‘ಉರಿ’ಸಿಕೊಂಡವರಿಗೆ ಮೋದಿ ವಿಶೇಷಪಡೆಯ ಮೂಲಕ ಶಾಕ್!

‘ಉರಿ’ಸಿಕೊಂಡವರಿಗೆ ಮೋದಿ ವಿಶೇಷಪಡೆಯ ಮೂಲಕ ಶಾಕ್!

ಉರಿ ದಾಳಿಯನ್ನು ಸಂಘಟಿಸಿದ್ದು ಸೇನೆಯ ವಿಶೇಷ ಪಡೆ. ಜೊತೆಗೆ ಉರಿ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಸಂಗಡಿಗರನ್ನು ಅದಕ್ಕೆ ಜೋಡಿಸಿಕೊಳ್ಳಲಾಗಿತ್ತು. ಅದು ಯಾವಾಗಲೂ ಹಾಗೆಯೇ. ಗೆಳೆಯರನ್ನು ಕಳೆದುಕೊಂಡ ಆಕ್ರೋಶ ಶತ್ರುಗಳ ಪಡೆಯನ್ನು ಧ್ವಂಸಗೊಳಿಸುವ ಶಕ್ತಿ ತುಂಬಿಕೊಟ್ಟುಬಿಡುತ್ತದೆ.

ಅದೆಷ್ಟು ಜನ ಉರಿಸಿಕೊಂಡಿದ್ದಾರೋ ದೇವರೇ ಬಲ್ಲ. ಭಾರತ್ ತೇರೇ ತುಕಡೇ ಹೋಂಗೇ ಇನ್ಶಾ ಅಲ್ಲಾ ಇನ್ಶಾಲ ಅಲ್ಲಾ ಎಂದು ಬೊಬ್ಬಿಟ್ಟವರು, ಅವರ ಬೆಂಬಲಕ್ಕೆ ನಿಂತು ಕನ್ಹಯ್ಯಾನನ್ನು ಅಣ್ಣ, ಮಗ, ಚಿಕ್ಕಪ್ಪ, ದೊಡ್ಡಪ್ಪ ಎಂದೆಲ್ಲಾ ಸಂಬೋಧಿಸಿದವರು, ಪತ್ರಕರ್ತರ ಸೋಗಿನಲ್ಲಿದ್ದು ಭಾರತ ವಿರೋಧಿ ಚಿಂತನೆಗಳನ್ನೇ ಮಾಧ್ಯಮಗಳ ಮೂಲಕ ಹರಿಬಿಡುತ್ತಿರುವವರು, ಮೂರು ರಾಜ್ಯಗಳಲ್ಲಿ ಗೆಲುವು ಸಾಧಿಸಿ ಮೋದಿಯನ್ನು ಸೋಲಿಸಿಯೇ ಬಿಡುವ ಕನಸು ಕಾಣುತ್ತಿದ್ದ ಮಹಾಘಟಬಂಧನದ ಸದಸ್ಯರು, ಪ್ರಾಣ ಹೋದರೂ ಸರಿಯೇ ರಾಹುಲನ ಪಾದ ಬಿಡೆವು ಎನ್ನುವ ಒಂದಷ್ಟು ಅಗ್ರೆಸ್ಸಿವ್ ಕಾಂಗ್ರೆಸ್ಸಿಗರು, ಎಡಚರು, ನಗರ ನಕ್ಸಲರು, ಮೋದಿಯವರ ನಿಧರ್ಾರಗಳಿಂದ ನಷ್ಟ ಅನುಭವಿಸಿ ಅವರು ಈ ಬಾರಿ ಸೋತೇ ಹೋಗಿಬಿಡುತ್ತಾರೆ ಎಂದು ಕಾತರಿಸಿ ಕುಳಿತಿದ್ದ ಕೆಲವು ಪುಢಾರಿಗಳು, ಅಧಿಕಾರಿಗಳು, ವ್ಯಾಪಾರಿಗಳು ಉರಿ ಸಿನಿಮಾದ ಟ್ರೇಲರ್ಗಳನ್ನೇ ನೋಡಿ ಖಂಡಿತ ಉರಿಸಿಕೊಂಡಿರುತ್ತಾರೆ. ಮೋದಿ ಎನ್ನುವ ಈ ಆಸಾಮಿ ಸಾಮಾನ್ಯನಲ್ಲವೆಂಬುದು ಅವರಿಗೆ ಸ್ಪಷ್ಟವಾಗಿ ಅರಿವಿಗೆ ಬಂದಿರುತ್ತದೆ. ಅಲ್ಲವೇ ಮತ್ತೇ? ಕೇಜ್ರಿವಾಲ್ ನಾಯಕತ್ವದಲ್ಲಿ ಒಂದಷ್ಟು ವಿರೋಧ ಪಕ್ಷಗಳು ಸಜರ್ಿಕಲ್ ಸ್ಟ್ರೈಕ್ ನಡೆದದ್ದೇ ಸುಳ್ಳೆಂದು ಅದಕ್ಕೆ ಪುರಾವೆಗಳನ್ನೊದಗಿಸಿರೆಂದು ಐಎಸ್ಐ ನಾಯಕರಂತೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದರು. ಮೋದಿ ಅದಕ್ಕೆ ಭರ್ಜರಿ ಮೂರು ತಾಸಿನ ಸಿನಿಮಾದ ಮೂಲಕವೇ ಉತ್ತರಿಸಿಬಿಟ್ಟಿದ್ದಾರೆ. ನೀವಿನ್ನೂ ಉರಿ ಸಿನಿಮಾ ನೋಡಲಿಲ್ಲವೆಂದರೆ ಈಗಲೇ ಹೊರಡಿ. ನಿಮ್ಮ ಜೀವನದ ಅತ್ಯದ್ಭುತ ಸಿನಿಮಾವೊಂದಕ್ಕೆ ನೀವು ಸಾಕ್ಷಿಯಾಗುತ್ತೀರಿ. ಅದಕ್ಕೂ ಮಿಗಿಲಾಗಿ ಪ್ರೇಕ್ಷಕರು ಸಿನಿಮಾವನ್ನು ಸ್ವೀಕರಿಸುವ ರೀತಿ ನಿಮ್ಮನ್ನು ಮೂಕವಿಸ್ಮಿತರಾಗಿಸಿದರೆ ಅಚ್ಚರಿಯಲ್ಲ. ಮಧ್ಯಂತರದ ಹೊತ್ತಿನಲ್ಲೂ ಪಾಪ್ಕಾನರ್್ ತರಲು ಎದ್ದು ಹೋಗದೇ ಸಿನಿಮಾ ಮುಗಿದ ನಂತರವೂ ಕುಳಿತೇ ಇದ್ದು ಆ ಗುಂಗಿನಲ್ಲಿಯೇ ಕಳೆದು ಹೋಗಿರುವ ಪ್ರೇಕ್ಷಕರು ಬಹುಶಃ ಜೀವಮಾನದಲ್ಲಿಯೇ ಮೊದಲ ಅನುಭವವನ್ನು ಕೊಡುತ್ತಾರೆ. ನೋಡುತ್ತಾ ಕುಳಿತವರು ಉದ್ದಕ್ಕೂ ಭಾರತಮಾತೆಗೆ ಜೈಕಾರ ಹಾಕುವ, ಸೀಟಿ ಚಪ್ಪಾಳೆ ಹೊಡೆಯುವ, ಸಂಗತಿಯಂತೂ ಗಾಬರಿ ಹುಟ್ಟಿಸುತ್ತದೆ. ಆಗೆಲ್ಲಾ ಈ ದೇಶವನ್ನು ತುಂಡು ಮಾಡುವ ಕನಸು ಕಾಣುತ್ತಿದ್ದವರ ಹೊಟ್ಟೆಯಲ್ಲಿ ಭರ್ಜರಿ ಬೆಂಕಿ ಹೊತ್ತಿರುತ್ತದೆ.

2

ಉರಿ ದಾಳಿಯನ್ನು ಸಂಘಟಿಸಿದ್ದು ಸೇನೆಯ ವಿಶೇಷ ಪಡೆ. ಜೊತೆಗೆ ಉರಿ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಸಂಗಡಿಗರನ್ನು ಅದಕ್ಕೆ ಜೋಡಿಸಿಕೊಳ್ಳಲಾಗಿತ್ತು. ಅದು ಯಾವಾಗಲೂ ಹಾಗೆಯೇ. ಗೆಳೆಯರನ್ನು ಕಳೆದುಕೊಂಡ ಆಕ್ರೋಶ ಶತ್ರುಗಳ ಪಡೆಯನ್ನು ಧ್ವಂಸಗೊಳಿಸುವ ಶಕ್ತಿ ತುಂಬಿಕೊಟ್ಟುಬಿಡುತ್ತದೆ. ಯುದ್ಧಕ್ಕೆ ಹೋಗುವ ಮುನ್ನ ಸೈನಿಕನೊಬ್ಬನಲ್ಲಿ ಶತ್ರುವನ್ನು ಕೊಲ್ಲುವ ಪ್ರೇರಣೆಯನ್ನು ತುಂಬದೇ ಹೋದರೆ ಗೆಲುವು ಕಷ್ಟ. ಪಾಕಿಸ್ತಾನ ನಮ್ಮೆದುರು ಪ್ರತೀ ಬಾರಿ ಸೋಲುವುದು ಈ ಪ್ರೇರಣೆಯ ಕೊರತೆಯಿಂದಲೇ. ಅವರು ಕೊಲ್ಲುವುದು ತಮ್ಮ ರಾಷ್ಟ್ರದ ಗೌರವದ ರಕ್ಷಣೆಗಾಗಿ ಅಲ್ಲ, ಬದಲಿಗೆ ಇದನ್ನು ಧರ್ಮಯುದ್ಧವಾಗಿ ಮಾರ್ಪಡಿಸಿ ಹುತಾತ್ಮರಾದರೆ ಅವರ ದೇವರು ಸ್ವರ್ಗದಲ್ಲಿ ಶಾಶ್ವತ ಸ್ಥಾನ ಕೊಡುತ್ತಾನೆಂಬ ಭರವಸೆಯಿಂದ. ಅವರಿಗೆ ಉಣಿಸಿರುವ ಧರ್ಮದ ಅಫೀಮೇ ಹಾಗೆ. ಹೀಗಾಗಿಯೇ ಅವರು ಕೊಲ್ಲುವುದಕ್ಕಿಂತ ಹೆಚ್ಚು ಹುತಾತ್ಮರಾಗುವ ಪ್ರೇರಣೆ ಪಡೆದುಕೊಂಡೇ ಬಂದಿರುತ್ತಾರೆ. ಆರಂಭದಲ್ಲಿ ಅಚಾನಕ್ಕು ದಾಳಿ ಸಂಘಟಿಸಿ ಒಂದಷ್ಟು ಭಾರತೀಯರ ಪ್ರಾಣ ತೆಗೆಯುವುದು ನಿಜವಾದರೂ ನಮ್ಮವರ ಸಂಘಟನಾತ್ಮಕ ಹೋರಾಟಕ್ಕೆ ಪ್ರತ್ಯುತ್ತರ ನೀಡಲಾಗದೇ ಹೌತಾತ್ಮ್ಯಕ್ಕೆ ಸಜ್ಜಾಗಿಯೇ ಬಿಡುತ್ತಾರೆ. 1965ರ ಯುದ್ಧದಲ್ಲಿ ನಮಗಿಂತ ಅತ್ಯಾಧುನಿಕವಾದ ಟ್ಯಾಂಕುಗಳನ್ನು ಹೊಂದಿದ್ದಾಗಲೂ ಪಾಕಿಸ್ತಾನ ಸೋತಿದ್ದು ಯಾಕೆ ಗೊತ್ತೇನು? ಭಾರತೀಯರು ಪಾಕಿಸ್ತಾನದ ಟ್ಯಾಂಕುಗಳ ಮೇಲೆ ಆಕ್ರಮಣ ಮಾಡಿ ಒಂದು ಟ್ಯಾಂಕನ್ನು ಸುಟ್ಟುಹಾಕಿದೊಡನೆ ಮತ್ತೊಂದು ಟ್ಯಾಂಕಿನಲ್ಲಿ ಕುಳಿತು ಕಾದಾಡುತ್ತಿದ್ದವ ಅದನ್ನು ಬಿಟ್ಟು ಓಡಿಹೋಗುತ್ತಿದ್ದನಂತೆ. ಕಾರಣವೇನು ಗೊತ್ತೇ? ಟ್ಯಾಂಕಿನ ಜೊತೆಗೆ ತಾನೂ ಸುಟ್ಟು ಹೋದರೆ ಸ್ವರ್ಗದಲ್ಲಿ ಅನುಭವಿಸಲು ದೇಹವೇ ಉಳಿಯುವುದಿಲ್ಲವೆಂಬ ಹೆದರಿಕೆಯಿಂದ. ಅಬ್ಬಾ! ಧರ್ಮ ಇಷ್ಟು ರಕ್ತಗತವಾಗಿದ್ದುದರ ಸಮಸ್ಯೆಯಿದು. ಆದರೆ ಭಾರತದ ಪರಿಸ್ಥಿತಿ ಹಾಗಲ್ಲ. ಇಲ್ಲಿನ ಸೈನಿಕ ತಾಯಿಯ ಗೌರವ ರಕ್ಷಣೆಗಾಗಿ ಯಾವ ಹಂತಕ್ಕೆ ಹೋಗಲೂ ಸಿದ್ಧ. ಕ್ಷತ್ರಿಯನಾಗಿ ಅವರ ಕರ್ತವ್ಯ ಶತ್ರುವನ್ನು ಧ್ವಂಸಗೊಳಿಸಿ ಯಮಪುರಿಗೆ ಅಟ್ಟುವುದು ಮಾತ್ರ. ಅದನ್ನೇ ಮಾಡುವುದರಿಂದಲೂ ಅವನಿಗೆ ಸ್ವರ್ಗ ಖಾತ್ರಿ ಎಂದು ಹೇಳಿರುವುದರಿಂದ ಆತ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ತನ್ನ ಕರ್ತವ್ಯವನ್ನು ಸಮರ್ಥವಾಗಿ ಮಾಡುತ್ತಾನೆ. ಉರಿ ಪ್ರತಿಕ್ರಿಯೆಯಲ್ಲಿ ಆದದ್ದು ಅದೇ.

