ಫ್ರೀಡಂ ಆಫ್ ಎಕ್ಸ್ಪ್ರೆಶನ್ ನಮ್ಗೂ ಐತೆ!!

ಫ್ರೀಡಂ ಆಫ್ ಎಕ್ಸ್ಪ್ರೆಶನ್ ನಮ್ಗೂ ಐತೆ!!

ಬುದ್ಧಿಜೀವಿಗಳು ಫ್ರೀಡಂ ಆಫ್ ಎಕ್ಸ್ಪ್ರಶನ್ ಎಂಬ ತಮ್ಮ ಕೊಡಲಿಯನ್ನು ತಾವೇ ತಮ್ಮ ಕಾಲ ಮೇಲೆ ಹಾಕಿಕೊಂಡಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಅವರಿಟ್ಟ ಯಾವ ಹೆಜ್ಜೆಯೂ ಸಫಲತೆಯ ದಿಕ್ಕಿನತ್ತ ಸಾಗದಿರುವುದು ದೇಶದ ಪಾಲಿಗೆ ವರದಾನವೇ ಸರಿ. ನೆನಪು ಮಾಡಿಕೊಳ್ಳಿ, ಬಿಹಾರದ ಚುನಾವಣೆಗೆ ಮುನ್ನ ಇದ್ದಕ್ಕಿದ್ದಂತೆ ಅಸಹಿಷ್ಣುತೆಯ ಜಪ ಮಾಡುತ್ತ ಹತ್ತಾರು ಸಾಹಿತಿಗಳು ತಮ್ಮ ಕಡಿಮೆ ಮೌಲ್ಯದ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದರು. ಕನರ್ಾಟಕದ ಕೆಲವು ಸಾಹಿತಿಗಳಂತೂ ಹಿಂದಿರುಗಿಸಿದ್ದೇವೆಂಬ ಪತ್ರಿಕಾಗೋಷ್ಠಿ ಮಾಡಿದ್ದಷ್ಟೇ ಬಂತು ಪ್ರಶಸ್ತಿಯಿಂದ ಬಂದ ಹಣವನ್ನು ಮರಳಿ ಕೊಟ್ಟೇ ಇಲ್ಲವೆಂದು ಅನೇಕರು ಲೇವಡಿ ಮಾಡಿದ್ದು ನಿಮಗೆ ನೆನಪಿರಬೇಕು. ಎಡಪಂಥೀಯರೇ ಹಾಗೆ ಸಣ್ಣದ್ದನ್ನು ದೊಡ್ಡದ್ದು ಮಾಡಿ ಜಗತ್ತಿಗೆ ತೋರಿಸಬಲ್ಲರು. ಪ್ರತಿಭಟನೆಗೆ ಐದು ಜನರಿದ್ದರೂ ಐವತ್ತು ಪತ್ರಿಕೆಗಳಲ್ಲಿ ವರದಿ ಬರುವಂತೆ ನೋಡಿಕೊಳ್ಳಬಲ್ಲರು. ಇವರು ಓದಿದ ಕವನ ಕೇಳಲು ನಾಲ್ಕೇ ಜನ ಸಭಿಕರಿದ್ದರೂ 40 ಫೇಸ್ಬುಕ್ ಪೇಜುಗಳಲ್ಲಿ ಅವರ ಬೆನ್ನು ಇವರು ಕೆರೆದು ಪ್ರಚಾರ ಗಿಟ್ಟಿಸಿಕೊಳ್ಳಬಲ್ಲರು. ಆದರೆ ಕಳೆದ ಐದಾರು ವರ್ಷಗಳಲ್ಲಿ ಸಮಾಜ ಜಾಗೃತವಾಗಿ ನಿಂತಿರುವುದರಿಂದ ಇವರ ಆಟ ನಡೆಯುತ್ತಿಲ್ಲ. ಇವರೀಗ ಕೊನೆಯ ಹೋರಾಟ ಸಂಘಟಿಸುತ್ತಿದ್ದಾರೆ. ಕೆಲವರಂತೂ ಅದಾಗಲೇ ಬಸವಳಿದು ಬಿಲವನ್ನು ಸೇರಿಕೊಂಡುಬಿಟ್ಟಿದ್ದಾರೆ.

