ತೆರಿಗೆಯ ಕಿರಿಕಿರಿಗೂ ಇತಿಹಾಸವಿದೆ!

ತೆರಿಗೆಯ ಕಿರಿಕಿರಿಗೂ ಇತಿಹಾಸವಿದೆ!

ಸ್ವಾತಂತ್ರ್ಯ ಬಂದ ಅರವತ್ತು ವರ್ಷ ಆಳಿದ ಪುಣ್ಯಾತ್ಮರು ಭಾರತದ ಖಜಾನೆ ತುಂಬದಂತೆ ನೋಡಿಕೊಂಡರು, ಇಲ್ಲಿದ್ದರೆ ಆಕ್ರಮಣವಾದೀತೆಂದು ಹಣವನ್ನು ವಿದೇಶಕ್ಕೆ ಸಾಗಿಸಿ ಅಲ್ಲಿ ಕೂಡಿಟ್ಟರು. ಕೊನೆಗೆ ಬೊಕ್ಕಸದಲ್ಲಿ ಕ್ರೋಢೀಕರಣದಿಂದ ಸಮಸ್ಯೆಯಾಗುವುದೆಂದರಿತು ಭಾರತವನ್ನು ಸಾಲದಲ್ಲಿರುವಂತೆ ನೋಡಿಕೊಂಡರು. ಸಿರಿವಂತ ರಾಷ್ಟ್ರದ ಮೇಲೆ ಎಲ್ಲರೂ ಕಣ್ಣು ಹಾಕುತ್ತಾರೆ, ಬಡವಾಗಿದ್ದರೆ ಅನುಕಂಪ ತೋರುತ್ತಾರೆ ಎಂಬ ತರ್ಕ ಇರಬೇಕು ಅವರದ್ದು!

ಬೆಂಗಳೂರಿನ ಹೊಟೇಲೊಂದಕ್ಕೆ ಊಟಕ್ಕೆ ಹೋಗಿದ್ದಾಗ ಪಕ್ಕದಲ್ಲೇ ಕೂತ ಮಾಲೀಕರು, ಮೋದಿಯನ್ನು ಮನಸೋ ಇಚ್ಛೆ ತೆಗಳಿದರು; ಜಿಎಸ್ಟಿ ಸರಿಯಿಲ್ಲವೆಂದರು. ಏಕೆಂದು ಕೇಳಿದಾಗ ಮೊದಲೆಲ್ಲ ಮೂರು ಮದುವೆಯಾಗಿ ಇಪ್ಪತ್ತೆರಡು ಮಕ್ಕಳನ್ನು ಹೊಂದಿದ್ದ ವ್ಯಕ್ತಿಯೊಬ್ಬ ದಿನಕ್ಕೆ ಹತ್ತು ಸಾವಿರ ರೂಪಾಯಿಯ ಸಿಹಿಯನ್ನು ಅವರಂಗಡಿಯಿಂದ ಒಯ್ಯುತ್ತಿದ್ದನಂತೆ. ನೋಟು ಅಮಾನ್ಯೀಕರಣದ ನಂತರ ವಾರಕ್ಕೊಮ್ಮೆ ಒಯ್ಯುತ್ತಾನಂತೆ. ಜಿಎಸ್ಟಿಯ ನಂತರ ಹೋಟೆಲ್ಲಿಗೆ ಬರುವವರೂ ಕಡಿಮೆಯಾಗಿದ್ದಾರಂತೆ.  ಹೀಗೇಕೆಯಾಯ್ತು ಎಂದು ಅವರನ್ನು ಕೇಳಿದರೆ ಕಪ್ಪು ಹಣದ ಚಲಾವಣೆ ನಿಂತುಹೋಗಿದೆಯಲ್ಲ ಅದಕ್ಕೇ ಎಂದು ನಿಟ್ಟುಸಿರು ಬಿಡುತ್ತಾರೆ. ತೆರಿಗೆ ವ್ಯವಸ್ಥೆಗಳ ಕುರಿತಂತೆ ಭಾರತ ಹಿಂದೆಂದೂ ಇಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ಬಜೆಟ್ಗಳಲ್ಲಿ ತೆರಿಗೆಗೆ ಒಳಪಡುವ ಆದಾಯದ ವ್ಯಾಪ್ತಿಯನ್ನು ಹಿಗ್ಗಿಸಿದರೆ ಸಾಕೆಂದು ಕುಳಿತಿರುತ್ತಿದ್ದ ಜನ ನಾವು. ಈಗ ತೆರಿಗೆ ವ್ಯವಸ್ಥೆಯಲ್ಲಿ ಸಣ್ಣ ಬದಲಾವಣೆಯನ್ನೂ ವಿಶೇಷವಾಗಿ ಗಮನಿಸುತ್ತಿದ್ದೇವೆ. ಅದರಿಂದಾಗುವ ಸಮಸ್ಯೆಗಳ ಕುರಿತಂತೆ ಅರ್ಥಶಾಸ್ತ್ರಜ್ಞರನ್ನೂ ಮೀರಿಸುವಂತೆ ಚಚರ್ೆ ಮಾಡುತ್ತಿದ್ದೇವೆ. ಹಾಗೇ ಸುಮ್ಮನೆ ಆಲೋಚಿಸಿ. ಮನಮೋಹನ ಸಿಂಗರು ಪ್ರಧಾನಿಯಾಗಿದ್ದಾಗ ಅರ್ಥಶಾಸ್ತ್ರವಾಗಲೀ, ವಿದೇಶಾಂಗವಾಗಲೀ; ರಕ್ಷಣೆಯಾಗಲೀ, ಮೂಲ ಸೌಕರ್ಯಗಳ ಕುರಿತಂತೆಯೇ ಆಗಲಿ ಸಾಮಾನ್ಯ ಜನರೇನು, ಮಂತ್ರಿಮಾಗಧರೂ ಮಾತನಾಡುತ್ತಿರಲಿಲ್ಲ. ಮೋದಿ ಪ್ರಧಾನಿಯಾದ ಮೇಲೆ ಇವೆಲ್ಲದರ ಕುರಿತಂತೆ ನಿರುತ ಚಚರ್ೆಯಾಗುವಂತೆ ನೋಡಿಕೊಂಡಿದ್ದಾರಲ್ಲ ಅದಕ್ಕೇ ಅವರಿಗೊಂದು ಅಭಿನಂದನೆ ಹೇಳಬೇಕು. ಮುಂದಿನ ದಿನಗಳಲ್ಲಿ ಚುನಾವಣೆಯ ವೇಳೆಗೆ ಜನ ಈ ಕುರಿತಂತೆ ಪಕ್ಷಗಳನ್ನು ಪ್ರಶ್ನಿಸಿದರೆ ಅಚ್ಚರಿ ಪಡುವ ಅಗತ್ಯವಿಲ್ಲ. ಇದಕ್ಕಿಂತ ಹೆಚ್ಚು ಅಚ್ಛೇ ದಿನ್ ಇನ್ನೇನು ಬೇಕು ಹೇಳಿ.

ಜಿಎಸ್ಟಿಯ ಕುರಿತಂತೆ ಎಲ್ಲೆಡೆ ಪರ-ವಿರೋಧದ ಚಚರ್ೆಗಳು ಜೋರಾಗಿವೆ. ಒಂದು ದೇಶಕ್ಕೆ ಒಂದೇ ತೆರಿಗೆ ಎಂದು ಪ್ರಧಾನಿಗಳು ಹೇಳುವಾಗ, ಇದೊಂದು ಕ್ರಾಂತಿಕಾರೀ ಹೆಜ್ಜೆ ಎಂದು ತಿಳಿದವರು ಅಭಿನಂದಿಸುವಾಗ ಒಟ್ಟಾರೆ ತೆರಿಗೆ ವ್ಯವಸ್ಥೆಯ ಕುರಿತು ಒಮ್ಮೆ ಆಲೋಚಿಸಬೇಕೆನಿಸುವುದಿಲ್ಲವೇನು? ಈಗಿನ ಎಲ್ಲ ವ್ಯವಸ್ಥೆಗಳನ್ನು ರೂಪಿಸಿರುವ ಬ್ರಿಟೀಷರ ಆಗಮನಕ್ಕೂ ಮುನ್ನ ಇಲ್ಲಿನ ತೆರಿಗೆ ಪದ್ಧತಿ ಹೇಗಿತ್ತೆಂದು ತಿಳಿಯಬೇಕೆನಿಸುವುದಿಲ್ಲವೇನು?

1

ವೇದಯುಗದ ಕಾಲದಲ್ಲಿ ಭಾರತದ ತೆರಿಗೆಯ ಕಲ್ಪನೆ ಭಿನ್ನವಾಗಿತ್ತು. ಇಂದು ಯಾವುದೆಲ್ಲವನ್ನೂ ಕೆಲವರ ಮೇಲೆ ತೆರಿಗೆಯ ಭಾರ ಹೇರಿ ಉಳಿದವರಿಗೆ ಭಾಗ್ಯವಾಗಿ ಕರುಣಿಸುತ್ತಿದ್ದೇವೆಯೋ ಅವೆಲ್ಲವನ್ನೂ ಅಂದು ದಾನದ ರೂಪದಲ್ಲಿ ನೋಡಲಾಗುತ್ತಿತ್ತು. ಅನ್ನಭಾಗ್ಯ ಅಂತ ಇಂದು ನಾವು ಕರೆದಿರುವುದು ಅಂದು ಅನ್ನದಾನವೆನಿಸಿಕೊಂಡಿತ್ತು. ವಿದ್ಯೆಯೂ ಗುರುಕುಲಗಳ ಮೂಲಕ ದಾನವಾಗಿ ಕೊಡಲ್ಪಡುತ್ತಿತ್ತು. ವ್ಯವಸ್ಥೆಯೇ ದಾನವಾಗಿ ಬಂದ ಧನ, ದವಸ-ಧಾನ್ಯಗಳ ಆಧಾರದ ಮೇಲೆ ನಡೆಯುತ್ತಿತ್ತು. ಆನಂತರದ ದಿನಗಳಲ್ಲಿಯೇ ರಾಜ್ಯ ಚಾಲನೆಗೆ ಪ್ರತಿಯೊಬ್ಬರೂ ಕಡ್ಡಾಯ ದಾನ ಮಾಡಬೇಕಾದ ವ್ಯವಸ್ಥೆ ಬಂದಿರಬೇಕೆಂದು ‘ಟ್ಯಾಕ್ಸೇಶನ್ ಅಂಡ್ ರೆವಿನ್ಯೂ ಕಲೆಕ್ಷನ್ ಇನ್ ಏನ್ಶಿಯೆಂಟ್ ಇಂಡಿಯಾ’ ಕೃತಿಯಲ್ಲಿ ಸಂಜೀವ್ ಕುಮಾರ್ ಶಮರ್ಾ ಅಭಿಪ್ರಾಯ ಪಡುತ್ತಾರೆ. ಬಲಿ, ಭಾಗ, ಕರ, ಶುಲ್ಕ, ಸುಂಕ ಇವುಗಳೆಲ್ಲ ಹಂತ ಹಂತವಾಗಿಯೇ ವಿಕಸನಗೊಂಡವು. ಸರಳವಾಗಿದ್ದ ಈ ವ್ಯವಸ್ಥೆ ರಾಜ್ಯಾಡಳಿತ ವಿಸ್ತಾರವಾದಂತೆಲ್ಲ ಸಂಕೀರ್ಣವಾಗುತ್ತ ಸಾಗಿತು. ಕೌಟಿಲ್ಯನ ಅರ್ಥಶಾಸ್ತ್ರ ಇಂಥದ್ದೇ ವ್ಯವಸ್ಥೆಯ ಪರಿಚಯ ನೀಡುವಂಥದ್ದು. ಹಾಗಂತ ಕರ ಸಂಗ್ರಹವೇ ರಾಜನ ಮೂಲ ಉದ್ದೇಶವಾಗಿರಲಿಲ್ಲ. ಧರ್ಮ, ಅರ್ಥ, ಕಾಮ, ಮೋಕ್ಷಗಳ ಪರಿಕಲ್ಪನೆಯಲ್ಲಿ ಜನರನ್ನು ಧರ್ಮ ಮಾರ್ಗದಲ್ಲಿ ಅರ್ಥಗಳಿಕೆಗೆ ಪ್ರೇರೇಪಿಸಿ ಅದರಲ್ಲಿ ಒಂದು ಪಾಲನ್ನು ತೆರಿಗೆಯಾಗಿ ಸಂಗ್ರಹಿಸಬೇಕಾಗಿತ್ತಷ್ಟೇ. ತೆರಿಗೆ ಹೆಚ್ಚು ಸಂಗ್ರಹವಾಗಿ ರಾಜ್ಯದ ಕಾಮನೆಗಳು ಪೂರೈಕೆಯಾಗಬೇಕೆಂದರೆ ಜನರ ಅರ್ಥ ಗಳಿಕೆಯ ಸಾಮಥ್ರ್ಯ ವೃದ್ಧಿಸುವಂತೆ ನೋಡಿಕೊಳ್ಳಬೇಕಾಗಿತ್ತು. ಅದಕ್ಕೆಂದೇ ವ್ಯಾಪಾರ, ಕೃಷಿ, ಇನ್ನಿತರ ಉದ್ದಿಮೆಗಳೆಲ್ಲ ಜೋರಾಗಿ ನಡೆಯುವಂತೆ ವ್ಯವಸ್ಥೆ ಮಾಡಬೇಕಾಗಿದ್ದು ರಾಜನದ್ದೇ ಕರ್ತವ್ಯವಾಗಿತ್ತು. ಅಂದ ಮಾತ್ರಕ್ಕೆ ಹೆಚ್ಚು ಹೆಚ್ಚು ಹಣ ಗಳಿಸಬಲ್ಲವರಷ್ಟೇ ರಾಜನ ಪ್ರಜೆಗಳಲ್ಲವಲ್ಲ; ಸಂಗೀತ, ಸಾಹಿತ್ಯ, ಕಲೆಯನ್ನೇ ನೆಚ್ಚಿ ಜೀವನ ನಡೆಸುವವರಿಗೂ, ತ್ಯಾಗಿಗಳಾಗಿ ಸಮಾಜದ ಒಳಿತಿಗಾಗಿ ಬದುಕುವವರಿಗೂ ರಾಜ್ಯ ಆಶ್ರಯ ನೀಡಬೇಕಿತ್ತಲ್ಲ ಅದಕ್ಕೆಲ್ಲ ಸಂಗ್ರಹಗೊಂಡ ತೆರಿಗೆ ಬಳಕೆಯಾಗುತ್ತಿತ್ತು. ಇಷ್ಟಕ್ಕೂ ಭಾರತೀಯ ಸಾಹಿತ್ಯಗಳಲ್ಲಿ ರಾಜನೆಂದರೆ ಪ್ರಜಾ ನಾಯಕನಲ್ಲ, ಪ್ರಜಾ ರಂಜಕ ಮಾತ್ರ. ಆತನಿಗೆ ಯಾವ ಒಡೆತನವೂ ಇಲ್ಲ ಬದಲಿಗೆ ಆತ ಎಲ್ಲವನ್ನೂ ಸಂಭಾಳಿಸುವವ ಅಷ್ಟೇ. ಹೀಗಿದ್ದರೂ ರಾಜನೊಬ್ಬನ ಬೊಕ್ಕಸ ಸದಾ ತುಂಬಿರುವುದು ಅಕ್ಕಪಕ್ಕದ ರಾಜ್ಯಗಳೆದುರು ಆತನ ಸಾಮಥ್ರ್ಯವನ್ನು ಬಿಂಬಿಸುತ್ತಿತ್ತು. ಬೊಕ್ಕಸದಲ್ಲಿ ತುಂಬಿರುವ ಹಣವನ್ನು ರಾಜನೂ ಬಲು ಎಚ್ಚರಿಕೆಯಿಂದಲೇ ಬಳಸಬೇಕಿತ್ತು. ಆತನೂ ಸದಾ ಮೋಕ್ಷಗಾಮಿಯಾಗಿಯೇ ಆಲೋಚಿಸುತ್ತ ತ್ಯಾಗ ಜೀವಿಯಾಗಿರಬೇಕಿತ್ತೆಂದು ಪ್ರಜೆಗಳು ಅಪೇಕ್ಷಿಸುತ್ತಿದ್ದರು. ಜನಕ, ದಶರಥರೆಲ್ಲ ಅದಕ್ಕೆ ಉದಾಹರಣೆ. ರಾಜನಿಗೆ ಸ್ವಾರ್ಥ ಇಣುಕಿದಾಗ ಬುದ್ಧಿಹೇಳಲು ವಿಧುರನಂಥವರು ಮಂತ್ರಿಗಳಾಗಿ ಇದ್ದೇ ಇರುತ್ತಿದ್ದರು. ನ್ಯಾಯ ಕೊಡುವ ರಾಜ ತನಗೂ ಅದೇ ಶಾಸ್ತ್ರಬದ್ಧ ನ್ಯಾಯ ಹೊಂದುತ್ತದೆಂದು ಅರಿತಿದ್ದ. ಅಮೋಘವರ್ಷ ನೃಪತುಂಗ ರಾಜದ್ರೋಹಕ್ಕಾಗಿ ತನ್ನ ಮಗನಿಗೂ ಕಠಿಣ ಶಿಕ್ಷೆ ವಿಧಿಸಿದ್ದನ್ನು ಈ ಹೊತ್ತಲ್ಲಿ ಸ್ಮರಿಸಿಕೊಳ್ಳಲೇ ಬೇಕು.

ಕಾಲಕ್ರಮದಲ್ಲಿ ಮಂದಿರಗಳು ತೆರಿಗೆ ಸಂಗ್ರಹದಲ್ಲಿ ಮಹತ್ವದ ಪಾತ್ರ ವಹಿಸಿತೆನಿಸುತ್ತದೆ. ರಾಜ ಮಾಡಬೇಕಾದ ಎಲ್ಲ ಕೆಲಸಗಳನ್ನೂ ಒಂದು ಮಂದಿರ ಸುತ್ತಮುತ್ತಲಿನ ಹಳ್ಳಿಗಳಿಗೆ ತಾನೇ ಮಾಡುತ್ತಿತ್ತು. ಅನ್ನದಾನ, ವಿದ್ಯಾದಾನ, ಆರೋಗ್ಯದಾನ ಎಲ್ಲಕ್ಕೂ ಮಿಗಿಲಾಗಿ ಜನರನ್ನು ಸದಾ ಧರ್ಮ ಮಾರ್ಗದಲ್ಲಿರುವಂತೆ ಪ್ರೇರೇಪಿಸುತ್ತಿತ್ತು ಮಂದಿರ. ಅನೇಕ ಬಾರಿ ರಾಜ ಮಂದಿರಕ್ಕೆ ಹೊಂದಿಕೊಂಡ ಹಳ್ಳಿಗಳನ್ನು ಉಂಬಳಿಯಾಗಿ ಮಂದಿರಕ್ಕೇ ಕೊಟ್ಟು ಅಲ್ಲಿನ ಕರವನ್ನು ಮಂದಿರಗಳಿಗೇ ಒಪ್ಪಿಸಿಬಿಡುವ ವ್ಯವಸ್ಥೆ ಮಾಡುತ್ತಿದ್ದ. ಇವೆಲ್ಲವೂ ಸಭ್ಯ ಸಮಾಜಕ್ಕೆ ಬೇಕಾದ ಸಭ್ಯ ವ್ಯವಸ್ಥೆಯನ್ನು ರೂಪಿಸಿಕೊಟ್ಟಿದ್ದವು. ಕಾಲಕ್ರಮದಲ್ಲಿ ರಾಜನ ಬೊಕ್ಕಸದಂತೆ ಮಂದಿರಗಳ ಬೊಕ್ಕಸಗಳೂ ದಾನದಿಂದ ಶ್ರೀಮಂತಗೊಂಡು ತುಂಬಿ ತುಳುಕಾಡುತ್ತಿದ್ದವು. ಕೆಲವರಂತೂ ಈ ಹಣವೇ ಆಕ್ರಮಣಕಾರಿಗಳನ್ನು ಆಕಷರ್ಿಸಿದ್ದೆಂದು ನಂಬುತ್ತಾರೆ. ಆದರೆ ಭಾರತದಲ್ಲಿ ತುಂಬಿ ತುಳುಕಾಡುತ್ತಿದ್ದ ಶ್ರೀಮಂತಿಕೆ ಜಗತ್ತಿನ ಎಲ್ಲ ದರೋಡೆಕೋರರನ್ನೂ, ಕಳ್ಳ-ಕಾಕರನ್ನೂ ಆಕಷರ್ಿಸಿತೆಂದು ಹೇಳಲು ಮಾತ್ರ ಹಿಂಜರಿಯುತ್ತಾರೆ. ಈಶಾನ್ಯದಿಂದ ಬಂದ ಮುಸಲ್ಮಾನರನ್ನು ಸೆಳೆದಿದ್ದು ಸಂಪತ್ತೆಂದು ಒಪ್ಪೋಣ. ಆದರೆ ಅವರಿಗೆ ಇಲ್ಲಿರುವ ಜನರನ್ನು ಕೊಲೆಗೈಯ್ಯಲು ಪ್ರೇರೇಪಿಸಿದ್ದು, ಮಂದಿರಗಳನ್ನು ಧ್ವಂಸಗೈದು, ಮೂತರ್ಿಗಳನ್ನು ಭಂಜಿಸಲು ತಾಕೀತು ಮಾಡಿದ್ದು ಯಾರು? ಅವರು ಅನುಸರಿಸುತ್ತಿದ್ದ ಪಂಥವೇನು? ಹೀಗೆ ಇತಿಹಾಸಕಾರರನ್ನು ಕೇಳಿದರೆ ಅವರು ಉತ್ತರಿಸಲಾರರು. ಅವರ ದೃಷ್ಟಿಯಲ್ಲಿ ನಾವು ಸಂಪತ್ತನ್ನು ಕೂಡಿಟ್ಟುಕೊಂಡಿದ್ದೇ ತಪ್ಪು, ಈ ತಪ್ಪು ತಿದ್ದಲೆಂದು ಅನ್ಯರು ಆಕ್ರಮಣ ಮಾಡಿದರು. ಇದನ್ನು ಅರಿತೇ ಸ್ವಾತಂತ್ರ್ಯ ಬಂದ ಅರವತ್ತು ವರ್ಷ ಆಳಿದ ಪುಣ್ಯಾತ್ಮರು ಭಾರತದ ಖಜಾನೆ ತುಂಬದಂತೆ ನೋಡಿಕೊಂಡರು, ಇಲ್ಲಿದ್ದರೆ ಆಕ್ರಮಣವಾದೀತೆಂದು ಹಣವನ್ನು ವಿದೇಶಕ್ಕೆ ಸಾಗಿಸಿ ಅಲ್ಲಿ ಕೂಡಿಟ್ಟರು. ಕೊನೆಗೆ ಬೊಕ್ಕಸದಲ್ಲಿ ಕ್ರೋಢೀಕರಣದಿಂದ ಸಮಸ್ಯೆಯಾಗುವುದೆಂದರಿತು ಭಾರತವನ್ನು ಸಾಲದಲ್ಲಿರುವಂತೆ ನೋಡಿಕೊಂಡರು. ಸಿರಿವಂತ ರಾಷ್ಟ್ರದ ಮೇಲೆ ಎಲ್ಲರೂ ಕಣ್ಣು ಹಾಕುತ್ತಾರೆ, ಬಡವಾಗಿದ್ದರೆ ಅನುಕಂಪ ತೋರುತ್ತಾರೆ ಎಂಬ ತರ್ಕ ಇರಬೇಕು ಅವರದ್ದು!

2

ಭಾರತದಲ್ಲಿ ತೆರಿಗೆ ಪದ್ಧತಿಗೆ ಸಮರ್ಥ ಸ್ವರೂಪ ಕೊಟ್ಟಿದ್ದು ಚಾಣಕ್ಯನೇ. ಬಹುಶಃ ಆದಾಯ ತೆರಿಗೆಯ ವಿಸ್ತಾರ ರೂಪ ಅಲ್ಲಿಯೇ ನಮಗೆ ಸಿಗೋದು. ವ್ಯಾಪಾರಿಗಳು ತಮ್ಮ ಲಾಭದ ಹದಿನೈದರಿಂದ ಇಪ್ಪತ್ತು ಪ್ರತಿಶತ ಕೊಡಬೇಕು ಮತ್ತು ರೈತರು ಹತ್ತರಿಂದ ಹದಿನೈದು ಪ್ರತಿಶತದಷ್ಟು ಆದಾಯ ತೆರಿಗೆ ಕಟ್ಟಬೇಕೆಂದು ಆತ ನಿಯಮ ಮಾಡಿದ್ದ. ಮೌರ್ಯ ಸಾಮ್ರಾಜ್ಯದ ಕಾಲದಲ್ಲಿ ತೆರಿಗೆ ಸಂಗ್ರಹಣೆಯ ಪದ್ಧತಿ ಅತ್ಯುತ್ಕೃಷ್ಟವಾಗಿ ರೂಪಿಸಲ್ಪಟ್ಟಿತ್ತು. ಮುಸಲ್ಮಾನರ ಕಾಲದಲ್ಲಿ ತೆರಿಗೆ ಪದ್ಧತಿ ಸ್ವಲ್ಪ ವಿಕಟವಾಯಿತು. ಎಲ್ಲವನ್ನೂ ಮತೀಯ ದೃಷ್ಟಿಕೋನದಿಂದಲೇ ನೋಡುವ ಆ ರಾಜರುಗಳ ಆಳ್ವಿಕೆಯ ಕಾಲದಲ್ಲಿ ಹಿಂದುವಾಗಿರಬೇಕೆಂದರೂ ಜೇಸಿಯಾ ತೆರಿಗೆ ಕಟ್ಟಬೇಕಿತ್ತು. ಇದೊಂದು ರೀತಿಯಲ್ಲಿ ಪೆಟ್ರೋಲಿಗೆ ಬಗೆ ಬಗೆಯ ಸೆಸ್ಗಳನ್ನು ಕಟ್ಟಿದಂತೆ. ಹಾಗೆ ನೋಡಿದರೆ ಬೊಕ್ಕಸದ ಹಣವನ್ನು ಎಚ್ಚರಿಕೆಯಿಂದ ಬಳಸಬೇಕೆಂಬ ಹಿಂದೂ ನಿಯಮವನ್ನು ಮೀರಿ ವತರ್ಿಸಿದ್ದು ಮುಸಲ್ಮಾನ ನವಾಬರೇ. ಮುಂದೊಮ್ಮೆ ಬ್ರಿಟೀಷರೂ ಲೂಟಿ ಮಾಡಿದ ಹಣದಲ್ಲಿ ಐಷಾರಾಮಿ ಬದುಕು ನಡೆಸುವ ತಮ್ಮಲ್ಲಿನ ಅಧಿಕಾರಿಗಳನ್ನು ‘ನವಾಬ’ ಎಂದು ಆಡಿಕೊಳ್ಳುವಷ್ಟರ ಮಟ್ಟಿಗೆ! ಹಿಂದೂ ರಾಜರುಗಳೂ ಚೌಕಟ್ಟಿನೊಳಗೇ ಚೆನ್ನಾದ ಬದುಕನ್ನು ನಡೆಸಿದ್ದರೆಂಬುದನ್ನು ಮರೆಯುವಂತಿಲ್ಲ. ಹರ್ಷವರ್ಧನನಂತೂ ವರ್ಷದ ಕೊನೆಯಲ್ಲಿ ಬೊಕ್ಕಸದಲ್ಲಿರುವ ಹಣವನ್ನೆಲ್ಲಾ ಜನತೆಗೆ ದಾನ ಮಾಡಿ ನದಿಯಲ್ಲಿ ಸ್ನಾನ ಮಾಡಿದ ನಂತರ ತನ್ನ ಸೋದರಿ ಕೊಟ್ಟ ಹೊಸ ಬಟ್ಟೆಯಿಂದ ಮತ್ತೆ ಅಧಿಕಾರ ಶುರು ಮಾಡುತ್ತಿದ್ದನಂತೆ. ಈ ಬಗೆಯ ತ್ಯಾಗದ ಪರಂಪರೆ ಮೊಘಲರ ಕಾಲಕ್ಕೆ ನಿಂತೇ ಹೋಗಿತ್ತು. ಅವರ ಜನಾನಾಗಳು, ಅದರ ನಿರ್ವಹಣೆ, ವೈಭವದ ಬದುಕನ್ನೆಲ್ಲ ಜನರ ತೆರಿಗೆಯಲ್ಲಿ ಮತ್ತು ಯುದ್ಧದಲ್ಲಿ ಗೆದ್ದ ಹಣದಲ್ಲಿಯೇ ನಿರ್ವಹಿಸಬೇಕಿತ್ತಲ್ಲ. ಆಗಲೇ ತೆರಿಗೆಯ ನೆಪದ ಶೋಷಣೆ ಶುರುವಾಗಿದ್ದು. ಮುಂದೆ ಅದು ಅಸಹನೀಯ ಸ್ಥಿತಿಯನ್ನು ತಲುಪಿದ್ದು ಮಾತ್ರ ಬ್ರಿಟೀಷರ ಕಾಲಾವಧಿಯಲ್ಲಿಯೇ.

