Category: Uncategorized

ಬೋಸರನ್ನು ವಿರೋಧಿಸುವವರೂ ಇದ್ದರು, ಎಂದರೆ ನಂಬುತ್ತೀರಾ?!

ಬೋಸರನ್ನು ವಿರೋಧಿಸುವವರೂ ಇದ್ದರು, ಎಂದರೆ ನಂಬುತ್ತೀರಾ?!

ಸುಭಾಷ್ಚಂದ್ರ ಬೋಸರ 125ನೇ ಜಯಂತಿ. ಕೊನೆಗೂ ಆ ಪುಣ್ಯಾತ್ಮನಿಗೆ ಸಿಗಬೇಕಾದ ಗೌರವ ಈಗ ಸಿಗುತ್ತಿದೆ. ಅವರು ತೀರಿಕೊಂಡರು ಎನ್ನುವುದನ್ನು ನಂಬುವುದೇ ಆದರೆ ಹಾಗೆ ತೀರಿಕೊಳ್ಳುವ ಮುನ್ನ ಬೆಂಕಿಯಿಂದ ಆವರಿಸಿಕೊಂಡಿದ್ದ ಅವರು ತಮ್ಮ ಜೊತೆಗಾರ ಕರ್ನಲ್ ಹಬಿಬುರ್ ರೆಹಮಾನ್ರಿಗೆ ‘ನಾನು ಕೊನೆ ಉಸಿರಿನವರೆಗೂ ನನ್ನ ದೇಶಕ್ಕಾಗಿ ಕಾದಾಡಿದೆ ಎಂಬುದನ್ನು ದೇಶವಾಸಿಗಳಿಗೆ ತಿಳಿಸಿಬಿಡು’ ಎಂದಿದ್ದರಂತೆ. ಅದೇ ಅವರ ಕೊನೆಯ ಮಾತೂ ಕೂಡ. ಇಷ್ಟಕ್ಕೂ ನೇತಾಜಿ ದೇಶಕ್ಕಾಗಿಯೇ ತಮ್ಮನ್ನು ಸಮಪರ್ಿಸಿಕೊಂಡಿದ್ದವರು ಎಂಬುದು ದೇಶವಾಸಿಗಳಿಗೆ ಗೊತ್ತಿರಲಿಲ್ಲವೇ? ಅಥವಾ ಯಾರಾದರೂ ಅವರ ಕುರಿತಂತೆ ಇಲ್ಲಸಲ್ಲದ ಮಾತುಗಳನ್ನು ಆಡುತ್ತಾ ಜನರ ತಲೆಕೆಡಿಸಿದ್ದರೆ? ಕೇಳಿಕೊಳ್ಳಲೇಬೇಕಾದ ಪ್ರಶ್ನೆ ಅಲ್ಲವೇನು?


ಸ್ವಾತಂತ್ರ್ಯದ ಮುಂಚೂಣಿಯ ಹೋರಾಟ ತನ್ನದ್ದೇ ಎಂದು ನಿರ್ಧರಿಸಿಬಿಟ್ಟಿದ್ದ ಕಾಂಗ್ರೆಸ್ಸಿಗೆ ಆ ಹೋರಾಟವನ್ನು ಮತ್ತೊಬ್ಬ ನಾಯಕ ಮುಂದುವರೆಸುವುದು ಸುತರಾಂ ಇಷ್ಟವಿರಲಿಲ್ಲ. ಸಹಜವಾಗಿಯೇ ಗಾಂಧಿ-ನೆಹರೂ ಆದಿಯಾಗಿ ಪ್ರತಿಯೊಬ್ಬರೂ ಕಾಂಗ್ರೆಸ್ಸನ್ನು ಬಿಟ್ಟು ಬೆಳೆಯುತ್ತಿರುವ ಸುಭಾಷರ ಕುರಿತಂತೆ ಅಸಮಾಧಾನ ಹೊಂದಿಯೇ ಇದ್ದರು. ಸ್ವತಃ ಸುಭಾಷರೇ ಹೇಳುತ್ತಾರಲ್ಲ, ‘ಒಂದು ಹಂತದ ನಂತರ ಕಾಂಗ್ರೆಸ್ಸು ತನ್ನ ಬುದ್ಧಿಯನ್ನೇ ಗಾಂಧೀಜಿಯವರ ಬಳಿ ಗಿರವಿ ಇಟ್ಟುಬಿಟ್ಟಿದೆ’ ಅಂತ. ಹಾಗೆಯೇ ಆಗಿತ್ತು ಕೂಡ. ಈಗ ಗಾಂಧಿಯ ಪಾಳಯದಲ್ಲಿರದಿದ್ದ ಸುಭಾಷರನ್ನು ಕಂಡರೆ ಇಡಿಯ ಕಾಂಗ್ರೆಸ್ಸಿಗೆ ಸಹಿಸಲಾಗದ ಆಕ್ರೋಶ. ಹಾಗೆಂದೇ ಅವರು ಜನರ ನಡುವೆ ಸುಭಾಷರನ್ನು ಸಾಕಷ್ಟು ಹಿಯಾಳಿಸುತ್ತಿದ್ದರು. ಒಂದು ಹಂತದಲ್ಲಿ ಭಾರತದ ಶತ್ರು ರಾಷ್ಟ್ರಗಳೊಂದಿಗೆ ಕೈ ಜೋಡಿಸಿರುವ ದೇಶದ್ರೋಹಿ ಎಂದೂ ಹೇಳಿಬಿಟ್ಟಿದ್ದರು. ಬೇರೆಲ್ಲ ಬಿಡಿ, ಸ್ವತಃ ನೆಹರೂ ಸುಭಾಷರು ಇಂಡಿಯನ್ ನ್ಯಾಷನಲ್ ಆಮರ್ಿಯೊಂದಿಗೆ ಭಾರತದ ಮೇಲೆ ಆಕ್ರಮಣ ಮಾಡಿದರೆ ಅವರನ್ನು ತಲ್ವಾರ್ನಿಂದಲೇ ಎದುರಿಸುವುದಾಗಿ ಘೋಷಿಸಿದ್ದರೂ ಕೂಡ. ಈ ಕಾರಣದಿಂದಾಗಿಯೇ ಸುಭಾಷರ ಕುರಿತಂತೆ ಜನಮಾನಸದಲ್ಲಿ ಅಸಮಾಧಾನ ಇದ್ದೇ ಇತ್ತು. ಕೊಹಿಮಾ, ಇಂಫಾಲ್ಗಳಲ್ಲಿ ದಾಳಿ ಮಾಡುತ್ತಾ ಬಂದ ಇಂಡಿಯನ್ ನ್ಯಾಷನಲ್ ಆಮರ್ಿಯ ಸೈನಿಕರುಗಳಿಗೆ ಭಾರತೀಯ ಸೈನಿಕರು ಬೆಂಬಲ ಕೊಡಲಿಲ್ಲ. ಭಾರತದ ಜನ ಜೊತೆ ನಿಲ್ಲಲಿಲ್ಲ. ನಾಯಕರ ಕಥೆಯಂತೂ ತಟಸ್ಥವೇ ಅಲ್ಲದ, ವಿರೋಧಿ ಪಾಳಯವನ್ನು ಬೆಂಬಲಿಸುವ ಮಾನಸಿಕತೆ. ಸುಭಾಷರ ಬದುಕಿನ ಘೋರ ದುರಂತಗಳಲ್ಲಿ ಅದು ಒಂದು. ಯಾವ ದೇಶದ ಸ್ವಾತಂತ್ರ್ಯಕ್ಕಾಗಿ ಅವರು ಪ್ರಾಣಾರ್ಪಣೆಗೆ ಸಿದ್ಧರಾಗಿದ್ದರೋ ಆ ದೇಶದ ಜನರೇ ಅದನ್ನು ಧಿಕ್ಕರಿಸಿಬಿಟ್ಟಿದ್ದರು! ಕಮ್ಯುನಿಸ್ಟರದ್ದಂತೂ ಬೇರೆಯೇ ಮಾರ್ಗ. ಒಂದು ಮಾತಿದೆಯಲ್ಲ, ವಿಷಸರ್ಪ ಮತ್ತು ಕಮ್ಯುನಿಸ್ಟರು ಇವೆರಡೂ ಎದುರಿಗೆ ಬಂದರೆ ಮೊದಲು ಕಮ್ಯುನಿಸ್ಟರನ್ನು ಬಡಿಯಿರಿ, ವಿಷಸರ್ಪವನ್ನು ಬಿಟ್ಟರೂ ಪರವಾಗಿಲ್ಲ ಅಂತ. ಹಾಗೆಯೇ ಇವರೂ ಕೂಡ. ಎರಡನೇ ಮಹಾಯುದ್ಧದಲ್ಲಿ ಜರ್ಮನಿ ಮತ್ತು ರಷ್ಯಾಗಳು ಒಂದೇ ಪಾಳಯದಲ್ಲಿದ್ದಾಗ ಈ ಕಮ್ಯುನಿಸ್ಟರು ಕಾಂಗ್ರೆಸ್ಸನ್ನು ವಿರೋಧಿಸಿ ನೇತಾಜಿಯವರ ಬೆಂಬಲಕ್ಕೆ ನಿಂತಿದ್ದರು. ಆದರೆ ಯಾವಾಗ ಜರ್ಮನಿ ರಷ್ಯಾದ ಮೇಲೆಯೇ ಏರಿಹೋಯ್ತೋ ಆಗ ಅವರಿಗೆ ಸಹಿಸಲಾಗಲಿಲ್ಲ. ರಷ್ಯಾ ತಮ್ಮ ಮಾತೃಭೂಮಿಯೇನೋ ಎನ್ನುವಂತೆ ವತರ್ಿಸಿದ ಆ ಮಂದಿ ಸುಭಾಷರನ್ನು ಅವಹೇಳನಗೊಳಿಸುವ ವ್ಯಂಗ್ಯಚಿತ್ರವನ್ನು ಬರೆದು ಜನಮಾನಸವನ್ನು ಮುಟ್ಟಿದರು. ಜಪಾನಿನ ಪ್ರಧಾನಿಯ ಕೈಲಿ ಸುಭಾಷ್ಚಂದ್ರ ಬೋಸರನ್ನು ಸಾಕುಪ್ರಾಣಿಯಂತೆ ಚಿತ್ರಿಸಿದ್ದು ಇವರೇ. ಇದು ಕಾಂಗ್ರೆಸ್ಸಿನ ದಾಳಿಗಿಂತ ಭಯಾನಕವಾದ್ದು. ಈ ಕಳ್ಳರನ್ನೆಲ್ಲಾ ಜನರ ಮುಂದೆ ಬೆಳಕಿಗೆ ತರಲು ಸುಭಾಷರಿಗಿದ್ದಿದ್ದು ರೆಡಿಯೊಗಳ ಬಳಕೆ ಮಾತ್ರ. ತಮ್ಮ ಆಜಾದ್ ಹಿಂದ್ ರೆಡಿಯೊ ಮೂಲಕ ಅವರು ಭಾರತೀಯರನ್ನು ಮುಟ್ಟುವ ಪ್ರಯತ್ನ ಮಾಡುತ್ತಿದ್ದರಾದರೂ ಅದು ಸಾಕಾಗುತ್ತಿರಲಿಲ್ಲ. ಅಂತರ್ರಾಷ್ಟ್ರೀಯ ಸಂಬಂಧಗಳ ಕುರಿತಂತೆ ಆಲೋಚಿಸುತ್ತಾ, ಸೇನೆಗೆ ಬೇಕಾದ ಸೈನಿಕರು ಮತ್ತು ಹಣವನ್ನು ಹೊಂದಿಸುವುದರಲ್ಲಿ ನಿರಂತರ ಪ್ರವಾಸ ಮಾಡುತ್ತಾ ಸುಭಾಷರು ಜರ್ಝರಿತವಾಗಿ ಹೋಗಿದ್ದರು. ಅದರ ನಡುವೆ ತಮ್ಮದ್ದೇ ದೇಶವಾಸಿಗಳಲ್ಲಿ ತಾನು ಮಾಡುತ್ತಿರುವ ಕೆಲಸಗಳ ಕುರಿತಂತೆ ಜಾಗೃತಿ ಮೂಡಿಸಬೇಕಾಗಿತ್ತು. ಒಟ್ಟಾರೆ ದ್ವಿತೀಯ ಮಹಾಯುದ್ಧದಲ್ಲಿ ಜಪಾನ್ ಸೋಲುವುದರೊಂದಿಗೆ ಸುಭಾಷರ ಪರಾಕ್ರಮದ ಯಾತ್ರೆಯೇನೋ ಮುಗಿಯಿತು. ಆದರೆ ಸ್ವಾತಂತ್ರ್ಯದ ಇಚ್ಛೆ, ಉತ್ಸಾಹಗಳು ಮಾತ್ರ ಕಡಿಮೆಯಾಗಿರಲಿಲ್ಲ. ಸುಭಾಷರು ಜಪಾನನ್ನು ಬಿಟ್ಟು ರಷ್ಯಾದ ಸಹಕಾರ ಕೇಳಲು ಧಾವಿಸಿದರು. ಆ ಹೊತ್ತಲ್ಲೇ ವಿಮಾನದ ಅಪಘಾತವಾಗಿದ್ದು, ಅಲ್ಲಿಯೇ ಅವರು ತೀರಿಕೊಂಡರೂ ಎಂದೂ ಹೇಳಲಾಗಿದ್ದು. ಆದರೆ ಸುಭಾಷರ ನಿಜವಾದ ಪರಾಕ್ರಮ ಜನರಿಗೆ ಅರಿವಾದದ್ದು ಅವರ ಈ ತಥಾಕಥಿತ ಸಾವಿನ ನಂತರವೇ. ಯುದ್ಧದಲ್ಲಿ ಖೈದಿಗಳಾಗಿ ಸಿಕ್ಕ ಐಎನ್ಎ ಸೈನಿಕರ ವಿಚಾರಣೆಯನ್ನು ಬ್ರಿಟಿಷ್ ಸಕರ್ಾರ ಆರಂಭಿಸಿತು. ಈ ಸೈನಿಕರಿಗೆ ಕಠಿಣ ಶಿಕ್ಷೆ ಕೊಡುವ ಮೂಲಕ ಇನ್ಯಾವ ಭಾರತೀಯ ಸೈನಿಕನೂ ಬ್ರಿಟೀಷರ ವಿರುದ್ಧ ಮಾತೂ ಆಡದಂತೆ ಮಾಡಬೇಕೆಂಬ ಪ್ರಯತ್ನ ಅವರದ್ದಾಗಿತ್ತು. ಅದೇ ಅವರು ಮಾಡಿಕೊಂಡ ಎಡವಟ್ಟು. ಐಎನ್ಎ ಪ್ರತಿನಿಧಿಸಿ ವಿಚಾರಣೆ ಎದುರಿಸುತ್ತಿದ್ದ ಶಾನವಾಜ್, ದಿಲ್ಲೊನ್ ಮತ್ತು ಸೆಹಗಲ್ರು ಎದೆಯುಬ್ಬಿಸಿ ನಿಂತರು. ಅವರ ಮೂಲಕ ಬೋಸರ ಕಥೆಗಳು ಮಾಧ್ಯಮ ಪ್ರವೇಶಿಸಿದವು. ಅಲ್ಲಿಂದ ಜನರ ಹೃದಯಕ್ಕೆ. ಅಲ್ಲಿಯವರೆಗೂ ಬೋಸರ ಬಗೆಗಿದ್ದ ದುಷ್ಟ ಭಾವನೆಗಳೆಲ್ಲ ಮಾಯವಾಗಿಬಿಟ್ಟವು. ಸುಭಾಷಷ್ಚಂದ್ರ ಬೋಸ್ ಒಬ್ಬ ಅಪ್ರತಿಮ ಸೇನಾನಿ ಎಂದು ಇಡೀ ದೇಶ ಗೌರವಿಸಲಾರಂಭಿಸಿತು. ಅಷ್ಟೇ ಅಲ್ಲ, ಐಎನ್ಎ ಸೈನಿಕರ ವಿಚಾರಣೆ ನಡೆಸುವುದನ್ನು ವಿರೋಧಿಸಿ ಯುದ್ಧ ಖೈದಿಗಳೊಂದಿಗೆ ನಡೆದುಕೊಳ್ಳುವ ರೀತಿ ಇದಲ್ಲವೆಂದು ಸೇನೆ ಆಕ್ಷೇಪಿಸಿತು. ಮುಂದೇನು? ಸೈನಿಕ ಬಂಡಾಯಕ್ಕೆ ಎಲ್ಲ ಸಿದ್ಧತೆ ನಡೆದು ಬ್ರಿಟಿಷರ ವಿರುದ್ಧ ದೊಡ್ಡದೊಂದು ಹೋರಾಟವೇ ಆರಂಭವಾಯ್ತು. ನೌಕಾಸೇನೆಯಲ್ಲಿ ಅಂದಿನ ದಿನಗಳಲ್ಲಿ ಸುಭಾಷ್ಚಂದ್ರ ಬೋಸರ ಚಿತ್ರ ಸವರ್ೇ ಸಾಮಾನ್ಯವಾಗಿತ್ತು. ಆ ಫೋಟೊಗಳನ್ನೆಲ್ಲ ಕಿತ್ತು ಬಿಸಾಡಬೇಕೆಂದು ತಾಕೀತು ಮಾಡಿದ್ದರು ನೆಹರೂ. ಸುಭಾಷರ ಪಟ ಇಲ್ಲವಾಗಿಸಬಹುದು. ಆದರೆ ಹೃದಯದೊಳಗೆ ಇರುವ ಸುಭಾಷರನ್ನು ತೆಗೆಯುವುದಾದರೂ ಹೇಗೆ? ಸುಭಾಷರು ಮತ್ತೆ ಜನಮಾನಸವನ್ನು ಆವರಿಸಿಕೊಂಡರು. ನೌಕಾಬಂಡಾಯ ಬ್ರಿಟೀಷರನ್ನು ನಡುಗಿಸಿಬಿಟ್ಟಿತ್ತು. ಅವರು ಅನಿವಾರ್ಯವಾಗಿ ಭಾರತವನ್ನು ಬಿಟ್ಟು ಹೋಗಲೇಬೇಕಾದ ಸ್ಥಿತಿ ಬಂತು.

1942ರಲ್ಲಿ ಏಕಾಕಿ ಶಾಂತಿ ಮತ್ತು ಅಹಿಂಸೆಯ ಮಾರ್ಗವನ್ನು ಬದಿಗಿಟ್ಟು ಭಾರತಬಿಟ್ಟು ತೊಲಗಿ ಎಂದು ಮಹಾತ್ಮಾಗಾಂಧೀಜಿ ಘೋಷಣೆ ಕೊಟ್ಟಿದ್ದರಲ್ಲ, ಇಷ್ಟು ಧಾವಂತವೇಕೆ? ಎಂಬ ಪ್ರಶ್ನೆ ಕೇಳಿದ್ದಕ್ಕೆ, ಬೋಸರನ್ನೇ ಕೇಳಿಕೊಳ್ಳಿ ಎಂದು ಗಾಂಧೀಜಿ ಉತ್ತರ ನೀಡಿದ್ದರು. ಬೋಸ್ ಭಾರತದ ಸ್ವಾತಂತ್ರ್ಯ ಹೋರಾಟದ ಕಲ್ಪನೆಯನ್ನು ಪೂರ್ಣ ಬದಲಾಯಿಸಿದ್ದರು ಮತ್ತು ಯಶಸ್ವಿಯಾಗಿದ್ದರೂ ಕೂಡ. ಮಹಾತ್ಮಾಗಾಂಧಿಜಿಯವರ ಸಾಮ-ದಾನೋಪಾಯಗಳು ಒಂದೆಡೆಯಾದರೆ, ಸುಭಾಷ್ಚಂದ್ರ ಬೋಸರ ಭೇದ ಮತ್ತು ದಂಡೋಪಾಯಗಳು ಮತ್ತೊಂದೆಡೆ ಯಶಸ್ಸು ಗಳಿಸಿದ್ದವು. ಈಗ ಈ ಪುಣ್ಯಾತ್ಮನ ಈ ಸಾಧನೆಯನ್ನೆಲ್ಲಾ ದೇಶ ನೆನಪಿಸಿಕೊಳ್ಳುತ್ತಿದೆ. ಇದು ನಿಜಕ್ಕೂ ಹೆಮ್ಮೆ ಪಡಬೇಕಾದ ಸಂಗತಿ.

ಬಂಗಾಳದಲ್ಲಿ ಶ್ರೀರಾಮನೂ ಕೋಮುವಾದಿ!

ಬಂಗಾಳದಲ್ಲಿ ಶ್ರೀರಾಮನೂ ಕೋಮುವಾದಿ!

ಸುಭಾಷ್ಚಂದ್ರ ಬೋಸರ ಜಯಂತಿಯ ಆಚರಣೆ ಕಲ್ಕತ್ತಾದಲ್ಲಿ ಬಲು ವಿಶಿಷ್ಟವಾಗಿ ನಡೆಯುತ್ತಿತ್ತು. ಕೇಂದ್ರಸಕರ್ಾರ ಅದಕ್ಕೆ ಪರಾಕ್ರಮ ದಿವಸ ಎಂಬ ನಾಮಕರಣವನ್ನೂ ಮಾಡಿತು. ಅಲ್ಲದೇ ಮತ್ತೇನು? ದಾಸ್ಯದಲ್ಲಿದ್ದ ಭಾರತದಿಂದ ತಪ್ಪಿಸಿಕೊಂಡು ಹೋಗಿ ದಾಸ್ಯದಲ್ಲಿಟ್ಟಿರುವವರ ಶತ್ರುಗಳನ್ನು ಭೇಟಿಮಾಡಿ ಅವರ ಸಹಕಾರ ಪಡೆದು, ಸೇನೆಕಟ್ಟಿ ಆಕ್ರಮಣ ಮಾಡಿ, ಆಳುವವರ ಎದೆ ನಡುಗಿಸಿದ ಆ ವ್ಯಕ್ತಿಯದ್ದು ಪರಾಕ್ರಮವಲ್ಲದೇ ಮತ್ತೇನು? ಹೆಸರು ಸುಭಾಷರಿಗೆ ಅನ್ವಯವಾಗುವಂಥದ್ದೇ. ಪ್ರತಿಯೊಂದರಲ್ಲೂ ರಾಜಕೀಯವನ್ನು ನೋಡುವ ಮಮತಾ ಬ್ಯಾನಜರ್ಿ ಸಹಜವಾಗಿಯೇ ಉರಿದುಬಿದ್ದರು. ಕೇಂದ್ರಸಕರ್ಾರ ಬಂಗಾಳದ ಚುನಾವಣೆಗೆ ಪೂರ್ವಭಾವಿಯಾಗಿಯೇ ಹೀಗೆ ಮಾಡುತ್ತಿದೆ ಎಂಬುದು ಆಕೆಯ ಆಕ್ರೋಶಕ್ಕೆ ಕಾರಣ. ಸುಭಾಷ್ಚಂದ್ರ ಬೋಸರ 125ನೇ ಜಯಂತಿಯ ಹಿನ್ನೆಲೆಯಲ್ಲಿ ಈ ನಿಧರ್ಾರ ತೆಗೆದುಕೊಳ್ಳಲಾಗಿದೆ ಎಂಬ ಸಾಮಾನ್ಯ ಅಂಶವೂ ಆಕೆಗೆ ಹೊಳೆಯಲಿಲ್ಲ ಅಥವಾ 1897ರಲ್ಲಿ ಸುಭಾಷ್ಚಂದ್ರ ಬೋಸರು ಹುಟ್ಟಿದ್ದೇ ತಪ್ಪಾಯಿತೆಂದು ಆಕೆ ಭಾವಿಸಿರಲು ಸಾಕು. ಆಕೆ ಅದಕ್ಕೆ ಬೇರೊಂದು ಸ್ವರೂಪವನ್ನು ಕೊಟ್ಟು ಪರಾಕ್ರಮ ಎಂಬ ನಾಮಕರಣವೇ ಸರಿಯಿಲ್ಲವೆಂದು ರೇಗಾಡಿದ್ದೂ ಆಯ್ತು. ಇವೆಲ್ಲಕ್ಕಿಂತಲೂ ವಿಷಮ ಪರಿಸ್ಥಿತಿ ಎದುರಾಗಿದ್ದು ಸ್ವತಃ ಮೋದಿ ಕಲ್ಕತ್ತಾದ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ. ಅದೂ ರಾಜಕೀಯವಾಗಿರಬೇಕೆಂದೇನೂ ಇಲ್ಲ. ಪಶ್ಚಿಮ ಬಂಗಾಳ ಸುಭಾಷ್ಚಂದ್ರ ಬೋಸರ ಕರ್ಮಕ್ಷೇತ್ರವಾಗಿತ್ತು ಮತ್ತು ಈಗಲೂ ಆ ರಾಜ್ಯ ಬೋಸರನ್ನು ರಾಷ್ಟ್ರಕ್ಕೆ ತಮ್ಮ ಕೊಡುಗೆ ಎಂದೇ ಭಾವಿಸುತ್ತದೆ. 125ನೇ ಜಯಂತಿಯನ್ನು ಅಲ್ಲಿಯೇ ಆಚರಿಸುವುದರಲ್ಲಿ ವಿಶೇಷ ಅರ್ಥವೂ ಇತ್ತು. ಎಡವಟ್ಟಾಗಿದ್ದು ಮಮತಾ ಬ್ಯಾನಜರ್ಿ ಮಾತನಾಡಲು ನಿಂತಾಗಲೇ. ಜನ ಆಕೆ ನಿಂತೊಡನೆ ಜೈಶ್ರೀರಾಮ್ ಘೋಷಣೆಗಳನ್ನು ಮೊಳಗಿಸಲಾರಂಭಿಸಿದರು. ಆಕೆ ಆ ಘೋಷಣೆಗಳನ್ನು ಕೇಳಿದಾಗ ಉರಿದು ಬೀಳುತ್ತಾಳೆಂಬುದು ಗೊತ್ತಿದ್ದುದರಿಂದಲೇ ಜನ ಹಾಗೆ ಮಾಡಿದರೆಂಬುದು ನಿವರ್ಿವಾದ. ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದ ಸಿದ್ಧರಾಮಯ್ಯನವರು ಚುನಾವಣೆಯ ಹೊತ್ತಲ್ಲಿ ಮೋದಿ ಹೆಸರನ್ನು ಕೇಳಿದಾಗಲೆಲ್ಲ ಉರಿದು ಬೀಳುತ್ತಿದ್ದರಲ್ಲ, ಅವರಿಗೆ ಪ್ರತೀ ಕಾರ್ಯಕ್ರಮದಲ್ಲೂ ಜನ ಮೋದಿ-ಮೋದಿ ಎನ್ನುತ್ತಲೇ ಸ್ವಾಗತಿಸುತ್ತಿದ್ದುದು ನಿಮಗೂ ನೆನಪಿರಬೇಕು. ಒಂದು ಕಾರ್ಯಕ್ರಮದಲ್ಲಂತೂ ಸ್ವತಃ ಮೋದಿಯೇ ಹಾಗೆ ಮಾಡಬೇಡಿರೆಂದು ಕೇಳಿಕೊಳ್ಳಬೇಕಾಗಿ ಬಂದಿತು. ಇಲ್ಲಿ ಜನ ಘೋಷಣೆ ಕೂಗುತ್ತಿದ್ದುದು ಮೋದಿಯ ಹೆಸರಿನದ್ದಲ್ಲ. ಬದಲಿಗೆ ಭಾರತದ ಅಸ್ತಿತ್ವದ ಸ್ವರೂಪವಾಗಿರುವ ಶ್ರೀರಾಮನ ಹೆಸರಿನದ್ದು. ದೀದಿಗೆ ಅಷ್ಟೇ ಸಾಕಾಯಿತು. ಮಾತನಾಡಲು ಮೈಕಿನ ಬಳಿ ಬಂದು ಜನರನ್ನು ಎರ್ರಾಬಿರ್ರಿಯಾಗಿ ತರಾಟೆಗೆ ತೆಗೆದುಕೊಂಡರು. ಇಷ್ಟಕ್ಕೂ ನೆರೆದಿದ್ದ ಜನರು ಉತ್ತರ ಪ್ರದೇಶ, ಬಿಹಾರಗಳಿಂದ ಬಂದವರಾಗಿರಲಿಲ್ಲ ಅಥವಾ ಹಣಕೊಟ್ಟು ಆಫ್ರಿಕಾ, ಆಸ್ಟ್ರೇಲಿಯಾದಿಂದ ಕರೆಸಿಕೊಂಡವರಾಗಿರಲಿಲ್ಲ. ಅವರು ದೀದಿಯ ಬಂಗಾಳದ್ದೇ ಜನ. ಅಕ್ಷರಶಃ ರಾಮನ ನಾಡಿನ ಭಾರತೀಯರೇ. ಅವರು ಶ್ರೀರಾಮನಿಗೆ ಜಯಕಾರ ಹೇಳದೇ ಒಸಾಮಾ ಬಿನ್ಲಾಡೆನ್ಗೆ ಹೇಳುವುದು ಸಾಧ್ಯವೇನು? ಆದರೆ ದೀದಿಯ ಆಕ್ರೋಶ ಹೊಸತೇನೂ ಅಲ್ಲ. ಈ ಹಿಂದೆಯೂ ಈ ಘೋಷಣೆಗಳಿಂದ ಆಕೆ ಉರಿದುಬಿದ್ದಿದ್ದು ದಾಖಲಿದೆ. ಎರಡು ವರ್ಷಗಳ ಹಿಂದೆ ರಾಮನವಮಿಯ ಮೆರವಣಿಗೆಗಳಲ್ಲಿ ಬಿಲ್ಲು-ಬಾಣಗಳನ್ನು ಪ್ರದಶರ್ಿಸುವುದನ್ನು ಆಕೆ ನಿಷೇಧಿಸಿ ಕುಖ್ಯಾತಿಗೆ ಒಳಗಾಗಿದ್ದಳು. ದುಗರ್ಾಪೂಜೆಯ ಮೆರವಣಿಗೆಯ ಹೊತ್ತಲ್ಲೇ ಮುಸಲ್ಮಾನರ ಹಬ್ಬವೂ ಬಂದಿರುವುದರಿಂದ ಈ ಬಾರಿ ಮೆರವಣಿಗೆಯೇ ಬೇಡವೆನ್ನುತ್ತಾ ಮೂಲೆ-ಮೂಲೆಗಳಲ್ಲೂ ಹಬ್ಬಿಕೊಂಡಿರುವ ದುಗರ್ಾಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಳು. ಪ್ರತಿಪಕ್ಷಗಳು ರಾಮನನ್ನು ಕಾಡಿದಾಗಲೆಲ್ಲ ಬಿಜೆಪಿಯ ಬೇರು ಗಟ್ಟಿಯಾಗುತ್ತಲೇ ಹೋಗುತ್ತದೆ ಎಂಬ ಹಿತೈಷಿಗಳ ಮಾತು ಆಕೆಯನ್ನು ಕಾಡಿರಲು ಸಾಕು. ಕೊನೆಗೂ ಆಕೆ ತನಗರಿವಿಲ್ಲದಂತೆಯೇ ರಾಮನನ್ನು ಬಿಜೆಪಿಯ ಪರವಿರುವವನು ಎಂದು ನಿರ್ಧರಿಸಿ ಆತನ ಹೆಸರು ಬಂದಾಗಲೆಲ್ಲ ಹೆಚ್ಚು-ಹೆಚ್ಚು ಗರಂ ಆಗತೊಡಗಿದಳು. ಹೆಚ್ಚು-ಹೆಚ್ಚು ತಪ್ಪುಗಳನ್ನೂ ಮಾಡಲಾರಂಭಿಸಿದಳು. ಅನೇಕ ಕಡೆಗಳಲ್ಲಿ ಜೈ ಶ್ರೀರಾಮ್ ಎಂಬುದು ಆತಂಕವಾದಿಗಳ ಘೋಷಣೆ ಎಂದು ಕಟ್ಟರ್ ಮುಸಲ್ಮಾನರಂತೆ ಆಕೆ ಹೇಳಿಯೂಬಿಟ್ಟಳು! ಸಹಜವಾಗಿಯೇ ಬಂಗಾಳದ ಮಾನಸಿಕತೆಗೆ ಇದು ಬಲುದೊಡ್ಡ ಆಘಾತ. ಅನೇಕ ವರ್ಷಗಳ ಕಾಲ ಮುಸಲ್ಮಾನರ ಆಳ್ವಿಕೆಯಿಂದ ನಲುಗಿದ, ಆನಂತರ ಕಾಂಗ್ರೆಸ್, ಕಮ್ಯುನಿಸ್ಟರ ಕಪಿಮುಷ್ಟಿಯಲ್ಲಿ ಉಸಿರುಗಟ್ಟಿದಂತಿದ್ದ ಬಂಗಾಳದ ಜನತೆಯ ಒಳಗೆ ಸುಪ್ತವಾಗಿ ಹರಿಯುತ್ತಿದ್ದ ಹಿಂದೂ ಪ್ರವಾಹ ಹೆದ್ದೆರೆಯಾಗಲು ಸಿದ್ಧತೆ ನಡೆಸಿತು. ದೀದಿ ರಾಮನನ್ನು ತೆಗಳಿದಷ್ಟೂ ರಾಮಕಾರ್ಯಕ್ಕೆ ಅಲ್ಲಿನ ಜನರ ಉತ್ಸಾಹ ಹೆಚ್ಚುತ್ತಾ ನಡೆಯಿತು. ಏಳು ದಶಕಗಳ ಕಾಲ ಕಂಡ-ಕಂಡಲ್ಲಿ ಮೂಗು ತೂರಿಸಿ ಹಿಂದೂಧರ್ಮ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಅವಹೇಳನ ಮಾಡಿ, ಮೂಲೋತ್ಪಾಟನೆಗೊಳಿಸುವ ಪ್ರಯತ್ನವನ್ನು ಎಡಪಂಥೀಯರು ಮಾಡುತ್ತಲೇ ಬಂದಿದ್ದರಲ್ಲದೇ ಒಂದು ಹಂತಕ್ಕೆ ಯಶಸ್ವಿಯೂ ಆಗಿಬಿಟ್ಟಿದ್ದರು. ದೀದಿ ಕೆಲವೇ ತಿಂಗಳಲ್ಲಿ ಅದನ್ನೆಲ್ಲಾ ಬುಡಮೇಲುಗೊಳಿಸಿ ಹಿಂದುಗಳನ್ನು ಏಕತ್ರಗೊಳಿಸಿದಳಲ್ಲದೇ ಬಂಗಾಳದ ಹಿಂದುಗಳು ರಾಷ್ಟ್ರ ಪುನರ್ನಿಮರ್ಾಣಕ್ಕೆ ಕೈಜೋಡಿಸುವಂತೆ ಮಾಡಿಬಿಟ್ಟಳು. ಈ ಹಿನ್ನೆಲೆಯಲ್ಲಿ ಆಕೆಗೆ ಪ್ರತಿಯೊಬ್ಬನೂ ಕೃತಜ್ಞತೆ ಸಲ್ಲಿಸಲೇಬೇಕು.

