ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ನಿಜಕ್ಕೂ ಆತಂಕಕಾರಿ. ಡೊನಾಲ್ಡ್ ಟ್ರಂಪ್ ಅಫ್ಘಾನಿಸ್ತಾನದಲ್ಲಿರುವ ಅಮೇರಿಕಾದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಮಾತನಾಡಿದಾಗಲೇ ಆತಂಕದ ಗೆರೆಗಳು ಮೂಡಿದ್ದವಾದರೂ ಟ್ರಂಪ್ ತಾಲಿಬಾನಿಗೆ ಹಾಕಿದ ನಿಯಮಗಳು ಸ್ವಲ್ಪ ಸಮಾಧಾನ ಕೊಡುವಂತಿದ್ದವು. ಆದರೀಗ ಹಾಗಿಲ್ಲ. ಹೊಸ ಅಧ್ಯಕ್ಷ ಬೈಡನ್ ಮುಲಾಜಿಲ್ಲದೇ ಅಮೇರಿಕಾ ಮತ್ತು ನ್ಯಾಟೊದ ಸೇನೆಯನ್ನು ಮರಳಿ ಕರೆಸಿಕೊಂಡಿದ್ದಾನೆ. ಸಪ್ಟೆಂಬರ್ 11ರ ವೇಳೆಗೆ ಅಮೇರಿಕಾದ ಸೇನೆಯನ್ನು ಸಂಪೂರ್ಣ ಹಿಂದಕ್ಕೆ ಕರೆಸಿಕೊಳ್ಳಲಾಗುವುದು ಎಂಬ ಅವನ ಹೇಳಿಕೆಯಿಂದ ಅನೇಕ ರಾಷ್ಟ್ರಗಳು ಕಂಗಾಲಾಗಿವೆ. ಭಾರತವೂ ಕೂಡ ಇದಕ್ಕೆ ಹೊರತಲ್ಲ!

ಅಮೇರಿಕಾದ ವಲ್ಡರ್್ ಟ್ರೇಡ್ ಸೆಂಟರ್ನ ಕಟ್ಟಡದ ಮೇಲೆ ಸಪ್ಟೆಂಬರ್ 2001ರಲ್ಲಿ ದಾಳಿಯಾದ ನಂತರ ಅಮೇರಿಕಾ ಅಫ್ಘಾನಿಸ್ತಾನವನ್ನು ನಿಯಂತ್ರಿಸುವ ನಿಶ್ಚಯ ಮಾಡಿತ್ತು. ಇವೆಲ್ಲವೂ ನೆಪವಷ್ಟೆ. ವಾಸ್ತವವಾಗಿ ಮಧ್ಯಪ್ರಾಚ್ಯ ಏಷ್ಯಾದ ಮೇಲೆ ತನ್ನ ಬಲವನ್ನು ಅಧಿಕೃತವಾಗಿ ಸ್ಥಾಪಿಸುವ ಬಯಕೆ ಅದಕ್ಕಿತ್ತು. ಹೀಗಾಗಿಯೇ ಎಲ್ಲ ನೆಪಗಳನ್ನು ಮುಂದೆಮಾಡಿ ಅಫ್ಘಾನಿಸ್ತಾನಕ್ಕೆ ಸೇನೆ ಕಳಿಸಲಾಯ್ತು. ಕಳೆದ ಸುಮಾರು 20 ವರ್ಷಗಳಲ್ಲಿ ಅಮೇರಿಕಾ ಈ ಸೇನೆಯನ್ನು ನಿರ್ವಹಿಸಲು ಮತ್ತು ಅಫ್ಘಾನಿಸ್ತಾನದ ಬೆಳವಣಿಗೆಯ ನೆಪವನ್ನು ಮುಂದೆ ಮಾಡಿ 144 ಬಿಲಿಯನ್ ಡಾಲರ್ಗಳನ್ನು ವ್ಯಯಿಸಿದೆ. ಸುಮಾರು ಎರಡೂವರೆ ಸಾವಿರದಷ್ಟು ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. 