3

ಭಾರತದ ತೆರಿಗೆ ವ್ಯವಸ್ಥೆಯನ್ನು ಅತ್ಯಂತ ಸಂಕೀರ್ಣಗೊಳಿಸಿ ಹದಗೆಡುವಂತೆ ಮಾಡಿ ಭಾರತವನ್ನು ಇಂದಿನ ದುಸ್ಥಿತಿಗೆ ತಳ್ಳಿದ್ದು ಈಸ್ಟ್ ಇಂಡಿಯಾ ಕಂಪನಿಯ ದುರಾಡಳಿತವೇ. ಈ ಕುರಿತಂತೆ ಅನೇಕ ಸಾಹಿತ್ಯಗಳು ಲಭ್ಯವಿವೆಯಾದರೂ ಶಶಿ ತರೂರ್ರು ಇತ್ತೀಚೆಗೆ ಬರೆದಿರುವ ದಿ ಎರಾ ಆಫ್ ಡಾಕರ್್ನೆಸ್ ಅಧ್ಯಯನಯೋಗ್ಯವಾದುದು. ಭಾರತವನ್ನು ಆಂಗ್ಲರು ಲೂಟಿ ಮಾಡಿದ ವಿವರವನ್ನು ನೀವು ಆಂಗ್ಲರ ಮಾತುಗಳಲ್ಲಿಯೇ ಕೇಳಬೇಕು. ಊಟಿಯನ್ನು ಕಟ್ಟಿದವನೆಂದು ಗುರುತಿಸಲ್ಪಡುವ ಜಾನ್ ಸುಲಿವನ್ 1840ರಲ್ಲಿ ಹೇಳಿದ ನುಡಿ ಉಲ್ಲೇಖನೀಯ. ‘ಸಣ್ಣ ನ್ಯಾಯಾಲಯಗಳು ಕಾಣೆಯಾದವು, ವ್ಯಾಪಾರ ಸ್ತಬ್ಧವಾಯ್ತು, ಬಂಡವಾಳ ನಶಿಸಿತು, ಭಾರತೀಯರು ಬಡವರಾದರು, ಇಂಗ್ಲೀಷರು ಸಂಪದ್ಭರಿತರಾದರು. ಸ್ಪಂಜಿನಂತೆ ಗಂಗಾ ತಟದಿಂದ ಸಿರಿವಂತಿಕೆಯನ್ನು ಹೀರಿ ಅದನ್ನು ಥೇಮ್ಸ್ ನದಿಯ ದಂಡೆಗಳಲ್ಲಿ ಹಿಂಡಿ ಹರಿಸಲಾಯ್ತು’ ಎಂದು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದ್ದ. ಇಲ್ಲಿಗೆ ಬಂದಾಗ ಬ್ರಿಟೀಷರು ಹೇಗಿದ್ದರು ಗೊತ್ತೇನು? ಮೊದಲ ಬಾರಿಗೆ ಇಂಗ್ಲೀಷರ ಪರವಾಗಿ ರಾಜನೆದುರು ನಿಂತಿದ್ದ ವಿಲಿಯಂ ಹಾಕಿನ್ಸ್ನ್ನು ರಾಜ ಆಡಿಕೊಂಡಿದ್ದ. ಆತನ ಉಡುಗೊರೆಯನ್ನು ನಿರಾಕರಿಸಲಾಗಿತ್ತು. ಸರ್ ಥಾಮಸ್ ರೋ ಜಹಾಂಗೀರನೆದುರು ದೈನೇಸಿಯಾಗಿ ವ್ಯಾಪಾರದ ಅನುಮತಿಗಾಗಿ ಗೋಗರೆದು ನಿಂತಿದ್ದ. ಮೊಘಲರ ಸಿರಿವಂತಿಕೆಯ ಎದುರು ಇಂಗ್ಲೀಷರ ಬುದ್ಧಿಗೆ ಮಂಕು ಬಡಿದಿತ್ತು. ಆದರೆ ಕಾಲಚಕ್ರ ಹೇಗೆ ತಿರುಗಿ ನಿಂತಿತೆಂದರೆ ಇದೇ ಬಿಳಿಯರು 1757ರಲ್ಲಿ ಮೋಸದಿಂದ ಸಿರಜುದ್ದೌಲನನ್ನು ಸೋಲಿಸಿದ ನಂತರ ಅದರ ಸೂತ್ರಧಾರಿ ರಾಬಟರ್್ ಕ್ಲೈವ್ ಅಲ್ಲಿನ ಬೊಕ್ಕಸದಲ್ಲಿದ್ದ ಇಪ್ಪತ್ತೈದು ಲಕ್ಷ ಪೌಂಡುಗಳಷ್ಟು ಹಣವನ್ನು (ಅಂದಿನ ಲೆಕ್ಕದಲ್ಲಿ!) ಇಂಗ್ಲೆಂಡಿನ ಬೊಕ್ಕಸಕ್ಕೆ ವಗರ್ಾಯಿಸಿದ. ಬೇಡುವ ಸ್ಥಿತಿಯಲ್ಲಿದ್ದ ಇಂಗ್ಲೆಂಡು ಏಕಾಕಿ ಇಷ್ಟೊಂದು ಹಣವನ್ನು ನೋಡಿ ಬಾಯಿ ಕಳಕೊಂಡಿರಬೇಕು. ಅದಾದ ಮೇಲೆ ಈಸ್ಟ್ ಇಂಡಿಯಾ ಕಂಪನಿ ನೂರು ವರ್ಷಗಳ ಕಾಲ ಹಿಂದೆ ತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಬಂಗಾಳದ ಅನೇಕ ಪ್ರದೇಶಗಳಲ್ಲಿ ತೆರಿಗೆ ಸಂಗ್ರಹಿಸುವ ಅಧಿಕಾರವನ್ನು ಕಂಪನಿ ಸಕರ್ಾರ ಪಡೆದುಕೊಂಡಿತು. 1765ರಿಂದ 1815ರವರೆಗೆ ಕಂಪನಿ ಭಾರತದಿಂದ ಪ್ರತೀವರ್ಷ ಒಂದು ಕೋಟಿ ಎಂಭತ್ತು ಲಕ್ಷ ಪೌಂಡುಗಳಷ್ಟು ಹಣವನ್ನು ತೆರಿಗೆ ಹೇರಿ ಸಂಗ್ರಹಿಸಿಕೊಂಡು ಹೋಗುತ್ತಿತ್ತೆಂದು ವರದಿಗಳು ಹೇಳುತ್ತವೆ. ಹದಿನೆಂಟನೇ ಶತಮಾನದ ಅಂತ್ಯದಲ್ಲಿ ತಮ್ಮಿಂದ ಆಳಲ್ಪಡುತ್ತಿದ್ದ ಶೇಕಡಾ ಅರವತ್ತೈದರಷ್ಟು ಜನ ಅವರ ಮೇಲೆ ಹೇರಲಾದ ಶೇಕಡಾ ಐವತ್ತರಷ್ಟು ಆದಾಯ ತೆರಿಗೆಯನ್ನು ಕಟ್ಟಲಾಗದೇ ತಮ್ಮ ಜಮೀನನ್ನು ಬಿಟ್ಟು ಓಡಿ ಹೋಗಿದ್ದರೆಂದು ಬ್ರಿಟೀಷರು ಕುಪಿತರಾಗಿದ್ದರಂತೆ. ಖ್ಯಾತ ಇತಿಹಾಸ ತಜ್ಞ ವಿಲ್ ಡ್ಯುರಂಟ್ ‘ತೆರಿಗೆ ಕಟ್ಟಲಾಗದವರನ್ನು ಜೈಲಿಗೆ ತಳ್ಳಲಾಗುತ್ತಿತ್ತು, ಬಿಸಿಲಲ್ಲಿ ಒಣಗಿಸಲಾಗುತ್ತಿತ್ತು; ಅನೇಕರು ತಮ್ಮ ಮಕ್ಕಳನ್ನು ಮಾರಿ ಬಂದ ಹಣದಲ್ಲಿ ತೆರಿಗೆ ಕಟ್ಟಿದ ಉಲ್ಲೆಖಗಳಿವೆ. ಮೊದಲಬಾರಿಗೆ ಈಸ್ಟ್ ಇಂಡಿಯಾ ಕಂಪನಿ ಭಾರತದ ಇತಿಹಾಸದಲ್ಲಿ ತನ್ನ ಜೀವನೋಪಾಯವಾಗಿದ್ದ ಜಮೀನಿನಿಂದಲೇ ದೂರವಿರುವ ಜಮೀನು ರಹಿತ ರೈತರನ್ನು ಸೃಷ್ಟಿಸಿತು’ ಎಂದು ನೊಂದುಕೊಂಡಿದ್ದಾರೆ. ಕಂಪನಿ ಸಕರ್ಾರದ ಹೊತ್ತಲ್ಲಿ ಭ್ರಷ್ಟಾಚಾರ ತುದಿ ಮುಟ್ಟಿತ್ತು. ತೆರಿಗೆಯ ಸುಲಿಗೆ ಒಂದೆಡೆಯಾದರೆ ಲಂಚ ಪಡೆಯುವುದು, ದರೋಡೆ ಮಾಡುವುದು ಮತ್ತು ಅಗತ್ಯಬಿದ್ದರೆ ಕೊಲೆಯನ್ನೂ ಮಾಡುತ್ತಿದ್ದರು ಸಕರ್ಾರದ ಪ್ರತಿನಿಧಿಗಳು. ಭಾರತದ ಕುರಿತಂತೆ ಪ್ರಕಟಗೊಂಡ ಆಕ್ಸ್ಫಡರ್್ ಇತಿಹಾಸ ಕೃತಿ ‘ಭಾರತದಲ್ಲಿ ಪ್ರತಿಯೊಬ್ಬರೂ ಮತ್ತು ಪ್ರತಿಯೊಂದೂ ಮಾರಾಟಕ್ಕಿದೆ’ ಎಂದು ಬರೆದಿತ್ತು.

ತೆರಿಗೆ ವ್ಯವಸ್ಥೆ ಮತ್ತು ಭ್ರಷ್ಟಾಚಾರದ ಕುರಿತಂತೆ ಹೇಳಲು ಸಾಕಷ್ಟಿದೆ. ಆದರೆ ಒಂದಂತೂ ಸತ್ಯ. ಅವರು ಹಾಳು ಮಾಡಿಟ್ಟುಹೋಗಿದ್ದನ್ನು ಸರಿ ಪಡಿಸುವ ಅವಕಾಶ ನಮಗೆ ಖಂಡಿತ ಇತ್ತು. ಆದರೆ ನಮ್ಮನ್ನು ಆಳಿದವರು ರಾಬಟರ್್ ಕ್ಲೈವ್ನಿಗಿಂತ ಕೆಟ್ಟದಾಗಿ ನಮ್ಮನ್ನು ಲೂಟಿಗೈದರು. ಅವನಂತೆ ವಿದೇಶದಲ್ಲಿ ಕೂಡಿಟ್ಟರು. ಐಷಾರಾಮಿ ಬದುಕನ್ನು ನಡೆಸಿದರು. ಕೊನೆಗೆ ಭಾರತೀಯರನ್ನು ದಾರಿದ್ರ್ಯಕ್ಕೆ ತಳ್ಳಿ ಅಧಿಕಾರವನ್ನು ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಖಾತ್ರಿ ಮಾಡಿ ಹೋದರು.

ಮೊಘಲರಿಂದ ಶುರುವಾದ ಈ ಅವಾಂತರ ಆಧುನಿಕ ಮೊಘಲರವರಿಗೆ ನಡೆದೇ ಬಂತು. ಇವರೆಲ್ಲರೂ ಮಾಡಿದ ಕೊಳಕನ್ನು ತೊಳೆಯುವಾಗ ಒಂದಷ್ಟು ಕಷ್ಟವಾಗೋದು ಸಹಜವೇ. ಸಹಿಸಿಕೊಳ್ಳಬೇಕಷ್ಟೇ. ಆಗ ಮಾತ್ರ ಹಳೆಯ ವೈಭವ ಮರುಕಳಿಸೀತು, ಏನಂತೀರಿ?

ಏನೇ ಹೇಳಿ

ನೂರೆಂಟು ಇರಿತಗಳಿಂದ
ರಕ್ತಸಿಕ್ತವಾಗಿದೆ ಹೃದಯ
ಏನೇ ಹೇಳಿ
ನನ್ನದೊಂದೇ ಪ್ರಾರ್ಥನೆ.
ಕೊನೆಯ ಬಿಕ್ಕಳಿಕೆಗೂ ಮುನ್ನ
ಹೃದಯ ಶಾಪ ಹಾಕದಿರಲಿ.

ಐತಿಹಾಸಿಕ ಸಜರ್ಿಕಲ್ ಸ್ಟ್ರೈಕ್ಗೆ ವರ್ಷದ ಸಂಭ್ರಮ!

ಐತಿಹಾಸಿಕ ಸಜರ್ಿಕಲ್ ಸ್ಟ್ರೈಕ್ಗೆ ವರ್ಷದ ಸಂಭ್ರಮ!

ಮೊದಲೆಲ್ಲ ಹಿಂದೂ ಧರ್ಮವನ್ನು ಅವಹೇಳನ ಮಾಡುವಂತಹ, ಭಯೋತ್ಪಾದಕರ ಮೇಲೆ ಕರುಣೆ ಹುಟ್ಟುವಂತಹ ಸಿನಿಮಾಗಳೆ ರಾರಾಜಿಸುತ್ತಿದ್ದವು. ಇಂದು ಜನ ಅವುಗಳತ್ತ ಕಡೆಗಣ್ಣಿಂದಲೂ ನೋಡುತ್ತಿಲ್ಲ. ಬಾಲಿವುಡ್ಡನ್ನು ಆಳುತ್ತಿದ್ದ ಶಾರುಖ್, ಅಮೀರರೆಲ್ಲ ಸಾಲು ಸಾಲು ತೋಪೆದ್ದ ಸಿನಿಮಾಗಳಿಂದ ಬೀದಿಗೆ ಬಂದುಬಿಟ್ಟಿದ್ದಾರೆ. ದೇಶಭಕ್ತಿಗೆ ಮೇರುವಿನಷ್ಟು ಮೌಲ್ಯ ಬಂದಿರುವ ವಿಶೇಷವಾದ ಕಾಲಘಟ್ಟದಲ್ಲಿ ನಾವಿದ್ದೇವೆ.

