ಚೀನಾದ ಕಮ್ಯುನಿಸ್ಟ್ ಪಾಟರ್ಿಗೆ ಇತ್ತೀಚೆಗೆ ನೂರು ವರ್ಷವಾಯ್ತು. ಸುದೀರ್ಘವಾದ ಭಾಷಣವೊಂದರಲ್ಲಿ ತನ್ನ ಮನದಿಂಗಿತವನ್ನು ಷಿ ಜಿನ್ಪಿಂಗ್ ವ್ಯಕ್ತಪಡಿಸಿದ. ಆದರೆ ಇದೇ ಸಂದರ್ಭದಲ್ಲಿ ಜಾಗತಿಕವಾದ ಚೀನಿಯರ ಕುರಿತಂತಹ ಭಾವನೆಗಳು ವಿಭಿನ್ನ ತಿರುವನ್ನು ಪಡೆದುಕೊಳ್ಳುತ್ತಿರುವುದು ಚೀನಾಕ್ಕೆ ಒಳ್ಳೆಯ ಸಂಗತಿಯೇನೂ ಅಲ್ಲ. ಕೆಲವು ಗುಪ್ತ ಮಾಹಿತಿಗಳಂತೂ ದಿನಗಳೆದಂತೆ ಹೆಚ್ಚು-ಹೆಚ್ಚು ಹೊರಬರುತ್ತಿವೆ. ಇತ್ತೀಚೆಗೆ ಅಮೇರಿಕಾದ ಸಕರ್ಾರೇತರ ಸಂಸ್ಥೆಯೊಂದು ನಡೆಸಿದ ಸಂಶೋಧನೆಯಿಂದ ಒಂದಷ್ಟು ವಿಚಾರಗಳು ಬೆಳಕಿಗೆ ಬಂದಿವೆ. ಕಳೆದ ಆರು ತಿಂಗಳಲ್ಲಿ ಚೀನಾ ಅಮೇರಿಕಾದ ಟೈಮ್ ಪತ್ರಿಕೆಗೆ ಏಳು ಲಕ್ಷ ಡಾಲರ್ಗಳನ್ನು, ಫೈನಾನ್ಷಿಯಲ್ ಟೈಮ್ಸ್ಗೆ ಸುಮಾರು ಮೂರುಮುಕ್ಕಾಲು ಲಕ್ಷ ಡಾಲರ್ಗಳನ್ನು, ಫಾರಿನ್ ಪಾಲಿಸಿ ಪತ್ರಿಕೆಗೆ ಮೂರು ಲಕ್ಷ ಡಾಲರ್ಗಳನ್ನು, ಲಾಸ್ ಏಂಜಲೀಸ್ ಟೈಮ್ಸ್ಗೆ ಎರಡುಮುಕ್ಕಾಲು ಲಕ್ಷ ಡಾಲರ್ಗಳನ್ನು, ಇದಲ್ಲದೇ ಇತರೆ ಕೆಲವು ಪತ್ರಿಕೆಗಳಿಗೆ ಸೇರಿ ಹತ್ತು ಲಕ್ಷ ಡಾಲರ್ಗಳನ್ನು ನೀಡಿದೆ. ಸದಾ ಭಾರತ ವಿರೋಧಿ ಸುದ್ದಿಗಳಿಂದಲೇ ಕುಖ್ಯಾತವಾಗಿರುವ ವಾಷಿಂಗ್ಟನ್ ಪೋಸ್ಟ್ ಕಳೆದ ನಾಲ್ಕೈದು ವರ್ಷಗಳಲ್ಲಿ ಚೀನಾದಿಂದ 45 ಲಕ್ಷ ಡಾಲರ್ಗಳನ್ನು ಜೇಬಿಗಿಳಿಸಿಕೊಂಡಿದೆ. ಇದೇ ಅವಧಿಯಲ್ಲಿ ವಾಲ್ಸ್ಟ್ರೀಟ್ ಜರ್ನಲ್ 60 ಲಕ್ಷ ಡಾಲರ್ಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ವರದಿಯಲ್ಲಿ ಇನ್ನೂ ಅನೇಕ ಪತ್ರಿಕೆಗಳ ಹೆಸರಿವೆ. ಇವೆಲ್ಲವೂ ಕಳೆದ ಒಂದು ದಶಕದಿಂದೀಚೆಗೆ ಚೀನಾದ ಕುರಿತ ಸುದ್ದಿಗಳನ್ನು ತಮ್ಮ ಪತ್ರಿಕೆಗಳಲ್ಲಿ ವ್ಯಾಪಕವಾಗಿ ಪ್ರಕಟಿಸಿಕೊಂಡೇ ಬಂದವು. ತನ್ನ ರಾಷ್ಟ್ರದಲ್ಲಿ ಚೀನಾ ಪತ್ರಿಕಾ ನಿರ್ಬಂಧಗಳನ್ನು ಹೇರಿದಾಗ್ಯೂ, ಜನಸಾಮಾನ್ಯರ ಸ್ವಾತಂತ್ರ್ಯವನ್ನು ಕಸಿದು ಮೆರೆಯುತ್ತಿದ್ದಾಗ್ಯೂ, ಉಯ್ಘುರ್ ಮುಸಲ್ಮಾನರನ್ನು ನಾಯಿಗಿಂತಲೂ ಕಡೆಯಾಗಿ ಕಾಣುತ್ತಿದ್ದಾಗ್ಯೂ ಚೀನಾವನ್ನು ಮುಕ್ತಕಂಠದಿಂದ ಹೊಗಳುತ್ತಿದ್ದ ಪತ್ರಿಕೆಗಳು ಇವು. ಚೀನಾದ ಕುರಿತ ಒಂದು ಭ್ರಮಾಲೋಕವನ್ನೇ ನಮಗೆ ಸೃಷ್ಟಿಸಿಕೊಟ್ಟು ಅದರ ವಿರುದ್ಧ ನಾವು ಮಾತನಾಡಲಾಗದ ಸ್ಥಿತಿಯನ್ನು ಸೃಷ್ಟಿಸಿದ್ದವರೂ ಇವರುಗಳೇ.
ಜಾಹಿರಾತು ಕೊಡುವುದರಿಂದ ಈ ರೀತಿಯ ಒಂದು ಭ್ರಮೆಯನ್ನು ಸೃಷ್ಟಿಸುವುದು ಸಾಧ್ಯವೇ ಎಂಬ ಪ್ರಶ್ನೆ ನಿಮಗೇನಾದರೂ ಬಂದರೆ ನೀವೊಮ್ಮೆ ದೆಹಲಿ ಸಕರ್ಾರ ಮತ್ತು ಕೇಜ್ರಿವಾಲ್ರನ್ನು ನೆನಪಿಸಿಕೊಳ್ಳಬೇಕು. ಕಳೆದ ಒಂದು ವರ್ಷದಲ್ಲಿ ಸ್ಥಳೀಯ ಮತ್ತು ರಾಷ್ಟ್ರೀಯ ಪತ್ರಿಕೆಗಳಿಗೆ ಜಾಹಿರಾತಿಗೆಂದೇ ಕೋಟ್ಯಂತರ ರೂಪಾಯಿ ಹಣ ಸುರಿದ ಕೇಜ್ರಿವಾಲ ಕರೋನಾ ಸಂದರ್ಭದಲ್ಲಿ ಜನ ಸಾಮಾನ್ಯರ ಕುರಿತು ಕಾಳಜಿ ವಹಿಸಿದ್ದಕ್ಕಿಂತಲೂ ಪತ್ರಿಕೆಗಳಿಗೆ ಹಣ ಸುರಿದದ್ದೇ ಹೆಚ್ಚು. ಅದರ ಪ್ರತಿಫಲವಾಗಿ ಕೇಜ್ರಿವಾಲನ ಸಕರ್ಾರದ ಕುರಿತಂತೆ ಒಂದು ಭ್ರಮೆಯನ್ನು ನಮಗರಿವಿಲ್ಲದಂತೆ ಸೃಷ್ಟಿಸಲಾಗಿತ್ತು. ಕರೋನಾ ಕಾಲಕ್ಕೆ ದೆಹಲಿಯಲ್ಲಿ ಏರುಮುಖವಾಗಿದ್ದ ರೋಗಿಗಳಿಗೂ ಪತ್ರಿಕೆಗಳು ಪ್ರಶ್ನಿಸಿದ್ದು ಮೋದಿಯನ್ನೇ ಹೊರತು ಕೇಜ್ರಿವಾಲನನ್ನಲ್ಲ. ದಿನ ಬೆಳಗಾದರೆ ಆಕ್ಸಿಜೆನ್ನ ಕೊರತೆ ಎಂದು ಕೂಗಾಡುತ್ತಿದ್ದ ಕೇಜ್ರಿವಾಲನನ್ನು ಮತ್ತೆ ಮತ್ತೆ ಟಿವಿಯಲ್ಲಿ ತೋರಿಸುತ್ತಿದ್ದ ಪತ್ರಕರ್ತರು ಆತ ಅನವಶ್ಯಕವಾಗಿ ನಾಲ್ಕು ಪಟ್ಟು ಹೆಚ್ಚು ಆಮ್ಲಜನಕವನ್ನು ಕೇಳಿ ಬೇಕೆಂತಲೇ ಆತಂಕ ಮೂಡಿಸಿದ್ದ ಎಂಬ ಸುದ್ದಿ ಹೊರಬಂದಾಗ ಎಲ್ಲ ಪತ್ರಿಕೆಗಳು ಮುಗುಮ್ಮಾಗಿ ಕುಳಿತುಬಿಟ್ಟಿದ್ದವು. ನಮ್ಮ ತೆರಿಗೆಯ ಹಣದ ಜಾಹಿರಾತು ಪತ್ರಿಕೆಗಳನ್ನು ಪ್ರಶ್ನೆ ಕೇಳದಂತೆ ಮಾಡಿಬಿಟ್ಟಿದ್ದವು. ಇದೇ ಪರಿಸ್ಥಿತಿ ಷಿಯದ್ದೂ ಕೂಡ. ಆತನ ಎಲ್ಲ ದುರಾಚಾರವನ್ನು ಜಾಗತಿಕ ಮಾಧ್ಯಮಗಳು ಪ್ರಶ್ನಿಸದೇ ಇರಲು ಕಾರಣವೇ ಆತ ಸುರಿಯುತ್ತಿದ್ದ ಹಣ. ಆದರೀಗ ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಕಮ್ಯುನಿಸ್ಟ್ ಪಕ್ಷ ನೂರನೇ ವಷರ್ಾಚರಣೆಯನ್ನು ಸಂಭ್ರಮಿಸುವ ವೇಳೆಗೆ ಅದರ ಹುಳುಕುಗಳು ಸಮಾಜದ ಮುಂದೆ ಬಟಾ ಬಯಲಾಗಿ ನಿಂತಿವೆ. ವಾಸ್ತವವಾಗಿ ಗ್ಯಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರ ಬಳಿ ಏಟು ತಿಂದದ್ದೇ ಚೀನಾದ ದುದರ್ೆಶೆಯ ಪರ್ವ ಆರಂಭವಾದ ಸಂದರ್ಭ ಎನ್ನಬಹುದು. ಕಾಲ್ಕೆರೆದು ಜಗಳ ಆರಂಭಿಸಿದ ಚೀನಾ ಬಫರ್ ಜೋನ್ಗಳಿಗೂ ನುಗ್ಗಿ ಡೇರೆಯನ್ನು ಹಾಕಿಕೊಂಡಿದ್ದು ಭಾರತೀಯ ಸೇನೆಗೆ ಅಚ್ಚರಿಯೇ ಆಗಿತ್ತು. ಭಾರತದೊಳಗೆ ಜನ ಕರೋನಾ ವಿರುದ್ಧ ಹೋರಾಡುತ್ತಿರುವಾಗ ಈ ರೀತಿ ನಿರ್ದಯವಾಗಿ ನಡೆದುಕೊಂಡಿದ್ದು ನಿಸ್ಸಂಶಯವಾಗಿ ಮಾನವೀಯತೆಯ ಚೌಕಟ್ಟಿನಿಂದ ಹೊರಗಿತ್ತು. ಎಂದಿನಂತೆ ಷಿ ಹಾಕಿದ ಬಿಸ್ಕತ್ತುಗಳಿಂದ ದಷ್ಟಪುಷ್ಟವಾಗಿ ಬೆಳೆದಿದ್ದ ಜಾಗತಿಕ ಮಾಧ್ಯಮಗಳು ಈ ಸುದ್ದಿಗೆ ಹೆಚ್ಚಿನ ಮಹತ್ವವನ್ನೇ ಕೊಡಲಿಲ್ಲ. ಭಾರತ ಈ ಘಟನೆಯಲ್ಲಿ ಹಿನ್ನಡೆ ಅನುಭವಿಸಲಿದೆ ಎಂಬುದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಭಾರತೀಯ ಸೇನೆ ತಿರುಗಿ ಬಿದ್ದ ರೀತಿ ಚೀನಾಕ್ಕೆ ಬಲುದೊಡ್ಡ ಮುಖಭಂಗ. ಕಳೆದ ಆಗಸ್ಟ್ನ ಕೊನೆಯ ದಿನಗಳಲ್ಲಿ ನಿರಾಶ್ರಿತ ಟಿಬೆಟ್ ಸೈನಿಕರಿಂದ ರಚಿಸಲ್ಪಟ್ಟ ಸ್ಪೆಷಲ್ ಫ್ರಾಂಟಿಯರ್ ಫೋಸರ್್ ಪ್ಯಾಂಗಾಂಗ್ಸೊನ ದಕ್ಷಿಣಕ್ಕಿರುವ ಕೈಲಾಶ್ ಶ್ರೇಣಿಯ ಎತ್ತರದ ಪ್ರದೇಶಗಳನ್ನು ವಶಪಡಿಸಿಕೊಂಡಮೇಲಂತೂ ಚೀನಾದ ದೌರ್ಬಲ್ಯಗಳು ಬೆಳಕಿಗೆ ಬಂದಿದ್ದವು. ಅನಿವಾರ್ಯವಾಗಿ ಚೀನಾ ಭಾರತದೊಂದಿಗೆ ಮಾತುಕತೆಗೆ ಬರಬೇಕಾಯ್ತಲ್ಲದೇ ಪ್ಯಾಂಗಾಂಗ್ ಭಾಗವನ್ನು ಬಿಟ್ಟು ಹೊರಡುವುದಾಗಿ ಹೇಳಿಕೊಂಡಿತು!

