ಕರೋನಾ ಎರಡನೇ ಅಲೆ ಅನೇಕರ ಬದುಕನ್ನು ಕಸಿದಿದೆ. ಅನೇಕರ ಆಪ್ತರನ್ನು ಸೆಳೆದೊಯ್ದಿದೆ. ಮನೆಗಳು ಬರಡಾಗಿವೆ. ನಿಜ, ಆದರೆ ಇವೆಲ್ಲದರ ನಡುವೆ ಎರಡನೆ ಅಲೆಯ ವೇಳೆಗೆ ಮೋದಿಯ ಸ್ಥಾನದಲ್ಲಿ ಮನಮೋಹನ ಸಿಂಗರೇ ಇದ್ದಿದ್ದರೆ ಪರಿಸ್ಥತಿ ಹೇಗಿರಬಹುದಿತ್ತೆಂದು ಊಹಿಸಿ ನೋಡಿದ್ದೀರಾ? ಸ್ವಂತ ನಿಧರ್ಾರ ತೆಗೆದುಕೊಳ್ಳಲಾಗದೇ ಅವರವರ ಹೆಗಲ ಮೇಲೆಯೇ ಜವಾಬ್ದಾರಿಯನ್ನು ಹೊರಿಸಿ, ಎಲ್ಲದಕ್ಕೂ ಮುಗುಮ್ಮಾಗಿ ಇದ್ದುಬಿಡುವ ಮನಮೋಹನ ಸಿಂಗರು ಈ ಎರಡನೇ ಅಲೆಯನ್ನು ಹೇಗೆ ನಿರ್ವಹಿಸಿರುತ್ತಿದ್ದರು ಎಂದು ಊಹಿಸಿದರೂ ಹೆದರಿಕೆಯಾಗುತ್ತದೆ! ಬಿಡಿ, ಈ ಸಂಕಟದ ನಡುವೆಯೂ ಸಮಾಧಾನದ ಅಂಶ ಮೋದಿ ಈ ಹೊತ್ತಲ್ಲಿ ಪ್ರಧಾನಿಯಾಗಿದ್ದಾರಲ್ಲ ಎಂಬುದಷ್ಟೇ. ಹೀಗಾಗಿಯೇ ಎಬಿಪಿ ಸಿ ವೋಟರ್ ನಡೆಸಿದ ಸವರ್ೇಯ ಪ್ರಕಾರ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಸುಮಾರು ಶೇಕಡಾ 65ರಷ್ಟು ಜನ ಮೋದಿ ಮಾತ್ರ ಇಷ್ಟು ಸಮರ್ಥವಾಗಿ ಇದನ್ನು ನಿರ್ವಹಿಸಬಲ್ಲರು ಎಂದಿದ್ದಾರೆ. ಸಹಜವೂ ಹೌದು. ಮನಮೋಹನ ಸಿಂಗರಿಗೆ ಯಾವುದೆಲ್ಲ ದೌರ್ಬಲ್ಯಗಳೆನಿಸಿಕೊಂಡಿದ್ದವೋ ಮೋದಿಗೆ ಅವುಗಳೇ ಶಕ್ತಿ. ಯಾವುದು ರಾಹುಲ್ನಲ್ಲಿ ಇಲ್ಲವೇ ಇಲ್ಲವೋ ಮೋದಿಯೊಳಗೆ ಅವೆಲ್ಲವೂ ಇದೆ. ಹೀಗಾಗಿಯೇ ಈತ ಮಾತ್ರ ಅದನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗಿದ್ದು. ಒಂದೊಂದೇ ಅಂಶಗಳನ್ನು ಗಮನಿಸಿ ನೋಡಿ.

ಮೋದಿಯ ಶಕ್ತಿ ಸಂವಹನ ಕಲೆ. ಹೇಳಬೇಕಾದ್ದನ್ನು ಸಮರ್ಥವಾಗಿ, ಮನಮುಟ್ಟುವಂತೆ ಹೇಳಬಲ್ಲ ಅವರ ಶಕ್ತಿ ಅಪರೂಪದ್ದು. ರಾತ್ರಿ 8 ಗಂಟೆಗೆ ಟಿವಿಯ ನೇರಪ್ರಸಾರದ ಮೂಲಕ ನಾಳೆಯಿಂದ ಜನತಾ ಕಫ್ಯರ್ೂ ಎಂದು ಮನಮೋಹನ ಸಿಂಗರು ಹೇಳುವುದನ್ನು ಒಮ್ಮೆ ಊಹಿಸಿಕೊಂಡು ನೋಡಿ. ಸಾಮಾನ್ಯ ಜನರಿರಲಿ ಕಾಂಗ್ರೆಸ್ಸಿನ ನಾಯಕರೂ ಅದನ್ನು ಅನುಸರಿಸುತ್ತಿರಲಿಲ್ಲ. ಮೋದಿ ಕಫ್ಯರ್ೂಗೆ ಬೆಂಬಲ ಕೊಡಿಸುವುದೇನು, ದೀಪ ಹಚ್ಚಿ ಎಂದಾಗಲೂ, ವೈದ್ಯರಿಗೆ ಗೌರವ ಸೂಚಿಸಲು ಚಪ್ಪಾಳೆ ತಟ್ಟಿ ಎಂದಾಗಲೂ ಜನ ಚಾಚೂ ತಪ್ಪದೇ ಅನುಸರಿಸಿದ್ದು ಅಚ್ಚರಿಯೇ. ಮೊದಲನೇ ಅಲೆಯ ವೇಳೆಗೆ ವೈಜ್ಞಾನಿಕ ಸಲಹೆಗಾರರ ಮೂಲಕ ಕೊವಿಡ್ ನಿರ್ವಹಿಸಬೇಕಾದ ರೀತಿಯನ್ನು ಅರಿತು ಸಂಪೂರ್ಣ ಲಾಕ್ಡೌನ್ಗೆ ಶರಣಾದ ಮೋದಿ ಎರಡನೇ ಅಲೆ ವ್ಯಾಪಕವಾಗಿ ಆವರಿಸಿಕೊಳ್ಳುವ ಮುನ್ನ ಚುನಾವಣಾ ರ್ಯಾಲಿಗಳಲ್ಲಿದ್ದರು. ಒಮ್ಮೆ ಎರಡನೇ ಅಲೆ ಬಾಧಿಸುತ್ತಿದೆ ಎಂದು ಗೊತ್ತಾದೊಡನೆ ರ್ಯಾಲಿಗಳನ್ನು ರದ್ದುಗೊಳಿಸಿ ಎಂದಿನಂತೆ ತಾವೇ ಮುಂಚೂಣಿಯಲ್ಲಿ ನಿಂತು ಎಲ್ಲರೊಡನೆ ಮಾತುಕತೆ ಆರಂಭಿಸಿಬಿಟ್ಟರು. ಯಾರನ್ನೂ ಅವರು ಬಿಡಲಿಲ್ಲ. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ಐದು ಸೂತ್ರಗಳನ್ನು ಮುಂದಿಟ್ಟರು. ಕೊವಿಡ್ ಪರೀಕ್ಷೆಗಳನ್ನು ಹೆಚ್ಚಿಸಿ ಪಾಸಿಟಿವ್ ಆದವರನ್ನು ಪ್ರತ್ಯೇಕಗೊಳಿಸುವ ಕೆಲಸವನ್ನು ಚುರುಕುಗೊಳಿಸುವಂತೆ ಕೇಳಿಕೊಂಡರು. ಲಸಿಕೆ ಉತ್ಸವವನ್ನು ವ್ಯಾಪಕವಾಗಿ ಜರುಗಿಸಲು ಕ್ರಮ ಕೈಗೊಳ್ಳುವಂತೆ ಕೇಳಿಕೊಂಡರು. ರಾತ್ರಿ ಕಫ್ಯರ್ೂಗಳನ್ನು ಜಾರಿಗೊಳಿಸಿ ಅದನ್ನು ಕರೋನಾ ಕಫ್ಯರ್ೂ ಎಂದು ಕರೆಯುವಂತೆ ಸಲಹೆ ಕೊಟ್ಟರು. ಇದರಿಂದ ಲಾಭ ಹೆಚ್ಚೇನೂ ಆಗುತ್ತಿರಲಿಲ್ಲ. ಆದರೆ ಕರೋನಾ ಕಫ್ಯರ್ೂ ಎನ್ನುವ ಪದವೇ ಜನ ತೀಕ್ಷ್ಣವಾಗಿ ಆಲೋಚನೆ ಮಾಡಲು ಪ್ರೇರೇಪಿಸುತ್ತಿತ್ತು. ಇಷ್ಟನ್ನೂ ಹೇಳಿದ ಮೋದಿ ಯಾವ ಕಾರಣಕ್ಕೂ ಪೂರ್ಣ ಲಾಕ್ಡೌನ್ಗೆ ಶರಣಾಗಬೇಡಿ ಎಂದು ಕೇಳಿಕೊಳ್ಳುವುದನ್ನು ಮರೆಯಲಿಲ್ಲ. ಅನಿವಾರ್ಯವಾದಲ್ಲಿ ಮಾತ್ರ ಅಂತಹ ಕ್ರಮ ಕೈಗೊಳ್ಳಬೇಕೆಂದು ಸಲಹೆ ಕೊಟ್ಟರು. ಅದಾಗಲೇ ತಿಂಗಳುಗಟ್ಟಲೆ ವ್ಯಾಪಾರ ವಂಚಿತರಾದ ಉದ್ಯಮಿಗಳ ಕಾಳಜಿ ಅವರಿಗೆ ಇದ್ದೇ ಇತ್ತು. ದುರದೃಷ್ಟವೇನು ಗೊತ್ತೇ? ಯೋಗಿ ಆದಿತ್ಯನಾಥರನ್ನು ಬಿಟ್ಟು ಉಳಿದ ಯಾವ ಮುಖ್ಯಮಂತ್ರಿಗಳೂ ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಹೀಗಾಗಿಯೇ ಎಲ್ಲೆಡೆ ಕಾಲಕ್ರಮದಲ್ಲಿ ಹಾಹಾಕಾರವೆದ್ದಿತು. ಎರಡನೇ ಅಲೆಯನ್ನು ಸದ್ದಿಲ್ಲದೇ ಗೆದ್ದಿದ್ದು ಉತ್ತರ ಪ್ರದೇಶ ಮಾತ್ರ. ಹಾಗಂತ ಮೋದಿ ಮುಖ್ಯಮಂತ್ರಿಗಳೊಂದಿಗಷ್ಟೇ ಅಲ್ಲ. ನಿರಂತರ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿ ಉಳಿದರು. ಜಿಲ್ಲಾಧಿಕಾರಿಗಳು, ಆರೋಗ್ಯದ ಪ್ರಮುಖ ಜವಾಬ್ದಾರಿ ಉಳ್ಳವರು, ಕೆಲವೊಮ್ಮೆ ಖಾಸಗಿ ವಲಯದವರು ಎಲ್ಲರೊಂದಿಗೆ ನಿರಂತರ ಚಚರ್ೆ ನಡೆದೇ ಇತ್ತು. ನಡು-ನಡುವೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಾ ಮುಂದೆ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತಂತೆಯೂ ಎಚ್ಚರಿಕೆ ನೀಡುತ್ತಲೇ ಇದ್ದರು. ಮನೆಯ ಹಿರಿಯರೊಬ್ಬರು ಮಕ್ಕಳಿಗೆ ತೊಂದರೆಯಾಗಬಹುದಾದ ಸಂದರ್ಭ ಬಂದಾಗ ಎಷ್ಟು ಕಾಳಜಿ ವಹಿಸಬಹುದೋ ಮೋದಿ ಅಷ್ಟೇ ಪ್ರೀತಿಯಿಂದ ವ್ಯವಹರಿಸಿದರು.

