ಸರಸಂಘಚಾಲಕರ ಉತ್ತರಕ್ಕೆ ಯಾರ ಪ್ರಶ್ನೆಯೂ ಇರಲಿಲ್ಲ!

ಸರಸಂಘಚಾಲಕರ ಉತ್ತರಕ್ಕೆ ಯಾರ ಪ್ರಶ್ನೆಯೂ ಇರಲಿಲ್ಲ!

ಮೂರು ದಿನಗಳ ಈ ಕಾರ್ಯಕ್ರಮ ಸಂಘದ ಕುರಿತಂತೆ ಇದ್ದ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವಲ್ಲಿ ಬಲುದೊಡ್ಡ ಮಟ್ಟಿಗೆ ಯಶಸ್ವಿಯಾಯ್ತು ಏಕೆಂದರೆ ಸರಸಂಘಚಾಲಕರಿಗೆ ಕೇಳಲಾದ ಪ್ರಶ್ನೆಗಳ ಕುರಿತಂತೆಯಾಗಲೀ ಅವರು ನೀಡಿದ ಉತ್ತರದ ಕುರಿತಂತೆಯಾಗಲೀ ಆನಂತರ ಯಾವೊಬ್ಬ ಬುದ್ಧಿಜೀವಿಯೂ ಚಚರ್ೆಯೇ ಮಾಡಲಿಲ್ಲ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬಹು ಸಮಯದ ನಂತರ ಸಮಾಜಕ್ಕೆ ತನ್ನನ್ನು ತಾನು ಪೂರ್ಣವಾಗಿ ತೆರೆದುಕೊಳ್ಳುವ ಪ್ರಯತ್ನವನ್ನು ಇತ್ತೀಚೆಗೆ ಮಾಡಿತ್ತು. ಭಾರತದ ಭವಿಷ್ಯ: ಆರ್ಎಸ್ಎಸ್ ದೃಷ್ಟಿ ಎಂಬ ವಿಚಾರದ ಕುರಿತಂತೆ ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸರಸಂಘ ಚಾಲಕರಾದ ಮೋಹನ್ ಭಾಗವತರ ಮೂರು ದಿನಗಳ ಉಪನ್ಯಾಸ ಮಾಲೆ ರಾಷ್ಟ್ರಾದ್ಯಂತ ಸಂಚಲನ ಉಂಟು ಮಾಡಿದ್ದರೆ ಸಂಘವನ್ನು ಮುಂದಿಟ್ಟುಕೊಂಡೇ ಬೈಗುಳಗಳನ್ನು ಪುಂಖಾನುಪುಂಖವಾಗಿ ಉದುರಿಸುತ್ತಿದ್ದ ಪ್ರತಿಪಕ್ಷಗಳಿಗೂ ಮತ್ತು ಪ್ರತಿವಾದಿಗಳಿಗೂ ಬಲುದೊಡ್ಡ ಆಘಾತವಾಗಿದೆ. ಎಲ್ಲಿಯವರೆಗೂ ಸಮಾಜಕ್ಕೆ ನಮ್ಮನ್ನು ನಾವು ಪೂರ್ಣವಾಗಿ ಪರಿಚಯಿಸಿಕೊಳ್ಳಲಾರೆವೋ ಅಲ್ಲಿಯವರೆಗೂ ತಪ್ಪು ಕಲ್ಪನೆಗಳೇ ಸಮಾಜವನ್ನು ಆಳುತ್ತವೆ. 125 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ಭಾರತವನ್ನು, ಹಿಂದೂಧರ್ಮವನ್ನು ಜಾಗತಿಕ ವೇದಿಕೆಯಲ್ಲಿ ಸಮರ್ಥವಾಗಿ ಪರಿಚಯಿಸದೇ ಹೋಗಿದಿದ್ದರೆ ತಪ್ಪು ಕಲ್ಪನೆಗಳ ಕಾರಣದಿಂದಾಗಿ ಜಗತ್ತಿಂದು ನಮ್ಮನ್ನು ನೋಡುವ ದೃಷ್ಟಿಕೋನವೇ ಬದಲಾಗಿರುತ್ತಿತ್ತು. ಅದೇ ದೃಷ್ಟಿಯನ್ನು ಮುಂದುವರೆಸಿ ನೋಡುವುದಾದರೆ ಆರ್ಎಸ್ಎಸ್ ಸಂಘಟಿಸಿದ ಈ ಕಾರ್ಯಕ್ರಮ ರಾಷ್ಟ್ರದ ಅನೇಕ ಬುದ್ಧಿಜೀವಿಗಳ ಮೆದುಳಿಗೆ ಮೆತ್ತಿದ್ದ ಕೊಳೆಯನ್ನು ತೊಳೆಯುವಲ್ಲಿ ಯಶಸ್ವಿಯಾಗಿದೆ ಎಂದೇ ಹೇಳಬೇಕು. ಆರಂಭದ ದಿನದಲ್ಲೇ ಮಾತು ಶುರುಮಾಡಿದಾಗ ‘ಯಾರನ್ನು ಒಪ್ಪಿಸಲೂ ನಾನಿಲ್ಲಿ ಬಂದಿಲ್ಲ. ವಿಚಾರವನ್ನು ಮುಂದಿರಿಸುತ್ತೇನೆ. ಒಪ್ಪಬೇಕೆನಿಸಿದವರು ಒಪ್ಪಬಹುದು’ ಎಂದು ಸರಸಂಘಚಾಲಕರು ಹೇಳುವಾಗ ಅನೇಕರು ಮೂಗಿನ ಮೇಲೆ ಬೆರಳಿಟ್ಟಿದ್ದರು. ಸಂಘ ಯಾವುದನ್ನೂ ಯಾರ ಮೇಲೂ ಹೇರಲಾರದು. ಬದಲಿಗೆ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುವ ಸ್ವತಂತ್ರ ಮನೋಭಾವವನ್ನು ಸಂಘ ನಿಮರ್ಾಣ ಮಾಡುತ್ತದೆ ಎಂಬುದೇ ಅನೇಕರಿಗೆ ನುಂಗಲಾರದ ಬಿಸಿ ತುಪ್ಪವಾಗಿತ್ತು.

