ವಿವೇಕಾನಂದ ಕೇಂದ್ರಕ್ಕೆ ದಕ್ಕಿದ ವಿಶೇಷ ಗೌರವ!

ವಿವೇಕಾನಂದ ಕೇಂದ್ರಕ್ಕೆ ದಕ್ಕಿದ ವಿಶೇಷ ಗೌರವ!

ಕೇಂದ್ರದ ಪ್ರಯತ್ನದಿಂದಾಗಿಯೇ ಇಂದು ಕನ್ಯಾಕುಮಾರಿಯಲ್ಲಿ ತಮ್ಮನ್ನು ತಾವು ಹಿಂದುವೆಂದು ಕರೆದುಕೊಳ್ಳಬಲ್ಲ ಅನೇಕ ಜನರಿದ್ದಾರೆ. ಹೊಸ-ಹೊಸ ದೇವಸ್ಥಾನಗಳು ನಿಮರ್ಾಣವಾಗುತ್ತಿವೆ. ಕನ್ಯಾಕುಮಾರಿಗೆ ಹೋಗಿ ನಾವು ಇಂದು ದೇವಸ್ಥಾನಗಳನ್ನು ನೋಡುತಿದ್ದೇವೆಂದರೆ ಅದರಲ್ಲಿ ಕೇಂದ್ರದ ಪಾಲು ಬಲುದೊಡ್ಡದ್ದು.

ಗಾಂಧಿ ಶಾಂತಿ ಪ್ರಶಸ್ತಿಯನ್ನು ವಿವೇಕಾನಂದ ಕೇಂದ್ರಕ್ಕೆ ಘೋಷಿಸಿರುವುದು ಬಲು ಹೆಮ್ಮೆಯ ಸಂಗತಿ. ಇಂತಹ ನಿಸ್ವಾರ್ಥ ಸಂಘಟನೆಗಳನ್ನು ಗುರುತಿಸುವ ಪ್ರಯತ್ನ ಹೆಮ್ಮೆ ಪಡಬೇಕಾದಂಥದ್ದೇ. ಕನ್ಯಾಕುಮಾರಿಗೆ ಹೋದವರು ಇಂದು ಅಲ್ಲಿರುವ ಪ್ರಾಚೀನ ಮಂದಿರವನ್ನು ನೋಡುವುದರೊಂದಿಗೆ ಸ್ವಾಮಿ ವಿವೇಕಾನಂದರ ಸ್ಮಾರಕಕ್ಕೂ ಹೋಗಿಯೇ ಇರುತ್ತಾರೆ. ಬಹುಶಃ ಸಮುದ್ರ ಮಧ್ಯದ ಬಂಡೆಗಲ್ಲಿನ ಮೇಲೆ ಹಾಗೊಂದು ಸ್ಮಾರಕ ನಿಮರ್ಿಸುವ ಕಲ್ಪನೆಯನ್ನು ಏಕನಾಥ್ ರಾನಡೆಯವರು ಸಾಕಾರಗೊಳಿಸಿಕೊಳ್ಳದೇ ಹೋಗಿದ್ದರೆ ಇಂದು ಕನ್ಯಾಕುಮಾರಿಗೆ ಕಾಲಿಡುವ ಪರಿಸ್ಥಿತಿಯೇ ಇರುತ್ತಿರಲಿಲ್ಲವೇನೋ. ಈ ವಿಚಾರದಲ್ಲಿ ಕ್ರಿಶ್ಚಿಯನ್ನರು ಅಷ್ಟು ಡೇಂಜರ್ರು! ಕನ್ಯಾಕುಮಾರಿಯ ಬಹುತೇಕ ಬೆಸ್ತರನ್ನು ನೂರಾರು ವರ್ಷಗಳ ಹಿಂದೆಯೇ ಮತಾಂತರಿಸಿ ಕ್ರಿಶ್ಚಿಯನ್ನರಾಗಿಸಿಬಿಟ್ಟಿದ್ದಾರೆ. ಅಷ್ಟಕ್ಕೇ ಅವರಿಗೆ ತೃಪ್ತಿ ಇಲ್ಲ. ಅಲ್ಲಿರುವ ಹಿಂದೂ ಪಳೆಯುಳಿಕೆಗಳನ್ನು ನಾಶಮಾಡಿಬಿಡಬೇಕೆಂಬ ಕಾತರ. 1963ರಲ್ಲಿ ವಿವೇಕಾನಂದರ ಜನ್ಮಶತಮಾನೋತ್ಸವದ ಹೊತ್ತಲ್ಲಿ ಅಲ್ಲೊಂದಷ್ಟು ಜನ ವಿವೇಕಾನಂದರು ಕುಳಿತು ಸಂಕಲ್ಪಗೈದ ಆ ಬಂಡೆಗಲ್ಲನ್ನು ಸ್ಮಾರಕವಾಗಿಸಬೇಕೆಂದು ಆಲೋಚಿಸಿದರು. ತಕ್ಷಣ ಎಚ್ಚೆತ್ತುಕೊಂಡ ಸ್ಥಳೀಯ ಕ್ಯಾಥೋಲಿಕ್ ಚಚರ್ು ಮತಾಂತರಿತ ಬೆಸ್ತರನ್ನು ಬಳಸಿ ಆ ಬಂಡೆಯ ಮೇಲೆ ಶಿಲುಬೆಯನ್ನು ನೆಟ್ಟಿಬಿಟ್ಟಿತು. ಅದೇ ಬಂಡೆಯ ಮೇಲೆ ಶಿವನಿಗಾಗಿ ಸತಿ ತಪಸ್ಸು ಮಾಡಿದ ಕುರುಹುಗಳಿರುವುದರಿಂದ ಹಿಂದೂಗಳಿಗೆ ಅತ್ಯಂತ ಪವಿತ್ರವಾದ ಆ ಬಂಡೆಯ ಮೇಲೆ ಶಿಲುಬೆಯನ್ನು ಒಪ್ಪಲು ಹಿಂದುಗಳು ಖಂಡಿತ ಸಿದ್ಧವಿರಲಿಲ್ಲ. ಅದನ್ನು ಮುರಿದು ಹಾಕಲಾಯ್ತು. ಸಹಜವಾಗಿಯೇ ಉದ್ರಿಕ್ತ ವಾತಾವರಣ ನಿಮರ್ಾಣಗೊಳ್ಳಲಾರಂಭಿಸಿತ್ತು. ಪರಿಸ್ಥಿತಿಯನ್ನು ನಿಭಾಯಿಸಲೆಂದು ಮಧ್ಯಪ್ರವೇಶಿಸಿದ ಸ್ಥಳೀಯ ಆಡಳಿತ ಆ ಇಡಿಯ ಬಂಡೆಯನ್ನು ನಿಷೇಧಿತ ಪ್ರದೇಶವಾಗಿಸ ಹೊರಟರು. ಮಧ್ಯಪ್ರವೇಶಿಸಿದ ದೇವಸ್ಥಾನ ಸತಿಯ ಪದ ಚಿಹ್ನಗಳಿರುವುದರಿಂದ ಆ ಸ್ಥಳ ತಮಗೇ ಸೇರಿದ್ದು ಎಂದಿತು. ಒಟ್ಟಾರೆ ಈ ಪ್ರಕರಣವನ್ನು ವಿವೇಕಾನಂದ ಸ್ಮಾರಕದಲ್ಲೇ ಅಂತ್ಯಗೊಳಿಸಬೇಕೆಂದು ನಿಶ್ಚಯಿಸಿದ ತಂಡವೊಂದು ನಾಗಪುರಕ್ಕೆ ಹೋಗಿ ಗುರೂಜಿಯವರನ್ನು ಭೇಟಿ ಮಾಡಿತು. ಈ ಕೆಲಸಕ್ಕೆ ಆಗ ಸಮರ್ಥರಾಗಿದ್ದವರು ಏಕನಾಥ ರಾನಡೆಯವರೇ.

