Category: ಜಾಗೋ ಭಾರತ್

ದೂರದ ಬಹರೈನಿನಲ್ಲಿ ಕನ್ನಡದ ಮನಸ್ಸುಗಳು!

ದೂರದ ಬಹರೈನಿನಲ್ಲಿ ಕನ್ನಡದ ಮನಸ್ಸುಗಳು!

ಭಾಷೆಯ-ಸಂಸ್ಕೃತಿಯ ಮೌಲ್ಯ ಅರಿವಾಗಬೇಕು ಎಂದರೆ ವಿದೇಶಕ್ಕೆ ಹೋಗಬೇಕು. ದೂರದ ದೇಶದಲ್ಲಿ ನಮ್ಮ ತಿಂಡಿ ಸಿಗುವಾಗ ಅಲ್ಲಿ ನಮ್ಮ ಭಾಷೆ ಕಿವಿಗೆ ಬೀಳುವಾಗ ಸ್ವರ್ಗವೇ ಕೈಗೆ ಸಿಕ್ಕಂತಹ ಅನುಭವವಾಗುತ್ತದೆ. ಕನರ್ಾಟಕದಲ್ಲಾದರೆ ದೇವಸ್ಥಾನಗಳಿಗೆ ಹೋಗದ ಕನ್ನಡದ ಕಾರ್ಯಕ್ರಮಗಳತ್ತ ತಲೆ ಹಾಕಿಯೂ ಮಲಗದ ತರುಣರು ವಿದೇಶಕ್ಕೆ ಹೋದೊಡನೆ ಇವೆಲ್ಲವುಗಳೊಂದಿಗೆ ಒಂದಾಗಿ ಬಿಡುತ್ತಾರೆ.

ಬಹರೈನ್ ಮಧ್ಯ ಪ್ರಾಚ್ಯದ ಪುಟ್ಟದಾದ ಸುಂದರವಾದ ದೇಶ. ಉದ್ದಕ್ಕೆ ಡ್ರೈವ್ ಮಾಡಿಕೊಂಡು ಹೋದರೆ ಹೆಚ್ಚೆಂದರೆ 60 ಕಿ.ಮೀ ಸಿಗಬಹುದೇನೋ. ಈ ದೇಶದ ಬಹುಪಾಲು ಭಾಗ ಸಮುದ್ರವನ್ನು ಆಕ್ರಮಿಸಿ ಪಡೆದುಕೊಂಡಿರುವಂಥದ್ದು. ಕಟ್ಟರ್ ಮುಸಲ್ಮಾನ ರಾಷ್ಟ್ರವಾದ ಸೌದಿ ಅರೇಬಿಯಾಕ್ಕೆ ಒಂದು ಸೇತುವೆಯ ಮೂಲಕ ಜೋಡಿಸಿಕೊಳ್ಳುವ ರಾಷ್ಟ್ರ ಇದು. ಹಾಗಂತ ನೀವೇನಾದರು ಇದೂ ಕೂಡ ಅತ್ಯಂತ ಕಡು ಕಠೋರ ಇಸ್ಲಾಮಿ ಪಂಥವನ್ನು ಪಾಲಿಸುವಂಥ ಭೂಮಿ ಎಂದುಕೊಂಡರೆ ನಿಮ್ಮ ಭಾವನೆ ಅಕ್ಷರಶಃ ತಪ್ಪು. ಇಲ್ಲಿ ಬುಖರ್ಾ ಕಡ್ಡಾಯವಲ್ಲ. ಹೆಣ್ಣುಮಕ್ಕಳು ಮನೆಯೊಳಗೆ ಕುಳಿತಿರಬೇಕೆಂಬ ನಿಯಮವಿಲ್ಲ. ಅವರು ಮುಕ್ತರು ಮತ್ತು ಇತರೆ ಪಂಥದವರು ತಮ್ಮ ಆಚರಣೆಯನ್ನು ಮಾಡಿಕೊಳ್ಳಲು ಮುಕ್ತವಾದ ಅವಕಾಶ ಉಳ್ಳವರು. ಒಮನ್ ಅನ್ನು ಬಿಟ್ಟರೆ ಬಹುಶಃ ಇಸ್ಲಾಮಿ ರಾಷ್ಟ್ರಗಳಲ್ಲಿ ಶಾಂತಯುತವಾದ ಮತ್ತು ಬಹು ಜನರ ಮನಸ್ಸನ್ನು ಸೆಳೆಯಬಹುದಾದ ರಾಷ್ಟ್ರ ಬಹರೈನ್.

ಭಾರತಕ್ಕೂ ಬಹರೈನ್ಗೂ ಬಲು ಹಿಂದಿನ ಸಂಬಂಧ. ಶಿಯಾಗಳೇ ಬಹುಪಾಲು ತುಂಬಿದ್ದು ಸುನ್ನಿಗಳಿಂದ ಆಳಲ್ಪಡುತ್ತಿರುವ ಈ ಬಹರೈನ್ ಭಾರತದೊಂದಿಗೆ ಸುಮಧುರ ಬಾಂಧವ್ಯ ಹೊಂದಿದೆ. ಇಬ್ರಾಹಿಂ ಅಲ್ ಅರಾಯೇದ್ ಎಂಬ ಬಹರೈನೀ ಕವಿ ಹುಟ್ಟಿದ್ದೇ ಮುಂಬೈಯಲ್ಲಿ. ಆತ ತನ್ನ 14 ನೇ ವಯಸ್ಸಿಗೆ ಬಹರೈನ್ಗೆ ಹೋಗಿ ಅಲ್ಲಿಯೇ ಅಧ್ಯಯನ ಮಾಡಿ ಮುಂದೆ ಅಕ್ಕ-ಪಕ್ಕದ ರಾಷ್ಟ್ರಗಳಲ್ಲೆಲ್ಲಾ ಖ್ಯಾತ ಕವಿಯಾಗಿ ಹೆಸರು ಗಳಿಸಿದನಷ್ಟೇ ಅಲ್ಲದೇ ಬಹರೈನಿನ ಸಂವಿಧಾನ ರಚನೆಯಲ್ಲೂ ಅವನ ಪಾತ್ರ ಬಲು ದೊಡ್ಡದ್ದಾಗಿತ್ತು. ಸಲಿ ಅಲ್ ಕರ್ಜಕಾನಿ 17 ನೇ ಶತಮಾನದ ವೇಳೆಗೆ ಭಾರತಕ್ಕೆ ಬಂದು ಗೋಲ್ಕೊಂಡಾದ ರಾಜರ ಆಶ್ರಯ ಪಡೆದು ಶಿಯಾ ಚಿಂತನೆಯನ್ನು ಹರಡಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸಿದ್ದ ಎಂದು ತಿಳಿದು ಬರುತ್ತದೆ. 70 ರ ದಶಕದವರೆಗೂ ಇಲ್ಲಿನ ಹಣಕಾಸು ವಹಿವಾಟು ರೂಪಾಯಿಗಳಲ್ಲೇ ನಡೆಯುತ್ತಿತ್ತು ಎಂಬುದು ಅವರ ಮೇಲಿದ್ದ ಭಾರತದ ಪ್ರಭಾವ ಎಂಥದ್ದೆಂಬುದನ್ನು ತೋರಿಸುತ್ತದೆ. ಕಾಲಕ್ರಮದಲ್ಲಿ ನಮ್ಮ ಸ್ಥಾನವನ್ನು ಅಮೇರಿಕಾ ತುಂಬುತ್ತಾ ಹೋದಂತೆ ಇವರೆಲ್ಲರೂ ಹಂತ-ಹಂತವಾಗಿ ಭಾರತದಿಂದ ದೂರಾಗುತ್ತಾ ಬಂದರು. ಅಷ್ಟಾಗಿಯೂ ಭಾರತದೊಂದಿಗಿನ ಅವರ ಬಾಂಧವ್ಯ ಕಡಿಮೆಯಾಗಲೇ ಇಲ್ಲ. ಅವರ ಒಟ್ಟಾರೆ 15 ಲಕ್ಷ ಜನಸಂಖ್ಯೆಯಲ್ಲಿ 5 ಲಕ್ಷಜನ ಭಾರತೀಯರೇ ಇರುವುದು ಇದರ ದ್ಯೋತಕವಾಗಿದೆ. 2007 ರಲ್ಲಿ ಭಾರತಕ್ಕೆ ಬಂದಿದ್ದ ಬಹರೈನಿನ ನಿಯೋಗವೊಂದು ಇಲ್ಲಿ ಪ್ರಮುಖ ನಾಯಕರೊಂದಿಗೆ ಮಾಧ್ಯಮಗಳೊಂದಿಗೆ ಸಂವಾದ ನಡೆಸಿ ತಾವು ಭಾರತಕ್ಕೆ ಹತ್ತಿರವಾಗಿದ್ದು ತಮಗೆ ಎಲ್ಲ ರೀತಿಯ ಶಿಕ್ಷಣವನ್ನೂ ಭಾರತವೇ ಕೊಡಬಲ್ಲುದು ಎಂದು ಹೇಳಿದ್ದು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಅದೇ ವರ್ಷ ಇಲ್ಲಿನ ಮನಾಮದಲ್ಲಿ ಭಾರತ ಮತ್ತು ಬಹರೈನ್ಗಳ ಸಂಬಂಧ ವೃದ್ಧಿಗಾಗಿ ಒಂದು ಸೊಸೈಟಿಯನ್ನೂ ತೆಗೆಯಲಾಗಿತ್ತು. 2014 ರಲ್ಲಿ ಬಹರೈನ್ ನ ರಾಜ ಶೇಕ್ ಹಮಾದ್ ಭಾರತಕ್ಕೆ ಭೇಟಿ ಕೊಟ್ಟು 450 ಮಿಲಿಯನ್ ಡಾಲರುಗಳಿಗಿಂತಲೂ ಅಧಿಕವಾದ ಒಪ್ಪಂದಗಳಿಗೆ ಸಹಿ ಹಾಕಿ ಎರಡೂ ರಾಷ್ಟ್ರಗಳ ಸಂಬಂಧವನ್ನು ಈ ಹೊತ್ತಲ್ಲಿ ವೃದ್ಧಿಸುವಂತಹ ಪ್ರಯತ್ನವನ್ನು ಮಾಡಿದ್ದರು.

4

ಇಷ್ಟನ್ನೂ ಈಗೇಕೆ ಹೇಳಬೇಕಾಯಿತೆಂದರೆ ಬಹರೈನ್ನಲ್ಲಿರುವ ಬಸವ ಸಮಿತಿಯ ಆಹ್ವಾನದ ಮೇರೆಗೆ ಬಸವ ಜಯಂತಿಯ ಆಚರಣೆಗೆ ಹೋಗುವ ಅವಕಾಶ ಸಿಕ್ಕಿತು. ಪಕ್ಕದ ಸೌದಿಯಲ್ಲಿ ಭಾರತದಿಂದ ದೇವರ ಚಿತ್ರ ಹೊಂದಿರುವ ನಿಯತ ಕಾಲಿಕೆಗಳು ಬಂದರೆ ಅದಕ್ಕೂ ಮಸಿ ಬಳಿದು ಕಳಿಸುವ ಸಂಪ್ರದಾಯವಿರುವಾಗ ಬಹರೈನಿನಲ್ಲಿ ಬಸವಣ್ಣನವರ ಚಿತ್ರವಿಟ್ಟು ಆರತಿಗೈಯ್ಯುವಷ್ಟು ಸ್ವಾತಂತ್ರ್ಯವಿದೆ. ಎಲ್ಲರೂ ಸೇರಿ ಭಜನೆಗೈಯ್ಯುವ ಸತ್ಸಂಗ ನಡೆಸುವ ಅವಕಾಶವೂ ಅಲ್ಲಿದೆ. ಬಸವ ಸಮಿತಿ ಅದೆಷ್ಟು ಸುಂದರವಾದ ವಾತಾವರಣವನ್ನು ನಿಮರ್ಿಸಿದೆ ಎಂದರೆ ವರ್ಷಕ್ಕೆ ನಾಲ್ಕಾರು ದೊಡ್ಡ ಕಾರ್ಯಕ್ರಮಗಳನ್ನು ಮಾಡುವುದಲ್ಲದೇ ಮಹಾಮನೆಯೆಂಬ ಕಾರ್ಯಕ್ರಮವನ್ನು ಸಾಧ್ಯವಾದಾಗಲೆಲ್ಲ ನಡೆಸಿಕೊಡುತ್ತದೆ. ಯಾರಾದರೊಬ್ಬರ ಮನೆಯಲ್ಲಿ ನೂರಾರು ಜನ ಸೇರಿ ಶರಣರ ಚಿಂತನೆಗಳನ್ನು ತತ್ತ್ವಗಳನ್ನು ಅರಿಯುವ ಪ್ರಯತ್ನ ಮಾಡುತ್ತಾರಲ್ಲದೇ ಮುಂದಿನ ಪೀಳಿಗೆಗೆ ವಚನಗಳನ್ನು ಉಳಿಸಿ ಹೋಗಲೆಂದೇ ಆ ಮಕ್ಕಳಿಗೆ ಅದನ್ನು ಕಲಿಸಿ ಕೊಡುತ್ತಾರೆ. ಕನರ್ಾಟಕದಲ್ಲಿರುವ ಅದೆಷ್ಟು ಮಕ್ಕಳಿಗೆ ಬಸವಣ್ಣನವರ ವಚನಗಳು ಬಾಯಿಗೆ ಬರುವುದೋ ಗೊತ್ತಿಲ್ಲ. ಆದರೆ ಬಹರೈನಿನಲ್ಲಿರುವ ಬಹುತೇಕ ಮಕ್ಕಳು ಲೀಲಾಜಾಲವಾಗಿ ವಚನಗಳನ್ನು ಹೇಳುತ್ತಾರೆ. ಧರ್ಮವನ್ನು ಉಳಿಸುವುದೆಂದರೆ ಅದನ್ನು ಒಡೆದು ಪ್ರತ್ಯೇಕ ಮಾಡುವುದಲ್ಲ ಬದಲಿಗೆ ಮೂಲ ತತ್ತ್ವ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ವಗರ್ಾಯಿಸುವುದು ಎಂಬುವುದನ್ನು ಇಲ್ಲಿನ ಜನ ಚೆನ್ನಾಗಿಯೇ ಅಥರ್ೈಸಿಕೊಂಡಿದ್ದಾರೆ. ಹೀಗಾಗಿಯೇ ಇಲ್ಲಿಗೆ ಬಂದಾಗ ನಿಮಗೆ ಹೊರದೇಶಕ್ಕೆ ಬಂದಿದ್ದೇನೆಂದು ಖಂಡಿತ ಅನಿಸುವುದಿಲ್ಲ. ಒಂದು ಪುಟ್ಟ ಕನರ್ಾಟಕದಲ್ಲೇ ಇರುವಂಥ ಭಾವನೆ ಖಂಡಿತ ಹೊಮ್ಮುತ್ತದೆ.

ಅದು ಸುಳ್ಳೇನೂ ಅಲ್ಲ. ಈ ಪುಟ್ಟ ಬಹರೈನಿನಲ್ಲಿ 20 ಸಾವಿರಕ್ಕೂ ಮಿಕ್ಕಿದ ಕನ್ನಡಿಗರಿದ್ದಾರೆ. ಇಷ್ಟೂ ಜನರನ್ನು ಒಂದು ಸೂತ್ರದಡಿ ಬಂಧಿಸುವ ಪ್ರಯತ್ನವನ್ನು ಕಳೆದ 40 ವರ್ಷಗಳಿಂದಲೂ ಇಲ್ಲಿನ ಕನ್ನಡ ಸಂಘ ಮಾಡುತ್ತಿದೆ. ಇಷ್ಟು ದೀರ್ಘಕಾಲ ಹೊರದೇಶವೊಂದರಲ್ಲಿ ಕನ್ನಡ ಸಂಘವನ್ನು ಕಟ್ಟಿ, ಬೆಳೆಸಿ ಅದನ್ನು ಆದರ್ಶವಾಗುವಂತೆ ಎಲ್ಲರ ಮುಂದೆ ಪ್ರಸ್ಥಾಪಿಸುವುದು ಸುಲಭದ ಮಾತಲ್ಲ. ಕನ್ನಡಿಗರ ಎಲ್ಲ ಸಣ್ಣ-ಪುಟ್ಟ ಸಂಘಟನೆಗಳನ್ನು ತನ್ನೊಡಲೊಳಗೆ ಇಟ್ಟುಕೊಂಡು ಕನ್ನಡ ಸಂಘ ಬೃಹದಾಕಾರವಾಗಿ ಬೆಳೆದಿದೆ. ಇದು ಬೇರೆ ದೇಶಗಳಲ್ಲಿರುವ ಕನ್ನಡಿಗರಿಗೆ ಮಾರ್ಗದರ್ಶನವಷ್ಟೇ ಅಲ್ಲ, ಸ್ವತಃ ಕನರ್ಾಟಕದ ಕನ್ನಡ ಸಂಘಗಳಿಗೂ ಆದರ್ಶವಾಗಿ ನಿಲ್ಲಬಲ್ಲುದು.

ಭಾಷೆಯ-ಸಂಸ್ಕೃತಿಯ ಮೌಲ್ಯ ಅರಿವಾಗಬೇಕು ಎಂದರೆ ವಿದೇಶಕ್ಕೆ ಹೋಗಬೇಕು. ದೂರದ ದೇಶದಲ್ಲಿ ನಮ್ಮ ತಿಂಡಿ ಸಿಗುವಾಗ ಅಲ್ಲಿ ನಮ್ಮ ಭಾಷೆ ಕಿವಿಗೆ ಬೀಳುವಾಗ ಸ್ವರ್ಗವೇ ಕೈಗೆ ಸಿಕ್ಕಂತಹ ಅನುಭವವಾಗುತ್ತದೆ. ಕನರ್ಾಟಕದಲ್ಲಾದರೆ ದೇವಸ್ಥಾನಗಳಿಗೆ ಹೋಗದ ಕನ್ನಡದ ಕಾರ್ಯಕ್ರಮಗಳತ್ತ ತಲೆ ಹಾಕಿಯೂ ಮಲಗದ ತರುಣರು ವಿದೇಶಕ್ಕೆ ಹೋದೊಡನೆ ಇವೆಲ್ಲವುಗಳೊಂದಿಗೆ ಒಂದಾಗಿ ಬಿಡುತ್ತಾರೆ. ಅಲ್ಲಿಯವರಿಗೆ ತಮ್ಮ ಮುಂದಿನ ಪೀಳಿಗೆಯ ಕುರಿತು ಭಾರತೀಯ ಸಂಸ್ಕೃತಿಯಿಂದ ದೂರವಾಗುವ ಹೆದರಿಕೆ ಕಾಡಲಾರಂಭಿಸುತ್ತದೆ. ಆಗಲೇ ಅದನ್ನು ಉಳಿಸಿಕೊಳ್ಳುವ ತೀವ್ರತರ ಪ್ರಯತ್ನ ಶುರುವಾಗೋದು. ಅದರಲ್ಲೂ ಕಠೋರ ಧಾಮರ್ಿಕ ಆಚರಣೆಗಳುಳ್ಳ ಮುಸಲ್ಮಾನ ರಾಷ್ಟ್ರಗಳಲ್ಲಿ ನೆಲೆ ನಿಂತರಂತೂ ಶತಾಯ-ಗತಾಯ ಭಾರತೀಯ ಸಂಸ್ಕೃತಿ ಸಭ್ಯತೆಗಳನ್ನು ಅಪ್ಪಿಕೊಂಡು ಬದುಕಿ ಬಿಡುತ್ತಾರೆ. ಅನೇಕರಂತೂ ತಾವಿರುವ ದೇಶದ ಯಾವ ಮೂಲಭೂತ ಸೌಕರ್ಯಗಳಿಗೂ ಭಾರತ ಸರಿಸಾಟಿಯಾಗಿರದಿರುವಾಗಲೂ ತಮ್ಮ ಮಕ್ಕಳನ್ನು ಅಧ್ಯಯನಕ್ಕೆಂದು ಭಾರತಕ್ಕೆ ಕಳುಹಿಸುತ್ತಾರೆ. ಈ ತೀವ್ರತೆ ಬೇರೆಲ್ಲೆಡೆಗಳಿಗಿಂತಲೂ ಹೆಚ್ಚಾಗಿ ಬಹರೈನಿನಲ್ಲಿ ಕಂಡು ಬಂತು. ಒಮನ್ನಲ್ಲಿರುವ ಕನ್ನಡಿಗರು ಬಹು ಮಟ್ಟಿಗೆ ಇದೇ ಭಾವನೆಯಲ್ಲಿರುವವರು. ಹಾಗಂತ ಆಸ್ಟ್ರೇಲಿಯಾದ ಸೌತ್ ಆಫ್ರಿಕಾದ ಕನ್ನಡಿಗರು ಈ ರೀತಿಯಲ್ಲಿ ಆಲೋಚಿಸುವುದನ್ನು ಕಂಡಿಲ್ಲ. ತಮ್ಮ ಸಾಂಸ್ಕೃತಿಗೆ ಆಚರಣೆಗಳಿಗೆ ಸಿಗುವ ಸ್ವಾತಂತ್ರ್ಯದ ಆಧಾರದ ಮೇಲೆ ಈ ಭಾವನೆಗಳು ರೂಪುಗೊಳ್ಳುತ್ತದೆ ಎಂದೆನಿಸುತ್ತದೆ. ಈ ಕುರಿತಂತೆ ವಿಶೇಷವಾದ ಅಧ್ಯಯನ ಆಗಬೇಕಿದೆ.

1

ಹಾಗೆ ನೋಡಿದರೆ ಬಹರೈನ್ ನಿಮರ್ಾಣಗೊಂಡಿರುವುದೇ ಸೌದಿ ಅರೆಬಿಯಾದ ಕಟ್ಟರತೆಯಿಂದ ಭೋಗದ ಸ್ವಾತಂತ್ರ್ಯದೆಡೆಗೆ ಧಾವಿಸ ಬಯಸುವ ಜನರಿಗಾಗಿ. ಶುಕ್ರವಾರ ಸಂಜೆಯಾದರೆ ಸೌದಿಯಿಂದ ಬಹರೈನನ್ನು ಸಂಪಕರ್ಿಸುವ ಸೇತುವೆಯ ಮೇಲೆ ಸಾವಿರಾರು ಗಾಡಿಗಳು ಹರಿದಾಡಿಬಿಡುತ್ತವೆ. ಪ್ರತಿ ವಾರ 30 ಸಾವಿರಕ್ಕೂ ಹೆಚ್ಚು ಕಾರುಗಳು ಅತ್ತಲಿಂದ ಇಲ್ಲಿಗೆ ಬರುತ್ತವೆ. ವಿಶೇಷ ದಿನಗಳಲ್ಲಿ 90 ಸಾವಿರಕ್ಕೂ ಮಿಕ್ಕಿ ಗಾಡಿಗಳು ಈ ದಿಕ್ಕಿಗೆ ಧಾವಿಸುತ್ತದೆ. ವಾರಾಂತ್ಯವೆಂದರೆ ಸೌದಿಯಲ್ಲಿ ಕಠೋರ ನಿಯಮಗಳನ್ನು ಹೇರುವ ಮುಸಲ್ಮಾನರಿಗೆ ಬಹರೈನಿನಲ್ಲಿ ಭೋಗದ ಬದುಕು. ಬದುಕೇ ಹಾಗಲ್ಲವೇ. ತನ್ನನ್ನು ದೊರೆಯಾಗಿಸಬಲ್ಲ ಎಲ್ಲ ನಿಯಮಗಳನ್ನು ಇತರರು ಪಾಲಿಸಬೇಕು. ಆದರೆ ತಾನು ಮಾತ್ರ ಅವೆಲ್ಲವನ್ನೂ ಮೀರಿದ ಪ್ರಾಪಂಚಿಕ ವಾಸನೆಯಲ್ಲಿ ಮೀಯಬೇಕು. ಬಹರೈನ್ ಈ ಪಾಠವನ್ನು ಬಲು ಸುಂದರವಾಗಿ ಕಲಿಸುತ್ತದೆ.

ಹೃದಯದಲ್ಲಿ ಎಲ್ಲಕ್ಕೂ ಸ್ಥಾನವಿರಬೇಕು. ಎಲ್ಲದರಿಂದಲೂ ಹೊರಗಿದ್ದು ಎಲ್ಲವನ್ನೂ ಅನುಭವಿಸಬಲ್ಲ ಸಾಮಥ್ರ್ಯವಿರಬೇಕು. ಕೆಸರಿನಲ್ಲೇ ಇದ್ದು ಕಮಲವಾಗಿ ಅರುಳುವುದನ್ನೂ ಕಲಿಯಬೇಕು. ಬಹರೈನ್ ಇವೆಲ್ಲವನ್ನೂ ಕಲಿಸುತ್ತದೆ. ಕಲಿಯುವ ಮನಸ್ಸು ಗಮನಿಸುವ ದೃಷ್ಟಿ ಎರಡಿದ್ದರೆ ಸಾಕು ಅಷ್ಟೇ. ಎರಡು ದಿನಗಳಲ್ಲಿ ದೇಶವಾಗಿ ಬಹರೈನು, ನಮ್ಮವರಾಗಿ ಅಲ್ಲಿನ ಕನ್ನಡಿಗರು ಸಾಕಷ್ಟು ಪಾಠ ಕಲಿಸಿದರು.

ರಾಜಿ ನೋಡುತ್ತಾ ನೆನಪಾದ ಗೂಢಚಾರರು!