10

ಮೂರನೆಯ ದಿನ ಪ್ರಶ್ನೋತ್ತರದ ಹೊತ್ತಿನಲ್ಲಿ ಯಾವ ಪ್ರಶ್ನೆಗೂ ತಡೆಯೊಡ್ಡದೇ ಎಲ್ಲವನ್ನೂ ಸ್ವೀಕರಿಸಿ ಅದಕ್ಕೆ ಸಮರ್ಥವಾದ ಉತ್ತರವನ್ನು ಸರಸಂಘ ಚಾಲಕರು ಕೊಟ್ಟಿದ್ದು ಎಲ್ಲರೂ ಹುಬ್ಬೇರಿಸುವಂತೆ ಮಾಡಿತು. ‘ಹಿಂದುತ್ವ ಎನ್ನುವುದು ಒಗ್ಗಟ್ಟಿನ ಸಂಕೇತ. ಎಲ್ಲಾ ಹಿಂದೂಗಳನ್ನು ಒಗ್ಗೂಡಿಸಲೆಂದೇ ಸಂಘ ಕ್ರಿಯಾಶೀಲವಾಗಿದೆ’ ಎನ್ನುವುದರ ಮೂಲಕ ಆರಂಭಿಸಿದ ಮೋಹನ್ ಭಾಗವತರು ‘ಜಾಗತಿಕ ಮಟ್ಟದಲ್ಲಿ ಇಂದು ಹಿಂದುತ್ವಕ್ಕೆ ಅಪಾರವಾದ ಗೌರವವಿದೆ. ಭಾರತದಲ್ಲಿ ಇದಕ್ಕಿರುವ ಅಡ್ಡಿ-ಆತಂಕಗಳನ್ನು ನಿವಾರಿಸಬೇಕಿದೆ’ ಎಂದು ಸೂಕ್ಷ್ಮವಾಗಿ ವಿವರಿಸಿದರು. ಹಾಗಂತ ಇದೊಂದು ತೇಪೆ ಹಚ್ಚುವ ಕಾರ್ಯಕ್ರಮವಾಗಿರಲಿಲ್ಲ. ಎಲ್ಲೆಲ್ಲಿ ಯಾಯರ್ಾರನ್ನು ಝಾಡಿಸಬೇಕಿತ್ತೋ ಅಲ್ಲಲ್ಲಿ ಸರಿಯಾಗಿಯೇ ಕಪಾಳಮೋಕ್ಷ ಮಾಡಲಾಗಿತ್ತು. ‘ದೇವರು ಇಂದು ಮಾರುಕಟ್ಟೆಗಳಲ್ಲಿ ಮಾರಲ್ಪಡುತ್ತಿದ್ದಾರೆ. ಎಲ್ಲಾ ಮತಗಳೂ ಒಂದೇ ಆದರೆ ಮತಾಂತರದ ಅವಶ್ಯಕತೆಯಾದರೂ ಏನು? ಆಮಿಷವೊಡ್ಡಿ ಮತಾಂತರ ಮಾಡುವುದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ’ ಎಂದಿದ್ದರು ಆರ್ಎಸ್ಎಸ್ ಮುಖ್ಯಸ್ಥರು. ಗೋರಕ್ಷಕರ ಹೆಸರಿನಲ್ಲಿ ಕೊಲೆಗಳಾಗುವುದನ್ನು ಖಂಡಿಸಿದ ಭಾಗವತರು ‘ಗೋರಕ್ಷಣೆ ಬರಿಯ ಕಾನೂನಿನ ವ್ಯಾಪ್ತಿಗೆ ಮಾತ್ರ ಒಳಪಡುವಂಥದ್ದಲ್ಲ. ಅದು ಅದನ್ನು ಮೀರಿದ್ದು. ಗೋರಕ್ಷಣೆ ಒಂದು ಪವಿತ್ರ ಕರ್ತವ್ಯ ಮತ್ತು ಅದನ್ನು ಮಾಡುವವರನ್ನು ಇತರೆ ಕ್ರಿಮಿನಲ್ಗಳಂತೆ ನೋಡಬಾರದು’ ಎಂದು ಹೇಳುವುದನ್ನು ಮರೆಯಲಿಲ್ಲ.

