Category: ವಿಶ್ವಗುರು

ಮಹಿಳಾವಾದಕ್ಕೊಂದು ಭಾರತೀಯ ಸ್ಪರ್ಶ!

ಮಹಿಳಾವಾದಕ್ಕೊಂದು ಭಾರತೀಯ ಸ್ಪರ್ಶ!

ಮಹಿಳಾವಾದದ ಭಾರತೀಯ ಚಿಂತನೆಗೆ ನಿವೇದಿತಾ ಕೊಟ್ಟ ವ್ಯಾಖ್ಯೆ ಬಲು ಸುಂದರವಾದುದು. ಅದು ದಾರಿ ತಪ್ಪಿರುವ ರೀತಿ ಅದನ್ನು ಮತ್ತೆ ಹಳಿಗೆ ತರುವ ಮಾರ್ಗ ಎಲ್ಲವನ್ನೂ ಆಕೆ ವಿಷದವಾಗಿ ಹೇಳಿಕೊಟ್ಟಿದ್ದಾಳೆ. ತಿಳಿಯುವ ಸೂಕ್ಷ್ಮಮತಿ ನಮಗೆ ಬೇಕಷ್ಟೇ. ಇದನ್ನರಿತು ಅಂತಹ ಸ್ತ್ರೀವಾದವನ್ನು ಪ್ರತಿಪಾದಿಸುವ ಮಹಿಳೆಯರ ಸಂಖ್ಯೆ ಇಂದು ಹೆಚ್ಚಬೇಕಾಗಿದೆ.

ಭಾರತೀಯ ಸಂಸ್ಕೃತಿಯ ಆಳ ವಿಸ್ತಾರಗಳನ್ನು ಸುಲಭದ ಪೆಟ್ಟಿಗೆ ಅರ್ಥ ಮಾಡಿಕೊಳ್ಳುವುದು ಕಷ್ಟ. ಈ ಸಂಸ್ಕೃತಿ ಒಂದೆರಡು ವರ್ಷಗಳ ಚಟುವಟಿಕೆಗಳ ಸಂಗ್ರಹವಲ್ಲ. ಅದು ಸಹಸ್ರಾರು ವರ್ಷಗಳ ಘನೀಭವಿಸಿದ ನವನೀತ. ಈಗಲೂ ಊರ ತುಂಬಾ ಈ ಸಂಸ್ಕೃತಿ-ಪರಂಪರೆಗಳನ್ನು ವ್ಯಂಗ್ಯ ಮಾಡುತ್ತಾ, ಅವಹೇಳನಕಾರಿಯಾಗಿ ಬೈಯ್ಯುತ್ತಾ ತಿರುಗಾಡುವ ಬುದ್ಧಿಜೀವಿಗಳು ಕಾಣುತ್ತಾರಲ್ಲ ಅವರಿಗೆ ಈ ರಾಷ್ಟ್ರದ ಅಂತಃಸತ್ವದ ದರ್ಶನ ಆಗೇ ಇಲ್ಲ ಅಂತ. ನಾವೂ ಅನೇಕ ಬಾರಿ ಗೌರವ ಇಟ್ಟುಕೊಂಡೇ ಈ ಸಂಸ್ಕೃತಿಯ ನ್ಯೂನತೆಗಳನ್ನು ಎತ್ತಿ ತೋರುವ ತಥಾಕಥಿತ ಪ್ರಗತಿಗಾಮಿ ವ್ಯಕ್ತಿತ್ವ ತೋರ್ಪಡಿಸುತ್ತೇವಲ್ಲ; ನಮಗೂ ದರ್ಶನವಾಗಿದ್ದು ಸೊನ್ನೆಯೇ. ನಿಜವಾದ ಭಾರತವನ್ನು ಅರಿತ ಅಪರೂಪದ ಹೆಣ್ಣುಮಗಳು ಮಾತ್ರ ನಿವೇದಿತೆಯೇ. ಬಹುಶಃ ವಿವೇಕಾನಂದರಂತಹ ಗುರುವಿದ್ದುದರ ಲಾಭವಿರಬೇಕು ಅದು.ಆಕೆಯ ಗ್ರಹಿಕೆ ಅಸಾಧಾರಣವಾದುದು. ಸಾವಿರಾರು ವರ್ಷಗಳ ಈ ಪರಂಪರೆಯನ್ನು ಆಕೆ ಅರ್ಥೈಸಿಕೊಂಡ ರೀತಿ, ಅದಕ್ಕೆ ತೆಗೆದುಕೊಂಡ ಅತ್ಯಲ್ಪ ಸಮಯ ಎರಡೂ ಅಚ್ಚರಿಯೇ. ಈ ಹಿಂದೆಯೇ ಕಾಳಿಯ ಕುರಿತಂತೆ ಆಕೆಯ ಕಲ್ಪನೆಗಳು, ದರ್ಶನಗಳನ್ನು ಈ ಲೇಖನಮಾಲೆಯಲ್ಲಿ ವಿವರಿಸಿದ್ದೆ. ಈ ಬಾರಿ ಇನ್ನೊಂದಷ್ಟನ್ನು.

1902 ರ ಫೆಬ್ರುವರಿಯಲ್ಲಿ ಮದ್ರಾಸಿನ ಮಹಾಜನಾ ಸಭೆಯಲ್ಲಿ ನಿವೇದಿತಾ ಮಾಡಿದ ಭಾಷಣದ ವಿಷಯವೇನು ಗೊತ್ತೇ? ‘ಭಾರತ ಯಾರಿಗೂ ಕ್ಷಮೆ ಕೇಳಬೇಕಿಲ್ಲ’ ಅಂತ. ಈ ಭಾಷಣವನ್ನು ‘ನಿಮ್ಮ ಧರ್ಮದಲ್ಲಿ ಪಶ್ಚಿಮದವರಿಂದ ಕಲಿಯುವುದಕ್ಕಿಂತ ಅವರಿಗೆ ಕೊಡುವುದಕ್ಕೇ ಸಾಕಷ್ಟಿದೆ. ಸಾಮಾಜಿಕ ಸಂಗತಿಗಳಲ್ಲೂ ಅಷ್ಟೇ. ಹೊರಗಿನವರು ನಿಮಗೆ ಸಲಹೆ ಕೊಡುವ ಯಾವ ಅಗತ್ಯವೂ ಇಲ್ಲ, ಬೇಕಾದ ಬದಲಾವಣೆಗಳನ್ನು ಮಾಡಿಕೊಳ್ಳಲು ನೀವೇ ಸಮರ್ಥರಿದ್ದೀರಿ.’ ಎಂತಲೇ ಶುರುಮಾಡಿದವಳು ಆಕೆ. ಮುಂದುವರಿದು ‘ಏನೆಂದುಕೊಂಡಿರುವಿರಿ! ಮೂರು ಸಾವಿರ ವರ್ಷಗಳ ನಾಗರಿಕತೆ ಅಂದರೆ ಬೆಲೆಯೇ ಇಲ್ಲವೇನು, ಇತ್ತೀಚೆಗೆ ಹುಟ್ಟಿದ ಪಶ್ಚಿಮದ ರಾಷ್ಟ್ರಗಳು ಪೂರ್ವದಲ್ಲಿರುವ ಈ ಪ್ರಾಚೀನ ನಾಗರಿಕತೆಯ ಜನರನ್ನು ಮುನ್ನಡೆಸಬೇಕೇನು?’ ಎಂದು ಪ್ರಶ್ನಿಸುವಾಗ ಎದುರಿಗಿದ್ದವರಿಗೆ ಮೈ ಬೆಚ್ಚಗಾಗಿರಲು ಸಾಕು. ಹಾಗಂತ ಈ ಮಾತುಗಳು ಯಾರನ್ನೋ ಮೆಚ್ಚಿಸಲಿಕ್ಕೆ ಆಡಿದವಲ್ಲ. ಅಥವಾ ಇಂಗ್ಲೆಂಡನ್ನು ಎದುರು ಹಾಕಿಕೊಂಡು ಕೀರ್ತಿವಂತಳಾಗಬೇಕೆಂಬ ಬಯಕೆಯೂ ಆಕೆಗಿರಲಿಲ್ಲ. ಆಕೆ ಪ್ರಭುತ್ವದ ಜೊತೆಗಿದ್ದು ಕೆಲಸ ಮಾಡಿದ್ದ್ದರೆ ವೈಯಕ್ತಿಕ ಲಾಭ ಸಾಕಷ್ಟಾಗಿರುತ್ತಿತ್ತು. ಸಂಪತ್ತಿಗೆ ಕೊರತೆಯಾಗುತ್ತಿರಲಿಲ್ಲ, ಒಂದಷ್ಟು ಪದವಿಗಳೂ ದಕ್ಕಿರುತ್ತಿದ್ದವು, ತನ್ನ ರಾಷ್ಟ್ರದಲ್ಲಿ ಶಾಶ್ವತ ಕೀರ್ತಿ ಕೂಡ. ಆದರೆ ಅವೆಲ್ಲವನ್ನೂ ಧಿಕ್ಕರಿಸಿದ ನಿವೇದಿತಾ ಹೀಗೆ ತನ್ನವರ ವಿರುದ್ಧ ಹಲ್ಲು ಮಸೆದು ನಿಂತಳೆಂದರೆ ಅದಕ್ಕೊಂದು ಬಲವಾದ ಕಾರಣ ಇರಲೇಬೇಕಲ್ಲ. ಅದನ್ನು ಆಕೆಯೇ ಹೇಳಿಕೊಳ್ಳುತ್ತಾಳೆ. ‘ಯೂರೋಪ್ ಹುಟ್ಟುವುದಕ್ಕೆ ಮುನ್ನವೇ ಭಾರತ, ನಾಗರೀಕತೆಯ ಒಟ್ಟಾರೆ ಗುರಿ ಸಂಪತ್ತಿನ ಸಂಗ್ರಹಣೆಯೋ, ಅಧಿಕಾರ ಗ್ರಹಣವೋ ಅಥವಾ ಸಂಘಟನೆಗಳ ನಿರ್ಮಾಣವೋ ಅಲ್ಲ. ಬದಲಿಗೆ ಮನುಷ್ಯ ನಿರ್ಮಾಣ ಮಾತ್ರ ಎಂಬ ಸೂಕ್ಷ್ಮ ತತ್ತ್ವವನ್ನು ಅರಿತುಕೊಂಡಿತ್ತು’ ಎನ್ನುತ್ತಾಳೆ. ಇದನ್ನೇ ಆಕೆಯ ಗ್ರಹಿಕೆಯ ಸಾಮಥ್ರ್ಯ ಎನ್ನೋದು. ಐರ್ಲೆಂಡಿನಿಂದ ಬಂದು ಭಾರತವನ್ನು ಆಕೆ ಇಷ್ಟು ಆಳಕ್ಕೆ ಅರಿಯುವಲ್ಲಿ ಆಕೆಯ ಆಸಕ್ತಿ ಮತ್ತು ಆಕೆಯೇ ರೂಪಿಸಿಕೊಂಡ ಪರಿಸರ ಎರಡೂ ಕಾರಣವಾಗಿತ್ತು. ಆರಂಭದಲ್ಲಿಯೇ ವಿವೇಕಾನಂದರು ಆಕೆಗೆ ಸ್ಪಷ್ಟಪಡಿಸಿದ್ದರು, ‘ಮಡಿವಂತ ಬ್ರಾಹ್ಮಣ ಬ್ರಹ್ಮಚಾರಿಣಿಯ ಬದುಕು ನಡೆಸು, ಆಗ ಮಾತ್ರ ನೀನು ಭಾರತವನ್ನು ಅರಿಯಬಲ್ಲೆ. ಮತ್ತು ಭಾರತೀಯರೂ ನಿನ್ನ ಸ್ವೀಕಾರಮಾಡಬಲ್ಲರು’ ಅಂತ.

sisternivedita-650_102814035616

 

 
ಅಕ್ಷರಶಃ ಸತ್ಯವೇ. ನಿವೇದಿತೆಯನ್ನು ಸ್ವಂತದವಳೆಂದು ಭಾರತೀಯರು ಸ್ವೀಕಾರ ಮಾಡಿದ್ದಕ್ಕೆ ಇದು ಕಾರಣ ಹೌದೋ ಅಲ್ಲವೋ. ಆದರೆ ಭಾರತದ ಮಹಿಳೆಯರನ್ನು ಅರ್ಥೈಸಿಕೊಳ್ಳುವಲ್ಲಿ ಆಕೆಗೆ ಈ ಸಹವಾಸ, ಲಾಭ ಮಾಡಿದ್ದಂತೂ ಖಂಡಿತ ಸತ್ಯ. ಆಗಿನ ದಿನಗಳಲ್ಲಿ ಬಾಲ್ಯ ವಿವಾಹದ ಪದ್ಧತಿ ತೀವ್ರವಾಗಿದ್ದುದರಿಂದ ಮಡಿವಂತ ಬ್ರಾಹ್ಮಣ ಬ್ರಹ್ಮಚಾರಿಣಿಯರೆಂದರೆ ಬಹುತೇಕ ವಿಧವೆಯರೇ ಆಗಿರುತ್ತಿದ್ದರು. ಬಂಗಾಳದ ಗಲ್ಲಿಗಳಲ್ಲಿನ ಸಂಪ್ರದಾಯ ನಿಷ್ಠ ಹೆಣ್ಣುಮಕ್ಕಳಿಂದ ಹಿಡಿದು ದೈವತುಲ್ಯರಾದ ಶಾರದಾಮಾತೆಯವರೆಗೆ ಅನೇಕ ತಾಯಂದಿರಲ್ಲಿನ ಸದ್ಗುಣಗಳು ಆಕೆಯನ್ನು ಸೆಳೆದವು. ಅಷ್ಟೇ ಅಲ್ಲ ವಿಧವೆಯರೊಳಗಿನ ತಪಸ್ಸಿನ ತುಡಿತ ನಿವೇದಿತೆಯ ಆಂತರ್ಯದೊಳಗೆ ಹುದುಗಿದ್ದ ತ್ಯಾಗದ ಬಯಕೆಯನ್ನು ತೀವ್ರಗೊಳಿಸಿತು.

ನಿವೇದಿತಾ ಆಲೋಚನೆ ಸ್ಪಷ್ಟವಾಗಿತ್ತು. ವಿಧವೆಯೆಂದರೆ ಪವಿತ್ರವಾದ ಆಧ್ಯಾತ್ಮಿಕವಾದ ಬದುಕೆಂದು ಆಕೆ ಭಾವಿಸಿದ್ದಳು. ರಾಮಾಯಣದ ಸೀತೆ ಜನಾಂಗವೊಂದರ ಆದರ್ಶವಾಗಿ ನಿಲ್ಲುವಲ್ಲಿ ಆಕೆಯ ಭೋಗದ ಬಯಕೆಯಲ್ಲ, ತ್ಯಾಗದ ಇಚ್ಛೆಯೇ ಕಾರಣ ಎಂಬುದನ್ನು ಆಕೆ ಅರಿತಿದ್ದಳು. ಆಕೆಯ ಬಳಿ ಉದಾಹರಣೆಗಳಿಗೆ ಕೊರತೆ ಇರಲಿಲ್ಲ. ಭಾಸ್ಕರಾಚಾರ್ಯನ ಲೀಲಾವತಿಯ ಕುರಿತಂತೆ ಮಾತನಾಡುವಾಗ ಆಕೆ ವಿಧವೆಯರ ಕುರಿತಂತೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಳು. ಜ್ಯೋತಿಷ್ಯ ಶಾಸ್ತ್ರ ಪ್ರವೀಣರೂ ಆಗಿದ್ದ ಗಣಿತಜ್ಞ ಭಾಸ್ಕರಾಚಾರ್ಯರ ಮಗಳು ಲೀಲಾವತಿ. ಶಾಸ್ತ್ರದ ಆಧಾರದ ಮೇಲೆ ತನ್ನ ಮಗಳಿಗೆ ವೈಧವ್ಯದ ಶಾಪವಿರುವುದನ್ನು ಅರಿತ ಆಚಾರ್ಯರು ಲೆಕ್ಕಾಚಾರ ಹಾಕಿ ಯಾವುದೋ ಒಂದು ಅಪೂರ್ವವಾದ ಘಳಿಗೆಯಲ್ಲಿ ಮದುವೆಯಾದರೆ ಮಾತ್ರ ಆಕೆಯ ದಾಂಪತ್ಯ ಉಳಿಯುವುದೆಂಬುದನ್ನು ಅರಿತರು. ಅದಕ್ಕೆ ಪೂರಕವಾಗಿ ತಯಾರಿಯನ್ನೂ ಮಾಡಿಕೊಂಡರು. ದುರದೃಷ್ಟ ಲೀಲಾವತಿಯನ್ನೂ ಬಿಡಲಿಲ್ಲ. ಮದುವೆಯನ್ನು ಅಂದುಕೊಂಡ ಆ ಪವಿತ್ರ ಗಳಿಗೆಯಲ್ಲಿ ಮಾಡಲಾಗಲಿಲ್ಲ. ಲೀಲಾವತಿ ಪತಿಯನ್ನು ಕಳೆದುಕೊಂಡಳು, ಬಾಲ ವಿಧವೆಯಾದಳು. ಭಾಸ್ಕರಾಚಾರ್ಯರು ಧೃತಿಗೆಡಲಿಲ್ಲ. ಆಕೆಯ ವೈಧವ್ಯಕ್ಕೊಂದು ಧನಾತ್ಮಕ ರೂಪ ಕೊಟ್ಟರು. ಗಣಿತ ಶಾಸ್ತ್ರವನ್ನೂ ಆಕೆಗೆ ಧಾರೆಯೆರೆದರು. ತಂದೆಗೆ ಸಹಕರಿಸುತ್ತಾ ಆಕೆ ತನ್ನ ವೈಧವ್ಯವನ್ನು ತ್ಯಾಗದ ಗಣಿಯಾಗಿ ರೂಪಿಸಿ ಗಣಿತಜ್ಞೆಯಾದಳು. ಈ ಕಥೆಯನ್ನು ಹೇಳುತ್ತ ನಿವೇದಿತಾ ‘ಸಮಾಜದ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಅನೇಕ ಪತಿ ವಿಯೋಗಿಗಳು ತಮ್ಮ ಕಷ್ಟಗಳನ್ನು ಮರೆತು ಬಿಡುತ್ತಿದ್ದರು’ ಎನ್ನುತ್ತಾಳೆ. ಆಗಿನ ದಿನಗಳಲ್ಲಿ ವಿಧವೆಯಾದ ಹಿರಿಯ ಸ್ತ್ರೀಯರು ಆರೋಗ್ಯದ ಕೇಂದ್ರಗಳಾಗಿರುತ್ತಿದ್ದರು. ಅನಾರೋಗ್ಯದಿಂದ ನರಳುತ್ತಿದ್ದ ಯಾರನ್ನಾದರೂ ಸರಿಯೇ ತಮಗೆ ಗೊತ್ತಿದ್ದ ಸ್ಥಳೀಯ ವೈದ್ಯ ಪ್ರಯೋಗದಲ್ಲಿ ಪ್ರೀತಿಯಿಂದ ಉಪಚರಿಸಿ ಗುಣಮುಖರಾಗುವಂತೆ ಮಾಡುತ್ತಿದ್ದರು. ವಿಧವೆಯರ ವ್ಯಾಪಾರೀ ಮನೋಭಾವವೂ ಬಲು ವಿಶಿಷ್ಟವೇ ಆಗಿತ್ತು. ನಿವೇದಿತಾ ಈ ಕುರಿತಂತೆ ಮಾತಾಡುತ್ತಾ ಬಂಗಾಲಿ ಗಾದೆಯೊಂದರ ಉಲ್ಲೇಖ ಮಾಡುತ್ತಿದ್ದಳು ‘ಸರಿಯಾಗಿ ಸಂಭಾಳಿಸದ ಆಸ್ತಿಗೆ ವಿಧವೆಯ ಹಸ್ತವೇ ಬೇಕು’ ಅಂತ. ಹೀಗೆ ವಿಧವೆಯೋರ್ವಳು ಸಮಾಜದಲ್ಲಿ ಗೌರವವನ್ನು ಪಡೆಯಲು ಕಾರಣವೂ ಇತ್ತು. ಆಕೆಯೇ ಗುರುತಿಸುವಂತೆ, ‘ವಿಧವೆಯಾದವಳು ಯಾವ ಕೆಲಸ ಮಾಡಬೇಕೆಂದು ಸ್ವತಂತ್ರವಾಗಿ ಆಯ್ಕೆ ಮಾಡಿಕೊಳ್ಳುವುದಿಲ್ಲ. ಆದರೆ ತನಗೆ ಒಪ್ಪಿಸಿದ ಕೆಲಸದಲ್ಲಿ ಪೂರ್ಣ ಪ್ರಮಾಣದ ಭಕ್ತಿಯನ್ನು ಸಮರ್ಪಿಸುವುದು ಅವಳಿಗೆ ಸಿದ್ಧಿಸಿರುತ್ತದೆ. ಗಂಡನೆಡೆಗೆ ಹರಿಯಬೇಕಿದ್ದ ತನ್ನ ಶುದ್ಧ ಪ್ರೇಮವನ್ನು ಆಕೆಯು ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಲ್ಲಿ ಬಳಸಿಕೊಳ್ಳುತ್ತಾಳೆೆ’.

leelavathi

ಓಹ್! ಇಂದಿನ ಮಹಿಳಾವಾದಿಗಳು ಈ ಮಾತುಗಳನ್ನೆಲ್ಲ ಕೇಳಿದರೆ ಉರಿದು ಬೀಳಬಹುದು. ಪುರುಷ ಪ್ರಧಾನ ಸಮಾಜದವರೆಲ್ಲ ಸೇರಿ ರೂಪಿಸಿದ ಕಟ್ಟು-ಕಟ್ಟಳೆಗಳಿವು ಎಂದು ಆಕ್ರೋಶದಿಂದ ಕುದಿಯಬಹುದು. ಜೊತೆಗೆ ತಪಸ್ಸು, ಸೇವೆ, ತ್ಯಾಗ ಎಂದೆಲ್ಲ ದೊಡ್ಡ ಪದದೊಳಗೆ ಹೆಣ್ಣುಮಕ್ಕಳನ್ನು ಕೂಡಿ ಹಾಕುವ ಹುನ್ನಾರವೆಂದು ಮೂದಲಿಸಲೂಬಹುದು. ಆದರೆ ಒಂದಂತೂ ಸತ್ಯ. ವೈಧವ್ಯದ ಪಟ್ಟವನ್ನು ಪಡೆದುಕೊಂಡಿರುವ ತಾಯಂದಿರ ಮಾತನ್ನು ಪರಿವಾರದಲ್ಲಿ ಯಾರೊಬ್ಬರೂ ತಳ್ಳಿ ಹಾಕದಂತಹ ಗೌರವ ಇಂದಿಗೂ ಹಳ್ಳಿಗಳಲ್ಲಿದೆ. ಇದು ಆಕೆಯ ತ್ಯಾಗಕ್ಕೆ ಸಮಾಜ ಕಟ್ಟಿದ ಬೆಲೆ.

ನಿವೇದಿತೆಯ ‘ಹಿಂದೂ ಮನೆಗಳಲ್ಲಿ ಗಂಡಸರು ತಾಯಿಯ ಮಾರ್ಗದರ್ಶನ ಪಡೆಯಲು ನಾಚಿಕೆ ಎನ್ನುವುದಿಲ್ಲ’ ಎಂದು ಉದ್ಗರಿಸುತ್ತಾಳೆ. ಆಕೆ ಹೇಳುವ ಬಂಗಾಳಿ ನ್ಯಾಯಾಧೀಶ ಅಶುತೋಶ್ ಮುಖರ್ಜಿಯವರ ಕಥೆ ಬಲು ಭಾವನಾತ್ಮಕ. ಆಶುತೋಶ್ರು ಆಂಗ್ಲರಿಂದಲೂ ಪ್ರಶಂಸೆಗೊಳಗಾದ ಬುದ್ಧಿವಂತ ನ್ಯಾಯಾಧೀಶರು. ಅವರ ತೀರ್ಪುಗಳನ್ನು ಸಂಗ್ರಹಿಸಿ ಸ್ವತಃ ಬ್ರಿಟೀಷರೂ ಅಧ್ಯಯನ ಮಾಡಲು ಬಳಸುತ್ತಿದ್ದರಂತೆ. ಅವರು ಸಾವಿನ ಹೊಸ್ತಿಲಲ್ಲಿದ್ದಾಗ ವಯಸ್ಸಾದ ಅವರ ತಾಯಿಯು ಆಶುತೋಶ್ರನ್ನು ನೋಡಲೆಂದು ಆಗಮಿಸಿದರು. ಮಗನಿದ್ದ ಕೋಣೆಯ ಹೊಸ್ತಿಲು ದಾಟುವಾಗ ಆ ತಾಯಿ ಎಡವಿ ಬಿದ್ದುಬಿಟ್ಟರು. ಕಾಲಿಗೆ ಗಾಯವಾಯ್ತು. ಆ ಕ್ಷಣವೇ ಅಲುಗಾಡಲೂ ಆಗದ ಸ್ಥಿತಿಯಲ್ಲಿದ್ದ ಮುಖರ್ಜಿಯವರು ತೆವಳಿಕೊಂಡು ತಾಯಿಯ ಬಳಿ ಸಾರಿದರು. ಆಕೆಯ ಗಾಯಗೊಂಡ ಕಾಲ್ಗಳನ್ನು ಮತ್ತೆ ಮತ್ತೆ ಮುತ್ತಿಟ್ಟರು. ಆಕೆಗಾಗುತ್ತಿದ್ದ ನೋವನ್ನು ಸಹಿಸಲಾರದೇ ಅವರ ಕಂಗಳಿಂದ ಅಶ್ರುಧಾರೆ ಸುರಿಯಿತು. ಈ ಬಿಸಿ ಕಣ್ಣೀರಿನಿಂದಲೇ ಪಾದಗಳನ್ನು ತೊಳೆದರು. ಹೀಗೆ ಹೇಳುತ್ತಾ ಭಾವುಕಳಾಗುವ ನಿವೇದಿತಾ ಈ ರೀತಿಯ ಸೂಕ್ಷ್ಮ ಸಂಬಂಧಗಳಲ್ಲಿ ಭಾವನಾತ್ಮಕವಾಗಿ ಪ್ರತಿಸ್ಪಂದಿಸುವ ಯಾವ ವ್ಯಕ್ತಿಯೂ ಬದುಕಿನ ತನ್ನ ನಿಧರ್ಾರಗಳಲ್ಲಿ ಸುಲಭಕ್ಕೆ ಎಡವಲಾರ ಎನ್ನುತ್ತಾಳೆ.

ಬಹುಶಃ ಪದೇ ಪದೇ ಆಕೆಯ ಗ್ರಹಿಕೆಯನ್ನು ಕೊಂಡಾಡಿದುದರ ಮರ್ಮ ಈಗ ಅರ್ಥವಾಗಿರಬೇಕು. ಜಗತ್ತಿನ ಯಾವ ಮತ-ಪಂಥಗಳಲ್ಲೂ, ಯಾವ ನೆಲದಲ್ಲೂ ಇಲ್ಲದ ತಾಯಿ-ಮಕ್ಕಳ ಅಪರೂಪದ ಬಾಂಧವ್ಯ ಭಾರತದಲ್ಲಿದೆ, ಹಿಂದೂ ಧರ್ಮದಲ್ಲಿದೆ. ಹೀಗಾಗಿಯೇ ಯಾರಿಂದ ಉಪಕೃತರಾಗಿದ್ದೇವೋ ಅವರೆಲ್ಲರನ್ನು ತಾಯಿಯೆಂದೇ ಗೌರವಿಸೋದು ನಾವು. ಭೂಮಿ ತಾಯಿಯಾಗೋದು, ಗಂಗೆ ಮಾತೆಯೆನಿಸುವುದು ಈ ಕಾರಣದಿಂದಲೇ. ಇದನ್ನು ಮೂಲರೂಪದಲ್ಲಿ ಅರ್ಥೈಸಿಕೊಳ್ಳಲು ನಿವೇದಿತೆಗೆ ಸಾಧ್ಯವಾಗಿತ್ತು. ಹಾಗಂತ ಈ ಭಾವ ಕ್ಷೀಣಿಸುತ್ತಿಲ್ಲವೇ? ಸ್ತ್ರೀಯರ ಮೇಲಿನ ಗೌರವ ಕಡಿಮೆಯಾಗಿಲ್ಲವೇ? ಎಂದರೆ ಖಂಡಿತ ಆಗಿದೆ. ಅದಕ್ಕೆ ಕಾರಣಗಳನ್ನು ನಿವೇದಿತಾ ಪಟ್ಟಿ ಮಾಡುತ್ತಾಳೆ. ‘ಕಳೆದ ಐದು ದಶಕದಲ್ಲಿ ಮಧ್ಯಮವರ್ಗ ತೀವ್ರಗತಿಯಲ್ಲಿ ಅಧಃಪತನ ಕಂಡಿದೆ. ಈ ಕಾರಣದಿಂದಾಗಿಯೇ ಸಂಪತ್ತು ನಾಶವಾಗಿ ಸಾಮಾಜಿಕ ಮತ್ತು ಲೌಕಿಕ ಜಗತ್ತಿನಲ್ಲಿ ಸ್ತ್ರೀಯರ ಸ್ಥಾನಮಾನ ಕುಸಿದಿದೆ.’ ಎನ್ನುತ್ತಾಳೆ. ಆ ಹೊತ್ತಿನಲ್ಲೂ ‘ವಿಧವೆಯರೇ ಸ್ತ್ರೀಯರ ನಡುವಿನ ಬೌದ್ಧಿಕ ಕೇಂದ್ರವಾಗಿದ್ದರು’ ಎಂದು ಹೇಳುವುದನ್ನು ಆಕೆ ಮರೆಯುವುದಿಲ್ಲ.
ನನಗೆ ಗೊತ್ತು. ಅನೇಕರಿಗೆ ಪದೇ ಪದೇ ವಿಧವೆ ಅನ್ನೋ ಪದ ಬಳಸಿರುವುದು ಕಿರಿಕಿರಿ ಎನಿಸಬಹುದು. ಆದರೆ ನಿವೇದಿತಾ ಇದ್ದ ಕಾಲಘಟ್ಟದಲ್ಲಿ ಬಂಗಾಳದಲ್ಲಿನ ವಿಧವೆಯರ ಕುರಿತಂತೆ ಅಮೇರಿಕಾ-ಯೂರೋಪುಗಳಲ್ಲಿ ಭಾರೀ ಅಪಪ್ರಚಾರ ನಡೆದಿತ್ತು. ಹಿಂದೂ ಧರ್ಮ ಸ್ತ್ರೀಯರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತದೆಯೆಂದು ಪುಕಾರು ಹಬ್ಬಿಸಿದರು. ಸ್ವಾಮೀಜಿ ಸಾಕಷ್ಟು ಉತ್ತರಿಸಲು ಪ್ರಯತ್ನ ಮಾಡಿದ್ದರೂ ಕೂಡ. ಆದರೆ ನಿವೇದಿತಾ ಅದನ್ನು ಸ್ವತಃ ತಾನೇ ಉತ್ತರ ಹುಡುಕಿಕೊಂಡಳು. ಅವರ ನಡುವೆಯೇ ಬದುಕಿ ಅರ್ಥೈಸಿಕೊಂಡಳು. ಅನಾವರಣಗೊಂಡ ಸತ್ಯವನ್ನು ಮುಲಾಜಿಲ್ಲದೇ ಜಗತ್ತಿಗೆ ಸಾರಿದಳು. ಅಚ್ಚರಿಯೇನು ಗೊತ್ತೇ? ವಿದೇಶಿಗರು ಆಕೆಯ ಮಾತನ್ನು ಧನಾತ್ಮಕವಾಗಿಯೇ ಸ್ವೀಕರಿಸಿದರು, ಭಾರತೀಯ ಬುದ್ಧಿಜೀವಿಗಳು ಮಾತ್ರ ಕೆಂಡ ಕೆಂಡವಾಗಿಬಿಟ್ಟರು. ಆಗಷ್ಟೇ ಅಲ್ಲ. ಈಗಲೂ ಆಕೆಯ ಮಾತುಗಳನ್ನು ಕೇಳಿ ಈ ಜನ ಉರಕೊಂಡು ಬಿದ್ದರೆ ಅಚ್ಚರಿ ಪಡಬೇಡಿ. ಇಂದಂತೂ ಭಾರತೀಯ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳಲಾಗದೇ ಮೈ ಚಾಯ್ಸ್ ಎನ್ನುತ್ತ ಭೋಗಿಸುವುದೇ ಜೀವನ ಎನ್ನುವ ಮಹಿಳಾವಾದಿಗಳು ಸಾಕಷ್ಟಾಗಿಬಿಟ್ಟಿದ್ದಾರೆ. ಭಾರತೀಯ ನಾರಿಯ ಅಂತರ್ಹಿತ ಶಕ್ತಿಯಾಗಿದ್ದ ತ್ಯಾಗವನ್ನು ಪೂರ್ತಿಯಾಗಿ ನಷ್ಟಗೊಳಿಸಿ ಆಕೆಯನ್ನು ಪಶ್ಚಿಮದ ಸ್ತ್ರೀಯರಿಗೆ ಪರ್ಯಾಯವಾಗಿಸುವ ತುಡಿತ ಇವರಿಗೆಲ್ಲ.

widow
ಮಹಿಳಾವಾದದ ಭಾರತೀಯ ಚಿಂತನೆಗೆ ನಿವೇದಿತಾ ಕೊಟ್ಟ ವ್ಯಾಖ್ಯೆ ಬಲು ಸುಂದರವಾದುದು. ಅದು ದಾರಿ ತಪ್ಪಿರುವ ರೀತಿ ಅದನ್ನು ಮತ್ತೆ ಹಳಿಗೆ ತರುವ ಮಾರ್ಗ ಎಲ್ಲವನ್ನೂ ಆಕೆ ವಿಷದವಾಗಿ ಹೇಳಿಕೊಟ್ಟಿದ್ದಾಳೆ. ತಿಳಿಯುವ ಸೂಕ್ಷ್ಮಮತಿ ನಮಗೆ ಬೇಕಷ್ಟೇ. ಇದನ್ನರಿತು ಅಂತಹ ಸ್ತ್ರೀವಾದವನ್ನು ಪ್ರತಿಪಾದಿಸುವ ಮಹಿಳೆಯರ ಸಂಖ್ಯೆ ಇಂದು ಹೆಚ್ಚಬೇಕಾಗಿದೆ.

