Category: ಅಸಲಿ ಮಿರ್ಚಿ

ಸರಸಂಘಚಾಲಕರ ಉತ್ತರಕ್ಕೆ ಯಾರ ಪ್ರಶ್ನೆಯೂ ಇರಲಿಲ್ಲ!

ಸರಸಂಘಚಾಲಕರ ಉತ್ತರಕ್ಕೆ ಯಾರ ಪ್ರಶ್ನೆಯೂ ಇರಲಿಲ್ಲ!

ಮೂರು ದಿನಗಳ ಈ ಕಾರ್ಯಕ್ರಮ ಸಂಘದ ಕುರಿತಂತೆ ಇದ್ದ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವಲ್ಲಿ ಬಲುದೊಡ್ಡ ಮಟ್ಟಿಗೆ ಯಶಸ್ವಿಯಾಯ್ತು ಏಕೆಂದರೆ ಸರಸಂಘಚಾಲಕರಿಗೆ ಕೇಳಲಾದ ಪ್ರಶ್ನೆಗಳ ಕುರಿತಂತೆಯಾಗಲೀ ಅವರು ನೀಡಿದ ಉತ್ತರದ ಕುರಿತಂತೆಯಾಗಲೀ ಆನಂತರ ಯಾವೊಬ್ಬ ಬುದ್ಧಿಜೀವಿಯೂ ಚಚರ್ೆಯೇ ಮಾಡಲಿಲ್ಲ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬಹು ಸಮಯದ ನಂತರ ಸಮಾಜಕ್ಕೆ ತನ್ನನ್ನು ತಾನು ಪೂರ್ಣವಾಗಿ ತೆರೆದುಕೊಳ್ಳುವ ಪ್ರಯತ್ನವನ್ನು ಇತ್ತೀಚೆಗೆ ಮಾಡಿತ್ತು. ಭಾರತದ ಭವಿಷ್ಯ: ಆರ್ಎಸ್ಎಸ್ ದೃಷ್ಟಿ ಎಂಬ ವಿಚಾರದ ಕುರಿತಂತೆ ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸರಸಂಘ ಚಾಲಕರಾದ ಮೋಹನ್ ಭಾಗವತರ ಮೂರು ದಿನಗಳ ಉಪನ್ಯಾಸ ಮಾಲೆ ರಾಷ್ಟ್ರಾದ್ಯಂತ ಸಂಚಲನ ಉಂಟು ಮಾಡಿದ್ದರೆ ಸಂಘವನ್ನು ಮುಂದಿಟ್ಟುಕೊಂಡೇ ಬೈಗುಳಗಳನ್ನು ಪುಂಖಾನುಪುಂಖವಾಗಿ ಉದುರಿಸುತ್ತಿದ್ದ ಪ್ರತಿಪಕ್ಷಗಳಿಗೂ ಮತ್ತು ಪ್ರತಿವಾದಿಗಳಿಗೂ ಬಲುದೊಡ್ಡ ಆಘಾತವಾಗಿದೆ. ಎಲ್ಲಿಯವರೆಗೂ ಸಮಾಜಕ್ಕೆ ನಮ್ಮನ್ನು ನಾವು ಪೂರ್ಣವಾಗಿ ಪರಿಚಯಿಸಿಕೊಳ್ಳಲಾರೆವೋ ಅಲ್ಲಿಯವರೆಗೂ ತಪ್ಪು ಕಲ್ಪನೆಗಳೇ ಸಮಾಜವನ್ನು ಆಳುತ್ತವೆ. 125 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ಭಾರತವನ್ನು, ಹಿಂದೂಧರ್ಮವನ್ನು ಜಾಗತಿಕ ವೇದಿಕೆಯಲ್ಲಿ ಸಮರ್ಥವಾಗಿ ಪರಿಚಯಿಸದೇ ಹೋಗಿದಿದ್ದರೆ ತಪ್ಪು ಕಲ್ಪನೆಗಳ ಕಾರಣದಿಂದಾಗಿ ಜಗತ್ತಿಂದು ನಮ್ಮನ್ನು ನೋಡುವ ದೃಷ್ಟಿಕೋನವೇ ಬದಲಾಗಿರುತ್ತಿತ್ತು. ಅದೇ ದೃಷ್ಟಿಯನ್ನು ಮುಂದುವರೆಸಿ ನೋಡುವುದಾದರೆ ಆರ್ಎಸ್ಎಸ್ ಸಂಘಟಿಸಿದ ಈ ಕಾರ್ಯಕ್ರಮ ರಾಷ್ಟ್ರದ ಅನೇಕ ಬುದ್ಧಿಜೀವಿಗಳ ಮೆದುಳಿಗೆ ಮೆತ್ತಿದ್ದ ಕೊಳೆಯನ್ನು ತೊಳೆಯುವಲ್ಲಿ ಯಶಸ್ವಿಯಾಗಿದೆ ಎಂದೇ ಹೇಳಬೇಕು. ಆರಂಭದ ದಿನದಲ್ಲೇ ಮಾತು ಶುರುಮಾಡಿದಾಗ ‘ಯಾರನ್ನು ಒಪ್ಪಿಸಲೂ ನಾನಿಲ್ಲಿ ಬಂದಿಲ್ಲ. ವಿಚಾರವನ್ನು ಮುಂದಿರಿಸುತ್ತೇನೆ. ಒಪ್ಪಬೇಕೆನಿಸಿದವರು ಒಪ್ಪಬಹುದು’ ಎಂದು ಸರಸಂಘಚಾಲಕರು ಹೇಳುವಾಗ ಅನೇಕರು ಮೂಗಿನ ಮೇಲೆ ಬೆರಳಿಟ್ಟಿದ್ದರು. ಸಂಘ ಯಾವುದನ್ನೂ ಯಾರ ಮೇಲೂ ಹೇರಲಾರದು. ಬದಲಿಗೆ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುವ ಸ್ವತಂತ್ರ ಮನೋಭಾವವನ್ನು ಸಂಘ ನಿಮರ್ಾಣ ಮಾಡುತ್ತದೆ ಎಂಬುದೇ ಅನೇಕರಿಗೆ ನುಂಗಲಾರದ ಬಿಸಿ ತುಪ್ಪವಾಗಿತ್ತು.

10

ಮೂರನೆಯ ದಿನ ಪ್ರಶ್ನೋತ್ತರದ ಹೊತ್ತಿನಲ್ಲಿ ಯಾವ ಪ್ರಶ್ನೆಗೂ ತಡೆಯೊಡ್ಡದೇ ಎಲ್ಲವನ್ನೂ ಸ್ವೀಕರಿಸಿ ಅದಕ್ಕೆ ಸಮರ್ಥವಾದ ಉತ್ತರವನ್ನು ಸರಸಂಘ ಚಾಲಕರು ಕೊಟ್ಟಿದ್ದು ಎಲ್ಲರೂ ಹುಬ್ಬೇರಿಸುವಂತೆ ಮಾಡಿತು. ‘ಹಿಂದುತ್ವ ಎನ್ನುವುದು ಒಗ್ಗಟ್ಟಿನ ಸಂಕೇತ. ಎಲ್ಲಾ ಹಿಂದೂಗಳನ್ನು ಒಗ್ಗೂಡಿಸಲೆಂದೇ ಸಂಘ ಕ್ರಿಯಾಶೀಲವಾಗಿದೆ’ ಎನ್ನುವುದರ ಮೂಲಕ ಆರಂಭಿಸಿದ ಮೋಹನ್ ಭಾಗವತರು ‘ಜಾಗತಿಕ ಮಟ್ಟದಲ್ಲಿ ಇಂದು ಹಿಂದುತ್ವಕ್ಕೆ ಅಪಾರವಾದ ಗೌರವವಿದೆ. ಭಾರತದಲ್ಲಿ ಇದಕ್ಕಿರುವ ಅಡ್ಡಿ-ಆತಂಕಗಳನ್ನು ನಿವಾರಿಸಬೇಕಿದೆ’ ಎಂದು ಸೂಕ್ಷ್ಮವಾಗಿ ವಿವರಿಸಿದರು. ಹಾಗಂತ ಇದೊಂದು ತೇಪೆ ಹಚ್ಚುವ ಕಾರ್ಯಕ್ರಮವಾಗಿರಲಿಲ್ಲ. ಎಲ್ಲೆಲ್ಲಿ ಯಾಯರ್ಾರನ್ನು ಝಾಡಿಸಬೇಕಿತ್ತೋ ಅಲ್ಲಲ್ಲಿ ಸರಿಯಾಗಿಯೇ ಕಪಾಳಮೋಕ್ಷ ಮಾಡಲಾಗಿತ್ತು. ‘ದೇವರು ಇಂದು ಮಾರುಕಟ್ಟೆಗಳಲ್ಲಿ ಮಾರಲ್ಪಡುತ್ತಿದ್ದಾರೆ. ಎಲ್ಲಾ ಮತಗಳೂ ಒಂದೇ ಆದರೆ ಮತಾಂತರದ ಅವಶ್ಯಕತೆಯಾದರೂ ಏನು? ಆಮಿಷವೊಡ್ಡಿ ಮತಾಂತರ ಮಾಡುವುದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ’ ಎಂದಿದ್ದರು ಆರ್ಎಸ್ಎಸ್ ಮುಖ್ಯಸ್ಥರು. ಗೋರಕ್ಷಕರ ಹೆಸರಿನಲ್ಲಿ ಕೊಲೆಗಳಾಗುವುದನ್ನು ಖಂಡಿಸಿದ ಭಾಗವತರು ‘ಗೋರಕ್ಷಣೆ ಬರಿಯ ಕಾನೂನಿನ ವ್ಯಾಪ್ತಿಗೆ ಮಾತ್ರ ಒಳಪಡುವಂಥದ್ದಲ್ಲ. ಅದು ಅದನ್ನು ಮೀರಿದ್ದು. ಗೋರಕ್ಷಣೆ ಒಂದು ಪವಿತ್ರ ಕರ್ತವ್ಯ ಮತ್ತು ಅದನ್ನು ಮಾಡುವವರನ್ನು ಇತರೆ ಕ್ರಿಮಿನಲ್ಗಳಂತೆ ನೋಡಬಾರದು’ ಎಂದು ಹೇಳುವುದನ್ನು ಮರೆಯಲಿಲ್ಲ.

