ಬದುಕಿದ್ದಾಗಲೇ ಭಾರತವನ್ನು ನರಕವಾಗಿಸಿಬಿಡುತ್ತಾರೆ!

ಬದುಕಿದ್ದಾಗಲೇ ಭಾರತವನ್ನು ನರಕವಾಗಿಸಿಬಿಡುತ್ತಾರೆ!

ನೂಪುರ್ ಶರ್ಮಾ ಈಗ ಜಗತ್ತಿನ ಕೇಂದ್ರಬಿಂದು. ಜಗತ್ತಿನ ಎಲ್ಲ ಮುಸಲ್ಮಾನ ರಾಷ್ಟ್ರಗಳು ಮತ್ತು ಅವರ ಭಯೋತ್ಪಾದನೆಯ ಆತಂಕಕ್ಕೆ ಒಳಗಾಗಿರುವ ಅನ್ಯ ಎಲ್ಲ ರಾಷ್ಟ್ರಗಳು ಈ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸುವಂತಾಗಿದೆ. ಮಾಧ್ಯಮದ ಚರ್ಚೆಯೊಂದರಲ್ಲಿ ಆಕೆಯಾಡಿದ ಮಾತುಗಳಿಂದ ಕುಪಿತಗೊಂಡ ಮುಸಲ್ಮಾನರು ಆಕೆಯನ್ನು ತಮಗೊಪ್ಪಿಸುವಂತೆ ಭಿನ್ನ-ಭಿನ್ನ ಸ್ವರೂಪದಲ್ಲಿ ಒತ್ತಡ ಹೇರುತ್ತಿದ್ದಾರೆ. ಅದಾಗಲೇ ಮುಸಲ್ಮಾನ ರಾಷ್ಟ್ರಗಳು ಭಾರತವನ್ನು ಹೆಡೆಮುರಿ ಕಟ್ಟುವ ಪ್ರಯತ್ನವನ್ನೂ ಮಾಡಿದ್ದು ಎಲ್ಲರಿಗೂ ತಿಳಿದಿರುವಂಥದ್ದೇ. ಈ ಸಾಲಿನಲ್ಲಿ ಹೊಸತು ಮೊನ್ನೆ ಶುಕ್ರವಾರದ ಗಲಾಟೆ. ಗಮನಿಸಬೇಕಾದ ಕೆಲವು ಸಂಗತಿಗಳು ಇಲ್ಲಿವೆ. ನೂಪುರ್ ಶರ್ಮಾ ಈ ಹೇಳಿಕೆಯನ್ನು ಕೊಟ್ಟು ಹತ್ತಾರು ದಿನಗಳೇ ಕಳೆದುಹೋಗಿವೆ. ಈಗ ಈ ಕುರಿತಂತೆ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವುದು ಅಚ್ಚರಿ ಹುಟ್ಟಿಸುವ ಪ್ರಕ್ರಿಯೆ. ಸುಮ್ಮನೆ ಈ ಪ್ರತಿಭಟನೆಗಳ ಹಿಂದಿರುವ ಏಕರೂಪತೆಯನ್ನು ಗಮನಿಸಿದರೆ ಇದು ಸಹಜವಾದ ಪ್ರಕ್ರಿಯೆಯಲ್ಲ ಎಂಬುದಂತೂ ಎಂಥವನಿಗೂ ಅರಿವಾಗುತ್ತದೆ. ಮೊದಲನೆಯದಾಗಿ ಈ ಪ್ರತಿಭಟನೆಗಳು ಆಕೆಯ ಹೇಳಿಕೆಯ ಮರುದಿನವೇ ನಡೆದಂಥದ್ದಲ್ಲ. ಹೀಗಾಗಿ ಸಹಜ ಆಕ್ರೋಶವಲ್ಲ ಎಂಬುದಂತೂ ಸತ್ಯ. ಎರಡನೆಯದ್ದು, ಅಂತರ್ರಾಷ್ಟ್ರೀಯ ಮಟ್ಟದ ಟೂಲ್ಕಿಟ್ನ ಯೋಜನೆಯಂತೆ ಕತಾರ್ನ ಕಿರಿಕಿರಿ ಮೊದಲು ಆರಂಭವಾಯ್ತು. ಅದರ ಹಿಂದು-ಹಿಂದೆಯೇ ಇನ್ನೂ ಕೆಲವು ಮುಸಲ್ಮಾನ ರಾಷ್ಟ್ರಗಳು ಭಾರತದ ವಿರುದ್ಧ ಹೇಳಿಕೆ ಕೊಡುವ ಪ್ರಯತ್ನ ಮಾಡಿದವು. ನೆನಪಿರಲಿ, ಈ ರಾಷ್ಟ್ರಗಳಲ್ಲಿ ಬಹುತೇಕ ಭಾರತಕ್ಕೆ ಇಂಧನವನ್ನು ಪೂರೈಕೆ ಮಾಡುವಂಥವು. ಭಾರತ ರಷ್ಯಾ-ಉಕ್ರೇನ್ ಯುದ್ಧದ ನಂತರ ರಷ್ಯಾದೊಂದಿಗೆ ತನ್ನ ಬಾಂಧವ್ಯವನ್ನು ಬಲಗೊಳಿಸಿಕೊಳ್ಳುತ್ತಿದೆಯಲ್ಲದೇ, ಅಲ್ಲಿನ ತೈಲ ಕಂಪೆನಿಗಳೊಂದಿಗೆ ಭಾರತ ತನ್ನ ವ್ಯಾಪಾರ ಕುದುರಿಸಿಕೊಳ್ಳುತ್ತಿದೆ. ಬಲುದೊಡ್ಡ ಪ್ರಮಾಣದಲ್ಲಿ ರಷ್ಯಾದಿಂದ ನಾವು ತೈಲ ಆಮದು ಮಾಡಿಕೊಳ್ಳುವ ಲಕ್ಷಣಗಳು ಗೋಚರವಾಗುತ್ತಿರುವುದರಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಲಿದೆ. ಸಹಜವಾಗಿ ಅವರ ಆಕ್ರೋಶ ಟೂಲ್ ಕಿಟ್‌‌ನ ಭಾಗವಾಗಿ ಕಂಡುಬರುತ್ತದೆ. ಭಾರತ ಇದರ ಮುಂದುವರೆದ ಭಾಗವನ್ನು ನಿರೀಕ್ಷಿಸಿಯೇ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ರನ್ನು ಪಕ್ಷದಿಂದ ಹೊರಹಾಕಿ ಮುಂದಾಗಲಿರುವ ಯಾವ ಘಟನೆಗೂ ತನ್ನನ್ನು ಹೊಣೆ ಮಾಡದಿರುವಂತೆ ನೋಡಿಕೊಂಡಿತು. ಇದು ನಿಸ್ಸಂಶಯವಾಗಿ ಟೂಲ್ ಕಿಟ್ ರಚನೆ ಮಾಡಿದವರಿಗೆ ಔಟ್ ಆಫ್ ಸಿಲಬಸ್ ಪ್ರಶ್ನೆ! ಬಿಜೆಪಿಯಿಂದ ಇಂಥದ್ದೊಂದು ನಡೆಯನ್ನು ಅವರು ಊಹಿಸಿರಲಿಲ್ಲ. ಪ್ರಧಾನಮಂತ್ರಿಗಳು ಇಲ್ಲಿಗೇ ನಿಲ್ಲದೇ ಇರಾನಿನೊಂದಿಗೆ ತಮ್ಮ ಬಾಂಧವ್ಯವನ್ನು ಬಲಪಡಿಸಿಕೊಳ್ಳುವ ಲಕ್ಷಣ ತೋರಿದರು. ಇದರ ಹಿಂದು-ಹಿಂದೆಯೇ ಮುಸಲ್ಮಾನ ರಾಷ್ಟ್ರಗಳಲ್ಲಿ ಅನೇಕರು ಭಾರತದ ಕುರಿತಂತೆ ಮಾಡಿದ ಟ್ವೀಟ್‌ಗಳನ್ನು ಅಳಿಸಿ ಹಾಕಿ ತಮ್ಮನ್ನು ತಾವು ಉಳಿಸಿಕೊಳ್ಳುವ ಹಂತಕ್ಕೆ ಬಂದರು. ಆದರೆ ಅಷ್ಟು ಹೊತ್ತಿಗೆ ದಾಳಗಳನ್ನು ಎಸೆದಾಗಿತ್ತು. ಈ ಟೂಲ್ಕಿಟ್ನ ಮಹತ್ವದ ಭಾಗವಾಗಿದ್ದ ಪಿಎಫ್ಐ ಮತ್ತು ಎಸ್ಡಿಪಿಐಗಳು ತಮ್ಮ ಚಟುವಟಿಕೆಯನ್ನು ಆರಂಭಿಸಿಬಿಟ್ಟಿದ್ದವು. ಮುಸಲ್ಮಾನರಿಗೆ ಹೂಡಿದ ಬಾಣ ಚಲಾಯಿಸುವುದು ಮಾತ್ರ ಗೊತ್ತು. ಚಲಾವಣೆಯಾದ್ದನ್ನು ಹಿಂದೆ ಪಡೆಯುವುದು ಅವರಿಂದ ಸಾಧ್ಯವಿಲ್ಲ. ಹೀಗಾಗಿಯೇ ದೇಶದಾದ್ಯಂತ ಪಿಎಫ್ಐನ ಸಂಘಟನೆಯ ಪ್ರತಿಫಲವಾಗಿ ಏಕಕಾಲಕ್ಕೆ ಪ್ರತಿಭಟನೆಗಳು ನಡೆದವು. ಈ ಪ್ರತಿಭಟನೆಯ ಸೂತ್ರವನ್ನು ಗಮನಿಸಿ ನೋಡಿ. ಶುಕ್ರವಾರದ ನಮಾಜ್ ಮುಗಿಯುತ್ತಿದ್ದಂತೆ ದೆಹಲಿಯ ಜಾಮಾ ಮಸೀದಿಯಿಂದ ತಮಿಳುನಾಡಿನ ಮಸೀದಿಯವರೆಗೆ ಒಬ್ಬರ ಹಿಂದೆ ಮತ್ತೊಬ್ಬರು ಬೀದಿಗೆ ಬಂದರು. ಸಾರ್ವಜನಿಕ ಆಸ್ತಿಪಾಸ್ತಿಯನ್ನು ಧ್ವಂಸಗೊಳಿಸಿದರು, ಬೆಂಕಿ ಹಚ್ಚಿ ಸಂಭ್ರಮಿಸಿದರು. ಹಾಗಂತ ಇದನ್ನು ಹೊಸತೆಂದು ಭ್ರಮಿಸಿದಿರೇನು? ಖಂಡಿತ ಇಲ್ಲ. ಶುಕ್ರವಾರಕ್ಕೂ ಮುಸಲ್ಮಾನರಿಗೂ ಅವಿನಾಭಾವ ನಂಟು. ಭಾರತ-ಪಾಕಿಸ್ತಾನದ ಕ್ರಿಕೆಟ್ ಮ್ಯಾಚುಗಳು ಶುಕ್ರವಾರ ನಡೆದರೆ ಅವರು ಗೆಲ್ಲಲೇಬೇಕಿತ್ತು. ಸೋತರೆ ಒಂದಷ್ಟು ಮುಸಲ್ಮಾನರು ಬೀದಿಗೆ ಬಂದು ರೊಚ್ಚಿಗೆದ್ದು ಬೆಂಕಿ ಹಚ್ಚುತ್ತಿದ್ದರು. ಮಯನ್ಮಾರ್ ನಲ್ಲಿ ಮುಸಲ್ಮಾನರ ವಿರುದ್ಧ ಗಲಾಟೆಯಾದರೆ ಇಲ್ಲಿನ ಮುಸಲ್ಮಾನರು ಶುಕ್ರವಾರದ ನಮಾಜು ಮುಗಿಸಿ ಬೀದಿಗೆ ಬಂದು, ಅಮರ್ ಜವಾನ್ನಂತಹ ಸ್ಮಾರಕಗಳನ್ನು ಒದ್ದು ಉರುಳಿಸಿದ ಚಿತ್ರಗಳು ಈಗಲೂ ತಿರುಗಾಡುತ್ತವೆ. ಮಾಯಾನ್ಮಾರ್ಗೂ ಭಾರತಕ್ಕೂ ಏನು ಸಂಬಂಧ ಎಂಬ ಪ್ರಶ್ನೆಗೆ ಈ ದಡ್ಡರ ಬಳಿ ಉತ್ತರವಿಲ್ಲ. ಹಾಗಂತ ಇದು ಈಗ ಮಾತ್ರವಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ಖಲೀಫಾನ ವಿರುದ್ಧ ನಿರ್ಣಯ ತೆಗೆದುಕೊಂಡರು ಎಂಬ ಕಾರಣಕ್ಕೆ ಅವರು ಖಿಲಾಫತ್ ಚಳವಳಿ ಆರಂಭಿಸಿದ್ದು ಭಾರತದಲ್ಲಿ. ಜಗತ್ತಿನ ಯಾವ ಮೂಲೆಯಲ್ಲಿ ಮುಸಲ್ಮಾನರಿಗೆ ತೊಂದರೆಯಾದರೂ ಶುಕ್ರವಾರದ ನಮಾಜಿನಲ್ಲಿ ಅದರ ಉಲ್ಲೇಖವಾಗುತ್ತದೆ. ರೊಚ್ಚಿಗೆದ್ದ ಮುಸಲ್ಮಾನರು ಬೀದಿಗೆ ಬಂದು ಜನಸಾಮಾನ್ಯರ ಆಸ್ತಿ ನಾಶ ಮಾಡುತ್ತಾರೆ. ಇದನ್ನು ಬುದ್ಧಿವಂತಿಕೆ ಎಂದು ಸಮರ್ಥಿಸಿಕೊಳ್ಳುವ ಎಲ್ಲ ಬುದ್ಧಿಜೀವಿಗಳಿಗೂ, ಮೋದಿ ವಿರೋಧಿ ಅಂಧರಿಗೂ, ಮತಬ್ಯಾಂಕುಗಳ ಮೇಲೆ ದೃಷ್ಟಿಯಿಟ್ಟವರಿಗೂ ಎರಡು ನಿಮಿಷದ ಮೌನ ಸಮರ್ಪಿಸದೇ ಬೇರೆ ದಾರಿಯೇ ಇಲ್ಲ.


