಳ್ಳದಿರುವುದಕ್ಕೆ ಆತ್ಮಗೌರವದ ಕೊರತೆಯ ಕಾರಣವಿದೆಯಲ್ಲ, ಅದನ್ನು ಸರಿಪಡಿಸಬೇಕಷ್ಟೇ. ಮೋದಿ ಅದನ್ನು ಮಾಡುತ್ತಿರುವುದರಿಂದಲೇ ಅವರೆಲ್ಲರಿಗೂ ಮೋದಿಯನ್ನು ಕಂಡಾಗ ದೇವರನ್ನು ಕಂಡಂತೆ ಆಗೋದು!

ಕಾಂಗ್ರೆಸ್ಸಿಗರ ಪಾಲಿಗೆ ಬಡವರು ಎಂದರೆ ದಡ್ಡರು ಎಂದರ್ಥ. ಹೀಗಾಗಿಯೇ ನೋಟ್‌ಬ್ಯಾನ್ ಮಾಡಿ ಜನರ ಕೈಗೆ ಡಿಜಿಟಲ್ ಮನಿ ಕೊಡುತ್ತೇವೆ ಎಂದು ಮೋದಿ ಹೇಳಿದಾಗ, ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಕುಹಕ ಮಾಡಿದ್ದರು. ಈ ದೇಶದ ಹಳ್ಳಿಗನಿಗೆ ಮೊಬೈಲ್ ಬಳಸಲು ಬರುವುದಿಲ್ಲ, ಆಧುನಿಕ ತಂತ್ರಜ್ಞಾನದ ಅರಿವಿಲ್ಲ, ಅಂಥವನಿಂದ ಏನನ್ನು ನಿರೀಕ್ಷಿಸುತ್ತೀರಿ ಎಂದಿದ್ದರು. ಮೋದಿ ಅಂದಿನ ದಿನ ಏನೂ ಮಾತನಾಡಲಿಲ್ಲ. ಆದರೆ ಇಂದು ಜಗತ್ತಿನ ಹೆಚ್ಚು ಡಿಜಿಟಲ್ ವಹಿವಾಟನ್ನು ಭಾರತವೇ ನಡೆಸುತ್ತಿದೆ ಎಂಬುದು ಅರಿವಾದಾಗ ಕಾಂಗ್ರೆಸ್ಸಿಗರಿಗೆ ನಡುಕ ಹುಟ್ಟಿದೆ. ಯಾವ ಹಳ್ಳಿಯ ಜನರನ್ನು ದಡ್ಡರೆಂದು ಕರೆದು ಸುಮಾರು 65 ವರ್ಷಗಳ ಕಾಲ ಇವರು ಆಳ್ವಿಕೆ ನಡೆಸಿದ್ದರೋ ಅದೇ ಹಳ್ಳಿಗರು ಇಂದು ಭಾರತದ ಆರ್ಥಿಕತೆ ಸದೃಢಗೊಳ್ಳಲು ಬಲವಾದ ಬೆನ್ನೆಲುಬಾಗಿಬಿಟ್ಟಿದ್ದಾರೆ. ಮೋದಿ ಇಟ್ಟ ಈ ವಿಶ್ವಾಸವನ್ನು ಹಳ್ಳಿಯಲ್ಲಿರುವ ಆ ಬಡಮಂದಿ ಮರೆಯುವುದಾದರೂ ಹೇಗೆ? ಅದಕ್ಕೆ ಮೋದಿ ತಮ್ಮೂರಿನ ಬಳಿ ಬರುತ್ತಿದ್ದಾರೆಂದರೆ ಆ ಜನ ಯಾವ ಪ್ರಶ್ನೆಯನ್ನೂ ಕೇಳದೇ ಧಾವಿಸಿಬರುತ್ತಾರೆ. ಅವರಿಗೆ ಕಾರ್ಯಕ್ರಮಕ್ಕೆ ಬರಲು ದುಡ್ಡು ಬೇಕಾಗುವುದಿಲ್ಲ, ಏಕೆಂದರೆ ತಮ್ಮ ಆತ್ಮವಿಶ್ವಾಸವನ್ನು ವೃದ್ಧಿಸಿದ ತಮ್ಮ ಪಾಲಿನ ದೇವರನ್ನು ಅವರಲ್ಲಿ ನೋಡುತ್ತಾರೆ.

ಕಾಂಗ್ರೆಸ್ಸು ಇಷ್ಟಕ್ಕೇ ನಿಲ್ಲಲಿಲ್ಲ. ಬಡವರು ಸದಾ ತಮ್ಮ ದಾಸರಾಗಿರಬೇಕೆಂದು ಅವರು ಆಲೋಚಿಸಿದರು. ಹೀಗಾಗಿಯೇ ಒಬ್ಬ ಒಮ್ಮೆ ಅಧಿಕಾರಕ್ಕೆ ಬಂದನೆಂದರೆ ಅವನ ಮಕ್ಕಳು, ಮೊಮ್ಮಕ್ಕಳೇ ಅಲ್ಲಿ ಕುಳಿತುಕೊಂಡು ಉಳಿದವರನ್ನೆಲ್ಲ ಕಾಲಡಿ ಕಸದಂತೆ ಕಂಡರು. ಸ್ವಲ್ಪ ಎಡವಟ್ಟಾಗಿದ್ದರೆ ಬಿಜೆಪಿ ಅದೇ ದಿಕ್ಕಿಗೆ ಹೋಗಿರುತ್ತಿತ್ತು. ನರೇಂದ್ರಮೋದಿ ಸಾಧ್ಯವಾದಷ್ಟು ಬದಲಾವಣೆಗೆ ಕೈಹಾಕಿದರು. ಅನೇಕ ಕಡೆಗಳಲ್ಲಿ ಯಾರೂ ಊಹಿಸದಿದ್ದ ಕಾರ್ಯಕರ್ತರಿಗೆ ಅವಕಾಶಕೊಟ್ಟರು. ಆರೇಳು ಬಾರಿ ಗೆದ್ದು ಅಧಿಕಾರಕ್ಕೆ ಅಂಟಿಕೊಂಡು ಕುಳಿತಿದ್ದವರನ್ನು, ಪಕ್ಷಕ್ಕೆ ತೊಂದರೆ ಉಂಟುಮಾಡಬಹುದೆಂದು ಗೊತ್ತಿದ್ದರೂ ಮುಲಾಜಿಲ್ಲದೇ ಮನೆಗೆ ಕಳಿಸಿದರು. ಕಾಂಗ್ರೆಸ್ಸಿನಲ್ಲಿ ಕಾರ್ಯಕರ್ತನಾಗಿರುವುದೆಂದರೆ ಜೀವನಪರ್ಯಂತ ಪರಿವಾರದ ಗುಲಾಮನಾಗಿರುವುದೆಂದರ್ಥ. ಬಿಜೆಪಿಯಲ್ಲಿ ಕಾರ್ಯಕರ್ತನಾಗಿ ದುಡಿಯುವುದೆಂದರೆ ಒಂದಲ್ಲ ಒಂದು ದಿನ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುವುದೆಂದರ್ಥ. ಕಾಂಗ್ರೆಸ್ಸು ತನ್ನ ಅವಧಿಯುದ್ದಕ್ಕೂ ಹೆಚ್ಚು ‘ದೊಡ್ಡ ಮನುಷ್ಯ’ರನ್ನು ಸೃಷ್ಟಿಸಿದೆ. ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಗೆ ಸಾವಿರಾರು ಕೋಟಿ ರೂಪಾಯಿ ಮಾಡಿಕೊಂಡ ದೊಡ್ಡವರು. ಇವರನ್ನು ಹತಾಶೆಯ ಕಂಗಳಿಂದ ನೋಡುತ್ತಾ ನಿಂತ ಆ ಬಡ-ಮಧ್ಯಮ ವರ್ಗದವರು ಈ ದೇಶದ ಕಥೆಯಿಷ್ಟೇ ಎಂದುಕೊಳ್ಳುತ್ತಾ ತಮ್ಮ ವ್ಯಾಪ್ತಿಯಲ್ಲಿ ಒಂದಷ್ಟು ಹಣ ಮಾಡಿಟ್ಟುಕೊಂಡು ಸುಮ್ಮನಾಗಿಬಿಡುತ್ತಿದ್ದರು. ಮೋದಿ ಮುಲಾಜಿಲ್ಲದೇ ಈ ದೊಡ್ಡವರ ಬಾಲ ಕತ್ತರಿಸಿಬಿಟ್ಟರು. ಅನೇಕರನ್ನು ಜೈಲಿಗೂ ತಳ್ಳಿದರು. ಮೊದಲೆಲ್ಲ ವಿಮಾನದಲ್ಲಿ ಈ ದೊಡ್ಡ ಮನುಷ್ಯರು ಮಾತ್ರ ತಿರುಗಾಡುತ್ತಿದ್ದರು. ಮೋದಿ ಹವಾಯಿ ಚಪ್ಪಲಿಯವರನ್ನೂ ವಿಮಾನ ಹತ್ತಿಸಿದರು. ಬಡವರ ಓಟಾಟದ ರೈಲುಗಳೆಂದರೆ ಕೊಳಕು, ಸಮಯ ಮೀರಿದ್ದು, ರೈಲ್ವೇ ನಿಲ್ದಾಣಗಳಂತೂ ಕೇಳಲೇಬೇಡಿ. ಮೋದಿ ಬಡವರು ಹೆಚ್ಚಾಗಿ ಬಳಸುವ ಈ ವ್ಯವಸ್ಥೆಯನ್ನು ಅತ್ಯುತ್ಕೃಷ್ಟ ಮಟ್ಟಕ್ಕೇರಿಸಲು ಪ್ರಯತ್ನ ಹಾಕಿದರು. ಇಂದು ಅನೇಕ ರೈಲ್ವೆ ನಿಲ್ದಾಣಗಳು ವಿಮಾನ ನಿಲ್ದಾಣಗಳಂತೆ ರೂಪಿಸಲ್ಪಟ್ಟಿವೆ. ಅಂದರೆ ಉಚಿತವಾಗಿ ಏನೂ ಕೊಡಬೇಕಾಗಿಲ್ಲ, ಅವನ ಬದುಕಿನ ಮಟ್ಟವನ್ನು ಏರಿಸಲು ಏನು ಬೇಕೋ ಅದನ್ನು ಮಾಡಿದರಾಯ್ತು ಎಂಬುದು ಮೋದಿಯವರ ಸಿದ್ಧಾಂತ.

ಇಷ್ಟಾದರೂ ನಮಗೆ ನಮ್ಮ ಬದುಕಿನ ಮಟ್ಟ ಏರುವುದು ಬೇಕಾಗಿಲ್ಲ, ತುತ್ತು ಕೂಳಿಗೆ ಕೈಚಾಚಿಕೊಂಡು ಬದುಕುವುದೇ ಬೇಸೆನಿಸಿದರೆ ಕಾಂಗ್ರೆಸ್ಸಿಗೇ ಮತ ಹಾಕಬೇಕಷ್ಟೇ. ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಕೊಂಡಿರುವ ಸ್ವಾಭಿಮಾನಿ ಕನ್ನಡಿಗ ಎಂದೆನಿಸಿದರೆ ನಿಸ್ಸಂಶಯವಾಗಿ ಮೋದಿಯ ಹಿಂದೆ ನಿಲ್ಲಬೇಕು. ಈ ಬಾರಿ ಮೋದಿಗೆ ಬಹುಮತ ಕೊಟ್ಟುಬಿಡೋಣ. ಪ್ರತೀಬಾರಿ ನಮ್ಮ ಜಾತಿಯ ಮಂತ್ರಿ-ಮುಖ್ಯಮಂತ್ರಿ ಎಂದೆಲ್ಲ ಬಡಿದಾಡುತ್ತೇವಲ್ಲ, ಈ ಒಂದು ಬಾರಿ ನಾಡುಕಟ್ಟಿದ ಮೈಸೂರಿನ ಮಹಾರಾಜರಂತಹ ದೂರದೃಷ್ಟಿಯ ನಾಯಕನೊಬ್ಬ ಅಧಿಕಾರಕ್ಕೇರಲೆಂದು ಪ್ರಾರ್ಥಿಸೋಣ. ಒಮ್ಮೆ ಮೋದಿಯನ್ನು ನಂಬೋಣ, ರಾಜ್ಯದಲ್ಲಿ ಅವರು ಕೇಳಿಕೊಂಡಂತೆ ಬಹುಮತದ ಸರ್ಕಾರ ತರೋಣ. ಏನಂತೀರಿ?

ಮೋದಿ ಬರೋವರ್ಗೂ ನಿಮ್ದೇ ಹವಾ!

ಮೋದಿ ಬರೋವರ್ಗೂ ನಿಮ್ದೇ ಹವಾ!

ಚುನಾವಣೆಗಳು ಎದುರಿಗಿವೆ. ಆದರೆ ಸದ್ದೇ ಇಲ್ಲ. ಇನ್ನು ಹದಿನೈದಿಪ್ಪತ್ತು ದಿನಗಳಲ್ಲಿ ಈ ರಾಜ್ಯದ ಐದು ವರ್ಷಗಳ ಭವಿಷ್ಯ ನಿರ್ಧಾರವಾಗಲಿದೆ ಎಂಬ ಯಾವ ಮುನ್ಸೂಚನೆಯೂ ಕಾಣುತ್ತಿಲ್ಲ. ಬಿಸಿಲ ಝಳ ಒಂದೆಡೆಯಾದರೆ, ಮತ್ತೊಂದೆಡೆ ಎಲ್ಲ ಪಕ್ಷಗಳ ನಾಯಕರಲ್ಲೂ ಮನೆಮಾಡಿರುವ ಆತಂಕ. ಎಲ್ಲಾ ಪಕ್ಷಗಳೂ ಬಹುಮತ ತಮಗೇ ಅಂತ ಮೇಲ್ನೋಟಕ್ಕೆ ಬೀಗುತ್ತಿವೆಯಾದರೂ ಮೈದಡವಿ ಮಾತನಾಡಿಸಿದಾಗ, ಸ್ವಲ್ಪ ಕಷ್ಟವಿದೆ ಎನ್ನುವುದನ್ನು ಒಪ್ಪುತ್ತಾರೆ. ಏಕೊ ಈ ಬಾರಿ ಜನ ಬೂತಿಗೆ ಬಂದು ವೋಟ್ ಮಾಡುವುದೇ ಅನುಮಾನ ಅನ್ನಿಸುತ್ತಿದೆ. ಉರಿಬಿಸಿಲು ಒಂದು ಕಾರಣವಾದರೆ, ಎಲ್ಲಾ ಪಕ್ಷಗಳು ಒಂದೇ ಎನ್ನುವ ತಾತ್ಸಾರ ಮನೋಭಾವ ಮತ್ತೊಂದು.

ಇಡೀ ಚುನಾವಣೆಯ ಪ್ರಮುಖ ಬೇಸರದ ಸಂಗತಿ ಏನು ಗೊತ್ತೇ? ಜಾತಿಯ ಕಾರ್ಡನ್ನು ಪಕ್ಷಗಳು ಬಳಸುತ್ತಿರುವಂತಹ ರೀತಿ. ಲಿಂಗಾಯತನೇ ಮುಖ್ಯಮಂತ್ರಿ ಎನ್ನುವ ಬಿಜೆಪಿ, ಗೌಡರನ್ನು ಮುಂದಿಟ್ಟುಕೊಂಡು ಕಾಳಗ ನಡೆಸುತ್ತಿರುವ ಕಾಂಗ್ರೆಸ್ಸು. ಜಾತಿ-ಜಾತಿಗಳನ್ನು ಇವರು ಸೆಳೆಯಲು ನಡೆಸುತ್ತಿರುವ ಕಸರತ್ತು, ಗಿರಾಕಿಯನ್ನು ಆಕರ್ಷಿಸುವ ಕೆಂಪುದೀಪ ಪ್ರದೇಶದ ಬೆಲೆವೆಣ್ಣುಗಳ ಸರ್ಕಸ್ಸಿನಂತಿದೆ. ಸ್ವಲ್ಪ ಕಟುವೆನಿಸಿದರೂ ಸತ್ಯವೇ. ತಾನು ಬ್ರಾಹ್ಮಣ ಪಕ್ಷವಲ್ಲವೆಂದು ಸಾಬೀತುಪಡಿಸಿಕೊಳ್ಳಲು ಬಿಜೆಪಿ ಜಾತಿವಾರು ಟಿಕೆಟ್ ಹಂಚಿಕೆ ಪಟ್ಟಿ ಪ್ರಕಟಿಸಿದರೆ, ಅತ್ತ ಕಾಂಗ್ರೆಸ್ಸು ಲಿಂಗಾಯತರನ್ನು ಸೆಳೆಯಲು ಒಡಕಿನ ಎಲ್ಲ ಪ್ರಯೋಗವನ್ನೂ ಮಾಡಿಯಾಗಿದೆ. ಅಲ್ಲದೇ ಮತ್ತೇನು? ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟಿರೋದು ಸರಿ, ಆದರೆ ಅವರನ್ನು ತಮ್ಮತ್ತ ಸೆಳೆದ ಕಾಂಗ್ರೆಸ್ಸು ಲಿಂಗಾಯತರಿಗಾದ ಅವಮಾನವೆಂಬಂತೆ ಬಿಂಬಿಸಿತಲ್ಲ! ಶೆಟ್ಟರ್ ಕೂಡ ತಮ್ಮನ್ನು ಹೊರದಬ್ಬುವ ಪ್ರಕ್ರಿಯೆಯ ನಾಯಕರಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್‌ರನ್ನು ಬಿಂಬಿಸಿ, ಉರಿವ ಬೆಂಕಿಗೆ ತುಪ್ಪ ಸುರಿದರು. ಅವರದ್ದು ತಪ್ಪು ಎಂದು ಹೇಳಲಾಗದು. ರಾಜಕೀಯವಾಗಿ ತಾನು ಜೀವಂತವಾಗಿರಬೇಕೆಂದರೆ ಇಂಥದ್ದೊಂದು ಕಸರತ್ತು ಅವರಿಗೆ ಅಗತ್ಯವಿತ್ತು. ಅಚ್ಚರಿಯೇನು ಗೊತ್ತೇ? ಜಗದೀಶ್ ಶೆಟ್ಟರ್‌ಗೆ ಟಿಕೆಟ್ ನಿರಾಕರಿಸಿ ಬಿಜೆಪಿ ಆಯ್ಕೆಮಾಡಿದ ಮತ್ತೊಬ್ಬ ವ್ಯಕ್ತಿಯೂ ಲಿಂಗಾಯತರೇ! ಹಾಗಿದ್ದಮೇಲೆ ಲಿಂಗಾಯತರಿಗೆ ಮೋಸವಾಗಿದ್ದೆಲ್ಲಿ? ಇನ್ನು ಎಲ್ಲಾ ಅನಿಷ್ಟಗಳಿಗೂ ಸಂತೋಷರನ್ನೇ ಕಾರಣವೆನ್ನುವ ಮಂದಿ ಮೋದಿ-ಅಮಿತ್‌ ಶಾರನ್ನು ಅಷ್ಟು ದಡ್ಡರೆಂದುಕೊಂಡಿದ್ದಾರೋ ಅಥವಾ ಟಿಕೆಟ್ ಹಂಚಿಕೆಯಲ್ಲಿ ಅವರ ಪಾತ್ರವೇ ಇಲ್ಲ ಎಂದು ಭಾವಿಸಿದ್ದಾರೋ, ನಾನಂತೂ ಅರಿಯೆ. ಸಮಿತಿಯೊಳಗೆ ಘಟಾನುಘಟಿಗಳ್ಯಾರ್ಯಾರಿಗೆ ಟಿಕೆಟ್ ನಿರಾಕರಿಸಬೇಕು ಎಂಬ ಚರ್ಚೆ ಮೇಲ್ಮಟ್ಟದಲ್ಲಿ ನಡೆದಮೇಲೆಯೇ ನಿರ್ಣಯವಾಗಿರುತ್ತಲ್ಲ. ಅಂದಮೇಲೆ ಒಬ್ಬರದ್ದೇ ಜವಾಬ್ದಾರಿ ಹೇಗೆ? ಹಾಗೆ ಒಬ್ಬರ ಹೆಗಲಿಗೇ ಎಲ್ಲವನ್ನೂ ವರ್ಗಾಯಿಸುವುದಾದರೆ, ಟಿಕೆಟ್ ಹಂಚಿಕೆಯಲ್ಲಿ ಹಿಂದೆಂದೂ ಕಾಣದಷ್ಟು ಹೊಸಮುಖಗಳನ್ನು ತಂದಿರುವ ಶ್ರೇಯವೂ ಸಂತೋಷ್ ಅವರಿಗೇ ಸಲ್ಲಬೇಕಲ್ಲ! ಬಿಜೆಪಿಯವರಿಗೆಲ್ಲ ನೆನಪಿರಬೇಕಾದ ಒಂದು ಸಂಗತಿ ಎಂದರೆ ಬಿಜೆಪಿ ಸಂಘದ ಅಂಗಸಂಸ್ಥೆಯಷ್ಟೆ. ಸಂಘ ಅದರ ಬಾಲವಲ್ಲ. ಹೀಗಾಗಿ ಭಾಜಪದೊಂದಿಗೆ ಎಷ್ಟಾದರೂ ಕಿತ್ತಾಡಿಕೊಳ್ಳಿ, ಸ್ವಯಂಸೇವಕರು ನಿಮ್ಮ ಮೇಲೆ ಪ್ರೀತಿ ಇಟ್ಟಿರುತ್ತಾರೆ. ಸಂಘದ ತಂಟೆಗೆ ಬಂದರೆ ನಿಮ್ಮನ್ನು ಸದ್ದಿಲ್ಲದೇ ಪಕ್ಕಕ್ಕೆ ಸರಿಸಿಬಿಡ್ತಾರೆ. ಶೆಟ್ಟರ್ ವಿಷಯದಲ್ಲಿ ಆದದ್ದೂ ಅದೇ. ಅವರು ಸ್ವಯಂ ಸೇವಕರ ಅನುಕಂಪವನ್ನು ಕಳಕೊಂಡರು. ಅತ್ತ ಕಾಂಗ್ರೆಸ್ಸಿಗರೂ ನಂಬಲಾಗದ ಸ್ಥಿತಿಯನ್ನು ತಲುಪಿಬಿಟ್ಟರು. ಅವರದ್ದೀಗ ಇಬ್ಬಂದಿ. ಹಾಗಂತ ಜಗದೀಶ್ ಶೆಟ್ಟರ್‌ರ ರಾಜಕೀಯ ಚಾಣಾಕ್ಷಮತಿಯನ್ನು ಅನುಮಾನಿಸಬೇಡಿ. ಅವರಿಗೆ ಗೆಲ್ಲುವ ತಂತ್ರಗಾರಿಕೆ ಗೊತ್ತಿದೆ. ಆದರೆ ಈ ಧಾವಂತದಲ್ಲಿ ಸೊರಗಿದ್ದು ಮಾತ್ರ ಲಿಂಗಾಯತ ಸಮುದಾಯ. ಬ್ರಾಹ್ಮಣ ಮತ್ತು ಲಿಂಗಾಯತರ ನಡುವಿನ ಕಂದಕವನ್ನು ಅವರು ಇನ್ನಷ್ಟು ದೊಡ್ಡದು ಮಾಡಿಬಿಟ್ಟರು. ಬಿಜೆಪಿಯಲ್ಲಿದ್ದಷ್ಟೂ ದಿನ ಎಲ್ಲರನ್ನೂ ಬೆಸೆಯುವ ಪ್ರಯತ್ನ ಮಾಡುತ್ತಿದ್ದವರು, ಕಾಂಗ್ರೆಸ್ಸಿಗೆ ಕಾಲಿಟ್ಟೊಡನೆ ಬೆಂಕಿಹಚ್ಚಲು ಸಿದ್ಧವಾಗಿಬಿಟ್ಟರು. ಬಹುಶಃ ಒಡಕು ತರೋದು ಕಾಂಗ್ರೆಸ್ಸಿನ ಹುಟ್ಟುಗುಣವೇನೋ! ಕಾಂಗ್ರೆಸ್ಸಿಗರು ಆತ್ಮೀಯತೆ ತೋರುತ್ತಿದ್ದಾರೆಂದರೆ ಏನೊ ಅವಘಡ ಕಾದಿದೆ ಎಂದೇ ಅರ್ಥ. ಮುಖದಲ್ಲಿ ನಗು, ಬಗಲಲ್ಲಿ ಚೂರಿ ಅನ್ನೋದು ಕಾಂಗ್ರೆಸ್ಸಿಗರನ್ನು ನೋಡಿಯೇ ಹುಟ್ಟಿರಬೇಕು! ಒಂದಂತೂ ಸತ್ಯ. ನಾಟಕ ಮಾಡಿದರೆ ಬಹಳ ಕಾಲ ಉಳಿಯುವುದಿಲ್ಲ. ಲಿಂಗಾಯತರ ಮೇಲೆ ವಿಶೇಷ ಪ್ರೀತಿ ತೋರಿದ ಸಿದ್ದರಾಮಯ್ಯ, ‘ಲಿಂಗಾಯತರೆಲ್ಲ ಭ್ರಷ್ಟರು. ಅವರನ್ನು ಮುಖ್ಯಮಂತ್ರಿ ಮಾಡಲಾರೆವು’ ಎಂದಿದ್ದು ಅಂತರಂಗದ ಮಾತನ್ನು ಹೊರಹಾಕಿದೆ. ಜಾತಿಯನ್ನೇ ನೆಚ್ಚಿಕೊಂಡು ಚುನಾವಣೆಗೆ ಹೋದರೆ ಅನುಭವಿಸಲೇಬೇಕಾದ್ದು ಇದು.

ಒಡಕು ಜಾತಿಯ ವಿಚಾರದಲ್ಲಷ್ಟೇ ಅಲ್ಲ. ಅಮೂಲ್, ನಂದಿನಿ ಗಲಾಟೆಯಲ್ಲೂ ಕೂಡ. ಗುಜರಾತಿನ ಅಮೂಲ್‌ಗೆ ಕರ್ನಾಟಕಕ್ಕೆ ಬರಲು ಅವಕಾಶ ಕೊಟ್ಟಿದ್ದೇ ಸಿದ್ದರಾಮಯ್ಯ. ಈಗ ಗಲಾಟೆ ಮಾಡುತ್ತಾ ಇರೋದೂ ಅವರೇ. ತಮ್ಮ ಮತಗಳಿಕೆಗಾಗಿ ರಾಜ್ಯ-ರಾಜ್ಯಗಳ ನಡುವೆ ಕದನ ಹಚ್ಚಿಸಲು ಯತ್ನಿಸುತ್ತಿರುವ ಈ ಮಂದಿ ವಿಕಾಸ ಮಾಡೋದು ಸಾಧ್ಯವೇನು? ಈ ರೀತಿಯಲ್ಲೇ ಈ ರಾಜಕಾರಣಿಗಳು ಕರ್ನಾಟಕ-ತಮಿಳುನಾಡುಗಳ ನಡುವೆ ವಿಷಬೀಜ ಬಿತ್ತಿದ್ದು. ಇವರು ಹಚ್ಚಿದ್ದ ಬೆಂಕಿ ಆರಿಸಲು ಯಡಿಯೂರಪ್ಪನವರೇ ಬರಬೇಕಾಯ್ತು. ಕಂಠಮಟ್ಟ ನಂದಿನಿಗಾಗಿ ಕಿತ್ತಾಡಿದ ಸಿದ್ದರಾಮಯ್ಯ ರಾಜ್‌ದೀಪ್ ಸರ್‌ದೇಸಾಯಿಗೆ ನೀಡಿದ ಸಂದರ್ಶನದಲ್ಲಿ, ತಾನೇ ಅಧಿಕಾರಕ್ಕೆ ಬಂದರೂ ಅಮೂಲ್ ನಿಷೇಧಿಸುವುದಿಲ್ಲ. ಆದರೆ ಜನರಿಗೆ ಅದನ್ನು ಕೊಂಡುಕೊಳ್ಳದಿರುವಂತೆ ಕೇಳಿಕೊಳ್ಳುವೆ ಎಂದಿರುವುದಂತೂ ಇಬ್ಬಂದಿತನದ ದ್ಯೋತಕವೇ. ಜಗತ್ತು ಆರ್ಥಿಕವಾಗಿ ಬೆಳವಣಿಗೆಗೆ ಎಲ್ಲ ಸಭ್ಯಮಾರ್ಗಗಳ ಮೊರೆ ಹೋಗುತ್ತಿರುವಾಗ ಒಂದು ರಾಜ್ಯದ ವಸ್ತು ಮಾರಲು ಬಿಡೆವು ಎಂದು ಇನ್ನೊಂದು ರಾಜ್ಯದಲ್ಲಿ ಹಠಹಿಡಿದು ಕುಳಿತ ಪಕ್ಷ ರಾಷ್ಟ್ರೀಯ ಪಕ್ಷವೆನಿಸಿಕೊಳ್ಳಲು ಯೋಗ್ಯವಲ್ಲ. ಅಲ್ಲವೇನು!?