1

ಇವಿಷ್ಟನ್ನೂ ಏಕೆ ಹೇಳಬೇಕಾಯ್ತೆಂದರೆ ಇತ್ತೀಚೆಗೆ ದೆಹಲಿ ದಂಗೆಯ ಕುರಿತಂತೆ ವಕೀಲೆ ಮೋನಿಕಾ ಅರೋರಾ ಮತ್ತು ಮಿತ್ರರು ಸೇರಿ ಬರೆದಿದ್ದ ‘ದೆಹಲಿ ರಯಟ್ 2020’ ಎಂಬ ಕೃತಿಯನ್ನು ಪ್ರಕಾಶನ ಮಾಡುವ ಭರವಸೆ ಕೊಟ್ಟು ಬಿಡುಗಡೆಗೂ ಸಜ್ಜುಗೊಳಿಸಿದ್ದ ಬ್ಲೂಮ್ಸ್ಬರಿ ಎಂಬ ಪ್ರಕಾಶನ ಸಂಸ್ಥೆ ಏಕಾಕಿ ಈ ಪುಸ್ತಕದ ಪ್ರಕಾಶನದಿಂದ ಹಿಂದೆ ಸರಿದು ಅಚ್ಚರಿಮೂಡಿಸಿಬಿಟ್ಟಿತ್ತು. ಹಾಗಂತ ಇದು ಸಾಮಾನ್ಯವಾದ ಪ್ರಕಾಶನ ಸಂಸ್ಥೆ ಎಂದು ಭಾವಿಸಬೇಡಿ. 1986ರಲ್ಲಿ ಲಂಡನ್ನಲ್ಲಿ ಹುಟ್ಟಿ ಅಮೆರಿಕಾದಲ್ಲೂ ತನ್ನ ಶಾಖೆಗಳನ್ನು ತೆರೆದು ಭಾರತ, ಆಸ್ಟ್ರೇಲಿಯಾ, ಕತಾರ್ ಮೊದಲಾದ ಸ್ಥಳಗಳಿಗೆ ವಿಸ್ತಾರಗೊಂಡಿತ್ತು. ಜಗತ್ತಿನ ಅನೇಕ ಖ್ಯಾತನಾಮರು ಈ ಪ್ರಕಾಶನ ಸಂಸ್ಥೆಗೆ ಬರೆಯುತ್ತಾರೆ. ಹ್ಯಾರಿ ಪಾಟರ್ ಇವರೇ ಹೊರತರೋದು. ಇಂತಹ ಸಂಸ್ಥೆ ಕೆಲವೇ ದಿನಗಳ ಹಿಂದೆ ದೆಹಲಿ ದಂಗೆಯ ಕುರಿತಂತೆ ಎಡಪಂಥೀಯ ವಿಚಾರಧಾರೆಗಳನ್ನು ಹೊತ್ತ ಶಾಹೀನ್ಬಾಗ್ ಫ್ರಮ್ ಪ್ರೊಟೆಸ್ಟ್ ಟು ಎ ಮೂವ್ಮೆಂಟ್ ಎಂಬ ಪುಸ್ತಕವನ್ನು ಪ್ರಕಟಿಸಿತ್ತು. ಅಕ್ಷರಶಃ ಬಲಪಂಥೀಯರ ನಡೆಯನ್ನು, ಕೇಂದ್ರಸಕರ್ಾರವನ್ನು ಖಂಡಿಸುವ ಪುಸ್ತಕವಾಗಿ ಬಂದಿತ್ತು ಇದು. ಆಗ ಯಾವ ಬಲಪಂಥೀಯನೂ ಈ ಪುಸ್ತಕವನ್ನು ವಿರೋಧಿಸಿರಲಿಲ್ಲ. ಎಷ್ಟಾದರೂ ಮಾತನಾಡುವ ಹಕ್ಕು ಇದ್ದೇ ಇದೆಯಲ್ಲಾ; ಇದಕ್ಕೆ ಪ್ರತಿಯಾಗಿ ಮತ್ತೊಂದು ಪುಸ್ತಕವನ್ನೇ ಪ್ರಕಟಿಸಬೇಕೆಂದು ನಿಶ್ಚಯಿಸಿದ ಮೋನಿಕಾ ಅರೋರಾ ಮತ್ತು ಮಿತ್ರರು