22 ಸಾವಿರಕ್ಕೂ ಹೆಚ್ಚು ಸೈನಿಕರು ಏಟು ತಿಂದು ದೇಶಕ್ಕೆ ಮರಳಿದ್ದಾರೆ. ಆದರೆ ಇವಿಷ್ಟರೊಂದಿಗೆ ಏಷ್ಯಾದ ಬಹುಭಾಗದ ಮೇಲೆ ಅಮೇರಿಕಾ ಎರಡು ದಶಕಗಳಿಂದ ನಿವರ್ಿವಾದಿತವಾದ ಸಾರ್ವಭೌಮತ್ವವನ್ನು ಅನುಭವಿಸುತ್ತಾ ಬಂದಿದೆ. ತಾಲಿಬಾನಿಗಳನ್ನು ಮಟ್ಟಹಾಕುವ ನೆಪದಿಂದ ತನ್ನ ಆಶಯವನ್ನು ಈಡೇರಿಸಿಕೊಂಡ ಅಮೇರಿಕಾ ಒಂದು ಕಾಲದಲ್ಲಿ ಇದೇ ತಾಲಿಬಾನಿಗಳ ಬೆನ್ನಹಿಂದೆ ನಿಂತಿತ್ತು ಎಂಬುದನ್ನೂ ಮರೆಯುವಂತಿಲ್ಲ. ತನ್ನ ಶತ್ರುಗಳನ್ನು ಮಟ್ಟಹಾಕಲು ಹೊಸಬರನ್ನು ಹುಟ್ಟುಹಾಕಿ, ಕೊನೆಗೆ ಆತನನ್ನೂ ಮಟ್ಟಹಾಕುವ ಅಮೇರಿಕಾದ ಈ ಚಾಳಿ ಹೊಸತೇನೂ ಅಲ್ಲ. ಆದರೆ ಟ್ರಂಪ್ ಅಮೇರಿಕಾಕ್ಕಾಗುತ್ತಿರುವ ನಷ್ಟವನ್ನು ತಡೆಯಬೇಕೆಂದು ನಿಶ್ಚಯಿಸಿ ಸೈನ್ಯವನ್ನು ಹಿಂದಕ್ಕೆ ಕರೆದುಕೊಳ್ಳುವ ಆಲೋಚನೆಗೆ ಜೀವ ತುಂಬಿದ. ಈ ಹಿಂದೆ ಬರಾಕ್ ಒಬಾಮಾ ಕೂಡ ಇದೇ ರೀತಿ ಆಲೋಚಿಸಿದ್ದನಾದರೂ ಮುಂದಡಿಯಿಟ್ಟಿರಲಿಲ್ಲ. ಟ್ರಂಪ್, ಯಾವ ತಾಲಿಬಾನಿಗಳ ವಿರುದ್ಧ ಅಮೇರಿಕಾದ ಹೋರಾಟ ನಡೆದಿತ್ತೋ 2020ರ ಫೆಬ್ರವರಿಯಲ್ಲಿ ಅದೇ ತಾಲಿಬಾನಿಗಳನ್ನು ಮಾತುಕತೆಗೆ ಆಹ್ವಾನಿಸಿ ಒಪ್ಪಂದ ಮಾಡಿಕೊಂಡುಬಿಟ್ಟ. ಈ ಒಪ್ಪಂದದಲ್ಲಿ ಅಮೇರಿಕಾದ ಸ್ನೇಹಿತರ ವಿರುದ್ಧ ಭಯೋತ್ಪಾದನೆ ನಡೆಸಲು ಅಫ್ಘಾನಿಸ್ತಾನ ತನ್ನ ನೆಲ ಬಿಟ್ಟು ಕೊಡಬಾರದೆಂಬ ನಿಯಮ ಹಾಕಲು ಮರೆಯಲಿಲ್ಲ. ತಾಲಿಬಾನ್ ಒಪ್ಪಿಕೊಂಡಿತು. ಅಚ್ಚರಿ ಎಂದರೆ ಮಾತು ಪಡೆದವನಿಗೂ ಮಾತು ಕೊಟ್ಟವನಿಗೂ ಇದನ್ನು ಉಳಿಸಿಕೊಳ್ಳುವ ಭರವಸೆ ಇರಲಿಲ್ಲ. ಆದರೆ ಟ್ರಂಪ್ನ ಪ್ರಭಾವದಿಂದಾಗಿ ಅದೇ ವರ್ಷದ ಸಪ್ಟೆಂಬರ್ ತಿಂಗಳಲ್ಲಿ ಅಫ್ಘನ್ ಸಕರ್ಾರ ಮತ್ತು ತಾಲಿಬಾನಿಗಳ ಪ್ರಮುಖ ನಾಯಕರು ಕತಾರ್ನ ದೋಹಾದಲ್ಲಿ ಭೇಟಿಯಾಗಿ ‘ಇಂಟ್ರಾ ಅಫ್ಘನ್’ ಮಾತುಕತೆ ನಡೆಸಲಾಯ್ತು. ಈ ಸಂದರ್ಭದಲ್ಲಿ ತಾಲಿಬಾನಿ ನಾಯಕ ಮುಲ್ಲಾ ಅಬ್ದುಲ್ಗನಿ ಬರಾದಾರ್ ಮಾತನಾಡಿ ‘ಸ್ವತಂತ್ರ, ಸಾರ್ವಭೌಮ, ಸಂಘಟಿತ, ಅಭಿವೃದ್ಧಿ ಹೊಂದಿದ ಮತ್ತು ಇಸ್ಲಾಮಿನ ವ್ಯವಸ್ಥೆಗಳ ಅಡಿಯಲ್ಲಿರುವ ಮುಕ್ತ ಅಫ್ಘಾನಿಸ್ತಾನ ನಮಗೆ ಬೇಕು’ ಎಂದಿದ್ದ. ಇಲ್ಲಿ ಬೇರೆಲ್ಲವೂ ಒಪ್ಪಿಕೊಳ್ಳಬೇಕಾದ್ದೇ. ಆದರೆ ಇಸ್ಲಾಮಿನ ವ್ಯವಸ್ಥೆ ಎಂಬುದರ ವ್ಯಾಖ್ಯೆಯನ್ನು ಅರಿತುಕೊಳ್ಳುವುದು ಕಷ್ಟ ಅಷ್ಟೆ. ಯಾರು ಏನೇ ಹೇಳಿದರೂ ಅಮೇರಿಕನ್ ಸೇನೆ ಅಫ್ಘಾನಿಸ್ತಾನಕ್ಕೆ ಕಾಲಿಟ್ಟ ನಂತರ ಅಲ್ಲಿ ಚುನಾವಣೆ ನಡೆದು ಪ್ರಜಾಪ್ರಭುತ್ವ ಮಾದರಿಯ ಸಕರ್ಾರ ಅಧಿಕಾರಕ್ಕೆ ಬಂದಿತ್ತು. ಹೆಣ್ಣುಮಕ್ಕಳು ಶಾಲೆಗೆ ಹೋಗಲಾರಂಭಿಸಿದ್ದರು. ಅವರ ಬದುಕು ಮುಕ್ತವಾದ ವಾತಾವರಣದಲ್ಲಿ ಚೆನ್ನಾಗಿಯೇ ನಡೆದಿತ್ತು. ಒಂದು ರೀತಿ ಎರಡು ದಶಕಗಳ ಕಾಲ ಅಫ್ಘನ್ನಿನ ಸಾಮಾನ್ಯ ಜನ ಉಸಿರಾಡುತ್ತಿದ್ದರು. ಈ ಸಂದರ್ಭದಲ್ಲಿಯೇ ಭಾರತವೂ ಈ ಪ್ರದೇಶದ ಬೆಳವಣಿಗೆಗೆ ತನ್ನ ಸಹಕಾರ ಹಸ್ತವನ್ನು ಚಾಚಿತು. ಅಣೆಕಟ್ಟುಗಳ ನಿಮರ್ಾಣ ಮಾಡಿಕೊಟ್ಟು ನೀರಾವರಿ ವ್ಯವಸ್ಥೆಯತ್ತ ಗಮನಹರಿಸಿ, ಕೃಷಿ ಚಟುವಟಿಕೆಯನ್ನು ಚುರುಕುಗೊಳಿಸುವಲ್ಲಿ ಭಾರತದ ಪಾತ್ರ ಬಲುದೊಡ್ಡದ್ದು. ಶಿಕ್ಷಣ ಕ್ಷೇತ್ರದಲ್ಲಿ ಸಹಕಾರಿಯಾಗಿ ನಿಂತ ಭಾರತ ಕಟ್ಟಿಕೊಟ್ಟ ಗ್ರಂಥಾಲಯಗಳ ಕುರಿತಂತೆ ಈಗಲೂ ಅಲ್ಲಿಯ ಜನ ಗೌರವದ ಮಾತುಗಳನ್ನಾಡುತ್ತಾರೆ. ಅಣೆಕಟ್ಟಿನ ಉದ್ಘಾಟನೆಗೆ ನರೇಂದ್ರಮೋದಿ ಅಫ್ಘಾನಿಸ್ತಾನಕ್ಕೆ ಹೋಗಿದ್ದಾಗ ಅಲ್ಲಿನ ಜನ ತಿರಂಗಾ ಹಿಡಿದು ಗೌರವದಿಂದ ಸ್ವಾಗತಿಸಿದ್ದನ್ನು ಮರೆಯುವಂತಿಲ್ಲ. ನಮ್ಮ ಬಾಂಧವ್ಯ ಎಷ್ಟು ಬಲವಾಗಿತ್ತೆಂದರೆ ಕೊವಿಡ್ ಲಸಿಕೆಗಳನ್ನು