ಎಷ್ಟು ವೇಗವಾಗಿ ಏರಿತ್ತೋ ಅಷ್ಟೇ ವೇಗವಾಗಿ ಕರೋನಾ ಇಳಿದಿದೆ. ಮೊದಲ ಅಲೆ ಗರಿಷ್ಠ ಗುರಿಯನ್ನು ಮುಟ್ಟಿ ಇಳಿಯುವ ಸಮಯಕ್ಕೆ ಹೋಲಿಸಿದರೆ ಅದಕ್ಕಿಂತಲೂ ವೇಗವಾಗಿಯೇ ಈ ಇಳಿಮುಖ ಕಂಡುಬಂದಿದೆ. ಮೂರೇ ವಾರಗಳಲ್ಲಿ ತುದಿಮುಟ್ಟಿದ ಅರ್ಧಕ್ಕೆ ಕರೋನಾ ಇಳಿದಿರುವುದನ್ನು ದತ್ತಾಂಶ ಸಂಶೋಧಕರು ದಾಖಲಿಸಿದ್ದಾರೆ. ಒಳ್ಳೆಯ ಸುದ್ದಿಯೇ. ಆದರೆ ಸಾವಿನ ಸಂಖ್ಯೆಯಲ್ಲಿ ಶೇಕಡಾವಾರು ಇಳಿಕೆ ನಿಧಾನಗತಿಯಲ್ಲಿ ಸಾಗುತ್ತಿರುವುದು ಇನ್ನೂ ಆತಂಕದ ಅಂಶವೇ. ಈ ನಡುವೆ ಚೀನಾ ಹಬ್ಬಿಸಿದ ಈ ವೈರಸ್ಸಿಗೆ ಜಗತ್ತಿನ 220 ರಾಷ್ಟ್ರ ಅಥವಾ ಪ್ರದೇಶಗಳಲ್ಲಿ 17 ಕೋಟಿ ಜನ ತುತ್ತಾಗಿದ್ದಾರೆ. ಸುಮಾರು 15 ಕೋಟಿಯಷ್ಟು ಮಂದಿ ಗುಣಮುಖರಾಗಿದ್ದರೆ, 35ಲಕ್ಷಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಈ ಓಟ ಇನ್ನೂ ನಿಂತಿಲ್ಲ. ಭಾರತ ಎರಡನೇ ಅಲೆಯನ್ನು ಮಾತ್ರ ಕಂಡಿದೆ. ಅನೇಕ ರಾಷ್ಟ್ರಗಳು ಅದಾಗಲೇ ಮೂರು, ನಾಲ್ಕನ್ನು ದಾಟಿ, ಐದನ್ನು ಎದುರಿಸುತ್ತಿವೆ. ಇದೇ ಲೆಕ್ಕಾಚಾರ ಮುಂದುವರೆದರೆ ನಾವು ಸಾಕಷ್ಟು ನೋಡುವುದು ಬಾಕಿ ಇದೆ. ಖುಷಿಯ ಸಂಗತಿ ಎಂದರೆ ಲಸಿಕೆ ಹಾಕಿಸುವ ಗತಿಯೂ ವೇಗವಾಗಿಯೇ ಸಾಗಿದೆ. ಕಳೆದ ಒಂದು ವಾರದಲ್ಲಿ ನಾಲ್ಕಕ್ಕೂ ಹೆಚ್ಚು ದಿನ, ಪ್ರತಿದಿನ 20 ಲಕ್ಷದಷ್ಟು ಜನ ಲಸಿಕೆ ಹಾಕಿಸಿಕೊಂಡಿದ್ದರೆ ಎರಡು ದಿನವಂತೂ ಈ ಸಂಖ್ಯೆ 30 ಲಕ್ಷವನ್ನು ದಾಟಿತ್ತು. ಒಟ್ಟು ಲಸಿಕೆ ಹಾಕಿಸಿಕೊಂಡವರ ಸಂಖ್ಯೆ 21 ಕೋಟಿ ದಾಟಿದ್ದು ಜಗತ್ತಿನ ಕಣ್ಣು ಕುಕ್ಕುವಂಥದ್ದು. ದೇಶದ ಜನಸಂಖ್ಯೆಯಲ್ಲಿ ನೂರು ಕೋಟಿಯಷ್ಟು ಮಂದಿ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಅಂದಾಜಿಸಿದರೂ ಅದಾಗಲೇ ಐವರಲ್ಲಿ ಒಬ್ಬರಿಗೆ ಲಸಿಕೆ ಹಾಕಿಸಿದಂತಾಗಿದೆ. ಅಂಕಿ-ಅಂಶಗಳನ್ನೇ ಒಪ್ಪುವುದಾದರೆ ಈ ತಿಂಗಳಲ್ಲಿ ಎಂಟು ಕೋಟಿಯಷ್ಟು ಲಸಿಕೆ ಜನರಿಗೆ ದೊರೆತಿದೆ. ಜೂನ್ ತಿಂಗಳಲ್ಲಿ 11 ಕೋಟಿಯಷ್ಟು ಲಸಿಕೆ ದೇಶದಲ್ಲಿ ಲಭ್ಯವಿರಲಿದೆ. ಅಂದರೆ ದಿನಕ್ಕೆ 38 ಲಕ್ಷದಷ್ಟು ಜನರಿಗೆ ಲಸಿಕೆ ಕೊಡುವಂತಾಗುತ್ತದೆ. ಇದು ನಿಜಕ್ಕೂ ಅಪ್ರತಿಮವಾದ್ದೇ. ಪೊಲಿಯೊ ಲಸಿಕೆಯನ್ನು ದಶಕಗಳಗಟ್ಟಲೆ ಸಕರ್ಾರಗಳು ಕೊಡುತ್ತಲೇ ಇದ್ದವು. ಆದರೆ ಈ ಲಸಿಕೆಯನ್ನು ಕೆಲವೇ ತಿಂಗಳುಗಳಲ್ಲಿ ಜನರಿಗೆ ಕೊಡಿಸುವ ಪ್ರಯತ್ನ ಮಾಡುತ್ತಿರುವುದು ಅಚ್ಚರಿಯಷ್ಟೇ ಅಲ್ಲ, ಕಷ್ಟಸಾಧ್ಯವೂ ಆಗಿತ್ತು. ಈಗಿನ ವೇಗ ನೋಡಿದರೆ ಗುರಿ ಸದ್ಯದಲ್ಲೇ ಇದೆ ಎನಿಸುತ್ತಿದೆ. ಈ ನಡುವೆಯೇ ದೇಶದ ವಿಚಾರದಲ್ಲಿ ನಡೆದಿರುವ ಕೆಲವು ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು.

ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ನಾಮವಿಟ್ಟು ಪರಾರಿಯಾಗಿದ್ದ ಮೆಹೂಲ್ ಚೋಕ್ಸಿ ಆಂಟಿಗ್ವಾದಲ್ಲಿ ತಲೆಮರೆಸಿಕೊಂಡಿದ್ದ. ಭಾರತೀಯ ತನಿಖಾದಳದ ಪ್ರಯತ್ನದಿಂದಾಗಿ ಆತನನ್ನು ಡೊಮಿನಿಕಾ ಪೊಲೀಸರು ಬಂಧಿಸಿ ಕೋಟರ್ಿಗೆ ಹಾಜರು ಪಡಿಸಿದ್ದಾರೆ. ಸಕರ್ಾರ ಕಳಿಸಿದ ಖಾಸಗಿ ಹೆಲಿಕಾಪ್ಟರ್ ಆತನನ್ನು ಹೊತ್ತುಕೊಂಡು ಬರಲು ಸಿದ್ಧವಾಗಿಬಿಟ್ಟಿದೆ. ಅಚ್ಚರಿ ಎಂದರೆ ಇಂತಹ ಸುದ್ದಿಯನ್ನು ಯಾವ ಕಾಂಗ್ರೆಸ್ಸಿನ ಹ್ಯಾಂಡಲ್ಗಳೂ ಟ್ವೀಟ್ ಮಾಡುತ್ತಿಲ್ಲ. ಮಾಡಿದ ಕೆಲವರು ಟ್ವೀಟ್ಗಳನ್ನು ಅಳಿಸಿ ಹಾಕಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಷ್ಟು ದೊಡ್ಡಮೊತ್ತದ ಹಣವನ್ನು ಚೋಕ್ಸಿಗೆ ಕೊಡುವಲ್ಲಿ ಯಾವ ಪಕ್ಷ, ಯಾವ ರಾಜಕಾರಣಿಗಳು ಪಾತ್ರವಹಿಸಿದ್ದಾರೆಂಬುದು ಬೇಗ ಗೊತ್ತಾದಷ್ಟೂ ಒಳಿತೇ. ಹೀಗಾಗಿಯೇ ಅನೇಕ ಪಕ್ಷಗಳ ಪ್ಯಾಂಟು ಒದ್ದೆಯಾಗಿದೆ.