ನೆನಪಿಡಿ. ನಮ್ಮ ಹಿರಿಯರು ಅತ್ಯಂತ ಗೌರವದ ಬದುಕನ್ನು ಹರಿವಾಣದಲ್ಲಿಟ್ಟು ನಮ್ಮ ಕೈಗೆ ಕೊಟ್ಟು ಹೋಗಿದ್ದಾರೆ. ನಾವು ಅದರ ಕುರಿತಂತೆ ಹೆಮ್ಮೆ ಪಡಬೇಕು. ಅದನ್ನು ಮುಂದಿನ ಪೀಳಿಗೆಗೂ ತಲುಪಿಸಬೇಕು. ನಿವೇದಿತಾ ತನ್ನ ಮದ್ರಾಸಿನ ಭಾಷಣದ ಕೊನೆಗೆ ಹೇಳುತ್ತಾಳೆ ‘ನಿಮ್ಮ ರಾಷ್ಟ್ರದ ಆಚರಣೆಗಳ ಕುರಿತಂತೆ ನೀವು ಅವಮಾನ ಪಡಬೇಕಿಲ್ಲ. ದೃಢವಾಗಿ ಅದರೊಟ್ಟಿಗೆ ನಿಲ್ಲಿ. ನಿಮ್ಮಲ್ಲಿರುವ ಮಹಾ ಜ್ಞಾನಿಗಳು ಜಗತ್ತಿನ ಯಾವ ಮಹಾಪುರುಷರಿಗಿಂತಲೂ ಕಡಿಮೆಯಲ್ಲ. ಅವರ ವೈಭವವನ್ನು ಹಾಡಿ, ಅವರನ್ನು ಪ್ರೀತಿಸಿ, ಅವರನ್ನು ಪ್ರೋತ್ಸಾಹಿಸಿ. ಅವರು ತಲೆತಗ್ಗಿಸುವಂತಹ ಪರಿಸ್ಥಿತಿಯನ್ನು ನಿಮಗೆಂದೂ ತಂದೊಡ್ಡಲಾರರು’ ಎನ್ನುತ್ತಾಳೆ. ಆ ಮೂಲಕ ಹಿಂದಿನ ತಲೆಮಾರುಗಳಲ್ಲಿದ್ದ ಮಹಾಪುರುಷರಂತೆ ಇಂದಿಗೂ ಮಹಾಪುರುಷರಿದ್ದಾರೆಂಬುದನ್ನು ನೆನಪಿಸಿ ಅಂತಹವರನ್ನು ಗುರುತಿಸಿ-ಗೌರವಿಸಬೇಕಾದ ಹೊಣೆ ನಮ್ಮ ಹೆಗಲಿಗೇರಿಸುತ್ತಾಳೆ.

ನಾವು ಮಾಡಬೇಕಿರೋದು ಅಷ್ಟೇ. ಬೊಬ್ಬೆ ಹೊಡೆದು ಭಾರತೀಯ ಸಂಸ್ಕೃತಿಯನ್ನು ತೆಗಳುವವರನ್ನು ಬದಿಗಿಟ್ಟು, ಈ ಸಂಪತ್ತನ್ನು ಪಸರಿಸುವಲ್ಲಿ ಬದುಕನ್ನೇ ಪಣವಿಟ್ಟ ಜನರ ಅನುಸರಿಸಿದರಾಯ್ತು. ಇದೇ ಅಕ್ಕ ಬೋಧಿಸಿದ ಮಹಾಮಾರ್ಗ!

ನಿವೇದಿತೆಯ ಋಣ ತೀರಿಸಲು ಜನ್ಮ ಸಾಲದು!

ನಿವೇದಿತೆಯ ಋಣ ತೀರಿಸಲು ಜನ್ಮ ಸಾಲದು!

ಬೋಸರಿಗೆ ಆರ್ಥಿಕ ಸಹಾಯ ಮಾಡಿದ್ದಷ್ಟೇ ಅಲ್ಲ. ಅವರ ಎಲ್ಲಾ ಸಂಶೋಧನಾ ಪ್ರಬಂಧಗಳನ್ನೂ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಅದನ್ನು ಪ್ರಕಟಿಸಲು ಆಕೆ ಬೆನ್ನೆಲುಬಾಗಿ ನಿಂತಳು. ಬೋಸರೊಂದಿಗೆ ಸ್ವತಃ ತಾನೇ ಕೂತು ಅವರ ಪ್ರಬಂಧಗಳನ್ನು ಕರಾರುವಾಕ್ಕಾಗಿ ಮತ್ತು ಆಸಕ್ತಿಕರವಾಗಿ ದಾಖಲಿಸಿ ವಿಷಯದ ಮೇಲೆ ಆಸಕ್ತಿ ಇಲ್ಲದವರೂ ಅರ್ಥೈಸಿಕೊಳ್ಳುವಂತೆ ಪ್ರಭಾವಿಯಾಗಿ ಬರೆದದ್ದು ನಿವೇದಿತೆಯೇ. ಬ್ರಿಟೀಷ್ ವಿಜ್ಞಾನಿಗಳ ಮೇಲೆ ನಿರಂತರ ಒತ್ತಡ ಹೇರಿ ಬೋಸರ ಸಾಧನೆಯನ್ನು ಗೌರವಿಸುವಂತೆ ನಿವೇದಿತೆ ಮಾಡಿದ ಅವಿರತ ಪ್ರಯತ್ನದಿಂದಾಗಿಯೇ ಅವರಿಗೆ ಮುಂದೆ ನೈಟ್ಹುಡ್ ಪದವಿ ದಕ್ಕಿದ್ದು. 1901 ರಲ್ಲೊಮ್ಮೆ ಬೋಸ್ ದಂಪತಿಗಳು ಲಂಡನ್ನಿನಲ್ಲಿದ್ದಾಗ ಬೋಸರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಆಗ ಅವರ ಶುಶ್ರೂಷೆ ಮಾಡಿ ಆರೋಗ್ಯ ಹದ ತಪ್ಪದಂತೆ ನೋಡಿಕೊಂಡವಳೂ ಈ ಮಹಾತಾಯಿಯೇ. ಅವಳಿಗೆ ಜಗದೀಶ್ ಚಂದ್ರ ಬೋಸರ ಮೇಲೆ ಇಷ್ಟೊಂದು ಪ್ರೀತಿ-ಗೌರವ ಇರಲು ಕಾರಣ ಒಂದೇ. ಅವರು ಭಾರತದ ಕೀತರ್ಿ ಪತಾಕೆಯನ್ನು ವೈಜ್ಞಾನಿಕ ಪಥದಲ್ಲಿ ಮುಗಿಲೆತ್ತರಕ್ಕೆ ಹಾರಿಸಿದ್ದಾರೆಂದು ಮಾತ್ರ! ಓಹ್. ಅದೆಂತಹ ಭಾರತಭಕ್ತಿ.

akka-7

ಮತ್ತೆ ಮತ್ತೆ ನನ್ನ ಕಾಡುವ ಅಂಶ ಅದೊಂದೇ. ಐರ್ಲೆಂಡಿನಿಂದ ಬಂದ ಹೆಣ್ಣು ಮಗುವೊಂದು ಭಾರತವನ್ನು ಇಷ್ಟೊಂದು ಪ್ರೀತಿಸಿತು. ಬರಿಯ ಪ್ರೀತಿಯಷ್ಟೇ ಅಲ್ಲ. ಈ ದೇಶದ ಜನರ ಸೇವೆಯನ್ನು ಭಕ್ತಿಯಿಂದ ಮಾಡಿತು. ಅಲ್ಲಿಗೆ ನಿಲ್ಲದೇ ಈ ದೇಶದ ಘನತೆಯನ್ನು ಜಗತ್ತಿಗೆ ಮುಟ್ಟಿಸಲು ಟೊಂಕಕಟ್ಟಿ ನಿಂತಿತು. ಕೊನೆಗೆ ಇಲ್ಲಿನ ವಿಜ್ಞಾನಿಗಳಿಗೆ, ಲೇಖಕರಿಗೆ, ಕಲಾಕಾರರಿಗೆ ಆಸರೆಯಾಗಿ ನಿಂತು ಅವರೆಲ್ಲ ಜಾಗತಿಕ ಮಟ್ಟದಲ್ಲಿ ತಮ್ಮ ಛಾಪು ಒತ್ತುವಂತೆಯೂ ಮಾಡಿತು. ಆಕೆಯ ಪಾದಗಳಿಗೆ ಹಣೆ ಮುಟ್ಟಿಯೇ ನಮಸ್ಕರಿಸಬೇಕು.
ಯೌವ್ವನದಲ್ಲಿ ಐರಿಶ್ ಸ್ವಾತಂತ್ರ್ಯಕ್ಕಾಗಿ ಕಾದಾಡಿದ ಹೆಣ್ಣು ಮಗಳಿಗೆ ಬ್ರಿಟಿಷ್ ಸಾಮ್ರಾಜ್ಯದ ಕುರಿತ ನಿಷ್ಠೆ ಜೋರಾಗಿಯೇ ಇತ್ತು. ವಿವೇಕಾನಂದರ ಯೂರೋಪಿನ ಭಾಷಣಗಳಲ್ಲಿ ಬ್ರಿಟಿಷರ ವಿರುದ್ಧದ ಚಿಂತನೆಗಳೇನೂ ಇರಲಿಲ್ಲ. ವೇದಾಂತದ ಪ್ರತಿಪಾದನೆಗೆ ಪೂರಕವಾಗಿ ಕ್ರಿಶ್ಚಿಯನ್ ಮಿಶನರಿಗಳನ್ನು ಝಾಡಿಸುತ್ತಿದ್ದುದು ನಿಜವಾದರೂ ಅದು ಪ್ರಭುತ್ವಕ್ಕೆ ನೇರ ಸವಾಲಾಗಿ ಕಂಡಿರಲಿಲ್ಲ. ಹೀಗಾಗಿ ವಿವೇಕಾನಂದರ ಹಿಂದು ಹಿಂದೆಯೇ ನಿವೇದಿತಾ ಭಾರತಕ್ಕೆ ಬಂದಾಗಲೂ ಆಕೆಯ ಆಂಗ್ಲ ಪ್ರಭುತ್ವ ನಿಷ್ಠೆ ಎಳ್ಳಷ್ಟು ಮಾಸಿರಲಿಲ್ಲ. ಅವಳಿಗೊಂದು ಭ್ರಮೆ ಖಂಡಿತ ಇತ್ತು. ‘ಭಾರತ ಮತ್ತು ಇಂಗ್ಲೆಂಡುಗಳು ಒಬ್ಬರನ್ನೊಬ್ಬರು ಪ್ರೀತಿಸುವಂತೆ ಮಾಡಬೇಕು’ ಅಂತ. ಎರಿಕ್ ಹ್ಯಾಮಂಡ್ರಿಗೆ ಬರೆದ ಪತ್ರದಲ್ಲಿ ಇದನ್ನು ಉಲ್ಲೇಖ ಮಾಡಿಯೂ ಇದ್ದಳು ಆಕೆ. ಬ್ರಿಟೀಷರ ವಿರುದ್ಧ ಭಾರತೀಯರ ಆಕ್ರೋಶ ಪ್ರೇಮವಾಗಿ ಬದಲಾಗಬೇಕೆಂದು ಆಕೆಯ ಹೆಬ್ಬಯಕೆಯಾಗಿತ್ತು. ಹೀಗಾಗಿ ವಿವೇಕಾನಂದರು ರಾಮಕೃಷ್ಣ ಮಠ ಕಟ್ಟುವ ಕಲ್ಪನೆ ಮುಂದಿರಿಸಿದಾಗ ಇಂಗ್ಲೆಂಡಿನ ಸ್ನೇಹಿತರೋರ್ವರಿಗೆ ಬರೆದ ಪತ್ರದಲ್ಲಿ ಆಕೆ, ‘ಇಡಿಯ ಸಾಮ್ರಾಜ್ಯವನ್ನು ಆಧ್ಯಾತ್ಮ ಪೂರಕವಾಗಿಸುವ ಚಳುವಳಿ ಇದು. ಹೊಸ ಹಿಂದುತ್ವ ಅಮೇರಿಕಾ, ಯೂರೋಪುಗಳಲ್ಲಿ ಭದ್ರವಾಗಿ ನೆಲೆಯೂರಿದೆಯಷ್ಟೇ ಅಲ್ಲ, ಇದರಲ್ಲಿ ಭಾಗವಹಿಸಿದ ಪ್ರತಿಯೊಬ್ಬನೂ ಕ್ರಿಯಾತ್ಮಕವಾಗಿ ಮತ್ತು ಭಾವನಾತ್ಮಕವಾಗಿ ಇಂಗ್ಲೆಂಡಿಗೆ ನಿಷ್ಠನಾಗಿದ್ದಾನೆ’ ಎಂದಿದ್ದಳು. ಅವಳ ಅನಿಸಿಕೆ ಬಲು ಸ್ಪಷ್ಟ. ಇಂಗ್ಲೆಂಡಿನ ಪ್ರಭುತ್ವವನ್ನು ಒಪ್ಪುವ ಜನರೇ ಹಿಂದುತ್ವದೆಡೆಗೆ ವಾಲುತ್ತಿರುವುದರಿಂದ ಹೊಸದೊಂದು ಆಧ್ಯಾತ್ಮಿಕ ಚಳುವಳಿ ನಡೆದು ಯೂರೋಪು ಮತ್ತು ಭಾರತೀಯರ ನಡುವೆ ಸೌಹಾರ್ದ ಸಂಬಂಧವೇರ್ಪಡುವುದು ಅಂತ! ಈ ಹಿನ್ನೆಲೆಯಲ್ಲಿಯೇ ನಿನ್ನ ದೇಶ ಯಾವುದೆಂದು ಸ್ವಾಮೀಜಿ ಕೇಳಿದಾಗ, ದೃಢವಾದ ದನಿಯಲ್ಲಿ ‘ಇಂಗ್ಲೆಂಡು’ ಅಂದಿದ್ದು ಆಕೆ. ಸ್ವಾಮೀಜಿಯ ಕಣ್ಣುಗಳು ನಿಗಿ ನಿಗಿ ಕೆಂಡವಾಗಿದ್ದವು. ‘ನಿಮ್ಮಂಥವರ ದೇಶಭಕ್ತಿಯೇ ಮಹಾಪಾಪ’ ಎಂದರು ಸ್ವಾಮೀಜಿ. ಒಂದಷ್ಟು ಜನಾಂಗಗಳು ತಮ್ಮನ್ನು ತಾವೇ ಸಾಕ್ಷಾತ್ತು ದೈವಸಮಾನ ಎಂದು ಭಾವಿಸುವ ಸ್ವಾರ್ಥಪ್ರೇರಿತ ದೇಶಪ್ರೇಮ ಅದು ಎಂದು ಸ್ವಾಮೀಜಿ ಕಠೋರವಾಗಿಯೇ ಝಾಡಿಸಿದರು. ಕೊನೆಗೆ ‘ಅಜ್ಞಾನವನ್ನು ನಿಷ್ಠೆಯಿಂದ ಪಾಲಿಸುವುದೇ ಕ್ರೌರ್ಯ’ ಎಂದು ಉರಿಯುವ ಮಾತುಗಳನ್ನು ಹೊರಹಾಕಿದ ಸ್ವಾಮೀಜಿ ನಿವೇದಿತೆಯ ಆಂತರ್ಯದ ನಂಬಿಕೆಗಳನ್ನೆಲ್ಲ ಮೂಲೋತ್ಪಾಟನೆ ಮಾಡಲಾರಂಭಿಸಿದರು. ಒಂದೆಡೆ ಸ್ವಾಮೀಜಿಯ ವೈಚಾರಿಕ ಚಾಟಿ ಏಟುಗಳು. ಮತ್ತೊಂದೆಡೆ ನಿವೇದಿತೆಗೇ ಆದ ಪ್ರತ್ಯಕ್ಷ ಅನುಭವಗಳು ಅವಳ ಬ್ರಿಟೀಷ್ ನಿಷ್ಠೆಯನ್ನು ಅಲುಗಾಡಿಸಲಾರಂಭಿಸಿದ್ದವು.
ಮುಕ್ತ ವಾತಾವರಣಕ್ಕೆ ಹೆಸರುವಾಸಿಯಾಗಿದ್ದ ಇಂಗ್ಲೆಂಡಿನ ಕುರಿತಂತೆ ಹೆಮ್ಮೆ ಹೊಂದಿದ್ದ ನಿವೇದಿತಾ ಬ್ರಿಟೀಷ್ ಅಧಿಕಾರಿಗಳು ವಿವೇಕಾನಂದರ ಹಿಂದೆಯೂ ಗೂಢಚಾರರನ್ನು ನೇಮಿಸಿದ್ದಾರೆಂದು ಅರಿತಾಗ ದಂಗು ಬಡಿದಳು. ‘ಸರ್ಕಾರಕ್ಕೆ ಹುಚ್ಚೇ ಹಿಡಿದಿರಬೇಕು. ಇದು ನಿಜವೇ ಆಗಿದ್ದರೆ ದೇಶದುದ್ದಗಲಕ್ಕೂ ಕಾಡ್ಗಿಚ್ಚು ಹಬ್ಬುವುದರಲ್ಲಿ ಅನುಮಾನವೇ ಇಲ್ಲ. ಅತ್ಯಂತ ನಿಷ್ಠ ಇಂಗ್ಲೆಂಡು ಮಹಿಳೆಯಾಗಿ ನಾನೇ ಮೊದಲ ಕಿಡಿ ಹಚ್ಚುತ್ತೇನೆ’ ಎಂದು ತನ್ನ ಸ್ನೇಹಿತೆಗೆ ಬರೆದ ಪತ್ರದಲ್ಲಿ ನೋವು ತೋಡಿಕೊಂಡಿದ್ದಳು. ಕೆಲವು ತಿಂಗಳಲ್ಲಿಯೇ ಸ್ವಾಮೀಜಿಯ ಕೆಲವು ಭಕ್ತರು ಕಾಶ್ಮೀರದಲ್ಲಿ ಸ್ತ್ರೀಯರ ಮಠಕ್ಕೆಂದು ಒಂದಷ್ಟು ಜಮೀನು ಹಸ್ತಾಂತರಿಸಲು ಬಂದಾಗ ಬ್ರಿಟೀಷ್ ಸರ್ಕಾರ ಒಪ್ಪಿಗೆ ಕೊಡಲು ನಿರಾಕರಿಸಿತು. ಇಂಗ್ಲೆಂಡೆಂದರೆ ಜಗತ್ತಿನ ಉದ್ಧಾರಕ್ಕೆಂದೇ ಹುಟ್ಟಿದ ರಾಷ್ಟ್ರವೆಂದು ಭಾವಿಸಿದ್ದ ನಿವೇದಿತಾಳಿಗೆ ಈಗ ಅದರ ನಿಜರೂಪ ಕಂಡು ಬಂದಿತ್ತು. ‘ಇಂಗ್ಲಿಷ್ ಪ್ರಜೆಯಾಗಿ ಇಂಗ್ಲೆಂಡು ಇಷ್ಟು ಕೆಟ್ಟದಾಗಿ ವರ್ತಿಸುವುದನ್ನು ಸಹಿಸುವುದು ಹೇಗೆ ಸಾಧ್ಯ’ ಎಂದು ಪತ್ರವೊಂದರಲ್ಲಿ ಬರೆದಳು. ಈಗಲೂ ಆಕೆಯ ಬ್ರಿಟೀಷ್ ನಿಷ್ಠೆ ಪೂರ್ಣ ಪ್ರಮಾಣದಲ್ಲಿ ಕಡಿಮೆಯೇನೂ ಆಗಿರಲಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬೇಕು ಎನ್ನುವಾಗ ಅವಳ ಹೃದಯದಲ್ಲಿದ್ದುದು ಆಸ್ಟ್ರೇಲಿಯಾದಿಂದ ಇಟಲಿ, ತುರ್ಕಿಯಿಂದ ಗ್ರೀಸ್ ಸ್ವಾತಂತ್ರ್ಯ ಪಡೆದಂತೆಯಷ್ಟೇ. ಭಾರತ ಸ್ವಾತಂತ್ರ್ಯಕ್ಕೆ ಪಕ್ವವಾಗಿಲ್ಲವೆಂದು ಅವಳು ನಿರ್ಧರಿಸಿದ್ದಳು. ‘ಹಿಂದೂ ತನ್ನ ಮತ್ತು ಮುಸಲ್ಮಾನರ ಕಾಲದ ಶಾಂತಿಯುತ ಆಡಳಿತಕ್ಕೆ ಮರಳಲು ಇನ್ನೂ ಕೆಲವು ಶತಮಾನಗಳು ಬೇಕಾಗಬಹುದು. ಸದ್ಯಕ್ಕೆ ಭಾರತದ ಸಾಮಾಜಿಕ ಅಭಿವೃದ್ಧಿಗೆ ಬೇಕಾದ ರಾಜಕೀಯ ಶಾಂತಿಯ ವಾತಾವರಣ ಸ್ಥಳೀಯ ಪೂರ್ವಗ್ರಹಗಳಿಲ್ಲದ ಸುದೂರದ ತೃತೀಯ ಶಕ್ತಿಯೊಂದರಿಂದ ಮಾತ್ರ ನೀಡಲು ಸಾಧ್ಯ’ ಎಂದು ಆಕೆ ಶ್ರದ್ಧೆಯಿಂದಲೇ ಭಾವಿಸಿದ್ದಳು. ಆಗಿನ ದಿನಗಳಲ್ಲಿ ಪ್ರತಿಯೊಬ್ಬ ಬ್ರಿಟೀಷ್ನಿಗೂ ಇದೇ ಭಾವನೆ ಇದ್ದಿರಲು ಸಾಕು. ಭಾರತಕ್ಕೆ ಒಳಿತಾಗಬೇಕು, ಅನಕ್ಷರತೆ ತೊಲಗಬೇಕು, ಸಾಮಾಜಿಕ ಸ್ತರದಲ್ಲಿ ಬದಲಾವಣೆ ಬರಬೇಕು ಎಂದು ಎಲ್ಲವನ್ನೂ ಬಯಸುವವರೂ ಇದಕ್ಕೆಲ್ಲ ಬ್ರಿಟೀಷ್ ಆಡಳಿತದ ಛತ್ರಛಾಯೆ ಬೇಕೇ ಬೇಕು ಎಂದು ನಂಬಿಬಿಟ್ಟಿದ್ದರು. ಹೊರಗಿನವರು ಬಿಡಿ, ಸ್ವತಃ ಭಾರತೀಯರೂ ಈ ನಂಬಿಕೆಯಿಂದ ಹೊರತಾಗಿರಲಿಲ್ಲ.

swami-and-sis-niveditasm
ಇಷ್ಟು ಕಠೋರ ಬ್ರಿಟೀಷ್ ಪ್ರೇಮಿಯಾಗಿದ್ದ ನಿವೇದಿತಾ ನಿಧಾನವಾಗಿ ಬದಲಾದಳು. ಗುರುದೇವ ವಿವೇಕಾನಂದರೊಂದಿಗೆ ನಡೆದುಕೊಂಡ ಆಡಳಿತದ ರೀತಿ ನೀತಿಯಿಂದ ಅವಳು ಬೇಸತ್ತಿದ್ದು ಒಂದೆಡೆಯಾದರೆ, ಜಗದೀಶ್ ಚಂದ್ರ ಬೋಸ್ರೊಂದಿಗೆ ಇಂಗ್ಲೆಂಡಿನ ವಿಶಾಲ ಹೃದಯದ ಬುದ್ಧಿವಂತರು ವ್ಯವಹರಿಸಿದ ರೀತಿ ಆಕೆಯಲ್ಲಿನ ಭ್ರಮೆಯನ್ನೂ ತೊಡೆದುಹಾಕಿತ್ತು. ‘ಜನಾಂಗ ದ್ವೇಷವೆಂದರೇನೆಂದು ಇಂಗ್ಲೆಂಡಿನಲ್ಲಿ ಕುಳಿತು ಅರ್ಥೈಸಿಕೊಳ್ಳೋದು ಕಷ್ಟ. ಸ್ಥಳೀಯರೊಂದಿಗೆ ಇಂಗ್ಲೀಷರ ವ್ಯವಹಾರ ನೋಡಿದರೆ ನನ್ನಂತೆ ನೀನೂ ಉರಿದು ಬೀಳುತ್ತೀಯಾ’ ಎಂದು ಇಂಗ್ಲೆಂಡಿನ ಗೆಳತಿ ಮಿಸಸ್ ಹ್ಯಾಮಂಡ್ಗೆ ಪತ್ರ ಬರೆದಿದ್ದಳು ನಿವೇದಿತಾ.

J_C_Bose_board
1898 ರಲ್ಲಿ ಲಂಡನ್ನಿನ ರಾಯಲ್ ಸೊಸೈಟಿಯ ಬಿಳಿಯ ವಿಜ್ಞಾನಿಗಳೆದುರೇ ತಮ್ಮ ಸಾಮಥ್ರ್ಯವನ್ನು ತೆರೆದಿಟ್ಟ ಜಗದೀಶ್ ಚಂದ್ರಬೋಸರು ಕಣ್ಣುಕುಕ್ಕುವ ವ್ಯಕ್ತಿಯಾಗಿ ಮಾರ್ಪಟ್ಟಿದ್ದರು. ಆದರೆ ಭಾರತದಲ್ಲಿ ಅವರ ಸಾಧನೆಯನ್ನು ಗುರುತಿಸುವಲ್ಲಿ, ಗೌರವಿಸುವಲ್ಲಿ ಬೇಕೆಂತಲೇ ಬಿಳಿಯ ಪ್ರಭುತ್ವ ಅಸಡ್ಡೆ ತೋರುತ್ತಿತ್ತು. ಕೋಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜು ಮತ್ತು ಬ್ರಿಟೀಷ್ ಸರ್ಕಾರದ ಶಿಕ್ಷಣ ವಿಭಾಗ ಅವರಿಗೆ ಭೌತಶಾಸ್ತ್ರದ ಪ್ರೊಫೆಸರ್ ಹುದ್ದೆಯನ್ನು ನಿರಾಕರಿಸಿತ್ತು. ವೈಸ್ರಾಯ್ ರಿಪ್ಪನ್ರ ಪ್ರಭಾವದ ಪತ್ರವನ್ನೂ ಕಡೆಗಣಿಸಿ ಅವರನ್ನು ಸಹಾಯಕ ಪ್ರೊಫೆಸರ್ ಆಗಿ ಹುದ್ದೆ ನೀಡಲಾಯ್ತು. ಅವರ ಯೋಗ್ಯತೆಗಿಂತ ಬಲು ಕಡಿಮೆ ಸಂಬಳದ ಹುದ್ದೆ ಅದು. ಬೋಸರು ತನಗೆ ಮತ್ತು ತನ್ನ ದೇಶಕ್ಕಾದ ಈ ಅವಮಾನವನ್ನು ಸ್ವಾಭಿಮಾನದಿಂದ ಎದುರಿಸಿ ಸಂಬಳವನ್ನೇ ಸ್ವೀಕರಿಸಲು ನಿರಾಕರಿಸಿದರು. ಒಟ್ಟು ಮೂರು ವರ್ಷ ಸಂಬಳವಿಲ್ಲದ ಸೇವೆಯಾಯ್ತು ಅವರ ಬದುಕು.

jag

ನಾಚಿಕೆಗೆಟ್ಟ ಕಾಲೇಜು ಆಡಳಿತ ಅವರಿಗೆ ಹೆಚ್ಚಿನ ಹೊರೆ ಹೊರೆಸಿದ್ದಲ್ಲದೇ ಸಂಶೋಧನೆಗೆ ಸೂಕ್ತ ಪ್ರಯೋಗಶಾಲೆಯನ್ನೂ ಒದಗಿಸಿ ಕೊಡಲಿಲ್ಲ. ಬೋಸ್ರ ನಿಕಟವರ್ತಿಯಾಗಿದ್ದ ನಿವೇದಿತೆಗೆ ಈ ಅವಮಾನ ಸಹಿಸಲಸಾಧ್ಯವೆನಿಸಿತು. ಇಂಗ್ಲೆಂಡಿನ ಮೇಲಿದ್ದ ಆಕೆಯ ಗೌರವದ ಭಾವನೆಗಳೆಲ್ಲ ಕಳಚಿ ಪುಡಿ ಪುಡಿಯಾಗಿ ಬಿತ್ತು. ಆಕೆ ಬೋಸ್ರಿಗೆ ಧೈರ್ಯ ತುಂಬಿದಳು. ಅವರ ಮುಂದಿನ ಪ್ರಯೋಗಗಳಿಗೆ ಬೇಕಿದ್ದ ದ್ರವ್ಯವನ್ನು ಒದಗಿಸಲು ಕ್ರಿಯಾಶೀಲಳಾದಳು. ವಿವೇಕಾನಂದರ ಶಿಷ್ಯೆಯಾಗಿದ್ದ ಅಮೇರಿಕಾದ ಸಿರಿವಂತೆ ಶ್ರೀಮತಿ ಓಲೆಬುಲ್ಳಿಗೆ ಬೋಸರ ಪರಿಚಯ ಮಾಡಿಸಿ ಇವರನ್ನು ಆಕೆಯ ದತ್ತು ಪುತ್ರನೆಂದಳು. ಆಕೆಯಿಂದ ಇದರ ಸಂಶೋಧನೆಗೆ ಹಣ ಒದಗಿಸುವಲ್ಲಿ ಮಹತ್ವದ ಕೊಂಡಿಯಾಗಿ ನಿಂತಳು. ಹೀಗೆ ಬಂದ ಹಣದಲ್ಲಿಯೇ ಬೋಸರು ಒಂದಷ್ಟು ಸಂಶೋಧನೆ ಮಾಡಲು ಸಾಧ್ಯವಾಯ್ತು, ಒಂದಷ್ಟು ಪ್ರಬಂಧ ಪ್ರಕಟಿಸಲು ಅನುಕೂಲವಾಯ್ತು. ಕೊನೆಗೆ ತಾವೇ ರೂಪಿಸಿದ್ದ ಸಾಧನವೊಂದಕ್ಕೆ ಅಮೇರಿಕಾದ ಪೇಟೆಂಟ್ ಪಡೆಯಲೂ ಅವಕಾಶವಾಯ್ತು. ಹಾಗಂತ ಅವರಿಗೆ ಈ ಹಣ ಸಾಲುವಂತಿರಲಿಲ್ಲ. ಆಗಲೇ ನಿವೇದಿತೆ ಭಾರತೀಯರಿಗೆ ಪ್ರೇರಣೆ ಕೊಟ್ಟು ಬೋಸ್ರಿಗೆ ಬೆಂಬಲವಾಗಿ ನಿಲ್ಲುವಂತೆ ಕೇಳಿಕೊಂಡಿದ್ದು. ಆಕೆಯ ಪ್ರೇರಣಾದಾಯಿ ಮಾತುಗಳಿಂದಲೇ ರವೀಂದ್ರನಾಥ ಠಾಕೂರರು ಕೆಲವು ಸಿರಿವಂತರ ಮನೆಗೆ ಹೋಗಿ ಬೋಸ್ರಿಗೆ ಸಹಾಯ ಮಾಡುವಂತೆ ಬೇಡಿಕೊಂಡಿದ್ದು. ಹೇಳಿ ನಿವೇದಿತೆಯ ಋಣ ತೀರಿಸುತ್ತೀರಾ?
ಬೋಸರಿಗೆ ಆರ್ಥಿಕ ಸಹಾಯ ಮಾಡಿದ್ದಷ್ಟೇ ಅಲ್ಲ. ಅವರ ಎಲ್ಲಾ ಸಂಶೋಧನಾ ಪ್ರಬಂಧಗಳನ್ನೂ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಅದನ್ನು ಪ್ರಕಟಿಸಲು ಆಕೆ ಬೆನ್ನೆಲುಬಾಗಿ ನಿಂತಳು. ಬೋಸರೊಂದಿಗೆ ಸ್ವತಃ ತಾನೇ ಕೂತು ಅವರ ಪ್ರಬಂಧಗಳನ್ನು ಕರಾರುವಾಕ್ಕಾಗಿ ಮತ್ತು ಆಸಕ್ತಿಕರವಾಗಿ ದಾಖಲಿಸಿ ವಿಷಯದ ಮೇಲೆ ಆಸಕ್ತಿ ಇಲ್ಲದವರೂ ಅರ್ಥೈಸಿಕೊಳ್ಳುವಂತೆ ಪ್ರಭಾವಿಯಾಗಿ ಬರೆದದ್ದು ನಿವೇದಿತೆಯೇ. ರೆಸ್ಪಾನ್ಸ್ ಇನ್ ದ ಲಿವಿಂಗ್ ಅಂಡ್ ನಾನ್ ಲಿವಿಂಗ್, ಪ್ಲಾಂಟ್ ರೆಸ್ಪಾನ್ಸ್ ಮತ್ತು ಕಂಪಾರೆಟಿವ್ ಎಲೆಕ್ಟ್ರೊ ಸೈಕಾಲಜಿ ಈ ಮೂರು ಕೃತಿಗಳೂ ಅವಳದ್ದೇ ಸಹಕಾರದಿಂದ ಪ್ರಕಟಗೊಂಡವು. ಅವುಗಳಲ್ಲಿನ ಬರಹಕ್ಕೆ ಪೂರಕವಾದ ಚಿತ್ರಗಳೂ ನಿವೇದಿತೆಯದ್ದೇ! ಬ್ರಿಟೀಷ್ ವಿಜ್ಞಾನಿಗಳ ಮೇಲೆ ನಿರಂತರ ಒತ್ತಡ ಹೇರಿ ಬೋಸರ ಸಾಧನೆಯನ್ನು ಗೌರವಿಸುವಂತೆ ನಿವೇದಿತೆ ಮಾಡಿದ ಅವಿರತ ಪ್ರಯತ್ನದಿಂದಾಗಿಯೇ ಅವರಿಗೆ ಮುಂದೆ ನೈಟ್ಹುಡ್ ಪದವಿ ದಕ್ಕಿದ್ದು. 1901 ರಲ್ಲೊಮ್ಮೆ ಬೋಸ್ ದಂಪತಿಗಳು ಲಂಡನ್ನಿನಲ್ಲಿದ್ದಾಗ ಬೋಸರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಆಗ ಅವರ ಶುಶ್ರೂಷೆ ಮಾಡಿ ಆರೋಗ್ಯ ಹದ ತಪ್ಪದಂತೆ ನೋಡಿಕೊಂಡವಳೂ ಈ ಮಹಾತಾಯಿಯೇ.