ಮರುಭೂಮಿಯಲ್ಲಿ ಹುಟ್ಟಿದ ಪಂಥಗಳ ಸಮಸ್ಯೆಯೇ ಇದು. ಹಿಂದೂ ದೇವರುಗಳ ಬಳಿ ಆಯುಧಗಳಿರುತ್ತವಲ್ಲ ಎಂದು ಅನೇಕ ಬುದ್ಧಿಜೀವಿಗಳು ನಮ್ಮನ್ನು ಮೂದಲಿಸುತ್ತಾರೆ. ಆದರೆ ಚಿಂತನೆಯ ವೈಶಿಷ್ಟ್ಯವನ್ನು ಗಮನಿಸಿ; ಹಿಂದುಗಳಲ್ಲಿ ಭಗವಂತ ಭಕ್ತರ ರಕ್ಷಣೆ ಮಾಡುತ್ತಾನೆ. ಆದರೆ ಇಸ್ಲಾಂ, ಕ್ರೈಸ್ತ ಪಂಥಗಳಲ್ಲಿ ಭಕ್ತರೇ ಭಗವಂತನ ರಕ್ಷಣೆ ಮಾಡಬೇಕು. ಹೀಗಾಗಿಯೇ ಹಿಂದೂಗಳಲ್ಲಿ ದೇವರುಗಳ ಕೈಲಿ ಆಯುಧವಿದ್ದರೆ, ಇಲ್ಲಿ ಭಕ್ತರ ಕೈಗಳಲ್ಲಿ ಆಯುಧ. ಹಿಂದೂಗಳಲ್ಲಿ ಯಾರಿಂದಾದರೂ ತೊಂದರೆಯಾದರೆ ದೇವರ ಮೊರೆ ಹೊಕ್ಕರೆ, ಇಲ್ಲೆಲ್ಲಾ ದೇವರನ್ನು, ಸಂದೇಶವಾಹಕನನ್ನು ಯಾರಾದರೂ ಹೀಯಾಳಿಸಿದರೆ ಆತ ಭಕ್ತರ ಮೊರೆ ಹೊಕ್ಕುತ್ತಾನೆ. ಹಿಂದೂಗಳು ಪ್ರತೀ ಬಾರಿ ತಮ್ಮ ದುಃಖವನ್ನು ಭಗವಂತನ ಮುಂದೆ ಕಣ್ಣೀರು ಹಾಕಿ ದೈವೀಶಕ್ತಿಯ ಪ್ರವೇಶವನ್ನು ಪ್ರಾರ್ಥಿಸುತ್ತಾ ಕುಳಿತರೆ ಇಲ್ಲಿ ದೇವರ ಕಣ್ಣೀರು ಒರೆಸಲು ಇವರು ಇತರರ ರಕ್ತ ಹರಿಸುತ್ತಾರೆ! ಈ ವೈರುಧ್ಯವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಮತ-ಪಂಥಗಳ ಕುರಿತ ನಮ್ಮ ಜಿಜ್ಞಾಸೆ ಪೂರ್ಣ ರೂಪವನ್ನು ಪಡೆದುಕೊಂಡೀತು. ಇನ್ನೂ ವಿಸ್ತಾರಗೊಳಿಸಬೇಕೆಂದಾದರೆ ಹಿಂದೂಗಳಲ್ಲಿ ಎಲ್ಲ ದುಃಖವನ್ನು ತಾಳಿಕೊಂಡು ಭಗವಂತನ ಮೊರೆ ಹೊಕ್ಕವನಿಗೆ ಭಗವಂತ ಮೋಕ್ಷವನ್ನು ಕರುಣಿಸಿ ಸಾನಿಧ್ಯ ನೀಡುತ್ತಾನೆ. ಮರುಭೂಮಿಯ ಪಂಥಗಳಲ್ಲಿ ಭಗವಂತನ ದುಃಖ ನಿವಾರಣೆಗೆ ಇತರರ ರಕ್ತ ಹರಿಸಿದವನಿಗೆ ಆತ ಸ್ವರ್ಗ ಕೊಟ್ಟು 72 ಮಂದಿ ಕನ್ಯೆಯರನ್ನು ಕೊಡುಗೆಯಾಗಿ ನೀಡುತ್ತಾನೆ. ಈ ಕಾರಣಕ್ಕಾಗಿಯೇ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಪ್ರತಿಯೊಬ್ಬರೂ ಶಾಶ್ವತ ಸ್ವರ್ಗ ಪ್ರಾಪ್ತಿಗಾಗಿ ಭೂಮಿಯ ಮೇಲೆ ನರಕ ಸೃಷ್ಟಿಗೆ ಸಜ್ಜಾಗಿಬಿಟ್ಟಿದ್ದಾರೆ! ಹಾಗಂತ ಇವರು ಕೊಲೆ ಮಾಡುವುದು ಇತರರನ್ನು ಮಾತ್ರವಲ್ಲ, ತಮ್ಮವರನ್ನೂ ಕೂಡ. ಪಾಕಿಸ್ತಾನದಲ್ಲಿ ಅವರನ್ನು ಅವರೇ ಸಾಯಿಸುತ್ತಾರೆ. ಆಫ್ಘಾನಿಸ್ತಾನ, ಇರಾಕ್, ಇರಾನ್ ಮೊದಲಾದ ರಾಷ್ಟ್ರಗಳು ಪೂರ್ಣ ಮುಸಲ್ಮಾನರಿಂದಲೇ ಕೂಡಿದ್ದರೂ ಬಡಿದಾಡಿಕೊಂಡು ಸಾಯುತ್ತವೆ. ಏಕೆ ಗೊತ್ತೇ? ಅವರಿಗೆ ತಾವು ಕಾಫಿರರನ್ನು ಕೊಂದು ಸಮಾಧಿ ಸೇರಿದರೆ ಸ್ವರ್ಗ ಸಿಗಲಾರದು. ಭೂಮಿಯ ಮೇಲಿರುವ ಪ್ರತಿಯೊಬ್ಬರೂ ಸತ್ತ ನಂತರವೇ ಭಗವಂತ ಬಂದು ಎಬ್ಬಿಸಿ, ಸ್ವರ್ಗ-ನರಕಗಳನ್ನು ಹಂಚಿಕೊಡುವುದು. ಅಂದರೆ, ಈ ಭೂಮಿ ಇನ್ನೂ ಸಾವಿರ ವರ್ಷಗಳ ಕಾಲ ಇದ್ದರೆ ಅಂದಿನಿಂದ ಮುಂದಿನ ಸಾವಿರ ವರ್ಷದವರೆಗೂ ತೀರಿಕೊಳ್ಳುವವರು ಸ್ವರ್ಗ ಕಾಣದೇ ಪರಿತಪಿಸುತ್ತಿರುತ್ತಾರೆ. ಹೀಗಾಗಿಯೇ ಅಶಾಂತಿ ಅವರ ಬದುಕಿನ ಅಂಗ. ಶಾಂತವಾಗಿ ಬದುಕಿರುವ ಯಾವ ಭೂಭಾಗವನ್ನೂ ಅವರು ಸಹಿಸಲಾರರು. ಮತಾಂಧತೆಯನ್ನು ಬಾಲ್ಯದಲ್ಲೇ ತುಂಬಿ ಪುಟ್ಟ ಮಕ್ಕಳೂ ಕೂಡ ಕ್ರೌರ್ಯವನ್ನು ರಕ್ತದ ಕಣಕಣದೊಳಗೆ ತುಂಬಿಕೊಳ್ಳುವಂತೆ ಅವರು ಮಾಡಿಬಿಡುತ್ತಾರೆ. ಈ ಕ್ರೌರ್ಯದ ಪರಿಯನ್ನು ನೀವು ಊಹಿಸಲೂ ಸಾಧ್ಯವಿಲ್ಲ.