ಭಾರತ ಮೊತ್ತಮೊದಲು ಕಳಿಸಿದ್ದು ಅಫ್ಘಾನಿಸ್ತಾನಕ್ಕೇ. ಇವಿಷ್ಟನ್ನೂ ಈಗ ಸ್ಮರಿಸಿಕೊಳ್ಳುತ್ತಿರುವುದೇಕೆಂದರೆ ಅಲ್ಲಿನ ಜನರ ಜೀವನ ಉನ್ನತ ಸ್ತರಕ್ಕೇರಲಾರಂಭಿಸಿತ್ತು. ತಾಲಿಬಾನಿಗಳ ಕಟ್ಟರ್ ಇಸ್ಲಾಮೀಯತೆಯ ಕಪಿಮುಷ್ಟಿಯಿಂದ ಹೊರಬಂದಿದ್ದ ಈ ಜನ ಈಗ ತಮ್ಮ ಬದುಕಿನ ಆನಂದವನ್ನು ಗುರುತಿಸಿಕೊಳ್ಳಲಾರಂಭಿಸಿದ್ದರು. ಟ್ರಂಪ್ ತನ್ನ ಸೇನೆಯನ್ನು ಮರಳಿ ಕರೆಸಿಕೊಳ್ಳುವ ಮಾತುಗಳನ್ನಾಡುತ್ತಿರುವಂತೆಯೇ ಅಫ್ಘಾನಿಸ್ತಾನಿಯರ ಕನಸುಗಳು ಚೂರುಚೂರಾಗಿಬಿಟ್ಟವು. ತಾಲಿಬಾನಿಯರ ದುಷ್ಟ ಆಡಳಿತದ ಕರಾಳ ಛಾಯೆ ಮತ್ತೊಮ್ಮೆ ವ್ಯಾಪಿಸಿಕೊಂಡಿತು!
ಟ್ರಂಪ್ ಅಧಿಕಾರ ಕಳೆದುಕೊಳ್ಳುವುದರೊಂದಿಗೆ ಈ ವಿಚಾರ ಮೂಲೆಗುಂಪಾಯ್ತು ಎಂದುಕೊಂಡರೆ ಬೈಡನ್ ಟ್ರಂಪ್ಗಿಂತ ವೇಗವಾಗಿ ಅಮೇರಿಕನ್ ಸೇನೆಯನ್ನು ಮರಳಿ ಕರೆಸಿಕೊಳ್ಳುವ ಚಟುವಟಿಕೆ ಆರಂಭಿಸಿಬಿಟ್ಟ. ಈಗ ಈ ಪ್ರಕ್ರಿಯೆಯಿಂದ ಎದ್ದೆದ್ದು ಕುಣಿಯುತ್ತಿರುವ ರಾಷ್ಟ್ರಗಳು ಎರಡೇ. ಒಂದು ಪಾಕಿಸ್ತಾನ ಮತ್ತೊಂದು ಚೀನಾ. ಇಬ್ಬರ ಉದ್ದೇಶವೂ ಬಲು ಸರಳ. ದುರ್ಬಲವಾದ ಭಯೋತ್ಪಾದನೆಗೆ ಸೂಕ್ತವಾದ, ತಮ್ಮ ಮಜರ್ಿಯಲ್ಲೇ ಬಿದ್ದಿರುವ ಅಫ್ಘಾನಿಸ್ತಾನ ಭಾರತಕ್ಕೆ ತೊಂದರೆಯುಂಟುಮಾಡಬಲ್ಲದು. ಇದು ಭಾರತದ ಕನಸುಗಳನ್ನು, ಆಕಾಂಕ್ಷೆಗಳನ್ನು ಸರ್ವನಾಶ ಮಾಡಿಬಿಡಬಲ್ಲದೆಂಬುದು ಇವರಿಗೆ ಚೆನ್ನಾಗಿ ಗೊತ್ತಿದೆ. ಅದಕ್ಕೆ ಅವರಿಬ್ಬರ ಆನಂದಕ್ಕೆ ಪಾರವೇ ಇಲ್ಲ. ಸೇನೆಯನ್ನು ಮರಳಿ ಕರೆಸಿಕೊಳ್ಳುವ ಮುನ್ನ ಟ್ರಂಪ್ ವಿಧಿಸಿದ್ದ ಶರತ್ತನ್ನು ಬೈಡನ್ ಮುಂದಿಟ್ಟಿಲ್ಲ. ಅದರರ್ಥ ಭಾರತ ವಿರೋಧಿಯಾದ ಯಾವ ಚಟುವಟಿಕೆಗಾದರೂ ತನ್ನ ನೆಲವನ್ನು ಅಫ್ಘಾನಿಸ್ತಾನ ಬಳಸಿಕೊಳ್ಳಬಹುದು ಎಂಬುದೇ ಆಗಿದ್ದರೆ ಅದು ಮದಿರೆ ಕುಡಿದ ಹುಚ್ಚು ಮಂಗನಿಗೆ ಚೇಳು ಕಡಿದಂತೆಯೇ ಸರಿ.
ಪಾಕಿಸ್ತಾನ ಮತ್ತು ತಾಲಿಬಾನಿಗಳ ನಂಟು ಹೊಸತೇನು ಅಲ್ಲ. ಅಲ್ಲಿನ ಹಕ್ಕಾನಿ ಗುಂಪು ತಾಲಿಬಾನಿಗಳ ಮೇಲೆ ಸಾಕಷ್ಟು ಪ್ರಭಾವ ಹೊಂದಿದೆ. ಡೊನಾಲ್ಡ್ ಟ್ರಂಪ್ ತಾಲಿಬಾನಿಗಳ ಜೊತೆಗೆ ಮಾತುಕತೆ ನಡೆಸಬೇಕೆಂಬ ಪ್ರಯತ್ನ ಆರಂಭಿಸಿದಾಗ ಆತ ಮೊದಲು ಮಾತನಾಡಬೇಕಾದ ಅನಿವಾರ್ಯತೆ ಒದಗಿದ್ದು ಪಾಕಿಸ್ತಾನಿಯರೊಂದಿಗೆ ಎಂಬುದೇ ಅವರೀರ್ವರ ಸಂಬಂಧದ ವ್ಯಾಪ್ತಿಯನ್ನು ತಿಳಿಸಬಲ್ಲದು. ಭಾರತ ತನ್ನ ವ್ಯಾಪ್ತಿಯನ್ನು ಅಫ್ಘಾನಿಸ್ತಾನದಲ್ಲಿ ಇಂಚಿಂಚು ಹೆಚ್ಚಿಸಿಕೊಳ್ಳುತ್ತಿರುವಂತೆ ಪಾಕಿಸ್ತಾನದ ಎದೆ ಢವಗುಟ್ಟಲಾರಂಭಿಸಿತ್ತು. ಚೀನಾ ಶ್ರೀಲಂಕಾದಲ್ಲಿ ಬಂದರು ಅಭಿವೃದ್ಧಿಗೊಳಿಸಿ ತನ್ನ ನೌಕೆಯನ್ನು ನಿಲ್ಲಿಸುತ್ತದೆ ಎಂಬ ವಿಚಾರ ನಮಗೆಷ್ಟು ಗಾಬರಿ ಹುಟ್ಟಿಸುವಂಥದ್ದೋ, ಅಫ್ಘಾನಿಸ್ತಾನದೊಂದಿಗಿನ ನಮ್ಮ ಸ್ನೇಹ ಸಂಬಂಧ ಪಾಕಿಸ್ತಾನಕ್ಕೂ ಅಷ್ಟೇ ಗಾಬರಿ ಹುಟ್ಟಿಸುವಂಥದ್ದು. ಭಾರತ ಪಾಕಿಸ್ತಾನವನ್ನು ಸೈನ್ಯದ ಮೂಲಕ ಸುತ್ತುವರೆಯುವ ಕ್ರಮ ಇದು ಎಂದು ಅದು ಭಾವಿಸುತ್ತದೆ. ಆದರೆ ಭಾರತ ಎಂದಿಗೂ ಅಫ್ಘಾನಿಸ್ತಾನವನ್ನು ಈ ದಿಕ್ಕಿನಲ್ಲಿ ಬಳಸಿಕೊಳ್ಳುವ ಪ್ರಯತ್ನ ಮಾಡಲೇ ಇಲ್ಲ. ಈಗ ಅಮೇರಿಕಾದ ಸೇನೆ ಕಾಲ್ಕೀಳುತ್ತಿರುವಂತೆ ಪಾಕಿಸ್ತಾನಕ್ಕೆ ಆನೆಬಲ ಬಂದಂತಾಗಿದೆ. ಅವರೆಷ್ಟು ದುಷ್ಟರೆಂದರೆ ಇತ್ತೀಚೆಗೆ ಪಾಕಿಸ್ತಾನೀಯನೊಬ್ಬ ಅಫ್ಘಾನಿಸ್ತಾನದಲ್ಲಿ ಭಾರತ ಕಟ್ಟುಕೊಟ್ಟಿರುವ ಅಣೆಕಟ್ಟನ್ನು ಹೊಡೆದುರುಳಿಸಲು ಪ್ರಯತ್ನಪಟ್ಟು ಸಿಕ್ಕುಬಿದ್ದಿದ್ದ. ಎಷ್ಟು ವಿಚಿತ್ರ ನೋಡಿ, ಮುಸಲ್ಮಾನರೇ ಇರುವ ರಾಷ್ಟ್ರವೊಂದಕ್ಕೆ ಹಿಂದುಗಳ ರಾಷ್ಟ್ರವೊಂದು ನೀರು ಕೊಟ್ಟರೆ, ಮತ್ತೊಂದು ಮುಸ್ಲೀಂ ರಾಷ್ಟ್ರ ಅದನ್ನು ಕಸಿಯುವ ಧಾವಂತದಲ್ಲಿದೆ. ಅಲ್ಲಾಹ್ ಯಾರನ್ನು ಮೆಚ್ಚುತ್ತಾನೆಂಬುದು ಈಗ ಬಲುದೊಡ್ಡ ಪ್ರಶ್ನೆ! ಅಮೇರಿಕಾದ ಸೇನೆ ಮರಳುವ ಪ್ರಕ್ರಿಯೆ ಆರಂಭವಾಗುವುದರೊಂದಿಗೆ ಪಾಕಿಸ್ತಾನದ ಶಕ್ತಿ ಅಫ್ಘಾನಿಸ್ತಾನದಲ್ಲಿ ಹೆಚ್ಚುತ್ತಲೇ ಸಾಗಿದೆ. ಕನಿಷ್ಠಪಕ್ಷ 10 ಸಾವಿರ ಜನ ಪಾಕೀ ಸೈನಿಕರು ಅಲ್ಲೀಗ ತಾಲಿಬಾನಿಗಳ ಪರವಾಗಿ ದುಡಿಯುತ್ತಿದ್ದಾರೆ. ತನ್ನ ಗಡಿಗೆ ಹೊಂದಿಕೊಂಡಂತೆ ತಾಲಿಬಾನಿಗಳು ಅಡಗಿರುವ ಸ್ಥಳದಲ್ಲಿ ಅಫ್ಘಾನಿಸ್ತಾನ ವಾಯುದಾಳಿ ನಡೆಸಿದ್ದೇ ಆದರೆ ಅಫ್ಘನ್ ಸೇನೆಯ ವಿರುದ್ಧ ಪಾಕಿಸ್ತಾನ ದಾಳಿ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡಿದೆ. ಇತ್ತೀಚೆಗೆ ಲಾಂಗ್ವಾರ್ ಜರ್ನಲ್ನ ಡಿಫೆನ್ಸ್ ಆಫ್ ಡೆಮಾಕ್ರಸೀಸ್ ನಡೆಸಿದ ಸಂಶೋಧನೆಯ ಪ್ರಕಾರ ಅಫ್ಘಾನಿಸ್ತಾನದ 325 ಜಿಲ್ಲೆಗಳಲ್ಲಿ ತಾಲಿಬಾನಿಗಳ ಹಿಡಿತ 76ರಲ್ಲಿದ್ದರೆ ಅಫ್ಘನ್ ಸಕರ್ಾರದ ತಾಕತ್ತು 127ರಲ್ಲಿದೆ. ಉಳಿದ 122 ಜಿಲ್ಲೆಗಳಲ್ಲಿ ಸಮಬಲವೆನಿಸಿದರೂ ಪಾಕಿಸ್ತಾನಿಗಳ ಸಹಕಾರ ಪಡೆದುಕೊಂಡ ತಾಲಿಬಾನಿಗಳು ಈ ಭಾಗದ ಮೇಲೆ ಹಿಡಿತವನ್ನು ಸಾಧಿಸುವುದು ಅಸಾಧ್ಯವಲ್ಲ. ಇವರನ್ನು ಹಿಡಿತದಲ್ಲಿಟ್ಟುಕೊಳ್ಳಲು ಇರುವ ಅಫ್ಘಾನಿಸ್ತಾನ್ ನ್ಯಾಷನಲ್ ಡಿಫೆನ್ಸ್ ಅಂಡ್ ಸೆಕ್ಯುರಿಟಿ ಫೋರ್ಸಸ್ ಕೆಲವು ಲಕ್ಷ ಸೈನಿಕರನ್ನು ಹೊಂದಿರುವುದಾದರೂ ಸೈನ್ಯ ನಿರ್ವಹಣೆಗೆ ಮತ್ತೆ ಅಮೇರಿಕಾದಿಂದಲೇ ಹಣ ಬರಬೇಕು. ಇದಕ್ಕೆ ಪ್ರತಿಯಾಗಿ ಮತೀಯ ಆವೇಶದಿಂದ ಹುಚ್ಚಾಗಿರುವ ತಾಲಿಬಾನಿಗಳಿಗೆ ಚೀನಾದಂತಹ ರಾಷ್ಟ್ರಗಳು ಸಾಕಷ್ಟು ಹಣ ಸುರಿಯುತ್ತಿವೆ. ಸಹಜವಾಗಿಯೇ ಈ ಆವೇಶದಿಂದ ನುಗ್ಗುತ್ತಿರುವ ಈ ಮಂದಿ ಇಡಿಯ ಅಫ್ಘಾನಿಸ್ತಾನವನ್ನು ತೆಕ್ಕೆಗೆ ತೆಗೆದುಕೊಂಡುಬಿಡುತ್ತಾರೆ. ಮುಂದೆ ಲಷ್ಕರ್-ಎ-ತೈಯ್ಬಾ, ಜೈಶ್-ಎ-ಮೊಹಮ್ಮದ್ನಂತಹ ಉಗ್ರಗಾಮಿ ಸಂಘಟನೆಗಳಿಗೆ ಇದು ನಿಸ್ಸಂಶಯವಾಗಿ ಶಕ್ತಿ ಮತ್ತು ಪ್ರೇರಣೆಯಾಗಲಿದೆ. ನಾವು ಅದರ ಫಲವನ್ನು ಉಣ್ಣಬೇಕಾಗುವುದು ನಿಶ್ಚಿತ. ಹೀಗಾಗಿಯೇ ಭಾರತ ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿದೆ. ಕಳೆದ ತಿಂಗಳು ಭಾರತ ತಾಲಿಬಾನಿನ ಪ್ರಮುಖರೊಂದಿಗೆ ಮಾತುಕತೆ ಆರಂಭಿಸಿ ತನಗೆ ಬೇಕಾದ್ದನ್ನು ಪಡೆದುಕೊಳ್ಳುವ ಆಲೋಚನೆಯನ್ನು ಮಾಡಿಬಿಟ್ಟಿದೆ. ತಾಲಿಬಾನಿ ಮುಖಂಡರು ಹಿಂದೆಂದಿಗಿಂತಲೂ ಎಚ್ಚರಿಕೆಯಿಂದ ಈಗ ವ್ಯವಹರಿಸುತ್ತಿದ್ದಾರೆ. ಇತ್ತ ಕಾಶ್ಮೀರದ 370ನೇ ವಿಧಿ ರದ್ದುಗೊಳಿಸಿದ ಪ್ರಕ್ರಿಯೆಯನ್ನು ಭಾರತದ ಆಂತರಿಕ ವಿಚಾರವೆಂದಿದ್ದಾರಲ್ಲದೇ ಉಯ್ಘುರ್ ಮುಸಲ್ಮಾನರ ತಗಾದೆಯನ್ನು ಚೀನಾದ ಆಂತರಿಕ ವಿಚಾರ ಎಂದು ಕರೆದಿದ್ದಾರೆ. ಇದು ಈ ಹೊತ್ತಿನಲ್ಲಿ ಅಫ್ಘಾನಿಸ್ತಾನಿ ಸಕರ್ಾರಕ್ಕೆ ಸಿಗಬಹುದಾದ ನಮ್ಮ ಸಹಕಾರವನ್ನು ತಡೆಯುವ ಉಪಾಯವಿದ್ದರೂ ಇರಬಹುದು. ಇದರ ಹಿಂದು-ಹಿಂದೆಯೇ ಅಫ್ಘನ್ ಸಕರ್ಾರದ ಮಂತ್ರಿಯೊಬ್ಬರು ತಾಲಿಬಾನಿಗಳನ್ನೆದುರಿಸುವಲ್ಲಿ ಭಾರತದ ಸಹಕಾರವನ್ನು ಕೋರಿರುವುದಲ್ಲದೇ ಭಾರತಕ್ಕೆ ಬಂದು ಈ ಕುರಿತಂತೆ ಮಾತುಕತೆ ನಡೆಸುವ ಉತ್ಸುಕತೆಯಲ್ಲೂ ಇದ್ದಾರೆ. ನಮ್ಮ ವಿದೇಶಾಂಗ ನೀತಿಗೆ ಈಗಿನದ್ದು ಬಲುದೊಡ್ಡ ಸವಾಲು. ಅಲ್ಲಿನ ಸಕರ್ಾರಕ್ಕೆ ಸಹಕಾರ ಮಾಡಿದರೆ ಭವಿಷ್ಯದುದ್ದಕ್ಕೂ ಭಯೋತ್ಪಾದನೆಯ ಭೀತಿ. ಸಹಕರಿಸದಿದ್ದರೆ ನ್ಯಾಯದ ಪರವಾಗಿ ನಿಂತಿಲ್ಲವೆಂಬ ಕೊರಗು. ಬಲು