ಇನ್ನು ಮುಸಲ್ಮಾನರ ಮೇಲಿನ ಕಾಂಗ್ರೆಸ್ ಪಕ್ಷದ ಹಿಡಿತ ಮೆಚ್ಚಬೇಕಾದ್ದೇ‌. ಕೆಮ್ಮಿದ್ದಕ್ಕೂ, ಕ್ಯಾಕರಿಸಿದ್ದಕ್ಕೂ ಬೀದಿಗೆ ಬಂದು ನಿಲ್ಲುವ ಮುಸಲ್ಮಾನರು, ಆತಿಕ್ ಮೊಹಮ್ಮದನ ಸಾವಿಗೆ ಪ್ರತಿಕ್ರಿಯೆಯನ್ನೇ ಕೊಡಲಿಲ್ಲ ನೋಡಿದಿರಾ? ದೇಶದ ಮೂಲೆ-ಮೂಲೆಯಲ್ಲಿ ಸದ್ದುಮಾಡಿದ ಈ ಮಂದಿ ಕರ್ನಾಟಕದಲ್ಲಿ ಇಷ್ಟು ಮುಗುಮ್ಮಾಗಿರೋದು ಏಕೆ? ತಮ್ಮ ಗಲಾಟೆಯಿಂದ ಹಿಂದೂಗಳು ಒಗ್ಗಟ್ಟಾಗಿಬಿಡುವರೇನೋ ಎನ್ನುವ ಭಯ. ಮುಸಲ್ಮಾನರಿಂದ ಅವೈಜ್ಞಾನಿಕವಾದ ಮೀಸಲಾತಿಯನ್ನು ಕಿತ್ತುಕೊಂಡು ಗೌಡರು, ಪಂಚಮಸಾಲಿಗಳಿಗೆ ಬಿಜೆಪಿ ಹಂಚಿದಾಗಲೂ ಅವರು ತುಟಿಪಿಟಿಕ್ ಎನ್ನಲಿಲ್ಲ. ಏಕಿರಬಹುದು? ಈಗ ಗಲಾಟೆ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಕಾರಣವಾಗುವ ಬದಲು ಸಂಯಮ ಕಾಯ್ದುಕೊಂಡು ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದು, ಆನಂತರ ಬೇಕಾದ ಆಟ ಆಡಿದರಾಯ್ತು ಎಂಬ ಉದ್ದೇಶವೇ ತಾನೇ? ದೇಶದಾದ್ಯಂತ ಮುಸಲ್ಮಾನರನ್ನು ಈ ರೀತಿ ನಿಯಂತ್ರಣದಲ್ಲಿರಿಸಿಕೊಳ್ಳುವ ಸಾಮರ್ಥ್ಯ ಇರೋದು ಕಾಂಗ್ರೆಸ್ಸಿಗೆ ಮಾತ್ರ. ಅಂದರೆ ಮುಸಲ್ಮಾನರು ನಡೆಸುವ ಅನೇಕ ದಂಗೆಗಳ ಹಿಂದೆ ಕೈವಾಡ ಯಾರದ್ದಿರಬೇಕು ಹೇಳಿ? ಇಲ್ಲವಾದರೆ ಅಖಂಡ ಶ್ರೀನಿವಾಸರಿಗೆ ಟಿಕೆಟ್ ತಪ್ಪಿಸಿ, ‘ಮುಸಲ್ಮಾನ ಮುಖಂಡರ ವಿರೋಧ ಇದ್ದದ್ದರಿಂದ’ ಅಂತ ಡಿಕೆಶಿ ಏಕೆ ಹೇಳುತ್ತಿದ್ದರು? ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ಕಾಂಗ್ರೆಸ್ಸಿಗೆ ವೋಟು ನೀಡುವುದು ಅಂದರೆ ಮತ್ತೊಮ್ಮೆ ಮುಸಲ್ಮಾನರು ಅಟ್ಟಹಾಸ ನಡೆಸಿ ಬೀದಿಗಿಳಿಯುವುದು ಎಂದರ್ಥ, ಟಿಪ್ಪು ಜಯಂತಿಯ ವೈಭವ ರಾಜ್ಯದ ಮೂಲೆ-ಮೂಲೆಯಲ್ಲೂ ಕಾಣುವುದು ಎಂದರ್ಥ, ಸಾಲು-ಸಾಲು ಹಿಂದೂ ಕಾರ್ಯಕರ್ತರ ಕಗ್ಗೊಲೆಗಳಾಗುವುದು ಎಂದರ್ಥ.

ಈ ಬಾರಿ ಹಣ ಚುನಾವಣೆಯಲ್ಲಿ ಕಾವೇರಿ ನೀರಿಗಿಂತ ಜೋರಾಗಿ ಹರಿಯಲಿದೆ. ಚುನಾವಣೆಗೂ ಮುಂಚಿನ ಮೂರ್ನಾಲ್ಕು ದಿನ ಮತದಾರರಿಗೆ ಹಬ್ಬ. ನಾಯಕರಿಂದ ಹಂಚಲೆಂದು ಹಣ ಪಡೆದವರ ಕಥೆಯನ್ನು ಕೇಳಲೇಬೇಡಿ. ಕಾಂಗ್ರೆಸ್ಸು ದುಡ್ಡಿರುವವರನ್ನು ಹುಡು-ಹುಡುಕಿ ಆರಿಸಿಕೊಂಡಿದೆ. ಅವರು ಆಕಾಂಕ್ಷಿಗಳಿಂದಲೇ ಎರಡೆರಡು ಲಕ್ಷ ಪೀಕಿ ಹತ್ತಾರು ಕೋಟಿ ಮಾಡಿಕೊಂಡವರಲ್ಲವೇ! ಬಿಜೆಪಿ ಟಿಕೆಟ್ ಹಂಚುವಾಗ ಬಹುತೇಕ ಬ್ಯಾಂಕ್ ಬ್ಯಾಲೆನ್ಸ್ ನೋಡಲಿಲ್ಲವೆಂಬುದು ಸುವಿದಿತ. ಹೀಗಾಗಿ ಇಲ್ಲಿನ ಬಹುತೇಕ ಹೊರೆ ಬೊಮ್ಮಾಯಿಯವರೇ ಹೊರಬೇಕೇನೋ! ಪ್ರಜಾಪ್ರಭುತ್ವವಾದ್ದರಿಂದ ಚುನಾವಣೆಯ ನೆಪದಲ್ಲಿ ಪ್ರತಿಯೊಬ್ಬರೂ ಅಧಿಕಾರದಲ್ಲಿದ್ದಾಗ ಗಳಿಸಿದ್ದನ್ನು ಕಕ್ಕಲೇಬೇಕು. ಮೊದಲೆಲ್ಲ ಸ್ವಲ್ಪ ಕೊಟ್ಟರೆ ಸಾಕಿತ್ತು. ಈಗ ಇತರೆಲ್ಲ ಕ್ಷೇತ್ರಗಳಂತೆ ಇಲ್ಲೂ ಸಾಕಷ್ಟು ಸ್ಪರ್ಧೆ ಏರ್ಪಟ್ಟಿರುವುದರಿಂದ ಸಣ್ಣ-ಪುಟ್ಟ ಮೊತ್ತಕ್ಕೆ ಮತದಾರನೂ ಬಾಗಲಾರ. ಎಂತಹ ದುರಂತ ಅಲ್ಲವೇ! ಈ ಲೇಖನದ ಮುಕ್ಕಾಲುಭಾಗ ಜಾತಿ, ಹಣ, ಹೆಂಡಗಳೆಂಬ ಕೊಳಕು ಸಂಗತಿಯದ್ದೇ ಚರ್ಚೆಯಾಯ್ತು.

ವಾಸ್ತವವಾಗಿ, ಚುನಾವಣೆಯ ವಿಚಾರದಲ್ಲಿ ಆಮೂಲಾಗ್ರ ಬದಲಾವಣೆಗೆ ನಾವೂ ಸಿದ್ಧವಾಗಬೇಕು. ಯಾವ ವ್ಯಕ್ತಿಗೂ ಸತತ ಎರಡನೇ ಬಾರಿ ಗೆದ್ದನಂತರ, ಮೂರನೇ ಬಾರಿ ಟಿಕೆಟ್ ನೀಡಬಾರದು. ಹತ್ತು ವರ್ಷ ಶಾಸಕನಾಗಿಯೂ ಏನನ್ನೂ ಕಡಿದು ಗುಡ್ಡೆ ಹಾಕದವ, ಮುಂದಿನ ಹತ್ತು ವರ್ಷದಲ್ಲಿ ಅದೇನು ಮಹಾ ಸಾಧಿಸಬಲ್ಲ ಹೇಳಿ? ಸತತ ಐದು ಬಾರಿ ಶಾಸಕ ಎನ್ನುವುದು ಹೆಗ್ಗಳಿಕೆಯಲ್ಲ. ಐದಾರು ಬಾರಿ ಶಾಸಕನಾದರೂ ಕ್ಷೇತ್ರವಿನ್ನೂ ಹಾಗೆಯೇ ಇದೆಯಲ್ಲ ಎಂಬ ಕಾರಣಕ್ಕೆ ಆ ಪ್ರತಿನಿಧಿ ಆತ್ಮಹತ್ಯೆ ಮಾಡಿಕೊಳ್ಳಬೇಕು, ಅಲ್ಲವೇನು? ಜಾತಿಯ ಆಧಾರದ ಮೇಲೆ ಟಿಕೆಟ್ ಹಂಚುವುದಾದರೆ ಸಣ್ಣ-ಪುಟ್ಟ ಜಾತಿಗಳ ಪ್ರತಿಭಾವಂತರು ಎಂದೂ ರಾಜಕೀಯಕ್ಕೆ ಬರಲೇಬಾರದೇನು? ಅವರು ನೇತೃತ್ವವಹಿಸಿ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ನಡೆಸುವ ಕನಸು ಕಾಣಲೇಬಾರದೇನು? ಇದು ಮತದಾರರಾಗಿ ನಮ್ಮಲ್ಲೇ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ. ಪ್ರತಿಭಾವಂತನಿಗೆದುರಾಗಿ ನನ್ನ ಜಾತಿಯ ದಡ್ಡನನ್ನೂ, ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯವಿಲ್ಲದವನನ್ನೂ, ಪರಮಭ್ರಷ್ಟನನ್ನೂ ಆಯ್ದುಕೊಳ್ಳುತ್ತೇನೆಂದರೆ ಅದಕ್ಕಿಂತ ಹೇಸಿಗೆ ಯಾವುದಿದೆ! ದುರಂತ ಏನು ಗೊತ್ತೇ? ಹೀಗೆ ಜಾತಿಯವರನ್ನು ಆರಿಸಿಕೊಳ್ಳೋದು ಸಮಾಜದ ದಡ್ಡರೆಂದುಕೊಳ್ಳಬೇಡಿ, ಬುದ್ಧಿವಂತರೂ ಕೂಡ. ಎಲ್ಲವನ್ನೂ ತ್ಯಾಗ ಮಾಡಿ ಸನ್ಯಾಸ ಸ್ವೀಕರಿಸಿದ ಸ್ವಾಮಿಗಳೂ ತಮ್ಮ ಜಾತಿಗಾಗಿ ಲಾಬಿ ಮಾಡುವುದನ್ನು ನೋಡಿದಾಗ ತ್ಯಾಗವೆಂಬ ಪದ ಅದೆಷ್ಟು ಮೌಲ್ಯ ಕಳಕೊಂಡಿದೆ ಎಂದು ಅರಿವಾಗುತ್ತದೆ.

ಆದರೆ ಕಾರ್ಮೋಡದ ನಡುವೆಯೂ ಒಂದು ಬೆಳ್ಳಿರೇಖೆ ಯಾವುದು ಗೊತ್ತೇ? ಅದು ನರೇಂದ್ರಮೋದಿಯೇ‌. ಅವರು ಯಾವ ಜಾತಿಯವರೆಂದು ಅನೇಕರಿಗೆ ಗೊತ್ತಿಲ್ಲ. ಅವರು ತಮ್ಮ ಜಾತಿಯವರೆಂದು ಯಾರನ್ನೂ ಮಂತ್ರಿ ಮಾಡಿದ ಉದಾಹರಣೆ ಇಲ್ಲ. ಅವರೆಂದಿಗೂ ತಮ್ಮ ಜಾತಿಯ ಮಠಾಧೀಶನಿಗೆ ಮತ್ತೆ-ಮತ್ತೆ ಹೋಗಿ ಅಡ್ಡಬಿದ್ದುದನ್ನು ಕಂಡವರಿಲ್ಲ. ತಥಾಕಥಿತ ಮೇಲ್ವರ್ಗದ ಮಠಾಧೀಶರಿರಲಿ, ಕೆಳವರ್ಗದವರೇ ಇರಲಿ ಮೋದಿ ಎದುರು ನಿಂತಾಗ ಗೌರವದಿಂದ ನಮಿಸುತ್ತಾರೆ. ಜನರೂ ಅಷ್ಟೇ, ಮೋದಿಯ ಭಾವಚಿತ್ರ ಕೊಳಕಾಗಿದ್ದರೆ ತಮ್ಮ ಬಟ್ಟೆಯಿಂದಲೇ ಅದನ್ನು ಒರೆಸಿ, ‘ದೇವರಪ್ಪಾ’ ಅಂತಾರೆ. ಅವರು ಜಾತಿಯ ವಿಷಯ ತೆಗೆಯಲಿಲ್ಲ, ಹಣದ ಮಾತೆತ್ತಲಿಲ್ಲ. ಭಾರತದ ಮೌಲ್ಯಗಳಿಗೆ ತಕ್ಕಂತೆ ಬದುಕಿದರು. ಭೂಮಿಗೆ ಹತ್ತಿರವಾಗಿ ಬದುಕಿದರು. ಹೀಗಾಗಿಯೇ ಅವರು ಪ್ರಧಾನಿಯಾಗಿರುವುದನ್ನು ಎಲ್ಲ ಜಾತಿಯ, ಎಲ್ಲ ವರ್ಗದ ಮತ್ತು ಎಲ್ಲ ಪಕ್ಷದ ಜನ ಸಂಭ್ರಮಿಸುತ್ತಾರೆ. ಜಾತಿಯ ಕಾರಣಕ್ಕೆ ಮುಖ್ಯಮಂತ್ರಿಯ ಪಟ್ಟದಲ್ಲಿ ಕುಳಿತುಕೊಳ್ಳಬೇಕು ಎನ್ನುವವರಿಗೆ ಇವೆಲ್ಲ ಅರ್ಥವಾಗೋದು ಬಹಳ ಕಷ್ಟ.

ಮೋದಿ ಕರ್ನಾಟಕಕ್ಕೆ ಬರಲಿದ್ದಾರೆ. ಇನ್ನು ಕೆಲವು ದಿನ ಮತ್ತೆ ಮತ್ತೆ ಬರಲಿದ್ದಾರೆ. ಅವರು ಬರುವವರೆಗೆ ಅಷ್ಟೇ ಉಳಿದವರ ಹವಾ. ಅವರು ಬಂದಮೇಲೆ ಅವರದ್ದೇ ಹವಾ. ಆ ತಣ್ಣನೆ ಗಾಳಿ ಜೋರಾಗಿ ಬೀಸಲಿ, ಬಿಸಿಲ ಬೇಗೆಯನ್ನು ಕಡಿಮೆ ಮಾಡಿ ರಾಜ್ಯಕ್ಕೆ ತಂಪು ತರುವವರನ್ನು ಅಧಿಕಾರಕ್ಕೆ ಕೂಡಿಸಲಿ. ಏನಂತೀರಿ?

‘ಕೈ’ಗೇ ಬಿಟ್ಟಿದ್ದರೆ ಆತಿಕ್ ಇಲ್ಲೂ ಇರುತ್ತಿದ್ದ!

‘ಕೈ’ಗೇ ಬಿಟ್ಟಿದ್ದರೆ ಆತಿಕ್ ಇಲ್ಲೂ ಇರುತ್ತಿದ್ದ!

ಅಸದ್ ಅಹ್ಮದ್ ಮತ್ತು ಗುಲಾಮ್ ಮೊಹಮ್ಮದ್ ಇವರಿಬ್ಬರ ಎನ್ಕೌಂಟರ್ ಉತ್ತರ ಪ್ರದೇಶದಲ್ಲಿ ಆಗುತ್ತಿದ್ದಂತೆ ದೇಶದೆಲ್ಲೆಡೆ ಸಂಚಲನ ಮೂಡಿತ್ತು. ಅದರ ಕುರಿತಂತೆ ಲೇಖನ ಬರೆಯಬೇಕು ಎನ್ನುವಷ್ಟರಲ್ಲಿ ಅವರಪ್ಪ ಆತಿಕ್ ಅಹಮ್ಮದ್‌ನ ಹೆಣ ಬಿದ್ದಿದೆ. ಮೇಲ್ನೋಟಕ್ಕೆ ಇದು ಬಾಡಿಗೆ ಹಂತಕರು ಮಾಡಿರುವ ಹತ್ಯೆ ಎಂಬುದು ಗೋಚರವಾಗುತ್ತದಾದರೂ ಅನೇಕ ಮಾಧ್ಯಮಮಂದಿ ಮತ್ತು ಭಯೋತ್ಪಾದಕರ ಕುರಿತಂತೆ ಅನುಕಂಪ ಹೊಂದಿರುವ ಮಂದಿ ಯೋಗಿ ಆದಿತ್ಯನಾಥರ ಕೈವಾಡವೆಂದು ಶಂಕಿಸುತ್ತಿದ್ದಾರೆ. ಆದರೆ ಒಂದಂತೂ ನಿಜ. ಆತಿಕ್‌ನ ಸಾವು ಬರಲಿರುವ ಘೋರ ವಿಪತ್ತಿನ ಸಣ್ಣ ಮುನ್ಸೂಚನೆ ಎಂದೆನಿಸುತ್ತದೆ. ಲೇಖನದುದ್ದಕ್ಕೂ ಅದು ಹೇಗೆಂದು ವಿವರಿಸಲು ಯತ್ನಿಸುವೆ. 

ಹಾಗೆ ನೋಡಿದರೆ ಆತಿಕ್ ಸಂತನೇನೂ ಅಲ್ಲ. ಪಾಲ್ಘರ್‌ನಲ್ಲಿ ಸಾಧುಗಳ ಹತ್ಯೆಯಾದಾಗ ಮಿಸುಕಾಡದ ಮಂದಿಯೆಲ್ಲ ಆತಿಕ್‌ನ ಹತ್ಯೆಯ ಕುರಿತಂತೆ ವ್ಯಕ್ತಪಡಿಸುತ್ತಿರುವ ಅನುಕಂಪದ ಪ್ರಮಾಣವನ್ನು ನೋಡಿದರೆ, ಅವರೆಲ್ಲರ ಪಾಲಿಗೆ ಆತ ಮಹಾತ್ಮಾ ಗಾಂಧೀಯೇನೊ ಎನಿಸುತ್ತಿದೆ. 43 ವರ್ಷಗಳಲ್ಲಿ ಆತಿಕ್‌ನ ಮೇಲೆ ನೂರಕ್ಕೂ ಹೆಚ್ಚು ಕೇಸುಗಳು ದಾಖಲಾಗಿವೆ. ಇದರಲ್ಲಿ ಅಪಹರಣ, ಮಾನಭಂಗ, ದರೋಡೆಯಂಥವಲ್ಲದೇ ಕೊಲೆ ಪ್ರಕರಣಗಳೂ ಇವೆ. ಈ 43 ವರ್ಷಗಳಲ್ಲಿ ಅವನನ್ನು ಒಂದೇ ಒಂದು ಕೇಸಿನಲ್ಲಿ ಜೈಲಿಗೆ ತಳ್ಳುವುದು ಸಾಧ್ಯವಾಗಿರಲಿಲ್ಲ. ಆತನ ಕೇಸನ್ನು ಕೈಗೆತ್ತಿಕೊಳ್ಳುವುದಿಲ್ಲವೆಂದು ಅನೇಕ ಬಾರಿ ನ್ಯಾಯಾಧೀಶರುಗಳೇ ಕೈಚೆಲ್ಲಿ ಎದ್ದುಹೋದ ಉದಾಹರಣೆಯಿದೆ. ಯಾವುದಾದರೂ ಒಬ್ಬ ನ್ಯಾಯಾಧೀಶರು ಧೈರ್ಯ ಮಾಡಿ ವಿಚಾರಣೆಗೆ ನಿಂತರೆ ಅವನಿಗೆ ಜಾಮೀನು ಕೊಟ್ಟು ಮನೆಗೆ ಕಳಿಸುವುದಷ್ಟೇ ಅಲ್ಲದೇ ಬೇರೇನೂ ಮಾಡುತ್ತಿರಲಿಲ್ಲ. ನಿಮಗೆ ಅಚ್ಚರಿಯಾಗಬಹುದು. ಈ ಕೊಲೆಗಡುಕ ಐದು ಬಾರಿ ಶಾಸಕನಾಗಿದ್ದ! ಮೂರು ಬಾರಿ ಪಕ್ಷೇತರನಾಗಿ, ಒಮ್ಮೆ ಸಮಾಜವಾದಿ ಪಾರ್ಟಿಯಿಂದ, ಮತ್ತೊಮ್ಮೆ ಅಪ್ನಾದಲ್ ಪಾರ್ಟಿಯಿಂದ ಆಯ್ಕೆಯಾಗಿದ್ದ. 2004ರಲ್ಲಿ ಸಮಾಜವಾದಿ ಪಕ್ಷದಿಂದಲೇ ಸಂಸತ್ ಸದಸ್ಯನಾಗಿದ್ದ ಈತ ಪಾರ್ಟಿ ಹೊರಹಾಕಿದ ಮೇಲೆ 2009ರಲ್ಲಿ ಅಪ್ನಾದಲ್‌ನಿಂದ ಆಯ್ಕೆಯಾಗಿದ್ದ. 2012ರಲ್ಲಿ ಜೈಲಿನಿಂದಲೇ ಸ್ಪರ್ಧಿಸಿ 2005ರಲ್ಲಿ ತಾನೇ ಕೊಂದಿದ್ದ ರಾಜು ಪಾಲ್‌ ಪತ್ನಿಯ ಎದುರು ಸೋತಿದ್ದ. 2014ರಲ್ಲಿ ಸಮಾಜವಾದಿ ಪಕ್ಷ ಇಂತಹ ಕೊಲೆಗಡುಕ ಕ್ರಿಮಿನಲ್‌ನನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡು ಸಂಸತ್ ಸದಸ್ಯನನ್ನಾಗಿಸುವ ಪ್ರಯತ್ನ ಮಾಡಿತ್ತು. ಮೋದಿ ಸುನಾಮಿಯಲ್ಲಿ ಅನೇಕ ಆತಿಕ್‌ಗಳು ಕೊಚ್ಚಿಹೋದರು. 

ಈಗ ಆತಿಕ್ ಸುದ್ದಿಯಾಗುತ್ತಿರುವುದೇಕೆಂದರೆ 2005ರಲ್ಲಿ ತನ್ನ ತಮ್ಮನ ವಿರುದ್ಧ ಸ್ಪರ್ಧಿಸಿ ಗೆದ್ದಿದ್ದ ರಾಜುಪಾಲ್‌ನನ್ನು ಈತ ಶೂಟ್ಔಟ್‌ನಲ್ಲಿ ಕೊಂದಿದ್ದ. ಪ್ರತ್ಯಕ್ಷವಾಗಿ ಇದನ್ನು ನೋಡಿದ್ದ ಉಮೇಶ್ ಪಾಲ್ ಪೊಲೀಸರಿಗೆ ಎಲ್ಲ ವಿವರಗಳನ್ನೂ ಕೊಟ್ಟಮೇಲೆ, ಅಂದಿನ ಡಿಜಿಪಿ ಓಪಿಸಿಂಗ್ ಇವನ ಠಾಣ್ಯವನ್ನು ಹುಡುಕಿ ತನ್ನ ಪಡೆಯೊಂದಿಗೆ ಸುತ್ತುವರೆದು ನಿಂತಿದ್ದರು. ಕೆಲವೇ ನಿಮಿಷಗಳಲ್ಲಿ ಪೊಲೀಸರ ಸುತ್ತಲೂ ಆತಿಕ್ನ ಪಡೆ ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ತೊಡೆ ತಟ್ಟಿಕೊಂಡು ನಿಂತುಬಿಟ್ಟಿತು. ಓಪಿಸಿಂಗ್ ನೇರವಾಗಿ ಆತಿಕ್‌ನನ್ನೇ ಹಿಡಿದು, ಪೊಲೀಸರ ಮೈಗೆ ಕೆರೆದ ಗಾಯವಾದರೂ ಇವನನ್ನು ಉಡಾಯಿಸಿಬಿಡುತ್ತೇನೆ ಎಂದಿದ್ದರು. ಎಲ್ಲವೂ ಥೇಟು ಸಿನಿಮಾದಂತೆಯೇ. ಆತನನ್ನು ಬಂಧಿಸಿ ಎಳೆದು ತರಬೇಕೆನ್ನುವಷ್ಟರಲ್ಲಿ ಸರ್ಕಾರದ ಪ್ರಮುಖ ಹುದ್ದೆಯಲ್ಲಿರುವ ಮಂದಿ ಒತ್ತಡ ತಂದು ಆತಿಕ್‌ನನ್ನು ಬಿಡಿಸಿಕೊಂಡರು! ಇತ್ತೀಚೆಗೆ ಓಪಿಸಿಂಗ್ ಇವೆಲ್ಲವನ್ನೂ ವಿವರವಾಗಿ ಹೇಳಿದ್ದಾರೆ. ತನ್ನ ವಿರುದ್ಧ ಇರಬಹುದಾಗಿದ್ದ ಸಾಕ್ಷಿ ಉಮೇಶ್ ಪಾಲ್‌ನನ್ನು ಮರುಕ್ಷಣವೇ ಅಪಹರಿಸಿ ತಂದ ಆತಿಕ್ ಹೊಡೆದು-ಬಡಿದು ಪೊಲೀಸರಿಗೆ ಆತ ಕೊಟ್ಟ ಹೇಳಿಕೆಗೆ ವಿರುದ್ಧವಾದ ಹೇಳಿಕೆಯನ್ನು ಬರೆಸಿಕೊಂಡ. ಉಮೇಶ್ ಪಾಲ್ ಕೂಡ ಕಡಿಮೆ ಆಸಾಮಿಯಲ್ಲ. ಅವರಿಂದ ಬಿಡುಗಡೆಯಾಗಿ ಬಂದವನೇ ನೇರ ಪೊಲೀಸರ ಬಳಿಸಾರಿ ನಡೆದುದೆಲ್ಲವನ್ನೂ ಹೇಳಿ ಆತಿಕ್‌ನ ಕೊರಳಿಗೆ ಉರುಳನ್ನು ಗಟ್ಟಿಯಾಗಿಯೇ ಬಿಗಿದ. 

ಕಳೆದ ಫೆಬ್ರವರಿ ತಿಂಗಳಲ್ಲಿ ಉಮೇಶ್ ಪಾಲ್‌ನ ಹೇಳಿಕೆಯಿಂದಾಗಿ ಅತ್ಯಂತ ಕಠಿಣ ಶಿಕ್ಷೆಗೆ ಗುರಿಯಾಗಿರುವ ಆತಿಕ್‌ನ ಇಂದಿನ ಪರಿಸ್ಥಿತಿಗೆ ಪ್ರತೀಕಾರವಾಗಿ ಅವನ ಮಗ ಅಸದ್ ಉಮೇಶ್‌ನನ್ನು ಮುಗಿಸುವ ಸಂಚು ರೂಪಿಸಿದ. ಪೊಲೀಸರು ಆನಂತರ ಇವರೆಲ್ಲರನ್ನೂ ಬಂಧಿಸಿದಾಗ ಇವರ ಯೋಜನೆಯ ಒಟ್ಟಾರೆ ರೂಪುರೇಷೆಗಳು ಹೊರಬಂದಿದೆ. 12 ಐಫೋನ್‌ಗಳನ್ನು ಆತಿಕ್‌ನ ಹೆಂಡತಿ ಯೋಜನೆಯಲ್ಲಿ ಭಾಗಿಯಾದವರಿಗೆಲ್ಲ ಕೊಡಿಸಿದ್ದಳು. ಪ್ರತಿಯೊಬ್ಬರೂ ತಮಗೆ ಪ್ರತ್ಯೇಕ ಗುಪ್ತನಾಮ ಕೊಟ್ಟುಕೊಂಡಿದ್ದರು. ಸಲ್ಮಾನ್ ಖಾನನ ಆರಾಧಿಸುತ್ತಿದ್ದ ಅಸದ್ ತನ್ನ ಹೆಸರನ್ನು ರಾಧೆ ಎಂದಿಟ್ಟುಕೊಂಡಿದ್ದನಂತೆ. ಸಲ್ಮಾನನ ಇತ್ತೀಚಿನ ಸಿನಿಮಾದ ಹೆಸರು ಅದು. ಇವರೆಲ್ಲರೂ ಐ ಮೆಸೇಜ್‌ಗಳ ಮೂಲಕ ಮಾತ್ರ ಚರ್ಚೆ ನಡೆಸುತ್ತಿದ್ದರು. ಗುಂಡು ಹೊಡೆಯುವವ, ಬಾಂಬ್ ಎಸೆಯುವವ, ಚಲನ-ವಲನಗಳ ಮಾಹಿತಿ ನೀಡುವವ, ಹೀಗೆ ಎಲ್ಲರಿಗೂ ಪ್ರತ್ಯೇಕವಾದ ಜವಾಬ್ದಾರಿ ನೀಡಲಾಗಿತ್ತು. ಉಮೇಶ್‌ಪಾಲ್‌ನ ಮೇಲೆ ಇವರು ದಾಳಿ ಮಾಡುವಾಗ ಎಲ್ಲ ಎಚ್ಚರಿಕೆಯನ್ನೂ ಇಟ್ಟುಕೊಂಡಿದ್ದರಾದರೂ ಸಿಕ್ಕ ಸಿಸಿಟಿವಿ ಕಡತಗಳ ಆಧಾರದ ಮೇಲೆ ಪೊಲೀಸರು ಇವರ ವಿರುದ್ಧ ಬಲೆ ಬೀಸಿದರು. ಸದನದಲ್ಲಿ ಈ ಕುರಿತಂತೆ ಕೋಲಾಹಲವೆದ್ದಿತು. ಮಾಫಿಯಾ ಡಾನ್‌ಗಳನ್ನು ಸಾಕಿ ಸಲಹಿದ ಸಮಾಜವಾದಿ ಪಕ್ಷಕ್ಕೆ ಸರಿಯಾಗಿಯೇ ತಪರಾಕಿ ಕೊಟ್ಟ ಯೋಗಿ, ಪ್ರತಿಯೊಬ್ಬ ಗೂಂಡಾನನ್ನು ಹುಡುಹುಡುಕಿ ಕೊಲ್ಲಲಾಗುವುದು ಎಂದಿದ್ದರು. ಆದಷ್ಟು ಬೇಗ ಈ ಸಾವಿಗೆ ಕಾರಣರಾದ ಗೂಂಡಾಗಳನ್ನು ಹಿಡಿಯುವುದು, ಅಗತ್ಯವಿದ್ದರೆ ಮುಗಿಸಿಬಿಡುವುದು ಅತ್ಯವಶ್ಯಕವಾಗಿತ್ತು. ಪೊಲೀಸರು ಚುರುಕಾದರು. ಭಿನ್ನ-ಭಿನ್ನ ತಂಡಗಳನ್ನು ರಚಿಸಿಕೊಂಡು 40 ದಿನಗಳ ಕಾಲ ಈ ಗೂಂಡಾಗಳನ್ನು ಅಟ್ಟಿಸಿಕೊಂಡು ಹೋದರು. ಇತರರನ್ನು ಕೊಲ್ಲುವಾಗ ಮೆರೆದಾಡುತ್ತಿದ್ದ ಅಸದ್ ಮತ್ತವನ ಸಹಚರರು ಪೊಲೀಸರು ಅಟ್ಟಿಸಿಕೊಂಡು ಬಂದಾಗ ನೀರಲ್ಲದ್ದಿದ ಬೆಕ್ಕಿನಂತಾಗಿಬಿಟ್ಟಿದ್ದರು. ಈ ತಂಡದ ಸದಸ್ಯರನೇಕರ ಮನೆಗಳನ್ನು ಬುಲ್ಡೋಜ್ ಮಾಡಿದ ಬಾಬಾ ಗೂಂಡಾಗಳ ಎದೆಯಲ್ಲಿ ಭಯ ಅವತರಿಸುವಂತೆ ಮಾಡಿಬಿಟ್ಟರು. ಈ ವೇಳೆಗಾಗಲೇ ಆತಿಕ್‌ನ ಅನೇಕ ಸೋದರ ಸಂಬಂಧಿಗಳು ಜೈಲು ಸೇರಿಯಾಗಿತ್ತು. ಆತಿಕ್‌ನ ಹೆಂಡತಿ ಮತ್ತು ತಮ್ಮನ ಹೆಂಡತಿಯರು ಉಟ್ಟಬಟ್ಟೆಯಲ್ಲಿ ಊರುಬಿಟ್ಟು ಓಡಿ ಹೋಗಿದ್ದರು. ಒಂದು ಕಾಲದಲ್ಲಿ ಉತ್ತರಪ್ರದೇಶವೇ ತಮ್ಮದೆಂದು ಮೆರೆದಾಡುತ್ತಿದ್ದವರೆಲ್ಲ ಈಗ ಬದುಕಿದೆಯಾ ಬಡಜೀವವೇ ಎಂಬಂತಾಗಿದ್ದರು. ಇಂತಹ ಒಂದು ಹೊತ್ತಲ್ಲಿಯೇ ಪೊಲೀಸರ ಕೈಗೆ ಸಿಕ್ಕುಬಿದ್ದ ಅಸದ್ ಎರ್ರಾಬಿರ್ರಿ ಗುಂಡು ಹಾರಿಸತೊಡಗಿದ. ಪೊಲೀಸರು ಮುಲಾಜು ನೋಡದೇ ಅಸದ್ ಮತ್ತು ಗುಲಾಮ್ ಇಬ್ಬರನ್ನೂ ನಡುರಸ್ತೆಯಲ್ಲಿಯೇ ಹೆಣವಾಗಿಸಿಬಿಟ್ಟರು! ಇತ್ತ ಜೈಲಿನಲ್ಲಿದ್ದ ಆತಿಕ್, ‘ಈ ಕೃತ್ಯದಲ್ಲಿ ಭಾಗಿಯಾದ ಪೊಲೀಸರನ್ನು ನಾನು ಬಿಡುವುದಿಲ್ಲ. ಒಮ್ಮೆ ಜೈಲಿನಿಂದ ಹೊರಬಂದಮೇಲೆ ಗದ್ದಿಜಾತಿಯ ತಾಕತ್ತನ್ನು ತೋರಿಸುತ್ತೇನೆ’ ಎಂದಿದ್ದ. ಗಮನಿಸಬೇಕಾದ ಸಂಗತಿ ಇದು. ಸ್ವತಃ ವೈರ್ನ ಸಂಪಾದಕಿ ಅರ್ಫಾ ಖನ್ನುಂ ಆತಿಕ್ ಅಹ್ಮದ್‌ನನ್ನು ನಡೆಸಿಕೊಳ್ಳುತ್ತಿರುವ ರೀತಿ ಮುಸಲ್ಮಾನರಲ್ಲಿಯೇ ಹಿಂದುಳಿದ ಜಾತಿಯಾದ ಗದ್ದಿ ಜನಾಂಗದವರಿಗೆ ಮಾಡುತ್ತಿರುವ ಅವಮಾನ ಎಂದಿದ್ದಳು. ‘ನಾವೆಲ್ಲ ಒಂದೆ ಜಾತಿ, ಒಂದೆ ಕುಲ’ ಎನ್ನುವ ಮುಸಲ್ಮಾನರು ಇಂತಹ ಸಂದರ್ಭಗಳಲ್ಲಿ ಜಾತಿಯ ಕಾರ್ಡ್ ಬಳಸಲು ಹಿಂದೆ-ಮುಂದೆ ನೋಡುವುದಿಲ್ಲ. ಕೆಲವು ಪತ್ರಕರ್ತರು ಅದೆಷ್ಟು ಲಜ್ಜೆಗೆಟ್ಟವರೆಂದರೆ, ರಾಜ್‌ದೀಪ್ ಸರ್‌ದೇಸಾಯಿ ಲಲ್ಲನ್‌ಟಾಪ್‌ನ ಸಂದರ್ಶನವೊಂದರಲ್ಲಿ ಆತಿಕ್ ಮನೆಯಲ್ಲಿ ತಿಂದ ತಂದೂರಿ ಎಷ್ಟು ಚೆನ್ನಾಗಿತ್ತು ಎಂದು ವರ್ಣಿಸಿದ್ದ. ಮಾಫಿಯಾ ಡಾನ್‌ಗೂ ಒಂದೊಳ್ಳೆ ಮುಖವಿದೆ ಎಂದು ಹೇಳುವ ಪ್ರಯತ್ನ ಅದು. 

ಇಲ್ಲಿಯವರೆಗೂ ಎಲ್ಲವೂ ಸರಿಯೇ. ಆದರೆ ಆತಿಕ್‌ನ ಹತ್ಯೆಯಾದದ್ದು ಮಾತ್ರ ಗಾಬರಿ ಹುಟ್ಟಿಸುವಂಥದ್ದು. ಮಾಧ್ಯಮದ ಎದುರಿಗೆ, ಪೊಲೀಸರ ನಡುವೆಯೇ ಅತ್ಯಾಧುನಿಕ ಶಸ್ತ್ರ ಹಿಡಿದುಬಂದು ಆಕ್ರಮಣ ಮಾಡುತ್ತಾರೆಂದರೆ ಇದರ ಹಿಂದೆ ದೊಡ್ಡದೊಂದು ಪಿತೂರಿ ಇರಲೇಬೇಕು. ಇಷ್ಟಕ್ಕೂ ಭಾರತದಲ್ಲಿ ನಾಯಕತ್ವ ಬದಲಾವಣೆಗೆ ಅನೇಕ ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಇದಕ್ಕೆ ಪೂರ್ವಭಾವಿಯಾಗಿ ಅಮೇರಿಕಾ ಎರಿಕ್ ಗಾರ್ಸಿಟಿಯನ್ನು ರಾಯಭಾರಿಯಾಗಿ ಭಾರತಕ್ಕೆ ಕಳಿಸಿತು. ಆತನನ್ನು ಈ ಹುದ್ದೆನೀಡಿ ಕಳಿಸಬೇಕೆಂದು 2021ರ ಮಧ್ಯಭಾಗದಲ್ಲಿಯೇ ನಿಶ್ಚಯಿಸಲಾಗಿತ್ತು. ಆದರೆ ಅಮೇರಿಕಾದ ಸೆನೆಟ್‌ನಲ್ಲಿ ಬಹುಮತವಿರದಿದ್ದುದರಿಂದ ಬೈಡನ್ ತಡೆ ಹಿಡಿದಿದ್ದ. ಬಹುಮತ ಖಾತ್ರಿಯಾದೊಡನೆ ಭಾರತಕ್ಕೆ ಕಳಿಸುವ ನಿಶ್ಚಯ ಮಾಡಿದ. ಈ ಎರಿಕ್ ಲಾಸ್ ಏಂಜಲೀಸ್‌ನ ಮೇಯರ್ ಆಗಿದ್ದವ ಮತ್ತು ಅಲ್ಲಿನ ಬುದ್ಧಿಜೀವಿಗಳ ಕಣ್ಮಣಿ. ಆತನ ಪತ್ನಿಯೊಂದಿಗೆ ಸೇರಿ ಅನೇಕ ಪ್ರತಿಭಟನೆಗಳಲ್ಲಿ ಆತ ಪಾಲ್ಗೊಂಡಿದ್ದಾನೆ. ಸಿಎಎ ವಿರುದ್ಧ ಭಾರತದಲ್ಲಿ ಪ್ರತಿಭಟನೆ ನಡೆಯುವಾಗ ಗಂಡ-ಹೆಂಡತಿ ಇಬ್ಬರೂ ಪ್ರತ್ಯಕ್ಷ-ಪರೋಕ್ಷವಾಗಿ ಅದರಲ್ಲಿ ಭಾಗಿಯಾಗಿದ್ದರು. ಆತನನ್ನು ರಾಯಭಾರಿ ಎಂದು ಘೋಷಿಸಿದೊಡನೆ ಆತ ಹೇಳಿದ್ದೇನು ಗೊತ್ತೇ? ‘ನನ್ನ ಅತ್ಯಂತ ಪ್ರಮುಖವಾದ ಕೆಲಸವೇ ಸಿಎಎ ಬಗೆಯ ಕಾನೂನುಗಳನ್ನು ವಿರೋಧಿಸಿ ಭಾರತದಲ್ಲಿ ಮಾನವ ಹಕ್ಕುಗಳ ಸ್ಥಾಪನೆ ಮಾಡುವುದು. ಯಾರು ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೋ ಅಂಥವರೊಡನೆ ನೇರವಾಗಿ ಮಾತುಕತೆಯಲ್ಲಿ ತೊಡಗುವುದು’ ಎಂದಿದ್ದ. ಇದರರ್ಥ ನೇರವಾಗಿ ಭಾರತದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಮತ್ತು ಮೋದಿ ವಿರೋಧಿಗಳನ್ನೆಲ್ಲ ತನ್ನ ದೂತಾವಾಸದ ಛತ್ರಛಾಯೆಯಲ್ಲಿ ಒಂದುಗೂಡಿಸುವುದು ಅಂತ! ಉಕ್ರೇನ್‌ನಲ್ಲಿ ಅಮೇರಿಕಾ ತನ್ನ ಪ್ರಭಾವ ಬಳಸಿ ಅಲ್ಲಿನ ರಾಷ್ಟ್ರೀಯವಾದಿ ಅಧ್ಯಕ್ಷನನ್ನು ಅಧಿಕಾರದಿಂದ ಕೆಳಗಿಳಿಸಿ ಕೈಗೊಂಬೆಯಾಗಿರುವ ಶತಮೂರ್ಖ ಜೆಲ್ಸೆಂಕಿಯನ್ನು ಕೂರಿಸಿತಲ್ಲ, ಭಾರತದಲ್ಲೂ ಹಾಗೆ ಮಾಡುವ ಯೋಜನೆ ಅದರದ್ದು. ಮೋದಿಯನ್ನು ಕೆಳಗಿಳಿಸಿದ ನಂತರ ಜೆಲ್ಸೆಂಕಿಯಷ್ಟೇ ಮೂರ್ಖನೂ ಮತ್ತು ಕೈಗೊಂಬೆಯೂ ಆಗಬಲ್ಲ ನಾಯಕ ಯಾರಿರಬಹುದು ಹೇಳಿ?

ಅಮೇರಿಕಾ ಭಾರತದಲ್ಲಿ ದೊಡ್ಡ ತಳಮಳವನ್ನು ಸೃಷ್ಟಿಸುವ ಧಾವಂತದಲ್ಲಿದೆ. ಸಿಎಎ ವಿರುದ್ಧದ ಹೋರಾಟ ಅದಕ್ಕೊಂದು ಅಸ್ತ್ರವಾಗಿ ದೊರಕಿತ್ತು. ಸರ್ಕಾರ ಅದನ್ನು ನಿಭಾಯಿಸಿದ ರೀತಿ ಮತ್ತು ಅದನ್ನು ಜಾರಿಗೆ ತರುವಲ್ಲಿ ಅನುಸರಿಸುತ್ತಿರುವ ವಿಳಂಬ ನೀತಿಯಿಂದಾಗಿ ಅಮೇರಿಕಾ ಪತರಗುಟ್ಟಿದೆ. ಹೀಗಾಗಿಯೇ ಅನವಶ್ಯಕವಾಗಿ ರಾಮನವಮಿಯ ಮೆರವಣಿಗೆಯ ಮೇಲೆ ಕಲ್ಲೆಸೆದು ಹಿಂದೂಗಳನ್ನು ಭಡಕಾಯಿಸುವ ಯೋಜನೆ ರೂಪಿಸುತ್ತಿರೋದು. ಪಿಎಫ್ಐ ನಿಷೇಧದ ನಂತರ ಈ ಯೋಜನೆಗಳನ್ನೆಲ್ಲ ನೇರವಾಗಿ ಕಾರ್ಯರೂಪಕ್ಕೆ ತರುವ ಒಂದು ಸಂಸ್ಥೆ ಇಲ್ಲವಾಗಿ ಅಮೇರಿಕಾ ಚಡಪಡಿಸುತ್ತಿದೆ. ಹೀಗಾಗಿಯೇ ಮೂರ್ಖರಂತಿರುವ ಈ ಮಂದಿಯನ್ನು ಭಡಕಾಯಿಸಲು ಭಿನ್ನ-ಭಿನ್ನ ಪ್ರಯತ್ನಗಳನ್ನು ಮಾಡುತ್ತಿರೋದು. ಅದರ ಒಂದು ಭಾಗವೇ ಆತಿಕ್‌ನ ಹತ್ಯೆ! 

ಅದಾಗಲೇ ಓವೈಸಿ, ಸರ್ಕಾರ ಬೇಕಂತಲೇ ಈ ಕೆಲಸವನ್ನು ಮಾಡಿಸಿದೆ ಎಂದು ಹೇಳಿಕೆ ನೀಡಿಬಿಟ್ಟಿದ್ದಾನೆ. ಮುಸಲ್ಮಾನರ ಪರವಾಗಿ ಸದಾ ನಿಲ್ಲುತ್ತಿದ್ದ ಆತಿಕ್‌ನಂಥವನನ್ನು ಪರಿವಾರ ಸಮೇತವಾಗಿಯೇ ಮುಗಿಸುತ್ತಾರೆಂದರೆ ಇನ್ನು ಸಾಮಾನ್ಯ ಮುಸಲ್ಮಾನನ ಕಥೆಯೇನು? ಎಂಬ ಪ್ರಶ್ನೆಯನ್ನು ಹಿಂಸೆ ತುರುಕುವ ಮಸೀದಿಗಳಲ್ಲಿ ಕೇಳಲಾಗುತ್ತದೆ. ಉತ್ತರ ಪ್ರದೇಶದಲ್ಲಿ ಈ ಕೋಮು ಶಾಂತಿಯಿಂದ ಕೂಡಿರಬಹುದೇನೊ. ಆದರೆ ಇತರೆ ರಾಜ್ಯಗಳಲ್ಲಿ ಇದು ತೀವ್ರಸ್ವರೂಪ ಪಡೆದುಕೊಳ್ಳುತ್ತದೆ, 2024ರ ವೇಳೆಗೆ ಸಾಕಪ್ಪ, ಸಾಕು ಎನಿಸುವಷ್ಟರಮಟ್ಟಿಗೆ. ಇದಕ್ಕೆ ಪೂರಕವಾಗಿ ನ್ಯಾಯ ವ್ಯವಸ್ಥೆಯನ್ನೂ ಕೂಡ ಇವರು ಬಳಸಿಕೊಳ್ಳುತ್ತಿದ್ದಾರೆ. ಅದಾನಿಯ ವಿರುದ್ಧ ಅನವಶ್ಯಕವಾಗಿ ಸುಪ್ರೀಂಕೋರ್ಟು ರೂಪಿಸಿರುವ ತಂಡವನ್ನು ನೋಡಿದರೆ ಗೊತ್ತಾಗುತ್ತದೆ. ಇತ್ತೀಚೆಗೆ ನ್ಯಾಯಾಧೀಶರೊಬ್ಬರು ಪ್ರಧಾನಿಯ ವಿರುದ್ಧ ಕ್ರಮ ತೆಗೆದುಕೊಳ್ಳುವ ಶಕ್ತಿ ನಮಗೆ ಬೇಕು ಎಂದು ಕೇಳಿಕೊಂಡಿದ್ದು ಗಮನಿಸಬೇಕಾದ್ದೇ. ಮುಖ್ಯ ನ್ಯಾಯಾಧೀಶರು ‘ಇನ್ನು ಮುಂದೆ ಯಾರಾದರೂ, ಯಾವ ಕ್ಷಣದಲ್ಲಾದರೂ ಮನೆ ಉರುಳಿಸುವ, ಸರ್ಕಾರ ತೊಂದರೆ ಕೊಡುವ ವಿಚಾರದ ಕುರಿತಂತೆ ನೇರವಾಗಿ ನಮ್ಮ ಬಾಗಿಲು ಬಡಿಯಬಹುದು’ ಎಂದು ಹೇಳಿಕೆ ಕೊಟ್ಟಿರುವುದು ಸ್ಪಷ್ಟವಾಗಿ ಈ ಪ್ರತ್ಯೇಕತಾವಾದಿಗಳಿಗೆ ಶಕ್ತಿ ತುಂಬುವ ಪ್ರಕ್ರಿಯೆಯೇ. ಮುಸಲ್ಮಾನರನ್ನೇ ಮುಂದಿಟ್ಟುಕೊಂಡರೆ ಹಿಂದೂಗಳು ಒಟ್ಟಾಗಿ ನರೇಂದ್ರಮೋದಿಗೆ ವೋಟು ಹಾಕುವ ಸಂಭವವಿರುವುದರಿಂದ ಖಾಲಿಸ್ತಾನಿಗಳಿಗೆ ವಿಶೇಷ ಬೆಂಬಲವನ್ನು ಕೊಟ್ಟಿದ್ದು ಅಮೇರಿಕಾ-ಯುರೋಪುಗಳು. ಆದರೆ ಸರ್ಕಾರ ಅದನ್ನು ಸಂಭಾಳಿಸಿದ ರೀತಿ ಮಾತ್ರ ಮೆಚ್ಚಬೇಕಾದ್ದು. ಓಡಿ ಹೋದ ಖಾಲಿಸ್ತಾನೀ ನಾಯಕ ಅಮೃತ್‌ಪಾಲ್‌ಸಿಂಗ್ ತನ್ನ ತಾನು ಜನರ ನಡುವಿನ ಶ್ರೇಷ್ಠ ನಾಯಕ ಎಂದು ಬೊಗಳೆ ಕೊಚ್ಚಿಕೊಳ್ಳುತ್ತಿದ್ದ. ಅವನು ಕಾಣೆಯಾಗಿ ಇಷ್ಟು ದಿನ ಕಳೆದರೂ ಪಂಜಾಬಿನಲ್ಲಿ ಆತನ ಕುರಿತಂತೆ ನಯಾಪೈಸೆ ಚರ್ಚೆಯಿಲ್ಲ ಎಂದಾಗಲೇ ಇವನ ಯೋಗ್ಯತೆ ಅರಿವಾಗಿರಬೇಕು. 

ಆತಿಕ್ ಅಹ್ಮದ್ ತನ್ನ ಬಳಿ ಆಯುಧಗಳಿಗೆ ಬರವಿಲ್ಲವೆಂದೂ ಪಾಕಿಸ್ತಾನ ಡ್ರೋಣ್ ಮೂಲಕ ಪಂಜಾಬ್ ಗಡಿಗೆ ಅದನ್ನು ತಲುಪಿಸುವುದೆಂದೂ, ಕಾಶ್ಮೀರಿಗಳು ಅದನ್ನೇ ಬಳಸುತ್ತಾರೆ ಎಂದೂ ಹೇಳಿಕೆ ಕೊಟ್ಟಿದ್ದ. ಶತಾಯ-ಗತಾಯ ಪಂಜಾಬಿನಲ್ಲಿ ಅಧಿಕಾರ ನಡೆಸಬೇಕೆಂದು ಕೇಜ್ರಿವಾಲ್ ಪಣತೊಟ್ಟಿದ್ದೇಕೆಂದು ಅರ್ಥವಾಯ್ತೇನು? ಇನ್ನು ಕರ್ನಾಟಕದಲ್ಲೂ ಕಾಂಗ್ರೆಸ್ ಅಧಿಕಾರ ಹಿಡಿಯಲು ಹಾತೊರೆಯುತ್ತಿದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸಿದ್ದರಾಮಯ್ಯನವರ ಐದು ವರ್ಷದ ಸರ್ಕಾರದ ನಂತರ ಭಾಜಪ ಅಧಿಕಾರಕ್ಕೆ ಬರದೇ ಹೋಗಿದ್ದರೆ, ಸಿದ್ದರಾಮಯ್ಯನವರೇ ಮತ್ತೊಮ್ಮೆ ಕುರ್ಚಿಯ ಮೇಲೆ ಕುಳಿತಿದ್ದರೆ, ಪಿಎಫ್ಐ ಇಲ್ಲೂ ಕೆಲವು ಆತಿಕ್ ಅಹ್ಮದ್‌ರನ್ನು ಸೃಷ್ಟಿಸುತ್ತಿತ್ತು! 

ಮತದಾನ ಮಾಡುವ ಮುನ್ನ ಇಡೀ ರಾಷ್ಟ್ರವನ್ನು ಕಣ್ಮುಂದೆ ತಂದುಕೊಳ್ಳಿ.

ಬೇರೆಯವರಿಗೆ ಬೆಂಕಿ ಹಚ್ಚೋದು ತಪಸ್ಸು ಹೇಗೆ?!

ಬೇರೆಯವರಿಗೆ ಬೆಂಕಿ ಹಚ್ಚೋದು ತಪಸ್ಸು ಹೇಗೆ?!

ಇದು ರಂಜಾನ್ ತಿಂಗಳು. ಮುಸಲ್ಮಾನರ ಅತ್ಯಂತ ಪವಿತ್ರವಾದ ಹಬ್ಬ. ಕುರಾನ್ ಅವತೀರ್ಣಗೊಂಡಿದ್ದು ಇದೇ ತಿಂಗಳಲ್ಲಿ ಎಂದು ಮುಸಲ್ಮಾನರು ನಂಬುತ್ತಾರೆ. ಅವತೀರ್ಣಗೊಳ್ಳೋದು ಅಂದರೆ ಇದು ಯಾರೊ ಬರೆದಿಟ್ಟದ್ದಲ್ಲ. ಬದಲಿಗೆ, ಭಗವಂತನೇ ಪ್ರವಾದಿಯವರಿಗೆ ಈ ವಾಕ್ಯಗಳು ಗೋಚರಿಸುವಂತೆ ಮಾಡಿದ್ದು. ಈ ಕಾರಣಕ್ಕಾಗಿ ಕುರಾನ್ ಮೇಲೆ ವಿಶೇಷವಾದ ಶ್ರದ್ಧೆ ಮತ್ತು ಗೌರವ. ಈ ತಿಂಗಳಲ್ಲೇ ಇದು ಅವತೀರ್ಣಗೊಂಡಿದ್ದರಿಂದ ಮುಸಲ್ಮಾನರ ಪಾಲಿಗೆ ಇದು ಪವಿತ್ರ ಮಾಸ ಕೂಡ. ಈ ತಿಂಗಳಲ್ಲಿ ಅವರು ಉಪವಾಸ ಮಾಡುತ್ತಾ ದಾನ-ಧರ್ಮಗಳಲ್ಲಿ ತೊಡಗಿಕೊಂಡು, ಕುರಾನಿನ ಪಠನ ಮಾಡಿ, ಅದರ ಸಾರವನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡಿ ಆನಂತರ ಅದನ್ನು ಇಫ್ತಾರ್‌ನ ಮೂಲಕ ಮುರಿಯುತ್ತಾರೆ. ವಾಸ್ತವವಾಗಿ ಅರಾಬಿಕ್ ಮೂಲದಿಂದ ಬಂದಿರುವ ಈ ಪದದ ಅರ್ಥವೇನು ಗೊತ್ತೇ? ಚೆನ್ನಾಗಿ ಬೇಯುವುದು, ಉರಿದು ಹೋಗುವುದು, ಹೊಳೆಯುವುದು ಅಂತೆಲ್ಲ. ಸ್ವಲ್ಪ ನಮ್ಮ ಭಾಷೆಗೆ ತರ್ಜುಮೆ ಮಾಡಿದರೆ ತಪಸ್ಸು ಎಂದಷ್ಟೇ. ಇಷ್ಟನ್ನೂ ಏಕೆ ಹೇಳಬೇಕಾಯ್ತೆಂದರೆ ಈ ರಂಜಾನ್ ಮಾಸವನ್ನು ನೆಪವನ್ನಾಗಿರಿಸಿಕೊಂಡು ಇತ್ತೀಚೆಗೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಮುಸಲ್ಮಾನರ ವಿರುದ್ಧ ನಯವಾದ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ‘ರಂಜಾನ್ ತಿಂಗಳು ಅತ್ಯಂತ ಪವಿತ್ರವಾಗಿರುವುದರಿಂದ ಈ ತಿಂಗಳಲ್ಲಿ ಮುಸಲ್ಮಾನರು ಯಾವ ದುಷ್ಕೃತ್ಯದಲ್ಲೂ ತೊಡಗಿರುವುದಿಲ್ಲ’ ಎಂದಿದ್ದಾರೆ. ವಾಸ್ತವವಾಗಿ ಅದು ಪಶ್ಚಿಮ ಬಂಗಾಳದ ರಾಮನವಮಿಯ ಮೆರವಣಿಗೆಯ ಮೇಲೆ ಮುಸಲ್ಮಾನರು ನಡೆಸಿದ ಕಲ್ಲೆಸೆತದ ಆಕ್ರಮಣದಿಂದ ಅವರನ್ನು ಉಳಿಸುವ ಹೇಳಿಕೆಯಾಗಿತ್ತು. ದುರದೃಷ್ಟವೆಂದರೆ ಆಕೆ ಮುಸಲ್ಮಾನರನ್ನು ಶಾಶ್ವತವಾಗಿ ಕಟಕಟೆಯಲ್ಲಿ ನಿಲ್ಲಿಸಿಬಿಟ್ಟಿದ್ದಾರೆ. ಅಲ್ಲದೇ ಮತ್ತೇನು? ರಂಜಾನಿನ ಒಂದು ತಿಂಗಳು ಅವರು ದುಷ್ಕೃತ್ಯದಲ್ಲಿ ತೊಡಗುವುದಿಲ್ಲವೆಂದರೆ ಉಳಿದ ಹನ್ನೊಂದು ತಿಂಗಳು ಅದೇ ಕೆಲಸವೆಂದಾಯ್ತಲ್ಲ ಮತ್ತು ರಂಜಾನ್ ತಿಂಗಳಲ್ಲೂ ಅವರೇ ಈ ಕೃತ್ಯವನ್ನು ಮಾಡಿದ್ದೆಂದು ಸಾಬೀತುಪಡಿಸಿಬಿಟ್ಟರೆ ದುಷ್ಕೃತ್ಯವೆಸಗುವುದೇ ಮುಸಲ್ಮಾನರ ಕೆಲಸವೆಂದು ದೀದಿಯ ಮಾತುಗಳು ಎಂದಾಯ್ತಲ್ಲ!

ದೀದಿ ಈ ಹೇಳಿಕೆ ನೀಡುವ ವೇಳೆಗೆ ಸರಿಯಾಗಿ ದುಬೈನ ಮುಸಲ್ಮಾನ ಮಿತ್ರರೊಬ್ಬರು ಮೊಬೈಲ್ ಸಂದೇಶವೊಂದನ್ನು ಕಳಿಸಿದ್ದರು. ದ.ರಾ ಬೇಂದ್ರೆಯ ವಾಕ್ಯವೆಂದು ಅವರು ಹೇಳುವ ಆ ಸಂದೇಶ ‘ಹಚ್ಚೋದಾದರೆ ದೀಪವನ್ನೇ ಹಚ್ಚು, ಬೆಂಕಿಯನ್ನಲ್ಲ; ಆರಿಸೋದಾದ್ರೆ ನೋವನ್ನು ಆರಿಸು, ನಗುವನ್ನಲ್ಲ’ ಎಂದಿತ್ತು. ಮೊದಲಿನಿಂದಲೂ ಕೆಣಕುವ ಸಂದೇಶವನ್ನೇ ಕಳಿಸುವ ರೂಢಿಯ ಆತ ಇದನ್ನು ಸಹೃದಯತೆಯಿಂದ ಕಳಿಸಿರಲಾರೆ ಎಂಬುದು ಗೊತ್ತಿದ್ದುದರಿಂದಲೇ ನಾನು ನಯವಾಗಿಯೇ, ‘ವಾಹ್! ಜಗವೆಲ್ಲ ಇದನ್ನು ಅರಿತಿದ್ದರೆ ಭಾರತ ಇಂದು ಅಖಂಡವಾಗಿರುತ್ತಿತ್ತು’ ಎಂದು ಉತ್ತರಿಸಿದೆ. ಅತ್ತಲಿಂದ ಈ ಕುರಿತ ಚರ್ಚೆ ಮುಂದುವರೆಯಲಿಲ್ಲ. ಮುಸಲ್ಮಾನರು ಹಿಂದೂಗಳ ಸಹವಾಸದಲ್ಲಿ ಎಷ್ಟು ಹಾಯಾಗಿ ನೆಮ್ಮದಿಯಿಂದಿದ್ದಾರೋ, ಜಗತ್ತಿನಲ್ಲೆಲ್ಲೂ ಹಾಗಿಲ್ಲ. ಆದರೂ ನೋವಿನ ಸಂಗತಿ ಎಂದರೆ ಭಾರತದ ಮುಸಲ್ಮಾನರು ದಿನಗಳೆದಂತೆ ಹೆಚ್ಚು-ಹೆಚ್ಚು ಮತಿಭ್ರಮಿತರಾಗುತ್ತಿದ್ದಾರೆ. ಹಿಂದುಗಳನ್ನು ಅವಹೇಳನ ಮಾಡಲು, ಅವರ ಮಂದಿರಗಳನ್ನು ಧ್ವಂಸಮಾಡಲು, ಮೂರ್ತಿಗಳನ್ನು ಭಂಜಿಸಲು ಅವರಿಗೆ ಇಂತಹ ಮಾಸವೇ ಆಗಬೇಕೆಂದೇನೂ ಇಲ್ಲ. ರಂಜಾನ್ ಸೇರಿದಂತೆ ಎಲ್ಲಾ ತಿಂಗಳಲ್ಲೂ ಈ ಕೆಲಸದಲ್ಲೇ ತೊಡಗಿಕೊಳ್ಳುತ್ತಾರೆ. ರಂಜಾನ್ ಜೋರಾಗಿ ನಡೆಯುತ್ತಿರುವಾಗಲೇ ರಾಜಸ್ಥಾನದಿಂದ ಒಂದು ಸುದ್ದಿ ಬಂತು. ಸಾಂಚಿ ಬುಡಕಟ್ಟು ಜಾತಿಗೆ ಸೇರಿದ ರಾಜುರಾಂ ಎಂಬ ಕೂಲಿ ಕಾರ್ಮಿಕನ ಹೆಂಡತಿ ಝಮ್ಮಾದೇವಿ ಮನೆಯಲ್ಲಿ ಒಬ್ಬಂಟಿಯಾಗಿರುವಾಗ ಬಾಗಿಲು ತೆರೆದು ನುಗ್ಗಿದ ಶಕೂರ್‌ಖಾನ್ ಆಕೆಯನ್ನು ಬಲಾತ್ಕರಿಸಲು ಯತ್ನಿಸಿದ. ಆಕೆ ಅರಚಾಡುತ್ತಿರುವಾಗಲೇ ಆಕೆಯನ್ನು ವಿವಸ್ತ್ರಗೊಳಿಸಿ ಮುಗಿಬಿದ್ದ. ಆಕೆ ತೀವ್ರವಾಗಿ ಪ್ರತಿಭಟಿಸಿದಳೆಂಬ ಕಾರಣಕ್ಕೆ ಥಿನ್ನರ್ ಅನ್ನು ಆಕೆಯ ಮೇಲೆ ಸುರಿದು ಬೆಂಕಿ ಹಚ್ಚೇಬಿಟ್ಟ. ಆಕೆಯನ್ನು ಉಳಿಸಲೆಂದು ಬಂದ ಅಕ್ಕಪಕ್ಕದವರನ್ನು ಆತ ತಳ್ಳಿ ಓಡಿಸಿದ, ಸಿಕ್ಕು ಬೀಳುತ್ತೇನೆಂದು ಗೊತ್ತಾಗುವಾಗ ತಾನೇ ಕಾಣೆಯಾದ. ಮಟ ಮಟ ಮಧ್ಯಾಹ್ನ ನಡೆದ ಈ ಘಟನೆಯ ಸುದ್ದಿ ತಿಳಿದು ಗಾಬರಿಗೊಂಡ ರಾಜುರಾಂ ತನ್ನ ಹಳ್ಳಿಗೆ ಓಡಿಬಂದು ನೋಡಿದರೆ ಅರ್ಧದಷ್ಟು ಭಾಗ ಬೆಂದು ಹೋಗಿರುವ ಝಮ್ಮಾ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು. ಸ್ಥಳೀಯ ಆಸ್ಪತ್ರೆಯಲ್ಲಿ ಆಕೆ ಚಿಕಿತ್ಸೆ ಪಡೆಯುತ್ತಿರುವಾಗ ಪೊಲೀಸ್ ಠಾಣೆಗೆ ಹೋಗಿ ದೂರುನೀಡಲು ಯತ್ನಿಸಿದರೆ ಪೊಲೀಸರು ಎಫ್ಐಆರ್ ದಾಖಲಿಸಲು ನಿರಾಕರಿಸಿಬಿಟ್ಟರು. ಕೊನೆಗೆ ಹಿಂದೂ ಕಾರ್ಯಕರ್ತರು ಮಧ್ಯ ಪ್ರವೇಶಿಸಿ ಸ್ಥಳಿಯ ಬಿಜೆಪಿ ಘಟಕ ವ್ಯಾಪಕ ಪ್ರತಿಭಟನೆ ನಡೆಸಿದ ನಂತರ ಆತನ ವಿರುದ್ಧ ಪ್ರಕರಣ ದಾಖಲಿಸಲಾಯ್ತು. ಕಾಂಗ್ರೆಸ್ಸಿಗೆ ಸರಣಿ ಸೋಲುಗಳ ನಂತರವೂ ಬುದ್ಧಿ ಬಂದಿಲ್ಲವೆನ್ನುವುದು ಇದಕ್ಕೇ. ನಿರಂತರವಾಗಿ ಹಿಂದೂಗಳನ್ನು ಅಪಮಾನಗೊಳಿಸುತ್ತಲೇ ಬಂದ ಕಾಂಗ್ರೆಸ್ಸು ಇಂದು ವಿರೋಧಪಕ್ಷದ ಗೌರವವನ್ನು ಕಳೆದುಕೊಂಡು ಟ್ರೋಲ್‌ಗಳಿಗಿಂತ ಕಡೆಯಾಗಿ ಬೀದಿಗೆ ಬಂದು ಕೂರುತ್ತಿದೆ. ಇಷ್ಟಾದಾಗ್ಯೂ ತನ್ನ ಹಿಂದೂ ವಿರೋಧಿ ನಡೆಯನ್ನು ಸರಿಪಡಿಸಿಕೊಳ್ಳದೇ ಹೋಗಿರುವುದು ಅಚ್ಚರಿ ಎನಿಸುತ್ತಿದೆ. ಹಾಗಂತ ಇದು ಕಾಂಗ್ರೆಸ್ಸಿನ ಕಥೆಯಷ್ಟೇ ಅಲ್ಲ. ರಂಜಾನ್‌ಗಿಂತ ಕೆಲವು ದಿನಗಳ ಮುಂಚೆ ಬಿಹಾರದಲ್ಲಿ ಅರ್ಚನಾ ಕುಶ್ವಾಹ ಎಂಬ ಹುಡುಗಿಯನ್ನು ದಾನಿಶ್ ಆಲಂ ಇದೇ ರೀತಿ ಬಲಾತ್ಕರಿಸಿ ಬೆಂಕಿ ಹಚ್ಚಿಬಿಟ್ಟಿದ್ದ. ಅಲ್ಲೆಲ್ಲಾ ನಿತೀಶ್ ಕುಮಾರ್ ನೇತೃತ್ವದ ಮಹಾಘಟಬಂಧನ ಹಿಂದೂ ವಿರೋಧಿಯಾಗಿ ಕೆಲಸ ಮಾಡುತ್ತಿರುವುದು ದೃಗ್ಗೋಚರ.

ರಾಜಸ್ಥಾನದ್ದೇ ಆಳ್ವಾರ್‌ನಲ್ಲಿ ರಂಜಾನಿನ ನಟ್ಟ ನಡುವೆಯೇ ಸಬೀರ್ ನಾಸಿರ್ ಮತ್ತು ನಜೀರ್ ಎಂಬಿಬ್ಬರು 16 ವರ್ಷದ ಹುಡುಗಿಯನ್ನು ಎಳೆದೊಯ್ದು ಬಲಾತ್ಕರಿಸಿದರು. ಹುಡುಗಿಯ ತಾಯಿ ಈ ಕುರಿತಂತೆ ದೂರನ್ನೂ ಕೊಟ್ಟಿದ್ದರು. ಆದರೇನು? ಪೊಲೀಸರು ಯಾವ ಕ್ರಮವನ್ನೂ ಕೈಗೊಳ್ಳದೇ ಆ ಹೆಣ್ಣುಮಗಳನ್ನೇ ಅಪಹಾಸ್ಯಗೊಳಿಸುವಂತಹ ಸ್ಥಿತಿ ನಿರ್ಮಾಣಗೊಂಡಾಗ ಮಾನವನ್ನು ಕಳಕೊಂಡು ನ್ಯಾಯಕ್ಕೂ ಪರಿತಪಿಸಬೇಕಾದ ಸ್ಥಿತಿಗೆ ನಲುಗಿದ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಯನ್ನೇ ಮಾಡಿಕೊಂಡಳು. ಪವಿತ್ರ ಮಾಸದಲ್ಲಿ ಎಂಥದ್ದೆಲ್ಲಾ ಪ್ರಕರಣಗಳು! 

ಇದು ವರದಿಯಾದ ಪ್ರಕರಣಗಳಷ್ಟೇ. ಇದನ್ನು ಬಿಟ್ಟು ಅವರೇ ಬಹುಸಂಖ್ಯಾತರಾಗಿರುವ ಪ್ರದೇಶಗಳಲ್ಲಿ ಯಾವ ರೀತಿಯ ದೌರ್ಜನ್ಯ ನಡೆಯುತ್ತದೆಂಬುದನ್ನು ಹೇಳಿ ಮುಗಿಸುವುದು ಸಾಧ್ಯವಿಲ್ಲ. ಮಸೀದಿಗಳಲ್ಲಿ ಕಲ್ಲನ್ನು ಶೇಖರಿಸಿಟ್ಟುಕೊಂಡು ಹಿಂದೂಗಳ ಮೆರವಣಿಗೆಯ ಮೇಲೆ ಗುರಿಯಿಟ್ಟು ಎಸೆಯುವ ದುಷ್ಟರಿಗೇನು ಅವರಲ್ಲಿ ಕೊರತೆಯಿಲ್ಲ! ತಪಸ್ಸಿಗಾಗಿ ರಂಜಾನ್ ಎಂಬ ಮಾತಿಗೂ, ಇವರು ನಡೆದುಕೊಳ್ಳುವ ರೀತಿಗೂ ಅಜಗಜಾಂತರವಲ್ಲವೇನು? ಇಷ್ಟಕ್ಕೂ ಮುಸಲ್ಮಾನರು ಹೀಗೆ ಬೇಕಾಬಿಟ್ಟಿಯಾಗಿ ವರ್ತಿಸಲು ಕಾರಣ ಯಾರು ಗೊತ್ತೇ? ಸಹಜವಾಗಿಯೇ ಆಳುವ ಮಂದಿ. ಉತ್ತರ ಪ್ರದೇಶದಲ್ಲಿ, ಗುಜರಾತಿನಲ್ಲಿ ಬಾಲಬಿಚ್ಚದ ಈ ಜನ ರಾಜಸ್ಥಾನದಲ್ಲಿ ಮೆರೆದಾಡುತ್ತಾರಲ್ಲ, ಹೇಗೆ? ಸಿದ್ದರಾಮಯ್ಯನವರ ಕಾಲದಲ್ಲಿ ಸರಣಿ ಹಿಂದೂ ತರುಣರ ಹತ್ಯೆಯಾಗಿದ್ದು ನೆನಪಿದೆಯಲ್ಲ? ಅವರು ಅಧಿಕಾರಕ್ಕೆ ಬಂದೊಡನೆ ಈಗ ದೇಶದ್ರೋಹಿ ಕಾರ್ಯಗಳಿಗಾಗಿ ನಿಷೇಧಗೊಳ್ಳಲ್ಪಟ್ಟಿರುವ ಪಿಎಫ್ಐನ ನೂರಾರು ಕೇಸುಗಳನ್ನು ಹಿಂಪಡೆದರಲ್ಲ, ಒಮ್ಮೆಯಾದರೂ ಅವರು ಇವೆಲ್ಲಕ್ಕೂ ಎದುರಿಗೆ ಬಂದು ಉತ್ತರಿಸಿದ್ದಾರೇನು? ಹನುಮ ಜಯಂತಿಯಂದು ಮಾಂಸಾಹಾರ ಮುಟ್ಟುವುದಿಲ್ಲವೆಂದು ಹೇಳಿದ ತಮ್ಮದೇ ಕಾರ್ಯಕರ್ತನಿಗೆ ಹನುಮನ ಹುಟ್ಟಿದ ದಿನಾಂಕ ಗೊತ್ತೇನೊ ಎಂದು ಮೂದಲಿಸುವ ಇಂತಹ ನಾಯಕರೇ ಕಲ್ಲೆಸೆಯುವ ಮಂದಿಗೆ ನಿಜವಾದ ಪ್ರೇರಣೆ. ಇನ್ನು ಮುಸಲ್ಮಾನರಲ್ಲೇ ಶಾಂತವಾಗಿರುವ ಬಹುಸಂಖ್ಯಾತ ವರ್ಗವಿದೆ. ಅವರು ಸದಾ ಪುಂಡಾಟಿಕೆ ನಡೆಸುವ, ಅಲ್ಪಸಂಖ್ಯಾತರಾಗಿರುವ ಮಂದಿಯನ್ನು ವಿರೋಧಿಸುವ ಧೈರ್ಯ ತೋರದೇ ಇರುವುದೇ ಕಲ್ಲೆಸೆಯುವವರಿಗೆ ಶಕ್ತಿ ತುಂಬುತ್ತದೆ. ಹಾಗಂತ ಯಾರೂ ವಿರೋಧಿಸುವವರಿರುವುದಿಲ್ಲವೆಂದೇನೂ ಇಲ್ಲ. ಶಾಂತವಾಗಿರುವ ಬಹುಸಂಖ್ಯಾತ ಮಂದಿಯಲ್ಲಿಯೇ ವಿಕಾಸದ ದೃಷ್ಟಿಯಿಂದ ಯೋಚಿಸುವ ಕೆಲವೇ ಮಂದಿ ಇದ್ದಾರೆ. ಅವರಿಗೆ ತಮ್ಮ ಸಮುದಾಯ ಈ ಮೂಢನಂಬಿಕೆಗಳಿಂದ ಆಚೆ ಬಂದು ಎಲ್ಲರಂತೆ ಮುಖ್ಯಭೂಮಿಕೆಯಲ್ಲಿ ಯಶಸ್ವಿಯಾಗಿ ಮುನ್ನಡೆಯಬೇಕೆಂಬ ಬಯಕೆಯಿದೆ. ಆದರೆ ಅವರ ಮಾತುಗಳಿಗೆ ಶಕ್ತಿ ತುಂಬಬಲ್ಲಂತಹ ನಾಯಕತ್ವವಿಲ್ಲದೇ ಅವರು ಸೊರಗಿ ಹೋಗುತ್ತಾರೆ. ಈ ವಿಕಾಸ ಪರವಾದ ಮಂದಿ ಮೋದಿಯನ್ನು, ಯೋಗಿಯವರನ್ನು ಇಷ್ಟಪಡುವುದು, ಅವರ ಎಲ್ಲರನ್ನೂ ಮುಖ್ಯವಾಹಿನಿಗೆ ತರುವ ಉದ್ದೇಶದ ಕಾರಣಕ್ಕಾಗಿಯೇ. 

ಸೌದಿ ಅರೇಬಿಯಾದ ಈಗಿನ ಯುವರಾಜರು ಇದೇ ರೀತಿ ವಿಕಾಸದ ಕಲ್ಪನೆಯಿಟ್ಟುಕೊಂಡವ. ಹೀಗಾಗಿಯೇ ಆತ ಈ ಬಾರಿ ರಂಜಾನ್ ಆರಂಭವಾಗುವುದಕ್ಕೂ ಮುನ್ನ ಹತ್ತು ನಿಯಮಗಳನ್ನು ಅಲ್ಲಿನ ಮುಸಲ್ಮಾನರ ಮೇಲೆ ಹೇರಿದ್ದಾನೆ. ಮೌಲ್ವಿಗಳು ಮಸೀದಿಯಲ್ಲಿ ಇರಲೇಬೇಕೆಂದು, ಅವರೇ ಪ್ರಾರ್ಥನೆಯನ್ನು ನಿರ್ವಹಿಸಬೇಕೆಂದು ಕಡ್ಡಾಯ ಮಾಡಿದ್ದಾನೆ. ಯಾವ ಕಾರಣಕ್ಕೂ ಪ್ರಾರ್ಥನೆಗೆ ಧ್ವನಿವರ್ಧಕಗಳನ್ನು ಬಳಸುವಂತಿಲ್ಲವೆಂದೂ, ಹೀಗೆ ನಡೆಯವ ಪ್ರಾರ್ಥನೆಯನ್ನು ರೆಕಾರ್ಡ್ ಮಾಡಿ ಹಂಚುವಂತಿಲ್ಲವೆಂದು ಎಚ್ಚರಿಸಿದ್ದಾನೆ. ಇನ್ನೂ ಅಚ್ಚರಿ ಎಂದರೆ ಪ್ರಾರ್ಥನೆಯನ್ನು ಚುಟುಕಾಗಿ ಮತ್ತು ಸರಳವಾಗಿ ಮಾಡಿ ಮುಗಿಸಬೇಕೆಂದು ಹೇಳಿರುವುದಲ್ಲದೇ ಸಂಜೆಯ ಪ್ರಾರ್ಥನೆ ಯಾರಿಗೂ ತೊಂದರೆಯಾಗದಂತೆ ಬೇಗ ಮುಗಿಸಬೇಕೆಂಬ ನಿಯಮವನ್ನೂ ಹೇರಿದ್ದಾನೆ. ಅನೇಕ ಭಾರತೀಯ ಮುಸಲ್ಮಾನರಿಗೆ ಜೀರ್ಣವಾಗದ ಈ ಸಂಗತಿಗಳ ಜೊತೆಗೆ ಮಸೀದಿಯ ಹೊರಗೆಲ್ಲೂ ಇಫ್ತಾರ್ ಮಾಡಬಾರದು ಎಂಬ ಕಟುವಾದ ನಿಯಮವನ್ನು ಜೋಡಿಸಿ, ಇಫ್ತಾರ್ ಮುಗಿದೊಡನೆ ಆ ಸ್ಥಳವನ್ನು ಸ್ವಚ್ಛಗೊಳಿಸಬೇಕೆಂದೂ ಆದೇಶಿಸಿಬಿಟ್ಟಿದ್ದಾನೆ. ನಡು ರಸ್ತೆಯಲ್ಲೇ ಟಾರ್ಪಾಲನ್ನು ಹಾಸಿಕೊಂಡು, ಅಲ್ಲಿಯೇ ತಾವು ತಂದ ಅಡುಗೆಯನ್ನು ತಿಂದು, ಇಡಿಯ ರಸ್ತೆಯನ್ನು ಹೊಲಸುಗೊಳಿಸುವ ಇಫ್ತಾರ್ ಮುರಿಯುವ, ಭಾರತದ ಮುಸಲ್ಮಾನರಿಗೆ ಸೌದಿ ರಾಜನ ಕರೆ ಕೇಳುತ್ತದೇನೋ ನೋಡಬೇಕಷ್ಟೇ! ನೆನಪಿಡಿ, ಇಸ್ಲಾಂನ ಮೂಲ ಇದೇ ಸೌದಿ. ಭಾರತದ ಮುಸಲ್ಮಾನರೇನಿದ್ದರೂ ಅಲ್ಲಿನ ಆದೇಶವನ್ನು ಅನುಸರಿಸಬೇಕಷ್ಟೇ. ಅವರು ಅದನ್ನು ಧಿಕ್ಕರಿಸಿದರೆ ಇವರದ್ದು ಇಸ್ಲಾಂ ಎನಿಸಿಕೊಳ್ಳದೇ ಬೇರೆಯೇ ರಿಲಿಜನ್ ಆಗುತ್ತದೆ. 

ಸೌದಿಯ ಕಥೆ ಹಾಗಾದರೆ ಇತ್ತ ಚೀನಾದಲ್ಲಿ ಉಯ್ಘುರ್ ಮುಸಲ್ಮಾನರು ರಂಜಾನ್ ಸಂದರ್ಭದಲ್ಲಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಅಲ್ಲಿನ ಶಿಂಜಿಯಾಂಗ್ ಪ್ರಾಂತ್ಯದ 1811 ಹಳ್ಳಿಗಳಲ್ಲಿ ಹಬ್ಬಿಕೊಂಡಿರುವ ಈ ಮುಸಲ್ಮಾನರ ಮೇಲೆ ರಂಜಾನ್ ತಿಂಗಳಲ್ಲಿ ದಿನದ 24 ತಾಸೂ ವಿಶೇಷ ಕಣ್ಗಾವಲಿರಿಸಲಾಗಿದೆ. ಕಾರಣವೇನು ಗೊತ್ತೇ? ಚೀನಾ ಸರ್ಕಾರ ಇವರ್ಯಾರೂ ಉಪವಾಸ ಮಾಡುವಂತಿಲ್ಲವೆಂದು ಆದೇಶಿಸಿದೆ. ಪೋಷಕರು ಉಪವಾಸ ಮಾಡಿದರೆ ಸುಳಿವು ನೀಡುವಂತೆ ಮಕ್ಕಳಿಗೆ ಶಾಲೆಯಲ್ಲಿ ಪಾಠ ಮಾಡಲಾಗುತ್ತಿದೆ. ಸುಮಾರು ಒಂದುಕಾಲು ಕೋಟಿಯಿರುವ ಈ ಮುಸಲ್ಮಾನರು ರಂಜಾನ್‌ನ ಅವಧಿಯಲ್ಲಿ ವಿಚಿತ್ರವಾದ ಸಂಕಟಕ್ಕೆ ಸಿಲುಕಿದ್ದಾರೆ ಎಂದು ಉಯ್ಘುರ್‌ಗಳ ಜಾಗತಿಕ ಸಂಘಟನೆ ಗಲಾಟೆ ಎಬ್ಬಿಸಿದೆ. ಭಾರತದ ಮುಸಲ್ಮಾನರ ಬೆಂಬಲಕ್ಕೆ ತಾನಿದ್ದೇನೆಂದು ಪದೇ ಪದೇ ಹೇಳಿಕೊಳ್ಳುವ ಭಿಕಾರಿ ಪಾಕಿಸ್ತಾನ ಈ ಮುಸಲ್ಮಾನರ ಬಗ್ಗೆ ಮಾತ್ರ ದನಿಯೇ ಎತ್ತುವುದಿಲ್ಲ. ಅಚ್ಚರಿಯಲ್ಲವೇನು? ಭಿಕಾರಿ ಪಾಕಿಸ್ತಾನವೆಂದದ್ದಕ್ಕೆ ಕೆಲವರಿಗೆ ಬೇಸರವಾಗಬಹುದೇನೋ! ರಂಜಾನ್ ತಿಂಗಳಲ್ಲಿ ಗೋಧಿಹಿಟ್ಟು ಹಂಚಲೆಂದು ಸರ್ಕಾರ ವ್ಯವಸ್ಥೆ ಮಾಡಿಕೊಂಡಿದ್ದಾಗ ಅದನ್ನು ಪಡೆಯಲು ಧಾವಿಸಿದ ಮಂದಿಯಲ್ಲಿ ಅನೇಕರು ನೂಕುನುಗ್ಗಲಿಗೆ ಒಳಗಾಗಿಯೇ ಪ್ರಾಣಬಿಟ್ಟರಂತೆ. ಅಲ್ಲಿನ ಸರ್ಕಾರ ಭಾರತ ಹಾಕಿದ ದಿಗ್ಬಂಧನಕ್ಕೆ ಹೇಗೆ ಪತರಗುಟ್ಟಿದೆ ಎಂದರೆ ನಮ್ಮ ಪ್ರಭಾವದಿಂದಾಗಿಯೇ ಗ್ರೀಸ್ ಸಬ್ಮೆರಿನ್‌ಗೆ ಬೇಕಾದ ಬ್ಯಾಟರಿಗಳನ್ನು ಕೊಡಲು ನಿರಾಕಿರಿಸಿದೆ. ಗಾಯಕ್ಕೆ ಉಪ್ಪು ಹಾಕುವಂತೆ ಭಾರತ ಪಾಕಿಸ್ತಾನಕ್ಕೆ ಹರಿಯುವು ನೀರಿನ ಕುರಿಂತಂತಹ 1960ರ ಒಪ್ಪಂದವನ್ನು ಪುನರ್ ನವೀಕರಿಸಲು ಕಳಿಸಿದ ಪತ್ರಕ್ಕೆ ವಿಶ್ವಬ್ಯಾಂಕಿನಿಂದಲೂ ಸಹಾಯ ಸಿಗದೇ ಹೋದಾಗ ಪಾಕಿಸ್ತಾನ ಬಾಯ್ಮುಚ್ಚಿಕೊಂಡು ಸಂಧಾನಕ್ಕೆ ಬರಲೊಪ್ಪಿದೆ. ಇದೂ ಕೂಡ ರಂಜಾನ್ ತಿಂಗಳಲ್ಲೇ ನಡೆದದ್ದು. 

ಕೆಲವೇ ಕೆಲವು ಪುಂಡ ಮುಸಲ್ಮಾನರು ರಾಜಕೀಯದ ಮಂದಿಯ ಆಮಿಷಕ್ಕೆ ಒಳಗಾಗಿ ಹಿಂದೂ-ಮುಸಲ್ಮಾನ್ ಬಾಂಧವ್ಯವನ್ನು ಕೆಡಿಸಲೆತ್ನಿಸಿದಾಗ ಮುಸಲ್ಮಾನರಲ್ಲೇ ಶಾಂತವಾಗಿರುವ ಬಹುಸಂಖ್ಯಾತರು ಸದ್ದು ಮಾಡಬೇಕಾದ ಅಗತ್ಯವಿದೆ. ರಂಜಾನ್ ತಿಂಗಳಿನ ತಪಸ್ಸಿನ ವೇಳೆ ಅವರು ಈ ಸಂಕಲ್ಪ ಮಾಡದೇ ಹೋದರೆ ಭವಿಷ್ಯದ ದಿನಗಳಲ್ಲಿ ಇಸ್ಲಾಂ ಜಾಗತಿಕ ಅಧಃಪತನ ಕಾಣುವುದು ನಿಶ್ಚಿತ. ಬೇಂದ್ರೆಯವರೇ ಹೇಳಿದ್ದಾರಲ್ಲ, ‘ಹಚ್ಚೋದಾದ್ರೆ ದೀಪವನ್ನು ಹಚ್ಚು, ಬೆಂಕಿಯನ್ನಲ್ಲ’ ಅಂತ. ಬೆಂಕಿಯನ್ನು ಹಚ್ಚುವ ಮಂದಿ ದೀರ್ಘಕಾಲ ಉಳಿಯುವುದು ಸಾಧ್ಯವಿಲ್ಲ ಏಕೆಂದರೆ ನೆರಮನೆಯನ್ನು ಸುಡಲೆಂದು ಹಚ್ಚುವ ಬೆಂಕಿ ಆನಂತರ ತನ್ನನ್ನೇ ಸುಡುತ್ತದೆ. ಅಲ್ಲವೇನು?

ಕಾಣೆಯಾಗಿಬಿಟ್ಟಿದ್ದಾರಲ್ಲ ಸಿದ್ದರಾಮಯ್ಯನವರು!

ಕಾಣೆಯಾಗಿಬಿಟ್ಟಿದ್ದಾರಲ್ಲ ಸಿದ್ದರಾಮಯ್ಯನವರು!

ನಿಮಗೆ ನೆನಪಿರಬೇಕಲ್ಲ, ತೈವಾನ್ ವಿಚಾರದಲ್ಲಿ ಅಮೇರಿಕಾ ಚೀನಾಕ್ಕೆ ಕಟುವಾದ ಸಂದೇಶ ನೀಡಿತ್ತು ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಕಾಂಗ್ರೆಸ್ಸಿಗರು ಪ್ರತಿಭಟನೆ ಮಾಡಿದ್ದರು. ಇವರೇ ಹುಟ್ಟುಹಾಕಿಕೊಂಡ ಸಂಘಟನೆಯೊಂದಿದೆ. ಇಂಡೋ-ಚೀನಾ ಫ್ರೆಂಡ್ಶಿಪ್ ಅಸೋಸಿಯೇಷನ್ ಎಂಬುದು ಅದರ ಹೆಸರು. ಚಿತ್ರಕಲಾ ಪರಿಷತ್ ನಲ್ಲಿ ಪ್ರತಿಭಟನೆಯ ನೆಪದಲ್ಲಿ ಈ ಕಾಂಗ್ರೆಸ್ಸಿಗರು ಚೀನಾದ ರಾಯಭಾರಿಯನ್ನೇ ಕರೆಸಿದ್ದರು. ಜೊತೆಗೆ ಒಂದು ಚಿತ್ರಪ್ರದರ್ಶನ. ಮುಖ್ಯ ಅತಿಥಿಯಾಗಿ ಭಾಗವಹಿಸಬೇಕೆಂದಿದ್ದವರು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಸಿದ್ದರಾಮಯ್ಯನವರು. ಸ್ವಲ್ಪ ಪ್ರತಿಭಟನೆಯಾದೊಡನೆ ‘ನಾನು ಬರುವುದಿಲ್ಲವೆಂದರೂ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಬಿಟ್ಟಿದ್ದಾರಲ್ಲ’ ಎಂದು ಮೊಸಳೆ ಕಣ್ಣೀರು ಸುರಿಸಿದ ಅವರು ಉಳಿದ ಕಾಂಗ್ರೆಸ್ಸಿಗರು ಈ ಪ್ರತಿಭಟನೆಗೆ ಹೋಗುವುದಿಲ್ಲವೆಂದೇನೂ ಹೇಳಲಿಲ್ಲ! ಪ್ರತಿಭಟನೆ ಆಯ್ತು ಕೂಡ. ಇಷ್ಟೆಲ್ಲಾ ಈಗೇಕೆಂದರೆ ಚೀನಾದ ಗಡಿಯ ಬರೋಬ್ಬರಿ ನೂರು ಕಿಲೋಮೀಟರ್ ದೂರದಲ್ಲಿ ಭಾರತ ಮತ್ತು ಅಮೇರಿಕಾಗಳು ಜಂಟಿ ಸಮರಾಭ್ಯಾಸ ನಡೆಸುತ್ತಿವೆ. ಇದಕ್ಕೆ ಚೀನಾ ಪ್ರತಿಭಟನೆ ವ್ಯಕ್ತಪಡಿಸಿ ಎಚ್ಚರಿಕೆ ಕೂಡ ಕೊಡುವ ಪ್ರಯತ್ನ ಮಾಡಿದೆ. ಭಾರತ ಎಂದಿನಂತೆ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ಕೊಟ್ಟರೆ ಅಮೇರಿಕಾ ಕೂಡ ನಮ್ಮ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ದರ್ದು ನಿಮಗೆ ಬೇಕಿಲ್ಲ ಎಂದು ಹೇಳಿಬಿಟ್ಟಿದೆ. ಚೀನಾದ ವಿಚಾರದಲ್ಲಿ ಅಮೇರಿಕಾ ಆಂತರಿಕ ಹಸ್ತಕ್ಷೇಪ ಮಾಡಿದೆ ಎಂದು ಬಾಯಿಬಡಕೊಂಡಿದ್ದ ಕಾಂಗ್ರೆಸ್ಸಿಗರು ಈಗೇಕೋ ಶಾಂತರಾಗಿಬಿಟ್ಟಿದ್ದಾರೆ. ಪ್ರತಿಭಟನೆ ಇರಲಿ, ಚೀನಾದ ವಿರುದ್ಧ ಒಂದು ಹೇಳಿಕೆ ಕೊಡುವ ಸಾಹಸವನ್ನೂ ಮಾಡಲಿಲ್ಲ. ಚೀನಾದಲ್ಲಿ ಮಳೆ ಬಿದ್ದರೆ ಇವರಿಗೆ ಥಂಡಿಯಾಗುತ್ತದೆ. ಆದರೆ ಭಾರತದಲ್ಲಿ ಮಂಜೇ ಸುರಿದರೂ ಇವರಿಗೆ ಅದು ತೊಂದರೆ ಕೊಡುವುದಿಲ್ಲ. ದುರ್ದೈವವಲ್ಲವೇನು? 

ಇರಲಿ. ಇವರೆಲ್ಲ ಇಷ್ಟು ಆರಾಧಿಸುವ ಚೀನಾ ಕಳೆದ ಎಂಟ್ಹತ್ತು ದಿನಗಳಿಂದ ಪಡಬಾರದ ಪಾಡು ಪಡುತ್ತಿದೆ. ನವೆಂಬರ್ ತಿಂಗಳ ಕೊನೆಯ ಭಾಗದ ವೇಳೆಗೆ ಶಿಂಜಿಯಾಂಗ್ ಪ್ರಾಂತ್ಯದ ಉರುಕ್ಮಿಯಲ್ಲಿ ಹತ್ತಾರು ಮನೆಗಳುಳ್ಳ ಅಪಾರ್ಟ್ ಮೆಂಟ್ ಒಂದಕ್ಕೆ ಬೆಂಕಿ ಹೊತ್ತಿಕೊಂಡು ಹತ್ತಕ್ಕೂ ಹೆಚ್ಚು ಮಂದಿ ತೀರಿಕೊಂಡರು. ಜನರ ಆಕ್ರೋಶಕ್ಕೆ ಕಾರಣವಾದ ಈ ಸಂಗತಿ ದಶಕಗಳಷ್ಟು ದೀರ್ಘಕಾಲದ ನಂತರ ಚೀನಿಯರನ್ನು ಪ್ರತಿಭಟನೆಯ ನೆಪದಲ್ಲಿ ಬೀದಿಗೆ ತಂತು. ಅಪಾರ್ಟ್‌ಮೆಂಟಿಗೆ ಬೆಂಕಿ ಹತ್ತಿಕೊಂಡರೆ ಪ್ರತಿಭಟನೆ ಮಾಡುವುದೇತಕ್ಕೆ ಎಂದು ಆಶ್ಚರ್ಯವಾಗಿರಬೇಕಲ್ಲವೇ? ಜೀರೊ ಕೋವಿಡ್‌ನ ಹುಚ್ಚಿಗೆ ಬಿದ್ದಿರುವ ಷಿ ಇಲ್ಲಿಂದ ಯಾರೊಬ್ಬರೂ ಆಚೆಗೆ ಬರದಿರುವಂತೆ ಹೊರಬಾಗಿಲಿಗೆ ಕಬ್ಬಿಣದ ರಾಡುಗಳಿಂದ ವೆಲ್ಡಿಂಗ್ ಮಾಡಿಸಿದ್ದರ ಪರಿಣಾಮ ಜನ ಅನಿವಾರ್ಯವಾಗಿ ಬೆಂಕಿಯಲ್ಲಿ ಬೇಯಬೇಕಾಗಿ ಬಂತು. ಜಗತ್ತಿನಾದ್ಯಂತ ಕೊವಿಡ್‌ನ ಸಂಕಟ ಇರಬಹುದೇನೋ ಎಂದೇ ಭಾವಿಸಿಕೊಂಡಿದ್ದ ಚೀನೀ ಮಂದಿಗೆ ಫುಟ್ಬಾಲ್ ವಿಶ್ವಕಪ್‌ನ ವೇಳೆಗೆ ಮುಖಕ್ಕೆ ಮಾಸ್ಕು ಕೂಡ ಧರಿಸದೇ ಓಡಾಡುತ್ತಿರುವ ಮಂದಿಯನ್ನು ಕಂಡು ಕಿರಿಕಿರಿ ಎನಿಸಿರಲು ಸಾಕು. ವರ್ಷ-ವರ್ಷಗಳೇ ಉರುಳಿದರೂ ಇನ್ನೂ ತಾವು ಕೋವಿಡ್‌ನ ಆತಂಕದಲ್ಲೇ ಬದುಕಬೇಕಾಯ್ತಲ್ಲ, ಮನೆಯಿಂದ ಹೊರಬರಲೂ ಸರ್ಕಾರದ ಅನುಮತಿ ಕೇಳಬೇಕಾಯ್ತಲ್ಲ ಎಂದವರಿಗೆ ಅನಿಸಿರಲು ಸಾಕು. ಕೊನೆಗೂ ಜನ ಬೀದಿಗೆ ಬಂದರು. ಲಾಕ್ಡೌನ್ ತೆಗೆಯಿರಿ ಎಂಬ ಘೋಷಣೆ ಕೂಗಲಾರಂಭಿಸಿದರು. ಪ್ರತಿಭಟನೆಯ ಕಾವು ಹಬ್ಬಲು ತುಂಬ ಸಮಯ ತೆಗೆದುಕೊಳ್ಳಲಿಲ್ಲ. ಶಾಂಘಾಯ್ ನವೆಂಬರ್ 26ಕ್ಕೆ ಬೀದಿಗೆ ಬಂತು. 2020ರಲ್ಲಿ ಹಾಂಗ್ ಕಾಂಗ್‌ನ ಮಂದಿ ಸರ್ಕಾರದ ದಮನ ನೀತಿಯ ವಿರುದ್ಧ ಪ್ರತಿಭಟನೆಗೆ ಖಾಲಿ ಕಾಗದ ಬಳಸಿದ್ದರಲ್ಲ ಅದೇ ಮಾದರಿಯನ್ನು ಇಲ್ಲಿಯೂ ಅನುಸರಿಸಲಾಯ್ತು. ಸರ್ಕಾರದ ವಿರುದ್ಧ ಘೋಷಣೆ ಇದ್ದರೆ ತಾನೇ ಜೈಲಿಗೆ ತಳ್ಳುವುದು? ಖಾಲಿಯ ಹಾಳೆಯನ್ನು ಅವರು ಏನೆಂದು ಗುರುತಿಸುತ್ತಾರೆ? ಈ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರ ಮರುದಿನವೇ ಭಾಗವಹಿಸಿದವರನ್ನು ಬಂಧಿಸಲುದ್ಯುಕ್ತವಾಯ್ತು. ಇದನ್ನು ಪ್ರತಿಭಟಿಸಿ ಬೀಜಿಂಗ್‌ನಲ್ಲಿ ಜನ ಬೀದಿಗಿಳಿದರು. ಪೀಕಿಂಗ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾದರು. ಈ ಬಾರಿ ಇದು ಬರಿ ಲಾಕ್ಡೌನ್ ತೆಗೆಯಿರಿ ಎಂಬುದಷ್ಟಕ್ಕೇ ಸೀಮಿತವಾಗದೇ ಷಿ ಜಿಂಪಿಂಗ್ ಅನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಆಗ್ರಹಿಸಲಾಯ್ತು ಕೂಡ. ಇದು ಅಧಿಕಾರಕ್ಕೆ ಬಂದಾಗಿನಿಂದಲೂ ಷಿಯ ಪಾಲಿಗೆ ಬಲುದೊಡ್ಡ ಹೊಡೆತ. ಲಾಂಗ್‌ಜೊವರೆಗೂ ಪ್ರತಿಭಟನೆಗಳು ಹಬ್ಬಿ ಮೊದಲ ಬಾರಿಗೆ ಚೀನಾದ ದಮನ ನೀತಿಯನ್ನು ಮೀರಿ ಸುದ್ದಿ ಜಗತ್ತಿನ ಮೂಲೆ-ಮೂಲೆಗೂ ತಲುಪಿತು. ಪ್ರತಿಭಟನೆಯ ವೇಳೆಯೇ ಇದರ ವರದಿ ಮಾಡುತ್ತಿದ್ದ ಬಿಬಿಸಿಯ ವರದಿಗಾರ ಎಡ್ವರ್ಡ್ ಲಾರೆನ್ಸ್ ನನ್ನು ಪೊಲೀಸರು ಮನಸೋ ಇಚ್ಛೆ ಬಡಿದರಲ್ಲದೇ ಆತನನ್ನು ಬಂಧಿಸಿ ಎಳೆದೊಯ್ದರೂ ಕೂಡ. ಹಾಂಗ್ ಕಾಂಗ್ ಶಾಂತವಾಗಿ ಚೀನಿಯರ ನೋವಿಗೆ ಬೆಂಬಲ ಸೂಚಿಸಿತು. ‘ನನಗೆ ಸ್ವಾತಂತ್ರ್ಯ ಕೊಡು, ಇಲ್ಲವೇ ಕೊಂದುಬಿಡು’ ಎನ್ನುವ ಮಾತು ಎಲ್ಲೆಡೆ ಕೇಳಿಬಂತು! 

ಚೀನಾದ ಜನ ಎಲ್ಲ ದಬ್ಬಾಳಿಕೆಯನ್ನೂ ಸಹಿಸಿಕೊಳ್ಳುತ್ತಾರೆ. ಭಾವನಾತ್ಮಕವಾಗಿ ಅವರನ್ನು ಸ್ವಲ್ಪ ಭಡಕಾಯಿಸಿದರೆ ಸಾಕು ಅವರಿಂದ ಬೇಕಾದ್ದನ್ನು ಮಾಡಿಸಿಕೊಳ್ಳಬಹುದು ಎಂಬ ಪರಿಸ್ಥಿತಿ ಇರುವಾಗ, ಅವರು ಬೀದಿಗೆ ಬಂದಿದ್ದಾದರೂ ಹೇಗೆ ಮತ್ತು ಏಕೆ ಎಂಬ ಪ್ರಶ್ನೆ ಸಹಜವೇ. ಇದಕ್ಕೆ ಕರೋನಾ ಎಂಬ ಮಹಾಮಾರಿಯೇ ಕಾರಣ ಎಂದರೆ ಅಚ್ಚರಿಯಲ್ಲ. ಕರೋನಾ ಆರಂಭವಾದಾಗ ಜಿರೊ ಕೊವಿಡ್ ಪಾಲಿಸಿಯನ್ನು ಜಾರಿಗೆ ತಂದ ಷಿ ಕಠೋರ ಕ್ರಮಗಳ ಮೂಲಕ ಜನರನ್ನು ಸಾಯದೇ ಉಳಿಸಿಕೊಂಡ. ಆರಂಭದಲ್ಲಿ ಜನ ಪ್ರತಿಭಟಿಸಿದರಾದರೂ ಕಾಲಕ್ರಮದಲ್ಲಿ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಉಂಟಾದ ಸಾವು ನೋವುಗಳನ್ನು ಕಂಡು, ತಮ್ಮ ಅಧ್ಯಕ್ಷರಿಗಿರುವ ಜನರ ಆರೋಗ್ಯದ ಕುರಿತ ಕಾಳಜಿಯನ್ನು ಕಂಡು ಅವರು ಮನಸೋತರು. ಚೀನಾದಲ್ಲಿ ಕೊವಿಡ್ ಸಾವು ಹೆಚ್ಚು-ಕಡಿಮೆ ನಗಣ್ಯವೇ ಆಗಿತ್ತು. ಆದರೆ ಈ ತಂತ್ರ ಜನರ ಬದುಕನ್ನು ಸುದೀರ್ಘಕಾಲ ದುರ್ಭರಗೊಳಿಸಿದಾಗ ಅವರು ತಿರುಗಿ ಬೀಳುವ ಸಾಧ್ಯತೆ ಇತ್ತಲ್ಲ ಅದನ್ನು ಗಾಲ್ವಾನ್‌ನಲ್ಲಿ ಸಾಹಸ ಮಾಡುವ ಮೂಲಕ ಮುಚ್ಚಿಕೊಳ್ಳುವ ಯತ್ನ ಮಾಡಿತು ಚೀನಾ. ಅವರ ದುರದೃಷ್ಟಕ್ಕೆ 40ಕ್ಕೂ ಹೆಚ್ಚು ಸೈನಿಕರನ್ನು ಕಳಕೊಂಡು ಮುಖಭಂಗ ಅನುಭವಿಸಿತು. ಆದರೆ ತಮ್ಮ ಜನರ ಮುಂದೆ ಯಾವ ಸೈನಿಕರೂ ತೀರಿಕೊಂಡಿಲ್ಲ ಎಂದು ಹೇಳುವ ಮೂಲಕ ಮಾನವುಳಿಸಿಕೊಳ್ಳುವ ಯತ್ನ ಮಾಡಿತ್ತು. ಈ ವೇಳೆಗೆ ಎವರ್‌ಗ್ರ್ಯಾಂಡ್ ಎಂಬ ರಿಯಲ್ ಎಸ್ಟೇಟ್ ಕಂಪೆನಿಯೊಂದು ಬೀದಿಗೆ ಬಂದು ಚೀನಾದ ಮೇಲ್ಮಧ್ಯಮ ಮತ್ತು ಮಧ್ಯಮವರ್ಗದ ಮಂದಿ ಕಣ್ಣೀರಿಡುವಂತಾಯ್ತು. ಕರೋನಾಕ್ಕಿಂತ ಮುಂಚೆ ಜನರಿಂದ ಮತ್ತು ಅನೇಕ ಬ್ಯಾಂಕುಗಳಿಂದ ಸಾಕಷ್ಟು ಸಾಲಪಡೆದು ಅಗಾಧವಾಗಿ ಬೆಳೆದುನಿಂತ ಎವರ್ ಗ್ರ್ಯಾಂಡ್ 200 ನಗರಗಳಲ್ಲಿ ಆಸ್ತಿಯನ್ನು ಮಾಡಿತು. ತನ್ನ ಶೇರುದಾರರಿಗೆ ಅಪಾರ ಪ್ರಮಾಣದ ಲಾಭ ಮಾಡಿಕೊಟ್ಟು ಭರವಸೆ ಮೂಡಿಸಿತು. ಕರೋನಾ ಲಾಕ್ಡೌನಿನ ನಂತರ ಮನೆಗಳ ಮಾರಾಟ ತೀವ್ರ ಪ್ರಮಾಣದಲ್ಲಿ ಕಡಿಮೆಯಾಯ್ತಲ್ಲ ಕಂಪೆನಿ ಸಾಕಷ್ಟು ನಷ್ಟ ಅನುಭವಿಸಿತು. ಚೀನಾದ ಬ್ಯಾಂಕುಗಳಿಂದ ಸಾಲ ಪಡೆಯಬಹುದಾದ ಮಿತಿಯನ್ನು ದಾಟಿದ್ದರಿಂದ ಅದಕ್ಕೀಗ ಹಣಕಾಸಿನ ಮುಗ್ಗಟ್ಟು ಕಂಡುಬಂತು. ಹೂಡಿಕೆದಾರರಿಗೆ ಕೊಡಬೇಕಾಗಿದ್ದ ಹಣದ ಬದಲು ಅರೆನಿರ್ಮಿತ ಮನೆಗಳನ್ನು ನೀಡಲಾರಂಭಿಸಿತು. ಹಣವೇ ಬೇಕು ಎಂದವರ ಮುಂದೆ ಕೈಚೆಲ್ಲಿ ನಿಂತುಬಿಟ್ಟಿತು. ಶೆನ್‌ಜೆನ್‌ನಲ್ಲಿ ಮುಖ್ಯ ಕಛೇರಿಯ ಎದುರಿಗೆ ದೊಡ್ಡಮಟ್ಟದ ಜನ ಬೀದಿಗೆ ಬಂದುನಿಂತರು. ಈ ಕಂಪೆನಿಯ ಒಟ್ಟು ಸಾಲ ಎಷ್ಟಿತ್ತು ಗೊತ್ತೇನು? ಒಂದು ಅಂದಾಜಿನ ಪ್ರಕಾರ 88 ಬಿಲಿಯನ್ ಡಾಲರ್ಗಳಷ್ಟು! ಕಳೆದ ಜೂನ್ ತಿಂಗಳಿಗೆ ಕಟ್ಟಬೇಕಿದ್ದ ಬಡ್ಡಿಯೇ 80 ಮಿಲಿಯನ್ ಡಾಲರ್ ಗಳಿಗಿಂತ ಹೆಚ್ಚಿತ್ತು. ಎವರ್ ಗ್ರ್ಯಾಂಡ್ ನ ಈ ಪರಿಸ್ಥಿತಿಯಿಂದಾಗಿ ಚೀನಾದಲ್ಲಿ ಒಟ್ಟಾರೆ ಮನೆಗಳ ಬೆಲೆಯೇ ಶೇಕಡಾ 20ರಷ್ಟು ಕುಸಿಯಿತು. ಎಲ್ಲ ರಿಯಲ್ ಎಸ್ಟೆಟ್ ಕಂಪೆನಿಗಳ ಶೇರು ಮೌಲ್ಯ ಪಾತಾಳಕ್ಕೆ ಹೋಯ್ತು. ಎಲ್ಲಕ್ಕಿಂತ ದೊಡ್ಡ ನಷ್ಟ ಅನುಭವಿಸಿದ್ದು ತಮ್ಮೆಲ್ಲ ಬದುಕಿನ ಹಣವನ್ನು ಈ ಕಂಪೆನಿಯೊಳಗೆ ಹೂಡಿದ್ದ ದೊಡ್ಡಮಟ್ಟದ ಮಧ್ಯಮವರ್ಗದ ಮಂದಿ!