ಇತ್ತೀಚೆಗೆ ನೂಪುರ್ ಶರ್ಮಾಳ ಪ್ರತಿಕೃತಿಯೊಂದರ ಮೇಲೆ ಮೂತ್ರ ಮಾಡುತ್ತಿರುವ ಮಕ್ಕಳ ವಿಡಿಯೊ ವೈರಲ್ ಆಯ್ತು. ಅದನ್ನು ಹಂಚಿಕೊಂಡಿದ್ದವ ಭವಿಷ್ಯದಲ್ಲಿ ಇದು ಸಹಜವಾಗಲಿದೆ, ಹೀಗಾಗಿ ಇಸ್ಲಾಮನ್ನು ಎದುರಿಸುವಾಗ ಎಚ್ಚರವಿರಲಿ ಎಂದು ಬರೆದಿದ್ದ. ಅದರರ್ಥವೇನು? ಮಕ್ಕಳು ತಮ್ಮ ಗುಪ್ತಾಂಗವನ್ನು ಬಳಸಿ ಹೆಣ್ಣುಮಕ್ಕಳನ್ನು ಅವಹೇಳನಕ್ಕೆ ಗುರಿಪಡಿಸಬಹುದು ಎಂಬುದನ್ನು ಅರಿತಿದ್ದಾರೆ ಎಂದು ತಾನೇ? ಹೆಣ್ಣುಮಕ್ಕಳನ್ನು ಮಾತನಾಡದಂತೆ ಒಳ ಕೂರಿಸುವುದಕ್ಕೆ ಮಾನಭಂಗದ ಹೆದರಿಕೆ ಹುಟ್ಟಿಸುವುದೊಂದೇ ಮಾರ್ಗ ಎಂಬುದನ್ನು ಅವರಲ್ಲಿ ಪುಟ್ಟ ಮಕ್ಕಳೂ ಅರಿತಿದ್ದಾರೆ. ತಾಲಿಬಾನ್ ಸಂಸ್ಕೃತಿಯಲ್ಲಿ ಕಂಡುಬರುವಂತಹ ಈ ಪ್ರಕರಣಗಳು ಭಾರತದಲ್ಲೂ ಕಾಣುತ್ತಿರುವುದು ಎಚ್ಚರಿಕೆಯ ಕರೆಗಂಟೆ! ಇವೇ ಮಕ್ಕಳು ಬೆಳೆದು ದೊಡ್ಡವರಾದಾಗ ಹೆಣ್ಣುಮಕ್ಕಳನ್ನು ಅಪಹರಿಸಿಕೊಂಡು ಹೋಗೋದು, ಮಾನಭಂಗ ಮಾಡೋದು, ಅಗತ್ಯಬಿದ್ದರೆ ಮತದ ಹೆಸರಿನಲ್ಲಿ ಕೊಲೆಗಳನ್ನೂ ಕೂಡ. ಅವರಿಗೆ ಪ್ರವಾದಿಯನ್ನು ಅವಹೇಳನ ಮಾಡಿದ್ದಾರೆ ಎಂಬುದು ನೆಪವಷ್ಟೆ. ಒಂಭತ್ತು ತಿಂಗಳುಗಳ ಕಾಲ ಜೈಲಿನಲ್ಲಿದ್ದ ಕಮಲೇಶ್ ತಿವಾರಿ ಹೊರಬಂದೊಡನೆ ಆತನನ್ನು ಇರಿದು ಕೊಂದರಲ್ಲ, ಇದು ನಾಲ್ಕು ವರ್ಷಗಳ ಹಿಂದೆ ಆತ ಮಾಡಿದ ಹೇಳಿಕೆಯೊಂದರ ಪ್ರತೀಕಾರವಾಗಿತ್ತು. 1920ರ ದಶಕದಲ್ಲಿ ಕೃಷ್ಣನ ಕುರಿತಂತೆ ಮತ್ತು ದಯಾನಂದ ಸರಸ್ವತಿಗಳ ಕುರಿತಂತೆ ಮುಸಲ್ಮಾನರು ಅವಹೇಳನಕಾರಿಯಾಗಿ ಬರೆದಿದ್ದಾಗ ಮಹಾಶಯ್ ರಾಜ್‌ಪಾಲ್‌ರು ರಂಗೀಲಾ ರಸೂಲ್ ಎಂಬೊಂದು ಪುಸ್ತಕವನ್ನು ತಮ್ಮ ಪ್ರಕಾಶನದಿಂದ ಹೊರತಂದಿದ್ದರು. ಕಿಡಿಕಿಡಿಯಾದ ಮುಸಲ್ಮಾನರು ಲೇಖಕನ ಹೆಸರನ್ನು ಬಹಿರಂಗ ಪಡಿಸುವಂತೆ ಮಹಾಶಯ್‌ರನ್ನು ಬಗೆ-ಬಗೆಯಾಗಿ ಪೀಡಿಸಿದರೂ ಅವರು ಬಾಗಲಿಲ್ಲ. ಕೊನೆಗೆ ಅನೇಕ ಬಾರಿ ಪ್ರಯತ್ನಿಸಿ ಏಳೆಂಟು ವರ್ಷಗಳ ನಂತರ ಅವರನ್ನು ಬಡಿಗೆ ಕೆಲಸ ಮಾಡುವವನೊಬ್ಬ ಕೊಂದು ಹಾಕಿದ. ತೀರಾ ಇತ್ತೀಚೆಗೆ ಗುಜರಾತಿನ ಕಿಶನ್ ಭಾರ್ವಾಡ ಪ್ರವಾದಿಯವರ ಚಿತ್ರವನ್ನು ಹಂಚಿಕೊಂಡಿದ್ದನೆಂಬ ಒಂದೇ ಕಾರಣಕ್ಕೆ ಆತನನ್ನು ಗುಂಡಿಟ್ಟು ಕೊಲ್ಲಲಾಗಿತ್ತು. ಶಿವಮೊಗ್ಗದ ಹರ್ಷನ ಕಥೆ ಇದಕ್ಕಿಂತಲೂ ಭಿನ್ನವಾಗಿರಲಿಲ್ಲ. ಹಾಗಂತ ಇದು ಭಾರತದಲ್ಲಿ ಮಾತ್ರವಲ್ಲ, ಪಾಕಿಸ್ತಾನದಲ್ಲೂ ಕೂಡ ಈ ಪ್ರಯತ್ನಗಳಾಗಿವೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಲ್ಮಾನ್ ತಾಸಿರ್ ದೇವದೂಷಣೆಯ ಕುರಿತ ಕಾನೂನುಗಳು ಇಂಧನ ಯುಗಕ್ಕೆ ಸಲ್ಲದ್ದೆಂದು ಹೇಳಿ ಕಾಸಿಯಾ ಬೀಬಿಯ ಪರವಾಗಿ ನಿಂತಿದ್ದ ಎಂಬ ಒಂದೇ ಕಾರಣಕ್ಕೆ ಗುಂಡಿಟ್ಟು ಕೊಲ್ಲಲಾಗಿತ್ತು. ಪ್ಯಾರಿಸ್ನಲ್ಲಿ ಶಾಲೆಯಲ್ಲಿ ಚರ್ಚೆಯ ಸಂದರ್ಭದಲ್ಲಿ ಪ್ರವಾದಿಯವರ ಚಿತ್ರವನ್ನು ತೋರಿಸಿದ ಎಂಬ ಒಂದೇ ಕಾರಣಕ್ಕೆ ಸ್ಯಾಮುಯಲ್ ಪ್ಯಾಟಿಯ ಕತ್ತು ಕಡಿಯಲಾಗಿತ್ತು. ನೈಜೀರಿಯಾದಲ್ಲಿ ದೆಬೊರಾ ಸ್ಯಾಮುಯಲ್ ಎಂಬ ವಿದ್ಯಾರ್ಥಿಗೂ ಇದೇ ಗತಿ ಕಾಣಿಸಲಾಗಿತ್ತು. ಪಾಕಿಸ್ತಾನದಲ್ಲಿದ್ದ ಶ್ರೀಲಂಕೆಯ ನೌಕರನೊಬ್ಬನನ್ನು ವಿನಾಕಾರಣ ಬಡಿದು ಕೊಂದದ್ದು ತೀರಾ ಇತ್ತೀಚಿನ ಘಟನೆಗಳಲ್ಲೊಂದು! ಇವಿಷ್ಟನ್ನೂ ಈಗೇಕೆ ಸ್ಮರಿಸಿಕೊಳ್ಳುತ್ತಿದ್ದೇನೆಂದರೆ ಮುಸಲ್ಮಾನರು ಸಂಘ ಜೀವನಕ್ಕೆ ಹೇಳಿ ಮಾಡಿಸಿದವರಲ್ಲ. ಅವರು ಸಾಗುತ್ತಿರುವ ಈಗಿನ ಹಾದಿಯನ್ನು ನೋಡಿದರೆ ಅವರು ತಿದ್ದಿಕೊಳ್ಳುವಂತೆಯೂ ಕಾಣುವುದಿಲ್ಲ. ಅದಕ್ಕೆ ಪೂರಕವಾಗಿ ನಾವೂ ಕೂಡ ಬದಲಾವಣೆ ತರಬಲ್ಲ ಯಾವ ಚಟುವಟಿಕೆಗಳನ್ನೂ ನಡೆಸುತ್ತಿಲ್ಲ. ಎನ್‌ಡಿಟಿವಿಯ ವಿಷ್ಣು ಸೋಮ್ ಇತ್ತೀಚಿನ ತನ್ನ ಚರ್ಚೆಯಲ್ಲಿ ದೇಶ್ ರತನ್ ಅಂತರ್ರಾಷ್ಟ್ರೀಯ ವರದಿಗಳ ಪ್ರಕಾರ ಇರುವ ಭಯೋತ್ಪಾದಕರಲ್ಲಿ 95 ಪ್ರತಿಶತ ಮಸುಲ್ಮಾನರೆಂದೂ, 95 ಪ್ರತಿಶತ ಸಂಘಟನೆಗಳೂ ಮುಸಲ್ಮಾನರದ್ದೆಂದು ಹೇಳಿದಾಗ ಏನೆಂದು ಪ್ರತಿಕ್ರಿಯಿಸಿದ ಗೊತ್ತೇ? ‘ಈ ವರದಿ ನಿಜವಾಗಿದ್ದರೂ ಅದನ್ನು ಜೋರಾಗಿ ಹೇಳಿ ಮುಸಲ್ಮಾನರಿಗೆ ನೋವುಂಟು ಮಾಡಬಾರದು’ ಅಂತ! ಭಯೋತ್ಪಾದಕರನ್ನು ಬಿಟ್ಟು ಉಳಿದವರು ಒಳ್ಳೆಯವರಿದ್ದಾರಲ್ಲ ಎಂಬುದು ಅವನ ಅಂಬೋಣ. ಆದರೆ ಆ ಉಳಿದ ಒಳ್ಳೆಯವರು ಭಯೊತ್ಪಾದಕರನ್ನು ತಿರಸ್ಕರಿಸದಿದ್ದರೆ, ಅವರನ್ನು ವಿರೋಧಿಸದಿದ್ದರೆ, ಅವರ ವಿರುದ್ಧ ಫತ್ವಾ ಹೊರಡಿಸುವ ತಾಕತ್ತು ತೋರದಿದ್ದರೆ ಅವರನ್ನು ಒಳ್ಳೆಯವರೆಂದು ಒಪ್ಪುವುದಾದರೂ ಹೇಗೆ?

ಭಾರತದ ಮುಸಲ್ಮಾನರು ಒಂದು ದಿಕ್ಕಿನಿಂದ ಸ್ಪಷ್ಟತೆಯನ್ನು ತಂದುಕೊಳ್ಳುತ್ತಿದ್ದಾರೆ. ಇದು ಅವರಿಗೆ ಕೊನೆಯ ಅವಕಾಶವೆಂಬುದು ಗೊತ್ತಿದೆ. ಮೋದಿ ತರುತ್ತಿರುವ ಒಂದೊಂದು ಸುಧಾರಣೆಯ ಕ್ರಮಗಳೂ ಅವರನ್ನು ಅನಿವಾರ್ಯವಾಗಿ ಮುಖ್ಯವಾಹಿನಿಯೊಂದಿಗೆ ಏಕರಸವಾಗಿಸುತ್ತಿವೆ. ಬಹುತೇಕ ಮುಸಲ್ಮಾನ ಮಹಿಳೆಯರು ಈಗ ಮುಸಲ್ಮಾನರ ಪುರುಷ ಪ್ರಧಾನ ಧೋರಣೆಯನ್ನು ಧಿಕ್ಕರಿಸುವ ಸಿದ್ಧತೆ ನಡೆಸುತ್ತಿದ್ದಾರೆ. ಅವರಿಗೀಗ ಹಿಂದೂ ದೇವತೆಗಳನ್ನು ಅವಹೇಳನಗೊಳಿಸಿದ ಎಮ್.ಎಫ್ ಹುಸೇನನ ವಿಕೃತಿಯ ಕುರಿತಂತೆ, ಹಿಂದೂ ದೇವರುಗಳ ಕುರಿತಂತೆ ಮನಸೋ ಇಚ್ಛೆ ಮಾತನಾಡಿದ ಓವೈಸಿಯ ಭಾಷಣಗಳ ಕುರಿತಂತೆ ವ್ಯಾಪಕವಾಗಿ ಪರಿಚಯ ಮಾಡಿಸಿಕೊಡಬೇಕಿದೆ. ತಮ್ಮ ದೇವರು ಮಾತ್ರ ದೇವರು, ಉಳಿದವರ ದೇವರು ದೇವರಲ್ಲ ಎಂಬ ಈ ಧೋರಣೆಯನ್ನು ಭಾರತ ಸರಿಯಾಗಿ ಎದುರಿಸಬೇಕಿದೆ. ಕೇಂದ್ರ ಸರ್ಕಾರಕ್ಕೆ ಇನ್ನೂ ಎರಡು ವರ್ಷವಿದೆ. ಅಷ್ಟರೊಳಗೆ ಈ ಆತತಾಯಿಗಳಿಗೆ ಸರಿಯಾದ ಬುದ್ಧಿ ಕಲಿಸದೇ ಹೋದರೆ ಸತ್ತ ನಂತರದ ಸ್ವರ್ಗ-ನರಕಗಳ ಬಗ್ಗೆ ಗೊತ್ತಿಲ್ಲ, ಬದುಕಿದ್ದಾಗಲೇ ಇವರು ಭಾರತವನ್ನು ನರಕವಾಗಿಸಿಬಿಡುತ್ತಾರೆ!!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s