ಕೊವಿಡ್ ಜಗತ್ತನ್ನು ಆವರಿಸಿಕೊಳ್ಳುವಾಗ ಅಮೇರಿಕಾದಲ್ಲಿ ಚುನಾವಣೆ ಬಲು ಹತ್ತಿರದಲ್ಲಿತ್ತು. ಇದು ತೀವ್ರವಾಗಿ ಹಬ್ಬುವ ರೋಗವಾದರೂ ಈ ಹಿಂದೆ ಬಂದಂತಹ ಅನೇಕ ಸಾಂಕ್ರಾಮಿಕಗಳಿಗಿಂತ ಭಯಾನಕವಾದುದೇನೂ ಆಗಿರಲಿಲ್ಲ. ಈ ಸತ್ಯ ಟ್ರಂಪ್ಗೆ ಗೊತ್ತಿತ್ತು. ಹೀಗಾಗಿಯೇ ಆತ ಆರಂಭದಿಂದಲೂ ಕರೋನಾ ಕುರಿತಂತೆ ಅಸಡ್ಡೆಯಿಂದಲೇ ವತರ್ಿಸಿದ. ಅಲ್ಲಿನ ಪ್ರತಿಪಕ್ಷವೂ ಅದನ್ನೇ ಕಾಯುತ್ತಿತ್ತು. ಮಾಧ್ಯಮಗಳೂ ಜೊತೆಗೂಡಿದವು. ಆಮೇಲೇನು? ಅಮೇರಿಕಾ ಕರೋನಾ ಎದುರಿಸುವಲ್ಲಿ ಸೋತೇಹೋಯ್ತು ಎಂಬಂತೆ ಬಿಂಬಿಸಲಾಯ್ತು. ಇಟಲಿಯಲ್ಲಾದ ಸಾವುಗಳನ್ನು ಮುಂದಿಟ್ಟುಕೊಂಡು ಜನರನ್ನು ಹೆದರಿಸಲಾಯ್ತು. ಅಮೇರಿಕಾ ಹಿಂದೆಂದೂ ಕಾಣದಂತಹ ಆತಂಕಕ್ಕೆ ದೂಡಲ್ಪಟ್ಟಿತು. ದಿನಸಿ ಪದಾರ್ಥಗಳನ್ನು ಬಿಡಿ, ಪಾಯಿಖಾನೆಗೆ ಬೇಕಾದ ಟಾಯ್ಲೆಟ್ ಪೇಪರ್ಗಳನ್ನು ಜನ ಮನೆಯಲ್ಲಿ ಕೂಡಿಟ್ಟುಕೊಳ್ಳಲಾರಂಭಿಸಿದರು. ಒಂದೆರಡು ವರ್ಷವಾದರೂ ರಸ್ತೆಯಲ್ಲಿ ಅಡ್ಡಾಡುವುದು ಸಾಧ್ಯವಾಗುವುದಿಲ್ಲವೇನೋ ಎಂಬಂತಿತ್ತು ಅವರ ನಡವಳಿಕೆ. ಟ್ರಂಪ್ನ ಹೃದಯದ ಬೇಗುದಿ ಹೆಚ್ಚುತ್ತಲೇ ಹೋಯ್ತು. ಅದನ್ನು ಮುಚ್ಚಿಕೊಳ್ಳಲೆಂದು ಆತ ತನ್ನ ತಾನು ಗಟ್ಟಿಗನೆಂದೇ ತೋರಿಸಿಕೊಳ್ಳುತ್ತಾ ನಡೆದ. ಮೊದಲೊಂದಷ್ಟು ದಿನ ಮಾಸ್ಕ್ ಹಾಕಲಿಲ್ಲ. ಆನಂತರ ಮಾಸ್ಕ್ ಹಾಕಲಾರಂಭಿಸಿದ. ಚುನಾವಣಾ ರ್ಯಾಲಿಗಳಲ್ಲಿ ಜನರ ನಡುವೆ ತಿರುಗಾಡಲಾರಂಭಿಸಿದ. ಇದು ಜನರಿಗೆ ಧೈರ್ಯ ತುಂಬುವ ಕೆಲಸವಾಗಿದ್ದರೂ ನೆಲಮಟ್ಟದಲ್ಲಿ ಆತಂಕಕ್ಕೊಳಗಾಗಿ ಸಾಯುತ್ತಿದ್ದವರ ವರದಿ ಜೋರಾಗಿಯೇ ಬರುತ್ತಿದ್ದುದರಿಂದ ಎಷ್ಟು ವಿರೋಧ ಆತನ ವಿರುದ್ಧ ಒಗ್ಗೂಡಬೇಕಿತ್ತೋ ಅಷ್ಟೂ ಒಂದಾಗಿತ್ತು. ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಎಂಬ ಆಂದೋಲನ ಇದ್ದಕ್ಕಿದ್ದಂತೆ ಎಲ್ಲಿಂದ ಹೇಗೆ ರೂಪುಗೊಂಡಿತೆಂಬುದನ್ನು ಯಾರೂ ಅರಿಯಲಾಗಲಿಲ್ಲ. ರಾಷ್ಟ್ರೀಯತೆಯ ವಿರುದ್ಧವಿದ್ದ, ಸ್ಪಷ್ಟವಾಗಿ ಹೇಳಬೇಕೆಂದರೆ ದೇಶವಿರೋಧಿ ಶಕ್ತಿಗಳೆಲ್ಲ ಒಂದಾಗಿ ಟ್ರಂಪ್ನ ವಿರುದ್ಧ ಕೆಲಸ ಮಾಡಲಾರಂಭಿಸಿದವು. ಇದು ರಾಷ್ಟ್ರೀಯವಾದಿಗಳನ್ನು ಹಿಂದೆಂದಿಗಿಂತಲೂ ಹೆಚ್ಚು ಟ್ರಂಪ್ ಪರವಾಗಿ ನಿಲ್ಲುವಂತೆ ಮಾಡಿದ್ದು ಸುಳ್ಳಲ್ಲ. ಈ ಹಿನ್ನೆಲೆಯಲ್ಲಿಯೇ ಆತ ಚುನಾವಣೆಗೆ ಹೋದಾಗ ಹಿಂದೆಂದೂ ಊಹಿಸದಿದ್ದಷ್ಟು ಬೆಂಬಲ ಹರಿದುಬಂತು. ಎಲ್ಲೆಡೆ ಮುನ್ನಡೆ ಕಾಯ್ದುಕೊಂಡಿದ್ದ ಟ್ರಂಪ್ ರಾತ್ರಿ ಬೆಳಗಾಗುವುದರೊಳಗೆ ಸೋತೇ ಹೋದ. ಅಷ್ಟಾದರೂ ಆತನ ಧಾಷ್ಟ್ರ್ಯ ಎಷ್ಟಿತ್ತೆಂದರೆ ತಾನು ಅಧಿಕಾರವನ್ನು ಬಿಡಲೊಲ್ಲೆ ಎಂದೇ ಆತ ಹೇಳಿದ್ದ. ತನ್ನ ಅಧಿಕಾರವನ್ನು ಪುನರ್ ಸ್ಥಾಪಿಸಲು ಅವನಿಗೆ ಸಮಯವೂ ಇತ್ತು. ಆದರೆ ಆತನೇ ಮಾಡಿಕೊಂಡ ಎಡವಟ್ಟನ್ನು ಬಳಸಿಕೊಂಡ ವಿರೋಧಿ ಪಾಳಯ ಅಲ್ಲಿನ ಸಂಸತ್ ಭವನದ ಮೇಲೆ ದಾಳಿಯಾಗುವಂತೆ ನೋಡಿಕೊಂಡಿತು. ಒಂದು ರೀತಿಯಲ್ಲಿ ಅಮೇರಿಕಾದ ಮಾನ ಜಾಗತಿಕಮಟ್ಟದಲ್ಲಿ ಹರಾಜಾಗಿ ಹೋಗಿತ್ತು. ವ್ಯಕ್ತಿಯನ್ನು ವಿರೋಧಿಸುವ ಭರದಲ್ಲಿ ರಾಷ್ಟ್ರವನ್ನೇ ವಿರೋಧಿಸುವುದೆಂದರೆ ಹೀಗೆಯೇ. ಟ್ರಂಪ್ ಅನಿವಾರ್ಯವಾಗಿ ಅಧಿಕಾರ ಹಸ್ತಾಂತರಿಸಿ ಮರಳಬೇಕಾಯ್ತು. ಅವನ ವಿರುದ್ಧ ಮೊದಲು ಪತ್ರಿಕೆಯವರನ್ನು ಎತ್ತಿಕಟ್ಟಲಾಯ್ತು. ಬುದ್ಧಿಜೀವಿಗಳ ವಲಯವನ್ನು ಪ್ರಭಾವಿಸಲಾಯ್ತು, ಟ್ವಿಟರ್ನಂತಹ ಸಾಮಾಜಿಕ ಜಾಲತಾಣಗಳು ಟ್ರಂಪ್ನನ್ನು ಸುಳ್ಳುಗಾರ ಎಂದೇ ಬಿಂಬಿಸುತ್ತಾ ನಡೆದವು. ಆತನನ್ನು ಸೋಲಿಸುವ ಧಾವಂತದಲ್ಲಿ ಕರಿಯರು, ಬಿಳಿಯರ ನಡುವೆ ಕಂದಕವನ್ನು ದೊಡ್ಡದ್ದು ಮಾಡಲಾಯ್ತು. ಕೊನೆಗೆ ಆತನನ್ನು ಕೆಳಗಿಳಿಸಬೇಕೆನ್ನುವ ತವಕದಲ್ಲಿ ಅಮೇರಿಕಾದ ಮಾನವನ್ನೂ ಹರಾಜು ಹಾಕಲಾಯ್ತು.

ಇಸ್ರೇಲ್ನ ಪ್ರಧಾನಿ ನೆತನ್ಯಾಹುದೂ ಇದೇ ಕಥೆ. ಇಸ್ರೇಲಿನ ಸೈನ್ಯದಲ್ಲಿ ಕಮ್ಯಾಂಡೊ ಕ್ಯಾಪ್ಟನ್ ಆಗಿ ಕೆಲಸ ಮಾಡಿದ ಆತ ಎಂಟೆಬೆಯಂತಹ ಅತ್ಯಪೂರ್ವ ಕಾಯರ್ಾಚರಣೆಯಲ್ಲಿ ಭಾಗವಹಿಸಿದ್ದ ಜೊನಾಥನ್ ನೆತನ್ಯಾಹುನ ಸಹೋದರ. ಹಂತ-ಹಂತವಾಗಿಯೇ ಬದುಕಿನಲ್ಲಿ ಮೇಲೇರುತ್ತಾ 1996ರಲ್ಲಿ ಪ್ರಧಾನಿ ಪದವಿಗೇರಿದವ. ಚುನಾವಣೆ ಸೋತನಂತರ ಮತ್ತೆ ಹೋರಾಡಿಯೇ ಅಧಿಕಾರವನ್ನು ಪಡೆದುಕೊಂಡವ. ಪ್ಯಾಲೆಸ್ತೇನಿನ ವಿರುದ್ಧ ಆತನ ಕಠಿಣ ನಿಲುವು ಅನೇಕ ಎಡಪಂಥೀಯರಿಗೆ ಸರಿ ಬರಲಿಲ್ಲ. ನೆತನ್ಯಾಹುವಿನ ರಾಷ್ಟ್ರವಾದಿತನ ಇವರೆಲ್ಲರಿಗೂ ಸಾಕಷ್ಟು ಕಿರಿಕಿರಿ ಉಂಟು ಮಾಡಿತ್ತು. ಆತನನ್ನು ಅಧಿಕಾರದಿಂದ ಕಿತ್ತೊಗೆಯುವ ಹಾದಿ ಹುಡುಕುತ್ತಿದ್ದರು. ಚುನಾವಣೆಗಳ ಮೇಲೆ ಚುನಾವಣೆಗಳನ್ನೆದುರಿಸಿ ಅಗತ್ಯವಿದ್ದ ಸಂಖ್ಯೆಗಿಂತ ಸ್ವಲ್ಪ ಕಡಿಮೆ ಪಡೆದುಕೊಂಡಿದ್ದ ನೆತನ್ಯಾಹುವನ್ನು ಹೇಗಾದರೂ ಸರಿಯೇ ಹೊರದಬ್ಬಬೇಕೆಂಬುದು ಅವರ ಬಯಕೆಯಾಗಿತ್ತು. ಮೊನ್ನೆ ಪ್ಯಾಲೆಸ್ತೇನಿನ ಮೇಲೆ ಇಸ್ರೇಲ್ ದಾಳಿಮಾಡಿದ ಮೇಲಂತೂ ವಿರೋಧಿಗಳೆಲ್ಲ ಒಟ್ಟಾಗಿಬಿಟ್ಟರು. ಎಷ್ಟರಮಟ್ಟಿಗೆ ಗೊತ್ತೇನು? ಅಲ್ಲಿನ ವಿರೋಧಪಕ್ಷದ ನಾಯಕ ಏರ್ ಲ್ಯಾಪಿಡ್ ಉಳಿದೆಲ್ಲ ಪಕ್ಷಗಳನ್ನು ಒಂದು ಮಾಡಿಕೊಂಡು ಈತನನ್ನು ಇಳಿಸಬೇಕೆಂದು ಪಣತೊಟ್ಟು ನಿಂತುಬಿಟ್ಟಿದ್ದಾನೆ. ನೆತನ್ಯಾಹು ವಿರುದ್ಧ ಇವರು ಕಟ್ಟಿಕೊಂಡಿರುವ ಗುಂಪಿನಲ್ಲಿ ಅರಬ್, ಇಸ್ಲಾಮಿಸ್ಟ್ ಪಕ್ಷವೂ ಸೇರಿರುವುದೇ ಇದಕ್ಕೆ ದೊಡ್ಡ ಉದಾಹರಣೆ. ಅದಾಗಲೇ ನೆತನ್ಯಾಹುವನ್ನು ಈ ರೀತಿ ಮೋಸದಿಂದ ಇಳಿಸಿದರೆ ಸ್ಥಳೀಯವಾಗಿ ದಂಗೆಗಳಾಗುವ ಸಾಧ್ಯತೆ ಇದೆ ಎಂದು ನ್ಯೂಸ್ ಏಜೆನ್ಸಿಗಳು ಎಚ್ಚರಿಸಿವೆ. ಸೋಷಿಯಲ್ ಮಿಡಿಯಾಗಳು