ಆಯ್ಕೆ ಮಾಡಿದ ವಿಶೇಷ ಪಡೆಯ ಕೈ ಬೆರಳೆಣಿಕೆಯಷ್ಟು ಜನರಿಗೆ ವಿಶೇಷವಾದ ತರಬೇತಿ ನೀಡಲಾಗುತ್ತಿತ್ತು. ಅದರೊಟ್ಟಿಗೆ ಮಿಲಿಟರಿ ಗೂಢಚಾರ ಪಡೆ ವ್ಯವಸ್ಥಿತವಾಗಿ ಕೆಲಸ ನಿರ್ವಹಿಸಿ ಗಡಿಪ್ರದೇಶದಲ್ಲಿ ನಮಗೆ ಹತ್ತಿರವಾಗಿರುವ ನಾಲ್ಕು ಲಾಂಚ್ಪ್ಯಾಡುಗಳನ್ನು ಗುರುತಿಸಿತ್ತು. ಅದರ ನಿಖರವಾದ ಸ್ಥಾನವನ್ನೂ ಕೂಡ ಇಸ್ರೊದ ಉಪಗ್ರಹಗಳು ಗುರುತಿಸಿದ್ದವು. ಇತ್ತ ಪ್ರಧಾನಮಂತ್ರಿ, ರಕ್ಷಣಾ ಸಚಿವರು, ವಿದೇಶಾಂಗ ಸಚಿವರು ಎಲ್ಲರೂ ಸಹಜವಾದ ಪ್ರತಿಕ್ರಿಯೆಗಳಿಂದ ಪಾಕಿಸ್ತಾನವನ್ನು ಮೈಮರೆಯುವಂತೆ ಮಾಡಿದ್ದರೆ, ಅತ್ತ ಪಾಕಿಸ್ತಾನ ಭಾರತಕ್ಕೆ ಕಠಿಣ ನಿಧರ್ಾರ ಕೈಗೊಳ್ಳುವ ತಾಕತ್ತಿಲ್ಲ ಎಂದು ಆಡಿಕೊಂಡು ಕುಳಿತಿತ್ತು. ಆಗಲೇ ನಡೆದಿದ್ದು ಸಜರ್ಿಕಲ್ ಸ್ಟ್ರೈಕ್.

3

ಪಾಕಿಸ್ತಾನದ ಗಡಿಯೊಳಕ್ಕೆ ನುಗ್ಗಿದ ಭಾರತೀಯ ಸೇನಾ ತುಕಡಿ ಹೊರಡುವ ಮುನ್ನವೇ ನಿಶ್ಚಯ ಮಾಡಿತ್ತು. ಪಾಕಿಸ್ತಾನದ ಲಾಂಚ್ಪ್ಯಾಡುಗಳನ್ನು ಧ್ವಂಸಗೊಳಿಸಬೇಕು. ನಮ್ಮ ಪಡೆಯ ಸಾವು-ನೋವುಗಳನ್ನು ಕನಿಷ್ಠಗೊಳಿಸಬೇಕು ಮತ್ತು ಬೆಳಕಾಗುವ ಮುನ್ನ ಹೊರಟು ಬಂದುಬಿಡಬೇಕು ಅಂತ. ಹಾಗಂತ ದಾಳಿ ಸುಲಭವಾಗಿರಲಿಲ್ಲ. ಒಳನುಗ್ಗಿ ಲಾಂಚ್ಪ್ಯಾಡುಗಳನ್ನು ಧ್ವಂಸಗೊಳಿಸುವ ವೇಳೆಗೆ ಹೀಗಾಯ್ತೆಂಬ ಸುದ್ದಿ ಪಾಕಿಸ್ತಾನಕ್ಕೆ ಗೊತ್ತಾಗಿಬಿಟ್ಟಿರುತ್ತದೆ. ಅವರೀಗ ಪ್ರತಿದಾಳಿ ಸಂಘಟಿಸಲು ಸಿದ್ಧರಾಗಿಬಿಡುತ್ತಾರೆ. ಅಷ್ಟರೊಳಗೆ ಮರಳಿ ಭಾರತದ ಗಡಿ ಸೇರಿಕೊಂಡುಬಿಡಬೇಕು. ಇಡಿಯ ಯೋಜನೆಯಲ್ಲಿ ಮರಳಿ ಬರುವುದೇ ದೊಡ್ಡ ಸಾಹಸ. ಏಕೆಂದರೆ ತಿರುಗಿ ಬರುವಾಗ ಶತ್ರುವಿನ ಗುಂಡಿಗೆ ಬೆನ್ನು ಕೊಟ್ಟು ಓಡಬೇಕು. ಮತ್ತು ಸ್ವಲ್ಪ ಎಡವಟ್ಟಾದರೂ ಒಬ್ಬರು ಉಳಿಯುವುದೂ ಕಷ್ಟ. ಹೀಗಾಗಿ ಸವಾಲು ಭರ್ಜರಿಯಾಗಿಯೇ ಇತ್ತು. ಭಾರತೀಯ ಸೇನೆ ಇದನ್ನೆದುರಿಸಲು ಸಿದ್ಧವಾಗಿತ್ತು. ಅಂದು ರಾತ್ರಿ ಹೆಲಿಕಾಪ್ಟರ್ನಿಂದ ಗಡಿ ಭಾಗದಲ್ಲಿ ಇಳಿಸಲ್ಪಟ್ಟ ತುಕಡಿ ಪಾಕಿಸ್ತಾನದೊಳಗೆ ಮೂರು ಕಿ.ಮೀ ನುಗ್ಗಿ ನಾಲ್ಕೂ ಲಾಂಚ್ಪ್ಯಾಡುಗಳನ್ನು ಗುರುತಿಸಿ ಧ್ವಂಸಗೊಳಿಸಿತು. ಜನನಿಬಿಡ ಪ್ರದೇಶದಲ್ಲಿದ್ದ ಒಂದು ಲಾಂಚ್ಪ್ಯಾಡನ್ನು ಧ್ವಂಸಗೊಳಿಸಲು ಸ್ವಲ್ಪ ಕಠಿಣವೆನಿಸಿತಾದರೂ ಆವೇಶದೊಳಗಿದ್ದ ಸೇನಾಪಡೆ ಎಚ್ಚರಿಕೆಯಿಂದ ಅದನ್ನು ಮಾಡಿ ಮುಗಿಸಿ 40ಕ್ಕೂ ಹೆಚ್ಚು ಭಯೋತ್ಪಾದಕರನ್ನು, ಅವರ ಕಾವಲಿಗೆ ನಿಂತಿದ್ದ ಇಬ್ಬರು ಸೈನಿಕರನ್ನೂ ಕೊಂದು ಮರಳಿ ಹೊರಡಲು ಸಜ್ಜಾಯ್ತು. ಈಗ ಮತ್ತೆ ಎರಡು ದಾರಿ. ಬಂದ ದಾರಿಯಲ್ಲೇ ಮರಳಿ ಬಂದುಬಿಡುವುದು. ಮತ್ತೊಂದು ಬಳಸಿಕೊಂಡು ಬರುವ ದೀರ್ಘಮಾರ್ಗವನ್ನು ಅನುಸರಿಸುವುದು. ಬಂದದಾರಿಯಲ್ಲೇ ಮರಳಿ ಬರುವುದು ಅಪಾಯಕ್ಕೆ ಆಹ್ವಾನ ಏಕೆಂದರೆ ಪಾಕೀ ಸೈನಿಕರು ಇದನ್ನು ಊಹಿಸಿ ಅದೇ ದಿಕ್ಕಿನಲ್ಲಿ ಅಟ್ಟಿಸಿಕೊಂಡು ಬರುತ್ತಾರೆ. ಬಳಸು ಮಾರ್ಗ ಕಡಿಮೆ ಅಪಾಯಕಾರಿಯಾದರೂ ದಾರಿ ಅದೆಷ್ಟು ದೊಡ್ಡದ್ದೆಂದರೆ ಬಂದು ಸೇರುವುದರೊಳಗೆ ಎಂತಹ ಅಪಾಯವಾದರೂ ಘಟಿಸಬಹುದು. ಆದರೆ ಆ ಕ್ಷಣಕ್ಕೆ ನಿರ್ಣಯ ತೆಗೆದುಕೊಂಡ ಸೈನಿಕರು ಬಂದದಾರಿಯಲ್ಲೇ ಮರಳುವುದೆಂದು ನಿಶ್ಚಯಿಸಿದ್ದರು. ಸಿನಿಮಾದಲ್ಲಿ ಪಾಕೀ ಹೆಲಿಕಾಪ್ಟರ್ ಒಂದು ಭಾರತೀಯ ಸೈನಿಕರನ್ನು ಅಟ್ಟಿಸಿಕೊಂಡು ಬಂದಿತೆಂದು ತೋರಿಸಲಾಗಿದೆ. ಆದರೆ ಕೆಲವರು ಹೇಳುವ ಪ್ರಕಾರ ಪಾಕೀ ಸೈನಿಕರಿಗೆ ಭಾರತೀಯರು ಗಡಿಯೊಳಕ್ಕೆ ನುಗ್ಗಿದ್ದು ಬೆಳಗಿನವರೆಗೆ ಗೊತ್ತೇ ಆಗಿರಲಿಲ್ಲವಂತೆ. ಐಎಸ್ಐ ಭಾರತದಲ್ಲೆಲ್ಲಾ ಏಜೆಂಟುಗಳನ್ನಿಟ್ಟುಕೊಂಡಿದೆ. ಆದರೆ ಸ್ವತಃ ಪಾಕಿಸ್ತಾನದಲ್ಲಿಯೇ ಅದರ ಗೂಢಚರ್ಯ ಜಾಲ ಅತ್ಯಂತ ಕೆಟ್ಟದಾಗಿದೆ.