1ಐತಿಹಾಸಿಕ ಸಜರ್ಿಕಲ್ ಸ್ಟ್ರೈಕ್ಗೆ ವರ್ಷದ ಸಂಭ್ರಮ! ‘ಆಧ್ಯಾತ್ಮದ ಮೂಲ ಅವಶ್ಯಕತೆಯೇ ನಿಭರ್ೀತಿ. ಹೇಡಿಗಳು ಎಂದಿಗೂ ನೀತಿವಂತರಾಗಿರುವುದಿಲ್ಲ’ ಈ ಸಾಲುಗಳನ್ನು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಶಿವ್ ಅರೂರರ ‘ಇಂಡಿಯಾಸ್ ಮೋಸ್ಟ್ ಫಿಯರ್ಲೆಸ್’ ಎನ್ನುವ ಕೃತಿಯ ಮುನ್ನುಡಿಯಲ್ಲಿ ಉಲ್ಲೇಖಿಸಿದ್ದಾರೆ. ಉರಿ ಛದ್ಮ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ಸಜರ್ಿಕಲ್ ಸ್ಟ್ರೈಕ್ಗೆ ಮೊನ್ನೆ ತಾನೇ ಒಂದು ವರ್ಷವಾದಾಗ ಮಾರುಕಟ್ಟೆಗೆ ಬಂದ ಪುಸ್ತಕ ಇದು. ಒಂದೇ ಗುಕ್ಕಿಗೆ ಮುಗಿಸಿಬಿಡಬಹುದಾದ ರೋಚಕ ಕೃತಿ. ಭಾರತೀಯ ಸೈನಿಕರ ಕಂಡು ಕೇಳರಿಯದ ಸಾಹಸ ಗಾಥೆಗಳ ಸಂಪೂರ್ಣ ವಿವರ ಇದರಲ್ಲಿ ಹಾಸು ಹೊಕ್ಕಾಗಿದೆ. ಕದನ ಕಲಿಗಳನ್ನು ಖುದ್ದು ಮಾತಾಡಿಸಿ ಅವುಗಳಲ್ಲಿ ಗೌಪ್ಯತೆಯ ದೃಷ್ಟಿಯಿಂದ ಹೇಳಬಾರದ ಕೆಲ ವಿಷಯಗಳನ್ನು ಪಕ್ಕಕ್ಕಿಟ್ಟು ಉಳಿದುದನ್ನು ಕಣ್ಣಿಗೆ ಕಟ್ಟುವಂತೆ ವಣರ್ಿಸಿರುವ ಅಪರೂಪದ ಪುಸ್ತಕವಿದು. ಸೈನಿಕರ ಕಥನಗಳು ಹೀಗೆ ಪುಸ್ತಕವಾಗಿ ಹೊರಬರಬೇಕು. ಸಿನಿಮಾಗಳಾಗಿ ಜನರ ಮುಂದೆ ರಾರಾಜಿಸಬೇಕು. ಆಗಲೇ ಜನ ಸಾಮಾನ್ಯರಲ್ಲೂ ಆತ್ಮವಿಶ್ವಾಸದ ಕಿಡಿ ಹೊಮ್ಮೋದು. ಬಹುಶಃ ಅತಿಶಯೋಕ್ತಿಯಾದೀತೇನೋ? ಮೋದಿ ಬರುವ ಮುನ್ನ ಪರಮವೀರ ಚಕ್ರ ಪಡೆದವರೊಂದಷ್ಟು ಜನರ ಕಥನಗಳನ್ನಷ್ಟೇ ಓದಬೇಕಿತ್ತು. ಕಾಗರ್ಿಲ್ ದಾಳಿಯ ವೇಳೆಗೆ ಪತ್ರಕರ್ತರನ್ನು ಕದನ ಭೂಮಿಗೆ ಬಿಟ್ಟಿದ್ದರ ಫಲವಾಗಿ ಒಂದಷ್ಟು ಮೈನವಿರೇಳಿಸುವ ಕಥೆಗಳು ಸಮಾಜಕ್ಕೆ ದಕ್ಕಿದವು. ಕಳೆದ ಮೂರು ವರ್ಷಗಳಲ್ಲಿ ಭಾರತೀಯ ಸೇನೆಯ ಸಾಹಸವನ್ನು ಆಧಾರವಾಗಿಟ್ಟುಕೊಂಡ ಕಥೆಗಳು ಸಿನಿಮಾಗಳಾದವು. ಬೇಬಿ, ರುಸ್ತುಂಗಳು ಅಂಥವು. ಏರ್ ಲಿಫ್ಟ್ ಸೈನಿಕನ ಕಥೆಯಲ್ಲದಿದ್ದರೂ ಭಾರತೀಯನೊಬ್ಬನ ಆತ್ಮವಿಶ್ವಾಸ ಬಡಿದೆಬ್ಬಿಸುವಲ್ಲಿ ಅದರ ಪಾತ್ರವೇನೂ ಕಡಿಮೆ ಇರಲಿಲ್ಲ. ನೀರಜಾ ಭಾನೋಟ್ ಎಂಬ ಗಗನ ಸಖಿಯ ಸಾಹಸ ಗಾಥೆಯೂ ಸಿನಿಮಾ ಆಗಿದ್ದು ಈ ಅವಧಿಯಲ್ಲಿಯೇ. ಮೊದಲೆಲ್ಲ ಹಿಂದೂ ಧರ್ಮವನ್ನು ಅವಹೇಳನ ಮಾಡುವಂತಹ, ಭಯೋತ್ಪಾದಕರ ಮೇಲೆ ಕರುಣೆ ಹುಟ್ಟುವಂತಹ ಸಿನಿಮಾಗಳೆ ರಾರಾಜಿಸುತ್ತಿದ್ದವು. ಇಂದು ಜನ ಅವುಗಳತ್ತ ಕಡೆಗಣ್ಣಿಂದಲೂ ನೋಡುತ್ತಿಲ್ಲ. ಬಾಲಿವುಡ್ಡನ್ನು ಆಳುತ್ತಿದ್ದ ಶಾರುಖ್, ಅಮೀರರೆಲ್ಲ ಸಾಲು ಸಾಲು ತೋಪೆದ್ದ ಸಿನಿಮಾಗಳಿಂದ ಬೀದಿಗೆ ಬಂದುಬಿಟ್ಟಿದ್ದಾರೆ. ದೇಶಭಕ್ತಿಗೆ ಮೇರುವಿನಷ್ಟು ಮೌಲ್ಯ ಬಂದಿರುವ ವಿಶೇಷವಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಹೀಗಾಗಿಯೇ ಈ ಕೃತಿ ಹೆಚ್ಚು ಗಮನ ಸೆಳೆದಿದ್ದು. ಜನರಲ್ ರಾವತ್ರೇ ಅನೇಕ ಕಥೆಗಳನ್ನು ಲೇಖಕರಿಗೆ ವಿವರಿಸಿರುವುದರಿಂದ ಸಕರ್ಾರದ ಆಸ್ಥೆಯಿಂದಲೇ ಹೊರಬಂದಿರುವ ಪುಸ್ತಕವಿದು ಎಂದು ಮೇಲ್ನೋಟಕ್ಕೇ ನಿರ್ಣಯಿಸಿಬಿಡಬಹುದು. ಬಿಡಿ. ಸದ್ಯಕ್ಕೆ ಚಚರ್ೆಯಾಗಬೇಕಿರುವ ಸಂಗತಿ ಅದಲ್ಲ, ಈ ಕೃತಿಯ ವಸ್ತುವಿನದ್ದು. ಸಹಜವಾಗಿಯೇ ಮೊದಲ ಅಧ್ಯಾಯ ಸಜರ್ಿಕಲ್ ದಾಳಿಗೆ ಸಂಬಂಧಿಸಿದ್ದೇ. ‘ಭಯವೆಂದರೇನೆಂದೇ ನಮಗೆ ಗೊತ್ತಿಲ್ಲ’ ಎಂಬುದು ಅದರ ಶೀಷರ್ಿಕೆ. ಭಾರತೀಯ ಸೇನೆಯ ಸ್ಪೆಶಲ್ ಫೋಸರ್್ ಕುರಿತಂತೆ ಅರಿತವರಿಗೆ ಈ ಶೀಷರ್ಿಕೆ ಹೊಸತೆನಿಸಲಾರದು. ಈ ವಿಶೇಷ ಪಡೆಯ ಸದಸ್ಯನಾಗುವುದು ಪ್ರತಿಯೊಬ್ಬ ಸೈನಿಕನ ಮನದಾಳದ ಬಯಕೆ. ಏಕೆಂದರೆ ಭಾರತದ ಈ ಪಡೆ ಜಗತ್ತಿನ ಅತ್ಯಂತ ಶ್ರೇಷ್ಠ ತುಕಡಿಗಳಲ್ಲಿ ಗಣಿಸಲ್ಪಡುವಂಥದ್ದು. ಭಾರತದ ನೌಕಾ ಪಡೆಯಲ್ಲಿ ಮಾಕರ್ೋಸ್ಗಳು ವಿಶೇಷ ಪಡೆಯೆನಿಸಿದರೆ, ಸಿಆರ್ಪಿಎಫ್ನಲ್ಲಿ ಕೋಬ್ರಾ ಪಡೆ ಇದೆ. ವಾಯು ಪಡೆಯಲ್ಲಿನ ಈ ವಿಶೇಷ ತುಕಡಿಯನ್ನು ಗರುಡವೆಂದರೆ, ಭೂಸೇನೆಯಲ್ಲಿ ಘಾತಕ್, ಎನ್ಎಸ್ಜಿ, ಪ್ಯಾರಾ ಕಮಾಂಡೋಗಳು ಪ್ರಮುಖ. ಈ ತುಕಡಿಗಳಿಗೆ ಸೇರುವುದು ಸುಲಭವೆಂದೆಣಿಸಬೇಡಿ. ಬಂದ ಶೇಕಡಾ ಎಂಭತ್ತರಷ್ಟು ಅಜರ್ಿಗಳು ಮೊದಲ ಸುತ್ತಿನಲ್ಲಿಯೇ ತಿರಸ್ಕರಿಸಲ್ಪಡುತ್ತವೆ. ಉಳಿದವರಿಗೂ ಎಂತೆಂತಹ ಸವಾಲುಗಳೆಂದರೆ ಅದನ್ನೆದುರಿಸಿ ಗೆದ್ದು ಬಂದವ ನಿಸ್ಸಂಶಯವಾಗಿ ಭಾರತೀಯ ಸೇನೆಯ ಅತ್ಯಂತ ಹೆಮ್ಮೆಯ ಸಿಪಾಯಿಯೇ ಸರಿ. ಆಯ್ಕೆಯಾದರೆ ಮುಗಿಯಲಿಲ್ಲ. ಪ್ರತಿದಿನವೂ ಮೈಮುರಿಯುವಷ್ಟು ಕವಾಯತು. 60 ಕೇಜಿ ಭಾರ ಹೊತ್ತು, 20 ಕಿಮೀ ಓಟ. ಪ್ಯಾರಾ ಕಮಾಂಡೋಗಳಿಗಾದರೆ ಮುವ್ವತ್ಮೂರುವರೆ ಸಾವಿರ ಅಡಿ ಎತ್ತರದಿಂದ ಧುಮುಕುವ ಅಭ್ಯಾಸ. ಭಿನ್ನ ಭಿನ್ನ ವಾತಾವರಣದಲ್ಲಿ ವ್ಯಕ್ತಿ-ವ್ಯಕ್ತಿಯೊಂದಿಗೆ ಕದನ ನಡೆಸುವ ಅಭ್ಯಾಸ. ಅಷ್ಟೇ ಅಲ್ಲ ನೀರು, ಗಾಳಿ, ಭೂಮಿ ಯಾವ ಬಗೆಯಲ್ಲಾದರೂ ಸರಿ ಶತ್ರು ದೇಶದೊಳಗೆ ನುಸುಳುವ, ಹೊರ ಬರುವ ಎಲ್ಲ ಮಾರ್ಗಗಳನ್ನೂ ಅರಿತಿರುವ ತಯಾರಿ. ನೆನಪಿಡಿ. ಈ ವಿಶೇಷ ತುಕಡಿಯ ಸೈನಿಕರು ಒಂದೋ ಯಾರೊಂದಿಗಾದರೂ ಕಾದಾಡುತ್ತಿರುತ್ತಾರೆ ಅಥವಾ ಕದನಕ್ಕೆ ತಯಾರಿ ನಡೆಸುತ್ತಲೇ ಇರುತ್ತಾರೆ. ಅವರು ವಿಶ್ರಾಂತಿ ಪಡೆಯುವ ಸಮಯವೇ ಇಲ್ಲ!

4

ಸಜರ್ಿಕಲ್ ದಾಳಿಯಲ್ಲಿ ಅತ್ಯುನ್ನತ ಗೌರವ ಕೀತರ್ಿ ಚಕ್ರ ಪಡೆದ ಮೇಜರ್ ಟ್ಯಾಂಗೋ ಸೈನ್ಯಕ್ಕೆ ಸೇರುವ ಹುಚ್ಚು ಹತ್ತಿಸಿಕೊಂಡಿದ್ದು ಆರನೇ ವಯಸ್ಸಿನಲ್ಲಂತೆ. 1980 ರಲ್ಲಿ ಬಿಡುಗಡೆಯಾಗಿದ್ದ ವಿಜೇತಾ ಎಂಬ ಸೈನ್ಯಕ್ಕೆ ಸಂಬಂಧಿಸಿದ ಚಿತ್ರದ ಟೇಪ್ನ್ನು ತಂದೆ ಚೂರುಚೂರು ಮಾಡಿ ಬಿಸಾಡುವವರೆಗೂ ಅದೆಷ್ಟೋ ಬಾರಿ ನೋಡಿದ್ದರಂತೆ. ಅಲ್ಲಿಂದ ಹನ್ನೆರಡು ವರ್ಷಗಳ ಕಾಲ ಸೈನ್ಯದ ಹುಚ್ಚು ಹೆಚ್ಚಾಯಿತೇ ಹೊರತು ಕಡಿಮೆಯಾಗಲಿಲ್ಲ. ನೇರ ನ್ಯಾಶನಲ್ ಡಿಫೆನ್ಸ್ ಅಕಾಡೆಮಿಗೆ ಸೇರಿಕೊಂಡ ಟ್ಯಾಂಗೋ ಅಲ್ಲಿ ಪ್ಯಾರಾ ಎಸ್ಎಫ್ ಸೈನಿಕರ ಕಥೆಗಳನ್ನು ಕಿವಿಯಗಲಿಸಿ ಕೇಳುತ್ತಿದ್ದರು. ಅವರಿಗೀಗ ಸೇನೆಯಲ್ಲಿರುವುದು ವಿಶೇಷವೆನಿಸಲಿಲ್ಲ, ವಿಶೇಷ ಪಡೆಯ ಸದಸ್ಯರಾಗುವ ಕನಸು ಕಾಣತೊಡಗಿದರು. ಅವರ ಉತ್ಸಾಹಕ್ಕೆ ತಕ್ಕಂತೆ 2004ರಲ್ಲಿ ಅವರನ್ನು ವಿಶೇಷ ಪಡೆಗೆ ಲೆಫ್ಟಿನೆಂಟ್ ಆಗಿ ಸೇರ್ಪಡೆ ಮಾಡಿಕೊಳ್ಳಲಾಯಿತು. ಒಮ್ಮೆ ಸೇರಿದರೆ ಮುಗಿದಂತಲ್ಲ. ಆರು ತಿಂಗಳ ತರಬೇತಿಯ ಅವಧಿಯಲ್ಲೂ ಹೊರದಬ್ಬುವ ಎಲ್ಲ ಅವಕಾಶಗಳೂ ಇರುತ್ತವೆ. ದೈಹಿಕವಾಗಿಯಂತೂ ರುಬ್ಬುವುದು ಇದ್ದೇ ಇರುತ್ತದೆ, ಮಾನಸಿಕವಾಗಿ, ಬೌದ್ಧಿಕವಾಗಿಯೂ ಕೂಡ ಸೈನಿಕನನ್ನು ಪೂರ್ಣ ಪರೀಕ್ಷೆಗೊಳಪಡಿಸುವ ಸಮಯ ಅದು. ನೀವು ನಾಯಕರಾಗಬಲ್ಲಿರೋ? ಸೂಕ್ತವಾಗಿ ಸಾಥು ಕೊಡುವ ಸಮರ್ಥರಾಗಬಲ್ಲಿರೋ? ಎಂಬುದನ್ನು ಸೂಕ್ಷ್ಮವಾಗಿಯೇ ಅವಲೋಕಿಸುತ್ತಿರುತ್ತಾರೆ. ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸಿಬಿಡುವ ಹೊಸ ಹೊಸ ಸವಾಲುಗಳನ್ನು ನೀಡುತ್ತಲೇ ಇರುತ್ತಾರೆ. ಒಟ್ಟಾರೆ ಕುಗ್ಗಿ ಕುಸಿಯುವ ಬಿಂದುವನ್ನು ಗುರುತಿಸುವುದಷ್ಟೇ ಉದ್ದೇಶ. ಎಂತಹ ಕಠಿಣ ಪ್ರಸಂಗ ಬಂದಾಗಲೂ ಕೈಚೆಲ್ಲದಷ್ಟು ಬಲಶಾಲಿಯನ್ನಾಗಿಸುವುದೇ ಎಲ್ಲದರ ಗುರಿ. ಒಮ್ಮೆಯಂತೂ ಟ್ಯಾಂಗೋನನ್ನು ಬೆಳಗಿನ ಜಾವ ಎರಡು ಗಂಟೆಗೆ ನಿದ್ದೆಯಿಂದ ಎಬ್ಬಿಸಿ ‘ಪಾಕೀಸ್ತಾನದ ಮಾಜಿ ನಾಯಕರ ಮುಟ್ಟಿನ ಚಕ್ರ ಪಶ್ಚಿಮ ಬಂಗಾಳದ ಮಾನ್ಸೂನ್ನ್ನು ಹೇಗೆ ಪ್ರಭಾವಿಸಬಲ್ಲದು’ ಎಂಬ ವಿಷಯದ ಕುರಿತಂತೆ ಒಂದು ಸಾವಿರ ಪದಗಳಷ್ಟು ಸುದೀರ್ಘ ಪ್ರಬಂಧ ಬರೆಯಲು ಕೇಳಿಕೊಳ್ಳಲಾಗಿತ್ತಂತೆ. ಏನನ್ನು ಎದುರಿಗೆಸೆದರೂ ಅದನ್ನು ಹೇಗೆ ನಿಭಾಯಿಸಬಲ್ಲನೆಂಬುದೇ ಪರೀಕ್ಷೆ. ಎದುರಿಸು. ಗೆದ್ದರೆ ಒಳಕ್ಕೆ ಇಲ್ಲವೇ ಹೊರಕ್ಕೆ! ನಾಲ್ಕೇ ತಿಂಗಳಲ್ಲಿ ಎಲ್ಲವನ್ನೂ ಯಶಸ್ವಿಯಾಗಿ ಮುಗಿಸಿದ ಮೈಕ್ ಟ್ಯಾಂಗೋನನ್ನು ವಿಶೇಷ ಪರಿಣತಿಗಾಗಿ ಕಾಶ್ಮೀರಕ್ಕೆ ಕಳಿಸಲಾಗಿತ್ತು. ಮರಳಿ ಬಂದಾಗ ಅವರ ಕಮ್ಯಾಂಡಿಂಗ್ ಆಫಿಸರ್ ವಿಶೇಷ ಪಡೆಗೆ ಆತ ಸೂಕ್ತವಲ್ಲವೆಂದು ಕೂಗಾಡಿಬಿಟ್ಟರು. ಅಷ್ಟು ಸಾಲದೆಂಬಂತೆ ಅದೇ ಸ್ಥಳದಲ್ಲಿ ಐವತ್ತು ದಂಡ ಹೊಡೆಯುವಂತೆ ಆದೇಶಿಸಿದರು. ಕೋಪ-ಆವೇಶಗಳಿಂದ ಹತಾಶನಾಗಿದ್ದ ಟ್ಯಾಂಗೋ ಮರುಮಾತಾಡದೇ ದಂಡ ಹೊಡೆದು ಮುಗಿಸುವಲ್ಲಿ ಅಧಿಕಾರಿ ವಿಶೇಷ ಪಡೆಗೆ ಸೇರಿದುದರ ಕುರುಹಾದ ವಿಶೇಷ ಪಾನೀಯ ಅವನಿಗೆ ಕುಡಿಸಿ ತಬ್ಬಿಕೊಂಡರು. ಆ ಕ್ಷಣ ಹೇಗಿರಬಹುದು ಎನ್ನುವುದನ್ನು ಒಮ್ಮ ಊಹಿಸಿ. ಅದೇ ಟ್ಯಾಂಗೋಗೆ ಸಜರ್ಿಕಲ್ ಸ್ಟ್ರೈಕ್ನ ಜವಾಬ್ದಾರಿ ಹೆಗಲೇರಿತ್ತು.

5

ಉರಿಯಲ್ಲಿ ಒಳನುಸುಳಿದ ಪಾಕೀ ಭಯೋತ್ಪಾದಕರು ಭಾರತೀಯ ಸೇನಾಪಡೆಯ ಸೈನಿಕರ ಮೇಲೆ ದಾಳಿ ನಡೆಸಿ ಅವರನ್ನು ಕೊಂದು ಹಾಕಿದಾಗ ದೇಶದಲ್ಲಿ ಅಲ್ಲೋಲಕಲ್ಲೋಲವೆದ್ದಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಐವತ್ತಾರು ಇಂಚಿನ ಎದೆಯ ಕುರಿತಂತೆ ಎಲ್ಲೆಡೆ ಜನ ಆಡಿಕೊಳ್ಳುವಂತಾಗಿತ್ತು. ಭಾರತದ ಸಾರ್ವಭೌಮತೆಗೆ ಇದು ಬಲು ದೊಡ್ಡ ಹೊಡೆತವೇ ಸರಿ. ಆಗ ಅಲ್ಲಿಂದ 800 ಕಿಮೀಗಳಷ್ಟು ಮೇಲೆ ಟ್ಯಾಂಗೋ ಪುಟ್ಟದೊಂದು ಟಿವಿಯಲ್ಲಿ ಇಡಿಯ ಘಟನೆಯನ್ನು ನೋಡುತ್ತ ಕೈ ಕೈ ಹಿಸುಕಿಕೊಂಡು ಕುಳಿತಿದ್ದ. ಉಧಮ್ಪುರದ ಸೈನ್ಯದ ಮುಖ್ಯಾಲಯದಿಂದ ಕರೆ ಬಂತು. ಹಾಗೊಂದು ಕರೆ ಬಂದಾಗ ವಿಶೇಷ ಪಡೆ ಹೊರಡಬೇಕಷ್ಟೇ. ಸೆಪ್ಟೆಂಬರ್ 18ಕ್ಕೆ ದ್ರಾಸ್ಗೆ ಬಂದು ಸೇರಿಕೊಂಡಿತು ತುಕಡಿ ಅಲ್ಲಿಂದ ಶ್ರೀನಗರದತ್ತ ಪಯಣ. ಆವೇಳೆಗಾಗಲೇ ದೆಹಲಿಯ ರೈಸಿನಾ ಹಿಲ್ನಲ್ಲಿ ಮೋದಿ ಮತ್ತು ದೋವಲ್ರ ತುತರ್ು ಸಭೆ ಮುಗಿದಿತ್ತು. ಪಾಕೀಸ್ತಾನಕ್ಕೆ ಇದುವರೆಗಿನ ಅತ್ಯಂತ ಕರಾಳ ಪಾಠ ಕಲಿಸುವ ಮತ್ತು ಇಡಿಯ ಕಾಯರ್ಾಚರಣೆಯನ್ನು ಬಲು ಗೌಪ್ಯವಾಗಿರಿಸುವ ಯೋಜನೆ ರೂಪಿಸಲಾಗಿತ್ತು.  ಅದರ ಮೊದಲ ಹೆಜ್ಜೆಯಾಗಿಯೇ ಮಾಜಿ ಸೈನ್ಯ ಮುಖ್ಯಸ್ಥ ಜನರಲ್ ವಿಕೆ ಸಿಂಗ್ ಪಾಕೀಸ್ತಾನವನ್ನು ಕಟು ಮಾತುಗಳಲ್ಲಿ ನಿಂದಿಸಿದರು. ರಕ್ಷಣಾ ಸಚಿವರು ಸರಿಯಾದ ಸಮಯದಲ್ಲಿ ಸರಿಯಾದ ಉತ್ತರ ನೀಡುವೆವೆಂದರು. ಇದ್ಯಾವುದೂ ಪಾಕೀಸ್ತಾನಕ್ಕೆ ಹೊಸತಾಗಿರಲಿಲ್ಲ. ಭಾರತ ಸಕರ್ಾರದ ಎಂದಿನ ಪ್ರತಿಕ್ರಿಯೆಯಂತಿತ್ತು.
ಇತ್ತ ಸೇನೆ ಹಿಂದೆಂದೂ ನಡೆದಿರದ ಬಲು ಅಪರೂಪದ ಕಾಯರ್ಾಚರಣೆಗೆ ರೂಪುರೇಷೆ ನಿರ್ಧರಿಸುತ್ತಿತ್ತು. ಸ್ವತಃ ಆಗಿನ ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ಯೋಜನೆಯಲ್ಲಿ ಆಸ್ಥೆ ವಹಿಸಿದರು. ಆಯ್ಕೆಗಳನ್ನು ಪಟ್ಟಿಮಾಡಲಾಯ್ತು. ಆಕ್ರಮಣ ಮಾಡಬೇಕಾದ ಸ್ಥಳಗಳು, ಗಡಿಯಿಂದ ಅವುಗಳಿಗಿರುವ ದೂರ, ಅಲ್ಲಿರಬಹುದಾದ ನುಸುಳುಕೋರ ಭಯೋತ್ಪಾದಕರ ಅಂದಾಜು ಸಂಖ್ಯೆ, ದಾಳಿ ಮಾಡಬೇಕಾದ ಸೈನಿಕರ ಸಂಖ್ಯೆ ಮತ್ತು ಅವರಿಗೆ ಬೇಕಾದ ವ್ಯವಸ್ಥೆ ಇವಿಷ್ಟರ ಜೊತೆಗೆ ಕೊನೆಯ ಸ್ತಂಭದಲ್ಲಿ ದಾಳಿಯಲ್ಲಿ ಹುತಾತ್ಮರಾಗಬಹುದಾದವರ ಸಂಖ್ಯೆಯನ್ನೂ ನಮೂದಿಸಲಾಗಿತ್ತು. ಈ ಸಂಖ್ಯೆ ಸೊನ್ನೆಯಿಂದ ಹಿಡಿದು ಎರಡಂಕಿಗಳವರೆಗೂ ವ್ಯಾಪಿಸಿತ್ತು. ಇಡಿಯ ಯೋಜನೆ ಎಷ್ಟು ಗೌಪ್ಯವಾಗಿತ್ತೆಂದರೆ ಯಾರಿಗೆ ಎಷ್ಟು ಮಾಹಿತಿ ಬೇಕೋ ಅಷ್ಟೇ ಮಾಹಿತಿ ನೀಡಲಾಗಿತ್ತು. ಮೇಜರ್ ಟ್ಯಾಂಗೋ ತನ್ನ ಹತ್ತೊಂಭತ್ತು ಸೈನಿಕರೊಂದಿಗೆ ಬಾರಾಮುಲ್ಲಾ ಬಂದು ಸೇರಿಕೊಂಡರು. ಗಡಿಯವರೆಗೂ ಅವರಿಗೆ ನಡೆದೇ ಹೋಗುವ ಆದೇಶವಿತ್ತು. ಹೆಲಿಕಾಪ್ಟರಿನಿಂದ ಅವರನ್ನು ಗಡಿಗೆ ಬಿಡುವ ಯೋಚನೆಯೂ ಮಾಡುವಂತಿರಲಿಲ್ಲ ಏಕೆಂದರೆ ಅದು ಪೂರ್ಣ ಗುಪ್ತ ಕಾಯರ್ಾಚರಣೆಯಾಗಿತ್ತು.

