ಪಾಕಿಸ್ತಾನಕ್ಕೆ ಸಹಾಯ ಬೇಕಿದೆ, ಜಿಂದಾಬಾದ್ ಎನ್ನುವವರು ಹೋಗಬಹುದು!

ಪಾಕಿಸ್ತಾನಕ್ಕೆ ಸಹಾಯ ಬೇಕಿದೆ, ಜಿಂದಾಬಾದ್ ಎನ್ನುವವರು ಹೋಗಬಹುದು!

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರಕ್ಕೆ ಕಠೋರವಾದ ಎಚ್ಚರಿಕೆ ಕೊಟ್ಟಿದ್ದಾನೆ. ಆರು ದಿನಗಳೊಳಗೆ ಚುನಾವಣೆಯನ್ನು ಘೋಷಿಸದಿದ್ದರೆ ತನ್ನ ಜೊತೆಗಾರರೊಂದಿಗೆ ಬೀದಿಗಿಳಿಯುತ್ತೇನೆ ಎಂದಿದ್ದಾನೆ. ಈ ಬಾರಿ ಬೀದಿಗಿಳಿದರೆ ಇದು ಹಿಂಸಾತ್ಮಕವಾಗಿರುವ ಹೋರಾಟವಾಗಬಹುದು ಎಂಬ ಹೆದರಿಕೆಯೂ ಎಲ್ಲರಲ್ಲಿದೆ. ಇತ್ತ ಪಾಕಿಸ್ತಾನದ ಈಗಿನ ಪ್ರಧಾನಿ ಶೆಹ್ಬಾಜ್ ಷರೀಫ್ ಪಾಕಿಸ್ತಾನದ ಇಂದಿನ ಪರಿಸ್ಥಿತಿಗಳಿಗೆಲ್ಲ ಇಮ್ರಾನ್ಖಾನನ ಸರ್ಕಾರವೇ ಕಾರಣ ಎಂದು ಒಪ್ಪಿಸುವ ಹಠಕ್ಕೆ ಬಿದ್ದಿದ್ದಾರೆ. ಈ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಮೊಹಮ್ಮದ್ ಹಫೀಜ್ ಟ್ವೀಟ್ ಮಾಡಿ ಲಾಹೋರಿನಲ್ಲಿ ಪೆಟ್ರೋಲ್ ಸಿಗುತ್ತಿಲ್ಲ, ಎಟಿಎಂನಲ್ಲಿ ಹಣ ಸಿಗುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ! 

ಪಾಕಿಸ್ತಾನದ ಸ್ಥಿತಿ ಸದ್ಯದಲ್ಲೇ ಶ್ರೀಲಂಕಾದಂತೆ ಆದರೆ ಯಾರೂ ಅಚ್ಚರಿ ಪಡಬೇಕಿಲ್ಲ. ಅನೇಕರು ಇದರ ಮೂಲವನ್ನು ಭಾರತದ ನೋಟು ರದ್ದತಿಯಲ್ಲಿ ಹುಡುಕುತ್ತಾರೆ. ಅಲ್ಲಿಯವರೆಗೂ ನಕಲಿ ನೋಟುಗಳ ಮುದ್ರಣದಿಂದ ಸಾಕಷ್ಟು ಸಂಪಾದನೆ ಮಾಡುತ್ತಿದ್ದ ಪಾಕಿಸ್ತಾನ ಏಕಾಕಿ ಪ್ರಪಾತಕ್ಕೆ ಬಿತ್ತು ಎನ್ನುವುದು ಅಭಿಪ್ರಾಯ. ಅದು ಸತ್ಯವೂ ಇರಬಹುದು. ಏಕೆಂದರೆ ಅಲ್ಲಿಯವರೆಗೂ ಮೆರೆದಾಡುತ್ತಿದ್ದ ಪಾಕಿಸ್ತಾನ ಆನಂತರ ಏಕಾಕಿ ತುಮುಲಕ್ಕೆ ಬಿತ್ತು. ಮುಂದೆ ಬೀದಿಗಿಳಿದು ಹೋರಾಟ ಮಾಡುತ್ತಲೇ ಅಧಿಕಾರಕ್ಕೆ ಬಂದ ಇಮ್ರಾನ್ ಖಾನ್ ಈ ಪರಿಸ್ಥಿತಿಯನ್ನು ಹಾಳುಗೆಡವಿದ. ವಾಸ್ತವವಾಗಿ ಆತ ಅಧಿಕಾರಕ್ಕೆ ಬಂದದ್ದೇ ಸೈನ್ಯದ ಸಹಕಾರದೊಂದಿಗೆ. ಪಾಕಿಸ್ತಾನದ ವಿಚಾರದಲ್ಲಿ ಇದೇನು ಹೊಸ ಸಂಗತಿಯಲ್ಲ ಬಿಡಿ. ಸೈನ್ಯದ ಅನುಮತಿಯಿಲ್ಲದೇ ಅಲ್ಲಿ ಯಾವ ರಾಜಕೀಯ ಚಟುವಟಿಕೆಗಳೂ ನಡೆಯುವುದಿಲ್ಲ. ಆದರೆ ತನಗೆ ಬೇಕಾದ ಅಧಿಕಾರಿಯೊಬ್ಬನನ್ನು ಆಯಕಟ್ಟಿನ ಜಾಗದಲ್ಲಿ ಕೂರಿಸಿಕೊಳ್ಳಲು ಸೈನ್ಯ ಅನುಮತಿ ನಿರಾಕರಿಸಿದಾಗ ಎಲ್ಲ ಗೊಂದಲವೂ ಆರಂಭವಾದವು. ಐಎಸ್ಐನ ಡೈರೆಕ್ಟರ್ ಜನರಲ್ನನ್ನು ವರ್ಗಾವಣೆ ಮಾಡುವಂತೆ ಸೈನ್ಯ ಆದೇಶಿಸಿತ್ತು. ತನಗೆ ನಿಷ್ಠನಾಗಿರುವ ಆತನನ್ನು ಚುನಾವಣೆಯವರೆಗೂ ಉಳಿಸಿಕೊಳ್ಳಬೇಕಿತ್ತಲ್ಲದೇ ಅಗತ್ಯಬಿದ್ದರೆ ಸೈನ್ಯದ ಮುಖ್ಯಸ್ಥನನ್ನಾಗಿ ಮಾಡಬೇಕೆಂಬುದು ಇಮ್ರಾನನ ಬಯಕೆಯಾಗಿತ್ತು. ಯಾವಾಗ ಆತ ಸೈನ್ಯದ ಮಾತನ್ನು ಕೇಳುವುದನ್ನು ವಿರೋಧಿಸಿದನೋ ಅಂದೇ ಆತನ ಮೇಲಿದ್ದ ಅಭಯಹಸ್ತ ಹೊರಟುಹೋಯ್ತು. ಆತನ ಬಹುಮತಕ್ಕೆ ಕಾರಣವಾಗಿದ್ದ ಎರಡು ಚಿಕ್ಕ ಪಕ್ಷಗಳು ದಳ ಬದಲಾಯಿಸಿ ಕಾನೂನಾತ್ಮಕವಾಗಿಯೇ ಸರ್ಕಾರವನ್ನು ಉರುಳಿಸಿದರು. ಇಮ್ರಾನ್ ಸುಮ್ಮನಿರಲಿಲ್ಲ. ಸರ್ಕಾರವನ್ನೇ ಬರ್ಖಾಸ್ತು ಮಾಡುವ ಪ್ರಯತ್ನವನ್ನೂ ಮಾಡಿದ್ದ. ಆದರದು ನ್ಯಾಯಾಲಯದಲ್ಲಿ ಬಿದ್ದುಹೋಯ್ತು. ಹೀಗಾಗಿ ಆತ ಅನಿವಾರ್ಯವಾಗಿ ಅಧಿಕಾರದಿಂದ ಇಳಿಯಬೇಕಾಯ್ತು. ಈ ರೀತಿ ಅವಿಶ್ವಾಸ ಗೊತ್ತುವಳಿ ಮಂಡಿಸಿ ಅಧಿಕಾರ ಕಳೆದುಕೊಂಡ ಪಾಕಿಸ್ತಾನದ ಮೊದಲ ಪ್ರಧಾನಿಯಾದ ಆತ! ಹಾಗಂತ ಅವಧಿ ಪೂರೈಸದೇ ಹೋದ ಮೊದಲನೆಯವನೇನೂ ಅಲ್ಲ. ಬಹುತೇಕ ಪಾಕಿಸ್ತಾನದ ಎಲ್ಲ ಪ್ರಧಾನಿಗಳೂ ಅವಧಿಗೆ ಮುನ್ನವೇ ಕೆಳಗಿಳಿಯುತ್ತಾರೆ ಏಕೆಂದರೆ ಅವರೆಲ್ಲರೂ ಸೈನ್ಯದ ಕೈಗೊಂಬೆಗಳೇ ಆಗಿರುತ್ತಾರೆ. 

ಆದರೆ ಇಮ್ರಾನ್‌ಖಾನನಿಗೆ ಜನಬೆಂಬಲ ಜೋರಾಗಿಯೇ ಇತ್ತು. ಒಮ್ಮೊಮ್ಮೆ ಆತ ಪಾಕಿಸ್ತಾನದ ಕೇಜ್ರಿವಾಲನಂತೆ ಕಾಣುತ್ತಾನೆ. ಅಗತ್ಯ ಬಿದ್ದಾಗ ಮಾತನ್ನು ಹೊರಳಿಸುತ್ತಾ, ಜನರನ್ನು ನಂಬಿಸುವುದರಲ್ಲಿ ನಿಸ್ಸೀಮ. ಐಎಮ್ಎಫ್ನ ಸಾಲಕ್ಕೆ ಸಹಿ ಹಾಕಿ ಬಂದವನು ಅವನೇ. ಆದರೆ ಈ ಸಾಲ ಪಡೆಯಲು ಆತ ಕೈಗೊಳ್ಳಬೇಕಾಗಿದ್ದ ನಿರ್ಣಯಗಳು ಮಾತ್ರ ಕಠಿಣವಾಗಿದ್ದವು. ಅದಕ್ಕೂ ಒಪ್ಪಿಕೊಂಡು ಬಂದಿದ್ದ. ಈಗ ಆತನ ಸಕರ್ಾರ ಉರುಳಿ ಹೊಸ ಸಕರ್ಾರ ಬಂತಲ್ಲ. ಅದು ಈ ನಿಯಮಗಳನ್ನು ಅನಿವಾರ್ಯವಾಗಿ ಪಾಲಿಸಬೇಕಾಯ್ತು. ಐಎಮ್ಎಫ್‌ನ ಸಾಲ ತರಲು ಇಮ್ರಾನ್ ಖಾನ್ ಘೋಷಿಸಿದ್ದ ಇಂಧನದ ಮೇಲಿನ ಸಬ್ಸಿಡಿಯನ್ನು ಕಡಿತ ಮಾಡಲೇಬೇಕಿದೆ. ಈ ಹಿನ್ನೆಲೆಯಲ್ಲಿಯೇ ಅನಿವಾರ್ಯವಾಗಿ ಮೊನ್ನೆ ಪಾಕಿಸ್ತಾನದ ಪ್ರಧಾನಿ 30 ರೂಪಾಯಿಯಷ್ಟು ಇಂಧನ ಬೆಲೆ ಏರಿಸಿದ. ಇಮ್ರಾನ್ ಬೀದಿಯಲ್ಲಿ ನಿಂತು ಗೊಳೋ ಎಂದು ಅಳುವುದೊಂದಷ್ಟೇ ಬಾಕಿ. ತೈಲ ಬೆಲೆ ಏರಿಕೆಗೆ ತಾನೇ ಮಾಡಿಕೊಂಡಿದ್ದ ಒಪ್ಪಂದಗಳು ಕಾರಣವೆನ್ನುವುದನ್ನು ಆತ ಮರೆಮಾಚಿ ಜನರ ದುಃಖದ ಲಾಭವನ್ನು ಪಡೆದುಕೊಂಡು ಸಾವಿರಾರು ಮಂದಿಯನ್ನು ಬೀದಿಗಳಲ್ಲಿ ಸೇರಿಸಿ ಅವರನ್ನು ಭಡಕಾಯಿಸುವ ಕೆಲಸ ಮಾಡುತ್ತಿದ್ದಾನೆ! ಹೀಗಾಗಿಯೇ ಪಾಕಿಸ್ತಾನದ ಈಗಿನ ಪ್ರಧಾನಿ ಆಂತರಿಕ ದಂಗೆಯ ಮಾತಾಡುತ್ತಿರೋದು. ಇಮ್ರಾನ್ ಸ್ವಾತಂತ್ರ್ಯ ನಡಿಗೆಯನ್ನು ಇಸ್ಲಾಮಾಬಾದ್ಗೆ ಕೊಂಡೊಯ್ಯುವ ಮಾತನಾಡುತ್ತಿದ್ದಾನೆ. ಹೊಸ ಸರ್ಕಾರವನ್ನು ಆತನ ಬೆಂಬಲಿಗರು ನಂಬುತ್ತಿಲ್ಲ. ಅವರು ತೆಗೆದುಕೊಂಡ ಪ್ರತಿ ನಿರ್ಣಯವನ್ನೂ ವಿರೋಧಿಸುತ್ತಾರೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಈಗಿನ ಪ್ರಧಾನಿ ಶೆಹ್ಬಾಜ್ ಷರೀಫ್ ನವಾಜ್ ಷರೀಫ್ನ ಸಹೋದರ. ಭ್ರಷ್ಟಾಚಾರದ ಪ್ರಕರಣಗಳ ಆರೋಪ ಹೊತ್ತಿರುವ ನವಾಜ್ ಈಗ ಪಾಕಿಸ್ತಾನದಲ್ಲಿಲ್ಲ, ಆದರೆ ಪಕ್ಷದ ಮೇಲೆ ಅವನ ಹಿಡಿತ ಈಗಲೂ ಬಲವಾಗಿದೆ. ಹೀಗಾಗಿಯೇ ಶೆಹ್ಬಾಜ್ ಅಧಿಕಾರದಲ್ಲಿ ಕುಳಿತಿದ್ದರೂ ಹಿಂದಿನಿಂದ ನಿಯಂತ್ರಣದಲ್ಲಿಟ್ಟುಕೊಂಡಿರೋದು ನವಾಜ್ರೇ. ಇಮ್ರಾನ್ ಖಾನನ ಮೇಲೆ ಈಗಿನ ಸರ್ಕಾರ ಭ್ರಷ್ಟಾಚಾರದ ಪ್ರಕರಣಗಳನ್ನು ದಾಖಲಿಸಿ ಒಳತಳ್ಳುವ ಯೋಜನೆಯನ್ನೇನೋ ಹಾಕಿಕೊಂಡಿದೆ. ಆದರೆ ನವಾಜ್ ಷರೀಫನ ಮೇಲಿನ ಆರೋಪಗಳಿಗೆ ಉತ್ತರ ಸಿಗುವವರೆಗೂ ಇಮ್ರಾನನನ್ನು ಮುಟ್ಟಿದರೆ ಜನ ಸಿಡಿದೇಳುವುದು ನಿಶ್ಚಿತ. ಈಗಾಗಲೇ ಇಮ್ರಾನಿನ ಬೆಂಬಲಿಗರು ಮಾಡಿರುವ ರಾದ್ಧಾಂತವನ್ನು ನಿಭಾಯಿಸುವಲ್ಲಿ ಈಗಿನ ಸಕರ್ಾರ ಸಂಪೂರ್ಣ ಸೋತುಹೋಗಿದೆ.

ಇತ್ತ ಪಾಕಿಸ್ತಾನದ ಸಾಲ ಏರುತ್ತಲೇ ಇದೆ. ಈಗಾಗಲೇ 90 ಬಿಲಿಯನ್ಗಳಷ್ಟು ಸಾಲ ಹೊಂದಿರುವ ಪಾಕಿಸ್ತಾನ ತನ್ನೆಲ್ಲ ಕನಸುಗಳನ್ನು ನುಚ್ಚುನೂರು ಮಾಡಿಕೊಂಡಿದೆ. ಪಾಕಿಸ್ತಾನದ ಜಿಡಿಪಿ 315 ಬಿಲಿಯನ್ ಡಾಲರ್ಗಳಿಂದ 292 ಬಿಲಿಯನ್ ಡಾಲರ್ಗಳಿಗೆ ಇಳಿದಿದೆ. ವಿದೇಶಿ ವಿನಿಮಯ ಉಳಿಕೆ 20 ಮಿಲಿಯನ್ ಡಾಲರ್ಗಳಷ್ಟಿದ್ದು ಇನ್ನು ಒಂದೂವರೆ ತಿಂಗಳಿಗಾಗುವಷ್ಟು ಆಮದನ್ನು ಮಾತ್ರ ಮಾಡಿಕೊಳ್ಳಬಹುದಾದ ಭಯಾನಕ ಸ್ಥಿತಿಯಲ್ಲಿ ಅವರಿದ್ದಾರೆ! ಇದನ್ನು ಗಮನಿಸಿಯೇ ತೈಲ ಉತ್ಪನ್ನಗಳಿಗಾಗಿ ವಿದೇಶಿ ಬ್ಯಾಂಕುಗಳು ಕೊಡುವ ಸಾಲದ ಗ್ಯಾರಂಟಿಯನ್ನು ರದ್ದು ಮಾಡಿಬಿಟ್ಟಿದೆ. ಪ್ರತಿರಾಷ್ಟ್ರದ ಬ್ಯಾಂಕುಗಳಿಗೂ ವಿದೇಶಿ ಬ್ಯಾಂಕುಗಳು ಸಾಲಕೊಟ್ಟು ಆಮದಿಗೆ ಅನುಕೂಲ ಮಾಡಿಕೊಡುತ್ತವೆ. ಅಕಸ್ಮಾತ್ ಆಯಾ ರಾಷ್ಟ್ರಗಳು ಹಣ ಪೂರೈಕೆ ಮಾಡುವಲ್ಲಿ ಸೋತರೆ ವಿದೇಶಿ ಬ್ಯಾಂಕುಗಳೇ ಎಲ್ಲ ಹೊಣೆಯನ್ನೂ ಹೊರಬೇಕು. ಇದನ್ನರಿತೇ ಈ ಬ್ಯಾಂಕುಗಳೆಲ್ಲ ಎಚ್ಚರಿಕೆಯ ಹೆಜ್ಜೆಯನ್ನಿರಿಸುತ್ತಿದೆ. ಸಾಲ ಮರಳಿ ಕೊಡುವ ತಾಕತ್ತು ಪಾಕಿಸ್ತಾನಕ್ಕೆ ಈಗ ಇಲ್ಲವೆಂಬುದು ಅವರಿಗೆ ಗೊತ್ತಿಲ್ಲದ ಸಂಗತಿಯೇನೂ ಅಲ್ಲ. ಅದರರ್ಥ ಇನ್ನೆರಡು ತಿಂಗಳುಗಳ ನಂತರ ಪಾಕಿಸ್ತಾನದಲ್ಲಿ ಸುರಿದುಕೊಂಡು ಸಾಯಬೇಕೆಂದರೂ ಒಂದು ಹನಿ ಪೆಟ್ರೋಲು ಸಿಗಲಾರದು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಪಾಕಿಸ್ತಾನ ವಿಷ ವರ್ತುಲದಲ್ಲಿ ಸಿಲುಕಿಕೊಂಡಿದೆ. ಆಂತರಿಕ ದಂಗೆಗಳ ಕಾರಣಕ್ಕೆ ಜಿಡಿಪಿ ಕಡಿಮೆಯಾಗುತ್ತಿದೆ, ಇದು ರಾಷ್ಟ್ರದ ಮೇಲಿನ ವಿಶ್ವಾಸವನ್ನು ಕಡಿಮೆ ಮಾಡುತ್ತಿದೆ. ಇದರಿಂದಾಗಿಯೇ ವಿದೇಶಗಳು ಸಾಲಕೊಡಲು ಮುಂದೆ ಬರುತ್ತಿಲ್ಲ. ಸಾಲವಿಲ್ಲದಿದ್ದುದರಿಂದ ಸರ್ಕಾರ ಧೈರ್ಯವಾಗಿ ಉತ್ಪಾದನೆಗೆ ಮುಂದಿಡಲಾಗುತ್ತಿಲ್ಲ. ಜಿಡಿಪಿ ಮತ್ತಷ್ಟು ಕುಸಿಯಲಿದೆ, ಸಾಲ ಮತ್ತಷ್ಟು ಹೆಚ್ಚಲಿದೆ. ಈ ವರ್ತುಲದಿಂದ ಸದ್ಯಕ್ಕೆ ಅವರು ಆಚೆಗೆ ಬರುವುದು