ಅಲ್ಲಿಯವರೆಗೂ ಚೀನಾದ ಮನ ನೋಯಿಸದಂತೆ ಅಂತಾರಾಷ್ಟ್ರೀಯ ಮಟ್ಟದ ಸಂಬಂಧಗಳನ್ನು ರೂಪಿಸಿಕೊಂಡು ಬರುತ್ತಿದ್ದ ಭಾರತ ಆನಂತರ ಪೂರ್ಣ ಬದಲಾಯ್ತು. ನಿಮಗೆ ನೆನಪಿರಬೇಕು. ಟಿಬೆಟ್ ಸಕರ್ಾರದ ಅಧ್ಯಕ್ಷರನ್ನು 2014ರಲ್ಲಿ ಮೋದಿ ಆಹ್ವಾನಿಸಿದ್ದರು. 2016ರಲ್ಲಿ ದಲೈ ಲಾಮಾ ಅವರನ್ನು ರಾಷ್ಟ್ರಪತಿ ಭವನಕ್ಕೆ ಆಹ್ವಾನಿಸಲಾಗಿತ್ತು. 2017ರಲ್ಲಿ ತವಾಂಗ್ ಭೇಟಿಗೆ ಅವರಿಗೆ ಅವಕಾಶವನ್ನೂ ಮಾಡಿಕೊಡಲಾಗಿತ್ತು. ಹೊಸ ಪ್ರಧಾನಿಗಳ ಬದಲಾಗಿರುವ ಆದ್ಯತೆಗಳ ಸೂಚನೆ ಚೀನಾಕ್ಕೆ ಕೊಡಲೇಬೇಕಾದ ಅನಿವಾರ್ಯತೆ ಮೋದಿಗಿತ್ತು. ಚೀನಾದೊಂದಿಗೆ ತಗ್ಗಿ-ಬಗ್ಗಿ ನಡೆಯುವ ಕಮ್ಯುನಿಸ್ಟ್ ಪಾಟರ್ಿಯೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುವ ಕಾಂಗ್ರೆಸ್ಗಿಂತ ತಾನು ಭಿನ್ನ ಎಂದು ತೋರಿಸಲೇಬೇಕಾದ ಅನಿವಾರ್ಯತೆ ಮೋದಿಗಿತ್ತು. ಅದು ಲಾಭವೂ ಆಯ್ತು. ಷಿ ಜಿನ್ಪಿಂಗ್ ತಾನೇ ಭಾರತ ಭೇಟಿಗೆ ಬಂದ. ಮೋದಿಯವರನ್ನು ಮಾತನಾಡಿಸಿದ. ಹಾಗಂತ ಚೀನಾ ಬದಲಾಯಿತು ಎಂದೇನೂ ಇಲ್ಲ. ಅದೇ ಹೊತ್ತಲ್ಲಿ ಡೋಕ್ಲಾಂನಲ್ಲಿ ಚೀನೀ ಮತ್ತು ಭಾರತೀಯ ಸೈನಿಕರ ನಡುವೆ ಯುದ್ಧೋತ್ಸಾಹ ಏರ್ಪಟ್ಟುಬಿಟ್ಟಿತ್ತು. ಅದು ಭಾರತಕ್ಕೆ ಚೀನಾ ಕೊಟ್ಟ ಎಚ್ಚರಿಕೆ. ಆನಂತರ ಭಾರತ ಚೀನಾದ ವಿಚಾರದಲ್ಲಿ ಸ್ವಲ್ಪ ಮೆದು ಧೋರಣೆಯನ್ನೇ ಅನುಸರಿಸುತ್ತಿತ್ತು. ದಲೈಲಾಮಾ ಮತ್ತು ಮೋದಿ ಬಾಂಧವ್ಯ ಮೇಲ್ನೋಟಕ್ಕೆ ಸ್ವಲ್ಪ ಕಡಿಮೆಯೇ ಆಯ್ತು ಎನ್ನಬೇಕು. ಆದರೆ ಈಗ ಮತ್ತೆ ಅದು ಹಳಿಗೆ ಬಂದಿದೆ. ಮೊನ್ನೆಯಷ್ಟೇ ಮೋದಿ ದಲೈಲಾಮಾ ಅವರಿಗೆ ಹುಟ್ಟಿದ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಇದು ಸಾಮಾನ್ಯವಾದ್ದೇನೂ ಅಲ್ಲ. ಕಮ್ಯುನಿಸ್ಟ್ ಪಾಟರ್ಿ ದಲೈಲಾಮಾರ ಆಧ್ಯಾತ್ಮಿಕ ಉತ್ತರಾಧಿಕಾರಿಯನ್ನು ತಾನೇ ನೇಮಿಸಬೇಕೆಂಬ ಧಾವಂತದಲ್ಲಿದೆ. ಈ ಹೊತ್ತಿನಲ್ಲಿ ದಲೈಲಾಮಾ ತವಾಂಗಿನಲ್ಲಿ ತಮ್ಮ ಉತ್ತರಾಧಿಕಾರಿಯನ್ನು ಹುಡುಕಿಕೊಂಡುಬಿಟ್ಟರೆ ಟಿಬೆಟ್ ಜನರ ಹೋರಾಟ ಮತ್ತೆ ಮುಂದುವರಿಯುತ್ತದೆ. ಹೀಗಾಗಿಯೇ ಚೀನಾಕ್ಕೆ ಭಾರತದ ಈ ನಡೆ ನಿಸ್ಸಂಶಯವಾಗಿ ಕಿರಿಕಿರಿ. ಕೈಲಾಶ್ ಶ್ರೇಣಿಗಳನ್ನು ಟಿಬೆಟಿಯನ್ ಸೈನಿಕರೇ ವಶಪಡಿಸಿಕೊಂಡಿರುವ ಸುದ್ದಿಯಂತೂ ಚೀನಾಕ್ಕೆ ನುಂಗಲಾರದ ತುತ್ತು. ಹೀಗಾಗಿಯೇ ಈಗ ಭಾರತೀಯ ಪಡೆಗಳೊಂದಿಗೆ ಕಾದಾಡಲು ಟಿಬೆಟಿಯನ್ ಸೈನಿಕರದ್ದೇ ಒಂದು ತುಕಡಿಯನ್ನು ಅದು ಸಿದ್ಧಗೊಳಿಸುತ್ತಿದೆ. ಚೀನಾದ ಮುಖ್ಯಭೂಮಿಯ ಸೈನಿಕರು ಭಾರತೀಯ ಪಡೆಗಳಿಂದ ಮುಖಭಂಗ ಅನುಭವಿಸಿದ್ದನ್ನು ಅದಕ್ಕೆ ಮರೆಯಲು ಆಗುತ್ತಲೇ ಇಲ್ಲ. ಈ ಎತ್ತರದಲ್ಲಿ ಪ್ರಬಲ ಭಾರತೀಯ ಸೈನಿಕರೊಂದಿಗೆ ಕಾದಾಡಲು ಟಿಬೆಟಿಯನ್ನರೇ ಸರಿ ಎಂದು ಅದು ನಿಶ್ಚಯಿಸಿಬಿಟ್ಟಿದೆ. ಹೀಗಾಗಿಯೇ ಈ ಸಾಹಸ. ಈ ಹೊತ್ತಿನಲ್ಲಿ ದಲೈಲಾಮಾಗೆ ಭಾರತ ಕೊಡುತ್ತಿರುವ ಗೌರವ ಚೀನಾದಲ್ಲಿ ತರಬೇತು ಪಡೆಯುತ್ತಿರುವ ಟಿಬೆಟ್ ಸೈನಿಕರ ಮನೋಸ್ಥೈರ್ಯವನ್ನು ಕುಸಿಯುವಂತೆ ಮಾಡುವುದಂತೂ ಅಕ್ಷರಶಃ ಸತ್ಯ.