ರಾಜಿ ನೋಡುತ್ತಾ ನೆನಪಾದ ಗೂಢಚಾರರು!

ಗೂಢಚಾರನೊಬ್ಬ ಸಿಕ್ಕಿಬಿದ್ದರೆ ತನಗೂ ಅವನಿಗೂ ಸಂಬಂಧವೇ ಇಲ್ಲವೆಂದುಬಿಡುತ್ತದೆ. ಆತ ಅನಾಮಧೇಯನಾಗಿಯೇ ಉಳಿದುಬಿಡುತ್ತಾನೆ. ರಾಷ್ಟ್ರಕ್ಕಾಗಿ ಗಡಿಯಲ್ಲಿ ನಿಂತು ಕಾದಾಡುವ ಸೈನಿಕನಾದರೂ ತೀರಿಕೊಂಡ ನಂತರ ಎಲ್ಲ ಗೌರವಗಳ ಜೊತೆಗೆ ಕೈತುಂಬ ಹಣ ಪಡೆಯುತ್ತಾನೆ. ಆದರೆ ಈ ಬಗೆಯ ಗೂಢಚಾರರು ಮಾತ್ರ ಯಾವುದೂ ಇಲ್ಲದೇ ಸಾಮಾನ್ಯವಾಗಿಯೇ ಉಳಿದುಬಿಡುತ್ತಾರೆ.

ಕಳೆದ ವಾರ ಹೊಸ ಚಲನಚಿತ್ರವೊಂದು ಬಿಡುಗಡೆಯಾಯ್ತು. ರಾಜಿ ಅಂತ ಅದರ ಹೆಸರು. ಚಿತ್ರದ ಕುರಿತಂತ ಅನಿಸಿಕೆಗಳನ್ನು ನೋಡಿದಾಕ್ಷಣ ಚಿತ್ರ ನೋಡಲೇಬೇಕೆನಿಸಿಬಿಟ್ಟಿತು. ಆಲಿಯಾ ಭಟ್ ನಟಿಸಿದ ಮೊದಲ ಚಿತ್ರ ನಾನು ನೋಡುತ್ತಿರುವುದು. ರಾಷ್ಟ್ರೀಯತೆಯ ಭಾವವುಳ್ಳಂಥ ಎಂಥವರೂ ಬೆರಗಾಗಬಲ್ಲಂಥ ನಟನೆ ಮತ್ತು ಕಥಾ ವಸ್ತು ರಾಜéಿಯದ್ದು. ಪಾಕಿಸ್ತಾನದ ಪರವಾಗಿ ಗೂಢಚಯರ್ೆ ನಡೆಸುವಂತ ಕಶ್ಮೀರದ ವ್ಯಕ್ತಿಯಿಂದ ಚಿತ್ರ ಆರಂಭಗೊಳ್ಳುತ್ತದೆ. 1971 ರ ಪಾಕಿಸ್ತಾನ-ಭಾರತ ಯುದ್ಧದ ವೇಳೆ ಪಾಕಿಸ್ತಾನ ಭಾರತವನ್ನು ಮಣಿಸಲು ಭಯಾನಕವಾದ ತಂತ್ರವೊಂದನ್ನು ಹೆಣೆಯುತ್ತಿದೆ ಎಂದು ಅರಿತ ಆತ ಅಲ್ಲಿನ ಸೈನ್ಯದ ಮುಖ್ಯಾಧಿಕಾರಿಯ ಮಗನೊಂದಿಗೆ ತನ್ನ ಮಗಳನ್ನೇ ಮದುವೆ ಮಾಡಿ ಕೊಡುವ ಮಾತುಕತೆಯಾಡಿ ಬಂದುಬಿಡುತ್ತಾನೆ. ಇನ್ನೂ ಕಾಲೇಜು ಓದುತ್ತಿದ್ದ 20 ರ ತರುಣಿ ಸೆಹಮತ್ ತನ್ನ ತಂದೆಯ ಪರಿಸ್ಥಿತಿಯನ್ನು ಅರಿತು ಈ ಮದುವೆಗೆ ಒಪ್ಪಿಕೊಳ್ಳುತ್ತಾಳೆ. ವಾಸ್ತವವಾಗಿ ಅವಳೆದುರಿಗಿದ್ದ ಸವಾಲು ಮದುವೆಯಾಗಿ ಮಕ್ಕಳನ್ನು ಹೆರುವುದಲ್ಲ ಬದಲಿಗೆ ಭಾರತದ ಪರವಾಗಿ ಅಲ್ಲಿ ಗೂಢಚಯರ್ೆ ನಡೆಸುತ್ತಾ ಪಾಕಿಸ್ತಾನ ರೂಪಿಸುತ್ತಿರುವ ಯೋಜನೆಗಳ ಕುರಿತಂತೆ ಮಾಹಿತಿ ಕಲೆ ಹಾಕುವುದು. ತುತರ್ು ತರಬೇತಿ ಪಡೆದ ಸೆಹಮತ್ ಮದುವೆಯಾಗಿ ಪಾಕಿಸ್ತಾನ ಸೇರಿಕೊಂಡು ಸೈನಿಕ ಮುಖ್ಯಾಧಿಕಾರಿಯ ಮನೆಯಲ್ಲೇ ಇದ್ದುಕೊಂಡು ಗೂಢಚಯರ್ೆ ನಡೆಸುವುದು ಚಿತ್ರದ ಕಥಾವಸ್ತು. ಆಲಿಯಾ ಭಟ್ ತನ್ನ ಬಾಲಿಶವಾದ ನಟನೆಯಿಂದ ಅದು ಯಾವಾಗ ಪ್ರೌಢ ಸೆಹಮತ್ ಆಗಿ ಬದಲಾಗುತ್ತಾಳೋ ಅರಿವೇ ಆಗುವುದಿಲ್ಲ. ತಾನು ಸೇರಿಕೊಂಡ ಮನೆಯವರೆಲ್ಲರನ್ನೂ ತನ್ನ ಬುಟ್ಟಿಗೆ ಹಾಕಿಕೊಂಡ ಸೆಹಮತ್ ನಿಧಾನವಾಗಿ ಅತ್ಯಂತ ಪ್ರಮುಖವಾದ ಮಾಹಿತಿಗಳನ್ನು ಭಾರತದ ಸೈನ್ಯಕ್ಕೆ ಕಳುಹಿಸಲಾರಂಭಿಸುತ್ತಾಳೆ. ಭಾರತೀಯ ಸೇನೆ ಪಾಕಿಸ್ತಾನ ಆಕಾಶ ಮಾರ್ಗದಿಂದ ದಾಳಿ ಮಾಡಬಹುದೆಂದು ಕಾಯುತ್ತ ಕುಳಿತಾಗಿ ಜಲಾಂತಗರ್ಾಮಿ ನೌಕೆಯ ಮೂಲಕ ವಿಶಾಖಪಟ್ಟಣದಲ್ಲಿ ಐಎನ್ಎಸ್ ವಿಕ್ರಾಂತನ್ನೇ ಉಡಾಯಿಸುವ ಅವರ ಪ್ರಯತ್ನದ ಕುರಿತಂತೆ ಮಾಹಿತಿ ಕೊಡುವುದೇ ಸೆಹಮತ್. ಈ ಹಂತದಲ್ಲಿ ಆಕೆ ಎದುರಿಸುವ ಸವಾಲುಗಳು, ತನ್ನ ಗಂಡನೊಂದಿಗೆ ಬೆಳೆಯುವ ಆಕೆಯ ಪ್ರೀತಿ, ಜೊತೆಗಿದ್ದವರನ್ನು ಕೊಲ್ಲಬೇಕಾಗಿ ಬರುವ ಅವಳ ಪರಿಸ್ಥಿತಿ ಇವೆಲ್ಲವೂ ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತದೆ. ಒಬ್ಬ ಗೂಢಚಾರಿಯ ಬದುಕಿನ ಸವಾಲುಗಳು, ಆತನಿಗಿರಬೇಕಾದ ನಿಭರ್ಾವುಕತೆ, ಕೊನೆಗೆ ಪರಿಸ್ಥಿತಿ ವಿಕೋಪಕ್ಕೆ ಹೋದಾಗ ತಾನೇ ಸಾಯುವ ಸ್ಥಿತಿ ಬಂದಾಗಲೂ ಅದನ್ನು ಸ್ವೀಕಾರ ಮಾಡಬೇಕಾದ ಮನೋಭಾವ ಇವೆಲ್ಲವೂ ಮನೋಜ್ಞವಾಗಿ ಚಿತ್ರಿತಗೊಂಡಿದೆ. ಈ ಚಿತ್ರ ನೈಜ ಘಟನೆಯನ್ನು ಆಧರಿಸಿದ್ದೆಂದು ಉಲ್ಲೇಖಗೊಂಡಿದೆ. ಈ ಕುರಿತಂತೆ ಇಂಗ್ಲೀಷಿನಲ್ಲಿ ವಿಸ್ತಾರವಾದ ಕಾದಂಬರಿಯೂ ಹೊರಬಂದಿದೆ. ಅಕಸ್ಮಾತ್ ಇಂತಹದ್ದೊಂದು ಘಟನೆ ನಡೆದಿದ್ದು ನಿಜವೇ ಆಗಿದ್ದರೆ ಈ ದೇಶವನ್ನು ಇಂದಿನ ಸ್ಥಿತಿ-ಗತಿಯಲ್ಲಿ ಉಳಿಸಲಿಕ್ಕೆಂದು ಎಷ್ಟೊಂದು ಜನ ಬಲಿದಾನವಾಗಿದ್ದಾರಲ್ಲಾ ಎಂಬುದೇ ತಳಮಳ ಹುಟ್ಟಿಸಿಬಿಡುತ್ತದೆ. ನಾವಿನ್ನೂ ರೆಸಾಟರ್್ಗಳಲ್ಲಿ ಶಾಸಕರನ್ನು ಕೂಡಿ ಹಾಕಿಕೊಂಡು ಕುಚರ್ಿ ಏರುವುದಕ್ಕಾಗಿ ಏನನ್ನು ಬೇಕಾದರೂ ಬಲಿ ಕೊಡಲು ಸಿದ್ಧರಾಗುತ್ತಿದ್ದೇವೆ. ದೇಶ-ಧರ್ಮಗಳ ಕಾಳಜಿಯಿಲ್ಲದ ಇಂತಹ ಜನರಿಂದಲೇ ಈ ಸ್ಥಿತಿಗೆ ತಲುಪಿರೋದು ನಾವು.

1

ಸೆಹಮತ್ಳ ಗುಂಗಿನಲ್ಲಿರುವಾಗಲೇ ನಾನು ಭಾರತದ ಮತ್ತೊಬ್ಬ ಗೂಢಚಾರ ರವೀಂದ್ರ ಕೌಶಿಕ್ರ ಕುರಿತಂತೆ ಓದುತ್ತಿದ್ದೆ. ರಾಜಸ್ಥಾನದ ಪಂಜಾಬಿ ಕುಟುಂಬದಲ್ಲಿ ಹುಟ್ಟಿದ ರವೀಂದ್ರ ಉತ್ತರ ಪ್ರದೇಶದ ಲಕ್ನೌವಿನಲ್ಲಿ ಕಾರ್ಯಕ್ರಮವೊಂದರಲ್ಲಿ ತನ್ನ ಪ್ರತಿಭೆಯನ್ನು ಪ್ರದಶರ್ಿಸಿದಾಗಲೇ ‘ರಾ’ದವರ ತೆಕ್ಕೆಗೆ ಬಿದ್ದ. ತಕ್ಷಣವೇ ಅವನಿಗೆ ಪಾಕಿಸ್ತಾನದಲ್ಲಿ ಗೂಢಚಯರ್ೆ ನಡೆಸುವ ಕೆಲಸ ಕೊಡಲಾಯ್ತು. ದೆಹಲಿಯಲ್ಲಿ 2 ವರ್ಷಗಳ ಕಠೋರ ತರಬೇತಿಯ ನಂತರ ಆತನಿಗೆ ಉದರ್ು ಕಲಿಸಿ ಮುಸಲ್ಮಾನರ ಆಚಾರ-ವಿಚಾರಗಳನ್ನು ಪರಿಚಯಿಸಿಕೊಟ್ಟು ಪಾಕಿಸ್ತಾನಕ್ಕೆ ಕಳಿಸಲಾಯ್ತು. 23 ರ ತರುಣ 1975 ರಲ್ಲಿ ನಬೀ ಅಹಮದ್ ಶಕೀರ್ನಾಗಿ ಪಾಕಿಸ್ತಾನಕ್ಕೆ ಹೋಗಿದ್ದ. ಅಲ್ಲಿನ ಸೇನೆಯಲ್ಲಿಯೇ ನೌಕರಿ ಗಿಟ್ಟಿಸಿಕೊಂಡು ಲೆಕ್ಕ ವಿಭಾಗದಲ್ಲಿ ಕೆಲಸ ಮಾಡುತ್ತಾ ಅಲ್ಲಿಯ ಒಂದು ಹುಡುಗಿಯನ್ನು ಮದುವೆಯಾಗಿ ಯಾರಿಗೂ ಅನುಮಾನ ಬರದಂತೆಯೇ ಬದುಕಿಬಿಟ್ಟ. ಆತ ಕಳುಹಿಸುತ್ತಿದ್ದ ಮಾಹಿತಿ ಬಲು ಅಚ್ಚರೀಯವಾಗಿದ್ದವು. ಸುಮಾರು 8 ವರ್ಷಗಳ ಕಾಲ ಆತ ನಿರಂತರವಾಗಿ ನಮಗೆ ಬೇಕಾದ ಮಾಹಿತಿಗಳನ್ನು ಕಳಿಸಿಕೊಟ್ಟ. 1983 ರಲ್ಲಿ ಭಾರತ ಕಳಿಸಿಕೊಟ್ಟ ಮತ್ತೊಬ್ಬ ಏಜೆಂಟ್ ಪೊಲೀಸರ ಕೈಗೆ ಸಿಕ್ಕು ಬಿದ್ದಾಗ ರವೀಂದ್ರ ಕೌಶಿಕ್ನ ಕುರಿತಂತೆ ಆತ ಬಾಯ್ಬಿಟ್ಟ. ಮುಂದೇನೆಂದು ಕೇಳಲೇ ಬೇಕಿಲ್ಲ. ನಿರಂತರ ಜೈಲುಗಳಿಂದ ಜೈಲಿಗೆ ಬದಲಾವಣೆ ಮಾಡುತ್ತಾ ಚಿತ್ರ ಹಿಂಸೆ ನೀಡುತ್ತಾ ಅವನನ್ನು ಕೆಟ್ಟ ಬಗೆಯ ಶಿಕ್ಷೆಗೆ ಗುರಿಪಡಿಸಲಾಯ್ತು. ನೇಣು ಶಿಕ್ಷೆಯನ್ನು ಘೋಷಿಸಿದರೂ ಆನಂತರ ಬೇಕಂತಲೇ ಅದನ್ನು ಜೀವಾವಧಿ ಶಿಕ್ಷೆಯಾಗಿ ಪರಿವತರ್ಿಸಲಾಯ್ತು. 14 ವರ್ಷಗಳ ಕಾಲ ನರಳಿ ಕ್ಷಯ ರೋಗ ಮತ್ತು ಹೃದ್ರೋಗಕ್ಕೆ ತುತ್ತಾಗಿ ರವೀಂದ್ರ ಕೌಶಿಕ್ ತೀರಿಕೊಂಡ! ದುದರ್ೈವವೇನು ಗೊತ್ತೇ? ಆತ ಭಾರತದ ಪರವಾದ ಗೂಢಚಾರನೆಂದು ಭಾರತವೆಂದೂ ಒಪ್ಪಿಕೊಳ್ಳಲೇ ಇಲ್ಲ.

ಅದು ಯಾವಾಗಲೂ ಹಾಗೆಯೇ. ಗೂಢಚಾರರನ್ನು ತಾವೇ ಕಳಿಸಿದ್ದೆಂದು ಯಾವ ಸಕರ್ಾರವೂ ಒಪ್ಪಿಕೊಳ್ಳಲಾರದು. ಹಾಗೆ ಒಪ್ಪಿಕೊಂಡು ಬಿಟ್ಟರೆ ಅದು ಮತ್ತೊಂದು ರಾಷ್ಟ್ರದ ಸಾರ್ವಭೌಮತೆಯ ವಿರುದ್ಧ ಕೆಲಸ ಮಾಡಿದಂತೆಯೇ. ಅದು ಅಂತರರಾಷ್ಟ್ರೀಯ ಒಪ್ಪಂದಗಳನ್ನು ಮುರಿದಂತಾಗುತ್ತದೆ. ಹಾಗಂತ ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರದ ವಿರುದ್ಧ ಗೂಢಚಯರ್ೆ ನಡೆಸುವುದೇ ಇಲ್ಲವೆಂದುಕೊಳ್ಳಬೇಡಿ. ಅಮೇರಿಕಾದ ಸಿಐಎ ಜಗತ್ತಿನ ಮೂಲೆ-ಮೂಲೆಯಲ್ಲಿ ಹದ್ದುಗಣ್ಣಿಟ್ಟಿದೆ. ಚೀನಾ ತನ್ನ ಹಾಡರ್್ವೇರ್ ನೆಟ್ವಕರ್್ನ ಮೂಲಕ ಯಾವ ರಾಷ್ಟ್ರದ ಯಾವ ದತ್ತಾಂಶವನ್ನು ಬೇಕಿದ್ದರೂ ತನ್ನ ರಾಷ್ಟ್ರದಲ್ಲೇ ಕುಳಿತು ಓದುವ ವ್ಯವಸ್ಥೆ ರೂಪಿಸಿಕೊಂಡಿದೆ. ಭಾರತದ ಬಳಿ ರಾ ಇದ್ದಂತೆ ಪಾಕಿಸ್ತಾನದ ಬಳಿ ಐಎಸ್ಐ ಇದೆ. ಪ್ರತಿಯೊಂದು ರಾಷ್ಟ್ರವೂ ತನ್ನ ರಾಷ್ಟ್ರದ ಸಾರ್ವಭೌಮತೆಯನ್ನು ಉಳಿಸಿಕೊಳ್ಳಲೆಂದು ಈ ಪ್ರಯತ್ನವನ್ನು ಮಾಡಿಯೇ ಮಾಡುತ್ತದೆ. ಆದರೆ ಗೂಢಚಾರನೊಬ್ಬ ಸಿಕ್ಕಿಬಿದ್ದರೆ ತನಗೂ ಅವನಿಗೂ ಸಂಬಂಧವೇ ಇಲ್ಲವೆಂದುಬಿಡುತ್ತದೆ. ಆತ ಅನಾಮಧೇಯನಾಗಿಯೇ ಉಳಿದುಬಿಡುತ್ತಾನೆ. ರಾಷ್ಟ್ರಕ್ಕಾಗಿ ಗಡಿಯಲ್ಲಿ ನಿಂತು ಕಾದಾಡುವ ಸೈನಿಕನಾದರೂ ತೀರಿಕೊಂಡ ನಂತರ ಎಲ್ಲ ಗೌರವಗಳ ಜೊತೆಗೆ ಕೈತುಂಬ ಹಣ ಪಡೆಯುತ್ತಾನೆ. ಆದರೆ ಈ ಬಗೆಯ ಗೂಢಚಾರರು ಮಾತ್ರ ಯಾವುದೂ ಇಲ್ಲದೇ ಸಾಮಾನ್ಯವಾಗಿಯೇ ಉಳಿದುಬಿಡುತ್ತಾರೆ.

2

ರಾಜಿಯಲ್ಲಿ ಸಿಕ್ಕಿಹಾಕಿಕೊಳ್ಳುವಂತ ಪ್ರಸಂಗ ಬಂದಾಗ ಅವಳನ್ನು ಉಳಿಸಲು ಹೋದವರೇ ಕೊಲ್ಲುವ ಪ್ರಸಂಗವೊಂದು ಬರುತ್ತದೆ. ಇದರ ನಡುವೆ ಸಾಹಸಮಯವಾಗಿ ಜೀವ ಉಳಿಸಿಕೊಂಡು ಬಂದ ಸೆಹಮತ್ ನನ್ನ ಜೀವಕ್ಕೆ ಬೆಲೆಯೇ ಇಲ್ಲವೇ ಎಂದು ಕೇಳಿದಾಗ ಇಲ್ಲಿನ ಗೂಢಚರ್ಯ ವಿಭಾಗದ ಮುಖ್ಯಸ್ಥ ಹೇಳುವ ಮಾತಿದೆಯಲ್ಲ ಅದು ಚಳಿಯಲ್ಲಿಯೂ ಮೈ ಬೆಚ್ಚಗಾಗಿಸುತ್ತದೆ, ‘ಯುದ್ಧದಲ್ಲಿ ಗೆಲುವಷ್ಟೇ ಮುಖ್ಯ. ಯಾರು ಬದುಕುತ್ತಾರೆ ಯಾರು ಸಾಯುತ್ತಾರೆ ಎನ್ನುವುದಲ್ಲ’!

ಓಹ್! ಪ್ರತಿಯೊಬ್ಬ ಸೈನಿಕನೂ ಇದೇ ಭಾವನೆಯೊಂದಿಗೆ ಗಡಿ ತುದಿಯಲ್ಲಿ ನಿಂತಿರುತ್ತಾನಲ್ಲ. ಶತ್ರು ರಾಷ್ಟ್ರವೊಂದರಲ್ಲಿ ಅವರವನೇ ಆಗಿಬಿಟ್ಟು ಭಾರತವನ್ನು ಉಳಿಸಲಿಕ್ಕಾಗಿ ತನ್ನ ಜೀವವನ್ನೇ ತೇಯುತ್ತಿರುತ್ತಾನಲ್ಲ. ಪ್ರತಿಕೂಲ ಪರಿಸ್ಥಿತಿ ಬಂದಾಗ ತನ್ನ ಪ್ರಾಣವನ್ನಾದರೂ ಸಮಪರ್ಿಸಿ ರಾಷ್ಟ್ರವನ್ನೇ ಉಳಿಸಿ ಹೋಗಿ ಬಿಡುತ್ತಾನಲ್ಲ! ಎಂತಹ ಅದ್ಭುತ ಬದುಕಲ್ಲವೇ! ಈಗೊಮ್ಮೆ ಪಾಕಿಸ್ತಾನದ ಜೈಲಿನಲ್ಲಿ ಕೊಳೆಯುತ್ತಿರುವ ಕುಲಭೂಷಣ್ ಜಾಧವ್ರನ್ನು ನೆನಪಿಸಿಕೊಳ್ಳಿ. ಆತ ಭಾರತದ ಗೂಢಚಾರನಲ್ಲವೆಂದೇ ಭಾರತ ವಾದಿಸುತ್ತದೆ. ಅದು ಸತ್ಯವೂ ಇರಬಹುದೇನೋ. ಆದರೆ ಆತನಿಗೆ ಅದಾಗಲೇ ಅಪಾರವಾದ ಚಿತ್ರಹಿಂಸೆ ನೀಡಿರುವ ಪಾಕಿಸ್ತಾನ ಆತನ ಬದುಕನ್ನು ಅಸಹನೀಯಗೊಳಿಸಿಬಿಟ್ಟಿದೆ. ಇಂತಹ ಅದೆಷ್ಟು ಜನ ಈಗಲೂ ಅಲ್ಲಿ ಕೆಲಸ ಮಾಡುತ್ತಿದ್ದಾರೋ, ಅದೆಷ್ಟು ಜನ ಕೊಟ್ಟ ಕೆಲಸ ಮುಗಿಸಿ ಮರಳಿ ಭಾರತಕ್ಕೆ ಬಂದು ಯಾರಿಗೂ ಅರಿವಾಗದಂತೆ ತಣ್ಣಗೆ ಬದುಕು ನಡೆಸುತ್ತಿದ್ದಾರೋ ಅದು ಯಾರಿಗೂ ಅರಿವೆ ಆಗುವುದಿಲ್ಲ.

3

7 ವರ್ಷಗಳ ಕಾಲ ಪಾಕಿಸ್ತಾನದೊಳಗೇ ಗೂಢಚಯರ್ೆ ನಡೆಸಿ ಅವರ ಶಕ್ತಿಯನ್ನು, ಕೊರತೆಯನ್ನು ಚೆನ್ನಾಗಿ ಅರಿತು ಬಂದಿರುವ ಒಬ್ಬ ವ್ಯಕ್ತಿಯನ್ನು ಮಾತ್ರ ಜಗತ್ತೇ ಅಚ್ಚರಿಯಿಂದ ನೋಡುತ್ತಿದೆ. ಅವರು ಭಾರತದ ಸುರಕ್ಷೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಮೋದಿ ತೆಗೆದುಕೊಳ್ಳಬೇಕಾದ ಅಂತತರಾಷ್ಟ್ರೀಯ ನಿರ್ಣಯಗಳ ಕುರಿತಂತೆ ಅವರು ಮಹತ್ವದ ಸಲಹೆಗಳನ್ನು ಕೊಡುತ್ತಾರೆ. ಮೋದಿ ರಾಷ್ಟ್ರದಲ್ಲಿ ಓಡಾಡುವಾಗ ಮತ್ತು ಅಂತರರಾಷ್ಟ್ರೀಯ ಪ್ರವಾಸಗಳನ್ನು ಮಾಡುವಾಗ ಅವರ ರಕ್ಷಣೆಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಳ್ಳುತ್ತಾರೆ. ಅಜಿತ್ ದೊವೆಲ್ ಎಂಬ ಒಂದು ಹೆಸರೇ ರೋಮಾಂಚನ ಉಂಟು ಮಾಡುವಂಥದ್ದು!