ಕಷ್ಟವಿದೆ. ಅವರು ಮೊರೆ ಹೋಗಬೇಕಾಗಿರುವುದು ಸರ್ವಋತು ಮಿತ್ರ ಚೀನಾವನ್ನು ಮಾತ್ರ. ಆದರೆ, ಚೀನಾ ಪಾಕಿಸ್ತಾನವನ್ನು ಕ್ಯಾರೆ ಎನ್ನುತ್ತಿಲ್ಲ. ಪಾಕಿಸ್ತಾನ ತನ್ನ ಸಾಲವನ್ನು ಮರಳಿಸಬೇಕೆಂದು ಒತ್ತಡ ಹೇರುತ್ತಿದೆ ಕೂಡ. ಈ ಕಾರಣಕ್ಕಾಗಿಯೇ ಪಾಕಿಸ್ತಾನದ ಭರವಸೆಯ ಚೀನಾ ಪಾಕ್ ಎಕನಾಮಿಕ್ ಕಾರಿಡಾರ್ ಮೂಲೆಗುಂಪಾಗಿಹೋಗಿದೆ. ಪಾಕಿಸ್ತಾನ ಸುಮಾರು ಒಂದೂವರೆ ಬಿಲಿಯನ್ ಡಾಲರ್ಗಳಷ್ಟು ಹಣವನ್ನು ಚೀನೀ ಕಂಪೆನಿಗಳಿಗೆ ಕೊಡಬೇಕಾಗಿದೆ. ಹಣ ಕೊಡುವವರೆಗೆ ಪಾಕಿಸ್ತಾನಕ್ಕೆ ಸಹಕಾರ ನೀಡುವುದಿಲ್ಲ ಎಂದು ಚೀನಾ ಖಡಕ್ಕಾಗಿ ಹೇಳಿದೆ. ಅತ್ತ ಸೌದಿ ಅರೇಬಿಯಾ ಆಗಾಗ ತಾನು ಕೊಟ್ಟ ಸಾಲವನ್ನು ನೆನಪಿಸುತ್ತಾ ಮರಳಿ ಕೊಡುವಂತೆ ಒತ್ತಡ ಹೇರುತ್ತಿದೆ. ಈಗ ಐಎಮ್ಎಫ್ನಿಂದ ಸಾಲತಂದರೂ ಪಾಕಿಸ್ತಾನ ಈ ಸಾಲದ ಬಡ್ಡಿಯನ್ನು ತೀರಿಸಲು ಅದನ್ನು ಬಳಸಬಹುದೇ ವಿನಃ ಹೊಸ ಚಟುವಟಿಕೆಗಳಿಗಲ್ಲ. ಹಾಗೆಂದೇ ಅದೀಗ ಟರ್ಕಿಯತ್ತ ಮುಖಮಾಡಿ ನಿಂತಿದೆ. ಟರ್ಕಿಯೂ ಸಹಾಯ ಮಾಡಬಹುದಾದ ಬಲವಾದ ಸ್ಥಿತಿಯಲ್ಲಿದೆ ಎಂದೇನೂ ಭಾವಿಸಬೇಡಿ. ಮತ್ತು ಸಹಾಯ ಮಾಡುವ ಸಾಧ್ಯತೆ ಕಂಡುಬಂದರೆ ಭಾರತ ಅಡ್ಡಗಾಲು ಹಾಕಿ ನಿಲ್ಲುವುದು ನಿಶ್ಚಿತ. ಹೀಗಾಗಿಯೇ ಪಾಕಿಸ್ತಾನದ ಪರಿಸ್ಥಿತಿ ಬಲು ಭಯಾನಕವಾಗಿದೆ. ಇಲ್ಲಿ ಅನೇಕರು ಪಾಕಿಸ್ತಾನಕ್ಕೆ ಜಿಂದಾಬಾದ್ ಎನ್ನುತ್ತಾರಲ್ಲ, ಅವರೆಲ್ಲ ಅಲ್ಲಿಗೆ ಹೊಗಿ ಪಾಕಿಸ್ತಾನದ ಶಕ್ತಿಯನ್ನು ವೃದ್ಧಿಸುವುದೊಳಿತು ಎಂದೆನಿಸುತ್ತದೆ.

