ವಿರೋಧಿಸುವುದು ಸರಿ; ಚರ್ಚೆಗೂ ಹೆದರಿದರೆ?

ವಿರೋಧಿಸುವುದು ಸರಿ; ಚರ್ಚೆಗೂ ಹೆದರಿದರೆ?

ಒಂದು ದೇಶಕ್ಕೆ ಒಂದು ಚುನಾವಣೆಯ ಬಗ್ಗೆ ದೇಶದಾದ್ಯಂತ ಚಚರ್ೆ ನಡೆಯುತ್ತಿದೆ. ಅದು ಹೊಸತಲ್ಲವಾದರೂ ನರೇಂದ್ರಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ಅದಕ್ಕೆ ಸಾಕಷ್ಟು ಬಲವನ್ನು ತುಂಬಿದ್ದಾರೆ. ತಮ್ಮ ಅಧಿಕಾರಾವಧಿಯ ಮೊದಲ ಹಂತದಲ್ಲಿಯೇ ಈ ಕುರಿತು ಸಾಕಷ್ಟು ಮಾತನಾಡಿದ್ದ ಅವರು ಈಗ ಮತ್ತೆ ವೇಗ ತುಂಬುತ್ತಿದ್ದಾರೆ. ಸಂವಿಧಾನ ದಿವಸದಂದು ಮಾಡಿದ ಭಾಷಣದಲ್ಲೂ ಮೋದಿಯವರು ಈ ಕುರಿತ ಚಚರ್ೆಯನ್ನು ಮಾಡುವಂತೆ ಎಲ್ಲರನ್ನೂ ಕೇಳಿಕೊಂಡಿದ್ದರು. ಜೊತೆಗೆ ಎಲ್ಲಾ ರಾಜ್ಯಗಳ ಸಭಾಪತಿಗಳೂ ಸದನವನ್ನು ಒಂದು ದಿನಕ್ಕಾಗಿಯಾದರೂ ಇದಕ್ಕೆ ಮೀಸಲಿಟ್ಟು ಚಚರ್ೆ ನಡೆಸಿ ಎಲ್ಲರೂ ಈ ವಿಚಾರದಲ್ಲಿ ಸಮಭಾಗಿಗಳಾಗುವಂತೆ ಮಾಡಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದರು. ದುರಂತವೇನು ಗೊತ್ತೇ? ಕನರ್ಾಟದಲ್ಲಿ ಈ ಪ್ರಯತ್ನ ಮಾಡಲು ಹೊರಟಾಗ ಪ್ರತಿಪಕ್ಷಗಳು ಚಚರ್ೆಗೇ ನಿರಾಕರಿಸಿ ಅಪರೂಪದ ಸಂದೇಶವನ್ನು ದೇಶಕ್ಕೆ ರವಾನಿಸಿದರು. ವಿರೋಧಿಸುವುದು ಬೇರೆ; ಚಚರ್ೆಯೇ ಮಾಡುವುದಿಲ್ಲವೆಂದರೇನರ್ಥ? ಬಲು ಆಸ್ಥೆಯಿಂದ ಈ ಪ್ರಯತ್ನಕ್ಕೆ ಮುಂದಾಗಿದ್ದ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಈ ವಿಚಾರವನ್ನು ಕೈಚೆಲ್ಲಬೇಕಾಗಿ ಬಂತು ಅಷ್ಟೇ. ಕಳೆದ 75 ವರ್ಷಗಳಿಂದಲೂ ಕಾಂಗ್ರೆಸ್ನದ್ದು ಇದೇ ಸಮಸ್ಯೆ. ಅಭಿವೃದ್ಧಿ ಮುಂದಿನ ಹತ್ತು