4

ಪ್ರಧಾನಮಂತ್ರಿ ನರೇಂದ್ರಮೋದಿ ಸೈನಿಕರಿಗೆ ಸ್ಪಷ್ಟವಾದ ಸಂದೇಶ ಕೊಟ್ಟಿದ್ದರಂತೆ, ‘ಯೋಜನೆ ಸಫಲವಾಗಲೀ ಅಥವಾ ವಿಫಲ; ಸೂರ್ಯನ ಮೊದಲ ಕಿರಣ ಬೀಳುವ ಮುನ್ನವೇ ಸೈನಿಕರೆಲ್ಲಾ ಮರಳಿ ಗಡಿಯೊಳಕ್ಕೆ ಬಂದಿರಬೇಕು’ ಅಂತ. ಬೆಳಗಿನ ಹೊತ್ತು ಸೂಯರ್ೋದಯವಾದ ನಂತರವೂ ಸೈನ್ಯದೆಡೆಯಿಂದ ಯಾವ ಸಂದೇಶವೂ ಬರದೇ ಹೋದಾಗ ಕೆಲವು ಕಾಲ ಅವರು ಆತಂಕಕ್ಕೂ ಒಳಗಾಗಿದ್ದರಂತೆ. ಸೂಯರ್ೋದಯವಾದ ಒಂದೆರಡು ಗಂಟೆಗಳ ನಂತರ ಸೈನ್ಯದ ಮುಖ್ಯಾಲಯದಿಂದ ಬಂದ ಕರೆ ಸಜರ್ಿಕಲ್ ಸ್ಟ್ರೈಕ್ನ ಯಶಸ್ಸನ್ನು ಹಂಚಿಕೊಂಡಿತ್ತಂತೆ. ರಾತ್ರಿ ಇಡೀ ನಿದ್ದೆ ಮಾಡದೇ ಕಾಯುತ್ತಿದ್ದ ಪ್ರಧಾನಮಂತ್ರಿಯವರಿಗೆ ಇದು ನಿರಾಳವಾದ ಹೊತ್ತು. ಪತ್ರಿಕಾಗೋಷ್ಠಿ ಕರೆದು ಎಲ್ಲರಿಗೂ ವಿವರಿಸುವ ಮುನ್ನ ಪಾಕಿಸ್ತಾನಕ್ಕೆ ಈ ವಿಚಾರ ತಿಳಿಸಲು ಅಧಿಕಾರಿಗಳಿಗೆ ಸತತ ಕರೆಮಾಡಲಾಗಿತ್ತು. ಇದೇ ಸುದ್ದಿ ಹೇಳಲು ಭಾರತ ಕರೆ ಮಾಡುತ್ತಿದೆ ಎಂದರಿತ ಪಾಕಿ ಮುಖ್ಯಾಲಯದಲ್ಲಿ ಕರೆ ಸ್ವೀಕರಿಸಲು ಯಾರಿಗೂ ಧೈರ್ಯವಿರಲಿಲ್ಲ. ಕೊನೆಗೂ ಹನ್ನೊಂದುವರೆಗೆ ಭಾರತೀಯ ಸೈನಿಕರ ಸಾಹಸವನ್ನು ಅವರಿಗೆ ಬಣ್ಣಿಸಿ ಪತ್ರಿಕಾಗೋಷ್ಠಿಯಲ್ಲಿ ಉರಿ ದಾಳಿಗೆ ಪ್ರತಿದಾಳಿ ಸಂಘಟಿಸಿದ್ದನ್ನು ವಿವರಿಸಿತ್ತು ಭಾರತೀಯ ಸೇನೆ. ಭಾರತೀಯ ಸೈನಿಕರ ತಾಕತ್ತೇ ಅಂಥದ್ದು. ಅದರಲ್ಲೂ ವಿಶೇಷ ಪಡೆ ಇಂತಹ ಕೆಲಸಗಳಿಗೋಸ್ಕರವೇ ನಿಮರ್ಾಣಗೊಂಡಿರುವಂಥದ್ದು. ಪ್ರತಿಯೊಬ್ಬ ಸೈನಿಕನೂ ವಿಶೇಷ ಪಡೆಯ ಸದಸ್ಯನಾಗಲು ಹಾತೊರೆಯುತ್ತಿರುತ್ತಾನೆ.

