ಹೆದರಬೇಕಿಲ್ಲ; ಬಲಾಢ್ಯ ಕೈಗಳಲ್ಲಿದೆ ಭಾರತ!

ಹೆದರಬೇಕಿಲ್ಲ; ಬಲಾಢ್ಯ ಕೈಗಳಲ್ಲಿದೆ ಭಾರತ!

ದೋವಲ್ರನ್ನು ಸುಮ್ಮಸುಮ್ಮನೆ ಜೇಮ್ಸ್ಬಾಂಡ್ ಅನ್ನೋದಲ್ಲ. ಬಹುಶಃ ಹಿಂದೆಂದೂ ಭಾರತದ ಭದ್ರತಾ ಸಲಹೆಗಾರರು ಇಷ್ಟು ವ್ಯಾಪಕವಾದ ಚಚರ್ೆಗೆ ಒಳಗಾಗಿರಲಿಲ್ಲ. ಇಂದು ಜಾಗತಿಕ ಮಟ್ಟದಲ್ಲಿ ದೋವಲ್ರ ಚಾಣಾಕ್ಷತನದ ಕುರಿತಂತೆ ಎಲ್ಲರೂ ಮಾತನಾಡಿಕೊಳ್ಳುತ್ತಾರೆ.

ದೆಹಲಿ ಆಗ್ರಾಗಳಲ್ಲಿ ಐಸಿಸ್ನ ಸ್ಲೀಪರ್ ಸೆಲ್ಗಳನ್ನು ಗುರುತಿಸಿ ತರುಣರೊಂದಷ್ಟು ಜನರನ್ನು ಒಳಗಿಂದ ಎಳೆದೆಳೆದು ಬಿಸಾಡುತ್ತಿದ್ದಂತೆ ದೇಶದಲ್ಲಿ ಅಲ್ಲೋಲ-ಕಲ್ಲೋಲವೆದ್ದಿದೆ. ನರೇಂದ್ರಮೋದಿಯವರಾದಿಯಾಗಿ ರಾಷ್ಟ್ರದ ಪ್ರಮುಖ ನಾಯಕರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲು ಸಿದ್ಧರಾಗಿದ್ದ ಮಾನವ ಬಾಂಬರ್ಗಳು ದೇಶದೆಲ್ಲರ ಎದೆ ನಡುಗುವಂತೆ ಮಾಡಿಬಿಟ್ಟಿದ್ದಾರೆ. ಒಂದೆಡೆ ಗೂಢ ಮಾಹಿತಿಯನ್ನೆಲ್ಲಾ ಕಲೆ ಹಾಕಿ ದುಷ್ಟರನ್ನು ಬಂಧಿಸುವ ಪ್ರಯಾಸದಲ್ಲಿ ಯಶಸ್ವಿಯಾದ ಎನ್ಐಎಯನ್ನು ದೇಶಭಕ್ತರೆಲ್ಲಾ ಅಭಿನಂದಿಸುತ್ತಿದ್ದರೆ ಎಂದಿನಂತೆ ದೇಶದ್ರೋಹಿಗಳ ಗುಂಪೊಂದು ತನಿಖಾ ಸಂಸ್ಥೆಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ. ಏನೇ ಆಗಲಿ ನಾಲ್ಕು ದಿನಗಳ ಹಿಂದೆಯಷ್ಟೇ ಮುಸಲ್ಮಾನರು ಭಾರತದಲ್ಲಿ ಹೆದರಿಕೊಂಡಿದ್ದಾರೆ ಎಂದು ನಾಜಿರುದ್ದೀನ್ ಶಾ ಹೇಳಿದ್ದಕ್ಕೂ ಮೀಸೆ ಬಲಿಯದ ತರುಣರು ಭಾರತವನ್ನೇ ಉಡಾಯಿಸಲು ಸಂಚು ರೂಪಿಸುತ್ತಿದ್ದುದಕ್ಕೂ ತಾಳೆಯಾಗಿದೇ ಅಷ್ಟೇ. ಹೆದರಿರುವುದು ಈ ಬಗೆಯ ಮುಸಲ್ಮಾನ ತರುಣರಲ್ಲ. ಬದಲಿಗೆ ಇವರಿಂದ ಇಡಿಯ ದೇಶವೇ ಹೆದರಿ ಕೈ-ಕಾಲು ಬಿಟ್ಟಿದೆ.