jag3
ಗೊತ್ತಿರಲಿ. ನಿವೇದಿತೆ ಅಕಾಲ ಮೃತ್ಯುವಿಗೆ ತುತ್ತಾದ ಆಘಾತ ಎಂಥದ್ದಿತ್ತೆಂದರೆ, ಬೋಸರು ದೀರ್ಘಕಾಲ ಹಾಸಿಗೆ ಹಿಡಿದು ಮಲಗಿಬಿಟ್ಟಿದ್ದರು. ಅಂತಹುದೊಂದು ಕರುಳೂ ಅರಿಯದ ಸಂಬಂಧವನ್ನು ನಿರ್ಮಿಸಿ ಹೋಗಿದ್ದಳು ನಿವೇದಿತಾ. ಅವಳಿಗೆ ಜಗದೀಶ್ ಚಂದ್ರ ಬೋಸರ ಮೇಲೆ ಇಷ್ಟೊಂದು ಪ್ರೀತಿ-ಗೌರವ ಇರಲು ಕಾರಣ ಒಂದೇ. ಅವರು ಭಾರತದ ಕೀರ್ತಿ ಪತಾಕೆಯನ್ನು ವೈಜ್ಞಾನಿಕ ಪಥದಲ್ಲಿ ಮುಗಿಲೆತ್ತರಕ್ಕೆ ಹಾರಿಸಿದ್ದಾರೆಂದು ಮಾತ್ರ! ಓಹ್. ಅದೆಂತಹ ಭಾರತಭಕ್ತಿ.
ಬೋಸರ ವಿಚಾರವಾಗಿ ಇಂಗ್ಲೆಂಡಿನ ಅಸಡ್ಡೆಯನ್ನು ತೀವ್ರ ಪದಗಳಲ್ಲಿ ಖಂಡಿಸಿ, ಆಕೆ ‘ಬೋಸರೊಂದಿಗಿನ ಕದನ ಇಂಗ್ಲೆಂಡನ್ನು ವೈಯಕ್ತಿಕವಾಗಿಯೂ, ಸಾರ್ವತ್ರಿಕವಾಗಿಯೂ ಪ್ರಪಾತಕ್ಕೆ ತಳ್ಳುತ್ತಿದೆ. ಇಂಗ್ಲೆಂಡು ಅಥವಾ ಕೊನೆಯ ಪಕ್ಷ ಆಕೆಯೊಳಗಿದ್ದ ಪವಿತ್ರವಾದುದೆಲ್ಲವೂ ಸತ್ತಿದೆಯೆಂದೆನಿಸುತ್ತಿದೆ’ ಎಂದು ದುಃಖಪಟ್ಟಿದ್ದಳು. ಅದಾದ ಮೇಲೆಯೇ ಆಕೆಯ ಚಿಂತನೆಗಳಲ್ಲಿ ತೀವ್ರತರದ ಬದಲಾವಣೆ ಕಂಡು ಬಂದಿದ್ದು. ‘ಭೂಮಂಡಲದ ಮೇಲಿರುವವರಿಗೆಲ್ಲ ಸ್ವಾತಂತ್ರ್ಯವೆಂಬ ಇಂಗ್ಲೆಂಡಿನ ರಾಷ್ಟ್ರೀಯ ಆದರ್ಶದ ಮಾತು ವ್ಯರ್ಥವೆನಿಸುತ್ತಿದೆ. ಅದರ ಒಟ್ಟಾರೆ ಅರ್ಥ ಬ್ರಿಟೀಷರ ಸುಖ, ಗೆಲುವು ಮತ್ತು ಸಂಪತ್ತು ಮಾತ್ರ. ಇವೆಲ್ಲವೂ ನನ್ನ ಪಾಲಿಗೆ ಬೂದಿಯ ರಾಶಿಯಂತೆ ಕಾಣುತ್ತಿದೆ. ನಿಜಕ್ಕೂ ನನಗೆ ಭ್ರಮನಿರಸನವಾಗಿದೆ ಮತ್ತು ನಾನು ಆಘಾತಕ್ಕೊಳಗಾಗಿದ್ದೇನೆ’ ಎಂದು ಜೋಸೇಫಿನ್ ಮ್ಯಾಕ್ಲಿಯೊಡ್ಳಿಗೆ ಬರೆದ ಪತ್ರದಲ್ಲಿ ನೊಂದು ಉದ್ಗರಿಸಿದ್ದಳು.
ಸ್ವಾಮಿ ವಿವೇಕಾನಂದರು ಆಕೆಯ ಇಂಗ್ಲೆಂಡು ಪ್ರೇಮವನ್ನು ಪಾಪವೆಂದು ಕರೆದಾಗ ಅವಳು ನೊಂದುಕೊಂಡಿದ್ದಿರಬಹುದು. ಆದರೆ ಈಗ ಅವಳಿಗೆ ಆ ಪಾಪದ ಎಳೆ ಎಳೆಯೂ ಅನಾವರಣಗೊಂಡಿತ್ತು. ಅವಳೀಗ ಹೃದಯಾಂತರಗೊಂಡಿದ್ದಳು. ಅವಳ ನಿಷ್ಠೆ ಈಗ ಭಾರತದೆಡೆಗೆ ಪರಿಪೂರ್ಣವಾಗಿತ್ತು. ಈಗವಳು ಪಶ್ಚಿಮದ ನೆಲದಲ್ಲಿ ಭಾರತದ ಕುರಿತಂತೆ ಮಾತನಾಡುವಾಗ ಭಾವುಕಳಾಗುತ್ತಿದ್ದಳು. ‘ಭಾರತದ ನಾರಿಯರ ಆದರ್ಶ’, ‘ಭಾರತದ ನಾರಿಯರ ಭವಿಷ್ಯ’, ‘ಭಾರತದ ಸಮಸ್ಯೆ’, ‘ಭಾರತದಲ್ಲಿ ಇಂಗ್ಲೆಂಡಿನ ಸೋಲು’ ಹೀಗೆ ಒಂದಾದ ಮೇಲೊಂದು ಭಾಷಣಗಳನ್ನು ಆಕೆ ವಿದೇಶದ ನೆಲದಲ್ಲಿ ಮಾಡುವಾಗ ಜನ ಕಣ್ಣರಳಿಸಿಕೊಂಡು ಕೇಳುತ್ತಿದ್ದರು. ಪತ್ರಿಕೆಯೊಂದು ‘ಭಾರತದಲ್ಲಿನ ಆಳುವ ವರ್ಗಕ್ಕೆ ಸೇರಿದ ಅಪ್ರತಿಮ ಸಾಮಥ್ರ್ಯದ ಹೆಣ್ಣುಮಗಳು. ಇಂಗ್ಲೆಂಡಿನಲ್ಲಿ ಶ್ರೇಷ್ಠ ಜೀವನದ ಭರವಸೆ ಇದ್ದಾಗ್ಯೂ ಅದನ್ನು ತ್ಯಜಿಸಿ ಭಾರತದ ಮಹಿಳೆಯರ ಸೇವೆಗೆ ದೃಢವಾಗಿ ನಿಂತವಳು. ಮಾರ್ಗರೇಟ್ ನೋಬಲ್ ಅನ್ನೋ ಹೆಸರಿನ ಈಕೆ ಭಾರತದಲ್ಲಿದ್ದು ಹದಿನೆಂಟು ತಿಂಗಳುಗಳಷ್ಟೇ ಕಳೆದಿರಬಹುದು ಆದರೆ ಅನೇಕ ವರ್ಷಗಳಿಂದ ಅಲ್ಲಿಯೇ ಇರುವವರಿಗಿಂತ ಹೆಚ್ಚು ಭಾರತವನ್ನು ಅರಿತಿದ್ದಾಳೆ. ಟಿಪ್ಪಣಿಯೇ ಇಲ್ಲದೇ ಮಾತಾಡುವ, ಭಾರತದ ಬಡವರ ಕುರಿತ ಅಪಾರ ಕರುಣೆಯಿಂದ ಮತ್ತು ಭಾರತದ ಕುರಿತಂತೆ ಇಂಗ್ಲೀಷರಿಗಿರುವ ತಪ್ಪು ಕಲ್ಪನೆಯನ್ನು ಛಿದ್ರಗೊಳಿಸುವ ತುಡಿತದಿಂದ ಕೂಡಿದ ಆಕೆಯ ವಾಕ್ಚಾತುರ್ಯ ಬೆಚ್ಚಿ ಬೀಳಿಸುವಂಥದ್ದು’ ಎಂದು ಆಕೆಯ ಕುರಿತಂತೆ ಉದ್ಗಾರವೆತ್ತಿತ್ತು. ಸ್ವಾಮಿ ವಿವೇಕಾನಂದರನ್ನೇ ಜೀರ್ಣಿಸಿಕೊಳ್ಳಲು ಹೆಣಗಾಡಿದ್ದ ಕ್ರೈಸ್ತ ಮಿಶನರಿಗಳಿಗೆ ನಿವೇದಿತಾಳ ಸವಾಲು ಎದುರಿಸುವುದು ಮತ್ತೂ ಕಷ್ಟವಾಯಿತು. ಸ್ಕಾಟ್ಲ್ಯಾಂಡಿನಲ್ಲಿ ಆಕೆ ಮಾತನಾಡುವಾಗ ಹಿಂದೂ ಧರ್ಮದಿಂದ ಮತಾಂತರಗೊಂಡಿದ್ದ ತರುಣ ಕ್ರಿಶ್ಚಿಯನ್ನನೊಬ್ಬನನ್ನು ಆಕೆಯೆದುರು ನಿಲ್ಲಿಸಿದರು. ನಿವೇದಿತೆಯ ಭಾಷಣ ಮುಗಿಯುತ್ತಿದ್ದಂತೆ ಆತ ಎದ್ದು ನಿಂತ. ಅವಳು ಮಾತಾಡಿದ್ದನ್ನೆಲ್ಲ ವಿರೋಧಿಸಲೆಂದೇ ಮಿಶನರಿಗಳು ತರಬೇತು ನೀಡಿ ಕರಕೊಂಡು ಬಂದಿದ್ದರು. ಆದರೆ ನಿವೇದಿತೆಯ ಮಾತಿನ ಪ್ರಭಾವಕ್ಕೆ ಒಳಗಾದ ಆತ ಎದ್ದು ನಿಂತು ಆಕೆಯನ್ನೂ ಬಲು ಪ್ರೀತಿಯಿಂದ ಮಾತನಾಡಿಸಿದ, ಆಕೆ ಹೇಳಿದ್ದೆಲ್ಲವೂ ಸತ್ಯವೆಂದು ಅನುಮೋದಿಸಿದ. ಮಿಶನರಿಗಳು ಪೆಚ್ಚಾದರು. ಭಾರತೀಯನೊಬ್ಬನ ಈ ಬಲಾಢ್ಯ ಮನಸ್ಥಿತಿಯನ್ನು ನಿವೇದಿತಾ ಕೊಂಡಾಡಿದಳು. ಆದರೆ ಮಿಶನರಿಗಳ ವಿರುದ್ಧ ಆಕೆಯ ಆಕ್ರೋಶ ಹೆಚ್ಚಾಯಿತು. ಕುರಿಗಳ ಹಿಂಡಿನಲ್ಲಿ ತೋಳ ಎಂಬೊಂದು ಪುಸ್ತಕ ಬರೆದು ಮಿಶನರಿಗಳ ಒಟ್ಟಾರೆ ಕಾರ್ಯ ಸೂಚಿಯನ್ನು ವಿವರಿಸಿ ಅವರು ಭಾರತದ ಸ್ತ್ರೀಯರ ಮೇಲೆ ಮಾಡಿದ ಆರೋಪಗಳಿಗೆಲ್ಲ ಸಮರ್ಥ ಉತ್ತರ ನೀಡಿದಳು.
ಈ ಹೊತ್ತಿನಲ್ಲಿಯೇ ಭಾರತದಲ್ಲಿ ಮಿಶನರಿಗಳಷ್ಟೇ ಅಲ್ಲ ಇಲ್ಲಿನ ಬ್ರಿಟೀಷ್ ಆಡಳಿತವೂ ಅತ್ಯಂತ ಕ್ರೂರಿ ಎಂದರಿತ ಆಕೆ ಭಾರತದ ಅಭಿವೃದ್ಧಿಗೆ ಏಕೈಕ ಮಾರ್ಗ ರಾಜಕೀಯ ಸ್ವಾತಂತ್ರ್ಯ ಮಾತ್ರವೆಂದು ಸ್ಪಷ್ಟ ನಿರ್ಧಾರಕ್ಕೆ ಬಂದಳು. ಅವಳ ಮನಸಲ್ಲಿ ಈಗ ಇಂಗ್ಲೆಂಡಿನ ವಿರುದ್ಧ ಧಗಧಗಿಸುವ ಆಕ್ರೋಶವಿತ್ತು. ಭಾರತದ ಅಂತಃಸತ್ತ್ವದ ಲಾವಾ ಸಿಡಿಯದಂತೆ ತಡೆದಿರುವ ಈ ಬ್ರಿಟೀಷ್ ಆಡಳಿತದ ಮುಚ್ಚಳವನ್ನು ತೆರೆದು ಬಿಸಾಡಲು ಆಕೆ ಸಂಪೂರ್ಣ ಸಮರ್ಪಣೆಗೆ ಸಜ್ಜಾಗಿದ್ದಳು. ಹೀಗಾಗಿಯೇ ತನಗೆ ಅತ್ಯಂತ ಪ್ರಿಯವಾಗಿದ್ದ ಆಧ್ಯಾತ್ಮದ ಹಾದಿ ಬಿಟ್ಟು ರಾಜಕೀಯದ ಮಾರ್ಗ ಆರಿಸಿಕೊಂಡಳು.
ಹೇಳಿ. ಈ ಜನುಮದಲ್ಲಿ ಆಕೆಯ ಋಣ ನಾವು ತೀರಿಸುತ್ತೇವಾ?

ನಿದ್ದೆಯಲ್ಲಿ ನಡೆದಾಡುವ ಪುರುಷತ್ವಹೀನ ಜನಾಂಗ!

ನಿದ್ದೆಯಲ್ಲಿ ನಡೆದಾಡುವ ಪುರುಷತ್ವಹೀನ ಜನಾಂಗ!

ನಿವೇದಿತಾ ಇಷ್ಟೊಂದು ಭಾರತಪ್ರೇಮಿಯಾಗಿದ್ದು ಯಾವಾಗಿನಿಂದ? ಬರಿ ಸ್ವಾಮಿ ವಿವೇಕಾನಂದರೆಡೆಗಿನ ಗೌರವದಿಂದಾಗಿಯೇ ಆಕೆ ಭಾರತವನ್ನು ಪ್ರೀತಿಸಿದ್ದಾ? ಹಾಗಿದ್ದರೆ ಅದು ಇಷ್ಟು ಕಠೋರವಾದ ಮತ್ತು ದೀರ್ಘಕಾಲದ ಭಾರತ ಭಕ್ತಿಯಾಗಿ ಪರಿವರ್ತನೆಯಾಗಲು ಸಾಧ್ಯವೇ ಆಗುತ್ತಿರಲಿಲ್ಲ. ತಾನೇ ಶುರು ಮಾಡಿದ ಹೆಣ್ಣುಮಕ್ಕಳ ಶಾಲೆಯಲ್ಲಿ ಭಾರತದ ರಾಣಿ ಯಾರು? ಎಂಬ ಪ್ರಶ್ನೆಗೆ ಪುಟ್ಟ ಮಕ್ಕಳು ‘ಕ್ವೀನ್ ವಿಕ್ಟೋರಿಯಾ’ ಎಂದಾಗ ಕೆಂಡವಾದ ನಿವೇದಿತಾ ‘ಅಲ್ಲಲ್ಲ ಭಾರತದ ರಾಣಿ ಸೀತೆ, ಸಾವಿತ್ರಿ’ ಎಂದಳಲ್ಲ. ಅವಳಿಗೆ ಈ ದೇಶದ ಅಂತರಂಗ ಅರಿವಾದದ್ದು ಹೇಗೆ?

ಗುರ್ಮೆಹೆರ್ ಕೌರ್. 1999ರಲ್ಲಿ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗೆ ಕಾದಾಡುತ್ತ ಪ್ರಾಣತ್ಯಾಗ ಮಾಡಿದ ಜಲಂಧರ್ನ ಕ್ಯಾಪ್ಟನ್ ಮನ್ದೀಪ್ಸಿಂಗ್ರ ಮಗಳು. ಪಾಕೀಸ್ತಾನದೊಂದಿಗೆ ಶಾಂತ ಬಾಂಧವ್ಯವಿರಲೆಂದು ಭಾರತದ ನೇತಾರರಿಗೆ ತಾಕೀತು ಮಾಡಿದವಳು. ‘ಪಾಕೀಸ್ತಾನದೊಂದಿಗೆ ಯುದ್ಧ ಬೇಡ, ಇಷ್ಟಕ್ಕೂ ನನ್ನ ತಂದೆಯನ್ನು ಕೊಂದದ್ದು ಪಾಕೀಸ್ತಾನವಲ್ಲ ಯುದ್ಧ’ ಎಂದು ವಿವಾದದ ಮಾತುಗಳನ್ನಾಡಿದವಳು. ಈಕೆಯ ಈ ಹೇಳಿಕೆ ಬಲು ಹಿಂದೆಯೇ ಬಂದಿತ್ತಾದರೂ ಚುನಾವಣೆಯ ಸಂದರ್ಭದಲ್ಲಿ ಇದಕ್ಕೆ ಮಹತ್ವ ಕೊಟ್ಟು ಮತ್ತೊಂದು ಅಸಹಿಷ್ಣುತೆಯ ಪರ್ವ ಶುರು ಮಾಡಬೇಕೆಂದು ಬುದ್ಧಿ ಜೀವಿಗಳು ಪ್ರಯತ್ನ ಪಟ್ಟಿದ್ದರು. ತೋಳ ಬಂತು ತೋಳದ ಕತೆಯಂತಾಯ್ತು ಅವರ ಪಾಡು. ಜನ ಈ ಬಾರಿ ತಲೆಕೆಡಿಸಿಕೊಳ್ಳಲಿಲ್ಲ. ಬೆದರಿಸುವ ಒಂದು ಅಸ್ತ್ರವನ್ನೂ ಕಳೆದುಕೊಂಡರು ಎಡವಾದಿಗಳು.
ಯುದ್ಧದ ಚರ್ಚೆ ಆಗಬೇಕಾದ್ದೇ. ಭಾರತ ತನ್ನ ಇತಿಹಾಸದುದ್ದಕ್ಕೂ ಮತ್ತೊಬ್ಬರ ಮೇಲೆ ಏರಿಹೋದ ಉದಾಹರಣೆಯೇ ಇಲ್ಲ. ಕ್ಯಾಪ್ಟನ್ ಮನ್ದೀಪ್ಸಿಂಗ್ರ ಸಾವೂ ಪಾಕೀ ನೆಲದಲ್ಲಲ್ಲ, ಭಾರತದಲ್ಲಿಯೇ ಆಗಿದ್ದು. ಕಾರ್ಗಿಲ್ ಕದನವೂ ಕೊನೆಯ ಕ್ಷಣದವರೆಗೆ ನಡೆದದ್ದು ನಮ್ಮದೇ ಗಡಿಯೊಳಗೆ. ನಮ್ಮ ಸೈನಿಕರು ಪೂರಾ ಶರಣಾಗತರಾಗಿ ರಾಷ್ಟ್ರವನ್ನು ಹರಿವಾಣದಲ್ಲಿಟ್ಟು ಶತ್ರುಗಳ ಕೈಗೊಪ್ಪಿಸಿ ಶಾಂತಿಯ ಜಪ ಮಾಡಬೇಕೆಂದು ಇವರೆಲ್ಲರ ಅಭೀಪ್ಸೆಯೇನು?
ಅಕ್ಕ ನಿವೇದಿತಾ ಈ ಕುರಿತಂತೆ ತನ್ನ ‘ಆಕ್ರಮಣಕಾರಿ ಹಿಂದುತ್ವ’ದಲ್ಲಿ ಬಲು ವಿಷದವಾಗಿ ದಾಖಲಿಸುತ್ತಾಳೆ. ‘ಆಕ್ರಮಣಕಾರಿ ಮನೋವೃತ್ತಿ ನಮ್ಮಲ್ಲಿ ಹೊಸ ಚೈತನ್ಯವನ್ನು ಹುಟ್ಟುಹಾಕುತ್ತದೆ. ಆಗ ಗುರಿಯೊಂದನ್ನುಳಿದು ಮತ್ತೇನೂ ಕಾಣದು. ಲಾಭ-ನಷ್ಟಗಳನ್ನು ಲೆಕ್ಕ ಹಾಕುವ, ಹಿಂಜರಿಯುವ ಮನೋವೃತ್ತಿ ಮಾಯವಾಗುತ್ತದೆ. ಕ್ಷುಲ್ಲಕವಾದುದನ್ನು ಪಡೆಯುವ ಆಕಾಂಕ್ಷೆ ಮಾಯವಾಗಿ ವಿಶಾಲವಾದುದನ್ನು ಗಳಿಸುವ, ಸೃಷ್ಟಿಸುವ ಬಯಕೆ ಜಾಗೃತವಾಗುತ್ತದೆ. ನೋಡುತ್ತಿರಿ, ಭವಿಷ್ಯದಲ್ಲಿ ಹಿಂದಿನದಕ್ಕಿಂತ ಹೆಚ್ಚು ಬಲಿದಾನದ ಅವಕಾಶಗಳು ಸೃಷ್ಟಿಯಾಗುತ್ತವೆ. ನಾವು ನಮ್ಮ ಪೂರ್ವಜರಿಗಿಂತ ಭವಿಷ್ಯದ ಕುಡಿಗಳನ್ನು ಹೆಚ್ಚು ಮಹಾತ್ಮರನ್ನಾಗಿಸುವ ಅವಕಾಶ ಪಡೆಯುತ್ತೇವೆ’ ಎನ್ನುತ್ತಾಳೆ. ಹಾಗಂತ ಇದ್ಯಾವುದೂ ಪ್ರತ್ಯಕ್ಷ ರಣಾಂಗಣದ ಕದನಕ್ಕೆ ಆಹ್ವಾನವಲ್ಲ. ಮಲಗಿರುವ ಸಿಂಹವನ್ನು ಬಡಿದೆಬ್ಬಿಸುವ ಆಕೆಯ ಪ್ರಯತ್ನ. ತತ್ಕಾಲೀನ ಸಮಾಜದ ದುಸ್ಥಿತಿ ಆಕೆಯ ಮನಸ್ಸನ್ನು ಕಲಕಿಸಿಬಿಟ್ಟಿತ್ತು. ಆಕೆಗೆ ಈ ರಾಷ್ಟ್ರದ ಮೇಲೆ ಅಪಾರವಾದ ಗೌರವವಿತ್ತು. ಜೊತೆಗೆ ಇದರ ನ್ಯೂನತೆಗಳ ಅರಿವೂ ಕೂಡ. ವಿವೇಕಾನಂದರ ಪ್ರತಿಮೂರ್ತಿಯಾಗಿದ್ದಳು ಆಕೆ. ಜಗತ್ತು ಭಾರತಕ್ಕೆ ಮಾಡುತ್ತಿರುವ ಅನ್ಯಾಯವನ್ನು ಭಾರತೀಯ ಬುದ್ಧಿವಂತರಿಗಿಂತಲೂ ಸಮರ್ಥವಾಗಿ ಅರ್ಥೈಸಿಕೊಂಡಿದ್ದಳು. ‘ಆಧುನಿಕ ಜಗತ್ತು ತುಲನಾತ್ಮಕ ಅಧ್ಯಯನಗಳಿಂದ ಪರಿಪುಷ್ಟವಾಗುತ್ತಿದೆ. ಬಾಗ್ದಾದಿನ ಕಡತಗಳನ್ನು ತನಿಖೆ ಮಾಡಬೇಕೆಂದರೆ ಸ್ಪೇನಿನ ಕಡತಗಳನ್ನು ಅರ್ಥೈಸಿಕೊಳ್ಳಲೇಬೇಕಿದೆ. ಜರ್ಮನಿಯ ಕಾಡುಗಳಲ್ಲಿನ ಕುದುರೆಗಳ ಜನನಕ್ಕೆ ಸಹಕಾರಿಯಾಗದಿದ್ದರೆ ಫ್ರಾನ್ಸಿನ ಅಶ್ವದಳದ ಸ್ವರೂಪ ನಿರ್ಧರಿಸುವುದು ಕಷ್ಟ’ ಎಂದು ಸ್ಪಷ್ಟಪಡಿಸುತ್ತಾಳೆ ಅಕ್ಕ. ಹೀಗೆ ಜಗತ್ತಿನ ರಾಷ್ಟ್ರಗಳೆಲ್ಲ ಒಂದಕ್ಕೊಂದು ಬೆಸೆದುಕೊಂಡು ಜಗತ್ತೇ ಕಿರಿದಾಗಿರುವ ಹೊತ್ತು ಇದು. ಹೀಗಿರುವಾಗಲೂ ಭಾರತವನ್ನು ಮಾತ್ರ ಜಗತ್ತು ಅವಗಣನೆ ಮಾಡುವುದನ್ನು ಆಕೆ ಸಹಿಸಿಕೊಳ್ಳಲು ಸಿದ್ಧಳಿರಲಿಲ್ಲ. ಜ್ಞಾನಾಕಾಂಕ್ಷಿಗಳಿಗೆ ಜನಾಂಗೀಯ ಭೇದದ ಪೂರ್ವಗ್ರಹ ಸಲ್ಲದೆಂದು ವಾದಿಸುತ್ತಿದ್ದಳು. ಹಾಗಂತ ಇದಕ್ಕೆಲ್ಲ ಪಶ್ಚಿಮವೇ ಕಾರಣವೆಂಬ ಬಾಲಿಶ ಮನೋಗತವೂ ಅವಳದಲ್ಲ. ಸಮಸ್ಯೆಯ ಆಳಕ್ಕೆ ಇಳಿದು ಭಾರತವನ್ನು ಪೂರ್ಣ ಪ್ರಮಾಣದಲ್ಲಿ ಹೊಕ್ಕು ನೋಡಿದ್ದಳು. ಯಾವ ಭಾರತ ಪಂಜಾಬಿನ ಗುರ್ಮೆಹೆರ್ ಕೌರ್ಗೆ ಇಂದಿಗೂ ಅರ್ಥವಾಗಿಲ್ಲವೋ ಆ ಭಾರತ ನಿವೇದಿತಾಳ ಎದುರಿಗೆ ಅಂದೇ ಅನಾವರಣಗೊಂಡಿತ್ತು. ಬಹುಶಃ ವಿವೇಕಾನಂದರ ಸಹವಾಸ ಲಾಭವಿರಬೇಕು. ನಿನ್ನ ಮಿತ್ರರನ್ನು ತೋರಿಸು, ನೀನು ಯಾರೆಂದು ಹೇಳುವೆ ಅನ್ನೋದು ಅದಕ್ಕೇ!

Aggressive H

ಈ ದೇಶದ ಇತಿಹಾಸದ ಕುರಿತಂತೆ ಆಕೆಯ ಅರಿವು ಬಲು ಆಳವಾದುದು. ಯುದ್ಧದ ಕುರಿತಂತೆ ನಮ್ಮವರೇ ನಮಗೆ ಶಾಂತಿಯ ಬೋಧನೆ ಮಾಡುವಾಗ, ನಿವೇದಿತಾ ಆಕ್ರಮಣಕಾರಿ ಮನೋವೃತ್ತಿ ಇಲ್ಲವಾದುದೇ ನಮ್ಮ ಹಿನ್ನೆಡೆಗೆ ಕಾರಣವೆಂದು ಬಲವಾಗಿ ನಂಬಿದ್ದಳು. ‘ಭಾರತೀಯ ಮನಸ್ಸು ಜಗತ್ತಿನಲ್ಲಿ ತನ್ನದೇ ಜಾಗವನ್ನು ಜಹಗೀರಿಯೆಂಬಂತೆ ಆಕ್ರಮಿಸಿಕೊಳ್ಳಲು ಎಂದಿಗೂ ಪ್ರಯತ್ನ ಮಾಡಲಿಲ್ಲ. ತೀರಾ ಆಧುನಿಕವಾದುದನ್ನು ಕೊಟ್ಟಾಗಲೂ ಆಜ್ಞಾಪಾಲಕನಂತೆ ಸ್ವೀಕರಿಸಿ ತೃಪ್ತಿಪಟ್ಟಿದೆ. ಅಷ್ಟೇ ಅಲ್ಲ. ಅಪರಿಚಿತವಾದ ಈ ಆಧುನಿಕತೆಯ ಹೊಸತನದ ಕಣ್ಣುಕೋರೈಸುವ ಬೆಳಕಿಗೆ ಕಣ್ಮುಚ್ಚಿ ಕುಳಿತಿದೆ. ಕಳೆದ ಎರಡು ಪೀಳಿಗೆಗಳಿಂದ ಭಾರತೀಯ ಜನ ಪುರುಷತ್ವಹೀನರಾಗಿ, ಪರಿಸ್ಥಿತಿಗಳಿಗೆ ಸೂಕ್ತವಾಗಿ ಪ್ರತಿಸ್ಪಂದಿಸುವ ಸ್ವಾತಂತ್ರ್ಯ ಕಳಕೊಂಡು, ಸಾಮಾನ್ಯ ಜ್ಞಾನವೂ ಇಲ್ಲದವರಾಗಿ ನಿದ್ದೆಯಲ್ಲಿ ನಡೆಯುವ ಜನಾಂಗವಾಗಿಬಿಟ್ಟಿದ್ದಾರೆ’ ಎಂದಿದ್ದಳು ಅಕ್ಕ.
ಹೌದು. ನಾವಿನ್ನೂ ನಿದ್ದೆಯಲ್ಲಿ ನಡೆಯುವ ಜನಾಂಗವೇ. ಯಾವುದನ್ನಾದರೂ ಪ್ರತಿಭಟಿಸುವ ಸಾಮಥ್ರ್ಯವನ್ನು ಕಳೆದುಕೊಂಡಿದ್ದೇವೆ. ಶ್ರದ್ಧೆ ನಯಾಪೈಸೆಯಷ್ಟು ಇಲ್ಲ. ರಾಷ್ಟ್ರಗೀತೆ ಹಾಡುವಾಗ ಗೌರವಿಸಬೇಕೋ, ಬೇಡವೋ ಎಂಬ ಚರ್ಚೆ ತರುಣರ ನಡುವೆ. ಮಹಾಪುರುಷರ ಅವಹೇಳನ ಎಗ್ಗಿಲ್ಲದೇ ನಡೆಯುತ್ತಿದೆ. ಕೊನೆಗೆ ರಾಷ್ಟ್ರವನ್ನೇ ಹೀಗಳೆಯುವ, ತುಂಡಾಗಲೆಂದು ಬಯಸುವ ನವ ಜನಾಂಗದ ತರುಣರು ಸೃಷ್ಟಿಯಾಗಿಬಿಟ್ಟಿದ್ದಾರೆ. ಗುರುಸ್ವರೂಪಿ ಭಾರತವನ್ನು ಆರಾಧಿಸುವ ಯೌವ್ವನ ತಯಾರಾಗಬೇಕಿದೆ. ‘ಅವನು ಪೂಜಿಸಲೇಬೇಕು. ಏಕೆಂದರೆ ನಿಷ್ಠೆಯಿಂದ ಮಾತ್ರ ಪುರುಷತ್ವ ಸಿದ್ಧಿಸುತ್ತದೆ. ಆದರೆ ಶ್ರದ್ಧೆಯಲ್ಲಿ ಒಂದೆಳೆ ಕಡಿಮೆಯಾದರೆ, ಸ್ವಹಿತಾಸಕ್ತಿ ಎಳ್ಳಷ್ಟು ಜಾಗೃತವಾದರೆ ಅಂತಹವನನ್ನು ಗುರು ಶಿಷ್ಯತ್ವದಿಂದ ಹೊರದಬ್ಬಲೇಬೇಕು’ ಎನ್ನುತ್ತಾಳೆ ನಿವೇದಿತಾ.
ಅನೇಕ ಬಾರಿ ಆಕೆಯ ಗ್ರಹಿಕೆಯ ಕುರಿತಂತೆ ಅಚ್ಚರಿ ಎನಿಸುತ್ತದೆ. ಇಂಗ್ಲೆಂಡಿನ ವಿರುದ್ಧ ನಡೆದ ಐರಿಷ್ ಚಳವಳಿಗಳಲ್ಲಿ ತಾತ ಜಾನ್ ನೋಬಲ್ ಭಾಗವಹಿಸಿದ್ದರಿಂದ ಆಕೆಯ ರಕ್ತದಲ್ಲಿಯೇ ಸ್ವಾತಂತ್ರ್ಯದೋನ್ಮಾದ ಹರಿದಿರಲು ಸಾಕು. ಮುಕ್ತಿಯ ವಾಂಛೆಯೂ ತೀವ್ರವಾಗಿತ್ತು. ಧ್ಯಾನಸ್ಥಳಾದರೆ ಬಾಹ್ಯಪ್ರಜ್ಞೆ ಕಳೆದುಕೊಳ್ಳುವಂತಾಗಿರುತ್ತಿದ್ದಳು. ಇವೆಲ್ಲದರ ನಡುವೆ ಈ ದೇಶದ ತರುಣರಿಗೆ ಉತ್ಸಾಹದ ಚಿಲುಮೆಯಾಗಿ ಸ್ಫೂರ್ತಿಯ ಕೇಂದ್ರವಾಗಿ ನಿಂತ ಆಕೆಯದ್ದು ನಿಜಕ್ಕೂ ಹತ್ತು ಮುಖ, ನೂರಾರು ಕೈಗಳು. ಹಾಗೆಂದೇ ತಮಿಳಿನ ಕ್ರಾಂತಿಕವಿ ಸುಬ್ರಹ್ಮಣ್ಯ ಭಾರತಿ ‘ಶ್ರೀಕೃಷ್ಣನು ಅರ್ಜುನನಿಗೆ ವಿಶ್ವರೂಪ ತೋರಿಸಿ ಆತ್ಮ ಸಾಕ್ಷಾತ್ಕಾರ ಬೋಧಿಸಿದಂತೆಯೇ ನನಗೆ ಭಾರತ ಮಾತೆಯ ನಿಜರೂಪವನ್ನು ತೋರಿಸಿ ನನ್ನಲ್ಲಿ ದೇಶಭಕ್ತಿಯ ಕಿಚ್ಚನ್ನು ಜಾಗೃತಗೊಳಿಸಿದ ಗುರುವಿನ ಚರಣಗಳಿಗೆ’ ಎಂದು ಬರೆದು ತನ್ನ ಪುಸ್ತಕ ‘ಸ್ವದೇಶ ಗೀತಗಳು’ವನ್ನು ಆಕೆಗೆ ಸಮರ್ಪಿಸಿದ್ದು. ಜನ್ಮಭೂಮಿ ಎಂಬ ಮತ್ತೊಂದು ಕೃತಿಯನ್ನು ಅರ್ಪಿಸುವಾಗ ‘ಕ್ಷಣಾರ್ಧದಲ್ಲಿ ಒಂದೇ ನೋಟದಿಂದ ನನಗೆ ಮಾತೃಭೂಮಿಯ ಸೇವಾದೀಕ್ಷೆ ನೀಡಿ ತ್ಯಾಗದ ಮಹಿಮೆಯನ್ನು ಬೋಧಿಸಿದ, ಭಗವಾನ್ ವಿವೇಕಾನಂದರ ಧರ್ಮಪುತ್ರಿ ನಿವೇದಿತಾ ದೇವಿಯವರಿಗೆ’ ಎಂದು ಬರೆದುಕೊಂಡಿದ್ದರು ಸುಬ್ರಹ್ಮಣ್ಯ ಭಾರತಿ.

Subramanya_Bharathi
ನಿವೇದಿತಾ ಇಷ್ಟೊಂದು ಭಾರತಪ್ರೇಮಿಯಾಗಿದ್ದು ಯಾವಾಗಿನಿಂದ? ಬರಿ ಸ್ವಾಮಿ ವಿವೇಕಾನಂದರೆಡೆಗಿನ ಗೌರವದಿಂದಾಗಿಯೇ ಆಕೆ ಭಾರತವನ್ನು ಪ್ರೀತಿಸಿದ್ದಾ? ಹಾಗಿದ್ದರೆ ಅದು ಇಷ್ಟು ಕಠೋರವಾದ ಮತ್ತು ದೀರ್ಘಕಾಲದ ಭಾರತ ಭಕ್ತಿಯಾಗಿ ಪರಿವರ್ತನೆಯಾಗಲು ಸಾಧ್ಯವೇ ಆಗುತ್ತಿರಲಿಲ್ಲ. ತಾನೇ ಶುರು ಮಾಡಿದ ಹೆಣ್ಣುಮಕ್ಕಳ ಶಾಲೆಯಲ್ಲಿ ಭಾರತದ ರಾಣಿ ಯಾರು? ಎಂಬ ಪ್ರಶ್ನೆಗೆ ಪುಟ್ಟ ಮಕ್ಕಳು ‘ಕ್ವೀನ್ ವಿಕ್ಟೋರಿಯಾ’ ಎಂದಾಗ ಕೆಂಡವಾದ ನಿವೇದಿತಾ ‘ಅಲ್ಲಲ್ಲ ಭಾರತದ ರಾಣಿ ಸೀತೆ, ಸಾವಿತ್ರಿ’ ಎಂದಳಲ್ಲ. ಅವಳಿಗೆ ಈ ದೇಶದ ಅಂತರಂಗ ಅರಿವಾದದ್ದು ಹೇಗೆ? ಸಮಯ ಸಿಕ್ಕಾಗ ಈ ದೇಶದ ಕಥನಗಳನ್ನು ಪುರಾಣವೆಂದು ನಾವೇ ಆಡಿಕೊಂಡು ನಕ್ಕಿಬಿಡುತ್ತೇವೆ. ಅಂತಹುದರಲ್ಲಿ ನಿವೇದಿತಾ 1899ರಲ್ಲಿಯೇ ಧ್ರುವ, ಪ್ರಹ್ಲಾದ, ಗೋಪಾಲರ ಬಾಲ್ಯದ ಕುರಿತ ಕಥನಗಳನ್ನು ಓದಿ ಅದನ್ನು ಆಂಗ್ಲರಿಗಾಗಿ ಬರೆಯತೊಡಗಿದ್ದಳು. ಗ್ರಂಥಾಲಯಗಳಲ್ಲಿ ಓದುತ್ತಿದ್ದಳು, ವಿವೇಕಾನಂದರನ್ನು ಕೇಳುತ್ತಿದ್ದಳು. ಕೊನೆಗೆ ರಾಮಕೃಷ್ಣರ ಸ್ತ್ರೀ ಭಕ್ತರನ್ನೂ ಈ ಕಥೆಯ ಕುರಿತಂತೆ ವಿಚಾರಿಸಿ ದಾಖಲಿಸಿಕೊಳ್ಳುತ್ತಿದ್ದಳು. 1906 ರಲ್ಲಿ ಈ ಕೃತಿ ಸಿದ್ಧವಾದಾಗ ಇಂಗ್ಲೆಂಡು ಮತ್ತು ಅಮೇರಿಕಾದಲ್ಲಿ ಅದು ಏಕಕಾಲಕ್ಕೆ ಬೆಳಕು ಕಾಣುವಂತೆ ಪ್ರಯತ್ನಿಸಬೇಕೆಂದು ಗೆಳತಿ ಮಿಸೆಸ್ ಬುಲ್ಳಿಗೆ ಪತ್ರ ಬರೆದಿದ್ದಳು. ರಾಮಾಯಣ, ಮಹಾಭಾರತ, ಪುರಾಣಗಳಲ್ಲದೇ ಕುಮಾರ ಸಂಭವದಂತಹ ಕಾವ್ಯ ವಿಶೇಷಗಳನ್ನೂ ಓದಿ ಶ್ರೇಷ್ಠ ಕಥೆಗಳನ್ನು ಹೆಕ್ಕಿ ತೆಗೆದಿದ್ದಳು. ಪಶ್ಚಿಮದವರ ಪಾಲಿಗೆ ಆಕೆ ಭಾರತದ ಅಜ್ಜಿಯಾದಳು. ಕಥೆ ಹಳೆಯದಾದರೂ ಸಾಹಿತ್ಯದ ಸೌಂದರ್ಯವನ್ನು ಅದಕ್ಕೆ ತುಂಬಿದಳು. ರೋಮಾಂಚನಕಾರಿ ಮತ್ತು ಕುತೂಹಲಭರಿತವಾಗಿರುವಂತೆ ಅದನ್ನು ರಚಿಸಿದಳು. ಹೀಗಾಗಿ ಭಾರತೀಯರಿಗೂ ಅದು ವಿಶೇಷವೆನಿಸಿದ್ದರಲ್ಲಿ ಅಚ್ಚರಿಯಿಲ್ಲ.
ಬರಿಯ ಕಥೆಗಳನ್ನು ಹೇಳುವುದರಲ್ಲಿ ಮತ್ತು ಲೇಖನಗಳನ್ನು ಬರೆಯುವುದರಲ್ಲಿ ಆಕೆ ತನ್ನ ಕಾಲ ಕಳೆಯಲಿಲ್ಲ. ಖುದ್ದು ತರುಣರನ್ನು ಭೇಟಿಯಾದಳು. ಅವರೊಂದಿಗೆ ಮಾತನಾಡಿದಳು. ಅವರೊಳಗೆ ಹೋರಾಟದ ಕೆಚ್ಚು ತುಂಬಿದಳು. ಹಿಂದೂವಿನಲ್ಲಿ ರಕ್ತಗತವಾಗಿಬಿಟ್ಟಿದ್ದ ಕೆಲವು ದೌರ್ಬಲ್ಯಗಳ ಕಳೆಯನ್ನು ಕಿತ್ತು ಬಿಸಾಡಲು ಪ್ರೇರೇಪಣೆ ನೀಡಿದಳು.
‘ನಮ್ಮ ವಿರುದ್ಧ ನಿಂತಿರುವ ಶಕ್ತಿಯೊಡನೆ ತೊಡೆತಟ್ಟಿ ಗುದ್ದಾಟಕ್ಕೆ ತೊಡಗುವುದರಿಂದ ಸ್ವೀಕರಿಸುವುದರಲ್ಲೇ ತೃಪ್ತಿ ಪಡುತ್ತಿರುವ ನಾವು, ಜಗತ್ತಿನ ಒಟ್ಟಾರೆ ಸಂಸ್ಕೃತಿಗೆ ಒಂದಷ್ಟು ಸೇರಿಸಬಹುದು ಕೂಡ. ಇಲ್ಲಿಂದಾಚೆಗೆ ನಾವು ನಿಷ್ಕ್ರಿಯರಲ್ಲ, ಸಕ್ರಿಯರು. ಭಾರತವನ್ನು ಭಾರತೀಕರಣಗೊಳಿಸುವುದು, ರಾಷ್ಟ್ರೀಯ ಚಿಂತನಾ ಭೂಮಿಕೆಯನ್ನು ಸಿದ್ಧಪಡಿಸುವುದು, ಹೋರಾಟದ ಹಾದಿಯನ್ನು ರೂಪಿಸುವುದು ಇವೆಲ್ಲವನ್ನೂ ನಮ್ಮ ಪರವಾಗಿ ಬೇರೆಯವರು ಮಾಡುವುದಲ್ಲ ಇನ್ನು ಮುಂದೆ ನಾವೇ ಮಾಡಬೇಕು. ಇಲ್ಲಿಂದಾಚೆಗೆ ನಾವು ಯಾವುದೇ ನೀತಿಗಳನ್ನು ಹೊರಗಿನಿಂದ ಆಮದು ಮಾಡಿಕೊಳ್ಳಬೇಕಿಲ್ಲ, ನಮಗೆ ಬೇಕಾದ ನೀತಿಗಳನ್ನು ನಾವೇ ರೂಪಿಸೋಣ. ಹತ್ತು ರೂಪಾಯಿ ಸಂಬಳದ ಕಾರಕೂನರ ಸೃಷ್ಟಿ ಮಾಡುವ ಶಿಕ್ಷಣವನ್ನು ಧಿಕ್ಕರಿಸೋಣ’ ಅವಳ ಬರಹ ಓತಪ್ರೋತ ಪ್ರವಾಹ. ನಿಶ್ಚೇಷ್ಟಿತವಾಗಿ ಬಿದ್ದಿದ್ದ ತಾರುಣ್ಯವನ್ನು ಬಡಿದೆಬ್ಬಿಸಬಲ್ಲ ತಾಕತ್ತು ಅದಕ್ಕೆ. ಅವಳ ಪ್ರೇರಣೆಗೆ ಹತ್ತಾರು ದಿಕ್ಕು. ಭಾರತದ ಇತಿಹಾಸವನ್ನು ಭಾರತೀಯರೇ ಪುನರ್ರಚಿಸಬೇಕು ಎನ್ನುತ್ತಿದ್ದಳು ಆಕೆ. ಪ್ರತಿ ಕಾಲಘಟ್ಟದಲ್ಲೂ ಕೇಂದ್ರವಾಗಿ ಮೆರೆಯುತ್ತಿದ್ದ ಅಯೋಧ್ಯ-ಹಸ್ತಿನಾಪುರ, ಇಂದ್ರಪ್ರಸ್ಥ-ಪಾಟಲೀಪುತ್ರ, ಉಜ್ಜೈನಿ-ದೆಹಲಿ, ಕಾಂಜೀವರಂ-ಅಮರಾವತಿ ಇವುಗಳನ್ನು ಕೇಂದ್ರವಾಗಿರಿಸಿಕೊಂಡು ಅಧ್ಯಯನ ನಡೆಸಬೇಕೆಂದು ಬಯಸಿದ್ದಳು ಆಕೆ. ಸ್ಥಳೀಯ ಭಾಷೆಗಳಲ್ಲಿ ಶ್ರೇಷ್ಠ ಸಾಹಿತ್ಯಗಳು ರಚನೆಯಾಗಬೇಕೆಂಬ ತುಡಿತವಿತ್ತು ಅವಳಿಗೆ. ಜನರನ್ನು ಮುಟ್ಟಲು ಶ್ರೇಷ್ಠ ಮಾರ್ಗವಾದ ಚಿತ್ರ ಕಲೆಯಲ್ಲಿಯೂ ಭಾರತೀಯತೆ ತುಳುಕಾಡಬೇಕೆಂಬ ಅವಳ ಪ್ರಜ್ಞೆಗೆ ಸಾಟಿಯೇ ಇಲ್ಲ. ಮದ್ರಾಸಿನ ಮರಳದಂಡೆಯ ಮೇಲೆ ಕೆಲಸ ಮುಗಿಸಿ ಕೈಬೀಸಿ ಮರಳುತ್ತಿರುವವನನ್ನು, ಸಂಜೆಯ ವೇಳೆಗೆ ಪೂಜೆಯಲ್ಲಿ ನಿರತಳಾಗಿರುವ ಮಹಿಳೆಯನ್ನು, ಸೀರೆಯ ಸೌಂದರ್ಯತೋರುವ ಚಿತ್ರವನ್ನು ಬರೆದು ಜಗತ್ತಿನ ಮುಂದೆ ಅದನ್ನು ತೋರ್ಪಡಿಸಬೇಕೆಂದು ಆಕೆ ಚಿತ್ರಕಾರರಿಗೆ ಮಾರ್ಗದರ್ಶನ ನೀಡುತ್ತಿದ್ದಳು. ನೆನಪಿರಲಿ. ಸ್ವತಃ ಆಕೆಯೂ ಶ್ರೇಷ್ಠ ಚಿತ್ರಗಾತಿ.
ಆಕೆಯ ಬತ್ತಳಿಕೆಯಲ್ಲಿದ್ದುದು ಪ್ರೇರಣೆ ಮಾತ್ರವಲ್ಲ, ಭವಿಷ್ಯದ ನೀಲಿನಕ್ಷೆ ಕೂಡ. ಗುರುದೇವರಂತೆ ತನ್ನ ಆಯಸ್ಸು ಕಡಿಮೆ ಎಂದು ಆಕೆಗೆ ಅರಿವಿತ್ತೇನೋ ಹಾಗಾಗಿ ಎಲ್ಲವನ್ನೂ ಬೇಗ ಮುಗಿಸುವ ಧಾವಂತವಿತ್ತು ಅವಳಿಗೆ. ಈ ವೇಗವೇ ಅವಳ ಮಾತುಗಳನ್ನು ಸಿಡಿಮದ್ದಿನ ಚೆಂಡುಗಳಾಗಿಸಿದ್ದು. ಆಕೆಯೇ ಒಂದೆಡೆ ಹೇಳುತ್ತಾಳೆ, ‘ತ್ಯಾಗವೇ ಉನ್ನತವಾದುದು. ಅದರಲ್ಲೂ ಬದುಕನ್ನೇ ದೊಡ್ಡದೊಂದು ಆದರ್ಶಕ್ಕಾಗಿ ಸಮಪರ್ಿಸುವುದು ಮತ್ತೂ ಶ್ರೇಷ್ಠ. ಇಂತಹ ಮಹಾಪುರುಷರಲ್ಲಿ ಸೈನಿಕ ಅಥವಾ ಸಂನ್ಯಾಸಿ ಯಾರ ವ್ಯಕ್ತಿತ್ವ ಪ್ರಧಾನವಾಗಿದೆಯೆಂದು ಹೇಳುವುದು ಕಷ್ಟ. ಆದರೆ ಸೈನಿಕನ ಧೈರ್ಯ ಮತ್ತು ಸಂನ್ಯಾಸಿಯ ಮುಕ್ತತೆ ಎರಡೂ ಬೆರೆತಿರುವುದೆಂಬುದರಲ್ಲಿ ಅನುಮಾನವಿಲ್ಲ.’

 
ಓಹ್! ಒಂದೊಂದು ಪದಗಳೂ ಮೈ ಬೆಚ್ಚಗಾಗಿಸುವಂಥದ್ದು. ಇಂದಿನ ಈ ದಿನಮಾನದಲ್ಲಿ ಅಂತಹ ಸೈನಿಕ ಮತ್ತು ಸಂನ್ಯಾಸಿ ಇಬ್ಬರನ್ನೂ ಒಳಗೊಂಡ ತ್ಯಾಗಿಗಳ ಜರೂರತ್ತಿದೆ. ಸುದೀರ್ಘ ಹೋರಾಟದಲ್ಲಿ ಭಾರತವನ್ನು ಅರಿತು ಅದನ್ನು ಪ್ರತಿಪಾದಿಸುವ ಮತ್ತು ಅದೇ ವೇಳೆಗೆ ಎದುರಿಸಿ ನಿಂತು ಗೆದ್ದ ಮೇಲೆ ಎಲ್ಲವನ್ನೂ ಬಿಟ್ಟುಬಿಡುವ ಆಧ್ಯಾತ್ಮದ ಸವಿಯುಂಡವರು ಬೇಕಾಗಿದ್ದಾರೆ. ಅವಳೇ ಹೇಳಿದ್ದಾಳೆ, ‘ವಜ್ರಾಯುಧದಂತೆ ಬಲಿಷ್ಠವಾಗಿರುವ, ಬ್ರಹ್ಮಚರ್ಯದಷ್ಟೇ ಕಠೋರವಾಗಿರುವ, ವಿಶಾಲ ಹೃದಯಿಯೂ, ನಿಸ್ವಾರ್ಥಿಯೂ ಆದ ಇತರರ ಸೇವೆ ಮಾಡುವುದನ್ನೇ ಆದರ್ಶವಾಗಿಟ್ಟುಕೊಂಡ ಸಂನ್ಯಾಸಿ ಬೇಕು. ಆಕ್ರಮಣಕಾರಿ ಹಿಂದುತ್ವದ ಸಂತಾನಗಳು ಹೀಗೆಯೇ ಇರಬೇಕು’. ಅಕ್ಕನ ಗ್ರಹಿಕೆಯ ವೈಶಿಷ್ಟ್ಯವಿರೋದು ಇಲ್ಲೇ. ಆಕ್ರಮಣಕಾರೀ ಹಿಂದುತ್ವದ ಮಾತಾಡಿದಾಗಲೂ ಆಕೆ ಯುದ್ಧವನ್ನು ಪ್ರತಿಪಾದಿಸಿದವಳಲ್ಲ ಬದಲಿಗೆ ತನ್ನ ತಾನು ಬಲಾಢ್ಯಗೊಳಿಸಿಕೊಂಡ ಸೇವಾ ನಿರತ ಸನ್ಯಾಸಿಯ ಕನಸನ್ನೇ ಕಟ್ಟಿದವಳು.
ಯಾಕೋ ದೆಹಲಿಯ ಯುನಿವರ್ಸಿಟಿಗಳಲ್ಲಿ ಅರಚಾಡುತ್ತಿರುವವರನ್ನು ಕಂಡಾಗ ಅಕ್ಕ ಬಲುವಾಗಿ ನೆನಪಾಗುತ್ತಿದ್ದಾಳೆ. ದೂರದ ಐರ್ಲೆಂಡಿನಿಂದ ಬಂದರೂ ಭಾರತವನ್ನು ತನ್ನದೆಂದು ಅಪ್ಪಿಕೊಂಡು ನಿಂತ ನಿವೇದಿತಾಗೂ ಇಲ್ಲಿನವರೇ ಆಗಿಯೂ ಈ ನಾಡನ್ನು ಚೂರು-ಚೂರಾಗಿಸಬೇಕೆಂಬ ಬುದ್ಧಿಜೀವಿಗಳಿಗೂ ಅಜಗಜಾಂತರ. ರಾಷ್ಟ್ರಕ್ಕಾಗಿ ಅವಳಲ್ಲಿದ್ದ ತುಡಿತದ ಒಂದಂಶವಾದರೂ ನಮ್ಮಲ್ಲಿದ್ದಿದ್ದರೆ ನಾವು ಹೀಗೆ ದಾರಿ ತಪ್ಪುತ್ತಿರಲಿಲ್ಲ. ಛೇ!

ದೇಶಭಕ್ತಿಯ ಸೂರ್ಯೋದಯವನ್ನು ತಡೆಯಬಲ್ಲವರು ಯಾರಿದ್ದಾರೆ?

ದೇಶಭಕ್ತಿಯ ಸೂರ್ಯೋದಯವನ್ನು ತಡೆಯಬಲ್ಲವರು ಯಾರಿದ್ದಾರೆ?

6 ಸಾವಿರಕ್ಕೂ ಹೆಚ್ಚ್ಚು ಕಾಲೇಜು ಆವರಣಗಳಲ್ಲಿ ಕಾರ್ಯಕರ್ತರು ಸೇರಿ ಹೊಸ ಮತದಾರರ ಸೇರ್ಪಡೆಗೊಳಿಸುವ ಕೆಲಸ ಆರಂಭಿಸಿದ್ದರು. ಒಟ್ಟಾರೆ ಒಂಭತ್ತು ಲಕ್ಷಕ್ಕೂ ಮಿಕ್ಕಿ ಹೊಸಬರನ್ನು ಮತದಾರರನ್ನಾಗಿಸುವ ಕಾರ್ಯ ಯಶಸ್ವಿಯಾಗಿತ್ತು. ನವೆಂಬರ್ನಲ್ಲಿ ಶುರುವಾದ ಪರಿವರ್ತನಾ ರ್ಯಾಲಿಗಳು 4 ದಿಕ್ಕಿನಿಂದ ಉತ್ತರ ಪ್ರದೇಶವನ್ನು ಆವರಿಸಿಕೊಂಡವು. ಡಿಸೆಂಬರ್ನಲ್ಲಿ ಇದು ಮುಗಿದಾಗ ಒಟ್ಟು 403 ವಿಧಾನಸಭಾ ಕ್ಷೇತ್ರದ 50 ಲಕ್ಷಕ್ಕೂ ಹೆಚ್ಚು ಜನರನ್ನು ನೇರವಾಗಿ ಭೇಟಿ ಮಾಡಿತ್ತು. 2 ಸಾವಿರ ಕಾಲೇಜು ರಾಯಭಾರಿಗಳು ಕಾಲೇಜು ಸಭೆಗಳನ್ನು ನಡೆಸಿ ಮೋದಿಯ ಗುಣಗಾನ ಮಾಡತೊಡಗಿದ್ದರು. ಈ ವಿದ್ಯಾರ್ಥಿಗಳೊಂದಿಗೆ ಅಮಿತ್ ಷಾಹ್ ಅಲ್ಲದೇ ಸ್ಮೃತಿ ಇರಾನಿಯೂ ಭಿನ್ನ ಭಿನ್ನ ಸ್ತರಗಳಲ್ಲಿ ಮಾತನಾಡಿದ್ದರು. ಅಲ್ಲಲ್ಲಿ ನಡೆದ ಯುವ ಸಮ್ಮೇಳನ, ಮಹಿಳಾ ಸಮ್ಮೇಳನಗಳೂ ಮೋದಿಯವರಿಗೆ ಶಕ್ತಿ ತುಂಬುವಂತೆ ನೋಡಿಕೊಳ್ಳಲಾಗಿತ್ತು. ಹಿಂದುಳಿದ ವರ್ಗಗಳ, ವ್ಯಾಪಾರಿಗಳ ಸಮಾವೇಶಗಳೂ ಭರ್ಜರಿಯಾಗಿ ನಡೆದವು. ದಲಿತರ ಸಮಾವೇಶಕ್ಕೆ ತುಂಬಿದ ಸ್ವಾಭಿಮಾನ ಸಮ್ಮೇಳನದ ರಂಗು ಸಾಕಷ್ಟು ಕೆಲಸ ಮಾಡಿತ್ತು.

Modi_amit_2921205f

‘ಅವಳು ಬಲು ಪ್ರತಿಭಾವಂತೆ. ಹೋರಾಟದ ಮನೋವೃತ್ತಿಯನ್ನು ಸಹಜವಾಗಿಯೇ ಬೆಳೆಸಿಕೊಂಡಳು. ಅವಳ ವ್ಯಕ್ತಿತ್ವದ ಅಗಾಧ ಪ್ರಭಾವ ಎಂಥದ್ದೆಂದರೆ ತನ್ನ ಚಿಂತನೆಗಳನ್ನು ಬೇರೆಯವರ ಮೇಲೆ ಹೇರುವಲ್ಲಿ ಹಿಂದು ಮುಂದು ನೋಡುತ್ತಲೇ ಇರಲಿಲ್ಲ. ಜನ ಅವಳ ಮಾತುಗಳನ್ನು ಒಪ್ಪಿದರೆ ಜೊತೆಗೂಡಿ ಕೆಲಸ ಮಾಡೋದು ಇಲ್ಲವಾದಲ್ಲಿ ಅವರನ್ನು ಬಿಟ್ಟು ಮುನ್ನಡೆಯುತ್ತಿದ್ದಳು’ ಹಾಗಂತ ಗುರುದೇವ ರವೀಂದ್ರನಾಥ ಠಾಕೂರರು ನಿವೇದಿತೆಯ ಬಗ್ಗೆ ಬರೆಯುತ್ತಾರೆ. ಆಕೆಯೊಂದಿಗೆ ಸಂಭಾಷಿಸುವ, ವೈಚಾರಿಕ ಚರ್ಚೆಯಲ್ಲಿ ಭಾಗವಹಿಸುವ ಅವಕಾಶಗಳು ಸಾಕಷ್ಟು ದೊರೆತರೂ ನನ್ನ ಆಂತರಿಕ ವಿರೋಧದ ಕಾರಣದಿಂದ ಆಕೆಯೊಂದಿಗೆ ಬೆರೆಯುವ ವಿಚಾರದಲ್ಲಿ ಎಚ್ಚರಿಕೆ ವಹಿಸಿದ್ದೆ ಎಂದು ಸೇರಿಸುವುದನ್ನು ಮರೆಯುವುದಿಲ್ಲ.
ಸ್ವಲ್ಪ ಅತಿಶಯೋಕ್ತಿ ಎನಿಸಿದರೂ ಪರವಾಗಿಲ್ಲ. ಭಾರತದ ಈಗಿನ ಪ್ರಧಾನಮಂತ್ರಿ ನರೇಂದ್ರಮೋದಿಯವರ ವ್ಯಕ್ತಿತ್ವ ಇದಕ್ಕೆ ಬಲು ಹತ್ತಿರದ್ದು. ಅವರೂ ಹನ್ನೆರಡು ವರ್ಷಗಳ ಕಾಲ ವಿರೋಧ ಪಕ್ಷಗಳನ್ನು ಬಿಡಿ, ಸ್ವಂತ ಪಕ್ಷದವರೊಂದಿಗೂ ಗುದ್ದಾಡಿದರು. ತಮ್ಮದೇ ಸಂಘಟನೆಗಳು ಅವರ ವಿರುದ್ಧ ನಿಂತವು. ಮಾಧ್ಯಮಗಳಂತೂ ಸುದೀರ್ಘ ಕಾಲ ಅಪ ಪ್ರಚಾರ ನಡೆಸಿದವು. ಸಿಂಹದ ಹೃದಯವಲ್ಲದಿದ್ದರೆ ಆತ್ಮಹತ್ಯೆಯೇ ಮಾಡಿಕೊಳ್ಳಬೇಕಿತ್ತು. ಅಷ್ಟಾದರೂ ಪುಣ್ಯಾತ್ಮ ಹೋರಾಟದ ಹಾದಿ ಬಿಡಲಿಲ್ಲ. ತನ್ನ ಒಪ್ಪಿದವರ ಜೊತೆ ಹೆಜ್ಜೆ ಊರಿ ನಡೆದ, ವಿರೋಧಿಸಿದವರ ಬಿಟ್ಟು ನಡೆದ. ತುಂಬಾ ಕಿರಿ ಕಿರಿ ಮಾಡಿದವರ ವ್ಯವಸ್ಥಿತವಾಗಿಯೇ ಮಟ್ಟ ಹಾಕಿದ. ಸಂಪರ್ಕಕ್ಕೆ ಬಂದವರು ದೇಶದವರೇ ಇರಲಿ, ವಿದೇಶೀ ನಾಯಕರೇ ಆಗಿರಲಿ ತಮ್ಮ ಪ್ರಭಾವಕ್ಕೆ ಒಳಗಾಗುವಂತೆ ಮಾಡುವಲ್ಲಿ ಅವರದ್ದು ಎತ್ತಿದ ಕೈ.
ಇಷ್ಟನ್ನೂ ಈಗ ಮತ್ತೆ ಹೇಳಲು ಒಂದು ಕಾರಣವಿದೆ. ಹೌದು. ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಮೋದಿಯವರನ್ನು ಪ್ರಶ್ನಾತೀತ ನಾಯಕರನ್ನಾಗಿಸಿಬಿಟ್ಟಿದೆ. ಒಂದು ದೃಷ್ಟಿಯಿಂದ ಅವರೀಗ ಬಿಜೆಪಿಗಿಂತ ಅಗಾಧವಾಗಿ ಬೆಳೆದು ನಿಂತು ಬಿಟ್ಟಿದ್ದಾರೆ. ವಿಧಾನ ಸಭೆ-ಲೋಕ ಸಭೆ ಯಾವ ಚುನಾವಣೆಯಂತೂ ಸರಿಯೇ, ಒರಿಸ್ಸಾದ ಸ್ಥಳೀಯ ಚುನಾವಣೆಗಳಲ್ಲಿ, ಮುಂಬೈನ ಪಾಲಿಕೆ ಚುನಾವಣೆಗಳಲ್ಲೂ ಮೋದಿಯ ಕಟೌಟ್ ಇಲ್ಲದಿದ್ದರೆ ಗೆಲುವೇ ಇಲ್ಲವೆಂಬಂತಾಗಿಬಿಟ್ಟಿದೆ. ಹಾಗಂತ ಮೋದಿ ಸುಮ್ಮನೆ ಈ ಅಬ್ಬರದ ಪ್ರಚಾರಗಳಿಂದ ಗೆಲುವು ಪಡೆಯುವ ಕಾಂಗ್ರೆಸ್ಸಿನ ಚರಿಶ್ಮಾ ಹೊಂದಿದ ನಾಯಕರಂತಲ್ಲ. ಅಥವಾ ಜಾತಿಯ ಬೆಂಬಲದಿಂದಲೇ ನಾಯಕನಾಗಿಬಿಡುವ ಭ್ರಮೆಯ ಕನರ್ಾಟಕದ ಬಿಜೆಪಿ ನಾಯಕರಂತೆಯೂ ಅಲ್ಲ. ಅವರದ್ದು ಪಕ್ಕಾ ಲೆಕ್ಕಾಚಾರ. ಜನರ ಮಾನಸಿಕತೆಯನ್ನೇ ಬದಲು ಮಾಡಿ ಅವರನ್ನೂ ತನ್ನೊಂದಿಗೆ ಸುದೀರ್ಘ ಓಟಕ್ಕೆ ಕರೆದೊಯ್ಯುವ ವಿಶೇಷ ಪಥ. ಜನರನ್ನು ಸದಾ ಕೆಳಮಟ್ಟದಲ್ಲಿಯೇ ಇರಿಸಿ, ಕನಸು ಕಾಣಿಸಿಯೇ ಮತ ಕೇಳುವ ಹಳೆಯ ತಂತ್ರ ಒಂದೆಡೆ. ಅದನ್ನು ಕಾಂಗ್ರೆಸ್ಸು ಮಾಡುತ್ತಿತ್ತು. ಅಧಿಕಾರಕ್ಕೆ ಬಂದ ನಂತರ ಬಿಜೆಪಿಯೂ ಎಲ್ಲೆಡೆ ಅದನ್ನೇ ಮಾಡಿತು. ಆದರೆ ಮೋದಿ ಹಾಗಲ್ಲ. ಪ್ರಗತಿಯ ನಾಗಾಲೋಟ ಕಣ್ಣಿಗೆ ರಾಚುವಂತೆ ಮಾಡುವುದು. ಜನರನ್ನು ಈ ಓಟದ ಪಾಲುದಾರರನ್ನಾಗಿ ಮಾಡಿ ಅವರೇ ಯೋಚಿಸಿ ಮತ ಹಾಕುವಂತೆ ಪ್ರೇರೇಪಿಸುವುದು. ಎರಡನೇ ಮಾರ್ಗದಲ್ಲಿ ಜನ ಪ್ರಜ್ಞಾವಂತರಾಗುತ್ತಾರೆ, ಸಮಕಾಲೀನ ಜಗತ್ತಿನಲ್ಲಿ ಇತರರ ಸಮಸಮಕ್ಕೆ ನಿಲ್ಲುವ ಆತ್ಮವಿಶ್ವಾಸ ಪಡೆಯುತ್ತಾರೆ. ಉತ್ತರ ಪ್ರದೇಶದಲ್ಲಿ ಮೋದಿ ಮಾಡಿದ್ದು ಇದೇ ಪ್ರಯೋಗವನ್ನು. ಇತರೆಲ್ಲ ಪಕ್ಷಗಳು ಚುನಾವಣೆ ಘೋಷಣೆಯಾಗುವ ಹೊತ್ತಲ್ಲಿ ತಮ್ಮ ಪ್ರಚಾರಕಾರ್ಯ ಶುರುಮಾಡಿದರೆ, ಮೋದಿ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ದಿನದಿಂದಲೇ ಉತ್ತರ ಪ್ರದೇಶದಲ್ಲಿ ಚುನಾವಣಾ ಕೆಲಸ ಶುರು ಮಾಡಿದ್ದರು.

Independence Day at Red Fort
ನೆನಪು ಮಾಡಿಕೊಳ್ಳಿ. ಕೆಂಪುಕೋಟೆಯ ತಮ್ಮ ಮೊದಲ ಭಾಷಣದಲ್ಲಿಯೇ ಮೋದಿ ಭಾರತದ ಕರೆಂಟೇ ಇಲ್ಲದ 18 ಸಾವಿರ ಹಳ್ಳಿಗಳಿಗೆ ಒಂದು ಸಾವಿರ ದಿನಗಳ ಗಡುವು ತಾವೇ ವಿಧಿಸಿಕೊಂಡು ವಿದ್ಯುತ್ ಸಂಪರ್ಕ ಕೊಡಿಸುವ ಭರವಸೆ ಕೊಟ್ಟರು. ಈ ಯೋಜನೆ ಎಲ್ಲೆಡೆ ಭರದಿಂದ ಸಾಗಿತಾದರೂ ಉತ್ತರ ಪ್ರದೇಶದಲ್ಲಿ ಅದಕ್ಕೆ ಅಪರೂಪದ ವೇಗ ದೊರಕಿತ್ತು. ಅಲ್ಲಿನ 1529 ವಿದ್ಯುತ್ ಸಂಪರ್ಕ ರಹಿತ ಹಳ್ಳಿಗಳಲ್ಲಿ 1464 ಹಳ್ಳಿಗಳಿಗೆ ಚುನಾವಣೆಗೂ ಮುನ್ನ ವಿದ್ಯುತ್ ಸಂಪರ್ಕ ದಕ್ಕಿತ್ತು. ಬಿಎಸ್ಪಿಯ ಆಡಳಿತಾವಧಿಯಲ್ಲಿ 23 ಹಳ್ಳಿಗಳಿಗೆ ವಿದ್ಯುತ್ ದಕ್ಕಿದರೆ ಸಮಾಜವಾದಿ ಪಾರ್ಟಿಯ ಅವಧಿಯಲ್ಲಿ ಮೂರೇ ಹಳ್ಳಿಗಳು ವಿದ್ಯುತ್ ಭಾಗ್ಯ ಪಡೆದಿದ್ದವು. ಹಳ್ಳಿಗಳು ಇದನ್ನು ಗಮನಿಸದಿರಲಿಲ್ಲ. ಬರಿಯ ಸಂಪರ್ಕ ದೊರೆತರೇನು? ವಿದ್ಯುತ್ತೂ ಪೂರೈಕೆಯಾಗಬೇಕಲ್ಲ. ಗ್ರಿಡ್ ಗಳಲ್ಲಿನ ಸಮಸ್ಯೆ ನಿವಾರಿಸಿ, ಕಳ್ಳತನಕ್ಕೆ ಕಡಿವಾಣ ಹಾಕಿ ನಿರಂತರ ವಿದ್ಯುತ್ ಸಿಗುವಂತೆ ಮಂತ್ರಿ ಪೀಯೂಷ್ ಗೋಯಲ್ ವಿಶೇಷ ಶ್ರಮ ಹಾಕಿದರು. ವಿದ್ಯುತ್ ಪೂರೈಕೆಯೂ ಎರಡು ವರ್ಷಗಳಲ್ಲಿ ಶೇಕಡಾ 20ರಷ್ಟು ಹೆಚ್ಚಾಯ್ತು. ಈ ಹೊತ್ತಿನಲ್ಲಿಯೇ ಒಂದೂವರೆಕೋಟಿ ಎಲ್.ಇ.ಡಿ ಬಲ್ಬುಗಳನ್ನು ಹಳ್ಳಿ ಹಳ್ಳಿಗಳಲ್ಲಿ ವಿತರಿಸಿದ ಕೇಂದ್ರ ಸರ್ಕಾರ ಜನರ ವಿದ್ಯುತ್ ಬಿಲ್ಲು ಕಡಿಮೆಯಾಗುವಂತೆ ನೋಡಿಕೊಂಡಿತು.
2016 ರ ಮೇ 1 ಕ್ಕೆ ನರೇಂದ್ರ ಮೋದಿ 8 ಸಾವಿರ ಕೋಟಿ ರೂಪಾಯಿಯ ಉಜ್ವಲಾ ಯೋಜನೆಯನ್ನು ಜಾರಿಗೆ ತಂದು, ಬಡವರ ಮನೆಗಳನ್ನು ಹೊಗೆರಹಿತ ಮಾಡಿ ಅವರಿಗೆ ಎಲ್ಪಿಜಿ ಸಿಲಿಂಡರುಗಳನ್ನು ಕೊಡಿಸುವ ಭರವಸೆ ಕೊಟ್ಟರು. ಇದು ಆಶ್ವಾಸನೆಯಾಗಿಯಷ್ಟೇ ಉಳಿಯದೇ 50 ಲಕ್ಷಕ್ಕೂ ಹೆಚ್ಚು ಜನ ಇದರ ಲಾಭ ಪಡೆಯುವಂತೆ ನೋಡಿಕೊಳ್ಳಲಾಯಿತು. ಉತ್ತರ ಪ್ರದೇಶದ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲೂ ಸುಮಾರು 12 ಸಾವಿರದಷ್ಟು ಜನ ಈ ಯೋಜನೆಯ ಫಲಾನುಭವಿಗಳಾಗಿದ್ದರು.

UP rally
ಮೋದಿ ಕೈಗೆತ್ತಿಕೊಂಡ ಯೋಜನೆಗಳಲ್ಲೆಲ್ಲಾ ಯಶಸ್ಸು ಕಂಡು ಅಂತಿಮ ವ್ಯಕ್ತಿಯವರೆಗೂ ಅದನ್ನು ಮುಟ್ಟಿಸುವಲ್ಲಿ ಸಫಲರಾಗುತ್ತಿದ್ದರೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಲ್ಯಾಪ್ಟಾಪ್ ಕೊಟ್ಟು ಹೆಸರು ಕೆಡಿಸಿಕೊಂಡರು. ಆ್ಯಂಬುಲೆನ್ಸ್ಗಾಗಿ ಡಯಲ್ ಮಾಡಿ ಎಂಬ ಯೋಜನೆ ಸೋತುಹೋಯ್ತು. ಜನಕ್ಕೆ ಬದುಕು ಸುಂದರವಾಗಬೇಕೆಂಬ ಬಯಕೆ ಈಗ ಬಲಿಯಲಾರಂಭಿಸಿತ್ತು. ಅವರೀಗ ಗರೀಬಿ ಹಟಾವೋದಂತಹ ಘೋಷಣೆಗಳಿಂದ ಬೇಸತ್ತಿದ್ದರು. ಬಡವರನ್ನು ಮುಖ್ಯವಾಹಿನಿಗೆ ತರಬಲ್ಲ ಸಮರ್ಥ ನಾಯಕ ಅವರಿಗೆ ದೊರಕಿದ್ದ. ಅವನಿಗೆ ಮೋಸ ಮಾಡುವ ಮನಸ್ಸು ಅವರಿಗಿರಲಿಲ್ಲ. ಅದಕ್ಕೆ ಸರಿಯಾಗಿ ನರೇಂದ್ರ ಮೋದಿಯವರ ನಂಬಿಕಸ್ಥ ಕಟ್ಟಾಳು ಅಮಿತ್ ಷಾಹ್ ಉತ್ತರ ಪ್ರದೇಶದಲ್ಲಿ ಹೊಸ ಉತ್ಸಾಹವನ್ನು ಚಿಮ್ಮಿಸಿದರು. ಚುನಾವಣೆಗೆ ಒಂದು ವರ್ಷವಿರುವಾಗಲೇ ರಾಜ್ಯಾಧ್ಯಕ್ಷ ಕೇಶವ್ ಪ್ರಸಾದ್ ಮೌರ್ಯ, ರಾಜ್ಯ ಸಂಘಟನಾ ಕಾರ್ಯದರ್ಶಿ ಸುಮೀರ್ ಬನ್ಸಲ್ರನ್ನು ಸೇರಿಸಿಕೊಂಡು ಲೆಕ್ಕಾಚಾರ ಆರಂಭಿಸಿದರು. ಕಳೆದ ವರ್ಷ ಏಪ್ರಿಲ್ನಲ್ಲಿಯೇ ಮಾಜಿ ಸಂಸದ, ಬೌದ್ಧ ಸಂನ್ಯಾಸಿ ಧರ್ಮ ವಿರಿಯೋರ ನೇತೃತ್ವದಲ್ಲಿ ಧರ್ಮ ಚೇತನಾ ಯಾತ್ರೆಯನ್ನು ಶುರು ಮಾಡಿಸಿದರು. ದಲಿತರು ಮತ್ತು ಹಿಂದುಳಿದವರೇ ಹೆಚ್ಚಿದ್ದ 175ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರದಲ್ಲಿ ಈ ಯಾತ್ರೆ ಸಂಚರಿಸಿ ಪ್ರಧಾನಮಂತ್ರಿಗಳ ಯೋಜನೆಯನ್ನು ವಿಸ್ತಾರವಾಗಿ ತೆರೆದಿಟ್ಟಿತು. ಕಾನ್ಪುರದಲ್ಲಿ ಈ ಯಾತ್ರೆ ಸಮಾಪನಗೊಂಡಾಗ 453 ಜನ ಸಭೆಗಳಾಗಿದ್ದವು! ನೆನಪಿಡಿ. ಆಗೆಲ್ಲಾ ಇನ್ನೂ ಚುನಾವಣೆಯ ಬಿಸಿ ಶುರುವಾಗಿರಲೇ ಇಲ್ಲ. ಮಾಯಾವತಿಯ ದಲಿತ ವೋಟುಗಳಿಗೆ ಒಂದು ವರ್ಷದ ಹಿಂದೆಯೇ ಕನ್ನ ಹಾಕಿದ್ದರು ಅಮಿತ್ ಷಾಹ್. ಆಕೆಗೆ ಅರಿವಾಗುವಷ್ಟರಲ್ಲಿ ಕೈ ಮೀರಿ ಹೋಗಿತ್ತು. ಈ ಹೊತ್ತಲ್ಲಿಯೇ 6 ಸಾವಿರಕ್ಕೂ ಹೆಚ್ಚ್ಚು ಕಾಲೇಜು ಆವರಣಗಳಲ್ಲಿ ಕಾರ್ಯಕರ್ತರು ಸೇರಿ ಹೊಸ ಮತದಾರರ ಸೇರ್ಪಡೆಗೊಳಿಸುವ ಕೆಲಸ ಆರಂಭಿಸಿದ್ದರು. ಒಟ್ಟಾರೆ ಒಂಭತ್ತು ಲಕ್ಷಕ್ಕೂ ಮಿಕ್ಕಿ ಹೊಸಬರನ್ನು ಮತದಾರರನ್ನಾಗಿಸುವ ಕಾರ್ಯ ಯಶಸ್ವಿಯಾಗಿತ್ತು. ನವೆಂಬರ್ನಲ್ಲಿ ಶುರುವಾದ ಪರಿವರ್ತನಾ ರ್ಯಾಲಿಗಳು 4 ದಿಕ್ಕಿನಿಂದ ಉತ್ತರ ಪ್ರದೇಶವನ್ನು ಆವರಿಸಿಕೊಂಡವು. ಡಿಸೆಂಬರ್ನಲ್ಲಿ ಇದು ಮುಗಿದಾಗ ಒಟ್ಟು 403 ವಿಧಾನಸಭಾ ಕ್ಷೇತ್ರದ 50 ಲಕ್ಷಕ್ಕೂ ಹೆಚ್ಚು ಜನರನ್ನು ನೇರವಾಗಿ ಭೇಟಿ ಮಾಡಿತ್ತು. 2 ಸಾವಿರ ಕಾಲೇಜು ರಾಯಭಾರಿಗಳು ಕಾಲೇಜು ಸಭೆಗಳನ್ನು ನಡೆಸಿ ಮೋದಿಯ ಗುಣಗಾನ ಮಾಡತೊಡಗಿದ್ದರು. ಈ ವಿದ್ಯಾರ್ಥಿಗಳೊಂದಿಗೆ ಅಮಿತ್ ಷಾಹ್ ಅಲ್ಲದೇ ಸ್ಮೃತಿ ಇರಾನಿಯೂ ಭಿನ್ನ ಭಿನ್ನ ಸ್ತರಗಳಲ್ಲಿ ಮಾತನಾಡಿದ್ದರು. ಅಲ್ಲಲ್ಲಿ ನಡೆದ ಯುವ ಸಮ್ಮೇಳನ, ಮಹಿಳಾ ಸಮ್ಮೇಳನಗಳೂ ಮೋದಿಯವರಿಗೆ ಶಕ್ತಿ ತುಂಬುವಂತೆ ನೋಡಿಕೊಳ್ಳಲಾಗಿತ್ತು. ಹಿಂದುಳಿದ ವರ್ಗಗಳ, ವ್ಯಾಪಾರಿಗಳ ಸಮಾವೇಶಗಳೂ ಭರ್ಜರಿಯಾಗಿ ನಡೆದವು. ದಲಿತರ ಸಮಾವೇಶಕ್ಕೆ ತುಂಬಿದ ಸ್ವಾಭಿಮಾನ ಸಮ್ಮೇಳನದ ರಂಗು ಸಾಕಷ್ಟು ಕೆಲಸ ಮಾಡಿತ್ತು.
ಸಾಮಾಜಿಕ ಜಾಲತಾಣಗಳಲ್ಲೂ ಅಮಿತ್ ಷಾಹ್ ಸಾಕಷ್ಟು ಕೃಷಿ ಮಾಡಿದ್ದರು. ಹಂತ-ಹಂತದ ತಂಡಗಳನ್ನು ಕಟ್ಟಿದ್ದಲ್ಲದೇ ಹತ್ತು ಸಾವಿರದಷ್ಟು ವಾಟ್ಸ್ಅಪ್ ಗುಂಪುಗಳನ್ನು ನಿರ್ಮಿಸಿ ಆಡಿಯೋ ವಿಡಿಯೋ ತತ್ಕ್ಷಣ ಎಲ್ಲರಿಗೂ ಸಿಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಮೋದಿಯವರ ಭಾಷಣ ಹೆಚ್ಚು ಕಡಿಮೆ ಪ್ರತಿಯೊಬ್ಬರ ಮೊಬೈಲುಗಳಲ್ಲೂ ತುಂಬಿ ತುಳುಕಾಡುತ್ತಿತ್ತು. ಅಮಿತ್ ಷಾಹ್ರ ಮಾಸ್ಟರ್ ಸ್ಟ್ರೋಕ್ ‘ಯುಪಿ ಕೆ ಮನ್ ಕಿ ಬಾತ್’ನದ್ದು. 75 ವಿಡಿಯೋ ವಾಹನಗಳನ್ನು ರಾಜ್ಯದ ಮೂಲೆ ಮೂಲೆಗಳಿಗೆ ಕಳಿಸಿ ‘ಸರ್ಕಾರದಿಂದ ನಮ್ಮ ಅಪೇಕ್ಷೆಯೇನು’ ಎಂದು ಜನರನ್ನೇ ಕೇಳುವ ಪ್ರಯತ್ನ ಆರಂಭಿಸಿದರು. ಈ ಪ್ರತಿಕ್ರಿಯೆಗಳ ಆಧಾರದ ಮೇಲೆಯೇ ಚುನಾವಣೆಯ ಪ್ರಣಾಳಿಕೆ ರಚಿಸಿ ಜನರ ಕೈಲಿಟ್ಟರು. ಈ ವೇಳೆಗೆ ಚುನಾವಣೆಯ ಘೋಷಣೆಯಾಯ್ತು. ಅಷ್ಟರೊಳಗೇ ನೋಟು ಬ್ಯಾನ್ ಮಾಡಿಬಿಟ್ಟಿದ್ದರಿಂದ ಪ್ರತಿಪಕ್ಷಗಳ ಹಣ ಚೆಲ್ಲಿ ಓಟು ಪಡೆಯುವ ಎಲ್ಲ ಅವಕಾಶಗಳಿಗೂ ಕತ್ತರಿ ಬಿದ್ದಿತ್ತು. ಬಿಜೆಪಿ ನೆಲದ ಮಟ್ಟದ ಕೆಲಸವನ್ನೆಲ್ಲ ಮುಗಿಸಿ ಸಿದ್ಧವಾಗಿರುವ ವೇಳೆಗಾಗಲೇ, ಎಸ್ಪಿಯ ಒಳಜಗಳ ಬಿಎಸ್ಪಿಯ ಉದಾಸೀನತೆಗೆ ಜನರು ರೋಸಿ ಹೋಗಿದ್ದರು. ಅದಾಗಲೇ ಅವರು ಮಾನಸಿಕವಾಗಿ ನರೇಂದ್ರಮೋದಿಯವರನ್ನು ನಾಯಕರೆಂದು ಗುರುತಿಸಿಕೊಂಡಾಗಿತ್ತು. ಇನ್ನು ಅದನ್ನು ದೃಢೀಕರಿಸುವ ಛಾಪು ಒತ್ತಬೇಕಿತ್ತಷ್ಟೇ. ಸಂಸತ್ ಚುನಾವಣೆ ವೇಳೆಗೆ ದಾಖಲಾದ ಒಂದುಮುಕ್ಕಾಲು ಕೋಟಿ ಸದಸ್ಯರನ್ನು ಮತ್ತೆ ಸಂಪರ್ಕಿಸಲಾಯ್ತು. ಅವರಲ್ಲಿ ಅರ್ಧಲಕ್ಷಕ್ಕೂ ಮಿಕ್ಕಿ ಜನ ಕಾರ್ಯಕರ್ತರಾಗಿ ಬಂದರು. ಅವರಿಗಾಗಿ ತರಬೇತಿ ಶಿಬಿರಗಳನ್ನು ಏರ್ಪಡಿಸಿ ಸಂಘಟನೆ ಬಲಪಡಿಸಲಾಯ್ತು. ಒಂದೂವರೆಲಕ್ಷದಷ್ಟು ಬೂಥ್ ಕಮಿಟಿಗಳನ್ನು ರಚಿಸಿ ಕೆಲಸ ಕೊಡಲಾಯ್ತು. ‘ಆಜೀವನ್ ಸಹಯೋಗ ಸಾಥಿ’ ಎಂದು ಕಾರ್ಯಕರ್ತರಿಂದಲೇ ಸಂಗ್ರಹಿಸಿದ 17 ಕೋಟಿಯಷ್ಟು ಹಣವನ್ನು ಚುನಾವಣೆಗೆಂದು ಬಳಸಿಕೊಳ್ಳುವ ಯೋಜನೆ ರೂಪಿಸಲಾಯ್ತು.
ಒಟ್ಟಾರೆ 900 ಬಹಿರಂಗ ಸಭೆಗಳ ತಯಾರಿ. ಟಿಕೇಟು ವಿಚಾರದಲ್ಲಿ ಗೊಂದಲವಾಗದಂತೆ ನೋಡಿಕೊಳ್ಳಲು ಕೆಲವು ಹಿರಿಯ ನಾಯಕರ ಮಕ್ಕಳಿಗೆ ಟಿಕೇಟು ಕೊಟ್ಟು ಆ ನಾಯಕರೆಲ್ಲ ಅವರವರ ಮಕ್ಕಳ ಕ್ಷೇತ್ರದಲ್ಲಿ ವ್ಯಸ್ತರಾಗಿರುವಂತೆ ನೋಡಲಾಯ್ತು. ಈ ಹಿರಿಯ ನಾಯಕರನ್ನು ಎದುರು ಹಾಕಿಕೊಂಡರೆ ಅವರು ಹೊರ ಹಾಕುವ ಒಂದೊಂದು ಹೇಳಿಕೆಗಳೂ ರಾಷ್ಟ್ರಮಟ್ಟದಲ್ಲಿ ಉತ್ಪಾತವನ್ನು ಸೃಷ್ಟಿಸಬಲ್ಲುದೆಂಬ ಅರಿವಿದ್ದುದರಿಂದ ಇಟ್ಟ ಚಾಣಾಕ್ಷ ನಡೆ ಅದು. ದೇಶದ ಪ್ರಮುಖ ಮಂತ್ರಿಗಳು, ರಾಜ್ಯದ ಪ್ರಮುಖ ಸಂಸದರೆಲ್ಲ ಉತ್ತರ ಪ್ರದೇಶದ ಕಣದಲ್ಲಿಯೇ ಇರುವಂತೆ ಪ್ರವಾಸವನ್ನು ರೂಪಿಸಲಾಯ್ತು. ಸ್ವತಃ ಮೋದಿ 23 ರ್ಯಾಲಿಗಳಲ್ಲಿ ಭಾಗವಹಿಸಿ ಲಕ್ಷಾಂತರ ಜನರ ಕಂಗಳಲ್ಲಿ ಕನಸನ್ನು ನೇರವಾಗಿ ಬಿತ್ತಿದರು. ಅಷ್ಟೇ ಅಲ್ಲ. ಏಳು ಹಂತದ ಮತದಾನವಾದ್ದರಿಂದ ಪ್ರಚಾರಕ್ಕೆ ಹೆಚ್ಚಿನ ಸಮಯ ಕೊಡುವ ಅವಕಾಶ ದೊರೆಯಿತು. ಕಾಶಿಯಲ್ಲಿ ರೋಡ್ ಶೋ ನಡೆಸಿ ಮತದಾನಕ್ಕೆ ಹೊರಟಿದ್ದವರಿಗೆ ತುಷ್ಟೀಕರಣದ ವಿರುದ್ಧದ ತಮ್ಮ ವಿಚಾರ ಸ್ಪಷ್ಟವಾಗಿ ಸಾರಿದರು.
ಎಲ್ಲಕ್ಕೂ ಬಲವಾದ ಸಂದೇಶವಿದ್ದರೆ ಅದು ಮುಸಲ್ಮಾನರಿಗೆ ಟಿಕೇಟ್ ಕೊಡದಿದ್ದುದು. ಅಧಿಕಾರಕ್ಕೆ ಬಂದವರೆಲ್ಲರ ಮುಸ್ಲೀಂ ತುಷ್ಟೀಕರಣದಿಂದ ಬೆಂದು ಹೋಗಿದ್ದ ಉತ್ತರ ಪ್ರದೇಶದ ಹಿಂದುಗಳೆಲ್ಲ ತಮ್ಮ ನಡುವಿನ ಭೇದ ಮರೆತು ಮೋದಿಯ 56 ಇಂಚಿನ ಎದೆಗಾರಿಕೆಗೆ ಬೆರಗಾಗಿದ್ದರು. ಅವರೊಂದಿಗೆ ನಿಲ್ಲುವ ಭರವಸೆ ಕೊಟ್ಟಿದ್ದರು. ಟ್ರಿಪಲ್ ತಲಾಖ್ನ ಕುರಿತಂತಹ ಮೋದಿಯವರ ವಿರೋಧ ಮುಲ್ಲಾ-ಮೌಲ್ವಿಗಳ ಕಣ್ಣು ಕೆಂಪಗಾಗಿಸಿದ್ದಿರಬಹುದು. ಆದರೆ ಮುಸ್ಲೀಂ ಮಹಿಳೆಯರು ಮೋದಿಯವರ ಪರವಾಗಿ ಪ್ರಚಾರಕ್ಕೆ ನಿಂತರು. ಇದೂ ಬೋನಸ್ ಆಯ್ತು. ಒಟ್ಟಾರೆ ಅವರು ಮುಟ್ಟಿದ್ದೆಲ್ಲಾ ಚಿನ್ನವಾಗಿ ಉತ್ತರ ಪ್ರದೇಶದ ಪಾಲಿಗೆ ‘ಆಲ್ ಟೈಮ್ ರೆಕಾರ್ಡ್’ ಆಯಿತು!
ಗೆಲುವಿನ ಹಿಂದಿದ್ದ ವರ್ಷಗಟ್ಟಲೇ ಶ್ರಮ, ದೂರದೃಷ್ಟಿ, ಚಾಣಕ್ಯ ತಂತ್ರ ಇವೆಲ್ಲವನ್ನೂ ಮೆಲುಕು ಹಾಕಬೇಕೆನ್ನಿಸಿತಷ್ಟೇ. ಮೋದಿ ದೇಶಭಕ್ತ. ದೇಶದ ಒಳಿತಿಗಾಗಿ ಯಾವ ನಿರ್ಣಯವನ್ನು ಬೇಕಿದ್ದರೂ ಕೈಗೊಳ್ಳಬಲ್ಲ ಎನ್ನೋದೇ ಪ್ರತಿಪಕ್ಷಗಳ ಹೆದರಿಕೆಯ ಕಾರಣ ಅಂದಿದ್ದರಲ್ಲ, ರಾಮ್ ಜೇಠ್ಮಲಾನಿ ಈಗ ಅದು ಅರ್ಥವಾಗುತ್ತಿದೆ. ಹ್ಞಾಂ! ಅಂದಹಾಗೆ ತನ್ನ 44 ವರ್ಷಗಳ ಜೀವನದ ಅಂತಿಮ ಕ್ಷಣದಲ್ಲಿ ಕಾರ್ಮೋಡ ಚದುರಿ ಸೂರ್ಯನ ಬೆಳಕು ಎಲ್ಲೆಡೆ ಚೆಲ್ಲಿದಾಗ ನಿವೇದಿತಾ ‘ಶಿಥಿಲವಾದ ಈ ಹಡಗು ಮುಳುಗುತ್ತಿದೆ. ಆದರೂ ನಾನು ಸೂರ್ಯೋದಯವನ್ನು ಕಾಣುತ್ತಿದ್ದೇನೆ’ ಎನ್ನುತ್ತಾ ಪ್ರಾಣತ್ಯಾಗ ಮಾಡಿದ್ದಳು. ಅವಳು ದರ್ಶನ ಪಡಕೊಂಡ ಸೂರ್ಯೋದಯದ ದಿನಗಳು ನಿಜಕ್ಕೂ ಬಂದೇಬಿಟ್ಟವಾ?

ಬುದ್ಧಿಜೀವಿಗಳ ದೆವ್ವ ಬಿಡಿಸಿದ ಕಾಳಿ!

ಬುದ್ಧಿಜೀವಿಗಳ ದೆವ್ವ ಬಿಡಿಸಿದ ಕಾಳಿ!

ನಿವೇದಿತಾ ಭಾರತೀಯ ಆಚರಣೆಗಳನ್ನು ವಿರೋಧಿಸಲಿಲ್ಲ, ಭಾರತೀಯರನ್ನು ದೂಷಿಸಲಿಲ್ಲ. ತಾನು ಇಲ್ಲಿನ ಅನಾಗರಿಕ ಜನರ ಸೇವೆಗೆ ಬಂದವಳೆಂದು ಪತ್ರಿಕಾ ಹೇಳಿಕೆ ಕೊಡಲಿಲ್ಲ. ಕೊನೆಗೆ ತನ್ನ ಮತವನ್ನು ಇಲ್ಲಿನ ಜನರ ಮೇಲೆ ಹೇರಿ ಅವರ ಪರಿವರ್ತನೆಗೆ ಪ್ರಯತ್ನ ಪಡಲಿಲ್ಲ. ಎಲ್ಲಾ ಬಿಡಿ ಯಾವ ಕಾಳಿಯ ಕುರಿತಂತೆ ಇಷ್ಟು ಅಮೋಘವಾಗಿ ಮಾತನಾಡುತ್ತಿದ್ದಳೋ ದಕ್ಷಿಣೇಶ್ವರದ ಅದೇ ಕಾಳಿ ಮಂದಿರಕ್ಕೆ ಅವಳಿಗೆ ವಿದೇಶೀಯಳೆಂಬ ಕಾರಣಕ್ಕೆ ಕೊನೆಯವರೆಗೂ ಪ್ರವೇಶ ದಕ್ಕಲಿಲ್ಲ. ಆದಾಗ್ಯೂ ಮನಸಿಗೆ ಕಿರಿಕಿರಿ ಮಾಡಿಕೊಳ್ಳಲಿಲ್ಲ. ಇಲ್ಲಿನ ನಂಬಿಕೆಗಳನ್ನು ವಿರೋಧಿಸುವ ಅಧಿಕಾರ ತನಗಿಲ್ಲವೆಂದೇ ಶಾಂತವಾಗಿ ಒಪ್ಪಿಕೊಂಡಳು. ಕಾಳಿ ಮಂದಿರದ ಹೊರಗೆ ಕುಳಿತು ಧ್ಯಾನಸ್ಥಳಾಗುತ್ತಿದ್ದಳು!

teresa

ಮದರ್ ತೆರೇಸಾಗೂ ಸಿಸ್ಟರ್ ನಿವೇದಿತಾಗೂ ವ್ಯತ್ಯಾಸ ಇದೆ. ಸೇವೆಯ ದೃಷ್ಟಿಯಿಂದ ಇಬ್ಬರೂ ಮಾಡಿದ್ದು ಅಸಾಧಾರಣ ಕೆಲಸವೇ. ಆದರೆ ಮಾಡಿದ ಸೇವೆಯ ಹಿಂದಿರುವ ಮನೋಭಾವ ಭಿನ್ನ ಭಿನ್ನ ಅಷ್ಟೇ. ವಿವೇಕಾನಂದರು ಈ ಕುರಿತಂತೆ ‘ಕರುಣೆಯಿಂದ ಭಾರತೀಯರ ಸೇವೆ ಮಾಡುವುದು ಬೇಕಿಲ್ಲ. ಭರತಖಂಡವನ್ನು ಪ್ರೀತಿಸಿದಾಗಲೇ ಸೇವೆಯ ಅಧಿಕಾರ ದಕ್ಕುವುದು. ಹೀಗೆ ಪ್ರೀತಿಸುವುದಕ್ಕೆ ಭಾರತವನ್ನು ಸರಿಯಾಗಿ ಅರಿಯುವುದು ಅವಶ್ಯಕ’ ಎಂದು ಸ್ಪಷ್ಟ ನುಡಿಯಲ್ಲಿ ಹೇಳುತ್ತಾರೆ. ಭಾರತವನ್ನು ಕೆಲಸಕ್ಕೆ ಬಾರದ ರಾಷ್ಟ್ರವೆಂದು ಬೈದಾಡುತ್ತ ಸೇವೆ ಮಾಡಿ ಹೊಟ್ಟೆ ಹೊರೆದುಕೊಳ್ಳುವವರು, ಆ ಮೂಲಕ ಜಾಗತಿಕ ಮಟ್ಟದಲ್ಲಿ ನಮ್ಮ ಗೌರವಕ್ಕೆ ಧಕ್ಕೆ ತಂದು ತಮ್ಮ ಗುಪ್ತ ವಾಂಛೆಗಳನ್ನು ಈಡೇರಿಸಿಕೊಳ್ಳುವವರು ಖಂಡಿತಾ ಯೋಗ್ಯರಲ್ಲ. ಹಾಗೆಂದೆ ಭಾರತಕ್ಕೆ ಬಂದೊಡನೆ ನಿವೇದಿತೆಯನ್ನು ಪೂರ್ಣ ಪ್ರಮಾಣದಲ್ಲಿ ತಯಾರು ಮಾಡುವ ಹೊಣೆಯನ್ನು ಸ್ವತಃ ಸ್ವಾಮೀಜಿಯೇ ಹೊತ್ತರು. ಅವಳಿಗೆ ಸೋದರ ಸಂನ್ಯಾಸಿಯೋರ್ವರಿಂದ ಬಂಗಾಳಿ ಕಲಿಸುವ ವ್ಯವಸ್ಥೆಯಾಯ್ತು. ಸ್ವತಃ ಸ್ವಾಮೀಜಿ ದಿನವಿಡೀ ವೇದಾಂತ, ಇತಿಹಾಸ, ಆಚರಣೆ, ಜನ-ಜೀವನಗಳೆಲ್ಲದರ ಕುರಿತಂತೆ ಪಾಠ ಹೇಳುತ್ತಿದ್ದರು. ಆಗೆಲ್ಲ ಅನೇಕರು ಸಂನ್ಯಾಸಿಯೊಬ್ಬರು ವಿದೇಶೀ ಮಹಿಳೆಯರೊಂದಿಗೆ ಇಷ್ಟೊಂದು ಸಮಯ ಕಳೆಯುತ್ತಾರಲ್ಲ ಅಂತ ಗುರಾಯಿಸಿರಲಿಕ್ಕೆ ಸಾಕು. ಆದರೆ ಹಾಗೇನಾದರೂ ಸ್ವಾಮೀಜಿ ಭಾರತದ ಪರಿಚಯ ವಿದೇಶಿ ಮಹಿಳೆಯರಿಗೆ ಮಾಡಿಸಲಿಲ್ಲವಾಗಿದ್ದರೆ ಅವರೆಲ್ಲ ಭಾರತವನ್ನು ಅವಮಾನಿಸುತ್ತಲೇ ಸೇವಾ ಕಾರ್ಯ ಮಾಡಿರುತ್ತಿದ್ದರು. ಅದರಿಂದ ಲೌಕಿಕ ಲಾಭವೇನೋ ಆಗಿರುತ್ತಿತ್ತು ಆದರೆ ಭಾರತೀಯರ ಆತ್ಮವಿಶ್ವಾಸಕ್ಕೆ ಬಲವಾದ ಪೆಟ್ಟು ಬಿದ್ದಿರುತ್ತಿತ್ತು. ಮದರ್ ತೆರೇಸಾ ಈ ದೇಶಕ್ಕೆ ಮಾಡಿದ ಸಮಸ್ಯೆ ಏನೆಂದು ಈಗ ಅರ್ಥವಾಗಿರಬೇಕು!

ಕುಳಿತು ಪಾಠವಷ್ಟೇ ಕೇಳಿದ್ದರೆ ನಿವೇದಿತಾ ಯುನಿವಸರ್ಿಟಿಯಿಂದ ಹೊರಬಂದ ಪ್ರೊಫೆಸರ್ರಂತೆ ಆಗಿಬಿಡುತ್ತಿದ್ದಳೇನೋ? ಸ್ವಾಮೀಜಿ ಆಕೆಯನ್ನು ಭಾರತದರ್ಶನಕ್ಕೆಂದು ಜೊತೆಗೊಯ್ದರು. ತೀರ್ಥಕ್ಷೇತ್ರಗಳಿಗೊಯ್ದು ಅಲ್ಲಿನ ಇತಿಹಾಸ, ಆಚರಣೆಗಳನ್ನೆಲ್ಲ ಎಳೆ ಎಳೆಯಾಗಿ ವಿವರಿಸುವಾಗ ಅದೊಂದು ರೋಮಾಂಚನಕಾರಿ ಅನುಭವ. ‘ನೋಟ್ಸ್ ಆಫ್ ಸಮ್ ವಾಂಡರಿಂಗ್ಸ್ ವಿಥ್ ದ ಸ್ವಾಮಿ ವಿವೇಕಾನಂದ’ದಲ್ಲಿ ಇವುಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾಳೆ ಆಕೆ. ಹಾಗಂತ ಎಲ್ಲವೂ ಅಂದುಕೊಂಡಂತೆ ನಡೆಯುತ್ತಿರಲಿಲ್ಲ. ವಿವೇಕಾನಂದರ ಕಲ್ಪನೆಯ ನಿವೇದಿತಾ ಇನ್ನೂ ರೂಪುಗೊಂಡಿರಲಿಲ್ಲ. ಅದೊಮ್ಮೆ ಸ್ವಾಮೀಜಿ ನಿನ್ನ ದೇಶ ಯಾವುದೆಂದು ಕೇಳಿದಾಗ ನಿವೇದಿತಾ ಕೊಟ್ಟ ಉತ್ತರ ಅವರನ್ನು ದಂಗು ಬಡಿಸಿತ್ತು. ಆಕೆ ತನ್ನ ಬ್ರಿಟೀಷ್ ಮೂಲದ ಕುರಿತಂತೆ ಬಲುವಾದ ಹೆಮ್ಮೆ ತಾಳಿದ್ದಳು. ಸ್ವಾಮೀಜಿಗೆ ಇದನ್ನು ಸಹಿಸುವುದಾಗಲಿಲ್ಲ. ಭಾರತವನ್ನು ಸರ್ವಶ್ರೇಷ್ಠವೆಂದು ಪ್ರೀತಿಸದ ಹೊರತು ಇಲ್ಲಿ ಮಾಡುವ ಯಾವ ಸೇವೆಗೂ ಬೆಲೆ ಇರಲಿಲ್ಲ. ಅವರ ಮುಂದಿನ ಶಿಕ್ಷಣ ಕಠೋರವಾಯ್ತು. ಬ್ರಿಟೀಷರು ಜಗತ್ತಿನ ಮೇಲೆ ಮಾಡಿದ ಅತ್ಯಾಚಾರಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ನಿವೇದಿತೆಯ ಪ್ರತಿಯೊಂದು ಮಾತನ್ನೂ ಖಂಡಿಸಿದರು. ನಂಬಿಕೆಗಳು ಅಲುಗಾಡುವ ಹೊತ್ತು ಬಲು ಭೀಕರ. ನಿವೇದಿತೆಯಂತೂ ಪ್ರಶ್ನಿಸದೇ ಒಪ್ಪುವವಳಲ್ಲವೇ ಅಲ್ಲ. ಮೊದಲಿನಂತೆ ಈಗ ಅವಳ ಪ್ರಶ್ನೆಗೆ ಸ್ವಾಮೀಜಿ ಸಮಾಧಾನದಿಂದ ಉತ್ತರಿಸುತ್ತಿಲ್ಲ. ತೀವ್ರವಾಗಿ ಖಂಡಿಸುತ್ತಾರೆ. ಕೆಲವೊಮ್ಮೆ ಉದಾಸೀನವಾಗಿರುತ್ತಾರೆ. ನಿವೇದಿತಾ ಕೂಡ ಕಡಿಮೆಯವಳಲ್ಲ. ಅವಳ ಅಹಂಕಾರ ಬಾಗಲು ಅವಳನ್ನು ಬಿಡಲೇ ಇಲ್ಲ.
ಸುಮ್ಮನೆ ಊಹಿಸಿಕೊಳ್ಳಿ. ಸ್ವಾಮೀಜಿಯೊಬ್ಬರೇ ಸರ್ವಸ್ವವೆಂದು ಭಾವಿಸಿ ಬಂದ ನಿವೇದಿತೆಗೆ ಅವರೇ ಇಲ್ಲವಾದಾಗ ಮನಸ್ಸು ಅದೆಷ್ಟು ಕ್ಲೇಶಗ್ರಸ್ತವಾಗಿರಬೇಕು. ಆ ಬೆಂಕಿಯಲ್ಲಿ ಅವಳು ಬೆಂದಳು. ಚೆನ್ನಾಗಿ ತಪಿಸಿ ಧ್ಯಾನಕ್ಕೆ ಮನಸ್ಸನ್ನು ಅಣಿಗೊಳಿಸಿದಳು. ಸಮಯ ಪಕ್ವವಾಗಿತ್ತು. ಅದು ಹುಣ್ಣಿಮೆಯ ದಿನ. ಸ್ವಾಮೀಜಿ ಶಿಷ್ಯೆಯ ಬಳಿ ಬಂದು ತಲೆ ನೇವರಿಸಿ ಸಮಾಧಾನ ಮಾಡಿದರು. ಇದಕ್ಕಾಗಿ ಕಾಯುತ್ತಿದ್ದಳೇನೋ ಎಂಬಂತೆ ಪ್ರಣಾಮ ಮಾಡಿ ಆನಂದದಿಂದ ಕುಣಿದಾಡಿದಳು. ಅಂದಿನ ಧ್ಯಾನ ಅವಳ ಪಾಲಿಗೆ ಬಲು ವಿಶೇಷ. ಆನಂದ ಸಾಗರದಲ್ಲಿಯೇ ತೇಲಿದ ಅನುಭವ. ಯಾವ ಅಹಂಕಾರದ ಕಾರಣದಿಂದ ಸಮಾಧಿಯ ಆನಂದ ಅವಳಿಗೆ ಸಿದ್ಧಿಸಿರಲಿಲ್ಲವೋ ಅದರ ರಸಾನುಭೂತಿಯನ್ನು ಸ್ಪರ್ಶ ಮಾತ್ರದಿಂದಲೇ ಕರುಣಿಸಿದ್ದರು ಸ್ವಾಮೀಜಿ!