‘ಸಂಘ ಜಾತೀಯ ವಿಷಬೀಜ ಮುಕ್ತವಾದುದು ಮತ್ತು ಅನೇಕ ಸ್ವಯಂ ಸೇವಕರು ಅಂತಜರ್ಾತಿಯ ವಿವಾಹಗಳನ್ನು ಸಹಜವೆಂಬಂತೆ ಆಗಿದ್ದಾರೆ’ ಎಂದೂ ಸಮಾಜಕ್ಕೆ ವಿಷಯ ಮುಟ್ಟಿಸಿದರು. ಅಚ್ಚರಿಯೆಂಬಂತೆ, ಸಲಿಂಗ ಕಾಮದ ಕುರಿತಂತ ಪ್ರಶ್ನೆಗೆ ಮುಲಾಜಿಲ್ಲದೇ ಉತ್ತರಿಸಿದ ಸರಸಂಘ ಚಾಲಕರು ‘ಇವರುಗಳನ್ನು ಪ್ರತ್ಯೇಕಿಸಿ ನೋಡಬಾರದು. ಸಮಾಜ ಬದಲಾವಣೆಗೆ ಸಿದ್ಧವಾಗಿರುವಾಗ ಇವುಗಳನ್ನೆಲ್ಲಾ ಸಹಜವಾಗಿ ಸ್ವೀಕರಿಸಬೇಕು’ ಎಂದಿದ್ದರು. ಸಂಘವನ್ನು ಸಂಪ್ರದಾಯವಾದಿ ಮತ್ತು ಪ್ರಗತಿ ವಿರೋಧಿ ಎಂದು ಸದಾ ಜರಿಯುತ್ತಿದ್ದವರು ಈಗ ಮಾತಿಲ್ಲದೇ ಮೌನಕ್ಕೆ ಶರಣಾಗಬೇಕಾದ ಪರಿಸ್ಥಿತಿ ನಿಮರ್ಾಣವಾಗಿತ್ತು.
ನಿಜವಾದ ಗಲಾಟೆ ಶುರುವಾಗಬೇಕಿದ್ದುದು ಅನ್ಯಮತೀಯರನ್ನು ನಮ್ಮವರಾಗಿಸಿಕೊಳ್ಳಬೇಕಾದ ವಿಚಾರದಲ್ಲಿ ಸರಸಂಘಚಾಲಕರು ಕೊಟ್ಟ ಉತ್ತರದಿಂದ. ಸ್ವಾಮಿ ವಿವೇಕಾನಂದರ ಚಿಂತನಾ ಧಾರೆಯನ್ನು ಈ ಹೊತ್ತಿನಲ್ಲಿ ಸಮರ್ಥವಾಗಿ ಪ್ರತಿಧ್ವನಿಸಿದ ಸರಸಂಘಚಾಲಕರು ಅನ್ಯಮತೀಯರನ್ನು ಒಪ್ಪಿಕೊಳ್ಳಲಾಗದೇ ಹೋದರೆ, ಅವರನ್ನು ದೇಶಬಿಟ್ಟು ಹೋಗಬೇಕೆಂದು ತಾಕೀತು ಮಾಡುವುದಾದರೆ ಅಂಥವನು ಹಿಂದುವೇ ಅಲ್ಲವೆಂಬ ಪ್ರಖರವಾದ ಹೇಳಿಕೆಯನ್ನು ಕೊಟ್ಟರು. ಈ ಉತ್ತರ ಒಂದೋ ಹೊರಗಿನವರ ಪಾಲಿಗೆ ಬಲುದೊಡ್ಡ ಬದಲಾವಣೆಯ ಸಂಕೇತ. ಅಥವಾ ಒಳಗಿದ್ದು ಪ್ರತಿಗಾಮಿಗಳಂತೆ ವತರ್ಿಸುವ ಕೆಲವರಿಗೆ ಸ್ಪಷ್ಟವಾದ ಸಂದೇಶ. ನನಗೂ ಕಾಡುವ ಸಂಗತಿಯೆಂದರೆ ತೀವ್ರಗಾಮಿಗಳೆನಿಸಿಕೊಂಡ ಯಾವೊಬ್ಬನೂ ಈ ಹೇಳಿಕೆಯ ಕುರಿತಂತೆ ಚಕಾರವೆತ್ತದೆ ಬಾಯ್ಮುಚ್ಚಿಕೊಂಡು ಕುಳಿತಿರುವುದು. ಬದಲಾವಣೆಯ ಹೊತ್ತು ಈಗ ಬಂದಾಗಿದೆ. ನರೇಂದ್ರಮೋದಿಯವರ ಭಾರತದಲ್ಲಿ ಸದ್ಭಾವನೆಗೆ ವಿಶೇಷವಾದ ಮೌಲ್ಯವಿದೆ. ಹಾಗಂತ ಮೋಹನ್ಜೀಯವರದ್ದು ಅನ್ಯಮತೀಯರನ್ನು ಓಲೈಸುವ ತುಷ್ಟೀಕರಣದ ಭಾಷಣವಾಗಿರಲಿಲ್ಲ. ಜನಸಂಖ್ಯಾ ಸ್ಫೋಟದ ಕುರಿತಂತೆ ಕೇಳಲಾಗಿ ಕುಟುಂಬ ಯೋಜನೆಯ ಮಹತ್ವದ ಕುರಿತಂತೆ ಮಾತನಾಡಬೇಕಾದ ಪರಿಸ್ಥಿತಿ ಒದಗಿದಾಗ ಸರಸಂಘಚಾಲಕರು ಸ್ಪಷ್ಟವಾದ ಹೇಳಿಕೆಯನ್ನೇ ಕೊಟ್ಟರು. ಒಂದೇ ಜನಾಂಗದವರ ಸಂಖ್ಯೆ ಹೆಚ್ಚಾಗುತ್ತಾ ಜನಸಂಖ್ಯಾ ಪ್ರಮಾಣ ಏರುಪೇರಾಗುವುದನ್ನು ಸೂಕ್ಷ್ಮವಾಗಿ ಜನತೆಯ ಮುಂದಿರಿಸಿ ಮುಂದಿನ 50 ವರ್ಷಗಳಲ್ಲಿ ದೇಶದ ಬೆಳವಣಿಗೆಯ ದರ ಮತ್ತು ಧಾನ್ಯವನ್ನು ಪೂರೈಸಬಲ್ಲ ನಮ್ಮ ಸಾಮಥ್ರ್ಯ ಇವೆರಡನ್ನೂ ಗಮನದಲ್ಲಿಟ್ಟುಕೊಂಡು ನಾವೊಂದು ಜನಸಂಖ್ಯಾ ಯೋಜನೆಯನ್ನು ರೂಪಿಸಬೇಕೆಂದು ವೈಜ್ಞಾನಿಕವಾದ ಅಭಿಪ್ರಾಯವನ್ನು ಮುಂದಿಟ್ಟರು. ಅಷ್ಟೇ ಅಲ್ಲ, ಎಲ್ಲಿ ಸಮಸ್ಯೆ ವ್ಯಾಪಕವಾಗಿದೆಯೂ ಅಲ್ಲಿ ಮೊದಲು ಈ ಯೋಜನೆಯನ್ನು ಜಾರಿಗೆ ತರಬೇಕೆಂದು ಅವರು ಸ್ಪಷ್ಟ ನಿದರ್ೆಶನ ಕೊಟ್ಟಿದ್ದು ಅವರ ದೂರದೃಷ್ಟಿಗೆ ಹಿಡಿದ ಕೈಗನ್ನಡಿಯಾಗಿತ್ತು.

9

ಮೂರು ದಿನಗಳ ಈ ಕಾರ್ಯಕ್ರಮ ಸಂಘದ ಕುರಿತಂತೆ ಇದ್ದ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವಲ್ಲಿ ಬಲುದೊಡ್ಡ ಮಟ್ಟಿಗೆ ಯಶಸ್ವಿಯಾಯ್ತು ಏಕೆಂದರೆ ಸರಸಂಘಚಾಲಕರಿಗೆ ಕೇಳಲಾದ ಪ್ರಶ್ನೆಗಳ ಕುರಿತಂತೆಯಾಗಲೀ ಅವರು ನೀಡಿದ ಉತ್ತರದ ಕುರಿತಂತೆಯಾಗಲೀ ಆನಂತರ ಯಾವೊಬ್ಬ ಬುದ್ಧಿಜೀವಿಯೂ ಚಚರ್ೆಯೇ ಮಾಡಲಿಲ್ಲ. ಒಂದೋ ಆತನ ತಪ್ಪು ಕಲ್ಪನೆಗಳು ದೂರವಾಗಿರಬೇಕು. ಅಥವಾ ತಾನು ಮಾತನಾಡಲಾರಂಭಿಸಿದರೆ ಜನರ ತಪ್ಪು ಕಲ್ಪನೆಗಳೆಲ್ಲಾ ದೂರವಾಗಿಬಿಡಬಹುದೆಂಬ ಹೆದರಿಕೆ ಇರಬೇಕು. ಏನಾದರೂ ಲಾಭವೇ. ಮೋಹನ್ಜೀಯವರ ಈ ಕಾರ್ಯಕ್ರಮಕ್ಕೆ ಬಂದಿದ್ದವರೆಲ್ಲಾ ದೇಶದ ಗಣ್ಯಾತಿಗಣ್ಯರೇ ಆಗಿದ್ದರು. ಎಲ್ಲಾ ಜಾತಿ-ಜನಾಂಗಗಳಿಗೆ ಸೇರಿದ್ದವರೂ ಇದ್ದರು. ಪ್ರಶ್ನೋತ್ತರಗಳನ್ನು ಎಲ್ಲರೂ ಸ್ವೀಕಾರ ಮಾಡಿದ ರೀತಿಯೇ ಬದಲಾವಣೆಯ ಹೊಸ ದಿಕ್ಕಿನ ಮುನ್ಸೂಚನೆಯಾಗಿತ್ತು. ಒಟ್ಟಾರೆ ಭಾರತ ಪ್ರಕಾಶಮಯವಾಗಿ ಕಂಗೊಳಿಸುತ್ತಿದೆ. ನಮ್ಮ ದಿನ ಬಂದಾಗಿದೆ. ಅನುಮಾನವೇ ಇಲ್ಲ.

ತನ್ನವರು ನರಳುತ್ತಿರುವಾಗ ಅಮೇರಿಕಾಕ್ಕೆ ಓಡಿದ ಪಿಣರಾಯೀ!

ತನ್ನವರು ನರಳುತ್ತಿರುವಾಗ ಅಮೇರಿಕಾಕ್ಕೆ ಓಡಿದ ಪಿಣರಾಯೀ!

ಯೋಗಿಯೊಬ್ಬ ಅಧಿಕಾರದಲ್ಲಿ ಕುಳಿತು ಸಂಕಲ್ಪ ಬದ್ಧನಾದರೆ ಏನು ಮಾಡಬಲ್ಲನೆಂಬುದಕ್ಕೆ ಆದಿತ್ಯನಾಥರು ಸಮರ್ಥವಾದ ಉದಾಹರಣೆಯಾದರು. ಇತ್ತ ಹತ್ತಾರು ಹತ್ಯೆಗಳಿಂದ ರಕ್ತ-ಸಿಕ್ತವಾಗಿದ್ದ ಕೈಗಳಿಂದ ಅಧಿಕಾರದ ಗದ್ದುಗೆ ಏರಿ ಕುಳಿತ ಪಿಣರಾಯಿ ಕೇರಳದ ಆಸ್ಪತ್ರೆಗಳು ಚೆನ್ನಾಗಿವೆ ಎಂದು ಬಡಾಯಿ ಕೊಚ್ಚಿದ್ದೇ ಬಂತು. ಈಗ ಚಿಕಿತ್ಸೆಗೆಂದು ಅಮೆರಿಕಾಕ್ಕೆ ಓಡಿದ್ದಾರೆ.

16

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಮೆರಿಕಾಕ್ಕೆ ಹೊರಟಿದ್ದಾರೆ. ಅಲ್ಲಿನ ಪ್ರತಿಷ್ಠಿತ ಮೇಯೋ ಕ್ಲಿನಿಕ್ನಲ್ಲಿ ಮೂರು ವಾರಗಳ ಕಾಲ ಇದ್ದು ಚಿಕಿತ್ಸೆ ಪಡೆದು ಮರಳಲಿದ್ದಾರೆ. ಆದರೆ ಯಾವ ಕಾಯಿಲೆಯ ಚಿಕಿತ್ಸೆಗೆಂದು ಮಾತ್ರ ಅವರು ಇದುವರೆಗೂ ಬಾಯಿ ಬಿಟ್ಟಿಲ್ಲ. ಕೆಲವರಿಗೆ ಇದೇ ಒಂದು ದೊಡ್ಡ ರೋಗ. ತಮಗಿರುವ ಕಾಯಿಲೆ ಏನೆಂದು ಹೇಳಿದರೆ ಮುಂದೇನಾಗಿಬಿಡುವುದೋ ಎಂಬ ಆತಂಕ. ಗೋವಾ ಮುಖ್ಯಮಂತ್ರಿ ಪರಿಕ್ಕರ್ಗೆ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಅಮರಿಕೊಂಡಿತು. ಅವರು ಯಾರಿಗೂ ತಿಳಿಯದಂತೆ ಚಿಕಿತ್ಸೆ ಪಡೆದು ಬರಬಹುದಿತ್ತೇನೋ. ಆದರೆ ಅವರು ತನಗಿರುವ ಕಾಯಿಲೆ ಇಂಥದ್ದು ಎಂದು ಹೇಳಲು ಮುಲಾಜು ನೋಡಲಿಲ್ಲ. ಚಿಕಿತ್ಸೆ ಪಡೆದು ಮರಳಿ ಬಂದರು. ಸುಷ್ಮಾಸ್ವರಾಜ್ ತನ್ನ ಬದುಕಿನ ಅತ್ಯಂತ ಔನ್ನತ್ಯದಲ್ಲಿ ಇಂದು ನಿಂತಿದ್ದಾರೆ. ಆಕೆಯ ಕಿಡ್ನಿ ಕೆಲಸ ಮಾಡುವುದು ನಿಂತಿತು. ಹಾಗಂತ ಅದನ್ನು ದೇಶದ ಜನರಿಂದ ಮುಚ್ಚಿಡುವ ಪ್ರಯತ್ನ ಆಕೆ ಮಾಡಲಿಲ್ಲ. ಕಿಡ್ನಿ ಕಸಿ ಮಾಡಿಸಿಕೊಂಡು ಎಂದಿನಂತೆ ತಮ್ಮ ಚಟುವಟಿಕೆಗೆ ಹಾಜರಾಗಿಬಿಟ್ಟರು. ಹಣಕಾಸು ಮಂತ್ರಿ ಅರುಣ್ ಜೇಟ್ಲಿ ಕಿಡ್ನಿ ಸಮಸ್ಯೆಯಿಂದಲೇ ಬಳಲುತ್ತಿದ್ದವರು. ಒಂದಷ್ಟು ದಿನ ಅವರ ಖಾತೆಯನ್ನು ಪಿಯೂಷ ಗೋಯಲ್ರಿಗೆ ವಗರ್ಾಯಿಸಬೇಕಾದ ಅನಿವಾರ್ಯತೆ ಉಂಟಾಯಿತಾದರೂ ಜೇಟ್ಲಿ ತಮ್ಮ ಕಾಯಿಲೆಯ ಕುರಿತಂತೆ ಯಾವುದನ್ನೂ ಗುಪ್ತವಾಗಿಡಲಿಲ್ಲ. ಪಿಣರಾಯಿ ವಿಜಯನ್ ಈಗ ಅಮೆರಿಕಾಕ್ಕೆ ಹೊರಟಿದ್ದಾರಲ್ಲಾ, ಯಾವ ಕಾಯಿಲೆಯ ಚಿಕಿತ್ಸೆಗಾಗಿ ಹೊರಟಿದ್ದಾರೆಂಬುದನ್ನು ಮಾತ್ರ ಬಾಯಿ ಬಿಡುತ್ತಿಲ್ಲ. ಅತ್ತ ಕಾಂಗ್ರೆಸ್ಸಿನ ಅಧಿನಾಯಕಿ ಸೋನಿಯಾ ಸಕರ್ಾರಿ ಖಚರ್ಿನಲ್ಲಿ ಚಿಕಿತ್ಸೆಗೆಂದು ಅಡ್ಡಾಡುತ್ತಿರುತ್ತಾರೆ. ಆಕೆಗಿರುವ ಸಮಸ್ಯೆ ಏನು? ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆ ಯಾವುದು? ಎಂಬುದನ್ನು ಇದುವರೆಗೂ ಬಾಯಿಬಿಟ್ಟಿಲ್ಲ. ಸುರಕ್ಷತೆಯ ದೃಷ್ಟಿಯಿಂದ ಇವುಗಳನ್ನೆಲ್ಲಾ ಹೇಳಲಾಗದು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸದೇ ಮಾಯವಾಗಿಬಿಡುತ್ತಾರೆ. ಕಾಂಗ್ರೆಸ್ಸಿನದು ಯಾವಾಗಲೂ ವಿತಂಡವಾದವೇ. ತನ್ನ ನಾಯಕಿಯ ಕಾಯಿಲೆಯ ವಿಚಾರವನ್ನು ಬಹಿರಂಗಪಡಿಸಬೇಕಾದಾಗ ಆಕೆಯ ಸುರಕ್ಷತೆ ಅಡ್ಡಿಯಾಗುತ್ತದೆ. ಆದರೆ ರಫೇಲ್ ಡೀಲ್ನಲ್ಲಿ ಸುರಕ್ಷತೆಯ ದೃಷ್ಟಿಯಿಂದ ಒಂದಷ್ಟು ವಿಚಾರಗಳನ್ನು ಮುಚ್ಚಿಡಬೇಕೆಂದು ಕೇಳಿಕೊಂಡಾಗ ಮಾತ್ರ ಎಗರಾಡಲು ಶುರುಮಾಡುತ್ತಾರೆ. ಅವರದ್ದೂ ತಪ್ಪಿಲ್ಲ ಬಿಡಿ. ದೇಶದ ಸುರಕ್ಷತೆಗಿಂತ ತಮ್ಮ ಅಧಿನಾಯಕಿಯ ಸುರಕ್ಷತೆಯ ಕುರಿತಂತೆಯೇ ಅವರಿಗೆ ಕಾಳಜಿ ಹೆಚ್ಚು.