ದೆಹಲಿಯ ದಂಗೆಗಳಾದ ನಂತರ ಪೊಲೀಸರ ಚಾಜರ್್ಶೀಟನ್ನು, ಪ್ರತ್ಯಕ್ಷದಶರ್ಿಗಳ ವರದಿಗಳನ್ನು ಆಧರಿಸಿ ಘಟನೆ ಆಧಾರಿತ ಕೃತಿಯೊಂದನ್ನು ಬರೆದರು. ಸಹಜವಾಗಿ ಬ್ಲೂಮ್ಸ್ಬರಿ ಅದನ್ನು ಪ್ರಕಟಿಸಲು ಒಪ್ಪಿಗೆಯನ್ನೂ ಕೊಟ್ಟಿತು. ಈ ಬೆಳವಣಿಗೆಯಿಂದ ಅನಾಥರಂತಾದವರು ಮಾತ್ರ ಎಡಪಂಥೀಯರೇ. ಬಲಪಂಥೀಯರು ಇಷ್ಟು ವೇಗವಾಗಿ ಇಷ್ಟು ನಿಖರವಾಗಿ ಪ್ರತ್ಯಾಕ್ರಮಣ ಮಾಡಬಹುದೆಂಬ ಕಲ್ಪನೆಯೂ ಅವರಿಗಿರಲಿಲ್ಲ. ಬಖರ್ಾದತ್ರಿಂದ ಹಿಡಿದು ಸ್ವರಾ ಭಾಸ್ಕರ್ವರೆಗೆ ಸೆಲೆಬ್ರಿಟಿಗಳೆನಿಸಿಕೊಂಡವರೆಲ್ಲ ಅರಚಾಡಿಬಿಟ್ಟರು. ಸಹಜವಾಗಿಯೇ ಕಾಂಗ್ರೆಸ್ಸು ಜೊತೆಗೂಡಿತು. ಇನ್ನು ಕಟ್ಟರ್ಪಂಥಿ ಮುಸಲ್ಮಾನರನ್ನು ಕೇಳುವಂತೆಯೇ ಇಲ್ಲ. ಇವರೆಲ್ಲರಿಗೂ ಎಡಪಂಥೀಯರಂತೂ ವೇದಿಕೆ ನಿಮರ್ಾಣ ಮಾಡಿಯೇಕೊಟ್ಟಿದ್ದರು. ಇವರೆಲ್ಲರ ಪರವಾಗಿ ದನಿ ಎತ್ತಲು ಖ್ಯಾತ ಎಡಪಂಥೀಯ ಇತಿಹಾಸಕಾರ ಡ್ಯಾರಿ ಲಿಂಪಲ್ ತನ್ನ ಪ್ರಭಾವವನ್ನು ಬಳಸಿ ಪ್ರಕಾಶನ ಸಂಸ್ಥೆಯ ಮೇಲೆ ಒತ್ತಡ ಹೇರಿ ಈ ಪುಸ್ತಕವನ್ನು ಹಿಂತೆಗೆದುಕೊಳ್ಳುವಂತೆ ಮಾಡಿಬಿಟ್ಟರು. ಎಡಪಂಥೀಯರ ಪಾಳಯದಲ್ಲಿ ಇದಕ್ಕಿಂತಲೂ ಒಳ್ಳೆಯ ಗಣೇಶಚೌತಿ ಆಚರಣೆಯಾಗಿರಲಿಕ್ಕಿಲ್ಲ! ಬಲಪಂಥೀಯರ ಪಡೆಯಲ್ಲಿ ಈ ಅಚ್ಚರಿಯ ಆಕ್ರಮಣ ಸೂತಕದ ವಾತಾವರಣವನ್ನೇ ನಿಮರ್ಾಣ ಮಾಡಿಬಿಟ್ಟಿತ್ತು. ಹೇಳಿದೆನಲ್ಲ, ಕಳೆದ ಐದಾರು ವರ್ಷಗಳಲ್ಲಿ ಬಲಪಂಥೀಯರು ಎಷ್ಟು ಬಲವಾಗಿ ಜೊತೆಯಾಗಿದ್ದಾರೆಂದರೆ ಬ್ಲೂಮ್ಸ್ಬರಿಯ ವಿರುದ್ಧ ಒಟ್ಟಾಗಿ ನಿಲ್ಲಲು ನಿರ್ಧರಿಸಿಯೇಬಿಟ್ಟರು.