ಅತ್ತ ಚೀನಾದ ಸ್ಥಿತಿಯೂ ಚೆನ್ನಾಗೇನೂ ಇಲ್ಲ. ಕ್ರಾಂತಿಯ ನಂತರ ಹುಟ್ಟಿಕೊಂಡ ಹೊಸ ಚೀನಾದಲ್ಲಿಯೇ ಮೊದಲ ಬಾರಿಗೆ ಆರ್ಥಿಕ ವೃದ್ಧಿಯ ದರವನ್ನು 5.5ರಷ್ಟು ಕನಿಷ್ಠ ಮಟ್ಟಕ್ಕೆ ನಿಗಧಿ ಪಡಿಸಲಾಗಿದೆ. ಅಧ್ಯಕ್ಷ ಷಿ ಮತ್ತು ಪ್ರಧಾನಿ ಲಿ ಕಿಕಿಯಾಂಗ್ ನಡುವಿನ ಜಗಳಗಳು ಈಗ ಎದ್ದೆದ್ದು ಕಾಣುತ್ತಿವೆ. ತನ್ನ ಶೂನ್ಯ ಕೊವಿಡ್ ಪಾಲಿಸಿಯನ್ನು ಹೆಮ್ಮೆಯಿಂದ ಕೊಂಡಾಡುತ್ತಿದ್ದ ಷಿ ಈಗ ಅದರ ಅಡ್ಡ ಪರಿಣಾಮಗಳನ್ನು ಎದುರಿಸುತ್ತಿದ್ದಾನೆ. ಇದರ ವಿರುದ್ಧ ಯಾರೂ ಮಾತನಾಡದಂತೆ ಆತ ನಿರ್ಬಂಧ ವಿಧಿಸಿದ್ದಾನೇನೋ ನಿಜ. ಸ್ವತಃ ಪ್ರಧಾನಿ ಲಿ ಪರೋಕ್ಷವಾಗಿ ಷಿಯನ್ನು ವಿರೋಧಿಸಲಾರಂಭಿಸಿದ್ದಾನೆ. ಕಂಪೆನಿಗಳು ಗುಳೆ ಹೋಗುತ್ತಿರುವ, ಜನರು ದಂಗೆಯೇಳುವ ಸ್ಥಿತಿ ನಿರ್ಮಾಣವಾಗಿರುವಂತಹ ಈ ಹೊತ್ತಲ್ಲಿ ಚೀನಾ ಎಚ್ಚರಿಕೆಯಿಂದ ಮುಂದಡಿಯಿಡುತ್ತಿದೆ. ಉಕ್ರೇನ್-ರಷ್ಯಾ ಯುದ್ಧದಲ್ಲಿ ರಷ್ಯಾದ ಬೆಂಬಲಕ್ಕೆ ಚೀನಾ ಪೂರ್ಣವಾಗಿ ನಿಂತಿರುವುದಂತೂ ಜಗತ್ತಿನ ಜನರ ಕಣ್ಣು ಕೆಂಪಗಾಗಿಸಿದೆ. ಇದರಿಂದಾಗಿಯೇ ಈ ಬಾರಿಯ ಕ್ವಾಡ್ ಸಭೆಯಲ್ಲಿ ಭಾರತಕ್ಕೆ ಬಲ ದೊರೆತದ್ದು. ಚೀನಾ ಯಾವ ಸೈನ್ಯದ ಮೇಲೆ ನಂಬಿಕೆ ಇರಿಸಿಕೊಂಡಿತ್ತೋ ಅದು ಕೂಡ ಕಾಗದದ ಹುಲಿ ಎಂದೇ ಜಗತ್ತು ಮಾತನಾಡಿಕೊಳ್ಳುವುದುನ್ನು ನೋಡಿದರೆ ಚೀನಾಕ್ಕೂ ಬಲವಾದ ಸಮಸ್ಯೆ ಇದೆ! 

ಶ್ರೀಲಂಕಾದ ಬಗ್ಗೆ ಮಾತನಾಡದಿರುವುದೇ ಒಳಿತು. ಚೀನಾದಿಂದ ಸಾಲ ತೆಗೆದುಕೊಂಡವರ ಕಥೆ ಏನಾಗುತ್ತದೆ ಎಂಬುದಕ್ಕೆ ಶ್ರೀಲಂಕಾಕ್ಕಿಂತ ಬಲವಾದ ಉದಾಹರಣೆ ಯಾರೂ ಬೇಕಾಗಿಲ್ಲ. ಶ್ರೀಲಂಕಾ ಉರಿದು ಹೋಗುವ ಹಂತದಲ್ಲಿದೆ. ಸಹಾಯ ಎಲ್ಲಿಂದ ಬರಬಹುದೆಂದು ಕಾತರದ ಕಂಗಳಿಂದ ಕಾಯುತ್ತಿದೆ. ಆದರೆ ಇಡಿಯ ಜಗತ್ತು ತೊಂದರೆಗೆ ಸಿಲುಕಿರುವಾಗ ಶ್ರೀಲಂಕಾದ ಉದ್ಧಾರಕ್ಕೆ ಸದ್ಯದಮಟಿಗೆ ಯಾರೂ ಬರಲಾರರು! ನೇಪಾಳವಾಗಲೀ ಮಯನ್ಮಾರ್ ಆಗಲಿ, ಮಲೇಷಿಯಾವಾಗಲಿ ಇಂಡೋನೇಷ್ಯಾವೇ ಆಗಲಿ, ಅತ್ತ ಅಮೇರಿಕಾ-ಯುರೋಪುಗಳೂ ಕೂಡ ಕರೋನ ನಂತರದ ಆರ್ಥಿಕ ದುಃಸ್ಥಿತಿಯತ್ತ ಹಂತ-ಹಂತವಾಗಿ ಹೆಜ್ಜೆ ಇಡುತ್ತಿವೆ. ಸ್ವಲ್ಪಮಟ್ಟಿಗೆ ಈ ಎಲ್ಲ ಹೊಡೆತಗಳಿಂದಲೂ ಪಾರಾಗಿರುವುದು ನಾವು ಮಾತ್ರ. 