17

ಆದರೆ ಇಲ್ಲಿರುವ ಪ್ರಶ್ನೆ ಅದಲ್ಲ. ಉತ್ತರ ಪ್ರದೇಶದ ಗೋರಖ್ಪುರದ ಬಾಬಾ ರಾಘವ್ದಾಸ್ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ 104 ಮಕ್ಕಳು ಎನ್ಸೆಫೆಲೈಟೀಸ್ನಿಂದ ತೀರಿಕೊಂಡರಲ್ಲ; ಹಾಗೆ ಮಕ್ಕಳು ಸಾಯುವುದರಲ್ಲಿ ಅನೇಕ ಸಂಗತಿಗಳು ಅಡಗಿದ್ದವು. ಆಕ್ಸಿಜನ್ನ ಕೊರತೆಯಿತ್ತು. ಸಿಬ್ಬಂದಿಗಳಲ್ಲಿನ ಸಮನ್ವಯತೆಯ ಕೊರತೆಯಿತ್ತು. ಔಷಧಿಗಳ ಪೂರೈಕೆಯಲ್ಲಿ ಒಂದಷ್ಟು ಸಮಸ್ಯೆಗಳಾಗಿದ್ದವು. ಒಟ್ಟಾರೆ ಭಿನ್ನ-ಭಿನ್ನ ಕಾರಣಗಳಿಂದಾಗಿ ಮಕ್ಕಳ ಸಾವಿನ ದೃಶ್ಯವನ್ನು ದೇಶ ನೋಡಬೇಕಾಗಿ ಬಂದಿತ್ತು. ಈ ಹಿಂದೆ ಅದೇ ಆಸ್ಪತ್ರೆಗೆ ಯೋಗಿ ಆದಿತ್ಯನಾಥರು ಎರಡು ಬಾರಿ ಭೇಟಿ ನೀಡಿದ್ದಾಗಿಯೂ ಆಕ್ಸಿಜನ್ ಸಿಲಿಂಡರ್ಗೆ ಕೊಡಬೇಕಾದ ಬಾಕಿ ಹಣದ ಕುರಿತಂತೆ ಅಲ್ಲಿನ ಸಿಬ್ಬಂದಿ ಚಚರ್ೆಯೇ ಮಾಡಿರಲಿಲ್ಲ. ಅಲ್ಲಿರುವಂಥ ಸಮಸ್ಯೆಗಳ ಕುರಿತಂತೆ ಮುಖ್ಯಮಂತ್ರಿಗಳಿಗೆ ವಿಚಾರವನ್ನು ಮುಟ್ಟಿಸಬೇಕಾದ ಕೆಳಹಂತದ ಅಧಿಕಾರಿಗಳು ಸೋತು ಹೋಗಿದ್ದರು. ಅನೇಕ ದಶಕಗಳ ಕಾಲ ಎಸ್ಪಿ, ಬಿಎಸ್ಪಿಗಳ ಆಡಳಿತದಲ್ಲಿ ಗೂಂಡಾ ರಾಜ್ಯವನ್ನೇ ಕಂಡಂಥ ಉತ್ತರಪ್ರದೇಶಕ್ಕೆ ಈಗ ಏಕಾಕಿ ಬದಲಾವಣೆಗೆ ಹೊಂದಿಕೊಳ್ಳುವುದು ಕಷ್ಟವಾಗಿತ್ತು. ಹೊಸದಾಗಿ ಬಂದ ಮುಖ್ಯಮಂತ್ರಿಗಳಿಗೆ ಆದ್ಯತೆಯ ಆಧಾರದ ಮೇಲೆ ಮಾಡಲು ಅನೇಕ ಕೆಲಸಗಳಿದ್ದವು. ಅಷ್ಟರೊಳಗೆ ಇದೊಂದು ಅವಘಡ ನಡೆದು ಇಡಿಯ ಉತ್ತರಪ್ರದೇಶಕ್ಕೆ ಕಳಂಕ ಮೆಟ್ಟಿತ್ತು. ತಕ್ಷಣ ಜಾಗೃತರಾದ ಕಾಂಗ್ರೆಸ್ಸು ಮತ್ತು ಎಡಪಂಥೀಯ ಪಕ್ಷಗಳು ಮನಸೋ ಇಚ್ಛೆ ಯೋಗಿ ಆದಿತ್ಯನಾಥರ ವಿರುದ್ಧ ಮಾತನಾಡಲಾರಂಭಿಸಿದ್ದರು. ಇಂದು ಚಿಕಿತ್ಸೆಗೆಂದು ಅಮೆರಿಕಾಕ್ಕೆ ಓಡಿರುವ ಪಿಣರಾಯಿ ವಿಜಯನ್ ಟ್ವೀಟ್ ಮಾಡಿ ಯೋಗಿ ಆದಿತ್ಯನಾಥರನ್ನು ಕೇರಳಕ್ಕೆ ಆಹ್ವಾನಿಸಿದ್ದರು. ಏಕೆ ಗೊತ್ತೇ? ಕೇರಳದಲ್ಲಿ ಆಸ್ಪತ್ರೆಗಳು ಸಕರ್ಾರದಿಂದ ಅದೆಷ್ಟು ಚೆನ್ನಾಗಿ ನಡೆಸಲ್ಪಡುತ್ತಿವೆ ಎಂಬುದನ್ನು ಯೋಗಿ ನೋಡಲಿ ಅಂತ. ಬೈರಾಗಿಯಾದ ಉತ್ತರಪ್ರದೇಶದ ಮುಖ್ಯಮಂತ್ರಿಗೆ ಸ್ವೀಕರಿಸಿದ್ದನ್ನು ಮರಳಿ ಕೊಟ್ಟು ಅಭ್ಯಾಸ. ಹೀಗಾಗಿ ಅವರೂ ಸುಮ್ಮನಿರದೇ ಅಂಕಿ-ಅಂಶಗಳ ಸಮೇತ ಸರಿಯಾಗಿಯೇ ಪ್ರತಿಕ್ರಿಯಿಸಿದ್ದರು. ಡೆಂಗ್ಯೂ-ಚಿಕನ್ಗುನ್ಯಾಗಳಿಂದಲೇ ವರ್ಷವೊಂದಕ್ಕೆ 300 ಕ್ಕೂ ಹೆಚ್ಚು ಸಾವುಗಳು ಕೇರಳದಲ್ಲಿ ಆಗಿವೆ ಎಂದು ನೆನಪಿಸಿಕೊಟ್ಟು ಜನರ ಸೇವೆ ಮಾಡುವುದನ್ನು ಮೊದಲು ಕಲಿಯಿರಿ ಎಂಬ ಪ್ರತಿ ಹೇಳಿಕೆಯನ್ನು ಕೊಟ್ಟರು. ಹಾಗಂತ ಎಡಪಂಥೀಯರಂತೆ ಮಾತನಾಡುತ್ತಲೇ ಕಾಲ ಕಳೆದವರಲ್ಲ ಯೋಗಿಜಿ. ಗೋರಖ್ಪುರದಲ್ಲಿ ಮಕ್ಕಳ ಸಾವಿಗೆ ಕಾರಣವಾಗುವ ಅಂಶವನ್ನು ಪಟ್ಟಿಮಾಡಿಸಿದರು. 2010ರ ನಂತರದ ಏಳು ವರ್ಷಗಳ ಅವಧಿಯಲ್ಲಿ ಉತ್ತರಪ್ರದೇಶದಲ್ಲಿ 26,000 ಕ್ಕೂ ಹೆಚ್ಚು ಮೆದುಳು ಜ್ವರದ ರೋಗಿಗಳು ದಾಖಲಾಗಿರುವುದು ಗಮನಕ್ಕೆ ಬಂತು. ಇದರಲ್ಲಿ 2000 ದಷ್ಟು ಮಕ್ಕಳು ಜಪಾನೀಸ್ ಎನ್ಸೆಫಲೈಟಿಸ್ನ ಲಕ್ಷಣವುಳ್ಳವರಾಗಿದ್ದರು. 4000 ಕ್ಕೂ ಹೆಚ್ಚು ಜನರ ಸಾವು ಈ ಕಾರಣಕ್ಕೆ ಆಗಿದ್ದನ್ನು ಗುರುತಿಸಿದ ಮುಖ್ಯಮಂತ್ರಿಗಳು ಅಧ್ಯಯನದ ಆಳಕ್ಕಿಳಿದಂತೆ 1978 ರ ನಂತರ ಗೋರಖಪುರವೊಂದರಲ್ಲೇ 6000ಕ್ಕೂ ಹೆಚ್ಚು ಮಕ್ಕಳು ಈ ರೋಗಕ್ಕೆ ಬಲಿಯಾಗಿರುವುದು ತಿಳಿದು ಬಂತು. ಭಾರತೀಯ ಆರೋಗ್ಯ ಸಂಸ್ಥೆ ಎಷ್ಟೇ ಪ್ರಯತ್ನ ಪಟ್ಟಾಗ್ಯೂ 2015 ರಲ್ಲಿ ಕಾಲು ಭಾಗದಷ್ಟು ಮಕ್ಕಳಿಗೂ ಇದರ ಪ್ರತಿರೋಧಕ ಶಕ್ತಿಗೆ ಬೇಕಾದ ವ್ಯಾಕ್ಸಿನ್ ನೀಡುವಲ್ಲಿ ಹಳೆಯ ಸಕರ್ಾರ ಸೋತುಹೋಗಿತ್ತು. ಸವಾಲು ಸ್ವೀಕರಿಸಿದ ಮುಖ್ಯಮಂತ್ರಿಗಳು ಈ ಘಟನೆಯಾದ ಕೆಲವೇ ತಿಂಗಳುಗಳಲ್ಲಿ ಉತ್ತರಪ್ರದೇಶದ ಅಷ್ಟೂ ಮಕ್ಕಳಿಗೆ ರೋಗನಿರೋಧಕ ಚುಚ್ಚು ಮದ್ದು ಕೊಡಿಸುವ ಸಂಕಲ್ಪ ಮಾಡಿದರು. ಸಂತನ ಸಂಕಲ್ಪವನ್ನು ತಡೆಯುವುದುಂಟೇನು? ದಸ್ತಕ್ ಎಂಬ ಹೆಸರಿನ ಈ ಅಭಿಯಾನ ಶುರುವಾದ ಕೆಲವೇ ತಿಂಗಳಲ್ಲಿ ರಾಜ್ಯದ ಪ್ರತಿಯೊಂದು ಮಗುವಿಗೂ ಔಷಧಿ ಕೊಡಿಸುವಲ್ಲಿ ಯಶಸ್ವಿಯೂ ಆದರು. ವಿಶ್ವಸಂಸ್ಥೆಯ ಆರೋಗ್ಯ ವಿಭಾಗ ಯೋಗಿ ಆದಿತ್ಯನಾಥರ ಈ ಸಾಧನೆಗೆ ಬೆನ್ನು ಚಪ್ಪರಿಸಿ ಅಭಿನಂದಿಸಿತು.

18

ಯೋಗಿಯೊಬ್ಬ ಅಧಿಕಾರದಲ್ಲಿ ಕುಳಿತು ಸಂಕಲ್ಪ ಬದ್ಧನಾದರೆ ಏನು ಮಾಡಬಲ್ಲನೆಂಬುದಕ್ಕೆ ಆದಿತ್ಯನಾಥರು ಸಮರ್ಥವಾದ ಉದಾಹರಣೆಯಾದರು. ಇತ್ತ ಹತ್ತಾರು ಹತ್ಯೆಗಳಿಂದ ರಕ್ತ-ಸಿಕ್ತವಾಗಿದ್ದ ಕೈಗಳಿಂದ ಅಧಿಕಾರದ ಗದ್ದುಗೆ ಏರಿ ಕುಳಿತ ಪಿಣರಾಯಿ ಕೇರಳದ ಆಸ್ಪತ್ರೆಗಳು ಚೆನ್ನಾಗಿವೆ ಎಂದು ಬಡಾಯಿ ಕೊಚ್ಚಿದ್ದೇ ಬಂತು. ಈಗ ಚಿಕಿತ್ಸೆಗೆಂದು ಅಮೆರಿಕಾಕ್ಕೆ ಓಡಿದ್ದಾರೆ. ರೋಗ ಅದೆಷ್ಟೇ ಕೆಟ್ಟದ್ದಾಗಿರಲಿ ಹಿಂದುವಾಗಿ ಅವರು ಗುಣವಾಗಿ ಬರಲೆಂದಷ್ಟೇ ಹಾರೈಸುತ್ತೇನೆ. ಆದರೆ ತಮ್ಮ ನಾಯಕ ವಿದೇಶದಲ್ಲಿ ಚಿಕಿತ್ಸೆ ಪಡೆಯುವುದನ್ನು ಪರಿಕ್ಕರ್ನನ್ನು ಮುಂದಿಟ್ಟು ಸಮಥರ್ಿಸಿಕೊಳ್ಳುತ್ತಿರುವ ಕೆಂಪಂಗಿ ಗುಲಾಮರನ್ನು ಕಂಡಾಗ ಮಾತ್ರ ಅಯ್ಯೋ ಪಾಪ ಎನಿಸುತ್ತದೆ. ಪರಿಕ್ಕರ್ ಗೊವಾದಲ್ಲಿ ಜಗತ್ಪ್ರಸಿದ್ಧ ಆಸ್ಪತ್ರೆಗಳಿವೆ ಎಂದು ಬಡಾಯಿ ಕೊಚ್ಚಿಕೊಳ್ಳಲಿಲ್ಲ. ಅಮೆರಿಕಾದ ಬಂಡವಾಳಶಾಹಿ ನೀತಿಯನ್ನು ವಿರೋಧಿಸುತ್ತಾ ಕೂರಲಿಲ್ಲ. ತನ್ನ ಮಂತ್ರಿಗಳನ್ನು ಕಮ್ಯುನಿಸ್ಟರ ಅಡ್ಡ ಆಗಿರುವ ಕ್ಯೂಬಾದ ಅಧ್ಯಯನಕ್ಕೆಂದು ಕಳಿಸಲಿಲ್ಲ. ಕೊನೆಗೆ ಇತರ ರಾಜ್ಯಗಳಿಗಿಂತ ತನ್ನಲ್ಲಿ ವ್ಯವಸ್ಥೆಗಳು ಬಲು ಜೋರಾಗಿವೆ ಎಂದು ಬಡಾಯಿ ಕೊಚ್ಚಿಕೊಳ್ಳಲಿಲ್ಲ. ಪ್ರವಾಹದಲ್ಲಿ ಮಿಂದೆದ್ದು ಜನ ನರಳುತ್ತಿರುವಾಗ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಾ ತನಗೆ ಪ್ರತಿಯಾಗಿ ಮತ್ತೊಬ್ಬನನ್ನು ನೇಮಿಸದೇ ವಿದೇಶದಿಂದಲೇ ಸಕರ್ಾರ ನಡೆಸುತ್ತೆನೆಂದು ಧಾಷ್ಟ್ರ್ಯ ತೋರುತ್ತಿರುವ ಪಿಣರಾಯಿಯನ್ನು ಹೆಗಲ ಮೇಲೆ ಕೂರಿಸಿಕೊಂಡು ಮೆರೆಯುವ ಎಲ್ಲ ಜೀವಪರವಾದ ಆ ಎಲ್ಲಾ ಮಿತ್ರರಿಗೆ ನಮೋ ಎನ್ನುತ್ತೇನೆ. ಇಲ್ಲಿ ನಮೋ ಎಂಬುದಕ್ಕೆ ಬೇರ್ಯಾವ ಅರ್ಥವನ್ನೂ ಕಲ್ಪಿಸಬೇಡಿ ಎಂದು ಕೋರಿಕೊಳ್ಳುವೆ ಕೂಡ!

ಬುದ್ಧಿಜೀವಿಗಳಿಲ್ಲದೆಡೆ ಶಾಂತಿ, ನೆಮ್ಮದಿ, ಸಹೋದರತೆ ತುಂಬಿ ತುಳುಕಾಡುತ್ತದೆ!

ಬುದ್ಧಿಜೀವಿಗಳಿಲ್ಲದೆಡೆ ಶಾಂತಿ, ನೆಮ್ಮದಿ, ಸಹೋದರತೆ ತುಂಬಿ ತುಳುಕಾಡುತ್ತದೆ!

ಗೋವಿನ ಕಳ್ಳತನ ನಡೆಸುತ್ತಿರುವವರನ್ನು ಬಡಿಯುತ್ತಿರುವಾಗ ಆತ ತೀರಿಕೊಂಡದ್ದಕ್ಕೆ ಅದನ್ನು ಮಾಬ್ ಲಿಂಚಿಂಗ್ ಎಂದು ಕರೆದು ಟೌನ್ಹಾಲಿನ ಮುಂದೆ ನಾಟ್ ಇನ್ ಮೈ ನೇಮ್ ಪ್ರತಿಭಟನೆ ನಡೆಸಿದ ಚಳವಳಿ ಗ್ಯಾಂಗಿನ ಜನರ್ಯಾರೂ ಈಗ ಕಾಣುತ್ತಲೇ ಇಲ್ಲ. ಗೋಕಳ್ಳರನ್ನು ಬಡಿದು ಕೊಲ್ಲುವದು ತಪ್ಪು ನಿಜ. ಆದರೆ ಪೊಲೀಸರಿಗೆ ಅಂಥವರ ಕುರಿತ ಮಾಹಿತಿಯನ್ನು ಕೊಟ್ಟು ಕಾನೂನಿನ ರೀತ್ಯಾ ಕಾಯರ್ಾಚರಣೆ ನಡೆಸಲಿಕ್ಕೆ ಸಹಕಾರ ನೀಡುವುದೂ ತಪ್ಪಾ?

ಉತ್ತರ ಪ್ರದೇಶದ ಲಖ್ನೌನಿಂದ 180 ಕಿ.ಮೀ ದೂರದಲ್ಲಿರುವ ಕುದರ್ಕೋಟ್ನ ದೇವಸ್ಥಾನವೊಂದರಲ್ಲಿ ನಡೆದ ಕಗ್ಗೊಲೆ ದೇಶದಲ್ಲೆಲ್ಲೂ ಸುದ್ದಿಯೇ ಆಗಲಿಲ್ಲ. ಗೋಮಾಂಸದ ನೆಪದಲ್ಲಿ ಅಖ್ಲಾಕ್ ತೀರಿಕೊಂಡಾಗ ದೇಶದ ಬುದ್ಧಿಜೀವಿಗಳೆಲ್ಲಾ ಅದನ್ನೊಂದು ಜಾಗತಿಕ ಸುದ್ದಿ ಮಾಡಿದ್ದರಲ್ಲ. ಈ ದೇವಸ್ಥಾನದಲ್ಲಿ ನಡೆದ ಕಗ್ಗೊಲೆಯನ್ನು ಮಾತ್ರ ಕಂಡರೂ ಕಾಣದಂತೆ ಕುಳಿತುಬಿಟ್ಟಿದ್ದಾರೆ. ನಡೆದದ್ದಿಷ್ಟೇ. ದೇವಸ್ಥಾನದ ಪೂಜಾರಿಗೆ ಗೋವಿನ ಮೇಲೆ ಅಪಾರವಾದ ಪ್ರೀತಿ, ಭಕ್ತಿ ಕೂಡ. ಹೀಗಾಗಿಯೇ ಆತ ಗೋಕಳ್ಳರ ಕುರಿತಂತೆ ಪೊಲೀಸರಿಗೆ ವರದಿ ಮಾಡುತ್ತಲೇ ಇರುತ್ತಿದ್ದ. ಆತನ ಮಾಹಿತಿಯನ್ನನುಸರಿಸಿಯೇ ಗೋಕಳ್ಳರ ಬೆನ್ನು ಬೀಳುತ್ತಿದ್ದ ಪೊಲೀಸರು ಗೋವುಗಳನ್ನು ಉಳಿಸಿದ್ದಲ್ಲದೇ ಅನೇಕ ಬಾರಿ ಗೋಕಳ್ಳರನ್ನು ಜೈಲಿಗಟ್ಟಿದ್ದೂ ಇದೆ. ಅಕ್ಷರಶಃ ನ್ಯಾಯಯುತ ಮಾರ್ಗದಲ್ಲಿಯೇ ಪೂಜಾರಿಗಳು ಗೋರಕ್ಷಣೆ ಮಾಡುತ್ತಿದ್ದುದು. ಅವರೆಂದಿಗೂ ಬಂದೂಕು ಬಳಸಲಿಲ್ಲ, ಕತ್ತಿ ಉಪಯೋಗಿಸಲಿಲ್ಲ. ಗೋಕಳ್ಳರನ್ನು ಮುಖಾಮುಖಿ ಭೇಟಿಯಾಗಲೂ ಇಲ್ಲ. ಇದನ್ನು ಸಹಿಸದ ಕಳ್ಳರ ಗುಂಪು ವಾರದ ಹಿಂದೆ ಮಂದಿರಕ್ಕೆ ನುಗ್ಗಿ ಅರ್ಚಕರನ್ನು ಅವರ ಮಂಚಕ್ಕೆ ಕಟ್ಟಿ ಹಾಕಿ ಮನಸೋ ಇಚ್ಛೆ ಬಡಿದು ಕತ್ತನ್ನು ಸೀಳಿ ದೇಹದಲ್ಲೆಲ್ಲಾ ಕತ್ತಿಯಿಂದ ಗಾಯ ಮಾಡಿ ಕೊಂದಿದ್ದಾರೆ. ಇದು ಐಸಿಸ್ ಉಗ್ರಗಾಮಿಗಳು ನಡೆಸುವ ಮಾದರಿಯದ್ದೇ ಕೊಲೆ. ಹಾಗಂತ ಹೋಗುವಾಗ ಸುಮ್ಮನೆ ಹೋಗಲಿಲ್ಲ. ಹಣ ಸಂಗ್ರಹ ಮಾಡುವ ಹುಂಡಿಯನ್ನು ಒಡೆದಿದ್ದಾರೆ. ಒಂದಷ್ಟು ಅಮೂಲ್ಯ ವಸ್ತುಗಳನ್ನು ಕದ್ದೊಯ್ಯುವ ಯತ್ನ ಮಾಡಿದ್ದಾರೆ. ಒಟ್ಟಾರೆ ಇದನ್ನೊಂದು ದರೋಡೆ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದಾರೆ. ಉತ್ತರ ಪ್ರದೇಶದ ಪೊಲೀಸರ ಚುರುಕಾದ ಕಾಯರ್ಾಚರಣೆಯಿಂದಾಗಿ ನದೀಂ, ಸಲ್ಮಾನ್, ಶಹಜಾದ್, ಜಬ್ಬಾರ್ ಮತ್ತು ಮಾಂಜು ಎಂಬ ಐವರು ಸಿಕ್ಕು ಬಿದ್ದಾಗಲೇ ಇದರ ಹಿಂದೆ ದೊಡ್ಡದೊಂದು ಮಾಫಿಯಾ ಅಡಗಿರುವ ಸುದ್ದಿ ಬಂದಿದ್ದು. ಪೊಲೀಸರು ಸರಿಯಾಗಿ ಬಾರಿಸಿದೊಡನೆ ಈ ಐವರೂ ಗೋಕಳ್ಳತನಕ್ಕೆ ಅಡ್ಡಿ ಬರುತ್ತಿದ್ದ ಈ ಅರ್ಚಕರ ವಿರುದ್ಧ ತಮ್ಮ ದ್ವೇಷವನ್ನು ಪರಿಪೂರ್ಣವಾಗಿ ಒಪ್ಪಿಕೊಂಡುಬಿಟ್ಟಿದ್ದಾರೆ.