Modi at Thiruvananthapuram

ಸೆಪ್ಟೆಂಬರ್ 21ಕ್ಕೆ ಯುಎನ್ನ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ನವಾಜ್ ಷರೀಫ್ ಕಾಶ್ಮೀರದಲ್ಲಿನ ಅತ್ಯಾಚಾರದ ಬಗ್ಗೆ ಮಾತನಾಡಿದನೇ ಹೊರತು ಉರಿ ದಾಳಿಯ ಕುರಿತಂತೆ ಚಕಾರವೆತ್ತಲಿಲ್ಲ. 24ರ ಸಂಜೆ ಪ್ರಧಾನ ಮಂತ್ರಿ ಮೋದಿಯವರು ಕೇರಳದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಬೇಕಿತ್ತು. ಅದಾಗಲೇ ಅವರ ಕೆಚ್ಚೆದೆಯ ಕುರಿತಂತೆ ಅನೇಕರು ವ್ಯಂಗ್ಯವಾಡಿದ್ದರು. ಅವರ ಅಂದಿನ ಭಾಷಣವೂ ಸವಾಲಿನದ್ದೇ ಆಗಿತ್ತು ಏಕೆಂದರೆ ಅವರು ಸಜರ್ಿಕಲ್ ಸ್ಟ್ರೈಕ್ನ ವಿವರ ಹೇಳುವಂತಿರಲಿಲ್ಲ, ಹಾಗಂತ ಸುಮ್ಮನಿರುವಂತೆಯೂ ಇರಲಿಲ್ಲ. ಮೋದಿ ಎಂದಿಗಿಂತ ಭಿನ್ನವಾದ ಬಡತನದ ವಿರುದ್ಧ ಜೊತೆಗೂಡಿ ಕಾದಾಡುವ ಕರೆಯನ್ನು ಪಾಕೀಸ್ತಾನಕ್ಕೆ ಕೊಟ್ಟರು. ಅವರೀಗ ತಾವೇ ರೂಪಿಸಿದ ನಾಟಕದ ಪಾತ್ರಧಾರಿಗಳಾಗಿಬಿಟ್ಟಿದ್ದರು. ಯುಎನ್ನಲ್ಲಿ ಮಾತನಾಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜರೂ ಒಂದಿನಿತೂ ಸುಳಿವು ಬಿಟ್ಟುಕೊಡದ ಪಾಕೀಸ್ತಾನದ ದ್ರೋಹವನ್ನು ಎತ್ತಿ ತೋರಿಸುವ ಭಾಷಣ ಮಾಡಿ ಸುಮ್ಮನಾಗಿಬಿಟ್ಟರು. ಇವಿಷ್ಟೂ ಯೋಜನೆಯನ್ನು ಗುಪ್ತವಾಗಿರಿಸುವಲ್ಲಿ ಮಾಡಿದ ಪ್ರಯತ್ನಗಳು. ಆ ವೇಳೆಗಾಗಲೇ ಸ್ಪೆಷಲ್ ಫೋಸರ್್ ಗಡಿಯ ಬಳಿಬಂದು ಐದಾರು ದಿನ ಕಳೆದು ಬಿಟ್ಟಿತ್ತು. ಪಡೆಯ ಧೀರರೆಲ್ಲ ಒಂದು ಆಜ್ಞೆಗಾಗಿ ಕಾಯುತ್ತ ಕುಳಿತರು. ಒಟ್ಟಾರೆ ನಾಲ್ಕು ಟೆರರ್ ಲಾಂಚ್ ಪ್ಯಾಡ್ಗಳ ಮೇಲೆ ದಾಳಿಗೆ ತಯಾರಿ ಮಾಡಲಾಗಿತ್ತು. ಟ್ಯಾಂಗೋ ಟೀಮಿಗೆ ಎರಡನ್ನು ಉಡಾಯಿಸುವ ಜವಾಬ್ದಾರಿ ನೀಡಿದರೆ ಇನ್ನೆರಡಕ್ಕೆ ಮತ್ತೆರಡು ವಿಶೇಷ ಪಡೆಗಳನ್ನು ಬಳಸಿಕೊಳ್ಳಲಾಗಿತ್ತು. ಸೆಪ್ಟೆಂಬರ್ 26ಕ್ಕೆ ತಯಾರಾಗಿ ನಿಲ್ಲುವ ಆಜ್ಞೆ ಸಿಕ್ಕಿತು. ಎಲ್ಲ ಬಗೆಯ ಶಸ್ತ್ರಾಸ್ತ್ರಗಳೊಂದಿಗೆ ಸನ್ನದ್ಧವಾದ ಪಡೆ ಯಾವ ಕ್ಷಣದಲ್ಲೂ ಬರಬಹುದಾದ ಸಂದೇಶಕ್ಕಾಗೆ ಕಾತರಿಸುತ್ತಿತ್ತು. ಗಡಿ ದಾಟಿ, ಒಳನುಸುಳಿ ಶತ್ರುಗಳ ನಾಶ ಮಾಡುವುದು ವಿಶೇಷವಲ್ಲ; ಆ ವೇಳೆಗೆ ಜಾಗೃತವಾಗಿಬಿಡುವ ಸೈನಿಕರ ಕಣ್ತಪ್ಪಿಸಿ ಮರಳಿ ಬರುವುದೇ ನಿಜವಾದ ಸವಾಲು. ಅಲ್ಲದೇ ಮತ್ತೇನು? ಮರಳಿ ಗುಡ್ಡ ಹತ್ತುವಾಗ ಶತ್ರುಗಳೆಡೆಗೆ ಬೆನ್ನು ಇರುತ್ತದೆ. ಆತನ ದಾಳಿಯ ತೀವ್ರತೆ ಗುರುತಿಸುವಷ್ಟೂ ಸಮಯವಿಲ್ಲ. ಅವರಿಗೆ ನಿಗದಿಯಾಗಿರುವ ಲಾಂಚ್ ಪ್ಯಾಡುಗಳಂತೂ ಪಾಕಿನ ಗಡಿಯೊಳಗೆ ಸಾಕಷ್ಟು ದೂರದಲ್ಲಿದ್ದು ಎರಡರ ನಡುವೆ ಅರ್ಧ ಕಿಮೀನಷ್ಟು ಅಂತರವಿತ್ತು.  27ರ ಮಧ್ಯಾನ್ಹದ ವೇಳೆಗೆ ಮೂರು ತುಕಡಿಗೆ ಒಳ ನುಗ್ಗುವ ಆದೇಶ ಸಿಕ್ಕಿತು. ರಾತ್ರಿ ಒಂಭತ್ತರ ವೇಳೆಗೆ ಗಡಿ ದಾಟಿದ ಪಡೆ ನಾಲ್ಕು ಗಂಟೆಗಳ ಕಾಲ ಗುಡ್ಡವಿಳಿದು ತಮ್ಮ ಗುರಿಯಿಂದ ಒಂದು ಕಿಮೀ ದೂರಕ್ಕೆ ಬಂದು ನಿಂತಿತು. ತೆವಳುತ್ತ ಇನ್ನೂರು ಮೀಟರ್ನಷ್ಟು ಹತ್ತಿರ ಬರುವ ವೇಳೆಗೆ ಅತ್ತಲಿಂದ ಗುಂಡು ಸಿಡಿದ ಸದ್ದು ಬಂತು. ಶತ್ರುಗಳಿಗೆ ಸುದ್ದಿ ಸಿಕ್ಕಿತಾ ಎಂದು ಆಲೋಚಿಸುತ್ತಿರುವಾಗಲೇ ಅದು ಕಣ್ತಪ್ಪಿನಿಂದ ಆದದ್ದೆಂದು ಗೊತ್ತಾಗಿ ನಿಟ್ಟುಸಿರು ಬಿಟ್ಟಿತು ಪಡೆ. ಅವರ ಬಳಿ ಇದ್ದ ಸ್ಯಾಟಲೈಟ್ ಫೋನು ಕೊಡುತ್ತಿದ್ದ ಸ್ಥಳದ ಮಾಹಿತಿಯಿಂದಾಗಿ ಪ್ರೇರಣೆ ಪಡೆದ ಪಡೆ ತಡ ಮಾಡದೇ ಮುನ್ನುಗ್ಗಿತು. ಅಲ್ಲಿಯೇ ಇದ್ದ ಬಂಡೆಯೊಂದನ್ನೇರಲು ತನ್ನ ಜೊತೆಗಾರನನ್ನೇ ಬಳಸಿಕೊಂಡ ಟ್ಯಾಂಗೋ ಲಾಂಚ್ ಪ್ಯಾಡ್ ಕಾಯಲು ನಿಂತ ಇಬ್ಬರು ಭಯೋತ್ಪಾದಕರನ್ನು ನೋಡಿದರು. ತಡಮಾಡದೇ ಗುಂಡು ಹಾರಿಸಿ ಇಬ್ಬರನ್ನೂ ಕೊಂದು ಬಿಸಾಡಿದರು. ಇಪ್ಪತ್ತೂ ಜನ ಹರಡಿಕೊಂಡರು. ಕರಾರುವಾಕ್ಕಾದ ದಾಳಿ ಅದು. ಹಿಂದಿನಿಂದ ದಾಳಿ ನಡೆಸಲು ಬಂದವರನ್ನೂ ಕೊಂದಿತು ಈ ಪಡೆ. ಎರಡೂ ಲಾಂಚ್ ಪ್ಯಾಡುಗಳನ್ನು ಪೂರ್ಣ ನಾಶ ಮಾಡಲಾಯ್ತು. ಮೂರೂ ಪಡೆಗಳು ಸೇರಿ ಒಂದೇ ಹೊತ್ತಲ್ಲಿ ನಾಲ್ಕು ಲಾಂಚ್ ಪ್ಯಾಡ್ಗಳನ್ನು ನಾಶ ಮಾಡಿ, ಇಬ್ಬರು ಪಾಕಿ ಸೈನಿಕರನ್ನು, ನಲವತ್ತು ಭಯೋತ್ಪಾದಕರನ್ನು ಯಮಪುರಿಗೆ ಕಳಿಸಿದ್ದವು.

ಸೈನಿಕರಲ್ಲಿಯೇ ಒಬ್ಬ ಈಗ ಕವರಿಂಗ್ ಫೈರ್ ಕೊಡಲಾರಂಭಿಸಿದ. ಮೇಜರ್ ಟ್ಯಾಂಗೋ ತನ್ನ ಪಡೆಯೊಂದಿಗೆ ಅತ್ಯಂತ ವೇಗವಾಗಿ ದಾಪುಗಾಲಿಡುತ್ತ ಮರಳಿ ಭಾರತದ ಗಡಿಯೊಳಕ್ಕೆ ಸೇರಿಕೊಂಡುಬಿಟ್ಟರು.

ಆಮೇಲಿನದ್ದು ಇತಿಹಾಸ. ಹೌದು. ಭಾರತದ ಕ್ಷಾತ್ರತೇಜದ ಪುಟಗಳಲ್ಲಿ ಶಾಶ್ವತವಾಗಿ ದಾಖಲಾದ ಸಾಹಸವಿದು!

  ಗೋವಾದ ಕನ್ನಡಿಗರ ಸಮಸ್ಯೆಗೆ ಪರಿಹಾರವೇನು?

  ಗೋವಾದ ಕನ್ನಡಿಗರ ಸಮಸ್ಯೆಗೆ ಪರಿಹಾರವೇನು?

ಹೇಗೆ ಕನರ್ಾಟಕದಲ್ಲಿ ಕನ್ನಡ ಪ್ರೇಮವೆಂದರೆ ತಮಿಳು-ಹಿಂದಿ ದ್ವೇಷವೆಂಬುದನ್ನು ನಾವು ಮುಂದಿಡುತ್ತೇವೆಯೋ ಹಾಗೆಯೇ ಅಲ್ಲಿ ಗೋವಾದ ಪ್ರೇಮವೆಂದರೆ ಕನರ್ಾಟಕದ ವಿರೋಧವೆಂಬಂತಾಗಿದೆ. ಅಲ್ಲಿನ ಒಟ್ಟೂ ಜನಸಂಖ್ಯೆ ಹದಿನೈದು ಲಕ್ಷವಾದರೆ, ಕನ್ನಡಿಗರೇ ಮೂರು ಲಕ್ಷದಷ್ಟಿದ್ದಾರಂತೆ! ಅಂದರೆ ಪ್ರತಿ ಐವರಲ್ಲಿ ಒಬ್ಬ ಕನ್ನಡಿಗ. ಹೀಗೆ ಬಂದಿರುವ ಅನೇಕರಲ್ಲಿ ಮುಸಲ್ಮಾನರೂ ದೊಡ್ಡ ಪ್ರಮಾಣದಲ್ಲಿರುವುದರಿಂದ ಅವರಿಂದ ನಿಮರ್ಾಣಗೊಂಡಿರುವ ಎಲ್ಲ ಪ್ರತ್ಯೇಕತಾವಾದಿ ಸಮಸ್ಯೆಗಳಿಗೂ ಅವರೀಗ ಕನರ್ಾಟಕವನ್ನೇ ದೂರುತ್ತಿದ್ದಾರೆ. ಅದಷ್ಟೇ ಅಲ್ಲ. ಇಲ್ಲಿನ ಗಣಿ ಉದ್ಯಮದಲ್ಲಿ ಬಹುಪಾಲು ಮುಖ್ಯ ಸ್ಥಾನದಲ್ಲಿ ಕನ್ನಡಿಗರೇ ಇದ್ದಾರೆ. ಬ್ಯಾಂಕುಗಳಲ್ಲಿ ಕನ್ನಡಿಗರಿದ್ದಾರೆ. ಇಲ್ಲಿನ ಹೋಟೆಲ್ ಉದ್ಯಮ ಕನ್ನಡಿಗರ ಕೈಲಿದೆ. ಓಹ್. ಒಬ್ಬ ಗೋವೆಯನ್ನನಿಗೆ ಕನ್ನಡಿಗರ ಕಂಡು ಉರಿದು ಬೀಳಲು ಅಷ್ಟು ಸಾಕು.

ಗೋವಾದ ಬಾಯ್ಣಾದಲ್ಲಿ ಕಳೆದ ಎರಡು ವಾರಗಳಿಂದ ಬಿಗುವಿನ ವಾತಾವರಣ. ನಾಲ್ಕು ದಶಕಗಳಿಂದ ಕೂಲಿ ಕೆಲಸ ಮಾಡಿಕೊಂಡು ಸಮುದ್ರ ತೀರದಲ್ಲಿ ನೆಲೆ ನಿಂತಿದ್ದ ಸುಮಾರು ಐವತ್ತಾರು ಕುಟುಂಬಗಳನ್ನು ಒಕ್ಕಲೆಬ್ಬಿಸಿ ಬೀದಿಗೆ ತಳ್ಳಲಾಗಿದೆ. ಅದಕ್ಕೆ ಕನರ್ಾಟಕ-ಗೋವಾ ಬಣ್ಣ ಬೇರೆ ಬಂದು ಬಿಟ್ಟಿರುವುದರಿಂದ ನಿಜಕ್ಕೂ ಸದ್ಯಕ್ಕೆ ಮುಗಿಯಲಾರದ ಸ್ಥಿತಿಯಲ್ಲಿದೆ ಈ ವಿವಾದ.

3

ಬಾಯ್ಣಾ ಬೀಚಿನ ಈ ಒಕ್ಕಲೆಬ್ಬಿಸುವಿಕೆ ಹೊಸ ವಿವಾದವಲ್ಲ. 2004ರಲ್ಲಿಯೇ ಈ ಕುರಿತಂತೆ ಗಲಾಟೆಗಳು ಭುಗಿಲೆದ್ದಿದ್ದವು. ಈ ಎಲ್ಲ ಗಲಾಟೆಗಳ ಹಿಂದಿರುವುದು ವೇಶ್ಯಾವಾಟಿಕೆಯ ಸಮಸ್ಯೆ ಅನ್ನೋದು ಅನೇಕರಿಗೆ ಹೊಸ ವಿಷಯವೆನಿಸಬಹುದು. ಗೋವಾದಲ್ಲಿನ ಸೆಕ್ಸ್ ಚಟುವಟಿಕೆಗಳು ನಡೆಯುವ ಕೇಂದ್ರ ಯಾವುದೆಂದು ಕೇಳಿದರೆ ತಕ್ಷಣಕ್ಕೆ ಸಿಗುವ ಉತ್ತರವೇ ಬಾಯ್ಣಾ ಬೀಚಿನದು. ಒಂದು ಕಾಲದಲ್ಲಿ ಉತ್ತರ ಕನರ್ಾಟಕದ ಮತ್ತು ಆಂಧ್ರ-ಒರಿಸ್ಸಾಗಳ ಕರಾವಳಿಯ ಅನೇಕರಿಗೆ ಇಲ್ಲಿ ಇದೇ ಉದ್ಯೋಗವಾಗಿತ್ತು. ಈ ಬೀಚಿಗೆ ಬರಲು ಜನರು ಹೆದರುತ್ತಿದ್ದ ಕಾಲ ಅದು. ಥೇಟು ಹಿಂದಿ ಸಿನಿಮಾಗಳಂತೆ ತಮ್ಮ ತಮ್ಮ ಮನೆಯ ಹೊರಗೆ ನಿಂತು ಗಿರಾಕಿಗಳನ್ನು ಆಕಷರ್ಿಸುವ ಹೆಣ್ಣುಮಕ್ಕಳು ಇಡಿಯ ಬಾಯ್ಣಾಕ್ಕೆ ಕೆಟ್ಟ ಹೆಸರು ಕೊಟ್ಟಾಗಿತ್ತು. ಸ್ವಚ್ಛ ನೀಲಿ ನೀರಿನ ಸುಂದರವಾದ ಈ ಬೀಚಿಗೆ ಜನ ಬರುವ ಉದ್ದೇಶ ಬೇರೆಯೇ ಆಗಿದ್ದರಿಂದ ಇದರ ಆಸುಪಾಸಿಗೆ ಜನ ಉಳಿದುಕೊಳ್ಳುವುದೇ ಕಷ್ಟವೆನಿಸುವ ಪರಿಸ್ಥಿತಿ. ಗೋವಾ ಸಕರ್ಾರಕ್ಕೆ ದೊಡ್ಡ ತಲೆನೋವಾಗಿತ್ತು ಇದು. ಹಾಗಂತ ಇದು ಒಂದು ದಶಕದ ಹಿಂದಿನದ್ದಷ್ಟೇ ಸಮಸ್ಯೆಯಲ್ಲ, ಸುಮಾರು ನಲವತ್ತು ವರ್ಷಗಳಿಂದಲೂ ಇಲ್ಲಿ ನೆಲೆಸಿರುವ ಜನರ ತೊಂದರೆ.