ರಾಜಿ ನೋಡುವಾಗ ಇವರೆಲ್ಲರೂ ಒಮ್ಮೆ ನೆನಪಿಗೆ ಬಂದುಬಿಟ್ಟರು. ನೋಡುವ ಅವಕಾಶ ಸಿಕ್ಕಿದರೆ ಖಂಡಿತ ತಪ್ಪಿಸಿಕೊಳ್ಳಬೇಡಿ. ಸಿನಿಮಾ ನೋಡಿ ಹೊರಬರುವಾಗ ಅನಾಮಧೇಯರಾಗಿಯೇ ಉಳಿದುಬಿಡುವ ಆ ಮಹಾ ಸಾಹಸಿಗಳಿಗೆ ಮನಸ್ಸಿನಲ್ಲಿಯೇ ನಮನ ಸಲ್ಲಿಸುವುದನ್ನು ಮರೆಯಬೇಡಿರಿ!

ಭಾರತದ ಮಾನವನ್ನು ನಿಜಕ್ಕೂ ಕಳೆಯುತ್ತಿರೋದು ಯಾರು!!

ಭಾರತದ ಮಾನವನ್ನು ನಿಜಕ್ಕೂ ಕಳೆಯುತ್ತಿರೋದು ಯಾರು!!

ಪ್ರಧಾನಮಂತ್ರಿಯ ಹುದ್ದೆಯ ಘನತೆಯನ್ನು ಕಡಿಮೆ ಮಾಡಿದ್ದು ನರೇಂದ್ರಮೋದಿಯಲ್ಲ, ಅದಕ್ಕೂ ಹಿಂದೆ ಪ್ರಧಾನಿಯಾಗಿದ್ದ ಮನಮೋಹನ ಸಿಂಗರು. ಸಂಸತ್ತಿನ ಕಾರಿಡಾರುಗಳಲ್ಲಿ ಪ್ರಧಾನಮಂತ್ರಿಗೆ ನಮಸ್ಕರಿಸದೇ ಅವರ ಹಿಂದೆ ಬರುತ್ತಿದ್ದ ಸೋನಿಯಾಗೆ ಸಾಷ್ಟಾಂಗವೆರಗುತ್ತಿದ್ದರಲ್ಲಾ ಕಾಂಗ್ರೆಸ್ಸಿಗರು ಅದು ಪ್ರಧಾನಿ ಹುದ್ದೆಯ ಘನತೆಗೆ ಮಾಡಿದ ಅವಮಾನ. ಮನಮೋಹನ ಸಿಂಗರು ಚೀನಾದ ಅಧ್ಯಕ್ಷರನ್ನು ಭೇಟಿ ಮಾಡುವಾಗ ತಲೆತಗ್ಗಿಸಿ ಕೈ ಕುಲುಕುತ್ತಿದ್ದರಲ್ಲಾ ಅದು ಪ್ರಧಾನಿ ಹುದ್ದೆಯ ಘನತೆಗೆ ಅವಮಾನ.

ಮೋದಿಯ ಮೇಲೆ ಸಿದ್ದರಾಮಯ್ಯ ಮಾನನಷ್ಟ ಮೊಕದ್ದಮೆ ಹಾಕಿ ಕೂತಿದ್ದಾರೆ. ನಮ್ಮಲ್ಲನೇಕರು ಮೋದಿ ಕಾಂಗ್ರೆಸ್ಸಿನ ಮೇಲೆ ವಾಗ್ದಾಳಿ ಮಾಡಿದ್ದು ತಪ್ಪು ಎನ್ನುತ್ತಿದ್ದಾರೆ. ಕೆಲವರಂತೂ ಪ್ರಧಾನಂತ್ರಿಯ ಹುದ್ದೆಯ ಘನತೆ ಎಂದೆಲ್ಲಾ ಬಡಬಡಾಯಿಸುತ್ತಿದ್ದಾರೆ. ಸಿದ್ದರಾಮಯ್ಯ ತಾವು ಹೋದ ಕಾರ್ಯಕ್ರಮದಲ್ಲೆಲ್ಲಾ ಕುಚರ್ಿಯ ಮೇಲೆ ಗಡದ್ದು ನಿದ್ದೆ ಹೊಡೆಯುತ್ತಿದ್ದರಲ್ಲ, ಅತ್ಯಂತ ಉಡಾಫೆಯ ಮಾತುಗಳನ್ನಾಡುತ್ತಿದ್ದರಲ್ಲ, ಹಿರಿಯರು-ಕಿರಿಯರೆನ್ನದೇ ಮನಸ್ಸಿಗೆ ಬಂದಂತೆ ಬಾಯಿಗೆ ಬಂದದ್ದನ್ನು ಹೇಳಿ ಬಿಡುತ್ತಿದ್ದರಲ್ಲ, ಆಗೆಲ್ಲಾ ಹುದ್ದೆಯ ಘನತೆ ಚಚರ್ೆಗೆ ಬರಲೇ ಇಲ್ಲವಲ್ಲ! ಕನರ್ಾಟಕದ 6 ಕೋಟಿ ಕನ್ನಡಿಗರ ಪ್ರತಿನಿಧಿಯಾಗಿದ್ದವ ಜಾಗತಿಕವಾಗಿ ಕನರ್ಾಟಕದ ಮಾನ ಕಳೆಯುತ್ತಿದ್ದಾನೆ ಎಂದು ಯಾರೂ ಮಾತನಾಡಲೇ ಇಲ್ಲವಲ್ಲಾ! ಬಿಪಿಓಗಳ ಮೂಲಕ ದಿನದ 24 ತಾಸೂ ಎದ್ದಿರುವ ಬೆಂಗಳೂರಿಗೆ ಸದಾ ನಿದ್ದೆ ಮಾಡುವ ಮುಖ್ಯಮಂತ್ರಿ ಘನತೆ ಮತ್ತು ಆದರ್ಶವಾಗಿದ್ದು ವಿಪಯರ್ಾಸ. ಹಾಗೆ ನೋಡಿದರೆ ನಮ್ಮ ಪ್ರತಿನಿಧಿಯಾಗಿ ರಾಜ್ಯದ ಮಾನ ಹರಾಜು ಹಾಕಿದ್ದಕ್ಕೆ ನಾವೆಲ್ಲರೂ ಅದೆಷ್ಟು ಕೋಟಿ ಮಾನ ಹಾನಿ ಪ್ರಕರಣ ದಾಖಲೆ ಮಾಡಬೇಕೋ ದೇವರೇ ಬಲ್ಲ. ಬಿಡಿ. ಅದರ ಬಗ್ಗೆ ತುಂಬ ಚಚರ್ಿಸಿ ಪ್ರಯೋಜನವಿಲ್ಲ. ನನಗೆ ಸದ್ಯಕ್ಕಂತೂ ಅದ್ಭುತ ಎನಿಸುವುದು ಈ ದೇಶದ ಪ್ರಧಾನಮಂತ್ರಿಯೇ.

1

ಮೋದಿ ಎನ್ನುವಂತಹ ಈ ಅಪರೂಪದ ಮತ್ತೊಂದು ಮಾಣಿಕ್ಯವನ್ನು ಪಡೆಯುವುದು ಬಹುಶಃ ದುಸ್ಸಾಧ್ಯವೇ ಸರಿ. 6 ದಿನಗಳಲ್ಲಿ ಕನರ್ಾಟಕದಲ್ಲಿ 21 ರ್ಯಾಲಿ ಮುಗಿಸಿ ಸೋಲಿನ ದವಡೆಯಲ್ಲಿದ್ದ ಬಿಜೆಪಿಯನ್ನು ಸಕರ್ಾರ ರಚಿಸುವಷ್ಟರ ಮಟ್ಟಿಗೆ ತಯಾರು ಮಾಡಿ, ಪುಣ್ಯಾತ್ಮ ಆಯಾಸವೆಂದು ಮನೆಯಲ್ಲಿ ಕೂತಿಲ್ಲ. ಅದಾಗಲೇ ನೇಪಾಳಕ್ಕೆ ಪ್ರಯಾಣ ಬೆಳೆಸಿಬಿಟ್ಟಿದ್ದಾರೆ! ನನಗೆ ಗೊತ್ತು. ಇಂದು ಚುನಾವಣೆ ಮುಗಿದೊಡನೆ ಅಭ್ಯಥರ್ಿಗಳು ಬಿಡಿ ಅವರ ಪರವಾಗಿ ಕೆಲಸ ಮಾಡಿದವರೂ ರೆಸಾಟರ್್ಗಳನ್ನು ಹುಡುಕಿಕೊಂಡು ಹೋಗಿ ನಾಲ್ಕಾರು ದಿನ ಮಜವಾಗಿ ಕಾಲ ಕಳೆಯುತ್ತಾರೆ. ನರೇಂದ್ರಮೋದಿ ಮಾತ್ರ ರಾಷ್ಟ್ರದ ಗೌರವವನ್ನು ಹಿಗ್ಗಿಸಲು ಪುರುಸೊತ್ತಿಲ್ಲದೇ ದುಡಿಯುತ್ತಿದ್ದಾರೆ. ಇದು ಈಗ ಮಾತ್ರ ಅಲ್ಲ. ಲೋಕಸಭಾ ಚುನಾವಣೆಯಲ್ಲೂ ನರೇಂದ್ರಮೋದಿ ನೂರಾರು ರ್ಯಾಲಿಗಳಲ್ಲಿ ಪಾಲ್ಗೊಂಡು ಹಗಲು-ರಾತ್ರಿಯೆನ್ನದೇ ದುಡಿಯುತ್ತಾ ಜೀವವನ್ನು ತೇಯ್ದುಬಿಟ್ಟಿದ್ದರಲ್ಲಾ! ಅಂದೂ ಕೂಡ ಚುನಾವಣೆ ಮುಗಿದೊಡನೆ ಸುಮ್ಮನಾಗದ ಮನುಷ್ಯ ಪಿ.ಎ.ಸಂಗ್ಮಾರಂತಹ ಹಿರಿಯ ಮುತ್ಸದ್ಧಿಗಳನ್ನು ಭೇಟಿ ಮಾಡಿ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಚಚರ್ೆಗೆ ತೊಡಗಿದ್ದರು. ದೇವೇಗೌಡರಂತಹ ಹಿರಿಯರನ್ನೂ ಕೂಡ ಅವರು ಇದೇ ಆದರದಿಂದ ಕಾಣುತ್ತಾರೆ. ರಾಷ್ಟ್ರ ಕಟ್ಟುವಲ್ಲಿ ಈ ಹಿರಿಯರ ಅನುಭವವನ್ನು ಕ್ರೋಢೀಕರಿಸಿ ಹೊಸ ಪೀಳಿಗೆಗೆ ಅದನ್ನು ಮುಟ್ಟಿಸುವ ನಡು ಪೀಳಿಗೆಯ ಪ್ರತಿನಿಧಿಯಾಗಿ ಕಂಡು ಬರುತ್ತಾರೆ ಅವರು. ಇಷ್ಟಕ್ಕೂ 6 ದಿನಗಳಲ್ಲಿ 21 ರ್ಯಾಲಿ ತಮಾಷೆಯ ಮಾತಲ್ಲ. ದಿನಕ್ಕೆ ನಾಲ್ಕು-ನಾಲ್ಕು ಕಡೆಗಳಲ್ಲಿ ಭಾಷಣ ಮಾಡಿ, ಲಕ್ಷಾಂತರ ಜನರನ್ನುದ್ದೇಶಿಸಿ ಮಾತನಾಡುತ್ತಾ ಹೊಸದೊಂದು ತಂತ್ರಗಾರಿಕೆಯನ್ನು ರೂಪಿಸುತ್ತಾ ಪ್ರತಿಪಕ್ಷಗಳ ವ್ಯೂಹಕ್ಕೆ ಪ್ರತಿವ್ಯೂಹವನ್ನು ಹೆಣೆಯುತ್ತಾ ಸಾವಿರಾರು ಕಿಲೋಮೀಟರ್ಗಳ ಯಾತ್ರೆಯನ್ನೂ ಮಾಡಿ, ರಾತ್ರಿಯಾದೊಡನೆ ದೆಹಲಿಗೆ ಸೇರಿಕೊಂಡು ಮರುದಿನ ಮರಳಿ ಮತ್ತೆ ಬರುವುದಿದೆಯಲ್ಲಾ ಸಾಮಾನ್ಯನಾದವನ ಕೈಲಿ ಸಾಧ್ಯವೇ ಆಗದ ಸಂಗತಿ. ಅವರ ಮೇಲಿನ ಜವಾಬ್ದಾರಿಯೂ ಎಷ್ಟಿದೆಯೆಂದರೆ ಇಲ್ಲಿನ ಭಾಜಪದ ಮುಖ್ಯಮಂತ್ರಿ ಅಭ್ಯಥರ್ಿಯಿಂದ ಹಿಡಿದು ಬೂತ್ ಮಟ್ಟದ ಕಾರ್ಯಕರ್ತರವರೆಗೆ ಪ್ರತಿಯೊಬ್ಬರೂ ಮೋದಿ ಬರುತ್ತಾರೆ, ಬದಲಾವಣೆ ತರುತ್ತಾರೆ ಎಂದೇ ನಿರೀಕ್ಷೆಯಿಂದ ಕಾದು ಕುಳಿತಿದ್ದರು. ಭಾರತೀಯ ಕ್ರಿಕೆಟ್ ತಂಡ ವಿರಾಟ್ ಕೊಹ್ಲಿಯ ಬ್ಯಾಟಿಂಗನ್ನು ಮತ್ತು ಧೋನಿಯ ತಾಳ್ಮೆಯುತ ಆಟವನ್ನು ಕಾದುಕೊಂಡು ಕುಳಿತಿರುತ್ತಲ್ಲಾ ಹಾಗೆಯೇ ಪರಿಸ್ಥಿತಿ. ಹಾಗಂತ ಬರಿ ಎಲೆಕ್ಷನ್ ಗೆಲ್ಲಿಸುವುದಷ್ಟೇ ಅಲ್ಲವಲ್ಲ ಅವರ ಕೆಲಸ, ದೇಶದ ಹೊಣೆಗಾರಿಕೆಯೂ ಅವರ ಹೆಗಲ ಮೇಲೇ ಇದೆ. ಒಂದಿನಿತೂ ತಪ್ಪಾಗದಂತೆ ದೇಶವನ್ನು ಮುನ್ನಡೆಸುವುದು ಅವರ ಜವಾಬ್ದಾರಿಯೇ. ಕಳೆದ ನಾಲ್ಕು ವರ್ಷದಲ್ಲಿ ಅದೆಷ್ಟು ವಿಧಾನಸಭಾ ಚುನವಾಣೆಗಳಲ್ಲಿ ಅವರು ಸ್ಟಾರ್ ಪ್ರಚಾರಕರಾಗಿದ್ದಾಗ್ಯೂ ದೇಶದ ರೈಲು ಒಂದಿನಿತೂ ಹಳಿ ತಪ್ಪದಂತೆ ಮುನ್ನಡೆಸಿಕೊಂಡು ಹೋಗುತ್ತಿದ್ದಾರಲ್ಲಾ ಅವರ ಸಾಮಥ್ರ್ಯದ ಕುರಿತಂತೆ ಒಮ್ಮೆ ಆಲೋಚಿಸಿ ನೋಡಿ.

ಕನರ್ಾಟಕದ ಚುನಾವಣೆಗೂ ಮುನ್ನ ನೇಪಾಳದ ಪ್ರಧಾನಿಯನ್ನು ಭಾರತಕ್ಕೆ ಬರಮಾಡಿಕೊಂಡು ಅವರಿಗೆ ಭಾರತದ ರಾಜತಾಂತ್ರಿಕ ನಿಧರ್ಾರಗಳನ್ನು ವಿಷದಪಡಿಸಿದ್ದರು ಮೋದಿ. ನೇಪಾಳ ನಮ್ಮ ತೆಕ್ಕೆಯಿಂದ ಜಾರಿ ಚೀನಾದ ಬಗಲಿಗೆ ಹೋಗಿ ಬೀಳುವ ಎಲ್ಲ ಹೆದರಿಕೆಯೂ ಖಂಡಿತ ಕಾಡುತ್ತಿತ್ತು. ನೇಪಾಳದ ಮಾಧೇಷಿಗಳ ಹೋರಾಟದ ಹಿಂದೆ ಭಾರತದ್ದೇ ಕೈವಾಡವಿದೆ ಎಂಬ ಅಪನಂಬಿಕೆಯಿಂದ ಪ್ರಧಾನಿ ಕೆ.ಪಿ ಓಲಿ ಚೀನಾದ ಪರ ಹೇಳಿಕೆಗಳನ್ನೇ ಬಹುವಾಗಿ ಕೊಡುತ್ತಿದ್ದರು. ಈಗ ನೇಪಾಳದ ಪ್ರಧಾನಿಯನ್ನು ಕರೆಸಿ ಚೀನಾ ನೇಪಾಳದಲ್ಲಿ ನಡೆಸುತ್ತಿರುವ ಚಟುವಟಿಕೆಗಳ ಕುರಿತಂತೆ ಎಚ್ಚರಿಕೆಯ ಕಿವಿಮಾತನ್ನು ಹೇಳಿ ಅವರನ್ನು ಪ್ರೀತಿಯಿಂದ ಕಳಿಸಿಕೊಟ್ಟದ್ದಲ್ಲದೇ ತಾವೇ ನೇಪಾಳಕ್ಕೆ ಬರುವಂತ ಭರವಸೆಯನ್ನೂ ಕೊಟ್ಟರು. ಇತ್ತೀಚಿನ ದಿನಗಳಲ್ಲಿ ನೇಪಾಳವನ್ನು ಇಷ್ಟು ಸೂಕ್ಷ್ಮವಾಗಿ ಪರಿಗಣಿಸಿದ ಮತ್ತೊಬ್ಬ ಪ್ರಧಾನಿಯೇ ಇರಲಿಲ್ಲ. ಇದು ನೇಪಾಳಕ್ಕೂ ಹೆಮ್ಮೆಯ ಸಂಗತಿ. ನೆನಪಿಡಿ. ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಮಂತ್ರಿ ನೇಪಾಳಕ್ಕೆ ನೀಡುತ್ತಿರುವ ಮೂರನೇ ಭೇಟಿ ಇದು. ಚೀನಾದ ಮಹತ್ವಾಕಾಂಕ್ಷೆಯನ್ನು ಕಂಡಿರುವ ನೇಪಾಳ ಭಾರತದ ಈ ಬಗೆಯ ಬೆಂಬಲದಿಂದಾಗಿ ಚೀನಾದೊಂದಿಗೆ ಚೌಕಶಿಗೆ ಕುಳಿತಾಗ ಅದು ಸ್ವಲ್ಪ ಹೆಚ್ಚಿನದನ್ನು ಮತ್ತು ತಮಗೆ ಬೇಕಾದ್ದನ್ನು ಆಗ್ರಹಿಸಬಲ್ಲ ಸಾಮಥ್ರ್ಯವನ್ನಂತು ಖಂಡಿತ ಹೊಂದಿರುತ್ತದೆ. ಭಾರತದ ಬೆಂಬಲವಿಲ್ಲದೇ ಅಮೇರಿಕಾದ ಸಹಕಾರವನ್ನೂ ಕಳೆದುಕೊಂಡಿರುವ ಪಾಕಿಸ್ತಾನ ಚೀನಾದ ತಾಳಕ್ಕೆ ಕುಣಿಯಲೇಬೇಕಾದ ಅನಿವಾರ್ಯದ ಪರಿಸ್ಥಿತಿಯನ್ನು ತಲುಪಿಬಿಟ್ಟಿದೆಯಲ್ಲಾ ನೇಪಾಳಕ್ಕಂತೂ ಆ ಸ್ಥಿತಿ ಇರಲಾರದು. ಇದು ನೇಪಾಳಕ್ಕೆ ಖಂಡಿತ ಅರಿವಿದೆ.

2

ಅತ್ತ ಕನರ್ಾಟಕದ ಚುನಾವಣೆಗೆ ಮುನ್ನವೇ ಚೀನಾಕ್ಕೆ ಹೋದ ಮೋದಿ ಅಲ್ಲಿಯೂ ಕೂಡ ತಲೆಯನ್ನು ತಗ್ಗಿ ಬಾಗಿಸದೇ ಭಾರತದ ಘನತೆ-ಗೌರವಗಳನ್ನು ಹೆಚ್ಚಿಸಿಯೇ ಬಂದಿದ್ದಾರೆ. ಸಿದ್ದರಾಮಯ್ಯನವರಿಗೆ ಅಂತರರಾಷ್ಟ್ರೀಯ ವಿಚಾರಗಳ ಕುರಿತಂತ ಮಾಹಿತಿಯ ಕೊರತೆ ಇದೆ ಎನಿಸುತ್ತದೆ. ಪ್ರಧಾನಮಂತ್ರಿಯ ಹುದ್ದೆಯ ಘನತೆಯನ್ನು ಕಡಿಮೆ ಮಾಡಿದ್ದು ನರೇಂದ್ರಮೋದಿಯಲ್ಲ, ಅದಕ್ಕೂ ಹಿಂದೆ ಪ್ರಧಾನಿಯಾಗಿದ್ದ ಮನಮೋಹನ ಸಿಂಗರು. ಸಂಸತ್ತಿನ ಕಾರಿಡಾರುಗಳಲ್ಲಿ ಪ್ರಧಾನಮಂತ್ರಿಗೆ ನಮಸ್ಕರಿಸದೇ ಅವರ ಹಿಂದೆ ಬರುತ್ತಿದ್ದ ಸೋನಿಯಾಗೆ ಸಾಷ್ಟಾಂಗವೆರಗುತ್ತಿದ್ದರಲ್ಲಾ ಕಾಂಗ್ರೆಸ್ಸಿಗರು ಅದು ಪ್ರಧಾನಿ ಹುದ್ದೆಯ ಘನತೆಗೆ ಮಾಡಿದ ಅವಮಾನ. ಮನಮೋಹನ ಸಿಂಗರು ಚೀನಾದ ಅಧ್ಯಕ್ಷರನ್ನು ಭೇಟಿ ಮಾಡುವಾಗ ತಲೆತಗ್ಗಿಸಿ ಕೈ ಕುಲುಕುತ್ತಿದ್ದರಲ್ಲಾ ಅದು ಪ್ರಧಾನಿ ಹುದ್ದೆಯ ಘನತೆಗೆ ಅವಮಾನ. ವಿಶ್ವಸಂಸ್ಥೆಯಲ್ಲಿ ಮಾತನಾಡುವಾಗ ನೀರಸವಾದ ಸತ್ವವಿಲ್ಲದ ಭಾಷಣಗಳನ್ನು ಪ್ರಧಾನಮಂತ್ರಿ ಓದುತ್ತಿದ್ದರಲ್ಲ ಆಗ ನಡೆಯುತ್ತಿದ್ದುದು ಹುದ್ದೆಯ ಘನತೆಗೆ ಅವಮಾನ. ಪಕ್ಕದ ಪ್ರಧಾನಿ ನವಾಜ್ ಶರೀಫ್ ಭಾರತದ ಪ್ರಧಾನಿಯನ್ನು ಹಳ್ಳಿಯ ಹೆಂಗಸಿಗಿಂತ ಕಡೆ ಎಂದು ಮೂದಲಿಸಿದನಲ್ಲ; ಹಾಗೆಂದಾಗಲೂ ಬಾಯಿ ಮುಚ್ಚಿಕೊಂಡಿದ್ದರಲ್ಲಾ ಕಾಂಗ್ರೆಸ್ಸಿಗರು ಅದು ಪ್ರಧಾನಿ ಹುದ್ದೆಗಷ್ಟೇ ಅಲ್ಲ, 120 ಕೋಟಿಗೂ ಹೆಚ್ಚು ಭಾರತೀಯರಿಗೆ ಮಾಡಿದ ಅವಮಾನ. ಅದನ್ನು ಧಿಕ್ಕರಿಸಿ ನವಾಜ್ ಶರೀಫರಿಗೆ ಅಂದೂ ಝಾಡಿಸಿದ್ದೂ ಇನ್ನೂ ಪ್ರಧಾನಿಯೇ ಆಗಿರದಿದ್ದ ನರೇಂದ್ರಮೋದಿಯೇ ಎಂಬುದನ್ನು ಸಿದ್ದರಾಮಯ್ಯನವರು ಮರೆಯದಿದ್ದರೆ ಸಾಕು.

ಪ್ರಧಾನಮಂತ್ರಿ ನರೇಂದ್ರಮೋದಿಯವರು ದೇಶ ಕಟ್ಟುವ ಕಾಯಕದಲ್ಲಿ ತೊಂದರೆ ಕೊಡುವ ಪ್ರತಿಯೊಬ್ಬರನ್ನೂ ಅವಮಾನಿಸುತ್ತಿದ್ದಾರೆ. ಆದರೆ ಯಾರು ರಾಷ್ಟ್ರೋನ್ನತಿಯ ಕಾರ್ಯದಲ್ಲಿ ಜೊತೆಯಲ್ಲಿದ್ದಾರೋ ಅವರನ್ನು ತಲೆಯ ಮೇಲೆ ಹೊತ್ತು ಮೆರೆಸುತ್ತಾರೆ. ಹೀಗಾಗಿಯೇ ಅವರ ಭಾಷಣದಲ್ಲಿ ತಮ್ಮ ಹೆಸರು ಪ್ರಸ್ತಾಪವಾದೊಡನೆ, ಅವರು ಮಾಡುವ ಟ್ವೀಟುಗಳಲ್ಲಿ ತಮ್ಮ ಕುರಿತಂತೆ ಬಂದೊಡನೆ ದೇಶದ ಜನ ಕುಣಿದಾಡಿಬಿಡುತ್ತಾರೆ.

3

ಬಿಡಿ. ಚುನಾವಣೆ ಮುಗಿದೊಡನೆ ಸಿದ್ದರಾಮಯ್ಯನವರಿಗೆ ತಮ್ಮದ್ದೇ ಆದ ರಾಜಕೀಯ ಲೆಕ್ಕಾಚಾರಗಳು ಬೇರೆ ಇರಬಹುದೇನೋ. ಆದರೆ ನರೇಂದ್ರಮೋದಿಯವರಿಗೆ ಬೆಟ್ಟದಷ್ಟು ಕೆಲಸ ಇದೆ. ಹೀಗಾಗಿಯೇ ಅವರು ಕನರ್ಾಟಕದ ಪ್ರಚಾರ ಭಾಷಣ ಮುಗಿಸಿ ಮರುದಿನವೇ ನೇಪಾಳಕ್ಕೆ ತೆರಳಿದ್ದು. ನೇಪಾಳದ ಪ್ರಧಾನಿ ಓಲಿಯನ್ನು ಭಾರತದೆಡೆಗೆ ಒಲಿಸಿಕೊಳ್ಳಲು ಸಾಧ್ಯವಾದರೆ ಅದು ನರೇಂದ್ರಮೋದಿಯವರ ದೊಡ್ಡ ಸಾಧನೆಯೇ. ಏಕೆಂದರೆ ಪಾಕಿಸ್ತಾನದ ಮೂಲಕ ದೇಶಕ್ಕೆ ನುಸುಳುತ್ತಿರುವ ಖೋಟಾ ನೋಟು, ಮಾದಕ ದ್ರವ್ಯ ಮೊದಲಾದವುಗಳಿಗೆ ನೇಪಾಳವೇ ಹೆಬ್ಬಾಗಿಲು. ಚೀನಾ ಬೆಂಬಲಿತ ಮಾವೋವಾದಿ ನಕ್ಸಲರಿಗೆ ನೇಪಾಳವೇ ಸೇತುವೆ. ಮುಂದಿನ ಮೂರ್ನಾಲ್ಕು ತಿಂಗಳೊಳಗೆ ಇಲ್ಲಿರುವಂಥ ನಕ್ಸಲರನ್ನು ಪೂರ್ಣ ಮುಗಿಸಬೇಕೆಂದರೆ ನೇಪಾಳ ಮಯನ್ಮಾರ್ಗಳ ಸಹಕಾರ ಬೇಕೇ ಬೇಕು. ಅದಾಗಲೇ ಮಯನ್ಮಾರನ್ನು ತಮ್ಮತ್ತ ಒಲಿಸಿಕೊಂಡಿರುವ ಭಾರತಕ್ಕೆ ನೇಪಾಳವೇ ದೊಡ್ಡ ಸವಾಲು. ಚೀನಾಕ್ಕೆ ಹೋಗಿ ಚೀನಿಯನ್ನರೊಂದಿಗೆ ಮಾತನಾಡಿ ಬಂದ ನರೇಂದ್ರ ಮೋದಿ ಈಗ ನೇಪಾಳಕ್ಕೆ ಕಾಲಿಟ್ಟಿದ್ದಾರೆಂದರೆ ಅದರ ಹಿಂದೆ ಬಲುದೊಡ್ಡ ಕಾರ್ಯಯೋಜನೆ ಇದೆ.
ಇದನ್ನೆಲ್ಲಾ ಅರ್ಥ ಮಾಡಿಕೊಳ್ಳಲಾಗದೇ ಜಾತಿ-ಮತ, ಹೆಂಡ-ಹಣ ಇವುಗಳನ್ನೇ ಮುಂದಿಟ್ಟುಕೊಂಡು ನರೇಂದ್ರಮೋದಿಗೇಕೆ ಮತ ಹಾಕಬೇಕು ಎನ್ನುವವರ ಕುರಿತಂತೆ ಖಂಡಿತವಾಗಿಯೂ ಅನುಕಂಪವಿದೆ. ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಒಂದೇ ಇರುವುದು ಅಭಿವೃದ್ಧಿಯ ರಾಜಮಾರ್ಗ ನಿಮರ್ಾಣ ಮಾಡಿದಂತೆ. ಹಾಗೆಯೇ ಮೋದಿ ತೆಗೆದುಕೊಳ್ಳಬೇಕೆಂದಿರುವ ಅನೇಕ ನಿರ್ಣಯಗಳಿಗೆ ರಾಜ್ಯ ಸಭೆಯಲ್ಲಿ ಬೆಂಬಲ ಬೇಕೆಂದರೆ ಕನರ್ಾಟಕವೂ ಅವರಿಗೆ ಕೊಡುಗೆಯಾಗಿ ದಕ್ಕಲೇಬೇಕು. ನಮಗಾಗಿ ಬಿಡುವಿಲ್ಲದೇ 18 ಗಂಟೆ ಕೆಲಸ ಮಾಡುವ ಪುಣ್ಯಾತ್ಮನಿಗಾಗಿ ನಾವು ಈ ಒಂದು ದಿನ ಕೈ ಜೋಡಿಸಬೇಕಿದೆ. ಇಂದು ಆದಷ್ಟು ಬೇಗ ಮತ ಹಾಕೋಣ. ಮತ್ತು ಇತರರಿಂದಲೂ ಮತ ಹಾಕಿಸೋಣ.

ಈ ಬಾರಿ ಮತ ಹಾಕಿ, ಭಾರತವನ್ನು ಗೆಲ್ಲಿಸೋಣ.

ಬಿಜೆಪಿ ಅಧಿಕಾರಕ್ಕೆ ಬಂದರೆ ಅಲ್ಪ ಸಂಖ್ಯಾತರು ಬದುಕೋದು ಕಷ್ಟವಾ?

ಬಿಜೆಪಿ ಅಧಿಕಾರಕ್ಕೆ ಬಂದರೆ ಅಲ್ಪ ಸಂಖ್ಯಾತರು ಬದುಕೋದು ಕಷ್ಟವಾ?

ಬಿಜೆಪಿ ಬಂದರೆ ದಂಗೆಗಳೇ ಆಗಿಬಿಡುತ್ತವೆ ಎಂದು ಹೆದರಿಸುತ್ತಾ ವೋಟು ಗಳಿಸುವುದೇ ಕಾಂಗ್ರೆಸ್ಸಿನ ಜಾಯಮಾನ. ಆದರೆ ನರೇಂದ್ರಮೋದಿಯವರು ಬಂದಾಗಿನಿಂದ ದೇಶಾದ್ಯಂತ ಒಂದೇ ಒಂದು ಹಿಂದು-ಮುಸ್ಲೀಂ ದಂಗೆಗಳು ನಡೆದಿಲ್ಲವೆಂಬುದೇ ಕಾಂಗ್ರೆಸ್ಸಿಗೆ ನುಂಗಲಾರದ ಬಿಸಿ ತುಪ್ಪ. ಮಮತಾ ಬ್ಯಾನಜರ್ಿಯ ಬಂಗಾಳದಲ್ಲಿ ದಿನ ಬೆಳಗಾದರೆ ಹಿಂದೂ-ಮುಸ್ಲಿಂ ಗಲಾಟೆಗಳು. ಕೇರಳದಲ್ಲಿ ಹಿಂದೂ-ಮುಸ್ಲೀಂ ಕಗ್ಗೊಲೆಗಳೇ ನಡೆಯುತ್ತಿವೆ. ಕನರ್ಾಟಕದಲ್ಲಿ ಸಿದ್ದರಾಮಯ್ಯನವರ ಮೂಗಿನಡಿಯಲ್ಲಿ 30ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಕೊಲೆಯಾಗಿಹೋಯ್ತು.

ನರೇಂದ್ರಮೋದಿಯವರನ್ನು ಒಡೆದು ಆಳುವ ಮನಸ್ಥಿತಿಯವರು ಎಂದು ಕಾಂಗ್ರೆಸ್ಸು ಯಾವಾಗಲೂ ಆರೋಪಿಸುತ್ತಿತ್ತು. ಹಿಂದೂ-ಮುಸಲ್ಮಾನರ ನಡುವೆ ಭೇದದ ಬೀಜ ಬಿತ್ತಿ ಅದರ ಆಧಾರದ ಮೇಲೆ ಚುನಾವಣೆ ಗೆಲ್ಲುವವರು ಅನ್ನೋದು ಅವರ ಅಳಲಾಗಿತ್ತು. ಆದರೆ ವಾಸ್ತವವಾಗಿ ಮೇಲ್ನೋಟಕ್ಕೆ ಅದು ಒಡೆದು ಆಳುವಂತೆ ಕಂಡರೂ ಒಳತೋಟಿಯಲ್ಲಿ ಅದು ಜಾತಿ-ಮತ-ಪಂಥಗಳನ್ನೆಲ್ಲಾ ಮರೆಸಿ ಹಿಂದುತ್ವದ ಛತ್ರಛಾಯೆಯಡಿ ಎಲ್ಲರನ್ನೂ ಒಗ್ಗೂಡಿಸಿ ಮುಂದೊಯ್ಯುವ ಪ್ರಯತ್ನವಾಗಿತ್ತು. ಈಗಂತೂ ಎಲ್ಲರನ್ನೂ ಜೊತೆಯಲ್ಲಿ ತೆಗೆದುಕೊಂಡು ಹೋಗುವ ಮಾತನಾಡುತ್ತಿರುವುದು ನರೇಂದ್ರ ಮೋದಿಯೇ. ನರೇಂದ್ರಮೋದಿಯನ್ನು ಬೆದರು ಬೊಂಬೆಯಾಗಿಸಿ ಮುಸಲ್ಮಾನ-ಕ್ರಿಶ್ಚಿಯನ್ನರ ವೋಟು ಕಿತ್ತು ಗೆಲುವು ದಾಖಲಿಸುವ ಪ್ರಯತ್ನ ಮಾಡುತ್ತಿರುವುದು ಕಾಂಗ್ರೆಸ್ಸು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಹಿಂದೂಗಳನ್ನು ದೆವ್ವವಾಗಿ ತೋರಿಸಿ ಮುಸಲ್ಮಾನರನ್ನು ಒಗ್ಗೂಡಿಸುವ ಪ್ರಯತ್ನ ಕಾಂಗ್ರೆಸ್ಸಿನದ್ದು. ಇತ್ತ ಹಿಂದೂಗಳನ್ನು ಚೂರು-ಚೂರಾಗಿಸಿ, ಜಾತಿ-ಜಾತಿಗಳ ನಡುವಿನ ಕಂದಕಗಳನ್ನು ವಿಸ್ತಾರಗೊಳಿಸಿ, ಹಿಂದುತ್ವವೆಂಬ ಅಭಿಮಾನದಿಂದ ಅವರು ದೂರವಿರುವಂತೆ ಮಾಡುವ ನಿರುತ ಪ್ರಯತ್ನವನ್ನು ಸಿದ್ದರಾಮಯ್ಯನವರಂತು ಮಾಡುತ್ತಲೇ ಇದ್ದಾರೆ. ಥಡರ್್ ಪಾಟರ್ಿ ಕ್ಯಾಂಪೈನಿನ ನೆಪದಲ್ಲಿ ಮಂಗಳೂರಿನಲ್ಲಿ ಓಡಾಡುವಾಗ ಕ್ರಿಶ್ಚಿಯನ್ನರನ್ನು ಬಿಜೆಪಿಯ ವಿರುದ್ಧ ಎತ್ತಿಕಟ್ಟಲು ಕಾಂಗ್ರೆಸ್ಸು ಹರಸಾಹಸ ಮಾಡುತ್ತಿರುವುದು ಕಣ್ಣಿಗೆ ಬಿತ್ತು. ಬಿಜೆಪಿ ಅಧಿಕಾರಕ್ಕೆ ಬಂದರೆ ಚಚರ್ುಗಳು ಧರಾಶಾಯಿಯಾಗುತ್ತವೆ, ಮತಾಂತರಿತ ಕ್ರಿಶ್ಚಿಯನ್ನರನ್ನು ಮರಳಿ ಕರೆದೊಯ್ಯಲಾಗುತ್ತದೆ, ಬೈಬಲನ್ನು ಸುಡಲಾಗುತ್ತದೆ ಹೀಗೆ ನೂರೆಂಟು ಬಗೆಯ ಅಪಪ್ರಚಾರಗಳು. ಆದರೆ ಬಹುತೇಕರಿಗೆ ಗೊತ್ತೇ ಇಲ್ಲದ ಕೆಲವು ಸಂಗತಿಗಳಿವೆ.

India Iraq Nurses

ಇರಾಕಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಕೇರಳದ 46 ನಸರ್ುಗಳನ್ನು ಅಲ್ಲಿನ ಐಸಿಸ್ ಉಗ್ರಗಾಮಿಗಳು ಅಪಹರಿಸಿದ್ದರಲ್ಲಾ ಆಗ ಅವರನ್ನು ಬಿಡಿಸಿಕೊಂಡು ಬರುವಲ್ಲಿ ಸಾಹಸಪೂರ್ಣ ಪ್ರಯತ್ನ ಮಾಡಿದ್ದು ಈಗಿನ ಎನ್ಡಿಎ ಸಕರ್ಾರವೇ. ವಿದೇಶಗಳಲ್ಲಿ ಉಗ್ರಗಾಮಿಗಳ ಕೈಲಿ ಹೀಗೆ ಬಂಧಿತರಾಗಿರುವುದು ಬಲು ಅಸಹ್ಯಕರ ಸಂಗತಿ. 46 ಜನ 23 ದಿನಗಳ ಕಾಲ ಐಸಿಸ್ ಉಗ್ರಗಾಮಿಗಳ ಬಂಧಿಗಳಾಗಿ ಊಟಕ್ಕೂ ಪರದಾಡುತ್ತಾ ಭವಿಷ್ಯವೇನೆಂದರಿಯದೆ ಕಗ್ಗತ್ತಲ ಕೂಪದಲ್ಲಿ ಜೀವಿಸುವುದನ್ನು ಊಹಿಸಲೂ ಸಾಧ್ಯವಿಲ್ಲ. ಭಾರತದ ವಿದೇಶಾಂಗ ಸಚಿವಾಲಯ ಇರಾಕಿನ ಸಕರ್ಾರದೊಂದಿಗೆ ಮತ್ತು ಐಸಿಸ್ ಅನ್ನು ಪ್ರಭಾವಿಸಬಲ್ಲ ಮುಸ್ಲೀಂ ರಾಷ್ಟ್ರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಐಸಿಸ್ನ ಮೇಲೆ ಒತ್ತಡವನ್ನು ಹೇರಿ ನಸರ್ುಗಳನ್ನು ಬಿಡಿಸಿಕೊಂಡು ಬಂದಿದ್ದು ಕ್ರಿಶ್ಚಿಯನ್ನರು ಮರೆತೇ ಹೋಗಿಬಿಟ್ಟರಾ? ಆಮೇಲೆ ಬಂದ ವರದಿಗಳ ಪ್ರಕಾರ ಸ್ವತಃ ಐಸಿಸ್ನ ಜಾಲದೊಂದಿಗೆ ಪರೋಕ್ಷ ಸಂಪರ್ಕವನ್ನು ಏರ್ಪಡಿಸಲು ಭಾರತೀಯ ಸಚಿವಾಲಯ ಪ್ರಯತ್ನ ಪಟ್ಟು ಅದು ಕೈಕೊಟ್ಟರೆ ಅನ್ಯ ನೆಲದಲ್ಲಿಯೇ ಅವರ ಮೇಲೆ ಆಕ್ರಮಣ ಮಾಡಬಹುದಾಗಿರುವಂತಹ ಯೋಜನೆಗಳನ್ನು ರೂಪಿಸಿಕೊಂಡಿತ್ತು. ಕೊನೆಗೂ ಪ್ರಮುಖ ಭಾರತೀಯ ಉದ್ಯಮಿಗಳನ್ನೆಲ್ಲಾ ಈ ಕೆಲಸಕ್ಕೆ ಜೋಡಿಸಿ 46 ಜನರನ್ನು ಸುರಕ್ಷಿತವಾಗಿ ಕೇರಳಕ್ಕೆ ತಂದೊಪ್ಪಿಸಲಾಯಿತು.

ಬಂಗಾಳದ ಹೆಣ್ಣುಮಗಳು ಜುದಿತ್ ಡಿಸೋಜಾ ಆಘಾಖಾನ್ ಫೌಂಡೇಶನ್ನ ಪರವಾಗಿ ಅಫ್ಘಾನಿಸ್ತಾನದಲ್ಲಿ ಕೆಲಸ ಮಾಡುತ್ತಿದ್ದಳು. ಇದ್ದಕ್ಕಿದ್ದಂತೆ ಒಂದು ದಿನ ಅಫ್ಘಾನಿಸ್ತಾನದ ಕಾಬುಲಿನಿಂದ ಭಯೋತ್ಪಾದಕರು ಅವಳನ್ನು ಅಪಹರಿಸಿಕೊಂಡು ಹೋಗಿಬಿಟ್ಟರು. ಭಾರತೀಯ ಸಾರ್ವಭೌಮತೆಗೆ ಇದು ಅವಮಾನಕರ ಸಂಗತಿಯಾಗಿತ್ತು. ತನ್ನ ಪ್ರಜೆಯನ್ನು ಬಿಡಿಸಿಕೊಂಡು ಬರಲೇಬೇಕೆಂಬ ಹಠದಲ್ಲಿದ್ದ ಮೋದಿ ಸಕರ್ಾರ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಜುದಿತ್ಳನ್ನು ಬಿಡಿಸಿಕೊಂಡು ಬರುವಲ್ಲಿ ಬಲು ವಿಶಿಷ್ಟವಾದ ಪ್ರಯತ್ನ ಹಾಕಿದರು. ಅಫ್ಘಾನಿಸ್ತಾನದ ಭಾರತದ ರಾಯಭಾರಿ ಮನ್ಪ್ರೀತ್ ವೋರಾ ಈ ಸಂದರ್ಭದಲ್ಲಿ ಮಾಡಿದ ಪ್ರಯತ್ನ ಒಂದು ಸಿನಿಮಾಕ್ಕೆ ಆಗುವಷ್ಟೇ ಸರಕು. ಇತ್ತ ಜುದಿತ್ಳ ಮನೆಯವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಆಕೆಯನ್ನು ಬಿಡಿಸಿಕೊಂಡು ಬರುವ ಭರವಸೆ ಕೊಟ್ಟಿದ್ದ ಸಕರ್ಾರ 6 ವಾರಗಳ ನಂತರ ಅವಳನ್ನು ಮನೆ ಸೇರಿಸಿದಾಗ ಇಲ್ಲೆಲ್ಲಾ ಸಂಭ್ರಮದ ಹಬ್ಬ. ಜುದಿತ್ಳ ಅಣ್ಣ ಜೆರಾಮ್ ಕೇಂದ್ರ ಸಕರ್ಾರದ ಪ್ರಯತ್ನವನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದರು.

2

ಫಾದರ್ ಅಲೆಕ್ಸಿಸ್ ಪ್ರೇಮಕುಮಾರ್ ಅಫ್ಘಾನಿಸ್ತಾನದ ಹೇರತ್ನಿಂದ ಅಪಹರಣಗೊಂಡಾಗ ಅವರನ್ನು ಬಿಡಿಸಿಕೊಂಡು ಬರುವಲ್ಲಿ ಮೋದಿ ಮಾಡಿದ ಸಾಹಸ ಪೂರ್ಣ ಪ್ರಯತ್ನ ಯಾರಿಗೆ ಗೊತ್ತಿಲ್ಲವಾದರೂ ಅಲೆಕ್ಸಿಸ್ಗೆ ಚೆನ್ನಾಗಿ ಗೊತ್ತಿತ್ತು. ಅಪಹರಣಕಾರರಿಂದ ಮಾನಸಿಕವಾಗಿ ಹಲ್ಲೆಗೊಳಗಾಗಿದ್ದ ಅಲೆಕ್ಸಿಸ್ ದೆಹಲಿ ಏರ್ಪೋಟರ್ಿಗೆ ಕಾಲಿಟ್ಟೊಡನೆ ‘ಭಗವಂತನಿಗೆ ಮೊದಲ ಧನ್ಯವಾದಗಳು, ಆನಂತರ ನನ್ನ ಕೃತಙ್ಞತೆ ಸಲ್ಲುವುದು ಈ ದೇಶದ ಪ್ರಧಾನಿ ನರೇಂದ್ರಮೋದಿಯವರಿಗೇ’ ಎಂದಿದ್ದರು. ಅಪಹರಣದ 8 ತಿಂಗಳಲ್ಲಿ ನರೇಂದ್ರಮೋದಿ ಸ್ವತಃ ಅನೇಕ ರಾಷ್ಟ್ರಗಳ ಪ್ರಧಾನಮಂತ್ರಿಗಳೊಂದಿಗೆ ಮಾತನಾಡಿ ಕೆಲವೊಮ್ಮೆ ಅಪಹರಣಕಾರರ ಬೇಡಿಕೆಗಳನ್ನೂ ಪೂರೈಸಿ ಅಲೆಕ್ಸಿಸ್ರನ್ನು ಬಿಡಿಸಿ ತಂದಿದ್ದರು. ದೇಶದ ಯಾವುದೇ ಚಚರ್ಾದರೂ ಈ ವಿಚಾರವನ್ನು ಕ್ರಿಶ್ಚಿಯನ್ನರಿಗೆ ಹೇಳುತ್ತದೇನು?

ಫಾದರ್ ಟಾಮ್ ಯಮನ್ನಿಂದ ಅಪಹರಣಕ್ಕೊಳಗಾದಾಗ ಅವರನ್ನು ಬಿಡಿಸಿಕೊಂಡು ಬರಲಿಕ್ಕೆ ಒಮನ್ನಿನ ರಾಜನ ಮೂಲಕ ಮಧ್ಯಸ್ಥಿಕೆ ಮಾಡಿಸಿ 18 ತಿಂಗಳ ಪ್ರಯಾಸದ ನಂತರ ಬಿಡಿಸಿಕೊಂಡು ಬಂದದ್ದು ನರೇಂದ್ರಮೋದಿಯವರೇ. ಅಂದು ನರೇಂದ್ರಮೋದಿಯವರ ಪ್ರಯಾಸವನ್ನು ಹತ್ತಿರದಿಂದ ಗಮನಿಸಿದ್ದ ಕ್ಯಾಥೋಲಿಕ್ ಬಿಷಪ್ ಕಾನ್ಫರೆನ್ಸ್ ಆಫ್ ಇಂಡಿಯಾದ ಅಧ್ಯಕ್ಷರು, ಸೈರೋ ಮಲಂಕಾರಾ ಚಚರ್್ನ ಆಚರ್್ ಬಿಷಪ್ಗಳು, ಬಿಷಪ್ ಥಿಯೋಡರ್ ಮಸ್ಕರೆನಾಸ್ ಮುಂತಾದವರೆಲ್ಲಾ ಮುಕ್ತ ಕಂಠದಿಂದ ಹೊಗಳಿದ್ದರು. ಆದರೆ ಅದು ತಾತ್ಕಾಲಿಕವಾಗಿಯಷ್ಟೇ ಉಳಿಯಿತು. ಇದೇ ಚಚರ್ಿನ ಮುಂದಾಳುಗಳು ಗುಜರಾತಿನ ಚುನಾವಣೆಯ ಹೊತ್ತಲ್ಲಿ ಕಾಂಗ್ರೆಸ್ಸನ್ನು ಬೆಂಬಲಿಸಿರೆಂಬ ಸೂಚನೆಯನ್ನೇ ಕ್ರಿಶ್ಚಿಯನ್ನರಿಗೆ ಕೊಟ್ಟುಬಿಟ್ಟರು. ಕನರ್ಾಟಕದಲ್ಲಿ ಅತಿ ಹೆಚ್ಚು ಕ್ರಿಶ್ಚಿಯನ್ನರನ್ನು ಹೊಂದಿರುವ ಚಚರ್ುಗಳು ಕಾಂಗ್ರೆಸ್ಸನ್ನು ಬೆಂಬಲಿಸುವಂತೆ ಕರೆ ನೀಡುತ್ತಿದೆ. ಪ್ರಜ್ಞಾವಂತ ಕ್ರಿಶ್ಚಿಯನ್ನರು ಇದನ್ನೆ ಒಪ್ಪುವಂತೆ ಕಾಣುತ್ತಿರುವುದು ದುದರ್ೈವ. ಮೋದಿಯನ್ನು ಬೆದರು ಬೊಂಬೆಯಾಗಿಸಿ ವೋಟುಗಳಿಸುವ ಕಾಂಗ್ರೆಸ್ಸಿನ ಈ ಹುನ್ನಾರ ಬೌದ್ಧಿಕ ದಿವಾಳಿತನದ ಸೂಚನೆಯೇ ಹೊರತು ಮತ್ತಿನ್ನೇನೂ ಅಲ್ಲ.