4

ಮುಲಾಜಿಲ್ಲದೇ ಒಬ್ಬೊಬ್ಬರಾಗಿ ಈ ಪ್ರಕಾಶನ ಸಂಸ್ಥೆಗೆ ಕೊಟ್ಟಿದ್ದ ತಮ್ಮ ಪುಸ್ತಕಗಳನ್ನು ಮರಳಿ ಪಡೆಯಲಾರಂಭಿಸಿದರು. ಈ ಘೋಷಣೆಯನ್ನು ಅತ್ಯಂತ ಕ್ಲುಪ್ತಕಾಲದಲ್ಲಿ ಮಾಡಿದವರು ಖ್ಯಾತ ಚಿಂತಕ ಆನಂದ್ ರಂಗನಾಥ್. ಅವರು ವಿಜ್ಞಾನಿಗಳ ಕುರಿತಂತೆ ತಾವು ಬರೆದಿದ್ದ ಪುಸ್ತಕ ಪ್ರಕಾಶನಕ್ಕೆ ಬ್ಲೂಮ್ಸ್ಬರಿ ಕೊಟ್ಟಿದ್ದ ದೊಡ್ಡಮೊತ್ತದ ಮುಂಗಡ ಹಣವನ್ನು ತಕ್ಷಣವೇ ಮರಳಿಸಿ ಸಂಚಲನವುಂಟುಮಾಡಿಬಿಟ್ಟರು! ನಿವೃತ್ತ ಐಎಎಸ್ ಅಧಿಕಾರಿಯಾಗಿರುವ ಸಂಜಯ್ ದೀಕ್ಷಿತ್ ತಮ್ಮ ಪುಸ್ತಕವನ್ನೂ ಮರಳಿ ಪಡೆದರು. ಬರುಬರುತ್ತಾ ಖ್ಯಾತನಾಮರನೇಕರು ಬ್ಲೂಮ್ಸ್ಬರಿಗೆ ತಮ್ಮ ಕೃತಿಗಳನ್ನು ಪ್ರಕಾಶನಕ್ಕೆ ಕೊಡದಿರುವ ಸಂಕಲ್ಪ ಮಾಡುವ ಸುದ್ದಿ ಹೊರಬರುತ್ತಿದ್ದಂತೆ ಬಲಪಂಥೀಯರ ಪಡೆಯೊಳಗೆ ಮಿಂಚಿನ ಸಂಚಾರವಾಯ್ತಲ್ಲದೇ ಎಡಪಂಥೀಯರು ಆಕ್ರಮಣದಿಂದ ಆತ್ಮರಕ್ಷಣೆಯ ಕಡೆಗೆ ವಾಲಿಕೊಂಡರು. ಈ ರೀತಿ ವ್ಯಕ್ತಿಯೊಬ್ಬರ ಮಾತನಾಡುವ ಹಕ್ಕನ್ನು ಕಸಿದುಕೊಳ್ಳುವ ತಮ್ಮ ಈ ನಡೆ ದೀರ್ಘಕಾಲದಲ್ಲಿ ಪ್ರಶ್ನೆಗೊಳಗಾಗುತ್ತದೆ ಎನ್ನುವುದು ಖಾತ್ರಿಯಾಗುತ್ತಿದ್ದಂತೆ ಪ್ರಕಾಶನ ಸಂಸ್ಥೆಯೊಂದು ಪುಸ್ತಕ ಪ್ರಕಾಶಿಸದಿರುವುದು ವಾಕ್ಸ್ವಾತಂತ್ರ್ಯದ ಹರಣವೇ ಅಲ್ಲ ಎಂದು ಅವರುಗಳೆಲ್ಲಾ ಸಮಥರ್ಿಸಿಕೊಳ್ಳಲಾರಂಭಿಸಿದರು. ನಿಸ್ಸಂಶಯವಾಗಿ ಅದು ಅವರ ಮೊದಲ ಸೋಲು. ಇತ್ತ ಸಂಕ್ರಾಂತ್ ಸನು, ಅಂಕುರ್ ಪಾಠಕ್ ಇವರೀರ್ವರೂ ಸೇರಿ ಭಾರತೀಯ ಚಿಂತನೆಗಳ ಪ್ರಚಾರಕ್ಕೆಂದೇ ಆರಂಭಿಸಿದ್ದ ಗರುಡ ಪ್ರಕಾಶನ ದೆಹಲಿ ದಂಗೆಯ ಕುರಿತಂತ ಈ ಪುಸ್ತಕವನ್ನು ಪ್ರಕಾಶಿಸಲು ಮುಂದೆಯೂ ಬಂತು. ಅದಾಗಲೇ ಈ ಕಾರಣದಿಂದಾಗಿಯೇ ಸದ್ದು ಮಾಡಿದ್ದ ಈ ಕೃತಿ ಈಗ ಮಾರುಕಟ್ಟೆಗೆ ಬರಲು ಗರುಡವನ್ನೇರಿ ಕುಳಿತುಕೊಳ್ಳುತ್ತಿದ್ದಂತೆ ನಿಜದ ಬೆಂಕಿ ಹೊತ್ತಿತು. ಪ್ರಕಾಶನಾ ಪೂರ್ವ ಮಾರಾಟ ಭಾರತದಮಟ್ಟಿಗೆ ದಾಖಲೆ ಎನಿಸಿಕೊಂಡಿತು. ಮೊದಲ ಒಂದು ಗಂಟೆಯಲ್ಲಿ ಹತ್ತುಸಾವಿರ ಪುಸ್ತಕಗಳ ಖರೀದಿಗೆ ಜನ ಬೇಡಿಕೆ ಮಂಡಿಸಿದರು. ಈ ಹೊಡೆತವನ್ನು ತಾಳಲಾಗದೇ ಪ್ರಕಾಶನದವರ ವೆಬ್ಸೈಟ್ ಕುಸಿದುಬಿತ್ತು. ಮುಂದಿನ ಎರಡು ಗಂಟೆಗಳಲ್ಲಿ ಪುಸ್ತಕವನ್ನು ಕೊಂಡುಕೊಳ್ಳಬೇಕೆಂದು ಮಿಲಿಯಗಟ್ಟಲೆ ಜನ ವೆಬ್ಸೈಟ್ಗೆ ಭೇಟಿಕೊಡುತ್ತಿರುವುದರ ಸಂಕೇತಗಳು ದೊರೆತವು. ಅನೇಕರು ಇದುವರೆಗೂ ಜೀವಮಾನದಲ್ಲಿ ಪುಸ್ತಕವನ್ನೇ ಓದಿಲ್ಲವಾದರೂ ಈ ಪುಸ್ತಕವನ್ನು ಖರೀದಿಸುತ್ತೇವೆ ಎಂದರು. ಕೆಲವರು ಕೊಡುಗೆಯಾಗಿ ಕೊಡಲು ಈ ಪುಸ್ತಕವನ್ನು ಖರೀದಿಸಲಿದ್ದೇವೆ ಎಂದರು. ಬ್ಲೂಮ್ಸ್ಬರಿ ಈ ಪುಸ್ತಕವನ್ನು ಪ್ರಕಟಿಸಿದ್ದರೆ ಕೆಲವು ಸಾವಿರ ಪ್ರತಿಗಳು ಖಚರ್ಾಗಿ ಕಥೆ ಮುಗಿದೇ ಹೋಗುತಿತ್ತು. ಆದರೀಗ ಹಾಗಲ್ಲ. ಈ ಪುಸ್ತಕದ ಕುರಿತಂತೆ ವ್ಯಾಪಕವಾದ ಚಚರ್ೆಯಾಗಿದೆ. ಬಲಪಂಥೀಯರು ಒಗ್ಗೂಡುವಂತಾಗಿದೆ ಮತ್ತು ಪುಸ್ತಕ ಪ್ರಕಾಶನಕ್ಕೂ ಬಿಳಿಯರ ಗುಲಾಮಿತನ ನಡೆಸಬೇಕಾದ ಅವಶ್ಯಕತೆ ಇಲ್ಲವೆಂಬುದು ಅರಿವಾಗಿದೆ.

ಒಳಿತೇ ಆಯ್ತು ಬಿಡಿ. ಆತ್ಮನಿರ್ಭರತೆಯ ಭಾರತ ನಿಮರ್ಾಣವಾಗೊದು ಹೀಗೇ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s