ಟೀಮ್ ಮೋದಿಯ ಹೆಗಲುಗಳು!!

ಟೀಮ್ ಮೋದಿಯ ಹೆಗಲುಗಳು!!

2

ಟೀಮ್ ಮೋದಿ ವಿಸರ್ಜನೆಗೊಳಿಸುವ ಹೊತ್ತಿನಲ್ಲಿ ನೆನಪಿಸಿಕೊಳ್ಳಲೇಬೇಕಾದ ಒಂದಷ್ಟು ಸಂಗತಿಗಳಿವೆ. ಕೃತಜ್ಞತೆ ಸಲ್ಲಿಸಲೇಬೇಕಾದ ಒಂದಷ್ಟು ಜನರಿದ್ದಾರೆ. ಮೊದಲಿಗೆ ಟೀಮ್ಮೋದಿಯ ರಾಜ್ಯಸಂಚಾಲಕತ್ವವನ್ನು ವಹಿಸಿದ ಶಾರದಾ ಡೈಮಂಡ್. ತಾನು ಕೆಲಸ ಮಾಡುವ ಕಂಪೆನಿಯಿಂದ ವಿಶೇಷ ಕಾರ್ಯಕ್ಕೆ ರಜೆ ಪಡೆದು ಬಂದಿದ್ದ ಶಾರದಾ ಟೀಮ್ ಮೋದಿಯ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದರು. ರಾಜ್ಯದ ಹೆಚ್ಚು ಕಡಿಮೆ ಅರ್ಧಭಾಗವನ್ನು ಖುದ್ದು ಸಂಚರಿಸಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿ ಸುಮಾರು 10,000 ಹೊಸ ತರುಣ-ತರುಣಿಯರನ್ನು ಮತದಾರ ಪಟ್ಟಿಯಲ್ಲಿ ಸೇರಿಸುವಲ್ಲಿ ಆಕೆ ತೋರಿದ ಶ್ರಮ ನಿಜಕ್ಕೂ ಹೆಮ್ಮೆ ಪಡುವಂಥದ್ದು. ಅಷ್ಟೇ ಅಲ್ಲದೇ, ದಾವಣಗೆರೆಯಲ್ಲಿ ಟೀಮ್ಮೋದಿ ಸಂಘಟನೆಯನ್ನು ಹಳ್ಳಿ-ಹಳ್ಳಿಗೂ ತಲುಪಿಸುವಲ್ಲಿ ಆಕೆ ಕೈಗೊಂಡ ಕ್ರಮಗಳೂ ಕೂಡ ಮಾದರಿಯಾದಂಥದ್ದು. ತೀರಾ ಟೀಮ್ಮೋದಿ ವಿಸರ್ಜನೆಯಾಗುವ ಕೆಲವು ದಿನಗಳ ಮುನ್ನ ಇದಕ್ಕೆ ಸಂಬಂಧಪಟ್ಟ ದಾನಿಗಳ ಹಣ, ಪೋಸ್ಟರ್ಗಳ ಮಾರಾಟ, ಇತ್ಯಾದಿ ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿ ಕಾರ್ಯದಲ್ಲಿ ಯಾವುದೇ ಅಡೆ-ತಡೆಗಳಿಲ್ಲದಂತೆ ನೋಡಿಕೊಂಡಿದ್ದು ಆಕೆಯ ಕೆಲಸವೇ!