3

ಮುಸಲ್ಮಾನರ ಕಥೆಯೂ ಇದಕ್ಕಿಂದ ಭಿನ್ನವಲ್ಲ. ಬಿಜೆಪಿ ಬಂದರೆ ದಂಗೆಗಳೇ ಆಗಿಬಿಡುತ್ತವೆ ಎಂದು ಹೆದರಿಸುತ್ತಾ ವೋಟು ಗಳಿಸುವುದೇ ಕಾಂಗ್ರೆಸ್ಸಿನ ಜಾಯಮಾನ. ಆದರೆ ನರೇಂದ್ರಮೋದಿಯವರು ಬಂದಾಗಿನಿಂದ ದೇಶಾದ್ಯಂತ ಒಂದೇ ಒಂದು ಹಿಂದು-ಮುಸ್ಲೀಂ ದಂಗೆಗಳು ನಡೆದಿಲ್ಲವೆಂಬುದೇ ಕಾಂಗ್ರೆಸ್ಸಿಗೆ ನುಂಗಲಾರದ ಬಿಸಿ ತುಪ್ಪ. ಮಮತಾ ಬ್ಯಾನಜರ್ಿಯ ಬಂಗಾಳದಲ್ಲಿ ದಿನ ಬೆಳಗಾದರೆ ಹಿಂದೂ-ಮುಸ್ಲಿಂ ಗಲಾಟೆಗಳು. ಕೇರಳದಲ್ಲಿ ಹಿಂದೂ-ಮುಸ್ಲೀಂ ಕಗ್ಗೊಲೆಗಳೇ ನಡೆಯುತ್ತಿವೆ. ಕನರ್ಾಟಕದಲ್ಲಿ ಸಿದ್ದರಾಮಯ್ಯನವರ ಮೂಗಿನಡಿಯಲ್ಲಿ 30ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಕೊಲೆಯಾಗಿಹೋಯ್ತು. ಯೋಗಿ ಬಂದಾಗಿನಿಂದ ಉತ್ತರ ಪ್ರದೇಶದಲ್ಲಿ ದಂಗೆಯಿಲ್ಲ. ಮಹಾರಾಷ್ಟ್ರ, ಹರಿಯಾಣ, ಮಧ್ಯಪ್ರದೇಶ, ಗುಜರಾತು, ರಾಜಸ್ಥಾನ ಎಲ್ಲೆಲ್ಲೂ ಎರಡೂ ಸಮಾಜ ಶಾಂತಿಯುತವಾಗಿ ಬದುಕಿದೆ. ಅದರರ್ಥ ಸ್ಪಷ್ಟ. ಕಾಂಗ್ರೆಸ್ಸು ದಂಗೆಗಳನ್ನು ಪ್ರಾಯೋಜಿಸಿಯೇ ಮುಸಲ್ಮಾನರಲ್ಲಿನ ಹೆದರಿಕೆಯನ್ನು ಜೀವಂತವಾಗಿರಿಸುತ್ತದೆ. ಹಿಂದುಗಳ ಹೆದರಿಕೆಯನ್ನು ಅವರ ಮನಸ್ಸಿನೊಳಗಿಟ್ಟೇ ವೋಟು ಗಳಿಸುವ ಅದರ ತಂತ್ರಗಾರಿಕೆ ನೆಹರೂ ಕಾಲದಿಂದಲೂ ನಡೆದುಕೊಂಡು ಬಂದಿದೆ. ಹಾಗೆ ನೋಡಿದರೆ ಮುಸಲ್ಮಾನರಿಗೆ ಅತ್ಯಂತ ಹೆಚ್ಚು ಸವಲತ್ತು ಕೊಟ್ಟಿರೋದೇ ನರೇಂದ್ರಮೋದಿ. ಆದರೆ ಈ ಎಲ್ಲಾ ಸವಲತ್ತುಗಳು ಪ್ರಗತಿಶೀಲವಾದವೇ ಹೊರತು ಗುಲಾಮರಾಗಿಸುವಂಥದ್ದಲ್ಲ. ಹಜ್ ಯಾತ್ರೆಗೆ ನೀಡುತ್ತಿದ್ದ ಸಬ್ಸಿಡಿಯನ್ನು ಪೂರ್ಣ ತಡೆದು ಮುಸಲ್ಮಾನರನ್ನು ಸ್ವಾಭಿಮಾನಿಗಳಾಗಿಸಿದ್ದು ನರೇಂದ್ರಮೋದಿಯೇ. ಇಷ್ಟಕ್ಕೂ ಹಜ್ ಯಾತ್ರೆ ಸ್ವಂತ ಹಣದಲ್ಲಿಯೇ ಮಾಡಬೇಕೆಂಬ ನಿಯಮವೇ ಇದೆ. ಇದನ್ನರಿತ ಮೋದಿ ಹಜ್ ಯಾತ್ರೆಗೆ ಮೀಸಲಿಟ್ಟ ಹಣವನ್ನು ತೆಗೆದು ಮುಸಲ್ಮಾನ ಹೆಣ್ಣುಮಕ್ಕಳ ಅಧ್ಯಯನಕ್ಕೆಂದು ಅದನ್ನು ಉಪಯೋಗಿಸುವ ಆಲೋಚನೆ ಮಾಡಿದರು. ಮುಸ್ಲೀಂ ಹೆಣ್ಣುಮಕ್ಕಳನ್ನು ಭವಿಷ್ಯದಲ್ಲಿ ಸ್ವಾವಲಂಬಿಯಾಗಿಸುವ ಬಲು ಸುಂದರವಾದ ಪ್ರಯತ್ನವಿದು. ಈ ಹೆಣ್ಣುಮಕ್ಕಳನ್ನು ಟ್ರಿಪಲ್ ತಲಾಖಿನಿಂದ ರಕ್ಷಿಸುವ ಪ್ರಯತ್ನ ಮಾಡಿದ್ದು ನರೇಂದ್ರಮೋದಿಯವರೇ. ಮದರಸಾಗಳಲ್ಲಿ ಬರಿಯ ಧಾಮರ್ಿಕ ಶಿಕ್ಷಣ ಕೊಟ್ಟು ಮುಗಿಸುತ್ತಿದ್ದ ಪದ್ಧತಿಯನ್ನು ಪರಿಷ್ಕರಣೆಗೊಳಿಸಿ ಅಲ್ಲಿಯೂ ಗಣಿತ-ವಿಜ್ಞಾನಗಳು ಬೋಧಿಸುವಂತಾಗಬೇಕೆಂಬ ಆಲೋಚನೆಗೆ ನೀರೆರೆದವರು ಮೋದಿಯೇ. ಅವರ ಉದ್ದೇಶ ಮುಸಲ್ಮಾನರನ್ನು ಮುಖ್ಯ ವಾಹಿನಿಗೆ ತಂದು ಅವರನ್ನು ರಾಷ್ಟ್ರದ ಅಭಿವೃದ್ಧಿಯ ಪಾಲುದಾರರನ್ನಾಗಿಸುವುದು. ಕಾಂಗ್ರೆಸ್ಸಿನದ್ದು ಹಾಗಲ್ಲ. ಮುಸಲ್ಮಾನರನ್ನು ಸದಾ ಬೇಡುವ ಸ್ಥಿತಿಯಲ್ಲಿರಿಸುವುದೇ ಅವರ ಮೂಲ ಗುರಿ. ಜಮೀರ್ ಅಹ್ಮದ್ ತನ್ನ ಜನರ ಮುಂದೆ ಮಾತನಾಡುವುದನ್ನು ನೀವು ಕೇಳಬೇಕು. ಅದು ಪ್ರಗತಿಪರ ಚಿಂತನೆಯಂತು ಅಲ್ಲವೇ ಅಲ್ಲ. ಮುಸಲ್ಮಾನರನ್ನು ದಿಕ್ಸೂಚಿ ರಹಿತ ಗತಿ ವಿಹೀನ ಸಮಾಜವಾಗಿ ಮಾಡುವ ಹುನ್ನಾರ. ಕಳೆದ 70 ವರ್ಷಗಳಿಂದ ಮುಸ್ಲೀಮರು ಮತ್ತು ಕ್ರಿಶ್ಚಿಯನ್ನರನ್ನು ಋಣಾತ್ಮಕ ಮತದಾನಕ್ಕೆ ಪ್ರೇರೇಪಿಸುತ್ತಿರುವುದು ಕಾಂಗ್ರೆಸ್ಸೇ. ಗೆಲ್ಲಬೇಕೆಂದು ವೋಟು ಹಾಕುವುದು ಧನಾತ್ಮಕವಾದರೆ ಮತ್ತೊಬ್ಬರನ್ನು ಸೋಲಿಸಬೇಕೆಂದು ವೋಟು ಹಾಕುವುದು ಋಣಾತ್ಮಕ. ಈ ಬಗೆಯ ಮತದಾನ ಪ್ರಗತಿ ಪೂರಕವಲ್ಲ. ಹೀಗಾಗಿಯೇ ಮುಸಲ್ಮಾನ ಸಮಾಜ 70 ವರ್ಷ ಕಳೆದರೂ ಇದ್ದಲ್ಲಿಯೇ ಇದೆ. ಕಾಂಗ್ರೆಸ್ಸು ದಲಿತರನ್ನು ಹಾಗೆಯೇ ಬಳಸಿಕೊಂಡಿದೆ. ಇತ್ತೀಚೆಗೆ ಅವರು ಸ್ವಲ್ಪ ಬುದ್ಧಿವಂತರಾಗುತ್ತಿರುವುದರಿಂದ ಪ್ರಗತಿಯ ಮೆಟ್ಟಿಲನ್ನು ಏರುತ್ತಿದ್ದಾರೆ. ಈ ಬಾರಿ ಸಿದ್ದರಾಮಯ್ಯ ಲಿಂಗಾಯತರನ್ನು ಋಣಾತ್ಮಕ ಮತದಾನಕ್ಕೆ ಪ್ರೇರೇಪಿಸುತ್ತಿದ್ದಾರೆ. ಇಂತ ವಿಭಜಕ ಶಕ್ತಿಗಳಿಂದ ದೂರವನ್ನು ಕಾಯ್ದುಕೊಳ್ಳಲಿಲ್ಲವೆಂದರೆ ರಾಷ್ಟ್ರವನ್ನು ಉಳಿಸಿಕೊಳ್ಳುವುದು ಬಲು ಕಷ್ಟ. ಮೇ 12 ಎಚ್ಚರಿಕೆಯಿಂದ ಮತದಾನ ಮಾಡಬೇಕಾದ ದಿನ. ಬನ್ನಿ ರಾಷ್ಟ್ರವನ್ನು ಗೆಲ್ಲಿಸೋಣ.

ಸಿದ್ದರಾಮಯ್ಯನವರನ್ನು ಕೇಳಲು ಎಷ್ಟೊಂದು ಪ್ರಶ್ನೆಗಳಿವೆ!

ಸಿದ್ದರಾಮಯ್ಯನವರನ್ನು ಕೇಳಲು ಎಷ್ಟೊಂದು ಪ್ರಶ್ನೆಗಳಿವೆ!

ಇಂದು ಸಿದ್ದರಾಮಯ್ಯನವರಿಗೆ ಕೇಳಲು ಜನಸಾಮಾನ್ಯರ ಬಳಿ ಬೆಟ್ಟದಷ್ಟು ಪ್ರಶ್ನೆಗಳಿವೆ. ಕೇಂದ್ರದ ಅಪಾರ ಸಹಕಾರವನ್ನು ಪಡೆದುಕೊಂಡು ಕೇಂದ್ರದ ಎಲ್ಲ ಯೋಜನೆಗಳನ್ನು ತಮ್ಮದೆಂದು ಬಿಂಬಿಸಿಕೊಂಡ ಸಿದ್ದು ರಾಜ್ಯಕ್ಕೆ ಮಾಡಿದ್ದಾದರೂ ಏನು? ಕಾವೇರಿ-ಮಹಾದಾಯಿಗಳ ಸಮಸ್ಯೆ ಬಗೆಹರಿಸಲಿಲ್ಲ. ಬದಲಿಗೆ ಇರುವ ಕೆರೆಗಳನ್ನು ಅಭಿವೃದ್ಧಿ ಪಡಿಸದೇ ಬೆಂಗಳೂರಿನ ಬೆಳ್ಳಂದೂರು ಕೆರೆ ಹೊತ್ತಿಕೊಂಡು ಉರಿಯುವಂತೆ ನೋಡಿಕೊಂಡರು.

2

ಚುನಾವಣೆಯ ಕಣ ದಿನಕಳೆದಂತೆ ಕಾವೇರುತ್ತಿದೆ. ಆದರೆ ಈ ಬಾರಿಯ ಚುನಾವಣೆ ಹಿಂದಿನ ಎಲ್ಲ ಚುನಾವಣೆಗಿಂತಲೂ ಭಿನ್ನವಾಗಿದೆ. ಈ ಬಾರಿ ಎಲ್ಲಿಯೂ ಅಭ್ಯಥರ್ಿಗಳ ಫ್ಲೆಕ್ಸುಗಳ ಭರಾಟೆ ಇಲ್ಲ, ಪ್ಲಾಸ್ಟಿಕ್ ಧ್ವಜಗಳ ಹಾರಾಟವಿಲ್ಲ. ಎಲ್ಲ ಅಭ್ಯಥರ್ಿಗಳು ಸಾಮಾಜಿಕ ಜಾಲತಾಣಗಳ ಮೊರೆ ಹೋಗಬೇಕು ಇಲ್ಲವೇ ಮಾಧ್ಯಮಗಳ ಅವಲಂಬಿಸಬೇಕು. ಹೀಗಾಗಿಯೇ ಪತ್ರಿಕೆ ಟೀವಿಗಳಷ್ಟೇ ವಾಟ್ಸಪ್ ಫೇಸ್ಬುಕ್ಗಳಿಗೂ ಮಹತ್ವ ಬಂದುಬಿಟ್ಟಿದೆ. ರಾಜ್ಯದ ಚುನಾವಣೆಯ ಹಾದಿಯನ್ನು ಗಮನಿಸಿದರೆ ಆರು ತಿಂಗಳಿಂದೀಚೆಗಿನ ಬದಲಾವಣೆಗಳು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಆರು ತಿಂಗಳ ಮುಂಚೆ ಕೇಂಬ್ರಿಡ್ಜ್ ಅನಾಲಿಟಿಕಾದ ಮಾರ್ಗದರ್ಶನದಂತೆ ನಡೆಯುತ್ತಿದ್ದ ಕಾಂಗ್ರೆಸ್ಸು ಗುಜರಾತಿನಲ್ಲಿ ಪಡೆದುಕೊಂಡ ಅಭೂತಪೂರ್ವ ಗೆಲುವಿನಿಂದ ಬೀಗುತ್ತಿತ್ತು. 2018 ರ ಕನರ್ಾಟಕ ಬಿಡಿ 2019 ರ ಲೋಕಸಭೆ ಚುನಾವಣೆಯನ್ನೂ ತಾನೇ ಗೆದ್ದುಬಿಡುವೆನೆಂಬ ಧಿಮಾಕಿನಲ್ಲಿತ್ತು ಅದು. ಆದರೆ ಎಲ್ಲವೂ ತಿರುವು-ಮುರುವಾಯಿತು. ಕೇಂಬ್ರಿಡ್ಜ್ ಅನಾಲಿಟಿಕಾದ ದತ್ತಾಂಶ ಕಳವು ಪ್ರಕರಣ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ ಕಾಂಗ್ರೆಸ್ ಅನಿವಾರ್ಯವಾಗಿ ಒಪ್ಪಂದದಿಂದ ದೂರ ಸರಿಯಬೇಕಾಯ್ತು. ಅಲ್ಲಿಯವರೆಗೂ ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಿರ-ಮಿರ ಮಿಂಚುತ್ತಿದ್ದರು. ಫೇಸ್ಬುಕ್ಕಿನ ಯಾವ ಪೇಜುಗಳನ್ನು ತೆರೆದರೂ, ಯಾವ ವೆಬ್ಸೈಟ್ ತೆರೆದು ಕುಳಿತರೂ, ಮುಖ್ಯಮಂತ್ರಿಗಳ ಗುಣಗಾನದ ಜಾಹಿರಾತು ತುಂಬಿತ್ತು. ಆನಂತರ ಬದಲಾವಣೆಯ ಪರ್ವ ಶುರುವಾಯ್ತು ನೋಡಿ. ಸಿದ್ದರಾಮಯ್ಯನವರ ವಿರುದ್ಧದ ಆಕ್ರೋಶ ಹಳ್ಳಿ-ಹಳ್ಳಿಗಳಲ್ಲೂ ಪ್ರತಿಧ್ವನಿಸಲಾರಂಭಿಸಿತು. ಅಷ್ಟೂ ದಿನ ಅವರು ಹೇಳಿದ ಸುಳ್ಳುಗಳನ್ನು ಬಿಜೆಪಿ ಬಯಲಿಗೆಳೆಯುವುದಿರಲಿ ಜನರೇ ಮಾತನಾಡಿಕೊಳ್ಳಲಾರಂಭಿಸಿದರು. ಪರಿಸ್ಥಿತಿ ಎಲ್ಲಿಯವರೆಗೂ ಕಾಂಗ್ರೆಸ್ಸಿನ ಪಾಲಿಗೆ ವಿಕಟವಾಯಿತೆಂದರೆ ಸ್ವತಃ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಪ್ರಚಾರಕ್ಕೆಂದು ಹೋದಾಗ ಊರಿನ ಜನ ಬಾಗಿಲೇ ತೆರೆಯಲಿಲ್ಲ! ಅಷ್ಟೇ ಅಲ್ಲ. ಇಲ್ಲಿನವರೊಂದಿಗೆ ಆತ್ಮೀಯತೆ ಹೊಂದಿದ್ದೇನೆ ಎಂದು ತೋರಿಸಿಕೊಳ್ಳುವ ಭರದಲ್ಲಿ ಕೈಯಲ್ಲಿ ಚೀಟಿ ಹಿಡಿದು ಅದರಲ್ಲಿರುವ ಹೆಸರುಗಳನ್ನು ಓದಿ ಅವರ ಮೂಲಕ ಕೆಲಸ ಮಾಡಿಸಿಕೊಳ್ಳುವ ನಾಟಕ ಮಾಡಲು ಹೊರಟ ಸಿದ್ದರಾಮಯ್ಯನವರಿಗೆ ಮರಿಗೌಡರು ಕೊಟ್ಟ ತಪರಾಕಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಸಾಮಾಜಿಕ ಜಾಲತಾಣಗಳ ಒಂದು ವಿಶೇಷವೇನೆಂದರೆ ಅದು ಧನಾತ್ಮಕ ಅಂಶಗಳನ್ನು ಹಬ್ಬಿಸಿದಷ್ಟೇ ವೇಗವಾಗಿ ಋಣಾತ್ಮಕ ಅಂಶಗಳನ್ನೂ ಹಬ್ಬಿಸುತ್ತದೆ. ಹಾಗೆ ನೋಡಿದರೆ ನೆಗೆಟಿವ್ ಒಂದು ಕೈ ಮೇಲಾಗಿಯೇ ಹಬ್ಬುತ್ತದೆ. ಚಾಮುಂಡೇಶ್ವರಿಯಲ್ಲಿ ಹುಟ್ಟಿದ ಈ ಆಕ್ರೋಶ ಇಡಿಯ ಕ್ಷೇತ್ರದಲ್ಲಿ, ಅಷ್ಟೇ ಅಲ್ಲದೇ ರಾಜ್ಯಕ್ಕೂ ಬೆಂಕಿಯಾಗಿ ಹಬ್ಬಿರುವುದರಲ್ಲಿ ಅಚ್ಚರಿಯೇ ಇಲ್ಲ. ಅತ್ಯಂತ ಸಾಮಾನ್ಯರೂ ಕೂಡ ಸಿದ್ದರಾಮಯ್ಯನವರನ್ನು ಪ್ರಶ್ನೆ ಕೇಳಲು ತುದಿಗಾಲಲ್ಲಿ ನಿಂತಿದ್ದಾರೆ. ಸಿದ್ದರಾಮಯ್ಯನವರು ಸಿಗಲಿಲ್ಲವೆಂದರೆ ರಾಹುಲ್ರನ್ನೇ ಅಡ್ಡಗಟ್ಟಲು ಇವರು ಸಿದ್ಧ. ಕರಾವಳಿ ಭಾಗದಲ್ಲಿ ಹಿಂದೂಗಳು ನಿರಂತರವಾಗಿ ಕೊಲೆಗೀಡಾಗುತ್ತಿರುವಾಗ ಸಿದ್ದರಾಮಯ್ಯ ಅಧಿಕಾರ ದರ್ಪದಿಂದ ಮಾತನಾಡಿದ್ದರು. ಅವರ ಎಡ-ಬಲದಲ್ಲಿ ಕುಳಿತು ಹಿಂದುತ್ವ ವಿರೋಧಿ ಚಿಂತನೆಗಳನ್ನೇ ಬಿತ್ತುತ್ತಿದ್ದವರ ಮಾತುಗಳನ್ನು ಕೇಳಿ ಸಿದ್ದರಾಮಯ್ಯನವರು ಧಿಮಾಕಿನಿಂದ ಆಡಿದ ಪ್ರತಿಯೊಂದು ಮಾತು ಬಿಸಿ ಮುಟ್ಟಿಸಿದ್ದು ಮಾತ್ರ ರಾಹುಲ್ಗೆ. ಹೊನ್ನಾವರದ ರೋಡ್ಶೋ ವೇಳೆಗೆ ಮೋದಿ ಪರ ಘೋಷಣೆ ಕೂಗಿದ ಸ್ಥಳೀಯರು ರಾಹುಲ್ಗೆ ಭಾಷಣ ಮಾಡುವುದು ಬಿಡಿ ರ್ಯಾಲಿ ನಡೆಸಲೂ ಅವಕಾಶ ಕೊಡಲಿಲ್ಲವೆಂಬುದು ಆಳುವ ಪಕ್ಷಕ್ಕೆ ಸುಲಭ ಗ್ರಾಹ್ಯ ಸಂಗತಿಯಂತೂ ಅಲ್ಲ. ಹಾಗಂತ ಜನರ ಆಕ್ರೋಶ ಇಲ್ಲಿಗೇ ನಿಂತಿತೆಂದು ಭಾವಿಸಬೇಡಿ. ಹಾಸನದ ಅರಕಲಗೂಡಿನಲ್ಲಿ ಶಾಸಕ ಎ.ಮಂಜು ಜನರ ಬಳಿ ಮತ ಕೇಳಲು ಹೋದಾಗ ಹಳ್ಳಿಯೊಂದರಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೇ ಓಡಿ ಹೋದ ಪ್ರಕರಣ ವರದಿಯಾಯ್ತು. ಶಿರಾದಲ್ಲಿ ಕಾನೂನು ಸಚಿವ ಟಿ.ಜಿ ಜಯಚಂದ್ರ ಅಲ್ಲಿನ ವಕೀಲರ ಬಳಿ ಮತ ಕೇಳಲೆಂದು ನಿಂತಾಗ ಆ ವಕೀಲರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡಲಾಗದೇ ತಡಬಡಾಯಿಸಿದ್ದು ಕಣ್ಣಿಗೆ ರಾಚುವಂತಿತ್ತು. ನನಗೂ ಒಂದು ಕನಸಿದೆ ಎಂದು ಪತ್ರಿಕೆಗಳಲ್ಲಿ ಪುಟಗಟ್ಟಲೆ ಜಾಹಿರಾತು ಕೊಟ್ಟ ಸಿದ್ದರಾಮಯ್ಯನವರು ಆ ಮೂಲಕ ಮಂತ್ರಿಗಳನ್ನು ಊರೂರಿಗೆ ತರುಣರೊಂದಿಗೆ ಮಾತನಾಡಲು ಕಳಿಸುವೆನೆಂದು ಭರವಸೆ ಕೊಟ್ಟಿದ್ದರು. ಅವರೇನೋ ಕಳಿಸಿಯಾರು. ಆದರೆ ಹೋಗಿ ಅವರೊಂದಿಗೆ ಮಾತನಾಡಬಲ್ಲ ತಾಕತ್ತು ಸದ್ಯಕ್ಕಂತೂ ಯಾವ ನಾಯಕನಿಗೂ ಉಳಿದಂತಿಲ್ಲ. 5 ವರ್ಷಗಳ ದುರಾಡಳಿತಕ್ಕೆ ಈಗ ಸಿದ್ದರಾಮಯ್ಯ ಬೆಲೆ ತೆರುತ್ತಿದ್ದಾರೆ.