ಎಚ್ಚರಿಕೆಯಿಂದ ಹೆಜ್ಜೆಯಿಡುತ್ತಿರುವ ಮೋದಿ ಸಕರ್ಾರ ಈ ಅವಧಿಯಲ್ಲೇ ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಹುಡು-ಹುಡುಕಿ ಕೊಲ್ಲುತ್ತಿದೆ. ಕಳೆದ ಹದಿನೈದಿಪ್ಪತ್ತು ದಿನಗಳಲ್ಲಿಯಂತೂ ಕೆಲವು ಪ್ರಮುಖ ಭಯೋತ್ಪಾದಕ ನಾಯಕರೂ ಸೇರಿದಂತೆ ಅನೇಕರನ್ನು ಯಮಪುರಿಗಟ್ಟಿದೆ.

ಅಮೇರಿಕಾಕ್ಕೆ ಅಂದುಕೊಂಡಷ್ಟು ಸುಲಭವಿಲ್ಲ. ಮಧ್ಯಪ್ರಾಚ್ಯದಲ್ಲಿ ತನ್ನ ಮೂಗುತೂರಿಸುವಿಕೆಯನ್ನು ಕಡಿಮೆ ಮಾಡಿಕೊಂಡು ಅದೀಗ ಇಂಡೊ-ಪೆಸಿಫಿಕ್ ಪ್ರದೇಶಗಳತ್ತ ತಿರುಗಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಬೆಳೆಯುತ್ತಿರುವ ಪರಿಯನ್ನು ನಿಯಂತ್ರಿಸಬೇಕಾಗಿರುವುದು ಸದ್ಯಕ್ಕೆ ಅದರ ಅಗತ್ಯ. ಅದಾಗಲೇ ಚೀನಾ ತನ್ನ ನೌಕಾಸೈನ್ಯವನ್ನು ವಿಸ್ತರಿಸಿಕೊಂಡಿರುವ ರೀತಿಯಿಂದಾಗಿ ಅದೀಗ ಅಮೇರಿಕಾವನ್ನೇ ಹಿಂದಿಕ್ಕಿ ಜಗತ್ತಿನ ನಂಬರ್ ಒನ್ ಆಗಿ ಬೆಳೆದಿದೆ. ದಕ್ಷಿಣ ಚೀನಾ ಸಮುದ್ರದ ಮೂಲಕ ಅದು ನಡೆಸುತ್ತಿರುವ ವ್ಯಾಪಾರ-ವಹಿವಾಟು ಅಮೇರಿಕಾವನ್ನು ಆತಂಕಕ್ಕೆ ಬೀಳಿಸುವಷ್ಟು. ಭಾರತವನ್ನು ತುಳಿಯುವ ಪ್ರಯತ್ನದಲ್ಲಿ ಅಮೇರಿಕಾ ಮುಂದಡಿಯಿಡ ಹೋದರೆ ತನ್ನ ಕಾಲಮೇಲೆ ಕುಠಾರಾಘಾತ ಮಾಡಿಕೊಳ್ಳುವುದು ನಿಶ್ಚಿತ. ಹೀಗಾಗಿ ಸದ್ಯಕ್ಕೆ ತೀರಾ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲವಾದರೂ ನಮ್ಮ ಎಚ್ಚರಿಕೆಯಲ್ಲಿ ನಾವಿದ್ದು ಭಾರತ ಮತ್ತು ಪಾಕಿಸ್ತಾನಗಳ ನಡುವೆ ಪಾಕ್ ಆಕ್ರಮಿತ ಕಾಶ್ಮೀರವೆಂಬ ಸ್ವಾಯತ್ತ ರಾಷ್ಟ್ರವೊಂದು ನಿಮರ್ಾಣವಾಗುವಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ. ಏನಾಗುವುದೆಂದು ಕಾದು ನೋಡೋಣ..