ನಿಧಾನವಾಗಿ ಜಗತ್ತಿಗೆ ಚೀನಾದ ಉದ್ದೇಶಗಳು ಸ್ಪಷ್ಟವಾಗಿ ಅರ್ಥವಾಗುತ್ತಿವೆ. ಅದಾಗಲೇ ಶ್ರೀಲಂಕಾ ಚೀನಾ ಹೇರಿದ ಸಾಲದ ಸುಳಿಯಲ್ಲಿ ಸಿಕ್ಕು ಹಾಕಿಕೊಂಡು ಕಣ್ಣೀರಿಡುತ್ತಿದೆ. ತೆಗೆದುಕೊಂಡಿರುವ ಸಾಲವನ್ನು ತೀರಿಸಲು ಮತ್ತಷ್ಟು ಸಾಲವನ್ನು ಪಡೆದುಕೊಳ್ಳುತ್ತಿದೆ. ಭಾರತ, ಜಪಾನ್ಗಳಂತಹ ರಾಷ್ಟ್ರ ಬಿಡಿ ಬಾಂಗ್ಲಾದೇಶದಿಂದಲೂ ಶ್ರೀಲಂಕಾ ಸಾಲ ಪಡೆದುಕೊಂಡಿದೆ. ಈಗ ಐಎಮ್ಎಫ್ನತ್ತ ಮುಖಮಾಡಿ ಕುಳಿತಿದೆ. ಚೀನಾ ಒಂದರಿಂದಲೇ ಅದು ತೆಗೆದುಕೊಂಡಿರುವ ಸಾಲ ಐದು ಬಿಲಿಯನ್ ಡಾಲರ್ಗಳಿಗಿಂತಲೂ ಹೆಚ್ಚು. ಭಾರತ ಶ್ರೀಲಂಕಾದ ಕರೆನ್ಸಿಯಲ್ಲೇ ತಾನು ಕೊಟ್ಟ ಸಾಲವನ್ನು ಮರಳಿ ಪಡೆಯುವುದಾಗಿ ಶ್ರೀಲಂಕಾಕ್ಕೆ ಮಾತುಕೊಟ್ಟಿದೆ. ಭಾರತದ ಸಾಲ ಮತ್ತು ಅಭಿವೃದ್ಧಿ ಯೋಜನೆಗಳು ಚೀನಾ ನೀಡುವ ಸಾಲದಂತೆ ನಿಯಮಗಳನ್ನು ಹೊತ್ತು ಬರುವುದಿಲ್ಲ ಎಂಬುದು ಅವರಿಗೆಲ್ಲ ಈಗ ಅರ್ಥವಾಗುತ್ತಿದೆ. ಬಾಂಗ್ಲಾದೇಶ ಇದನ್ನು ಮೊದಲೇ ಕಂಡುಕೊಂಡಿತ್ತು. ಆಫ್ರಿಕನ್ ರಾಷ್ಟ್ರಗಳು ಅರಿಯಲಾರಂಭಿಸಿವೆ. ಏಷ್ಯಾ ಮತ್ತು ಜಗತ್ತಿನ ಇತರೆ ಭಾಗಗಳಲ್ಲಿ ಭಾರತ 60ಕ್ಕೂ ಹೆಚ್ಚು ವಿಭಿನ್ನ ಯೋಜನೆಗಳನ್ನು ಕೈಗೆತ್ತಿಕೊಂಡು ವಿಶ್ವಾಸ ಗಳಿಸಿಕೊಳ್ಳುತ್ತಿದೆ.