swami-and-sis-niveditasm
ವಿವೇಕಾನಂದರಿಗೆ ಸಮಯದ ಮಿತಿಯ ಅರಿವಿತ್ತು. ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸ ಮಾಡಿ ಹೋಗಬೇಕಿತ್ತು. ನಿವೇದಿತೆಯ ತಯಾರಿಯಲ್ಲಿ ಸಾಧ್ಯವಿದ್ದ ಎಲ್ಲ ಮಾರ್ಗಗಳನ್ನೂ ಬಳಸಬೇಕಿತ್ತು. ಸ್ಪರ್ಶ ಮಾತ್ರದಿಂದ ಆಕೆಯಲ್ಲಿ ಬದಲಾವಣೆ ತರಬಲ್ಲ ಸಾಮಥ್ರ್ಯ ಹೊಂದಿದ್ದ ವಿವೇಕಾನಂದರು ಆ ಬದಲಾವಣೆಗಳನ್ನು ಉಳಿಸಿಕೊಳ್ಳಲು ನಿವೇದಿತೆಯನ್ನು ತಯಾರು ಮಾಡಬೇಕಿತ್ತಷ್ಟೇ! ಈಗ ಆಕೆ ಸ್ವಾಮೀಜಿಯ ಅಂತರಂಗವನ್ನಷ್ಟೇ ಅಲ್ಲ ಸಾಕ್ಷಾತ್ತು ಭಾರತದ ಅಂತರಂಗವನ್ನೂ ಅರಿಯಲಾರಂಭಿಸಿದ್ದಳು. ಈ ಯಾತ್ರೆ ಅವಳನ್ನು ಪೂರ್ಣ ಪರಿವತರ್ಿಸಿತ್ತು.
ಈ ಬದಲಾವಣೆಯ ಗುಂಗಿನಿಂದಲೇ ಕಾಶ್ಮೀರಕ್ಕೆ ಕಾಲಿಟ್ಟ ನಿವೇದಿತೆಗೆ ಭಾರತ ತನ್ನ ತಾನು ತೆರಕೊಂಡಿತ್ತು. ಅದಾಗಲೇ ಸ್ವಾಮೀಜಿಯೊಂದಿಗೆ ಅಮರನಾಥನ ದರ್ಶನ ಮಾಡಿಕೊಂಡಿದ್ದ ನಿವೇದಿತಾ ಸ್ವಾಮೀಜಿಯವರ ಸಾತ್ವಿಕತೆಯ ಪ್ರಖರ ಕಿರಣಗಳನ್ನು ಹತ್ತಿರದಿಂದ ಅನುಭವಿಸುತ್ತಿದ್ದಳು. ಭಾರತ ಹೊಸದಾಗಿ ಗೋಚರಿಸಲಾರಂಭಿಸಿತ್ತು. ಕಾಶ್ಮೀರದಲ್ಲಿ ಸ್ವಾಮೀಜಿ ಶಿವನಿಂದ ದೇವಿಯ ಭಕ್ತಿಯೆಡೆಗೆ ಮನಸ್ಸು ತಿರುಗಿಸಿದ ಮೇಲಂತೂ ಅನೂಹ್ಯ ಅನುಭವಗಳಾಗಲಾರಂಭಿಸಿದ್ದವು. ಈ ವೇಳೆಗೇ ಅವರು ಬರೆದ ‘ಕಾಳಿ ದಿ ಮದರ್’ ಕವಿತೆ ನಿವೇದಿತೆಯನ್ನು ಬಲುವಾಗಿ ಆಕಷರ್ಿಸಿದ್ದು. ಭಾವಾವೇಶಕ್ಕೇರಿ ಕಾಳಿ, ಕಾಳಿ ಎನ್ನುತ್ತ ಸ್ವಾಮೀಜಿ ಸಮಾಧಿ ಸ್ಥಿತಿಯನ್ನು ಅನುಭವಿಸುವುದನ್ನು ನೋಡುವುದೇ ಒಂದು ಆನಂದ. ಅಲ್ಲಿಂದಾಚೆಗೆ ಕಾಳಿಯೆಡೆಗಿನ ನಿವೇದಿತಾಳ ದೃಷ್ಟಿಕೋನ ಪೂರ್ಣ ಬದಲಾಯಿಸಿತ್ತು. ಕಾಳಿಗೆ ನೀಡುತ್ತಿದ್ದ ಪಶುಬಲಿ, ಅಲ್ಲಿನ ಮಂದಿರದ ಹೊರಗೆ ಭಕ್ತರ ಭಾವಾತಿರೇಕದಿಂದ ಅಸಹ್ಯಗೊಳ್ಳುತ್ತಿದ್ದ ನಿವೇದಿತಾ ಈಗ ಸಾಕ್ಷಾತ್ತು ಕಾಳಿಯ ಆರಾಧನೆಗೆ ತನ್ನ ತಾನು ಸಜ್ಜುಗೊಳಿಸಿಕೊಂಡಳು. ಅದೊಮ್ಮೆ ಧ್ಯಾನಸ್ಥ ಸ್ಥಿತಿಯಲ್ಲಿ ಕಾಳಿಯ ದರ್ಶನವಾದ ಮೇಲಂತೂ ಆಕೆಯ ಭಕ್ತಿ ಭಾವಕ್ಕೆ ಎಣೆಯೇ ಇರಲಿಲ್ಲ.
ನಾಲ್ಕಾರು ತಿಂಗಳ ನಂತರ ಕಲ್ಕತ್ತಾದ ಆಲ್ಬಟರ್್ ಹಾಲಿನಲ್ಲಿ ನಿವೇದಿತಾ ಕಾಳಿಯ ಕುರಿತಂತೆ ಉಪನ್ಯಾಸ ಮಾಡುವಾಗ ಈ ಎಲ್ಲಾ ಅನುಭವಗಳೂ ಕೆಲಸಕ್ಕೆ ಬಂದಿದ್ದವು. ಅಂದಿನ ಭಾಷಣ ಬಲು ವಿಶಿಷ್ಟ. ಯೂರೋಪಿನ ಗಣ್ಯರೆಲ್ಲ ಕಾರ್ಯಕ್ರಮದಲ್ಲಿದ್ದರು. ನಿವೇದಿತಾ ಮಾತುಗಳ ಕುರಿತಂತೆ ಅವರಲ್ಲಿ ಸಹಜ ಕುತೂಹಲವಿತ್ತು. ಇನ್ನು ಇವರಿಂದ ಪ್ರಭಾವಿತಗೊಂಡು ಜನಜಾಗೃತಿ ಮಾಡಿ ಕಾಳಿ ಪೂಜೆಯನ್ನೆಲ್ಲ ನಿಲ್ಲಿಸಿಬಿಡಬೇಕೆಂಬ ಹಟಕ್ಕೆ ಬಿದ್ದಿದ್ದ ಭಾರತದ ಬುದ್ಧಿಜೀವಿಗಳು ನಿವೇದಿತಾ ಮಾತುಗಳಿಂದ ಪ್ರೇರಣೆ ಪಡೆಯಲು ಬಂದಿದ್ದರು. ವಿದೇಶಿ ಹೆಣ್ಣುಮಗಳ ಅಭಿಪ್ರಾಯ ಕೇಳಲೆಂದು ಬಂದ ಸಹಜ ಭಕ್ತರೊಂದಷ್ಟು ಜನ. ಆಕೆಯ ಮಾತು ಶುರುವಾಯ್ತು. ಕೆಲವರಿಗೆ ಅಚ್ಚರಿ, ಕೆಲವರಿಗೆ ಗಾಬರಿ, ಒಂದಷ್ಟು ಜನಕ್ಕೆ ಹೆಮ್ಮೆ, ಇನ್ನೊಂದಷ್ಟು ಜನಕ್ಕೆ ಧನ್ಯತಾ ಭಾವ. ಆಕ್ರೋಶಗೊಂಡ ಬುದ್ಧಿಜೀವಿಗಳು ಕಾರ್ಯಕ್ರಮದ ನಡುವೆಯೇ ಕೂಗಾಡಿದರು. ಅವರಿಗೆ ಅದೇ ಕಾರ್ಯಕ್ರಮದಲ್ಲಿ ಪ್ರಬಲ ವಿರೋಧ ವ್ಯಕ್ತವಾಯಿತು. ಮುಂದೆ ಕಾಳಿಘಾಟಿನಲ್ಲಿಯೇ ಕಾಳಿಪೂಜೆ ಕುರಿತಂತೆ ಆಕೆಯ ಭಾಷಣ ಏರ್ಪಡಿಸಲಾಗಿತ್ತು. ಕಾಲಕ್ರಮದಲ್ಲಿ ಆಕೆ ಜನರ ಎಲ್ಲಾ ಪ್ರಶ್ನೆಗಳನ್ನು ಕ್ರೋಢೀಕರಿಸಿ ‘ಕಾಳಿ ದಿ ಮದರ್’ ಎಂಬ ಪುಟ್ಟ ಪುಸ್ತಕವನ್ನೇ ಬರೆದಳು. ಇವೆಲ್ಲವನ್ನೂ ದೂರದಿಂದಲೇ ಗಮನಿಸಿ ಮನದಲ್ಲೇ ಆನಂದಿಸುತ್ತಿದ್ದ ಒಂದೇ ಒಂದು ಜೀವ ಸ್ವಾಮಿ ವಿವೇಕಾನಂದರು ಮಾತ್ರ.
ಮೂತರ್ಿ ಪೂಜೆಯನ್ನು ಮೂಢ ನಂಬಿಕೆಯೆಂದು ಕರೆದು ಅವೆಲ್ಲವನ್ನೂ ನಿಷೇಧಿಸಿಬಿಡಬೇಕೆಂದು ಪಣ ತೊಟ್ಟವರ ನಡುವೆ ನಿವೇದಿತೆಯ ಕಾಳಿಯ ಕುರಿತಂತ ಚಚರ್ೆ ಪ್ರಸ್ತುತವೇ. ಈ ಪುಟ್ಟ ಪುಸ್ತಕದ ಮೊದಲ ಅಧ್ಯಾಯ ಸಂಕೇತಗಳ ಮಹತ್ವವನ್ನು ವಿವರಿಸುವಂಥದ್ದು. ಕ್ರಿಶ್ಚಿಯನ್ನರಾಗಲಿ, ಮುಸಲ್ಮಾನರಾಗಲಿ ಹಿಂದೂ ಧರ್ಮವನ್ನು ಅವಹೇಳನ ಮಾಡುವಾಗ ಹೇಳುವುದು ಒಂದೇ ಮಾತು, ಮೂತರ್ಿ ಪೂಜೆ ಹಿಂದೂ ಧರ್ಮಕ್ಕೆ ಕಳಂಕ ಅಂತ. ನಿವೇದಿತೆ ಎಳೆಎಳೆಯಾಗಿ ಇದಕ್ಕೆ ಉತ್ತರ ಕೊಡುವ ರೀತಿಯೇ ರೋಚಕ.

71jmtepnepl
ಭಾಷೆಯಲ್ಲೂ ಸಂಕೇತಗಳಿವೆ. ಪ್ರತೀ ಪ್ರದೇಶದಲ್ಲೂ ನಾವು ಅವರವರ ಭಾಷೆಯ ಪದಗಳಿಗೆ ತಡಕಾಡುವಂತೆ ದೇವರೆಂಬ ಸಂಕೇತಗಳೂ ಕೂಡ. ಈ ಪದ ಸರಿ, ಇದು ತಪ್ಪು ಎನ್ನುವಂತಿಲ್ಲ. ಅವರವರ ಸಂಸ್ಕೃತಿಗೆ ತಕ್ಕಂತೆ ಆಯಾ ಪದಗಳು. ಪಶ್ಚಿಮದಲ್ಲಿ ಸಂಧ್ಯಾ ಕಾಲವೆಂದರೆ ಬೆಳಗ್ಗೆ ಮತ್ತು ರಾತ್ರಿಗಳು ಸೇರುವ ನಡುವಿನ ಅವಧಿ, ಭಾರತದಲ್ಲಿ ಅವೆರಡೂ ಸೇರುವಾಗಿನ ಕ್ಷಣ. ಪಶ್ಚಿಮ ಸಂಜೆಯನ್ನು ರಾತ್ರಿಗೆ ಹತ್ತಿರದ, ಮನೆಗೆ ಮರಳುವ ಭಾವದ, ಮಕ್ಕಳು ಕೊನೆಯದಾಗಿ ನಕ್ಕು ಮಲಗಿಬಿಡುವ ಸಮಯವೆಂದು ಬಣ್ಣಿಸಿದರೆ ಭಾರತ ಅದನ್ನು ಗೋಧೂಳಿ ಕಾಲ ಎನ್ನುತ್ತದೆ. ಅದರೊಟ್ಟಿಗಿನ ಚಿತ್ರಣ ಪೂರ್ಣ ಭಿನ್ನ. ಗೊಲ್ಲ ಹೆಣ್ಣುಮಕ್ಕಳು ಗೋವುಗಳನ್ನು ಮನೆಗೊಯ್ಯುವ, ಆ ಗೋವುಗಳ ಗೊರಸುಗಳಿಂದ ಹಾರಿದ ಧೂಳಿನಿಂದ ಆಗಸ ತುಂಬಿ ಸೂಯರ್ಾಸ್ತದ ದೃಶ್ಯ ಮಂದವಾಗುವ ಚಿತ್ರಣಗಳೆಲ್ಲ ಕಣ್ಮುಂದೆ ಬಂದು ಬಿಡುತ್ತದೆ. ಸಾಂಸ್ಕೃತಿಕ ಭಿನ್ನತೆಗಳ ಕಾರಣದಿಂದಾಗಿ ಭಾಷೆಯ ಸಂಕೇತಗಳು ಬದಲಾಗುವುದನ್ನು ಗುರುತಿಸುವ ನಿವೇದಿತಾ ಮುಂದುವರೆದು ಇದರ ಆಧಾರದ ಮೇಲೆಯೇ ಶಾಶ್ವತ ಬೆಳಕನ್ನು ಕಾಣಲು ಕಣ್ಣ ಮುಂದಿನ ಕನ್ನಡಕ ಸರಿಸಬೇಕೆನ್ನುತ್ತಾಳೆ. ನಾವೆಲ್ಲರೂ ನಮ್ಮದೇ ಆಲೋಚನೆಗಳಿಂದ ಪ್ರಭಾವಗೊಂಡ ಪರದೆಯೊಂದನ್ನು ಕಣ್ಣಮುಂದೆಳೆದುಕೊಂಡಿರುವುದರಿಂದ ಸತ್ಯದ ದರ್ಶನ ನಮಗಾಗುತ್ತಿಲ್ಲ. ನಾವು ಕಂಡಿದ್ದೇ ಸತ್ಯವೆಂದು ಭಾವಿಸುತ್ತಾ ಕೇಂದ್ರದಿಂದ ಅದೆಷ್ಟು ದೂರ ಬಂದಿದ್ದೇವೆಂದರೆ ಕೆಲವೊಮ್ಮೆ ಪರಿಧಿಯಲ್ಲಿ ವಿರುದ್ಧ ದಿಕ್ಕಿನಲ್ಲಿದ್ದೇವೆ ಎನಿಸಿಬಿಡುತ್ತದೆ ಎಂದಳು. ಓಹ್! ಎಲ್ಲಾ ಮತ-ಪಂಥಗಳ ನಡುವಿನ ವೈರುಧ್ಯವನ್ನು ಅದೆಷ್ಟು ಸಲೀಸಾಗಿ ಬಗೆ ಹರಿಸಿದಳು ಪುಣ್ಯಾತ್ಗಿತ್ತಿ.
ಅವಳ ವಾದ ಮುಂದುವರಿದೇ ಇತ್ತು. ಪುರುಷಪ್ರಧಾನವಾದ ಸಮಾಜ ಹೊಂದಿದ್ದ ಅರಬ್ಬರು ತಂದೆಗೆ ಬಲುವಾಗಿ ಮಹತ್ವ ಕೊಡುತ್ತಿದ್ದರು. ನಿರ್ಣಯ ಕೊಡುವ, ಮಕ್ಕಳನ್ನು ಪೋಷಿಸುವ, ಕಾಲಮೇಲೆ ನಿಲ್ಲಿಸಿಕೊಂಡು ಆಡಿಸುವ ತಂದೆ ಅವರಿಗೆ ಬಲು ಹತ್ತಿರ. ಹೀಗಾಗಿಯೇ ಸೆಮಿಟಿಕ್ ಮತಗಳಲ್ಲೆಲ್ಲಾ ಆತ್ಮವೆಂಬುದು ತಂದೆಯೆಂಬಂತೆ ಬಿಂಬಿಸಲ್ಪಟ್ಟಿತು. ಆದರೆ ಭಾರತದಲ್ಲಿ ಹಾಗಲ್ಲ. ಇಲ್ಲಿ ಸ್ತ್ರೀಯೇ ಪರಿವಾರದ ಪ್ರಮುಖ ಅಂಗ. ಪಶ್ಚಿಮದಲ್ಲಿ ಹೆಂಡತಿಯನ್ನು ರಾಣಿ ಎಂದಂತೆ ಭಾರತದಲ್ಲಿ ಮಗ ತಾಯಿಯನ್ನು ಸಿಂಹಾಸನಸ್ಥ ರಾಣಿಯಂತೆ ಪೂಜಿಸುತ್ತಾನೆ. ಅವಳೇ ಅವನ ಪಾಲಿಗೆ ಪಾವಿತ್ರ್ಯ ಮತ್ತು ಶಾಂತಿಯ ದಯಪಾಲಿಸುವವಳು. ಅದಕ್ಕೇ ಇಲ್ಲಿ ಭಗವಂತನನ್ನು ಮಗುವನ್ನು ಲಾಲಿಸುವ ತಾಯಿಯಂತೆ ಕಾಣಲಾಯ್ತು.
ಇಷ್ಟಕ್ಕೇ ಸುಮ್ಮನಾಗದ ನಿವೇದಿತಾ ಮೇರಿಯನ್ನು ಪೂಜಿಸುವ ಕ್ರಿಶ್ಚಿಯನ್ನರನ್ನು ಉಲ್ಲೇಖಿಸುವಳಲ್ಲದೇ ‘ನಿಮ್ಮನ್ನು ನಾನು ಕೋಳಿ ತನ್ನ ಮರಿಗಳನ್ನು ರೆಕ್ಕೆಯೊಳಗೆ ಕೂಡಿ ಹಾಕುವಂತೆ ಹಾಕಿಕೊಳ್ಳುವೆ’ ಎಂಬ ಭಗವಂತನ ವಾಣಿಯನ್ನು ನೆನಪಿಸಿ ತಾಯಿಯಾಗದೇ ಯಾವುದೂ ಸಂಪೂರ್ಣವಾಗಲಾರದು ಮತ್ತು ಕ್ರೈಸ್ತ ಮತವೂ ಅಂತೆಯೇ ನಡಕೊಂಡಿದೆ ಎಂಬುದನ್ನು ಸಾಬೀತು ಪಡಿಸಿದಳು. ಅಲ್ಲಿಗೆ ಎದುರಿಗಿರುವವರ ವಾದ ಅರ್ಧ ಸತ್ತಿತ್ತು. ಈಗ ಆಕೆ ಕಾಳಿ ಪೂಜೆಯ ಮಹಿಮೆಯನ್ನು ಕೊಂಡಾಡಲಾರಂಭಿಸಿ ಆಕೆಯ ಭಯಂಕರ ರೂಪವನ್ನು ಕಣ್ಮುಂದೆ ತಂದು ಅದು ಮೃತ್ಯುವಿಗೆ ಹೇಗೆ ಹತ್ತಿರವೆಂಬುದನ್ನು ವಿವರಿಸಿದಳು.
ಆಕೆಯ ಭಾಷೆ ಖಂಡಿತ ಸಲೀಸಲ್ಲ. ಒಂದು ಪುಸ್ತಕವನ್ನು ನಾಲ್ಕಾರು ಬಾರಿಯಾದರೂ ಓದಿದರೆ ಅರ್ಥವಾದೀತೇನೋ. ಆದರೆ ಒಮ್ಮೆ ಅರ್ಥವಾದರೆ ಹೊಸ ಹೊಳಹನ್ನೇ ಹುಟ್ಟಿ ಹಾಕಬಲ್ಲ ಸಾಹಿತ್ಯ ಆಕೆಯದು. ಮೂತರ್ಿ ಪೂಜೆಯನ್ನು, ದೇವಸ್ಥಾನಗಳಿಗೆ ಹೋಗುವುದನ್ನು ಕಂಡು ಅಸಹ್ಯ ಪಡುವ ಭಾರತೀಯರೆಲ್ಲ ಓದಲೇ ಬೇಕಾದ ಕೃತಿ ಕಾಳಿ ದಿ ಮದರ್! ಶಿವ-ಶಿವೆಯರ ವೈಭವದ ವರ್ಣನೆ ಮಾಡಿ ಶಿವನ ಮೇಲೆ ನಡೆಯುವ ಕಾಳಿಯ ನರ್ತನವನ್ನು ಆಕೆ ವಿವರಿಸಿ ಒಪ್ಪಿಸುವ ಪರಿ ಅನನ್ಯ. ಪ್ರಕೃತಿ-ಪುರುಷರನ್ನು ಆಕೆ ಡೈನಮೋ ಮತ್ತು ಅದರಿಂದ ಬಂದ ವಿದ್ಯುಚ್ಛಕ್ತಿಗೆ ಹೋಲಿಸುತ್ತಾಳೆ. ಪುರುಷ ಶಾಂತವಾಗಿರುತ್ತಾನೆ ಅದರೊಳಗಡಗಿರುವ ಶಕ್ತಿಯೇ ಹೊರಗೆ ರುದ್ರ ನರ್ತನ ಮಾಡೋದು. ಎಷ್ಟು ಸರಳವಾಗಿದೆಯಲ್ಲವೇ?
ನಿವೇದಿತಾ ಬಲು ಹತ್ತಿರವೆನಿಸೋದು ಇದಕ್ಕೇ. ಅವಳೆಂದಿಗೂ ಭಾರತೀಯ ಆಚರಣೆಗಳನ್ನು ವಿರೋಧಿಸಲಿಲ್ಲ, ಭಾರತೀಯರನ್ನು ದೂಷಿಸಲಿಲ್ಲ. ತಾನು ಇಲ್ಲಿನ ಅನಾಗರಿಕ ಜನರ ಸೇವೆಗೆ ಬಂದವಳೆಂದು ಪತ್ರಿಕಾ ಹೇಳಿಕೆ ಕೊಡಲಿಲ್ಲ. ಕೊನೆಗೆ ತನ್ನ ಮತವನ್ನು ಇಲ್ಲಿನ ಜನರ ಮೇಲೆ ಹೇರಿ ಅವರ ಪರಿವರ್ತನೆಗೆ ಪ್ರಯತ್ನ ಪಡಲಿಲ್ಲ. ಎಲ್ಲಾ ಬಿಡಿ ಯಾವ ಕಾಳಿಯ ಕುರಿತಂತೆ ಇಷ್ಟು ಅಮೋಘವಾಗಿ ಮಾತನಾಡುತ್ತಿದ್ದಳೋ ದಕ್ಷಿಣೇಶ್ವರದ ಅದೇ ಕಾಳಿ ಮಂದಿರಕ್ಕೆ ಅವಳಿಗೆ ವಿದೇಶೀಯಳೆಂಬ ಕಾರಣಕ್ಕೆ ಕೊನೆಯವರೆಗೂ ಪ್ರವೇಶ ದಕ್ಕಲಿಲ್ಲ. ಆದಾಗ್ಯೂ ಮನಸಿಗೆ ಕಿರಿಕಿರಿ ಮಾಡಿಕೊಳ್ಳಲಿಲ್ಲ. ಇಲ್ಲಿನ ನಂಬಿಕೆಗಳನ್ನು ವಿರೋಧಿಸುವ ಅಧಿಕಾರ ತನಗಿಲ್ಲವೆಂದೇ ಶಾಂತವಾಗಿ ಒಪ್ಪಿಕೊಂಡಳು. ಕಾಳಿ ಮಂದಿರದ ಹೊರಗೆ ಕುಳಿತು ಧ್ಯಾನಸ್ಥಳಾಗುತ್ತಿದ್ದಳು!
ಓಹ್! ಈಗ ಅರ್ಥವಾಗಿರಬೇಕು. ಸೋದರಿ ನಿವೇದಿತಾಳಿಗೂ ಮದರ್ ತೆರೇಸಾಗೂ ಅದೆಷ್ಟು ಅಂತರವಿದೆ ಅಂತ!!

ನೋವು ನುಂಗುವ ಶಿವ, ಪ್ರೇಮ ಪ್ರವಾಹದ ಬುದ್ಧ!

ನಿವೇದಿತಾಗೆ ಸ್ವಾಮೀಜಿಯವರ ಮೇಲೆ ಅಪಾರ ಶ್ರದ್ಧೆಯಿತ್ತು. ಸ್ವಾಮೀಜಿ ಹೇಳಿದ ಕೆಲಸ ಮಾಡುವುದಷ್ಟೇ ತನ್ನ ಜೀವನದ ಗುರಿಯೆಂದು ಆಕೆ ನಿರ್ಧರಿಸಿಯಾಗಿತ್ತು. ಹೀಗೆ ನಿರ್ಧರಿಸುವ ಮುನ್ನ ಅನೇಕ ತಾಕಲಾಟಗಳು ಎದುರಾದರೂ ಅದನ್ನು ಎದುರಿಸಿ ಗೆದ್ದು ಭಾರತದ ಶಿಶುವಾದಳು. ಹಾಗಂತ ಇದು ಏಕಾಕಿ ನಡೆದ ಪ್ರಕ್ರಿಯೆಯಲ್ಲ. ಸ್ವಾಮೀಜಿ ಭಾರತಕ್ಕೆ ಬಂದ ನಂತರ ಮಾರ್ಗರೇಟ್ ನೋಬಲ್ಳೊಡನೆ ನಿರಂತರ ಪತ್ರ ವ್ಯವಹಾರ ನಡೆದಿದೆ. ಅತ್ತ ಆಕೆಯೂ ವೇದಾಂತದ ಪ್ರಚಾರ ಕಾರ್ಯದಲ್ಲಿ ತನ್ನ ತಾನು ಪೂತರ್ಿ ತೊಡಗಿಸಿಕೊಂಡು ಆಧ್ಯಾತ್ಮದ ಅತ್ಯುನ್ನತ ಸವಿ ಅನುಭವಿಸಲಾರಂಭಿಸಿದ್ದಳು. ಆ ವೇಳೆಗೆ ಸ್ವಾಮೀಜಿ ಇಲ್ಲಿ ಬರಗಾಲದ ಪರಿಹಾರಕ್ಕೆಂದು ಸೋದರ ಸಂನ್ಯಾಸಿಗಳಿಗೆ ದೀಕ್ಷೆ ಕೊಟ್ಟು ಕಳಿಸಿದ್ದರು. ತಮ್ಮ ಪ್ರತೀ ಪತ್ರದಲ್ಲೂ ಈ ಬಗೆಯ ಸಾಮಾಜಿಕ ಚಟುವಟಿಕೆಗಳನ್ನೇ ಉಲ್ಲೇಖಿಸುತ್ತಿದ್ದ ಸ್ವಾಮೀಜಿ ಧ್ಯಾನದಿಂದ ಮುಕ್ತಿಯ ಹಾದಿಯಲ್ಲಿದ್ದ ನಿವೇದಿತೆಯನ್ನು ಕರ್ಮಮಾರ್ಗದೆಡೆಗೆ ಎಳೆದೆಳೆದು ತರುತ್ತಿದ್ದರು.

ಸ್ವಾಮಿ ವಿವೇಕಾನಂದರಿಗೆ ನಿವೇದಿತಾಳಷ್ಟೇ ಸಮರ್ಥಳಾದ ಭಾರತೀಯ ಹೆಣ್ಣುಮಕ್ಕಳು ಸಿಗಲೇ ಇಲ್ಲವಾ? ಹಾಗಂತ ಅನೇಕರು ಪ್ರಶ್ನಿಸುತ್ತಾರೆ. ಭಾರತೀಯ ಹೆಣ್ಣುಮಕ್ಕಳ ಸಾಮಥ್ರ್ಯ ಮತ್ತು ಚೌಕಟ್ಟು ಎರಡೂ ಅವರಿಗೆ ಗೊತ್ತಿರದ ಸಂಗತಿಯೇನಲ್ಲ. ಅದೇ ವೇಳೆಗೆ ಪಶ್ಚಿಮದ ಹೆಣ್ಣುಮಕ್ಕಳ ಸಾಮಥ್ರ್ಯ ಮತ್ತು ಛಲಭರಿತ ವ್ಯಕ್ತಿತ್ವದ ಅರಿವೂ ಅವರಿಗಿತ್ತು. ಸ್ವಾಮೀಜಿ ಸದಾ ಕಾಲ ಶ್ರದ್ಧೆಯ ಬಗ್ಗೆ ಮಾತನಾಡುತ್ತಿದ್ದರು ಮತ್ತು ಪಶ್ಚಿಮದವರಲ್ಲಿ ಶ್ರದ್ಧೆ ಅಪಾರವಾಗಿದೆ ಎಂಬುದೂ ಅವರಿಗೆ ಗೊತ್ತಿತ್ತು. ಅದರಲ್ಲೂ ಸ್ವಾಮಿ ವಿವೇಕಾನಂದರ ವಿಶ್ವರೂಪವನ್ನೇ ದರ್ಶನ ಮಾಡಿಕೊಂಡಿದ್ದ ಪಾಶ್ಚಾತ್ಯ ಶಿಷ್ಯರು ಈ ಮಹಾಮಹಿಮನ ಕಾರ್ಯಕ್ಕೆ ಸರ್ವಸಮರ್ಪಣೆಗೆ ಸಿದ್ಧವಾಗಿದ್ದರು. ಹಾಗಂತ ಸ್ವಾಮೀಜಿ ಪೂರಾ ಪಶ್ಚಿಮದವರ ಮೇಲೆಯೇ ಭರವಸೆ ಇಟ್ಟಿದ್ದರೆಂದೇನಿಲ್ಲ. ಭಾರತೀಯ ಸ್ತ್ರೀ ರತ್ನಗಳಿಗಾಗಿ ತಡಕಾಡಿದ್ದರು. ಅಂಥವರು ಸಿಕ್ಕಾಗ ಕುಣಿದಾಡಿದ್ದರು.
ಗುರುದೇವ ರವೀಂದ್ರರ ಅಕ್ಕ ಸ್ವರ್ಣಕುಮಾರಿ ದೇವಿಯ ಮಗಳಾದ ಸರಳಾದೇವಿ ಘೋಷಾಲರು ವಿವೇಕಾನಂದರ ಮೆಚ್ಚುಗೆಗೆ ಪಾತ್ರರಾದ ಹೆಣ್ಣುಮಕ್ಕಳಲ್ಲಿ ಒಬ್ಬರು. ಆಕೆ ಭಾರತದ ಸ್ವಾತಂತ್ರ್ಯ ಸಂಘರ್ಷದಲ್ಲಿ ಪಾಲ್ಗೊಂಡ ಕ್ರಾಂತಿಕಾರಿ ಹೆಣ್ಣುಮಗಳು. ಭಾರತದ ಮೊದಲ ಮಹಿಳಾ ಸಂಘಟನೆ ಭಾರತ್ ಸ್ತ್ರೀ ಮಹಾಮಂಡಲದ ಸ್ಥಾಪಕಿ. ಆ ಮೂಲಕ ಸ್ತ್ರೀ ಶಿಕ್ಷಣಕ್ಕೆ ತೊಡಗಿಸಿಕೊಂಡವಳು ಆಕೆ. ಸ್ವಾಮೀಜಿಯ ವಿಚಾರಗಳಿಂದ ಆಕೆ ಬಹುವಾಗಿ ಪ್ರಭಾವಿತಳಾಗಿದ್ದಳು. ತನ್ನ ‘ಭಾರತಿ’ ಎಂಬ ಪತ್ರಿಕೆಯನ್ನು ಅವರಿಗೆ ಕಳಿಸಿ ಅಭಿಪ್ರಾಯ ಅಪೇಕ್ಷಿಸಿದ್ದಳು. ಆಗ ಡಾಜರ್ಿಲಿಂಗ್ನಿಂದ ಪತ್ರ ಬರೆದ ಸ್ವಾಮೀಜಿ ಭಾರತದ ತತ್ಕಾಲೀನ ಸಮಸ್ಯೆಯ ಕುರಿತಂತೆ ಅವಳಿಗೆ ವಿವರಿಸಿ ‘ಓ! ಭಾಗ್ಯವತಿಯರು ನೀವು! ನೀವು ಐಶ್ವರ್ಯಹೀನರೂ, ನಿಭರ್ಾಗ್ಯರೂ, ತುಳಿತಕ್ಕೊಳಗಾದವರೂ ಆದವರನ್ನು ಹೃತ್ಪೂರ್ವಕವಾಗಿ ಪ್ರೀತಿಸಿದರೆ ಅವರು ಮತ್ತೊಮ್ಮೆ ಏಳುವರೆಂದು ನಾನು ನಂಬುತ್ತೇನೆ’ ಎಂದರು. ಮತ್ತೊಂದು ಸುದೀರ್ಘ ಪತ್ರದಲ್ಲಿ ‘ವೇದಾಂತವನ್ನು ತಿಳಿದುಕೊಂಡ, ಅನುಭವವುಳ್ಳ, ಧೈರ್ಯಶಾಲಿಗಳಾದ ಮತ್ತು ಸುಸಂಸ್ಕೃತರಾದ ನಿಮ್ಮಂತಹ ಹೆಂಗಸರು ಇಂಗ್ಲೆಂಡ್ ದೇಶಕ್ಕೆ ಬೋಧಿಸಲು ಹೋದರೆ ಪ್ರತೀ ವರ್ಷವೂ ನೂರಾರು ಜನ ಗಂಡಸರು ಮತ್ತು ಹೆಂಗಸರು ಭಾರತೀಯ ಧರ್ಮವನ್ನು ಸ್ವೀಕರಿಸಿ ಧನ್ಯರಾಗುವರೆಂದು ನಾನು ನಂಬುತ್ತೇನೆ’ ಎಂದರು. ಇಲ್ಲಿಂದ ವಿದೇಶಕ್ಕೆ ಹೋದ ರಮಾಬಾಯಿ ಪಾಶ್ಚಾತ್ಯ ರಾಷ್ಟ್ರಗಳ ಕುರಿತಂತೆ ಅರಿಯದೇ, ಸಮರ್ಥ ಆಂಗ್ಲ ಪಾಂಡಿತ್ಯವನ್ನು ಹೊಂದದೇ ಇದ್ದಾಗ್ಯೂ ಮಾಡಿದ ಸಾಧನೆ ಅವರನ್ನು ಮೂಕವಿಸ್ಮಿತರನ್ನಾಗಿಸಿತ್ತು. ಅಂತಹುದರಲ್ಲಿ ಸರಳಾಘೋಷಾಲ್ರಂಥವರು ಇಂಗ್ಲೆಂಡಿಗೆ ಹೋದರೆ ಅದರ ಪ್ರಭಾವ ಜೋರಾಗಿರುವುದೆಂಬ ಖಾತ್ರಿ ಅವರಿಗಿತ್ತು. ‘ಭಾರತೀಯ ನಾರಿಯು ಭಾರತೀಯ ಉಡುಪಿನಲ್ಲಿ ಋಷಿಮುಖದಿಂದ ಹೊರಟ ಧರ್ಮ ಬೋಧಿಸಿದರೆ ಪಾಶ್ಚಾತ್ಯ ದೇಶಗಳಲ್ಲೂ ಮಹಾ ಮಹಾತರಂಗವೇಳುವುದು. ಮೈತ್ರೇಯಿ, ಲೀಲಾವತಿ, ಸಾವಿತ್ರಿ, ಉಭಯ ಭಾರತಿಯರನ್ನು ಹೆತ್ತ ನಾಡಲ್ಲಿ ಇದನ್ನು ಸಾಧಿಸುವ ಧೈರ್ಯವುಳ್ಳ ನಾರಿಯರು ಇಲ್ಲವೇನು?’ ಎಂದು ಬಲು ಜೋರಾಗಿಯೇ ಪ್ರಶ್ನಿಸಿದರು.