ಆದರೆ ಈ ಘಟನೆಯ ಅವಲೋಕನ ಮಾಡುತ್ತಾ ಒಂದಷ್ಟು ವಿಚಾರಗಳನ್ನು ನಾವು ಚಚರ್ಿಸಲೇಬೇಕಿದೆ. ಜೈಶ್ರೀರಾಮ್ ಘೋಷಣೆಯನ್ನು ಆಕೆ ಕೋಮುವಾದಿ ಎನ್ನುವುದಕ್ಕೂ, ಅದನ್ನು ಈ ರೀತಿಯ ಸಭೆಗಳಲ್ಲಿ ಉಚ್ಚರಿಸಬಾರದು ಎಂದು ಹೇಳಿದ್ದಕ್ಕೂ, ಆಕೆಯ ಮಾತುಗಳನ್ನು ಸಮಥರ್ಿಸಿಕೊಳ್ಳುವ ಬುದ್ಧಿಜೀವಿ ಪತ್ರಕರ್ತ ವರ್ಗಕ್ಕೆ ಒಂದಷ್ಟು ಪ್ರಶ್ನೆಗಳನ್ನು ಕೇಳಲೇಬೇಕಲ್ಲ. ಸ್ವಾತಂತ್ರ್ಯದ ಕಾಲಘಟ್ಟದಲ್ಲಿ ಕಾಂಗ್ರೆಸ್ಸಿನ ನಾಯಕರಿಗೆ ಹಿಂದೂ-ಮುಸ್ಲೀಂ ಏಕತೆಯ ಭೂತವೊಂದು ಸವಾರಿಯಾಗಿಬಿಟ್ಟಿತ್ತು. ಹಿಂದೂ ತಲೆಬಾಗಿಯಾದರೂ ಮುಸಲ್ಮಾನನ ಗೆಳೆತನ ಬಯಸಬೇಕೆಂಬುದು ನಾಯಕರುಗಳ ವಾದ. ಅದಕ್ಕೆ ಕಾಂಗ್ರೆಸ್ ಅಧಿವೇಶನದಲ್ಲಿ ಯಾವ ಮುಸಲ್ಮಾನ ಅಭಿಪ್ರಾಯ ಮಂಡಿಸಲೆಂದು ನಿಂತರೂ ಉಳಿದೆಲ್ಲ ಸದಸ್ಯರು ಉಘೇ ಉಘೇ ಎನ್ನುತ್ತಾ ಆತನಿಗೆ ಜೈಕಾರ ಹಾಕಬೇಕಿತ್ತು. ಕೆಲವೊಮ್ಮೆಯಂತೂ ಆತ ನಿಂತೊಡನೆ ಅಲ್ಲಾ ಹೊ ಅಕ್ಬರ್ ಎಂಬ ಘೋಷಣೆಯನ್ನೂ ಮೊಳಗಿಸಬೇಕಾಗುತ್ತಿತ್ತು. ಆದರೆ ಅಂದು ಅದು ಕೋಮುವಾದಿ ಎನಿಸಿರಲಿಲ್ಲ. ರಾಜಕೀಯ ಸಭೆಯೊಂದರಲ್ಲಿ ಒಂದು ಮತವನ್ನು ಉನ್ನತೀಕರಿಸುವ ಈ ಘೋಷಣೆಗಳು ಕೂಡದು ಎಂದು ಯಾರೂ ಹೇಳಿರಲಿಲ್ಲ. ಮುಸಲ್ಮಾನರಿಗೆ ಮಾತನಾಡಲು ಹೆದರಿಕೆಯಾಗುತ್ತದೆ, ಹೀಗಾಗಿ ಈ ಘೋಷಣೆಗಳ ಮೂಲಕ ಅವರಲ್ಲಿ ಧೈರ್ಯ ತುಂಬಬೇಕು ಎಂಬುದು ಅಂದಿನ ಕಾಂಗ್ರೆಸ್ ನಾಯಕರುಗಳ ವಾದ. ಹಿಂದುಗಳ ಮನೆಗಳನ್ನು ಲೂಟಿಗೈಯ್ಯುವಾಗ ಅವರಿಗೆ ಹೆದರಿಕೆ ಆಗುವುದಿಲ್ಲ! ಹಿಂದುವಾಗಿರುವುದಕ್ಕಾಗಿಯೇ ತೆರಿಗೆ ಕಟ್ಟಬೇಕಾದ ಸ್ಥಿತಿ ನಿಮರ್ಾಣ ಮಾಡಿದ್ದರಲ್ಲ, ಅಂದು ಜೊತೆಗಾರ ಹಿಂದುಗಳ ತಲೆಗಂದಾಯದಲ್ಲಿ ತಾನು ಊಟ ಮಾಡುತ್ತಿದ್ದೇನೆ ಎಂಬ ನೋವೂ ಅವರಿಗಿರಲಿಲ್ಲ. ಯಾರ ಬರ್ಬರ ಆಕ್ರಮಣದ ಕಾರಣಕ್ಕಾಗಿ ಈ ದೇಶದಲ್ಲಿ ಅನಿವಾರ್ಯ ಬಾಲ್ಯವಿವಾಹಗಳು ಆರಂಭವಾದವೋ, ಯಾರ ದಾಳಿಯನ್ನು ಊಹಿಸಿಕೊಂಡೇ ಅಸಂಖ್ಯ ಹೆಣ್ಣುಮಕ್ಕಳು ಜೀವಹರಣ ಮಾಡಿಕೊಳ್ಳಲು ಬೆಂಕಿಗೆ ಧುಮುಕಿದರೋ, ಯಾರ ಕ್ರೌರ್ಯದ ಕಲ್ಪನೆ ಮಾತ್ರದಿಂದಲೇ ಗಂಡನ ಚಿತೆಯೊಂದಿಗೆ ಹೆಣ್ಣುಮಕ್ಕಳು ಜೀವ ಅಂತ್ಯಗೊಳಿಸಿಕೊಂಡರೋ, ಯಾರ ದುಷ್ಟತನದಿಂದಾಗಿ ದೇವಾಲಯಗಳು ಧ್ವಂಸಗೊಂಡು, ದೇವರ ಮೂತರ್ಿಗಳು ಬರಿಯ ಕಲ್ಲುಗಳಾಗಿ ರಾಜರ ಅರಮನೆಯ ಮೆಟ್ಟಿಲುಗಳಾದವೋ, ಯಾರು ಪಕ್ಕದ ಮನೆಯವರು ತಮಗೆ ಸಹಕಾರಿಗಳಾಗಿದ್ದರು ಎಂಬುದನ್ನು ಮರೆತು ದಂಗೆಯ ಸಂದರ್ಭದಲ್ಲಿ ಬರ್ಬರವಾಗಿ ನಡಕೊಂಡರೋ ಅವರಿಗೆ ನಾವು ಧೈರ್ಯ ತುಂಬಬೇಕಿತ್ತಂತೆ, ಶಭಾಷ್!


ಹೋಗಲಿ, ನಾವೆಲ್ಲರೂ ಪ್ರತಿನಿತ್ಯ ಭಜಿಸುವ ರಾಮ್ಧುನ್ ರಘುಪತಿ ರಾಘವ ರಾಜಾರಾಂ ಅನ್ನು ಬದಲಾಯಿಸಿ ಈಶ್ವರ್ ಅಲ್ಲಾಹ್ ತೇರೇನಾಮ್ ಎಂಬ ಸಾಲನ್ನು ಸೇರಿಸಲಾಯ್ತಲ್ಲ, ಅದು ಸರಿಯೋ ತಪ್ಪೋ ಎಂಬುದರ ಬಗ್ಗೆ ಇಂದಿಗೂ ಚಚರ್ೆ ನಡೆಯುವುದಿಲ್ಲವಲ್ಲ. ಹೀಗೆ ಸಾಲುಗಳಲ್ಲಿ ಮುಸಲ್ಮಾನರ ಅಲ್ಲಾಹ್ನನ್ನು ತಂದಿದ್ದರಿಂದ ಎಂದಾದರೂ ಅವರು ಈ ಭಜನೆಯನ್ನು ಪ್ರೀತಿಯಿಂದ ಹಾಡಿದ್ದು ಕೇಳಿರುವಿರಾ? ಯಾರಿಗಾಗಿ ರಾಮ್ಧುನ್ ಅನ್ನೇ ಬದಲಾಯಿಸಲಾಯ್ತೋ ಅವರು ಅದನ್ನು ಎಂದಿಗೂ ಹಾಡಲೇ ಇಲ್ಲ, ಬದಲಿಗೆ ಯಾರಿಗೆ ಈ ಎಲ್ಲಾ ವಿಚಾರಗಳ ಸಮಸ್ಯೆಯೇ ಇರಲಿಲ್ಲವೋ ಅವರು ಮಾತ್ರ ಇಂದಿಗೂ ಅದನ್ನೇ ಮೂಲ ರಾಮ್ಧುನ್ ಎಂಬಂತೆ ಹಾಡುತ್ತಿದ್ದಾರೆ. ಸ್ವಾತಂತ್ರ್ಯ ಬಂದ ಮೇಲಾದರೂ ಅದನ್ನು ಮೂಲಸ್ಥಿತಿಗೆ ತರಬೇಕೆಂದು ನಮಗೆ ಅನ್ನಿಸಲೇ ಇಲ್ಲವಲ್ಲ. ಈಗೇನು ರಘುಪತಿ ರಾಘವ ರಾಜಾರಾಂ ಹಾಡಿದರೆ ನಾವು ವೇದಿಕೆಯಿಂದ ನಿರ್ಗಮಿಸಬೇಕೇನು?

ಮಮತಾ ಬ್ಯಾನಜರ್ಿ ಎತ್ತಿದ ಪ್ರಶ್ನೆಗಳಿಗೆ ಅನೇಕರು ಉತ್ತರಿಸಲು ತಡಕಾಡುತ್ತಿದ್ದಾರೆ. ರಾಜಕೀಯವನ್ನು ಸಕರ್ಾರಿ ಸಭೆ-ಸಮಾರಂಭಗಳಲ್ಲಿ ತರಬಾರದು ಎಂದು ಆಕೆ ಹೇಳುವ ಮೂಲಕ ಜೇನಿನಗೂಡಿಗೇ ಕೈಹಾಕಿಬಿಟ್ಟಿದ್ದಾರೆ. ಪ್ರಾಮಾಣಿಕವಾಗಿ ಹೇಳಿ, ಎಷ್ಟು ಸಕರ್ಾರಿ ಶಾಲೆಗಳಲ್ಲಿ ನೆಹರೂ, ಇಂದಿರಾ, ರಾಜೀವ್ರ ಫೋಟೊ ರಾರಾಜಿಸುತ್ತಿದೆ ಅಂತ. ಮಹಾತ್ಮಾ ಗಾಂಧೀಜಿಯವರ ಚಿತ್ರ ಶಾಲೆಯಲ್ಲಿರುವುದನ್ನು ಒಪ್ಪಿಕೊಳ್ಳಬಹುದು. ಪಕ್ಕಾ ರಾಜಕಾರಣಿಯೇ ಆಗಿದ್ದ ನೆಹರೂ ಏಕೆ? ವಿವೇಕಾನಂದರ ಜಯಂತಿಯ ಆಚರಣೆ ಶಾಲೆಗಳಲ್ಲಿ ನಡೆಯುವುದನ್ನು ಒಪ್ಪಿಕೊಳ್ಳಬಹುದು, ನೆಹರೂ ಹುಟ್ಟಿದಹಬ್ಬ ಏಕೆ? ಅದು ರಾಜಕಾರಣವಲ್ಲವೇನು? ಕಾಂಗ್ರೆಸ್ಸಿಗೆ ಭವಿಷ್ಯದ ಪೀಳಿಗೆಯ ಮನಸ್ಸಿನೊಳಗೆ ನೇರಸ್ಥಾನ ಮಾಡಿಕೊಟ್ಟು ಮತ ಹಾಕಿಸುವ ಹುನ್ನಾರವಲ್ಲವೇನು ಅದು. ಇಂದಿರಾಗಾಂಧಿಯ ಯಾವ ಕೊಡುಗೆಗಾಗಿ ಆಕೆಯ ಚಿತ್ರ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಇರಬೇಕು? ಪುಣ್ಯ ಆಕೆಯ ಹುಟ್ಟಿದಹಬ್ಬವನ್ನು ಶಾಲೆಗಳಲ್ಲಿ ಹೆಣ್ಣುಮಕ್ಕಳ ದಿನವನ್ನಾಗಿ ಆಚರಿಸುವುದಿಲ್ಲ. ಇಲ್ಲವಾದರೆ ವರ್ಷಕ್ಕೊಮ್ಮೆ ಅದನ್ನೂ ನೋಡಬೇಕಾಗುತ್ತಿತ್ತು. ಅನೇಕ ಶಾಲೆಗಳಲ್ಲಿ ಇಂದಿಗೂ ರಾಜೀವ್ಗಾಂಧಿಯವರ ಚಿತ್ರಪಟವನ್ನು ನೋಡುವಾಗಲಂತೂ ಪಿಚ್ಚೆನಿಸುತ್ತದೆ. ಅಕ್ಷರಶಃ ಶಾಲೆಗಳಲ್ಲಿ ಮಕ್ಕಳ ಬುದ್ಧಿಗೆ ಮಸಿ ಬಳಿಯುವ ಪ್ರಯತ್ನಗಳೇ ಇವು. ಮೋದಿಯವರ ಜಾಗದಲ್ಲಿ ಅಕಸ್ಮಾತ್ ರಾಹುಲ್ ಪ್ರಧಾನಿಯಾಗಿಬಿಟ್ಟಿದ್ದರೆ ನಮ್ಮ ಶಾಲಾ-ಕಾಲೇಜುಗಳು ಆತನ ಚಿತ್ರವನ್ನು ಹಾಕಿ ಸಂಭ್ರಮಿಸಿಬಿಡುತ್ತಿದ್ದವು. ಆತನ ಹುಟ್ಟಿದಹಬ್ಬವನ್ನೂ ಶಾಲೆಗಳಲ್ಲಿ ಆಚರಿಸಬೇಕಾದ ಸ್ಥಿತಿಯನ್ನು ಊಹಿಸಿಕೊಳ್ಳಿ! ಅಷ್ಟರಿಂದಂತೂ ಬಚಾವಾಗಿದ್ದೇವೆ. ರಾಜಕೀಯವನ್ನು ಎಲ್ಲ ಕ್ಷೇತ್ರಗಳಲ್ಲಿ ಬೆರೆಸುವುದನ್ನು ರೂಢಿ ಮಾಡಿದ್ದೇ ಕಾಂಗ್ರೆಸ್ಸು. ಅದಕ್ಕೇ ಮಹಾತ್ಮಗಾಂಧೀಜಿ ಆರಂಭದಲ್ಲೇ ಹೇಳಿದ್ದು ಕಾಂಗ್ರೆಸ್ಸನ್ನು ವಿಸಜರ್ಿಸಿ, ಸ್ವಾತಂತ್ರ್ಯದ ಹೊತ್ತಲ್ಲಿ ಹೊಸದೊಂದು ಪಾಟರ್ಿಯ ರಚನೆ ಮಾಡಿ ಅಧಿಕಾರವನ್ನು ಪಡೆಯಬೇಕು ಅಂತ. ಆದರೆ ಅಷ್ಟು ಧೈರ್ಯ, ಸಾಹಸಗಳು ನೆಹರೂ ಪಾಳಯದಲ್ಲಿರಲಿಲ್ಲ. ಅವರು ಎ.ಒ.ಹ್ಯೂಮ್ ಕಟ್ಟಿದ, ತಿಲಕರೆಲ್ಲ ಬೆಳೆಸಿದ, ಗಾಂಧೀಜಿ ಸುಂದರ ರೂಪಕೊಟ್ಟ ಅದೇ ಕಾಂಗ್ರೆಸ್ಸಿಗೆ ಜೋತುಬಿದ್ದರು. ಅಧಿಕಾರವನ್ನು ಪಡೆದುಕೊಂಡರು ಮತ್ತು ಅಸಹ್ಯವಾಗಿ ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿದ ಪಕ್ಷ ನಮ್ಮದು ಎಂದು ಹೇಳಿಕೊಳ್ಳುತ್ತಲೇ ನಡೆದರು. ಇಂದಿಗೂ ಹೇಳುತ್ತಿದ್ದಾರೆ. ನೂರಾರು ವರ್ಷಗಳ ಹಿಂದಿನ ಹೋರಾಟವನ್ನು ತಮ್ಮ ಖಾತೆಗೆ ತುಂಬಿಕೊಳ್ಳುವ ಅವರು ನೆಹರೂ ತಪ್ಪುಗಳನ್ನು ಮಾತ್ರ ಸಮಾಜ ಮರೆತುಬಿಡಬೇಕು ಎನ್ನುತ್ತಾರೆ. ಅಷ್ಟೇ ಅಲ್ಲ, ಈ ಸ್ವಾತಂತ್ರ್ಯ ಹೋರಾಟದ ಕಥನಗಳನ್ನಿರಿಸಿಕೊಂಡೇ ಪಠ್ಯಪುಸ್ತಕದಲ್ಲಿ ಸ್ಥಾನವನ್ನೂ ಪಡೆದು ಕಾಂಗ್ರೆಸ್ಸಿನ ಪರವಾಗಿ ಪರೋಕ್ಷ ಪ್ರಚಾರ ಮಾಡುತ್ತಾರೆ. ಇವರ ರಾಜಕೀಯದ ಕುರಿತಂತೆ ಎಷ್ಟು ಮಾತನಾಡಿದರೂ ಕಡಿಮೆಯೇ. ಅಧಿಕಾರದಲ್ಲಿರುವಾಗಲೇ ಕಾಂಗ್ರೆಸ್ಸು ತಮ್ಮ ನಾಯಕರುಗಳ ಹೆಸರಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಕೇಂದ್ರಸಕರ್ಾರವೇ ನೆಹರೂ, ಇಂದಿರಾ, ರಾಜೀವ್ರ ಹೆಸರಲ್ಲಿ 12 ಯೋಜನೆಗಳನ್ನು ತಂದಿದೆ. ಅದರಲ್ಲಿ ಇಂದಿರಾ ಆವಾಸ್ ಯೋಜನೆ ಮತ್ತು ವಿಕಾಸ ಪತ್ರಗಳು ಬಡ ಮತ್ತು ಮಧ್ಯಮವರ್ಗವನ್ನು ಮುಟ್ಟುವಂತವು ಮತ್ತು ಸದಾ ಅವರ ಕೊಡುಗೆಯನ್ನು ನೆನಪಿಸುವಂಥವು. ಜನರಿಗೆ ಉದ್ಯೋಗ ಕೊಡುವ ರೋಜ್ಗಾರ್ ಯೋಜನೆಗೆ ಅವರು ಕೊಟ್ಟಿರುವುದು ನೆಹರೂ ಹೆಸರು. ಇದನ್ನುಳಿದು ರಾಜ್ಯಗಳ ವಿಚಾರಕ್ಕೆ ಬರುವುದಾದರೆ 50ಕ್ಕೂ ಹೆಚ್ಚು ರಾಜ್ಯ ಸಕರ್ಾರದ ಯೋಜನೆಗಳು ಈ ಪರಿವಾರದ ಹೆಸರಿನಲ್ಲೇ ಇದೆ. ಹಳ್ಳಿಗಳಿಗೆ, ಸ್ತ್ರೀಯರಿಗೆ, ತರುಣರಿಗೆ, ವಿಭಿನ್ನ ಕ್ಷೇತ್ರಗಳಲ್ಲಿ ಇವರ ಹೆಸರಿನ ಯೋಜನೆಗಳು ಚಾಲ್ತಿಯಲ್ಲಿವೆ. ಅಚ್ಚರಿಯೇನು ಗೊತ್ತೇ? ಒಂದಾದರೂ ಆಟದಲ್ಲಿ ಪ್ರಾವೀಣ್ಯತೆ ತೋರದಿದ್ದ ಈ ಪರಿವಾರದವರ ಹೆಸರಿನಲ್ಲಿ 28 ಕ್ರೀಡಾಕೂಟಗಳು, ಟ್ರೋಫಿಗಳು ಇವೆ. ರಾಜೀವ್ಗಾಂಧಿಯ ಹೆಸರಿನಲ್ಲಿ ಖೇಲ್ರತ್ನ ಏಕಿದೆ ಎಂದು ಇಂದಿಗೂ ಯಾರಿಗೂ ಗೊತ್ತಿಲ್ಲ! ಏಪರ್ೋಟರ್್ಗಳು, ಯುನಿವಸರ್ಿಟಿಗಳು ಎಲ್ಲದಕ್ಕೂ ಈ ಪರಿವಾರದವರ ಹೆಸರುಗಳೇ, ಇದು ರಾಜಕೀಯವಲ್ಲವೇನು? ಹಣ ಸಕರ್ಾರದ್ದು, ಜಾರಿಗೊಳಿಸಲು ಕೆಲಸ ಮಾಡುವವರು ಸಕರ್ಾರದ ಕಾರಕೂನರು, ಆದರೆ ಲಾಭವನ್ನುಣ್ಣುವುದು ಮಾತ್ರ ಒಂದೇ ಪರಿವಾರ!


ಕಾಂಗ್ರೆಸ್ಸಿಗರ ತಾಳ್ಮೆಯನ್ನು ಮೆಚ್ಚಬೇಕಾದ್ದೇ. ಇಷ್ಟು ವರ್ಷಗಳ ಕಾಲ ಒಂದೇ ಪರಿವಾರ ಹೇಳಿದಂತೆ ಕೇಳುತ್ತಾ, ಮೇರಾ ನಂಬರ್ ಕಬ್ ಆಯೇಗಾ ಎಂದು ಕಾಯುತ್ತಲೇ ಕುಳಿತಿದ್ದಾರಲ್ಲ, ಅವರ ಮಾನಸಿಕ ಸ್ಥಿರತೆಗೆ ಉಘೇ ಎನ್ನಲೇಬೇಕು. ಆದರೆ ಪ್ರಶ್ನೆ ಇರೋದು ಮತ್ತೆ ಮಮತಾ ಬ್ಯಾನಜರ್ಿಯ ಮಾನಸಿಕ ಗೊಂದಲಗಳದ್ದೇ. ಸಾಮಾನ್ಯ ಜನ ಶ್ರೀರಾಮನಿಗೆ ಜೈಕಾರ ಹೇಳಿದ್ದನ್ನೇ ರಾಜಕೀಯ ಎನ್ನುವ ಆಕೆ ಸಕರ್ಾರಗಳು ಒಂದು ಪರಿವಾರಕ್ಕೆ ನಿರಂತರವಾಗಿ ಜೈಕಾರ ಹಾಕುತ್ತಾ ಬಂದವಲ್ಲ, ಅದರ ಬಗ್ಗೆ ಮುಗುಮ್ಮಾಗಿದ್ದಾರಲ್ಲ. ಬಂಗಾಳದ ಚುನಾವಣೆಗಳಲ್ಲಿ ಉತ್ತರ ದೊರಕಬಹುದೇನೋ!

ಯೋಗಿ; ಎನ್ಕೌಂಟರ್ ಸಾಲಿಗೆ ಮತ್ತೊಂದು!

ಯೋಗಿ; ಎನ್ಕೌಂಟರ್ ಸಾಲಿಗೆ ಮತ್ತೊಂದು!

ವಿಕಾಸ್ ಸಾಮಾನ್ಯ ಆಸಾಮಿಯಲ್ಲ. ಕಾನ್ಪುರದ ಬಿಕ್ರು ಗ್ರಾಮದ ನಿವಾಸಿಯಾದ ಆತ ಬಾಲ್ಯದಿಂದಲೂ ವಿಭಿನ್ನ ವ್ಯಕ್ತಿತ್ವದ ಮನುಷ್ಯ. ಆದರೆ ಬುದ್ಧಿವಂತ. ಓದಲೆಂದು ಸಂಬಂಧಿಕರ ಮನೆಗೆ ಹೋಗಿದ್ದ. ಆದರೆ ಶಾಲೆಗಿಂತ ಹೆಚ್ಚು ಹೊರಗೇ ಸಮಯ ಕಳೆಯುತ್ತಿದ್ದ. 25ನೇ ವಯಸ್ಸಿನ ವೇಳೆಗೆ ಬಾಬ್ರಿ ಮಸೀದಿ ಉರುಳುವ ಸ್ವಲ್ಪ ಮುನ್ನ, ಆತನ ಹಳ್ಳಿ ಬಿಕ್ರುವಿನಲ್ಲಿ ಸಣ್ಣ ಗಲಾಟೆಯೊಂದರಲ್ಲಿ ಆತ ಪಾಲ್ಗೊಂಡು ಎದುರಿಗಿರುವವರ ಜೊತೆ ಘರ್ಷಣೆಯಲ್ಲಿ ತೊಡಗಿದ್ದ.