2004ರಲ್ಲಿ ಅಂದಿನ ಸಕರ್ಾರ ಮುಲಾಜಿಲ್ಲದೇ ಬಾಯ್ಣಾದಿಂದ ಈ ಹಣೆಪಟ್ಟಿಯನ್ನು ಕಿತ್ತೆಸೆಯುವ ಸಂಕಲ್ಪ ಮಾಡಿ ಅಲ್ಲಿನ ಮನೆಗಳನ್ನು ಸಂಪೂರ್ಣ ನೆಲಸಮ ಮಾಡಿಬಿಟ್ಟಿತು. ಸಾವಿರಾರು ಜನ ಬೀದಿಗೆ ಬಂದರು. ಹಾಗಂತ ಅವರ ಪರವಾಗಿ ದನಿ ಎತ್ತುವವರೂ ಯಾರೂ ಇರಲಿಲ್ಲ. ಬೇರೆಯವರು ಬಿಡಿ. ಸ್ವತಃ ಒಕ್ಕಲೆಬ್ಬಿಸಿಕೊಂಡವರೂ ಪ್ರತಿಭಟನೆಗೆ ನಿಲ್ಲಲಿಲ್ಲ ಏಕೆಂದರೆ ಅವರಿಗೇ ಆ ವಿಶ್ವಾಸವಿರಲಿಲ್ಲ. ಒಂದಷ್ಟು ಜನರನ್ನು ಸಕರ್ಾರೇತರ ಸಂಸ್ಥೆಗಳ ಸುಪದರ್ಿಗೆ ಕೊಟ್ಟು ಅವರನ್ನು ತಿದ್ದಿ ತೀಡುವ, ಬದುಕು ಕಟ್ಟಿ ಕೊಡುವ ಪ್ರಯತ್ನವನ್ನೂ ಆಗ ಮಾಡಲಾಗಿತ್ತು. ಆದರೆ ವೇಶ್ಯಾವಾಟಿಕೆ ಎನ್ನುವುದು ನದಿಯೊಳಗಿನ ಸುಳಿಯಿದ್ದಂತೆ. ಒಮ್ಮೆ ಸಿಕ್ಕಿಕೊಂಡರೆ ಮುಗಿಯಿತು, ಹೊರಗೆ ಬರುವುದು ಬಲು ಕಷ್ಟ. ಬಾಯ್ಣಾದ ಇದೇ ಜನರ ಸಮಸ್ಯೆಯ ಕುರಿತಂತೆ ಇತ್ತೀಚೆಗೆ ಫ್ರಂಟ್ಲೈನ್ ಎಂಬ ಪತ್ರಿಕೆಯೊಂದು ಸವಿಸ್ತಾರವಾಗಿ ವರದಿ ಮಾಡಿದೆ. ಬಳ್ಳಾರಿಯಲ್ಲಿ ಕೆಲಸಕೊಡಿಸುವೆನೆಂದು ಬಾಗಲಕೋಟೆಯಿಂದ ಹೆಣ್ಣುಮಗಳನ್ನು ಕರೆದುಕೊಂಡು ಬಂದಿದ್ದ ದಲ್ಲಾಳಿಯೊಬ್ಬ ಇಲ್ಲಿನ ಹೆಂಗಸೊಬ್ಬಳಿಗೆ ಆಕೆಯನ್ನು ಮಾರಿ ಹೋದ. ಅವಳ ಬದುಕು ಬೀಚಿನಲ್ಲಿಯೇ ಮರಳಾಗಿಬಿಟ್ಟಿತಷ್ಟೇ. ಇಲ್ಲಿ ಆಕೆಯ ಧಂಧೆಯ ಅರಿವಾದೊಡನೆ ಮನೆಯವರೂ, ಸಂಬಂಧಿಕರೂ ಆಕೆಯನ್ನು ದೂರ ಮಾಡಿಬಿಟ್ಟರು. ಅಲ್ಲಿಗೆ ಅವಳ ಬದುಕನ್ನು ಯಾವ ಸಂಘಟನೆಗಳೂ ಸುಧಾರಿಸಲಾರವು. ಇಂತಹ ಅನೇಕರನ್ನು 2004ರಲ್ಲಿ ಸಂಘಟಿಸಿ ಅವರಿಗೆ ಒಂದಷ್ಟು ಮೌಲ್ಯಯುತ ಜೀವನದ ಪಾಠ ಹೇಳಿ ಅವರವರ ಊರಿನ ಗಾಡಿ ಹತ್ತಿಸಿ ಕಳಿಸಿಕೊಟ್ಟರೆ ಗೋವಾ ಗಡಿ ದಾಟುವ ಮುನ್ನವೇ ಇಳಿದು ಮರಳಿ ಬಂದು ಬಿಟ್ಟಿದ್ದರು. ಬಾಯ್ಣಾದಲ್ಲಿ ಕೇಂದ್ರೀಕೃತವಾಗಿದ್ದ ವಹಿವಾಟು ಇಡಿಯ ಗೋವಾಕ್ಕೆ ವಿಸ್ತಾರವಾಗುತ್ತಿತ್ತು.

5

ಇವರ ಸಂಖ್ಯೆ ಬಲು ಜೋರಾಗಿದ್ದುದರಿಂದ ರಾಜಕೀಯ ಪಕ್ಷಗಳೂ ಇವರೊಂದಿಗೆ ಕೈ ಜೋಡಿಸಿಯೇ ಇದ್ದವು. ಕಾಂಗ್ರೆಸ್ಸಿಗೆ ವೋಟು ಹಾಕುವ ಜನರಾದರೆ ಬಾಂಗ್ಲಾ-ರೋಹಿಂಗ್ಯಾಗಳಾದರೂ ಪರವಾಗಿಲ್ಲವೆಂಬ ಮನಸ್ಥಿತಿ ಇರುವಾಗ ಇವರನ್ನು ಬಿಟ್ಟೀತೇನು? ಈ ಜನರಿಗೆ ಮತ ಚಲಾಯಿಸುವ ಅಧಿಕಾರಕ್ಕೆ ಬೇಕಾದ ಎಲ್ಲ ಸವಲತ್ತುಗಳನ್ನು ಸ್ಥಳೀಯ ನಾಯಕರು ಮಾಡಿಕೊಟ್ಟುಬಿಟ್ಟರು. ಕರೆಂಟು, ನೀರು ಈ ಬಗೆಯ ಮೂಲ ಸೌಲಭ್ಯಗಳೆಲ್ಲ ಅಲ್ಲದೇ ಅವರವರ ಜಾಗದ ತೆರಿಗೆಯನ್ನೂ ಅವರು ನಗರ ಪಾಲಿಕೆಗೆ ಕಟ್ಟುವಂತೆ ವ್ಯವಸ್ಥೆ ಮಾಡಿಕೊಡಲಾಯಿತು. ಅವರೀಗ ಅಧಿಕೃತ ನಿವಾಸಿಗಳಾಗಿಬಿಟ್ಟರು. ನಲವತ್ತು ವರ್ಷಗಳ ದೀರ್ಘ ಕಾಲದಲ್ಲಿ ಅವರಿಗೆ ಮಕ್ಕಳಾದರು, ಮೊಮ್ಮಕ್ಕಳಾದರು. ಅನೇಕರಿಗೆ ಉದ್ಯೋಗ ದೊರೆಯಿತು. ಕೊಂಕಣಿ ಅವರ ಮನೆಮಾತಾಗಿಬಿಟ್ಟಿತು. ಬಾಯ್ಣಾದಲ್ಲಿದ್ದು ಅವರು ಗೋವಾದವರೇ ಆಗಿಬಿಟ್ಟಿದ್ದರು. ಕೆಲವು ಕುಟುಂಬಗಳ ಹೊಸ ಪೀಳಿಗೆಗಳು ವೇಶ್ಯಾವಾಟಿಕೆಯಿಂದ ಹೊರಬಂದವು ಕೂಡ. ಆದರೆ ಅವರಿಗೆ ಅಂಟಿದ್ದ ವೇಶ್ಯಾವಾಟಿಕೆಯ ಹಣೆಪಟ್ಟಿಯಿಂದ ಮಾತ್ರ ಹೊರಬರಲಾಗಲಿಲ್ಲ. ಈ ಕಾರಣಕ್ಕೇ 2004ರಲ್ಲಿ ಒಂದಿಡೀ ಓಣಿಯನ್ನು ಧ್ವಂಸಗೊಳಿಸಿದಾಗ ಹುಯಿಲೆದ್ದಿದ್ದು ನಿಜವಾದರೂ ಗೋವಾದ ಜನತೆಗೆ ಅದರಲ್ಲೂ ಬಾಯ್ಣಾದ ಆಸುಪಾಸಿನ ಜನರಿಗೆ ಅದು ನೆಮ್ಮದಿಯನ್ನು ತಂದುಕೊಟ್ಟಿತು. ಹೊರ ಜಗತ್ತಿಗೆ ಈ ವಿಚಾರವನ್ನು ಹೇಳದೇ ಅಲ್ಲಿನ ಸಕರ್ಾರ ಸಮುದ್ರ ತೀರದಲ್ಲಿ ಮನೆಗಳನ್ನು ಕಟ್ಟುವಂತಿಲ್ಲ, ವಸತಿ ಮಾಡುವಂತಿಲ್ಲ ಎಂಬೆಲ್ಲ ನೆಪ ಹೇಳಿತ್ತು.

 

ಒಂದಷ್ಟು ವರ್ಷಗಳ ಕಾಲ ಉಳಿದ ಕೆಲವರನ್ನೂ ಒಕ್ಕಲೆಬ್ಬಿಸಬೇಕು ಅಂತ ಚಚರ್ೆ ನಡೆದೇ ಇತ್ತು. ಮನೋಹರ್ ಪರಿಕ್ಕರ್ ಅಧಿಕಾರಕ್ಕೆ ಬಂದ ಮೇಲೆ ಇದಕ್ಕೆ ತೀವ್ರವಾದ ವೇಗ ಬಂದಿತ್ತು. ಹೇಗೆ ಕನ್ನಡಿಗರಿಗಾಗಿ ಕನರ್ಾಟಕ ಎಂಬ ಕೂಗು ಜೋರಾದಾಗಲೆಲ್ಲ ಇಲ್ಲಿನ ಭಾರತೀಯ ಜನತಾ ಪಕ್ಷವನ್ನು ರಾಷ್ಟ್ರೀಯವಾದಿ ಎಂಬ ಕಾರಣಕ್ಕಾಗಿ ವಿರೋಧಿಸುತ್ತೇವೆಯೋ ಅಲ್ಲಿಯೂ ಹಾಗೆಯೇ. ಗೋಮಾಂತಕದ ಭಾವನೆಗಳು ಬಲವಾದಾಗಲೆಲ್ಲ ಅಲ್ಲಿನ ರಾಜಕೀಯ ಆಕಾಂಕ್ಷಿಗಳು ಬಿಜೇಪಿಯನ್ನು ಕಂಠಮಟ್ಟ ವಿರೋಧಿಸುತ್ತಾರೆ. ಈ ಪ್ರಾಂತವಾದದಿಂದಾಗಿಯೇ ಮಹದಾಯಿಗೆ ಉತ್ತರ ಸಿಗದೇ ತೊಳಲಾಟ ನಡೆದಿರೋದು. ಮಹದಾಯಿ ವಿಚಾರದಲ್ಲಿ ಸುಪ್ರೀಂ ಕೋಟರ್್ನಲ್ಲಿ ಗೆಲುವಾದಾಗ ಈಗಿನ ಸಕರ್ಾರ ಬಹುವಾಗಿ ಸಂಭ್ರಮಿಸಿತ್ತು. ಕಾರಣ ಬಲು ಸ್ಪಷ್ಟ. ಗೋವಾಕ್ಕಾಗಿ ನಾವೂ ಇದ್ದೇವೆ ಎಂಬುದನ್ನು ಜನರ ಮುಂದೆ ಸಾಬೀತು ಪಡಿಸಲಿಕ್ಕಾಗಿ ಅಷ್ಟೇ. ಹೇಗೆ ಕನರ್ಾಟಕದಲ್ಲಿ ಕನ್ನಡ ಪ್ರೇಮವೆಂದರೆ ತಮಿಳು-ಹಿಂದಿ ದ್ವೇಷವೆಂಬುದನ್ನು ನಾವು ಮುಂದಿಡುತ್ತೇವೆಯೋ ಹಾಗೆಯೇ ಅಲ್ಲಿ ಗೋವಾದ ಪ್ರೇಮವೆಂದರೆ ಕನರ್ಾಟಕದ ವಿರೋಧವೆಂಬಂತಾಗಿದೆ. ಬಾಯ್ಣಾದಲ್ಲಿ ಒಕ್ಕಲೆದ್ದ ಜನರ ಮಾತನಾಡಿಸಿ ನೇರ ಗೋವಾದಲ್ಲಿರುವ ಕನ್ನಡಿಗರೊಂದಷ್ಟು ಜನರನ್ನು ಭೇಟಿಯಾದಾಗ ಅಚ್ಚರಿಯೆನಿಸುವ ಒಂದಷ್ಟು ಸಂಗತಿಗಳು ಹೊರಬಂದವು. ಅಲ್ಲಿನ ಒಟ್ಟೂ ಜನಸಂಖ್ಯೆ ಹದಿನೈದು ಲಕ್ಷವಾದರೆ, ಕನ್ನಡಿಗರೇ ಮೂರು ಲಕ್ಷದಷ್ಟಿದ್ದಾರಂತೆ! ಅಂದರೆ ಪ್ರತಿ ಐವರಲ್ಲಿ ಒಬ್ಬ ಕನ್ನಡಿಗ. ಹೀಗೆ ಬಂದಿರುವ ಅನೇಕರಲ್ಲಿ ಮುಸಲ್ಮಾನರೂ ದೊಡ್ಡ ಪ್ರಮಾಣದಲ್ಲಿರುವುದರಿಂದ ಅವರಿಂದ ನಿಮರ್ಾಣಗೊಂಡಿರುವ ಎಲ್ಲ ಪ್ರತ್ಯೇಕತಾವಾದಿ ಸಮಸ್ಯೆಗಳಿಗೂ ಅವರೀಗ ಕನರ್ಾಟಕವನ್ನೇ ದೂರುತ್ತಿದ್ದಾರೆ. ಅದಷ್ಟೇ ಅಲ್ಲ. ಇಲ್ಲಿನ ಗಣಿ ಉದ್ಯಮದಲ್ಲಿ ಬಹುಪಾಲು ಮುಖ್ಯ ಸ್ಥಾನದಲ್ಲಿ ಕನ್ನಡಿಗರೇ ಇದ್ದಾರೆ. ಬ್ಯಾಂಕುಗಳಲ್ಲಿ ಕನ್ನಡಿಗರಿದ್ದಾರೆ. ಇಲ್ಲಿನ ಹೋಟೆಲ್ ಉದ್ಯಮ ಕನ್ನಡಿಗರ ಕೈಲಿದೆ. ಓಹ್. ಒಬ್ಬ ಗೋವೆಯನ್ನನಿಗೆ ಕನ್ನಡಿಗರ ಕಂಡು ಉರಿದು ಬೀಳಲು ಅಷ್ಟು ಸಾಕು. ಇತ್ತೀಚೆಗಂತೂ ಒಂದೆರಡು ಕಡೆ ಪಂಚಾಯತ್ ಪ್ರಮುಖರೂ ಕನ್ನಡಿಗರೇ ಆಗಿಬಿಟ್ಟ ಮೇಲಂತೂ ಆಳುವ ವರ್ಗವಾಗಿ ಪರಿವರ್ತನೆಯಾಗುತ್ತಿರುವುದು ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಮಾವರ್ಾಡಿ ವ್ಯಾಪಾರಿಗಳನ್ನು ಕಂಡಾಗ, ಬೆಂಗಳೂರಿನ ಮಾಕರ್ೆಟ್ನಲ್ಲಿ ತಮಿಳರನ್ನು ಕಂಡಾಗ, ಸಾಫ್ಟ್ವೇರ್ ಉದ್ಯಮದಲ್ಲಿ ಉತ್ತರ ಭಾರತೀಯರನ್ನು ಕಂಡಾಗ ನಮಗೂ ಹೀಗೇ ಆಗುತ್ತಲ್ಲವೇ?

