ಆಫ್ರಿಕಾದಲ್ಲಿ ಭಾರತೀಯರ ಲೂಟಿ; ನಮಗೇನು ಪಾಠ?

ಆಫ್ರಿಕಾದಲ್ಲಿ ಭಾರತೀಯರ ಲೂಟಿ; ನಮಗೇನು ಪಾಠ?


ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ವಿರುದ್ಧ ಬಲುದೊಡ್ಡ ದಂಗೆಯೇ ನಡೆಯುತ್ತಿದೆ. ಕಳೆದೆರಡು ದಿನಗಳ ಹಿಂದಿನ ವರದಿಯ ಪ್ರಕಾರ ನೂರಕ್ಕೂ ಹೆಚ್ಚು ಭಾರತೀಯರು ಈ ದಂಗೆಕೋರರಿಗೆ ಆಹುತಿಯಾಗಿದ್ದಾರೆ. ಅಂಗಡಿಗಳು ಲೂಟಿಯಾಗಿವೆ. ಭಾರತೀಯರ ವಿರುದ್ಧದ ಜನಾಂಗೀಯ ದ್ವೇಷ ಹಿಂದೆಂದಿಗಿಂತಲೂ ಹೆಚ್ಚು ಅಲ್ಲೀಗ ಗೋಚರವಾಗುತ್ತಿದೆ. ಇದ್ದಕ್ಕಿದ್ದಂತೆ ಏನಾಯ್ತು? ಬ್ರಿಟೀಷರ ಕಾಲದಲ್ಲಿಯೇ ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡಲು ದಕ್ಷಿಣ ಆಫ್ರಿಕಾಕ್ಕೆ ಹೋದವರು ಇಲ್ಲಿನ ಭಾರತೀಯರು. ಬಹುತೇಕರಿಗೆ ತಾವು ದಕ್ಷಿಣ ಆಫ್ರಿಕಾಕ್ಕೆ ಹೋಗುತ್ತಿದ್ದೇವೆ ಎಂಬುದೂ ಗೊತ್ತಿರಲಿಲ್ಲ. ಬಡತನದಿಂದ ಬೆಂದು ಬಸವಳಿದಿದ್ದ ಅವರು ಹೊಟ್ಟೆ ತುಂಬಿಸಿಕೊಳ್ಳಲೊಂದು ಉದ್ಯೋಗ ಸಿಗುವುದೆಂದು ಭಾವಿಸಿ ಹಡಗು ಹತ್ತಿದರು. ಹಡಗು ದಡ ಸೇರಿದ್ದು ದಕ್ಷಿಣ ಆಫ್ರಿಕಾದ್ದು. ಮರಳಿ ಭಾರತಕ್ಕೆ ಬರುವ ಭರವಸೆಯನ್ನೇ ಅವರು ಬಿಟ್ಟುಬಿಟ್ಟರು. ಗಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡುವಾಗ ಹೆದರಿಕೆಯಾಗುತ್ತಿತ್ತು. ಒಬ್ಬೊಬ್ಬರೇ ಕಣ್ಣೀರಿಡುತ್ತಿದ್ದರು. ಆದರೇನು? ಬದುಕಲೇಬೇಕಲ್ಲ. ಇಂಥವರ ರಕ್ಷಣೆಗೆ ಸದಾ ಆಂಜನೇಯ ಬರುತ್ತಾನೆ ಎಂಬುದು ಅವರ ಮನಸ್ಸಿನ ಭಾವನೆ. ಹೀಗಾಗಿಯೇ ಮಾರುತಿಯನ್ನು ಬಲವಾಗಿ ಹಿಡಿದುಕೊಂಡರು. ಎಲ್ಲವನ್ನೂ ಕಳೆದುಕೊಂಡ ನಂತರವೂ ಮಾರುತಿಯೊಬ್ಬ ಉಳಿದುಬಿಟ್ಟ. ಹೀಗಾಗಿಯೇ ಇಂದೂ ದಕ್ಷಿಣ ಆಫ್ರಿಕಾದಲ್ಲಿ ಆಂಜನೇಯನ ಎತ್ತರೆತ್ತರದ ವಿಗ್ರಹಗಳು ಮತ್ತು ಅಪಾರ ಭಕ್ತಸಮೂಹ ಕಾಣಸಿಗುತ್ತದೆ. ಭಾರತದಲ್ಲಿ ಹಿಂದೂಗಳಲ್ಲೇ ಕೆಲವರು ಧರ್ಮ ಕಳೆದುಕೊಂಡು ಚಚರ್ಿಗೆ ಶರಣಾಗತರಾಗಿರುವಾಗ ದಕ್ಷಿಣ ಆಫ್ರಿಕಾದಲ್ಲಿ ಹಿಂದೂಗಳಾಗಿ ಉಳಿದಿರುವುದು ಸಾಹಸವೇ ಸರಿ. ಹಾಗಂತ ಅವರು ಅಲ್ಲಿನ ನಿವಾಸಿಗಳಿಂದ ಪ್ರತ್ಯೇಕವಾಗಿ ಉಳಿಯಲಿಲ್ಲ. ಅಲ್ಲಿಯೇ ಮನೆ ಕಟ್ಟಿಕೊಂಡರು, ಪರಿವಾರ ನಿಮರ್ಾಣವಾಯ್ತು, ದಕ್ಷಿಣ ಆಫ್ರಿಕಾದೊಂದಿಗೆ ಏಕರಸವಾಗಿ ಬೆರೆತುಬಿಟ್ಟರೂ ಕೂಡ. ಇಂದು ಆಫ್ರಿಕಾದ ಬೆಳವಣಿಗೆಯಲ್ಲಿ ಸ್ಥಳೀಯ ಭಾರತೀಯರ ಪಾತ್ರ ಬಲುದೊಡ್ಡದಾಗಿದೆ. ಒಂದು ಹಂತದಲ್ಲಂತೂ ಬ್ರಿಟೀಷರು ನೀಡುತ್ತಿದ್ದ ಕಿರುಕುಳವನ್ನು ಸ್ಥಳೀಯರೊಂದಿಗೆ ಭಾರತೀಯರೂ ವಿರೋಧಿಸಲು ನಿಂತಿದ್ದರು. ಮೋಹನ್ದಾಸ್ ಕರಮಚಂದ್ ಗಾಂಧಿ ಸಾಮಾನ್ಯವಾದ ದಾವೆಯೊಂದನ್ನು ಹೂಡಲು ಹೋಗಿ ಅಲ್ಲಿನ ಜನಸಮೂಹದ ಪ್ರತಿನಿಧಿಯಾಗಿ ನಿಂತು ಹೋರಾಟ ಮಾಡಿದ್ದು ಈಗ ಇತಿಹಾಸ. ಹಾಗೆ ನೋಡಿದರೆ ಮೋಹನದಾಸ ಕರಮಚಂದ ಗಾಂಧಿ ಮಹಾತ್ಮಾ ಆಗುವುದರಲ್ಲಿ ದಕ್ಷಿಣ ಆಫ್ರಿಕಾದ ಪಾಲು ಬಲುದೊಡ್ಡದ್ದು. ಕರಿಯರ ಹೋರಾಟದ ನೇತೃತ್ವ ವಹಿಸಿದ್ದ ನೆಲ್ಸನ್ ಮಂಡೇಲಾಗೂ ಭಾರತದ ಸಹಕಾರವೇನೂ ಕಡಿಮೆಯಿರಲಿಲ್ಲ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಭಾರತೀಯರು ಎಂದಿಗೂ ಆಫ್ರಿಕಾಕ್ಕೆ ಹೊರಗಿನವರಾಗಲೇ ಇಲ್ಲ. ಅಚ್ಚರಿ ಎಂದರೆ ದಕ್ಷಿಣ ಆಫ್ರಿಕಾದಲ್ಲಿರುವ ಬಹುತೇಕ ಭಾರತೀಯರು ಭಾರತವನ್ನು ಆರಾಧಿಸುತ್ತಾರೆ ನಿಜ. ಆದರೆ ಈ ದೇಶವನ್ನು ನೋಡಿಯೇ ಇಲ್ಲ.


