ಭಾರತದಲ್ಲಿರೋಕೆ ಭಯ ಎಂದವರಿಗೆ ಪಾಕಿಸ್ತಾನಕ್ಕೆ ಎಕ್ಸ್ ಪೋರ್ಟ್ ಮಾಡೋದು ಒಳ್ಳೇದು!!

ಭಾರತದಲ್ಲಿರೋಕೆ ಭಯ ಎಂದವರಿಗೆ ಪಾಕಿಸ್ತಾನಕ್ಕೆ ಎಕ್ಸ್ ಪೋರ್ಟ್ ಮಾಡೋದು ಒಳ್ಳೇದು!!

ನಾಜೀರುದ್ದೀನ್ ಶಾ ಖಾಸಗಿ ಚಾನೆಲ್ ಒಂದಕ್ಕೆ ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ ಪ್ರತಿಯೊಬ್ಬ ಭಾರತೀಯನ ಬೆನ್ನಿಗೂ ಚೂರಿ ಹಾಕುವಂತಹ ಮಾತುಗಳನ್ನಾಡಿದ್ದಾರೆ. ಭಾರತದಲ್ಲಿ ಅಸಹನೆ ಹೆಚ್ಚುತ್ತಿದ್ದು ಮುಸಲ್ಮಾನರು ಬದುಕುವುದೇ ಕಷ್ಟವಾಗುತ್ತಿದೆ ಎಂದಿದ್ದಾರಲ್ಲದೇ ನನ್ನ ಮಕ್ಕಳೆಲ್ಲಾ ಈ ದೇಶದಲ್ಲಿ ಹೇಗೆ ಬದುಕು ನಡೆಸಬಲ್ಲರು ಎಂಬುದು ಆತಂಕದ ವಸ್ತುವಾಗಿದೆ ಎಂದು ಹೇಳಿಕೊಂಡಿದ್ದಾರೆ. ಇದು ಇಂಟಾಲರೆನ್ಸ್ ಭಾಗ 2! ಬಹುಶಃ ಅಸಹಿಷ್ಣುತೆಯ ಈ ಚಚರ್ೆ ನಿಮಗೆ ಮತ್ತೊಮ್ಮೆ ನೆನಪಿಗೆ ಬಂದಿರಬಹುದು. ಬಿಹಾರದ ಚುನಾವಣೆಗಳು ನಡೆಯುವಾಗ ಅಖಲಾಖ್ನ ಸಾವನ್ನು ಜಗದ್ವ್ಯಾಪಿಯಾಗಿ ಬಿಂಬಿಸುವ ಪ್ರಯತ್ನ ನಡೆದಿತ್ತು. ಮನೆಯಲ್ಲಿ ದನದಮಾಂಸ ಇಟ್ಟ ಕಾರಣಕ್ಕೆ ಆತನನ್ನು ಕೊಲ್ಲಲಾಗಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸಿದ ಮಾಧ್ಯಮಗಳು ಬುದ್ಧಿಜೀವಿಗಳ ಸಹಕಾರದೊಂದಿಗೆ ನರೇಂದ್ರಮೋದಿಯ ಆಗಮನದ ನಂತರ ದೇಶದಲ್ಲಿ ಮುಸಲ್ಮಾನರು ಬದುಕುವುದೇ ಕಷ್ಟವೆಂಬುದನ್ನು ಯಶಸ್ವಿಯಾಗಿ ನಂಬಿಸಿಬಿಟ್ಟಿದ್ದರು. ಮೋದಿಯವರನ್ನು ವಿದೇಶದ ನೆಲದಲ್ಲಿ ಬಿಬಿಸಿಯ ವರದಿಗಾರ ಇದೇ ಪ್ರಶ್ನೆಯನ್ನು ಕೇಳಿ ಮುಜುಗರಕ್ಕೀಡುಮಾಡಿದ್ದ. ಕೆಲವೇ ದಿನಗಳಲ್ಲಿ ಅವಾಡರ್ು ವಾಪಸ್ಸು ಮಾಡುವವರ ಮೆರವಣಿಗೆ ನಡೆದುಹೋಯ್ತು. ಕನ್ನಡದ ಕೆಲವು ಲೇಖಕರು ತಮಗೆ ಸಿಕ್ಕ ಅತ್ಯಂತ ಕಡಿಮೆ ಹಣ ದೊರಕಿದ್ದ ಪ್ರಶಸ್ತಿಯನ್ನು ಮರಳಿಸಿ ಕೈ ತೊಳೆದುಕೊಂಡಿದ್ದರು. ಇಷ್ಟೆಲ್ಲಾ ನಾಟಕ ಬಿಹಾರದ ಚುನಾವಣೆಯಲ್ಲಿ ನರೇಂದ್ರಮೋದಿಯವರ ಸೋಲನ್ನು ಬಯಸಿ ಆಗಿತ್ತು. ಬಿಹಾರದಲ್ಲಿ ನಿತೀಶ್ ಕುಮಾರ್ ಲಾಲುವಿನೊಂದಿಗೆ ಬೆಸೆದುಕೊಂಡಿದ್ದರಿಂದ ಅಲ್ಲಿ ಬಿಜೆಪಿಯನ್ನು ಸೋಲಿಸಿ ಅವರು ಅಧಿಕಾರಕ್ಕೆ ಬಂದೂಬಿಟ್ಟರು. ಆದರೆ, ಬಿಜೆಪಿಯ ಪಾಲಿನ ಮತಗಳಿಕೆಯಲ್ಲಿ ಕೊರತೆಯೇನೂ ಆಗಿರಲಿಲ್ಲ. ಇದು ನಿತೀಶ್ ಕುಮಾರರ ಗಮನಕ್ಕೆ ಬರದೇ ಹೋಗಿದ್ದೇನೂ ಅಲ್ಲ. ಈ ತಾತ್ಕಾಲಿಕ ಗೆಲುವನ್ನೇ ಸಂಭ್ರಮಿಸಿಬಿಟ್ಟ ಬುದ್ಧಿಜೀವಿಗಳು ಬಗೆ-ಬಗೆಯಲ್ಲಿ ಕುಣಿದು ಕುಪ್ಪಳಿಸಿದರು. ಕೆಲವರಂತು ಪ್ರಜ್ಞಾವಂತಿಕೆಯ ಹದವನ್ನು ಮೀರಿ ತಾವು ತಿಂದ ಕಾಣೇಮೀನನ್ನು ಫೇಸ್ಬುಕ್ನಲ್ಲಿ ಶೇರ್ ಮಾಡಿಕೊಂಡು ಬಿಜೆಪಿ ಸೋಲಿನ ಖುಷಿಗೆ ಎಂದೂ ಹೇಳಿಕೊಂಡುಬಿಟ್ಟರು. ಜೀವಪರ ಹೋರಾಟಗಾರರ ಜೀವಿಗಳ ಪರ ಕಾಳಜಿ ಇಂಥದ್ದು!