ಅಧಿಕಾರವೆಂದರೇನೆ ಹಾಗೆ. ಅದರ ಅಮಲು ಇಳಿದಾಗ ಎದುರಿಗಿರುವುದ್ಯಾವುದೂ ಕಾಣುವುದಿಲ್ಲ. ಸುತ್ತಲೂ ಇದ್ದವರು ಏನು ಹೇಳುತ್ತಾರೋ ಅದೇ ಸತ್ಯವೆನಿಸುತ್ತದೆ. ಅಧಿಕಾರ ಇರುವಷ್ಟು ದಿನ ಜನರೂ ತಲೆ ಬಾಗಿಯೇ ನಿಂತಿರುತ್ತಾರೆ. ಪ್ರತಿಯೊಬ್ಬರಿಗೂ ತಮ್ಮ ಬದುಕು ಸಹಜವಾಗಿ ಸುಗಮವಾಗಿರಬೇಕೆಂಬುದೇ ಆಸೆ. ಆದರೆ ಅವಕಾಶಕ್ಕಾಗಿ ಅವರು ಕಾಯುತ್ತಿರುತ್ತಾರೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆ ಅಂಥದೊಂದು ಬಂಗಾರದ ಅವಕಾಶವನ್ನು ಸೃಷ್ಟಿಸಿಕೊಡುತ್ತದೆ. ಅದರಲ್ಲೂ ಕೇಂದ್ರದಲ್ಲಿ ಮೋದಿಯಂಥವರು ಅಧಿಕಾರದಲ್ಲಿದ್ದು ಜನ ಸಾಮಾನ್ಯರ ಕೂಗಿಗೆ ಪ್ರತಿಸ್ಪಂದಿಸುವ ಆಡಳಿತವನ್ನು ಕೊಡುವಾಗ ತಾವಂದುಕೊಂಡದ್ದೇ ನಡೆಯಬೇಕೆನ್ನುವ ಸವರ್ಾಧಿಕಾರಿ ಪ್ರವೃತ್ತಿಯ ಸಿದ್ದರಾಮಯ್ಯನಂಥವರನ್ನು ಸಹಿಸುವುದಾದರೂ ಹೇಗೆ ಸಾಧ್ಯ?! ಅದಕ್ಕೆ ಪ್ರತಿರೋಧದ ಕಿಡಿ ಈಗ ಉರಿಯುತ್ತಿರೋದು. ಕೇಂದ್ರದ ಸಕರ್ಾರ ಜನ ಸಾಮಾನ್ಯರ ಸಣ್ಣದೊಂದು ಟ್ವೀಟಿಗೂ ಪ್ರತಿಸ್ಪಂದಿಸುತ್ತಾ, ಶಾಲೆಯ ಹುಡುಗಿಯೊಂದು ಬರೆದ ಪತ್ರಕ್ಕೆ ಅಭಿವೃದ್ಧಿಯ ದಿಕ್ಕನ್ನೇ ಬದಲಾಯಿಸುತ್ತಾ, ಸಮಾಜದ ಕಾಳಜಿಯುಳ್ಳವನೊಬ್ಬ ಆಡಿದ ಮಾತಿಗೆ ಕಾನೂನನ್ನೇ ಬದಲಾಯಿಸುತ್ತಾ, ನಿಜವಾದ ಪ್ರಜಾಪ್ರಭುತ್ವದ ಅನುಭೂತಿಯನ್ನು ಕೊಡುತ್ತಿರುವಾಗ ‘ನಾನು ಹೇಳಿದ್ದನ್ನೆಲ್ಲಾ ಕೇಳಿಕೊಂಡು ಬಿದ್ದಿರಬೇಕು’ ಎಂಬ ಧಾಟಿಯ ಮುಖ್ಯಮಂತ್ರಿಗೆ ಪಾಠ ಕಲಿಸಲು ಜನ ಕಾಯುತ್ತಲೇ ಇರುತ್ತಾರೆ.

3

ಇಂದು ಸಿದ್ದರಾಮಯ್ಯನವರಿಗೆ ಕೇಳಲು ಜನಸಾಮಾನ್ಯರ ಬಳಿ ಬೆಟ್ಟದಷ್ಟು ಪ್ರಶ್ನೆಗಳಿವೆ. ಕೇಂದ್ರದ ಅಪಾರ ಸಹಕಾರವನ್ನು ಪಡೆದುಕೊಂಡು ಕೇಂದ್ರದ ಎಲ್ಲ ಯೋಜನೆಗಳನ್ನು ತಮ್ಮದೆಂದು ಬಿಂಬಿಸಿಕೊಂಡ ಸಿದ್ದು ರಾಜ್ಯಕ್ಕೆ ಮಾಡಿದ್ದಾದರೂ ಏನು? ಕಾವೇರಿ-ಮಹಾದಾಯಿಗಳ ಸಮಸ್ಯೆ ಬಗೆಹರಿಸಲಿಲ್ಲ. ಬದಲಿಗೆ ಇರುವ ಕೆರೆಗಳನ್ನು ಅಭಿವೃದ್ಧಿ ಪಡಿಸದೇ ಬೆಂಗಳೂರಿನ ಬೆಳ್ಳಂದೂರು ಕೆರೆ ಹೊತ್ತಿಕೊಂಡು ಉರಿಯುವಂತೆ ನೋಡಿಕೊಂಡರು. ಬೆಂಗಳೂರನ್ನು ಡ್ರಗ್ಸ್ ರಾಜಧಾನಿಯಾಗಿ ಮಾಡಿಬಿಟ್ಟರು. ಇಂದು ಮುಂಬೈ, ಹೈದರಾಬಾದ್, ಕೇರಳ ತಮಿಳುನಾಡು ಮತ್ತು ಗೋವಾದಿಂದ ಬರುವ ಈ ಮಾದಕದ್ರವ್ಯ ಬೆಂಗಳೂರಿನ ಮೂಲಕವೇ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಸಾಗಿಸಲ್ಪಡುತ್ತಿದೆ. ಅಲ್ಲಿಗೇ ನಿಲ್ಲುವುದಿಲ್ಲ ಬೆಂಗಳೂರಿನ ಸಾಧನೆ. ದೇಶದ ಎರಡನೇ ದೊಡ್ಡ ಕ್ರೈಂ ಸಿಟಿಯಾಗಿ ಬೆಂಗಳೂರು ಬೆಳೆದು ನಿಂತಿದೆ. ಟ್ರಾಫಿಕ್ ಜ್ಯಾಮ್ನ ಸಮಸ್ಯೆಯಂತೂ ಬೆಂಗಳೂರು ಬಿಡಿ ಮಂಗಳೂರು, ಹುಬ್ಬಳ್ಳಿ, ಬೆಳಗಾವಿಗಳಿಗೂ ಹಬ್ಬಿಬಿಟ್ಟಿದೆ. ನಗರಾಭಿವೃದ್ಧಿಗೆ ಸಚಿವರು ಹೆಸರಿಗೆ ಮಾತ್ರ. ಅವರು ಸ್ವಂತ ಅಭಿವೃದ್ಧಿ ಮಾಡಿಕೊಂಡಿದ್ದೇ ಬಂತು. ಕನರ್ಾಟಕದಲ್ಲಿ ಸಿದ್ದರಮಾಯ್ಯನವರ ಐದೇ ಐದು ವರ್ಷದಲ್ಲಿ 871 ಅಪಹರಣಗಳಾದವು, 462 ಲೈಂಗಿಕ ಹಲ್ಲೆ ಅತ್ಯಾಚಾರ ಪ್ರಕರಣಗಳು ದಾಖಲಾದವು. ಕನರ್ಾಟಕದ ರಾಜಧಾನಿ ಬೆಂಗಳೂರಿನಲ್ಲಿ ವಿಬ್ಗಯಾರ್ ಶಾಲೆಯ 6 ವರ್ಷದ ಮಗುವಿನ ಮೇಲೆ ಅತ್ಯಾಚಾರವಾದಾಗಲೇ ಸಿದ್ದು ತಮ್ಮ ದೀರ್ಘ ನಿದ್ದೆಯಿಂದ ಎದ್ದಿದ್ದರೆ ಖಂಡಿತ ನಮ್ಮ ಸ್ಥಿತಿ ಹೀಗಿರುತ್ತಿರಲಿಲ್ಲ. ಇಂದು ಕನರ್ಾಟಕದ ರಸ್ತೆಗಳು ಗಬ್ಬೆದ್ದುಹೋಗಿವೆ, ಒಳಚರಂಡಿ ವ್ಯವಸ್ಥೆ ನಾಶವಾಗಿದೆ. ದೇಶವೆಲ್ಲಾ ದಿನದ 24 ಗಂಟೆಯೂ ಕರೆಂಟ್ ಕಾಣುತ್ತಿದ್ದರೆ ಕನರ್ಾಟಕ ಬಿಡಿ ರಾಜಧಾನಿ ಬೆಂಗಳೂರಿನಲ್ಲೇ ಇಂದಿಗೂ ಪವರ್ ಕಟ್ ಆಗುತ್ತಿದೆ. ರಾಜ್ಯಕ್ಕೆ ದೊಡ್ಡ ಮೊತ್ತದ ಹೂಡಿಕೆಯನ್ನು ತಂದೆನೆಂದು ಬೀಗುವ ಸಕರ್ಾರ ಅಮೇಜಾನ್ ಮೈಕ್ರೊಸಾಫ್ಟ್ಗಳು ಏಕೆ ಪಕ್ಕದ ರಾಜ್ಯಕ್ಕೆ ವಲಸೆ ಹೋದವು ಎಂಬುದನ್ನು ಉತ್ತರಿಸುವಲ್ಲಿ ಸೋತಿದೆ.

ಈಗ ಪ್ರಶ್ನೆ ಕೇಳುವ ಸರದಿ ನಮ್ಮದ್ದು. ಅಕ್ಕ-ಪಕ್ಕದ ರಾಜ್ಯಗಳೆಲ್ಲಾ ಹೊಸ-ಹೊಸ ಕನಸುಗಳೊಂದಿಗೆ ತಮ್ಮ ರಾಜ್ಯವನ್ನು ದೇಶದಲ್ಲೇ ಅಗ್ರಣಿಯಾಗಿಸಲು ಹೊರಟಿರುವಾಗ ನಾವಿನ್ನೂ ಉಚಿತ ಭಾಗ್ಯಗಳನ್ನು ಕೊಡುತ್ತಿದ್ದೇವೆ ಎಂಬುದನ್ನೇ ಹೆಮ್ಮೆಯಿಂದ ಹೇಳಿಕೊಂಡು ತಿರುಗಾಡುತ್ತಿದ್ದೇವೆ. ನಮ್ಮ ವಾಷರ್ಿಕ ಬಜೆಟ್ಟಿನ ಎರಡರಷ್ಟು ಸಾಲವನ್ನೇ ಮಾಡಿ ಉಚಿತ ಕೊಡುಗೆಗಳನ್ನು ಹಂಚುವಂತ ಮತ್ತೊಬ್ಬ ಮುಖ್ಯಮಂತ್ರಿ ಸಿಗುವುದು ಕಷ್ಟ. ಸಿದ್ದರಾಮಯ್ಯನವರಿಗೇನು ಅವರು ಚಾಮುಂಡೇಶ್ವರಿ ಬಾದಾಮಿ ಎರಡು ಕ್ಷೇತ್ರದಲ್ಲಿ ಸೋತರೂ ಅವರ ಮಗ ವರುಣಾದಲ್ಲಿ ಗೆಲ್ಲುವನೆಂಬ ಭರವಸೆಯಿದೆ. ಹಾಗಾದರೆ ಆಳುವ ಅವರ ಪರಂಪರೆ ಮುಂದುವರಿದಂತೆಯೇ. ಅವರ ಮಗ ಮತ್ತೆ ರಾಜ್ಯದ ನೆಪ ಹೇಳಿ ಸಾಲ ಮಾಡುವ ಅವಕಾಶವನ್ನು ಪಡೆದುಕೊಳ್ಳುತ್ತಾನೆ. ಆದರೆ ತೀರಿಸಬೇಕಾದ್ದು ಮಾತ್ರ ನಾನು ಮತ್ತು ನೀವೇ! ಒಂದು ಉಚಿತ ಭಾಗ್ಯವನ್ನು ನಾವ್ಯಾರೂ ಅನುಭವಿಸದೇ ಹೋದರೂ ಅದರ ಹೊರೆಯನ್ನು ಹೊರಬೇಕಾದಂತ ಈ ವಿಕಟ ಪರಿಸ್ಥಿತಿ ಇದೆಯಲ್ಲಾ ಇದು ಸಿದ್ದರಾಮಯ್ಯನವರು ಕೊಟ್ಟಿರುವಂಥ ಬಲುದೊಡ್ಡ ಕೊಡುಗೆ. ನಮ್ಮೆಲ್ಲ ತೆರಿಗೆ ಕಟ್ಟುವವರ ಬದುಕನ್ನು ಮುಂದಿನ ಅನೇಕ ವರ್ಷಗಳ ಕಾಲ ಅಸಹನೀಯಗೊಳಿಸಿದರಲ್ಲ ಈ ಕಾರಣಕ್ಕಾಗಿಯೇ ನಾವೀಗ ಅವರನ್ನು ಪ್ರಶ್ನಿಸಬೇಕಿರೋದು.
ಪ್ರಶ್ನಿಸುವ ಆಸೆ ನನಗೂ ಇದೆ. ಅಧಿಕಾರದಲ್ಲಿದ್ದಾಗ ಕೇಳಿದ ಪ್ರಶ್ನೆಗೆಲ್ಲಾ ಉಡಾಫೆಯ ಉತ್ತರ ಕೊಡುತ್ತಿದ್ದರಲ್ಲಾ ಈಗ ಚುನಾವಣೆಯ ಹೊಸ್ತಿಲಲ್ಲಿ ಹೇಗೆ ಉತ್ತರಿಸುವರೋ ನೋಡಬೇಕಿದೆ. ಕಂಡ-ಕಂಡಲ್ಲಿ ನಿದ್ದೆ ಮಾಡುತ್ತಿದ್ದ ಸಿದ್ದರಾಮಯ್ಯನವರು ಈಗ ನಿದ್ದೆ ಕಳೆದುಕೊಂಡು ಅಲೆದಾಡುತ್ತಿದ್ದಾರೆ. ಏಕೆಂದರೆ ಆರು ತಿಂಗಳ ಹಿಂದಿನ ಸಮೀಕ್ಷೆ ಸಿದ್ದರಾಮಯ್ಯನವರ ಪಾಳಯಕ್ಕೆ 125 ಕ್ಷೇತ್ರಗಳನ್ನು ಖಾತ್ರಿಯಾಗಿಸಿತ್ತು. 20 ದಿನಗಳ ಹಿಂದಿನ ಸಮೀಕ್ಷೆ ಅದನ್ನು 85 ಕ್ಕಿಳಿಸಿದೆ. ಮತ್ತು ಈಗಿನ ಸಮೀಕ್ಷೆಗಳು ಇನ್ನೂ ಭಯಾನಕವಾದ ಸ್ಥಿತಿಯನ್ನು ಹೊರಗೆಡುವುತ್ತಿದೆ. ನರೇಂದ್ರಮೋದಿ ಪ್ರಚಾರಕ್ಕೆ ಆಗಮಿಸುವ ಮುನ್ನವೇ ಈ ರೀತಿಯ ಪರಿಸ್ಥಿತಿಯಾದರೆ ಇನ್ನು ನರೇಂದ್ರ ಮೋದಿಯವರು ಬಂದು ಹೋದ ನಂತರ ಕಾಂಗ್ರೆಸ್ಸಿನ ಸ್ಥಿತಿ ಏನಾಗಬಹುದೆಂದು ಊಹಿಸಿ!

ಅದಕ್ಕೇ ಹೇಳಿದ್ದು ಚುನಾವಣಾ ಕಣ ಈ ಬಾರಿ ಭಿನ್ನವಾಗಿದೆ. ಫಲಿತಾಂಶವೂ ವಿಶೇಷವಾಗಿರಲೇಬೇಕು!!

ಅಧಿಕಾರ ಪಡೆಯಲು ಆಸೀಫಾ ಕೂಡ ಒಂದು ಮೆಟ್ಟಿಲಷ್ಟೇ!

ಅಧಿಕಾರ ಪಡೆಯಲು ಆಸೀಫಾ ಕೂಡ ಒಂದು ಮೆಟ್ಟಿಲಷ್ಟೇ!

ಆಸೀಫಾಳ ಸುದ್ದಿ ಆರಂಭದಲ್ಲಿ ಕಾಂಗ್ರೆಸ್ಸಿಗೆ ಲಾಭದಾಯಕವೆನಿಸಿತ್ತು. ರಾಹುಲ್ ಬೀದಿಗೆ ಬಂದು ಹೋರಾಟ ಶುರು ಹಚ್ಚಿಕೊಂಡುಬಿಟ್ಟಿದ್ದರು. ಆದರೆ ಕಾಲಕ್ರಮದಲ್ಲಿ ಇದು ಹಿಂದೂಗಳ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಎಂದು ಅರಿವಾದೊಡನೆ ಹಿಂದೂಗಳೆಲ್ಲಾ ಒಗ್ಗಟ್ಟಾಗಿಬಿಟ್ಟರಲ್ಲ ಆಮೇಲೆ ರಾಹುಲ್ ನಿಧಾನವಾಗಿ ಹಿಂದಕ್ಕೆ ಬಂದುಬಿಟ್ಟರು. ನೆನಪಿಡಿ. ಇವರ್ಯಾರಿಗೂ ಬೇಕಾಗಿರುವುದು ಅಸೀಫಾಳ ನ್ಯಾಯವಲ್ಲ. 2019ರಲ್ಲಿ ಮೋದಿಯ್ನನೆದುರಿಸಲು ಚುನಾವಣೆಯ ವಸ್ತು ಬೇಕಷ್ಟೇ.

ಇಡಿಯ ದೇಶದಲ್ಲಿ ಅಸೀಫಾಳದ್ದೇ ಸುದ್ದಿ. ಆಕೆಯನ್ನು ಬಲಾತ್ಕಾರಕ್ಕೆ ಒಳಪಡಿಸಿ ಬರ್ಬರವಾಗಿ ಹತ್ಯೆಮಾಡಿದ ದೋಷಿ ಯಾರೇ ಇದ್ದರೂ ಅವರಿಗೆ ಅತ್ಯಂತ ಕಠಿಣವಾದ ಶಿಕ್ಷೆಯಾಗಬೇಕು. ಆದರೆ ಆ ನೆಪದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ನಿರಪರಾಧಿಗಳನ್ನೆಲ್ಲಾ ಒಳ ತಳ್ಳುವುದು, ಹಿಂಸಿಸುವುದು ಇವೆಲ್ಲವನ್ನೂ ಒಪ್ಪುವುದು ಸಾಧ್ಯವೇ ಇಲ್ಲ. ಬೇರೆ ಯಾವ ಅತ್ಯಾಚಾರಗಳಿಗೂ ಬೀದಿಗೆ ಬರದ ಕೆಲವು ಪತ್ರಕರ್ತರು, ಬುದ್ಧಿಜೀವಿಗಳು, ಸಿನಿಮಾ ನಟ-ನಟಿಯರು ಈ ವಿಚಾರಕ್ಕೆ ಮಾತ್ರ ಬೀದಿಗೆ ಧುಮುಕಿದಾಗಲೇ ಅಂತಹುದೊಂದು ಅನುಮಾನ ಸೃಷ್ಟಿಯಾಗಿತ್ತು. ಸದ್ಯಕ್ಕೆ ವಿಚಾರಣೆ ನಡೆಯಬೇಕಾಗಿರುವುದು ಇದರದ್ದೇ.

4

ಘಟನೆ ನಡೆದಿದ್ದರೂ ಸುಳ್ಳಾದರೂ ಅದರ ಹಿಂದೆ ಇರುವುದು ಜಮ್ಮು-ಕಾಶ್ಮೀರದಲ್ಲಿ ಹರಡಿಕೊಂಡಿರುವ ಬಕವರ್ಾಲಾ ಜನಾಂಗದ್ದೇ ಪ್ರಮುಖ ಪಾತ್ರ. ಬಕವರ್ಾಲಾಗಳು ಗುಜ್ಜರ್ಗಳೆಂಬ ದೊಡ್ಡ ಸಮುದಾಯದ ಪುಟ್ಟ ಅಂಗ. ಇವರು ದನ-ಕುರಿಗಳನ್ನು ಮೇಯಿಸುತ್ತಾ ಊರಿಂದ ಊರಿಗೆ ಹೋಗುವ ಅಲೆಮಾರಿಗಳು. ಈ ಗುಜ್ಜರ್ಗಳು ಪಂಜಾಬ್ನಲ್ಲಿ ಸಿಖ್ಖರಾಗಿಯೂ, ಹರಿಯಾಣಾದಲ್ಲಿ ಹಿಂದೂಗಳಾಗಿಯೂ, ಜಮ್ಮು-ಕಾಶ್ಮೀರದಲ್ಲಿ ಮುಸಲ್ಮಾನರಾಗಿಯೂ ಇದ್ದಾರೆ. ದೇಶದ ಕುರಿತ ಇವರ ಅಖಂಡ ಭಕ್ತಿ ಯಾರೂ ಅಲ್ಲಗಳೆಯುವಂತೆಯೇ ಇಲ್ಲ. ಕಳೆದ ನಾಲ್ಕಾರು ದಶಕಗಳಿಂದ ಕಥುವಾದಲ್ಲೂ ಇವರು ಎಲ್ಲರೊಂದಿಗೆ ಬೆರೆತೇ ಇದ್ದಾರೆ. ಇವರನ್ನು ಕಾಡಿನಿಂದ ಹೊರದಬ್ಬುವ ನಾಡಿನಲ್ಲಿ ಎಲ್ಲರೊಂದಿಗೆ ಏಕರಸವಾಗಿಸುವ ಪ್ರಯತ್ನ ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿದ್ದು ಈ ಕುರಿತಾಗಿ ಅಲ್ಲಲ್ಲಿ ಸಾಕಷ್ಟು ಗಲಾಟೆಗಳೇ ಆಗಿವೆ. ಇಡಿಯ ಪ್ರಕರಣ ಜಟಿಲವಾಗೋದು ಈ ಕಾರಣಕ್ಕಾಗಿಯೇ. ಅವರನ್ನು ಕಾಡಿನಿಂದೆಬ್ಬಿಸಿದರೆ, ಅವರಿಗಾಗಿಯೇ ಪ್ರತ್ಯೇಕ ಸ್ಥಳ ಮಾಡಿಕೊಟ್ಟರೆ ಜಮ್ಮುವಿನ ಜನಸಂಖ್ಯಾಂಕ ಬದಲಾಗುವ ಭಯ ಹಿಂದೂಗಳಿಗೆ ಇದ್ದೇ ಇದೆ. ಅದಕ್ಕೆ ಪ್ರತಿಯಾಗಿ ಈ ಬಕವರ್ಾಲಾಗಳು ನಾಡಿಗೆ ಬಂದು ಹಿಂದೂಗಳೊಂದಿಗೆ ಸಮರಸವಾಗಿ ಬೆರೆತುಬಿಟ್ಟರೆ ಹುರಿಯತ್ನ ಪ್ರತ್ಯೇಕತಾವಾದಿಗಳಿಗೂ ಅಷ್ಟೇ ತೊಂದರೆಯಿದೆ. ಹೀಗಾಗಿ ಈ ಘಟನೆಯ ಆಯಾಮಗಳು ಆಳಕ್ಕೆ ಸಿಕ್ಕುಹಾಕಿಕೊಂಡಿರುವಂಥದ್ದು.

ಕುದುರೆ ಮೇಯಿಸಿಕೊಂಡು ಬಂದ ಆಸೀಫಾಳನ್ನು ಅಪಹರಿಸಿಕೊಂಡು ಹೋಗಿ ಆಕೆಯನ್ನು ದನದ ಕೊಟ್ಟಿಗೆಯಲ್ಲಿ ಏಳು ದಿನಗಳ ಕಾಲ ಕೂಡಿ ಹಾಕಿ ಕೊನೆಗೊಮ್ಮೆ ಬಲಾತ್ಕರಿಸಲು ಪ್ರಯತ್ನಿಸಿ ಆಕೆಯ ಕೊಲೆಗೈದವನು ಒಬ್ಬ ಅಪ್ರಾಪ್ತ ವಯಸ್ಕ ಎನ್ನುವುದು ಪೊಲೀಸರ ಆರಂಭಿಕ ವಿಚಾರಣೆಯ ಪ್ರತಿಫಲವಾಗಿತ್ತು. ಆಮೇಲೆಯೇ ಹುರಿಯತ್ ಬೆಂಬಲಿಗ ತಯ್ಯಬ್ ಹುಸೇನ್ ಜನರನ್ನು ಭಡಕಾಯಿಸಿ ಈ ಇಡಿಯ ಕೇಸನ್ನು ‘ಕಶ್ಮೀರದ’ ಕ್ರೈಂ ಬ್ರಾಂಚ್ಗೆ ವರ್ಗವಾಗುವಂತೆ ನೋಡಿಕೊಂಡ. ಅಲ್ಲಿಯವರೆಗೂ ಸಿಬಿಐ ಈ ಇಡೀ ಪ್ರಕರಣವನ್ನು ಕೈಗೆತ್ತಿಕೊಳ್ಳಬೇಕೆಂದು ವಾದಿಸುತ್ತಿದ್ದ ಬಕವರ್ಾಲಾಗಳನ್ನು ಎತ್ತಿಕಟ್ಟಿದ ಈ ತಯ್ಯಬ್ ಹುಸೇನ್ ಮೆಹಬೂಬಾ ಮುಫ್ತಿಯ ಮೇಲೆ ಒತ್ತಡ ತಂದು ಇಡಿಯ ಕೇಸು ಕಶ್ಮೀರದವರು ವಿಚಾರಣೆ ಮಾಡುವಂತೆ ನೋಡಿಕೊಂಡ.