2

ಸಂಘದ ಪ್ರಚಾರಕರಾಗಿದ್ದ ಏಕನಾಥಜೀ ಆ ಹೊತ್ತಿನಲ್ಲಿಯೇ ಚಟುವಟಿಕೆಗಳಿಂದ ಸ್ವಲ್ಪ ವಿಶ್ರಾಂತಿ ಪಡೆದಿದ್ದರು ಮತ್ತು ವಿವೇಕಾನಂದರ ಕುರಿತಂತೆ ಸಾಕಷ್ಟು ಅಧ್ಯಯನ ನಡೆಸಿ ಒಂದು ಪುಸ್ತಕವನ್ನೂ ರಚಿಸಿದ್ದರು. ಸಹಜವಾಗಿಯೇ ಈ ಕೆಲಸ ಅವರಿಗೆ ಒಲಿದು ಬಂತು. ಕನ್ಯಾಕುಮಾರಿಗೆ ಹೋಗಿ ಎಲ್ಲ ದಾಖಲೆಗಳನ್ನೂ ಅಧ್ಯಯನ ಮಾಡಿದ ಏಕನಾಥ್ಜೀ ಈ ಸವಾಲನ್ನು ಸ್ವೀಕಾರ ಮಾಡಿದರು. ವಿವೇಕಾನಂದರ ಜನ್ಮಶತಮಾನೋತ್ಸವದ ಅವಧಿ ಮುಗಿಯುವುದರೊಳಗಾಗಿ ಅವರು ಈ ಸ್ಮಾರಕದ ಕೆಲಸವನ್ನೂ ಮುಗಿಸಬೇಕಿತ್ತು. ರಾಮಕೃಷ್ಣಾಶ್ರಮದ ಸಂತರನ್ನು, ಚಿನ್ಮಯ ಮಿಷನ್ನಿನ ಚಿನ್ಮಯಾನಂದಜೀಯವರನ್ನು, ಚಿದ್ಭವಾನಂದರನ್ನು, ಸಂಘವನ್ನು ಪೂರ್ಣ ಪ್ರಮಾಣದಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡು ತಮ್ಮ ಕೆಲಸವನ್ನಾರಂಭಿಸಿದರು. ಈ ಇಡಿಯ ಸ್ಮಾರಕವನ್ನು ಕೇಂದ್ರ ಮಟ್ಟದಲ್ಲಿ ವಿರೋಧಿಸುತ್ತಿದ್ದವ ಬಂಗಾಳದ ಶಾಸಕನೆಂದು ಗೊತ್ತಾದ ಮೇಲೆ ಏಕನಾಥ್ಜೀ ಹೊಸ ದಾಳವನ್ನೆಸೆದರು. ಕಲ್ಕತ್ತಾದಲ್ಲೇ ಪತ್ರಿಕಾಗೋಷ್ಠಿಯೊಂದನ್ನು ಕರೆದು ವಿವೇಕಾನಂದರ ಸ್ಮಾರಕವನ್ನು ವಿರೋಧಿಸುತ್ತಿರುವವ ಬಂಗಾಳದ ಸಂಸದ ಎಂದು ಪತ್ರಕರ್ತರ ಮುಂದೆ ವಿವರಿಸಿದರು. ರಾಜಕಾರಣಿಗಳಿಗೆ ಅವರ ಕ್ಷೇತ್ರದಲ್ಲಿ ಏಟು ಬಿದ್ದರೆ ಮಾತ್ರ ಬಿದ್ದಂತೆ. ಉಳಿದೆಲ್ಲಾ ಕಡೆ ಏನಾಗುತ್ತದೆಂಬುದಕ್ಕೆ ಅವರೆಂದಿಗೂ ತಲೆ ಕೆಡಿಸಿಕೊಳ್ಳುವುದಿಲ್ಲ. ಬಂಗಾಳದಲ್ಲಿ ರಂಪಾಟ ಶುರುವಾದ್ದನ್ನು ನೋಡಿ ಸಂಸದ ಗಾಬರಿಗೊಂಡಿದ್ದ. ತಾನಿನ್ನು ವಿರೋಧಿಸುವುದಿಲ್ಲ ಎಂದು ಏಕನಾಥ್ಜಿಯವರಲ್ಲಿ ಅಂಗಲಾಚಿದ್ದ. ಅಲ್ಲಿಗೆ ಕೆಲಸ ಸುಗಮಗೊಂಡಿತ್ತು. ಇನ್ನೀಗ ಸಂಸತ್ತಿನಲ್ಲಿ ಒಪ್ಪಿಗೆ ಪಡೆಯಬೇಕಿತ್ತು. ಲಾಲ್ಬಹದ್ದೂರ್ ಶಾಸ್ತ್ರಿಯವರನ್ನು ಈ ಕುರಿತಂತೆ ಮಾತನಾಡಿಸಿದಾಗ ಅವರು ಜನಾಭಿಪ್ರಾಯ ರೂಪಿಸುವ ಸಲಹೆ ಕೊಟ್ಟಿದ್ದರು. ಅದನ್ನು ಮಾಡುತ್ತ ಮಾಡುತ್ತಲೇ ಏಕನಾಥ್ಜೀ ಮುನ್ನೂರಕ್ಕೂ ಹೆಚ್ಚು ಸಂಸತ್ ಸದಸ್ಯರ ಸಹಿ ಸಂಗ್ರಹಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.

3

ಲಗುಬಗೆಯಿಂದ ಸ್ಮಾರಕಕ್ಕೆ ಬೇಕಾದ ತಯಾರಿ ಮಾಡುತ್ತಾ ವಿವೇಕಾನಂದರ ಪ್ರತಿಮೆಯಿಂದ ಶುರುವಾದ ಕಲ್ಪನೆಯನ್ನು ಮಂದಿರಕ್ಕೆ ವಿಸ್ತರಿಸಿ ಆನಂತರ ಅದನ್ನು ವಿವೇಕಾನಂದ ಕೇಂದ್ರವಾಗಿಸುವಲ್ಲಿ ಏಕನಾಥ್ಜೀಯವರ ಶ್ರಮ ಅನನ್ಯವಾದ್ದು. ಎಲ್ಲಕ್ಕೂ ಅಭೂತಪೂರ್ವವಾದ ಕಲ್ಪನೆಯೆಂದರೆ ಭಾರತದ ಪ್ರತಿಯೊಂದು ಕುಟುಂಬದಿಂದಲೂ ಒಂದು ರೂಪಾಯಿಯನ್ನು ಸಂಗ್ರಹಿಸುವ ಅವರ ಯೋಜನೆ. ವಿವೇಕಾನಂದರ ಚಿತ್ರವುಳ್ಳ ಕಾಡರ್ೊಂದನ್ನು ಮನೆ-ಮನೆಗೂ ಕೊಟ್ಟು ಒಂದು ರೂಪಾಯಿ ಸಂಗ್ರಹಿಸುವ ಅವರ ಕಾರ್ಯಕ್ಕೆ ಸ್ವಯಂ ಸೇವಕರೆಲ್ಲ ಕಟಿಬದ್ಧರಾದರು. ಅತ್ತ ಈ ಕಾರ್ಯಕ್ಕೆ ಏಕನಾಥ್ಜೀ ಅನೇಕ ರಾಜ್ಯಸಕರ್ಾರಗಳಿಂದ ಧನಸಹಾಯ ಪಡೆಯಲಾರಂಭಿಸಿದರು. ಈಶಾನ್ಯ ರಾಜ್ಯಗಳನ್ನೂ ಬಿಡದೇ ಪ್ರತಿಯೊಂದು ಕಡೆಯಿಂದಲೂ ಸ್ಮಾರಕಕ್ಕೆ ಧನಸಂಗ್ರಹಿಸಿದರು. ಸ್ಮಾರಕ ಪೂತರ್ಿ ಪ್ರಮಾಣದಲ್ಲಿ ನಿಮರ್ಾಣವಾಗಿ ನಿಂತ ನಂತರ ವಿವೇಕಾನಂದರ ಚಿಂತನೆಗಳನ್ನು ಸಾಕಾರ ರೂಪಕ್ಕೆ ತರಲು ಅವರು ಕೇಂದ್ರವೊಂದರ ಕಲ್ಪನೆಯನ್ನು ಕಟ್ಟಿದರು. ಈ ಕೇಂದ್ರದಲ್ಲಿ ಜೀವನವನ್ನೇ ರಾಷ್ಟ್ರಕ್ಕೆ ಸಮಪರ್ಿಸಬಲ್ಲ ಸೇವಾವ್ರತಿಯನ್ನು ತಯಾರು ಮಾಡಬಲ್ಲ ಉದ್ದೇಶ ಅವರದ್ದಾಗಿತ್ತು. ಅಂದಿನ ದಿನಗಳಲ್ಲಿ ಅದು ಸವಾಲಿನ ಕಲ್ಪನೆಯಾಗಿರಬಹುದು. ಆದರೆ ಏಕನಾಥ್ಜೀ ಅದನ್ನು ಸಾಕಾರಗೊಳಿಸಿಕೊಂಡರು. ಐದು ದಶಕಗಳ ನಂತರವೂ ವಿವೇಕಾನಂದ ಕೇಂದ್ರ ಸ್ವಾಮಿ ವಿವೇಕಾನಂದರು ಹಾಕಿಕೊಟ್ಟ ಮಾರ್ಗದಲ್ಲಿ ಪಥ ತಪ್ಪದಂತೆ ಹೆಜ್ಜೆಯಿಡುತ್ತಿದೆ. ಈಶಾನ್ಯ ರಾಜ್ಯಗಳಲ್ಲಿ ಇಂದು ರಾಷ್ಟ್ರಮುಖಿ ಕೆಲಸ ಮಾಡುತ್ತಿರುವ ಕೆಲವು ಸಂಘಟನೆಗಳಲ್ಲಿ ಕೇಂದ್ರವೂ ಒಂದು. ಅರುಣಾಚಲ ಪ್ರದೇಶದಲ್ಲೆಲ್ಲಾ ಕೇಂದ್ರದ ಶಾಲೆಯಲ್ಲಿ ಓದುವುದೆಂದರೆ ಬಲುದೊಡ್ಡ ಹೆಮ್ಮೆ. ಇಂದು ಅಲ್ಲಿ ಅತ್ಯುನ್ನತ ಹುದ್ದೆಯಲ್ಲಿರುವ ಅಧಿಕಾರಿಗಳಾಗಲೀ ಮಂತ್ರಿಗಳಾಗಲೀ ಬಹುತೇಕರು ಕೇಂದ್ರದ ಶಾಲೆಯಲ್ಲಿ ಓದಿರುವವರೇ. ಶಾಲೆಗೆ ಸೇರಿಸಲು ದೇಸೀ ಧರ್ಮವನ್ನು ಪಾಲಿಸುವವರೇ ಆಗಿರಬೇಕೆಂಬ ನಿಯಮ ಇರುವುದರಿಂದ ಅನೇಕ ಕ್ರಿಶ್ಚಿಯನ್ನರು ತಾವು ಸ್ಥಳೀಯ ಬುಡಕಟ್ಟು ಜನಾಂಗಕ್ಕೆ ಸೇರಿದವರು ಎಂದೇ ಹೇಳಿಕೊಂಡು ಬರುತ್ತಾರೆ. ಕೇಂದ್ರ ಆ ಪ್ರಮಾಣದಲ್ಲಿ ಮೌಲ್ಯವನ್ನು ಉಳಿಸಿಕೊಂಡುಬಂದಿದೆ. ಈಶಾನ್ಯ ರಾಜ್ಯದ ಶಾಲೆಗಳಲ್ಲಿ ದೇಶಭಕ್ತಿಯನ್ನು ಬಿತ್ತುವ ಕೇಂದ್ರದಂತಹ ಶಾಲೆ ಮತ್ತೊಂದಿಲ್ಲ. ಈ ಶಾಲೆಯ ಮಕ್ಕಳು ತಮ್ಮನ್ನು ತಾವು