ಇನ್ನು ಲಸಿಕೆಗಳ ವಿಚಾರಕ್ಕೆ ಬರುವುದಾದರೆ ಜಗತ್ತಿನ ಪ್ರಮುಖ ರಾಷ್ಟ್ರಗಳ ಸಮಸಮಕ್ಕೆ ನಿಂತು ಎರಡೆರಡು ವ್ಯಾಕ್ಸಿನ್ಗಳನ್ನು ಪರಿಚಯಿಸಿದ ಹೆಗ್ಗಳಿಕೆ ಭಾರತದ್ದು. ಸಾಧನೆ ವಿಜ್ಞಾನಿಗಳದ್ದೇ ಹೌದು, ಆದರೆ ಅದರ ಹಿಂದೆ ಸಮರ್ಥ ವ್ಯಕ್ತಿಯೊಬ್ಬ ನಿಲ್ಲುವುದು ಅನಿವಾರ್ಯ. ಹೀಗೆಂದೊಡನೆ ಕಾಂಗ್ರೆಸ್ಸಿಗರು ಎದ್ದೆದ್ದು ಕುಣಿದಾಡಬಹುದೇನೋ. ಆದರೆ 2008ರಲ್ಲಿ ಯುಪಿಎ ಸಕರ್ಾರ ಚೆನ್ನೈನ ಬಿಸಿಜಿ ವ್ಯಾಕ್ಸಿನ್ ಲ್ಯಾಬೊರೇಟರಿ, ಕಣ್ಣೂರಿನ ಪ್ಯಾಸ್ಟ್ಯೂರ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಕಸೌಲಿಯ ಸೆಂಟ್ರಲ್ ರಿಸಚರ್್ ಇನ್ಸ್ಟಿಟ್ಯೂಟ್ಗಳನ್ನು ಏಕಾಏಕಿ ಮುಚ್ಚಿಬಿಟ್ಟಿತು. ಹೀಗೇಕೆ ಮಾಡಿತೆಂಬುದನ್ನು ಯಾರೂ ಬಾಯಿ ಬಿಡಲಿಲ್ಲ. ಆದರೆ ನಿಸ್ಸಂಶಯವಾಗಿ ಜಗತ್ತಿನ ಲಸಿಕೆ ಉತ್ಪಾದಕರ ಲಾಬಿಗೆ ಕಾಂಗ್ರೆಸ್ಸು ಮಣಿದಿತ್ತು ಎನ್ನುವುದು ಗೋಚರವಾಗುತ್ತಿತ್ತು. 2012ರಲ್ಲಿ ಸವರ್ೋಚ್ಚ ನ್ಯಾಯಾಲಯ ಮಧ್ಯ ಪ್ರವೇಶಿಸಿ ಅದನ್ನು ಮತ್ತೆ ತೆರೆಸಿತು. ಮೋದಿ ಈ ಬಾರಿ ಜಗತ್ತಿನ ಒತ್ತಡಕ್ಕೆ ಮಣಿಯುವುದಿರಲಿ, ಜಗತ್ತಿಗೇ ಒತ್ತಡ ಹೇರುವ ಸನ್ನಾಹದಲ್ಲಿದ್ದರು. ಲಸಿಕೆ ಉತ್ಪಾದನೆಯಾಗುವ ಕೆಲವು ದಿನಗಳ ಮುನ್ನ ಎರಡೂ ಸಂಸ್ಥೆಗಳಿಗೆ ಭೇಟಿಕೊಟ್ಟು ಲಸಿಕೆಯೊಂದಿಗೆ ಸಿದ್ಧವಾಗುತ್ತಿರುವ ಸಂದೇಶವನ್ನು ಜಗತ್ತಿಗೆ ಮುಟ್ಟಿಸಿದರು. ಈ ಸಂಸ್ಥೆಗಳಿಗೆ ಬೇಕಾದ ಹಣಕಾಸಿನ ನೆರವು ಒದಗಿಸಲಾಯ್ತು. ಲಸಿಕೆ ಸಿದ್ಧವಾದೊಡನೆ ಮುಂಚೂಣಿಯ ಕಾರ್ಯಕರ್ತರಿಗೆ ಅದನ್ನು ಕೊಡಲಾಯ್ತು. ಮುಂದೆ ಜನರಲ್ಲಿ ವಿಶ್ವಾಸ ತುಂಬಲು ತಾನೇ ಲಸಿಕೆ ಹಾಕಿಸಿಕೊಂಡರು ಮೋದಿ. ಆ ವೇಳೆಗೆ ಕಾಂಗ್ರೆಸ್ಸು ಲಸಿಕೆಗಳ ಸಾಮಥ್ರ್ಯವನ್ನು ಪ್ರಶ್ನಿಸುತ್ತಿತ್ತು. ಬಿಜೆಪಿ ವ್ಯಾಕ್ಸಿನ್ ಎಂದು ಮೂದಲಿಸಿದರು ಕೆಲವರು. ಇತ್ತೀಚೆಗಂತೂ ಕಾಂಗ್ರೆಸ್ಸಿನ ಒಬ್ಬ ನಾಯಕ ಈ ಲಸಿಕೆಗಳಲ್ಲಿ ಗೋವಿನ ರಕ್ತಸಾರವಿದೆ ಎಂದು ಸುಳ್ಳುಸುದ್ದಿ ಹಬ್ಬಿಸಿ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದ. ಆದರೆ ಮೋದಿ ಮಾತ್ರ ಏಕಾಂಗಿಯಾಗಿ ಹೋರಾಟ ನಡೆಸಿದರು. ಲಸಿಕಾ ಉತ್ಸವಗಳನ್ನು ವ್ಯಾಪಕವಾಗಿ ನಡೆಸುತ್ತಾ ಜನ ಲಸಿಕೆ ತೆಗೆದುಕೊಳ್ಳುವಂತೆ ಪ್ರೇರೇಪಿಸಿದರು. ಊಹ್ಞೂಂ, ಅಂದುಕೊಂಡಷ್ಟು ವೇಗವನ್ನು ಅದು ಪಡೆಯಲಿಲ್ಲ. ಹಾಗಂತ ನಾಯಕ ಸುಮ್ಮನಿರುವಂತಿಲ್ಲವಲ್ಲ. ಜಗತ್ತಿನ ಅನೇಕ ರಾಷ್ಟ್ರಗಳಿಗೆ ಈ ಲಸಿಕೆಯನ್ನು ತಲುಪಿಸುತ್ತಾ, ವ್ಯಾಕ್ಸಿನ್ ಮೈತ್ರಿಗೆ ಭಾಷ್ಯ ಬರೆದರು. ಎರಡನೇ ಅಲೆಯ ನಟ್ಟನಡುವೆ ಕಾಂಗ್ರೆಸ್ಸು ‘ನಮ್ಮ ಮಕ್ಕಳ ವ್ಯಾಕ್ಸಿನ್ ಅನ್ನು ವಿದೇಶಕ್ಕೆ ಏಕೆ ಕಳಿಸಿದಿರಿ ಮೋದಿ?’ ಎಂದು ಪ್ರಚಾರ ಮಾಡಿದರಲ್ಲ; ಅದೇ ಲಸಿಕೆಗಳನ್ನು ತೆಗೆದುಕೊಳ್ಳಬಾರದೆಂದು ಇದೇ ಜನ ಹಿಂದೆಲ್ಲಾ ಹೇಳಿದ್ದನ್ನು ಮರೆತೇಬಿಟ್ಟಿದ್ದರಲ್ಲ. ವ್ಯಾಕ್ಸಿನ್ ಹಾಕಿಸಿಕೊಳ್ಳಲು ನಾವು ಹಿಂದೇಟು ತೋರಿದ್ದು ಖಂಡಿತವಾಗಿಯೂ ಮುಳುವಾಯ್ತು. ಎರಡನೇ ಅಲೆ ನಮ್ಮನ್ನು ಬಲವಾಗಿ ಹಿಡಿದುಕೊಂಡಾಗ ವ್ಯಾಕ್ಸಿನ್ ಹಾಕಿಸಿಕೊಳ್ಳದ ನಾವು ವೈರಸ್ನ ಮುಂದೆ ಬಟಾ ಬಯಲಾಗಿ ನಿಂತುಬಿಟ್ಟಿದ್ದೆವು.