3

ಸದಾ ಯಾವುದೇ ಚಟುವಟಿಕೆಯನ್ನು ಕೈಗೆತ್ತಿಕೊಂಡಾಗಲೂ ಬೆಂಗಾವಲಾಗಿ ನಿಲ್ಲುವ ಯುವಾಬ್ರಿಗೇಡ್ನ ರಾಜ್ಯಸಂಚಾಲಕ ಚಂದ್ರುವನ್ನು ಈ ಹೊತ್ತಿನಲ್ಲಿ ನೆನಪಿಸಿಕೊಳ್ಳಲೇಬೇಕು. ಟೀಮ್ ಮೋದಿ ಕಟ್ಟುವ ಸಂಕಲ್ಪ ಕೈಗೊಂಡಾಗಿನಿಂದಲೂ ಆತ ಮನೆ-ಮಠ ಬಿಡಿ ತಾನು ಉದ್ಯೋಗ ಮಾಡುತ್ತಿದ್ದ ಕಂಪೆನಿಗೂ ಅದೆಷ್ಟು ಬಾರಿ ರಜಾ ಹಾಕಿದನೋ ದೇವರೇ ಬಲ್ಲ. ರಾಜ್ಯದ ಮೂಲೆ-ಮೂಲೆಯನ್ನು ಸಂಪರ್ಕದಲ್ಲಿಟ್ಟುಕೊಂಡು ಹಳೆ ಮತ್ತು ಹೊಸ ಕಾರ್ಯಕರ್ತರನ್ನು ಜೊತೆಗೂಡಿಸಿಕೊಂಡು ಆಗಬೇಕಾಗಿರುವ ಕೆಲಸಗಳು ಕೈತಪ್ಪಿ ನಡೆಯದಂತೆ ಎಚ್ಚರ ವಹಿಸುವುದು ಆತನದ್ದೇ ಜವಾಬ್ದಾರಿಯಾಗಿತ್ತು. ಪ್ರತಿದಿನವೂ 200 ಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸುತ್ತಾ ಅಲ್ಲಲ್ಲಿ ಟೀಮ್ಮೋದಿಯ ಕಾರ್ಯಕರ್ತರಲ್ಲಿ ಕಂಡುಬರುವ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುತ್ತಾ ಒಟ್ಟಾರೆ ನಾಲ್ಕು ತಿಂಗಳುಗಳ ಕಾಲ ಯಾವ ಗೊಂದಲವೂ ಉಂಟಾಗದಂತೆ ತಂಡವನ್ನು ಮುನ್ನಡೆಸಿಕೊಂಡು ಹೋಗುವಲ್ಲಿ ಆತನ ಶ್ರಮ ಬಲುದೊಡ್ಡದ್ದು. ಚಂದ್ರುವಿನೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿದ ವಿಭಾಗದ, ಜಿಲ್ಲೆಯ, ತಾಲೂಕಿನ, ಹಳ್ಳಿ-ಹಳ್ಳಿಗಳ ಪ್ರತಿಯೊಬ್ಬರಿಗೂ ಟೀಮ್ಮೋದಿಯ ಅಷ್ಟೂ ಶ್ರೇಯ ಸಲ್ಲಬೇಕು!

4

ಮನೆಯನ್ನು ಬಿಟ್ಟು ಸುಮಾರು ಒಂದು ವರ್ಷಗಳಿಂದ ಈ ಚಟುವಟಿಕೆಯ ಪೂರ್ವಭಾವಿ ತಯಾರಿಯೂ ಸೇರಿದಂತೆ ಡಿಜಿಟಲ್ ವಿಭಾಗದ ನಿರ್ವಹಣೆಗೆಂದು ನನ್ನೊಂದಿಗೇ ಬಂದು ಇದ್ದವನು ವರ್ಧಮಾನ. ಆತನ ಕೆಲಸ ಶುರುವಾಗುತ್ತಿದ್ದುದೇ ರಾತ್ರಿ 10 ಗಂಟೆಯ ಮೇಲೆ. ಬೆಳಿಗ್ಗೆ ಆತ ಮಲಗುವಾಗ ಐದಾರು ಗಂಟೆಯಾದರೂ ಆಗಿರುತ್ತಿತ್ತು. ನಮೋ ಸುನಾಮಿಗಾಗಿ, ಟೀಮ್ಮೋದಿಗಾಗಿ, ಯುವಾಲೈವ್ಗಾಗಿ ಆತ ಪಟ್ಟ ಶ್ರಮ ಅವರ್ಣನೀಯ. ಆತ ಮಾಡಿಕೊಟ್ಟ ಒಂದೊಂದೂ ಪೋಸ್ಟರ್ಗಳೂ ಸಾವಿರಾರು ಶೇರ್ಗಳ ಭಾಗ್ಯವನ್ನು ಕಂಡಿವೆ. ಅವನಿಗೂ ಹೃತ್ಪೂರ್ವಕ ಕೃತಜ್ಞತೆಗಳು. ಡಿಜಿಟಲ್ ವಿಭಾಗದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ ಶಿವಮೊಗ್ಗದ ರಾಜೇಶನನ್ನು ಈ ಹೊತ್ತನಲ್ಲಿ ಸ್ಮರಿಸಬೇಕು.