ವರ್ಷಕ್ಕೆ. ಆದರೆ, ದೇಶದ ಲಾಭ-ನಷ್ಟ ನೂರಾರು ವರ್ಷಗಳಿಗೆ ವಿಸ್ತರಿಸಬಲ್ಲಂಥವು ಎಂಬ ಸಾಮಾನ್ಯಜ್ಞಾನವೂ ಅವರಿಗಿಲ್ಲ. ಅಂಬೇಡ್ಕರರೊಂದಿಗೆ ತಮಗಿದ್ದ ಕಿತ್ತಾಟವನ್ನು ಬದಿಗಿಟ್ಟು, ಮಹಾತ್ಮಾಗಾಂಧೀಜಿ ಅವರನ್ನು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಬೇಕೆಂದು ನೆಹರೂಗೆ ತಾಕೀತು ಮಾಡಿದ್ದರ ಫಲವನ್ನು ಇಂದು ನಾವು ಉಣ್ಣುತ್ತಿದ್ದೇವೆ. ಈ ದೇಶ ಸ್ವಂತ ಕಾಲಮೇಲೆ ನಿಂತು ಇಂಥದ್ದೊಂದು ಸಂವಿಧಾನ ರಚನೆ ಮಾಡಲು ಸಾಧ್ಯವಾಗಿದ್ದು ಆನಂತರವೇ. ನೆಹರೂ ಮಾತು ಕೇಳಿ ಪಶ್ಚಿಮದ ಜೆನಿಂಗ್ನನ್ನೇ ಅಧ್ಯಕ್ಷನನ್ನಾಗಿ ಮಾಡಿಕೊಂಡಿದ್ದರೆ ಅದರ ಅವಮಾನವನ್ನು ಇಂದಿಗೂ ಉಣ್ಣುತ್ತಿರುತ್ತಿದ್ದೆವು. ದೇಶ ನನಗಿಂತ, ನನ್ನ ಪರಿವಾರಕ್ಕಿಂತ, ನನ್ನ ಊರಿಗಿಂತ, ನನ್ನ ಜಾತಿ-ಮತಗಳಿಗಿಂತ, ನಮ್ಮ ಪಕ್ಷ-ಸಂಘಟನೆಗಳಿಗಿಂತ ಬಲುದೊಡ್ಡದ್ದು. ಅದರ ಹಿತಾಸಕ್ತಿಯ ವಿಚಾರ ಬಂದಾಗ ಎರಡನೆಯ ಮಾತೇ ಇರುವಂತಿಲ್ಲ. ಆದರೆ, ಸ್ವಾರ್ಥದಿಂದ ತುಂಬಿರುವ ಈ ಯುಗದಲ್ಲಿ ಈ ಪಾಠವನ್ನು ಹೇಳೋದು ಯಾರಿಗೆ?

ಇಷ್ಟಕ್ಕೂ ಕಾಂಗ್ರೆಸ್ಸಿಗೆ ಇರಬಹುದಾದ ಎಲ್ಲ ಆಕ್ಷೇಪಗಳನ್ನು ಅದಾಗಲೇ ಪಾಲರ್ಿಮೆಂಟರಿ ಸ್ಟಾಂಡಿಂಗ್ ಕಮಿಟಿಯಲ್ಲಿ ಚಚರ್ಿಸಿ ನೀತಿ ಆಯೋಗ ಬಯಲಿಗಿಟ್ಟಿದೆ. ಅವರಿಗೆಲ್ಲರಿಗೂ ಈ ಯೋಜನೆಯನ್ನು ಜಾರಿಗೆ ತರುವಲ್ಲಿ ಇರುವ ತೊಂದರೆಗಳೇ ಬಲುದೊಡ್ಡ ಸಮಸ್ಯೆಯಾಗಿ ಕಾಣುತ್ತಿರುವುದು. ತಪ್ಪೇನಿಲ್ಲ. ಸಹಜವೂ ಕೂಡ. ಒಂದೊಂದು ರಾಜ್ಯಗಳೂ ಒಂದೊಂದು ಸಂದರ್ಭದಲ್ಲಿ ಅಧಿಕಾರ ಹೊಂದಿವೆ. ಒಂದೇ ಕಾಲಕ್ಕೆ ಎಲ್ಲರನ್ನೂ ಚುನಾವಣೆಗೆ ಅಣಿಗೊಳಿಸಬೇಕೆಂದರೆ ಒಂದಷ್ಟು ರಾಜ್ಯಗಳನ್ನು ಅವಧಿಗೆ ಪೂರ್ವ ವಿಸಜರ್ಿಸಬೇಕಾಗುತ್ತದೆ. ಮತ್ತಷ್ಟು ರಾಜ್ಯಗಳಿಗೆ ಹೆಚ್ಚು ಅವಧಿ ನೀಡಬೇಕಾಗುತ್ತದೆ. ಸಂವಿಧಾನದ ವ್ಯಾಪ್ತಿಯಲ್ಲೇ ಬರುವಷ್ಟು ಅವಧಿಯಾದರೆ ಚಿಂತೆಯಿಲ್ಲ. ಆದರೆ ಅದಕ್ಕಿಂತಲೂ ಹೆಚ್ಚಿನ ಅವಧಿ ನೀಡಬೇಕಾದರೆ ಅದು ಕಷ್ಟವಾಗುತ್ತದಲ್ಲ. ಮಾಡುವುದು ಹೇಗೆ? ನೀತಿ ಆಯೋಗ ತಾನು ಪ್ರಕಟಿಸಿರುವ ವಿಸ್ತಾರವಾದ ಪ್ರಬಂಧದಲ್ಲಿ ಇದನ್ನು ಕೂಲಂಕಷವಾಗಿ ಚಚರ್ಿಸಿ ಲೋಕಸಭಾ ಚುನಾವಣೆಯೊಂದಿಗೆ ಅರ್ಧದಷ್ಟು ರಾಜ್ಯಗಳ ಮತ್ತು ಎರಡೂವರೆ ವರ್ಷಗಳ ನಂತರ ಉಳಿದ ಅರ್ಧದಷ್ಟು ರಾಜ್ಯಗಳ ಚುನಾವಣೆ ನಡೆಸುವುದು ಸೂಕ್ತವೆಂದು ಅಭಿಪ್ರಾಯಪಟ್ಟಿದೆ. ಇದರಲ್ಲಿ ಸದಭಿಪ್ರಾಯ-ಭಿನ್ನಾಭಿಪ್ರಾಯ ಯಾವುದಿದ್ದರೂ ಸರಿ ಅದನ್ನು ಚಚರ್ಿಸಬೇಕಲ್ಲ. ಚಚರ್ೆಗೇ ಸಿದ್ಧರಿಲ್ಲವೆಂದರೆ ತಮ್ಮ ವಾದದಲ್ಲಿ ಹುರುಳಿಲ್ಲವೆಂತಲೂ, ಚಚರ್ಿಸಿಬಿಟ್ಟರೆ ಒಪ್ಪಿಕೊಳ್ಳಬೇಕಾಗುತ್ತದೆಂತಲೂ ಗೊತ್ತಿದೆ ಎಂದಾಯ್ತು. ಕಾಂಗ್ರೆಸ್ಸಿಗೆ ಇರೋದು ಇದೇ ಸಮಸ್ಯೆ. ತಮ್ಮ ಇಡಿಯ ಸೌಧವನ್ನು ಅವರು ಕಟ್ಟಿರುವುದು ಸುಳ್ಳುಗಳ ಆಧಾರದ ಮೇಲೆಯೇ. ಚುನಾವಣೆಯ ಹೊತ್ತಲ್ಲಿ ರಫೇಲ್ನ ವಿಚಾರದಲ್ಲಿ ಎಷ್ಟೊಂದು ಸುಳ್ಳುಗಳನ್ನು ಹೇಳಿದರು. ಅನೇಕ ಬಾರಿ ತಕ್ಷಣಕ್ಕೆ ಈ ಸುಳ್ಳುಗಳನ್ನು ಜನ ನಂಬಿಯೂಬಿಡುತ್ತಾರೆ. ಅವರಿಗೆ ಬೇಕಾಗಿರುವುದು ಆ ತಾತ್ಕಾಲಿಕ ಲಾಭವೇ. ಆದರೆ ಸುಪ್ರೀಂಕೋಟರ್ಿನ ಮುಂದೆ ರಫೇಲ್ನ ವಿಚಾರದಲ್ಲಿ ಅದೇ ಕಾಂಗ್ರೆಸ್ಸು ಬೆತ್ತಲಾಗಿ ನಿಂತಾಗ ಅವರು ನಾಚಿ ತಲೆತಗ್ಗಿಸಿಯೂ ಇಲ್ಲ. ಪತ್ರಿಕೆಗಳೂ ಅಷ್ಟೇ ಆರೋಪವನ್ನು ಬಲುಜೋರಾಗಿ ಪ್ರಕಟಿಸಿದವಲ್ಲ, ಅದು ಸುಳ್ಳೆಂದು ಸಾಬೀತಾದಾಗ ಅದು ಸಾಮಾನ್ಯ ವರದಿಯಾಗಿ ಜಾರಿಕೊಂಡುಬಿಟ್ಟಿತ್ತು. ಆರೋಪಗಳ ಹೊತ್ತಲ್ಲಿ ಕಾಂಗ್ರೆಸ್ಸನ್ನು ನಂಬಿದ ಅನೇಕರಿಗೆ ಅದು ಸುಳ್ಳೆಂದು ಗೊತ್ತಾಗಲೇ ಇಲ್ಲ. ನೆನಪಿಡಿ, ಒಂದು ದೇಶ ಒಂದು ಚುನಾವಣೆ ಭಾರತಕ್ಕೆ ಹೊಸತಲ್ಲ. ಸ್ವಾತಂತ್ರ್ಯದ ಹೊಸ್ತಿಲಲ್ಲಿ ಕೇಂದ್ರದ ಮತ್ತು ರಾಜ್ಯಗಳ ಚುನಾವಣೆಗಳೆಲ್ಲ ಜೊತೆಗೇ ನಡೆಯುತ್ತಿದ್ದವು. 1951, 1957 ಮತ್ತು 1962ರಲ್ಲಿ ನಡೆದ ಈ ಸಾರ್ವತ್ರಿಕ ಚುನಾವಣೆಗಳಲ್ಲಿ ಜನ ಎರಡೂ ಸಕರ್ಾರಗಳನ್ನು ಆಯ್ಕೆ ಮಾಡಿದರಲ್ಲ ಅವರಿಗೆ ಯಾವುದೂ ಸಮಸ್ಯೆ ಎನಿಸಿರಲಿಲ್ಲ ಮತ್ತು ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ಸಿಗೆ ಈ ಪ್ರಕ್ರಿಯೆಯನ್ನು ನಡೆಸುವಲ್ಲಿ ಯಾವ ತೊಂದರೆಯೂ ಕಂಡಿರಲಿಲ್ಲ. ಈಗ ಅವರಿಗೆ ಸಮಸ್ಯೆ ಎನಿಸುತ್ತಿದೆ. ಇಷ್ಟಕ್ಕೂ ಈ ರೀತಿ ವ್ಯವಸ್ಥಿತವಾಗಿ ನಡೆಯುತ್ತಿದ್ದ ಚುನಾವಣೆಗಳನ್ನು ಭಿನ್ನ-ಭಿನ್ನ ಕಾರಣಗಳಿಗಾಗಿ ಉಧ್ವಸ್ಥಗೊಳಿಸಿದ್ದು ಇವರೇ. ಆಟರ್ಿಕಲ್ 356ನ್ನು ಮನಸೋ ಇಚ್ಛೆ ಬಳಸಿಕೊಂಡು ಎಷ್ಟು ರಾಜ್ಯ ಸಕರ್ಾರಗಳನ್ನು ಇವರು ಉರುಳಿಸಿ ಬಿಸಾಡಿಲ್ಲ ಹೇಳಿ? ಬೊಮ್ಮಾಯಿ ರಾಜ್ಯ ಮುಖ್ಯಮಂತ್ರಿಯಾಗಿದ್ದಾಗ ಆ ಸಕರ್ಾರವನ್ನು ಉರುಳಿಸಲು ಹೋಗಿ ಸುಪ್ರೀಂಕೋಟರ್ಿನಲ್ಲಿ ಕೈಸುಟ್ಟುಕೊಂಡ ಘಟನೆ ಇಂದಿಗೂ ಚಚರ್ೆಯಾಗುತ್ತದೆ. ಇವರು ಮಾಡಿದ ಈ ತಪ್ಪುಗಳ ಪ್ರಭಾವದಿಂದಾಗಿಯೇ ಅನೇಕ ರಾಜ್ಯ ಸಕರ್ಾರಗಳು ಪ್ರಗತಿಯ ಧಾವಂತವನ್ನು