ಈಗಿನ ಸುದ್ದಿ ಏನು ಗೊತ್ತೇ?! ಭಾರತ ಜಾಗತಿಕ ಮಟ್ಟದ ಸಾಮಥ್ರ್ಯವುಳ್ಳ ತನ್ನದ್ದೇ ಆದ ಮತ್ತೊಂದು ವಿಶೇಷ ತುಕಡಿ ನಿಮರ್ಾಣಕ್ಕೆ ಸಿದ್ಧವಾಗುತ್ತಿದೆ. ಈ ತುಕಡಿ ಒಸಾಮಾ ಬಿನ್ ಲ್ಯಾಡೆನ್ನನ್ನು ಕೊಂದು ಬಂದ ಅಮೇರಿಕಾದ ವಿಶೇಷ ಪಡೆಗೆ ಸಮಾನಾಗಿರುತ್ತದೆ. ವಿಶೇಷ ಕಾಯರ್ಾಚರಣೆ ಸೇನಾ ಪಡೆ ಎಂದು ಕರೆಯಲ್ಪಡುವ ಈ ತುಕಡಿ ನವೆಂಬರ್ ಮೊದಲನೇ ವಾರದಿಂದ ಆರಂಭಗೊಳ್ಳಲಿದೆ. ಭೂಸೇನೆಯ ವಿಶೇಷ ಸೈನಿಕರು, ನೌಕಾಸೇನೆಯಿಂದ ಆಯ್ಕೆ ಮಾಡಿಕೊಂಡಂಥವರು, ಹಾಗೆಯೇ ವಾಯುಸೇನೆಯಿಂದ ಆಯ್ಕೆ ಮಾಡಿದ ಗರುಡ ಕಮ್ಯಾಂಡೋಗಳು ಇದರಲ್ಲಿರಲಿದ್ದಾರೆ. 3000 ಕಮ್ಯಾಂಡೊಗಳ ಈ ಪಡೆಯ ನೇತೃತ್ವವನ್ನು ಮೇಜರ್ ಜನರಲ್ ಒಬ್ಬರು ವಹಿಸುತ್ತಾರೆ. ಇದರೊಟ್ಟಿಗೆ ಸೈಬರ್ ವಾರ್ ಅನ್ನು ಎದುರಿಸಲು ಮತ್ತೊಂದು ಸಮರ್ಥ ಪಡೆಯನ್ನು ಯೋಜಿಸಲಾಗಿದೆ. 2012ರಲ್ಲಿ ನರೇಶ್ಚಂದ್ರ ಕಮಿಟಿ ಈ ಬಗೆಯ ತುಕಡಿಗಳನ್ನು ರಚಿಸುವಂತೆ ಸಕರ್ಾರಕ್ಕೆ ಸಲಹೆ ನೀಡಿತ್ತು. ಎಂದಿನಂತೆ ಭಾರತದ ಸುರಕ್ಷತೆಯ ಕುರಿತಂತೆ ವಿಶೇಷ ಕಾಳಜಿ ಹೊಂದದ ಯುಪಿಎ ಈ ಆಲೋಚನೆಯನ್ನು ಕಸದಬುಟ್ಟಿಗೆಸೆದಿತ್ತು. ಅದು ಭ್ರಷ್ಟಾಚಾರದಲ್ಲಿ ಎಷ್ಟರ ಮಟ್ಟಿಗೆ ಮುಳುಗಿತ್ತೆಂದರೆ ಅಗಸ್ಟಾವೆಸ್ಟ್ಲ್ಯಾಂಡಿನ ವಿವಿಐಪಿ ಹೆಲಿಕಾಪ್ಟರುಗಳಿಗೆ 3600 ಕೋಟಿ ರೂಪಾಯಿ ಕೊಡಲು ಸಿದ್ಧವಿತ್ತೇ ಹೊರತು ರಫೇಲ್ ವಿಮಾನಗಳನ್ನು ಕೊಂಡುಕೊಳ್ಳಲು ತಯಾರಿರಲಿಲ್ಲ, ಒಆರ್ಒಪಿಗೆ ಹಣ ಮೀಸಲಿಡಲು ಸಿದ್ಧವಿರಲಿಲ್ಲ. ಮೋದಿ ಮೊದಲ ಆದ್ಯತೆ ಸೈನ್ಯಕ್ಕೆ ನೀಡಿದರು. ಒಮ್ಮೆ ಈ ತುಕಡಿ ರಚನೆಗೊಂಡಿತೆಂದರೆ ಭಾರತೀಯ ಸೇನೆ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ ಅಡಿಯಲ್ಲಿ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತಾ ಎಂಥ ಕಾಯರ್ಾಚರಣೆಯನ್ನೂ ಯಶಸ್ವಿಯಾಗಿಸುವಲ್ಲಿ ಶ್ರಮಿಸಲಿದ್ದಾರೆ. ಅಂದರೆ ಮುಂದಿನ ಐದು ವರ್ಷಗಳು ಭಾರತದ ಪಾಲಿಗೆ ಹೆಮ್ಮೆ ತರುವಂಥದ್ದಾದರೆ ಪಾಕಿಸ್ತಾನಕ್ಕೆ ಕಣ್ಣೀರು ತರಿಸುವುದಂತೂ ಸತ್ಯ.