1

ಈ ಬಗೆಯ ಭಾವತಂತುಗಳನ್ನು ಮೀಟಿಯೇ ಗೋವಾ ಫಾರ್ವಡರ್್ ಪಾಟರ್ಿಯ ಮೂರು ಜನ ಶಾಸಕರಾಗಿದ್ದಾರೆ. ಅಲ್ಲಿನ ಖಿಚಡಿ ಸಕರ್ಾರದಲ್ಲಿ ಮೂವರೂ ಮಂತ್ರಿಗಳಾಗಿಬಿಟ್ಟಿದ್ದಾರೆ. ಗೋವಾ ಗೋವೆಯನ್ನರಿಗಾಗಿ ಎಂಬ ಹೇಳಿಕೆಯನ್ನು ಹಿಡಿದೇ ಅವರು ಮುಂದಿನ ಚುನಾವಣೆಗೆ ತಯಾರಿ ನಡೆಸುತ್ತಿರೋದು. ಇದನ್ನು ಸರಿದೂಗಿಸಲು ಗೋವಾ ಸಕರ್ಾರಕ್ಕೆ ಇರುವ ಅಸ್ತ್ರವೇ ತಾವೂ ಗೋವೆಗಾಗಿಯೇ ಇರುವವರೆಂದು ತೋರಿಸೋದು ಮಾತ್ರವೇ. ಅದಕ್ಕೆ ಮೊದಲ ಹೆಜ್ಜೆ ಮಹದಾಯಿ ತಿರಸ್ಕಾರವಾದರೆ ಎರಡನೆಯದು ಬಾಯ್ಣಾ ಬೀಚಿನ ಕಾಯರ್ಾಚರಣೆ ಎನ್ನುವುದು ವಿಶ್ಲೇಷಕರ ಅಂಬೋಣ. ದುದರ್ೈವವೇನು ಗೊತ್ತೇ? ಈ ಬಾರಿ ಒಕ್ಕಲೆಬ್ಬಿಸಿದ ಸುಮಾರು 55 ಮನೆಗಳಲ್ಲಿ ಕೂಲಿ ಕಾಮರ್ಿಕರೇ ಇದ್ದರು. ನಾಲ್ಕು ದಶಕಗಳಿಂದ ಅಲ್ಲಿಯೇ ನೆಲೆಸಿ ತಮ್ಮ ಜೀವನವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದರು. ಅವರು ನೆಲೆಸಿದ್ದ ಚಚರ್ಿಗೆ ಸೇರಿದ್ದ ಆ ಜಾಗವನ್ನು ಚಚರ್ು ಉದ್ಯಮಿಯೊಬ್ಬರಿಗೆ ಮಾರಿದಾಗಿನಿಂದ ಅವರ ಬದುಕು ಮೂರಾಬಟ್ಟೆಯಾಯ್ತು. ನೆಮ್ಮದಿ ಕಳೆದು ಹೋಯ್ತು. ನೋಟೀಸುಗಳು ಬರಲಾರಂಭಿಸಿದವು, ಕೋಟರ್ಿನ ಮೆಟ್ಟಿಲೇರಿದರು. ಅಲ್ಲಿಯೂ ನೆಮ್ಮದಿ ಸಿಗದಾದಾಗ ಅವರು ಜಿಲ್ಲಾಧಿಕಾರಿಯಿಂದ ಸ್ವಲ್ಪ ಅವಕಾಶ ಪಡೆದುಕೊಂಡರು. ಆದರೆ ಜಾಗ ತಮ್ಮದೆನ್ನುವ ಯಾವ ಆಧಾರ ಪತ್ರಗಳೂ ಇಲ್ಲವಾದ್ದರಿಂದ ಏಕಾಕಿ ಹದಿನೈದು ಬುಲ್ಡೋಜéರುಗಳೊಂದಿಗೆ ನುಗ್ಗಿದ ಪೊಲೀಸು ಪಡೆ ಮನೆಯನ್ನು ಬಿಡಿ, ಎರಡು ಮಂದಿರವನ್ನೂ ನೆಲಸಮ ಮಾಡಿಬಿಟ್ಟಿತು. ಮಳೆಗಾಲವಾದ್ದರಿಂದ ಅಷ್ಟೂ ಜನ ಅನಾಥರೇ. ಪರೀಕ್ಷಾ ಸಮಯವಾದ್ದರಿಂದ ಮಕ್ಕಳ ಪರಿಸ್ಥಿತಿಯೂ ಅಯೋಮಯ. ಕೆಲವರು ತಂತಮ್ಮ ಊರುಗಳಿಗೆ ಮರಳಿ ಸ್ವಲ್ಪ ಸಮಯ ಕಳೆದ ನಂತರ ಮರಳುವ ಯೋಚನೆಯಲ್ಲಿದ್ದಾರೆ. ಈ ಐವತ್ತೈದು ಮನೆಗಳಲ್ಲಿ ಕೆಲವರು ಮತ್ತದೇ ಚಟುವಟಿಕೆಯಲ್ಲಿ ತೊಡಗಿದವರೂ ಇರಬಹುದು. ಅಂಥವರು ತಮ್ಮ ನೆಲೆಯನ್ನು ಮುಂಬೈಗೆ ಸ್ಥಳಾಂತರಿಸಿದ್ದಾರೆ ಎನ್ನುತ್ತದೆ ಪತ್ರಿಕೆಯ ವರದಿ. ಪಾರಿಕ್ಕರ್ ಕೂಡ ಸುಮ್ಮನಿಲ್ಲ. ಸೆಕ್ಸ್ ವರ್ಕಸರ್್ ಅಲ್ಲದವರಿಗೆ ನವೆಂಬರ್ ವೇಳೆಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದು ಹೇಳಿಕೆ ಕೊಟ್ಟಿದ್ದಾರಲ್ಲದೇ ಅಂಥವರು ನೋಂದಾಯಿಸಿಕೊಳ್ಳುವಂತೆ ಕರೆ ನೀಡಿದ್ದಾರೆ. ಸ್ಥಳೀಯ ತಹಶೀಲ್ದಾರರ ಪ್ರಕಾರ ಹೀಗೆ ಬಂದ 300 ಕುಟುಂಬಗಳಲ್ಲಿ ಸುಮಾರು 80 ಕುಟುಂಬಗಳು ಮಾತ್ರ ಪುನರ್ವಸತಿಗೆ ಸೂಕ್ತವಾದವೆಂದು ದೃಢಪಟ್ಟಿದೆ. ಉಳಿದವರು ತಮ್ಮ ತಮ್ಮ ಹಾದಿ ತಾವೇ ನೋಡಿಕೊಳ್ಳಬೇಕಷ್ಟೇ.

ಈಗ ನಮ್ಮ ಮುಂದಿರುವ ಹಾದಿ ಏನು? ಈ ಇಡಿಯ ವಿಚಾರವನ್ನು ಕನ್ನಡಿಗ-ಗೋವಾ ಎಂಬ ದೃಷ್ಟಿಕೋನದಿಂದ ಹುಯಿಲೆಬ್ಬಿಸುವುದೇ ಅಥವಾ ಬಡವರನ್ನು ಬೀದಿಗೆ ತರುವ ಸಕರ್ಾರದ ನೀತಿಗಳ ವಿರುದ್ಧ ಪ್ರತಿಭಟಿಸುವುದೇ? ಕನ್ನಡ-ಗೋವಾ ಕಂದಕದ ಮೇಲೆಯೇ ಅಲ್ಲಿನ ಹೊಸ ರಾಜಕಾರಣ ರೂಪುಗೊಳ್ಳುತ್ತಿರುವ ಹೊತ್ತಲ್ಲಿ ಇಡಿಯ ಹೋರಾಟಕ್ಕೆ ಕನ್ನಡತನದ ರಂಗು ತುಂಬಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚು. ನಾವೀಗ ಇದನ್ನು ಬೀದಿಗೆ ಬಿದ್ದ ಬಡವರ ಹೋರಾಟವಾಗಿ ರೂಪಿಸುವ ಅಗತ್ಯವಿದೆ. ಅಷ್ಟೇ ಅಲ್ಲ. ರಾಜ್ಯವನ್ನಾಳುವ ನಾಯಕರು ಅಕ್ಕಪಕ್ಕದ ರಾಜಕೀಯ ನಾಯಕರೊಂದಿಗೆ ಸುಂದರವಾದ ಗೆಳೆತನವೊಂದನ್ನು ಸಂಭಾಳಿಸಿಕೊಂಡು ತಮ್ಮ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಬೇಕಿದೆ. ಮೋದಿ ಜಾಗತಿಕ ನಾಯಕರೊಂದಿಗೆ ಇಟ್ಟುಕೊಂಡ ಬಾಂಧವ್ಯವನ್ನು ನೋಡಿಯೂ ಕಲಿಯದಿದ್ದರೆ ಏನೆನ್ನಬೇಕು ಹೇಳಿ? ಬಿಡಿ. ಪ್ರತಿಯೊಬ್ಬರಿಗೂ ದೇಶದ ಹಿತಕ್ಕಿಂತ ಕುಚರ್ಿಯ ವ್ಯಾಮೋಹವೇ ಬಹಳವಾಗಿರುವಾಗ ಇವೆಲ್ಲ ಮಾತಾಡಿಯೂ ಪ್ರಯೋಜನವಿಲ್ಲ.

ನಾವೀಗ ಸಮಸ್ಯೆಯ ಬದಲು ಪರಿಹಾರದ ಕುರಿತಂತೆ ಮಾತಾಡಬೇಕು. ಒಕ್ಕಲೆಬ್ಬಿಸಿದವರಿಗೆ ಮತ್ತೆಲ್ಲಾದರೂ ಜಾಗ ಕೊಟ್ಟು ವಸತಿ ನಿಮರ್ಿಸಿಕೊಡುವಂತೆ ಸಕರ್ಾರದ ಮೇಲೆ ಒತ್ತಡ ತರಬೇಕು. ಕಠೋರವಾದ ಪತ್ರ ಬರೆದರೆ ಪಕ್ಕದ ರಾಜ್ಯದವರು ಹೆದರುತ್ತಾರೆಂದು ಭಾವಿಸಿದರೆ ಅದು ಮೂರ್ಖತನವೇ. ತಮಿಳುನಾಡಿನ ಮುಖ್ಯಮಂತ್ರಿ ಕಾವೇರಿಗಾಗಿ ಕಠೋರ ಪತ್ರ ಬರೆಯಲಿಲ್ಲ ಅದಕ್ಕಾಗಿ ಕೇಂದ್ರ ಮಟ್ಟದಲ್ಲಿ ಲಾಬಿ ಮಾಡಿದರೆಂಬುದನ್ನು ಮರೆಯದಿರಿ. ನಾವಿನ್ನೂ ಮೂಗಿಗೆ ತುಪ್ಪ ಸವರುವ ರಾಜಕಾರಣಿಗಳ ಸಹವಾಸದಲ್ಲೇ ಇದ್ದೇವೆ.

ಅಂದಹಾಗೆ ನನಗೆ ಅರ್ಥವಾಗದ ಒಂದು ಪ್ರಶ್ನೆ ಇದೆ. ತೆಲುಗರ ಮೇಲಿಲ್ಲದ ನಮ್ಮ ದ್ವೇಷ ತಮಿಳಿಗರ ಮೇಲಿದೆಯಲ್ಲ ಏಕೆ? ಮರಾಠಿಗರನ್ನು ಕಂಡರೆ ಪ್ರೀತಿಸುವ ಗೋವಾದವ ಕನ್ನಡಿಗರನ್ನು ಕಂಡೊಡನೆ ಕೆಂಡಕಾರುತ್ತಾನಲ್ಲ ಏಕೆ? ಹಿಂದಿ ಭಾಷಿಗರನ್ನು ಕಂಠಮಟ್ಟ ದ್ವೇಷಿಸುವ ಮಹಾರಾಷ್ಟ್ರದ ಜನ ಕನ್ನಡಿಗರ ಮೇಲೆ ಪ್ರೀತಿ ತೋರುತ್ತಾರಲ್ಲ ಏಕಿರಬಹುದು? ಬಹುಶಃ ಈ ವಿಚಾರವನ್ನು ಸೂಕ್ತವಾಗಿ ಅಳೆದು ಸುರಿದರೆ ಪ್ರಾಂತವಾದದ ಅನೇಕ ಸಮಸ್ಯೆಗಳಿಗೆ ಪರಿಹಾರ ಹುಡುಕಬಹುದೇನೋ?