ಈ ಬಾರಿ ನೆತನ್ಯಾಹು ವಿರುದ್ಧವಾಗಿ ತೊಡತಟ್ಟಿ ನಿಂತಿರುವುದೂ ಕಂಡು ಬರುತ್ತಿದೆ. ಸ್ವತಃ ನೆತನ್ಯಾಹುವೇ ಈ ಗುಂಪು ಅಧಿಕಾರಕ್ಕೆ ಬಂದರೆ ಇದೊಂದು ಭಯಾನಕವಾದ ಎಡಪಂಥೀಯ ಸಕರ್ಾರವಾಗಲಿದೆ ಎಂದುಬಿಟ್ಟಿದ್ದಾರೆ. ಏನೇ ಆದರೂ ಆತ ಇಳಿಯುವುದು ಖಾತ್ರಿಯೇ.

ಇಷ್ಟಕ್ಕೇ ಮುಗಿಯಲಿಲ್ಲ. ರಷ್ಯಾದ ಪುತಿನ್ನ ಮೇಲೂ ತೂಗುಕತ್ತಿ ಇದ್ದೇ ಇದೆ. ಟ್ರಂಪ್ ಮತ್ತು ಪುತಿನ್ ಘನಿಷ್ಠ ಬಾಂಧವ್ಯ ಹೊಂದಿದ್ದು ಎಲ್ಲರಿಗೂ ಗೊತ್ತಿರುವಂಥದ್ದೇ. ಟ್ರಂಪ್ ಗೆಲುವಿನಲ್ಲಿ ರಷ್ಯಾದ ಕೈವಾಡವಿದೆ ಎಂದು ಹೇಳಲಾಗುತ್ತಿತ್ತು. ಇದು ಬೈಡನ್ ಮತ್ತು ಮಿತ್ರ ಪಾಳಯದ ಗುರುತರವಾದ ಆರೋಪ ಕೂಡ. ರಷ್ಯಾ ಕಳೆದ ನಾಲ್ಕೂ ವರ್ಷಗಳಿಂದ ಇದನ್ನು ನಿರಾಕರಿಸಿಕೊಂಡೇ ಬಂದಿದೆಯಾದರೂ ತಾನು ಮುಗುಮ್ಮಾಗಿಯೇ ಉಳಿಯಿತು. ಈ ಬಾರಿ ಚುನಾವಣೆಯಲ್ಲಿ ಅಂತೂ ಇಂತು ಗೆಲುವು ಸಾಧಿಸಿದ ನಂತರ ಬೈಡನ್ ರಷ್ಯಾ ಮಾಡಿದ ತಪ್ಪಿಗೆ ಶಿಕ್ಷೆ ನೀಡಲು ಕಾತರದಿಂದಿದ್ದಾನೆನಿಸುತ್ತಿದೆ. ತೀರಾ ಇತ್ತೀಚೆಗೆ ರಷ್ಯಾದಲ್ಲಿ ಪುತಿನ್ ಮಾನವ ಹಕ್ಕುಗಳ ಉಲ್ಲಂಘನೆ ನಡೆಸುತ್ತಿರುವುದರ ವಿರುದ್ಧ ಜಿನೇವಾದಲ್ಲಿ ದನಿ ಎತ್ತುವುದಾಗಿ ಆತ ಕೊಟ್ಟಿರುವ ಹೇಳಿಕೆ ಸಂಚಲನ ಉಂಟುಮಾಡಿದೆ. ಪುತಿನ್ ಇನ್ನೂ ಸಾಕಷ್ಟು ವರ್ಷಗಳ ಕಾಲ ರಷ್ಯಾದ ಅಧ್ಯಕ್ಷನಾಗಿರುವ ನಿರ್ಣಯವನ್ನು ಅನುಮೋದಿಸಿಕೊಂಡುಬಿಟ್ಟಿದ್ದಾನೆ. ಆದರೆ ಇದು ಬದುಕಿರುವವರೆಗೂ ಅಧ್ಯಕ್ಷನೇ ಆಗಿರುವ ಶಿಜಿನ್ಪಿಂಗಿನ ಸವರ್ಾಧಿಕಾರಕ್ಕಿಂತಲೂ ವಾಸಿ. ಪುತಿನ್ ರಾಷ್ಟ್ರೀಯವಾದಿಯಾಗಿದ್ದು ರಷ್ಯಾದ ಹಿತಾಸಕ್ತಿಗಾಗಿ ಯಾವ ಹಂತಕ್ಕೆ ಹೋಗಲೂ ಸಿದ್ಧವಿರುವುದು ಎಲ್ಲರಿಗೂ ತಿಳಿದಿರುವಂಥದ್ದೇ. ಟ್ರಂಪ್ ಮತ್ತು ನೆತನ್ಯಾಹು ಇವರಿಬ್ಬರ ಹಾದಿಯಲ್ಲಿಯೇ ಪುತಿನ್ನನ್ನು ತಳ್ಳಬೇಕೆಂಬುದು ಅಂತರ್ರಾಷ್ಟ್ರೀಯ ಮಾಫಿಯಾಕೋರರ ಚಿಂತನೆ. ಹಾಗಂತ ಬೈಡನ್ನ ಹೇಳಿಕೆಯನ್ನು ರಷ್ಯಾ ಸುಮ್ಮನೆ ಸ್ವೀಕರಿಸಿದೆ ಎಂದು ಭಾವಿಸಬೇಡಿ. ‘ಈಗಾಗಲೇ ಸಾಕಷ್ಟು ಅನಪೇಕ್ಷಣೀಯ ಸಂದೇಶಗಳನ್ನು ರಷ್ಯಾದಿಂದ ಪಡೆದಿರುವ ಅಮೇರಿಕಾ ಇನ್ನು ಮುಂದೆಯೂ ಅಂಥದ್ದನ್ನು ಪಡೆಯಲಿದೆ. ನಮ್ಮ ತಂಟೆಗೆ ಬರುವಾಗ ಎಚ್ಚರದಿಂದಿರುವುದು ಒಳ್ಳೆಯದು’ ಎಂದು ಜೋರಾದ ದನಿಯಲ್ಲಿಯೇ ಹೇಳಿದೆ.

ಈ ಮೂವರ ಉದಾಹರಣೆ ಈಗೇಕೆ ಎನಿಸುತ್ತಿದೆಯೇನು? ಈ ರಾಷ್ಟ್ರೀಯವಾದಿಗಳ ಸಾಲಿನಲ್ಲೇ ಭಾರತದ ಪ್ರಧಾನಿ ನರೇಂದ್ರಮೋದಿಯೂ ಇರೋದು. ಟ್ರಂಪ್, ನೆತನ್ಯಾಹು ಮತ್ತು ಪುತಿನ್ಗೆ ಮಾಡಿದ ಎಲ್ಲ ಪ್ರಯತ್ನಗಳನ್ನು ಇವರು ಮೋದಿಗೂ ಮಾಡುತ್ತಿದ್ದಾರೆ, ಮಾಡುವವರಿದ್ದಾರೆ. ಹಾಗೆ ಸುಮ್ಮನೆ ಈ ಹಿಂದಿನ ಘಟನಾವಳಿಗಳನ್ನು ಗಮನಿಸಿ. ಅಮೇರಿಕಾದ ಸಂಸತ್ತಿನ ಮೇಲಾದ ದಾಳಿಯಂತೆಯೇ ಭಾರತದಲ್ಲೂ ರೈತ ಹೋರಾಟವನ್ನು ಸಂಘಟಿಸಿ ಕೆಂಪುಕೋಟೆಯನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಲಾಯ್ತು. ಪೊಲೀಸರು ಸ್ವಲ್ಪವಾದರೂ ಸಂಯಮ ಕಳೆದುಕೊಂಡುಬಿಟ್ಟಿದ್ದರೆ ನಾವು-ನೀವು ಊಹಿಸಲಿಕ್ಕೇ ಆಗದ ಚಿತ್ರವೊಂದು ಕಣ್ಮುಂದೆ ನಿಂತಿರುತ್ತಿತ್ತು. ಶಾಹೀನ್ಬಾಗ್ನ ಪ್ರಕರಣ ಒಂದು ರೀತಿಯಲ್ಲಿ ಬ್ಲ್ಯಾಕ್ ಲೈವ್ಸ್ ಮ್ಯಾಟರ್ನಂಥದ್ದೇ. ಸಿಎಎ ಜಾರಿಗೊಳ್ಳುವುದರಿಂದ ಇಲ್ಲಿನ ಮುಸಲ್ಮಾನರಿಗೆ ಯಾವ ಸಮಸ್ಯೆ ಇಲ್ಲದೇ ಹೋದರೂ ಅವರನ್ನು ಎತ್ತಿಕಟ್ಟಿ ಪ್ರತಿಭಟನೆಗೆ ಕೂರಿಸಲಾಯ್ತು. ಜಾಗತಿಕ ಮಟ್ಟದಲ್ಲಿ ಭಾರತದಲ್ಲಿ ಮುಸಲ್ಮಾನರ ವಿರುದ್ಧ ಶೋಷಣೆ ನಡೆಯುತ್ತಿದೆ ಎಂದು ಹೇಳಿಸುವ ಪ್ರಯತ್ನ ಅದು. ಅಮೇರಿಕಾದಲ್ಲಿ ಕರಿಯರ ಮೇಲೆ ಬಿಳಿಯರ ಶೋಷಣೆ ನಡೆಯುತ್ತಿದೆ ಎಂದು ಬಿಂಬಿಸಿದಂತೆಯೇ. ಮೋದಿಯವರ ಕಾದುನೋಡುವ ಮತ್ತು ಲೋಹ ಕಾದಾಗ ಬಡಿಯುವ ತಂತ್ರವೇ ಅವರನ್ನು ಎರಡೂ ಪ್ರಕರಣದಲ್ಲಿ ಉಳಿಸಿದ್ದು. ಸಿಎಎ ವಿಚಾರದಲ್ಲಿ ಇಡಿಯ ಭಾರತೀಯರ ಆಕ್ರೋಶ ಮುಸಲ್ಮಾನರ ವಿರುದ್ಧ ತಿರುಗಿದ್ದಲ್ಲದೇ ಸುಶಿಕ್ಷಿತ ಮುಸಲ್ಮಾನರು ತಮ್ಮದ್ದೇ ಜನರನ್ನು ವಿರೋಧಿಸಬೇಕಾದ ಅನಿವಾರ್ಯತೆ ತಂದೊಡ್ಡಿತು. ರೈತರ ಹೋರಾಟ ಒಂದು ಹಂತದಲ್ಲಿ ದೇಶವನ್ನೇ ಉರಿಸಿಬಿಡಬಲ್ಲದು ಎಂಬ ವಾತಾವರಣ ರೂಪಿಸಿದರೆ ಕೆಂಪುಕೋಟೆಯ ಪ್ರಕರಣ ಪ್ರತಿಭಟನಾಕಾರರು ರೈತರೇ ಅಲ್ಲ; ಸಾಕ್ಷಾತ್ತು ಗೂಂಡಾಗಳು ಎಂಬುದನ್ನು ಸಾಬೀತು ಪಡಿಸಿತು. ಈಗಂತೂ ಮತ್ತೊಮ್ಮೆ ಸಕರ್ಾರ ತಮ್ಮನ್ನು ಮಾತುಕತೆಗೆ ಕರೆದರೆ ಸಾಕು ಎಂದು ಈ ರೈತ ವೇಷದ ಗೂಂಡಾಗಳು ಕಾಯುತ್ತ ಕುಳಿತಿದ್ದಾರೆ. ಅತ್ತ ಈ ಕಾನೂನಿನ ಲಾಭ ಪಡೆದ ರೈತರು ಮೋದಿಯನ್ನು ಹೊಗಳಲಾರಂಭಿಸಿದ್ದಾರೆ. ಖಲಿಸ್ತಾನಿಗಳ ಬೆಂಬಲವೂ ಕಾಲಕ್ರಮೇಣ ಕಡಿಮೆಯಾಗುತ್ತಿರುವುದರಿಂದ ಗೆಲುವಿನ ನಗೆ ಮೋದಿಯದ್ದೇ. ಈ ನಡುವೆಯೇ ಕಾಂಗ್ರೆಸ್ಸು ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಲು ಜಾಗತಿಕ ಮಟ್ಟದಲ್ಲಿ ಮೋದಿಯ ಹೆಸರು ಕೆಡಿಸಲು ಐದು ಲಕ್ಷಕ್ಕೂ ಹೆಚ್ಚು ಕೀಬೋಡರ್್ ವಾರಿಯರ್ಗಳನ್ನು ಗುರುತಿಸಿಕೊಂಡಿದೆ. ಅವರ ಕೆಲಸವೇನು ಗೊತ್ತೇ? ಮೋದಿ ಪರವಾಗಿ ಮಾತನಾಡುವವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸುವುದು. ಭಾರತದಲ್ಲಿ ನಡೆಯುವ ಪ್ರತಿಯೊಂದು ವಿಚಾರವನ್ನೂ ಎಷ್ಟು ಸಾಧ್ಯವೋ ಅಷ್ಟು ಕೆಟ್ಟದ್ದಾಗಿ ಜಗತ್ತಿನ ಮುಂದೆ ಪ್ರಸ್ತುತ ಪಡಿಸುವುದು. ಅವರ ಉದ್ದೇಶವಾದರೂ ಏನು? ಆಂತರಿಕವಾಗಿ ಮೋದಿಯ ಪರವಾಗಿ ಮಾತನಾಡುವವರನ್ನೆಲ್ಲ ಹೆದರಿಸಿ ಕೂರಿಸುವುದು ಆ ಮೂಲಕ ಮೋದಿ ವಿರೋಧಿ ಅಲೆಯನ್ನು ಹಂತ-ಹಂತವಾಗಿ ಸೃಷ್ಟಿಸುವುದು. ಪ್ರಪಂಚದಲ್ಲಿ ಮೋದಿಯ ಹವಾ ಕಡಿಮೆಯಾಗುವಂತೆ ನೋಡಿಕೊಂಡು ಅವರನ್ನು ಅಧಿಕಾರದಿಂದ ಕೆಳಗಿಳಿಸಿದಾಗ ಯಾರೊಬ್ಬರೂ ಸೊಲ್ಲೆತ್ತದಂತೆ ಮಾಡುವುದು. ಸ್ಪಷ್ಟವಾಗಿ ಹೇಳಬೇಕೆಂದರೆ ಅಮೇರಿಕಾ ಮತ್ತು ಇಸ್ರೇಲ್ ಮಾದರಿಯ ಅಧಿಕಾರ ಕಸಿಯುವ ಯತ್ನ ಅದು. ಕರೋನಾ ಕಾಲಘಟ್ಟದಲ್ಲಿ ಕಾಂಗ್ರೆಸ್ಸು ಇಲ್ಲಿ ವತರ್ಿಸಿದ ರೀತಿಯನ್ನು ನೋಡಿದರೆ ಎಂಥವನಿಗೂ ಇದನ್ನು ಅಲ್ಲಗಳೆಯಲಾಗದು. ಕರೋನಾ ನಿರ್ವಹಣೆಯಲ್ಲಿ ಮೋದಿ ಸೋತರು ಎಂಬುದನ್ನು ಜನರಿಗೆ ಬಿಂಬಿಸಲು ಕಾಂಗ್ರೆಸ್ ಹೆಣಗಾಡಿದ ರೀತಿ ಹಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಮತ್ತು ಅವರ ಪರವಾಗಿರುವವರ ವಿರುದ್ಧ ಬೈಗುಳಗಳ ಸುರಿಮಳೆಯೇ ನಡೆದಿತ್ತು. ಅದರ ಹಿಂದು-ಹಿಂದೆಯೇ ಆಕ್ಸಿಜೆನ್, ವ್ಯಾಕ್ಸಿನ್ಗಳ ವಿಚಾರದಲ್ಲಿ ಮೋದಿ ಸಂಪೂರ್ಣ ಸೋತಿದ್ದಾರೆ ಎಂದು ಬಿಂಬಿಸುವ ಪ್ರಯತ್ನವನ್ನೂ ಮಾಡಲಾಯ್ತು. ಆದರೆ ಒಂದಂತೂ ಸತ್ಯ. ಈ ದೇಶಕ್ಕೆ ನರೇಂದ್ರಮೋದಿಯವರ ಮೇಲೆ ಅದೆಂತಹ ವಿಶ್ವಾಸವಿದೆಯೆಂದರೆ ಐದು ಲಕ್ಷ ಜನ ಬಾಡಿಗೆ ಬಂಟರು ಹಗಲು-ರಾತ್ರಿ ದೂಷಿಸುತ್ತಿದ್ದರೂ ಜನಸಾಮಾನ್ಯರು ಮೋದಿಯ ವಿರುದ್ಧ ಬೀದಿಗೆ ಬರಲಿಲ್ಲ. ಉಲ್ಟಾ ಮೋದಿ ಅಧಿಕಾರದಲ್ಲಿರುವುದರಿಂದಲೇ ತಾವು ಇಷ್ಟರಮಟ್ಟಿಗಾದರೂ ಉಳಿದುಕೊಂಡೆವು ಎಂದೇ ಮಾತನಾಡಿಕೊಂಡರು. ಕರೋನಾ ನಿರ್ವಹಣೆ ಇನ್ನೂ ಚೆನ್ನಾಗಿ ಮಾಡಬಹುದಿತ್ತು ಎಂದವರು ಹೇಳುತ್ತಾರಾದರೂ ಅದು ಮುಂದೆ ನಡೆಯುವ ಚುನಾವಣೆಯಲ್ಲಿ ಮೋದಿಯ ವಿರುದ್ಧ ಮತ ಹಾಕಲಂತೂ ಸಾಕಾಗಲಾರದು.