ಸಹಜವಾಗಿಯೇ ಹೊರ ದೇಶದಲ್ಲಿರುವ ಭಾರತೀಯರು ಮೈಮುರಿದು ದುಡಿಯುತ್ತಾರೆ. ಇತರರಿಗಿಂತ ಹೆಚ್ಚು ಕೆಲಸ ಮಾಡುತ್ತಾರೆ ಹೀಗಾಗಿಯೇ ಅವರು ಸಾಕಷ್ಟು ಹಣಗಳಿಸಿ ಸ್ಥಿತಿವಂತರೂ ಆಗಿರುತ್ತಾರೆ. ಇಂಗ್ಲೆಂಡು ಅಮೇರಿಕಾ ಮತ್ತಿತರ ಪಶ್ಚಿಮ ದೇಶಗಳಲ್ಲಿ ಹೇಗೆ ಭಾರತೀಯರು ಸ್ಥಳೀಯರಿಗಿಂತ ಸಮೃದ್ಧರಾಗಿದ್ದಾರೋ ದಕ್ಷಿಣ ಆಫ್ರಿಕಾದಲ್ಲೂ ಭಾರತೀಯರ ಸಮೃದ್ಧಿ ಕಣ್ಣು ಕುಕ್ಕುವಂಥದ್ದೆ. ಡರ್ಬನ್, ಜೋಹಾನ್ಸ್ಬಗರ್್ಗಳಂತಹ ನಗರಗಳಲ್ಲಿ ಯಾವ ದೊಡ್ಡ ಅಂಗಡಿಯನ್ನು ಪ್ರವೇಶಿಸಿದರೂ ಅಲ್ಲಿ ಭಾರತೀಯರೇ ಕಂಡು ಬರುತ್ತಾರೆ. ಇದು ಸ್ಥಳೀಯರಿಗೆ ಸುದೀರ್ಘಕಾಲದ ಎದೆನೋವು. ಅದಕ್ಕೆ ಸರಿಯಾಗಿ 1993ರಲ್ಲಿ ಆಫ್ರಿಕಾಕ್ಕೆ ಸ್ಥಳಾಂತರವಾದ ಉತ್ತರ ಪ್ರದೇಶದ ಸಹರನ್ಪುರದ ಗುಪ್ತ ಸಹೋದರರು ಇಪ್ಪತ್ತೇ ವರ್ಷಗಳಲ್ಲಿ ಕಂಡು ಕೇಳರಿಯದಷ್ಟು ಸಂಪತ್ತನ್ನು ಗಳಿಸಿ ಆಫ್ರಿಕನ್ನರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಜಯ್, ಅತುಲ್ ಮತ್ತು ರಾಜೇಶ್ ಎಂಬ ಈ ಗುಪ್ತ ಸಹೋದರರು ತಮ್ಮ ಬೇರೆ ಬೇರೆ ಪರಿವಾರದ ಪ್ರಮುಖರನ್ನು ಸೇರಿಕೊಂಡು, ಆಫ್ರಿಕಾದ ರಾಜಕಾರಣಿಗಳನ್ನು ಬುಟ್ಟಿಗೆ ಹಾಕಿಕೊಂಡು, ಸಂಪತ್ತು ಕ್ರೋಢೀಕರಿಸುವ ಕೆಲಸಕ್ಕೆ ಕೈ ಹಾಕಿದರು. ಸಹರಾ ಕಂಪ್ಯೂಟಸರ್್ನಿಂದ ಆರಂಭವಾದ ಅವರ ಪರಿವಾರ ವ್ಯಾಪಾರ ಮುಂದೆ ಗಣಿ, ಮಾಧ್ಯಮ ಮತ್ತಿತರ ಕ್ಷೇತ್ರಗಳಿಗೆ ವಿಸ್ತಾರಗೊಂಡಿತು. ಅವರ ಇಂದಿನ ಆಸ್ತಿ ಸರಿಸುಮಾರು 10 ಬಿಲಿಯನ್ ಡಾಲರ್ಗಳಷ್ಟು. ದಕ್ಷಿಣ ಆಫ್ರಿಕಾದ ಅಧ್ಯಕ್ಷನಾಗಿದ್ದ ಜ್ಯಾಕೋಬ್ ಜುಮಾ ಇವರೊಂದಿಗೆ ಬಲವಾಗಿ ನಿಂತಿದ್ದ. ಹೀಗಾಗಿಯೇ ವ್ಯಾಪಾರ-ವಹಿವಾಟಿನಲ್ಲಷ್ಟೇ ಅಲ್ಲದೇ ರಾಜಕೀಯ ನಿರ್ಣಯಗಳಲ್ಲೂ ಗುಪ್ತ ಸಹೋದರರ ಬಲುದೊಡ್ಡ ಪಾಲಿತ್ತು. ದಕ್ಷಿಣ ಆಫ್ರಿಕಾದಲ್ಲಿ ಮೊದಲೆಲ್ಲ ಭಾರತವೆಂದರೆ ಗಾಂಧೀಜಿ ಎನ್ನುತ್ತಿದ್ದರಲ್ಲ, ಕಳೆದ ಒಂದು ದಶಕದಿಂದೀಚೆಗೆ ಭಾರತವೆಂದರೆ ಗುಪ್ತ ಸಹೋದರರು ಎನ್ನಲಾಗುತ್ತಿತ್ತು. ಒಂದೇ ಬೇಸರದ ಸಂಗತಿ ಎಂದರೆ ಗಾಂಧೀಜಿಯವರ ಹೆಸರನ್ನು ಹೇಳುವಾಗ ಗೌರವದಿಂದ ಭಾರತದ ಕಡೆ ನೋಡುತ್ತಿದ್ದ ಜನ ಗುಪ್ತ ಎನ್ನುವ ಹೆಸರು ಬಂದಾಗ ಅಸಹ್ಯದಿಂದ ಕೆಕ್ಕರಿಸಿ ನೋಡುತ್ತಿದ್ದರು ಅಷ್ಟೇ!