ಚೀನಾದ ಪರಿಸ್ಥಿತಿಯು ಇದಕ್ಕಿಂತ ಭಿನ್ನವಾಗಿರಲಿಲ್ಲ. ಜಾಗತಿಕ ಮಟ್ಟದಲ್ಲಿ ಅದರ ಸಾಲ 8 ಟ್ರಿಲಿಯನ್ ಡಾಲರುಗಳಷ್ಟಾಗಿತ್ತು. ಒನ್ ಬೆಲ್ಟ್ ಒನ್ ರೋಡ್ ನೆಪದಲ್ಲಿ ಅದರ ಒಂದು ಟ್ರಿಲಿಯನ್ ಡಾಲರ್ ನಷ್ಟು ಹಣ ಸಿಕ್ಕುಹಾಕಿಕೊಂಡು ಕೂತಿತ್ತು. ಕರೋನಾ ನಂತರ ಪಶ್ಚಿಮದ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿದ್ದರಿಂದ ಮತ್ತಷ್ಟು ಹೊಡೆತ ಬಿದ್ದಿತ್ತು. ಇತ್ತ ಗಡಿಯಲ್ಲಿ ಭಾರತದೊಂದಿಗೆ ಖ್ಯಾತೆ ತೆಗೆದು ತನ್ನ ಸೈನಿಕರನ್ನು ಕರೆತಂದು ನಿಲ್ಲಿಸಿಕೊಂಡಿತ್ತಲ್ಲ, ಭಾರತವೂ ಈ ಬಾರಿ ಅಷ್ಟೇ ಗಟ್ಟಿಯಾಗಿ ತಳವೂರಿದ್ದರಿಂದ ಸೈನ್ಯದ ಖರ್ಚು-ವೆಚ್ಚವೂ ಊಹಿಸಲಾರದಷ್ಟಾಗಿತ್ತು. ಒಂದೆಡೆ ಕ್ಷಾಮ ಮತ್ತೊಂದೆಡೆ ಪ್ರವಾಹ, ಧಾನ್ಯ ದಾಸ್ತಾನನ್ನು ಶೇಕಡಾ 50ರಷ್ಟು ತಿಂದುಹಾಕಿತ್ತು. ಒಂದೆಡೆ ಕುಸಿಯುತ್ತಿರುವ ಕೈಗಾರಿಕೆ ಉತ್ಪನ್ನಗಳು, ಮತ್ತೊಂದೆಡೆ ಏರುತ್ತಿರುವ ನಿರುದ್ಯೋಗ ಚೀನಾವನ್ನು ಒಳಗಿಂದೊಳಗೇ ತಿನ್ನುತ್ತಿತ್ತು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಕಮ್ಯುನಿಸ್ಟ್ ಪಾರ್ಟಿಯ ವಾರ್ಷಿಕ ಸಭೆಯಲ್ಲಿ ತನ್ನ ಅವಧಿ ವಿಸ್ತಾರವನ್ನು ದೃಢಪಡಿಸಿಕೊಂಡ ಷಿ ಮತ್ತೆ ಜಿರೊಕೊವಿಡ್ ಪಾಲಿಸಿಯನ್ನು ಜಾರಿಗೆ ತಂದ. ಮೊದಲ ಬಾರಿಗೆ ಈ ನೀತಿಯಿಂದಾಗಿ ಲಕ್ಷಾಂತರ ಮಂದಿಯ ಜೀವ ಉಳಿದಿರುವುದನ್ನು ಜನ ಮೆಚ್ಚಿದ್ದರು. ಆದರೆ ಈಗ ಜಗತ್ತೆಲ್ಲ ತಮ್ಮ ಚಟುವಟಿಕೆಗೆ ಮರಳಿರುವಾಗ ತಾವಿನ್ನು ಮನೆಗಳಲ್ಲಿ ತಮ್ಮ ತಾವು ಬಂಧಿಸಿಕೊಂಡು ಕುಳಿತಿರುವುದನ್ನು ಚೀನಿಯರಿಂದ ಸಹಿಸಲಾಗಲಿಲ್ಲ. ಶೂನ್ಯ ಕೋವಿಡ್ ಎಂಬುದೊಂದು ಕಟ್ಟುಕಥೆ ಎಂದು ಜಗತ್ತಿನ ವಿಜ್ಞಾನಿಗಳೆಲ್ಲ ಹೇಳುತ್ತಿರುವುದು ಈಗ ಅವರಿಗೆ ಸತ್ಯವೆನಿಸುತ್ತಿದೆ. ಡಾ. ಪಾಲ್ ಹಂಟರ್ ಚೀನಾದ ಕೊವಿಡ್ ಲಸಿಕೆ ಪ್ರಭಾವಿಯಾಗಿಲ್ಲ ಎಂದು ಹಿಂದೆಯೇ ಹೇಳಿದ್ದು ಈಗ ಸತ್ಯವೆನಿಸುತ್ತಿದೆ. ಎಡಿನ್ಬರ್ಗ್ ವಿಶ್ವವಿದ್ಯಾಲಯದ ಪ್ರೊ. ದೇವಿಶ್ರೀಧರ್ ’80 ದಾಟಿರುವ ಚೀನಾದ ವೃದ್ಧರಲ್ಲಿ ಶೇಕಡಾ 40 ಮಂದಿಗೆ ಮಾತ್ರ ಬೂಸ್ಟರ್ ಲಸಿಕೆ ದೊರೆತಿರುವುದರಿಂದ ಭವಿಷ್ಯದ ದಿನಗಳು ಭಯಾನಕವಾಗಿದೆ’ ಎಂದಿದ್ದರಲ್ಲದೇ ಮಿಲಿಯನ್ಗಟ್ಟಲೆ ಮಂದಿ ಚೀನಾದಲ್ಲಿ ಇದುವರೆಗೂ ವ್ಯಾಕ್ಸಿನ್ ಪಡೆದುಕೊಂಡಿಲ್ಲ ಎಂದೂ ಎಚ್ಚರಿಸಿದ್ದರು. ಲಾಕ್ಡೌನಿನಲ್ಲಿ ಇದ್ದಷ್ಟೂ ದಿನ ವೈರಸ್‌ಗೆ ಅವರು ತಮ್ಮತಾವು ತೆರೆದುಕೊಂಡಿರಲಿಲ್ಲ. ಈಗ ಮನೆಯಿಂದ ಹೊರಬರುತ್ತಿದ್ದಂತೆ ಮತ್ತೆ ವೈರಸ್ ಆಕ್ರಮಿಸಿಕೊಳ್ಳುತ್ತಿದೆ. ಆಹಾರ ದಾಸ್ತಾನು ಕಡಿಮೆ ಇರುವುದರಿಂದ ಈ ಬಾರಿಯ ನಿರ್ವಹಣೆ ಅಷ್ಟು ಸುಲಭವಾಗಿಲ್ಲ. ಮೊದಲ ಬಾರಿ ಕೊವಿಡ್ ಬಂದಾಗಲೇ ಪ್ರತಿಯೊಬ್ಬ ವ್ಯಕ್ತಿಯ ಹೆಸರಲ್ಲೂ ಕ್ಯುಆರ್ ಕೋಡ್ ಜನರೇಟ್ ಮಾಡಲಾಗಿತ್ತು. ಅದು ನಮ್ಮ ಆರೋಗ್ಯ ಸೇತು ಆ್ಯಪ್‌ಗಿಂತಲೂ ಭಿನ್ನವಾದ್ದು. ಮಾಲ್‌ಗೆ ಹೋಗಬೇಕಾಗಲೀ ಅಥವಾ ರೈಲು ಹತ್ತಿ ಪಕ್ಕದೂರಿಗಾದರೂ ಸರಿ ಎಲ್ಲೆಡೆ ಬಾಗಿಲು ತೆರೆದುಕೊಳ್ಳಬೇಕೆಂದರೆ ಕ್ಯುಆರ್ ಕೋಡ್ ಅನ್ನು ಯಂತ್ರಕ್ಕೆ ಹಿಡಿಯಲೇಬೇಕು. ಅಲ್ಲೇನಾದರೂ ಬಣ್ಣ ಕೆಂಪು ಬಂತೆಂದರೆ ಆ ಬಾಗಿಲು ನಿಮಗೆ ತೆರೆಯಲ್ಪಡುವುದೇ ಇಲ್ಲ. ಬದಲಿಗೆ ಅದು ಜೋರಾಗಿ ಸದ್ದು ಮಾಡಿ, ನಿಮ್ಮಿಂದ ಇತರರು ದೂರ ಓಡುವಂತೆ ಮಾಡುತ್ತದಲ್ಲದೇ ಕೊವಿಡ್ ಪೊಲೀಸರು ಬಂದು ನಿಮ್ಮನ್ನು ಬಂಧಿಸಲು ಅನುಕೂಲ ಮಾಡಿಕೊಡುತ್ತದೆ. ಒಮ್ಮೆ ಅವರು ಬಂಧಿಸಿದರೆಂದರೆ ನೀವು ಮುಂದಿನ ಒಂದು ತಿಂಗಳ ಕಾಲ ಅಥವಾ ಕ್ಯುಆರ್ ಕೋಡ್ ನಲ್ಲಿ ಬಣ್ಣ ಹಸಿರಿಗೆ ತಿರುಗುವವರೆಗೂ ನರಕ ಯಾತನೆ ಅನುಭವಿಸಲೇಬೇಕು. ಇನ್ನೂ ವಿಚಿತ್ರವೇನು ಗೊತ್ತೇ? ನಿಮಗೆ ಅರಿವಿಲ್ಲದೇ ಕ್ಯುಆರ್ ಕೋಡ್ ನಲ್ಲಿ ಕೆಂಪು ಬಣ್ಣ ಇದ್ದವನೊಂದಿಗೆ ನೀವು ಹತ್ತು ನಿಮಿಷ ಮಾತನಾಡಿದರೂ ನಿಮ್ಮ ಕ್ಯುಆರ್ ಕೋಡ್ ಕೆಂಪು ಬಣ್ಣಕ್ಕೆ ತಿರುಗಿಬಿಡುತ್ತದೆ. ಅಲ್ಲಿಗೆ ನೀವು ಸತ್ತಂತೆ. ಹೀಗಾಗಿಯೇ ಒಬ್ಬರ ಕ್ಯುಆರ್ ಕೋಡ್ ಕೆಂಪಾಗಿದೆ ಎಂಬ ಸದ್ದು ಬಂದೊಡನೆ ಉಳಿದ ಮಂದಿ ಅವನಿಂದ ದೂರವೋಡಲಾರಂಭಿಸುತ್ತಾರೆ. ಹೆಚ್ಐವಿ ಎನ್ನುವುದರ ಕುರಿತಂತೆ ತಪ್ಪು ಕಲ್ಪನೆಗಳಿದ್ದಾಗಲೂ ಭಾರತದಲ್ಲಿ ಮಂದಿ ಹೀಗೆ ನಡೆದುಕೊಂಡಿರಲಿಲ್ಲ. ಚೀನಾದಲ್ಲಿ ಜನರ ಆಕ್ರೋಶ ಈ ಕಾರಣಕ್ಕಾಗಿ ದಿನೇ ದಿನೇ ಹೆಚ್ಚುತ್ತಿದೆ!

ಜನ ಬೀದಿಗೆ ಬರಲು ಕಾರಣ ಇದೇ. ಇನ್ನೂ ಅಚ್ಚರಿಯ ಸಂಗತಿ ಏನು ಗೊತ್ತೇ? ಸರ್ಕಾರ ತನ್ನ ಬಳಿಯಿರುವ ಡಾಟಾ ಬಳಸಿ ತನ್ನ ವಿರೋಧಿಯ ಕ್ಯುಆರ್ ಕೋಡ್ ಕೆಂಪಾಗುವಂತೆ ಸಲೀಸಾಗಿ ಮಾಡಿಬಿಡಬಲ್ಲದು. ಅಲ್ಲಿಗೆ ನಿಮ್ಮನ್ನು ಕೊಲ್ಲಬೇಕೆಂದು ಷಿ ನಿಶ್ಚಯಿಸಿದರೆ ಆತನ ಪಾಲಿಗೆ ಅದು ಕಂಪ್ಯೂಟರ್ನಲ್ಲಿ ಒಂದು ಕ್ಲಿಕ್ ಮಾತ್ರ! 

ಯಾವುದಕ್ಕೂ ಮಣಿಯದ ಚೀನೀ ಆಡಳಿತ ಪಡೆ ಮೊದಲ ಬಾರಿಗೆ ಕೊವಿಡ್ ನಿಯಮಗಳನ್ನು ಸಡಿಲಗೊಳಿಸುವ ಮಾತನಾಡುತ್ತಿದೆ. ಹಾಗೇನಾದರೂ ಆತ ಪೂರ್ಣ ಸಡಿಲಿಸಿದ್ದೇ ಆದರೆ ಕನಿಷ್ಠ ಪಕ್ಷ ಎರಡು ಮಿಲಿಯನ್ ಮಂದಿ ಅದಕ್ಕೆ ಆಹುತಿಯಾಗಲಿದ್ದಾರೆ ಎಂಬ ಆತಂಕವನ್ನು ಜಗತ್ತು ವ್ಯಕ್ತಪಡಿಸುತ್ತಿದೆ. ಏನಾಗುವುದೆಂದು ಕಾದು ನೋಡಬೇಕಷ್ಟೇ! ಜನರ ಗಮನವನ್ನು ಆತನಿಗೆ ಬೇರೆಡೆ ಸೆಳೆಯಲು ಇರುವುದೊಂದೇ ಮಾರ್ಗ. ಯಾರೊಂದಿಗಾದರೂ ಕಾಲು ಕೆರಕೊಂಡು ಜಗಳಕ್ಕೆ ಹೋಗಬೇಕು. ಚೀನೀ ಜನರ ಭಾವನೆಯನ್ನು ಕೆರೆಯಬೇಕು. ಅದಾಗಲೇ ಗಾಲ್ವಾನಿನಲ್ಲಿ ಭಾರತ ಸರಿಯಾದ ತಪರಾಕಿ ಕೊಟ್ಟಿದೆ. ಜಪಾನ್ ರಕ್ಷಣಾ ಬಜೆಟ್ ಅನ್ನು ದುಪ್ಪಟ್ಟುಗೊಳಿಸಿದೆ. ಇನ್ನು ಅದಕ್ಕಿರುವುದು ತೈವಾನ್ ಒಂದೇ. ಮುಂದಿನ ದಿನಗಳಲ್ಲಿ ನಾವು ತೈವಾನ್ನತ್ತ ಏರಿಹೋಗುವ ಅಥವಾ ಆಂತರಿಕವಾಗಿ ಕುಸಿದುಹೋಗುವ ಚೀನಾ ನೋಡಬಹುದೆನಿಸುತ್ತದೆ! 

ಅಂದಹಾಗೆ, ಇವೆಲ್ಲದರ ನಡುವೆ ಕಾಣೆಯಾಗಿರುವುದು ಮಾತ್ರ ಸಿದ್ದರಾಮಯ್ಯನವರು..

ಮೋದಿ ಮ್ಯಾಜಿಕ್ಕಿನ ಭ್ರಮೆಯಲ್ಲಿರುವ ಕರ್ನಾಟಕ ಬಿಜೆಪಿ! 

ಮೋದಿ ಮ್ಯಾಜಿಕ್ಕಿನ ಭ್ರಮೆಯಲ್ಲಿರುವ ಕರ್ನಾಟಕ ಬಿಜೆಪಿ! 

ಎರಡು ರಾಜ್ಯಗಳ ಚುನಾವಣೆ ಮತ್ತು ದೆಹಲಿಯ ಮುನ್ಸಿಪಾಲಿಟಿ ಚುನಾವಣೆಯ ಫಲಿತಾಂಶ ಅಚ್ಚರಿಗೆ ನೂಕಿದೆಯಷ್ಟೇ ಅಲ್ಲದೇ ಎಲ್ಲ ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ಬುಡಮೇಲುಗೊಳಿಸಿದೆ. ಈ ಗೆಲುವಿನ ಧಾವಂತದಲ್ಲಿ ನಾವೆಲ್ಲರೂ ಟಿವಿ ಚಾನೆಲ್ಲುಗಳಲ್ಲಿ ಗಂಟೆಗಟ್ಟಲೆ ಕೊರೆದ ಎಕ್ಸಿಟ್ ಪೋಲ್ಗಳನ್ನು ಮರೆತೇಬಿಟ್ಟಿದ್ದೇವೆ. ಎಲ್ಲರಿಗಿಂತಲೂ ಸ್ಪಷ್ಟ ಮತ್ತು ನಿಖರ ತಾವೆಂದೇ ಹೇಳಿಕೊಳ್ಳುವ ಚಾನೆಲ್ಲುಗಳೆಲ್ಲ ಫಲಿತಾಂಶ ಬಂದಾಗ ಗೆದ್ದವರನ್ನು ಹೊಗಳುತ್ತಲೇ ತಮ್ಮ ಮೂರ್ಖತನವನ್ನು ಮರೆಮಾಚಿಬಿಡುತ್ತಾರೆ. ಈ ಬಾರಿಯಂತೂ ಯಾವ ಚಾನೆಲ್ಲೂ ಮೂರೂ ಚುನವಾವಣೆಯನ್ನು ಸಮರ್ಥವಾಗಿ ಊಹಿಸುವಲ್ಲಿ ಯಶಸ್ವಿಯಾಗಲಿಲ್ಲ. ದೆಹಲಿಯಲ್ಲಿ ಬಿಜೆಪಿಗೆ ಹೀನಾಯ ಸೋಲು ಎಂದವರು, ಬಿಜೆಪಿಯ ಮತ ಗಳಿಕೆಯ ಪ್ರಮಾಣ ವೃದ್ಧಿಯಾಗಿರುವುದನ್ನು ಕಂಡು ಹಣೆಬಡಿದುಕೊಂಡರು. ಇತ್ತ ಗುಜರಾತ್ ನಲ್ಲಿ ಬಿಜೆಪಿಗೆ ಆಮ್ ಆದ್ಮಿ ಪಾರ್ಟಿ ಸವಾಲಾಗಬಹುದೆಂದು ಭಾವಿಸಿದ ಎಲ್ಲರೂ ಅದು ಹೆಚ್ಚು ಸ್ಥಾನಗಳನ್ನು ಗಳಿಸುವುದಿಲ್ಲವಾದರೂ ಬಿಜೆಪಿಯ ಮತಗಳಿಕೆಗೆ ಕೊಳ್ಳಿ ಇಡುತ್ತದೆ ಎಂದೇ ಭಾವಿಸಿದ್ದರು. ಅದೂ ಉಲ್ಟಾ ಹೊಡೆಯಿತು. ಕಾಂಗ್ರೆಸ್ಸು ಊಹಿಸಲಾಗದಷ್ಟು ಪಾತಾಳಕ್ಕಿಳಿದು ಬಿಜೆಪಿಯ ಗೆಲುವನ್ನು ಸಲೀಸು ಮಾಡಿಬಿಟ್ಟಿತು. ಹಿಮಾಚಲ ಪ್ರದೇಶದಲ್ಲಿ ಇಷ್ಟೊಂದು ಹೊಡೆತವನ್ನು ಬಿಜೆಪಿ ಊಹಿಸಲೂ ಸಾಧ್ಯವಿರಲಿಲ್ಲ. ಯಾವುದನ್ನು ದೆಹಲಿಯ ಚುನಾವಣೆಯಲ್ಲಿ ಕಾಣಬೇಕಿತ್ತೋ ಅದನ್ನು ಬಿಜೆಪಿ ಹಿಮಾಚಲ ಪ್ರದೇಶದಲ್ಲಿ ಕಂಡಿತು. ಅಚ್ಚರಿ ಎಂದರೆ ಯಾವೊಂದು ಚುನಾವಣೋತ್ತರ ಸಮೀಕ್ಷೆಯೂ ಈ ಮೂರನ್ನು ನಿಖರವಾಗಿ ಊಹಿಸುವಲ್ಲಿ ಯಶಸ್ವಿಯಾಗಲಿಲ್ಲ! ವೈಜ್ಞಾನಿಕವಾಗಿ ತಾವು ಲೆಕ್ಕ ಹಾಕುತ್ತೇವೆ ಎಂದು ಇವರು ಬಿಡುವುದು ಬೊಗಳೆಯಷ್ಟೇ ಎಂಬುದು ಎಂಥವನಿಗೂ ಈಗ ಅರಿವಾಗಿದೆ. ಗುಜರಾತಿನಲ್ಲಿ ಬಿಜೆಪಿ 115 ರಿಂದ 150 ಸ್ಥಾನಗಳವರೆಗೆ ಗೆಲ್ಲಬಹುದು ಎಂದು ಊಹಿಸುವ ಪುಣ್ಯಾತ್ಮನನ್ನು ಯಾವ ಲೆಕ್ಕಕ್ಕೆ ಪಂಡಿತನೆನ್ನಬೇಕೋ ಗೊತ್ತಾಗುವುದಿಲ್ಲ. ಪ್ರಧಾನಮಂತ್ರಿಯಿಂದ ಹಿಡಿದು ಸ್ಥಳೀಯ ಬಿಜೆಪಿ ಕಾರ್ಯಕರ್ತನವರೆಗೆ ಎಲ್ಲರೂ ಸೇರಿ ಏಕರಸವಾದ ಹೋರಾಟ ಮಾಡಿದ್ದನ್ನು ನೋಡಿದರೆ ಬಿಜೆಪಿಯ ಗೆಲುವು ನಿಶ್ಚಯವೆಂದು ಎಂಥವನೂ ಹೇಳಬಹುದಾಗಿತ್ತು. ಆದರೆ ಈ ಗೆಲುವಿನ ಅಂತರ ಸುಮಾರು 115 ರಿಂದ 150 ಸೀಟುಗಳವರೆಗೆ ಇರಬಹುದು ಎಂಬ 35 ಸೀಟುಗಳ ವ್ಯತ್ಯಾಸವನ್ನು ಕೊಡುವುದಿದೆಯಲ್ಲ, ಅದು ನಮ್ಮೂರಿನ ಅರಳಿಕಟ್ಟೆಯ ಮೇಲೆ ಕುಳಿತವನೂ ಮಾಡಬಲ್ಲ. ದುರಂತವೆಂದರೆ, ಈ ಮಾಧ್ಯಮಗಳು ಇದಕ್ಕೋಸ್ಕರ ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡುತ್ತವಲ್ಲದೇ ಜನರ ಭಾವನೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನವನ್ನೂ ಮಾಡುತ್ತವೆ. ಇಷ್ಟಕ್ಕೂ ಇವರೆಲ್ಲ ಸೋತಿರುವುದೆಲ್ಲಿ ಗೊತ್ತೇ? ಎಲೆಕ್ಷನ್ ರ್ಯಾಲಿಗಳನ್ನು ನೋಡಿ ಅದರ ಆಧಾರದ ಮೇಲೆ ಜನ ವೋಟು ಹಾಕುತ್ತಾರೆ ಎಂದು ನಿರ್ಧರಿಸಿರುವುದರಲ್ಲಿ. ಐದು ವರ್ಷಗಳ ನಂತರ ಬೂತಿಗೆ ಹೋಗಿ ವೋಟು ಹಾಕುವ ಮನುಷ್ಯ ತನ್ನದ್ದೇ ಆದ ಆಲೋಚನೆ ಹೊಂದಿರುತ್ತಾನೆ. ಆತ ಬಚ್ಚಿಟ್ಟುಕೊಂಡಿರುವ ಈ ವಿಚಾರವನ್ನು ಮಾಧ್ಯಮದವರ ಮುಂದೆ ಬಿಚ್ಚಿಡಬೇಕೆಂದೇನೂ ಇಲ್ಲ. ಬೃಹತ್ ರ್ಯಾಲಿಗಳು ಗೆಲ್ಲುವ ಅಂತರವನ್ನು ಹೆಚ್ಚಿಸಬಹುದಷ್ಟೆ. ಆದರೆ ಯಾರಿಗೆ ಮತ ಹಾಕಬೇಕೆಂಬುದು ಪೂರ್ವ ನಿರ್ಧರಿತವೇ. ಗುಜರಾತಿನಲ್ಲಿ ಇರುವ 182 ಸೀಟುಗಳಲ್ಲಿ ಮೋದಿ ಪಕ್ಷ ಗೆದ್ದಿರುವುದು 156. ಸುಮಾರು 86 ಪ್ರತಿಶತದಷ್ಟು ಸೀಟುಗಳನ್ನು ಬಿಜೆಪಿಯೊಂದೇ ಬಾಚಿಕೊಂಡಿದೆ. ಅತ್ಯಂತ ಪುರಾತನ ಪಕ್ಷವೆಂದು ತಮ್ಮನ್ನು ತಾವು ಕರೆದುಕೊಳ್ಳುವ ಕಾಂಗ್ರೆಸ್ಸಿಗೆ ಪ್ರತಿಪಕ್ಷ ಸ್ಥಾನ ಗಳಿಸಿಕೊಳ್ಳಲೂ ಒಂದು ಸೀಟಿನ ಕೊರತೆಯಿದೆ. ಅವರೀಗ ಸರ್ಕಾರ ಮಾಡಲಿಕ್ಕಲ್ಲ, ಪ್ರತಿಪಕ್ಷ ಸ್ಥಾನ ಪಡೆಯಲೂ ಪಕ್ಷೇತರರಿಗೆ ಕೈ ಮುಗಿಯಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದರೆ ಈ ಪರಿಯ ಉತ್ಪಾಟನೆಯನ್ನು ಊಹಿಸಲು ಸಾಧ್ಯವಿತ್ತೇನು? ಕಳೆದ ಬಾರಿ ಕಾಂಗ್ರೆಸ್ಸಿಗೆ 77 ಸೀಟುಗಳು ದೊರೆತಿದ್ದವು. ಎರಡೂವರೆ ದಶಕದಿಂದ ಅಧಿಕಾರದಲ್ಲಿದ್ದ ಭಾಜಪದ ವಿರುದ್ಧ ಅದು ಎಡವಿದ್ದಾದರೂ ಎಲ್ಲಿ ಎಂಬ ಆಂತರಿಕ ಚರ್ಚೆ ನಡೆಯುವುದು ಬೇಡವೇನು? 

ಸ್ವಾತಂತ್ರ್ಯ ಬಂದ ಲಾಗಾಯ್ತು ಸ್ವಾತಂತ್ರ್ಯ ಕೊಡಿಸಿದವರು ತಾವೇ ಎಂಬ ಭ್ರಮೆಯನ್ನು ಜನರಲ್ಲಿ ಬಿತ್ತಿ ಅದರ ಲಾಭವನ್ನೇ ಉಣ್ಣುತ್ತಾ ಬಂದಿತ್ತು ಕಾಂಗ್ರೆಸ್ಸು. ಹೀಗಾಗಿಯೇ ಮನೆಯಲ್ಲಿ ವೃದ್ಧರೆಂಬುವವರು ಇದ್ದರೆ ಅವರು ಮತ ಹಾಕೋದು ಕೈಗೇ. ಅದು ಸ್ವಾತಂತ್ರ್ಯದ ಭ್ರಮೆ ತಲೆ ಹೊಕ್ಕಿರುವ ಪರಿಣಾಮ. ಈ ಅಡಗೂಲಜ್ಜಿಯ ಕಥೆಯನ್ನು ಕೇಳಲು ಇಂದಿನ ತರುಣ ತಯಾರಿಲ್ಲ. ಅವನು ಕಾಂಗ್ರೆಸ್ಸಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಾನೆ. ಸರದಾರ್ ಪಟೇಲರಿಗೆ ಪ್ರಧಾನಿ ಪಟ್ಟ ಸಿಗಲಿಲ್ಲವೇಕೆ? ಬಾಬಾಸಾಬೇಹ್ ಅಂಬೇಡ್ಕರರಿಗೆ ಭಾರತರತ್ನ ನೀಡಲು 1990ರವರೆಗೆ ಕಾಯಬೇಕಾಗಿತ್ತು ಏಕೆ? ಸೋಮನಾಥ ಮಂದಿರ ಪುನರ್ನಿರ್ಮಿಸಲು ನೆಹರೂ ವಿರೋಧ ವ್ಯಕ್ತಪಡಿಸಿದ್ದು ಏಕೆ? ರಾಮಮಂದಿರವನ್ನು ಸ್ವಾತಂತ್ರ್ಯದ ಹೊಸ್ತಿಲಲ್ಲೇ ಮರಳಿ ಪಡೆಯಬಹುದಾಗಿದ್ದರೂ ಅದನ್ನು ಸುದೀರ್ಘಕಾಲ ತಳ್ಳಿಕೊಂಡು ಬಂದದ್ದು ಏಕೆ? ಕಾಶ್ಮೀರವನ್ನು ಭಾರತದೊಂದಿಗೆ ಏಕರಸಗೊಳಿಸುವುದು ಬಲು ಸುಲಭವಿದ್ದಾಗ್ಯೂ ಯಾರ ತೆವಲಿಗಾಗಿ ಅದನ್ನು ಪ್ರತ್ಯೇಕವಾಗಿ ಉಳಿಸಲಾಯ್ತು? ಯಾರ ಕಾರಣದಿಂದಾಗಿ ದಕ್ಷಿಣ ಮತ್ತು ಉತ್ತರಗಳು ಇಂದಿಗೂ ಒಂದಾಗದೇ ಉಳಿದಿವೆ? ಅನೇಕ ಪ್ರಶ್ನೆಗಳು ತರುಣರ ಮನಸ್ಸಿನಲ್ಲಿ ಗಿರಕಿ ಹೊಡೆಯುತ್ತಲೇ ಇವೆ. ಕಾಂಗ್ರೆಸ್ಸು ಇವುಗಳಿಗೆ ಸುಲಭಕ್ಕೆ ಉತ್ತರ ಕೊಡಲಾರದು. ಅದರಲ್ಲೂ ಜಾತಿ-ಮತ-ಪಂಥಗಳನ್ನು ಮೀರಿ ರಾಷ್ಟ್ರೀಯವಾದದ ಆಲೋಚನೆ ಮಾಡುವ ತರುಣರನ್ನೆದುರಿಸುವುದಂತೂ ಕಾಂಗ್ರೆಸ್ಸಿಗೆ ಸಾಧ್ಯವಾಗದ ಮಾತು. ಹೀಗಾಗಿಯೇ ಗುಜರಾತ್ ಕದನ ಶುರುವಾಗುವ ಮುನ್ನವೇ ಕಾಂಗ್ರೆಸ್ಸು ನಿಂತನೆಲ ಬಿಟ್ಟೋಡಿತು. ಇಲ್ಲವಾದಲ್ಲಿ ಭಾರತ್ ಜೊಡೊ ಯಾತ್ರೆ ಗುಜರಾತಿನ ಚುನಾವಣೆಯ ವೇಳೆ ಕರ್ನಾಟಕದಲ್ಲೇಕೆ ನಡೆಯಬೇಕಿತ್ತು? ಆದರೆ ಒಂದಂತೂ ಸತ್ಯ. ರಾಹುಲ್ ಚುನಾವಣಾ ಪ್ರಚಾರಕ್ಕೆ ಗುಜರಾತಿಗೆ ಹೋಗದೇ ಈ ಹೀನಾಯ ಸೋಲಿನ ಕಿರೀಟವನ್ನು ತಮ್ಮ ತಲೆಯಿಂದ ಕೊಡವಿಕೊಂಡುಬಿಟ್ಟರು. ಪಾಪ, ಖರ್ಗೆಯವರು ಹರಕೆಯ ಕುರಿಯಾಗಿಬಿಟ್ಟರು! 