ಇಷ್ಟೆಲ್ಲಾ ನಡೆಯುತ್ತಿರೋದು ಏಕೆ ಗೊತ್ತಾ? ಜಗತ್ತಿನ ಬಲುದೊಡ್ಡ ಸಿರಿವಂತರಲ್ಲಿ ಒಬ್ಬನಾಗಿರುವ ಜಾಜರ್್ ಸೊರೋಸ್ ದಾವೋಸ್ನಲ್ಲಿ ಆಥರ್ಿಕ ಶೃಂಗ ನಡೆದಾಗಲೇ ಹೇಳಿದ್ದ, ‘ಮೋದಿ ರಾಷ್ಟ್ರೀಯವಾದಿಯಾಗಿದ್ದು ಆತ ಜಗತ್ತಿನ ಹಿತಾಸಕ್ತಿಗಳಿಗೆ ವಿರೋಧಿಯಾಗಿದ್ದಾನೆ’ ಅಂತ. ಇಂತಹ ರಾಷ್ಟ್ರೀಯವಾದಿಗಳನ್ನೆಲ್ಲಾ ಹೇಗಾದರೂ ಇಳಿಸಬೇಕೆಂಬುದೇ ಆತನ ಮಾತಿನ ಮಥಿತಾರ್ಥವಾಗಿತ್ತು. ದೇಶವಿರೋಧಿಯಾಗಿರುವ ಅನೇಕ ಭಾರತೀಯ ಎನ್ಜಿಒಗಳಿಗೆ, ಮಾಧ್ಯಮಗಳಿಗೆ ಆತ ಹಣ ಸುರಿದಿದ್ದಾನೆ. ಸತ್ತಂತಿದ್ದ ಕಾಂಗ್ರೆಸ್ಸು ಇದ್ದಕ್ಕಿದ್ದಂತೆ ಚಿಗಿತು ನಿಲ್ಲಲು ಆತನೇ ಕಾರಣ. ಆದರೆ ದುರದೃಷ್ಟವೇನು ಗೊತ್ತೇ? ಮೋದಿಯನ್ನು ವಿರೋಧಿಸುವ ಭರದಲ್ಲಿ ಕಾಂಗ್ರೆಸ್ಸು ಆಕ್ಸಿಜೆನ್ ಜನರಿಗೆ ಸಿಗದಂತೆ ದಾಸ್ತಾನು ಮಾಡಿಕೊಂಡಿತು. ವ್ಯಾಕ್ಸಿನ್ಗಳನ್ನು ಜನರಿಗೆ ನೀಡದೇ ಕಸದಬುಟ್ಟಿಗೆಸೆಯಿತು. ಆಸ್ಪತ್ರೆಗಳಲ್ಲಿ ಬೆಡ್ಗಳನ್ನು ಬ್ಲಾಕ್ ಮಾಡಿಕೊಂಡು ಜನ ಸಾಯುವಂತೆ ನೋಡಿಕೊಂಡಿತು. ಕೊನೆಗೆ ಅಮಾಯಕರ ಸಾವನ್ನು ವೈಭವೀಕರಿಸಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜು ಹಾಕಿತು. ರಾಷ್ಟ್ರೀಯ ಪಕ್ಷವೊಂದು ನಾಲ್ಕು ಕಾಸಿಗೆ ಈ ಹಂತಕ್ಕೆ ಇಳಿಯಬಹುದೆಂದು ಯಾರೂ ಊಹಿಸಿರಲಿಲ್ಲ. ಆದರೆ ಎಲ್ಲವೂ ಈಗ ಸಮಸ್ಥಿತಿಗೆ ಬರುತ್ತಿದೆ. ಮಾಡಿದ್ದೆಲ್ಲವೂ ಕಾಂಗ್ರೆಸ್ಸಿನ ಮುಖಕ್ಕೆ ಮರಳಿ ಬಡಿಯಲಾರಂಭಿಸಿದೆ. ಜನ ದಡ್ಡರಲ್ಲ; ಎಲ್ಲವನ್ನೂ ಗಮನಿಸುತ್ತಿದ್ದಾರೆ.