ಹಾಗಂತ ಪ್ರಬಲ ರಾಷ್ಟ್ರಗಳ ಮುಂದೆ ಮಂಡಿಯೂರಿ ಕುಳಿತುಕೊಳ್ಳುವ ವಿದೇಶಾಂಗ ನೀತಿಯೂ ನಮ್ಮದಲ್ಲ. ಕಳೆದ ಏಪ್ರಿಲ್ನಲ್ಲಿ ರಷ್ಯಾದ ವಿದೇಶಾಂಗ ಸಚಿವ ಸಗರ್ೆ ಲ್ಯಾವ್ರೊವ್ ಭಾರತಕ್ಕೆ ಭೇಟಿಕೊಟ್ಟು ಇಲ್ಲಿಂದ ನೇರವಾಗಿ ಶತ್ರು ರಾಷ್ಟ್ರವಾದ ಪಾಕಿಸ್ತಾನಕ್ಕೆ ಹೋಗಿದ್ದರು. ಪ್ರಬಲ ಅಮೇರಿಕಾವನ್ನು ಎದುರಿಸಿಕೊಂಡು ರಷ್ಯಾದ ಪರವಾಗಿ ವಾದಿಸುವ ನಮಗೆ ಇದು ನಿಜಕ್ಕೂ ಅಸಹನೀಯವಾಗಿತ್ತು. ಆಗ ಭಾರತ ತುಟಿಯನ್ನು ಎರಡು ಮಾಡಲಿಲ್ಲ. ಹಾಗಂತ ಪ್ರತೀಕಾರ ತೆಗೆದುಕೊಳ್ಳದೇ ಸುಮ್ಮನಿದ್ದರೆ ಅದು ನಮ್ಮ ಅಸಹಾಯಕತೆಯ ಪ್ರಶ್ನೆಯಾಗಿಬಿಡುತ್ತದೆ. ಹಾಗೆಂದೇ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಕಳೆದ ಶನಿವಾರ ರಷ್ಯಾದ ಭೇಟಿಯ ನಂತರ ಅದರೊಂದಿಗೆ ನಿರಂತರ ವಿರೋಧವನ್ನು ಕಾಯ್ದುಕೊಂಡು ಬಂದಿರುವ ಜಾಜರ್ಿಯಾಕ್ಕೆ ಭೇಟಿ ಕೊಟ್ಟಿದ್ದಾರೆ. ಅಲ್ಲಿನ ಪ್ರಧಾನಮಂತ್ರಿಯನ್ನು ಭೇಟಿ ಮಾಡಿದ್ದಲ್ಲದೇ ಗೋವಾದಲ್ಲಿ ಮಡಿದ ಅಲ್ಲಿನ ರಾಣಿಯೋರ್ವಳ ಅಸ್ತಿಯನ್ನು ಹಸ್ತಾಂತರಿಸಿ ಸಮರ್ಥ ಸಂದೇಶವನ್ನೇ ಕೊಟ್ಟಿದ್ದಾರೆ. ಅಂದರೆ ಭಾರತ ಮನಮೋಹನ ಸಿಂಗರ ಕಾಲದ್ದಲ್ಲ. ತನಗಾದ ಅವಮಾನವನ್ನು ಸಹಿಸಿಕೊಳ್ಳುವ ಸ್ಥಿತಿಯಲ್ಲಿ ಈ ರಾಷ್ಟ್ರ ಇಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಿದೆ. ಈ ಶಕ್ತಿಯೇ ಜಗತ್ತಿನ ಗೌರವಕ್ಕೆ ಪಾತ್ರವಾಗಿರೋದು ಮತ್ತು ಭಾರತ ಹೀಗೆ ಪ್ರಬಲವಾಗಿದೆ ಎನ್ನುವುದೇ ಹೂಡಿಕೆದಾರರಿಗೂ ವಿಶ್ವಾಸ ತುಂಬಿಸುವಂಥದ್ದು. ಈ ನಡುವೆ ಚೀನಾದೊಂದಿಗೆ ಸುಮಧುರ ಬಾಂಧವ್ಯವನ್ನು ಹೊಂದಿದ್ದ ಅಮೇರಿಕಾ ನಿಧಾನವಾಗಿ ತನ್ನ ಹಳೆಯ ಬಣ್ಣವನ್ನು ತೋರಲಾರಂಭಿಸಿದೆ. ಹಿಟ್ಲರ್ ಜರ್ಮನಿಯನ್ನು ಆಳುತ್ತಿರುವಾಗ ಅಮೇರಿಕಾದಲ್ಲಿ ರೂಸ್ವೆಲ್ಟ್ನ ಆಳ್ವಿಕೆ ಇತ್ತು. ಜರ್ಮನಿಯೊಂದಿಗೆ ವ್ಯಾಪಾರ ಸಂಬಂಧವನ್ನು ಚೆನ್ನಾಗಿ ಇಟ್ಟುಕೊಂಡಿದ್ದ ಅಮೇರಿಕಾ ಹಿಟ್ಲರ್ನನ್ನು ವಿರೋಧಿಸುವ ಗೋಜಿಗೇ ಹೋಗಿರಲಿಲ್ಲ. 1936ರಲ್ಲಿ ಜರ್ಮನಿ ರೀನ್ಲ್ಯಾಂಡನ್ನು ಆಕ್ರಮಿಸಿಕೊಂಡಾಗ, ಆಸ್ಟ್ರಿಯಾಕ್ಕೆ ನುಗ್ಗಿದಾಗ, ಜೆಕೊಸ್ಲೊವಾಕಿಯಾವನ್ನು ನುಂಗಿದಾಗ ಅಮೇರಿಕಾ ಮುಗುಮ್ಮಾಗಿಯೇ ಇತ್ತು. ನಾಜಿಗಳು ಬೆಳೆದು ಯಹೂದ್ಯರ ಹತ್ಯೆ ಮಾಡಿದಾಗಲೂ ರೂಸ್ವೆಲ್ಟ್ ತುಟಿ ಬಿಚ್ಚಲಿಲ್ಲ. ಹಿಟ್ಲರ್ನ ಭಾಷಣ ಕೇಳಿದ್ದೀರಾ ಎಂದು ಪತ್ರಕರ್ತರು ಕೇಳಿದ್ದಕ್ಕೆ ರೂಸ್ವೆಲ್ಟ್, ‘ಅಷ್ಟು ಸುದೀರ್ಘ ಭಾಷಣವನ್ನು ಯಾರು ಕೇಳುತ್ತಾರೆ’ ಎಂದು ಮೂದಲಿಸಿ ನುಡಿದಿದ್ದ. ಆದರೆ ಯಾವಾಗ ಜರ್ಮನಿಗೆ ವ್ಯಾಪಾರ ಮಾಡುವುದಷ್ಟೇ ಉದ್ದೇಶ ಅಲ್ಲ, ಅಮೇರಿಕಾವನ್ನು ಮೀರಿ ಬೆಳೆಯುವುದು ಎಂದು ಅರಿವಾಯ್ತೋ ಆಗ ತಿರುಗಿ ಬಿದ್ದ. ಅಮೇರಿಕಾ ಜರ್ಮನಿಯನ್ನು ಮುಗಿಸುವಲ್ಲಿ ಮಹತ್ವದ ಪಾತ್ರ ವಹಿಸಿತು. ಚೀನಾದ ವಿಚಾರದಲ್ಲಿಯೂ ಹಾಗೆಯೇ ಆಗುತ್ತಿದೆ. ನಿಧಾನವಾಗಿ ಜಗತ್ತೆಲ್ಲ ಒಂದಾಗಿ ಚೀನಿಯರ ವಿರುದ್ಧದ ದನಿ ರೂಪುಗೊಳ್ಳುತ್ತಿದೆ. ಭಾರತ ಇದರ ನೇತೃತ್ವ ವಹಿಸುವ ಎಲ್ಲ ಲಕ್ಷಣಗಳೂ ಕಾಣುತ್ತಿದೆ. ಆದರೆ ಬರಿಯ ಯುದ್ಧಕಲೆ, ರಾಜತಾಂತ್ರಿಕತೆಯಷ್ಟೇ ಚೀನಿಯರನ್ನು ಮಣಿಸಲು ಸಾಕಾಗದು. ವೈಜ್ಞಾನಿಕವಾಗಿ ತಾಂತ್ರಿಕವಾಗಿಯೂ ಕೂಡ ನಾವು ಅಗ್ರಣಿಯಾಗಬೇಕಾದ ಅಗತ್ಯವಿದೆ.

ಮೊನ್ನೆ ಕೇಂದ್ರ ಕ್ಯಾಬಿನೆಟ್ ವಿಸ್ತಾರಗೊಂಡಾಗ ಪ್ರಧಾನಮಂತ್ರಿಯೇ ವಿಜ್ಞಾನ-ತಂತ್ರಜ್ಞಾನ ವಿಭಾಗವನ್ನು ತನ್ನ ಬಳಿ ಇಟ್ಟುಕೊಂಡರಲ್ಲ ಅದು ಈ ಹಿನ್ನೆಲೆಯಲ್ಲಿ ಬಲುದೊಡ್ಡ ಸಂದೇಶ. ಔಷಧಿ ಕ್ಷೇತ್ರದ ಸಂಶೋಧನೆಯಲ್ಲಿ ನಾವೀಗ ಜಗತ್ತಿನ ಕಣ್ಣುಕುಕ್ಕುವಷ್ಟು ಬೆಳೆದಿದ್ದೇವೆ. ಇನ್ನು ಇತರೆ ಕ್ಷೇತ್ರಗಳಲ್ಲೂ ಬಲವಾದ ಹೆಜ್ಜೆ ಇಡಬೇಕಿದೆ. ಇದು ಒಬ್ಬಿಬ್ಬರ ಕೆಲಸವಲ್ಲ; ಹೊಸ ಭಾರತ ನಿಮರ್ಾಣಕ್ಕೆ ರಾಷ್ಟ್ರದ ಪ್ರತಿಯೊಬ್ಬರೂ ಜೊತೆಯಾಗಿ ಮಾಡಬೇಕಾಗಿರುವ ಮಹಾಯಜ್ಞ!