6

ಇರಲಿ. ಅಸಹಿಷ್ಣುತೆ ಎನ್ನುವ ಪದಕ್ಕೆ ವ್ಯಾಪಕವಾದ ಮೌಲ್ಯ ಬಂದಿದ್ದು ಆಗಲೇ. ಇಡಿಯ ಭಾರತ ನರೇಂದ್ರಮೋದಿಯವರು ಅಧಿಕಾರಕ್ಕೆ ಬಂದಾಗಿನಿಂದಲೂ ಅಸಹಿಷ್ಣುವಾಗುತ್ತಿದೆ ಎಂದು ಅವರು ಸಾಧಿಸಲು ಹೊರಟಿದ್ದರು. ಆದರೆ ವಾಸ್ತವವಾಗಿ ನಿಜವಾದ ಅಸಹಿಷ್ಣುತೆ ಈ ದೇಶ ಕಂಡಿದ್ದು ಗಾಂಧೀಜಿಯವರ ಹತ್ಯೆಯ ನಂತರ. ಗೋಡ್ಸೆ ಬ್ರಾಹ್ಮಣನಾಗಿದ್ದ ಎಂಬ ಒಂದೇ ಕಾರಣಕ್ಕೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ಸಿನ ಕಾರ್ಯಕರ್ತರು ಬ್ರಾಹ್ಮಣರ ಸಾಮೂಹಿಕ ಹತ್ಯೆ ಮಾಡಿದ್ದನ್ನು ಯಾರು ಅಸಹಿಷ್ಣುತೆ ಎಂದು ಕರೆದಿರಲಿಲ್ಲ. ಇಂದಿರಾಗಾಂಧಿ ಹತ್ಯೆಯ ನಂತರ ಸಿಖ್ಖರ ನರಮೇಧವಾಯ್ತಲ್ಲ ಅವತ್ತೂ ಕಾಂಗ್ರೆಸ್ಸಿಗರ ಆ ಕುಕೃತ್ಯವನ್ನು ಯಾರೂ ಅಸಹಿಷ್ಣುತೆ ಎಂದು ಕರೆದಿರಲಿಲ್ಲ. ಹೋಗಲಿ, ಕಶ್ಮೀರದಿಂದ ಮುಸಲ್ಮಾನರು ಪಂಡಿತರ ಮೇಲೆ ಅತ್ಯಾಚಾರಗೈದು ಅವರನ್ನು ರಾಜ್ಯ ಬಿಟ್ಟು ಓಡುವಂತೆ ಮಾಡಿದರಲ್ಲ ಅದೂ ಅಸಹಿಷ್ಣುತೆ ಆಗಿರಲಿಲ್ಲ. ಉತ್ತರಪ್ರದೇಶದಲ್ಲಿ ನಡೆದ ಕೊಲೆಯೊಂದು ಅಸಹಿಷ್ಣುತೆಯ ಸಂಕೇತವಾಯ್ತು. ಭಾರತದ ಕುರಿತಂತೆ ಬೈಗುಳಕ್ಕೆ ಬಳಕೆಯಾಯ್ತು.