ಈಗಾಗಲೇ ಭಾರತೀಯ ಸೇನೆಯ ಪಾಲಿಗೆ 2018ರ ವರ್ಷ ಖುಷಿ ನೀಡುವಂಥದ್ದು. 250ಕ್ಕೂ ಹೆಚ್ಚು ಭಯೋತ್ಪಾದಕರನ್ನು ನಮ್ಮ ಸೇನೆ ಕೊಂದಿದೆ, 54 ಜನರನ್ನು ಜೀವಂತವಾಗಿ ಬಂಧಿಸಲಾಗಿದೆ ಮತ್ತು 4 ಜನ ತಾವೇ ತಾವಾಗಿ ಶರಣಾಗತರಾಗಿದ್ದಾರೆ. ಅತ್ತ ಕಾಂಗ್ರೆಸ್ಸು ಸೇನೆಯನ್ನು ಜರಿಯುತ್ತಾ ಕುಳಿತಿದ್ದರೆ ಇತ್ತ ಭಾರತೀಯ ಸೇನೆ ಬಲಾಢ್ಯವಾಗಿ ಮುನ್ನುಗ್ಗುತ್ತಿದೆ. ಇಷ್ಟೇ ಅಲ್ಲ, ಕೇಂದ್ರಸಕರ್ಾರ ಸುಖೋಯ್ಗಳನ್ನು ನಿಮರ್ಾಣ ಮಾಡುವ ಒಪ್ಪಂದವನ್ನು ವಿಸ್ತರಿಸಿಕೊಂಡು ಹೆಚ್ಎಎಲ್ಗೆ ಶಕ್ತಿ ತುಂಬುತ್ತಿದೆ. ಜೊತೆಗೆ ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ನಾಸಿಕ್ನಲ್ಲಿ ಇನ್ನೋವೇಷನ್ ಹಬ್ ನಿಮರ್ಿಸಿ ಪ್ರತಿ ವರ್ಷ 35,000 ಕೋಟಿ ರೂಪಾಯಿಯ ಶಸ್ತ್ರಗಳನ್ನು ಜಗತ್ತಿಗೆ ರಫ್ತು ಮಾಡಬೇಕೆಂಬ ಗುರಿ ಹಾಕಿಕೊಂಡಿದೆ. ಐದು ವರ್ಷಗಳ ಹಿಂದೆ ಪಾಕಿಸ್ತಾನದ ಎದುರು ಕಷ್ಟಪಟ್ಟು ಗೆಲ್ಲುತ್ತೇವೆ ಎನ್ನುತ್ತಿದ್ದ ಭಾರತೀಯ ಸೇನೆ ಈಗ ಚೀನಾಕ್ಕೂ ಸವಾಲೊಡ್ಡಬಲ್ಲ ಛಾತಿ ಪಡೆದುಕೊಂಡಿದೆ. ನಿರ್ಣಯ ತೆಗೆದುಕೊಳ್ಳುವ ಜಾಗದಲ್ಲಿ ಕುಳಿತವ ಸಮರ್ಥನೆಂದು ಅರಿವಾದರೆ ಗಡಿ ತುದಿಯಲ್ಲಿ ನಿಂತು ಕಾದಾಡುವವ ಎದೆ ಸೆಟೆಸಿ ನಿಲ್ಲುತ್ತಾನೆ. ಧೈರ್ಯದಿಂದ ಸೆಣೆಸಾಡುತ್ತಾನೆ. ಭಾರತಕ್ಕೆ ಈ ಐದು ವರ್ಷಗಳಲ್ಲಿ ಬಂದಿರುವ ಬದಲಾವಣೆಯೇ ಅದು.

5

ಉರಿ ಬರಿ ಒಂದು ಸಿನಿಮಾ ಅಷ್ಟೇ ಅಲ್ಲ. ಈ ದೇಶದ ಸೈನಿಕರ ಶೌರ್ಯ ಪರಂಪರೆ. ಅದನ್ನು ಖಂಡಿತ ನೋಡಿ, ನೋಡುವಂತೆ ಇತರರಿಗೂ ಹೇಳಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s