2

ಕೇಸು ಬಲು ಬೇಗ ಜಾತಿಯ ರಂಗು ಪಡೆದುಕೊಂಡಿತು. ಇಡಿಯ ಚಾಜರ್್ಶೀಟ್ನಲ್ಲಿ ಅತ್ಯಾಚಾರಕ್ಕೆ ಒಳಗಾದವಳು ಮುಸ್ಲೀಂ, ಅತ್ಯಾಚಾರಗೈದವರು ಹಿಂದೂಗಳು ಮತ್ತು ಅತ್ಯಾಚಾರ ನಡೆಸಿದ ಸ್ಥಳ ದೇವಿಸ್ಥಾನ ಎಂಬುದನ್ನು ಜೋರಾಗಿಯೇ ಬಿಂಬಿಸಲಾಯ್ತು. ಆಗ ಸ್ಮಶಾನದಲ್ಲಿ ಅರ್ಧ ರಾತ್ರಿಯಲ್ಲಿಯೇ ಎದ್ದೆದ್ದು ಕುಣಿದಾಡುವ ದೆವ್ವಗಳಂತೆ ಒಂದಷ್ಟು ಪತ್ರಕರ್ತರು, ಸಿನಿಮಾ ತಾರೆಯರು ನಡು ಬೀದಿಯಲ್ಲಿ ಕುಣಿದಾಡತೊಡಗಿದರು. ಹಿಂದೂಗಳನ್ನು ಮಾನಸಿಕವಾಗಿ ಬಡಿದು ಹಾಕಿಬಿಡುವ ಸಮರ್ಥವಾದ ಸಂದರ್ಭವಿದೆಂಬುದು ಅವರಿಗೆ ಅನಿಸಿತು. ಹೀಗಾಗಿಯೇ ಕಾನೂನನ್ನು ಮೀರಿ ಆಸೀಫಾಳ ಚಿತ್ರವನ್ನು, ಆಕೆಯ ಹೆಸರನ್ನು, ಆಕೆಯನ್ನು ಬಲಾತ್ಕಾರಗೊಳಿಸಿದ ಅಪ್ರಾಪ್ತ ವಯಸ್ಕನ ಹೆಸರನ್ನು ಮುಲಾಜಿಲ್ಲದೇ ಹಬ್ಬಿಸಿದರು. ದೆಹಲಿಯಲ್ಲಿ 2012 ರಲ್ಲಿ ನಡೆದ ನಿರ್ಭಯಾ ಬಲಾತ್ಕಾರದ ಕೇಸು ಎಲ್ಲರಿಗೂ ತಿಳಿದಿರುವಂಥದ್ದೇ. ಆದರೆ ಅಲ್ಲಿ ಬಲಾತ್ಕಾರಕ್ಕೊಳಗಾದವಳ ಹೆಸರು, ಫೋಟೋ ಮತ್ತು ಆಕೆಯನ್ನು ಬಲಾತ್ಕರಿಸಿದ ಅಪ್ರಾಪ್ತ ವಯಸ್ಕನ ಹೆಸರು ಫೋಟೋಗಳ್ಯಾವುವೂ ಬೆಳಕಿಗೆ ಬರಲೇ ಇಲ್ಲ. ಕಾರಣ ಸ್ಪಷ್ಟ. ಅಲ್ಲಿ ಬಲಾತ್ಕಾರಕ್ಕೊಳಗಾದವಳು ಹಿಂದೂ ಮತ್ತು ಆಕೆಯ ಯೋನಿಯೊಳಗೆ ಕಬ್ಬಿಣದ ರಾಡನ್ನು ತುರುಕಿ ಮೂತ್ರಕೋಶವೇ ಹೊರ ಬರುವಂತೆ ಬರ್ಬರವಾಗಿ ನಡೆದುಕೊಂಡವ ಮುಸಲ್ಮಾನನಾಗಿದ್ದ. ಅವನ ಹೆಸರನ್ನು ಹೇಳುವುದು ಸಮಾಜದ ಸ್ವಾಸ್ಥ್ಯವನ್ನು ಕದಡಿದಂತೆಂದು ನಂಬಿದ, ಒಪ್ಪಿದ ಪತ್ರಕರ್ತರು ಅವರೆಲ್ಲರ ಗುರುತುಗಳನ್ನು ಮುಚ್ಚಿಟ್ಟರು. ಆದರೆ ಆಸೀಫಾಳ ವಿಚಾರದಲ್ಲಿ ಮಾತ್ರ ಅದನ್ನು ಬೇಕಂತಲೇ ಹೊರಗೆವಡಲಾಯ್ತು. ಸಾಗರಿಕಾ, ಬಖರ್ಾ, ರಾಜ್ದೀಪ್, ಶೀಲಾ ರಶೀದ್ ಇವರೇ ಮೊದಲಾದ ಎಡಚ ಗ್ಯಾಂಗುಗಳಿಗೆ ಆಸೀಫಾ ಈಗ ಬಲಾತ್ಕಾರಕ್ಕೊಳಗಾದ ಹೆಣ್ಣುಮಗಳಲ್ಲ. ಬದಲಿಗೆ ಹಿಂದೂಗಳನ್ನು ಹಣಿಯಲು ಒಂದು ವಸ್ತುವಾಗಿದ್ದಳಷ್ಟೇ. ಯಾವ ನಟಿಯರ ಹೆಸರುಗಳೂ ಬಾಯಿಗೆ ಬರುವುದಿಲ್ಲವೋ, ಅವರ ಒಂದು ಸಿನಿಮಾ ಕೂಡ ಬಾಕ್ಸ್ ಆಫೀಸಿನಲ್ಲಿ ಯಶಸ್ಸು ಸಾಧಿಸಿಲ್ಲವೋ ಅಂಥ ನಟಿಮಣಿಯರೆಲ್ಲಾ ಕೈಯಲ್ಲಿ ‘ನಾನು ಹಿಂದೂಸ್ಥಾನಿ ನನಗೆ ಅವಮಾನವಾಗಿದೆ’ ಎಂದು ಕಾಡರ್ು ಹಿಡಿದು ಬೀದಿಗೆ ಬಂದು ನಿಂತರು. ಸ್ವರ ಭಾಸ್ಕರ ಎಂಬ ನಟಿಮಣಿಯಂತೂ ‘ನಾನು ಯೋನಿಗೆ ಸೀಮಿತಳಾಗಿಬಿಟ್ಟಿದ್ದೇನೆ ಎನಿಸಿದೆ’ ಎಂದು ಅನುಕಂಪಗಿಟ್ಟಿಸುವ ಪ್ರಯತ್ನ ಮಾಡಿದಳು. ಕರೀನಾ ಅಲಿ ಖಾನ್ ತನ್ನ ಮಗನಿಗೆ ತೈಮೂರ್ ಎಂದು ಹೆಸರಿಡುವಾಗ ಹೆಮ್ಮೆಯಿಂದ ಸಾಹಸಿ ಎಂಬರ್ಥದ ಅದೇ ಹೆಸರನ್ನಿಡುತ್ತೇನೆಂದು ಕೂಗಾಡಿದ್ದಳು. ಆದರೆ ಇದೇ ತೈಮೂರ್ ಲಕ್ಷಾಂತರ ಹಿಂದೂಗಳ ಮಾರಣ ಹೋಮ ಮಾಡಿದವ, ಸಾವಿರಾರ ಹೆಣ್ಣುಮಕ್ಕಳ ಬರ್ಬರವಾಗಿ ಅತ್ಯಾಚಾರಕ್ಕೊಳಪಡಿಸಿದವ ಎಂಬುದು ಗೊತ್ತಿದ್ದೂ ಆಕೆ ತನ್ನ ನಿರ್ಣಯಕ್ಕೆ ಅಚಲವಾಗಿದ್ದಳು. ಅದೇ ಕರೀನಾ ಈಗ ತಾನು ಹಿಂದೂಸ್ಥಾನಿಯಾಗಿರುವುದಕ್ಕೆ ಅವಮಾನವಾಗುತ್ತಿದೆ ಎಂದಿದ್ದಳು. ಅನೀಲ್ ಕಪೂರ್ನ ಮಗಳು ಸೋನಂ ಕಪೂರ್ ತನ್ನ ತಂದೆ ಹಿಂದೊಮ್ಮೆ ಬಲಾತ್ಕಾರದ ಆರೋಪ ಹೊತ್ತಿದ್ದ ಶೈನೀ ಅಹೂಜಾನನ್ನು ಬೆಂಬಲಿಸಿ ಶೂಟಿಂಗ್ನ ಸಂದರ್ಭದಲ್ಲಿ ಅವನಿಗೆ ಯಾರಿಂದಲೂ ಅವಮಾನವಾಗದಂತೆ ರಕ್ಷಣೆಯನ್ನೂ ಕೊಟ್ಟಿದ್ದನ್ನು ಮರೆತು ಈಗ ತಾನು ಪೋಸ್ಟರ್ ಹಿಡಿದು ಬೀದಿಗೆ ಬಂದು ನಿಂತಿದ್ದಳು. ಈ ನಟಿ ಮಣಿಯರಿಗೆ ಸಾಕಷ್ಟು ಸಿನಿಮಾ ಆಫರ್ಗಳು ಇಲ್ಲ ಮತ್ತು ಅವರು ನಟಿಸಿದ ಚಿತ್ರಗಳು ಭಾರಿ ಸುದ್ದಿಯನ್ನೂ ಮಾಡುವುದಿಲ್ಲ ಹೀಗಾಗಿ ಅವರು ಇಂಥ ಪ್ರತಿಭಟನೆಗಳಿಗೆ ಬಂದು ಕಳೆದುಕೊಳ್ಳುವುದೇನೂ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸ್ವಲ್ಪ ಹೆಸರು ಮಾಡಿಕೊಳ್ಳಬಹುದಷ್ಟೇ. ಇಂಥ ಘಟನೆಗಳಲ್ಲಿ ಅನವಶ್ಯಕವಾಗಿ ಮೂಗು ತೂರಿಸಿದ ಶಾರುಖ್ಖಾನ್ ಅಮೀರ್ಖಾನರು ವೃತ್ತಿ ಬದುಕಿನಲ್ಲಾದ ಹೊಡೆತಗಳಿಂದ ಸಾಕಷ್ಟು ಪಾಠ ಕಲಿತಿದ್ದಾರೆ. ಹೀಗಾಗಿಯೇ ಅವರ್ಯಾರೂ ಈ ಬಾರಿ ಇಂಥ ಚೀಪ್ ಗಿಮಿಕ್ಗಳಿಗೆ ಮೊರೆ ಹೋಗಲಿಲ್ಲ.

ಬಿಡಿ. ನಾವು ಅರಿತುಕೊಳ್ಳಬೇಕಾದ್ದು ಬಹಳಷ್ಟಿದೆ. ಪ್ರತಿ ಬಾರಿ ಒಂದು ಮಹತ್ವದ ಚುನಾವಣೆ ಬಂದಾಗಲೆಲ್ಲಾ ಇವರು ಇಂಥ ಸುದ್ದಿಯೊಂದನ್ನು ಹೊತ್ತುಕೊಂಡು ಮುಂದೆ ಬಂದು ನಿಂತುಬಿಡುತ್ತಾರೆ. ಹಿಂದೂಗಳು ಒಟ್ಟಾಗುವುದನ್ನು ತಡೆಯಬೇಕೆಂಬ ಹಠ ಅವರಿಗೆ. ಬಿಹಾರದ ಚುನಾವಣೆಗೂ ಮುನ್ನ ಅಸಹಿಷ್ಣುತೆ ಎಂಬ ನಾಟಕ ಮಾಡಿದ ಈ ಅಯೋಗ್ಯರು ದನದ ಮಾಂಸ ಇಟ್ಟುಕೊಂಡದ್ದಕ್ಕೆ ಹಿಂದೂಗಳು ಮುಸಲ್ಮಾನರನ್ನು ಕೊಲ್ಲುತ್ತಾರೆಂದು ಪುಕಾರು ಹಬ್ಬಿಸಿಬಿಟ್ಟಿದ್ದರು. ಒಂದು ಕ್ಷಣ ನಾವುಗಳೂ ನಂಬಿಬಿಟ್ಟಿದ್ದೆವು. ಆದರೆ ಅವರು ಹೇಳಿದ್ದೆಲ್ಲಾ ಸುಳ್ಳೆಂದು ಒಂದೊಂದೇ ಘಟನೆಗಳು ಈಗ ಬೆಳಕಿಗೆ ಬರುತ್ತಿವೆ. ಹರಿಯಾಣಾದ ರೈಲಿನಲ್ಲಿ ಜುನೈದ್ ಎಂಬ ಮುಸಲ್ಮಾನ ತರುಣನ ಹತ್ಯೆಯಾಯಿತಲ್ಲ. ಆತ ತೀರಿಕೊಂಡೊಡನೆ ಆತನ ಕೈಯಲ್ಲಿ ದನದ ಮಾಂಸ ಇದ್ದುದರಿಂದಲೇ ಕೊಲ್ಲಲಾಯ್ತೆಂದು ಶಬಾನಾ ಆಜ್ಮಿ ನಂದಿತಾ ದಾಸ್ರೆಲ್ಲಾ ಬೀದಿಗೆ ಬಂದು ನಾಟ್ ಇನ್ ಮೈ ನೇಮ್ ಹೋರಾಟ ಸಂಘಟಿಸಿ ದೊಡ್ಡ ಕೂಗೆಬ್ಬಿಸಿಬಿಟ್ಟಿದ್ದವು. ಬೆಂಗಳೂರಿನ ಟೌನ್ಹಾಲಿನ ಮುಂದೆಯೂ ಪ್ರತಿಭಟನೆಯಾಗಿತ್ತು. ಮೊನ್ನೆ ಆ ಘಟನೆಯ ವಿಚಾರಣೆ ನಡೆಸಿದ ಕೋಟರ್ು ಆ ಘಟನೆಗೂ ಮತ್ತು ದನದ ಮಾಂಸಕ್ಕೂ ಸಂಬಂಧವೇ ಇಲ್ಲ ಎಂದು ತೀಪರ್ುಕೊಟ್ಟಿದೆ. ಅಂದು ಹಿಂದೂಗಳಿಗೆ ಮಾಡಿದ್ದ ಅವಮಾನಕ್ಕೆ ಇವರೆಲ್ಲಾ ಈಗ ಹಿಂದೂಗಳ ಕ್ಷಮೆ ಕೇಳುವರೇನು? ದೆಹಲಿಯಲ್ಲಿ ಹೋಳಿಯ ಹೊತ್ತಲ್ಲಿ ವೀರ್ಯ ತುಂಬಿದ ಬಲೂನುಗಳನ್ನು ಹಿಂದೂಗಳು ಹೆಣ್ಣುಮಕ್ಕಳ ಮೇಲೆ ಎಸೆಯುತ್ತಿದ್ದಾರೆಂಬ ಪ್ರತಿಭಟನೆ ಮಾಡಿದರಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಗಳ ಮನೋಬಲವನ್ನು ಕುಗ್ಗಿಸುವ ಈ ಸುಳ್ಳು ಸುದ್ದಿಯನ್ನು ವ್ಯಾಪಕವಾಗಿ ಪ್ರಚಾರ ಮಾಡಿದರಲ್ಲ ಈಗ ಆ ಬಲೂನಿನಲ್ಲಿ ವೀರ್ಯದ ಅಂಶವೇ ಇರಲಿಲ್ಲ ಎಂಬ ವರದಿ ಮತ್ತು ನ್ಯಾಯಾಲಯದ ನಿರ್ಣಯ ಹೊರಬಂದಿದೆ. ಸುಳ್ಳು ಸುದ್ದಿ ಹೊರಡಿಸಿದವರೆಲ್ಲಾ ಎಲ್ಲಿ ಅಡಗಿದ್ದಾರೆ ಈಗ? ಒಂದೆರಡಲ್ಲ ಈ ಅಯೋಗ್ಯರು ಕಳೆದ 70 ವರ್ಷಗಳಿಂದ ಸುಳ್ಳುಗಳನ್ನೇ ಪೋಣಿಸಿಕೊಂಡು ಬಂದಿದ್ದಾರೆ.

ಆದರೆ ಈಗ ಆಗಿರುವ ಬದಲಾವಣೆ ಒಂದೇ. ಸಾಮಾಜಿಕ ಜಾಲತಾಣಗಳು ಚುರುಕಾಗಿರುವುದರಿಂದ ಇವರು ಹಬ್ಬಿಸುತ್ತಿರುವ ಸುಳ್ಳುಗಳನ್ನೆಲ್ಲಾ ಸೂಕ್ತ ತಥ್ಯದೊಂದಿಗೆ ಹೊಡೆದು ಬಿಸಾಡಲಾಗುತ್ತಿದೆ. ಹೀಗಾಗಿಯೇ ಹಿಂದೂಗಳು ಹಿಂದೆಂದಿಗಿಂತಲೂ ಏಕವಾಗಿ ನಿಂತಿದ್ದಾರೆ. ಅದೇ ಎಡಪಂಥೀಯರಿಗೆ ಮತ್ತು ಇವರ ಎಲ್ಲಾ ಹೋರಾಟಗಳಿಗೂ ಎಲ್ಲ ಬಗೆಯ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ನೀಡುತ್ತಿರುವ ಕಾಂಗ್ರೆಸ್ಸಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.

5

ಆಸೀಫಾಳ ಸುದ್ದಿ ಆರಂಭದಲ್ಲಿ ಕಾಂಗ್ರೆಸ್ಸಿಗೆ ಲಾಭದಾಯಕವೆನಿಸಿತ್ತು. ರಾಹುಲ್ ಬೀದಿಗೆ ಬಂದು ಹೋರಾಟ ಶುರು ಹಚ್ಚಿಕೊಂಡುಬಿಟ್ಟಿದ್ದರು. ಆದರೆ ಕಾಲಕ್ರಮದಲ್ಲಿ ಇದು ಹಿಂದೂಗಳ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಎಂದು ಅರಿವಾದೊಡನೆ ಹಿಂದೂಗಳೆಲ್ಲಾ ಒಗ್ಗಟ್ಟಾಗಿಬಿಟ್ಟರಲ್ಲ ಆಮೇಲೆ ರಾಹುಲ್ ನಿಧಾನವಾಗಿ ಹಿಂದಕ್ಕೆ ಬಂದುಬಿಟ್ಟರು. ನೆನಪಿಡಿ. ಇವರ್ಯಾರಿಗೂ ಬೇಕಾಗಿರುವುದು ಅಸೀಫಾಳ ನ್ಯಾಯವಲ್ಲ. 2019ರಲ್ಲಿ ಮೋದಿಯ್ನನೆದುರಿಸಲು ಚುನಾವಣೆಯ ವಸ್ತು ಬೇಕಷ್ಟೇ. ಯಾರು ಕೈ ಬಿಟ್ಟರೂ ಚಿಂತೆಯಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಿ ಆಸೀಫಾಳಿಗೆ ನ್ಯಾಯ ದೊರಕುವವರೆಗೂ ನಾವು ಹೋರಾಟ ಮಾಡೋಣ. ಅದು ಆಸೀಫಾಳಿಗೆ ಮಾತ್ರವಲ್ಲ ಬಾಗಲಕೋಟೆಯಲ್ಲಿ ಮೌಲಾನಾ ಒಬ್ಬರಿಂದ ಅತ್ಯಾಚಾರಕ್ಕೊಳಗಾದ 8 ವರ್ಷದ ಬಾಲಕಿಗೂ, ಬಿಹಾರದಲ್ಲಿ 40 ವರ್ಷದ ಮೊಹಮ್ಮದ್ ಮಿರಾಜ್ನಿಂದ ಅತ್ಯಾಚಾರಕ್ಕೊಳಗಾದ 11 ವರ್ಷದ ಹೆಣ್ಣುಮಗುವಿಗೂ, ಗುಜರಾತ್ನಲ್ಲಿ ಗುರುತೇ ಸಿಗದೇ ದೇಹದಾದ್ಯಂತ 80 ಗಾಯಗಳನ್ನು ಮಾಡಿಸಿಕೊಂಡು ಅತ್ಯಾಚಾರಕ್ಕೊಳಗಾಗಿ ಪ್ರಾಣ ಬಿಟ್ಟಿರುವ 8 ವರ್ಷದ ಮಗುವಿಗೂ ನ್ಯಾಯ ಸಿಗಬೇಕು. ನಾವು ಅತ್ಯಾಚಾರಕ್ಕೊಳಗಾದವಳ ಮತ್ತು ಅತ್ಯಾಚಾರಿಯ ಜಾತಿ-ಮತಗಳನ್ನು ನೋಡಿ ಹೋರಾಟ ಮಾಡುವುದು ಬೇಡ. ಬದಲಿಗೆ ಭಾರತವನ್ನು ಅತ್ಯಾಚಾರ ಮುಕ್ತ ರಾಷ್ಟ್ರ ಮಾಡಲಿಕ್ಕಾಗಿಯೇ ಸಂಘಟಿತರಾಗೋಣ.

ಬೆಂಕಿ ಹಚ್ಚಿ ಕಾವೇರಿಸುವುದಲ್ಲ, ಕಸ ತೆಗೆದು ತಂಪು ಮಾಡಬೇಕಿದೆ!

ಬೆಂಕಿ ಹಚ್ಚಿ ಕಾವೇರಿಸುವುದಲ್ಲ, ಕಸ ತೆಗೆದು ತಂಪು ಮಾಡಬೇಕಿದೆ!

ಗ್ರಾಮದ ಅಷ್ಟೂ ಕೊಳಚೆ ನೀರು, ಗ್ಯಾರೇಜುಗಳಿಂದ ಹೊರಬರುವ ತೈಲ ಮಿಶ್ರಿತ ತ್ಯಾಜ್ಯ ಕಾವೇರಿಯಲ್ಲಿ ಸೇರುತ್ತದೆ. ಜೊತೆಗೆ ಗ್ರಾಮಸ್ಥರು ಹೇಳುವಂತೆ ಕಾಫಿ ಬೀಜವನ್ನು ತೊಳೆದ ಕಪ್ಪು ನೀರು ಕೂಡ ಇದೇ ನದಿಯನ್ನು ಸೇರುತ್ತದೆ. ಅಷ್ಟಲ್ಲದೇ ಮಾಂಸ ಉದ್ಯಮಕ್ಕೆ ಹೆಸರಾದ ಈ ಎರಡೂ ಹಳ್ಳಿಗಳಿಂದ ಉತ್ಪಾದನೆಗೊಳ್ಳುವ ಅಷ್ಟೂ ತ್ಯಾಜ್ಯ ನದಿಗೆ ಆಹಾರ. ಮೀನಿನಿಂದ ಹಿಡಿದು ದನದವರೆಗಿನ ಎಲ್ಲ ಮಾಂಸದ ಅವಶೇಷಗಳೂ ಈ ಭಾಗದ ಕಾವೇರಿಯಲ್ಲಿ ನಿಮಗೆ ಕಂಡರೆ ಅಚ್ಚರಿ ಪಡಬೇಕಿಲ್ಲ!

ಕಾವೇರಿಗಾಗಿ ಯಾವ ಕದನ ಶುರುವಾಗತ್ತೋ ಹೇಳಲು ಬರುವುದಿಲ್ಲ. ರಾಜಕೀಯದ ಪಡಸಾಲೆಯಲ್ಲಿ ಮತ ಬಾಚಬೇಕು ಎನಿಸಿದಾಗಲೆಲ್ಲ ಕಾವೇರಿಯೇ ಅಸ್ತ್ರ. ಈ ಬಾರಿ ಈ ಹೋರಾಟದಲ್ಲಿ ಕಮಲ್ಹಾಸನ್ ಮತ್ತು ರಜನೀಕಾಂತ್ ಭಾಗವಹಿಸಿರುವುದು ಅಪ್ಪಟ ರಾಜಕೀಯವಲ್ಲದೇ ಮತ್ತೇನೂ ಅಲ್ಲ. ಇಷ್ಟೂ ದಿನ ಈ ಪರಿಯ ಕದನಗಳಿಂದ ದೂರವೇ ಉಳಿದಿದ್ದ ರಜನೀಕಾಂತ್ಗೂ ಕಾವೇರಿಯ ಕುರಿತಂತೆ ಅನಿವಾರ್ಯದ ರಾಜಕಾರಣಕ್ಕೆ ತಲೆಬಾಗಬೇಕಾದ ಪರಿಸ್ಥಿತಿ ನಿಮರ್ಾಣವಾಗಿರುವುದು ದುರದೃಷ್ಟಕರ ಮತ್ತು ಸದ್ಯದ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ! ಕಾವೇರಿ ನೀರು ತಮಿಳುನಾಡಿಗೆ ಎಷ್ಟು ಬಿಡಬೇಕು, ಕನರ್ಾಟಕಕ್ಕೆ ಎಷ್ಟು ಉಳಿಯಬೇಕು ಎನ್ನುವುದು ಬೇರೊಂದು ಪ್ರಶ್ನೆ. ಆದರೆ ಕಾವೇರಿಯ ನೀರನ್ನು ನಾವು ಹೇಗೆ ಬಳಸುತ್ತಿದ್ದೇವೆ, ಮುಂದಿನ ಪೀಳಿಗೆಗಾಗಿ ಹೇಗೆ ಉಳಿಸುತ್ತಿದ್ದೇವೆ ಎನ್ನುವುದೇ ಸದ್ಯದ ಮಟ್ಟಿಗೆ ಕಾಡುವ ಅಂಶ.