ಎರಡನೇ ಅಲೆ ಅಮರಿಕೊಂಡಾಗ ಆಕ್ಸಿಜನ್ ಕೊರತೆಯಾಗಬಹುದೆಂದು ಯಾವ ಪುಣ್ಯಾತ್ಮನೂ ಊಹಿಸಿರಲಿಲ್ಲ. ಮತ್ತು ಯಾವ ದೇಶದಲ್ಲೂ ಕೂಡ ಈ ರೀತಿಯ ಸ್ಥಿತಿ ನಿಮರ್ಾಣವಾಗಿದ್ದನ್ನು ಕಂಡಿರಲಿಲ್ಲ. ಏಕಾಕಿ ಆಸ್ಪತ್ರೆಗಳಲ್ಲ್ಲಿ ಆಮ್ಲಜನಕದ ಕೊರತೆಯಾಗುತ್ತಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಕರೋನಾ ಎಂದು ಗೊತ್ತಾದವರೆಲ್ಲ ಆಕ್ಸಿಜನ್ಗಾಗಿ ತಡಕಾಡುವಂತೆ ಮಾಧ್ಯಮಗಳು ಮಾಡಿಬಿಟ್ಟವು. ದೆಹಲಿಯಲ್ಲಂತೂ ಸ್ವತಃ ಮುಖ್ಯಮಂತ್ರಿಯೇ ಅಗತ್ಯಕ್ಕಿಂತ ನಾಲ್ಕುಪಟ್ಟು ಹೆಚ್ಚು ಆಮ್ಲಜನಕವನ್ನು ಕೇಳಿ ಸಕರ್ಾರ ತಡಬಡಾಯಿಸುವಂತೆ ನೋಡಿಕೊಂಡರು. ಮೋದಿ ಸುಮ್ಮನಿರಲಿಲ್ಲ. ನಿರಂತರ ಸಭೆಗಳನ್ನು ನಡೆಸುತ್ತಾ ಉದ್ಯಮಿಗಳು ಕಾಖರ್ಾನೆಗಳಿಗೆ ಬಳಸುವ ಆಮ್ಲಜನಕವನ್ನು ರೋಗಿಗಳ ಬಳಕೆಗೆ ಬಳಸುವಂತೆ ಮಾಡಬಲ್ಲ ವ್ಯವಸ್ಥೆಯನ್ನು ರೂಪಿಸಿದರು. ಸರಕು ಸಾಗಣೆಯ ರೈಲು ಆಕ್ಸಿಜನ್ ಎಕ್ಸ್ಪ್ರೆಸ್ ಆಗಿ ನಿಮರ್ಾಣಗೊಂಡಿತು. ನಮ್ಮಿಂದ ವ್ಯಾಕ್ಸಿನ್ ಪಡಕೊಂಡಿದ್ದ ರಾಷ್ಟ್ರಗಳೆಲ್ಲ ಸಹಾಯಕ್ಕೆ ಧಾವಿಸಿದವು. ಎಲ್ಲೆಲ್ಲಿಂದ ಎಷ್ಟೆಷ್ಟು ಆಮ್ಲಜನಕದ ವ್ಯವಸ್ಥೆಯಾಯ್ತು ಎಂದು ಹೇಳಿದರೆ ಅದೇ ಒಂದು ಲೇಖನವಾದೀತು! ಆಮ್ಲಜನಕವನ್ನು ಪೂರೈಸಲಾಗದ ಆಫ್ರಿಕಾದ ಪುಟ್ಟ ರಾಷ್ಟ್ರಗಳು ಧಾನ್ಯವನ್ನು ಕೊಟ್ಟು ಕೃತಜ್ಞತೆ ಸಮಪರ್ಿಸಿದ್ದವು. ಇಡೀ ರಾಷ್ಟ್ರಕ್ಕೇ ಬೇಕಾದಷ್ಟು ಆಮ್ಲಜನಕ ಸಿಗುವುದು ಸಾಧ್ಯವೇ ಇಲ್ಲ ಎಂಬ ವಾತಾವರಣವನ್ನು ಪೂರ್ಣ ಬದಲಾಯಿಸಿ ದೇಶದ ಮೂಲೆ-ಮೂಲೆಯಲ್ಲೂ ಆಮ್ಲಜನಕ ದೊರೆಯುವಂತೆ ಮಾಡಿದ್ದು ಪ್ರಧಾನಿಯವರ ಸಾಧನೆಯೇ.