ಎಲ್ಲವೂ ಚೆನ್ನಾಗಿಯೇ ನಡೆದಿತ್ತು. ಆದರೆ ಜ್ಯಾಕೋಬ್ ಜುಮಾನ ಈ ಭ್ರಷ್ಟಾಚಾರದ ಪ್ರಕರಣಗಳು ಕೋಟರ್ಿನ ಮೆಟ್ಟಿಲೇರಿದಾಗ ಆತ ವಿಚಾರಣೆಯಿಂದ ತಪ್ಪಿಸಿಕೊಂಡು ತಿರುಗಾಡಲಾರಂಭಿಸಿದ. ತನ್ನ ಪಕ್ಷವೇ ವಿರೋಧಿಸಿದಾಗ ಅನಿವಾರ್ಯವಾಗಿ ರಾಜಿನಾಮೆ ಕೊಟ್ಟನಾದರೂ ನ್ಯಾಯಾಲಯದ ಎದುರು ನಿಂತುಕೊಳ್ಳಲು ಒಪ್ಪಲಿಲ್ಲ. ದಕ್ಷಿಣ ಆಫ್ರಿಕಾದ ಜುಲು ಎಂಬ ಬಲುದೊಡ್ಡ ಪಂಗಡಕ್ಕೆ ಸೇರಿದ ಆತ ಸಹಜವಾಗಿಯೇ ಇದನ್ನು ಟ್ರಂಪ್ಕಾಡರ್್ ಆಗಿ ಬಳಸುತ್ತಿದ್ದ. ಹೇಗೆ ಭಾರತದಲ್ಲಿ ಜಾತಿ ಕೆಲಸ ಮಾಡುತ್ತದೋ, ಅದರ ಆಧಾರದ ಮೇಲೆ ಮನಸ್ಸಿಗೆ ಬಂದಿದ್ದೆಲ್ಲವನ್ನೂ ಮಾಡಬಹುದೋ, ಹಾಗೆಯೇ ದಕ್ಷಿಣ ಆಫ್ರಿಕಾದಲ್ಲಿ ಕೂಡ. ಕಳೆದ ಕೆಲವು ದಿನಗಳ ಹಿಂದೆ ಆತ ಪದೇ ಪದೇ ವಿಚಾರಣೆಗೆ ತಪ್ಪಿಸಿಕೊಂಡು ನ್ಯಾಯಾಲಯದ ಆಜ್ಞೆಯನ್ನು ಉಲ್ಲಂಘಿಸುತ್ತಿರುವುದರಿಂದ ನ್ಯಾಯಾಲಯ ಅವನಿಗೆ 18 ತಿಂಗಳ ಶಿಕ್ಷೆ ಘೋಷಿಸಿತು. ಈಗ ಆತನನ್ನು ಬಂಧಿಸಿ ಜೈಲಿಗೆ ತಳ್ಳಲೇಬೇಕಾಯ್ತು. ಮೊದಲೆಲ್ಲ ತನ್ನ ಬಂಧನಕ್ಕೆ ಯಾರಾದರೂ ಬಂದರೆ ದಕ್ಷಿಣ ಆಫ್ರಿಕಾ ಹೊತ್ತಿ ಉರಿಯುತ್ತದೆ ಎನ್ನುತ್ತಿದ್ದ ಆತ ಕೊನೆಗೂ ಪೊಲೀಸರಿಗೆ ಶರಣಾಗಬೇಕಾಗಿ ಬಂತು. ಆದರೆ ಆತ ಶರಣಾಗುವುದರೊಂದಿಗೆ ಇಡಿಯ ಜುಲು ಜನಾಂಗ ಬಲವಾಗಿ ಎದ್ದುನಿಂತಿತು. ಜುಮಾನ ಮಗ ತಂದೆ ಜೈಲಿಗೆ ಹೋದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಉಗ್ರ ಭಾಷೆಯಲ್ಲಿಯೇ ಟ್ವಿಟರ್ ಸಂದೇಶ ಹಂಚಿಕೊಂಡ. ಟ್ವಿಟರ್ ಅವನ ಖಾತೆಯನ್ನು ಪ್ರತಿಬಂಧಿಸಿತಾದರೂ ಸಂದೇಶ ಜನರಿಗೆ ಸಿಕ್ಕಾಗಿತ್ತು. ಜುಲು ಜನ ಬೀದಿಗಿಳಿದರು. ತಮ್ಮ ಹಳೆಯ ದ್ವೇಷವನ್ನೆಲ್ಲ ತೀರಿಸಿಕೊಳ್ಳಲು ಅವರಿಗೆ ಇದಕ್ಕಿಂತ ಒಳ್ಳೆಯ ಅವಕಾಶವಿರಲಿಲ್ಲ. ರಸ್ತೆಯಲ್ಲಿ ಓಡಾಡುತ್ತಿದ್ದ ದೊಡ್ಡ ದೊಡ್ಡ ಟ್ರಂಕುಗಳಿಗೆ ಬೆಂಕಿ ಹಚ್ಚಿದರು. ವಾಸ್ತವವಾಗಿ ಅವರಿಗೆ ಕೋಪವಿದ್ದುದ್ದು ಮಾಲ್ಡೀವ್ಸ್ನಿಂದ ಬರುವ ಲಾರಿ ಚಾಲಕರುಗಳ ಮೇಲೆ. ತಮ್ಮ ಅನ್ನ ಕಸಿಯುವ ಈ ಜನಕ್ಕೆ ಬುದ್ಧಿ ಕಲಿಸಬೇಕೆಂಬ ಅವರ ಹಠ ಆಕ್ರೋಶವಾಗಿ ಟ್ರಕ್ಕುಗಳ ಮೇಲೆ ಬೆಂಕಿಯಾಗಿ ಬಿದ್ದಿತ್ತು. ಸಹಜವಾಗಿಯೇ ಅವರ ದೃಷ್ಟಿ ತಿರುಗಿದ್ದು ಸಂಪದ್ಭರಿತ ಭಾರತೀಯರ ಮೇಲೆ. ದೊಡ್ಡ ದೊಡ್ಡ ಅಂಗಡಿಗಳ ಮೇಲೆ ದಾಳಿ ಮಾಡಿದ ಈ ಜನ ಒಂದೂ ವಸ್ತು ಉಳಿಸದಂತೆ ಅಂಗಡಿಗಳನ್ನು ಖಾಲಿ ಮಾಡಿದರು. ಶೋಕೇಸ್ಗಳನ್ನು ಒಡೆದು ಬಿಸಾಡಿದರು. ತೃಪ್ತರಾಗದೇ ಬೆಂಕಿಯನ್ನೂ ಹಚ್ಚಿದರು. ಟ್ವಿಟರ್ನಲ್ಲಿ ಇವರ ಯುದ್ಧವೇ ನಡೆದುಹೋಯ್ತು. ಭಾರತೀಯರು ತಮ್ಮ ಮೂಲಸ್ಥಾನಕ್ಕೆ ಮರಳಿದರೆ ಒಳಿತು ಎಂದು ಎಚ್ಚರಿಕೆ ಕೊಡುವ ಸಂದೇಶಗಳು ಗುಪ್ತ ಸಹೋದರರ ಚಿತ್ರಗಳೊಂದಿಗೆ ಹಂಚಿಕೊಳ್ಳಲ್ಪಟ್ಟವು. ಅನೇಕ ಕಡೆಗಳಲ್ಲಿ ದಂಗೆಕೋರರು ಪೊಲೀಸರಿಗಿಂತ ಬಲುದೊಡ್ಡ ಸಂಖ್ಯೆಯಲ್ಲಿದ್ದುದರಿಂದ ಪೊಲೀಸರು ಕೈಚೆಲ್ಲಿ ಕುಳಿತುಕೊಳ್ಳಬೇಕಾಯ್ತು. ಇನ್ನೂ ಕೆಲವು ಕಡೆಗಳಲ್ಲಿ ಈ ಅವಕಾಶವನ್ನು ಪೊಲೀಸರು ಬಳಸಿಕೊಂಡು ಲೂಟಿ ಮಾಡಿಬಿಟ್ಟರು. ಕೆಲವು ದಿನಗಳ ಕಾಲ ಈ ದೌರ್ಜನ್ಯದ ಅಟ್ಟಹಾಸವನ್ನು ಗಮನಿಸಿದ ಭಾರತೀಯರು ತಮ್ಮದ್ದೇ ಆದ ಪುಟ್ಟ ಸೇನೆಯೊಂದನ್ನು ಕಟ್ಟಿಕೊಂಡು ಪ್ರತಿಭಟನೆಗೆ ನಿಂತುಬಿಟ್ಟರು. ಶಸ್ತ್ರಗಳನ್ನು ಹಿಡಿದು ತಮ್ಮ ಅಂಗಡಿಗಳನ್ನೂ ಜನರನ್ನೂ ರಕ್ಷಿಸಿಕೊಳ್ಳುವ ಪ್ರಯತ್ನ ಮಾಡುವುದಾಗಿ ಘೋಷಿಸಿದರು. ಆನಂತರವೇ ಸ್ವಲ್ಪ ದಂಗೆ ಹತೋಟಿಗೆ ಬಂದಿತೆನಿಸಿತು.


ಆದರೆ ಈಗಿರುವ ಪ್ರಶ್ನೆ ಅವರು ಭಾರತೀಯರನ್ನೇ ಗುರಿಯಾಗಿಸಿಕೊಳ್ಳಲು ಕಾರಣವೇನು? ನಿಮಗೆ ನೆನಪಿರುವುದಾದರೆ ಫಿಜಿ ದ್ವೀಪದಲ್ಲಿ ಕೆಲವು ವರ್ಷಗಳ ಹಿಂದೆ ಭಾರತೀಯರ ವಿರುದ್ಧ ಇದೇ ರೀತಿಯ ಘಟನೆಗಳು ನಡೆದಿದ್ದವು. ನರಹಂತಕ ಈದೀ ಅಮೀನ್ ಉಗಾಂಡದಿಂದ ಭಾರತೀಯರನ್ನು ಈ ರೀತಿಯೇ ಓಡಿಸಿದ್ದು ನಿಮಗೆ ನೆನಪಿರಬಹದು. ಈಗ ಈ ಘಟನೆ. ಹೀಗೇಕೆ? ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಬಲು ಕಷ್ಟವೇನೂ ಅಲ್ಲ. ಮೊದಲನೆಯದ್ದು, ಜನಾಂಗ ದ್ವೇಷ ದೊಡ್ಡ ಸಂಖ್ಯೆಯ ಜನರ ಸಂಘಟನೆಗೆ ಅವಕಾಶ ಮಾಡಿಕೊಡುತ್ತದೆ. ಅದರಲ್ಲೂ ದ್ವೇಷಿಸಬೇಕಾಗಿರುವವರ ಸಂಖ್ಯೆ ಚಿಕ್ಕದ್ದಾಗಿಬಿಟ್ಟಿದ್ದರಂತೂ ಗೆಲುವು ಬಲು ಸುಲಭ. ಇತ್ತೀಚೆಗೆ ಬ್ರಾಹ್ಮಣ್ಯದ ವಿಚಾರದಲ್ಲಿ ಜನರನ್ನು ಭಡಕಾಯಿಸುವ ಪ್ರಯತ್ನವಾಯ್ತಲ್ಲ, ಅದು ಇದಕ್ಕೆ ಸಣ್ಣ ಉದಾಹರಣೆಯಷ್ಟೇ. ಬ್ರಾಹ್ಮಣರ ಸಂಖ್ಯೆ ಚಿಕ್ಕದ್ದಿದೆ. ಅವರ ದ್ವೇಷಿಸುವ ಭರದಲ್ಲಿ ದೊಡ್ಡ ಸಮೂಹವೊಂದರ ನಿಮರ್ಾಣ ಮಾಡಿಕೊಳ್ಳಬಹುದು ಎಂಬ ಪ್ರಯತ್ನ ಅದು. ಜಗತ್ತಿನಾದ್ಯಂತ ಭಾರತೀಯರು ಸಣ್ಣ ಸಂಖ್ಯೆಯಲ್ಲಿದ್ದು ಸಹಜವಾಗಿಯೇ ಸುಲಭದ ತುತ್ತಾಗುವ ಅವಕಾಶವಿದೆ. ಎರಡನೆಯದಾಗಿ, ಈ ರೀತಿ ಆಯ್ಕೆ ಮಾಡಿಕೊಳ್ಳುವ ಜನಾಂಗ ಎಲ್ಲರಿಗೂ ಗೊತ್ತಿರುವಂಥದ್ದಾದರೆ ಸ್ವಲ್ಪ ಹೆಚ್ಚು ಶಕ್ತಿ ಬರುತ್ತದೆ. ಬಲಾಢ್ಯವಾಗಿರುವ ಫ್ರಾನ್ಸ್, ಜರ್ಮನಿಗಳಂತಹ ರಾಷ್ಟ್ರಗಳ ಜನರನ್ನು ಮುಟ್ಟುವುದು ಕಷ್ಟ. ತೀರಾ ಜನಕ್ಕೆ ಪರಿಚಯವೇ ಇಲ್ಲದ ಬಾಂಗ್ಲಾದೇಶದಂತಹ ಜನರನ್ನು ಬಡಿದರೆ ಉಪಯೋಗವಿಲ್ಲ. ಆದರೆ ಹೆಚ್ಚು-ಕಡಿಮೆ ಎಲ್ಲರಿಗೂ ಪರಿಚಯವಿರುವ, ಆದರೆ ಪೂರ್ಣಪ್ರಮಾಣದಲ್ಲಿ ಏನೂ ಗೊತ್ತಿಲ್ಲದಿರುವ ಭಾರತೀಯ ಜನಾಂಗವನ್ನು ಅಡ್ಡ ಹಾಕಿಕೊಂಡು ಬಡಿಯುವುದು ಎಲ್ಲರಿಗೂ ಸುಲಭವೇ. ಮೊದಲೆಲ್ಲ ಯಹೂದ್ಯರೊಂದಿಗೆ ಹೀಗೆ ನಡೆಯುತ್ತಿದ್ದುದು ನಿಮಗೆ ನೆನಪಿರಬೇಕು. ಇನ್ನು ಮೂರನೆಯದ್ದು ಜಗತ್ತಿನ ಪ್ರಬಲ ಶಕ್ತಿಗಳಿಗೆ ಭಾರತ ತಮ್ಮ ಸಮಸಮಕ್ಕೆ ನಿಲ್ಲುತ್ತಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜಗತ್ತಿನ ಐದನೇ ದೊಡ್ಡ ಆಥರ್ಿಕ ಶಕ್ತಿಯಾಗಿ ಬೆಳೆದು ನಿಂತಮೇಲಂತೂ ಅನೇಕರು ಅಂಡು ಸುಟ್ಟ ಬೆಕ್ಕಿನಂತಾಗಿದ್ದಾರೆ! ಕರೋನಾದ ನೆಪದಲ್ಲಿ ವ್ಯಾಕ್ಸಿನ್ಗಳನ್ನು ಮಾರಾಟಮಾಡಿ ಲೂಟಿ ಮಾಡಬಹುದೆಂದು ಭಾವಿಸಿದ್ದ ಅನೇಕರಿಗೆ ಭಾರತವೇ ವ್ಯಾಕ್ಸಿನ್ ಉತ್ಪಾದಕ ರಾಷ್ಟ್ರವಾಗಿ ಜಗತ್ತಿಗೆ ಮಾರಾಟ ಮಾಡುತ್ತಿರುವುದನ್ನೂ ಸಹಿಸಿಕೊಳ್ಳಲಾಗುತ್ತಿಲ್ಲ. ಭಾರತ ಬಡ, ದರಿದ್ರ, ಕೃಪಣ ರಾಷ್ಟ್ರವಾಗಿ ತಮ್ಮ ಮುಂದೆ ಸದಾ ನಿಂತಿರಬೇಕೆಂದು ಅವರು ಸದಾ ಬಯಸುತ್ತಾರೆ. ಅವರ ಆಶಯಕ್ಕೆ ತಕ್ಕಂತಿಲ್ಲದೇ ಮೀರಿ ಬೆಳೆಯುತ್ತಿರುವ ಭಾರತವನ್ನು ಕಂಡ-ಕಂಡಲ್ಲಿ ಮಟ್ಟಹಾಕುವ ಯೋಚನೆ ಇದ್ದೇ ಇದೆ.