ಬಿಟ್ಟು ಅಧಿಕಾರ ಉಳಿಸಿಕೊಳ್ಳುವತ್ತ ಗಮನ ಹರಿಸುವಂತಾಯ್ತು. ಅದರಿಂದಾಗಿಯೇ ದೇಶದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟ. ಪ್ರತೀವರ್ಷ ದೇಶದಾದ್ಯಂತ ಲೋಕಸಭಾ ಚುನಾವಣೆಯನ್ನು ನಡೆಸಲು ಸಾವಿರಾರು ಕೋಟಿ ರೂಪಾಯಿ ಖಚರ್ಾಗುತ್ತದೆ. 2014ರಲ್ಲಿ ಸಾವಿರ ಕೋಟಿಯನ್ನು ದಾಟಿದ್ದ ಈ ವೆಚ್ಚ, 2019ರಲ್ಲಿ ನಾಲ್ಕು ಸಾವಿರಕೋಟಿಗೆ ಹತ್ತಿರ ಬಂದು ನಿಂತಿತ್ತು. ರಾಜ್ಯಗಳ ಚುನಾವಣೆಯನ್ನೂ ಇದಕ್ಕೆ ಜೋಡಿಸಿದರೆ ಒಟ್ಟಾರೆ 10,000 ಕೋಟಿ ರೂಪಾಯಿಯನ್ನು ಚುನಾವಣೆಗಳಿಗೆಂದೇ ಸಕರ್ಾರಗಳು ವ್ಯಯಿಸುತ್ತವೆ. ಕೇಂದ್ರಸಕರ್ಾರ ಲೋಕಸಭಾ ಚುನಾವಣೆಯ ಖರ್ಚನ್ನು ಭರಿಸುವುದಾದರೂ ಕಾನೂನು ಸುವ್ಯವಸ್ಥೆಯ ಹೊಣೆಗಾರಿಕೆ ರಾಜ್ಯಸಕರ್ಾರಗಳದ್ದೇ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಪ್ರತ್ಯೇಕವಾಗಿ ನಡೆದಷ್ಟೂ ರಾಜ್ಯ ಸಕರ್ಾರಗಳ ವೆಚ್ಚ ಹೆಚ್ಚುತ್ತಲೇ ಹೋಗುತ್ತದೆ. ಚುನಾವಣಾ ಆಯೋಗ ಎಲ್ಲ ಚುನಾವಣೆಗಳನ್ನೂ ಒಟ್ಟಿಗೇ ನಡೆಸಿದರೆ ಈ ವೆಚ್ಚವನ್ನು ನಾಲ್ಕೂವರೆ ಸಾವಿರ ಕೋಟಿಗೆ ಇಳಿಸಬಹುದೆಂಬ ವರದಿ ನೀಡಿದೆ. ಅದರರ್ಥ ಈಗಿನ ವೆಚ್ಚಕ್ಕೆ ಅರ್ಧದರಷ್ಟರಲ್ಲಿ ನಾವು ಇಡಿಯ ಚುನಾವಣಾ ಪ್ರಕ್ರಿಯೆಗಳನ್ನೇ ಮುಗಿಸಿಬಿಡಬಹುದು. ಇಷ್ಟ ಆಗುವುದೋ ಬಿಡುವುದೋ ಚಚರ್ೆ ನಡೆಸಿದರೆ ಗಂಟೇನು ಹೋಗುತ್ತದೆ? ದೇಶದ ಬೊಕ್ಕಸಕ್ಕೆ ಹತ್ತಾರು ಸಾವಿರ ಕೋಟಿ ರೂಪಾಯಿ ಉಳಿತಾಯವಲ್ಲವೇನು? ಅದೂ ಬಡವರ ಅಭಿವೃದ್ಧಿಯ ಯೋಜನೆಗಳಿಗೆ ಬಳಕೆಯಾಗುವುದಾದರೆ ದೇಶದ ಒಳಿತಲ್ಲವೇನು?

ಆದರೆ, ಪ್ರತಿಪಕ್ಷಗಳಿಗೆ ಒಂದು ಭಯವಿದೆ. ಅದೇನೆಂದರೆ ಎರಡೂ ಚುನಾವಣೆಗಳೂ ಜೊತೆಗೇ ನಡೆದರೆ ಮತದಾನದ ರೀತಿ ವಿಶಿಷ್ಟವಾಗಿರುತ್ತದೆ. ಜನರ ಒಲವು ಹೆಚ್ಚು ರಾಷ್ಟ್ರಸಂಬಂಧಿ ವಿಚಾರಗಳತ್ತ ವಾಲಿರುತ್ತದೆ ಅಂತ. ಸಹಜವೂ ಹೌದು. ಭಾರತೀಯ ಸೈನಿಕರು ಪಾಕಿಸ್ತಾನದ ಭಯೋತ್ಪಾದಕರ ದಾಳಿಗೆ ಸಜರ್ಿಕಲ್ ಸ್ಟ್ರೈಕ್ ಮೂಲಕ ಉತ್ತರ ಕೊಟ್ಟಾಗ ಕಾಂಗ್ರೆಸ್ಸು ಅದನ್ನು ಪ್ರಶ್ನಿಸಿದರೆ, ಅನುಮಾನ ವ್ಯಕ್ತಪಡಿಸಿದರೆ ರೊಚ್ಚಿಗೇಳದಿರುತ್ತಾರೇನು? ರಾಜ್ಯದ ಚುನಾವಣೆಯಲ್ಲೂ ಅದರ ಫಲವನ್ನು ಅವರು ಉಣ್ಣಲೇಬೇಕು. ಹಾಗೆಂದೇ ಅವರು ಈ ಆಲೋಚನೆಗೆ ಬೆಚ್ಚಿ ಅದರುತ್ತಿದ್ದಾರೆ. ಆದರೆ ವಾಸ್ತವವೇನು ಗೊತ್ತೇ? ಮತದಾರರು ದಡ್ಡರಲ್ಲ ಅನ್ನೋದು. ಇದೇ ಕಳೆದ ಲೋಕಸಭಾ ಚುನಾವಣೆಯ ವೇಳೆಗೆ ಒರಿಸ್ಸಾದಲ್ಲಿ ವಿಧಾನಸಭಾ ಚುನಾವಣೆಯೂ ನಡೆದಿತ್ತು. ಮೋದಿ ಅಲೆ ಇಡೀ ದೇಶವನ್ನೇ ಕೊಚ್ಚಿಕೊಂಡು ಹೋಗಿದ್ದ ಕಾಲವದು. ಫಲಿತಾಂಶ ಬಂದಾಗ ಒರಿಸ್ಸಾದಲ್ಲಿ ಬಿಜೆಪಿಗೆ ಅತಿಹೆಚ್ಚು ಲೋಕಸಭಾ ಸ್ಥಾನಗಳು ಬಂದಿದ್ದರೆ, ಒರಿಸ್ಸಾ ವಿಧಾನಸಭೆ ಬಿಜು ಜನತಾದಳದ ಪಾಲಾಗಿತ್ತು. ಮೋದಿಯ ಅಲೆ ವಿಧಾನಸಭೆಯನ್ನು ಪೂತರ್ಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಸೋತಿತ್ತು. ದೆಹಲಿಯ ಕಥೆಯೂ ಹಾಗೇ ಅಲ್ಲವೇನು? ಏಳರಲ್ಲಿ ಏಳೂ ಲೋಕಸಭಾ ಸ್ಥಾನಗಳೂ ಮೋದಿಯ ತೆಕ್ಕೆ ಸೇರಿದರೆ, ವಿಧಾನಸಭೆಯ ಬಹುಪಾಲು ಸ್ಥಾನಗಳು ಅವರ ಕೈಯಿಂದ ಜಾರಿಹೋಯ್ತು. ಅಂದರೆ ಜನರನ್ನು ದಡ್ಡರೆಂದು ಭಾವಿಸುವುದೇ ತಪ್ಪು ಎಂದಾಯ್ತು. ಕಳೆದ ಏಳೂ ದಶಕಗಳಿಂದ ಕಾಂಗ್ರೆಸ್ಸು ಭಾರತೀಯರನ್ನು ದಡ್ಡರೆಂದೇ ಬಿಂಬಿಸಿಕೊಂಡು ಬಂದಿದೆ. ಇವರು ಹಳ್ಳಿಗರು, ಅನಕ್ಷರಸ್ಥರು, ಅಜ್ಞಾನಿಗಳು, ಬರದಿದ್ದೆಲ್ಲವನ್ನೂ ಬರೆಸಿಕೊಳ್ಳುವ ಬಿಳಿಯ ಹಾಳೆಗಳು ಎಂದೆಲ್ಲಾ ಹೇಳಿದ್ದು ಅಪ್ಪಟ ಸುಳ್ಳೇ. ನೆನಪು ಮಾಡಿಕೊಳ್ಳಿ, ನೋಟು ಅಮಾನ್ಯೀಕರಣದ ವೇಳೆಗೆ ಭಾರತ ಡಿಜಿಟಲ್ ವಹಿವಾಟಿನ ಕುರಿತಂತೆ ಪ್ರಚಾರ ನಡೆಸುತ್ತಿತ್ತು. ಆಗ ಬಹುತೇಕ ಹಳ್ಳಿಗರೇ ತುಂಬಿಕೊಂಡಿರುವ ಭಾರತದಲ್ಲಿ ಇದು ನಡೆಯಲಾರದು. ಮೊಬೈಲ್ ಬಳಸುವ ಅರಿವಿಲ್ಲದ ಬಡ ಭಾರತೀಯರು ತೊಂದರೆಗೀಡಾಗುತ್ತಾರೆ ಎಂದೆಲ್ಲಾ ಪ್ರಚಾರ ಮಾಡಿತ್ತು ಕಾಂಗ್ರೆಸ್ಸು. ಈಗ ಆಗುತ್ತಿರುವುದೇನು ಗೊತ್ತೇ? ಡಿಜಿಟಲ್ ವಹಿವಾಟು ಎಷ್ಟು ವೇಗವಾಗಿ ಬೆಳೆದಿದೆ ಎಂದರೆ ತರಕಾರಿ ಮಾರುವವ ಕೂಡ ಫೋನ್ಪೇ ಮಾಡಿ ಎನ್ನುತ್ತಾನೆ. ಮೋದಿ ಬರದೇ ಹೋಗಿದ್ದರೆ ಭಾರತೀಯರ ದಡ್ಡತನದ ಕುರಿತಂತೆ ಬಹುಶಃ ನಾವು ನಂಬಿಕೊಂಡೇ ನಡೆದುಬಿಡುತ್ತಿದ್ದೆವೇನೋ. ಅಷ್ಟು ಚಾಣಾಕ್ಷ ಈ ಕಾಂಗ್ರೆಸ್ಸು! ಹೀಗಾಗಿಯೇ ಜನ ರಾಷ್ಟ್ರೀಯಮಟ್ಟದ ಪಾಟರ್ಿಗಳೆದುರಿಗೆ ಸ್ಥಳೀಯ ಸಮಸ್ಯೆಗಳನ್ನು ಬಲಿಕೊಟ್ಟುಬಿಡುತ್ತಾರೆ ಎಂಬುದರಲ್ಲಿ ಯಾವ ಅರ್ಥವೂ ಇಲ್ಲ. ಅಂದರೆ ನಮ್ಮ ರಾಜ್ಯಗಳ ಫೆಡರಲ್ ಸ್ಟ್ರಕ್ಚರ್ ಅಬಾಧಿತವಾಗಿಯೇ ಉಳಿಯಲಿದೆ. ಇಷ್ಟಕ್ಕೂ ಎಮಜರ್ೆನ್ಸಿಯನ್ನು ತಮ್ಮ ಮೂಗಿನ ನೇರಕ್ಕೆ ಹೇರಿದ ಕಾಂಗ್ರೆಸ್ಸು ಇಂದು ಈ ವಿಚಾರಗಳ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವೇ ಸರಿ. ತನ್ನ ಮನಸ್ಸಿಗೆ ಬಂದಂತೆ ನಡೆದುಕೊಂಡ ಹಿಟ್ಲರ್ನನ್ನು ಜರ್ಮನಿಯೇ ಬದಿಗೆ ಸರಿಸಿತು. ಆದರೆ ಎಮಜರ್ೆನ್ಸಿ ಹೇರಿದ ಇಂದಿರಾ ಇಂದಿಗೂ ಕಾಂಗ್ರೆಸ್ಸಿಗರಿಗೆ ಆರಾಧ್ಯದೈವ! ಸುಮ್ಮನೆ ನೆನಪಿಗಿರಲಿ ಅಂತ ಹೇಳಿದೆ ಅಷ್ಟೇ. ಮರೆತಿದ್ದೆ. ಸ್ವಾತಂತ್ರ್ಯದ ಹೊಸ್ತಿಲಲ್ಲಿ ಮೂರು ಚುನಾವಣೆಗಳು ಏಕಕಾಲಕ್ಕೇ ನಡೆದವಲ್ಲ, ಆಗ ರಾಜ್ಯಗಳ ಫೆಡರಲ್ ಸ್ಟ್ರಕ್ಚರ್ಗೆ ಧಕ್ಕೆ ಬಂದಿರಲಿಲ್ಲ ಮತ್ತು ಜನರ ಮನಸ್ಥಿತಿ ರಾಷ್ಟ್ರೀಯ ಪಕ್ಷಗಳಿಗೆ ಮತ ಹಾಕುವಂತದ್ದಾಗಿರುತ್ತದೆ ಎಂಬ ತೊಂದರೆ ಇವರಿಗಿರಲಿಲ್ಲ. ತಾವು ಅಧಿಕಾರದಲ್ಲಿದ್ದರೆ ಯಾವುದಾದರೂ ಸರಿ. ತಾವು ಅಧಿಕಾರ ವಂಚಿತರಾಗಿ ಕುಳಿತರೆ ಎಲ್ಲವೂ ತಪ್ಪೇ.


ಹಾಸ್ಯಾಸ್ಪದವಾದ ಸಂಗತಿ ಏನು ಗೊತ್ತೇ? ಒಂದಷ್ಟು ಸಂಸದರು ಚುನಾವಣೆಯಿಂದಾಗಿ ಉದ್ಯೋಗ ಸೃಷ್ಟಿಯಾಗುತ್ತದೆ ಎನ್ನುತ್ತಿದ್ದಾರೆ. ಜನರನ್ನು ಶಾಶ್ವತವಾಗಿ ತಮ್ಮ ಅಡಿಯಲ್ಲಿರಿಸಿಕೊಳ್ಳುವ ಧಾಷ್ಟ್ರ್ಯದ ಮಾತುಗಳಿವು. ಸಕರ್ಾರದ ಬೊಕ್ಕಸಗಳಿಗೆ ನೇರ ಹತ್ತುಸಾವಿರ ಕೋಟಿ, ಪರೋಕ್ಷ ಐವತ್ತು ಸಾವಿರ ಕೋಟಿಯಷ್ಟಾದರೂ ಕಪ್ಪುಹಣದ ಚಲಾವಣೆ ಮಾಡಿಸಿ ಕೆಲವು ದಿನಗಳ ಕಾಲ ಉದ್ಯೋಗ ಸೃಷ್ಟಿಸುವ ಈ ಪ್ರಕ್ರಿಯೆಯನ್ನು ಹೇಗೆ ಸಮಥರ್ಿಸಿಕೊಳ್ಳುತ್ತಾರೋ ದೇವರೇ ಬಲ್ಲ!

ಆದರೆ ಒಂದಂತೂ ಸತ್ಯ. ಪ್ರಧಾನಿ ನರೇಂದ್ರಮೋದಿ ‘ಸಣ್ಣ ಪ್ರಮಾಣದ ಬದಲಾವಣೆಯತ್ತ ನನ್ನ ಮನಸ್ಸಿಲ್ಲ; ಕಣ್ಣಿಗೆ ರಾಚುವ ವಿಕಾಸದ ಕ್ರಾಂತಿಯಾಗಬೇಕಾಗಿದೆ’ ಎಂದೇ ಎಲ್ಲೆಡೆ ಹೇಳುತ್ತಿದ್ದಾರೆ. ಹೀಗಾಗಿ ಈ ವಿಕಾಸದ ಹಾದಿ ನಿಶ್ಚಿತ. ನಾವೆಲ್ಲರೂ ಸಿದ್ಧರಾಗಬೇಕಿದೆ ಅಷ್ಟೇ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s