ಇವೆಲ್ಲವೂ ನಡೆಯುವಾಗ ಒಂದು ವಿಚಾರವನ್ನು ಗಮನಿಸಿದ್ದೀರಾ. ಈ ಸಂದರ್ಭಗಳಲ್ಲಿ ಡಾ. ಹರ್ಷವರ್ಧನ್ ಆರೋಗ್ಯ ಸಚಿವ ಎಂಬುದು ಅನೇಕರಿಗೆ ಗೊತ್ತಾಗಲೇ ಇಲ್ಲ. ಅವರು ಆಗೀಗ ಪತ್ರಿಕಾಗೋಷ್ಠಿಗಳನ್ನು ನಿರ್ವಹಿಸುತ್ತಿದ್ದರು ಅಷ್ಟೇ. ಉಳಿದೆಲ್ಲ ಕೆಲಸದ ನೇತೃತ್ವ ನರೇಂದ್ರಮೋದಿಯದ್ದೇ. ಗೆದ್ದಾಗಲಷ್ಟೇ ಈ ಮನುಷ್ಯ ಮುಂದೆ ನಿಲ್ಲುವುದಲ್ಲ, ಜನರಿಂದ ಬೈಗುಳಗಳನ್ನು ಸ್ವೀಕರಿಸಲು ಅವರೇ ಮುಂದೆ ನಿಂತಿದ್ದರು. ಕಾಂಗ್ರೆಸ್ ಕೆಲಸಕ್ಕೆ ಸೇರಿಸಿಕೊಂಡಿದ್ದ ಐದು ಲಕ್ಷ ಕೀಬೋಡರ್್ ಕುಟ್ಟಕರು ಎಲ್ಲ ಪ್ರಯತ್ನಗಳನ್ನು ಮಾಡಿದ ನಂತರವೂ ಮೋದಿ ಕಂಗೆಡಲಿಲ್ಲ. ಯೂಥ್ ಕಾಂಗ್ರೆಸ್ ವಿದೇಶದ ಎಂಬೆಸಿಯೊಂದಕ್ಕೆ ತಾನೇ ಆಕ್ಸಿಜನ್ ತಲುಪಿಸುವ ಪ್ರಯತ್ನ ಮಾಡಿ ಜಾಗತಿಕ ಮಟ್ಟದಲ್ಲಿ ಮೋದಿಯ ಮಾನ ಕಳೆಯಲು ಪ್ರಯತ್ನಿಸಿತು. ಸವರ್ೋಚ್ಚ ನ್ಯಾಯಾಲಯದಲ್ಲಿ ಪದೇಪದೇ ದಾವೆಗಳನ್ನು ಹೂಡಿ ಕಾಲೆಳೆಯುವ ಪ್ರಯತ್ನ ಮಾಡಲಾಯ್ತು, ದಿನ ಬೆಳಗಾದರೆ ನಿಂದನೆಯ ತುತ್ತೂರಿಗಳು ಮೊಳಗುತ್ತಲೇ ಇದ್ದವು, ಈ ಮನುಷ್ಯ ಮಾತ್ರ ಜಗ್ಗಲೇ ಇಲ್ಲ. ರೆಮ್ಡೆಸಿವಿರ್ ಇಂಜೆಕ್ಷನ್ಗಳ ಕೊರತೆಯಾಗಬಹುದು ಎಂದು ಗೊತ್ತಾದೊಡನೆ ಅದನ್ನು ಪಡೆದು ತಲುಪಿಸಲು ಹಠ ತೊಟ್ಟು ನಿಂತರು. ಈ ನಡುವೆ ಜನರಿಗೆ ಧಾನ್ಯದ ಕೊರತೆಯಾಗದಿರಲೆಂದು ಎಮ್ಎಸ್ಪಿ ಕೊಟ್ಟು ರೈತರಿಂದ ಸಾಕಷ್ಟು ಧಾನ್ಯ ಖರೀದಿ ಮಾಡಲಾಯ್ತು. ಕರೋನಾ ಕಾಲದಲ್ಲಿ ಏರಿದ ಆಹಾರತೈಲದ ಬೆಲೆಯನ್ನು ಬಲುಬೇಗ ನಿಯಂತ್ರಣಕ್ಕೆ ತಂದರು. ಪ್ಯಾಕೇಜುಗಳನ್ನು ಘೋಷಿಸಿ ತೊಂದರೆಗೊಳಗಾದ ಉದ್ಯಮವನ್ನು ಕೈ ಹಿಡಿದು ನಿಲ್ಲಿಸುವ ಯತ್ನ ಮಾಡಿದರು. ಹಾಗಂತ ಶಕ್ತಿ, ಸಾಮಥ್ರ್ಯವನ್ನು ಕಳೆದುಕೊಳ್ಳಲಿಲ್ಲ. ಚೀನಾದ ಗಡಿಯಲ್ಲಿ ಐವತ್ತು ಸಾವಿರ ಹೆಚ್ಚುವರಿ ಸೈನಿಕರನ್ನು ನಿಲ್ಲಿಸಿ ತಂಟೆಗೆ ಬರಬೇಡಿ ಎಂದರು. ಅಮೇರಿಕಾ ಸಹಕಾರ ಕೊಡುವುದಿರಲಿ, ಲಸಿಕೆಗಳಿಗೆ ಬೇಕಾದ ಕಚ್ಚಾವಸ್ತುಗಳನ್ನು ಕೊಡುವುದಿಲ್ಲವೆಂದಾಗ ಗುಟುರು ಹಾಕಿದರು. ಜಾಗತಿಕ ಒತ್ತಡ ಅಮೇರಿಕಾದ ಮೇಲೆ ಹೇಗೆ ನಿಮರ್ಾಣವಾಯ್ತೆಂದರೆ ಸ್ವತಃ ಬೈಡನ್ ನೆಟ್ಟಗಾಗಬೇಕಾಯ್ತು. ಇವೆಲ್ಲವುಗಳ ನಡುವೆಯೂ ಪಾಕಿಸ್ತಾನ ಎಫ್ಎಟಿಎಫ್ನ ಕಂದುಪಟ್ಟಿಯಿಂದ ಹೊರಬರದಂತೆ ನೋಡಿಕೊಂಡರು. ಬಂಗಾಳದಲ್ಲಿ ದೀದಿ ಕಾರ್ಯಕರ್ತರು ರಾಕ್ಷಸರಂತೆ ವತರ್ಿಸುತ್ತಾ ತನ್ನ ಪಕ್ಷದ ಕಾರ್ಯಕರ್ತರ ರುಂಡ ಚೆಂಡಾಡುತ್ತಿದ್ದಾಗ ಅದರ ವಿಚಾರಣೆಗೂ ಮುಂದಡಿಯಿಟ್ಟರು. ಒಂದೇ ಎರಡೇ ಹಗಲು-ರಾತ್ರಿ ಒಂದು ಮಾಡಿ ಅವರು ದುಡಿಯುತ್ತಾರೆ. ನಾವು ಅಂಗೈ ಅಗಲದ ಮೊಬೈಲನ್ನು ಕೈಲಿ ಹಿಡಿದು ಮನಸ್ಸಿಗೆ ಬಂದಂತೆ ಬೈದು ಸುಮ್ಮನಾಗಿಬಿಡುತ್ತೇವೆ. ಈಗ ಮತ್ತೊಮ್ಮೆ ಮೋದಿಯ ಜಾಗದಲ್ಲಿ ಮನಮೋಹನರಿದ್ದಿದ್ದರೆ ಏನಾಗಬಹುದಿತ್ತು ಎಂದು ಊಹಿಸಿ, ನಿಮ್ಮ ಎದೆಯೊಳಗೆ ಸ್ವಲ್ಪವಾದರೂ ಸಾಹಸ ಇದ್ದರೆ ಮೋದಿ ಬದಲಿಗೆ ರಾಹುಲ್ನನ್ನು ಊಹಿಸಿಕೊಂಡು ನೋಡಿ! ಎರಡನೇ ಅಲೆಯ ವೇಳೆಗೆ ದೇವರು ನಮ್ಮ ಮೇಲೆ ಎಷ್ಟು ಕೃಪೆ ಮಾಡಿದ್ದಾನೆ ಎಂದು ಅರ್ಥವಾದೀತು..
ನರೇಂದ್ರಮೋದಿಯವರಿಗೆ ಭಗವಂತ ಇನ್ನೂ ಹೆಚ್ಚಿನ ಶಕ್ತೊ ಕೊಡಲಿ.
It is true Modi is the one dedicated man and every time he comes out of his critics, perform better and better every day, Many times I criticize him on different occasions but make me fail in most of my critics, India is fortunate to have such a leader, but Karnataka politics becoming worse day by day and he needs to fix this one on high priority else BJP will be gone in next term
ವಾಸ್ತವದ ವರದಿ…ಬಹುಶಃ ಮೋದಿ ಅವರನ್ನು ಪರೀಕ್ಸಿಸಲೆಂದೇ ಸಮಸ್ಯೆಗಳು