5

ಇನ್ನು ಈ ಹೊತ್ತಿನಲ್ಲಿ ಯುವಾಲೈವ್ ಪೇಜಿಗೆ ಮೋದಿ ಕುರಿತಂತಹ ಲೇಖನಗಳನ್ನು ನಿರಂತರವಾಗಿ ಬರೆಯುತ್ತಾ, ಪ್ರತಿನಿತ್ಯ ಪ್ರೇರಕ ಸುದ್ದಿಗಳನ್ನು ಮಾಡುತ್ತಾ, ಟೀಮ್ಮೋದಿ ಕಾಲ್ಸೆಂಟರಿನ ಜವಾಬ್ದಾರಿಯ ನೊಗವನ್ನು ಹೊತ್ತು ಅನೇಕ ಕಡೆ ಪ್ರಚಾರ ಕಾರ್ಯದಲ್ಲೂ ನೇತೃತ್ವವನ್ನು ವಹಿಸಿ ಕೆಲಸ ಮಾಡಿದ್ದು ಶಿವಮೊಗ್ಗದ ಪ್ರಿಯಾ. ಭಗವಂತ ಅವಳ ಭವಿಷ್ಯವನ್ನೂ ಸುಂದರವಾಗಿಸಲೆಂದು ಪ್ರಾಥರ್ಿಸುವೆ.

6

ನಾನು ಯಾವಾಗಲೂ ಮೆಚ್ಚುವ ಸಮರ್ಥ ಕಾರ್ಯಕರ್ತರಲ್ಲಿ ಧರ್ಮ ಹೊನ್ನಾರಿ ಪ್ರಮುಖ. ಯಾವ ಕೆಲಸವನ್ನು ಕೊಟ್ಟಾಗಲೂ ಆತ ಮರುಮಾತಿಲ್ಲದೇ ಅದನ್ನು ಮಾಡಿದ್ದಾನೆ. ರಥಯಾತ್ರೆಯ ಜವಾಬ್ದಾರಿ ಕೊಟ್ಟಾಗ ಅದನ್ನು ತಯಾರಿ ಮಾಡುವುದರಿಂದ ಹಿಡಿದು ರಾಜ್ಯದ ಸುತ್ತಾಟ ಮುಗಿಯುವವರೆಗೂ ಆತನೇ ನೇತೃತ್ವ ವಹಿಸಿದ್ದ. ಅವನೊಂದಿಗೆ ಮತ್ತೊಂದು ರಥದಲ್ಲಿ ಪ್ರಮೋದ. ಮುಂದೆ ಕಲ್ಬುಗರ್ಿಯಲ್ಲಿ ಓಡಾಟ ನಡೆಸಬಲ್ಲವರು ಬೇಕಾಗಿದ್ದಾರೆ ಎಂದು ಗೊತ್ತಾದೊಡನೆ ಧರ್ಮ ಮರುಮಾತಿಲ್ಲದೇ ಅಲ್ಲಿಗೆ ಹೊರಟು ನಿಂತ. ಅಲ್ಲಿಯೂ ಮೋದಿದೂತರ ನಿರ್ಮಣ ಮಾಡುತ್ತಾ ಗ್ರಾಮ-ಗ್ರಾಮಕ್ಕೆ ಅಲೆಯುತ್ತಾ ಆತ ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸಿದ ರೀತಿ ಮೆಚ್ಚುವಂಥದ್ದು. ಅವನಿಗೆ ಒಳಿತಾಗಲಿ.

7

 

ಟೀಮ್ಮೋದಿಯ ಪೋಸ್ಟರ್ಗಳು, ಸ್ಟಿಕ್ಕರ್ಗಳು, ಡೈರಿ, ಪುಸ್ತಕ, ಕೀಚೈನು, ಇವುಗಳನ್ನು ಮಾಡಿಸಿ ಸಮಾಜಕ್ಕೆ ಮುಟ್ಟಿಸಿ ಆ ಹಣವನ್ನು ಮತ್ತೆ ಅವರಿಂದ ಪಡೆದುಕೊಳ್ಳುವುದು ಸುಲಭದ ಸಂಗತಿಯಲ್ಲ. ನೀಲು ಅದನ್ನು ಸಮರ್ಥವಾಗಿ ನಿಭಾಯಿಸಿ ಕೊನೆಗೆ ಟೀಮ್ಮೋದಿ ವಿಸರ್ಜನೆಯಾಗುವ ವಾರಗಳ ಮೊದಲೇ ಅವೆಲ್ಲವುಗಳ ಲೆಕ್ಕವನ್ನು ಒಪ್ಪಿಸಿದ್ದು ತಂಡದ ಕಾರ್ಯತತ್ಪರತೆಗೆ ಸಾಕ್ಷಿ. ಅವನಿಗೂ ಅವನೊಂದಿಗಿದ್ದ ಮನೋಹರನಿಗೂ ಧನ್ಯವಾದಗಳು.