ಕಾಂಗ್ರೆಸ್ಸು ಕೊವಿಡ್ ಅನ್ನು ಚೀನಾ ವೈರಸ್ಸು ಎಂದು ಎಂದಿಗೂ ಕರೆದಿಲ್ಲ. ಆದರೆ ಟೂಲ್ಕಿಟ್ನ ಪ್ರಕಾರ ಭಾರತದಲ್ಲಿ ಹಬ್ಬಿದ ಕೊವಿಡ್ ಎಳೆಯನ್ನು ಇಂಡಿಯನ್ ವೇರಿಯೆಂಟ್ ಎಂದು ಕರೆಯುವ ಧಾವಂತ ಅವರಿಗಿತ್ತು. ಆ ಮೂಲಕ ಭಾರತಕ್ಕೆ ಅವಮಾನ ಮಾಡುವ ಪ್ರಯತ್ನ. ಕಾಂಗ್ರೆಸ್ ತನ್ನ ಈ ಪ್ರಯತ್ನದಲ್ಲಿ ಯಶಸ್ವಿಯಾಗಿದೆ. ಇತ್ತೀಚೆಗೆ ಪಾಕಿಸ್ತಾನದ ಪತ್ರಿಕೆಯೂ ಸೇರಿದಂತೆ ಜಗತ್ತಿನ ಕೆಲವು ಪ್ರಮುಖ ಪತ್ರಿಕೆಗಳು ಪಾಕಿಸ್ತಾನಕ್ಕೆ ಭಾರತದ ಕರೋನಾ ಎಳೆ ಹಬ್ಬಿದೆ ಎಂದೇ ವರದಿ ಮಾಡಿವೆ. ಅಲ್ಲಿಗೆ ಚೀನಾಕ್ಕೆ ಕವರಿಂಗ್ ಫೈರ್ ಕೊಟ್ಟು ಭಾರತವನ್ನೇ ಬೆತ್ತಲು ಮಾಡಬೇಕೆನ್ನುವ ರಾಹುಲ್ನ ಆಸೆ ಈಡೇರಿದಂತಾಯ್ತು.
ಹಾಗಂತ ಭಾರತದ ವಿದೇಶಾಂಗ ಮಂತ್ರಿ ಜೈಶಂಕರ್ ಸುಮ್ಮನಿಲ್ಲ. ಅಮೇರಿಕಾದ ನ್ಯೂಯಾಕರ್್ ಟೈಮ್ಸ್ ಭಾರತದ ಕುರಿತಂತೆ ಸುಳ್ಳು ಸುದ್ದಿ ಹಬ್ಬಿಸುವ ವರದಿಗಳನ್ನು ಪ್ರಕಟಿಸುತ್ತಿದ್ದಾಗ ಅದಕ್ಕೆ ಉತ್ತರವಾಗಿ ‘ಭಾರತ 80 ಕೋಟಿ ಜನಕ್ಕೆ ಉಚಿತ ಊಟ ಕೊಡುತ್ತಿದೆ. 40 ಕೋಟಿ ಜನರ ಖಾತೆಗೆ ನೇರವಾಗಿ ಹಣ ಮುಟ್ಟುವಂತೆ ಮಾಡುತ್ತಿದೆ. ನಮ್ಮ ಮೇಲೆ ಬೆರಳು ತೋರಿಸುತ್ತಿರುವ ಅಮೇರಿಕಾದ ಜನಸಂಖ್ಯೆ 35 ಕೋಟಿಯೂ ಇಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳಿ’ ಎಂದು ಅಮೇರಿಕಾದಲ್ಲಿಯೇ ಚಾಟಿಯೇಟು ಬೀಸಿದ್ದಾರೆ.
ಈ ಮಧ್ಯೆಯೇ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನಗಳಲ್ಲಿ ಇರುವ ಅಲ್ಪಸಂಖ್ಯಾತರು ಭಾರತದ ನಾಗರೀಕತೆಗಾಗಿ ಅಜರ್ಿ ಸಲ್ಲಿಸಬಹುದು ಎಂದು ಭಾರತ ಸಕರ್ಾರ ಕರೆಕೊಟ್ಟಿದೆ. ಈ ಹಿಂದೆಯೇ ಹೀಗೊಂದು ಕಾನೂನು ತಂದು ಅಕ್ಕಪಕ್ಕದ ರಾಷ್ಟ್ರಗಳಲ್ಲಿ ಮುಸಲ್ಮಾನರ ಹಿಂಸೆಗೆ ನೊಂದಿರುವ ಹಿಂದೂ, ಸಿಖ್, ಬೌದ್ಧ, ಜೈನ, ಈಸಾಯಿ, ಪಾಸರ್ಿಗಳ ಜನರಿಗೆ ಭಾರತದ ನಾಗರೀಕತೆ ಕೊಡುವ ಪ್ರಯತ್ನವನ್ನು ಸಕರ್ಾರ ಮಾಡಿತ್ತಲ್ಲ, ಇದು ಅದರ ಮುಂದುವರಿದ ಭಾಗವಾಗಿದೆ. ಅಂದರೆ ಕರೋನಾ ಸಂಕಟದ ಕಾಲದಲ್ಲಿ ಕೇಂದ್ರವನ್ನು ಹೆದರಿಸಿ, ಬೆದರಿಸಿ ಈ ಪ್ರಯತ್ನಗಳಾಗದಂತೆ ನೋಡಿಕೊಳ್ಳಬೇಕೆಂಬ ಕಾಂಗ್ರೆಸ್ಸಿನ ಎಲ್ಲ ಆಶಾಭಾವನೆಗೂ ತಣ್ಣೀರೆರಚಿದಂತಾಗಿದೆ. ಕರೋನಾ ಗೆದ್ದು ಭಾರತ ಮೊದಲಿಗಿಂತ ಹೆಚ್ಚು ಸಶಕ್ತವಾಗುವ ಲಕ್ಷಣಗಳನ್ನು ತೋರುತ್ತಿದೆ.
ರಾಮ್ದೇವ್ ಬಾಬಾ ಆಲೋಪತಿ ವೈದ್ಯರುಗಳನ್ನು ಟೀಕಿಸಿದ್ದು ಬಹಳ ದೊಡ್ಡ ಸುದ್ದಿಯಾಗಿತ್ತು. ಸ್ವತಃ ರಾಷ್ಟ್ರದ ಆರೋಗ್ಯ ಸಚಿವರು ರಾಮ್ದೇವ್ ಬಾಬಾರವರಿಗೆ ಪತ್ರ ಬರೆದು ಕರೋನಾ ಹೋರಾಟದಲ್ಲಿ ಈ ವೈದ್ಯರ ಪಾತ್ರವನ್ನು ನಿರ್ಲಕ್ಷಿಸುವಂತಿಲ್ಲ ಎಂದು ಸಮಾಧಾನ ಮಾಡಿದ್ದರು. ರಾಮ್ದೇವ್ ಬಾಬಾ ಆರಂಭದಲ್ಲಿ ಆಲೋಪತಿ ವೈದ್ಯರುಗಳ ಕ್ಷಮೆ ಯಾಚಿಸಿದ್ದರಾದರೂ ಆನಂತರ ತಿರುಗಿ ಬಿದ್ದರು. ಆದರೆ ಕಾಲಕ್ರಮದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ನ ಅಧ್ಯಕ್ಷ ಡಾ. ಜೈಲಾಲ್ ರಾಮ್ದೇವ್ ಬಾಬಾ ವಿರುದ್ಧ ತಿರುಗಿಬಿದ್ದು ದೊಡ್ಡ ಸದ್ದು ಮಾಡಿದರು. ಆಗಲೇ ಐಎಮ್ಎ ಸಕರ್ಾರೀ ಸಂಸ್ಥೆಯಲ್ಲವೆಂದು, ಅದಕ್ಕೆ ಆರೋಗ್ಯಕ್ಕೆ ಸಂಬಂಧಪಟ್ಟ ಯಾವ ನಿರ್ಣಯವನ್ನು ಕೈಗೊಳ್ಳುವ ಅಧಿಕಾರವಿಲ್ಲವೆಂದೂ ತಿಳಿದುಬಂತು. ಭಾರತದಲ್ಲಿ ಅಧಿಕೃತವಾಗಿ ಇದಕ್ಕಾಗಿ ಇರುವ ಸಂಸ್ಥೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ. ಐಎಮ್ಎ ಬ್ರಿಟೀಷರ ಕಾಲದ ಸಂಸ್ಥೆಯಾಗಿದ್ದು ಇದರ ಈಗಿನ ಅಧ್ಯಕ್ಷ ಕ್ರಿಶ್ಚಿಯನ್ ಮಿಷನರಿಗಳೊಂದಿಗೆ ನಿಕಟವಾದ ಸಂಪರ್ಕ ಹೊಂದಿರುವುದಲ್ಲದೇ ಮಿಷನರಿಗಳ ಪತ್ರಿಕೆಯೊಂದಕ್ಕೆ ಭಾರತದಲ್ಲಿ ವೈದ್ಯರಾಗಲು ಬಯಸುವ ಪ್ರತಿಯೊಬ್ಬರನ್ನೂ ಕ್ರಿಶ್ಚಿಯನ್ನರಾಗಿಸಬೇಕೆಂಬುದೇ ತನ್ನ ಮುಖ್ಯ ಉದ್ದೇಶ ಎಂದು ಹೇಳಿಕೊಂಡು ಸಿಕ್ಕುಬಿದ್ದಿದ್ದಾರೆ. ದ್ವಾರಕಾ ಜಿಲ್ಲಾ ನ್ಯಾಯಾಲಯದಲ್ಲಿ ಈ ಕುರಿತಂತೆ ವಿಚಾರಣೆಯನ್ನೂ ಎದುರಿಸುತ್ತಿದ್ದಾರೆ. ರಾಮ್ದೇವ್ ಬಾಬಾ ವಿರುದ್ಧ ದೊಡ್ಡ ಸದ್ದು ಮಾಡಲು ಯತ್ನಿಸಿ ಆಸ್ಟಿನ್ ಜೈಲಾಲ್ ತಾವೇ ಹಳ್ಳಕ್ಕೆ ಬಿದ್ದಿದ್ದಾರೆ. ರಾಮ್ದೇವ್ ಬಾಬಾ ಆಲೋಪತಿ ವೈದ್ಯರುಗಳಿಗೆ ಒಂದಷ್ಟು ಸವಾಲುಗಳನ್ನೆಸೆಯುವ ಮೂಲಕ ಅವರನ್ನು ಕಟ್ಟಿಹಾಕಿಬಿಟ್ಟಿದ್ದಾರೆ.