2

ಇಂತಹ ದೊಡ್ಡ ಸಾಹಸದ ಹಿಂದಿನ ಸೂತ್ರಧಾರ ಯಾರು ಗೊತ್ತೇ?! ಅಜಿತ್ ದೋವೆಲ್! ಪಾಕಿಸ್ತಾನದ ಮಾಧ್ಯಮಗಳಿಂದ ಭಾರತದ ಜೇಮ್ಸ್ ಬಾಂಡ್ ಎಂದು ಹೊಗಳಿಸಿಕೊಳ್ಳಲ್ಪಡುವ ಅಜಿತ್ ನರೇಂದ್ರಮೋದಿಯವರ ಅತ್ಯಂತ ಶ್ರೇಷ್ಠ ಆಯ್ಕೆ. ಅಧಿಕಾರ ಪಡೆದಾಕ್ಷಣ ನರೇಂದ್ರಮೋದಿ ಈ ವಿಚಾರದಲ್ಲಿ ಸ್ಪಷ್ಟತೆಯನ್ನು ತೋರಿದ್ದರು. ಅದಕ್ಕೆ ಕಾರಣವೂ ಇತ್ತು. ದೋವಲ್ ತಮ್ಮ ವ್ಯಕ್ತಿತ್ವ ಮತ್ತು ಕಾರ್ಯಶೈಲಿಯ ಮೂಲಕ ನಾಡಿನ ಗಮನವನ್ನು ಸೆಳೆದಿದ್ದರು. ದೇಶಭಕ್ತಿ ಅವರ ರಕ್ತದೊಳಗೆ ಹರಿದಿದ್ದುದು ವಿಶೇಷವೇನಲ್ಲ. ಏಕೆಂದರೆ ಅವರ ತಂದೆಯೂ ಸೈನ್ಯದಲ್ಲೇ ಇದ್ದವರು. ಅಜ್ಮೇರ್ನ ಸೈನಿಕ ಶಾಲೆಯಲ್ಲೇ ಅಧ್ಯಯನ ಮುಗಿಸಿದ ದೋವಲ್ ಆಗ್ರಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದ ಪದವಿಯನ್ನೂ ಪಡೆದರು. ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನವನ್ನು ಗಳಿಸಿಕೊಂಡಿದ್ದರೆಂಬುದು ಹೆಗ್ಗಳಿಕೆಯೇ. 1968ರಲ್ಲಿ ಐಪಿಎಸ್ ಮುಗಿಸಿದ ದೋವಲ್ ಕೇರಳ ಕೇಡರ್ನ ಅಧಿಕಾರಿಯಾಗಿ ಸೇರ್ಪಡೆಗೊಂಡರು. ಬೌದ್ಧಿಕ ಕ್ಷಮತೆಯಿಂದಾಗಿಯೇ ನಾಲ್ಕು ವರ್ಷಗಳಲ್ಲಿ ಇಂಟೆಲಿಜೆನ್ಸಿ ಬ್ಯೂರೋ ಅವರನ್ನು ಕೈ ಬೀಸಿ ಕರೆಯಿತು. ಅಲ್ಲಿಂದಾಚೆಗೆ ಅನೇಕ ಹಿರಿಯ ಹುದ್ದೆಗಳನ್ನು ಅಲಂಕರಿಸಿದ್ದಲ್ಲದೇ ಪ್ರತ್ಯಕ್ಷ ಭೂಮಿಯಲ್ಲೂ ಸಾಕಷ್ಟು ಕೆಲಸ ಮಾಡಿದರು. ಈಶಾನ್ಯ ರಾಜ್ಯಗಳಲ್ಲಿ, ಪಂಜಾಬ್ ಮತ್ತು ಜಮ್ಮು-ಕಾಶ್ಮೀರಗಳಲ್ಲಿ, ಒಟ್ಟಿನಲ್ಲಿ ಭಾರತಕ್ಕೆ ಸಮಸ್ಯೆ ಎನಿಸಿದ ಜಾಗದಲ್ಲೆಲ್ಲಾ ದೋವಲ್ ಅಡ್ಡಾಡಿದರು. ಮಿಜೋರಾಂನಲ್ಲಿ ಉಗ್ರರ ಉಪಟಳ ನಿಲ್ಲುವಂತೆ ಮಾಡುವುದರಲ್ಲಿ, ಸಿಕ್ಕಿಂ ಅನ್ನು ಪುನರ್ರೂಪಿಸುವಲ್ಲಿ ಅವರ ಪ್ರಯತ್ನ ವಿಶೇಷವಾದುದು. ಆರೇಳು ವರ್ಷಗಳ ಕಾಲ ಪಾಕಿಸ್ತಾನದಲ್ಲಿ ಮುಸಲ್ಮಾನನಂತೆಯೇ ಬದುಕಿ ಆ ದೇಶದ ಒಳ-ಹೊರಗನ್ನು ಅರಿತುಕೊಂಡು ಅವರ ಎಲ್ಲ ಯೋಜನೆಗಳು ತಲೆಕೆಳಗಾಗುವಂತೆ ಮಾಡುವುದರಲ್ಲಿ ದೋವಲ್ರು ಯಶಸ್ವಿಯಾಗಿದ್ದರು. ಆ ಹೊತ್ತಿನಲ್ಲಿಯೇ ನಮಾಜ್ ಮುಗಿಸಿ ಹೊರಗೆ ಬಂದಿದ್ದ ಅವರನ್ನು ವೃದ್ಧರೊಬ್ಬರು ಗುರುತಿಸಿ ‘ನೀನು ಹಿಂದೂವಲ್ಲವೇ?’ ಎಂದುಬಿಟ್ಟರಂತೆ. ಒಂದು ಕ್ಷಣ ತಡಬಡಾಯಿಸಿದ ದೋವಲ್ ಮುಂದೇನೂ ಮಾತನಾಡದೇ ಸಂಜೆ ಆತನ ಮನೆಗೇ ಹೋಗಿಬಿಟ್ಟರು. ಮುಸಲ್ಮಾನರಲ್ಲಿ ಕಿವಿ ಚುಚ್ಚಿಕೊಳ್ಳುವ ಪದ್ಧತಿ ಇಲ್ಲವೆಂಬುದನ್ನು ಆತ ವಿವರಿಸಿ ತಾನೂ ಹಿಂದೂವೇ ಆಗಿದ್ದೇನೆ ಎಂದು ದಿನನಿತ್ಯ ಪಾರಾಯಣ ಮಾಡುವ ಹನುಮಾನ್ ಚಾಲೀಸಾವನ್ನು ತೋರಿಸಿದ್ದಲ್ಲದೇ ಹನುಮಂತನ ವಿಗ್ರಹವನ್ನು ದೋವಲ್ರ ಎದುರಿಗೆ ತೆರೆದಿಟ್ಟಿದ್ದರಂತೆ. ಪಾಕಿಸ್ತಾನದಂತಹ ಶತ್ರು ರಾಷ್ಟ್ರವೊಂದರಲ್ಲಿ ಇಂಥವೆಲ್ಲಾ ಘಟನೆಗಳು ಎಂತಹ ಚುರುಕು ಮುಟ್ಟಿಸಬಲ್ಲ ಸಂಗತಿಗಳೆಂಬುದನ್ನು ಆಲೋಚಿಸಿ ನೋಡಿ. ದೋವಲ್ ಕೆಲವು ಕಾಲ ಲಂಡನ್ನಿನ ಭಾರತೀಯ ಧೂತಾವಾಸ ಕಛೇರಿಯಲ್ಲಿ ಕೆಲಸ ನಿರ್ವಹಿಸಿದ್ದರು. ಅವರೇ ಮಲ್ಟಿ ಏಜೆನ್ಸಿ ಸೆಂಟರ್ ಮತ್ತು ಜಾಯಿಂಟ್ ಟಾಸ್ಕ್ ಫೋಸರ್್ ಆನ್ ಇಂಟೆಲಿಜೆನ್ಸ್ ಅನ್ನು ಸ್ಥಾಪಿಸಿ ಅದನ್ನು ಮುನ್ನಡೆಸಿದರು. 2005ರಲ್ಲಿ ಅವರು ನಿವೃತ್ತರಾಗುವಾಗ ದೇಶದ ರಕ್ಷಣೆಯ ವಿಚಾರದಲ್ಲಿ ಅವರ ಮಾತಿಗೆ ವಿಶೇಷವಾದ ಮೌಲ್ಯವಿತ್ತು.