ವಿಕಾಸ್ ದುಬೆ ಕಾನ್ಪುರ್ವಾಲಾ ಒಂದು ವಾರವಿಡೀ ಎಲ್ಲರ ಮನಸ್ಸು ಕೊರೆಯುತ್ತಿದ್ದ ಹೆಸರು. ಮಧ್ಯಪ್ರದೇಶದ ಮಹಾಕಾಲ ಮಂದಿರದಿಂದ ಅವನನ್ನು ಹಿಡಿದು ತಂದಾಗಲೇ ಅನೇಕರು ಹುಬ್ಬೇರಿಸಿದ್ದರು. ಆದರೆ ಆತನನ್ನು ಉತ್ತರಪ್ರದೇಶಕ್ಕೆ ತಂದು ಗಮ್ಯಸ್ಥಾನಕ್ಕೆ 22 ಕಿ.ಮೀ ದೂರವಿರುವಾಗ ಎನ್ಕೌಂಟರ್ ಮಾಡಿರುವ ರೀತಿಯನ್ನು ನೋಡಿದರೆ ಎಲ್ಲ ಕ್ರಿಮಿನಲ್ಲುಗಳಿಗೂ ಸ್ಪಷ್ಟವಾದ ಸಂದೇಶ ಕೊಟ್ಟಂತೆ!

2

ವಿಕಾಸ್ ಸಾಮಾನ್ಯ ಆಸಾಮಿಯಲ್ಲ. ಕಾನ್ಪುರದ ಬಿಕ್ರು ಗ್ರಾಮದ ನಿವಾಸಿಯಾದ ಆತ ಬಾಲ್ಯದಿಂದಲೂ ವಿಭಿನ್ನ ವ್ಯಕ್ತಿತ್ವದ ಮನುಷ್ಯ. ಆದರೆ ಬುದ್ಧಿವಂತ. ಓದಲೆಂದು ಸಂಬಂಧಿಕರ ಮನೆಗೆ ಹೋಗಿದ್ದ. ಆದರೆ ಶಾಲೆಗಿಂತ ಹೆಚ್ಚು ಹೊರಗೇ ಸಮಯ ಕಳೆಯುತ್ತಿದ್ದ. 25ನೇ ವಯಸ್ಸಿನ ವೇಳೆಗೆ ಬಾಬ್ರಿ ಮಸೀದಿ ಉರುಳುವ ಸ್ವಲ್ಪ ಮುನ್ನ, ಆತನ ಹಳ್ಳಿ ಬಿಕ್ರುವಿನಲ್ಲಿ ಸಣ್ಣ ಗಲಾಟೆಯೊಂದರಲ್ಲಿ ಆತ ಪಾಲ್ಗೊಂಡು ಎದುರಿಗಿರುವವರ ಜೊತೆ ಘರ್ಷಣೆಯಲ್ಲಿ ತೊಡಗಿದ್ದ. ಅಲ್ಲಿಂದಾಚೆಗೆ ಆತ ಹಿಂದಿರುಗಿ ನೋಡಿದ್ದೇ ಇಲ್ಲ. ಕಾಲೇಜಿನಲ್ಲಿದ್ದಾಗ ರಾಜಕೀಯ ನೇತಾರರ ಸಂಪರ್ಕ ಪಡೆದಿದ್ದ ವಿಕಾಸ್ ಆಗಾಗ ಅವರ ಕೆಲಸಗಳನ್ನು ಮಾಡಿಕೊಡುತ್ತಿದ್ದ ಮತ್ತು ತಾನು ಪೊಲೀಸರ ಕಿರಿಕಿರಿಯಲ್ಲಿ ಸಿಕ್ಕಿಬಿದ್ದಾಗ ಅವರ ಸಹಕಾರದಿಂದ ತಪ್ಪಿಸಿಕೊಳ್ಳುತ್ತಿದ್ದ. ಒಬ್ಬ ಮಗ 2003ರಲ್ಲಿ ಅಚಾನಕ್ಕಾಗಿ ತೀರಿಕೊಂಡ. ಈ ಸಾವು ನಿಗೂಢವಾಗಿರುವಾಗಲೇ ಆತನ ಹೆಂಡತಿಯೂ ನಿಗೂಢವಾಗಿಯೇ ಸತ್ತಳು. ಆಗ ಆತ ಮದುವೆಯಾಗಿದ್ದು ತನ್ನ ಸಹವತರ್ಿಯ ಸಹೋದರಿ ರಿಚಾಳನ್ನು. ಅದು ಪ್ರೇಮ ವಿವಾಹ ಅಂತಾರೆ. ಅವಳ ಕುರಿತು ಇಲ್ಲಿ ಏಕೆ ಪ್ರಸ್ತಾಪಿಸಬೇಕಾಯಿತೆಂದರೆ ವಿಕಾಸ್ ಅಂತ್ಯ ಸಂಸ್ಕಾರಕ್ಕೆ ಸ್ವತಃ ತಂದೆ ಬರಲು ನಿರಾಕರಿಸಿದರೂ ರಿಚಾ ಮಗನನ್ನು ಕರೆದುಕೊಂಡು ಬಂದಳು. ಆತನ ಎನ್ಕೌಂಟರ್ ಕುರಿತಂತೆ ಪತ್ರಕರ್ತರು ಪ್ರಶ್ನೆ ಕೇಳುವಾಗ ಮಾಡಿದ ತಪ್ಪಿಗೆ ಸರಿಯಾದ ಶಿಕ್ಷೆಯಾಗಿದೆ ಎಂದ ಆಕೆ ಒಂದು ಹಂತದಲ್ಲಿ ‘ನಾನೇ ಬಂದೂಕು ಕೈಗೆತ್ತಿಕೊಳ್ಳುತ್ತೇನೆ. ಎಲ್ಲರಿಗೂ ಸರಿಯಾದ ಪಾಠ ಕಲಿಸುತ್ತೇನೆ’ ಎಂದುಬಿಟ್ಟಿದ್ದಳು!

3

ವಿಕಾಸ್ಗೆ ಒಂದು ವಿಶೇಷವಾದ ಶಕ್ತಿಯಿತ್ತು. ಚುನಾವಣೆಯಲ್ಲಿ ಗೆಲ್ಲಬಹುದಾದ ಕುದುರೆಯನ್ನು ಆತ ಮೊದಲೇ ಗುರುತಿಸಿಬಿಡುತ್ತಿದ್ದ. ಇದು ದೇವರು ಕೊಟ್ಟ ವರವೆಂದು ಆತನೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದ. ಈ ಕಾರಣದಿಂದಾಗಿಯೇ ಆತ ಯಾವ ಪಕ್ಷ ಗೆದ್ದರೂ ಸಮರ್ಥವಾಗಿ ತನ್ನ ಕೆಲಸ ಮುಂದುವರೆಸಿಕೊಂಡು ಹೋಗುವಂತೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದ. ಕಳೆದ ಎರಡು-ಮೂರು ದಶಕಗಳಿಂದ ಅವನ ಹಳ್ಳಿಯ ವ್ಯಾಪ್ತಿಯ ಗ್ರಾಮಪಂಚಾಯಿತಿಗೆ ಈತ ಮತ್ತು ಈತನ ಪರಿವಾರದವರೇ ಅಧ್ಯಕ್ಷರು. ರೌಡಿ ಎಂದು ಹೆಸರು ಪಡೆದಿದ್ದ ವಿಕಾಸ್ ಎರಡೆರಡು ಬಾರಿ ಪಂಚಾಯಿತಿಯ ಅಧ್ಯಕ್ಷನಾಗಿದ್ದನಲ್ಲದೇ ಒಮ್ಮೆಯಂತೂ ಜೈಲಿನಿಂದಲೇ ಜಿಲ್ಲಾ ಪಂಚಾಯತ್ ಚುನಾವಣೆಯನ್ನೂ ಗೆದ್ದುಕೊಂಡಿದ್ದ. 60ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ವಿಕಾಸ್ ಪ್ರಭಾವಿ ನಾಯಕರುಗಳ ಕಾರಣದಿಂದಾಗಿ ತಪ್ಪಿಸಿಕೊಂಡೇ ತಿರುಗಾಡುತ್ತಿದ್ದ. ಸಣ್ಣ-ಪುಟ್ಟ ಅಧಿಕಾರಿಗಳು ಬಿಡಿ, ಎಸ್ಪಿ ಮಟ್ಟದ ಅಧಿಕಾರಿಗಳೂ ಕೂಡ ವಿಕಾಸ್ನ ಆಪ್ತರಾಗಿದ್ದರಂತೆ. ಅವರೊಡನೆ ಆತ ನಿರಂತರ ಟೆಲಿಫೋನ್ ಸಂಭಾಷಣೆಯಲ್ಲಿರುತ್ತಿದ್ದನಲ್ಲದೇ ಅಗತ್ಯಬಿದ್ದಾಗ ತನ್ನ ಸಹಾಯಕರನ್ನು ಕಳುಹಿಸಿ ಕೆಲಸ ಮಾಡಿಸಿಕೊಳ್ಳುತ್ತಿದ್ದನಂತೆ. ಹೀಗಾಗಿಯೇ ಆತ ಕಲಿತ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರ ಹತ್ಯೆಗೆ ಕಾರಣನಾಗಿದ್ದಾಗ್ಯೂ ಆತ ಬಚಾವಾಗಿಬಿಟ್ಟ. 2001ರಲ್ಲಿ ಪೊಲೀಸ್ ಠಾಣೆಯಲ್ಲಿಯೇ ರಾಜ್ಯದ ಮಂತ್ರಿಯೊಬ್ಬರನ್ನು ಕೊಂದು ಹಾಕಿದ ಆರೋಪ ಅವನ ಮೇಲಿತ್ತು. ಆರು ತಿಂಗಳುಗಳ ಕಾಲ ಆತ ಪೊಲೀಸರಿಗೆ ಸಿಗಲಿಲ್ಲ. ಅಷ್ಟೇ ಅಲ್ಲ, ಆನಂತರ ಆತನನ್ನು ಗುರುತಿಸುವಲ್ಲಿ ಪೊಲೀಸರು ನಿರಾಕರಿಸಿದ್ದರಿಂದ ಆಗಲೂ ತಪ್ಪಿಸಿಕೊಂಡುಬಿಟ್ಟ! ಒಟ್ಟಾರೆ ಏಳು ಕೊಲೆ ಮತ್ತು ಎಂಟು ಕೊಲೆ ಪ್ರಯತ್ನಗಳ ಆರೋಪ ಹೊಂದಿದ್ದ ವಿಕಾಸ್ ಐಶಾರಾಮಿ ಬದುಕನ್ನು ನಡೆಸುತ್ತಿದ್ದ. ತನ್ನ ತಂದೆ-ತಾಯಿಯರಿಗೆ ದೊಡ್ಡ ಬಂಗಲೆಯನ್ನೇ ಕಟ್ಟುಕೊಟ್ಟಿದ್ದ. ಹಳ್ಳಿಗರು ಅವನ ಭೀತಿಯಿಂದ ನರಳುತ್ತಿದ್ದರಲ್ಲದೇ ಆತನ ಕಾರಣಕ್ಕಾಗಿ ತಮ್ಮ ಜಮೀನಿಗೆ ಬೆಲೆಯೂ ದಕ್ಕುತ್ತಿಲ್ಲವೆಂದು ಆರೋಪಿಸುತ್ತಿದ್ದರು. ಪೊಲೀಸ್ ಪೇದೆಯಿಂದ ಹಿಡಿದು ಮಂತ್ರಿಗಳವರೆಗೆ ಎಲ್ಲರನ್ನೂ ತೆಕ್ಕೆಯಲ್ಲಿಟ್ಟುಕೊಂಡಿದ್ದರಿಂದ ಅವನೆದುರು ಮಾತನಾಡಲು ಎಲ್ಲರೂ ಹೆದರಿಕೊಳ್ಳುತ್ತಿದ್ದರು. ಜೂನ್ ತಿಂಗಳ ಆರಂಭದಲ್ಲಿ ಆತನ ಜಾಡು ಹಿಡಿದು ಹೊರಟ ಪೊಲೀಸರು ಆತ ನಿರಂಕುಶವಾಗಿ ದಾಳಿ ಮಾಡಿದಾಗ ಅಚ್ಚರಿಗೊಳಗಾಗಿದ್ದರು. ಎಂಟು ಜನ ಪೊಲೀಸರು ರಕ್ತ-ಸಿಕ್ತವಾಗಿ ಅಂಗಾತ ಬಿದ್ದುಕೊಂಡಿದ್ದು ಇಲಾಖೆಗೆ ಸವಾಲಾಗಿತ್ತಷ್ಟೇ ಅಲ್ಲ ರೌಡಿಗಳನ್ನು ಮುಲಾಜಿಲ್ಲದೇ ಮಟ್ಟ ಹಾಕಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೂ ಮುಖಭಂಗವೆನಿಸಿತ್ತು. ಪೊಲೀಸ್ ವ್ಯವಸ್ಥೆಯೊಳಗಿನ ವ್ಯಕ್ತಿಗಳೇ ಈ ಕಾಯರ್ಾಚರಣೆಯ ಮುನ್ಸೂಚನೆಯನ್ನು ಅವನಿಗೆ ನೀಡಿದ್ದು ಆನಂತರ ತಿಳಿದು ಬಂದಾಗ ವ್ಯವಸ್ಥೆಯೇ ಅವಮಾನಿಗೊಂಡಿತ್ತು. ಆತನನ್ನು ಹುಡುಕಲೆಂದು ನಾಲ್ಕಾರು ರಾಜ್ಯಗಳಲ್ಲಿ ಜಾಲ ಬೀಸಲಾಯ್ತು. ಧಿಮಾಕಿನಿಂದಲೇ ‘ನಾನು ಕಾನ್ಪುರದವ ಮತ್ತೆ ಬರುತ್ತೇನೆ’ ಎಂದು ಹೋಗಿದ್ದವ ಮಹಾಕಾಲ ದೇವಸ್ಥಾನದಲ್ಲಿ ಸೆಕ್ಯುರಿಟಿಯ ಕಣ್ಣಿಗೆ ಬಿದ್ದಿದ್ದ. ತಕ್ಷಣವೇ ಪೊಲೀಸರು ಕಾರ್ಯ ಪ್ರವೃತ್ತರಾಗಿ ಅವನನ್ನು ಹಿಡಿದು ಉತ್ತರ ಪ್ರದೇಶದ ಪೊಲೀಸರ ಕೈಗೆ ಇಟ್ಟರು.

4

ಆ ವೇಳೆಗಾಗಲೇ ಬುದ್ಧಿಜೀವಿಗಳು ಆತನನ್ನು ಹಿಡಿಯಲು ಸ್ವತಃ ಮುಖ್ಯಮಂತ್ರಿಗಳಿಗೇ ಮನಸ್ಸಿಲ್ಲವೆಂದು ಛೇಡಿಸಲಾರಂಭಿಸಿದ್ದರು. ಸಿಕ್ಕುಬಿದ್ದಾಗ ಅವರಿಗೆ ನಿಜಕ್ಕೂ ಖೇದವೂ ಆಗಿತ್ತು. ಆತ ನಿಸ್ಸಂಶಯವಾಗಿ ಒಂದಷ್ಟು ರಾಜಕೀಯ ನೇತಾರರಲ್ಲದೇ ಅಧಿಕಾರಿಗಳು, ವ್ಯಕ್ತಿಗಳ ಹೆಸರನ್ನು ಬಾಯ್ಬಿಡುತ್ತಾನೆ ಎಂಬ ಅರಿವಿದ್ದುದರಿಂದ ಇಡಿಯ ಎಡಪಂಥೀಯ ವರ್ಗ ಚಡಪಡಿಸುತ್ತಾ ನಿಂತಿತ್ತು. ಆತನಿಂದ ಬಾಯ್ಬಿಡಿಸಿಕೊಳ್ಳಬೇಕಾದ್ದೆಲ್ಲವನ್ನೂ ಬಿಡಿಸಿಕೊಂಡ ಪಡೆ ಅವನನ್ನು ಕರೆದುಕೊಂಡು ಬಂದು ಎನ್ಕೌಂಟರ್ ಮಾಡಿ ಬಿಸಾಡಿತು. ಉತ್ತರ ಪ್ರದೇಶಕ್ಕೆ ಇದು ಹೊಸತೇನೂ ಅಲ್ಲ. ಇದುವರೆಗೂ 6145 ಕಾಯರ್ಾಚರಣೆಗಳನ್ನು ನಡೆಸಿ, 119 ಜನರನ್ನು ನಡುರಸ್ತೆಯಲ್ಲಿ ಕೊಂದು ಬಿಸಾಡಿರುವ ಪೊಲೀಸರು ಅದಕ್ಕೆ ಈ ವ್ಯಕ್ತಿಯನ್ನು ಈಗ ಸೇರಿಸಿದ್ದಾರಷ್ಟೇ. ಹಾಗಂತ ಮಾನವ ಹಕ್ಕುಗಳ ಹೋರಾಟದವರಿಗೆ ಗಲಾಟೆ ಮಾಡಲು ಇಲ್ಲಿ ಅವಕಾಶವಿಲ್ಲ. ನಡೆಯಬೇಕಾದ ವಿಚಾರಣೆಗಳ ಮೂಲಕವೇ ಸಾಗಿ ಅದಾಗಲೇ 74 ಪ್ರಕರಣಗಳಲ್ಲಿ ಪೊಲೀಸರು ಕ್ಲೀನ್ಚಿಟ್ ಪಡೆದಿರುವುದರಿಂದ ಇದೂ ಅವಗಳಲ್ಲೊಂದಾಗಲಿದೆ. ದುಃಖದ ಸಂಗತಿ ಎಂದರೆ ಸ್ವತಃ ಪೊಲೀಸರು ಪಾಲ್ಘರ್ನಲ್ಲಿ ಸಾಧುಗಳನ್ನು ದುಷ್ಟರ ಕೈಗೆ ಒಪ್ಪಿಸುವಾಗ ಸುಮ್ಮನಿದ್ದ ಎಡಪಂಥೀಯರು ಈಗ 62 ಪ್ರಕರಣಗಳಲ್ಲಿ ಬೇಕಾಗಿದ್ದ ಕ್ರಿಮಿನಲ್ ಒಬ್ಬನ ಪರವಾಗಿ ಮಾತನಾಡುತ್ತಿದ್ದಾರೆ. ದುಬೆಯ ಬ್ರಾಹ್ಮಣ ಜಾತಿಯನ್ನು ಹಿಡಿದು ಆ ವೋಟುಗಳನ್ನು ಕಡಿತಗೊಳಿಸುವ ಯತ್ನದಲ್ಲಿ ಅವರು ಹಗಲಿರುಳೆನ್ನದೇ ಕೆಲಸ ಮಾಡುತ್ತಿದ್ದಾರೆ. ಇತ್ತ ಬ್ರಾಹ್ಮಣರಿಂದಲೇ ಕೂಡಿರುವ ಬಿಕ್ರುವಿನ ಪಕ್ಕದ ಹಳ್ಳಿಯಲ್ಲಿ ದುಬೆಯ ಸಾವಿನ ಸುದ್ದಿ ಕೇಳಿ ಜನ ಸಿಹಿಹಂಚಿಕೊಂಡು ತಿಂದಿದ್ದಾರೆ!

ಒಂದಂತೂ ಸತ್ಯ ಈ ಪ್ರಕರಣದ ನಂತರ ಯೋಗಿ ಆದಿತ್ಯನಾಥರು ಹಿಂದೆಂದಿಗಿಂತಲೂ ಬಲವಾಗಿ ಬೆಳೆದು ನಿಂತಿದ್ದಾರೆ. ಜೊತೆಗೆ ಹಿಂದೂ ಸಮಾಜವು ಹಿಂದುವೆಂಬ ಕಾರಣಕ್ಕೆ ಕ್ರಿಮಿನಲ್ ಒಬ್ಬನನ್ನು ಸಮಥರ್ಿಸಿಕೊಳ್ಳುವುದಿಲ್ಲ ಎಂಬುದನ್ನು ತೋರಿಸಿ ಉಳಿದೆಲ್ಲ ಮತ-ಪಂಥಗಳಿಗೆ ಮೇಲ್ಪಂಕ್ತಿಯಾಗಿ ನಿಂತಿದೆ. ಒಬ್ಬ ವಿಕಾಸ್ ದುಬೆ ಅನೇಕ ಸಂಗತಿಗಳನ್ನು ತಿಳಿಹೇಳಿ ಹೋಗಿದ್ದಾನೆ!

ಕರೋನಾ ಕಾಲದ ಕಲಿಕೆ ಹೇಗೆ?!

ಕರೋನಾ ಕಾಲದ ಕಲಿಕೆ ಹೇಗೆ?!

ಎಲ್ಲದರಲ್ಲೂ ತನ್ನ ಮಗನೇ ನಂಬರ್ ಒನ್ ಆಗಿಬಿಡಬೇಕೆಂದು ಬಯಸುವ ತಂದೆ-ತಾಯಿಯರು ಅವನೊಳಗಿನ ಶಕ್ತಿಯನ್ನು ಗುರುತಿಸುವುದರಲ್ಲಿ ಸೋತು ಹೋಗುತ್ತಾರೆ. ಯಾವ ಕೌಶಲ್ಯವನ್ನು ತನ್ನ ಜನ್ಮದೊಂದಿಗೆ ಪಡೆದುಕೊಂಡು ಬಂದಿರುತ್ತಾನೋ ಅದನ್ನು ಮರೆಯುವಂತೆ ಮಾಡಿ ಅವನಿಗೆ ಹೊಸ ಕಿರಿಕಿರಿಗಳನ್ನು ಹೆಗಲೇರಿಸಿಬಿಡುತ್ತಾರೆ.

ಕರೋನಾದ ಸಂಕಟ ವ್ಯಾಪಿಸಿಕೊಳ್ಳುತ್ತಿರುವ ಪರಿ ನೋಡಿದರೆ ಸಪ್ಟೆಂಬರ್ನವರೆಗಂತೂ ಶಾಲೆಗಳು ಮತ್ತೆ ಶುರುವಾಗುವಂತೆ ಕಾಣುತ್ತಿಲ್ಲ. ಅನೇಕ ಶಾಲೆಗಳು ಅದಾಗಲೇ ಆನ್ಲೈನ್ ತರಗತಿಯ ಹೆಸರಲ್ಲಿ ಮಕ್ಕಳಿಗೆ ವಚ್ಯರ್ುಯಲ್ ಶಾಲೆಯನ್ನು ಆರಂಭಿಸಿಬಿಟ್ಟಿದ್ದಾರೆ. ಪ್ರತ್ಯಕ್ಷ ತರಗತಿಯಲ್ಲಿ ವಿದ್ಯಾಥರ್ಿಗಳನ್ನು ನಿಯಂತ್ರಣ ಮಾಡುವುದೇ ಕಷ್ಟವಿರುವಾಗ ಇನ್ನು ಈ ರೀತಿ ದೂರದಲ್ಲಿ ಕುಳಿತು ವಿದ್ಯಾಥರ್ಿಗಳಿಗೆ ಪಾಠ ಹೇಳಿ, ಅವರ ಬಳಿ ಅಧ್ಯಯನ ಮಾಡಿಸುವುದು ಖಂಡಿತ ಸುಲಭವಿಲ್ಲದ ಸಂಗತಿ. ಇದು ಶಿಕ್ಷಕರಿಗೂ ಅನುಭವಕ್ಕೆ ಬರಲಾರಂಭಿಸಿದೆ. ಮುಂದಿನ 60 ದಿನಗಳಲ್ಲಿ ವಿದ್ಯಾಥರ್ಿಗಳಿಗೆ ಶಿಕ್ಷಣದಲ್ಲಿ ಆಸಕ್ತಿ ಹುಟ್ಟುವಂತಹ ಒಂದಷ್ಟು ಸಾರ್ಥಕ ಪ್ರಯತ್ನಗಳು ಆಗಬೇಕಿವೆ. ಈ ಎಲ್ಲ ಪ್ರಯತ್ನಗಳೂ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪ-ದೋಷಗಳನ್ನು ಗಮನದಲ್ಲಿರಿಸಿಕೊಂಡು ಅದಕ್ಕೆ ಪರಿಹಾರ ರೂಪದಲ್ಲಿಯೇ ಇರಬೇಕೆಂಬುದನ್ನು ನಾವು ನೆನಪಿನಲ್ಲಿಡಬೇಕು. ಸ್ಥೂಲವಾಗಿ ಇಂದಿನ ಶಿಕ್ಷಣ ಪದ್ಧತಿ ಪರೀಕ್ಷೆಗೆ ಮಕ್ಕಳನ್ನು ತಯಾರಿ ಮಾಡುವ ಧಾವಂತದಲ್ಲಿದೆ. ಪುಸ್ತಕದಲ್ಲಿರುವ ನೂರು ಪುಟಗಳಷ್ಟು ವಿಚಾರವನ್ನು ಕಂಠಸ್ಥ ಮಾಡಿಕೊಂಡುಬಿಟ್ಟರೆ ಆತನಿಗೆ ಹೆಚ್ಚು ಅಂಕ. ಈಗಂತೂ ಒಂದು ಹೆಜ್ಜೆ ಮುಂದೆ ಹೋಗಿ ಯಾವ ಪಾಠದಲ್ಲಿ ಎಷ್ಟು ಅಂಕಗಳನ್ನು ಗಳಿಸಬಹುದು ಎಂದು ಬೋಧಿಸುವ ಉಪಾಧ್ಯಾಯರುಗಳು ಮೊದಲೇ ಹೇಳಿ ಅದರಂತೆಯೇ ಪಾಠವನ್ನು ಮಾಡಿಬಿಡುತ್ತಾರೆ! ಕರೋನಾ ವ್ಯಾಪಿಸಿಕೊಂಡಿರುವ ಕಾರಣದಿಂದ ನಮಗಾಗಿರುವ ಲಾಭವೆಂದರೆ ಈ ವರ್ಷ ಪರೀಕ್ಷೆಗಳೇ ನಡೆದಿಲ್ಲ. ಬಹುಶಃ ತಜ್ಞರ ವರದಿಗಳನ್ನು ನೋಡಿದರೆ ಮತ್ತು ಔಷಧಿ ಸಿಗದೇ ಹೋದರೆ ಮುಂದಿನ ವರ್ಷವೂ ಪರೀಕ್ಷೆಗಳಿರಲಾರವೇನೋ! ಒಂದು ರೀತಿ ಒಳ್ಳೆಯದೇ ಆಯ್ತು. ಪರೀಕ್ಷೆಯನ್ನು ಬದಿಗಿಟ್ಟು ಮಕ್ಕಳನ್ನು ಭವಿಷ್ಯದ ಸವಾಲಿಗೆ ತಯಾರು ಮಾಡುವ ಅವಕಾಶ ಈ ವರ್ಷ.

ನಮ್ಮ ಮಕ್ಕಳಲ್ಲಿ ಶಿಕ್ಷಣದಿಂದ ಅಗತ್ಯವಾಗಿ ರೂಪಿಸಬೇಕಾಗಿರುವಂಥದ್ದು ಭಾಷೆಯ, ಲೆಕ್ಕಾಚಾರದ ಕೌಶಲ್ಯ. ವೈಜ್ಞಾನಿಕ ಮನೋಭಾವನೆ ಅವರ ಕಣಕಣದಲ್ಲೂ ವ್ಯಕ್ತವಾಗುವಂತೆ ನೋಡಿಕೊಳ್ಳಬೇಕು. ಆದರದು ಹೃದಯದ ಭಾವನೆಗಳನ್ನು ನುಂಗಿಬಿಡುವ, ಮೌಲ್ಯಗಳನ್ನು ಮೆಟ್ಟಿ ಶುಷ್ಕವಾಗಿಸುವ ಅಪಾಯದ ಮಟ್ಟ ತಲುಪದಂತೆ ನೋಡಿಕೊಳ್ಳುವ ಹೊಣೆಗಾರಿಕೆಯೂ ಇದೆ. ನಮ್ಮ ಸುತ್ತಮುತ್ತಲೂ ವಿಜ್ಞಾನ ಹಾಸುಹೊಕ್ಕಾಗಿದೆ ಎಂಬುದನ್ನು ಅವರಿಗೆ ಹೇಳಿಕೊಡಬೇಕಲ್ಲದೇ ಲೆಕ್ಕಾಚಾರದಲ್ಲಿ ಪ್ರಕೃತಿಯೂ ಪರಿಪೂರ್ಣವಾಗಿದೆ ಎಂಬುದನ್ನು ಅರಿಯುವಂತೆ ಮಾಡಬೇಕಿದೆ. ಇತಿಹಾಸವೆಂದರೆ ಪುಸ್ತಕದಲ್ಲಿರುವ ರಾಜರುಗಳ ಕಥೆಯಷ್ಟೇ ಅಲ್ಲ, ನಮ್ಮ ಊರಿನ ಹೆಸರೂ ಕೂಡ ಇತಿಹಾಸದ ಅಪರೂಪದ ಮಗ್ಗುಲನ್ನು ತೆರೆದಿಡುತ್ತದೆ ಎಂಬುದನ್ನು ಹೇಳಿಕೊಡಬೇಕಿದೆ.

6

ಬರಿ ಮಕ್ಕಳದ್ದಷ್ಟೇ ಅಲ್ಲ, ತಂದೆ-ತಾಯಿಗಳದ್ದೂ ಸಮಸ್ಯೆ ಇದೆ. ಎಲ್ಲದರಲ್ಲೂ ತನ್ನ ಮಗನೇ ನಂಬರ್ ಒನ್ ಆಗಿಬಿಡಬೇಕೆಂದು ಬಯಸುವ ತಂದೆ-ತಾಯಿಯರು ಅವನೊಳಗಿನ ಶಕ್ತಿಯನ್ನು ಗುರುತಿಸುವುದರಲ್ಲಿ ಸೋತು ಹೋಗುತ್ತಾರೆ. ಯಾವ ಕೌಶಲ್ಯವನ್ನು ತನ್ನ ಜನ್ಮದೊಂದಿಗೆ ಪಡೆದುಕೊಂಡು ಬಂದಿರುತ್ತಾನೋ ಅದನ್ನು ಮರೆಯುವಂತೆ ಮಾಡಿ ಅವನಿಗೆ ಹೊಸ ಕಿರಿಕಿರಿಗಳನ್ನು ಹೆಗಲೇರಿಸಿಬಿಡುತ್ತಾರೆ. ತರಗತಿಗಿಂತ ಹೆಚ್ಚು ಮೈದಾನದಲ್ಲೇ ಸಮಯ ಕಳೆಯುವ ಒಬ್ಬ ಹುಡುಗ ಎಲ್ಲರಿಂದಲೂ ಅಪಹಾಸ್ಯಕ್ಕೊಳಗಾಗುತ್ತಾನೆ. ಆದರೆ ತೆಂಡೂಲ್ಕರ್ನನ್ನು ಮಾತ್ರ ಜಗತ್ತೇ ಬಾಯ್ತುಂಬ ಹೊಗಳುತ್ತದೆ. ವಿಪಯರ್ಾಸವಲ್ಲವೇನು! ಎಲ್ಲವನ್ನೂ ಕಲಿಯುವ ವಿದ್ಯಾಥರ್ಿಗಳ ಸಾಮಥ್ರ್ಯವಷ್ಟೇ ಅಲ್ಲ, ತಮ್ಮ ಮಕ್ಕಳ ಆಸಕ್ತಿಯನ್ನು ಗುರುತಿಸುವ ಪೋಷಕರ ಕೌಶಲ್ಯವನ್ನೂ ವೃದ್ಧಿಸಬೇಕಾದ ಅವಶ್ಯಕತೆಯಿದೆ.