ದೂರದಿಂದ ನೋಡಿದರೆ ಹೀಗೆ ಕಾಂಗ್ರೆಸ್ಸಿಗೆ ಪ್ರಶ್ನೆ ಕೇಳುವ ಮಂದಿಯನ್ನು ಹೊಸತನದಿಂದ ಸಂಭಾಳಿಸಬಲ್ಲ ಸಾಮರ್ಥ್ಯ ಅರವಿಂದ್ ಕೇಜ್ರಿವಾಲರಿಗಿದೆ ಎಂಬುದು ಕಾಂಗ್ರೆಸ್ಸಿನ ಲೆಕ್ಕಾಚಾರವಾಗಿತ್ತೆನಿಸುತ್ತದೆ. ಅದಕ್ಕೆ ಚುನಾವಣೆಯ ಅಷ್ಟೂ ಹೋರಾಟದ ಹೊಣೆಯನ್ನು ಆಮ್ಆದ್ಮಿ ಪಾರ್ಟಿಯ ಹೆಗಲಿಗೇರಿಸಿ ಕಾಂಗ್ರೆಸ್ಸು ಜಾರಿಕೊಂಡಿತು. ದೆಹಲಿಯಲ್ಲಿ ಮಾಡಿದಂತೆ ಇಲ್ಲಿಯೂ ಮತಗಳ ವಿಭಜನೆಯಾಗದಂತೆ ನೋಡಿಕೊಂಡು ಬಿಜೆಪಿಗೆ ಹೊಡೆತ ಕೊಡಬೇಕೆಂಬುದು ಅವರ ಗುಪ್ತ ಲೆಕ್ಕಾಚಾರ. ಆದರೆ ಗುಜರಾತಿನ ಮತದಾರ ಪಕ್ಕಾ ವ್ಯಾಪಾರಿ. ಆತ ಅರವಿಂದ್ ಕೇಜ್ರಿವಾಲರ ಸುಳ್ಳುಗಳನ್ನು ಕೇಳಿ-ಕೇಳಿ ಬೇಸತ್ತು ಹೋಗಿದ್ದ. ಉಚಿತ ಕೊಡುಗೆಯ ನೆಪದಲ್ಲಿ ಗುಜರಾತನ್ನು ಸಂಕಟಕ್ಕೆ ತಳ್ಳಲು ಆತ ಸಿದ್ಧನಿಲ್ಲ. ಹೀಗೆಂದೇ ಆತ ಕೇಜ್ರಿವಾಲರ ಪೊರಕೆಯನ್ನೇ ತೆಗೆದುಕೊಂಡು ಆತನ ಪಾರ್ಟಿಯನ್ನೇ ಗುಡಿಸಿಬಿಟ್ಟ!

 

ಚುನಾವಣೆ ಎನ್ನುವುದು ಭಾವನೆಗಳ ಸಮ್ಮಿಲನ. ಸುಮಾರು ಐದು ವರ್ಷಗಳ ಕಾಲ ಆತ ತನಗಾದ ನೋವುಗಳನ್ನು ಜತನದಿಂದ ಕಾಪಾಡಿಟ್ಟುಕೊಂಡು ಬರುತ್ತಾನೆ. ಸಂತೋಷವನ್ನು ಮರೆತುಬಿಡಬಹುದೇನೋ. ಆದರೆ ನೋವನ್ನು ಎಂದಿಗೂ ಮರೆಯಲಾರ. ಹೀಗಾಗಿಯೇ ಸಿದ್ದರಾಮಯ್ಯನವರು ಹೋದೆಡೆಯಲ್ಲೆಲ್ಲ ಅವರ ಅಧಿಕಾರಾವಧಿಯಲ್ಲಿ ತೀರಿಕೊಂಡ ಹಿಂದೂಗಳ ಶವಗಳು ಕಣ್ಮುಂದೆ ಬರುತ್ತವೆ. ಅವರ ಸುತ್ತ ಮುಸಲ್ಮಾನರು ತಿರುಗಾಡುವಾಗ ಮತ್ತೆ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದುಬಿಟ್ಟರೆ ಮತ್ತಷ್ಟು ಹೆಣಗಳು ಬೀಳುತ್ತವೇನೋ ಎಂಬ ಹೆದರಿಕೆ ಶುರುವಾಗುತ್ತದೆ. ಈ ಗಾಬರಿ ಅವರನ್ನೂ ಬಿಟ್ಟಿಲ್ಲ. ಹೀಗಾಗಿಯೇ ಮುಖ್ಯಮಂತ್ರಿಯಾಗಿದ್ದೂ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಬಯಸುತ್ತಿರುವ ಅವರು ಇಡಿಯ ರಾಜ್ಯದಲ್ಲಿ ತಮಗೊಂದು ಸೂಕ್ತ ಕ್ಷೇತ್ರ ಹುಡುಕಲು ಹರಸಾಹಸ ಮಾಡುತ್ತಿರುವುದು. ಹಾಗಂತ ಇದಕ್ಕೆ ಈಗಿನ ಮುಖ್ಯಮಂತ್ರಿ ಬೊಮ್ಮಾಯಿಯವರು ಹೊರತಲ್ಲ. ಮುಸಲ್ಮಾನರ ವಿರುದ್ಧ ಎಂದೂ ಮಾತನಾಡದೇ ಅವರ ಮತಗಳನ್ನು ಪಡೆಯುತ್ತಾ ಗೆದ್ದು ಬರುತ್ತಿದ್ದ ಅವರಿಗೆ ಹಿಜಾಬ್, ಹಲಾಲ್, ಮೊದಲಾದ ಗಲಾಟೆಗಳ ನಂತರ ಕ್ಷೇತ್ರ ಅಷ್ಟು ಸಲೀಸಿಲ್ಲ. ಹಾಗಂತ ಬೇರೆ ಕ್ಷೇತ್ರ ಆರಿಸಿಕೊಳ್ಳಲು ಹೇಳಿ, ಬಿಜೆಪಿಯ ಭದ್ರಕೋಟೆ ಎಂದು ಕರೆಯಲ್ಪಡುವ ಕರಾವಳಿಯಲ್ಲೂ ಅವರು ಗೆಲ್ಲುವುದು ಸುಲಭವಿಲ್ಲ. ಪ್ರವೀಣ್ ನೆಟ್ಟಾರುವಿನ ಸಾವು ಅಷ್ಟು ಆಳಕ್ಕೆ ಹೊಕ್ಕಿದೆ. ಎಲ್ಲಾ ಕಾಂಗ್ರೆಸ್ಸಿಗರೂ ಜಾತಿಯ ಲೆಕ್ಕಾಚಾರದಲ್ಲಿ ಗೆದ್ದುಬಿಡುತ್ತೇವೆಂಬ ಭ್ರಮೆಯಲ್ಲಿದ್ದರೆ, ಬಿಜೆಪಿಗರು ಮೋದಿ ರ್ಯಾಲಿ ಮಾಡಿದರೆ ಜನ ಕಣ್ಮುಚ್ಚಿಕೊಂಡು ಮತ ನೀಡಿಬಿಡುತ್ತಾರೆ ಎಂದು ನಂಬಿಕೊಂಡು ಕೂತಿದ್ದಾರೆ. ಆದರೆ ವಾಸ್ತವ ನೆಲೆಕಟ್ಟಿನಲ್ಲಿ ನೋಡಿದರೆ ಜಾತಿ ಸಮೀಕರಣಗಳು ಈಗ ಸಾಕಷ್ಟು ಬದಲಾಗಿವೆ. ದೆಹಲಿಯಲ್ಲಿ ಆಮ್ಆದ್ಮಿ ಪಾರ್ಟಿಗೆ ಮುಸಲ್ಮಾನರ ಮತಗಳು ಶೇಕಡಾ 20ರಷ್ಟು ಕಡಿಮೆಯಾಗಿವೆ. ದಲಿತರ ಮತಗಳು ಭಾಜಪದ ಕಡೆಗೆ ತಿರುಗಿ ಸಾಕಷ್ಟು ಕಾಲವೇ ಆಗಿದೆ. ಕಾಂಗ್ರೆಸ್ಸು ಇದನ್ನು ಸೂಕ್ಷ್ಮವಾಗಿ ಗಮನಿಸದೇ ಇರಲಾರದು. ಇತ್ತ ರಾಜ್ಯಗಳ ಮತಕದನದಲ್ಲಿ ಮೋದಿ ತುಂಬಾ ಯಶಸ್ಸನ್ನು ಕಂಡಿದ್ದಾರೆ ಎಂದೇನೂ ಹೇಳಲಾಗದು. ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬು, ಬಂಗಾಳ, ಬಿಹಾರ, ಇತ್ತೀಚೆಗೆ ಹಿಮಾಚಲ ಪ್ರದೇಶ ಇಲ್ಲೆಲ್ಲವೂ ಸೋಲುಗಳನ್ನೇ ಉಂಡಿದ್ದಾರೆ. ರಾಜ್ಯಗಳು ಮೋದಿಯನ್ನು ಪ್ರಧಾನಿಯಾಗಿ ಬಯಸುತ್ತವೆ ನಿಜ. ಅವರನ್ನು ತಮ್ಮ ರಾಜ್ಯದವರೆಂದು ಭಾವಿಸುವುದಿಲ್ಲ ಅಷ್ಟೇ. ಹೀಗಾಗಿ ಮೋದಿಯ ಖ್ಯಾತಿ ಉತ್ತುಂಗದಲ್ಲಿರುವಾಗಲೇ ಬಿಹಾರದಲ್ಲಿ ಅವರನ್ನು ‘ಬಾಹರಿ’ ಎಂದು ಕರೆಯಲಾಗಿತ್ತು. ರಾಜಸ್ಥಾನದಲ್ಲಿ ಮಂದಿ ಮೋದಿಯನ್ನು ಇಷ್ಟಪಡುತ್ತಾರೆ ನಿಜ, ಆದರೆ ವಸುಂಧರಾ ರಾಜೆಗೆ ಮತ ಹಾಕಲು ಸಜ್ಜಾಗುವುದಿಲ್ಲ. ಶಿವಸೇನೆ ನೆಟ್ಟಗಿದ್ದಿದ್ದರೆ ಮಹಾರಾಷ್ಟ್ರದಲ್ಲಿ ಮೋದಿ ಪಾಳಯವೇ ಅಧಿಕಾರದಲ್ಲಿರುತ್ತಿತ್ತು. ಏಕೆಂದರೆ ಅಲ್ಲಿ ದೇವೇಂದ್ರ ಫಡ್ನವೀಸ್ ಜನಮಾನಸದಲ್ಲಿ ತಮ್ಮ ವಿಭಿನ್ನ ಕಾರ್ಯಗಳಿಂದ ಬಲವಾಗಿ ನೆಲೆಯೂರಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಬಿಜೆಪಿಯ ಗೆಲುವನ್ನು ಖಾತ್ರಿಪಡಿಸಿಕೊಂಡಿದ್ದಾರೆ. ಅದರರ್ಥ ಸ್ಥಳೀಯ ಸಮರ್ಥ ನಾಯಕರಿದ್ದರೆ ಅಂಥವರ ಮೇಲೆ ಮೋದಿ ಬೆಟ್ ಕಟ್ಟಿ ಓಡಿಸಬಹುದು. ಇಲ್ಲವಾದರೆ ಮೋದಿಯವರಿಗೆ ಬರಿ ಕಂಠಶೋಷಣೆಯಷ್ಟೆ. ಸೂಕ್ಷ್ಮವಾಗಿ ನೀವೇ ಗಮನಿಸಿದರೆ, ತಮಿಳುನಾಡಿನಲ್ಲಿ ಅಣ್ಣಾಮಲೈ ಅವರಿಗೆ ಮೋದಿ ಕೊಡುತ್ತಿರುವ ಮನ್ನಣೆ, ಗೌರವ ಎಂಥದ್ದೆಂಬುದು ಅರಿವಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಅವರನ್ನು ಹಿಡಿದೇ ಅಧಿಕಾರಕ್ಕೆ ಬರುವಷ್ಟರ ಮಟ್ಟಿಗೆ ಪ್ರಯತ್ನ ಮಾಡುವುದು ಕಠಿಣವಾಗಲಾರದು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅಧಿಕಾರ ಹತ್ತಿರಕ್ಕೆ ಬರುವಷ್ಟು ಗೆಲ್ಲುವ ಸಾಮರ್ಥ್ಯವಿರುವ ನಾಯಕನಿದ್ದರೆ, ಮೋದಿ ಅದನ್ನು ಖಾತ್ರಿಯಾಗಿ ಗೆಲುವಾಗಿ ಪರಿವರ್ತಿಸಬಲ್ಲರು. ಗೆಲುವಿನ ಅಂತರವನ್ನು ಹಿಗ್ಗಿಸಿಕೊಡಬಲ್ಲರು. ಪೂರ್ಣ ಸಕರ್ಾರವೇ ಅವರ ಹೆಸರಿನಲ್ಲಿ ಬರುವುದು ಸುಲಭ ಸಾಧ್ಯವಾದ ಮಾತಲ್ಲ! ಹೀಗಾಗಿಯೇ ಕರ್ನಾಟಕದಲ್ಲಿ ಭಾಜಪ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ. ಗುಜರಾತಿನಲ್ಲಿ ಮಾಡಿದಂತೆ ಹಳೆಯ ಮುಖಗಳನ್ನು ಬದಲಿಸಿ ಸಮರ್ಥರಾಗಿರುವ ಹೊಸಬರನ್ನು ಆರಿಸಬೇಕಿದೆ. ಕನ್ನಡದ ಜನರು ತಮಿಳಿಗರಂತೆ ಸಂಕುಚಿತವಾಗಿ ಯೋಚಿಸದೇ, ರಾಷ್ಟ್ರೀಯ ಭಾವನೆಯಿಂದ ಕೂಡಿದವರೇ ಆಗಿರುವುದರಿಂದ ಗುಜರಾತಿನ ಫಾರ್ಮುಲಾ ಕೆಲಸಕ್ಕೆ ಬರಬಹುದು. ಸಿದ್ದರಾಮಯ್ಯನವರ ಟಿಪ್ಪು ಜಯಂತಿ ಕೊಡಗಿನಲ್ಲಿ ಇಂದಿಗೂ ಆಕ್ರೋಶದ ಜ್ವಾಲಾಮುಖಿಯನ್ನು ಉಳಿಸಿದೆ. ಕರಾವಳಿ ಭಾಗದ ಜನ ಆ ಕಾಲದ ಹಿಂದೂ ಮಾರಣಹೋಮವನ್ನು ಇಂದಿಗೂ ಮರೆಯಲಾರರು. ಸತೀಶ್ ಜಾರಕಿಹೊಳಿಯವರು ಹಿಂದೂವನ್ನು ಅಶ್ಲೀಲವೆಂದದ್ದು ತರುಣರ ಎದೆಯ ಗೂಡಿನಲ್ಲಿ ಬೆಚ್ಚಗಾಗಿದೆ. ದೇಶದಾದ್ಯಂತ ಬೆಳಕಿಗೆ ಬರುತ್ತಿರುವ ಲವ್ಜಿಹಾದ್ ಪ್ರಕರಣಗಳು, ಕರಾವಳಿಯಲ್ಲಿ ಕಂಡುಬಂದ ಕುಕ್ಕರ್ಬಾಂಬ್ ಘಟನೆಗಳು ಜನರನ್ನು ಇಂದಿಗೂ ಕೇಸರಿ ಪಡೆಗಳ ಪರವಾಗಿ ನಿಲ್ಲುವಂತೆ ಮಾಡಿವೆ. ಆದರೆ ಅದಕ್ಕೆ ಸೂಕ್ತವಾಗಿ ಪ್ರತಿಸ್ಪಂದಿಸುವ ನಾಯಕರಿಲ್ಲದಾಗ ಮಾತ್ರ ಅವರು ಪರ್ಯಾಯವನ್ನು ಹುಡುಕುವ ಸಾಧ್ಯತೆ ಇರುತ್ತದೆ. ಕರ್ನಾಟಕದ ಭಾಜಪದ ನೇತೃತ್ವ ಈ ನಿಟ್ಟಿನಲ್ಲಿ ಗುಜರಾತಿನ ನಾಯಕರಷ್ಟು ಅಗ್ರಣಿಯಾಗಿಲ್ಲದಿರುವುದು ಆತಂಕಕ್ಕೆ ಕಾರಣವೇ ನಿಜ. ಹೀಗಾಗಿಯೇ ಕರ್ನಾಟಕದ ಚುನಾವಣೆಯೂ ಯಾರು ಅಂದುಕೊಂಡಷ್ಟೂ ಸಲೀಸಾಗಿಲ್ಲ. ಕಾಂಗ್ರೆಸ್ಸಿನ ಪಾಲಿಗೆ ಇದು ಹಿಮಾಚಲದಂತಾಗಬಹುದು, ಬಿಜೆಪಿಯ ಪಾಲಿಗೆ ಗೋವೆಯಂತಾಗಬಹುದು. ಕಾದು ನೋಡಬೇಕಷ್ಟೇ..

ನಾಯಕರನ್ನು ಬಿಡಿ, ದೇಶವನ್ನೇ ಸಾಯಿಸುತ್ತಿದ್ದೀರಲ್ಲ!

ನಾಯಕರನ್ನು ಬಿಡಿ, ದೇಶವನ್ನೇ ಸಾಯಿಸುತ್ತಿದ್ದೀರಲ್ಲ!

ಪ್ರಿಯ ಕಾಂಗ್ರೆಸ್ಸಿನ ಕಾರ್ಯಕರ್ತರಿಗೆ ಪ್ರೀತಿಯ ನಮಸ್ಕಾರ.

ಸೈದ್ಧಾಂತಿಕವಾಗಿ ನಾವು ಕಿತ್ತಾಡಬಹುದು. ವೈಚಾರಿಕ ಮತ ಭೇದ ಖಂಡಿತ ಇದ್ದಿರಬಹುದು. ಕೆಲವೊಮ್ಮೆ ಹದ ಮೀರಿ ಕಾಲೆಳೆದಿರಬಹುದು, ಅಪಹಾಸ್ಯವನ್ನೂ ಮಾಡಿರಬಹುದು. ಆದರೆ ದೇಶದ ವಿಚಾರ ಬಂದಾಗ ಮಾತ್ರ ನಮ್ಮಲ್ಲಿ ಮತ ಭೇದ ಇರುವಂತಿಲ್ಲ. ರಾಷ್ಟ್ರ ನನಗಿಂತಲೂ, ಒಂದು ಪರಿವಾರಕ್ಕಿಂತಲೂ, ಒಂದು ಊರಿಗಿಂತಲೂ ಬಲು ದೊಡ್ಡದ್ದು. ಹೀಗಾಗಿಯೇ ಬಲುಮುಖ್ಯವಾದ ಕೆಲವು ಸಂಗತಿಗಳನ್ನು ನಿಮ್ಮಲ್ಲಿ ಹಂಚಿಕೊಳ್ಳಲೆಂದು ಈ ಪತ್ರ. 

ಅನೇಕ ಸಂಗತಿಗಳ ಕುರಿತಂತೆ ನಾವು ನಿಮ್ಮನ್ನು ವಿರೋಧಿಸುವುದಿದೆ. ಸರದಾರ್ ಪಟೇಲರಿಂದ ಅಧಿಕಾರವನ್ನು ಕಸಿದುಕೊಂಡ ಜವಾಹರ್‌ಲಾಲ್ ನೆಹರೂ ಬಗ್ಗೆ ಬೇಸರವಿದೆ. ಆದರೆ ನಾವದನ್ನು ಮರೆತಿದ್ದೇವೆ. ಇಂದಿರಾ ಬಾಬಾಸಾಹೇಬ್ ಅಂಬೇಡ್ಕರ್‌ರ ಸಂವಿಧಾನವನ್ನು ಗಾಳಿಗೆ ತೂರಿ ಎಲ್ಲ ಸ್ವಾತಂತ್ರ್ಯವನ್ನು ಕಸಿಯುವ ತುರ್ತು ಪರಿಸ್ಥಿತಿಯನ್ನು ಹೇರಿ ಭಾರತದ ಇತಿಹಾಸದಲ್ಲೊಂದು ಆರದ ಗಾಯವನ್ನು ಮಾಡಿಬಿಟ್ಟರಲ್ಲ, ನಾವದನ್ನು ನೆನಪಿಸಿಕೊಳ್ಳುವುದಿಲ್ಲ. ಇಂದಿರಾ ತೀರಿಕೊಂಡಾಗ ಸಿಖ್ಖರ ಹತ್ಯೆಯನ್ನು ನೀವೆಲ್ಲ ಸೇರಿ ಮಾಡಿದ್ದಿರಲ್ಲ, ಆ ಕುರಿತು ಸಿಖ್ಖರ ಕಣ್ಣೀರೇ ಇಂಗಿಹೋಗಿಬಿಟ್ಟಿದೆ, ಇನ್ನು ನಮ್ಮದೇನು ಲೆಕ್ಕ! ವಿಷಯ ಬಂತೆಂದೆ ನೆನಪಿಸಿಬಿಡುತ್ತೇನೆ. ಗೋಡ್ಸೆ ಗಾಂಧಿಯವರ ಹತ್ಯೆ ಮಾಡಿದ ಎಂಬ ಕಾರಣಕ್ಕೆ ಚಿತ್ಪಾವನ ಬ್ರಾಹ್ಮಣರನ್ನು ಅಟ್ಟಾಡಿಸಿ ಕೊಂದಿರಲ್ಲ, ಪಾಪ ಆ ಮಂದಿಯೂ ಅದನ್ನು ಮರೆತು ನೀವು ಅಪ್ಪಿ-ತಪ್ಪಿ ‘ಭಾರತ್ ಮಾತಾ ಕಿ’ ಎಂದರೆ ‘ಜೈ’ ಎಂದು ದನಿಗೂಡಿಸುತ್ತಾರೆ. ಬಿಡಿ, ಈ ದೇಶದವರೇ ಅಲ್ಲದ ಸೋನಿಯಾ ಪ್ರಧಾನಿಯಾಗಲೆಂದು ನೀವೆಲ್ಲ ಹಠ ಹಿಡಿದು ಕುಳಿತಿರಿ. ಆಕೆಯ ಮಗ ರಾಹುಲ್ ಇತ್ತೀಚೆಗೆ ಭಾರತ್ ಜೊಡೊ ಯಾತ್ರೆಯಲ್ಲಿ ಭಾರತವನ್ನು ತುಂಡರಿಸುವ ಸಂಕಲ್ಪಗೈದವರನ್ನೆಲ್ಲ ಜೊತೆಗೂಡಿಸಿಕೊಂಡು ನಡೆದ. ‘ಪಾಂಡವರಿದ್ದಿದ್ದರೆ ನೋಟು ಅಮಾನ್ಯೀಕರಣ ಮಾಡುತ್ತಿದ್ದರೇನು?’ ಎಂದಾತ ಪ್ರಶ್ನಿಸುವಾಗ ಯಾವುದೋ ಹಳ್ಳಿಯ ಮೂರನೇ ತರಗತಿಯ ಮಗುವನ್ನು ಮಾತನಾಡಿಸುತ್ತಿದ್ದೇವೇನೋ ಎನಿಸಿಬಿಡುತ್ತದೆ. ಆತನನ್ನೇ ಪ್ರಧಾನಿ ಮಾಡೋಣ ಎಂದು ನೀವಂದಾಗ ಪ್ರಜಾಪ್ರಭುತ್ವದ ಮರ್ಯಾದೆ ಕಾಪಾಡಲು ನಾವು ನಕ್ಕು ಸುಮ್ಮನಾಗಿಬಿಡುತ್ತೇವೆ. ಇನ್ನು ಈ ಪರಿವಾರದ ಅಳಿಯ ಎಂಬ ಒಂದೇ ಕಾರಣಕ್ಕೆ ರಾಬರ್ಟ್ ವಾದ್ರಾ ಪಡೆದ ಸವಲತ್ತು, ತೋರುವ ಧಿಮಾಕು ನೀವು ನೋಡಿದ್ದೀರಲ್ಲ, ಅದನ್ನೂ ನಾವು ಮನಸ್ಸಿನಲ್ಲಿಟ್ಟುಕೊಂಡಿಲ್ಲ ಏಕೆಂದರೆ ಇವರೆಲ್ಲರೂ ನಾಳೆ ತಮ್ಮದ್ದೇ ಒಂದು ದೇಶಕ್ಕೆ ಮರಳಿಬಿಡಬಲ್ಲರು. ನಾನು, ನೀವು ಇಲ್ಲಿಯೇ ಇರಬೇಕು. ಇದು ನಮ್ಮ ಪೂರ್ವಜರು ಜತನದಿಂದ ಕಟ್ಟಿದ ದೇಶ. ಇದು ಬೆಳೆದಷ್ಟೂ ಲಾಭವುಣ್ಣುವವರು ನಾವಷ್ಟೇ ಅಲ್ಲ, ಇಡಿಯ ಜಗತ್ತು. 