ಸೇವೆಗೆ ಸೇರಿಕೊಂಡ ಆರೇ ವರ್ಷಗಳಲ್ಲಿ ತಮ್ಮ ಕಾರ್ಯಶೈಲಿಯಿಂದ ಎಲ್ಲರ ಮನಸೂರೆಗೊಂಡು ಪ್ರತಿಷ್ಠಿತ ಇಂಡಿಯನ್ ಪೊಲೀಸ್ ಮೆಡಲ್ ಅನ್ನು ಪಡೆದವರು ದೋವಲ್. ವಾಸ್ತವವಾಗಿ 17 ವರ್ಷಗಳ ಸೇವೆಯ ನಂತರ ಮಾತ್ರ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ! 1989ರಲ್ಲಿ ದೋವಲ್ರಿಗೆ ಸೇನಾ ಚಟುವಟಿಕೆಗೆ ಮೀಸಲಾಗಿರುವ ಕೀತರ್ಿಚಕ್ರವನ್ನೂ ಕೊಟ್ಟು ಗೌರವಿಸಲಾಯ್ತು! ನಿವೃತ್ತರಾಗುವ ಒಂದು ವರ್ಷದ ಮುನ್ನ ಏಷಿಯಾ ಮತ್ತು ಪೆಸಿಫಿಕ್ ಪ್ರದೇಶಗಳ ಪೊಲೀಸ್ ಮುಖ್ಯಸ್ಥರ ಸಂಘಕ್ಕೆ ದೋವಲ್ರು ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ನಿವೃತ್ತರಾದ ನಂತರ ತಮ್ಮ ವಿವೇಕಾನಂದ ಇಂಟರ್ನ್ಯಾಷನಲ್ ಫೌಂಡೇಶನ್ನ ಮೂಲಕ ರಾಷ್ಟ್ರೀಯ ಸುರಕ್ಷತೆಯ ವಿಚಾರವಾಗಿ ತರುಣರ ನಡುವೆ ಜಾಗೃತಿಯನ್ನು ಮೂಡಿಸುತ್ತಾ ಭಾಷಣಗಳನ್ನು ಮಾಡುತ್ತಾ ಕಾಯರ್ಾಗಾರಗಳನ್ನು ಆಯೋಜಿಸುತ್ತಾ ಕಾಲ ತಳ್ಳುತ್ತಿದ್ದರು. ಮೋದಿ ಅಧಿಕಾರಕ್ಕೆ ಬಂದೊಡನೆ ಮಾಡಿದ ಮೊದಲ ಕೆಲಸ ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ ಆಯ್ದುಕೊಂಡಿದ್ದು.

3

ದೋವಲ್ ಬುದ್ಧಿವಂತರು ನಿಜ. ಆದರೆ, ಮೋದಿ ಬುದ್ಧಿವಂತರನ್ನು ಜೊತೆಗೆ ಸೇರಿಸಿಕೊಂಡು ರಾಷ್ಟ್ರವನ್ನು ಬಲಿಷ್ಠವಾಗಿ ಕಟ್ಟುವ ಸಾಮಥ್ರ್ಯವುಳ್ಳ ಚಾಣಾಕ್ಷ. ಹೀಗಾಗಿಯೇ ಅಜಿತ್ ದೋವಲ್ರನ್ನು ರಕ್ಷಣೆಗಷ್ಟೇ ಬಳಸಿಕೊಳ್ಳದೇ ಅಂತರರಾಷ್ಟ್ರೀಯ ಸಂಬಂಧ ಸುಧಾರಣೆಗಳಲ್ಲೆಲ್ಲಾ ಅವರ ಸಲಹೆಗಳನ್ನು ಪಡೆದುಕೊಳ್ಳುತ್ತಾ ರಾಷ್ಟ್ರೋನ್ನತಿಗೆ ಭದ್ರವಾದ ಅಡಿಪಾಯ ಹಾಕಲಾರಂಭಿಸಿದರು. ಮೇಲ್ನೋಟಕ್ಕೆ ಮೋದಿಯವರು ಲೆಕ್ಕಕ್ಕೆ ಮೀರಿದ ವಿದೇಶ ಪ್ರವಾಸಗಳನ್ನು ಮಾಡಿದ್ದಾರೆ ಎಂದು ಅನೇಕರು ಭಾವಿಸುತ್ತಾರಾದರೂ ಪ್ರತಿಯೊಂದು ಪ್ರವಾಸವೂ ರಾಷ್ಟ್ರೀಯ ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಅಗತ್ಯವಾಗಿದ್ದುದೇ ಎಂಬುದು ಕಾಲಕ್ರಮದಲ್ಲಿ ಅರಿವಿಗೆ ಬಂದಿವೆ. ನಮ್ಮ ಅನೇಕ ನಾಯಕರು ಗಲ್ಫ್ ರಾಷ್ಟ್ರಗಳಿಗೆ ರಜಾ ದಿನಗಳ ಮೋಜಿಗಾಗಿ ಹೋಗುತ್ತಾರೆ. ಆದರೆ ಮೋದಿ ಮತ್ತು ದೋವಲ್ರ ಜೋಡಿ ಈ ಎಲ್ಲಾ ಮುಸ್ಲೀಂ ರಾಷ್ಟ್ರಗಳನ್ನು ಭಾರತದ ಉನ್ನತಿಗೆ ಬಳಸಿಕೊಳ್ಳುವ ಸ್ಪಷ್ಟ ಯೋಜನೆಯನ್ನು ಆರಂಭದಿಂದಲೂ ರೂಪಿಸಿದ್ದರು. ಮೋದಿ ಅಧಿಕಾರಕ್ಕೆ ಬಂದ ಆರಂಭದಲ್ಲೇ ಐಸಿಸ್ 46 ನಸರ್್ಗಳನ್ನು ಮೊಸೂಲ್ನಲ್ಲಿ ಅಪಹರಿಸಿ ಬಂಧನದಲ್ಲಿಟ್ಟಿದ್ದನ್ನು ನೆನಪಿಸಿಕೊಳ್ಳಿ. ಉಗ್ರಗಾಮಿಗಳ ವಶದಲ್ಲಿದ್ದ ಈ ನಗರಗಳಿಂದ ಭಾರತೀಯರನ್ನು ಬಿಡಿಸಿಕೊಂಡು ಬರುವುದು ಸವಾಲೇ ಆಗಿತ್ತು. ವಿಪಕ್ಷಗಳೂ ಕೂಡ ಮೋದಿಯ ಮೇಲೆ ಮನಸೋ ಇಚ್ಛೆ ಕಿಡಿ ಕಾರಲಾರಂಭಿಸಿದವು. ಆಗ ದೋವಲ್ ತಾವೇ ಇರಾಕಿಗೆ ಹೋದರು. ಅದೇನಾಯ್ತೋ ದೇವರೇ ಬಲ್ಲ. ಕೆಲವು ಗಂಟೆಗಳಲ್ಲೇ ತನಿಖಾ ಸಂಸ್ಥೆಯ ನಿದರ್ೇಶಕ ಆಸಿಫ್ ಇಬ್ರಾಹಿಂ ಸೌದಿಗೆ ಹೋದರು. ಅದಾದ ಒಂದು ವಾರದೊಳಗೆ ಕೇರಳದ ಎಲ್ಲ ನಸರ್್ಗಳು ಭಾರತಕ್ಕೆ ಬಂದಿಳಿದಾಗಿತ್ತು! ದೋವಲ್ ಐಸಿಸ್ ಉಗ್ರಗಾಮಿಗಳ ಜುಟ್ಟು ಸೌದಿ ಅರೇಬಿಯಾದ ದೊರೆಗಳ ಕೈಲಿದೆ ಎಂಬುದನ್ನು ಸ್ಪಷ್ಟವಾಗಿ ಅರಿತಿದ್ದರು. ಸ್ವಲ್ಪ ಸೌದಿ ದೊರೆಗಳ ಕೈ ತಿರುಗಿಸಿದ್ದಷ್ಟೇ ಇತ್ತ ಐಸಿಸ್ ಉಗ್ರಗಾಮಿಗಳು ಭಾರತೀಯರನ್ನು ಅತ್ಯಂತ ಗೌರವಯುತವಾಗಿ ಕಂಡು ವಿಮಾನ ಹತ್ತಿಸಿ ಬೀಳ್ಕೊಟ್ಟರು. ಈ ನಸರ್್ಗಳು ಮರಳಿ ಬಂದಮೇಲೆ ‘ಉಗ್ರಗಾಮಿಗಳು ದೇವರಂಥವರು. ನಮ್ಮನ್ನು ಬಲು ಚೆನ್ನಾಗಿ ನೋಡಿಕೊಂಡರು’ ಎಂದೆಲ್ಲಾ ಕಥೆ ಹೊಡೆದರಲ್ಲಾ. ಹಾಗೆ ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಅನಿವಾರ್ಯತೆಗೆ ತಳ್ಳಿದ್ದು ದೋವಲ್ರ ಮಾಸ್ಟರ್ ಪ್ಲಾನೇ ಎನ್ನುವುದನ್ನು ಮರೆತರೆ ಹೇಗೆ?