ಇವೆಲ್ಲವನ್ನೂ ಮಾಡುತ್ತ ಜೀವನದ ಅನೇಕ ದಶಕಗಳನ್ನು ಭವಿಷ್ಯ ಭಾರತದ ಪೀಳಿಗೆಯನ್ನು ನಿಮರ್ಿಸುವಲ್ಲಿ ತೊಡಗುವ ಶಿಕ್ಷಕರಿಗೂ ನಿರಂತರ ಶಿಕ್ಷಣದ ಅವಶ್ಯಕತೆಯಿದೆ. ಕೆಲಸ ಸಿಗುವವರೆಗೂ ಎಲ್ಲಿಯಾದರೂ, ಹೇಗಾದರೂ ಸರಿ ಎನ್ನುವ ಶಿಕ್ಷಕರು ಒಮ್ಮೆ ಶಿಕ್ಷಕರಾದೊಡನೆ ಅಧ್ಯಯನ ಬಿಟ್ಟುಬಿಡುತ್ತಾರೆ, ಅಧ್ಯಾಪನದಲ್ಲಿ ಹೊಸತನ ಕಳೆದುಕೊಳ್ಳುತ್ತಾರೆ, ಕೊನೆಗೆ ಆಧುನಿಕತೆಗೆ ತಕ್ಕಂತೆ ಬೆಳೆಯುತ್ತಿರುವ ವಿದ್ಯಾಥರ್ಿಗಳ ಸರಿಸಮಕ್ಕೆ ಹೊಂದಿಕೊಳ್ಳಲಾಗದೇ ಪರಿತಪಿಸುತ್ತಾರೆ. ಈ 60 ದಿನ ಇವೆಲ್ಲವನ್ನೂ ಸರಿದೂಗಿಸಲು ನಮಗೆ ಸಿಕ್ಕಿರುವ ಅವಕಾಶವೆಂದೇ ನಿರ್ಧರಿಸಿ ಕಾರ್ಯಪ್ರವೃತ್ತರಾಗಬೇಕಿದೆ. ದೇಶ ಆತ್ಮನಿರ್ಭರತೆಯತ್ತ ಹೊರಳುತ್ತಿರುವಾಗ ನಾವು ಸೃಷ್ಟಿಸಬೇಕಿರುವುದು ಚೀನೀ ಕಂಪೆನಿಗಳಲ್ಲಿ ಕೆಲಸ ಮಾಡಬಲ್ಲ ಕಾರಕೂನರನ್ನಲ್ಲ. ಬದಲಿಗೆ ಆ ಕಂಪೆನಿಗಳಿಗೇ ಪಯರ್ಾಯವನ್ನು ಕಟ್ಟಬಲ್ಲ ಸಶಕ್ತ ತರುಣರನ್ನು. ಕರೋನಾ ಅಂಥದ್ದೊಂದು ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಎದುರಿಸೋಣ!

ಭಾಗ 1:

 1. ಶಾಲೆಯ ವಿದ್ಯಾಥರ್ಿಗಳ ವಾಟ್ಸಪ್ ಗ್ರೂಪ್ ಒಂದನ್ನು ಮಾಡಿಕೊಂಡು ಪ್ರತಿನಿತ್ಯ ವಿದ್ಯಾಥರ್ಿಗಳಿಗೆ ವಿಭಿನ್ನ ಚಟುವಟಿಕೆಗಳನ್ನು ಶಿಕ್ಷಕರೇ ನೀಡಬೇಕು.
 2. ಈ ಚಟುವಟಿಕೆಗಳು ವಿದ್ಯಾಥರ್ಿಗಳ ಕನಿಷ್ಠಪಕ್ಷ ಅರ್ಧ ದಿನವನ್ನು ಕ್ರಿಯಾಶೀಲವಾಗಿಡುವಂತಿರಬೇಕು.
 3. ಚಟುವಟಿಕೆಗಳನ್ನು ಆಯ್ದುಕೊಳ್ಳುವಾಗ ಪ್ರತಿಯೊಬ್ಬ ವಿದ್ಯಾಥರ್ಿಯೂ ಒಂದಲ್ಲ ಒಂದು ಚಟುವಟಿಕೆಯಲ್ಲಿ ಪೂರ್ಣ ಆಸಕ್ತಿಯಿಂದ ಭಾಗವಹಿಸುವಂತೆ ರೂಪಿಸಬೇಕು ಏಕೆಂದರೆ ಬಹತೇಕ ಬಾರಿ ಬರೆಯುವ, ಮಾತನಾಡುವ ಚಟುವಟಿಕಗಳನ್ನೇ ಕೊಡುವುದರಿಂದ ಶಾಲೆಯಲ್ಲಿ ಅದಾಗಲೇ ಬುದ್ಧಿವಂತರೆನಿಸಿಕೊಂಡವರು ಮಾತ್ರ ಚಟುವಟಿಕೆಯಿಂದ ಭಾಗವಹಿಸುತ್ತಾರೆ. ಸ್ವಲ್ಪ ದೈಹಿಕ ಶ್ರಮದ ಕೆಲಸವನ್ನು ಕೊಟ್ಟರೆ ಕೊನೆಯ ಬೆಂಚಿನ ಹುಡುಗರು ವಿಶೇಷವಾಗಿ ಮಾಡುತ್ತಾರೆ.
 4. ಪ್ರತಿದಿನದ ಫಲಿತಾಂಶವನ್ನು ವಾಟ್ಸಪ್ ಗ್ರೂಪಿನಲ್ಲಿ ಪ್ರಕಟಿಸುವುದನ್ನು ಶಿಕ್ಷಕರು ಮರೆಯುವಂತಿಲ್ಲ. ಅವರಿಗೆ ವಿಶೇಷ ಉಡುಗೊರೆಯನ್ನು ಕೊಡುವುದೂ ಕೂಡ ಒಳ್ಳೆಯ ಪ್ರಯೋಗವೇ.
 5. ಗೆದ್ದವರನ್ನು ಆಯ್ಕೆ ಮಾಡುವಾಗಲೂ ಒಬ್ಬರಿಗೇ ಮತ್ತೆ ಮತ್ತೆ ಬಹುಮಾನ ಬರದಂತೆ ನೋಡಿಕೊಳ್ಳುವುದು ಒಳ್ಳೆಯದು. ಕೊನೆಗೂ ನಮ್ಮೆಲ್ಲರ ಉದ್ದೇಶ ಪ್ರತಿಯೊಬ್ಬ ವಿದ್ಯಾಥರ್ಿಯಲ್ಲಿಯೂ ಪರೀಕ್ಷಾಭಯ ಕಸಿದುಕೊಂಡಿರುವ ಆತ್ಮವಿಶ್ವಾಸವನ್ನು ಮರುಸ್ಥಾಪಿಸುವುದೇ ಆಗಿದೆ ಎನ್ನುವುದನ್ನು ಮರೆಯಬೇಡಿ.
 6. ಮಕ್ಕಳಿಗೆ ಈ ಚಟುವಟಿಕೆಯೊಂದಿಗೆ ಪ್ರತಿದಿನ ಸಂಜೆ ಪಠ್ಯಪುಸ್ತಕಕ್ಕೆ ಪೂರಕವಾದ ಸಂಗತಿಗಳನ್ನು ಚಚರ್ಿಸುವ ಪ್ರಯತ್ನ ಮಾಡಿ. ಇದು ಅವರನ್ನು ಶಾಲೆ ಶುರುವಾದಾಗ ಮಾಡಿಕೊಂಡಿರಬೇಕಾದ ತಯಾರಿಯ ಕುರಿತಂತೆ ಜಾಗರೂಕವಾಗಿರಿಸುತ್ತದೆ.
 7. ಎಲ್ಲರ ಬಳಿ ಮೊಬೈಲ್ ಇಲ್ಲವಲ್ಲಾ ಎಂಬ ಪ್ರಶ್ನೆ ಇದೆ. ಯಾವ ಹಳ್ಳಿಯಲ್ಲಿ ಈ ಬಗೆಯ ವಿದ್ಯಾಥರ್ಿಗಳು ಕಂಡು ಬರುತ್ತಾರೋ ಆ ಹಳ್ಳಿಗೆ ವಾರಕ್ಕೆರಡು ಬಾರಿ ಶಿಕ್ಷಕರೇ ಭೇಟಿಕೊಟ್ಟು ಮಕ್ಕಳನ್ನು ಚಟುವಟಿಕೆಯಲ್ಲಿ ತೊಡಗಿಸಿ ಹೇಳಬೇಕಾದ್ದನ್ನೆಲ್ಲಾ ಹೇಳಿಕೊಟ್ಟು ಬಂದುಬಿಟ್ಟರೆ ಪ್ರಯತ್ನ ಸಾರ್ಥಕ.
 8. ಕರೋನಾ ಭೀತಿಯಲ್ಲಿ ಇದು ಕಷ್ಟವೆನಿಸಿದರೆ ನಿಮ್ಮದ್ದೇ ಶಾಲೆಯ ಅದೇ ಊರಿನ ಹಳೆಯ ವಿದ್ಯಾಥರ್ಿಗೆ ಈ ಜವಾಬ್ದಾರಿಯನ್ನು ಒಪ್ಪಿಸಿ ಅವನನ್ನು ಭವಿಷ್ಯದ ಸಮರ್ಥ ಶಿಕ್ಷಕನಾಗುವಲ್ಲಿ ಪ್ರೇರೇಪಿಸಿ. ಪ್ರತೀ ಹಳ್ಳಿಯಲ್ಲೂ ಈ ರೀತಿಯ ಜವಾಬ್ದಾರಿಯುತ ತರುಣರನ್ನು ಹುಟ್ಟುಹಾಕಲು ಇದು ಸಮರ್ಥ ಸಮಯ.

ಭಾಗ 2:

 1. ಮಕ್ಕಳ ವಾಟ್ಸಪ್ ಗ್ರೂಪ್ ಮಾಡಿದಂತೆ ತಾಯಂದಿರದ್ದೂ ಮಾಡುವುದೊಳಿತು.
 2. ಅವರಿಗೆ ದಿನವಿಡೀ ಉಪಯುಕ್ತ ಅಂಶಗಳನ್ನು ಆಗಾಗ ಹಂಚಿಕೊಳ್ಳುತ್ತಾ ಮಕ್ಕಳ ಬೆಳವಣಿಗೆಯಲ್ಲಿ ಅವರು ತೊಡಗಿಸಿಕೊಳ್ಳಬಹುದಾದ ರೀತಿಯನ್ನು ವಿವರಿಸಿದರೆ ಉಪಯೋಗವಾದೀತು.
 3. ಪ್ರತಿನಿತ್ಯ ಮಕ್ಕಳಿಗೆ ಕಥೆ ಹೇಳುವ ಕೆಲಸವನ್ನು ತಾಯಂದಿರಿಗೆ ಕೊಟ್ಟು ಹೇಳಬೇಕಾದ ಕಥೆಯನ್ನು ಈ ಗ್ರೂಪಿನಲ್ಲಿ ಹಂಚಿಕೊಂಡರೆ ತಾಯಂದಿರಿಗೆ ಅನುಕೂಲ.
 4. ಕಥೆ ಹೇಳಿದ ಅನುಭವವನ್ನು ಅವರಿಗೆ ಹಂಚಿಕೊಳ್ಳಲು ಈ ವೇದಿಕೆಯನ್ನು ಬಳಸಿಕೊಂಡರೆ ಅವರಲ್ಲಿ ಸುಪ್ತವಾಗಿದ್ದ ಅನೇಕ ಪ್ರತಿಭೆಗಳು ಹೊರಬರಬಹುದು ಮತ್ತು ವಿಜ್ಞಾನ ಗಣಿತದಷ್ಟೇ ಕಥೆ ಹೇಳುವುದೂ ಕೂಡ ಪ್ರಮುಖ ಅಧ್ಯಯನ ಎಂಬುದು ಅವರಿಗೆ ಅರಿವಾದೀತು.
 5. ಮಕ್ಕಳಿಗೆ ಚಟುವಟಿಕೆ ಕೊಟ್ಟಂತೆ ತಾಯಂದಿರಿಗೂ ಕೂಡ ಯೋಚಿಸಿ ಸೂಕ್ತ ಚಟುವಟಿಕೆಯನ್ನು ಕೊಡಲು ಸಾಧ್ಯವಾದರೆ ಮತ್ತು ಅದನ್ನು ತಾಯಂದಿರು ಮಾಡುವಂತೆ ಪ್ರೇರೇಪಿಸಲು ಸಾಧ್ಯವಾದರೆ ಶಿಕ್ಷಕರು ಮತ್ತು ಪೋಷಕರ ಬಾಂಧವ್ಯ ಹೆಚ್ಚು ಬಲವಾಗುತ್ತದೆ. ಮುಂದೆ ಶಾಲೆ ಆರಂಭವಾದಾಗ ಇದನ್ನು ಧನಾತ್ಮಕವಾಗಿ ಬಳಸಿಕೊಳ್ಳುವುದೂ ಸಾಧ್ಯವಾಗುತ್ತದೆ.7 

  ಭಾಗ 3:

  1. ಮೂರು ಹಂತದಲ್ಲಿ ಶಿಕ್ಷಕರು ತಮ್ಮನ್ನು ತಾವು ರೂಪಿಸಿಕೊಳ್ಳಬೇಕಿದೆ. ತಾವು ಬೋಧಿಸುವ ವಿಷಯದಲ್ಲಿ ಪರಿಣಿತಿಯನ್ನು ಪಡೆಯುವ ಮೂಲಕ, ಇತರೆ ಸಾಮಾನ್ಯ ವಿಷಯಗಳನ್ನು ಅಧ್ಯಯನ ಮಾಡುವ ಮೂಲಕ ಮತ್ತು ಆಧ್ಯಾತ್ಮಿಕ ವಿಚಾರಗಳತ್ತ ಒಲವು ಬೆಳೆಸಿಕೊಳ್ಳುವುದರ ಮೂಲಕ.
  2. ದಶಕಗಳಿಂದಲೂ ತಾವು ಪಾಠ ಮಾಡುವ ಪುಸ್ತಕವನ್ನೇ ಓದುತ್ತಿರುವ ಶಿಕ್ಷಕರಿಗೆ ಕರೋನಾ ಕಾಲದಲ್ಲಿ ಈ ವಿಷಯದಲ್ಲಿ ಆಳಕ್ಕಿಳಿಯುವ ಅವಕಾಶವಿದೆ. ಎಲ್ಲ ವಿಚಾರಗಳಲ್ಲೂ ಸಾಕಷ್ಟು ಕೃತಿಗಳು ಪಿಡಿಎಫ್ ರೂಪದಲ್ಲಿ ಈಗ ಲಭ್ಯವಿರುವುದರಿಂದ ಅಧ್ಯಯನಕ್ಕೆ ಕಷ್ಟವೇನೂ ಆಗಲಾರದು.
   ಬೋಧನೆಯ ವಿಷಯದ ಆಳಕ್ಕಿಳಿಯಬೇಕಾಗಿರುವುದು ಪ್ರತಿಯೊಬ್ಬ ಶಿಕ್ಷಕನ ಕರ್ತವ್ಯವೇ. ಆದರೆ ಅದನ್ನು ಮೀರಿ ತಮ್ಮ ಆಸಕ್ತಿಯ ಇತರೆ ಕ್ಷೇತ್ರದಲ್ಲೂ ಜ್ಞಾನವನ್ನು ಸಂಪಾದಿಸುವುದು ಅವರ ಜವಾಬ್ದಾರಿ. ಈ 60 ದಿನಗಳಲ್ಲಿ ಬೋಧನೆ ವಿಚಾರಕ್ಕೆ ಸಂಬಂಧಿಸದ ಎರಡು ಪುಸ್ತಕಗಳನ್ನಾದರೂ ಓದಿ ಮುಗಿಸುವ ಸಂಕಲ್ಪ ತೆಗೆದುಕೊಳ್ಳಬೇಕು.
  3. ತಿಂಗಳಿಗೊಮ್ಮೆ ಎಲ್ಲ ಶಿಕ್ಷಕರೂ ಸೇರಿ ತಾವು ಓದಿದ ಕೃತಿಯ ಸಾರಾಂಶವನ್ನು ಮತ್ತು ವೈಶಿಷ್ಟ್ಯವನ್ನು ಹಂಚಿಕೊಳ್ಳುವುದು ಸ್ವಾಧ್ಯಾಯ ಮತ್ತು ಪ್ರವಚನ ಎರಡರ ಸಮರ್ಥ ಮಿಶ್ರಣದಂತಾದೀತು.
  4. ಈ 60 ದಿನಗಳಲ್ಲಿ ವಿದ್ಯಾಥರ್ಿಗಳಿಗೆ ಚಟುವಟಿಕೆ ಕೊಟ್ಟು, ಅವರ ಕೌಶಲ್ಯವನ್ನು ಅಧ್ಯಯನ ಮಾಡಿದ, ಹಳ್ಳಿಗಳಿಗೆ ಹೋಗಿ ಮಕ್ಕಳೊಂದಿಗೆ ಬೆರೆತ, ಹೊಸ-ಹೊಸ ಅಧ್ಯಯನಗಳಿಂದ ಬೌದ್ಧಿಕ ಸ್ತರವನ್ನು ಏರಿಸಿಕೊಂಡುದರ ಕುರಿತಂತೆ ಪ್ರತಿಯೊಬ್ಬ ಶಿಕ್ಷಕರೂ 60 ದಿನಗಳ ಕೊನೆಯಲ್ಲಿ ಒಂದು ಬರಹವನ್ನು ಶಾಲೆಗೆ ಸಮಪರ್ಿಸುವುದನ್ನು ಅನಿವಾರ್ಯವಾಗಿಸಿಕೊಳ್ಳಬೇಕು. ಇದು ಆಯಾ ಶಿಕ್ಷಕರಿಗೆ ಸಿಗಬಹುದಾದ ಸಮರ್ಥ ವೇದಿಕೆ.

  ಆಡಳಿತ ಮಂಡಳಿಗಳು ಈ ಅವಕಾಶವನ್ನು ಬಳಸಿಕೊಂಡು ಶಿಕ್ಷಕರಿಗೆ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ತರಬೇತಿಯನ್ನು ಕೊಡಿಸುವುದೊಳಿತು. ಇದು ಹೊಸಪೀಳಿಗೆಯ ಅವಶ್ಯಕತೆಗಳಿಗೆ ಶಿಕ್ಷಕರನ್ನು ತಯಾರು ಮಾಡುವುದರಲ್ಲಿ ಸೂಕ್ತ ಭೂಮಿಕೆ ರೂಪಿಸಿಕೊಡುತ್ತದೆ.

ಕೊನೆಯ ಅರ್ಧಗಂಟೆ!

ಕೊನೆಯ ಅರ್ಧಗಂಟೆ!

ಕೃತಕ ಉಸಿರಾಟ ನಡೆಯುತ್ತಿತ್ತು.
ಅರೆ ಪ್ರಜ್ಞೆ.
‘ಇನ್ನರ್ಧ ಗಂಟೆ ಇರಬಹುದೇನೋ.
ಮತ್ತೊಬ್ಬರನ್ನು ಇಲ್ಲಿಗೆ
ತರಲು ಸಿದ್ಧರಾಗಿ’
ಎಂದರು ವೈದ್ಯರು.
ನನಗೆ ಕೇಳಿದ್ದು ಅದೊಂದೇ.

ಎದೆ ಝಲ್ಲಂತು.
ಬದುಕಿನ ದಿನಗಳು ಹಾರರ್ ಸಿನಿಮಾದಂತೆ
ಹಾದುಹೋದವು.
ಹಣಕ್ಕಾಗಿ, ಜಮೀನಿಗಾಗಿ, ಅಧಿಕಾರಕ್ಕಾಗಿ
ಬಡಿದಾಡಿದೆ. ಬಂಧುತ್ವ-ಗೆಳೆತನ ಎಲ್ಲಕ್ಕೂ ಕೊಳ್ಳಿಯಿಟ್ಟೆ.
ಈಗ ಏಕಾಂಗಿ. ಮನೆಯವರೂ ಇಲ್ಲ.
‘ಇನ್ನಾರು ತಿಂಗಳು ಕೊಡು,
ಎಲ್ಲ ಸರಿ ಮಾಡಿ ಬರುವೆ.
ಗಳಿಸಿದ್ದನ್ನು ಹಂಚಿಬಿಡುವೆ.
ಕಳಕೊಂಡದ್ದನ್ನು ಕಾಡಿ ಬೇಡಿ ಪಡೆವೆ’
ಮನಸ್ಸು ಅರಚಾಡುತ್ತಿತ್ತು.

ಅರ್ಧಗಂಟೆ ಕಳೆಯಿತು.
ದೇಹವನ್ನು ನೀಲಿ ಕವರಿನಲ್ಲಿ ಸುತ್ತಿದರು
ಹಾಸಿಗೆಯ ಹೊದಿಕೆ ಬದಲಿಸಿ
ಮತ್ತೊಬ್ಬನನ್ನು ಮಲಗಿಸಿದರು.

ಯಾಕೋ ನನಗೀಗ ಈ ಕೋಣೆಯ ಎಸಿಯೂ ಛಳಿ ಎನಿಸುತ್ತಿಲ್ಲ!

#ಕೊರೋನಾಕಥೆ

ಟೀಮ್ ಮೋದಿಯ ಹೆಗಲುಗಳು!!

ಟೀಮ್ ಮೋದಿಯ ಹೆಗಲುಗಳು!!

2

ಟೀಮ್ ಮೋದಿ ವಿಸರ್ಜನೆಗೊಳಿಸುವ ಹೊತ್ತಿನಲ್ಲಿ ನೆನಪಿಸಿಕೊಳ್ಳಲೇಬೇಕಾದ ಒಂದಷ್ಟು ಸಂಗತಿಗಳಿವೆ. ಕೃತಜ್ಞತೆ ಸಲ್ಲಿಸಲೇಬೇಕಾದ ಒಂದಷ್ಟು ಜನರಿದ್ದಾರೆ. ಮೊದಲಿಗೆ ಟೀಮ್ಮೋದಿಯ ರಾಜ್ಯಸಂಚಾಲಕತ್ವವನ್ನು ವಹಿಸಿದ ಶಾರದಾ ಡೈಮಂಡ್. ತಾನು ಕೆಲಸ ಮಾಡುವ ಕಂಪೆನಿಯಿಂದ ವಿಶೇಷ ಕಾರ್ಯಕ್ಕೆ ರಜೆ ಪಡೆದು ಬಂದಿದ್ದ ಶಾರದಾ ಟೀಮ್ ಮೋದಿಯ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದರು. ರಾಜ್ಯದ ಹೆಚ್ಚು ಕಡಿಮೆ ಅರ್ಧಭಾಗವನ್ನು ಖುದ್ದು ಸಂಚರಿಸಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿ ಸುಮಾರು 10,000 ಹೊಸ ತರುಣ-ತರುಣಿಯರನ್ನು ಮತದಾರ ಪಟ್ಟಿಯಲ್ಲಿ ಸೇರಿಸುವಲ್ಲಿ ಆಕೆ ತೋರಿದ ಶ್ರಮ ನಿಜಕ್ಕೂ ಹೆಮ್ಮೆ ಪಡುವಂಥದ್ದು. ಅಷ್ಟೇ ಅಲ್ಲದೇ, ದಾವಣಗೆರೆಯಲ್ಲಿ ಟೀಮ್ಮೋದಿ ಸಂಘಟನೆಯನ್ನು ಹಳ್ಳಿ-ಹಳ್ಳಿಗೂ ತಲುಪಿಸುವಲ್ಲಿ ಆಕೆ ಕೈಗೊಂಡ ಕ್ರಮಗಳೂ ಕೂಡ ಮಾದರಿಯಾದಂಥದ್ದು. ತೀರಾ ಟೀಮ್ಮೋದಿ ವಿಸರ್ಜನೆಯಾಗುವ ಕೆಲವು ದಿನಗಳ ಮುನ್ನ ಇದಕ್ಕೆ ಸಂಬಂಧಪಟ್ಟ ದಾನಿಗಳ ಹಣ, ಪೋಸ್ಟರ್ಗಳ ಮಾರಾಟ, ಇತ್ಯಾದಿ ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿ ಕಾರ್ಯದಲ್ಲಿ ಯಾವುದೇ ಅಡೆ-ತಡೆಗಳಿಲ್ಲದಂತೆ ನೋಡಿಕೊಂಡಿದ್ದು ಆಕೆಯ ಕೆಲಸವೇ!

3

ಸದಾ ಯಾವುದೇ ಚಟುವಟಿಕೆಯನ್ನು ಕೈಗೆತ್ತಿಕೊಂಡಾಗಲೂ ಬೆಂಗಾವಲಾಗಿ ನಿಲ್ಲುವ ಯುವಾಬ್ರಿಗೇಡ್ನ ರಾಜ್ಯಸಂಚಾಲಕ ಚಂದ್ರುವನ್ನು ಈ ಹೊತ್ತಿನಲ್ಲಿ ನೆನಪಿಸಿಕೊಳ್ಳಲೇಬೇಕು. ಟೀಮ್ ಮೋದಿ ಕಟ್ಟುವ ಸಂಕಲ್ಪ ಕೈಗೊಂಡಾಗಿನಿಂದಲೂ ಆತ ಮನೆ-ಮಠ ಬಿಡಿ ತಾನು ಉದ್ಯೋಗ ಮಾಡುತ್ತಿದ್ದ ಕಂಪೆನಿಗೂ ಅದೆಷ್ಟು ಬಾರಿ ರಜಾ ಹಾಕಿದನೋ ದೇವರೇ ಬಲ್ಲ. ರಾಜ್ಯದ ಮೂಲೆ-ಮೂಲೆಯನ್ನು ಸಂಪರ್ಕದಲ್ಲಿಟ್ಟುಕೊಂಡು ಹಳೆ ಮತ್ತು ಹೊಸ ಕಾರ್ಯಕರ್ತರನ್ನು ಜೊತೆಗೂಡಿಸಿಕೊಂಡು ಆಗಬೇಕಾಗಿರುವ ಕೆಲಸಗಳು ಕೈತಪ್ಪಿ ನಡೆಯದಂತೆ ಎಚ್ಚರ ವಹಿಸುವುದು ಆತನದ್ದೇ ಜವಾಬ್ದಾರಿಯಾಗಿತ್ತು. ಪ್ರತಿದಿನವೂ 200 ಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸುತ್ತಾ ಅಲ್ಲಲ್ಲಿ ಟೀಮ್ಮೋದಿಯ ಕಾರ್ಯಕರ್ತರಲ್ಲಿ ಕಂಡುಬರುವ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುತ್ತಾ ಒಟ್ಟಾರೆ ನಾಲ್ಕು ತಿಂಗಳುಗಳ ಕಾಲ ಯಾವ ಗೊಂದಲವೂ ಉಂಟಾಗದಂತೆ ತಂಡವನ್ನು ಮುನ್ನಡೆಸಿಕೊಂಡು ಹೋಗುವಲ್ಲಿ ಆತನ ಶ್ರಮ ಬಲುದೊಡ್ಡದ್ದು. ಚಂದ್ರುವಿನೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿದ ವಿಭಾಗದ, ಜಿಲ್ಲೆಯ, ತಾಲೂಕಿನ, ಹಳ್ಳಿ-ಹಳ್ಳಿಗಳ ಪ್ರತಿಯೊಬ್ಬರಿಗೂ ಟೀಮ್ಮೋದಿಯ ಅಷ್ಟೂ ಶ್ರೇಯ ಸಲ್ಲಬೇಕು!

4

ಮನೆಯನ್ನು ಬಿಟ್ಟು ಸುಮಾರು ಒಂದು ವರ್ಷಗಳಿಂದ ಈ ಚಟುವಟಿಕೆಯ ಪೂರ್ವಭಾವಿ ತಯಾರಿಯೂ ಸೇರಿದಂತೆ ಡಿಜಿಟಲ್ ವಿಭಾಗದ ನಿರ್ವಹಣೆಗೆಂದು ನನ್ನೊಂದಿಗೇ ಬಂದು ಇದ್ದವನು ವರ್ಧಮಾನ. ಆತನ ಕೆಲಸ ಶುರುವಾಗುತ್ತಿದ್ದುದೇ ರಾತ್ರಿ 10 ಗಂಟೆಯ ಮೇಲೆ. ಬೆಳಿಗ್ಗೆ ಆತ ಮಲಗುವಾಗ ಐದಾರು ಗಂಟೆಯಾದರೂ ಆಗಿರುತ್ತಿತ್ತು. ನಮೋ ಸುನಾಮಿಗಾಗಿ, ಟೀಮ್ಮೋದಿಗಾಗಿ, ಯುವಾಲೈವ್ಗಾಗಿ ಆತ ಪಟ್ಟ ಶ್ರಮ ಅವರ್ಣನೀಯ. ಆತ ಮಾಡಿಕೊಟ್ಟ ಒಂದೊಂದೂ ಪೋಸ್ಟರ್ಗಳೂ ಸಾವಿರಾರು ಶೇರ್ಗಳ ಭಾಗ್ಯವನ್ನು ಕಂಡಿವೆ. ಅವನಿಗೂ ಹೃತ್ಪೂರ್ವಕ ಕೃತಜ್ಞತೆಗಳು. ಡಿಜಿಟಲ್ ವಿಭಾಗದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ ಶಿವಮೊಗ್ಗದ ರಾಜೇಶನನ್ನು ಈ ಹೊತ್ತನಲ್ಲಿ ಸ್ಮರಿಸಬೇಕು.

5

ಇನ್ನು ಈ ಹೊತ್ತಿನಲ್ಲಿ ಯುವಾಲೈವ್ ಪೇಜಿಗೆ ಮೋದಿ ಕುರಿತಂತಹ ಲೇಖನಗಳನ್ನು ನಿರಂತರವಾಗಿ ಬರೆಯುತ್ತಾ, ಪ್ರತಿನಿತ್ಯ ಪ್ರೇರಕ ಸುದ್ದಿಗಳನ್ನು ಮಾಡುತ್ತಾ, ಟೀಮ್ಮೋದಿ ಕಾಲ್ಸೆಂಟರಿನ ಜವಾಬ್ದಾರಿಯ ನೊಗವನ್ನು ಹೊತ್ತು ಅನೇಕ ಕಡೆ ಪ್ರಚಾರ ಕಾರ್ಯದಲ್ಲೂ ನೇತೃತ್ವವನ್ನು ವಹಿಸಿ ಕೆಲಸ ಮಾಡಿದ್ದು ಶಿವಮೊಗ್ಗದ ಪ್ರಿಯಾ. ಭಗವಂತ ಅವಳ ಭವಿಷ್ಯವನ್ನೂ ಸುಂದರವಾಗಿಸಲೆಂದು ಪ್ರಾಥರ್ಿಸುವೆ.

6

ನಾನು ಯಾವಾಗಲೂ ಮೆಚ್ಚುವ ಸಮರ್ಥ ಕಾರ್ಯಕರ್ತರಲ್ಲಿ ಧರ್ಮ ಹೊನ್ನಾರಿ ಪ್ರಮುಖ. ಯಾವ ಕೆಲಸವನ್ನು ಕೊಟ್ಟಾಗಲೂ ಆತ ಮರುಮಾತಿಲ್ಲದೇ ಅದನ್ನು ಮಾಡಿದ್ದಾನೆ. ರಥಯಾತ್ರೆಯ ಜವಾಬ್ದಾರಿ ಕೊಟ್ಟಾಗ ಅದನ್ನು ತಯಾರಿ ಮಾಡುವುದರಿಂದ ಹಿಡಿದು ರಾಜ್ಯದ ಸುತ್ತಾಟ ಮುಗಿಯುವವರೆಗೂ ಆತನೇ ನೇತೃತ್ವ ವಹಿಸಿದ್ದ. ಅವನೊಂದಿಗೆ ಮತ್ತೊಂದು ರಥದಲ್ಲಿ ಪ್ರಮೋದ. ಮುಂದೆ ಕಲ್ಬುಗರ್ಿಯಲ್ಲಿ ಓಡಾಟ ನಡೆಸಬಲ್ಲವರು ಬೇಕಾಗಿದ್ದಾರೆ ಎಂದು ಗೊತ್ತಾದೊಡನೆ ಧರ್ಮ ಮರುಮಾತಿಲ್ಲದೇ ಅಲ್ಲಿಗೆ ಹೊರಟು ನಿಂತ. ಅಲ್ಲಿಯೂ ಮೋದಿದೂತರ ನಿರ್ಮಣ ಮಾಡುತ್ತಾ ಗ್ರಾಮ-ಗ್ರಾಮಕ್ಕೆ ಅಲೆಯುತ್ತಾ ಆತ ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸಿದ ರೀತಿ ಮೆಚ್ಚುವಂಥದ್ದು. ಅವನಿಗೆ ಒಳಿತಾಗಲಿ.

7

 

ಟೀಮ್ಮೋದಿಯ ಪೋಸ್ಟರ್ಗಳು, ಸ್ಟಿಕ್ಕರ್ಗಳು, ಡೈರಿ, ಪುಸ್ತಕ, ಕೀಚೈನು, ಇವುಗಳನ್ನು ಮಾಡಿಸಿ ಸಮಾಜಕ್ಕೆ ಮುಟ್ಟಿಸಿ ಆ ಹಣವನ್ನು ಮತ್ತೆ ಅವರಿಂದ ಪಡೆದುಕೊಳ್ಳುವುದು ಸುಲಭದ ಸಂಗತಿಯಲ್ಲ. ನೀಲು ಅದನ್ನು ಸಮರ್ಥವಾಗಿ ನಿಭಾಯಿಸಿ ಕೊನೆಗೆ ಟೀಮ್ಮೋದಿ ವಿಸರ್ಜನೆಯಾಗುವ ವಾರಗಳ ಮೊದಲೇ ಅವೆಲ್ಲವುಗಳ ಲೆಕ್ಕವನ್ನು ಒಪ್ಪಿಸಿದ್ದು ತಂಡದ ಕಾರ್ಯತತ್ಪರತೆಗೆ ಸಾಕ್ಷಿ. ಅವನಿಗೂ ಅವನೊಂದಿಗಿದ್ದ ಮನೋಹರನಿಗೂ ಧನ್ಯವಾದಗಳು.

8

ನನ್ನೊಂದಿಗೆ ಸುದೀರ್ಘಯಾತ್ರೆಯಲ್ಲಿ ಜೊತೆಯಲ್ಲಿದ್ದುಕೊಂಡು ಯಾತ್ರೆಯುದ್ದಕ್ಕೂ ನನ್ನ ಆರೋಗ್ಯ ಹದಗೆಡದಂತೆ ಹೋದ ಕಡೆ ನನ್ನ ಆಹಾರದ ಪತ್ಯ ದಾರಿ ತಪ್ಪದಂತೆ ನೋಡಿಕೊಂಡಿದ್ದಲ್ಲದೇ ಪ್ರತಿಯೊಂದು ಕಾರ್ಯಕ್ರಮವೂ ವ್ಯವಸ್ಥಿತವಾಗಿ ಲೈವ್ ಮೂಲಕ ಜನರಿಗೆ ತಲುಪುವಂತೆ ಮಾಡಿದ್ದು ಪಂಚಾಕ್ಷರಿ. ಬೆಳಗ್ಗಿನಿಂದ ಸಂಜೆ ಕಾರ್ಯಕ್ರಮ ಮುಗಿಸಿ ರಾತ್ರಿಯೆಲ್ಲಾ ಯಾತ್ರೆ ಮಾಡುತ್ತಾ ಮತ್ತೊಂದು ಊರಿಗೆ ಕೊಂಡೊಯ್ಯುತ್ತಿದ್ದುದು ಚಾಲಕ ಕುಮಾರ. ಧನ್ಯವಾದಗಳು ಸಲ್ಲಲೇಬೇಕಲ್ಲವೇ.

9

ಟೀಮ್ಮೋದಿಯ ಕಲ್ಪನೆಗಳು ಶುರುವಾದಾಗಿನಿಂದಲೂ ಹುಬ್ಬಳ್ಳಿಯಿಂದ ಸುಭಾಷ್ ಜಮಾದಾರ್ ನನ್ನೊಂದಿಗೆ ಬಲವಾಗಿ ಆತುಕೊಂಡಿದ್ದರು. ಅನೇಕ ಬಾರಿ ಕಾರ್ಯಕ್ರಮದ ರೂಪುರೇಷೆಗಳನ್ನು ನಿರ್ಣಯಿಸುವಲ್ಲಿ, ಬದಲಾಯಿಸುವಲ್ಲಿ ಸುಭಾಷ್ ಸನ್ಮಿತ್ರರಾಗಿ ಜೊತೆಗೇ ನಿಂತಿದ್ದರು. ಧನ್ಯವಾದ ಸುಭಾಷ್.

ಹೇಳುತ್ತಾ ಹೋದರೆ ಪಟ್ಟಿಯೆಷ್ಟು ದೊಡ್ಡದಾಗುತ್ತದೆ ಎಂದರೆ ಕಣ್ಣಿಗೆ ಕಾಣುವ ಟೀಮ್ಮೋದಿಯ ಹಿಂದೆ ಕಾಣದ ಅಸಂಖ್ಯ ಕೈಗಳು ಗೋಚರವಾಗುತ್ತವೆ. ತಳಮಟ್ಟದಲ್ಲಿ ಹೆಸರನ್ನು ಬಯಸದೇ ವೇದಿಕೆಯನ್ನು ಏರದೇ ಅಣ್ಣ ಎಂದು ಪ್ರೀತಿಯಿಂದ ಸಂಬೋಧಿಸುತ್ತಾ ಈ ಕಾರ್ಯದಲ್ಲಿ ನಿಜಕ್ಕೂ ನನಗಿಂತಲೂ ಸಾವಿರಪಟ್ಟು ಹೆಚ್ಚಾಗಿ ದುಡಿದವರು ಟೀಮ್ಮೋದಿಯ ಕಾರ್ಯಕರ್ತ ಮಿತ್ರರೇ. ಅವರಿಗೆ ಎಷ್ಟು ಧನ್ಯವಾದಗಳನ್ನು ಸಮಪರ್ಿಸಿದರೂ ಅದು ಬಲು ಕಡಿಮೆಯೇ. ನಾಲ್ಕು ತಿಂಗಳುಗಳ ಕಾಲ ಒಟ್ಟಾಗಿ ದುಡಿದ ನಾವು ಮುಂದೆ ಏನು ಸುಮ್ಮನಾಗುವುದಿಲ್ಲ. ಸಮಾಜದಲ್ಲಿ ಮತ್ತೊಂದು ಮಹತ್ವದ ಕೆಲಸದ ಅಲೆಯನ್ನು ಎಬ್ಬಿಸಲು ಇದು ನಮಗೆ ಸ್ಫೂತರ್ಿ ಮತ್ತು ಶಕ್ತಿ ಅಷ್ಟೇ.

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ, ಭಾರತ ಬಲುಬೇಗ ವಿಶ್ವಗುರುವಾಗಲಿ..

ವಂದೇ,
ಚಕ್ರವರ್ತಿ

ಟೀಮ್‌ ಮೋದಿಯ ಚರಮಗೀತೆ!

ಟೀಮ್‌ ಮೋದಿಯ ಚರಮಗೀತೆ!

ಟೀಮ್‌ಮೋದಿ ಸಂಘಟನೆ ತನ್ನ‌ ಕೆಲಸವನ್ನು ಮುಗಿಸುವ ಹೊತ್ತು ಬಂದಿದೆ. ನಮೋಬ್ರಿಗೇಡನ್ನು ಕಟ್ಟಿದ್ದಾಗಲು ಉದ್ದೇಶ ತೀರಿದೊಡನೆ ಮುಗಿಸಿ ಬಿಡುವ ಮಾತು ಕೊಟ್ಟಿದ್ದೆವು. ಟೀಮ್‌ಮೋದಿಗೂ ಹಾಗೆಯೇ. 23‌ಕ್ಕೆ ಎರಡೂ ಹಂತದ ಚುನಾವಣೆಗಳು ಮುಗಿಯುವುದರೊಂದಿಗೆ ಈ ತಂಡ ಹುಟ್ಟಿಕೊಂಡಿದುದರ ಉದ್ದೇಶ ಪೂರ್ಣಗೊಳ್ಳುತ್ತದೆ. ಕರ್ಮ ಮಾಡುವುದರಲ್ಲಷ್ಟೇ ನಮ್ಮ ಆಸಕ್ತಿ. ಫಲ ಕೊಡುವುದು ಭಗವಂತನಿಗೆ ಬಿಟ್ಟಿದ್ದು. ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇವೆಂಬ ತೃಪ್ತಿಯಷ್ಟೇ. ಇಷ್ಟಕ್ಕೂ ಇಂಥದೊಂದು ರಾಜಕೀಯ ಕಲ್ಪನೆಯನ್ನಿಟ್ಟುಕೊಂಡ ಸಂಘಟನೆ ಸಮರ್ಪಕ ಕೆಲಸ ಇಲ್ಲದೇ ಬದುಕಿಯೂ ಇರಬಾರದು. ಏಕೆಂದರೆ ರಾಜಕೀಯ ಪಡಸಾಲೆಗಳಲ್ಲಿ ಕಾರ್ಯಕರ್ತರು ಹೋಗಿ ನಿಂತು ಬೇಡಿಕೆ ಮಂಡಿಸುವ ಸಂಘಟನೆಯಾಗಿ ನಿಂತುಬಿಡುತ್ತದೆ‌. ಹೀಗಾಗಿ ಎಚ್ಚರಿಕೆ ವಹಿಸಲೇಬೇಕಲ್ಲ. ಈ ಬಾರಿಯಂತೂ ಟೀಮ್‌ಮೋದಿ ಬಿಡಿ, ಆಯ್ಕೆಯಾಗಲಿರುವ ಎಮ್‌ಪಿಗಳು ಮತ್ತು ಸ್ವತಃ ಪಕ್ಷವೂ ತಾನೇನು ಅದ್ಭುತವಾದದ್ದನ್ನು ಸಾಧಿಸಿದ್ದೇನೆಂದು ಬೀಗುವಂತಿಲ್ಲ. ಏಕೆಂದರೆ ಎಲ್ಲವೂ ಮೋದಿ ಕೃಪೆ!

ಪಂಚರಾಜ್ಯಗಳ ಚುನಾವಣೆಯ ಸೋಲಿನ ನೋವಿನಲ್ಲಿ ಮೋದಿ ಇದ್ದಾಗ ಹುಟ್ಡಿದ್ದು ಟೀಮ್‌ಮೋದಿ. 300ಕ್ಕೂ ಹೆಚ್ಚು ಕಡೆಗಳಲ್ಲಿ ಬೈಕ್ ರ್ಯಾಲಿ ಮಾಡಬೇಕೆಂಬ ನಿಶ್ಚಯದೊಂದಿಗೆ ನಾವು ಆರಂಭಿಸಿದ ಯಾತ್ರೆ ಅಭೂತಪೂರ್ವ ಯಶಸ್ಸನ್ನು ಕಂಡಿತು. ಅದಾಗಲೇ ಅನೇಕರು ಮೋದಿ ಬೆಂಬಲಕ್ಕೆ ಚಟುವಟಿಕೆ ಶುರು ಮಾಡಿದ್ದರೂ ಜನರಿಗೆ ನಮ್ಮ ಮೇಲೊಂದು ವಿಶ್ವಾಸ ಇದ್ದೇ ಇತ್ತು. ಪ್ರತಿಯೊಬ್ಬರೂ ಕಾಯುತ್ತಲೇ ಇದ್ದರು. ಹೀಗಾಗಿ ಆರಂಭ ಬಲು ಜೋರಾಗಿಯೇ ಇತ್ತು. ಮಂಗಳೂರಿನಲ್ಲಿ ಬೆಸ್ತರ ಕೇರಿಯಲ್ಲಿ ಟೀಮ್‌ಮೋದಿಯ ಹುಡುಗರು ನಡೆಸಿದ ಪಾದಯಾತ್ರೆ ಮನೋಜ್ಞವಾಗಿತ್ತು. ಬಳ್ಳಾರಿಯ ಕೆಲವೆಡೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಬೈಕಿನಲ್ಲಿ ಬಂದ ತರುಣರು‌ ತಮ್ಮ ಮೋದಿ ಪ್ರೇಮವನ್ನು‌ ಸಾಬೀತು ಪಡಿಸಿದ್ದರು. ರಾಜ್ಯದಲ್ಲೆಲ್ಲಾ ಕಡೆ ಉತ್ಸಾಹ ಜೋರಾಗಿಯೇ ಇತ್ತು. ಇದರ ಜೊತೆ‌-ಜೊತೆಗೇ ಟೀಮ್‌ಮೋದಿ, ನಮೋ ಸುನಾಮಿ ಪೇಜ್‌ಗಳನ್ನು ಆರಂಭಿಸಿದೆವು. ಪ್ರತೀ ಪೋಸ್ಟ್‌ಗಳೂ ಆ ಹಂತದಲ್ಲಿ ನಾಲ್ಕಾರು ಸಾವಿರದಷ್ಟು‌ ಶೇರ್ ಆಗುತ್ತಿದ್ದುದು ಹೆಮ್ಮೆಯೆನಿಸುತ್ತಿತ್ತು. ಕೆಲವು ದಿನಗಳಲ್ಲಿಯೇ ರಾಜ್ಯದಾದ್ಯಂತ ಮೋದಿ ಸಾಧನೆಗಳನ್ನು ಬಿತ್ತರಿಸಬಲ್ಲ ತರುಣರನ್ನು ತರಬೇತುಗೊಳಿಸುವ ಪ್ರಯತ್ನಕ್ಕೆ ಬೆಂಗಳೂರಿನಲ್ಲಿ ಕಾರ್ಯಾಗಾರ ಆರಂಭವಾಯ್ತು. ಇಲ್ಲಿ ತರಬೇತಿ ಪಡೆದವರು ರಾಜ್ಯದಾದ್ಯಂತ 35‌ಕ್ಕೂ ಹೆಚ್ಚು ಕಡೆಗಳಲ್ಲಿ ತರುಣರಿಗೆ ತರಬೇತಿ ನೀಡಿ ಕಾರ್ಯ ಚುರುಕುಗೊಳಿಸಿದರು. ಇದರ ಹಿಂದು ಹಿಂದೆಯೇ ಟೀಮ್‌ಮೋದಿ ನನಗೆ ಪ್ರವಾಸ ಮಾಡಲು‌ ಕೇಳಿಕೊಂಡಿತು. ಕಾರ್ಯಕರ್ತರ ಅಪೇಕ್ಷೆಯಂತೆಯೇ ಮಾರ್ಗವೊಂದನ್ನು ರೂಪಿಸಿ‌ ಪ್ರವಾಸ ಆರಂಭಿಸಬೇಕೆಂದು‌ ನಿಶ್ಚಯಿಸಲಾಯ್ತು. ಅದರ ಜೊತೆ ಜೊತೆಯೇ‌ ಪ್ರಧಾನಸೇವಕ ರಥಯಾತ್ರೆಯೂ ಕೂಡ.

ಈ ರಥಯಾತ್ರೆಯ ಹಿನ್ನೆಲೆಯನ್ನು ನಿಮಗೆ ಹೇಳಲೇಬೇಕು. ರಾಜ್ಯದ ಬೇರೆಲ್ಲರೂ ಆಲೋಚಿಸುವ ಮುನ್ನವೇ ರಥದ ಕಲ್ಪನೆ‌ ನಮ್ಮೊಳಗೆ ಟಿಸಿಲೊಡೆದಿತ್ತು. ಚುನಾವಣೆಗಳು ಘೋಷಣೆಯಾಗುವ ಮುನ್ನವೇ ರಾಜ್ಯದ ಪ್ರತಿ ಜಿಲ್ಲೆಗೂ ರಥವನ್ನೋಯ್ದು ಹಳ್ಳಿಗಳ ಭಾಗವನ್ನು ನಾವು ಮುಟ್ಟಬೇಕೆಂದು ನಿಶ್ಚಯಿಸಿಯಾಗಿತ್ತು. ಬೆಂಗಳೂರಿನಿಂದ ಭರತ್, ಮಂಗಳೂರಿನಿಂದ ನರೇಶ್ ತಂತಮ್ಮ ಗಾಡಿಗಳನ್ನು ಕಳಿಸಿಕೊಟ್ಟರು.‌ ನಮ್ಮ ಸರ್ವ‌ಋತು ಮಿತ್ರ ಕಲಾವಿದ ಪ್ರಸನ್ನ ರಥವನ್ನು ಸಿಂಗರಿಸುವ ಹೊಣೆಹೊತ್ತ. ರಥಕ್ಕೆ ಚಾಲನೆಯನ್ನು ಪೀಣ್ಯದಿಂದಲೇ ಕೊಡುವುದೆಂದು ನಿಶ್ಚಯಿಸಲಾಯ್ತು. ಕಾರ್ಯಕ್ರಮದ ಹೊಣೆ ಭರತ್‌ಗೆ. ಪೂಜ್ಯ ಆನಂದ ಗುರೂಜಿಯವರನ್ನು ಕಾರ್ಯಕ್ರಮದ ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಲಾಯ್ತು. ಜನವರಿ 26 ರಂದು ನಡೆದ ಈ ಕಾರ್ಯಕ್ರಮ ಐತಿಹಾಸಿಕ ಕಾರ್ಯಕ್ರಮ. ಮೋದಿಯವರ ಮೂರ್ತಿಯನ್ನು ಹೊತ್ತ ರಥ ಪೀಣ್ಯದ ಆವರಣ ತಲುಪಿದಾಗ ಜನರ ಕೇಕೆ ಮುಗಿಲು ಮುಟ್ಟಿತು. ಊಹೆಗೂ ನಿಲುಕದಷ್ಟು ಜನ ಕಿಕ್ಕಿರಿದು ಸೇರಿದ್ದರು. ರಥದ ಉದ್ಘಾಟನೆಯೊಂದಿಗೆ ‘ದೇಶಕ್ಕಾಗಿ ಮೋದಿ ಮೋದಿಗಾಗಿ ನಾವು’ ಎಂಬ ಸಾರ್ವಜನಿಕ‌ ಕಾರ್ಯಕ್ರಮದ ಉದ್ಘಾಟನೆಯೂ ಅಂದೇ ಆಯ್ತು. ಮೋದಿಯವರ ಸಾಧನೆಯ ಪ್ರದರ್ಶಿನಿ‌ ಮನಸೂರೆಗೊಳ್ಳುವಂತಿತ್ತು. ಎರಡು ರಥ ಎರಡು ದಿಕ್ಕಿಗೆ ಪಯಣ ಬೆಳೆಸಿದವು. ರಥಕ್ಕೆ ಎರಡು ಟಿವಿಯನ್ನು ಐವತ್ತು ದಿನಗಳ ‌ಕಾಲ ಬಳಕೆಗೆಂದು ಕೊಟ್ಟಿದ್ದು ಹಳೆಯ ಮಿತ್ರರಾದ ಶ್ರೀನಿವಾಸ್ ರೆಡ್ಡಿ ಮತ್ತವರ ಸಹೋದರರು. ನಮೋಬ್ರಿಗೇಡ್‌ನ ಸಂದರ್ಭದಲ್ಲೂ ಮುಲಾಜಿಲ್ಲದೇ ನಮ್ಮ ಸಹಕಾರಕ್ಕೆ ನಿಂತವರು ಅವರು. ಅಮೇರಿಕಾದ ಟೀಮ್‌ಮೋದಿ ತಂಡ ರಥದ ನಿರ್ಮಾಣಕ್ಕೆ ಸಾಕಷ್ಟು ಕೊಟ್ಟಿತ್ತು. ಮುಂದಿನ ದಿನಗಳಲ್ಲಿ ಈ ರಥ 500ಕ್ಕೂ‌‌ ಹೆಚ್ಚು ಕಾರ್ಯಕ್ರಮಗಳ ಮೂಲಕ ಲಕ್ಷಾಂತರ ಕರಪತ್ರಗಳನ್ನು ಹಂಚುತ್ತಾ ರಾಜ್ಯದ 30 ಜಿಲ್ಲೆಗಳನ್ನು ಸುತ್ತಾಡಿ ಸಿದ್ದರಾಮಯ್ಯನವರ ಕ್ಷೇತ್ರವಾದ ಬಾದಾಮಿಯಲ್ಲಿ ಸಂಪನ್ನಗೊಳ್ಳುವಾಗ ಸಾರ್ಥಕತೆಯ ಭಾವ ಮನದಲ್ಲಿತ್ತು. ಈ ನಡುವೆ ಮೋದಿಯವರ ಕುರಿತ ಲೇಖನಗಳ ಸಂಗ್ರಹದ ಪುಸ್ತಕ ಪ್ರಧಾನಸೇವಕವನ್ನೂ ಜನರ ಕೈಲಿಡಲಾಯ್ತು. ಈ ಕೃತಿಯನ್ನು ಕಡಿಮೆ ಬೆಲೆಯಲ್ಲಿ ಸಮಾಜಕ್ಕೆ ತಲುಪಿಸಲೆಂದು ಅಮೇರಿಕಾದಿಂದ ಪ್ರಸನ್ನ ಮತ್ತವರು ಮಿತ್ರರು ಸಹಕರಿಸಿದ್ದರು. 10,000 ಪುಸ್ತಕಗಳನ್ನು ಸಮಾಜಕ್ಕೆ ತಲುಪಿಸುವಲ್ಲಿ ನಾವು ಯಶಸ್ವಿಯಾದೆವು. ರಾಜೇಶ ಟೀಮ್‌ಮೋದಿ ಟಿಶರ್ಟ್‌ಗಳನ್ನು ರಾಜ್ಯದ ಮೂಲೆ-ಮೂಲೆಗಳಿಗೆ ಮುಟ್ಟಿಸಲು‌ ತೋರಿದ‌ ಆಸ್ಥೆಯೂ ವಿಶೇಷವಾಗಿತ್ತು.

ಇದರೊಟ್ಟಿಗೆ ಆರಂಭವಾದ ಮೋದಿದೂತರ ಚಟುವಟಿಕೆ ತೀವ್ರವಾಗಿ ನೆಲಮಟ್ಟಕ್ಕೆ ಮುಟ್ಟಿದ್ದು ಉತ್ತರಕನ್ನಡದಲ್ಲಿ. ಕಾರ್ಯಕರ್ತ ಅನಂತ್ ಭಟ್ಟರ ಉತ್ಸಾಹ ಅಲ್ಲಿ ಮೋದಿದೂತರಿಗೆ ಶಕ್ತಿ ತುಂಬಿತ್ತು. ನಿಧಾನವಾಗಿ ರಾಜ್ಯದ ಇತರೆ ಭಾಗಗಳಲ್ಲಿ ಮೋದಿದೂತರ ಚಟುವಟಿಕೆ ವ್ಯಾಪಕವಾಗಿ, ಹಳ್ಳಿ-ಹಳ್ಳಿಯಲ್ಲಿ ಮನೆ‌ಮನೆಗೆ ಮೋದಿಯವರ ವಿಚಾರವನ್ನು ತಲುಪಿಸುವ ತರುಣರ‌ ಪಡೆ‌ ನಿರ್ಮಾಣಕ್ಕೆ‌ ಈ ಕಲ್ಪನೆ ಸಹಕಾರಿಯಾಯ್ತು. ರಾಜ್ಯದಾದ್ಯಂತ ಸುಮಾರು ಮೂರು ಸಾವಿರ ಮೋದಿದೂತರು ಚುನಾವಣೆಯ ಹೊತ್ತಲ್ಲೂ ಹಗಲು-ರಾತ್ರಿ ಹಳ್ಳಿಗಳಲ್ಲಿ ಪ್ರಚಾರ ಕಾರ್ಯ ಮಾಡುತ್ತಾ ಮೋದಿಯ ಗೆಲುವನ್ನು ಖಾತ್ರಿ ಪಡಿಸಲು ಪ್ರಯತ್ನಿಸುತ್ತಿದ್ದರು.

8

ಈ ನಡುವೆಯೇ ನಾವು ಆರಂಭಿಸಿದ‌‌ ಟೀಮ್‌ಮೋದಿ ಕಾಲ್ ಸೆಂಟರ್ ವ್ಯಾಪಕವಾದ ಜನಮನ್ನಣೆ ಗಳಿಸಿತು. ಬೆಂಗಳೂರಿನ ಶ್ರೀಯುತ ಆನಂದ್ ತಮ್ಮ‌ ಮನೆಯ ನೆಲಮಾಳಿಗೆಯನ್ನೇ ಟೀಮ್‌ಮೋದಿ ಯ ಕಾಲ್‌ಸೆಂಟರ್‌ಗೆಂದು ಬಿಟ್ಟುಕೊಟ್ಟರು. ಅದರ ಉದ್ಘಾಟನೆ ತರಾತುರಿಯಲ್ಲಾಯಿತಾದರೂ ಉತ್ಸಾಹ ತುಂಬಿದ ವಾತಾವರಣಕ್ಕೆ ಕೊರತೆ ಇರಲಿಲ್ಲ. ಪ್ರತಿನಿತ್ಯ ಸರಾಸರಿ‌ 300 ಕರೆಗಳು ಕಾಲ್‌ಸೆಂಟರ್‌ಗೆ ಬರುತ್ತಿದ್ದವು. ಕನಿಷ್ಠ 50 ಜನ ಪ್ರತಿನಿತ್ಯವೂ ಕಾಲ್‌ಸೆಂಟರ್‌ಗೆ ಭೇಟಿಕೊಟ್ಟು ತಾವೂ ಪ್ರಚಾರ ಕಾರ್ಯದಲ್ಲಿ ಕೈಜೋಡಿಸುವ ಮಾತುಗಳನ್ನಾಡುತ್ತಿದ್ದರು. ನಾ.ಸೋಮೇಶ್ವರ್ ಅವರು ಆಗಮಿಸಿದ್ದಾಗ ಅನಿಯಮಿತ ಕರೆಗಳು ಕಾಲ್‌ಸೆಂಟರ್‌ಗೆ. ಜನಧನ್ ಅಕೌಂಟ್‌ನ ಮತ್ತು ಬ್ಯಾಂಕಿನಿಂದ ದೊರೆಯುವ ಸೌಲಭ್ಯಗಳ ಕುರಿತಂತೆ ತಜ್ಞೆಯಾಗಿದ್ದ ಸುಮಲತಾ ಅವರು ನಾಲ್ಕು ದಿನಗಳ ಕಾಲ ಕಾಲ್‌ಸೆಂಟರ್‌ನಲ್ಲಿ ಜನರ ಕರೆಗಳನ್ನು ಸ್ವೀಕರಿಸಿದ್ದು ವಿಶೇಷವಾಗಿತ್ತು. ವಿಶೇಷ ಅತಿಥಿಗಳು ಬಂದಾಗ ನೂರಾರು ಜನ ಕಾಲ್‌ಸೆಂಟರ್‌ಗೆ ಭೇಟಿಕೊಟ್ಟು ಅತಿಥಿಗಳನ್ನು ಮಾತಾಡಿಸಿಕೊಂಡು ಹೋಗುವುದನ್ನು ನೋಡಲು ಆನಂದವೆನಿಸುತ್ತಿತ್ತು. ಅದಕ್ಕೆ ಮನೆಯ ಮಾಲೀಕರಾದ ಆನಂದ್ ಅವರು ಕಾರಣ. ಅಲ್ಲಿದ್ದ ಕಾರ್ಯಕರ್ತರಿಗೆ ಅವರು ಊಟ, ತಿಂಡಿಯ ವ್ಯವಸ್ಥೆ ಮಾಡಿಕೊಡುತ್ತಿದ್ದುದಲ್ಲದೇ ಕೆಲವೊಮ್ಮ ಬಂದ ಅತಿಥಿಗಳಿಗೂ ಮುಲಾಜಿಲ್ಲದೇ ಚಹಾ, ಕಾಫಿ ಕೊಡುವುದರಲ್ಲಿ ಹಿಂದೆ-ಮುಂದೆ ನೋಡುತ್ತಿರಲಿಲ್ಲ. ಕಾಲ್ ಸೆಂಟರ್‌ನ ಜವಾಬ್ದಾರಿಯನ್ನು ನಿರ್ವಹಿಸಿದ ಕಾರ್ಯಕರ್ತರಾದ ಗುರು, ವಿಕಾಸ್, ಅಭಿರಾಮ್, ಶ್ರೀಮತಿ ಗಿರಿಜಾ, ಖತಾರ್ ನಿಂದ ಬಂದಿದ್ದ ಮಧು ಅವರನ್ನು ಈ ಸಂದರ್ಭಗಳಲ್ಲಿ ನೆನಪಿಸಿಕೊಳ್ಳಲೇಬೇಕು. ಚುನಾವಣೆಗಳು ಘೋಷಣೆಯಾಗುತ್ತಿದ್ದಂತೆ ಕಾಲ್‌ಸೆಂಟರ್ ಅನ್ನು ಮುಚ್ಚಬೇಕಾಯ್ತು! ಆದರೆ ಆ ವೇಳೆಗಾಗಲೇ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಟೀಮ್‌ಮೋದಿ ಕಛೇರಿ ಆರಂಭವಾಗಿದ್ದರಿಂದ ನಾವು ತುಂಬಾ ತಲೆಕೆಡಿಸಿಕೊಳ್ಳಬೇಕಾಗಿ ಬರಲಿಲ್ಲ.