ಚೀನೀ ವೈರಸ್ಸಿನ ಈ ತಾಂಡವನೃತ್ಯದ ನಡುವೆಯೇ ಸಂತಸದ ಸುದ್ದಿ ಕಂಡುಬಂದಿದೆ. ಏಪ್ರಿಲ್ ತಿಂಗಳೊಂದರಲ್ಲೇ 12500ರಷ್ಟು ಕಂಪೆನಿಗಳು ನೊಂದಾಯಿಸಿಕೊಳ್ಳಲ್ಪಟ್ಟಿವೆ. ಇದರಲ್ಲಿ ಸುಮಾರು 850 ಏಕವ್ಯಕ್ತಿ ಕಂಪೆನಿಗಳಾಗಿದ್ದು ಒಟ್ಟಾರೆ ಒಂದೂವರೆ ಸಾವಿರಕೋಟಿ ರೂಪಾಯಿಯ ಬಂಡವಾಳ ಹೂಡಿಕೆಯಾಗಿದೆ. ನೆನಪಿರಲಿ, ಏಪ್ರಿಲ್ ತಿಂಗಳಲ್ಲಿ ಕರೋನಾ ತೀವ್ರಗತಿಯಲ್ಲಿ ಏರುತ್ತಿತ್ತು. ಈ ಹೊತ್ತಿನಲ್ಲಿಯೇ ಲಡಾಕ್ನ ಹಳ್ಳಿ-ಹಳ್ಳಿಗರಿಗೆ ವಿದ್ಯುತ್ ತಂತಿಯನ್ನು ಎಳೆಯುವ 1300 ಕೋಟಿಗೂ ಹೆಚ್ಚು ಮೊತ್ತದ ಯೋಜನೆಯನ್ನು ಕೇಂದ್ರಸಕರ್ಾರ ಅನುಮೋದಿಸಿದೆ. ಕರೋನಾದ ನಡುವೆಯೂ ಭಾರತ ಪ್ರಗತಿಯ ಓಟದಲ್ಲಿ ಮುಲಾಜಿಲ್ಲದೇ ಹೆಜ್ಜೆ ಹಾಕುತ್ತಿರುವುದೇ ಜಗತ್ತಿನ ಅಚ್ಚರಿಗೆ ಕಾರಣವಾಗಿರುವುದಲ್ಲದೇ ಭಾರತದ ಅಭಿವೃದ್ಧಿ ನಿಸ್ಸಂಶಯವಾಗಿ ಆಗಲಿದೆ ಎಂಬ ವಿಶ್ವಾಸದಿಂದ ಅವರು ಹೂಡಿಕೆಯನ್ನೂ ಹೆಚ್ಚು ಮಾಡುತ್ತಿರುವುದು. ಫಾರಿನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಮತ್ತು ಫಾರಿನ್ ಇನ್ಸ್ಟಿಟ್ಯೂಷನಲ್ ಇನ್ವೆಸ್ಟ್ಮೆಂಟ್ಗಳು ತೀವ್ರಗತಿಯಲ್ಲಿ ಏರಿರುವುದೇ ಇದಕ್ಕೆ ಸಾಕ್ಷಿ.