ಹೀಗೆ ವಿದೇಶಕ್ಕೆ ನುಗ್ಗಿ ತಮಗೆ ಬೇಕಾದ ಕೆಲಸ ಮಾಡಿಕೊಳ್ಳುವುದು ದೋವಲ್ರಿಗೆ ಹೊಸತೇನಲ್ಲ. ದಾವೂದ್ನ ಮಗಳ ಮದುವೆಯ ಆರತಕ್ಷತೆ ದುಬೈನ ಗ್ರ್ಯಾಂಡ್ ಹಯಾತ್ನಲ್ಲಿ ನಡೆಯುವಾಗ ಚೋಟಾ ರಾಜನ್ನ ತಂಡದವರನ್ನು ತಯಾರು ಮಾಡಿ ಮುಂಬೈನಿಂದ ಪೊಲೀಸ್ ಪಡೆಯೊಂದನ್ನು ಹೊತ್ತೊಯ್ದ ದೋವಲ್ ಇನ್ನೇನು ದಾವೂದ್ನನ್ನು ಮುಗಿಸಿಬಿಡುವ ಹಂತದಲ್ಲಿದ್ದರು. ಮುಂಬೈ ಪೊಲೀಸರಲ್ಲೇ ಇದ್ದ ಕೆಲವೊಂದಿಷ್ಟು ಅಯೋಗ್ಯರು ಸುಳಿವು ಬಿಟ್ಟುಕೊಟ್ಟಿದ್ದರಿಂದಾಗಿ ದಾವೂದ್ ಉಳಿದುಬಿಟ್ಟ. ಆದರೆ ಅವನೊಂದಿಗಿನ ಆ ಜಿದ್ದು ದೋವಲ್ರ ಕಂಗಳಲ್ಲಿ ಇನ್ನೂ ಆರಿಲ್ಲ!

4

ಶ್ರೀಲಂಕಾದ ರಾಜಪಕ್ಸೆ ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡು ಭಾರತದ ಸಾರ್ವಭೌಮತೆಗೆ ಧಕ್ಕೆ ತರುವಂತ ಕೆಲಸವೊಂದಷ್ಟನ್ನು ಮಾಡುವಾಗ ಸಹಜವಾಗಿಯೇ ದೋವಲ್ ಕೆಂಡವಾಗಿದ್ದರು. ತಾವೇ ರಾಜಪಕ್ಸೆಯನ್ನು ಭೇಟಿ ಮಾಡುವ ನೆಪದಿಂದ ಶ್ರೀಲಂಕಾಕ್ಕೆ ಹೋಗಿ ಆನಂತರ ಅವನ ವಿರೋಧಿಯಾಗಿದ್ದ ಸಿರಿಸೇನಾರನ್ನು ಭೇಟಿಯಾಗಿ ಚಂದ್ರಿಕಾ ಕುಮಾರತುಂಗ ಮತ್ತು ರನಿಲ್ ವಿಕ್ರಮಸಿಂಗೆ ಅವರನ್ನು ಮಾತನಾಡಿಸಿ ಅವರೆಲ್ಲರನ್ನೂ ಒಪ್ಪಿಸಿ ಚುನಾವಣೆಯಲ್ಲಿ ರಾಜಪಕ್ಸೆ ಭರ್ಜರಿಯಾಗಿ ಸೋಲುವಂತೆ ಮಾಡಿದವರು ದೋವಲ್ ಸಾಹೇಬ್ರೇ. ಭಾರತದ ನೆರೆರಾಷ್ಟ್ರವೊಂದು ಚೀನಾದ ತೆಕ್ಕೆಯಿಂದ ಹೀಗೆ ಭಾರತದತ್ತ ವಾಲುವಲ್ಲಿ ದೋವಲ್ರ ಈ ಸಾಹಸವನ್ನು ಎಷ್ಟು ಗುಣಗಾನ ಮಾಡಿದರೂ ಕಡಿಮೆಯೇ.

ನರೇಂದ್ರಮೋದಿ ದಿನದಲ್ಲಿ 18 ತಾಸು ಕೆಲಸ ಮಾಡುತ್ತಾರಲ್ಲಾ ಬಹುಶಃ ದೋವಲ್ರೂ ಅಷ್ಟೇ ಇರಬೇಕು. ಇಲ್ಲವಾದರೆ ಕಾಂಗ್ರೆಸ್ಸು ಗಬ್ಬೆಬ್ಬಿಸಿ ಹೋಗಿದ್ದ ಅಂತರರಾಷ್ಟ್ರೀಯ ಸಂಬಂಧವನ್ನು ಮತ್ತೆ ಹಸನುಗೊಳಿಸಿ ಭಾರತದ ಗೂಢಚರ ವ್ಯವಸ್ಥೆಯನ್ನು ಜಾಗತಿಕ ಮಟ್ಟಕ್ಕೆ ನಿಲ್ಲುವಂತೆ ಮಾಡುವುದು ಅಸಾಧ್ಯವೇ ಆಗಿತ್ತು. ಅಜಿತ್ ದೋವಲ್ ಅಮೇರಿಕಾದ ರಕ್ಷಣಾ ಕಾರ್ಯದಶರ್ಿ ಜೇಮ್ಸ್ ಮ್ಯಾಟೀಸ್ ಮತ್ತು ಅದೇ ಇಲಾಖೆಗೆ ಸಂಬಂಧಪಟ್ಟಿ ಜಾನ್ ಕೆಲಿ, ಮ್ಯಾಕ್ ಮಾಸ್ಟರ್ ಇವರೆಲ್ಲರನ್ನೂ ಭೇಟಿಯಾಗಿ ತತ್ಕ್ಷಣದ ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದರ ಫಲವಾಗಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಭಾರತದಲ್ಲಿ ಒಂದೇ ಒಂದು ಭಯೋತ್ಪಾದಕ ಕೃತ್ಯ ನಡೆಸಲು ಸಾಧ್ಯವಾಗಿಲ್ಲವೆಂಬುದು ದೋವಲ್ ಕುರಿತಂತೆ ಜಾಗತಿಕವಾಗಿ ಚಾಲ್ತಿಯಲ್ಲಿರುವ ಮಾತು. ಮೋದಿ ವಿದೇಶದ ನೆಲದಲ್ಲಿ ಭಾಷಣ ಮಾಡಿ ಕೈಬೀಸಿಯಷ್ಟೇ ಖ್ಯಾತಿಯಾಗುತ್ತಿದ್ದಾರೆಂದು ಭಾವಿಸಿಬಿಡಬೇಡಿ. ತಮ್ಮ ಸಮರ್ಥ ಸೇನಾನಿಗಳ ಮೂಲಕ ಜಗತ್ತಿನ ಅನೇಕ ರಾಷ್ಟ್ರಗಳಿಗೆ ಗೌಪ್ಯವಾದ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಅನಿವಾರ್ಯವೂ ಆಗುತ್ತಿದ್ದಾರೆ. ಆಯಾ ರಾಷ್ಟ್ರಗಳಲ್ಲಿ ನಡೆಯಬಹುದಾದ ಅನೇಕ ದುರಂತಗಳನ್ನು ಮೋದಿ-ದೋವಲ್ ತಂಡ ತಪ್ಪಿಸಿದೆ ಎಂದು ಹೇಳಲಾಗುತ್ತದೆ. ಇಲ್ಲವಾದಲ್ಲಿ ಯಮನ್ನಲ್ಲಿ ಕಿತ್ತಾಟ ನಡೆಸುತ್ತಿದ್ದ ಎರಡೂ ರಾಷ್ಟ್ರಗಳು ನಾವು ನಮ್ಮವರನ್ನು ಏರ್ಲಿಫ್ಟ್ ಮಾಡುವಷ್ಟೂ ಹೊತ್ತು ಶಾಂತವಾಗಿರಲು ಹೇಗೆ ಸಾಧ್ಯಾವಾಯ್ತು?! ಸೌದಿಯಂತಹ ರಾಷ್ಟ್ರಗಳು ಭಾರತದ ಒಳಿತಿಗಾಗಿ ಕೆಲಸ ಮಾಡುವ ಮಟ್ಟಕ್ಕೆ ಹೇಗೆ ಬಂತು?! ಅನೇಕ ಉತ್ತರಗಳು ದೋವಲ್ರ ಕಿಸೆಯಲ್ಲಿವೆ.