9

ಈ ನಡುವೆ ಟೀಮ್‌ಮೋದಿ ಸಂಕ್ರಾಂತಿ ಹಬ್ಬವನ್ನು ಬಳಸಿಕೊಂಡು ಎಳ್ಳು-ಬೆಲ್ಲವನ್ನು ಜನರಿಗೆ ಹಂಚುತ್ತಾ ತಿನ್ನಲು ಕಹಿ ಎನಿಸಿದರೂ ಹೇಗೆ ಎಳ್ಳು ದೇಹಾರೋಗ್ಯಕ್ಕೆ ಒಳ್ಳೆಯದೋ ಹಾಗೆಯೇ ಮೋದಿಯ ನಿರ್ಣಯಗಳು ಕಠಿಣವೆನಿಸಿದರೂ ದೇಶಾರೋಗ್ಯಕ್ಕೆ ಒಳ್ಳೆಯದೆಂಬ ಸಂದೇಶ ಕೊಡುತ್ತಾ ಎಳ್ಳುಬೆಲ್ಲದೊಂದಿಗೆ ಇದೇ ವಿಚಾರಗಳ ಕರಪತ್ರವನ್ನು ಕಾರ್ಯಕರ್ತರು ಎಲ್ಲೆಡೆ ಹಂಚಿದ್ದರು.

10

ಈ ನಾಲ್ಕು ತಿಂಗಳಲ್ಲೇ ನಾವು ಟ್ವಿಟರ್ ನಲ್ಲಿ ಅನೇಕ ಟ್ರೆಂಡ್‌ಗಳನ್ನೂ ಮಾಡಿದ್ದೆವು. ಕೇರಳದಲ್ಲಿ ಗೋಬ್ಯಾಕ್ ಮೋದಿ ಎಂದು ಪಾಕಿಸ್ತಾನದ ಸಹಕಾರ ಪಡೆದು ಕಾಂಗ್ರೆಸ್ಸಿಗರು ಟ್ರೆಂಡ್ ಮಾಡುವಾಗ ಮೋದಿಜಿಯವರು ಕರ್ನಾಟಕಕ್ಕೆ ಬರುವ ದಿನ #ಕಮ್_ಅಗೈನ್_ಮೋದಿಜೀ ಎಂದು, ರಾಹುಲ್‌ನನ್ನು ಕರ್ನಾಟಕ ಕಾಂಗ್ರೆಸ್ಸು ಇಲ್ಲಿಯೇ ಸ್ಪರ್ಧಿಸುವಂತೆ ಕೇಳಿಕೊಂಡಾಗ ಪಂಥಾಹ್ವಾನವನ್ನು ಸ್ವೀಕರಿಸಿ ಇಲ್ಲಿ ಬಂದರೆ #ಒಂದ್‌_ಕೈ‌_ನೋಡ್ತೀವಿ ಎಂಬ ಟ್ರೆಂಡ್ ಮಾಡಿದ್ದು ನಾವೇ. ಪ್ರಧಾನಮಂತ್ರಿ ನರೇಂದ್ರಮೋದಿಯವರು ಕರ್ನಾಟಕದಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹರಿದಾಡಲು ಪ್ರಾರಂಭಿಸಿದಾಗ, ಟೀಮ್ ಮೋದಿ ಅವರಿಗೆ ಸ್ವಾಗತ ಕೋರಿ #ನೀವ್_ಬಂದ್ರೆ_28ಕ್ಕೆ_28 ಎಂಬ ಟ್ರೆಂಡ್ ಮಾಡಿತು. ನಂತರ ರಾಹುಲ್ ಕರ್ನಾಟಕದಿಂದ ಸ್ಪರ್ಧಿಸದೇ ಸೋಲುವ ಭೀತಿಯಿಂದ ಕೇರಳದ ವಯನಾಡಿನಿಂದ ಸ್ಪರ್ಧಿಸಲು ಮುಂದಾದಾಗ #ಓಡಿ_ಹೋದ_ಪಪ್ಪು ಎಂಬ ಟ್ರೆಂಡನ್ನೂ ಮಾಡಿದ್ದೆವು.

ಇನ್ನು ಸಾರ್ವಜನಿಕ ಸಭೆಗಳದ್ದು ಮತ್ತೊಂದು ವೈಭವ. ಬೀದರ್‌ನಿಂದ ಹಿಡಿದು ಚಾಮರಾಜನಗರದವರೆಗೆ, ಕೋಲಾರದಿಂದ ಉಡುಪಿಯವರೆಗೆ ರಾಜ್ಯದ ಮೂಲೆ-ಮೂಲೆಗಳಲ್ಲಿ ಬಹಿರಂಗ ಸಭೆಗಳು ಭರ್ಜಿರಿಯಾಗಿಯೇ ನಡೆದವು. ಈ ಸಭೆಗಳು ಎರಡು ಹಂತದಲ್ಲಿ ನಡೆದಿದ್ದು ಚುನಾವಣೆ ಘೋಷಣೆಗೆ ಮುನ್ನ ನಡೆದ ಮೊದಲ ಹಂತದಲ್ಲಿ ಸ್ಥಳೀಯರ ಸಹಕಾರದೊಂದಿಗೆ ಟೀಮ್‌ಮೋದಿ ಕಾರ್ಯಕರ್ತರೇ ಇಡಿಯ ಕಾರ್ಯಕ್ರಮವನ್ನು ಆಯೋಜಿಸಿದ್ದರು‌. ಚುನಾವಣೆಗೆ ಅಭ್ಯರ್ಥಿ ಘೋಷಣೆಯಾಗುವುದಿರಲಿ ಚುನಾವಣಾ ಆಯೋಗ ಚುನಾವಣಾ ದಿನಾಂಕಗಳನ್ನು ಘೋಷಿಸುವ ಸಾಕಷ್ಟು ಮುನ್ನವೇ ಟೀಮ್‌ಮೋದಿ ಭೂಮಿಯನ್ನು ಉತ್ತು ಹಸನು ಮಾಡಿಕೊಂಡಿತು. ಮೋದಿ ಮಂತ್ರದ ಬೀಜವನ್ನು ಬಿತ್ತಿಯಾಗಿತ್ತು. ಇನ್ನು ನೀರುಣಿಸಿ ಬೆಳೆ ತೆಗೆಯುವುದಷ್ಟೇ ಬಾಕಿ ಇತ್ತು. ಚುನಾವಣೆಯ ಘೋಷಣೆಯಾದೊಡನೆ ಟೀಮ್‌ಮೋದಿ ತಂಡ ಸ್ಥಳೀಯ ಬಿಜೆಪಿಗರ ಸಹಕಾರವನ್ನು ಪಡೆದುಕೊಂಡು ಕಾರ್ಯಕ್ರಮವನ್ನು ಮಾಡಲಾರಂಭಿಸಿತು. ಗೆದ್ದೇ ಗೆಲ್ಲುವ ವಿಶ್ವಾಸವಿರುವ ಸ್ಥಳಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಎಲ್ಲೆಲ್ಲಿ ಹಿನ್ನಡೆಯಾಗಬಹುದೆಂಬ ಅನುಮಾನವಿದೆಯೋ ಅಂತಹ ಜಾಗಗಳನ್ನೇ ಆರಿಸಿಕೊಂಡು ವಿಶೇಷವಾದ ರ್ಯಾಲಿಗಳನ್ನು ಮಾಡಿ ತರುಣರಿಗೆ ಉತ್ಸಾಹ ತುಂಬಲಾಯ್ತು. ಈ ರ್ಯಾಲಿಗಳಿಗೆ ಸೇರುತ್ತಿದ್ದ ಸಂಖ್ಯೆ ಎಲ್ಲ ಪಕ್ಷಗಳಲ್ಲೂ ಆತಂಕದ ಗೆರೆಯನ್ನು ಮೂಡಿಸಿದ್ದಂತೂ ನಿಜ. ಒಟ್ಟಾರೆ 57 ದಿನಗಳಲ್ಲಿ 116 ರ್ಯಾಲಿಗಳ ಮೂಲಕ ಮೂರುಕಾಲು ಲಕ್ಷ ಜನರನ್ನು ನೇರವಾಗಿ ಸಂಪರ್ಕಿಸಿದರೆ, ಫೇಸ್‌ಬುಕ್-ಯೂಟ್ಯೂಬ್ ಮುಂತಾದವುಗಳ ಮೂಲಕ ಒಂದು ಕೋಟಿಗೂ ಹೆಚ್ಚು ನೋಡುಗರನ್ನು ಸೆಳೆಯಲಾಯ್ತು. ಒಟ್ಟಾರೆ 18,000 ಕಿ.ಮೀ ಓಡಾಟ ನಡೆಯಿತಲ್ಲದೇ 28 ಲೋಕಸಭಾ ಕ್ಷೇತ್ರಗಳನ್ನೂ ಈ ಸಂದರ್ಭದಲ್ಲಿ ಮುಟ್ಟಲಾಯ್ತು. ಇದಲ್ಲದೇ ಪ್ರಮುಖ ಜಿಲ್ಲೆಗಳಲ್ಲಿ ಪತ್ರಿಕಾಗೋಷ್ಠಿಗಳು, ವಿಶೇಷ ಸಂವಾದಗಳನ್ನು ಏರ್ಪಡಿಸಿ ಸಮಾಜವನ್ನು ದೊಡ್ಡ ಪ್ರಮಾಣದಲ್ಲಿ ಮುಟ್ಟುವ ಪ್ರಯತ್ನವಂತೂ ಜರುಗುತ್ತಲೇ ಇತ್ತು.

14

ಟೀಮ್‌ಮೋದಿಯ ಚಟುವಟಿಕೆಗೆಂದು ಸಿಂಗಪುರದಿಂದ ಬಂದ ಭಾವನಾ, ಬಹ್ರೈನ್‌ನಿಂದ ಜೊತೆಯಾದ ಕಿರಣ್ ಉಪಾಧ್ಯಾಯ, ಮನೆ-ಮನೆಗೂ ತೆರಳಿ ಪ್ರಚಾರ ಮಾಡುವ ಮೂಲಕ ಸ್ಥಳೀಯ ಕಾರ್ಯಕರ್ತರ ಶಕ್ತಿಯನ್ನು ನೂರ್ಪಟ್ಟು ವೃದ್ಧಿಸಿದ್ದರು. ಟೀಮ್‌ಮೋದಿಯ ಸಹಕಾರದೊಂದಿಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ 3600 ಕಿ.ಮೀಗಳ ಓಟವನ್ನು ಕೈಗೊಂಡ ಕುಮಾರ್ ದಂಪತಿಗಳು ಟೀಮ್‌ಮೋದಿಯ ಗೌರವವನ್ನು ಹೆಚ್ಚಿಸಿದ್ದರು.

ಒಟ್ಟಾರೆ ಡಿಸೆಂಬರ್ 16ಕ್ಕೆ ಜನಿಸಿದ ಟೀಮ್‌ಮೋದಿ ಎಂಬ ಕೂಸು ಏಪ್ರಿಲ್ 23ರ ವೇಳೆಗೆ ತನ್ನ ನಿರ್ಧಿಷ್ಟ ಕಾರ್ಯವನ್ನು ಮುಗಿಸಿ ಸಮಾಪ್ತಿಗೆ ಸಿದ್ಧವಾಗಿದೆ. ಬಹಳ ಹೆಮ್ಮೆಯೆನಿಸುತ್ತಿದೆ. ಸಹಸ್ರಾರು ಕಾರ್ಯಕರ್ತರು ವಿಶ್ವಾಸವಿಟ್ಟು ನಮ್ಮೊಂದಿಗೆ ಕೈ ಜೋಡಿಸಿದ್ದಾರೆ. ನೂರಾರು ಜನ ಧನಸಹಾಯ ಮಾಡಿದ್ದಾರೆ. ಮತ್ತು ಲಕ್ಷಾಂತರ ಜನ ಮನೆಯಲ್ಲೇ ಕುಳಿತು ನಮಗೆ ಹಾರೈಸಿದ್ದಾರೆ. ನಮಗಾಗಿ ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ. ಇವರೆಲ್ಲರಿಗೂ ಹೃದಯಾಂತರಾಳದ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. 23 ಸಂಜೆ 6 ಗಂಟೆಯ ನಂತರ ಟೀಮ್‌ಮೋದಿ ಇರುವುದಿಲ್ಲ. ನ್ಯಾವ್ಯಾರೂ ಅಂದಿನಿಂದ ಟೀಮ್‌ಮೋದಿಯ ಕಾರ್ಯಕರ್ತರೂ ಅಲ್ಲ. ಇದನ್ನೇಕೆ ಸ್ಪಷ್ಟಪಡಿಸುತ್ತಿದ್ದೇನೆಂದರೆ ಈ ಹೆಸರಿನಲ್ಲಿ ಯಾರೂ ಯಾರಿಗೂ ಹಣ ಕೊಡುವುದಾಗಲೀ ಅಥವಾ ಚಂದಾ ಎತ್ತುವುದಾಗಲೀ ಮಾಡಬಾರದೆಂಬ ಸೂಕ್ಷ್ಮ ಮಾಹಿತಿಗಾಗಿ ಮಾತ್ರ. ಮೋದಿಯವರು ರಾಷ್ಟ್ರಕ್ಕಾಗಿ ಮಾಡುತ್ತಿರುವ ಅವಿರತ ಸೇವೆಗೆ ಟೀಮ್‌ಮೋದಿ ಅಳಿಲು ಸೇವೆಯಷ್ಟೇ. ಎಲ್ಲರಿಗೂ ಶತ-ಶತ ನಮನ.

ವಂದೇ,

ಚಕ್ರವರ್ತಿ

 

ರಫೇಲ್: ಸರಿಯಾದ ಉತ್ತರ ಕಾಂಗ್ರೆಸ್ಸಿಗೆ ಜನರೇ ಕೊಡುತ್ತಾರೆ!

ರಫೇಲ್: ಸರಿಯಾದ ಉತ್ತರ ಕಾಂಗ್ರೆಸ್ಸಿಗೆ ಜನರೇ ಕೊಡುತ್ತಾರೆ!

ನಿಂತ ನೆಲ ಕುಸಿಯುತ್ತಿದೆ ಎನಿಸಿದಾಗಲೇ ಕಾಂಗ್ರೆಸ್ಸು ಈ ಒಪ್ಪಂದದಲ್ಲಿ ರಿಲಯನ್ಸ್ ಅನ್ನು ಎಳೆದುಕೊಂಡು ಬಂದಿದ್ದು. ಅವರು ಮಾಡಿರುವ ಅಪಪ್ರಚಾರ ಹೇಗಿದೆ ಎಂದರೆ ರಫೆಲ್ ವಿಮಾನಗಳನ್ನೇ ನಿಮರ್ಾಣ ಮಾಡಿಕೊಡುವ ಗುತ್ತಿಗೆ ರಿಲಯನ್ಸ್ಗೆ ಸಿಕ್ಕಂತಿದೆ.

ರಫೇಲ್ನ ಖರೀದಿಯ ಕಲ್ಪನೆ ಅಟಲ್ ಬಿಹಾರಿ ವಾಜಪೇಯಿಯವರ ಕಾಲದಲ್ಲೇ ಆಗಿತ್ತು. ಅದನ್ನು ಕೊಳ್ಳುವ ಮುನ್ನವೇ ಸಕರ್ಾರ ಬಿದ್ದುಹೋಯ್ತು. 2007 ರಲ್ಲಿ ಕಾಂಗ್ರೆಸ್ ಸಕರ್ಾರ ಟೆಂಡರ್ ಕರೆದು ರಫೆಲನ್ನು ಆಯ್ಕೆ ಮಾಡಿಕೊಂಡಿತು. ಆದರೆ ಸುಮಾರು ಐದು ವರ್ಷಗಳ ಕಾಲ ನಿರಂತರ ಮಾತುಕತೆಯ ನಂತರವೂ ಕೂಡ ಸಮರ್ಥವಾದ ಒಪ್ಪಂದವೊಂದಕ್ಕೆ ಬರಲು ಅದಕ್ಕೆ ಸಾಧ್ಯವಾಗಲೇ ಇಲ್ಲ. 2012 ರಲ್ಲಿ 18 ರಫೆಲ್ಗಳನ್ನು ನೇರವಾಗಿ ಕೊಂಡುಕೊಳ್ಳುವುದು, 108 ರಫೆಲ್ಗಳನ್ನು ಹೆಚ್ಎಎಲ್ನಲ್ಲಿ ನಿಮರ್ಾಣ ಮಾಡುವುದು ಎಂಬ ಒಪ್ಪಂದಕ್ಕೆ ಸಹಿ ಮಾಡಿಸಲಾಯ್ತು. ಅದೇ ವರ್ಷ ದಸಾಲ್ಟ್ ಕಂಪನಿ ರಿಲಯನ್ಸ್ನೊಂದಿಗೆ ಒಪ್ಪಂದ ಮಾಡಿಕೊಂಡು ಬಿಡಿ ಭಾಗಗಳ ತಯಾರಿಕೆಯ ಹೊಣೆಗಾರಿಕೆಯನ್ನು ಅದಕ್ಕೆ ಕೊಟ್ಟಿತ್ತು. ನೆನಪಿಡಿ ಇದು 2012 ರ ಮಾತು ಮತ್ತು ಆಗ ಕಾಂಗ್ರೆಸ್ ಸಕರ್ಾರವೇ ಇತ್ತು. ಮರು ವರ್ಷವೇ ದಸಾಲ್ಟ್ ಹೆಚ್ಎಎಲ್ನ ಒಪ್ಪಂದದ ವಿಷಯದಲ್ಲಿ ತಗಾದೆ ತೆಗೆದು 18 ವಿಮಾನಗಳನ್ನು ಕೊಡುವುದಷ್ಟೇ ನನ್ನ ಜವಾಬ್ದಾರಿ, ಹೆಚ್ಎಎಲ್ ನಿಮರ್ಿಸಲಿರುವ ವಿಮಾನದ ಕುರಿತಂತೆ ನಾವು ಹೊಣೆ ಹೊರಲಾರೆವು ಎಂದುಬಿಟ್ಟಿತು.

2

ಕಾಂಗ್ರೆಸ್ಸು ಇದರ ಜವಾಬ್ದಾರಿಯನ್ನು ತಾನೇ ಹೊರಬೇಕು. ಹೆಚ್ಎಎಲ್ನಂತಹ ಸಮರ್ಥವಾದ ಸಂಸ್ಥೆಯೊಂದನ್ನು ಸಮಯಕ್ಕೆ ಸರಿಯಾಗಿ ಕೊಟ್ಟ ಜವಾಬ್ದಾರಿಯನ್ನು ಪೂರೈಸದ ಸಂಸ್ಥೆಯಾಗಿ ಪರಿವತರ್ಿಸಿರುವುದು ಅದರದ್ದೇ ಸಾಧನೆ. ತನ್ನ ಆಳ್ವಿಕೆಯ 60 ವರ್ಷದ ಅವಧಿಯಲ್ಲಿ ರಕ್ಷಣಾ ಇಲಾಖೆಯನ್ನು, ಸೇನೆಯನ್ನು ಬಲಪಡಿಸುವ ಮಾಧ್ಯಮವನ್ನಾಗಿಸಿಕೊಳ್ಳದೇ ಹಣದ ಕಣಜವಾಗಿ ಬಳಸಿಕೊಂಡಿತಲ್ಲ ಈ ಕಾರಣಕ್ಕಾಗಿ ಭಾರತದಲ್ಲಿ ರಕ್ಷಣಾ ಉದ್ದಿಮೆ ಬೆಳೆಯಲೇ ಇಲ್ಲ. ಇದರಿಂದಾಗಿಯೇ 2005 ರಲ್ಲಿ ತೇಜಸ್ನ ನಿಮರ್ಿಸಿ ಕೊಡುವ ಮಾತುಕತೆಯಾಗಿದ್ದರೂ 2018 ರ ವೇಳೆಗೂ ಒಪ್ಪಿಕೊಂಡ 40 ತೇಜಸ್ಗಳನ್ನು ನಿಮರ್ಿಸಿ ಕೊಡಲು ಹೆಚ್ಏಎಲ್ಗೆ ಸಾಧ್ಯವಾಗಲೇ ಇಲ್ಲ. ಅವೆಲ್ಲ ಪಕ್ಕಕ್ಕಿರಲಿ. ಒಟ್ಟಾರೆ ಕಾಂಗ್ರೆಸ್ಸಿನ ನಿಷ್ಕ್ರಿಯಿತೆಯಿಂದಾಗಿ ಮತ್ತು ವಾದ್ರಾನ ಕಿರಿಕಿರಿಯಿಂದಾಗಿ ರಫೆಲ್ ಒಪ್ಪಂದ ಮುರಿದೇ ಬಿತ್ತು. ಅದರೊಟ್ಟಿಗೆ ಕಾಂಗ್ರೆಸ್ ಸಕರ್ಾರದ ಅವಧಿಯೂ ಮುಗಿದು ನರೇಂದ್ರಮೋದಿ ಪ್ರಧಾನಿಯಾದರು. ತಕ್ಷಣವೇ ಅವರು ಸೈನ್ಯಕ್ಕೆ ಬೇಕಾದ ಯುದ್ಧವಿಮಾನಗಳ ಕುರಿತಂತೆ ಮತ್ತೆ ಮತ್ತೆ ಚಚರ್ೆ ನಡೆಸಿ ರಫೆಲ್ಗಳ ಅಗತ್ಯ ಮನಗಂಡರು. ಮರುವರ್ಷವೇ ಫ್ರಾನ್ಸ್ಗೆ ಹೋಗಿ ಅಲ್ಲಿನ ಅಧ್ಯಕ್ಷರ ಕೈ ಕುಲುಕಿ 36 ರಫೆಲ್ಗಳನ್ನು ನೇರವಾಗಿ ಖರೀದಿಸುವ ಘೋಷಣೆ ಮಾಡಿದರು. ನೆನಪಿಡಿ. ಕಾಂಗ್ರೆಸ್ಸಿಗರ ಒಪ್ಪಂದದ ಪ್ರಕಾರ 18 ವಿಮಾನಗಳು ಬರಬೇಕಿತ್ತು, 108 ಇಲ್ಲೇ ತಯಾರಾಗಬೇಕಿತ್ತು. ಸಮಯದ ಮಿತಿ ಇದ್ದದ್ದು 18 ಕ್ಕೆ ಮಾತ್ರ. ಉಳಿದ 108 ರ ಕುರಿತಂತೆ ಯಾರೂ ಹೊಣೆಗಾರಿಕೆ ಹೊತ್ತಿರಲಿಲ್ಲ. ಆದರೆ ಮೋದಿ, ಕಾಂಗ್ರೆಸ್ ತರಲಿಚ್ಛಿಸಿದಕ್ಕಿಂತ ಎರಡು ಪಟ್ಟು ಹೆಚ್ಚು ರಫೆಲ್ಗಳನ್ನು ಖರೀದಿಸುವ ಮಾತನಾಡಿ ಬಂದಿದ್ದರು. ಅವರ ಘೋಷಣೆ ಹಾಗೆ ಉಳಿಯಲಿಲ್ಲ. ಬೆಲೆ ಚೌಕಶಿ ಸಮಿತಿ ಮತ್ತು ಗುತ್ತಿಗೆ ಚೌಕಶಿ ಸಮಿತಿ 14 ತಿಂಗಳುಗಳ ಕಾಲ ನಿರಂತರವಾಗಿ ಭಿನ್ನ ಭಿನ್ನ ಸ್ವರೂಪಗಳಲ್ಲಿ ದಸಾಲ್ಟ್ನೊಂದಿಗೆ ಫ್ರಾನ್ಸ್ ಸಕರ್ಾರದೊಂದಿಗೆ ಮಾತುಕತೆ ನಡೆಸಿ ಒಪ್ಪಂದಕ್ಕೆ ಅಂತಿಮ ಸ್ವರೂಪ ಕೊಡಲಾಯ್ತು. ಕಾಂಗ್ರೆಸ್ ಮಾಡಿಕೊಂಡ ಒಪ್ಪಂದದಲ್ಲಿ ಸಾಮಾನ್ಯ ರಫೆಲ್ಗಳಷ್ಟೇ ಇದ್ದವು. ಈಗಿನ ಒಪ್ಪಂದದಲ್ಲಿ ಅತ್ಯಾಧುನಿಕ ಆಕ್ರಮಣಕಾರಿ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಫುಲ್ಲಿ ಲೋಡಡ್ ವಿಮಾನಗಳಿದ್ದವು. ಈ ರಫೆಲ್ಗಳು ಲೇಹ್ಲಡಾಕ್ನಂತಹ ಎತ್ತರ ಪ್ರದೇಶದಲ್ಲೂ ಕಾರ್ಯನಿರ್ವಹಿಸಬೇಕಿದ್ದರಿಂದ ಎಂಜಿನ್ನುಗಳ ಮರುವಿನ್ಯಾಸ ಅಗತ್ಯವಿತ್ತು. ಅತ್ಯಾಧುನಿಕವಾದ ಇನ್ಫ್ರಾರೆಡ್ ಸಚರ್್ ಆಂಡ್ ಟ್ರ್ಯಾಕ್ ವ್ಯವಸ್ಥೆಯೂ ಬೇಕಾಗಿತ್ತು. ಚೌಕಶಿ ಸಮಿತಿ ಕಂಪನಿಯ ಮುಂದೆ ಅವೆಲ್ಲವನ್ನೂ ಇಟ್ಟು ಇನ್ನೊಂದಷ್ಟು ಸಂಶೋಧನೆಗೆ ಕೆಲಸವನ್ನೂ ಕೊಟ್ಟು ಒಪ್ಪಂದದ ರೂಪುರೇಷೆಗಳನ್ನು ಪೂರ್ಣಗೊಳಿಸಿತ್ತು. ಕಾಂಗ್ರೆಸ್ಸಿನ ಸಕರ್ಾರ ಬೇಸಿಕ್ ಮಾಡೆಲ್ನ ರಫೆಲ್ಗೆ 570 ಕೋಟಿಯ ಬೆಲೆ ನಿಗದಿ ಪಡಿಸಿಕೊಂಡಿದ್ದರೆ ಈ ಸಕರ್ಾರ ಹೈ ಎಂಡ್ ರಫೆಲ್ಗಳಿಗೆ 1600 ಕೋಟಿ ರೂಪಾಯಿಯನ್ನು ನಿಗದಿಪಡಿಸಿತು. ಬೆಲೆ ನೋಡಿದ ನಂತರವೇ ಅರ್ಥವಾಗಿದ್ದು ಬೇಸಿಕ್ ರಫೆಲ್ಗಳ ಮೇಲೆ ಕಾಂಗ್ರೆಸ್ಸಿನ ಒಪ್ಪಂದಕ್ಕಿಂತ 9 ಪ್ರತಿಶತ ಹಣವನ್ನು ಹೊಸ ಸಕರ್ಾರ ಉಳಿಸಿತ್ತು ಮತ್ತು ಹೈ ಎಂಡ್ ರಫೆಲ್ಗಳ ಮೇಲೆ 20 ಪ್ರತಿಶತದಷ್ಟು ಹಣ ಉಳಿತಾಯ ಮಾಡಿತ್ತು. ಈ ಚೌಕಶಿಯಲ್ಲಿ ಭಾಗವಹಿಸಿದ್ದ ಡೆಪ್ಯುಟಿ ಚೀಫ್ ಏರ್ ಮಾರ್ಶಲ್ ರಘುನಾಥ್ ನಂಬಿಯಾರ್ ‘ಹಣ ನೀಡುವ ವಿಧಾನವನ್ನು ಗಮನದಲ್ಲಿರಿಸಿಕೊಂಡರೆ ಈ ಒಟ್ಟಾರೆ ಒಪ್ಪಂದದ ಮೂಲಕ ಹಳೆಯ ಒಪ್ಪಂದಕ್ಕಿಂತಲೂ 40 ಪ್ರತಿಶತ ಹಣ ಉಳಿಸಿದ್ದೇವೆ’ ಎಂದಿದ್ದರು. ಅದು ಸಹಜವೂ ಹೌದು. ವರ್ಷದಿಂದ ವರ್ಷಕ್ಕೆ ನಿಮರ್ಾಣದ ವೆಚ್ಚ ಹೆಚ್ಚುತ್ತಲೇ ಹೋಗುತ್ತದೆ. 6 ವರ್ಷಕ್ಕೋ 7 ವರ್ಷಕ್ಕೋ ಒಮ್ಮೆ ಈ ಮೊತ್ತ ಎರಡರಷ್ಟಾದರೂ ಅಚ್ಚರಿ ಪಡಬೇಕಾಗಿಲ್ಲ. ಹೀಗಿರುವಾಗ 2012 ಕ್ಕೆ ಆದ ಒಪ್ಪಂದದ ಪ್ರಕಾರ 570 ಕೋಟಿಯ ರಫೆಲ್ 2018 ರಲ್ಲಿ ಕನಿಷ್ಠಪಕ್ಷ 1000 ಕೋಟಿ ರೂಪಾಯಿಯಾದರೂ ಇರಬೇಕು. 2000 ಕೋಟಿಯ ಫುಲ್ಲಿ ಲೋಡಡ್ ರಫೆಲ್ ಈಗ 4000 ಕೋಟಿಯಾದರೂ ಆಗಬೇಕು. ಆದರೆ ಮೋದಿ ಅದನ್ನು 1600 ಕೋಟಿಗೆ ಇಳಿಸಿದ್ದರು.