7

ಅಫ್ಜಲ್ಖಾನ್ ಶಿವಾಜಿ ಮಹಾರಾಜರನ್ನು ವಶಪಡಿಸಿಕೊಳ್ಳಲೆಂದು ಕೋಟೆಯ ಬಳಿ ಆಗಮಿಸುವ ದಾರಿಯುದ್ದಕ್ಕೂ ದೇವಾಲಯಗಳನ್ನು ಧ್ವಂಸಗೈದಿದ್ದು, ಹಿಂದೂ ಹೆಣ್ಣುಮಕ್ಕಳ ಅತ್ಯಾಚಾರಗೈದಿದ್ದು ಇತಿಹಾಸದ ಪುಟಗಳಿಂದ ಮಾಯವೇ ಆಯ್ತು. ಆದರೆ, ಇಂತಹ ದುಷ್ಟನನ್ನು ಸವರ್ೋಪಾಯ ಬಳಸಿ ಹೊಟ್ಟೆ ಬಗೆದು ಹಾಕಿದ ಶಿವಾಜಿ ಮಾತ್ರ ಬುದ್ಧಿಜೀವಿಗಳ ಬಾಯಲ್ಲಿ ಅಸಹಿಷ್ಣುತೆಯ ಸಂಕೇತವಾಗಿ ಉಳಿದುಬಿಟ್ಟರು. ನಾಜಿರುದ್ದೀನ್ ಶಾದು ಅದೇ ಕಥೆ. ಆತ ತಿಂದ ಅನ್ನ ಬೆಳೆದದ್ದು ಭಾರತದ ರೈತ, ಆತ ಕುಡಿದದ್ದು ಹಿಂದೂಗಳು ತಾಯಿಯೆಂದು ಪೂಜಿಸಿ ಗೌರವಿಸಿದ ಇದೇ ಭಾರತದ ನದಿಯ ನೀರು, ಆತನಿಗೆ ಕಲೆಯ ಅಭಿವ್ಯಕ್ತಿಗೆ ಅವಕಾಶ ಮಾಡಿಕೊಟ್ಟಿದ್ದು ಇದೇ ಭೂಮಿ, ಆತನ ಕಲೆಯನ್ನು ನೋಡಿ ಆನಂದಿಸಿ ಬೆನ್ನು ಚಪ್ಪರಿಸಿದ್ದು ನಾವು-ನೀವೇ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಬಹುಪಾಲು ಹಿಂದೂಗಳೇ. ಇದೇ ನಾಜಿರುದ್ದೀನ್ ಶಾಗೆ ಈ ದೇಶ ಅದೆಷ್ಟರ ಮಟ್ಟಿಗೆ ಗೌರವವನ್ನು ಕೊಟ್ಟಿತೆಂದರೆ ಪದ್ಮಭೂಷಣ, ಪದ್ಮಶ್ರೀಯಂತಹ ಅತ್ಯುನ್ನತ ಪ್ರಶಸ್ತಿಗಳಿಂದ ನಾಜಿರುದ್ದೀನ್ ಶಾರನ್ನು ಸಿಂಗರಿಸಿತು, ಆದರೇನು! ಹೊಸಬಟ್ಟೆ ಎಷ್ಟೇ ಸುಂದರವಾಗಿದ್ದರೂ ಅದರ ಬಣ್ಣ ಬಯಲಾಗೋದು ನೀರಿಗೆ ಹಾಕಿದಾಗಲೇ. ಇತ್ತೀಚೆಗೆ ಚಲನಚಿತ್ರಗಳಲ್ಲಿ ಬೇಡಿಕೆ ಕಡಿಮೆಯಾದ ನಂತರ, ಆತನಿಗಿಂತಲೂ ಚೆನ್ನಾಗಿ ನಟನೆ ಮಾಡಬಲ್ಲ ತರುಣರು ಬರಲಾರಂಭಿಸಿದ ನಂತರ ತನ್ನ ಸಾಮಥ್ರ್ಯದಲ್ಲಿ ಕೊರತೆಯನ್ನು ಗುರುತಿಸದ ಆತ ಅದಕ್ಕೊಂದು ಕಾರಣವನ್ನು ಹುಡುಕಿಕೊಂಡ. ಪ್ರಚಾರ ಪಡೆಯುವ ಭಿನ್ನ-ಭಿನ್ನ ಮಾರ್ಗಗಳನ್ನು ಯೋಚಿಸಲಾರಂಭಿಸಿದ. ಈ ಹೇಳಿಕೆ ಕೊಡುವ ಕೆಲವೇ ದಿನಗಳ ಮುನ್ನ ಈ ಅಯೋಗ್ಯ ವಿರಾಟ್ಕೊಹ್ಲಿಯ ಕುರಿತಂತೆ ಕೆಟ್ಟದೊಂದು ಹೇಳಿಕೆಯನ್ನು ಟ್ವೀಟ್ ಮಾಡಿ ಜಾಗತಿಕ ಮಟ್ಟದಲ್ಲಿ ಜನರಿಂದ ಬೈಗುಳ ತಿಂದಿದ್ದ. ಅದರಿಂದ ಬಚಾವಾಗಲು ಆತನಿಗೆ ಕಂಡಿದ್ದು ಮುಸಲ್ಮಾನ ತಾನು ಎಂಬ ವಿಕ್ಟಿಮ್ ಕಾರ್ಡನ್ನು ತೋರಿಸುವುದು ಮಾತ್ರ. ಈ ದೇಶಕ್ಕೆ ಅಬ್ದುಲ್ ಕಲಾಂರೊಂದಿಗೆ ಎಂದಿಗೂ ಸಮಸ್ಯೆ ಇರಲಿಲ್ಲ, ಈ ದೇಶಕ್ಕೆ ಅಶ್ಫಾಖುಲ್ಲಾಖಾನ್ರೊಂದಿಗೆ ಯಾವ ಕಿತ್ತಾಟವೂ ಇರಲಿಲ್ಲ, ಈ ದೇಶಕ್ಕೆ ಹವಿಲ್ದಾರ್ ಅಬ್ದುಲ್ ಹಮೀದ್ರಿಗೆ ಪರಮವೀರ ಚಕ್ರ ಕೊಡುವಾಗ ಒಂದಿನಿತೂ ಅಳುಕಿರಲಿಲ್ಲ. ಆದರೆ ನಾಜಿರುದ್ದೀನ್ ಶಾರಂತಹ ಹಾವುಗಳಿಗೆ ಹಾಲೆರೆದು ವಿಷ ಕಕ್ಕಿಸಿಕೊಳ್ಳುವುದನ್ನು ಕಂಡಾಗ ಮಾತ್ರ ಬಹಳ ಸಂಕಟವೆನಿಸುತ್ತದೆ.