ಭಾರತೀಯರೆಂದು ಕರೆದುಕೊಳ್ಳಲು ಹೆಮ್ಮೆ ಪಡುತ್ತಾರೆ. ದೇಶದ ಇತರೆ ಭಾಗಗಳಿಗೆ ಪ್ರವಾಸ ಬಂದಾಗ ಅವರು ಸಹಜವಾಗಿ ಬೆರೆಯುವುದನ್ನು ನೀವು ಕಾಣಬಹುದು. ಇದರಲ್ಲಿ ಕೇಂದ್ರದ ಜೀವನವ್ರತಿಗಳ ಪಾತ್ರ ಬಲುದೊಡ್ಡದ್ದು. ದೇಶದಾದ್ಯಂತ ಜಿಲ್ಲೆ-ಜಿಲ್ಲೆಗಳಲ್ಲಿ ಕೇಂದ್ರ ಹಬ್ಬಿದೆ. ನಿಸ್ವಾರ್ಥವಾದ ಸಮಪರ್ಿತ ಕಾರ್ಯಕರ್ತರು ಏಕನಾಥ ರಾನಡೇಯವರ ಕನಸನ್ನು ಇಂದಿಗೂ ನನಸುಗೊಳಿಸುತ್ತಿದ್ದಾರೆ.

ಕೇಂದ್ರದ ಪ್ರಯತ್ನದಿಂದಾಗಿಯೇ ಇಂದು ಕನ್ಯಾಕುಮಾರಿಯಲ್ಲಿ ತಮ್ಮನ್ನು ತಾವು ಹಿಂದುವೆಂದು ಕರೆದುಕೊಳ್ಳಬಲ್ಲ ಅನೇಕ ಜನರಿದ್ದಾರೆ. ಹೊಸ-ಹೊಸ ದೇವಸ್ಥಾನಗಳು ನಿಮರ್ಾಣವಾಗುತ್ತಿವೆ. ಕನ್ಯಾಕುಮಾರಿಗೆ ಹೋಗಿ ನಾವು ಇಂದು ದೇವಸ್ಥಾನಗಳನ್ನು ನೋಡುತಿದ್ದೇವೆಂದರೆ ಅದರಲ್ಲಿ ಕೇಂದ್ರದ ಪಾಲು ಬಲುದೊಡ್ಡದ್ದು. ಇಲ್ಲವಾದಲ್ಲಿ ಗೋವೆಗೆ ಹೋಗಿ ಚಚರ್ುಗಳನ್ನು ನೋಡಿಕೊಂಡು ಬರುತ್ತೇವಲ್ಲಾ ಹಾಗೆ ಕನ್ಯಾಕುಮಾರಿಯಲ್ಲೂ ನಾವು ಚಚರ್ುಗಳನ್ನೇ ಕಾಣಬೇಕಾಗುತ್ತಿತ್ತು. ವ್ಯಕ್ತಿಯೊಬ್ಬ ಬಂಡೆಗಲ್ಲಿನ ಮೇಲೆ ಕುಳಿತು ಮಾಡಿದ ದೃಢವಾದ ಸಂಕಲ್ಪ ಪಶ್ಚಿಮದಲ್ಲಿ ಹಿಂದುತ್ವದ ಪ್ರಭೆ ಹರಡಲು ಕಾರಣವಾಯ್ತು. ಹಾಗೆಯೇ ಆ ವ್ಯಕ್ತಿಯನ್ನು ಆವಾಹಿಸಿಕೊಂಡ ಮತ್ತೊಬ್ಬ ವ್ಯಕ್ತಿ ನೂರಾರು ಜನರ ಬದುಕಿಗೆ ಬೆಳಕಾಗುವ ಶಕ್ತಿ ಪಡೆದುಕೊಂಡ. ಈ ಎಲ್ಲಾ ಹಿನ್ನೆಲೆಯನ್ನು ಗಮನಿಸಿದಾಗಲೇ ವಿವೇಕಾನಂದ ಕೇಂದ್ರಕ್ಕೆ ಶಾಂತಿ ಪ್ರಶಸ್ತಿ ದೊರೆತಿದೆ ಎಂದಾಗ ನಮಗೇ ಸಿಕ್ಕಷ್ಟು ಖುಷಿಯಾಗೋದು.

4

ಅಜಿತ್ ದೋವಲ್ ಹೆಸರು ಇತ್ತೀಚೆಗೆ ಬಲು ಚಚರ್ೆಯಲ್ಲಿದೆಯಲ್ಲಾ. ಅವರೂ ಕೂಡ ವಿವೇಕಾನಂದ ಕೇಂದ್ರದ ಪರಮಭಕ್ತರೆಂದೇ ಹೇಳಲಾಗುತ್ತದೆ. ಅವರು ಕಟ್ಟಿದ ವಿವೇಕಾನಂದ ಫೌಂಡೇಶನ್ಗೆ ಪ್ರೇರಣೆಯೂ ಏಕನಾಥರ ಕೇಂದ್ರದ ಭೂಮಿಯಿಂದ ಸಿಕ್ಕಿದ್ದು ಎನ್ನುತ್ತಾರೆ ಬಲ್ಲವರು. ಎಂದಾದರೂ ಕನ್ಯಾಕುಮಾರಿಗೆ ಹೋಗುವ ಅವಕಾಶ ಸಿಕ್ಕಾಗ ಕೇಂದ್ರಕ್ಕೆ ಭೇಟಿ ಕೊಡುವುದನ್ನು ಮರೆಯಬೇಡಿ. ಅಲ್ಲಿಯೂ ವಿವೇಕಾನಂದ ಮಂಟಪದಲ್ಲಿರುವ ಕಮಂಡಲ ಹಿಡಿದು ಮುಂದಿನ ಕಾರ್ಯಕ್ಕೆ ಧಾವಿಸಲು ಸಿದ್ಧವಾಗಿರುವ ವಿವೇಕಾನಂದರನ್ನು ಖಂಡಿತ ದಶರ್ಿಸಿ. ಅಲ್ಲಿಯೇ ಶಾಂತವಾಗಿ ಮಲಗಿರುವ ಏಕನಾಥ ರಾನಡೆಯವರ ಸಮಾಧಿಯೆದುರು ಒಂದೆರಡು ನಿಮಿಷ ಸಮಾಧಾನಚಿತ್ತರಾಗಿ ಕುಳಿತು ಒಂದಷ್ಟು ಪ್ರೇರಣೆ ಪಡೆಯಲು ಪ್ರಯತ್ನಿಸಿ. ಗುರುವಿನ ಸನ್ನಿಧಾನದ ಬಂಡೆಯ ಮೇಲೆ ಕುಳಿತು ಪಡೆದ ಪ್ರೇರಣೆಯಷ್ಟೇ ಶಿಷ್ಯನ ಸಮಾಧಿಯೆದುರು ಕುಳಿತಾಗಲೂ ದಕ್ಕುತ್ತದೆ. ವ್ಯಕ್ತಿಯೊಬ್ಬನ ಸಂಕಲ್ಪ ಎಷ್ಟು ಅಗಾಧವಾದ ಕಾರ್ಯವನ್ನು ಮಾಡಿಸಬಲ್ಲುದೆಂಬುದಕ್ಕೆ ನಿದರ್ಶನ ದಕ್ಕುತ್ತದೆ.

ಈ ಪ್ರಶಸ್ತಿಗಾಗಿ ಕೇಂದ್ರವನ್ನು ಆಯ್ದುಕೊಂಡಿದ್ದಕ್ಕೆ ನರೇಂದ್ರಮೋದಿಯವರಿಗೆ ಎಷ್ಟು ಅಭಿನಂದಿಸಿದರೂ ಕಡಿಮೆಯೇ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s