ಚೀನಾಕ್ಕೆ ಇದೇ ಕಿರಿಕಿರಿ. ನರೇಂದ್ರಮೋದಿ ಸಕರ್ಾರ ಆಂತರಿಕವಾಗಿ ಇಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾಗ್ಯೂ ಗಡಿಯಲ್ಲಿ ಸೇನೆ ಒಂದಿನಿತೂ ಅಲುಗಾಡುತ್ತಿಲ್ಲ. ತನ್ನೆಡೆಯಲ್ಲಿ ಸಾಕಷ್ಟು ಸೈನ್ಯ ಜಮಾವಣೆ ಮಾಡುತ್ತಾ ಗ್ಯಾಲ್ವಾನ್ನಲ್ಲಾದ ಅವಮಾನವನ್ನು ತೀರಿಸಿಕೊಳ್ಳಲು ಚೀನಾ ಹವಣಿಸುತ್ತಿದ್ದರೆ ಭಾರತ ಮೈಯೆಲ್ಲಾ ಕಣ್ಣಾಗಿ ಕಾವಲು ಕಾಯುತ್ತಿದೆ. ಚೀನಿಯರನ್ನು ನಂಬಲು ಸಾಧ್ಯವಿಲ್ಲ. ಭಾರತದ ಅತ್ಯಂತ ಹಳೆಯ ಮತ್ತು ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು ಬೆಳೆಸಿದ್ದ ಕಾಂಗ್ರೆಸ್ ಪಾಟರ್ಿಯನ್ನೇ ತನ್ನ ತೆಕ್ಕೆಗೆ ಸೆಳೆದುಕೊಂಡ ಚೀನಾಕ್ಕೆ ಭಾರತದಲ್ಲಿ ಯಾವ ಸಾಧನೆ ಮಾಡುವುದೂ ಕಷ್ಟವೇನಲ್ಲ. ಆದರೆ ಭಾರತೀಯ ಸೈನಿಕರ ಸಾಮಥ್ರ್ಯ ಮತ್ತು ಅವರಿಗೆ ಕೇಂದ್ರಸಕರ್ಾರದಿಂದ ಸಿಕ್ಕಿರುವ ಸ್ವಾತಂತ್ರ್ಯ ಇವೆರಡೂ ಭೀತಿ ಹುಟ್ಟಿಸಿರುವುದಂತೂ ನಿಜ. ಹೀಗಾಗಿಯೇ ಈ ಬಾರಿ ಹೊಡೆದು ಓಡಿಬಿಡುವ ತಯಾರಿಯಲ್ಲಿ ಅವರಿದ್ದಾರೆ ಎಂದೇ ಹೇಳಲಾಗುತ್ತಿದೆ. ಭಾರತದ ಸೈನಿಕ ಮುಖ್ಯಸ್ಥರು ಪದೇ ಪದೇ ಗಡಿಗೆ ಭೇಟಿ ಕೊಡುತ್ತಿರುವುದು ಚೀನಿಯರಲ್ಲಿ ಭೀತಿಯನ್ನಂತೂ ಹುಟ್ಟಿಸಿದೆ.
ಟ್ವಿಟರ್ ವಾರ್ ಕೂಡ ಈ ಹೊತ್ತಿನಲ್ಲಿಯೇ ಸಾಕಷ್ಟು ನಡೆದಿದೆ. ಒಂದಷ್ಟು ಫ್ಯಾಕ್ಟ್ ಚೆಕರ್ಗಳ ಮಾಹಿತಿಯ ಆಧಾರದ ಮೇಲೆ ಟ್ವಿಟರ್ ಕಾಂಗ್ರೆಸ್ಸಿನ ಪರವಾಗಿ ನಡೆಸುತ್ತಿದ್ದ ಅಜೆಂಡಾಗಳನ್ನು ಆಳುವ ಪಕ್ಷ ಬಯಲಿಗೆ ತಂದನಂತರ ಟ್ವಿಟರ್ ಪತರಗುಟ್ಟಿರುವುದಂತೂ ನಿಜ. ಅಭಿವ್ಯಕ್ತಿ ಸ್ವಾತಂತ್ರ್ಯ ನೆಪದಲ್ಲಿ ಯಃಕಶ್ಚಿತ್ ಕಂಪೆನಿಯೊಂದು ಪ್ರಜಾಪ್ರಭುತ್ವವುಳ್ಳ ರಾಷ್ಟ್ರವೊಂದಕ್ಕೆ ನೀತಿ-ನಿಯಮಗಳನ್ನು ಬೋಧಿಸುವುದನ್ನು ಸಹಿಸಲು