ಈಗೇಕೆ ಧಾವಂತದಿಂದ ಈ ಪತ್ರವೆಂದರೆ ಜಾರ್ಜ್ ಸೊರೊಸ್ ಇತ್ತೀಚೆಗಷ್ಟೇ ಮ್ಯುನಿಚ್ ಸೆಕ್ಯುರಿಟಿ ಕಾನ್ಫರೆನ್ಸ್ನಲ್ಲಿ ಭಾರತದ ವಿರುದ್ಧ ಗುಟುರು ಹಾಕಿದ್ದಾನೆ, ‘ಮೋದಿ ಮತ್ತು ಅದಾನಿ ಇಬ್ಬರೂ ಆತ್ಮೀಯರು. ಅದಾನಿಯ ಕಂಪನಿ ಸ್ಟಾಕ್ ಮಾರುಕಟ್ಟೆಯಿಂದ ಹಣ ಕ್ರೋಢೀಕರಿಸಲು ಹೋಗಿ ಸೋತಿದೆ. ಆತ ಸ್ಟಾಕ್ಗಳ ಏರುಪೇರಿಗೆ ಕಾರಣನಾದವ. ಈ ವಿಷಯದಲ್ಲಿ ಮೋದಿ ಸುಮ್ಮನಿದ್ದಾರೆ. ಅವರು ವಿದೇಶದ ಹೂಡಿಕೆದಾರರಿಗೆ ಮತ್ತು ತಮ್ಮ ಸಂಸತ್ತಿಗೆ ಉತ್ತರ ಕೊಡಬೇಕಿದೆ’ ಎಂದಿದ್ದಾನಲ್ಲದೇ ಪ್ರಜಾಪ್ರಭುತ್ವವನ್ನು ಉಳಿಸಲಿಕ್ಕಾಗಿ ಭಾರತದಲ್ಲಿ ಸರ್ಕಾರವನ್ನು ಬೇಕಿದ್ದರೂ ಬದಲಾಯಿಸಬಲ್ಲೆ ಎಂಬ ಹೇಳಿಕೆ ಕೊಟ್ಟಿದ್ದಾನೆ. ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ಕೂಡ ರಾಷ್ಟ್ರೀಯವಾದಿ ನಾಯಕರನ್ನು ಕಿತ್ತುಬಿಸುಟಲು ತಾನು ಹಣ ಹೂಡುವುದಾಗಿ ದರ್ಪದಿಂದಲೇ ಹೇಳಿದ್ದ. ಆತನ ದೃಷ್ಟಿ ನರೇಂದ್ರಮೋದಿಯವರತ್ತಲೇ ನೆಟ್ಟಿತೆಂಬುದು ಎಂಥವನಿಗೂ ಅರಿವಾಗುವಂತಿತ್ತು. 

ಅದರಲ್ಲೇನು ಮಹಾ? ಅನೇಕರು ರಾಷ್ಟ್ರದ ಪ್ರಮುಖರನ್ನು ಬದಿಗೆ ಸರಿಸಿ ಮತ್ತೊಬ್ಬರನ್ನು ಕೂರಿಸುವ ಪ್ರಯತ್ನ ಮಾಡುತ್ತಾರೆ. ಸ್ವತಃ ಭಾರತದಲ್ಲಿ 28 ಪಕ್ಷಗಳು ಒಟ್ಟಾಗಿ ಮೋದಿಯನ್ನು ಕೆಳಗಿಳಿಸಿ ತಾವುಗಳೇ ಪ್ರಧಾನಿಯಾಗಲು ಹಾತೊರೆಯುತ್ತಿದ್ದಾರೆ. ಜಾರ್ಜ್ ಸೊರೊಸ್‌ದೇನು ವಿಶೇಷ? ಗಮನಿಸಬೇಕಾಗಿರುವ ಸಂಗತಿ ಇರುವುದೇ ಇಲ್ಲಿ. ಹಂಗೇರಿಯಲ್ಲಿ ಹುಟ್ಟಿದ ಸೊರೊಸ್ ಮೂಲತಃ ಯಹೂದಿ ಕುಟುಂಬಕ್ಕೆ ಸೇರಿದವ. ಆದರೆ ನಾಜಿಗಳ ಒತ್ತಡ ತೀವ್ರವಾದಾಗ ತನ್ನ ತಾನು ಕ್ರಿಶ್ಚಿಯನ್ ಎಂದು ಗುರುತಿಸಿಕೊಂಡು ನಾಜಿಗಳೊಂದಿಗೆ ಕಪಟವಾಡಿಕೊಂಡು ಇದ್ದುಬಿಟ್ಟ. ಓರಗೆಯ ಅನೇಕ ಯಹೂದಿಗಳನ್ನು ನಾಜಿಗಳಿಗೆ ಗುರುತಿಸಲು ಸಹಾಯ ಮಾಡಿದವ ಈತನೇ ಎಂದು ಆರೋಪಿಸಲಾಗುತ್ತದೆ. ತಾನು ನೀಡಿದ ಸಂದರ್ಶನವೊಂದರಲ್ಲಿ ಆತ ಇದನ್ನು ಪರಿಪೂರ್ಣವಾಗಿ ಏನೂ ಅಲ್ಲಗಳೆದಿಲ್ಲ. ಯಹೂದಿಗಳ ಮೇಲಿನ ಅಂದಿನ ಆಕ್ರೋಶ ಅವನಿಗೆ ಇಂದೂ ತೀರಿದಂತೆ ಕಾಣುವುದಿಲ್ಲ. ಹೀಗಾಗಿ ಇಸ್ರೇಲ್ ರಾಷ್ಟ್ರವಾಗಬೇಕು ಎಂದು ಬಯಸುತ್ತಾನಾದರೂ ಅಲ್ಲಿಯೂ ರಾಷ್ಟ್ರವಾದ ಉಳಿಯಬಾರದು ಎಂದು ತನ್ನದ್ದೇ ವಾದ ಮಂಡಿಸುತ್ತಾನೆ. 1956ರಲ್ಲಿ ಉದ್ಯೋಗವರಸಿಕೊಂಡು ನ್ಯೂಯಾರ್ಕಿಗೆ ಬಂದ ಸೊರೊಸ್ ಕಡು ಕಷ್ಟದಿಂದಲೇ ಮೇಲೇರಿದವ. ತನ್ನ ವ್ಯಾಪಾರಿ ಚಾಕಚಕ್ಯತೆಯನ್ನು ಬಳಸಿಕೊಂಡು ಶೇರು ಮಾರುಕಟ್ಟೆಯಲ್ಲಿ ಹಣಹೂಡುವ ಧಂಧೆ ಆರಂಭಿಸಿದ. ಡಬಲ್ ಈಗಲ್, ಸೊರೊಸ್ ಫಂಡ್ ಮ್ಯಾನೇಜ್ಮೆಂಟ್ ಕಂಪನಿಗಳು ಅವನದ್ದೇ. ಆತ ಅಮೇರಿಕಾದ ಇತಿಹಾಸದಲ್ಲೇ ಒಬ್ಬ ಯಶಸ್ವೀ ಹೂಡಿಕೆದಾರ ಎಂಬ ಹೆಸರು ಮಾಡಿದ್ದಾನೆ. ನೂರು ಹರ್ಷದ್ ಮೆಹ್ತಾಗಳನ್ನು ಹಾಕಿದರೆ ಒಬ್ಬ ಸೊರೊಸ್ ಹುಟ್ಟಬಹುದೇನೋ! ಸೊರೊಸ್ ಎಷ್ಟು ಸವಾಲುಗಳನ್ನು ಮೈಮೇಲೆಳೆದುಕೊಂಡನೆಂದರೆ ಅಷ್ಟೇ ವೇಗವಾಗಿ ತನ್ನ ಕಂಪನಿಯ ಮೌಲ್ಯವನ್ನೂ ವರ್ಧಿಸುತ್ತಾ ಹೋದ. ಅನೇಕ ರಾಷ್ಟ್ರಗಳು ಆತನನ್ನು ಕ್ರಿಮಿನಲ್ನಂತೆ ಕಾಣುತ್ತವೆ. 1992ರಲ್ಲಿ ಆತ ಬ್ರಿಟೀಷ್ ಸ್ಟಾಕ್ ಮಾರುಕಟ್ಟೆಯಲ್ಲಿ ತಾನು ಹೂಡಿದ್ದ 10 ಬಿಲಿಯನ್ ಡಾಲರ್‌ಗಳನ್ನು ಏಕಾಕಿ ತೆಗೆದು ಇಡಿಯ ಮಾರುಕಟ್ಟೆ ಕುಸಿಯುವಂತೆ ಮಾಡಿಬಿಟ್ಟಿದ್ದ. ಅಲ್ಲಿನ ಬ್ಯಾಂಕುಗಳು ಪತರಗುಟ್ಟಿಹೋಗಿದ್ದವು. ಬ್ರಿಟೀಷ್ ಪೌಂಡು ನೋಡನೋಡುತ್ತಲೇ ಕುಸಿದುಹೋಯ್ತು. ಕುಳಿತಲ್ಲೇ ಸೊರೊಸ್ ಒಂದು ಶತಕೋಟಿ ಅಮೇರಿಕನ್ ಡಾಲರ್ಗಳನ್ನು ಸಂಪಾದಿಸಿಬಿಟ್ಟ. ಇಂಗ್ಲೆಂಡಿನ ಬ್ಯಾಂಕು ಮುರಿದವ ಎಂದೇ ಆತನಿಗೆ ಹೆಸರು. 

1997ರಲ್ಲಿ ಏಷ್ಯಾದಲ್ಲಿ ಆರ್ಥಿಕ ಸಮಸ್ಯೆ ಎದುರಾಯ್ತಲ್ಲ, ಅದರ ಹಿಂದೆ ಇದ್ದ ದೊಡ್ಡ ಕೈ ಸೊರೊಸ್‌ನದ್ದೇ. ಹಾಂಗ್ ಕಾಂಗ್, ಜಪಾನ್, ದಕ್ಷಿಣ ಕೊರಿಯಾಗಳಲ್ಲಿ ಹತ್ತುಸಾವಿರಕ್ಕೂ ಹೆಚ್ಚು ಮಂದಿ ಈ ಹೊತ್ತಿನಲ್ಲಿ ಆತ್ಮಹತ್ಯೆಗೆ ಶರಣಾದರು. ಅಷ್ಟೂ ಜನರ ರಕ್ತ ಮೆತ್ತಿಕೊಂಡಿರುವುದು ಸೊರೊಸ್ನ ಕೈಗೇ! ಮಲೇಷಿಯಾದ ಪ್ರಧಾನಮಂತ್ರಿ ಮಹತಿರ್ ಮೊಹಮ್ಮದ್ ಆ ರಾಷ್ಟ್ರದ ಕರೆನ್ಸಿ ಕುಸಿಯಲು ಕಾರಣ ಸೊರೊಸ್ ಎಂದೇ ಆರೋಪಿಸುತ್ತಾರೆ. 1988ರಲ್ಲಿ ಫ್ರಾನ್ಸ್ ನಲ್ಲಿ ಸ್ಟಾಕ್ ಮಾರುಕಟ್ಟೆ ಏರುಪೇರಾಗಲು ಸೊರೊಸ್ ಕಾರಣನಾಗಿದ್ದ ಎಂಬುದಕ್ಕೆ ಅಲ್ಲಿನ ನ್ಯಾಯಾಲಯ 2002ರ ಡಿಸೆಂಬರ್ನಲ್ಲಿ ಆತನಿಗೆ 29 ಲಕ್ಷ ಡಾಲರ್ಗಳ ದಂಡ ವಿಧಿಸಿತ್ತು. ಕಾಲಕ್ರಮದಲ್ಲಿ ಆತನ ಕಂಪನಿ ಇತರರಿಂದ ಹಣ ತೆಗೆದುಕೊಳ್ಳುವುದನ್ನು ನಿಲ್ಲಿಸಿಬಿಟ್ಟಿತು. ಈ ವೇಳೆಗಾಗಲೆ ಅನೇಕ ರಾಷ್ಟ್ರಗಳೊಂದಿಗೆ ಆಟವಾಡಿದ ಸೊರೊಸ್ ತಾನೇ ಬಿಲಿಯನೇರ್ ಆಗಿಬಿಟ್ಟಿದ್ದ. ತಾನು ಮಾಡಿದ ಯಾವ ಕೆಲಸಕ್ಕೂ ಪಶ್ಚಾತ್ತಾಪ ಪಡಬೇಕಿಲ್ಲ ಎಂಬುದೇ ಆತನ ವಾದವಾಗಿತ್ತು. ಥೈಲ್ಯಾಂಡ್, ಮಲೇಷಿಯಾ, ಇಂಡೋನೇಷಿಯಾ, ರಷ್ಯಾ ಇಲ್ಲಿನ ಆರ್ಥಿಕತೆ ಕುಸಿಯಲು ಕಾರಣವಾಗಿದ್ದಕ್ಕೆ ನಿಮಗೆ ಬೇಸರವಿದೆಯೇ? ಎಂದು ಪತ್ರಕರ್ತ ಕೇಳಿದರೆ, ‘ನಾನು ಲಾಭ ಗಳಿಸಲೆಂದೇ ವ್ಯಾಪಾರ ಮಾಡುತ್ತೇನೆ. ಈ ವಿಚಾರ ಬಂದಾಗ ಅದನ್ನು ಬಿಟ್ಟು ಬೇರೆ ಯೋಚಿಸುವುದಿಲ್ಲ. ಈ ಹಂತದಲ್ಲಿ ನಡೆಯುವ ಯಾವುದೇ ಸಾಮಾಜಿಕ ಅವಘಡಗಳಿಗೂ ನಾನು ಜವಾಬ್ದಾರನಲ್ಲ. ಆದರೆ ಮಾನವೀಯತೆ ವಿಚಾರ ಬಂದಾಗ ನಾನು ಬೇರೆ ರೀತಿ ಯೋಚಿಸುತ್ತೇನಷ್ಟೆ’ ಎನ್ನುತ್ತಾನೆ. ಒಂದೆಡೆ ಸಾವಿರಾರು ಮಂದಿಯ ಸಾವಿಗೆ ಕಾರಣನಾಗಿ ಮತ್ತೊಂದೆಡೆ ಈ ಲಾಭದ ಒಂದಷ್ಟು ಹಣವನ್ನು ಸತ್ತವರ ಮಕ್ಕಳ ಅಧ್ಯಯನಕ್ಕೆಂದು ಮೀಸಲಾಗಿಟ್ಟುಬಿಟ್ಟರೆ ಆದೀತೇನು? 

ಸೊರೊಸ್ ಕೆಲಸ ಮಾಡುವ ಸ್ವರೂಪ ಹೇಗೆ ಗೊತ್ತೇ? ಆತ 1984ರಲ್ಲಿ ಓಪನ್ ಸೊಸೈಟಿ ಫೌಂಡೇಶನ್ ಎಂಬ ದತ್ತಿ ಸಂಸ್ಥೆಯನ್ನು ಆರಂಭಿಸಿದ. ಆತನ ವೆಬ್ಸೈಟನ್ನು ನಂಬುವುದಾದರೆ ಇದುವರೆಗೂ 32 ಬಿಲಿಯನ್ ಡಾಲರ್‌ಗಳಷ್ಟು ಸ್ವಂತ ಹಣವನ್ನು ಅದಕ್ಕಾಗಿ ನೀಡಿದ್ದಾನೆ. ಈ ಫೌಂಡೇಶನ್ ಜಗತ್ತಿನಾದ್ಯಂತ ಅನೇಕ ಸ್ವಯಂ ಸೇವಾ ಸಂಸ್ಥೆಗಳಿಗೆ ದಾನ ನೀಡುತ್ತದೆ. ಆ ಮೂಲಕ ಆಯಾ ರಾಷ್ಟ್ರಗಳಲ್ಲಿ ತಮಗೆ ಬೇಕಾದ ಕೆಲಸವನ್ನು ಮಾಡಿಸಿಕೊಳ್ಳುತ್ತದೆ. ಈ ಸ್ವಯಂ ಸೇವಾ ಸಂಸ್ಥೆಗಳು ಬಹುಪಾಲು ಎಡಪಂಥೀಯ ಚಿಂತಕರದ್ದೇ ಆಗಿದ್ದು ದೇಶ ವಿಭಜಿಸುವಲ್ಲಿ ಮಹತ್ವದ ಪಾತ್ರವನ್ನು ಹೊಂದಿರುವಂಥವು. ಸ್ವತಃ ಪ್ರಧಾನಮಂತ್ರಿ ಮನಮಹೋನ್ ಸಿಂಗರ ಮಗಳು ಅಮೃತಾ ಸಿಂಗ್ ಈ ಸಂಸ್ಥೆಯ ನಿರ್ದೇಶಕಿಯಾಗಿ ದುಡಿದಿದ್ದವಳು. ಪ್ರಧಾನಮಂತ್ರಿಯೊಬ್ಬರ ಮಗಳು ಇಂತಹ ಸಂಸ್ಥೆಯೊಂದರಲ್ಲಿ ಇದ್ದಾಳೆ ಎಂದರೆ ಸರ್ಕಾರದ ಮೇಲೆ ಸೊರೊಸ್ ಹೊಂದಿದ್ದ ಪ್ರಭಾವ ಎಂಥದ್ದಿರಬಹುದು ಎಂದು ಯೋಚಿಸಿ! ಇಷ್ಟೇ ಅಲ್ಲ, ಸೋನಿಯಾ ಆಪ್ತನಾಗಿದ್ದ ಹರ್ಷ್ ಮಂದಾರ್ ಕೂಡ ಈತನೊಡನೆ ಕೆಲಸ ಮಾಡುತ್ತಿರುವವನೇ. ಹರ್ಷ್ ಮಂದಾರ್ ಸಾಮಾನ್ಯವಾದ ವ್ಯಕ್ತಿಯಲ್ಲ. ಆತ ಐಎಎಸ್ ಅಧಿಕಾರಿಯಾಗಿದ್ದು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿ, 2002ರಲ್ಲಿ ನಡೆದ ಗುಜರಾತ್ ದಂಗೆಯ ನೆಪಹೇಳಿ ರಾಜಿನಾಮೆ ಕೊಟ್ಟು, ತನ್ನದ್ದೇ ಆದ ಸಾಮಾಜಿಕ ಸೇವಾ ಸಂಘಟನೆಗಳ ಮೂಲಕ ಆರಾಮದಾಯಕ ಬದುಕನ್ನು ಅನುಭವಿಸುತ್ತಿದ್ದಾನೆ. ಈತನ ಸರ್ಕಾರೇತರ ಸಂಸ್ಥೆಗಳಿಗೆ ಸೊರೊಸ್ ಉದಾರವಾಗಿ ಹಣ ನೀಡುತ್ತಾನೆ. ನಿಮಗೆ ಗಾಬರಿಯಾಗುವ ಸಂಗತಿ ಹೇಳಲೇ? ಆತ ಸೊನಿಯಾ ಯುಪಿಎ ಸರ್ಕಾರದ ಸಂದರ್ಭದಲ್ಲಿ ರೂಪಿಸಿಕೊಂಡಿದ್ದ ರಾಷ್ಟ್ರೀಯ ಸಲಹಾ ಮಂಡಳಿಯ ಸದಸ್ಯನೂ ಆಗಿದ್ದ. ಆ ಹೊತ್ತಿನಲ್ಲೇ ಬಂದ ಹಿಂದೂವಿರೋಧಿ ಕಮ್ಯುನಲ್ ವೈಯಲೆನ್ಸ್ ಬಿಲ್ ಈತನೇ ತಯಾರಿಸಿದ್ದು. ಆ್ಯಕ್ಷನ್ ಏಡ್ ಇಂಡಿಯಾ ಎಂಬ ಸಂಸ್ಥೆಯ ರಾಷ್ಟ್ರೀಯ ಮುಖ್ಯಸ್ಥನಾಗಿರುವ ಈತ ತನ್ನ ಸೆಂಟರ್ ಫಾರ್ ಈಕ್ವಿಟಿ ಸ್ಟಡೀಸ್‌ಗೆ ಕೋಟ್ಯಂತರ ರೂಪಾಯಿ ಹಣವನ್ನು ವಿದೇಶಗಳಿಂದ ಪಡೆದುಕೊಂಡಿದ್ದಾನೆ. ಎನ್ಕೌಂಟರ್‌ಗೆ ಒಳಗಾದ ಇಶ್ರತ್ ಜಹಾನ್‌ಳಿರಲಿ, ಮುಂಬೈ ದಾಳಿಗೆ ಕಾರಣನಾದ ಯಾಕುಬ್ ಮೆಮನ್ ಇರಲಿ, ಕೊನೆಗೆ ಅಜ್ಮಲ್ ಕಸಬ್, ಅಫ್ಜಲ್ ಗುರುಗಳಾದರೂ ಸರಿ ಅವರೆಲ್ಲರ ಪರವಾಗಿ ದನಿ ಎತ್ತುವವರಲ್ಲಿ ಹರ್ಷ್ ಇದ್ದೇ ಇರುತ್ತಾನೆ. ಅಯೋಧ್ಯೆಯಲ್ಲಿ ರಾಮಮಂದಿರವಾಗಬೇಕೆಂಬ ಆದೇಶ ಬಂದಾಗ ಅದನ್ನು ಪರಿಶೀಲಿಸಬೇಕೆಂದು ನ್ಯಾಯಾಲಯಕ್ಕೆ ಹೋದ 40 ಮಂದಿಯಲ್ಲಿ ಈತನೂ ಇದ್ದ. ಸಿಎಎ ವಿರುದ್ಧ ದೆಹಲಿಯ ಶಾಹಿನ್‌ಬಾಗ್‌ನಲ್ಲಿ ಪ್ರತಿಭಟನೆಗೆ ಕೂತಿದ್ದರಲ್ಲ, ಆಗ ತನ್ನ ಕಾರ್ವಾನ್-ಎ-ಮೊಹಬ್ಬತ್ ಎಂಬ ಸಂಘಟನೆಯ ಮೂಲಕ ಪ್ರತಿಭಟನೆಯ ಸೂತ್ರದಾರ ಶರ್ಜಿಲ್ ಇಮಾಮ್‌ನಿಗೆ ಬೆಂಬಲ ಸೂಚಿಸಿದ್ದಲ್ಲದೇ ‘ಈಗ ನಿರ್ಣಯ ಸಂಸತ್ತಿನಲ್ಲೋ, ನ್ಯಾಯಾಲಯದಲ್ಲೋ ಆಗದು. ಅಯೋಧ್ಯೆ ಮತ್ತು ಕಾಶ್ಮೀರಗಳ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯ ಜಾತ್ಯತೀತತೆಯನ್ನು ರಕ್ಷಿಸಲಿಲ್ಲ. ಹೀಗಾಗಿಯೇ ಕದನ ಬೀದಿಯಲ್ಲೇ ನಡೆದುಬಿಡಲಿ’ ಎಂದಿದ್ದ. 

ಇಷ್ಟಕ್ಕೇ ಮುಗಿಯಲಿಲ್ಲ ಕರ್ನಾಟಕದ ಹರ್ತಿಕೋಟೆಯ ಸಲಿಲ್ ಶೆಟ್ಟಿ ಭಾರತ್ ಜೊಡೊ ಯಾತ್ರೆಯಲ್ಲಿ ರಾಹುಲ್ ಕೈ ಕೈ ಹಿಡಿದು ನಡೆದಿದ್ದ. ಆತ ಸೊರೊಸ್‌ನ ಓಪನ್ ಸೊಸೈಟಿ ಫೌಂಡೇಶನ್ ಜಾಗತಿಕ ಉಪಾಧ್ಯಕ್ಷ. ಆತನೇ ಈ ಹಿಂದೆ ಆಮ್ನೆಸ್ಟಿ ಇಂಟರ್ನ್ಯಾಷನಲ್‌ನ ಕಾರ್ಯದರ್ಶಿಯೂ ಆಗಿದ್ದ. ಅಂದಹಾಗೆ ಇದೇ ಸಂಸ್ಥೆ ಭಾರತ ಮಾನವ ಹಕ್ಕುಗಳ ವಿಚಾರದಲ್ಲಿ ಕಳಪೆಯಾಗಿ ವರ್ತಿಸುತ್ತಿದೆ ಎಂಬ ವರದಿ ಕೊಟ್ಟಿತ್ತು. ಈಗ ಆ ವರದಿಯ ಮಹತ್ವ ಅರಿವಾಗುತ್ತಿದ್ದಿರಬಹುದಲ್ಲವೇ? 

ಸೊರೊಸ್ ತನ್ನ ತಂಡದ ಮೂಲಕ ಅನೇಕ ಮಾಧ್ಯಮಗಳಿಗೂ ಹಣ ನೀಡುತ್ತಾನೆ. ಆ ಮೂಲಕ ಅಭಿಪ್ರಾಯವನ್ನೇ ಕೊಂಡುಕೊಳ್ಳುತ್ತಾನೆ. ಅನೇಕ ರಾಷ್ಟ್ರಗಳಲ್ಲಿ ತನಗೆ ಬೇಕಾದ, ತಾನು ಹೇಳಿದಂತೆ ಕೇಳುವ ಪಕ್ಷಗಳನ್ನು ಅಧಿಕಾರಕ್ಕೆ ತರಲು ಬೇಕಾದ ವ್ಯವಸ್ಥೆ ಮಾಡಿಕೊಡುತ್ತಾನೆ. ಹಂಗೇರಿಯಂತಹ ಅನೇಕ ರಾಷ್ಟ್ರಗಳು ಆತನ ಹೂಡಿಕೆಯನ್ನು ವಿರೋಧಿಸುವುದು ಈ ಕಾರಣಕ್ಕಾಗಿಯೇ. 

ಈಗ ಎಲ್ಲವನ್ನೂ ಮತ್ತೊಮ್ಮೆ ಅವಲೋಕಿಸಿ ನೋಡಿ. ಸ್ವತಃ ಕ್ರಿಮಿನಲ್‌ಗಳ ಸಾಲಿಗೆ ಸೇರುವ ಸೊರೊಸ್ ಭಾರತದಲ್ಲಿ ಅನೇಕ ಸೇವಾ ಸಂಸ್ಥೆಗಳ ಮೂಲಕ ಭಾರತ ವಿರೋಧಿ ಚಟುವಟಿಕೆ ನಡೆಸುತ್ತಾನೆ. ಮಾಧ್ಯಮಗಳನ್ನು ಹಿಡಿತದಲ್ಲಿರಿಸಿಕೊಳ್ಳುವ ಮೂಲಕ ಜನಾಭಿಪ್ರಾಯ ರೂಪಿಸುತ್ತಾನೆ. ಜಾಗತಿಕ ವರದಿಗಳು ಭಾರತದ ವಿರುದ್ಧ ಇರುವಂತೆ ನೋಡಿಕೊಳ್ಳುತ್ತಾನೆ. ಅಜೀಂ ಪ್ರೇಮ್‌ಜಿ ಥರದವರ ಮೂಲಕ ಇಲ್ಲಿ ಜನಮೆಚ್ಚುಗೆಯ ಕಾರ್ಯ ನಡೆಸುವಂತೆ ಮಾಡಿ ಪಿತೂರಿ ಮಾಡುತ್ತಾನೆ. ಕೊನೆಗೆ ಇವೆಲ್ಲದರ ಲಾಭ ಪಡೆಯಲು ಕಾಂಗ್ರೆಸ್ ನಾಯಕರ ಯಾತ್ರೆಗಳಿಗೆ ಹಣ ಕೊಡುತ್ತಾನೆ, ತನ್ನವರನ್ನೂ ಕಳಿಸುತ್ತಾನೆ. ವಿದೇಶದಲ್ಲಿ ಕೂತು ಭಾರತವನ್ನು ಚೂರು ಮಾಡುವ ಈ ಕಲ್ಪನೆ ಬ್ರಿಟೀಷರು ಭಾರತವನ್ನಾಳಿದಂತಲ್ಲವೇನು? 

ಆಕ್ರಮಣಕಾರಿಗಳನ್ನು ತುಂಡು ಬಟ್ಟೆ ಧರಿಸಿ ಮಹಾತ್ಮ ಓಡಿಸಿದರೆ, ಆತನ ಹೆಸರಿಟ್ಟುಕೊಂಡು ಬೇರೊಂದು ರೂಪದಲ್ಲಿ ಅವರನ್ನೇ ಕರೆತರಲು ಯತ್ನಿಸುವುದು ಎಷ್ಟು ಸರಿ?  ಮೊದಿಯನ್ನು ವಿರೋಧಿಸಿ ಅಭ್ಯಂತರವಿಲ್ಲ. ಆದರೆ ಆ ಧಾವಂತದಲ್ಲಿ ಭಾರತವನ್ನೇ ಪ್ರಪಾತಕ್ಕೆ ತಳ್ಳಬೇಡಿ. 

ಇದು ನನ್ನ ಕಳಕಳಿಯ ಕೋರಿಕೆ ಅಷ್ಟೆ!