ಇನ್ನೆಷ್ಟು ಹಿಂದೂ ಹೆಣ್ಣುಮಕ್ಕಳ ಬಲಿ?!

ಇನ್ನೆಷ್ಟು ಹಿಂದೂ ಹೆಣ್ಣುಮಕ್ಕಳ ಬಲಿ?!

ಲವ್ ಜಿಹಾದ್ ಎಂಬ ಪದವನ್ನು ಮೊದಲ ಬಾರಿಗೆ ಹಿಂದೂಪರ ಸಂಘಟನೆಗಳು ಹೇಳುವಾಗ ಅನೇಕರು ಮೂಗು ಮುರಿದಿದ್ದರು, ಆಡಿಕೊಂಡಿದ್ದರು. ಅಂಥದ್ದೇನು ಇರುವುದು ಸಾಧ್ಯವೇ ಇಲ್ಲ ಎಂದು ಬಟ್ಟೆ ಹರಕೊಂಡು ವಾದಿಸಿದ್ದರು. ಮೊದಲ ಬಾರಿಗೆ ಕೇರಳದ ಕಮ್ಯುನಿಸ್ಟ್ ನಾಯಕರು ಮುಸಲ್ಮಾನರ ಈ ವ್ಯವಸ್ಥಿತ ಯೋಜನೆಯ ಕುರಿತಂತೆ ಮಾತನಾಡಿದಾಗಲೇ ದೇಶ ಒಮ್ಮೆ ಅದರಿತ್ತು. ಪ್ರೇಮ ಎನ್ನುವ ಪದಕ್ಕೆ ಇಸ್ಲಾಂನಲ್ಲಿ ಸೂಕ್ತ ಸ್ಥಾನವಿರುವುದೇ ಅನುಮಾನವಿದೆ. ಘನೀಭವಿಸಿದ ಪ್ರೇಮ ಭಕ್ತಿಯಾಗುವುದಾದರೆ ಅಲ್ಲಿ ಯಾರೊಂದಿಗೆ ಭಕ್ತಿ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಇಸ್ಲಾಂ ಹುಟ್ಟಿದ್ದು, ಹರಡಿಕೊಂಡಿದ್ದು ಇವೆಲ್ಲವೂ ರಾಜಕೀಯ ಸಿದ್ಧಾಂತವಾಗಿಯೇ ಹೊರತು ಆಂತರಿಕವಾದ ಬೆಳವಣಿಗೆಯ ದೃಷ್ಟಿಯಿಂದಲ್ಲ. ಹೀಗಾಗಿ ಮುಸಲ್ಮಾನನೊಬ್ಬ ‘ಪ್ರೀತಿಸುತ್ತೇನೆ’ ಎಂದರೆ ಪಕ್ಕೆಲುಬು ಮುರಿಯುವಂತೆ ನಗಬೇಕೇ ಹೊರತು ಮತ್ತೇನೂ ಅಲ್ಲ. ಯಾಕಿಷ್ಟನ್ನೂ ಹೇಳಬೇಕಾಯ್ತೆಂದರೆ ದೆಹಲಿಯಲ್ಲಿ ಇತ್ತೀಚೆಗಷ್ಟೇ ಅಫ್ತಾಬ್ ಎಂಬ ಮುಸಲ್ಮಾನ ಯುವಕ ಶ್ರದ್ಧಾ ಎಂಬ ಹಿಂದೂ ಹೆಣ್ಣುಮಗಳೊಂದಿಗೆ ಅನೇಕ ವರ್ಷಗಳ ಕಾಲ ಇದ್ದು, ಕೊನೆಗೊಮ್ಮೆ ಆಕೆಯನ್ನು 35 ಚೂರು ಮಾಡಿ, ಫ್ರೀಜರ್‌ನಲ್ಲಿಟ್ಟು ದಿನಕ್ಕೆರಡು ಚೂರಿನಂತೆ ಅದನ್ನು ಹುಗಿದು ಬರುತ್ತಿದ್ದನಲ್ಲ, ಈ ಪಾಶವೀ ಕೃತ್ಯಕ್ಕೆ ಏನೆನ್ನಬೇಕು ಹೇಳಿ? ಉತ್ಕಟ ಕ್ಷಣವೊಂದರಲ್ಲಿ ಒಬ್ಬರು ಮತ್ತೊಬ್ಬರ ಕೊಲೆ ಮಾಡಿಬಿಡುವುದು ಆಗಾಗ ಕೇಳಸಿಗುತ್ತದೆ. ಇದಕ್ಕೆ ಜಾತಿ-ಮತ-ಪಂಥಗಳ ಬಂಧನವಿಲ್ಲ, ನಾನೂ ಒಪ್ಪುತ್ತೇನೆ. ಆದರೆ ಶ್ರದ್ಧಾ ಮತ್ತು ಅಫ್ತಾಬ್‌ಳ ವಿಚಾರದಲ್ಲಿ ನಡೆದಿರುವುದು ಅತ್ಯಂತ ಹೇಯವಾದ್ದು. ಅವಳನ್ನು ಕೊಲೆ ಮಾಡಿ ರಕ್ತ ಒರೆಸಿ, ಅಷ್ಟೂ ತುಂಡನ್ನು ಹೊಸದೊಂದು ರೆಫ್ರಿಜರೇಟರ್ ಖರೀದಿಸಿ ಅದರಲ್ಲಿ ಆತ ತುಂಬಿಸಿಟ್ಟಿದ್ದ. ಅಷ್ಟೇ ಅಲ್ಲ, ಆಕೆಯ ತುಂಡಾದ ದೇಹದ ಚೂರುಗಳು ಹೀಗೆ ಮನೆಯಲ್ಲಿರುವಾಗಲೇ ಇನ್ನೊಂದಷ್ಟು ಹಿಂದೂ ಯುವತಿಯರನ್ನು ಮನೆಗೆ ಕರೆಸಿಕೊಂಡು ಅವರೊಂದಿಗೆ ಸರಸ-ಸಲ್ಲಾಪಗಳನ್ನು, ಲೈಂಗಿಕ ಕ್ರಿಯೆಗಳನ್ನು ನಡೆಸುತ್ತಿದ್ದ! ಇದನ್ನು ಪ್ರೇಮವೆನ್ನಬಹುದೇನು? ಇವರೆಲ್ಲ ಉದ್ದೇಶವಿಟ್ಟುಕೊಂಡೇ ಹಿಂದೂ ಹೆಣ್ಣುಮಕ್ಕಳನ್ನು ಗುರಿ ಮಾಡಿಕೊಂಡು ಈ ರೀತಿಯ ಕೃತ್ಯ ನಡೆಸುತ್ತಾರೆ ಎಂಬುದಕ್ಕೆ ಈಗಂತೂ ಯಾವ ಅನುಮಾನವೂ ಉಳಿದಿಲ್ಲ. ಕಳೆದ ಕೆಲವಾರು ದಿನಗಳಿಂದ ಹೊರಬರುತ್ತಿರುವ ಅನೇಕ ಘಟನೆಗಳು ಇದನ್ನು ಸಾಬೀತುಪಡಿಸುವಂತಿವೆ. 

ಈ ತಿಂಗಳಲ್ಲೇ ನಡೆದ ಒಂದಷ್ಟು ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಉತ್ತರ ಪ್ರದೇಶದ ಭಾಗ್‌ಪತ್‌ನಲ್ಲಿ ಸುಹೈಲ್ ಎಂಬ ಹುಡುಗ ತನ್ನ ಹೆಸರನ್ನು ಬದಲಾಯಿಸಿಕೊಂಡು ಒಂಭತ್ತನೇ ತರಗತಿಯ ಹುಡುಗಿಯೊಬ್ಬಳನ್ನು ಪಟಾಯಿಸಿಕೊಂಡ. ಅವಳನ್ನು ಲೈಂಗಿಕ ತೃಷೆಗಾಗಿ ಬಳಸಿಕೊಳ್ಳುವ ಧಾವಂತವೂ ಅವನಲ್ಲಿತ್ತು. ಅಷ್ಟರೊಳಗೆ ಮನೆಯವರಿಗೆ ವಿಚಾರ ಗೊತ್ತಾಗಿ ಹುಡುಗಿಗೆ ಒತ್ತಡ ಹೇರಲಾರಂಭಿಸಿದರು. ಹುಡುಗಿ ಮುಂದೆ ಮಾಡಿದ್ದೇನು ಗೊತ್ತೇ? ಶಾಲೆಗೆ ಹೋಗುತ್ತೇನೆಂದು ಹೇಳಿ ಕೊಳಚೆ ನೀರು ಸಾಗಿಸುವ ಡ್ರೈನೇಜ್ ಪೈಪ್ ಒಂದರಲ್ಲಿ ಅಡಗಿ ಕುಳಿತುಬಿಟ್ಟಳು. ಅತ್ತ ತನ್ನನ್ನು ಲೈಂಗಿಕ ಕ್ರಿಯೆಗೆ ಪ್ರಚೋದಿಸುತ್ತಿರುವ ಸುಹೈಲ್, ಇತ್ತ ಅವನಿಂದ ಬಿಡಿಸಲು ಯತ್ನಿಸುತ್ತಿರುವ ತಂದೆ-ತಾಯಿಯರು. ಆ ಹುಡುಗಿಯ ಪರಿಸ್ಥಿತಿ ಎಂಥದ್ದಿರಬಹುದೆಂದು ನೀವೇ ಊಹಿಸಿ! ಮಗು ಕಾಣೆಯಾಗಿದ್ದಾಳೆಂದು ಪೊಲೀಸರಿಗೆ ದೂರುಕೊಟ್ಟ ತಂದೆ-ತಾಯಿಯರು ಕೊನೆಗೂ ಒಂಭತ್ತು ಗಂಟೆಗಳ ಕಾಲ ಈ ಕೊಳವೆಯ ಅಸಹ್ಯಕರ ಪರಿಸ್ಥಿತಿಯಲ್ಲಿ ಯಾತನೆಯಿಂದ ತನ್ನನ್ನು ತಾನು ಅಡಗಿಸಿಕೊಂಡಿದ್ದ ಆ ಮಗುವನ್ನು ಹುಡುಕಿ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆಕೆಯನ್ನು ಮೋಸಗೊಳಿಸಿ ತನ್ನ ವಾಂಛೆಗೆ ಉಪಯೋಗಿಸಿಕೊಳ್ಳಲು ಯತ್ನಿಸಿದ ಸುಹೈಲ್ನನ್ನು ಯಾವುದರಲ್ಲಿ ಬಡಿಯಬೇಕು ಹೇಳಿ!

ಅದೇ ಯುಪಿಯ ಬರೇಲಿಯಲ್ಲಿ ಬಾಬು ಕುರೇಷಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಅಕ್ಲೀಂ ಹಿಂದೂ ಹುಡುಗಿಯೊಬ್ಬಳನ್ನು ಇಷ್ಟಪಟ್ಟ. ಆದರೆ ಆಕೆಯನ್ನು ಸಂಪರ್ಕಿಸುವುದು ಹೇಗೆ? ಆಕೆಯ ಬ್ಯೂಟಿ ಪಾರ್ಲರ್‌ಗೆ ನಿರಂತರವಾಗಿ ಹೋಗುತ್ತಿದ್ದ ತನ್ನ ಸೋದರಿಯರಾದ ತರನ್ನುಮ್ ಮತ್ತು ಶಬಾನಾರನ್ನು ಬಳಸಿಕೊಂಡ. ಇವರೀರ್ವರೂ ಅಕ್ಲೀಮನಿಗೆ ಹಿಂದೂ ಹುಡುಗಿಯ ಪರಿಚಯ ಮಾಡಿಸಿದರು. ಕೊನೆಗೊಮ್ಮೆ ಆಕೆಯನ್ನು ಓಲೈಸಿಕೊಂಡು ಮನೆಗೂ ಒಯ್ದರು. ಆಕೆಗೆ ಮತ್ತು ಬರಿಸುವ ಔಷಧಿ ಕುಡಿಸಿ ಅಕ್ಲೀಂ ಆಕೆಯನ್ನು ಬಳಸಿಕೊಳ್ಳಲು ಯತ್ನಿಸಿದ. ಆ ಸ್ಥಿತಿಯಲ್ಲಿಯೂ ಆಕೆ ಪ್ರತಿಭಟಿಸಿದಾಗ ಬಂದೂಕು ತೋರಿಸಿ ಕೊಲ್ಲುವ ಬೆದರಿಕೆ ಹಾಕಿ ಆಕೆಯನ್ನು ಬಲಾತ್ಕರಿಸಿದ. ಅವನೊಬ್ಬನೇ ಅಲ್ಲ, ಆತನ ಮಿತ್ರರೂ ಒಬ್ಬರಾದ ಮೇಲೆ ಒಬ್ಬರು ಆಕೆಯ ಮಾನಭಂಗಕ್ಕೆ ಕಾರಣರಾದರು. ದುರಂತವೇನು ಗೊತ್ತೇ? ಗೆಳತಿಯರಾದ ತರನ್ನುಮ್ ಮತ್ತು ಶಬಾನಾರೇ ಈ ಇಡಿಯ ಘಟನೆಯ ವಿಡಿಯೊ ಚಿತ್ರೀಕರಣ ಮಾಡಿಕೊಂಡು ಆಕೆಯನ್ನು ಬ್ಲಾಕ್ ಮೇಲ್ ಮಾಡುವ ಪ್ರಯತ್ನ ಮಾಡಿದರು. ಒಂದಾದ ಮೇಲೊಂದು ಈ ಬಗೆಯ ಪ್ರಕರಣಗಳು ಹೊರಬರುತ್ತಿದ್ದಂತೆ ಧೈರ್ಯ ತಡೆದ ಹಿಂದೂ ಹುಡುಗಿ ಪೊಲೀಸರಿಗೆ ವಿಚಾರ ಮುಟ್ಟಿಸಿ ಆರು ಜನರ ಬಂಧನಕ್ಕೆ ಕಾರಣಳಾಗಿದ್ದಾಳೆ. ಇದೇ ಬಗೆಯ ಸುದ್ದಿಯೊಂದು ಮಂಡ್ಯದಿಂದಲೂ ಹೊರಗೆ ಬಂದಿದೆ. 13 ವರ್ಷದ ಹುಡುಗಿಯೊಂದಿಗೆ ಯೂನುಸ್ ಪಾಷ ಸಂಪರ್ಕ ಬೆಳೆಸಿಕೊಂಡ. ಈ ಅಯೋಗ್ಯನಿಗೆ ಅದಾಗಲೇ ಮದುವೆಯೂ ಆಗಿತ್ತು. ಹುಡುಗಿಗೆ ಮೊಬೈಲ್ ಕೊಡಿಸಿದ, ಚೆನ್ನಾಗಿ ಮಾತನಾಡುತ್ತಿದ್ದ, ಆಗಾಗ ವಿಡಿಯೊ ಕಾಲ್ ಕೂಡ ಮಾಡಿ ಆಕೆಯನ್ನು ಅಂಗಾಂಗ ಪ್ರದರ್ಶನಕ್ಕೆ ಪ್ರಚೋದಿಸುತ್ತಿದ್ದ. ಹೀಗೆ ಆಕೆ ತನ್ನ ಗುಪ್ತಾಂಗಗಳ ಪ್ರದರ್ಶನ ಮಾಡಿದ್ದೆಲ್ಲ ಆತ ವಿಡಿಯೊ ಚಿತ್ರೀಕರಣ ಮಾಡಿಟ್ಟುಕೊಂಡ. ಆಕೆಯನ್ನು ಬ್ಲಾಕ್ ಮೇಲ್ ಮಾಡಲಾರಂಭಿಸಿದ. ಲೈಂಗಿಕವಾಗಿ ಆಕೆಯನ್ನು ಬಳಸಿಕೊಳ್ಳುವ ಕುರಿತಂತೆ ಒತ್ತಾಯ ಹೇರಲಾರಂಭಿಸಿದ. ಗಾಬರಿ ಬಿದ್ದ ಹುಡುಗಿ ಒಳಗೊಳಗೇ ದುಃಖವನ್ನನುಭವಿಸಿದಳು. ಆತನಿಂದ ದೂರಹೋಗುವ ಧಾವಂತದಲ್ಲಿ ತನ್ನ ಅಜ್ಜಿಯ ಮನೆಗೆ ಹೋಗಿ ಉಳಿದಳು. ಆಕೆಯ ಜಾಡು ಹಿಡಿದು ಬಂದ ಯೂನುಸ್ ಆಕೆಯನ್ನು ಮೋಹಿಸಿ ನಿದ್ದೆಯ ಮಾತ್ರೆ ಕೊಟ್ಟು ಬಲಾತ್ಕರಿಸಿ ಕಾಣೆಯಾದ. ಖಿನ್ನತೆಗೆ ಒಳಗಾದ ಈ ಹೆಣ್ಣುಮಗಳನ್ನು ಗಮನಿಸಿದ ತಂದೆ-ತಾಯಿಯರು ಘಟನೆಯ ಜಾಡುಹಿಡಿದು ನೋಡಿದಾಗ ಯೂನುಸ್ ಪಾಷ ಸಿಕ್ಕಿಬಿದ್ದ. ಈಗ ಆತ ಪೊಕ್ಸೊದ ಅಡಿಯಲ್ಲಿ ಬಂಧಿತನಾಗಿದ್ದಾನೆ. ಇದೇ ಬಗೆಯ ಪ್ರಕರಣ ಗುಜರಾತಿನ ಅಹ್ಮದಾಬಾದಿನಿಂದ ವರದಿಯಾಗಿದೆ. ಸಮೀರ್ ಪ್ರಜಾಪತಿ ಎಂಬ ಹೆಸರಿನಿಂದ ಫೇಸ್ಬುಕ್ ಪ್ರೊಫೈಲ್ ಸೃಷ್ಟಿಸಿಕೊಂಡಿದ್ದ ನಾಸಿರ್ ಹಿಂದೂ ಹುಡುಗಿಯೊಬ್ಬಳನ್ನು ಪರಿಚಯ ಮಾಡಿಕೊಂಡ. ಆತನನ್ನು ಹಿಂದೂವೆಂದೇ ಭಾವಿಸಿದ ಆಕೆ ಸಹಜವಾಗಿ ಬಲೆಗೆ ಬಿದ್ದಳು. ನಿಧಾನವಾಗಿ ಆಕೆಯನ್ನು ಒಲಿಸಿಕೊಂಡು ಲಿವ್ಇನ್ ಸಂಬಂಧವನ್ನು ಬೆಳೆಸಿಕೊಂಡ. ಅಚ್ಚರಿಯೇನು ಗೊತ್ತೇ? ಸ್ವತಃ ನಾಸಿರ್‌ನ ಹೆಂಡತಿ ಮತ್ತು ಆಕೆಯ ತಮ್ಮ ಈ ಕೃತ್ಯದಲ್ಲಿ ಅವನಿಗೆ ಸಹಕಾರಿಗಳು! ಇವರೆಲ್ಲರೂ ಸೇರಿ ಆಕೆಯನ್ನು ಎಷ್ಟರಮಟ್ಟಿಗೆ ಪೀಡಿಸಿದರೆಂದರೆ ಆಕೆ ದುಡಿದದ್ದೆಲ್ಲವನ್ನೂ ಖರ್ಚು ಮಾಡುತ್ತಿದ್ದರು ಮತ್ತು ತಮ್ಮ ಲೈಂಗಿಕ ತೃಷೆ ತೀರಿಸಿಕೊಳ್ಳಲಿಕ್ಕಾಗಿ ನಾಸಿರ್‌ನಷ್ಟೇ ಅಲ್ಲದೇ ಇತರರನ್ನೂ ಕರೆಸಿ ಆಕೆಯ ಬದುಕನ್ನು ದುರ್ಭರಗೊಳಿಸಿಬಿಟ್ಟರು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಆಕೆಯನ್ನು ಅಕ್ಷರಶಃ ಬೆಲೆವೆಣ್ಣಾಗಿ ಪರಿವರ್ತಿಸುವ ಕುಕೃತ್ಯ ಇದು. ಇವರ ಹಿಂಸೆಯನ್ನು ತಾಳಲಾಗದೇ ಆಕೆ ಪೊಲೀಸರ ಬಳಿ ಓಡಿಬಂದಾಗಲೇ ಘಟನೆ ಬೆಳಕು ಕಂಡಿತು. ಇದೇ ರೀತಿ ಹೆಸರನ್ನು ಬದಲಿಸಿಕೊಂಡು ಹಿಂದೂ ಹೆಣ್ಣುಮಕ್ಕಳನ್ನು ಪಟಾಯಿಸುವ ಪ್ರಕರಣ ಈ ತಿಂಗಳಲ್ಲೇ ಮೀರತ್‌ನಿಂದಲೂ ವರದಿಯಾಗಿದೆ. ರಿಂಕು ಎಂದು ತನ್ನ ಪರಿಚಯ ಮಾಡಿಕೊಂಡ ಮುಜಮ್ಮಿಲ್ ನೇಹಾ ಎನ್ನುವ ಹುಡುಗಿಯನ್ನು ಖೆಡ್ಡಾಕೆ ಕೆಡವಿದ. ಈತನನ್ನು ನಂಬಿ ಆಕೆ ತನ್ನದೆಲ್ಲವನ್ನೂ ಸಮರ್ಪಿಸಿಕೊಂಡಳು. ಶುದ್ಧ ಪ್ರೇಮವಿರಬಹುದೆಂದು ಆಕೆಯ ಭಾವನೆಯಾಗಿತ್ತು. ಆದರೆ ಮುಜಮ್ಮಿಲ್ ಅದಕ್ಕೆ ಯೋಗ್ಯನಾಗಿರಲಿಲ್ಲ. ಮದುವೆಗೆ ಒತ್ತಾಯಿಸಿದರೆ ತಾನು ಅಫ್ತಾಬ್‌ನಾಗಿ ಬದಲಾಗಿ ಶ್ರದ್ಧಾಳಂತೆ ಆಕೆಯನ್ನು ಕೊಲೆ ಮಾಡುವುದಾಗಿ ಬೆದರಿಸಿಬಿಟ್ಟ! ನೇಹಾ ಈ ಬಾರಿ ಸಹಿಸಿಕೊಳ್ಳಲಿಲ್ಲ. ಹೇಗೆ ಶ್ರದ್ಧಾ ಸಹಿಸಿಕೊಂಡು ಹೆಣವಾಗಿಹೋದಳೋ ನೇಹಾ ಅದಕ್ಕೆ ವಿರುದ್ಧವಾಗಿ ಪ್ರತಿಭಟಿಸಿನಿಂತಿದ್ದರ ಫಲವಾಗಿ ಇಂದು ಆಕೆ ಉಳಿದಳು. ಇನ್ನು ಪತ್ರಿಕೆಗಳಲ್ಲಿ ಸಾಕಷ್ಟು ಸುದ್ದಿ ಮಾಡಿದ ಘಟನೆ ಲಕ್ನೌನ ಮೊಹಮ್ಮದ್ ಸುಫಿಯಾನ್‌ನದು. ಹೀಗೆ ಹೆಸರು ಬದಲಾಯಿಸಿಕೊಂಡು ನಿಧಿಯನ್ನು ಆತ ತನ್ನ ತಥಾಕಥಿತ ಪ್ರೇಮದ ಬಲೆಗೆ ಕೆಡವಿದ. ಅದು ಪ್ರೇಮವಲ್ಲ, ಕಾಮತೃಷೆ ಎಂದು ಅರಿವಾಗುವ ವೇಳೆಗೆ ಸಾಕಷ್ಟು ತಡವಾಗಿತ್ತು. ಆದರೆ ನಿಧಿಯನ್ನು ಮೆಚ್ಚಬೇಕು. ತಂದೆ-ತಾಯಿಯರ ಮಾತನ್ನು ಕೇಳಿದ ಆಕೆ ಈ ಸಂಬಂಧದಿಂದ ಮರಳಿ ಬಂದಳು. ಆತ ಬಿಡಲಿಲ್ಲ. ಮತ್ತೆ ಒಲಿಸಿಕೊಳ್ಳುವ ಪ್ರಯತ್ನ ಮಾಡಿ ಮದುವೆಯಾಗುವ ಭರವಸೆಕೊಟ್ಟ. ಆದರೆ ಆತನ ಒಂದೇ ಒಂದು ನಿಯಮವೆಂದರೆ ಆಕೆ ಇಸ್ಲಾಮಿಗೆ ಮತಾಂತರವಾಗಬೇಕಿತ್ತು. ಆಕೆ ವಿರೋಧಿಸಿದಾಗ ಆಕೆಯನ್ನು ನಾಲ್ಕನೇ ಮಹಡಿಯ ಮೇಲಿಂದ ನೂಕಿಬಿಟ್ಟ. ತಂದೆ-ತಾಯಿಯರು ಏನಾಯ್ತೆಂದು ನೋಡುವಷ್ಟರಲ್ಲಿ ತಪ್ಪಿಸಿಕೊಂಡೂ ಹೋದ. ರಕ್ತದ ಮಡುವಲ್ಲಿ ಬಿದ್ದಿದ್ದ ನಿಧಿ ಉಳಿಯುವ ಯಾವ ಲಕ್ಷಣವೂ ಇರಲಿಲ್ಲ. ಪೊಲೀಸರು ಕೊನೆಗೂ ಸೂಫಿಯಾನನ ಕಾಲಿಗೆ ಗುಂಡುಹೊಡೆದು ಬಂಧಿಸಬೇಕಾಗಿ ಬಂತು. ಛಂಡೀಘಡದಲ್ಲಿ ಮೊಹಮ್ಮದ್ ಶಾರಿಕ್ ಮಮತಾಳೊಂದಿಗೆ ಎರಡು ವರ್ಷದಿಂದ ಸಂಪರ್ಕವಿರಿಸಿಕೊಂಡಿದ್ದ. ತನಗೆ ಮದುವೆಯಾಗಿದ್ದನ್ನು ಮುಚ್ಚಿಟ್ಟು ಆಕೆಯಂದಿಗೆ ಈ ರೀತಿಯ ಗೆಳೆತನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಈತನ ಮದುವೆಯ ವಿಚಾರ ಹೊರಬಂದೊಡನೆ ಆಕೆ ಪ್ರತಿಭಟಿಸಿದಳು. ಆತನಿಂದ ದೂರವಾದಳು. ಕೊನೆಯ ಪಕ್ಷ ಹೆಂಡತಿಗೆ ವಿಚ್ಛೇದನ ಕೊಟ್ಟು ಬಾ ಎಂಬ ಆಕೆಯ ಒತ್ತಾಯಕ್ಕೆ ಶಾರಿಕ್ ಮಣಿಯಲಿಲ್ಲ. ಆಕೆಯ ಕೊಲೆಯನ್ನೇ ಮಾಡಿಬಿಟ್ಟ. ಬಿಹಾರದ ಈತ ಓಡಿಹೋಗುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದ. ರಾಜ್ ರಜಪೂತ್ ಎಂಬ ಹೆಸರಿನಿಂದ ಜೂಲಿಕುಮಾರಿಯನ್ನು ಪ್ರೀತಿಸುವ ನಾಟಕವಾಡಿದ ತೌಫಿಕ್ ಆಲಂ, ಜೂಲಿಯಷ್ಟೇ ದೊಡ್ಡವನಾಗಿರುವ ಮಗನೊಬ್ಬನಿದ್ದಾನೆ ಎಂಬ ವಿಚಾರವೇ ಗೊತ್ತಾಗದಂತೆ ನೋಡಿಕೊಂಡಿದ್ದ. ಆಕೆಗೆ ಈ ವಿಚಾರ ಗೊತ್ತಾಗಿ ಪ್ರತಿಭಟನೆ ಶುರುವಾದೊಡನೆ ಕೊಲ್ಲುವ ಬೆದರಿಕೆ ಒಡ್ಡಿದನಲ್ಲ, ಜೂಲಿ ಬುದ್ಧಿವಂತಿಕೆಯಿಂದ ಪೊಲೀಸರ ಬಳಿ ಎಲ್ಲವನ್ನೂ ಹೇಳಿಕೊಂಡಳು. ತೌಫಿಕ್ ಈಗ ಸರಳುಗಳ ಹಿಂದಿದ್ದಾನೆ. ಮಧ್ಯಪ್ರದೇಶದಲ್ಲೂ ಸೊಹೈಲ್ ಖಾನ್ ಸುನೀತಾಳಿಗೆ ಮೋಸ ಮಾಡಿ ಮದುವೆಯಾಗಿ ಕೊನೆಗೆ ಆಕೆಯನ್ನು ಮತಾಂತರಿಸಿದ. ಒಮ್ಮೆ ಹಿಂದೂ ದೇವರಿಗೆ ನಮಸ್ಕಾರ ಮಾಡಿದಳು ಎಂಬ ಕಾರಣಕ್ಕೆ ಅವಳನ್ನು ನಿತ್ಯವೂ ಬಡಿಯುತ್ತಿದ್ದ. ಸಹಿಸಲಾಗದೇ ಆಕೆ ಈಗ ಪೊಲೀಸರ ಬಳಿ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.

ಕೇಳಿ ಕೇಳಿ ಸಾಕಾಯ್ತಲ್ಲವೇ. ಆದರೆ ಈ ಕೃತ್ಯದಲ್ಲಿ ನಿರತರಾದ ಈ ಪಾಪಿಗಳಿಗೆ ಸಾಕೆನಿಸುವುದಿಲ್ಲ. ಬೇಸರವಿರುವುದು ನಮ್ಮ ಹೆಣ್ಣುಮಕ್ಕಳ ಬಗ್ಗೆಯೇ. ಎಷ್ಟು ಬೇಗನೇ ಇವರು ತೋಡಿದ ಖೆಡ್ಡಾಕೆ ಬಿದ್ದು ಬಿಡುತ್ತಾರಲ್ಲವೇ? ತಾಜ್ ಮಹಲ್ ಕಟ್ಟಿಸಿದ ಶಹಜಹಾನ ಮುಮ್ತಾಜ್‌ಳ ನೆನಪಿಗಾಗಿ ಕಟ್ಟಿದನೆಂದು ಬೂಸಿ ಬಿಡುತ್ತಾರಷ್ಟೆ. ಅವನ ಜನಾನಾದಲ್ಲಿ ನೂರಾರು ಹೆಣ್ಣುಮಕ್ಕಳಿದ್ದುದನ್ನು ನಮ್ಮೊಂದಿಗೆ ಎಂದೂ ಹಂಚಿಕೊಳ್ಳುವುದೇ ಇಲ್ಲ. ನೂರಾರು ಮಂದಿಯೊಂದಿಗೆ ಸಂಪರ್ಕವಿರಿಸಿಕೊಂಡವನಿಗೆ ಒಬ್ಬಳೊಂದಿಗೆ ಸ್ಮಾರಕವೊಂದನ್ನು ಕಟ್ಟಿಸಬಲ್ಲಷ್ಟು ಪ್ರೀತಿ ಇದೆ, ಎಂಬುದನ್ನು ಯಾರಿಗಾದರೂ ನಂಬಲು ಸಾಧ್ಯವೇನು? ಜಾಕಿರ್ ನಾಯ್ಕ್ ಹೇಳುತ್ತಾನಲ್ಲ, ಒಬ್ಬ ಪುರುಷನಿಗೆ ನಾಲ್ಕು ಸ್ತ್ರೀಯರನ್ನು ಸಂಭಾಳಿಸುವ ತಾಕತ್ತಿದೆಯಂತಲೇ ಆತನಿಗೆ ನಾಲ್ಕು ಮದುವೆಗೆ ಅವಕಾಶ ಕೊಟ್ಟಿರೋದು ಅಂತ! ನಾಚಿಕೆಗೇಡಿನ ಮಂದಿ ಇವರೆಲ್ಲ. ಗಂಡು ಭಾವನಾತ್ಮಕ ಜಗತ್ತಿನಲ್ಲಿ ಒಬ್ಬ ಹೆಣ್ಣನ್ನಲ್ಲ, ಹತ್ತಾರು ಹೆಣ್ಣುಮಕ್ಕಳನ್ನು ಸಂಭಾಳಿಸಬಲ್ಲ. ಅವನು ಏಕಕಾಲಕ್ಕೆ ತಾಯಿಗೆ ಒಳ್ಳೆಯ ಮಗನಾಗಬಲ್ಲ, ಅತ್ತಿಗೆಗೆ ಒಳ್ಳೆಯ ಮೈದುನನಾಗಬಲ್ಲ, ಅಕ್ಕನಿಗೆ ಒಳ್ಳೆಯ ತಮ್ಮನಾಗಬಲ್ಲ, ತಂಗಿಗೆ ಒಳ್ಳೆಯ ಅಣ್ಣನಾಗಬಲ್ಲ, ಮಗಳಿಗೆ ಒಳ್ಳೆಯ ತಂದೆಯಾಗಬಲ್ಲ.  ಈ ರೀತಿ ಯೋಚನೆ ಮಾಡುವ ಸಾಮರ್ಥ್ಯ ‘ಲವ್‌ಜಿಹಾದ್’ ಅನ್ನು ಹಬ್ಬಿಸುವ ಈ ಮಂದಿಗಿದೆಯೇನು?

ಅವರ ಪಾಲಿಗೆ ಧರ್ಮಯುದ್ಧಕ್ಕೆ ಒಂದೇ ಮಾರ್ಗ, ಅನ್ಯಮತೀಯರನ್ನೆಲ್ಲ ತಮ್ಮ ಮತದವರನ್ನಾಗಿಸಿಕೊಳ್ಳುವುದು ಮಾತ್ರ. ಅವರು ಸ್ವರ್ಗಕ್ಕೆ ಹೋಗಲು ನಮ್ಮ ಹೆಣ್ಣುಮಕ್ಕಳು ಅವರ ಪಾಲಿಗೆ ಎಂಟ್ರೆನ್ಸ್ ಪಾಸ್ ಇದ್ದಂತೆ. ಅದಕ್ಕಾಗಿಯೇ ತಮ್ಮ ಹೆಸರನ್ನು ಬದಲಾಯಿಸಿಕೊಂಡು, ಹಿಂದೂಗಳಂತೆ ನಾಟಕ ಮಾಡುತ್ತಾ, ಪ್ರೇಮಿಸುವ ಬೂಟಾಟಿಕೆಯೊಂದಿಗೆ ಒಲಿಸಿಕೊಂಡು ಲೈಂಗಿಕವಾಗಿ ಬಳಸಿಕೊಂಡು ಆನಂತರ ಅವರನ್ನು ತಮ್ಮ ಗೆಳೆಯರಿಗೆ, ಗಿರಾಕಿಗಳಿಗೆ ದೇಹ ಹಂಚಿಕೊಳ್ಳಲು ಪ್ರಚೋದಿಸುತ್ತಾರೆ, ಅದರಿಂದ ಲಾಭ ಮಾಡಿಕೊಳ್ಳುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ವಿದೇಶಕ್ಕೆ ಕಳಿಸಿಕೊಟ್ಟು ಐಸಿಸ್ನ ಕ್ರೂರಿ ರಕ್ಕಸರಿಗೆ ಆಹಾರವಾಗಿಸಿಬಿಡುತ್ತಾರೆ! ಸಂಕಟವಾಗೋದು ಆಗಲೇ..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s