1

ತಲಕಾವೇರಿಯಲ್ಲಿ ಪುಟ್ಟದೊಂದು ಕಂಡಿಕೆಯಲ್ಲಿ ಹುಟ್ಟಿ, ಆನಂತರ ಹೆದ್ದೆರೆಯಾಗುತ್ತಾ ತಮಿಳುನಾಡನ್ನು ದಾಟಿ ಹೋಗುವ ಕಾವೇರಿ ದಾರಿಯುದ್ದಕ್ಕೂ ಅನೇಕ ನದಿಗಳನ್ನು ತನ್ನೊಡಲೊಳಗೆ ಸೇರಿಸಿಕೊಳ್ಳುತ್ತಾ ವಿಸ್ತಾರವಾಗಿ ಸಾಗುತ್ತಾಳೆ. ಕಾವೇರಿ ಕುಡಿಯುವ ನೀರಷ್ಟೇ ಅಲ್ಲ. ನಾವು ತೆಗೆಯುವ ಬೆಳೆಯ ದೃಷ್ಟಿಯಿಂದ ಆಕೆ ನಮ್ಮ ಪಾಲಿನ ಅನ್ನ ಬ್ರಹ್ಮವೂ ಹೌದು. ದಕ್ಷಿಣ ಕನರ್ಾಟಕವೆಂದು ನಾವು ಯಾವುದನ್ನು ಕರೆಯುತ್ತೇವೆಯೋ ಅದರ ಒಟ್ಟಾರೆ ಸಂಸ್ಕೃತಿ ಇರುವುದೇ ಕಾವೇರಿಯ ತಟದ ಮೇಲೆ. ಕಾವೇರಿಯನ್ನು ಮರೆತು ಕನರ್ಾಟಕವನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ಹಾಗಂತ ಕಾವೇರಿಯನ್ನು ನೆನಪಿನಲ್ಲಿರಿಸಿಕೊಳ್ಳುವುದೆಂದರೆ ಬೆಂಗಳೂರಿನ ರಸ್ತೆಗಳಲ್ಲಿ ಟೈಯರುಗಳಿಗೆ ಬೆಂಕಿ ಹಚ್ಚಿ, ರಸ್ತೆ ತಡೆ ನಡೆಸಿ, ಕಾವೇರಿ ನಮ್ಮದೆಂದು ಘೋಷಣೆ ಕೂಗುವುದಲ್ಲ. ಈ ಗಲಾಟೆಯ ಲಾಭ ಪಡೆದುಕೊಂಡು ತಮಿಳಿಗರ ವಿರುದ್ಧ ಕೂಗಾಡಿ, ಫೇಸ್ಬುಕ್ಗಳಲ್ಲಿ ಕಾವೇರಿ ಪರವಾದ ಘೋಷಣೆ ಹಾಕಿ ಕನ್ನಡ ಪರ ಹೋರಾಟಗಾರರೆಂದು ಸಾಬೀತು ಪಡಿಸಿಕೊಳ್ಳುವುದಲ್ಲ. ಬದಲಿಗೆ ನಿಜವಾದ ಕಾವೇರಿ ಸ್ವಚ್ಛತೆಯಲ್ಲಿ ನಿರತವಾಗೋದು. ಉಸಿರು ಗಟ್ಟಿಸುವ ವಾತಾವರಣದಲ್ಲಿ ಹರಿಯಲಾಗದೇ ಹರಿಯುತ್ತಿರುವ ಕಾವೇರಿಯನ್ನು ಸರಾಗವಾಗಿ ಮೈದುಂಬಿ ಹರಿಯುವಂತೆ ಮಾಡುವುದು. ನಮ್ಮ ಪಾಪವನ್ನು ತೊಳೆಯಬೇಕಾದ ದೇವತುಲ್ಯ ಕಾವೇರಿಗೆ ನಮ್ಮೂರಿನ ಕೊಳಕು ರಾಡಿಯನ್ನು, ರಾಸಾಯನಿಕವನ್ನು ತುಂಬಿಸಿ ಹಾಳುಗೆಡವುತ್ತಿದ್ದೇವಲ್ಲ ಅದನ್ನು ತಡೆಯೋದು!

ಹಾಗೆಂದುಕೊಂಡೇ ಕಳೆದ ವರ್ಷ ನಾವು ಕಾವೇರಿ ಸ್ವಚ್ಛತೆಗೆ ಆಲೋಚನೆ ರೂಪಿಸಿದ್ದೆವು. ಅದರಂತೆಯೇ ಈ ವರ್ಷ ಮಳೆಗಾಲಕ್ಕೂ ಮುನ್ನ ತಲಕಾವೇರಿಯಿಂದ ಶ್ರೀರಂಗಪಟ್ಟಣದವರೆಗಿನ ಕಾವೇರಿಗೆ ಒಂದು ಸುತ್ತು ಬಂದು ಸ್ವಚ್ಛ ಮಾಡಬೇಕಿರುವ ಸ್ಥಳಗಳನ್ನು ಗುರುತಿಸಿದೆವು. ಕಾವೇರಿಯನ್ನು ನಾವು ಹಾಳುಗೆಡವಿರುವ ರೀತಿ ಕಂಡರೆ ಎಂಥವರಾದರೂ ಬೆಚ್ಚಿ ಬಿದ್ದಾರು! ತಲಕಾವೇರಿಯಲ್ಲಿ ಹುಟ್ಟುವ ಪರಿಶುದ್ಧ ಕಾವೇರಿ ಗುಡ್ಡ ಬಿಟ್ಟು ನೆಲಕ್ಕೆ ಬಂದೊಡನೆ ಕಲುಷಿತಗೊಳ್ಳುತ್ತಾ ಸಾಗುತ್ತಾಳೆ. ಎಲ್ಲೆಡೆ ಕಾವೇರಿಯ ನೀರನ್ನು ಮೋಟಾರು ಹಾಕಿ ಮನೆಗೆ ಸೆಳೆದುಕೊಳ್ಳುವ ನಾವು ನಮ್ಮ ಮನೆಯ ಕೊಳಕು ನೀರನ್ನು ಕಾವೇರಿಗೆ ತುಂಬಿ ತಾಯಿ ಕಾವೇರಿ, ದೇವಿ ಕಾವೇರಿ ಎಂದು ಸಂಭ್ರಮಿಸುತ್ತೇವೆ. ಪುಣ್ಯ! ಕೊಡಗಿನಲ್ಲಿ ದೊಡ್ಡ-ದೊಡ್ಡ ಕಾಖರ್ಾನೆಗಳಿಲ್ಲ. ಇಲ್ಲವಾದಲ್ಲಿ ಕಾಖರ್ಾನೆಯ ರಾಸಾಯನಿಕ ವಿಷಯುಕ್ತ ವಸ್ತುಗಳನ್ನು ಕಾವೇರಿಗೇ ತುಂಬಿಸಿ ಆಕೆ ಮಡಿಕೇರಿ ಬಿಡುವ ಮುನ್ನ ಹಾಳುಗೆಡವಿಬಿಡುತ್ತಿದ್ದೆವು!

FB_IMG_1523640687715

ಏಪ್ರಿಲ್ 11 ರಂದು ತಲಕಾವೇರಿಯಲ್ಲಿ ಪೂಜೆ ಮುಗಿಸಿ ಬಲಮುರಿ ಎಂಬಂಥ ಜಾಗವೊಂದರಲ್ಲಿ ಕಾವೇರಿಯ ಸ್ವಚ್ಛತೆ ಆರಂಭಿಸಿದ್ದೆವು. 8-10 ಟನ್ನುಗಳಾಗುವಷ್ಟು ಕಸ-ಕಡ್ಡಿ, ಬಟ್ಟೆ-ಬರೆ, ಪ್ಲಾಸ್ಟಿಕ್ಕು, ಮರಗಳನ್ನು ಹೊರತೆಗೆಯುವುದರಲ್ಲಿ ಹೈರಾಣಾಗಿಬಿಟ್ಟಿದ್ದೆವು. ಬಲಮುರಿಯೆಂಬುದು ಐತಿಹಾಸಿಕವಾಗಿ ಅತ್ಯಂತ ಪ್ರಸಿದ್ಧವಾದ ಜಾಗ. ಕೊಡಗಿನ ಸಂಸ್ಕೃತಿಯೊಂದಿಗೆ ಅದು ಹಾಸು ಹೊಕ್ಕಾಗಿ ಸೇರಿಕೊಂಡುಬಿಟ್ಟಿದೆ. ತಲಕಾವೇರಿಯಲ್ಲಿ ಹುಟ್ಟಿ ಕಾವೇರಿ ಹರಿಯುತ್ತಾ ಸಾಗುತ್ತಿರುವಾಗ ಕೊಡಗಿನ ಹೆಣ್ಣುಮಕ್ಕಳು ಅಡ್ಡಲಾಗಿ ನಿಂತು ‘ಕಾವೇರಿಯನ್ನು ಇಲ್ಲಿಂದ ಬಿಡುವುದಿಲ್ಲ’ ಎಂದು ಹಠ ಹಿಡಿದಿದ್ದರಂತೆ. ಅವರ ಬೇಡಿಕೆಗೆ ಮಣಿದು ಅಲ್ಲೇ ಸುಳಿಯಾಗಿ ಸುತ್ತುವ ಕಾವೇರಿ ಒಮ್ಮೆ ಸುತ್ತಿ ಮುಂದುವರೆಯುತ್ತಾಳೆ. ಹೀಗೆ ಬಲ ದಿಕ್ಕಿಗೆ ಒಮ್ಮೆ ತಿರುಗಿದ್ದರಿಂದಾಗಿ ಈ ಕ್ಷೇತ್ರ ಬಲಮುರಿ ಎಂದಾಯ್ತು. ಹಾಗೆಯೇ, ಹಾಗೆ ಕಾವೇರಿ ತಿರುಗುವಾಗ ಅಡ್ಡಲಾಗಿ ನಿಂತಿದ್ದ ಹೆಣ್ಣುಮಕ್ಕಳ ಸೆರಗು ಹಿಂದಕ್ಕೆ ಹೋಯ್ತು. ಹೀಗಾಗಿ ಕೊಡಗಿನಲ್ಲಿ ಹೆಣ್ಣುಮಕ್ಕಳು ಸೀರೆಯ ಸೆರಗನ್ನು ಹಿಂಬದಿಯಿಂದ ಧರಿಸುತ್ತಾರೆ ಎಂಬುದು ಪ್ರತೀತಿ. ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ಇಷ್ಟು ಪ್ರಾಮುಖ್ಯತೆಯಿರುವ ಬಲಮುರಿಯಲ್ಲಿ ಕಾವೇರಿಯ ಪಾವಿತ್ರ್ಯದ ಕುರಿತಂತೆಯೂ ಬಲುವಾದ ಶ್ರದ್ಧೆ ಇದೆ. ಕಾವೇರಿ ತಲಕಾವೇರಿಯಲ್ಲಿ ಉಗಮಗೊಳ್ಳುವ ದಿನ ಸಿರಿವಂತರು, ಗಣ್ಯರೇನೋ ಅಲ್ಲಿಗೆ ಹೋಗಿ ದರುಶನ ಪಡೆದುಕೊಂಡುಬಿಡುತ್ತಾರೆ. ಆದರೆ ಬಡವರು, ಸಾಮಾನ್ಯರ ಪಾಡೇನು? ಅದಕ್ಕೇ ಆಕೆಯ ಉಗಮದ ಮರು ದಿವಸವೇ ಆಕೆಯ ದರ್ಶನಕ್ಕೆಂದು ಬಲಮುರಿಗೆ ಜನಪ್ರವಾಹವೇ ಹರಿದು ಬರುತ್ತದೆ. ಇಲ್ಲಿನ ಕಾವೇರಿ ತಲಕಾವೇರಿಯಲ್ಲಿರುವಷ್ಟೇ ಪರಿಶುದ್ಧಳು ಎಂಬುದು ಇಲ್ಲಿನ ಜನರ ನಂಬಿಕೆ. ನಂಬಿಕೆಯೇನೋ ಸರಿ. ಆದರೆ ಆಕೆಯನ್ನು ಹಾಗೆಯೇ ಉಳಿಸಿದ್ದೇವೆಯೋ ಎಂಬುದರಲ್ಲಿ ಮಾತ್ರ ನಾವು ಖಂಡಿತ ಸೋತುಹೋಗಿದ್ದೇವೆ. ಬಟ್ಟೆ ಒಗೆಯುತ್ತಾ ರಾಸಾಯನಿಕವನ್ನು ನದಿಗೆ ತುಂಬುತ್ತೇವೆ. ಹಳೆಯ ನೈಲಾನ್ ಬಟ್ಟೆಯನ್ನು ನದಿಗೆ ತುಂಬಿಬಿಡುತ್ತೇವೆ. ಈ ಬಟ್ಟೆ ಕರಗದೇ ಅಲ್ಲಲ್ಲಿ ಕಲ್ಲಿಗೆ ಸಿಕ್ಕಿಹಾಕಿಕೊಂಡು ಕಾವೇರಿ ಸರಾಗವಾಗಿ ಹರಿಯದಂತೆ ಮಾಡುತ್ತವೆ. ಪ್ಲಾಸ್ಟಿಕ್ ಸೇರಿಕೊಂಡುಬಿಟ್ಟರಂತೂ ಅದೊಂದು ಭೂತ ನರ್ತನ. ಕಾವೇರಿ ಉಸಿರುಗಟ್ಟಿದ ಭಾವನೆಯನ್ನು ಅನುಭವಿಸದೇ ಬೇರೆ ದಾರಿಯೇ ಇಲ್ಲ. ನಾವು ಬಲಮುರಿಯಲ್ಲಿ ಕಾವೇರಿಯನ್ನು ಸ್ವಚ್ಛಗೊಳಿಸಿದ ನಂತರ ಆಕೆಯ ಹರಿವಿನಲ್ಲಿ ಆನಂದ ಉಕ್ಕೇರುವುದನ್ನು ಅನುಭವಿಸುತ್ತಿದ್ದೆವು. ಬಹುಶಃ ಅದು ನಮ್ಮ ಭಾವನೆಗಳೇ ಇರಬಹುದು. ಆದರೆ ಆ ಒಂದು ಭಾವನೆಯನ್ನು ಅನುಭವಿಸುವ ಆನಂದ ದಕ್ಕಿದ್ದು ನಮಗೆ ಮಾತ್ರ ಎಂಬುದು ಸಂತೋಷವೇ ಸರಿ.

ಅಲ್ಲಿಂದ ಮುಂದೆ ನೆಲ್ಲಿಹುದಿಕೇರಿ ಎಂಬ ಗ್ರಾಮ. ಕುಶಾಲನಗರಕ್ಕೆ 40 ಕಿ.ಮೀ ದೂರದಲ್ಲಿರುವ ನೆಲ್ಲಿಹುದಿಕೇರಿಯದ್ದು ಒಂದು ವಿಚಿತ್ರ ಕಥೆ. ಕಾವೇರಿಗೆ ಅಡ್ಡಲಾಗಿ ಈ ಗ್ರಾಮಕ್ಕೊಂದು ಸೇತುವೆ ಕಟ್ಟಲಾಗಿದೆ. ಆ ಸೇತುವೆಯ ಒಂದು ದಡ ನೆಲ್ಲಿಹುದಿಕೇರಿಗೆ ಸೇರಿದರೆ ಮತ್ತೊಂದು ದಡ ಸಿದ್ಧಾಪುರ ಎಂಬ ಮತ್ತೊಂದು ಪಂಚಾಯ್ತಿ ವ್ಯಾಪ್ತಿಯದ್ದು. ಕಾವೇರಿಯ ಮೇಲಿನ ಹಕ್ಕು ಚಲಾಯಿಸುವ ಸಂದರ್ಭ ಬಂದಾಗ ಎರಡೂ ಗ್ರಾಮಗಳು ಕದನಕ್ಕೆ ನಿಲ್ಲುತ್ತವೆ. ಆದರೆ ಕಾವೇರಿಯ ಕುರಿತು ಕರ್ತವ್ಯದ ಬಗ್ಗೆ ಮಾತನಾಡುವಾಗ ಎರಡೂ ಗ್ರಾಮಗಳು ನುಣುಚಿಕೊಳ್ಳುತ್ತವೆ. ಒಬ್ಬರು ಮತ್ತೊಬ್ಬರನ್ನು ದೂರುತ್ತಿರುತ್ತಾರೆ. ಈ ಗ್ರಾಮದ ಅಷ್ಟೂ ಕೊಳಚೆ ನೀರು, ಗ್ಯಾರೇಜುಗಳಿಂದ ಹೊರಬರುವ ತೈಲ ಮಿಶ್ರಿತ ತ್ಯಾಜ್ಯ ಕಾವೇರಿಯಲ್ಲಿ ಸೇರುತ್ತದೆ. ಜೊತೆಗೆ ಗ್ರಾಮಸ್ಥರು ಹೇಳುವಂತೆ ಕಾಫಿ ಬೀಜವನ್ನು ತೊಳೆದ ಕಪ್ಪು ನೀರು ಕೂಡ ಇದೇ ನದಿಯನ್ನು ಸೇರುತ್ತದೆ. ಅಷ್ಟಲ್ಲದೇ ಮಾಂಸ ಉದ್ಯಮಕ್ಕೆ ಹೆಸರಾದ ಈ ಎರಡೂ ಹಳ್ಳಿಗಳಿಂದ ಉತ್ಪಾದನೆಗೊಳ್ಳುವ ಅಷ್ಟೂ ತ್ಯಾಜ್ಯ ನದಿಗೆ ಆಹಾರ. ಮೀನಿನಿಂದ ಹಿಡಿದು ದನದವರೆಗಿನ ಎಲ್ಲ ಮಾಂಸದ ಅವಶೇಷಗಳೂ ಈ ಭಾಗದ ಕಾವೇರಿಯಲ್ಲಿ ನಿಮಗೆ ಕಂಡರೆ ಅಚ್ಚರಿ ಪಡಬೇಕಿಲ್ಲ! ನೀರಿನ ಬಣ್ಣ ಕಪ್ಪಷ್ಟೇ ಅಲ್ಲ; ನೀರು ಅದೆಷ್ಟು ಕೊಳಕೆಂದರೆ ಇಲ್ಲಿ ಸ್ನಾನ ಮಾಡಿ ಮೇಲೆ ಬಂದ ನಂತರ ನೀವು ಶುದ್ಧ ನೀರಿನಿಂದ ಮತ್ತೊಮ್ಮೆ ಮೈ ತೊಳೆದುಕೊಳ್ಳಲೇಬೇಕಾದ ಪರಿಸ್ಥಿತಿ ಇದೆ. ಬೆಳಿಗ್ಗೆ 7 ರಿಂದ ಸಂಜೆ 4 ರವರೆಗಿನ ನಿರಂತರ ಶ್ರಮದಿಂದ ಹತ್ತಾರು ಟ್ರಾಕ್ಟರ್ ತುಂಬಬಲ್ಲಷ್ಟು ಕಸವನ್ನು ನದಿಯಿಂದ ಮತ್ತು ಸುತ್ತ-ಮುತ್ತಲಿನ ಪ್ರದೇಶದಿಂದ ತೆಗೆದು ಮೇಲೆ ತಲುಪಿಸಿದರೆ ಗ್ರಾಮ ಪಂಚಾಯತ್ ಅಧಿಕಾರಿಗಳು ‘ಈ ಕಸವನ್ನು ಮಾಡುವುದಾದರೂ ಏನು?’ ಎಂದು ಪ್ರಶ್ನಾರ್ಥಕವಾಗಿ ನಮ್ಮನ್ನೇ ಪ್ರಶ್ನಿಸಿದ್ದು ನಮ್ಮ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿತ್ತು. ಅದನ್ನು ಸೂಕ್ತವಾಗಿ ವಿಲೇವಾರಿ ಮಾಡುವ ಯಾವ ಉಪಾಯವೂ ಅವರಿಗೆ ದಕ್ಕದೇ ಹೋದರೆ ಈ ಎರಡು ದಿನದೊಳಗಾಗಿ ಒಣಗುವ ತ್ಯಾಜ್ಯಕ್ಕೆ ನಾವೇ ಬೆಂಕಿಯಿಟ್ಟು ಸುಟ್ಟು ಬಿಡೋಣ ಎಂದುಕೊಂಡಿದ್ದೇವೆ. ಬೆಂಕಿ ಇಡಬೇಡಿರೆಂದು ಫೇಸ್ಬುಕ್ಕಲ್ಲಿ ಕಾಮೆಂಟ್ ಹೊಡೆಯುವಂತ ಭೂಪರುಗಳು ಇದನ್ನು ಓದುತ್ತಿದ್ದರೆ ಈ ಚಟುವಟಿಕೆಯಲ್ಲಿ ನಮ್ಮೊಂದಿಗೆ ಕೈ ಜೋಡಿಸಿ ಅಂತಹ ತ್ಯಾಜ್ಯಗಳಿಗೆ ಮುಕ್ತಿ ಕರುಣಿಸಲು ನಮಗೊಂದು ಉಪಾಯ ಸೂಚಿಸಿದರೆ ಒಳಿತು. ನೆಲ್ಲಿಹುದಿಕೇರಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ‘ತ್ಯಾಜ್ಯ ವಿಲೇವಾರಿ ಮಾಡಿಕೊಳ್ಳಬೇಕಾದುದು ಜನರ ಕರ್ತವ್ಯ. ಪಂಚಾಯಿತಿ ಅವರಿಗೆ ಪ್ರೇರಣೆಯನ್ನಷ್ಟೇ ಕೊಡಬಲ್ಲುದು’ ಎಂದು ಉದ್ಧಟತನದಿಂದ ಮಾತನಾಡುವಾಗ ಹದಗೆಟ್ಟಿರುವ ವ್ಯವಸ್ಥೆಯ ಕುರಿತಂತೆ ಅಸಹ್ಯವೆನಿಸುತ್ತಿತ್ತು. ಇಡಿಯ ನೆಲ್ಲಿಹುದಿಕೇರಿ ಇಂದು ಡಸ್ಟ್ಬಿನ್ ಆಗಿ ಹೋಗಿದೆ!

FB_IMG_1523640768092

ಕಾವೇರಿಯ ಜಲಾನಯನದಲ್ಲಿರುವಂಥ ಒಂದೆರಡು ಗ್ರಾಮಗಳನ್ನಷ್ಟೇ ನಿಮ್ಮೆದುರು ಉದಾಹರಣೆಗೆಂದು ತೆರೆದಿಟ್ಟೆ. ನೀವು ಈ ಲೇಖನ ಓದುವ ವೇಳೆಗಾಗಲೇ ನಾವು ಈ ಭಾಗದ ದೊಡ್ಡ ಪಟ್ಟಣವಾದ ಕುಶಾಲನಗರದಲ್ಲಿ ಸ್ವಚ್ಛತೆಯನ್ನು ಮುಗಿಸಿ ಐತಿಹಾಸಿಕ ಮತ್ತು ಪೌರಾಣಿಕವಾಗಿ ಬಲು ಪ್ರಸಿದ್ಧವಾದ ರಾಮನಾಥಪುರದಲ್ಲಿ ಕೆಲಸ ಮಾಡುತ್ತಿರುತ್ತೇವೆ. ಹಾಗಂತ ಕಾವೇರಿಯನ್ನು ಸ್ವಚ್ಛಗೊಳಿಸಿಬಿಟ್ಟಿರುತ್ತೇವೆ ಎಂಬ ಧಿಮಾಕು ಖಂಡಿತ ನಮಗಿಲ್ಲ. ಬೆಂಗಳೂರಿನಲ್ಲಿ ಕಾವೇರಿಯ ಗಲಾಟೆ ಮಾಡುತ್ತ ಕಾವೇರಿ ಹುಟ್ಟಿದ್ದೆಲ್ಲಿ ಎಂದು ಗೊತ್ತೂ ಇರದೇ ಬೊಬ್ಬಿರಿಯುವವರ ಸಾಲಿಗೆ ನಾವು ಸೇರಿಲ್ಲ. ಬದಲಿಗೆ ಈ ಕಾವೇರಿಯನ್ನು ಮುಂದಿನ ಪೀಳಿಗೆಯವರೆಗೂ ಉಳಿಸಿ ಹೋಗುವ ಜವಾಬ್ದಾರಿಯುತ ಸ್ಥಾನದಲ್ಲಿ ನಾವಿದ್ದೇವೆ ಎಂಬ ಆನಂದ-ವಿಶ್ವಾಸಗಳಂತೂ ನಮಗಿವೆ. ಕಾವೇರಿ ಕುರಿತಂತೆ ಎಲ್ಲೆಡೆ ಪ್ರಾಂತೀಯವಾದದ ಗಲಾಟೆಗಳು ತೀವ್ರವಾಗಿರುವ ಹೊತ್ತಿನಲ್ಲೇ ಈ ಸ್ವಚ್ಛತೆಗೆ ನಾವು ಪೂರ್ಣ ಪ್ರಮಾಣದಲ್ಲಿ ಜೋಡಿಸಿಕೊಂಡಿರುವುದು ಖಂಡಿತ ಸಂತೋಷದಾಯಕವೇ. ಬೀದರ್ನಿಂದ ಹಿಡಿದು ಚಾಮರಾಜನಗರದವರೆಗೆ ಹರಡಿಕೊಂಡಿರುವ ಯುವಾಬ್ರಿಗೇಡ್ನ ಸ್ವಯಂಸೇವಕರು ಈ ಕಾರ್ಯಕ್ರಮದಲ್ಲಿ ಪೂರ್ಣ ಭಾಗಿಯಾಗಿರುವುದು ಹೆಮ್ಮೆಯ ಸಂಗತಿ. ಎಲ್ಲರಿಗೂ ಒಳಿತಾಗಬೇಕು. ಕಾವೇರಿ ಮೈ ದುಂಬಿ ಹರಿಯಬೇಕು ಅಷ್ಟೇ!