8

ಭಾರತದಲ್ಲಿರಲು ಹೆದರಿಕೆಯಾಗುತ್ತದೆಂದು ಹೇಳಿದ ನಾಜಿರುದ್ದೀನ್ ಶಾಗೆ ಗೊತ್ತಿರಲಿ ಬಾಂಗ್ಲಾದೇಶದಿಂದ ಫತ್ವಾಕ್ಕೆ ಒಳಗಾಗಿ ದೇಶಬಿಟ್ಟು ಓಡಿಹೋದ ತಸ್ಲೀಮಾ ನಜ್ರೀನ್ ಇರಲು ಸೂಕ್ತವೆಂದು ಆಯ್ಕೆ ಮಾಡಿಕೊಂಡಿದ್ದು ಭಾರತವನ್ನಲ್ಲದೇ ಬೇರೆ ಯಾವ ರಾಷ್ಟ್ರವನ್ನೂ ಅಲ್ಲ. ಅದು ಜಗತ್ತಿಗೆ ಗೊತ್ತಿರುವಂತಹ ಮಾತು. ಹಾಗೆ ಆಕೆಯನ್ನು ಇಟ್ಟುಕೊಂಡರೆ ಇಲ್ಲಿನ 1 ಪ್ರತಿಶತಕ್ಕಿಂತಲೂ ಕಡಿಮೆ ಕಟ್ಟರ್ ಮುಸಲ್ಮಾನರಿಗೆ ನೋವಾಗುತ್ತದೆ ಎಂಬ ಒಂದೇ ಕಾರಣಕ್ಕೆ ಆಶ್ರಯವನ್ನು ನಿರಾಕರಿಸಿದವರು ನಾವು. ಇತ್ತಿಚೆಗೆ ಆರು ವರ್ಷಗಳ ಕಾಲ ಪಾಕಿಸ್ತಾನದಲ್ಲಿ ಕೊಳೆ ಹಾಕಲ್ಪಟ್ಟಿದ್ದ ಅನ್ಸಾರಿ ಭಾರತಕ್ಕೆ ಮರಳಿ ಬಂದೊಡನೆ ಇಲ್ಲಿನಷ್ಟು ರಕ್ಷಣೆ, ಧೈರ್ಯ ಮತ್ತ್ಯಾವ ರಾಷ್ಟ್ರದಲ್ಲೂ ಖಂಡಿತ ದೊರೆಯಲಾರದು ಎಂದು ಅಂದಿದ್ದನ್ನು ನೆನಪಿಸಿಕೊಳ್ಳಿ.

ನಮ್ಮ ಸಹಿಷ್ಣುತೆಯ ಬಗ್ಗೆ ಮತ್ತೇನು ಹೇಳಬೇಕು? ಕೆಲವೊಮ್ಮೆ ಈ ಸಹಿಷ್ಣುತೆಯೇ ಅತಿಯಾಯ್ತೆನಿಸುತ್ತದೆ. ಭಾರತದಲ್ಲಿ ಬದುಕುವುದು ಕಷ್ಟವೆನಿಸುತ್ತದೆ ಎಂದಾಕ್ಷಣ ನಿಮ್ಮಂಥವರಿಗೆ ವಿದೇಶಕ್ಕೆ ಗಡಿಪಾರು ಮಾಡುವ ನಿರ್ಣಯವನ್ನು ತೆಗೆದುಕೊಂಡುಬಿಟ್ಟರೆ ಚೆನ್ನ. ಸರ್ಫರೋಷ್ ಸಿನಿಮಾದ ಗುಲ್ಫಾಮ್ ಹಸನ್ ಪಾತ್ರ ನೀವೇನು ಮಾಡಿದ್ದಿರೋ ಅದು ನಿಮ್ಮದೇ ಬದುಕೆಂದು ಕೊನೆಗೂ ಸಾಬೀತು ಮಾಡಿಬಿಟ್ಟಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s