13

ಈಗ ಮುಖ್ಯ ಪ್ರಶ್ನೆಗೆ ಬನ್ನಿ. ಗೋವಿನ ಕಳ್ಳತನ ನಡೆಸುತ್ತಿರುವವರನ್ನು ಬಡಿಯುತ್ತಿರುವಾಗ ಆತ ತೀರಿಕೊಂಡದ್ದಕ್ಕೆ ಅದನ್ನು ಮಾಬ್ ಲಿಂಚಿಂಗ್ ಎಂದು ಕರೆದು ಟೌನ್ಹಾಲಿನ ಮುಂದೆ ನಾಟ್ ಇನ್ ಮೈ ನೇಮ್ ಪ್ರತಿಭಟನೆ ನಡೆಸಿದ ಚಳವಳಿ ಗ್ಯಾಂಗಿನ ಜನರ್ಯಾರೂ ಈಗ ಕಾಣುತ್ತಲೇ ಇಲ್ಲ. ಗೋಕಳ್ಳರನ್ನು ಬಡಿದು ಕೊಲ್ಲುವದು ತಪ್ಪು ನಿಜ. ಆದರೆ ಪೊಲೀಸರಿಗೆ ಅಂಥವರ ಕುರಿತ ಮಾಹಿತಿಯನ್ನು ಕೊಟ್ಟು ಕಾನೂನಿನ ರೀತ್ಯಾ ಕಾಯರ್ಾಚರಣೆ ನಡೆಸಲಿಕ್ಕೆ ಸಹಕಾರ ನೀಡುವುದೂ ತಪ್ಪಾ? ಈ ಪ್ರಶ್ನೆಗೆ ಅನೇಕ ಹೋರಾಟಗಾರರು ಇಂದು ಉತ್ತರಿಸಬೇಕಿದೆ. ಜೊತೆಗೆ ಲಿಂಚಿಂಗ್ ಎಂಬ ಪದವನ್ನು ಮುಂದಿಟ್ಟು ಹಿಂದುಗಳನ್ನು ಪ್ರಶ್ನಿಸುವ ಮುಸಲ್ಮಾನ ನಾಯಕರೂ ಉತ್ತರಿಸಬೇಕಿದೆ. ಇತ್ತೀಚೆಗೆ ಸೆಮಿನಾರ್ ಒಂದರಲ್ಲಿ ಮಾತನಾಡುತ್ತಾ ಪತ್ರಕರ್ತ ಬಿ.ಎಮ್ ಹನೀಫ್ ಹಿಂದೆಂದೊ ಮುಸಲ್ಮಾನರು ಮಾಡಿದ ತಪ್ಪಿಗೆ ನಾವು ಇಂದೇಕೆ ಉತ್ತರಿಸಬೇಕು ಎಂಬ ಪ್ರಶ್ನೆ ಕೇಳಿದ್ದರು. ಕೊನೆಯ ಪಕ್ಷ ಒಂದು ವಾರದ ಹಿಂದೆ ನಡೆದಿರುವ ಈ ಹತ್ಯೆಯ ಕುರಿತಂತೆಯಾದರೂ ಅವರು ಉತ್ತರಿಸಿದರೆ ಸಾಕಷ್ಟು ಆಗಬಹುದೇನೊ. ಇಷ್ಟಕ್ಕೂ ಲಿಂಚಿಂಗ್ ಭಾರತಕ್ಕೆ ಹೊಸದೇನೂ ಅಲ್ಲ. ಔರಂಗಜೇಬ ಮಹಾ ಲಿಂಚರ್. ಇತಿಹಾಸದಲ್ಲಿ ಕೊಲೆಗಡುಕನೆಂದೇ ಖ್ಯಾತಿ ಪಡೆದವ. ಅವನಿಂದ ಕೊಲೆಯಾಗಲ್ಪಡಲು ಹಿಂದುವಾದವನು ಯಾವುದೇ ತಪ್ಪು ಮಾಡಬೇಕು ಎಂದೂ ಇರಲಿಲ್ಲ. ಆತ ಹಿಂದುವಾಗಿರುವುದೇ ಅಪರಾಧವಾಗಿತ್ತು. ಇದು ಬರಿ ಔರಂಗಜೇಬನ್ನದ್ದಷ್ಟೇ ಕಥೆಯಲ್ಲ. ಇಲ್ಲಿ ಆಳಿದ ಬಹುತೇಕ ಮುಸಲ್ಮಾನ ರಾಜರು ಹಿಂದೂಗಳೊಂದಿಗೆ ಹೀಗೆಯೇ ನಡೆದುಕೊಂಡವರು. ಕ್ರಿಶ್ಚಿಯನ್ನರದ್ದೂ ಹಾಗೆಯೇ. ಗೋವಾದಲ್ಲಿ ನಡೆದ ಇನ್ಕ್ವಿಸಿಷನ್ನ ಕುರಿತಂತೆ ಯಾವೊಂದೂ ಚಚರ್ಿನಲ್ಲೂ ಪಾದ್ರಿಗಳು ಮಾತನಾಡುವುದಿಲ್ಲ. ಜನರ ಪಾಪಗಳನ್ನು ಸ್ವೀಕರಿಸಲೆಂದೇ ಬಂದ ಕ್ರಿಸ್ತ ಹಿಂದುಗಳ ಕೊಲೆಯ ಪಾಪವನ್ನು ಸ್ವೀಕರಿಸುತ್ತಾನಾ ಎಂಬುದು ಕೇಳಿಕೊಳ್ಳಲೇಬೇಕಾದ ಪ್ರಶ್ನೆ. ಇವೆಲ್ಲವನ್ನೂ ಇತಿಹಾಸ ಎಂದು ಕರೆಯುವುದಾದರೆ ಕಶ್ಮೀರದಲ್ಲಿ ಪಂಡಿತರನ್ನು ಬರ್ಬರವಾಗಿ ಕೊಂದು ಉಳಿದವರು ಆಸ್ತಿ-ಪಾಸ್ತಿ ಎಲ್ಲವನ್ನೂ ಬಿಟ್ಟು ಓಡಿಬರುವಂತೆ ಮಾಡಿದರಲ್ಲ, ಗೋಧ್ರಾದ ರೈಲಿನಲ್ಲಿ ಕರಸೇವಕರನ್ನು ಕೂಡಿ ಹಾಕಿ ಸುಟ್ಟುಬಿಟ್ಟರಲ್ಲ ಅದನ್ನು ಏನೆಂದು ಕರೆಯಬೇಕು ಹೇಳಿ. ತೀರಾ ಇತ್ತೀಚೆಗೆ ಮುಸಲ್ಮಾನ ಹುಡುಗಿಯನ್ನು ಪ್ರೀತಿಸಿದ ಎಂಬ ಕಾರಣಕ್ಕೆ ರಾಜಸ್ಥಾನದ ಬಾಡ್ಮೇರ್ ಜಿಲ್ಲೆಯಲ್ಲಿ ದಲಿತ ಹುಡುಗ ಖೇತಾರಾಮ್ ಭೀಲ್ನನ್ನು ಅತ್ಯಂತ ಕೆಟ್ಟದಾಗಿ ಕೊಂದರಲ್ಲ. ಅಂದು ಈ ಲಿಂಚಿಂಗ್ನ ಕುರಿತಂತೆ ಯಾರು ಮಾತೇ ಆಡಲಿಲ್ಲ. ದೆಹಲಿಯಲ್ಲಿ ಮುಸ್ಲೀಂ ಹುಡುಗಿಯನ್ನು ಪ್ರೀತಿಸಿದ್ದ ಎಂಬ ಕಾರಣಕ್ಕೆ ಆಕೆಯ ಮನೆಯವರು ಅಂಕಿತ್ ಸಕ್ಸೇನಾನನ್ನು ಬರ್ಬರವಾಗಿ ಕೊಂದಾಗ ಮುಖ್ಯವಾಹಿನಿಗಳು ತೀರಿಕೊಂಡವನ ಮತ್ತು ಕೊಂದವರ ಜಾತಿಗಳನ್ನು ಮರೆಮಾಚುವ ಪ್ರಯತ್ನ ಮಾಡಿದರಲ್ಲ. ಇದಕ್ಕೇನು ಉತ್ತರ? ಬಿಹಾರದಲ್ಲಿ ಹಿಂದೂ ಹುಡುಗನನ್ನು ಪ್ರೀತಿಸಿದ್ದಾಳೆ ಎಂಬ ಕಾರಣಕ್ಕೆ ಚಂಪಾರಣ್ ಜಿಲ್ಲೆಯ ನೂರ್ ಜಹಾಂ ಖತೂನ್ ಎಂಬ ಹುಡುಗಿಯನ್ನು ಆಕೆಯ ಮನೆಯವರೇ ಕೊಂದಿದ್ದು ಇನ್ನೂ ಹಸಿಯಾಗಿಯೇ ಇದೆಯಲ್ಲ. ಇದಕ್ಕೆಲ್ಲಾ ಯಾರು ಉತ್ತರಿಸುತ್ತಾರೆ.

ಹೀಗೆಲ್ಲಾ ಪ್ರಶ್ನೆ ಕೇಳಿದೊಡನೆ ಒಂದಷ್ಟು ಬುದ್ಧಿಜೀವಿಗಳ ಚಡಪಡಿಕೆ ಆರಂಭವಾಗಿಬಿಡುತ್ತದೆ. ಅವರು ಸೆಲೆಕ್ಟೀವ್ ಹೋರಾಟಗಾರರು. ತಮಗೆ ಕಸಿವಿಸಿಯಾಗುವ ಪ್ರಶ್ನೆಗಳು ಬಂದೊಡನೆ ಉತ್ತರ ಭಾರತದಲ್ಲೆಲ್ಲೊ ನಡೆಯುವ ಸಾವಿಗೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು ಮಂಡ್ಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಕುರಿತಂತೆ ಕಣ್ಣೀರಿಡೋಣ ಎಂದುಬಿಡುತ್ತಾರೆ. ಆದರೆ ಉತ್ತರ ಭಾರತದಲ್ಲಿ ಅಖ್ಲಾಕ್ನ ಸಾವು ಸಂಭವಿಸಿದಾಗ ಮಾತ್ರ ಬೀದಿಗೆ ಬಂದು ಕಣ್ಣೀರಿಡುವ ನಾಟಕವಾಡುತ್ತಾರೆ.

ಮತ್ತೊಬ್ಬರನ್ನು ಕೊಲ್ಲುವ ಮಾನಸಿಕತೆ ಎಲ್ಲ ಕಾಲದಲ್ಲೂ ಎಲ್ಲ ಪಂಥಗಳಲ್ಲೂ ಇದ್ದೇ ಇದೆ. ಆದರೆ ಒಬ್ಬರನ್ನು ವೈಭವೀಕರಿಸಿ ಮತ್ತೊಬ್ಬರನ್ನು ಬಚ್ಚಿಡುವ ಈ ಬುದ್ಧಿಜೀವಿಗಳಿದ್ದಾರಲ್ಲಾ ಇವರು ಸಮಾಜದೊಳಗಿನ ಕಂದಕವನ್ನು ಹೆಚ್ಚಿಸುತ್ತಾ ಹೋಗುತ್ತಾರೆ. ಹಿಂದೂ ಮುಸಲ್ಮಾನರು ತಾವು ಒಬ್ಬರಿಂದ ಒಬ್ಬರು ದೂರವಿರಬೇಕಿಲ್ಲ. ಇವರಿಬ್ಬರ ನಡುವೆ ಸದಾ ದೂರವನ್ನು ಕಾಪಾಡಲು ಯತ್ನಿಸುವ ಈ ಢೋಂಗಿ ಜಾತ್ಯಾತೀತವಾದಿಗಳಿಂದ ನಿಸ್ಸಂಶಯವಾಗಿ ದೂರ ಕಾಪಾಡಿಕೊಳ್ಳಬೇಕಿದೆ.

14

ಕೊಡಗಿನ ಶುಂಠಿಕೊಪ್ಪದಲ್ಲಿ ಮೂರು ಗಂಜಿಕೇಂದ್ರಗಳು. ಒಂದನ್ನು ಸೇಂಟ್ ಮೇರೀಸ್ ಶಾಲೆ ನಡೆಸುತ್ತಿದೆ. ಮತ್ತೊಂದು ರಾಮಮಂದಿರದಲ್ಲಿ ಸೇವಾ ಭಾರತಿಯವರ ಕಡೆಯಿಂದ. ಮೂರನೆಯದು ಮದರಸಾದಲ್ಲಿ ಅಲ್ಲಿನ ಆಡಳಿತದವರ ಕಡೆಯಿಂದ. ವ್ಯವಸ್ಥೆ ಸಾಕಷ್ಟಿರುವುದರಿಂದ ಮೂರೂ ಕಡೆಯ ಜನರಿಗೆ ಮದರಸಾ ತಾನೇ ಅಡಿಗೆ ಮಾಡಿ ಕಳಿಸುತ್ತಿದೆ. ಮೂರೂ ಕಡೆಗಳಲ್ಲೂ ಎಲ್ಲ ಜಾತಿಯವರು ಆಶ್ರಯ ಪಡೆದಿದ್ದಾರೆ. ಇವೆಲ್ಲವೂ ಹೀಗೆ ನಡೆದಿರುವುದೇಕೆ ಗೊತ್ತೇನು? ಸಂಕಟ ಬಂದೆಡೆಯಲ್ಲಿ ಬುದ್ಧಿಜೀವಿಗಳಿರುವುದಿಲ್ಲ. ಮತ್ತು ಅವರಿಲ್ಲದೆಡೆ ಶಾಂತಿ ನೆಮ್ಮದಿ ಮತ್ತು ಸಹೋದರತೆ ತುಂಬಿ ತುಳುಕಾಡುತ್ತಿರುತ್ತದೆ.

ಹಾಸ್ಟೆಲಿನ ಪಂಜರ ಒಡೆಯುವ ಜಾಮಿಯಾ ಮಿಲಿಯಾ ಹೋರಾಟ!

ಹಾಸ್ಟೆಲಿನ ಪಂಜರ ಒಡೆಯುವ ಜಾಮಿಯಾ ಮಿಲಿಯಾ ಹೋರಾಟ!

ಪಂಜರ ಮುರಿದು ಹಾಕು ಎಂಬರ್ಥದ ಈ ಹೋರಾಟ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಹೆಣ್ಣುಮಕ್ಕಳ ಹಾಸ್ಟೆಲ್ನಲ್ಲಿ 2015 ರಲ್ಲಿ ಶುರುವಾಯ್ತು. ಈ ಹೋರಾಟದ ಕಾರ್ಯಕತರ್ೆ ಮರಿಯಾ ಮುಷ್ಟಾಕ್ ಹೇಳುವಂತೆ ‘ಉನ್ನತ ಶಿಕ್ಷಣದಲ್ಲಿ ಮಹಿಳೆಯರಿಗೆ ಅವಕಾಶವೇನೋ ಸಿಕ್ಕಾಯ್ತು. ಆದರೆ ಪುರುಷರ ದಬ್ಬಾಳಿಕೆ ನಿಲ್ಲಲಿಲ್ಲ’. ವಿಶ್ವವಿದ್ಯಾಲಯದ ಆಡಳಿತ ಮಂಡಳಿಗಳು ತಮ್ಮ ಕ್ರಿಯಾ ಶೈಲಿಯನ್ನು ಈಗ ಬದಲಿಸಿಕೊಳ್ಳಲೇಬೇಕಿದೆ.