ಇದು ಆಫ್ರಿಕಾದ ಘಟನೆಗೆ ನಿಲ್ಲುವುದಿಲ್ಲ. ಜಗತ್ತಿನ ಬೇರೆ-ಬೇರೆ ಭಾಗಗಳಿಗೆ ನಿಸ್ಸಂಶಯವಾಗಿ ವಿಸ್ತಾರಗೊಳ್ಳಲಿದೆ. ಅದಕ್ಕೊಂದು ಸಣ್ಣ ಕಾರಣವೂ ಅವರಿಗೆ ಸಾಕು. ನಮ್ಮ ಸ್ವಸ್ತಿಕ್ ಗುರುತನ್ನು ಮುಂದಿಟ್ಟುಕೊಂಡು ನಾಜಿಗಳೊಂದಿಗೆ ಸಮೀಕರಿಸುವ ಪ್ರಯತ್ನ ಮಾಡಿದ್ದು ಇನ್ನೂ ಹಸಿಯಾಗಿದೆ. ಹಿಂದೂಗಳನ್ನು ಗೋಮೂತ್ರ ಕುಡಿಯುವವರೆಂದು ಹಂಗಿಸುತ್ತಾ ಒಂಟೆಮೂತ್ರ ಕುಡಿಯುವವರು ಅಪಹಾಸ್ಯ ಮಾಡುವುದನ್ನು ನಾವು ನೋಡಿದ್ದೇವೆ. ಇವೆಲ್ಲವೂ ತಯಾರಿ ಅಷ್ಟೇ. ಸಣ್ಣ-ಪುಟ್ಟ ಕಾರಣಗಳನ್ನು ಮುಂದಿಟ್ಟುಕೊಂಡು ಭಾರತೀಯರ ಅಂತಃಶಕ್ತಿಯನ್ನು ನಾಶಮಾಡುವ ಪ್ರಯತ್ನ ಖಂಡಿತವಾಗಿಯೂ ಹೆಚ್ಚಲಿದೆ.


ಈ ಕದನಗಳು ಭಾರತವನ್ನು ಬಿಡಲಾರವು. 2024ರ ಚುನಾವಣೆಗೆ ಮುನ್ನ ಅನೇಕ ದಂಗೆಗಳಿಗೆ ತಯಾರಿ ನಡೆಸಲಾಗುತ್ತದೆ. ರೈತರ ಕದನ ಒಂದು ಪ್ರಯೋಗವಷ್ಟೇ. ಇನ್ನು ಮುಂದೆ ಬ್ರಾಹ್ಮಣರ ವಿರುದ್ಧ ದಲಿತರನ್ನು ಎತ್ತಿಕಟ್ಟುವ, ಹಿಂದೂ-ಮುಸಲ್ಮಾನರನ್ನು ಬಡಿದಾಡಿಸುವ, ಉತ್ತರ ಮತ್ತು ದಕ್ಷಿಣ ಭಾರತದ ನಡುವೆ ಬೆಂಕಿ ಹಚ್ಚುವ, ದಕ್ಷಿಣದಲ್ಲಿಯೇ ಹಿಂದುತ್ವದ ವಿರೋಧಿ ಅಲೆಯನ್ನು ಸೃಷ್ಟಿಸುವ ದೊಡ್ಡ ದೊಡ್ಡ ಪ್ರಯತ್ನಗಳು ನಡೆಯಲಿವೆ. ಪ್ರತಿ ಬಾರಿಯೂ ದಂಗೆಕೋರರ ಮತ್ತು ಪೊಲೀಸರ ಕಾಳಗ ವರ್ಣರಂಜಿತವಾಗಿ ಬಿಂಬಿಸಲ್ಪಡಲಿದೆ. ಇದನ್ನೆದುರಿಸುವುದು ನಿಸ್ಸಂಶಯವಾಗಿ ಒಂದು ಸವಾಲೇ. ತಯಾರಿ ಜೋರಾಗಿಯೇ ಆಗಬೇಕಾಗಿದೆ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s