8

ನನ್ನೊಂದಿಗೆ ಸುದೀರ್ಘಯಾತ್ರೆಯಲ್ಲಿ ಜೊತೆಯಲ್ಲಿದ್ದುಕೊಂಡು ಯಾತ್ರೆಯುದ್ದಕ್ಕೂ ನನ್ನ ಆರೋಗ್ಯ ಹದಗೆಡದಂತೆ ಹೋದ ಕಡೆ ನನ್ನ ಆಹಾರದ ಪತ್ಯ ದಾರಿ ತಪ್ಪದಂತೆ ನೋಡಿಕೊಂಡಿದ್ದಲ್ಲದೇ ಪ್ರತಿಯೊಂದು ಕಾರ್ಯಕ್ರಮವೂ ವ್ಯವಸ್ಥಿತವಾಗಿ ಲೈವ್ ಮೂಲಕ ಜನರಿಗೆ ತಲುಪುವಂತೆ ಮಾಡಿದ್ದು ಪಂಚಾಕ್ಷರಿ. ಬೆಳಗ್ಗಿನಿಂದ ಸಂಜೆ ಕಾರ್ಯಕ್ರಮ ಮುಗಿಸಿ ರಾತ್ರಿಯೆಲ್ಲಾ ಯಾತ್ರೆ ಮಾಡುತ್ತಾ ಮತ್ತೊಂದು ಊರಿಗೆ ಕೊಂಡೊಯ್ಯುತ್ತಿದ್ದುದು ಚಾಲಕ ಕುಮಾರ. ಧನ್ಯವಾದಗಳು ಸಲ್ಲಲೇಬೇಕಲ್ಲವೇ.

9

ಟೀಮ್ಮೋದಿಯ ಕಲ್ಪನೆಗಳು ಶುರುವಾದಾಗಿನಿಂದಲೂ ಹುಬ್ಬಳ್ಳಿಯಿಂದ ಸುಭಾಷ್ ಜಮಾದಾರ್ ನನ್ನೊಂದಿಗೆ ಬಲವಾಗಿ ಆತುಕೊಂಡಿದ್ದರು. ಅನೇಕ ಬಾರಿ ಕಾರ್ಯಕ್ರಮದ ರೂಪುರೇಷೆಗಳನ್ನು ನಿರ್ಣಯಿಸುವಲ್ಲಿ, ಬದಲಾಯಿಸುವಲ್ಲಿ ಸುಭಾಷ್ ಸನ್ಮಿತ್ರರಾಗಿ ಜೊತೆಗೇ ನಿಂತಿದ್ದರು. ಧನ್ಯವಾದ ಸುಭಾಷ್.

ಹೇಳುತ್ತಾ ಹೋದರೆ ಪಟ್ಟಿಯೆಷ್ಟು ದೊಡ್ಡದಾಗುತ್ತದೆ ಎಂದರೆ ಕಣ್ಣಿಗೆ ಕಾಣುವ ಟೀಮ್ಮೋದಿಯ ಹಿಂದೆ ಕಾಣದ ಅಸಂಖ್ಯ ಕೈಗಳು ಗೋಚರವಾಗುತ್ತವೆ. ತಳಮಟ್ಟದಲ್ಲಿ ಹೆಸರನ್ನು ಬಯಸದೇ ವೇದಿಕೆಯನ್ನು ಏರದೇ ಅಣ್ಣ ಎಂದು ಪ್ರೀತಿಯಿಂದ ಸಂಬೋಧಿಸುತ್ತಾ ಈ ಕಾರ್ಯದಲ್ಲಿ ನಿಜಕ್ಕೂ ನನಗಿಂತಲೂ ಸಾವಿರಪಟ್ಟು ಹೆಚ್ಚಾಗಿ ದುಡಿದವರು ಟೀಮ್ಮೋದಿಯ ಕಾರ್ಯಕರ್ತ ಮಿತ್ರರೇ. ಅವರಿಗೆ ಎಷ್ಟು ಧನ್ಯವಾದಗಳನ್ನು ಸಮಪರ್ಿಸಿದರೂ ಅದು ಬಲು ಕಡಿಮೆಯೇ. ನಾಲ್ಕು ತಿಂಗಳುಗಳ ಕಾಲ ಒಟ್ಟಾಗಿ ದುಡಿದ ನಾವು ಮುಂದೆ ಏನು ಸುಮ್ಮನಾಗುವುದಿಲ್ಲ. ಸಮಾಜದಲ್ಲಿ ಮತ್ತೊಂದು ಮಹತ್ವದ ಕೆಲಸದ ಅಲೆಯನ್ನು ಎಬ್ಬಿಸಲು ಇದು ನಮಗೆ ಸ್ಫೂತರ್ಿ ಮತ್ತು ಶಕ್ತಿ ಅಷ್ಟೇ.

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ, ಭಾರತ ಬಲುಬೇಗ ವಿಶ್ವಗುರುವಾಗಲಿ..

ವಂದೇ,
ಚಕ್ರವರ್ತಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s