ಸಾಧ್ಯವೇ ಇಲ್ಲ. ಸಕರ್ಾರ ಈ ಹಿನ್ನೆಲೆಯಲ್ಲಿಯೇ ಸಾಮಾಜಿಕ ಜಾಲತಾಣಗಳ ಮೇಲೆ ಚೌಕಟ್ಟನ್ನು ಹಾಕಲು ನಿರ್ಧರಿಸಿತು. ಕಾಂಗ್ರೆಸ್ಸು ಈ ಇಡಿಯ ಪ್ರಕರಣವನ್ನು ತನಗೆ ಬೇಕಾದಂತೆ ಬಳಸಿಕೊಳ್ಳಲು ದೆಹಲಿಯ ಪೊಲೀಸರಿಗೆ ದೂರುಕೊಟ್ಟು ಸಿಕ್ಕುಹಾಕಿಕೊಂಡುಬಿಟ್ಟಿತು. ಏಕೆಂದರೆ ದೆಹಲಿಯ ಪೊಲೀಸರು ಕೇಂದ್ರಸಕರ್ಾರದ ಅಡಿಯಲ್ಲಿ ಬರುತ್ತಾರೆಂಬ ಸಾಮಾನ್ಯ ಕಲ್ಪನೆಯೂ ಅವರಿಗಿರಲಿಲ್ಲ. ಆನಂತರ ಛತ್ತೀಸ್ಘಡದಲ್ಲಿ ದೂರು ದಾಖಲಿಸಿ ಭಾಜಪದವರನ್ನು ವಿಚಾರಣೆ ನಡೆಸಬೇಕೆಂಬ ಪ್ರಯತ್ನ ಮಾಡಿತಾದರೂ ಅಷ್ಟರೊಳಗೆ ಈ ಅವಕಾಶವನ್ನು ಬಳಸಿಕೊಂಡು ದೆಹಲಿಯ ಪೊಲೀಸರು ಟ್ವಿಟರ್ ಕಾಯರ್ಾಲಯಕ್ಕೆ ನೊಟೀಸು ಜಾರಿ ಮಾಡಿದ್ದಲ್ಲದೇ ನ್ಯಾಯಾಲಯಕ್ಕೂ ಎಳೆತಂದರು. ಇನ್ನೊಂದು ಅಚ್ಚರಿಯೇನು ಗೊತ್ತೇ? ದೇಶಕ್ಕೆ ಅನ್ಯಾಯ ಮಾಡಿದ ದರೋಡೆಕೋರರಿರಲಿ, ಕ್ರಿಮಿನಲ್ ಮೊಕದ್ದಮೆಯನ್ನು ಎದುರಿಸುತ್ತಿರುವವರಿರಲಿ ಅಥವಾ ದೇಶವಿರೋಧಿಯಾದ ಇಂತಹ ಸಂಸ್ಥೆಯೇ ಇರಲಿ ನ್ಯಾಯಾಲಯದಲ್ಲಿ ಅವರನ್ನು ಸಮಥರ್ಿಸಿಕೊಳ್ಳಲು ಧಾವಿಸಿ ಬರುವುದೇ ಕಾಂಗ್ರೆಸ್ಸಿನ ಕೆಲವು ವಕೀಲ ನಾಯಕರು. ಇವರ ಹಳೆಯ ಸಂಬಂಧಗಳನ್ನೊಮ್ಮೆ ದೆಹಲಿ ಪೊಲೀಸರೇ ಕೆದಕಿ ತೆಗೆಯುವುದೊಳಿತು. ಸಕರ್ಾರ ಟ್ವಿಟರ್ಗೆ ಬರೆದ ಎಚ್ಚರಿಕೆಯ ಪತ್ರ ಅನೇಕರಿಂದ ಪ್ರಶಂಸೆಗೊಳಗಾಯ್ತು. ಅವರೊಂದು ಸಾಮಾನ್ಯ ಕಂಪೆನಿ ಎನ್ನುವುದನ್ನು ನೆನಪಿಸಿಕೊಟ್ಟಿತಲ್ಲದೇ ನ್ಯಾಯಾಲಯದ ಕಟಕಟೆಯಲ್ಲಿ ಅವರನ್ನು ಸಮರ್ಥವಾಗಿ ಎದುರಿಸುವ ಕೆಲಸಕ್ಕೂ ಸಜ್ಜಾಯ್ತು. ಸರಿಸುಮಾರು ಇದೇ ವೇಳೆಗೆ ರಷ್ಯಾದಲ್ಲಿ ಟ್ವಿಟರ್ಗೆ ದೊಡ್ಡಮೊತ್ತದ ದಂಡವನ್ನು ಹಾಕಲಾಯ್ತು. ಪಶ್ಚಿಮದ ಕೆಲವು ರಾಷ್ಟ್ರಗಳು ಟ್ವಿಟರ್ನ ಏಕಚಕ್ರಾಧಿಪತ್ಯದ ಬಯಕೆಯ ವಿರುದ್ಧ ಸಟೆದು ನಿಂತಿತು.