ಇಷ್ಟಕ್ಕೂ ನರೇಂದ್ರಮೋದಿಯವರು ಹೊಸ ಕಾನೂನುಗಳನ್ನು ರಚಿಸಿ ಒಪ್ಪಂದ ಮಾಡಿಕೊಂಡಿರಲಿಲ್ಲ. 2013 ರ ಡಿಫೆನ್ಸ್ ಪ್ರಕ್ಯೂರ್ಮೆಂಟ್ ಪ್ರೊಸೀಜರ್ ನಿಯಮಗಳ ಆಧಾರದ ಮೇಲೆಯೇ ಒಟ್ಟಾರೆ ಒಪ್ಪಂದಗಳನ್ನು ಮಾಡಿಸಿದ್ದರು. ಅದಕ್ಕೇ ಕಾಂಗ್ರೆಸ್ಸೂ ಕೂಡ ವಿಮಾನಗಳ ಬೆಲೆಯ ಕುರಿತಂತೆ ಮಾತನಾಡುತ್ತಿದೆಯೇ ಹೊರತು ಒಪ್ಪಂದದಲ್ಲಿ ಹಗರಣವಾಗಿದೆ ಎಂದು ಹೇಳಲು ಧೈರ್ಯವೇ ತೋರುತ್ತಿಲ್ಲ. ಮತ್ತು ಈ ಒಪ್ಪಂದ ನಡೆದಿರುವುದು ಎರಡು ಸಕರ್ಾರಗಳ ನಡುವೆ ಆದ್ದರಿಂದ ಇಲ್ಲಿ ಮಧ್ಯವತರ್ಿಗೂ ಅವಕಾಶವಿರಲಿಲ.್ಲ ನಿಯಮದ ಪ್ರಕಾರ ಹೊಸ ಟೆಂಡರ್ ಕರೆಯಬೇಕಾದ ಅಗತ್ಯವೂ ಇರಲಿಲ್ಲ. ಮೋದಿ ಅದೆಷ್ಟು ಪ್ರಾಮಾಣಿಕವಾದ ಮತ್ತು ಪಾರದರ್ಶಕವಾದ ಒಪ್ಪಂದವನ್ನು ಮಾಡಿಕೊಂಡಿದ್ದಾರೆಂದರೆ ಎನ್ಸಿಪಿಯ ಮುಖ್ಯಸ್ಥರೂ ಮತ್ತು ಹಿಂದೊಮ್ಮೆ ರಕ್ಷಣಾ ಸಚಿವರೂ ಆಗಿದ್ದ ಶರತ್ ಪವಾರ್ ‘ಮೋದಿಯನ್ನು ಭ್ರಷ್ಟರೆಂದರೆ ಜನ ಒಪ್ಪಲಾರರು. ಈ ಒಪ್ಪಂದವನ್ನು ವಿವರಿಸುವಲ್ಲಿ ಅವರ ಮಂತ್ರಿಗಳು ಸೋತಿರಬಹುದು ನಿಜ. ಆದರೆ ಇದರಲ್ಲಿ ಭ್ರಷ್ಟತೆಯಂತೂ ಇಲ್ಲ’ ಎಂದು ಬಲು ಸ್ಪಷ್ಟವಾಗಿ ಹೇಳಿದ್ದಾರೆ. ಸ್ವತಃ ಫ್ರಾನ್ಸಿನ ಅಧ್ಯಕ್ಷ ಮಾಕ್ರಾನ್ ಈ ಒಪ್ಪಂದದ ಬಗ್ಗೆ ಮಾತನಾಡುತ್ತಾ ಮೋದಿಯವರ ದೂರದಶರ್ಿತ್ವವನ್ನು ಬಾಯ್ತುಂಬ ಹೊಗಳಿದ್ದಾರೆ.

3

ನಿಂತ ನೆಲ ಕುಸಿಯುತ್ತಿದೆ ಎನಿಸಿದಾಗಲೇ ಕಾಂಗ್ರೆಸ್ಸು ಈ ಒಪ್ಪಂದದಲ್ಲಿ ರಿಲಯನ್ಸ್ ಅನ್ನು ಎಳೆದುಕೊಂಡು ಬಂದಿದ್ದು. ಅವರು ಮಾಡಿರುವ ಅಪಪ್ರಚಾರ ಹೇಗಿದೆ ಎಂದರೆ ರಫೆಲ್ ವಿಮಾನಗಳನ್ನೇ ನಿಮರ್ಾಣ ಮಾಡಿಕೊಡುವ ಗುತ್ತಿಗೆ ರಿಲಯನ್ಸ್ಗೆ ಸಿಕ್ಕಂತಿದೆ. ವಾಸ್ತವವಾಗಿ ಪ್ರತಿಯೊಂದು ಶಸ್ತ್ರಾಸ್ತ್ರ ಖರೀದಿಯ ಒಪ್ಪಂದದಲ್ಲೂ ಒಂದು ಆಫ್ಸೆಟ್ ಕ್ಲಾಸ್ ಇರುತ್ತದೆ. ಶಸ್ತ್ರಾಸ್ತ್ರ ಖರೀದಿಯ ನಂತರ ಪೂರೈಕೆದಾರ ರಾಷ್ಟ್ರಗಳು ಈ ಹಣದ ಒಂದಷ್ಟು ಪಾಲನ್ನು ಖರೀದಿ ಮಾಡಿದ ರಾಷ್ಟ್ರದಲ್ಲೇ ಮತ್ತೆ ಹೂಡಬೇಕು. ಆ ಮೂಲಕ ಆಯಾ ರಾಷ್ಟ್ರಗಳಲ್ಲಿ ಶಸ್ತಾಸ್ತ್ರ ನಿಮರ್ಾಣದ ತಂತ್ರಜ್ಞಾನದ ಅಭಿವೃದ್ಧಿಗೆ ಬೆಂಬಲವಾಗಿ ನಿಲ್ಲಬೇಕು. ಇದು ಉದ್ಯೋಗ ಸೃಷ್ಟಿಯ ದೃಷ್ಟಿಯಿಂದಲೂ ಬಲುದೊಡ್ಡ ಹೊಣೆಗಾರಿಕೆ. ಈ ಒಪ್ಪಂದವೂ ಹಾಗೆಯೇ ಇದೆ. ದಸಾಲ್ಟ್ ತಾನು ಪಡೆದಿರುವ ಹಣದ 30 ಪ್ರತಿಶತ ಅಂದರೆ ಸರಿಸುಮಾರು 20,000 ಕೋಟಿ ರೂಪಾಯಿಯನ್ನು ಮರಳಿ ಭಾರತದಲ್ಲೇ ಹೂಡಿಕೆ ಮಾಡಬೇಕು. ಈ ಹೂಡಿಕೆಗೆಂದು ಅದು ಒಟ್ಟಾರೆ 72 ಕಂಪನಿಗಳನ್ನು ಆಯ್ದುಕೊಂಡಿದೆ. ಅವುಗಳಲ್ಲಿ ಮಹೀಂದ್ರ, ಗಾದ್ರೇಜ್, ಎಲ್ ಆಂಡ್ ಟಿ, ಟಾಟಾ ಮತ್ತು ರಿಲಯನ್ಸ್ಗಳಲ್ಲದೇ ಸಕರ್ಾರಿ ಸ್ವಾಮ್ಯದ ಡಿಆರ್ಡಿಒ ಕೂಡ ಸೇರಿದೆ. ಒಂದು ಅಂದಾಜಿನ ಪ್ರಕಾರ ಹೂಡಿಕೆಯ ಬಹುದೊಡ್ಡ ಮೊತ್ತ, ಸುಮಾರು 9000 ಕೋಟಿ ರೂಪಾಯಿ ಡಿಆರ್ಡಿಒಗೆ ಮರಳಿ ಬರಲಿದೆ. ರಿಲಯನ್ಸ್ಗೆ ಸಿಗಬಹುದಾದ ಒಟ್ಟಾರೆ ಗುತ್ತಿಗೆಯ ಹಣ 200 ದಶಲಕ್ಷ ಡಾಲರ್ಗಳನ್ನು ಮೀರದು ಎಂಬುದು ತಜ್ಞರ ಅಭಿಪ್ರಾಯ. ರಿಲಯನ್ಸ್ಗೆ ಶಸ್ತ್ರಾಸ್ತ್ರಗಳ ನಿಮರ್ಾಣದ ಅನುಭವವೇ ಇಲ್ಲ ಎಂಬುದು ಕಾಂಗ್ರೆಸ್ಸಿನ ಮತ್ತು ಬಿಜೆಪಿಯಿಂದ ಮುನಿಸಿಕೊಂಡಿರುವ ಅರುಣ್ಶೌರಿಯಂಥವರ ವಾದ. ಆದರೆ ಪಿಪಾವಾವ್ ಶಿಪ್ಯಾಡರ್್ ಲಿಮಿಟೆಡ್ ಅನ್ನು 2015 ರಲ್ಲಿ ಕೊಂಡುಕೊಳ್ಳಲು ಆರಂಭಿಸಿದ ರಿಲಯನ್ಸ್ ಒಂದೇ ವರ್ಷದ ವೇಳೆಗೆ ಅದರಲ್ಲಿ ತನ್ನ ಶೇರನ್ನು ಸಾಕಷ್ಟು ವಿಸ್ತರಿಸಿಕೊಂಡು ಅನಿಲ್ ಅಂಬಾನಿಯೇ ಚೇರ್ಮನ್ ಕೂಡ ಆದರು. ಈ ಪಿಪಾವಾವ್ ಜಗತ್ತಿನ ಅತ್ಯಂತ ದೊಡ್ಡ ಡ್ರೈಡಾಕ್ ಅನ್ನು ಹೊಂದಿರುವುದಲ್ಲದೇ ಯುದ್ಧ ನೌಕೆಗಳನ್ನು ತಯಾರಿಸುವ ಗುತ್ತಿಗೆಯನ್ನೂ ಪಡೆಯುತ್ತಿತ್ತು. 2017 ರಲ್ಲಿ ರಿಲಯನ್ಸ್ ಡಿಫೆನ್ಸ್ನೊಂದಿಗೆ ಅಮೇರಿಕಾದ ನೌಕಾಸೈನ್ಯ ಒಪ್ಪಂದ ಮಾಡಿಕೊಂಡು ಏಷ್ಯಾದ ಭಾಗದಲ್ಲಿರುವ ತನ್ನ ನೌಕೆಗಳ ಮರಮ್ಮತ್ತು ಮಾಡುವ 15,000 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ಇದೇ ಕಂಪನಿಗೆ ನೀಡಿತ್ತು. ಸಚಿ, ಶೃತಿ ಎಂಬ ಎರಡು ಗಸ್ತು ಹಡಗುಗಳನ್ನು ನಿಮರ್ಿಸಿ ನೌಕಾಸೇನೆಗೆ ಸಮಪರ್ಿಸಿತ್ತು. ಇದಕ್ಕಿಂತಲೂ ಹೆಚ್ಚಿನ ಅನುಭವ ಬೇಕೆಂದರೆ ಮತ್ತಿನ್ನೇನು ಹೇಳಬೇಕು. ಇಷ್ಟೆ ಅಲ್ಲ, 2015 ರಲ್ಲಿ ಯುದ್ಧ ವಿಮಾನಗಳ ಎಂಜಿನ್ ನಿಮರ್ಿಸುವ ಸಫ್ರಾನ್ ಎನ್ನುವ ಕಂಪೆನಿ ಹೆಚ್ಎಎಲ್ನೊಂದಿಗೆ ಒಪ್ಪಂದ ಮಾಡಿಕೊಂಡು ಎಂಜಿನ್ನುಗಳ ಬಿಡಿ ಭಾಗ ತಯಾರಿಸುವ ಗುತ್ತಿಗೆ ನೀಡಿತ್ತು. ಇವೆಲ್ಲವೂ ಈ ಖರೀದಿಯ ಅಂಗವಾಗಿಯೇ ಬಂದಿರುವಂಥದ್ದು.

4

ನರೇಂದ್ರಮೋದಿ ಭಾರತವನ್ನು ಶಸ್ತ್ರ ನಿಮರ್ಾಣ ಮಾಡುವ ರಾಷ್ಟ್ರವಾಗಿಸಲು ಸಾಕಷ್ಟು ಹಾತೊರೆಯುತ್ತಿದ್ದಾರೆ. ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ. ಸಿಕ್ಕಿದ್ದೆಲ್ಲ ಬಡಬಡಾಯಿಸುವ ರಾಹುಲ್ ಊರ ತುಂಬಾ ರಫೆಲ್ನ ವಿರುದ್ಧವಾಗಿ ಮಾತನಾಡುತ್ತ ಸೈನ್ಯವನ್ನು ಬಡವಾಗಿಸುವ ಧಾವಂತದಲ್ಲಿ ಇದ್ದಾರೆ. ಜನ ಮಾತ್ರ ದೂರದಲ್ಲೇ ಕುಳಿತು ಎಲ್ಲವನ್ನೂ ಮೌನವಾಗಿ ಗಮನಿಸುತ್ತಿದ್ದಾರೆ. ಸರಿಯಾದ ಸಮಯಕ್ಕೆ ಖಂಡಿತ ಉತ್ತರಿಸುತ್ತಾರೆ.

ಸರಕಾರವನ್ನು ಪ್ರಶ್ನಿಸುವ ಅಧಿಕಾರ ಮತ್ತೊಮ್ಮೆ ನವೀಕರಣವಾಯ್ತು

ಸರಕಾರವನ್ನು ಪ್ರಶ್ನಿಸುವ ಅಧಿಕಾರ ಮತ್ತೊಮ್ಮೆ ನವೀಕರಣವಾಯ್ತು

ಈ ಬಾರಿ ಮೂರೂ ಪಕ್ಷಗಳು ಪ್ರಣಾಳಿಕೆಯನ್ನು ಸಿದ್ಧ ಪಡಿಸುವಲ್ಲಿ ವ್ಯಯಿಸಿರುವ ಶ್ರಮವನ್ನು ಕಂಡರೆ ಅಚ್ಚರಿಯಾದೀತು. ಕಾಂಗ್ರೆಸ್ಸಿನ ಪ್ರಣಾಳಿಕೆಯನ್ನು ಐಎಎಸ್ ಅಧಿಕಾರಿಗಳೇ ನಿಮರ್ಿಸಿರುವಂತೆ ಕಾಣುತ್ತದೆ. ನಿಯಮಗಳ ಪುಸ್ತಕದಿಂದ ಹೆಕ್ಕಿ ತೆಗೆದ ಸಾಲುಗಳನ್ನು ಜೋಡಿಸಿ ನಿಮರ್ಿಸಿರುವ ಮ್ಯಾನಿಫೆಸ್ಟೊ ಅದು. ಈ ನಿಟ್ಟಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ಗಳು ಸಾಕಷ್ಟು ಪ್ರಯತ್ನ ಹಾಕಿವೆ. ಚುನಾವಣೆ ಮುಗಿದು ಅಧಿಕಾರಕ್ಕೆ ಯಾರಾದರೂ ಬರಲಿ. ಆದರೆ ಮೂರೂ ಪಕ್ಷಗಳ ಈ ಪ್ರಣಾಳಿಕೆಯನ್ನು ಪ್ರಜ್ಞಾವಂತರೆನಿಸಿಕೊಂಡವರು ಒಮ್ಮೆ ಓದಲೇಬೇಕು.

ಅಂತೂ ಚುನಾವಣೆ ಮುಗಿದೇ ಹೋಯ್ತು! ಸುಮಾರು 40 ದಿನಗಳ ಕಾಲ ಅಭ್ಯರ್ಥಿಯ ಘೋಷಣೆಯಿಂದ ಹಿಡಿದು ಎಕ್ಸಿಟ್ ಪೋಲ್ಗಾಗಿ ಕಾಯುವವರೆಗೂ ಅದೊಂದು ವಿಚಿತ್ರವಾದ ಬೇನೆ. ಇನ್ನೆರಡು ದಿನಗಳಂತೂ ಅಭ್ಯಥರ್ಿಗಳ ಪಾಲಿಗಷ್ಟೇ ಅಲ್ಲ, ಅವರ ಬೆಂಬಲಿಗರ ಪಾಲಿಗೂ ಹೆರಿಗೆಯ ನೋವೇ. ಗೆದ್ದವರು ಮೆರೆಯೋದು, ಸೋತವರು ಕೊರಗೋದು ಫಲಿತಾಂಶ ಬಂದ ಒಂದು ವಾರದ ನಂತರವೂ ಇರುತ್ತದೆ. ಆದರೆ ಏನೇ ಹೇಳಿ ಪ್ರಜಾಪ್ರಭುತ್ವವೆಂಬುದೊಂದು ಸುಂದರವಾದ ಅಸ್ತ್ರ; ಇದು ಘಾತಕವೂ ಹೌದು. ಅಪ್ಪ ಆಳಿದ ಮಾತ್ರಕ್ಕೆ ಮಗನೂ ಆಳಲೇಬೇಕೆಂಬ ನಿಯಮ ಇಲ್ಲಿಲ್ಲ. ಸಾಮಾನ್ಯ ಟೀ ಮಾರುವವನೂ ಕೂಡ ದೇಶದ ಚುಕ್ಕಾಣಿ ಹಿಡಿಯಬಲ್ಲನೆಂಬುದು ಪ್ರಜಾಪ್ರಭುತ್ವ ಕೊಟ್ಟಿರುವ ಬಲು ದೊಡ್ಡ ಕೊಡುಗೆಯೇ. ನರೇಂದ್ರಮೋದಿ ಸಂಸತ್ತಿನ ದ್ವಾರದೆದುರು ನಿಂತು ಹೊಸ್ತಿಲಿಗೆ ಪ್ರಣಾಮ ಮಾಡಿದರಲ್ಲ ಅದರ ನಿಜವಾದ ಮೌಲ್ಯ ಅರ್ಥವಾಗೋದೇ ಈಗ. ಈ ಪ್ರಜಾಪ್ರಭುತ್ವ ಸ್ಥಾಪಿತವಾಗಿರುವಂತಹ ಎಲ್ಲ ಹಳೆಯ ಆಲೋಚನೆಗಳನ್ನು ಕಿತ್ತೊಗೆಯಬಲ್ಲುದು ಮತ್ತು ಹೊಸದಾದ ಧನಾತ್ಮಕವಾದ ಆಲೋಚನೆಗಳಿಗೆ ನೀರೆರೆದು ಪೋಷಿಸಬಲ್ಲುದು. ತಾನೇ ನೀರೆರೆದು ಬೆಳೆಸಿದ ಗಿಡ ವಿಷದ ಗಾಳಿಯುಗುಳುತ್ತಿದೆ ಎಂದೆನಿಸಿದಾಗ ಮುಲಾಜಿಲ್ಲದೇ ಅದನ್ನು ಕಡಿದು ಬಿಸಾಡಲೂಬಲ್ಲುದು. ಮೋದಿಯಂತಹ ಯಾರಿಂದಲೂ ಸೋಲಿಸಲಾಗದ ವ್ಯಕ್ತಿಯ ಎದುರೇ ದೆಹಲಿಯಲ್ಲಿ ಕೇಜ್ರಿವಾಲ್ ಗೆದ್ದು ಬೀಗಿದ್ದು ಇದೇ ಪ್ರಜಾಪ್ರಭುತ್ವದ ಶಕ್ತಿ. ಹಾದರ್ಿಕ್ ಪಟೇಲ್ ಹತ್ತಾರು ಸಾವಿರ ಜನರ ಮಹಾ ಸಭೆಗಳನ್ನು ನಡೆಸಿಯೂ ಸೋತು ಸುಣ್ಣವಾಗಿದ್ದು ಪ್ರಜಾಪ್ರಭುತ್ವದ ವೈಭವವೇ!
ಹಾಗೆ ನೋಡಿದರೆ ಭಾರತ ಈಗೀಗ ಈ ಪ್ರಭುತ್ವದ ಮಹತ್ವವನ್ನು ಅರಿಯಲಾರಂಭಿಸಿದೆ. ಮತದಾನದ ಮೌಲ್ಯ ಅದೇನೆಂಬುದು ಪ್ರತಿಯೊಬ್ಬನಿಗೂ ಅರ್ಥವಾಗುತ್ತಿದೆ. ಇಂದಿರಾಗಾಂಧಿಯ ಫೋಟೊ ನೋಡಿಯೇ ವೋಟು ಹಾಕುವ ಕಾಲವಿತ್ತು. ಹಸ್ತವನ್ನು ಕಂಡು ಭವಿಷ್ಯವನ್ನು ಸರಿಯಾಗಿ ಹೇಳುತ್ತಿದ್ದರೋ ಇಲ್ಲವೋ ಆದರೆ ಮತಗಟ್ಟೆಯಲ್ಲಿ ಸೀಲನ್ನಂತೂ ಭದ್ರವಾಗಿಯೇ ಒತ್ತುತ್ತಿದ್ದರು. ಅಲ್ಲಿ ಬೇರೆ ಯಾವುದಕ್ಕೂ ಅವಕಾಶವೇ ಇರಲಿಲ್ಲ. ಅದು ಬ್ರಿಟೀಷರ ಆಳ್ವಿಕೆಯ ಕಾಲದ ಏಕ ಚಕ್ರಾಧಿಪತ್ಯದ ಹ್ಯಾಂಗ್ ಓವರ್. ನಿಶೆ ಈಗೀಗ ಸ್ವಲ್ಪ ಇಳಿಯುತ್ತಿದೆ. ಹಾಗಂತ ಅದು ಪೂತರ್ಿಯಾಗೇನು ಇಳಿದಿಲ್ಲ. ಇನ್ನೂ ಬಾಕಿ ಇದೆ.
ಕನರ್ಾಟಕದ ಚುನಾವಣೆಯನ್ನು ಹತ್ತಿರದಿಂದ ಗಮನಿಸಿದಾಗ ನಾವು ಸಾಗಬೇಕಾದ ದಾರಿ ಬಹಳ ದೂರವಿದೆ ಎಂಬುದು ಖಾತ್ರಿ. ಪ್ರಾಮಾಣಿಕನೊಬ್ಬ, ಸಭ್ಯನೊಬ್ಬ ರಾಜಕಾರಣ ಮಾಡುವುದು ಈಗಲೂ ಕಷ್ಟವೇ. ತನ್ನ ಬಳಿ ಖಚರ್ು ಮಾಡಲು ದುಡ್ಡೇ ಇಲ್ಲವೆಂದು ಹೇಳಿಯೇ ಪಕ್ಷವೊಂದರ ಟಿಕೇಟನ್ನು ಪಡೆಯಬಲ್ಲ ಸಾಮಥ್ರ್ಯ ಸದ್ಯಕ್ಕಂತೂ ಯಾರಿಗೂ ಇಲ್ಲ. ಅಥವಾ ಯಾವ ಪಕ್ಷಗಳೂ ಅಂಥವರನ್ನು ಗುರುತಿಸಲಾರದೆಂದರೆ ಸರಿಯಾಗಬಹುದೇನೋ. ಮಂಡ್ಯದಲ್ಲಿ ಶಿವಣ್ಣ ಎಂಬುವವರಿಗೆ ಬಿಜೆಪಿಯವರು ಟಿಕೇಟು ಕೊಟ್ಟಿದ್ದೊಂದೇ ಬಲು ವಿಶಿಷ್ಟವಾದ ಆಯ್ಕೆ. ಊರಿಗೆ ಊರೇ ಅವರ ಸಜ್ಜನಿಕೆಯನ್ನು ಕೊಂಡಾಡುವುದನ್ನು ಕೇಳಿದಾಗ ಅಚ್ಚರಿಯಾಗಿದ್ದು ನಿಜ. ಮುರಿದ ಮನೆ, ಬೆಟ್ಟದಷ್ಟು ಸಾಲ ಹಳೆಯದೊಂದು ಬುಲೆಟ್ಟು ಇವಿಷ್ಟಲ್ಲದೇ ಅವರ ಬಳಿ ಇದ್ದ ಆಸ್ತಿ ಜನರ ಪ್ರೀತಿಯೊಂದೇ. ಅವರು ಪ್ರಚಾರಕ್ಕೆ ಹೋಗುವಾಗ ಒಂದಷ್ಟು ಜನ ಅವರಿಗೇ ದುಡ್ಡು ಕೊಟ್ಟು ಇದನ್ನು ಬಳಸಿಕೊಳ್ಳಿ ಎಂದದ್ದನ್ನೂ ಕಂಡವರಿದ್ದಾರೆ! ಪ್ರಜಾಪ್ರಭುತ್ವದ ಈ ಒರೆಗಲ್ಲಿನಲ್ಲಿ ಅವರು ಅದೆಷ್ಟರಮಟ್ಟಿಗೆ ಸಫಲರಾಗುತ್ತಾರೋ ದೇವರೇ ಬಲ್ಲ. ಆದರೆ ಅಂಥವರೊಬ್ಬರಿದ್ದಾರೆ ಎಂಬುದೇ ಸಮಾಧಾನದ ಸಂಗತಿ. ಉಳಿದಂತೆ ಯಾವ ಪಕ್ಷಗಳಿಗೂ ಭ್ರಷ್ಟಾಚಾರದ ಬೇಲಿಯಿಲ್ಲ, ಮಾನಾವಮಾನಗಳ ಪ್ರಶ್ನೆಯಿಲ್ಲ; ಅಪ್ಪ-ಮಕ್ಕಳೆಂಬ ನೋವಿಲ್ಲ್ಲ. ಟಿಕೆಟ್ ಹಂಚಿಕೆಯಾಗುವ ವೇಳೆಗೆ ಎಲ್ಲವನ್ನೂ ಗಾಳಿಗೆ ತೂರಿಯೇ ಹಂಚಲಾಗಿದೆ. ಇದು ಮತದಾತನ ಪಾಲಿನ ದುದರ್ೈವ. ನೋಟಾಕ್ಕೆ ಒತ್ತಬೇಕೆನಿಸಿದರೂ ಅದಕ್ಕೆ ಯಾವ ಮೌಲ್ಯವೂ ಇಲ್ಲದಿರುವುದರಿಂದ ಸುಸ್ಥಿರ ಸಕರ್ಾರವನ್ನು ದೃಷ್ಟಿಯಲ್ಲಿರಿಸಿಕೊಂಡು ಅಯೋಗ್ಯನಾದರೂ ಸರಿ ಮತ ಹಾಕಬೇಕಾದ ಅನಿವಾರ್ಯತೆ ಇದ್ದೇ ಇದೆ. ಯಾವ ಪಕ್ಷ ಗೆದ್ದು ಅಧಿಕಾರ ಹಿಡಿದರೂ ಈ ಕುರಿತಂತೆ ಗಮನ ಹರಿಸಿ ಒಂದಷ್ಟು ಚೌಕಟ್ಟನ್ನು ತಮಗೆ ತಾವೇ ಹಾಕಿಕೊಳ್ಳದಿದ್ದರೆ ರಾಜಕೀಯವೆಂದರೆ ಅಸಹ್ಯವೆಂಬುವ ವಾತಾವರಣ ಇನ್ನಷ್ಟು ಕಾಲ ಮುಂದುವರೆಯುವುದು ಖಾತ್ರಿಯೇ.
ಹಾಗೆಂದ ಮಾತ್ರಕ್ಕೆ ಬದಲಾವಣೆ ತರಲು ಸಾಧ್ಯವೇ ಇಲ್ಲವೆಂದಲ್ಲ. ಕಳೆದ ಒಂದು ವರ್ಷದಿಂದ ನನ್ನ ಕನಸಿನ ಕನರ್ಾಟಕವೆಂಬ ಕಲ್ಪನೆಯನ್ನು ಹೊತ್ತು ವಿಕಾಸದ ವಿಭಿನ್ನ ಆಯಾಮಗಳನ್ನು ನಾವೊಂದಷ್ಟು ಜನ ಬಿತ್ತುತ್ತಲೇ ಸಾಗಿದ್ದೇವೆ. ಭಾರಿ ಜನ ಸಭೆಗಳಲ್ಲಿ ವಿಕಾಸದ ಪ್ರಶ್ನೆಗಳನ್ನು ಎತ್ತುವಂತೆ ಜನರನ್ನು ಭಡಕಾಯಿಸಿದ್ದೇವೆ. ಹಾಗಂತ ಇದು ಜಿಗ್ನೇಶ್, ಪ್ರಕಾಶ್, ಅಲ್ಪೇಶ್, ಹಾದರ್ಿಕ್ರಂತೆ ಜಾತಿ-ಜಾತಿಗಳ ನಡುವೆ ಕದನ ಹುಟ್ಟಿಸುವ, ಊರಿಗೆಲ್ಲ ಬೆಂಕಿ ಹಚ್ಚುವ ರೀತಿಯ ಭಡಕಾಯಿಸುವಿಕೆಯಲ್ಲ. ಬದಲಿಗೆ ವಿಕಾಸದ ಕುರಿತಂತೆ ತನ್ನ ಪ್ರತಿನಿಧಿಯನ್ನು ಪ್ರಶ್ನಿಸುವ ಆತ್ಮಸ್ಥೈರ್ಯವನ್ನು ತುಂಬುವ ಪ್ರಯತ್ನ. ಪ್ರಜಾಪ್ರಭುತ್ವದಲ್ಲಿ ವಿಕಾಸದ ಅಂಶವಿಲ್ಲದಿದ್ದರೆ ಅದು ರಾಜಪ್ರಭುತ್ವವೇ ಆಗಿಬಿಡುತ್ತದೆ. ಆಗಲೇ ಒಬ್ಬೊಬ್ಬರ ಘೋಷಿಸಬಹುದಾದ ಆಸ್ತಿಯೂ 5 ವರ್ಷದಲ್ಲೇ 100 ರಿಂದ 300 ಪಟ್ಟು ಹೆಚ್ಚಾಗೋದು.

1525783767_chart2

ನಮ್ಮ ಪ್ರಯತ್ನ ಖಂಡಿತವಾಗಿಯೂ ಕೆಲಸ ಮಾಡಿದೆ. ಚುನಾವಣೆಗೆ 6 ತಿಂಗಳ ಮುನ್ನ ರಾಜ್ಯದ ಮುಖ್ಯಮಂತ್ರಿ ಕನಸುಗಳ ಮಾತನಾಡಲಾರಂಭಿಸಿದ್ದರು. ನವ ಕನರ್ಾಟಕದ ಕಲ್ಪನೆಯನ್ನು ಹೊತ್ತು ಅಧಿಕಾರಿಗಳು ಜಿಲ್ಲಾಮಟ್ಟದ ಸಭೆಯನ್ನು ಕರೆಯಲಾರಂಭಿಸಿದ್ದರು. ಪ್ರಜ್ಞಾವಂತರು, ಅಧಿಕಾರಿಗಳು ಜೊತೆಗೆ ಕುಳಿತು ಕನರ್ಾಟಕದ ಭವಿಷ್ಯದ ರೂಪು-ರೇಷೆಗಳನ್ನು ತಯಾರಿಸುವಾಗ ಒಮ್ಮೆ ಅಚ್ಚರಿಗೊಳಗಾಗಿದ್ದು ನಿಜ. ಅದಾದ ಕೆಲವೇ ದಿನಗಳಲ್ಲಿ ಭಾಜಪ ಜಿಲ್ಲಾ ಮಟ್ಟದಲ್ಲಿ ಜನರ ಆಶೋತ್ತರಗಳನ್ನು ಸಂಗ್ರಹಿಸಿ ಪ್ರಣಾಳಿಕೆಯನ್ನು ರಚಿಸುವ ಮಾತನಾಡಿತು. ಜನತಾ ದಳವೂ ಕೂಡ ಈ ಧಾಟಿಯಲ್ಲಿ ಮಾತನಾಡಿದ್ದು ಖಂಡಿತವಾಗಿಯೂ ಆಶಾದಾಯಕ ಬೆಳವಣಿಗೆಯೇ ಆಗಿತ್ತು. ಕಾಂಗ್ರೆಸ್ಸಂತೂ ಒಂದು ಹೆಜ್ಜೆ ಮುಂದಿಟ್ಟು ಚುನಾವಣೆಗೆ ಎರಡು ತಿಂಗಳಿರುವಾಗ ಬೆಂಗಳೂರಿನಲ್ಲಿದ್ದ ಮಂತ್ರಿಗಳನ್ನು ಬೇರೆ-ಬೇರೆ ಜಿಲ್ಲಾ ಕೇಂದ್ರಗಳಿಗೆ ಕಳಿಸಿ ತರುಣರೊಂದಿಗೆ ಮಾತನಾಡಿಸುವ ಕನಸು ಕಟ್ಟಿಕೊಟ್ಟಿತು. ಒಂದೆರಡು ಕಡೆ ಈ ಟೌನ್ಹಾಲ್ ಸಭೆಗಳು ನಡೆದವೂ ಕೂಡ. ಆದರೆ ಜಾಗೃತ ಜನತೆ ಕೇಳಿದ ಪ್ರಶ್ನೆಗೆ ಉತ್ತರಿಸಲಾರದೇ ತಡಬಡಾಯಿಸಿದ ಮಂತ್ರಿ, ಮುಖ್ಯಮಂತ್ರಿಗಳು ಆ ಯೋಜನೆಯನ್ನೇ ಕೈಬಿಟ್ಟರು. ಇಷ್ಟೆಲ್ಲಾ ಆದ ನಂತರವೂ ಪ್ರಣಾಳಿಕೆಗಳು ಹೊರಬಂದಿದ್ದು ಮಾತ್ರ ಮತದಾನಕ್ಕೆ 8-10 ದಿನಗಳಿರುವಾಗಷ್ಟೇ. ವಾಸ್ತವವಾಗಿ ಚುನಾವಣೆ ನಡೆಯಬೇಕಿರೋದೇ ಹಳೆಯ ಸಾಧನೆ ಮತ್ತು ಹೊಸ ಕನಸುಗಳ ಆಧಾರದ ಮೇಲೆ. ನುಡಿದಂತೆ ನಡೆದಿದ್ದೇವೆ ಎಂಬ ಕಾಂಗ್ರೆಸ್ಸಿನ ಹೇಳಿಕೆಗಳಲ್ಲಿ ಎಷ್ಟು ಸತ್ಯವಿದೆ ಎಂಬುದನ್ನು ಪ್ರತಿಪಕ್ಷಗಳು ಒರೆಗೆ ಹಚ್ಚಬೇಕಿತ್ತು. ಮೂರೂ ಪಕ್ಷಗಳು ತಮ್ಮ ಪ್ರಣಾಳಿಕೆಯನ್ನು ಸಮಾಜದ ಮುಂದೆ ಮೂರು ತಿಂಗಳ ಮುಂಚೆಯಾದರೂ ಇಟ್ಟು ಆ ಕುರಿತಂತೆ ಸುದೀರ್ಘ ಚಚರ್ೆಯಾಗುವಂತೆ ನೋಡಿಕೊಳ್ಳಬೇಕಿತ್ತು. ಹಾಗಾಗಿದ್ದರೆ ಒಂದು ಪಾಸಿಟಿವ್ ಪ್ರಜಾಪ್ರಭುತ್ವದ ಕಲ್ಪನೆ ನಿಮರ್ಾಣಗೊಂಡಿರುತ್ತಿತ್ತು. ಮುಂದಿನ ಪೀಳಿಗೆಯಾದರೂ ಸರಿಯಾದ ದಿಸೆಯಲ್ಲಿ ಹೆಜ್ಜೆಯಿಟ್ಟಿರುತ್ತಿತ್ತು.
ಈ ಬಾರಿ ಮೂರೂ ಪಕ್ಷಗಳು ಪ್ರಣಾಳಿಕೆಯನ್ನು ಸಿದ್ಧ ಪಡಿಸುವಲ್ಲಿ ವ್ಯಯಿಸಿರುವ ಶ್ರಮವನ್ನು ಕಂಡರೆ ಅಚ್ಚರಿಯಾದೀತು. ಕಾಂಗ್ರೆಸ್ಸಿನ ಪ್ರಣಾಳಿಕೆಯನ್ನು ಐಎಎಸ್ ಅಧಿಕಾರಿಗಳೇ ನಿಮರ್ಿಸಿರುವಂತೆ ಕಾಣುತ್ತದೆ. ನಿಯಮಗಳ ಪುಸ್ತಕದಿಂದ ಹೆಕ್ಕಿ ತೆಗೆದ ಸಾಲುಗಳನ್ನು ಜೋಡಿಸಿ ನಿಮರ್ಿಸಿರುವ ಮ್ಯಾನಿಫೆಸ್ಟೊ ಅದು. ಈ ನಿಟ್ಟಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ಗಳು ಸಾಕಷ್ಟು ಪ್ರಯತ್ನ ಹಾಕಿವೆ. ಚುನಾವಣೆ ಮುಗಿದು ಅಧಿಕಾರಕ್ಕೆ ಯಾರಾದರೂ ಬರಲಿ. ಆದರೆ ಮೂರೂ ಪಕ್ಷಗಳ ಈ ಪ್ರಣಾಳಿಕೆಯನ್ನು ಪ್ರಜ್ಞಾವಂತರೆನಿಸಿಕೊಂಡವರು ಒಮ್ಮೆ ಓದಲೇಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಮಗೆ ಕೇಳಲು ಬಹಳ ಪ್ರಶ್ನೆಗಳಿಲ್ಲ. ಅಲ್ಪಸಂಖ್ಯಾತರ ಕುರಿತಂತೆ ದೃಢವಾದ ಕೆಲವು ಸಾಲುಗಳ ಹೊರತು ಪ್ರಣಾಳಿಕೆಯಲ್ಲಿ ಸಾಧನೆಗೈಯ್ಯುವ ಯಾವ ಭರವಸೆಯನ್ನೂ ಅವರು ಕೊಟ್ಟಿಲ್ಲ. ಭಾಜಪ ಲೋಡುಗಟ್ಟಲೆ ಭರವಸೆಯನ್ನು ಕೊಟ್ಟಿದೆ. ದೂರದೃಷ್ಟಿಯ ನಾಯಕನೊಬ್ಬ ಹಠ ಹಿಡಿದು ಅಷ್ಟನ್ನೂ ಸಾಧಿಸಿಬಿಟ್ಟನೆಂದರೆ ಆತ ಕನರ್ಾಟಕದ ಮೋದಿಯೇ ಆಗಿಬಿಡುತ್ತಾನೆ. ಈ ಪ್ರಣಾಳಿಕೆ ಸಾಮಾನ್ಯ ತಿರುಕನಿಂದು ಹಿಡಿದು ಸಾಫ್ಟ್ವೇರ್ ಇಂಜಿನಿಯರ್ವರೆಗೆ ಮಕ್ಕಳು, ಮಹಿಳೆ, ಆದಿವಾಸಿಗಳು, ಬೀಡಿ ಕಟ್ಟುವವರು, ವೃದ್ಧರು, ಕೈಲಾಗದವರು, ಎಲ್ಲರನ್ನೂ ತನ್ನೊಳಗೆ ಸೇರಿಸಿಕೊಂಡುಬಿಟ್ಟಿದೆ. ಈ ಬಾರಿ ಭಾಜಪ ಅಧಿಕಾರಕ್ಕೆ ಬಂದು 5 ವರ್ಷಗಳ ನಂತರದ ಚುನಾವಣೆಯಲ್ಲಿ ಅದನ್ನು ಮತ್ತೆ ಗೆಲ್ಲಿಸಲು ಅಥವಾ ಸೋಲಿಸಲು ಈ ಪ್ರಣಾಳಿಕೆಯೊಂದೇ ಸಾಕು.

JDS-Manifesto-2018-01-659x873
ಅಚ್ಚರಿಯಾಗುವಂತೆ ಆಸ್ಥೆ ವಹಿಸಿ ಕಾಂಗ್ರೆಸ್ಸಿಗಿಂತ ಸುಂದರವಾದ ಪ್ರಣಾಳಿಕೆಯನ್ನು ಕನ್ನಡಿಗರಿಗೆ ಕೊಟ್ಟಿರುವುದು ದಳ! ಕುಮಾರಸ್ವಾಮಿಯವರು ತಮ್ಮ ಇಸ್ರೇಲಿನ ಅನುಭವವನ್ನು, ಚೀನಾದಲ್ಲಿ ಕಂಡ ದೃಶ್ಯಗಳನ್ನು ಬಸಿದು ಈ ಪ್ರಣಾಳಿಕೆ ರಚಿಸಿದ್ದಾರೆ. ಕಾಂಗ್ರೆಸ್ಸು ಮುಸಲ್ಮಾನರಿಗೆ ಮತ್ತೆ ಉಚಿತ ಕೊಡುಗೆಗಳ ಮಾತನಾಡಿದ್ದರೆ, ಜೆಡಿಎಸ್ ಝಕಾತ್ ಫಂಡ್ನ ಕಲ್ಪನೆಯನ್ನು ಕಟ್ಟಿಕೊಟ್ಟು ಮುಸಲ್ಮಾನ್ ತರುಣರ ಕೈಗೆ ಕೆಲಸ ಕೊಡುವ ಮಾತನಾಡಿದೆ. ಹಾಗಂತ ಪ್ರಣಾಳಿಕೆಯಲ್ಲಿ ಹೇಳಿರುವುದನ್ನೆಲ್ಲಾ ಮಾಡುವುದು ದಳಕ್ಕೂ ಸುಲಭದ ಸಂಗತಿಯಲ್ಲ. ಅದಕ್ಕೂ ಸಾಹಸೀ ನೇತೃತ್ವವೇ ಬೇಕು. ಅಧಿಕಾರಕ್ಕೆ ಬಂದರೆ ತಮಗಿರುವ ಎಲ್ಲ ಮಿತಿಗಳನ್ನು ಮೀರಿ ಕುಮಾರಸ್ವಾಮಿಯವರು ಈ ಪ್ರಣಾಳಿಕೆಗಾಗಿ ಕಂಠಮಟ್ಟ ದುಡಿದರೆ ಕನರ್ಾಟಕದ ಪಾಲಿಗೆ ಅದೂ ಆನಂದಮಯವೇ. ಒಂದಂತೂ ಹೌದು. ದೇಶದಲ್ಲಿ ಯುವಕರು ತುಂಬಿ ತುಳುಕಾಡುತ್ತಿದ್ದಾರೆ. ಕನರ್ಾಟಕದಲ್ಲೂ ಅಷ್ಟೇ. ಕನಸನ್ನು ಕಟ್ಟುವ ಪ್ರಯತ್ನದಲ್ಲಿ ತರುಣರೆಲ್ಲ ಜೊತೆಯಾಗಿದ್ದಕ್ಕೆ ಪಕ್ಷಗಳ ಪ್ರಣಾಳಿಕೆಯಲ್ಲಿ ಇಷ್ಟೊಂದು ಬದಲಾವಣೆ ಬಂದಿದೆ. ಇನ್ನು ಯಾರೇ ಅಧಿಕಾರಕ್ಕೆ ಬಂದರೂ ಇದನ್ನೇ ಮುಂದಿಟ್ಟುಕೊಂಡು ತರುಣರೆಲ್ಲ ವಿಕಾಸದ ಹಾದಿಯಲ್ಲಿ ಪ್ರತಿನಿಧಿಗಳು ಹೆಜ್ಜೆಯಿಡುವಂತೆ ಕೈಯಲ್ಲಿ ಪ್ರಜಾಪ್ರಭುತ್ವದ ದಂಡ ಹಿಡಿದು ಕೂತರೇ, ಪ್ರತಿನಿಧಿ ಯಾರಾದರೂ ವಿಕಾಸ ಶತ ಪ್ರತಿಶತ ಖಚಿತ.
ಈ ಚುನಾವಣೆಯಲ್ಲಿ ಅನೇಕ ತರುಣರು ತಮ್ಮೂರಿಗೆ ಬಂದ ಶಾಸಕರನ್ನು ಪ್ರಶ್ನಿಸಿ ತಮ್ಮೂರಿನಲ್ಲಿ ನಿಂತೇ ಹೋಗಿರುವ ವಿಕಾಸದ ರೈಲಿನ ಕುರಿತಂತೆ ಗಮನ ಸೆಳೆದದ್ದು ಬಲು ವಿಶೇಷವಾಗಿತ್ತು. ಉತ್ತರಿಸಲಾಗದ ಪ್ರತಿನಿಧಿಗಳು ರೇಗಾಡಿ, ಕೂಗಾಡಿ ಓಡಿ ಹೋದದ್ದೂ ಭವಿಷ್ಯದ ದೃಷ್ಟಿಯಿಂದ ಆಶಾದಾಯಕವೇ. ಆದರೆ ತೃಪ್ತಿ ಖಂಡಿತ ಇಲ್ಲ. ಅಗಾಧ ಪ್ರಯತ್ನಗಳ ನಂತರವೂ ಈ ಚುನಾವಣೆಯಲ್ಲಿ ಹಣ ಹಂಚುವಿಕೆ ನಿಲ್ಲಲಿಲ್ಲ. ದೇಶ, ಧರ್ಮ, ಸಂಘಟನೆ, ವೈಯಕ್ತಿಕ ಪ್ರೀತಿ ಇವೆಲ್ಲವೂ ಬದಿಗೇ. ಚುನಾವಣೆಗೂ ಮುಂಚಿನ ಎರಡು ದಿನಗಳ ಕಾಲ ಹಣ, ಕುಕ್ಕರು, ಕಿವಿ ಓಲೆ, ಕಾಲ್ಚೈನು, ಸ್ಟೀಲ್ ಪಾತ್ರೆ, ಕ್ರಿಕೆಟ್ ಬ್ಯಾಟು ಇವೆಲ್ಲವುಗಳನ್ನು ಅನಾಮತ್ತಾಗಿ ಹಂಚಿದ್ದಾರೆ. ಎಲ್ಲ ಪಾಟರ್ಿಗಳ ಬಳಿ ಹಣವನ್ನು ತೆಗೆದುಕೊಂಡೇ ಮತ ಹಾಕುವ ಭರವಸೆ ನೀಡಲಾಗಿದೆ. ಕೆಲವೆಡೆಗಳಲ್ಲಿ ಇವಿಎಂ ನಲ್ಲಿ ಬಟನ್ ಒತ್ತಿದ ನಂತರ ಫೋಟೊ ತೆಗೆದು ಹಣ ಪಡೆಯಬೇಕೆಂಬ ನಿಯಮವನ್ನೂ ಹಾಕಿದ್ದರೆಂಬುದು ಬೆಳಕಿಗೆ ಬಂದಾಗ ಅಸಹ್ಯವೆನಿಸಿತು. ದೇಶಾದ್ಯಂಥ ಇಷ್ಟೆಲ್ಲಾ ಚುನಾವಣೆಗಳು ನಡೆದರೂ ಕನರ್ಾಟಕದ ಚುನಾವಣೆಯಲ್ಲಿಯೇ ಅತಿ ಹೆಚ್ಚು ಅಕ್ರಮಗಳು ಬಯಲಿಗೆ ಬಂದಿದ್ದು ದುರಂತಕಾರಿಯೇ ಸರಿ. ಐಟಿ ಅಧಿಕಾರಿಗಳು ಸುಮಾರು 150 ಕೋಟಿ ರೂಪಾಯಿಯಷ್ಟು ಹಣವನ್ನು ಜಫ್ತು ಮಾಡಿ ವಿಕ್ರಮ ಮೆರೆದರೇನೋ ನಿಜ. ಆದರೆ ಕನರ್ಾಟಕ ಪ್ರಜಾಪ್ರಭುತ್ವದ ಹಾದಿಯಲ್ಲಿ ಸೊರಗಿತ್ತು. ಎಚ್ಚೆತ್ತುಕೊಳ್ಳಬೇಕಾದ ಸಮಯ ಖಂಡಿತ ಬಂದಿದೆ. ನಮಗಿರಬೇಕಾದ್ದು ವಿಕಾಸದ ಗುರಿ ಮಾತ್ರ. ನಮ್ಮ ತಲಾ ಆದಾಯ ಹೆಚ್ಚಾದರೆ ಬದುಕು ಬಲು ಸುಂದರವಾಗುತ್ತದೆ. ಪ್ರತಿಯೊಬ್ಬರೂ ಆ ಕುರಿತಂತೆ ಆಲೋಚಿಸಬೇಕಾಗಿದೆಯೇ ಹೊರತು ಉಚಿತವಾದ ಕೊಡುಗೆಗಳಷ್ಟು ಸಿಕ್ಕವೆಂಬುದಕ್ಕಲ್ಲ. ನಾವು ಪಡೆದ ಪ್ರತಿಯೊಂದು ಉಚಿತ ಕೊಡುಗೆಗೂ ಮುಂದೊಂದು ದಿನ ನಾವೇ ಬೆಲೆ ತೆರಬೇಕೆಂಬುದನ್ನು ಮರೆಯಬೇಡಿ. ಇನ್ನು ಕೆಲವೇ ದಿನಗಳಲ್ಲಿ ಪದವೀಧರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಪದವಿ ಪಡೆದಿದ್ದಾರೆಂದರೆ ಪ್ರಜ್ಞಾವಂತರೆಂದೇ ಅರ್ಥ. ಹಾಗಂತ ಅಲ್ಲಿ ಹಣದ ಹೊಳೆ ಹರಿಯುವುದಿಲ್ಲವೆಂದು ಭಾವಿಸಿದರೆ ಅದು ಮಹಾ ತಪ್ಪು ಕಲ್ಪನೆ.
ಪ್ರಜಾಪ್ರಭುತ್ವದ ಮೊದಲ ಅರ್ಹತೆಯೇ ಸ್ವಾಭಿಮಾನ. ಆರಿಸಿದವ ನಾನೆಂಬ ಸಾತ್ವಿಕ ಅಹಂಕಾರ. ಅದನ್ನು ಕಳೆದುಕೊಂಡೊಡನೆ ಅದು ಮತ್ತೆ ರಾಜಪ್ರಭುತ್ವವೋ, ಸವರ್ಾಧಿಕಾರವೋ ಆಗಿಹೋಗುತ್ತದೆ. ನಾಳೆ ಫಲಿತಾಂಶ ಹೊರಬರಲಿದೆ. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಸರಿ. ಅವರು ಕೊಟ್ಟಿರುವ ಭರವಸೆಗಳನ್ನೇ ಮುಂದಿಟ್ಟುಕೊಂಡು ಅವರನ್ನು ಪ್ರಶ್ನಿಸುವ, ಎಡವಿದರೆ ಕಾಡುವ ಅಧಿಕಾರವನ್ನು ನಾವಂತೂ ಕಳೆದುಕೊಳ್ಳದಿರೋಣ. ಇನ್ನೈದು ವರ್ಷಗಳ ಕಾಲ ಪ್ರತಿಪಕ್ಷ ಇರುವುದೋ ಇಲ್ಲವೋ ಗೊತ್ತಿಲ್ಲ; ವಿಕಾಸದ ಹಾದಿಯಲ್ಲಿ ನಮ್ಮ ಕಣ್ಣುಗಳನ್ನು ಅಗಲಿಸಿಕೊಂಡು ಜಾಗೃತರಾಗಿದ್ದು ಸದೃಢ ಸುಂದರ ಕನರ್ಾಟಕಕ್ಕೆ ನಾವು ಪಣತೊಡೋಣ. ನನ್ನ ಕನಸಿನ ಕನರ್ಾಟಕ ನಾವೇ ನಿಮರ್ಿಸೋಣ.

ತಬಸ್ಸುಮ್ ಮೊದಲು ಹೆಣ್ಣು, ಆಮೇಲೆ ಮುಸ್ಲಿಮ್…

ಇತ್ತೀಚೆಗೆ ಮಂಗಳೂರಿನ ಹೆಣ್ಣುಮಗಳು ಸಬೀಹಾ ಬಾನು ನೈಜೀರಿಯಾದ ಅಬು ಬಕ್ರ್ ಅಲ್ ಮೌಮ್ ಅನ್ನು ಮದುವೆಯಾದಂತಹ ಚಿತ್ರಗಳು ಎಲ್ಲೆಡೆ ವ್ಯಾಪಕವಾಗಿ ಹರಡಿದ್ದವು. ವಿದೇಶದಿಂದ ಇಲ್ಲಿಗೆ ಬರುವ ಈ ವ್ಯಾಪಾರಿಗಳು ಇಲ್ಲಿನ ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳೊಂದಿಗೆ ತಾತ್ಕಾಲಿಕ ಮದುವೆ ಮಾಡಿಕೊಂಡು ತಮ್ಮ ವ್ಯಾಪಾರದ ಕಾಂಟ್ರಾಕ್ಟ್ ಮುಗಿದೊಡನೆ ತಲಾಕ್ ಕೊಟ್ಟು ತಮ್ಮ ದೇಶಕ್ಕೆ ಮರಳಿಬಿಡುತ್ತಾರೆ. ಆ ಹುಡುಗಿ ಮತ್ತೊಬ್ಬ ವ್ಯಾಪಾರಿಗೆ ಆಹಾರವಾಗಲು ಕಾಯುತ್ತಿರುತ್ತಾಳೆ. ಬಹಳ ಹಿಂದೆ ತಬಸ್ಸುಮ್ ಳ ವಿಚಾರವಾಗಿ ಬರೆದ ಲೇಖನ ಇದೇ ತರದ್ದು. ಮತ್ತೊಮ್ಮೆ ಶೇರ್ ಮಾಡುತ್ತಿದ್ದೇನೆ. ಅವಕಾಶವಾದಾಗ ಓದಿ.

ನೆಲದ ಮಾತು

ಈಗ ಸಜ್ಜನ ಮುಸಲ್ಮಾನರು ಜಾಗೃತಗೊಳ್ಳಬೇಕಿದೆ. ಬೀದಿಗೆ ಬರಬೇಕಿರೋದು ವಿಶ್ವರೂಪಮ್‌ನ ವಿಚಾರಕ್ಕೋ ದೂರದರ್ಶನದಲ್ಲಿ ಪ್ರಸಾರಗೊಂಡ ಹಂದಿಮಾಂಸದ ಅಡುಗೆಯ ವಿಚಾರಕ್ಕೋ ಅಲ್ಲ. ಹೊರಾಟ ನಡೀಬೇಕಿರೋದು ಇಂತಹ ವಿಚಾರಕ್ಕೆ.

ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಭಾರತ ಮತ್ತೆ ಸುದ್ದಿಯಾಗಿದೆ. ಖಂಡಿತವಾಗಿಯೂ ಒಳ್ಳೆಯ ವಿಚಾರಕ್ಕಾಗಿಯಲ್ಲ; ತೀರಾ ಕೆಟ್ಟ ವಿಚಾರಕ್ಕೆ. ಹದರಾಬಾದಿಗೆ ಆಫ್ರಿಕಾದ, ಈಜಿಪ್ಟಿನ ಮುಸ್ಲಿಮ್ ಪ್ರವಾಸಿಗರು ವಿಪರೀತ ಸಂಖ್ಯೆಯಲ್ಲಿ ಬರಲಾರಂಭಿಸಿದ್ದಾರೆ. ದೇಶ ಸುತ್ತಾಡುವ ನೆಪದಲ್ಲಿ ಬಂದು ಬಡ ಮುಸ್ಲಿಮ್ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಂಡು ಹೋಗುತ್ತಿದ್ದಾರೆ. ಆದರೆ ಇದು ದೀರ್ಘಕಾಲದ ಗಟ್ಟಿ ಮದುವೆಯಲ್ಲ; ಒಂದು ತಿಂಗಳ ಅವಧಿಯ ಲೈಂಗಿಕ ತೆವಲು ತೀರಿಸುವ ಕಾಂಟ್ರಾಕ್ಟ್ ಮದುವೆ!

ಮೊನ್ನೆ ಹದಿನೇಳು ವರ್ಷದ ನೌಶಿನ್ ತಬಸ್ಸುಮ್ ಇಂತಹಾ ಒಂದು ಗ್ಯಾಂಗಿನಿಂದ ತಪ್ಪಿಸಿಕೊಂಡು ಬಂದು ಪೊಲೀಸರೆದುರು ಕುಂತಾಗಲೇ ಸುದ್ದಿ ಬಯಲಿಗೆ ಬಂದಿದ್ದು. ಸೂಡಾನಿನ ನಲವತ್ತೊಂದು ವರ್ಷದ ವ್ಯಾಪಾರಿ ಒಂದು ಲಕ್ಷ ರೂಪಾಯಿಗೆ ಆಕೆಯನ್ನು ಮದುವೆಯಾಗಿದ್ದಾನೆ. ಒಪ್ಪಂದವೇ ಹಾಗಿದೆ. ಮದುವೆಯ ದಿನವೇ ತಲಾಖ್ ಪತ್ರಕ್ಕೂ ಸಹಿ ಹಾಕಬೇಕು. ಒಂದು ತಿಂಗಳ ಕಾಲ ಆತನ ಹೆಂಡತಿಯಾಗಿ ಸಹಕರಿಸಬೇಕು. ತನ್ನೂರಿಗೆ ಮರಳುವ ಮುನ್ನ ಆತ ಮೂರು ಬಾರಿ ’ತಲಾಖ್’ ಎಂದು ಹಾಸಿಗೆಯಿಂದಲೇ ನೇರವಾಗಿ ಏರ್‌ಪೋರ್ಟಿಗೆ ದೌಡಾಯಿಸುತ್ತಾನೆ. ಈನ ಹುಡುಗಿ ಮತ್ತೊಬ್ಬನಿಗಾಗಿ ಅಣಿಯಾಗಬೇಕು.

ಸಾಂದರ್ಭಿಕ ಚಿತ್ರ ಸಾಂದರ್ಭಿಕ ಚಿತ್ರ

ತಬಸ್ಸುಮ್‌ನ ಕಥೆಯ ಜಾಡು ಹಿಡಿದು ಹೊರಟ ಪೊಲೀಸರಿಗೆ ಗಾಬರಿ ಹುಟ್ಟಿಸುವಂತಹ ಸತ್ಯಗಳು ಕಂಡಿವೆ. ಹೈದರಾಬಾದ್‌ನಲ್ಲಿ ತಿಂಗಳಿಗೆ ಏನಿಲ್ಲವೆಂದರೂ ಕನಿಷ್ಠ ಇಂತಹ ಹದಿನೈದು ಮದುವೆಗಳು ನಡೆಯುತ್ತವಂತೆ. ಈ ಕುಟುಂಬಗಳು ಅತ್ಯಂತ ದಾರಿದ್ರ್ಯದಲ್ಲಿವೆ ಮತ್ತು ಇಲ್ಲಿನ ಹೆಣ್ಣುಮಕ್ಕಳು ಬಲು ಸುಂದರಿಯರೆಂಬ ಕಾರಣಕ್ಕೆ ಸಿರಿವಂತ ಮುಸಲ್ಮಾನರು ಇಲ್ಲಿಗೆ ಬರುತ್ತಾರಂತೆ. ಸೂಡಾನಿನಲ್ಲಿ ಒಂದು…

View original post 630 more words