ಸ್ತ್ರೀ ಸಮಾನತೆಯ ಹೋರಾಟದ ಹಿನ್ನೆಲೆಯಲ್ಲಿ ಎದೆ ಬಡೆದುಕೊಳ್ಳುವ ತಂಡವೊಂದು ಸದಾ ಟೌನ್ಹಾಲ್ನಲ್ಲಿ ನಿಂತು ಬೊಬ್ಬಿರಿಯುವುದನ್ನು ನಾವು ಕಂಡೇ ಇರುತ್ತೇವೆ. ಆದರೆ ಈ ಹೋರಾಟವೆಲ್ಲ ಬಹುಪಾಲು ಹಿಂದೂ ವಿರೋಧಿ ಮತ್ತು ಕೆಲವು ಬಾರಿ ದೇಶವಿರೋಧಿಯೂ ಆಗಿರುತ್ತವೆ. ತಮಗೆ ಬೇಕಾಗಿರುವುದನ್ನು ಮಾತ್ರ ಆರಿಸಿಕೊಂಡು ಪ್ರತಿಭಟನೆ ಮಾಡುವಲ್ಲಿ ಚೆನ್ನಾಗಿ ತಯಾರಾಗಿರುವ ಜನ ಇವರು. ಕಳೆದ ಮೂರು ವರ್ಷಗಳಿಂದ ದೇಶದಾದ್ಯಂತ ನಡೆಯುತ್ತಿರುವ ಒಂದು ಸ್ತ್ರೀ ಆಂದೋಲನದ ಕುರಿತಂತೆ ಇವರ್ಯಾರೂ ಮಾತನಾಡಲೇ ಇಲ್ಲ. ಪಿಂಜರಾತೋಡ್ ಎಂಬ ಹೋರಾಟದ ಕುರಿತಂತೆ ಅವರೆಂದಿಗೂ ಚಚರ್ೆಯೂ ಮಾಡಿಲ್ಲ.

10

ಪಂಜರ ಮುರಿದು ಹಾಕು ಎಂಬರ್ಥದ ಈ ಹೋರಾಟ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಹೆಣ್ಣುಮಕ್ಕಳ ಹಾಸ್ಟೆಲ್ನಲ್ಲಿ 2015 ರಲ್ಲಿ ಶುರುವಾಯ್ತು. ಈ ಹೋರಾಟದ ಕಾರ್ಯಕತರ್ೆ ಮರಿಯಾ ಮುಷ್ಟಾಕ್ ಹೇಳುವಂತೆ ‘ಉನ್ನತ ಶಿಕ್ಷಣದಲ್ಲಿ ಮಹಿಳೆಯರಿಗೆ ಅವಕಾಶವೇನೋ ಸಿಕ್ಕಾಯ್ತು. ಆದರೆ ಪುರುಷರ ದಬ್ಬಾಳಿಕೆ ನಿಲ್ಲಲಿಲ್ಲ’. ವಿಶ್ವವಿದ್ಯಾಲಯದ ಆಡಳಿತ ಮಂಡಳಿಗಳು ತಮ್ಮ ಕ್ರಿಯಾ ಶೈಲಿಯನ್ನು ಈಗ ಬದಲಿಸಿಕೊಳ್ಳಲೇಬೇಕಿದೆ. ವಾಸ್ತವವಾಗಿ ಈ ಹೋರಾಟ ಶುರುವಾಗಿದ್ದು ಅಲ್ಲಿನ ಮಹಿಳಾ ಹಾಸ್ಟೆಲ್ಗಳಲ್ಲಿರುವ ತಾರತಮ್ಯದ ಕುರಿತಂತೆ. ಸಂಜೆ ಏಳುವರೆಯೊಳಗೆ ಹಾಸ್ಟೆಲ್ಗೆ ಬಂದು ಸೇರಿಕೊಂಡುಬಿಡಬೇಕು. ಆನಂತರ ಬೀಗ ಹಾಕಿ ಎಲ್ಲ ಮಕ್ಕಳನ್ನು ಹೊರಗೆ ಹೋಗಲು ಬಿಡಲಾಗದು ಎಂಬ ನಿಯಮವೇ ಈ ಹೆಣ್ಣುಮಕ್ಕಳು ಬೀದಿಗೆ ಬರಲು ಕಾರಣವಾಯ್ತು. ಇವರು ಬರಿ ಬೀದಿಗೆ ಬಂದದ್ದಷ್ಟೇ ಅಲ್ಲ. ಕಾಲೇಜು ಮತ್ತು ಹಾಸ್ಟೆಲ್ಗಳ ಗೋಡೆಯನ್ನು ಪಿಂಜರಾತೋಡ್ ಬರಹಗಳಿಂದ ತುಂಬಿಸಿಬಿಟ್ಟರು. ಮೇನಕಾ ಗಾಂಧಿ ನಗರಕ್ಕೆ ಬಂದಿದ್ದಾಗ ಈ ಲಕ್ಷ್ಮಣ ರೇಖೆಯಿಂದ ತಮ್ಮನ್ನುಳಿಸಿ ಎಂದು ಕೇಳಿಕೊಂಡಿದ್ದರೂ ಕೂಡ. ಜಾಮಿಯಾ ಮಿಲಿಯಾದಲ್ಲಿ ಈ ಗಲಾಟೆ ಶುರುವಾಗುತ್ತಿದ್ದಂತೆ ದೇಶದ ಬಹುತೇಕ ಹೆಣ್ಣುಮಕ್ಕಳ ಹಾಸ್ಟೆಲ್ಗಳಲ್ಲಿ ಇದೇ ಅಥವಾ ಇದಕ್ಕಿಂತಲೂ ಕಠಿಣವಾದ ನಿಯಮ ಜಾರಿಯಲ್ಲಿರುವುದು ಬೆಳಕಿಗೆ ಬಂತು. ಉತ್ತರ ಪ್ರದೇಶದ ಅಲಿಘರ್ ಮುಸ್ಲೀಂ ಯುನಿವಸರ್ಿಟಿಯಲ್ಲಿ ಸಂಜೆ 5 ಗಂಟೆಗೆ ವಿದ್ಯಾಥರ್ಿ ನಿಲಯದ ಬಾಗಿಲು ಹಾಕಿ ಹೆಣ್ಣುಮಕ್ಕಳನ್ನು ಹೊರಗೆ ಹೋಗಲು ಬಿಡುತ್ತಿರಲಿಲ್ಲ. ವಿಶ್ವವಿದ್ಯಾಲಯಗಳಲ್ಲಿ ಗ್ರಂಥಾಲಯಗಳು ನಡುರಾತ್ರಿಯವರೆಗೆ ತೆರೆದಿರುವಾಗ ಹೆಣ್ಣುಮಕ್ಕಳು ವಿದ್ಯಾಥರ್ಿ ನಿಲಯದೊಳಗೆ ಏಕೆ ಕೂಡಿಹಾಕಲ್ಪಡಬೇಕೆಂಬುದು ಅವರ ಮೊದಲ ಪ್ರಶ್ನೆ. ಅದಕ್ಕೂ ಮಿಗಿಲಾಗಿ ಗಂಡುಮಕ್ಕಳು ರಾತ್ರಿ ಹೊರಗೆ ಅಡ್ಡಾಡಬಹುದಾದರೆ ತಮಗೇಕಿಲ್ಲ ಎಂಬುದು ಅಂತರಂಗದಲ್ಲಿ ಅಡಗಿರುವ ತೊಳಲಾಟ.

ಜಾಮಿಯಾ ಮಿಲಿಯಾದಲ್ಲಿ ಈ ಆಂದೋಲನ ಶುರುವಾಗುತ್ತಿದ್ದಂತೆ ನಿಧಾನವಾಗಿ ದೆಹಲಿ ಮತ್ತು ಪಂಜಾಬುಗಳಿಗೂ ಇದು ಹಬ್ಬಿತು. ಪಿಂಜರಾತೋಡ್ ಹೆಸರಿನಲ್ಲಿ ಫೇಸ್ಬುಕ್ ಪೇಜ್ಗಳು ಶುರುವಾದವು. ಮೊದ-ಮೊದಲು ವಿದ್ಯಾಥರ್ಿ ನಿಲಯಕ್ಕೆ ಸಂಬಂಧಪಟ್ಟ ನಿಯಮಗಳೊಂದಿಗೆ ನಡೆಯುತ್ತಿದ್ದ ಹೋರಾಟವಾಗಿದ್ದರೂ ಬರು-ಬರುತ್ತಾ ಇದು ಎಲ್ಲ ವಿಚಾರದ ಸ್ವಾತಂತ್ರ್ಯಕ್ಕೂ ಅಡಿಪಾಯವಾಗಲಾರಂಭಿಸಿತು. ಬೆದರಿದಂತೆ ಕಂಡ ಜಾಮಿಯಾ ಮಿಲಿಯಾ ಏಳುವರೆ ಒಳಗೆ ವಿದ್ಯಾಥರ್ಿ ನಿಲಯ ಸೇರಬೇಕೆಂಬ ನಿಯಮವನ್ನು ಹತ್ತೂವರೆಗೆ ವಿಸ್ತರಿಸಿತು. ಆದರೆ ಕಳೆದ ಒಂದು ವಾರದ ಹಿಂದೆ ಅದನ್ನು ಒಂಭತ್ತು ಗಂಟೆಗೆ ಇಳಿಸುವ ಮೂಲಕ ವಿದ್ಯಾಥರ್ಿನಿಯರಲ್ಲಿ ಆಕ್ರೋಶಕ್ಕೆ ಕಾರಣವಾಯ್ತು. ನಿಲಯದ ಮೇಲ್ವಿಚಾರಕರಾದ ಆಜ್ರಾ ಖುಷರ್ಿದ್ ‘ಹೆಣ್ಣುಮಕ್ಕಳ ರಕ್ಷಣೆಗೆಂದೇ ಈ ನಿಯಮವನ್ನು ತರಲಾಗಿದ್ದು ತಂದೆ-ತಾಯಿಯರ ಒಪ್ಪಿಗೆಯನ್ನು ಪಡೆದು ಅದಕ್ಕೆ ತಕ್ಕಂತೆ ನಡೆದುಕೊಳ್ಳಲಿದ್ದೇವೆ’ ಎಂದರಲ್ಲದೇ ‘ಅದೆಷ್ಟು ಪೋಷಕರು ತಮ್ಮ ಮಕ್ಕಳನ್ನು ನಡುರಾತ್ರಿಯಲ್ಲಿ ಬೀದಿಗೆ ಬಿಡಲು ಒಪ್ಪುತ್ತಾರೆಂದು ನೋಡೇಬಿಡೋಣ’ ಎಂದು ಸವಾಲೆಸೆದರು. ಜಾಮಿಯಾ ಮಿಲಿಯಾದ ಈ ಯೂಟನರ್್ನಿಂದ ಆಕ್ರೋಶಭರಿತರಾದ ಹೆಣ್ಣುಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಒಂದು ದೊಡ್ಡ ಹೋರಾಟವನ್ನೇ ಸಂಘಟಿಸಿದ್ದಾರೆ. ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವರಾದ ಪ್ರಕಾಶ್ ಜಾವ್ಡೇಕರ್ರಿಗೆ ಪಿಟೀಷನ್ ಬರೆದು ಈ ನಿಯಮವನ್ನೇ ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲ. ಸಿಸಿಟಿವಿಗಳನ್ನು ಎಲ್ಲೆಡೆ ಹಾಕಿಸುವ ಮೂಲಕ ಹೆಣ್ಣುಮಕ್ಕಳ ರಕ್ಷಣೆ ಮಾಡುತ್ತೇವೆಂದು ಬಡಾಯಿ ಕೊಚ್ಚಿದ್ದು ಸಾಕು. ಅವುಗಳಿಂದ ಅತ್ಯಾಚಾರದ ಪ್ರಕರಣಗಳೇನು ನಿಂತಿಲ್ಲ. ಸ್ತ್ರೀ ರಕ್ಷಣೆ ಎಂದರೆ ಅವರಿಗೆ ಸಮಾನತೆ ಕೊಡುವುದು ಮತ್ತು ಬಂಧಮುಕ್ತರಾಗಿಸುವುದು ಮಾತ್ರ ಎಂದೆಲ್ಲ ಈ ಹೋರಾಟಗಾರರು ಮಾತನಾಡುತ್ತಿದ್ದಾರೆ.