ಅದು ಹಾಗೆಯೇ. ಹುವೈನ ವಿರುದ್ಧ ಭಾರತ ತಿರುಗಿ ಬಿದ್ದೊಡನೆ ಜಗತ್ತಿನ ಅನೇಕ ರಾಷ್ಟ್ರಗಳು ಅನುಸರಿಸಿದವು. ಚೀನಾದ ಕಂಪೆನಿಗಳನ್ನು ಭಾರತ ಬಹಿಷ್ಕರಿಸಿದ ನಂತರ ಅನೇಕ ರಾಷ್ಟ್ರಗಳಿಗೆ ಧೈರ್ಯ ಬಂತು. ಮತ್ತೀಗ ಟ್ವಿಟರ್ನ ಸರದಿ. ಅದರ ಸ್ಥಾನವನ್ನು, ಯೋಗ್ಯತೆಯನ್ನು ಸೂಕ್ತವಾಗಿ ತಿಳಿಸಿಕೊಡುವ ಹೊಣೆಗಾರಿಕೆ ನಮ್ಮದ್ದಿದೆ.
ಎಲ್ಲಕ್ಕಿಂತಲೂ ಕೆಟ್ಟ ಸುದ್ದಿ ಎಂದರೆ ಪಿಎಮ್ ಕೇರ್ಸ್ನ ಕುರಿತಂತೆ ಗುರುತರ ಆರೋಪಗಳನ್ನು ಮಾಡಿದ್ದ ರಾಣಾ ಅಯೂಬ್ ಕರೋನಾ ಹೊತ್ತಲ್ಲಿ ಸೇವೆ ಮಾಡುತ್ತೇನೆಂಬ ಪೋಸುಕೊಟ್ಟು ಬೇರೆ-ಬೇರೆ ರಾಷ್ಟ್ರಗಳಿಂದ ಲಕ್ಷಾಂತರ ರೂಪಾಯಿ ನಿಧಿ ಸಂಗ್ರಹಿಸಿದ್ದಳು. ಆದರೆ ಕಾನೂನು ತೊಡಕುಗಳಿವೆ ಎನ್ನುವ ಕಾರಣಕ್ಕೆ ಆಕೆ ಆ ಹಣವನ್ನು ಮರಳಿಸಬೇಕಾಗಿ ಬಂತು. ಈ ಹಿಂದೆಯೂ ಈಕೆಯಂಥ ಅನೇಕರು ಬೇರೆ-ಬೇರೆ ಸಂದರ್ಭಗಳಲ್ಲಿ ನಿಧಿ ಸಂಗ್ರಹಿಸಿ ತಮ್ಮ ವೈಯಕ್ತಿಕ ಖಚರ್ುಗಳಿಗೆ ಬಳಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಕರೋನಾ ಹೊತ್ತಲ್ಲೂ ಇವರುಗಳ ಈ ವರ್ತನೆ ನಿಜಕ್ಕೂ ಅಸಹ್ಯ ಹುಟ್ಟಿಸುವಂಥದ್ದು.
ಪ್ರಧಾನಮಂತ್ರಿ ನರೇಂದ್ರಮೋದಿಯವರು ಪಿಎಮ್ ಕೇರ್ಸ್ ನಿಧಿಗೆ ಬಂದ ಹಣವನ್ನು ಕರೋನಾದಲ್ಲಿ ತಂದೆ-ತಾಯಿಯರನ್ನು ಕಳಕೊಂಡ ಮಕ್ಕಳ ಆರೈಕೆಗೆ, ಅಧ್ಯಯನಕ್ಕೆ ಬಳಸಬೇಕು ಎಂದು ಹೇಳಿ ರಾಷ್ಟ್ರದ ಮನ ಗೆದ್ದುಬಿಟ್ಟಿದ್ದಾರೆ. ಒಂದೆಡೆ ಕರೋನಾ ಇಳಿಮುಖವಾಗುತ್ತಿದ್ದರೆ ಮತ್ತೊಂದೆಡೆ ರಾಷ್ಟ್ರವನ್ನು ಕಟ್ಟುವ ಕಾಯಕ ಹಿಂದೆಂದಿಗಿಂತಲೂ ಜೋರಾಗಿ ಆರಂಭವಾಗಿಬಿಟ್ಟಿದೆ. ನಿಜಕ್ಕೂ ಮುಂದಿನ ಹೋರಾಟ ಬಲುದೊಡ್ಡದ್ದು. ನಾವು ಬಲವಾಗಬೇಕಾಗಿದೆ, ರಾಷ್ಟ್ರವನ್ನು ಕಟ್ಟಬೇಕಿದೆ.