ಈ ಆಸಾಮಿಯನ್ನು ಕಡಿಮೆಯವನೆಂದು ಭಾವಿಸಬೇಡಿ. ಅಮೃತ್ಸರದ ಸ್ವರ್ಣಮಂದಿರದಲ್ಲಿ ಖಲಿಸ್ತಾನ್ ಉಗ್ರಗಾಮಿಗಳು ನುಗ್ಗಿ ಕುಳಿತಿದ್ದರಲ್ಲಾ ಆಗ ದೋವಲ್ ಐಎಸ್ಐ ಏಜೆಂಟರ ವೇಷದಲ್ಲಿ ಒಳನುಸುಳಿ ಸಂಧಾನ ಮಾಡುವ ನೆಪದಲ್ಲಿ ಮಾತುಕತೆ ನಡೆಸಿ ಅವರ ಸಾಮಥ್ರ್ಯ, ಅವರ ಬಳಿಯಿರುವ ಶಸ್ತ್ರಾಸ್ತ್ರಗಳು ಎಲ್ಲವನ್ನೂ ಕಣ್ಣಂಚಿನಲ್ಲೇ ಲೆಕ್ಕ ಹಾಕಿಕೊಂಡು ಬಂದು ಅವರನ್ನು ಮುಗಿಸಲು ಬೇಕಾದ ತಂತ್ರಗಾರಿಕೆ ಹೂಡಿದ್ದರಂತೆ. ದೋವಲ್ ಈಗ ಭಾರತದಲ್ಲಿ ಐಸಿಸ್ನತ್ತ ತಮ್ಮ ದೃಷ್ಟಿ ತಿರುಗಿಸಿದ್ದಾರೆ. ಒಮ್ಮೆ ದೋವಲ್ ಅತ್ತ ಕಣ್ಣು ಹಾಯಿಸಿದರೆಂದರೆ ಅವರುಗಳ ಕಥೆ ಮುಗಿಯಿತೆಂದೇ ಅರ್ಥ. ಈಗ ದಾಳಿಯಲ್ಲಿ ಸಿಕ್ಕುಹಾಕಿಕೊಂಡವರು ಇನ್ನೊಂದಷ್ಟು ಗುಟ್ಟು ಬಾಯ್ಬಿಡುತ್ತಾರಲ್ಲಾ ಇದು ಹೀಗೇ ಸಾಗಲಾರಂಭಿಸಿದರೆ ಅವರ ಸಂತಾನಗಳೇ ಬಯಲಿಗೆ ಬಂದು ಬೀಳುವ ಕಾಲ ದೂರವಿಲ್ಲ!!