11

ಒಟ್ಟಾರೆ ಸಮಾಜದಲ್ಲಿ ಗೊಂದಲದ ವಾತಾವರಣವೊಂತು ಇದೆ. ಸ್ತ್ರೀ ರಕ್ಷಣೆಗೆ ಸಿಸಿಟಿವಿ ಅಳವಡಿಸುವುದೇ ಉಪಾಯವೆನ್ನಲಾಗಿತ್ತು. ಈಗ ಅದು ಸಾಕಾಗುತ್ತಿಲ್ಲ. ಹಾಸ್ಟೆಲ್ಲುಗಳಿಗೆ ಬೇಗ ಬರುವ ನಿಯಮ ಮಾಡಬೇಕು ಎಂದು ಹೇಳಲಾಗಿತ್ತು. ಈಗ ಅದೂ ಸಾಕಾಗುತ್ತಿಲ್ಲ. ರಾತ್ರಿಯಾದೊಡನೆ ಹಾಸ್ಟೆಲ್ಲುಗಳಿಗೆ ಬೀಗ ಹಾಕಬೇಕೆಂಬ ನಿಯಮ ಜಾರಿ ಮಾಡಲಾಯ್ತು. ಈಗ ಅದೂ ಸಾಲುತ್ತಿಲ್ಲ. ಅತ್ಯಾಚಾರದ ಪ್ರಕರಣಗಳು ದಿನೇ ದಿನೇ ವರದಿಯಾಗುತ್ತಿರುವ ಪ್ರಮಾಣ ಕಂಡರೆ ಎದೆ ಝಲ್ಲೆನ್ನುವಂಥದ್ದೇ. ಹಾಗಂತ ಪ್ರತಿ ಬಾರಿ ಅತ್ಯಾಚಾರದ ಪ್ರಕರಣ ವರದಿಯಾದಾಗಲೂ ಹೆಣ್ಣಿಗೆ ಕೊಡುವ ಶಿಕ್ಷೆ ಹೆಚ್ಚು ಮಾಡುತ್ತಾ ಹೋಗುವುದು ಒಪ್ಪಿಕೊಳ್ಳಬಹುದಾದ ಮಾತಲ್ಲವೇ ಅಲ್ಲ. ಹೆಣ್ಣು ಜೊತೆಗಿದ್ದರೆ ಮನಸ್ಸು ಹಾಳಾಗುವುದೆಂದು ಭಾವಿಸುವವ ಗಂಡಾದ್ದರಿಂದ ಸಮಸ್ಯೆ ಇರುವುದು ಅವನಲ್ಲೇ ಎಂದಾಯ್ತು. ಅವನ ಮನಸ್ಸಿನ ಕೊಳೆಯನ್ನು ತೊಳೆಯಲು ರಾಷ್ಟ್ರದಲ್ಲೊಂದು ಬೇಟಾ ಪಡಾವೋ ಆಂದೋಲನ ನಡೆಯಬೇಕಿದೆ. ಸಹಜವಾಗಿ ಬದುಕಬಲ್ಲ, ತನಗೆ ತಾನೇ ಮಾನಸಿಕ ಬಂಧನವನ್ನು ಹಾಕಿಕೊಳ್ಳಬಲ್ಲ ತರುಣ-ತರುಣಿಯರ ಸೃಷ್ಟಿಗೆ ಮೌಲ್ಯಯುತವಾದ ಶಿಕ್ಷಣದ ಅಡಿಪಾಯವನ್ನು ಹಾಕಬೇಕಿದೆ. ಹಾಗಂತ ಅಷ್ಟೇ ಅಲ್ಲ. ಸ್ವಾತಂತ್ರ್ಯ ಎಂದರೇನೆಂಬ ಅರ್ಥವನ್ನು ಹೆಣ್ಣುಮಕ್ಕಳು ಅರಿಯೋದು ಬೇಡವೇ? ಮಧ್ಯರಾತ್ರಿಯಲ್ಲೂ ಹಾಸ್ಟೆಲ್ನಿಂದ ಹೊರಗೆ ಬರುವುದೇ ಸ್ವಾತಂತ್ರ್ಯ ಎಂದು ಭಾವಿಸುವುದು ಅದೆಷ್ಟು ಸರಿಯಾದ್ದು ಎಂಬುದು ಮಂಥನ ನಡೆಯಲೇಬೇಕಿದೆ. ಜಾಮಿಯಾ ಮಿಲಿಯಾದಲ್ಲಿ ಆರಂಭವಾದ ಮುಸ್ಲೀಂ ಹೆಣ್ಣುಮಕ್ಕಳ ಈ ಪಿಂಜರಾತೋಡ್ ಆಂದೋಲನ ಈ ಬಗೆಯ ಅನೇಕ ಚಚರ್ೆಗಳಿಗೆ ಈಗ ಮೂಲ ದ್ರವ್ಯವನ್ನೊದಗಿಸುತ್ತಿದೆ. ಟೌನ್ಹಾಲ್ಪಂಥೀಯರು ಇದನ್ನೂ ಚಚರ್ೆಗೆಳೆದುಕೊಂಡರೆ ಬಹಳ ಒಳ್ಳೆಯದು.

ಅಂದಹಾಗೆ, ನಾನು ಓದುತ್ತಿದ್ದ ಹಾಸ್ಟೆಲ್ಗೆ ಸಂಜೆ ಆರರೊಳಗೆ ಬರಬೇಕಿತ್ತು ಮತ್ತು ಬೆಳಗ್ಗಿನ ಆರರವರೆಗೆ ಹೊರಗೆ ಹೋಗುವ ಅವಕಾಶ ನಮಗೆ ಖಂಡಿತ ಇರಲಿಲ್ಲ. ಆ ಬಂಧನದ ಫಲ ಈಗ ಉಣ್ಣುತ್ತಿದ್ದೇವೆ.

ಕೇರಳದ ಕ್ಯಾಥೊಲಿಕ್ ಚರ್ಚಿನಲ್ಲಿ ಅತ್ಯಾಚಾರ ಮಾಡಿ ಸಿಕ್ಕುಬಿದ್ದ ಪಾದ್ರಿಗಳು ಭಾರತವನ್ನು ಹೊಗಳುತ್ತಿರುವುದೇಕೆ ಗೊತ್ತಾ?!

ಕೇರಳದ ಕ್ಯಾಥೊಲಿಕ್ ಚರ್ಚಿನಲ್ಲಿ ಅತ್ಯಾಚಾರ ಮಾಡಿ ಸಿಕ್ಕುಬಿದ್ದ ಪಾದ್ರಿಗಳು ಭಾರತವನ್ನು ಹೊಗಳುತ್ತಿರುವುದೇಕೆ ಗೊತ್ತಾ?!

ಹಿಂದೂಧರ್ಮದ ವಿಚಾರಕ್ಕೆ ಬಂದಾಗ ಆಳಿಗೊಂದು ಕಲ್ಲಿನಂತೆ ಬೀಸುವ ಪತ್ರಕರ್ತರು, ಹೋರಾಟಗಾರರು, ಸೆಕ್ಯುಲರ್ ಸಂತ ಮಹಾತ್ಮರೆಲ್ಲಾ ಈಗ ಮೌನವನ್ನೇ ತಾಳಿದ್ದಾರೆ. ಬೂಟಾಟಿಕೆಯ ಜನಕ್ಕೆ ಭಾರತದಲ್ಲಿ ಕೊರತೆಯೇ ಇಲ್ಲ. ಸತಿ ಪದ್ಧತಿಯ ಕುರಿತಂತೆ ಗಂಟೆಗಟ್ಟಲೆ ಮಾತನಾಡುವವರು ತೀನ್ ತಲಾಖಿನ ಕುರಿತಂತೆ ಮೌನಕ್ಕೆ ಶರಣಾಗಿಬಿಡುತ್ತಾರೆ.

6

ಕೇರಳದ ಮಲಂಕಾರ ಆಥರ್ೋಡಕ್ಸ್ ಸಿರಿಯನ್ ಚಚರ್ು ದೇಶವೆಲ್ಲಾ ಸಂಭ್ರಮಿಸುವ ರೀತಿಯಲ್ಲಿ ಹೇಳಿಕೆ ಕೊಟ್ಟಿದೆ. ಪರಂಪರಾನುಗತವಾಗಿ ಸಹಿಷ್ಣುತೆಯನ್ನು ಪಾಲಿಸಿಕೊಂಡು ಬಂದಿರುವ ಹಿಂದೂಧರ್ಮ ಕ್ರಿಶ್ಚಿಯನ್ ಮತದ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸಬಾರದು ಎಂದಿದೆ. ಇವೇ ಚಚರ್ುಗಳು ಬಿಹಾರದ ಚುನಾವಣೆಗೂ ಮುನ್ನ ಭಾರತದಲ್ಲಿ ಅಸಹಿಷ್ಣುತೆಯಿದೆ ಎಂದು ಎದ್ದೆದ್ದು ಕುಣಿದಾಡಿದ್ದನ್ನು ಈ ಹೊತ್ತಲ್ಲಿ ಮರೆಯುವುದು ಸಾಧ್ಯವೇ ಇಲ್ಲ. ಇಷ್ಟಕ್ಕೂ ಆಗಿದ್ದಿಷ್ಟೇ. ಕ್ಯಾಥೋಲಿಕ್ ಚಚರ್ುಗಳಲ್ಲಿ ತಪ್ಪೊಪ್ಪಿಗೆಯ ಕ್ರಮವೊಂದಿದೆ. ಆ ಚರ್ಚನ್ನು ಅನುಸರಿಸುವವರು ತಾವು ಮಾಡಿರುವ ತಪ್ಪನ್ನು ತಪ್ಪೊಪ್ಪಿಗೆ ಕೊಠಡಿಯಲ್ಲಿ ಕುಳಿತಿರುವ ಪಾದ್ರಿಯ ಮುಂದೆ ಮಂಡಿಸುತ್ತಾರೆ. ಆತ ಸಮಾಧಾನ ಮಾಡಿ ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳಿ ಎನ್ನುತ್ತಾನೆ. ಈ ಕನ್ಫೆಷನ್ನ ದುರುಪಯೋಗ ಮೊದಲಿನಿಂದಲೂ ಆಗುತ್ತಿದೆ. ಸಿರಿವಂತರೆನಿಸಿಕೊಂಡವರು ತಾವು ಮಾಡಿರುವ ತಪ್ಪಿಗೆ ಪಾದ್ರಿಯ ಮುದ್ರೆ ಪಡೆದು ಮತ್ತೊಂದು ತಪ್ಪಿಗೆ ಅಣಿಯಾಗುತ್ತಿದ್ದುದು ಒಂದು ಕಾಲಘಟ್ಟದಲ್ಲಿ ಪ್ರೊಟೆಸ್ಟೆಂಟ್ ಪಂಥದ ಉಗಮಕ್ಕೆ ಕಾರಣವಾಯ್ತು. ಹಾಗಂತ ಕ್ಯಾಥೊಲಿಕ್ ಚಚರ್ುಗಳಲ್ಲಿ ಈ ಪದ್ಧತಿ ನಿಲ್ಲಲಿಲ್ಲ. ಹುಟ್ಟಿನಿಂದ ತಮ್ಮೊಂದಿಗೆ ಬಂದಿರುವ ಪಾಪಗಳು ಕ್ರಿಶ್ಚಿಯನ್ ಮತ ಸ್ವೀಕಾರದೊಂದಿಗೇ ಕಳೆದುಹೋಗುತ್ತದೆ ಎಂಬುದು ಕ್ಯಾಥೊಲಿಕರ ಮೊದಲ ನಂಬಿಕೆ. ಅವರು ಮತಾಂತರ ಮಾಡುವಾಗಲೂ ಈ ಮಾತನ್ನು ಹೇಳುತ್ತಾರೆ. ಆದರೆ ಆನಂತರವೂ ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವೇನು? ಪಾದ್ರಿಗಳ ಮುಂದೆ ತಪ್ಪೊಪ್ಪಿಕೊಂಡು ಆಶೀವರ್ಾದ ಪಡೆಯುವುದಷ್ಟೇ. ಆದರೆ ಹೀಗೆ ತಪ್ಪನ್ನೊಪ್ಪಿಸಿಕೊಳ್ಳುವವನ ಯೋಗ್ಯತೆ ಏನೆಂಬುದು ಒಮ್ಮೆ ಪರೀಕ್ಷೆಯಾಗಬೇಕಲ್ಲ! ಎಲ್ಲವನ್ನೂ ಕಳಚಿದ್ದೇನೆಂದುಕೊಂಡ ನಂತರವೂ ಕೂಡ ಆಸೆ, ಆಮಿಷಗಳಿಗೆ ಬಲಿಯಾಗುವ ವ್ಯಕ್ತಿತ್ವದವರು ತಪ್ಪೊಪ್ಪಿಗೆ ಕೋಣೆಯಲ್ಲಿ ಕುಳಿತು ಭಕ್ತರ ತಪ್ಪಿನ ಕುರಿತಂತೆ ಆಲಿಸಿ ಅದನ್ನು ಹೇಗೆ ಬಳಸಿಕೊಳ್ಳಬಹುದೆಂಬುದನ್ನು ನೀವು ಊಹಿಸಲೂ ಸಾಧ್ಯವಿಲ್ಲ. ಇದಕ್ಕೆ ಅತ್ಯಂತ ಹೆಚ್ಚು ಬಲಿಯಾಗುವುದೇ ಹೆಣ್ಣುಮಕ್ಕಳು!

7
ಕಳೆದ ವರ್ಷ ಕೇರಳದ ಕಣ್ಣೂರಿನ ಕೊಟ್ಟಿಯೂರ್ ಎನ್ನುವ ಹಳ್ಳಿಯಲ್ಲಿ ಪಾದ್ರಿಯೊಬ್ಬ ಅಪ್ರಾಪ್ತ ವಯಸ್ಕ ಹೆಣ್ಣುಮಗಳನ್ನು ಇದೇ ಸಂದರ್ಭದಲ್ಲಿ ಬುಟ್ಟಿಗೆ ಹಾಕಿಕೊಂಡು ಅತ್ಯಾಚಾರ ಮಾಡಿದ್ದ. ಸ್ಥಳೀಯರು ತುಂಬಾ ದೊಡ್ಡ ಮಟ್ಟದ ಗಲಾಟೆ ಮಾಡಿದ್ದರೂ ಕೂಡ. ಆದರೆ ಆ ಸುದ್ದಿ ಹಳ್ಳಿಯಿಂದ ಆಚೆ ಬಾರದಂತೆ ಚಚರ್ುಗಳು ಅದರ ಮೇಲೆ ಚಪ್ಪಡಿ ಎಳೆದುಬಿಟ್ಟಿದ್ದವು. ಈ ಬಾರಿ ಹಾಗಾಗಲಿಲ್ಲ.ಅದೇ ಕೇರಳದಲ್ಲಿ ಮದುವೆಯಾಗದ ಹೆಣ್ಣುಮಗಳೊಬ್ಬಳು ತಾನು ಮಾಡಿಕೊಂಡ ತಪ್ಪೊಪ್ಪಿಗೆಯನ್ನೇ ಆಧಾರವಾಗಿಟ್ಟುಕೊಂಡು ಪಾದ್ರಿಯೊಬ್ಬ ಆಕೆಯನ್ನು ತನಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದ. ಬೇಸತ್ತ ಹೆಣ್ಣುಮಗಳು ಈ ವಿಚಾರವನ್ನು ಮತ್ತೊಬ್ಬ ಪಾದ್ರಿಯ ಬಳಿಗೊಯ್ದಳು. ಈಗ ಆಕೆ ಆತನಿಗೂ ಆಹಾರವಾಗಬೇಕಾಗಿ ಬಂತು. ಆತ ಸುಮ್ಮನಾಗದೇ ಇನ್ನೂ ಮೂವರಿಗೆ ಈ ವಿಚಾರ ಮುಟ್ಟಿಸಿದ. ಐದೂ ಜನ ಆಕೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲಾರಂಭಿಸಿದರು. ತಾನು ಮುಚ್ಚಿಡಬೇಕೆಂದಿದ್ದ ಸಂಗತಿಯೇ ಏಸುವಿನ ಮುಂದೆ ಬಿಚ್ಚಿಟ್ಟಿದ್ದಕ್ಕೆ ಆಕೆ ಸರಿಯಾದ ಶಿಕ್ಷೆ ಅನುಭವಿಸುತ್ತಿದ್ದಳು. ಆಕೆಗೆ ಮದುವೆಯಾದ ಮೇಲೂ ಪಾದ್ರಿಗಳ ಕಾಟ ಮಾತ್ರ ತಪ್ಪಲೇ ಇಲ್ಲ. ಒಟ್ಟಾರೆ 380 ಬಾರಿ ಆಕೆಯನ್ನು ಚಚರ್ಿನ ಪೂಜಕರು ಬಳಸಿಕೊಂಡಿದ್ದಾರೆ. ಇನ್ನು ತಡೆಯಲು ಸಾಧ್ಯವಾಗದೇ ಹೋದಾಗ ಗಂಡನ ಬಳಿ ಎಲ್ಲವನ್ನೂ ಬಿಚ್ಚಿಟ್ಟ ಆ ಹೆಣ್ಣುಮಗಳು ಮುಂದೇನೂ ಮಾಡಲು ತೋಚದೆ ಕೈಚೆಲ್ಲಿಬಿಟ್ಟಿದ್ದಾಳೆ. ಕುಪಿತ ಗಂಡ ತನ್ನ ಆಪ್ತರ ಬಳಿ ಪಾದ್ರಿಗಳ ಕುರಿತಂತೆ ಆಕ್ರೋಶ ಭರಿತನಾಗಿ ನುಡಿಯುತ್ತಿದ್ದಾಗ ಈ ಚಚರ್ಿನ ಬಣ್ಣ ಬಯಲಾಗಿದೆ. ಆ ಹೆಣ್ಣುಮಗಳ ಪತಿಯ ದೂರವಾಣಿ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕ್ಯಾಥೊಲಿಕ್ ಚಚರ್ು ಬೀದಿಗೆ ಬಂತು. ನ್ಯಾಷನಲ್ ಕಮಿಷನ್ ಫಾರ್ ವುಮೆನ್ ತಕ್ಷಣ ಈ ವಿಚಾರವನ್ನು ಕೈಗೆತ್ತಿಕೊಂಡು ಆ ಪಾದ್ರಿಗಳ ವಿರುದ್ಧ ಕಾನೂನು ತೀವ್ರ ಕ್ರಮ ಕೈಗೊಳ್ಳುವಂತೆ ಎಚ್ಚರಿಸಿತು. ಅಷ್ಟೇ ಅಲ್ಲ. ಕ್ಯಾಥೋಲಿಕ್ ಚಚರ್ುಗಳಲ್ಲಿರುವ ಈ ತಪ್ಪೊಪ್ಪಿಗೆ ಕ್ರಮವನ್ನೇ ನಿಷೇಧಿಸಬೇಕೆಂದು ಕೇಳಿಕೊಂಡಿತು.

ಹಿಂದೂಧರ್ಮದ ವಿಚಾರಕ್ಕೆ ಬಂದಾಗ ಆಳಿಗೊಂದು ಕಲ್ಲಿನಂತೆ ಬೀಸುವ ಪತ್ರಕರ್ತರು, ಹೋರಾಟಗಾರರು, ಸೆಕ್ಯುಲರ್ ಸಂತ ಮಹಾತ್ಮರೆಲ್ಲಾ ಈಗ ಮೌನವನ್ನೇ ತಾಳಿದ್ದಾರೆ. ಬೂಟಾಟಿಕೆಯ ಜನಕ್ಕೆ ಭಾರತದಲ್ಲಿ ಕೊರತೆಯೇ ಇಲ್ಲ. ಸತಿ ಪದ್ಧತಿಯ ಕುರಿತಂತೆ ಗಂಟೆಗಟ್ಟಲೆ ಮಾತನಾಡುವವರು ತೀನ್ ತಲಾಖಿನ ಕುರಿತಂತೆ ಮೌನಕ್ಕೆ ಶರಣಾಗಿಬಿಡುತ್ತಾರೆ. ಶನಿ ಶಿಂಗ್ಣಾಪುರದಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲವೆಂಬುದು ಸುಪ್ರೀಂಕೋಟರ್ಿನ ಮೆಟ್ಟಿಲು ಹತ್ತುವ ವಿಚಾರವಾದರೆ ಹಾಜಿ ಅಲಿ ದಗರ್ಾಕ್ಕಾಗಲೀ, ಪ್ರತಿನಿತ್ಯದ ನಮಾಜಿಗಾಗಲಿ ಹೆಣ್ಣುಮಕ್ಕಳನ್ನು ಒಳಗೇಕೆ ಬಿಡುವುದಿಲ್ಲ ಎಂಬ ವಿಚಾರಕ್ಕೆ ಯಾರೂ ಸೊಲ್ಲೆತ್ತುವುದಿಲ್ಲ. ರಾಜಸ್ಥಾನದಲ್ಲೆಲ್ಲಾ ಹೆಣ್ಣುಮಕ್ಕಳು ಮುಖದ ಮುಂದೆ ಇಳಿಬಿಡುವ ಪರದೆ ಪ್ರತಿಗಾಮಿತನದ್ದು ಎನ್ನುವ ಇವರ ಪಾಲಿಗೆ ಬುಖರ್ಾ ಮಾತ್ರ ಪ್ರಗತಿಯ ದ್ಯೋತಕ. ದೀಪಾವಳಿಯಂದು ಪಟಾಕಿ ಹೊಡೆದರೆ ರಸ್ತೆಯಲ್ಲಿರುವ ನಾಯಿಗಳಿಗೆ ತೊಂದರೆಯಾಗುತ್ತದೆ, ಆದರೆ ಈದ್ಗೆ ಕುರಿಯನ್ನು ಬಲಿಕೊಡುವುದು, ದನವನ್ನು ಕದ್ದೊಯ್ದು ಕಡಿದು ಮಾರಾಟ ಮಾಡುವುದು ಖಂಡಿತ ತಪ್ಪಲ್ಲ. ಶಿವಲಿಂಗದ ಮೇಲೆ ಹಾಲಿನ ಅಭಿಷೇಕ ತಪ್ಪು. ಆದರೆ ಕ್ರಿಸ್ಮಸ್ನಂದು ಕೋಟ್ಯಂತರ ಕ್ಯಾಂಡಲ್ಗಳನ್ನು ಉರಿಸಿ ಪ್ರಕೃತಿಯನ್ನು ಹಾಳುಮಾಡುವುದು ಶುದ್ಧ ಆಚರಣೆ. ಹಿಂದೂಗಳಿಗೆ ಕುಟುಂಬ ನಿಯಂತ್ರಣ ಕಡ್ಡಾಯ. ಆದರೆ ಮುಸಲ್ಮಾನರಿಗೆ ಅದು ಭಗವಂತನ ವರದಾನ. ಆ ಕುರಿತಂತೆ ಮಾತನಾಡುವುದು ಸೆಕ್ಯುಲರ್ ತತ್ವಕ್ಕೆ ವಿರೋಧ. ಈ ಬೂಟಾಟಿಕೆಗಳು ಇತ್ತೀಚೆಗೆ ನಿಜವಾದ ರಂಗು ತೋರಿಸಲಾರಂಭಿಸಿದೆ. ಕೇರಳ ಚಚರ್್ ಆ್ಯಕ್ಟ್ ಆಕ್ಷನ್ ಕೌನ್ಸಿಲ್ನ ಉಪಾಧ್ಯಕ್ಷೆ ಇಂದುಲೇಖಾ ಜೊಸೆಫ್ ಎಲ್ಲ ಬಗೆಯ ಬೂಟಾಟಿಕೆಗಳನ್ನು ಖಂಡಿಸುತ್ತಾ ಚಚರ್ಿನಲ್ಲಿ ಪಾದ್ರಿಗಳು ಮಾತ್ರ ತಪ್ಪೊಪ್ಪಿಗೆ ಪಡೆದುಕೊಳ್ಳಬೇಕು ಎಂಬುದನ್ನು ನಿಷೇಧಿಸಿ ಮಹಿಳೆಯರ ಮತ್ತು ಅಪ್ರಾಪ್ತ ವಯಸ್ಕರ ತಪ್ಪೊಪ್ಪಿಗೆಯನ್ನು ಪಾದ್ರಿಗಳಷ್ಟೇ ಪ್ರಖರ ಸಾಧನೆಗೈಯ್ದಿರುವ ನನ್ಗಳು ಕೇಳಬೇಕು ಎಂಬ ಬೇಡಿಕೆಯನ್ನು ಹೊತ್ತು ಕೋಟರ್ಿನ ಮುಂದೆ ನಿಂತಿದ್ದಾರೆ. ಅಷ್ಟೇ ಅಲ್ಲ, ಚಚರ್ಿನ ಸ್ತ್ರೀ ವಿರೋಧಿ ವ್ಯಕ್ತಿತ್ವವನ್ನು ನಿಚ್ಚಳವಾಗಿ ಕಾಣುವಂತೆ ಜನರ ಮುಂದಿರಿಸಿದ್ದಾರೆ.

8

ಇದಕ್ಕೆ ಪೂರಕವಾಗಿಯೇ ನ್ಯಾಷನಲ್ ಕಮಿಷನ್ ಫಾರ್ ವುಮೆನ್ ಕ್ಯಾಥೊಲಿಕ್ ಚಚರ್ುಗಳಲ್ಲಿ ತಪ್ಪೊಪ್ಪಿಗೆಯನ್ನೇ ನಿಷೇಧಿಸಬೇಕೆಂದು ಸಕರ್ಾರದ ಮುಂದೆ ಆಗ್ರಹ ಮಂಡಿಸಿದೆ. ಕ್ರಿಶ್ಚಿಯನ್ನರಲ್ಲೇ ದೊಡ್ಡದಾಗಿರುವ ಪ್ರಗತಿಪರ ವರ್ಗವೊಂದು ಇದಕ್ಕೆ ಪೂರ್ಣ ಬೆಂಬಲ ಸೂಚಿಸುತ್ತಿದ್ದರೆ ಚಚರ್ು ಮಾತ್ರ ಒಂದೇ ಕಣ್ಣಿನಲ್ಲಿ ಅಳುತ್ತಿದೆ. ಭಾರತ ಸಹಿಷ್ಣು ದೇಶ ಎಂಬುದು ಅದಕ್ಕೆ ಈಗ ನೆನಪಾಗುತ್ತಿದೆ. ಹೇಗೆ ತನ್ನ ತಾನು ಕಾಲದ ಪ್ರವಾಹಕ್ಕೆ ಒಡ್ಡಿಕೊಂಡು ಬದಲಾವಣೆಗಳನ್ನು ಮೈಗೂಡಿಸಿಕೊಂಡು ನಡೆಯುವ ಸಾಮಥ್ರ್ಯವನ್ನು ಹಿಂದೂಧರ್ಮ ತೋರಿಸಿದೆಯೋ ಚಚರ್ು ಕೂಡ ಈಗ ಅದೇ ಸವಾಲನ್ನು ಸ್ವೀಕರಿಸಬೇಕಿದೆ. ಕ್ರಿಶ್ಚಿಯಾನಿಟಿಗೆ ಆ ಸಾಮಥ್ರ್ಯವಿದೆಯಾ ಎಂಬುದನ್ನು ನಾವು ಕಾದು ನೋಡಬೇಕಿದೆ ಅಷ್ಟೇ!