swami-vivekanandaarticle-swami-vivekanandaarticle-on-swami-vivekanandastory-of-swami-vivekanandawritten-by-swami-vivekanandawritten-for-swami-vivekananda-authored-swami-vivekanandaswami-vivekananda-an
ಸರಳಾಘೋಷಾಲರನ್ನು ವಿದೇಶದ ನೆಲದಲ್ಲಿ ಪರಿಚಯಿಸುವ ಬಯಕೆ ವಿವೇಕಾನಂದರಿಗಿತ್ತು. ಆದರೆ ಮನೆಯವರು ಒಪ್ಪಿಗೆ ಕೊಡಲಿಲ್ಲ. ಅವರ ಮದುವೆಯನ್ನೂ ಮಾಡಲಾಯಿತು. ಮೇಲ್ನೋಟಕ್ಕೆ ಸ್ವಾಮೀಜಿ ಆಕೆಯನ್ನು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸುವ ಕುರಿತಂತೆ ಅಪಾರ ಭರವಸೆ ಇಟ್ಟಿದ್ದರೆನಿಸುತ್ತದೆ. ಒಮ್ಮೆಯಂತೂ ಶಿಕ್ಷಣದ ಕಲ್ಪನೆಯನ್ನು ಮುಂದಿಟ್ಟು ಸರಳಾಘೋಷಾಲರಂತೆ ಪ್ರಯತ್ನ ಮಾಡಬೇಕೆಂದು ನಿವೇದಿತೆಗೆ ಆದರ್ಶವನ್ನೂ ಕಟ್ಟಿಕೊಟ್ಟಿದ್ದರು. ಮುಂದೆ ಸರಳಾಘೋಷಾಲರ ಬದುಕು ಅನೂಹ್ಯ ತಿರುವುಗಳನ್ನು ಪಡಕೊಂಡಿತು; ವಿವಾದಾತ್ಮಕವೂ ಆಯಿತು. ಅಷ್ಟೇ ಅಲ್ಲ, ರಾಮಕೃಷ್ಣ ಪಂಥವನ್ನು ಸಮಾಪ್ತಿಗೊಳಿಸಿದರೆ ವಿವೇಕಾನಂದರ ಕೆಲಸಕ್ಕೆ ತೊಡಗಿಸಿಕೊಳ್ಳುವುದಾಗಿ ಪತ್ರವನ್ನೂ ಬರೆದಳು. ಆಕೆಯಲ್ಲಿ ಶ್ರದ್ಧೆಯ ಕೊರತೆ ಎದ್ದು ಕಾಣುತಿತ್ತು. ಆ ವೇಳೆಗಾಗಲೇ ನಿವೇದಿತಾ ವಿವೇಕಾನಂದರ ಪುಷ್ಪವಾಗಿ ಅರಳಲಾರಂಭಿಸಿದ್ದಳು.
ನಿವೇದಿತಾಗೆ ಸ್ವಾಮೀಜಿಯವರ ಮೇಲೆ ಅಪಾರ ಶ್ರದ್ಧೆಯಿತ್ತು. ಸ್ವಾಮೀಜಿ ಹೇಳಿದ ಕೆಲಸ ಮಾಡುವುದಷ್ಟೇ ತನ್ನ ಜೀವನದ ಗುರಿಯೆಂದು ಆಕೆ ನಿರ್ಧರಿಸಿಯಾಗಿತ್ತು. ಹೀಗೆ ನಿರ್ಧರಿಸುವ ಮುನ್ನ ಅನೇಕ ತಾಕಲಾಟಗಳು ಎದುರಾದರೂ ಅದನ್ನು ಎದುರಿಸಿ ಗೆದ್ದು ಭಾರತದ ಶಿಶುವಾದಳು. ಹಾಗಂತ ಇದು ಏಕಾಕಿ ನಡೆದ ಪ್ರಕ್ರಿಯೆಯಲ್ಲ. ಸ್ವಾಮೀಜಿ ಭಾರತಕ್ಕೆ ಬಂದ ನಂತರ ಮಾರ್ಗರೇಟ್ ನೋಬಲ್ಳೊಡನೆ ನಿರಂತರ ಪತ್ರ ವ್ಯವಹಾರ ನಡೆದಿದೆ. ಅತ್ತ ಆಕೆಯೂ ವೇದಾಂತದ ಪ್ರಚಾರ ಕಾರ್ಯದಲ್ಲಿ ತನ್ನ ತಾನು ಪೂತರ್ಿ ತೊಡಗಿಸಿಕೊಂಡು ಆಧ್ಯಾತ್ಮದ ಅತ್ಯುನ್ನತ ಸವಿ ಅನುಭವಿಸಲಾರಂಭಿಸಿದ್ದಳು. ಆ ವೇಳೆಗೆ ಸ್ವಾಮೀಜಿ ಇಲ್ಲಿ ಬರಗಾಲದ ಪರಿಹಾರಕ್ಕೆಂದು ಸೋದರ ಸಂನ್ಯಾಸಿಗಳಿಗೆ ದೀಕ್ಷೆ ಕೊಟ್ಟು ಕಳಿಸಿದ್ದರು. ತಮ್ಮ ಪ್ರತೀ ಪತ್ರದಲ್ಲೂ ಈ ಬಗೆಯ ಸಾಮಾಜಿಕ ಚಟುವಟಿಕೆಗಳನ್ನೇ ಉಲ್ಲೇಖಿಸುತ್ತಿದ್ದ ಸ್ವಾಮೀಜಿ ಧ್ಯಾನದಿಂದ ಮುಕ್ತಿಯ ಹಾದಿಯಲ್ಲಿದ್ದ ನಿವೇದಿತೆಯನ್ನು ಕರ್ಮಮಾರ್ಗದೆಡೆಗೆ ಎಳೆದೆಳೆದು ತರುತ್ತಿದ್ದರು.
ಸ್ವಾಮೀಜಿಯವರ ಪತ್ರಗಳೇ ಸಂಶೋಧನೆಗೆ ಯೋಗ್ಯವಾದವು. ಅವರವರ ಮನಸ್ಥಿತಿಯಿಂದ ಅವರವರನ್ನು ಮೇಲೆತ್ತುವ ಪ್ರಯತ್ನ ಬರೆದ ಪತ್ರಗಳಲ್ಲಿ ಎದ್ದು ಕಾಣುತ್ತಿರುತ್ತದೆ. ನಿವೇದಿತೆಗೆ ಸದಾ ಚಟುವಟಿಕೆಗಳನ್ನು ವಿವರಿಸಿದರೆ, ಮಿಸ್ ಮೇರಿ ಹೇಲ್, ಜೋಸೆಫಿನ್ ಮ್ಯಾಕ್ಲಿಯೊಡ್ರಿಗೆ ಪಶ್ಚಿಮದ ಹುಳುಕುಗಳನ್ನು ಎತ್ತಿ ತೋರುತ್ತಿದ್ದರು. ಸೋದರ ಸಂನ್ಯಾಸಿಗಳಲ್ಲಿ ದುಃಖ ತೋಡಿಕೊಂಡರೆ, ಅಳಸಿಂಗನಿಗೆ ಬೈದು ಸಮಾಧಾನ ಮಾಡುತ್ತಿದ್ದರು!
ಪದೇ ಪದೇ ಬರೆದ ಪತ್ರಗಳಲ್ಲೂ ಅವರೆಂದಿಗೂ ನಿವೇದಿತಾಳನ್ನು ಭಾರತಕ್ಕೆ ಬರುವಂತೆ ಕರೆಯಲೇ ಇಲ್ಲ. ಒಮ್ಮೆಯಂತೂ ‘ನೀನು ಇಲ್ಲಿಗೆ ಬರುವುದಕ್ಕಿಂತ ಇಂಗ್ಲೆಂಡಿನಲ್ಲಿಯೇ ಇದ್ದು ನಮಗಾಗಿ ಹೆಚ್ಚು ಕೆಲಸಗಳನ್ನು ಮಾಡಬಹುದು. ಬಡ ಭಾರತೀಯರಿಗಾಗಿ ಮಹತ್ತರವಾದ ಸ್ವಾರ್ಥ ತ್ಯಾಗಕ್ಕಾಗಿ ದೇವರು ನಿನ್ನ ಆಶೀರ್ವದಿಸಲಿ’ ಎಂದಿದ್ದರು. ಅಷ್ಟೇ ಅಲ್ಲ ಮ್ಯಾಕ್ಲಿಯೊಡ್ಗೆ ಬರೆದ ಪತ್ರದಲ್ಲಿ ‘ನೀನು ಇಲ್ಲಿಗೆ ಖಂಡಿತ ಬರಬಹುದು. ಆದರೆ ನೀನು ಇದನ್ನು ಜ್ಞಾಪಕದಲ್ಲಿಡಬೇಕು; ಯೂರೋಪಿಯನ್ನರು ಮತ್ತು ಹಿಂದೂಗಳು ನೀರು ಮತ್ತು ಎಣ್ಣೆಯಂತೆ ಇರುವರು. ದೇಶೀಯರೊಂದಿಗೆ ಬೆರೆಯುವುದನ್ನು ಯೂರೋಪಿಯನ್ನರು ಬಹಳ ಅವಮಾನಕರ ಎಂದು ಭಾವಿಸುವರು. ರಾಜಧಾನಿಗಳಲ್ಲಿ ಕೂಡ ಚೆನ್ನಾದ ಹೋಟಲಿಲ್ಲ. ಮೊಣಕಾಲುದ್ದದ ಬಟ್ಟೆಯನ್ನುಟ್ಟವರನ್ನು ನೀನು ಸಹಿಸಬೇಕಾಗಿದೆ. ನಾನು ಕೂಡ ಒಂದು ಪಂಚೆಯನ್ನು ಮಾತ್ರ ಉಟ್ಟಿರುವುದನ್ನು ನೋಡುವೆ. ಎಲ್ಲಾ ಕಡೆಯೂ ಕೊಳೆ, ಕಸ, ಕಂದುಬಣ್ಣದ ಜನ; ಆದರೆ ನಿನ್ನೊಡನೆ ವೇದಾಂತವನ್ನು ಮಾತನಾಡುವವರು ಬೇಕಾದಷ್ಟು ಜನ ಸಿಕ್ಕುವರು. ಇಲ್ಲಿಯ ಇಂಗ್ಲಿಷಿನವರೊಂದಿಗೆ ನೀನು ಬೆರೆತರೆ ನಿನಗೆ ಬೇಕಾದಷ್ಟು ಸೌಕರ್ಯಗಳು ಸಿಕ್ಕುತ್ತವೆ. ಆದರೆ ಹಿಂದೂಗಳ ನೈಜಸ್ಥಿತಿಯನ್ನು ಅರಿಯಲಾರೆ’ ಎಂದು ಹೆದರಿಸಿಯೂ ಇದ್ದರು.

akka-7

ಭಾರತಕ್ಕಿಂತ ಇಂಗ್ಲೆಂಡೇ ನಿನಗೆ ಶ್ರೇಯಸ್ಕರವೆಂದು ಸ್ವಾಮೀಜಿ ಹೇಳಿದಾಗ ನಿವೇದಿತೆಯ ತುಮುಲ ಹೇಳತೀರದು. ಅವಳು ಅದಾಗಲೇ ಭಾರತಕ್ಕೆ ಧಾವಿಸಿ ಇಲ್ಲಿನ ಜನರ ಸೇವೆಯಲ್ಲಿ ತಾನು ಸವೆಯುವುದರ ಕನಸು ಕಾಣತೊಡಗಿದಳು. ಸ್ವಾಮೀಜಿಯ ಆಜ್ಞಾಪಾಲಕಿಯಾಗಿ ಅವರಿಂದಲೇ ವೇದಾಂತ ತತ್ತ್ವಗಳನ್ನು ಅರಿಯುವ ಅವಳ ಬಯಕೆ ಈಗ ತೀವ್ರಗೊಂಡಿತ್ತು. ಆಕೆ ಮಿತ್ರರೆಲ್ಲರ ಬಳಿ ತನ್ನ ದುಃಖ ತೋಡಿಕೊಂಡಳು. ಸ್ವಾಮೀಜಿಗೆ ಆಕೆಯ ನಿರ್ಣಯ ಕೇಳಿದಾಗ ಆದ ಆನಂದ ಅಷ್ಟಿಷ್ಟಲ್ಲ. ಈ ನಿರ್ಣಯದಲ್ಲಿ ತನ್ನ ಪಾತ್ರವದೇನೂ ಇಲ್ಲ; ಆಕೆಯದ್ದೇ ದೃಢನಿಶ್ಚಯವೆಂಬುದು ಅವರಿಗೆ ಮಾನಸಿಕ ನೆಮ್ಮದಿ ತಂದಿರಲು ಸಾಕು. ಹೀಗಾಗಿ ಸುದೀರ್ಘ ಪತ್ರವೊಂದನ್ನು ಬರೆದು, ‘ಈಗ ನಾನು ನಿನಗೆ ಮುಚ್ಚುಮರೆಯಿಲ್ಲದೆ ಹೇಳುತ್ತೇನೆ. ಭಾರತಖಂಡದ ಕೆಲಸದಲ್ಲಿ ನಿನಗೆ ಬಹಳ ದೊಡ್ಡ ಭವಿಷ್ಯವಿದೆ ಎಂಬುದು ನನಗೆ ಈಗ ನಿಧರ್ಾರವಾಯಿತು. ಭಾರತೀಯರಿಗೆ ಅದರಲ್ಲೂ ಭಾರತದ ಮಹಿಳೆಯರಿಗಾಗಿ ಕೆಲಸ ಮಾಡುವುದಕ್ಕೆ ಬೇಕಾಗಿರುವುದು ಪುರುಷನಲ್ಲ, ಸ್ತ್ರೀ, ನಿಜವಾದ ಸ್ತ್ರೀ, ನಿಜವಾದ ಸಿಂಹಿಣಿ. ಭರತಖಂಡ ಇನ್ನೂ ಮಹಾಮಹಿಳೆಯರನ್ನು ಹೆತ್ತಿಲ್ಲ. ಬೇರೆ ದೇಶಗಳಿಂದ ಅವರನ್ನು ಎರವಲಾಗಿ ತೆಗೆದುಕೊಳ್ಳಬೇಕಾಗಿದೆ. ನಿನ್ನ ವಿದ್ಯೆ, ನಿಷ್ಕಾಪಟ್ಯ, ಪಾವಿತ್ರ್ಯ, ಅನಂತಪ್ರೀತಿ, ಸ್ಥಿರಸಂಕಲ್ಪ, ಎಲ್ಲಕ್ಕಿಂತ ಹೆಚ್ಚಾಗಿ ನಿನ್ನ ನಾಡಿಯಲ್ಲಿ ಸಂಚರಿಸುವ ಕೆಲ್ಟ್ ಜನಾಂಗದ ರಕ್ತ- ಇವು ನಿನ್ನನ್ನು ನಮಗೆ ಬೇಕಾದ ಮಹಿಳೆಯನ್ನಾಗಿ ಮಾಡಿದೆ. ಆದರೂ ತೊಂದರೆಗಳು ಹಲವಿದೆ. ಇಲ್ಲಿರುವ ದುಃಖ, ಮೂಢನಂಬಿಕೆ, ಗುಲಾಮಗಿರಿ ಇವನ್ನು ನೀನು ಊಹಿಸಲಾರೆ. ವಿಚಿತ್ರ ಜಾತಿ ಮತ್ತು ಪ್ರತ್ಯೇಕತಾ ಭಾವನೆಗಳಿಂದ ಕೂಡಿದ ಅರೆಬೆತ್ತಲೆ ಇರುವ ಪುರುಷರು, ಸ್ತ್ರೀಯರ ಮಧ್ಯದಲ್ಲಿ ನೀನು ಇರಬೇಕಾಗುವುದು. ಅವರು ಅಂಜಿಕೆಯಿಂದ ಅಥವಾ ದ್ವೇಷದಿಂದ ಬಿಳಿ ಜನರಿಂದ ದೂರವಿರುವರು. ಇಲ್ಲಿನ ಜನರು ಬಿಳಿಯವರಿಂದ ವಿಪರೀತವಾದ ದ್ವೇಷಕ್ಕೆ ಗುರಿಯಾಗಿದ್ದಾರೆ. ಅದಲ್ಲದೆ ಬಿಳಿಯ ಜನರು ನೀನೊಬ್ಬಳೆ ಹುಚ್ಚಿಯೆಂದು ತಿಳಿದು ನಿನ್ನ ಪ್ರತಿಯೊಂದು ವ್ಯವಹಾರವನ್ನೂ ಅನುಮಾನದಿಂದ ನೋಡುವರು. ಇನ್ನು ಹವಾಗುಣವಾದರೋ ವಿಪರೀತ ಸೆಕೆ. ಅನೇಕ ಸ್ಥಳಗಳಲ್ಲಿ ನಮ್ಮ ಚಳಿಗಾಲ ನಿಮ್ಮ ಬೇಸಿಗೆ ಕಾಲದಂತೆ ಇರುವುದು. ದಕ್ಷಿಣದಲ್ಲಿಯಾದರೋ ಯಾವಾಗಲೂ ಬಿಸಿಲು ಉರಿಯುತ್ತಲೇ ಇರುವುದು. ಪಟ್ಟಣಗಳಿಂದ ಹೊರಗೆ ಇರುವ ಸ್ಥಳಗಳಲ್ಲಿ, ಐರೋಪ್ಯ ಜನರಿಗೆ ಅಗತ್ಯವಾದ ಸೌಕರ್ಯಗಳು ಒಂದೂ ದೊರಕುವುದಿಲ್ಲ. ಇಷ್ಟೊಂದು ಅನನುಕೂಲಗಳಿದ್ದರೂ ನೀನು ಕೆಲಸ ಮಾಡಲು ನಿಧರ್ಾರಮಾಡಿದ್ದರೆ ಬರಬಹುದು. ನಿನಗೆ ನೂರು ಸ್ವಾಗತಗಳು’ ಎಂದರು. ಇಷ್ಟೆಲ್ಲಾ ಗಂಭೀರ ವಿವರಣೆಯ ನಡುವೆಯೂ ಅವರಿಗೆ ಭಾರತದಲ್ಲಿ ಕೆಲಸ ಮಾಡಲು ನಿವೇದಿತಾ ಆಗಮಿಸಲೇಬೇಕೆಂಬುದು ಗೊತ್ತಿತ್ತು. ಹಾಗಾಗಿ ಅದೇ ಪತ್ರದಲ್ಲಿ ತಮ್ಮ ಧಾಟಿ ಬದಲಾಯಿಸಿ, ‘ಕೆಲಸಕ್ಕೆ ಕೈ ಹಾಕಿದ ಮೇಲೆ ನೀನು ಇದರಲ್ಲಿ ಸೋಲಬಹುದು ಅಥವಾ ಬೇಸರವಾಗಬಹುದು. ನೀನು ಭರತಖಂಡಕ್ಕೆ ಸಹಾಯ ಮಾಡಬಹುದು, ಬಿಡಬಹುದು; ವೇದಾಂತವನ್ನು ಸ್ವೀಕರಿಸಬಹುದು, ಬಿಡಬಹುದು ನಾನಂತೂ ಜೀವನವಿರುವವರೆಗೂ ನಿನ್ನೊಡನೆ ನಿಲ್ಲುವೆನೆಂಬ ಮಾತು ಕೊಡುತ್ತೇನೆ’ ಎಂದಿದ್ದರು. ಅಷ್ಟೇ ಅಲ್ಲದೆ ‘ಭರತಖಂಡದಲ್ಲಿ ನನಗೆ ಒಂದು ರೊಟ್ಟಿ ಸಿಗುವ ಹಾಗಿದ್ದರೂ ನೀನು ಅದನ್ನು ಸಂಪೂರ್ಣವಾಗಿ ಹೊಂದುವೆ’ ಎಂದು ಭರವಸೆ ಕೊಟ್ಟಿದ್ದರು. ಗುರುವಿನಿಂದ ಶಿಷ್ಯೆಗೆ ಬೇಕಾದ ಆಶ್ವಾಸನೆ ಇನ್ನೇನು ಹೇಳಿ. ಮಾರ್ಗರೇಟ್ ನೋಬಲ್ ಈಗ ತಡಮಾಡಲಿಲ್ಲ. ಭಾರತಕ್ಕೆ ಹೊರಟು ನಿಂತಳು. ಹಾಗಂತ ಅದು ಸುಲಭವಾಗಿರಲಿಲ್ಲ. ಮನೆ-ಮಠ, ಬಂಧು-ಮಿತ್ರರು, ಊರು-ದೇಶ, ವೇಷ-ಭಾಷೆ ಸಂಸ್ಕೃತಿಗಳನ್ನೆಲ್ಲ ಬಿಟ್ಟು ಹೊಸದೊಂದು ನಾಡಿಗೆ ಆಕೆ ಬರಬೇಕಿತ್ತು. ಅದೂ ಎಂತಹ ನಾಡು? ಏನೆಂದರೆ ಏನೂ ಗೊತ್ತಿರದ ಅನ್ಯರ ನಾಡು. ಇಡಿಯ ಭರತಖಂಡದಲ್ಲಿ ಅವಳಿಗೆ ಗೊತ್ತಿದ್ದುದು ಒಂದೇ. ಗುರುದೇವ, ವಿವೇಕಾನಂದರು ಮಾತ್ರ. ಅದೇ ಭರವಸೆಯೊಂದಿಗೆ ಮಾರ್ಗರೇಟ್ ನೋಬಲ್ ದೇಶಬಿಟ್ಟು ಹೊರಟಳು.
ಕೊಲ್ಕೊತ್ತಾಕ್ಕೆ ತಲುಪಿದ ಮಾರ್ಗರೇಟ್ ಸ್ವತಃ ಸ್ವಾಮೀಜಿ ಆಕೆಯ ಸ್ವಾಗತಕ್ಕೆಂದು ನಿಂತಿದ್ದುದು ಆಕೆಯ ಮನ ತಣಿಸಿತ್ತು. ಭಾರತೀಯರ ಅನಾಗರೀಕತೆಯ ಬಗ್ಗೆ ಯೂರೋಪಿನಲ್ಲಿ ಮನೆಗೊಂದು ಕಥೆ ಕೇಳಿದ್ದಳು ಆಕೆ. ಸಹಜವಾಗಿಯೇ ಹೆದರಿಕೆ ಇತ್ತು. ಬಿಳಿಯರನ್ನು ಕಂಡರೆ ಮುಗಿಬೀಳುವ ಕಾಡು ಜನಾಂಗದ ನಡುವೆ ಬಿಳಿಯರ ಸಂಪರ್ಕವೇ ಇರದಂತೆ ಬದುಕಬೇಕಿತ್ತು ಆಕೆ. ಇಷ್ಟರ ನಡುವೆಯೂ ಅಂದಿನ ರಾತ್ರಿ ತನ್ನ ಡೈರಿಯ ಪುಟದಲ್ಲಿ ’28 ಜನವರಿ 1898, ಜಯವಾಗಲಿ! ನಾನು ಭಾರತದಲ್ಲಿದ್ದೇನೆ’ ಎಂದು ಬರೆದುಕೊಂಡಳು.

sarada_devi_and_sister_nivedita
ಭಾರತ ಆಕೆಯನ್ನು ಸ್ವೀಕರಿಸುವುದು ಅಷ್ಟು ಸುಲಭವಾಗಿರಲಿಲ್ಲ. ಬಿಳಿಯರನ್ನು ದ್ವೇಷಿಸುತ್ತಿದ್ದ ಭಾರತೀಯರು. ಜಾತಿ-ವರ್ಗಗಳ ಸಂಘರ್ಷದ ತಾಕಲಾಟದಲ್ಲಿ ಅವರುಗಳಿಂದ ದೂರ ಓಡುತ್ತಿದ್ದ ಜನಾಂಗ. ಇವುಗಳ ನಡುವೆ ಪ್ರೀತಿಯಿಂದಷ್ಟೇ ಕೆಲಸ ಮಾಡಬೇಕಿತ್ತು. ಅದು ಮೊದಲು ಎತ್ತಲಿಂದ ಹರಿಯಬೇಕೆಂಬುದಷ್ಟೇ ಈಗ ಇದ್ದ ಪ್ರಶ್ನೆ. ಪ್ರೇಮ ಪ್ರವಾಹದ ವಿಚಾರ ಬಂದಾಗ ಕೃಷ್ಣನ ನೆಲ ಭಾರತಕ್ಕೇ ಮೊದಲ ಸ್ಥಾನ. ರಾಮಕೃಷ್ಣರ ಶಿಷ್ಯೆಯಾದ ಗೋಪಾಲನ ತಾಯಿಯೆಂಬ ವೃದ್ಧ ಮಹಿಳೆಯೊಬ್ಬಳು ನಿವೇದಿತಾ ಮತ್ತು ಆಕೆಯೊಂದಿಗಿದ್ದ ಇತರೆ ವಿದೇಶೀ ಮಹಿಳೆಯರ ಗಲ್ಲ ಸ್ಪಶರ್ಿಸಿ ಮುತ್ತಿಟ್ಟು ‘ನರೇಂದ್ರನ ವಿಲಾಯಿತಿ ಮಕ್ಕಳು’ ಎಂದು ಒಳಗಿದ್ದ ಬಂಗಾಳಿ ತಾಯಂದಿರಿಗೆಲ್ಲ ಪರಿಚಯ ಮಾಡಿಕೊಟ್ಟಳು. ಆ ಸ್ಪರ್ಶ ಹೇಗಿತ್ತೆಂದರೆ ಮುಂಜಾವಿನ ಮಂಜಿನಂಥದ್ದು ಎನ್ನುತ್ತಾಳೆ ನಿವೇದಿತಾ. ಇಲ್ಲಿನ ಜನರ ಈ ನಿಷ್ಲಲ್ಮಶ ಪ್ರೇಮ, ಔದಾರ್ಯವೇ ಮುಂದೆ ನಿವೇದಿತಾಳನ್ನು ಭಾರತಕ್ಕೆ ಹತ್ತಿರವಾಗಿಸಿದ್ದು. ಸ್ವಾಮೀಜಿಯ ದೇಹತ್ಯಾಗದ ನಂತರ ನಿವೇದಿತೆ ಬದುಕಿದ್ದು ಒಂದಷ್ಟು ತೀವ್ರತರವಾದ ಕೆಲಸಗಳನ್ನು ಮಾಡಿದಳೆಂದರೆ ಅದಕ್ಕೆ ಈ ಅಸ್ಖಲಿತವಾದ ಪ್ರೇಮವೇ ಕಾರಣವಾಗಿತ್ತು. ಹೀಗಾಗಿಯೇ ನಿವೇದಿತಾ ದೇಶದ ಕುರಿತಂತೆ ಮಾತನಾಡುವಾಗಲೆಲ್ಲ ‘ನನ್ನ ಭಾರತ’ ಎನ್ನುತ್ತಿದ್ದಳು; ಸ್ತ್ರೀಯರ ವಿಚಾರವಾಗಿ ಹೇಳುವಾಗಲೆಲ್ಲ ‘ನಾವು’ ಎಂದೇ ಬಳಸುತ್ತಿದ್ದಳು. ಅವಳು ಭಾರತದೊಂದಿಗೆ ಏಕರಸವಾಗಿಬಿಟ್ಟಿದ್ದಳು!
ಆಕೆಯ ನಿಜವಾದ ಗೆಲುವು ರಾಮಕೃಷ್ಣರ ಶ್ರೀಮತಿಯಾದ ಶಾರದಾದೇವಿಯವರು ಆಕೆಯನ್ನು ಸ್ವೀಕಾರ ಮಾಡಿದ್ದು. ಮಡಿವಂತ ಬಂಗಾಳಿ ಹೆಂಗಸಿನಂತೆ ಬದುಕುತ್ತಿದ್ದ ಶ್ರೀಮಾತೆಯವರು ಆಕೆಯನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಆಕೆಯ ಕೈಯ ಹಣ್ಣನ್ನು ಸ್ವೀಕರಿಸಿ ಮಹತ್ತರ ಸಂದೇಶವೊಂದನ್ನು ಎಲ್ಲರಿಗೂ ಕೊಟ್ಟರು. ನಿವೇದಿತೆಯಂತೂ ಸಮಯ ಸಿಕ್ಕಾಗಲೆಲ್ಲ ಅವರೊಡನೆ ಕಾಲ ಕಳೆಯುವುದನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ತಾಯಿಯೇ ಸ್ವೀಕರಿಸಿದ ಮೇಲೆ ಇನ್ನು ಯಾರು ಸ್ವೀಕರಿಸದಿದ್ದರೂ ತಲೆಕೆಡಿಸಿಕೊಳ್ಳಲಾರೆ ಎನ್ನುತ್ತಿದ್ದರು ಸ್ವಾಮೀಜಿ. ನಿವೇದಿತಾ ಪರೀಕ್ಷೆ ಪಾಸಾಗಿ ಮುಂದಿನ ಸಾಹಸಕ್ಕೆ ಅಣಿಯಾಗಿದ್ದಳು. ಅದಕ್ಕೆಂದೇ ಅವಳಿಗೆ ವಿವೇಕಾನಂದರು ಮಾಚರ್್ 25ರಂದು ಬ್ರಹ್ಮಚರ್ಯ ದೀಕ್ಷೆ ಕೊಟ್ಟು ನಿವೇದಿತಾ ಎಂಬ ನಾಮಕರಣ ಮಾಡಿದ್ದು. ಓದಿಗೆ ಅನುಕೂಲವಾಗಲೆಂದು ಎಲ್ಲೆಡೆ ನಿವೇದಿತಾ ಎಂಬ ಹೆಸರೇ ಬಳಕೆಯಾಗಿದ್ದರೂ ಮಾಚರ್್ 25ಕ್ಕೆ ಮುನ್ನ ಆಕೆ ಮಾರ್ಗರೇಟ್ ನೋಬಲ್ ಆಗಿದ್ದವಳು. ಆಕೆಯ ಬದುಕು ತಾಯಿ ಭಾರತಿಗೆ ಹೂವಾಗಿ ಸಮರ್ಪಣೆಯಾಗಲೆಂಬ ದೃಷ್ಟಿಯಿಂದಲೇ ಆಕೆಗೆ ‘ನಿವೇದಿತಾ’ ಎಂದು ನಾಮಕರಣ ಮಾಡಿದ್ದರು ಸ್ವಾಮೀಜಿ. ಶಿವನ ಪೂಜೆಯನ್ನು ಆಕೆಯ ಕೈಯಿಂದಲೇ ಮಾಡಿಸಿ, ಬುದ್ಧನಿಗೆ ಹೂಗಳನ್ನಪರ್ಿಸಲು ಹೇಳಿದ್ದರು. ಎರಡೂ ಸಂಕೇತವೇ. ನೋವು-ಅಪವಾದ-ಕಷ್ಟಗಳನ್ನೆಲ್ಲ ಶಿವನಂತೆ ನುಂಗಬೇಕು ಮತ್ತು ಬುದ್ಧನಂತೆ ತೊಂದರೆ ಕೊಟ್ಟವರಿಗೆ ಪ್ರೀತಿಯನ್ನು ಹರಿಸಬೇಕು! ನಿವೇದಿತಾ ಅಕ್ಷರಶಃ ಹಾಗೆಯೇ ಆಗಿಬಿಟ್ಟಳು. ಜೊತೆಗೆ ಭಾರತವನ್ನು ನುಂಗಲು ಬಂದವರಿಗೆ ಕಾಳಿ ರೂಪಿಣಿಯಾಗಿ ನಿಂತಳು ಕೂಡ.

ನರೇಂದ್ರ ಭಾರತಕ್ಕಿದೋ ಭದ್ರ ಹೆಜ್ಜೆ!

ನರೇಂದ್ರ ಭಾರತಕ್ಕಿದೋ ಭದ್ರ ಹೆಜ್ಜೆ!

20 ನೇ ಶತಮಾನದ ಆಲೋಚನೆಗಳ ಮೇಲೆ ಸ್ವಾಮೀಜಿಯವರ ಪ್ರಭಾವ ಅಗಾಧವಾದುದು. ಪಶ್ಚಿಮದ ಖ್ಯಾತ ವಿಜ್ಞಾನಿ ನಿಕೋಲಾ ಟೆಸ್ಲಾ ವಿದ್ಯುತ್ ವಿಜ್ಞಾನದಲ್ಲಿ ಮಹತ್ವದ ಸಂಶೋಧನೆಯ ಹುಚ್ಚು ಹತ್ತಿಸಿಕೊಂಡಿದ್ದನಲ್ಲ ಅವನಿಗೆ ಸಾಂಖ್ಯ ದರ್ಶನದ ಕಲ್ಪನೆ ಕೊಟ್ಟದ್ದೇ ಸ್ವಾಮಿ ವಿವೇಕಾನಂದರು. ಆನಂತರವೇ ಆತ ಬೇಕಾದ್ದೆಲ್ಲವೂ ಆಕಾಶದಲ್ಲಿದೆ ಎಂಬ ಚಿಂತನೆಯ ಜಾಡು ಹಿಡಿದು ಹೆಜ್ಜೆ ಹಾಕಿದ್ದು. ಸ್ವಾಮೀಜಿಯ ರಾಜಯೋಗದಲ್ಲಿ ಅಡಗಿದ್ದ ವಿಜ್ಞಾನದ ಅಧ್ಯಯನದಿಂದಲೇ ಪಶ್ಚಿಮದ ಚಿಂತಕರು ಹೊಸ ಲೋಕದೆಡೆಗೆ ಹೊರಳಿದ್ದು. ಹಾರ್ವಡರ್್ ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರಜ್ಞ ವಿಲಿಯಂ ಜೋನ್ಸ್ ತನ್ನ ಕೃತಿಗಳ ಹಿಂದಿನ ಸ್ಫೂತರ್ಿ ವಿವೇಕಾನಂದ ಎಂದೊಪ್ಪಿಕೊಳ್ಳಲು ಎಂದಿಗೂ ಹಿಂಜರಿಯಲಿಲ್ಲ. ಆನಂತರದ ದಿನಗಳಲ್ಲಿ ಆಲ್ಡಸ್ ಹಕ್ಸ್ಲಿ, ಕ್ರಿಸ್ಟೊಫರ್ ಐಷರ್ವುಡ್, ಗೆರಾಲ್ಡ್ ಹಡರ್್ರಂಥವರೂ ವಿವೇಕಾನಂದರ ಚಿಂತನೆಗಳಿಂದ ಬಹುವಾಗಿ ಪ್ರಭಾವಿತರಾದವರೇ. ಫ್ರೆಂಚ್ ಸಾಹಿತಿ ನೋಬೆಲ್ ಪ್ರಶಸ್ತಿ ವಿಜೇತ ರೋಮಾರೋಲಾಗಂತೂ ವಿವೇಕಾನಂದರ ಹುಚ್ಚೇ ಹಿಡಿದಿತ್ತು.

3

ಕಾಲದ ಗತಿ ಅನುಪಮ. ಭಾರತವನ್ನು-ಭಾರತೀಯರನ್ನು ಮೂದಲಿಸುತ್ತಿದ್ದ ಜಾಗತಿಕ ನಾಯಕರನ್ನು ಕಂಡು ನಾವೇ ಹೊಟ್ಟೆ ಉರಕೊಂಡದ್ದಿದೆ. 125 ಕೋಟಿ ಜನರ ಭಾರತವನ್ನು ಗಣನೆಗೇ ತೆಗೆದುಕೊಳ್ಳದೇ ಜಗತ್ತಿನ ಚಕ್ರ ಸುತ್ತುತ್ತಲೇ ಇತ್ತು. ಅಸಹಾಯಕರಾದ ನಾವುಗಳೂ ಪ್ರಾಚೀನ ಭಾರತದ ವೈಭವವನ್ನು ಕೊಂಡಾಡುತ್ತಾ ‘ಒಮ್ಮೆ ಹೀಗಾಗುತ್ತೇವೆ’ ಎಂದು ಹೆಮ್ಮೆಯಿಂದ ಹೇಳಿ ನಿಟ್ಟುಸಿರು ಬಿಟ್ಟುಬಿಡುತ್ತಿದ್ದೆವು. ನಮ್ಮೆಲ್ಲರ ಕಣ್ಣೆದುರಿಗೇ ಕಾಲಚಕ್ರ ಒಂದು ಸುತ್ತು ಬಂದಿದೆ. ಅಮೇರಿಕದ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ನಂತರ ಕೆನಡಾ, ಮೆಕ್ಸಿಕೊ, ಸಿರಿಯಾ, ಈಜಿಪ್ಟ್ನ ಮುಖ್ಯಸ್ಥರಿಗೆ ಕರೆ ಮಾಡಿ ಮಾತನಾಡಿದ ಅಧ್ಯಕ್ಷ ಟ್ರಂಪ್ರ ಐದನೇ ಅಧಿಕೃತ ಕರೆ ಮಾಡಿದ್ದು ಭಾರತಕ್ಕೇ! ಏಷ್ಯಾದ ರಕ್ಕಸ ರಾಷ್ಟ್ರ ಚೀನಾದ ಶೀಗೆ, ಜಪಾನಿನ ಶಿಂಜೋಗೆ, ರಷ್ಯಾದ ಪುತೀನ್ರಿಗೂ ದೊರೆಯದ ಗೌರವ ಭಾರತಕ್ಕೆ. ಅದೂ ಸರಿಯೇ. ಅಮೇರಿಕದ ಅಧ್ಯಕ್ಷರ ಕರೆಯನ್ನು ಇಷ್ಟು ಸಂಭ್ರಮಿಸುವ ಅಗತ್ಯ ಖಂಡಿತ ಇಲ್ಲ. ಆದರೆ ‘ಭಾರತ ಕಡೆಗಣಿಸಬಹುದಾದ ರಾಷ್ಟ್ರವಲ್ಲ’ ಎಂಬ ಸಂದೇಶ ಹೊರಟಿರುವುದೇ ಬಲು ವಿಶಿಷ್ಟವಾದುದು. .
ಹೀಗೊಂದು ವಾತಾವರಣವನ್ನು ಬಲು ಹಿಂದೆ ವಿವೇಕಾನಂದರು ಸೃಷ್ಟಿಸಿದ್ದರು. ಭಾರತವನ್ನು ಜಗತ್ತಿನ ಮುಂದೆ ಭಾರತೀಯರೇ ಕೆಟ್ಟದಾಗಿ ಚಿತ್ರಿಸಿದ್ದಾಗ ವಿವೇಕಾನಂದರು ಇಡಿಯ ಕ್ಯಾನ್ವಾಸಿಗೆ ಬಣ್ಣ ಬಳಿದು ಹೊಸ ಚಿತ್ರ ರಚಿಸಿದ್ದರು. ಹೌದು. ಪರಿಸ್ಥಿತಿ ಇಂದಿನಂತೆ ಇತ್ತು. ಹೇಗೆ ದೆಹಲಿಯಲ್ಲಿ ಕುಳಿತ ಭಾರತೀಯ ಮಾಧ್ಯಮದವರು ಭಾರತೀಯತೆಯನ್ನೇ ಹಳಿದು ಸಾಹಿತ್ಯ ರಚಿಸಿ, ಮಾಧ್ಯಮಗಳ ಮೂಲಕ ಭಾರತವನ್ನು ಕನಿಷ್ಠ ಮಟ್ಟದಲ್ಲಿ ಪ್ರತಿಬಿಂಬಿಸುವಂತೆ ಮಾಡುತ್ತಾರೋ, ಅವತ್ತೂ ಹಾಗೆಯೇ. ರಮಾಬಾಯಿ ಎಂಬ ಕ್ರೈಸ್ತ ಮತಕ್ಕೆ ಪರಿವರ್ತನೆಗೊಂಡ ಹೆಣ್ಣುಮಗಳು ತನ್ನದೊಂದು ಸಂಘ ಕಟ್ಟಿಕೊಂಡು ಭಾರತೀದಲ್ಲಿ ಬಾಲ ವಿಧವೆಯರು, ಪುರುಷರಿಂದ ಶೋಷಣೆಗೊಳಗಾಗುವ ಹೆಣ್ಣುಮಕ್ಕಳ ಪರಿಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ಹೃದಯವಿದ್ರಾವಕವಾಗಿ ಅಮೇರಿಕಾದಲ್ಲಿ ಬಣ್ಣಿಸುತ್ತಿದ್ದಳು. ತೀರಾ ಇತ್ತೀಚೆಗೆ ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿ ನಡುರಾತ್ರಿ ನಡೆದ ಘಟನೆಯನ್ನು ಮುಂದಿಟ್ಟುಕೊಂಡು ಇಡಿಯ ಬೆಂಗಳೂರಿಗರು ಸ್ತ್ರೀ ಶೋಷಕರೆಂಬಂತೆ ಬಿಂಬಿಸಿಬಿಟ್ಟವಲ್ಲ ಮಾಧ್ಯಮಗಳು! ಈ ಚಚರ್ೆ ಇಲ್ಲಿ ಮಾತ್ರ ನಡೆದದ್ದಲ್ಲ. ಜಾಗತಿಕ ಮಟ್ಟದಲ್ಲಿ ನಿರ್ಭಯಾ ಕೇಸಿನಂತೆ ಸುದ್ದಿ ಮಾಡ ಹೊರಟಿತ್ತು ಈ ಘಟನೆ. ಇಡಿಯ ಹಿಂದೂ ಸಮಾಜ ನಿರ್ಲಜ್ಜ, ಸ್ತ್ರೀ ಶೋಷಕ ಅಂತ ಸಾಬೀತು ಪಡಿಸಲು ಹೆಣಗಾಡಿದ್ದರು. ಜಾಗತಿಕ ಮಟ್ಟದ ಲೇಖಕರೇ ಅನೇಕರು ಕುಂಭಮೇಳದಲ್ಲಿ ಲಕ್ಷಾಂತರ ಹೆಣ್ಣುಮಕ್ಕಳು ಸ್ನಾನಕ್ಕಿಳಿದಾಗಲೇ ಕೆಡದ ಮನಸ್ಥಿತಿಯವನು ಹಿಂದೂ ಎಂದು ಹೇಳಿ ಬಾಯ್ಮುಚ್ಚಿಸಿದ್ದಕ್ಕೆ ಬಚಾವು. ಅಂದೂ ಹಾಗೆಯೇ ರಮಾಬಾಯಿಯಂಥವರನ್ನು ಮುಂದಿಟ್ಟುಕೊಂಡು ಕ್ರಿಶ್ಚಿಯನ್ ಮಿಶನರಿಗಳು ಭಾರತದ ಹೆಸರನ್ನು ಸಾಕಷ್ಟು ಹಾಳುಗೆಡವಿದ್ದರು. ನಮ್ಮನ್ನು ನಾಗರಿಕರನ್ನಾಗಿಸಲು ಅಲ್ಲಿ ನಿಧಿ ಸಂಗ್ರಹಿಸುತ್ತಿದ್ದರು. ಅಂತಹ ಹೊತ್ತಲ್ಲಿ ಅಮೇರಿಕಾಕ್ಕೆ ವಿವೇಕಾನಂದರ ಪದಾರ್ಪಣೆಯಾಗಿತ್ತು.

1

ಸರ್ವಧರ್ಮ ಸಮ್ಮೇಳನದಲ್ಲಿ ಅವರ ಭಾಗವಹಿಸುವಿಕೆ ಪೂರ್ವ ನಿಗದಿತವೇನೂ ಆಗಿರಲಿಲ್ಲ. ಇಷ್ಟಕ್ಕೂ ಸಮ್ಮೇಳನ ನಡೆದಿದ್ದು ಎಲ್ಲಾ ಮತ-ಪಂಥಗಳು ಸಮಾನವೆಂದು ಸಾರಲೇನೂ ಅಲ್ಲ. ಎಲ್ಲರನ್ನೂ ಒಟ್ಟಿಗೇ ಕೂರಿಸಿ ಇವರುಗಳ ನಡುವೆ ಕ್ರಿಶ್ಚಿಯನ್ ಪಂಥದ ಶ್ರೇಷ್ಠತೆಯನ್ನು ಸಾರುವ ತವಕ ಅವರಿಗಿದ್ದೇ ಇತ್ತು. ಕೆಲವು ಸಂಪ್ರದಾಯಬದ್ಧ ಚಚರ್ುಗಳ ಮುಖ್ಯಸ್ಥರಂತೂ ಕ್ರಿಶ್ಚಿಯನ್ ಮತವನ್ನು ಇತರರೊಂದಿಗೆ ಸಮಸಮಕ್ಕೆ ಕೂರಿಸುವುದನ್ನೇ ಕಟುವಾಗಿ ವಿರೋಧಿಸಿ ಸಮ್ಮೇಳನವನ್ನೇ ಧಿಕ್ಕರಿಸಿದ್ದರು. ಆದರೇನು? ಅಮೇರಿಕಾದ ಈ ಸಾಧನಾ ಜಾತ್ರೆಯಲ್ಲಿ ಶಿಕ್ಷಣ, ಕಲೆ, ವಿದ್ವತ್ತಿನ ಪ್ರದರ್ಶನಕ್ಕೆ ಕೊಟ್ಟಷ್ಟೇ ಮೌಲ್ಯವನ್ನು ಧರ್ಮಕ್ಕೂ ನೀಡಬೇಕೆಂದು ಪ್ರಮುಖ ಸಂಘಟಕರಾದ ಜಾನ್ ಹೆನ್ರಿ ಬರೋಸ್ ಆಗ್ರಹಿಸಿದ್ದರು. ಜಗತ್ತಿನ ಬೇರೆ ಬೇರೆ ಮತ ಪ್ರಮುಖರನ್ನು ಸಂಪಕರ್ಿಸಿ ಅವರನ್ನು ಆಹ್ವಾನಿಸಿದ್ದರು. ನೋಂದಣಿ ಅದಾಗಲೇ ಮುಗಿದು ಹೋಗಿತ್ತು. ಬರುವ ಗಣ್ಯರಿಗಾಗಿ ವ್ಯವಸ್ಥೆಯೂ ಆಗಿ ಹೋಗಿತ್ತು. ಹೊಸಬರನ್ನು ಈ ಪಟ್ಟಿಯ ನಡುವೆ ನುಗ್ಗಿಸುವ ಪ್ರಶ್ನೆಯೇ ಇರಲಿಲ್ಲ. ಇವ್ಯಾವುದರ ಅರಿವಿರದಿದ್ದ ಸ್ವಾಮಿ ವಿವೇಕಾನಂದರ ಅನುಯಾಯಿಗಳು ಗುರುಗಳ ಯೋಗ್ಯತೆಯನ್ನಷ್ಟೇ ಗುರುತಿಸಿ ನಿಧಿ ಸಂಗ್ರಹಿಸಿ ಕಳಿಸಿಬಿಟ್ಟಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕಾರನಾಗಿ ಭಾಗವಹಿಸುವ ಎಲ್ಲಾ ಅವಕಾಶಗಳನ್ನು ಕಳಕೊಂಡ ಸ್ವಾಮೀಜಿ ಕೇಳುಗನಾಗಿ ಕುಳಿತುಕೊಳ್ಳಲು ನಿಶ್ಚಯಿಸಿದ್ದರು. ಆದರೆ ಕ್ರಿಶ್ಚಿಯನ್ನರ ಹಣೆಬರಹ ಬೇರೆಯೇ ಇತ್ತು. ವೇದಿಕೆಯ ಮೇಲೆ 31ನೆಯವರಾಗಿ ಕುಳಿತ ಸ್ವಾಮೀಜಿ ಈಗ ಬೇಡವೆಂದು ದೂಡುತ್ತಲೇ ಅದೊಮ್ಮೆ ಮಾತು ಶುರು ಮಾಡಿದರು. ಮಾತು ಮುಗಿದದ್ದು ತಿಳಿಯಲೇ ಇಲ್ಲ. ಪಶ್ಚಿಮ ಹಿಂದೂ ಅಪ್ಪುಗೆಯಲ್ಲಿ ಮೈಮರೆತುಬಿಟ್ಟಿತ್ತು. ಅಮೇರಿಕಾದ ಲೇಖಕನೊಬ್ಬ ಬರೆದ ‘ಪೂರ್ವದ ಕುರಿತಂತೆ ಭಕ್ತಿ ಮೂಡುವಂತೆ ಮಾಡಿದರು ವಿವೇಕಾನಂದ’.
ಮೊದಲ ಭಾಷಣಕ್ಕೆ ಅನುಮತಿ ಸಿಗುವುದು ಅನುಮಾನವಿತ್ತು. ಈಗ ಆ ಭಾಷಣದ ನಂತರ ಎಲ್ಲಿ ಸಮ್ಮೇಳನ ನಡೆದರೂ ವಿವೇಕಾನಂದರೇ ಪ್ರಮುಖ ಆಕರ್ಷಣೆ. 1894 ರ ಏಪ್ರಿಲ್ 5 ರಂದು ಬೋಸ್ಟನ್ ಈವ್ನಿಂಗ್ ಟ್ರಾನ್ಸ್ಕ್ರಿಪ್ಟ್ ಪತ್ರಿಕೆ ‘ಭಾಷಣಕಾರರ ತಲೆ ಚಿಟ್ಟು ಹಿಡಿಸುವ ಉದ್ದುದ್ದ ಭಾಷಣಗಳನ್ನು ಕೇಳಿ ಜನ ದೊಡ್ಡ ಸಂಖ್ಯೆಯಲ್ಲಿ ಎದ್ದು ಹೋಗಲಾರಂಭಿಸಿದರೆ, ಅಧ್ಯಕ್ಷರು ಎದ್ದು ಸ್ವಾಮಿ ವಿವೇಕಾನಂದರು ಕಾರ್ಯಕ್ರಮ ಮುಗಿಯುವ ಮುನ್ನ ಸಣ್ಣದೊಂದು ಉಪನ್ಯಾಸ ಮಾಡಲಿದ್ದಾರೆ ಎಂದೊಡನೆ ಎದ್ದು ಹೋಗಬೇಕೆಂದಿದ್ದವರು ಶಾಂತ ಚಿತ್ತರಾಗಿ ಕುಳಿತುಬಿಡುತ್ತಿದ್ದರು. ಕೊಲಂಬಸ್ ಹಾಲ್ನಲ್ಲಿ ತುಂಬಿದ್ದ 4 ಸಾವಿರ ಜನರೂ ವಿವೇಕಾನಂದರ 15 ನಿಮಿಷ ಭಾಷಣಕ್ಕಾಗಿ ಬೇರೆಯವರ ಗಂಟೆಗಟ್ಟಲೆ ಕೊರೆತವನ್ನು ನಗುತ್ತಲೇ ಕೇಳುತ್ತಿದ್ದರು’ ಎಂದು ಬರೆದಿತ್ತು.
ಸ್ವಾಮಿ ವಿವೇಕಾನಂದರ ಶಕ್ತಿ ಇದ್ದುದು ಅವರ ವ್ಯಕ್ತಿತ್ವದಲ್ಲಿಯೇ. ಅವರೆಂದಿಗೂ ಅಮೇರಿಕಾದ ವೈಭವಕ್ಕೆ ಮಾರುಹೋಗಿ ತಮ್ಮತನವನ್ನು ಕಳಕೊಂಡವರಲ್ಲ. ಬುದ್ಧಿಜೀವಿಗಳ ಬರಡು ವಾದಕ್ಕೆ ಬೆರಗಾದವರಂತೂ ಅಲ್ಲವೇ ಅಲ್ಲ. ಒಮ್ಮೆಯಂತೂ ಸರ್ವಧರ್ಮ ಸಮ್ಮೇಳನದ್ದೇ ಕಾರ್ಯಕ್ರಮವೊಂದರಲ್ಲಿ ಪ್ರಭಾವೀ ಜನರ ದೊಡ್ಡದೊಂದು ಸಮೂಹದೆದುರು ನಿಂತು ಸ್ವಾಮೀಜಿ ‘ನಿಮ್ಮಲ್ಲೆಷ್ಟು ಜನ ಹಿಂದೂ ಶಾಸ್ತ್ರಗಳ ಅಧ್ಯಯನ ಮಾಡಿದ್ದೀರಿ?’ ಎಂದು ಪ್ರಶ್ನಿಸಿದರು. ಇಡಿಯ ಸಭೆಯಲ್ಲಿ ಮೂರ್ನಾಲ್ಕು ಜನ ಕೈ ಎತ್ತಿರಬಹುದಷ್ಟೇ. ಸ್ವಾಮೀಜಿ ದನಿ ಎತ್ತರಿಸಿದರು, ಎದೆ ಉಬ್ಬಿತು. ಬುದ್ಧಿವಂತರೆನಿಸಿಕೊಂಡಿದ್ದವರೆಲ್ಲರನ್ನು ಒಮ್ಮೆ ದಿಟ್ಟಿಸಿ ನೋಡಿ ಸರಳವಾದ ಪ್ರಶ್ನೆ ಕೇಳಿದರು ‘ಅಷ್ಟಾದರೂ ನಮ್ಮ ಕುರಿತಂತೆ ತೀಪರ್ು ಕೊಡುವ ಧಾಷ್ಟ್ರ್ಯ ತೋರುತ್ತೀರಿ’. ಸ್ವಾಮೀಜಿ ಅಕ್ಷರಶಃ ಇಲಿಯೊಂದಿಗೆ ಆಡುವ ಬೆಕ್ಕಿನಂತೆ ಆಟವಾಡಿದರು. ಹಿಂದೂ ಧರ್ಮವನ್ನು ಅವಹೇಳನ ಮಾಡುತ್ತಿದ್ದ ಕ್ರಿಶ್ಚಿಯನ್ನರನ್ನಂತೂ ಬಿಡಲಿಲ್ಲ; ಭಾರತವನ್ನು ಆಳುತ್ತಿದ್ದ ಬ್ರಿಟೀಷರನ್ನು ತರಾಟೆಗೆ ತೆಗೆದುಕೊಂಡರು. ‘ಕ್ರಿಶ್ಚಿಯನ್ ರಾಷ್ಟ್ರಗಳಲ್ಲಿ ಅತ್ಯಂತ ಸಂಪದ್ಭರಿತವಾದ ಇಂಗ್ಲೆಂಡು 25 ಕೋಟಿ ಏಷ್ಯನ್ನರ ಕುತ್ತಿಗೆಯ ಮೇಲೆ ಕುಂತಿದೆ’ ಎಂದರು. ‘ಯೂರೋಪಿನ ಸಿರಿವಂತಿಕೆಯ ಆರಂಭವಾದುದು ಸ್ಪೇನ್ ಮೆಕ್ಸಿಕೋದ ಮೇಲೆ ಆಕ್ರಮಣ ಮಾಡಿದ ನಂತರ. ಕ್ರಿಶ್ಚಿಯನ್ನರ ಸಂಪತ್ತು ಸಹಮಾನವರ ಕತ್ತು ಕಡಿಯುವುದರಿಂದ ಬಂದಿರುವಂಥದ್ದು. ಇಂತಹ ಬೆಲೆ ತೆತ್ತು ಬರುವ ಸಿರಿವಂತಿಕೆಯನ್ನು ಹಿಂದೂ ಕಡೆಗಣ್ಣಿಂದಲೂ ನೋಡಲಾರ’ ಎಂದು ತಮ್ಮ ಹಿರಿಮೆಯನ್ನು ಸಾರಿಕೊಂಡರು.

ಅಮೇರಿಕಾದ ಪ್ರಾಮಾಣಿಕ ವರ್ಗ ವಿವೇಕಾನಂದರ ಮಾತುಗಳಿಂದ ಧಿಗ್ಗನೆದ್ದು ಕುಳಿತಿತು. ನ್ಯೂಯಾಕರ್್ ಹೆರಾಲ್ಡ್ ಪತ್ರಿಕೆ ‘ಅವರನ್ನು ಕೇಳಿದ ನಂತರ ಇಂತಹ ಜ್ಞಾನಿಯ ನಾಡಿಗೆ ಮಿಶನರಿಗಳನ್ನು ಕಳಿಸುವ ನಾವೆಷ್ಟು ಮೂರ್ಖರು ಎನಿಸುತ್ತಿದೆ’ ಎಂದು ಬರೆಯಿತು. ಪರಿಣಾಮ ಏನಾಯಿತು ಗೊತ್ತೇ? ಪ್ರಚಂಡ ಎಂಜಿನಿಯರ್, ವಿಜ್ಞಾನಿ, ಹೀರಂ ಮ್ಯಾಕ್ಸಿಂ ಹೇಳುವಂತೆ ‘ಮಿಷನರಿಗಳ ಆದಾಯ ವರ್ಷಕ್ಕೆ ಹತ್ತು ಲಕ್ಷಕ್ಕೂ ಹೆಚ್ಚು ಡಾಲರ್ಗಳಷ್ಟು ಕಡಿಮೆಯಾಯ್ತು’. ಅಮೇರಿಕಾದ ಚಚರ್ುಗಳು ನಿಗಿ ನಿಗಿ ಕೆಂಡವಾದವು. ರಮಾದೇವಿಯನ್ನು ಬಳಸಿಕೊಂಡು ವಿವೇಕಾನಂದರ ವಿರುದ್ಧ ಬಗೆ ಬಗೆಯ ಆರೋಪಗಳನ್ನು ಮಾಡಿದವು. ಭಾರತದಲ್ಲಿ ಹೆಣ್ಣುಮಕ್ಕಳ ಸ್ಥಿತಿಗತಿಗಳ ಕುರಿತಂತೆ ತಾನು ಹೇಳಿದ್ದನ್ನು ಸಾಬೀತು ಪಡಿಸಲು ಆಕೆ ವಿವೇಕಾನಂದರ ಚಾರಿತ್ರ್ಯವನ್ನೇ ಪ್ರಶ್ನಿಸಿದಳು. ಸ್ವಾಮೀಜಿ ತಮ್ಮ ಪ್ರಿಯ ಶಿಷ್ಯೆ ಓಲೆ ಬುಲ್ಳಿಗೆ ಬರೆದ ಪತ್ರದಲ್ಲಿ ‘ಒಬ್ಬ ಮನುಷ್ಯ ಎಷ್ಟೇ ಸಭ್ಯಸ್ಥನಾಗಿದ್ದರೂ ಅವನ ಕುರಿತಂತೆ ಕರಾಳ ಸುಳ್ಳುಗಳನ್ನು ಹೆಣೆಯುವವರು ಇದ್ದೇ ಇರುತ್ತಾರೆ. ಚಿಕಾಗೋದಲ್ಲಿ ಪ್ರತಿ ದಿನ ನನ್ನ ವಿರುದ್ಧ ಇಂತಹ ಸುಳ್ಳುಗಳನ್ನು ಹಬ್ಬಿಸುವವರು ಬೇಕಾದಷ್ಟಿದ್ದರು. ಮತ್ತು ಈ ಮಹಿಳೆಯರೆಲ್ಲ ಕ್ರಿಶ್ಚಿಯನ್ನರಲ್ಲಿ ಕ್ರಿಶ್ಚಿಯನ್ನರಾಗಿದ್ದರು’ ಎಂದು ನೊಂದುಕೊಂಡಿದ್ದರು.

ಗೆಲುವನ್ನು ಸಹಿಸದಾದಾಗ ಸುಳ್ಳು ಆಪಾದನೆ ಮಾಡಿ ಸೋಲಿಸಲು ಪ್ರಯತ್ನ ಪಡುವಂಥವರು ಯಾವಾಗಲೂ ಇದ್ದೇ ಇರುತ್ತಾರೆ. ಹಿಂದೂ ಧರ್ಮಕ್ಕಾದದ್ದೂ ಇದೇ. ಭಾರತಕ್ಕಾದುದೂ ಇದೇ. ನೇರ ಮಾರ್ಗದಲ್ಲಿ ಹಿಂದೂವನ್ನು ಎದುರಿಸಲು ಸಾಧ್ಯವಾಗದಾದಾಗ ಸುಳ್ಳು ಸುದ್ದಿಯ ಮೂಲಕ ನಮ್ಮನ್ನು ಹೀಗಳೆಯಲಾಯ್ತು. ಶತಮಾನಗಳ ಕಾಲ ಅದನ್ನೇ ಕೇಳಿ ಹೊರಗಿನವರು ನಂಬುವುದು ಬಿಡಿ, ನಾವೂ ನಂಬಿ ಕುಳಿತುಬಿಟ್ಟೆವು. ಸ್ವಾಮಿ ವಿವೇಕಾನಂದರ ಆಗಮನ ಅಂತಹುದೇ ಕಾಲದಲ್ಲಿ ಆಗಿದ್ದು. ರಾಜೀವ್ ಮಲ್ಹೋತ್ರ ಸ್ವಾಮೀಜಿಯವರ ಸಾಧನೆಗಳನ್ನು ಸುಂದರವಾಗಿ ಹಿಡಿದಿಟ್ಟಿದ್ದಾರೆ. ಅವರ ಪ್ರಕಾರ ಸ್ವಾಮಿ ವಿವೇಕಾನಂದರ ಆಂದೋಲನ ಇಬ್ಬಗೆಯದು. ಮೊದಲನೆಯದು ಅವರು ಬದುಕಿದ್ದಾಗ ಆದ ನೇರ ಕ್ರಾಂತಿಕಾರಿ ಬದಲಾವಣೆಗಳದ್ದು. ಇದಕ್ಕೆ ಆಧಾರಭೂತವಾಗಿ ನಿಂತವರು ರಾಮಕೃಷ್ಣಾಶ್ರಮದ ಸಾಧುಗಳು, ಪಶ್ಚಿಮದ ವಿವೇಕಾನಂದರ ಭಕ್ತರು-ಮಿತ್ರರು ಮತ್ತು ಸ್ವಾಮೀಜಿಯ ಚಟುವಟಿಕೆಗಳ ಪರಿಧಿಯಿಂದ ಹೊರಗಿದ್ದೂ ಅವರ ಪ್ರಭಾವಕ್ಕೆ ಒಳಗಾದವರು. ಇನ್ನು ಎರಡನೆಯದು ಅವರು ತೀರಿಕೊಂಡ ನಂತರವೂ ಪೀಳಿಗೆಯಿಂದ ಪೀಳಿಗೆಗೆ ಹರಡುತ್ತಿರುವ ಅವರ ಚಿಂತನೆಗಳು ನಡೆಸುತ್ತಿರುವ ಆಂದೋಲನ. ಪ್ರತೀ ಹಂತದಲ್ಲೂ ಅವರ ಚಿಂತನೆಗಳು ಹೊಸ ರೂಪ ಹೊಂದಿ ಮತ್ತೆ ಜೀವ ಪಡೆದುಕೊಳ್ಳುತ್ತವೆ. ಕೆಲವೊಮ್ಮೆ ಹೊಸ ರೂಪ ಕೊಟ್ಟವರು ಇದನ್ನು ತಮ್ಮದೇ ವಿಚಾರಧಾರೆಯೆಂಬಂತೆ ಪ್ರತಿಪಾದಿಸಿಬಿಡುತ್ತಾರೆ. ಇನ್ನೂ ಕೆಲವರು ತಮ್ಮ ಆಲೋಚನೆಯ ಹಿಂದಿನ ಸೂತ್ರಧಾರನನ್ನು ಸ್ಮರಿಸಿಕೊಂಡು ಕೃತಜ್ಞತೆ ಸಮಪರ್ಿಸುತ್ತಾರೆ.

4
ಹಾಗೆ ನೋಡಿದರೆ 20 ನೇ ಶತಮಾನದ ಆಲೋಚನೆಗಳ ಮೇಲೆ ಸ್ವಾಮೀಜಿಯವರ ಪ್ರಭಾವ ಅಗಾಧವಾದುದು. ಪಶ್ಚಿಮದ ಖ್ಯಾತ ವಿಜ್ಞಾನಿ ನಿಕೋಲಾ ಟೆಸ್ಲಾ ವಿದ್ಯುತ್ ವಿಜ್ಞಾನದಲ್ಲಿ ಮಹತ್ವದ ಸಂಶೋಧನೆಯ ಹುಚ್ಚು ಹತ್ತಿಸಿಕೊಂಡಿದ್ದನಲ್ಲ ಅವನಿಗೆ ಸಾಂಖ್ಯ ದರ್ಶನದ ಕಲ್ಪನೆ ಕೊಟ್ಟದ್ದೇ ಸ್ವಾಮಿ ವಿವೇಕಾನಂದರು. ಆನಂತರವೇ ಆತ ಬೇಕಾದ್ದೆಲ್ಲವೂ ಆಕಾಶದಲ್ಲಿದೆ ಎಂಬ ಚಿಂತನೆಯ ಜಾಡು ಹಿಡಿದು ಹೆಜ್ಜೆ ಹಾಕಿದ್ದು. ಸ್ವಾಮೀಜಿಯ ರಾಜಯೋಗದಲ್ಲಿ ಅಡಗಿದ್ದ ವಿಜ್ಞಾನದ ಅಧ್ಯಯನದಿಂದಲೇ ಪಶ್ಚಿಮದ ಚಿಂತಕರು ಹೊಸ ಲೋಕದೆಡೆಗೆ ಹೊರಳಿದ್ದು. ಹಾರ್ವಡರ್್ ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರಜ್ಞ ವಿಲಿಯಂ ಜೋನ್ಸ್ ತನ್ನ ಕೃತಿಗಳ ಹಿಂದಿನ ಸ್ಫೂತರ್ಿ ವಿವೇಕಾನಂದ ಎಂದೊಪ್ಪಿಕೊಳ್ಳಲು ಎಂದಿಗೂ ಹಿಂಜರಿಯಲಿಲ್ಲ. ಆನಂತರದ ದಿನಗಳಲ್ಲಿ ಆಲ್ಡಸ್ ಹಕ್ಸ್ಲಿ, ಕ್ರಿಸ್ಟೊಫರ್ ಐಷರ್ವುಡ್, ಗೆರಾಲ್ಡ್ ಹಡರ್್ರಂಥವರೂ ವಿವೇಕಾನಂದರ ಚಿಂತನೆಗಳಿಂದ ಬಹುವಾಗಿ ಪ್ರಭಾವಿತರಾದವರೇ. ಫ್ರೆಂಚ್ ಸಾಹಿತಿ ನೋಬೆಲ್ ಪ್ರಶಸ್ತಿ ವಿಜೇತ ರೋಮಾರೋಲಾಗಂತೂ ವಿವೇಕಾನಂದರ ಹುಚ್ಚೇ ಹಿಡಿದಿತ್ತು. ಆತ ತನ್ನ ಜೀವಿತಾವಧಿಯ ಬಹುಪಾಲು ಸಮಯವನ್ನು ವಿವೇಕಾನಂದರ ಕುರಿತಂತಹ ಸಂಶೋಧನೆಗಳಲ್ಲಿಯೇ ಕಳೆದ. ಈ ಕಾರಣಕ್ಕಾಗಿಯೇ ಮತ್ತೊಬ್ಬ ನೋಬೆಲ್ ಪ್ರಶಸ್ತಿ ವಿಜೇತ ಹರ್ಮನ್ ಹೆಸ್ಸಿ ತನ್ನ ಸಿದ್ಧಾರ್ಥ ಎಂಬ ಕೃತಿಯನ್ನು ರೋಮಾ ರೋಲಾಗೇ ಅಪರ್ಿಸಿ ಧನ್ಯನಾದ.
ಇಷ್ಟೆಲ್ಲಾ ಇದ್ದರೂ ಪಶ್ಚಿಮ ಬೇಕಂತಲೇ ಸ್ವಾಮೀಜಿಯವರ ಅವಗಣನೆ ಮಾಡಿತು. ಅವರ ಪ್ರಭಾವದಿಂದ ಸಮಾಜದಲ್ಲಿ ಕೀತರ್ಿವಂತರಾದವರ ಕೃತಿಗಳನ್ನು ಹಾಡಿ ಹೊಗಳುವಾಗ ಬೇಕಂತಲೇ ಸ್ವಾಮಿ ವಿವೇಕಾನಂದರನ್ನು ಬಿಡಲಾಯ್ತು. ಅವರ ಚಿಂತನೆಗಳ ಓತಪ್ರೋತ ಪ್ರವಾಹವನ್ನು ಕಡೆಗಣಿಸುವ ಈ ಪ್ರಯತ್ನಕ್ಕೆ ಕೊನೆಯ ಪಕ್ಷ ಭಾರತ ಬೌದ್ಧಿಕ ಪ್ರತಿರೋಧವನ್ನಾದರೂ ಒಡ್ಡಬೇಕಿತ್ತು. ಅವರ 150ನೇ ಜಯಂತಿಯ ಅವಕಾಶವೂ ಒದಗಿತ್ತು. ನಾವು ಉಪಯೋಗಿಸಿಕೊಳ್ಳಲಿಲ್ಲ. ರಥಯಾತ್ರೆಗಳು, ಶಾಲಾ-ಕಾಲೇಜು ಕಾರ್ಯಕ್ರಮಗಳಾದವು ನಿಜ. ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅವರನ್ನು ಪುನಸ್ಥರ್ಾಪಿಸುವ ಕೆಲಸ ಆಗಲಿಲ್ಲ. ನಾವು ಸೋತೆವು. ಅಂದಹಾಗೆ ಈ ವರ್ಷ ನಿವೇದಿತೆಯ 150 ನೇ ಜಯಂತಿ. ಶಿಷ್ಯೆಯ ನೆನಪು ಮಾಡಿಕೊಳ್ಳುವ ನೆಪದಲ್ಲಿ ಮತ್ತೆ ಗುರುವಿನ ವೈಭವ ಸಾರೋಣ. ಹಾಗೆಂದೇ ಮಂಗಳೂರಿನಲ್ಲಿ ಫೆಬ್ರುವರಿ 11 ಮತ್ತು 12 ರಂದು ಇವರೀರ್ವರ ಸಾಹಿತ್ಯದ ಚಚರ್ಾ ಗೋಷ್ಠಿಗಳು ನಡೆಯುತ್ತಿರೋದು.
ಹ್ಞಾಂ! ಟ್ರಂಪ್ ಕರೆಯನ್ನು ನೆನಪಿಸಿಕೊಳ್ಳುತ್ತಾ ಎಲ್ಲಿಯವರೆಗೆ ಬಂದುಬಿಟ್ಟೆವು. ಭಾರತದ ಗೌರವ ಈಗ ಮತ್ತೆ ಘನೀಭವಿಸುತ್ತಿದೆ. ಮೊನ್ನೆ 26ಕ್ಕೆ ದುಬೈನ ಗಗನಚುಂಬಿ ಕಟ್ಟಡ ಬುಜರ್್ ಖಲೀಫಾವನ್ನೂ ಕೇಸರಿ-ಬಿಳಿ-ಹಸಿರು ಬಣ್ಣದ ದೀಪಗಳಿಂದ ಸಿಂಗರಿಸಿದ್ದನ್ನು ನೋಡುವಾಗ ಮೈಮೇಲೆ ಮುಳ್ಳುಗಳೆದ್ದಿದ್ದವು. ಭಾರತ ಮತ್ತೆ ಜಗತ್ತಿನ ಪ್ರೀತಿ ಪಾತ್ರ ರಾಷ್ಟ್ರವಾಗುತ್ತಿದೆ. ನಮ್ಮೊಳಗಿನ ಅಂತಃಶಕ್ತಿ ಅಖಂಡವಾಗಿ ಜಾಗೃತವಾಗಿ ನಿಂತಿದೆ. ನರೇಂದ್ರ ಭಾರತ ಮೈದಳೆಯುತ್ತಿದೆ