ನರೇಂದ್ರಮೋದಿ ಹಿಂದೆಂದಿಗಿಂತಲೂ ಹೆಚ್ಚು ಬಲಶಾಲಿಯಾಗಿದ್ದಾರೆ. ಜಗತ್ತಿನ ವೇದಿಕೆಯ ಮುಖ್ಯ ಭೂಮಿಕೆಯಲ್ಲಿ ಅವರನ್ನೀಗ ಎಲ್ಲರೂ ಗುರುತಿಸುತ್ತಿದ್ದಾರೆ. ರಷ್ಯಾ-ಉಕ್ರೇನುಗಳ ಯುದ್ಧವಿರಲಿ, ಶ್ರೀಲಂಕಾದ ಸಮಸ್ಯೆಯೇ ಇರಲಿ, ಜಾಗತಿಕ ವ್ಯಾಪಾರ-ವಹಿವಾಟುಗಳೇ ಇರಲಿ, ಅಥವಾ ಭಯೋತ್ಪಾದನೆ, ಪರಿಸರದ ವಿಚಾರಗಳೇ ಇರಲಿ ಮೋದಿಯ ಮಾತಿಗೆ ಜಗತ್ತು ತಲೆದೂಗುತ್ತಿದೆ. ನಾವು ನಿಜಕ್ಕೂ ಸಮರ್ಥ ಕೈಗಳಲ್ಲಿದ್ದೇವೆ. ಕರೋನಾ ನಮ್ಮನ್ನು ವಿಪರೀತವಾಗಿ ಬಾಧಿಸಲಿಲ್ಲ. ಕರೋನಾ ನಂತರ ಆರ್ಥಿಕ ಮುಗ್ಗಟ್ಟು ನಮ್ಮನ್ನು ಬಾಧಿಸಲಿಲ್ಲ, ಪಕ್ಕದ ಪಾಕಿಸ್ತಾನ ಪೆಟ್ರೋಲಿಗೆ 30 ರೂಪಾಯಿ ಹೆಚ್ಚು ಮಾಡಿದರೆ, ಭಾರತದಲ್ಲಿ 9 ರೂಪಾಯಿ ಕಡಿತಗೊಳಿಸಲಾಗಿತ್ತು. ಹಣದುಬ್ಬರವನ್ನು ಹಿಡಿತಕ್ಕೆ ತಂದುಕೊಳ್ಳಲು ಬಗೆಬಗೆಯ ಸಾಹಸ ಮಾಡುತ್ತಿದೆ ಭಾರತ. ಭಾರತೀಯರಿಗೆ ಕಷ್ಟಕಾಲದಲ್ಲಿ ತೊಂದರೆಯಾಗಬಾರದೆಂದು ಗೋಧಿ ಮತ್ತು ಸಕ್ಕರೆಯ ಮೇಲೆ ರಫ್ತು ನಿಷೇಧ ಹೇರಲಾಗಿದೆ. ಎಲ್ಲವೂ ಒಂದು ಹಂತಕ್ಕೆ ಬಂದು ನಿಲ್ಲುವಾಗ ಭಾರತ ಜಗತ್ತಿನ ಭೂಪಟದಲ್ಲಿ ಉಜ್ವಲವಾಗಿ ಬೆಳಗುತ್ತಿರುತ್ತದೆ. ಈ ವಿಶ್ವಾಸ ಪ್ರತಿ ಭಾರತೀಯನಿಗೂ ಇದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s