5

ದೋವಲ್ರನ್ನು ಸುಮ್ಮಸುಮ್ಮನೆ ಜೇಮ್ಸ್ಬಾಂಡ್ ಅನ್ನೋದಲ್ಲ. ಬಹುಶಃ ಹಿಂದೆಂದೂ ಭಾರತದ ಭದ್ರತಾ ಸಲಹೆಗಾರರು ಇಷ್ಟು ವ್ಯಾಪಕವಾದ ಚಚರ್ೆಗೆ ಒಳಗಾಗಿರಲಿಲ್ಲ. ಇಂದು ಜಾಗತಿಕ ಮಟ್ಟದಲ್ಲಿ ದೋವಲ್ರ ಚಾಣಾಕ್ಷತನದ ಕುರಿತಂತೆ ಎಲ್ಲರೂ ಮಾತನಾಡಿಕೊಳ್ಳುತ್ತಾರೆ. ಅಗಸ್ತಾವೆಸ್ಟ್ಲ್ಯಾಂಡಿನ ಮಧ್ಯವತರ್ಿ ಕ್ರಿಶ್ಚಿಯನ್ ಮಿಶೆಲ್ ತನ್ನನ್ನು ಭಾರತ ಎಳೆದುಕೊಂಡು ಹೋಗಲು ಸಾಧ್ಯವೇ ಇಲ್ಲ ಎಂಬ ಧಿಮಾಕಿನಿಂದ ಕುಳಿತಿದ್ದನಲ್ಲ. ಮುಸಲ್ಮಾನ ರಾಷ್ಟ್ರಗಳೂ ದೋವೆಲ್ರ ಚಾಣಾಕ್ಷ ನಡೆಗೆ ಇಲ್ಲವೆನ್ನಲಾಗದೇ ಮಿಶೆಲ್ನನ್ನು ಒಪ್ಪಿಸಿ ಕೈತೊಳೆದುಕೊಂಡಿದ್ದು ಸಾಮಾನ್ಯವಾದ ಸಂಗತಿಯಲ್ಲ. ಇಂಗ್ಲೆಂಡಿನಂತಹ ಇಂಗ್ಲೆಂಡೂ ಮರುಮಾತನಾಡದೇ ಮಲ್ಯನನ್ನು ಭಾರತಕ್ಕೆ ಒಪ್ಪಿಸಲು ತಯಾರಾದುದರ ಹಿಂದೆಯೂ ಸಾಕಷ್ಟು ಪ್ರಯೋಗಗಳಾಗಿವೆ. ಈಗ ಬ್ರಿಟೀಷ್ ಏಜೆನ್ಸಿಯನ್ನು ಬಳಸಿಕೊಂಡೇ ನೀರವ್ಮೋದಿ ಅಡಗಿ ಕುಳಿತಿರುವ ಗುಹೆಯನ್ನು ಹುಡುಕಿ ತೆಗೆಯಲಾಗಿದೆ. ಚುನಾವಣೆಗೆ ಮುನ್ನವೇ ಅವನನ್ನು ಎಳೆದುಕೊಂಡು ಬಂದರೆ ಅಚ್ಚರಿ ಪಡಬೇಕಿಲ್ಲ. ಹಾಗಂತ ಇದು ಅಜಿತ್ ದೋವಲ್ರ ಒಬ್ಬರದ್ದೇ ಸಾಹಸವೆಂದು ಭಾವಿಸಬೇಡಿ. ಅವರ ಇಚ್ಛೆಯ ಸೂಕ್ಷ್ಮವನ್ನರಿತು ನಡೆಯುವ ಸಮರ್ಥವಾದ ತಂಡವೊಂದು ಅವರ ಸುತ್ತಲೂ ಇದೆ. ಇಡಿಯ ವಿದೇಶಾಂಗ ಸಚಿವಾಲಯ ಸಮರ್ಥವಾಗಿ ಜೊತೆಗೂಡಿ ಕೆಲಸ ಮಾಡುತ್ತಿದೆ. ಅತ್ತ ಮಹಾರಾಷ್ಟ್ರದಲ್ಲಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿದೇಶೀ ಮಾಫಿಯಾದ ಎಂಜಲು ಕಾಸಿಗೆ ಬಲಿಯಾಗಿದ್ದ ಮಹಾರಾಷ್ಟ್ರದ ಪೊಲೀಸು ಇಲಾಖೆಯನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ದೋವಲ್ರ ಸಾಹಸಕ್ಕೆ ಬೆಂಬಲವಾಗಿ ನಿಂತು ಅದಕ್ಕೆ ಪೂರಕವಾಗಿ ದೇಶದ ಒಳಗೂ ಹೊರಗೂ ಕೆಲಸ ಮಾಡುತ್ತಾ ರಾಷ್ಟ್ರವನ್ನು ಪುನರ್ರಚಿಸಲು ಕಟಿಬದ್ಧರಾಗಿ ನಿಂತುಬಿಟ್ಟಿದ್ದಾರೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಒಂದಿಡೀ ತಂಡವಾಗಿ ಭಾರತ ಕೆಲಸ ಮಾಡುತ್ತಿರುವುದು ಈಗಲೇ. ಹೀಗಾಗಿಯೇ ಭಾರತ ದುಭರ್ೇದ್ಯ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎನ್ನುವುದನ್ನು ಜಗತ್ತು ಅರಿತಿದೆ.

ಸತ್ಯ ಹೇಳಿ. ಭಾರತ ಬಲಿಷ್ಠ ಕೈಗಳಲ್ಲಿದೆ ಎಂದು ಅನಿಸುತ್ತಿಲ್ಲವೇ?!

One thought on “ಹೆದರಬೇಕಿಲ್ಲ; ಬಲಾಢ್ಯ ಕೈಗಳಲ್ಲಿದೆ ಭಾರತ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s