‘ಸಂಘ ಜಾತೀಯ ವಿಷಬೀಜ ಮುಕ್ತವಾದುದು ಮತ್ತು ಅನೇಕ ಸ್ವಯಂ ಸೇವಕರು ಅಂತಜರ್ಾತಿಯ ವಿವಾಹಗಳನ್ನು ಸಹಜವೆಂಬಂತೆ ಆಗಿದ್ದಾರೆ’ ಎಂದೂ ಸಮಾಜಕ್ಕೆ ವಿಷಯ ಮುಟ್ಟಿಸಿದರು. ಅಚ್ಚರಿಯೆಂಬಂತೆ, ಸಲಿಂಗ ಕಾಮದ ಕುರಿತಂತ ಪ್ರಶ್ನೆಗೆ ಮುಲಾಜಿಲ್ಲದೇ ಉತ್ತರಿಸಿದ ಸರಸಂಘ ಚಾಲಕರು ‘ಇವರುಗಳನ್ನು ಪ್ರತ್ಯೇಕಿಸಿ ನೋಡಬಾರದು. ಸಮಾಜ ಬದಲಾವಣೆಗೆ ಸಿದ್ಧವಾಗಿರುವಾಗ ಇವುಗಳನ್ನೆಲ್ಲಾ ಸಹಜವಾಗಿ ಸ್ವೀಕರಿಸಬೇಕು’ ಎಂದಿದ್ದರು. ಸಂಘವನ್ನು ಸಂಪ್ರದಾಯವಾದಿ ಮತ್ತು ಪ್ರಗತಿ ವಿರೋಧಿ ಎಂದು ಸದಾ ಜರಿಯುತ್ತಿದ್ದವರು ಈಗ ಮಾತಿಲ್ಲದೇ ಮೌನಕ್ಕೆ ಶರಣಾಗಬೇಕಾದ ಪರಿಸ್ಥಿತಿ ನಿಮರ್ಾಣವಾಗಿತ್ತು.
ನಿಜವಾದ ಗಲಾಟೆ ಶುರುವಾಗಬೇಕಿದ್ದುದು ಅನ್ಯಮತೀಯರನ್ನು ನಮ್ಮವರಾಗಿಸಿಕೊಳ್ಳಬೇಕಾದ ವಿಚಾರದಲ್ಲಿ ಸರಸಂಘಚಾಲಕರು ಕೊಟ್ಟ ಉತ್ತರದಿಂದ. ಸ್ವಾಮಿ ವಿವೇಕಾನಂದರ ಚಿಂತನಾ ಧಾರೆಯನ್ನು ಈ ಹೊತ್ತಿನಲ್ಲಿ ಸಮರ್ಥವಾಗಿ ಪ್ರತಿಧ್ವನಿಸಿದ ಸರಸಂಘಚಾಲಕರು ಅನ್ಯಮತೀಯರನ್ನು ಒಪ್ಪಿಕೊಳ್ಳಲಾಗದೇ ಹೋದರೆ, ಅವರನ್ನು ದೇಶಬಿಟ್ಟು ಹೋಗಬೇಕೆಂದು ತಾಕೀತು ಮಾಡುವುದಾದರೆ ಅಂಥವನು ಹಿಂದುವೇ ಅಲ್ಲವೆಂಬ ಪ್ರಖರವಾದ ಹೇಳಿಕೆಯನ್ನು ಕೊಟ್ಟರು. ಈ ಉತ್ತರ ಒಂದೋ ಹೊರಗಿನವರ ಪಾಲಿಗೆ ಬಲುದೊಡ್ಡ ಬದಲಾವಣೆಯ ಸಂಕೇತ. ಅಥವಾ ಒಳಗಿದ್ದು ಪ್ರತಿಗಾಮಿಗಳಂತೆ ವತರ್ಿಸುವ ಕೆಲವರಿಗೆ ಸ್ಪಷ್ಟವಾದ ಸಂದೇಶ. ನನಗೂ ಕಾಡುವ ಸಂಗತಿಯೆಂದರೆ ತೀವ್ರಗಾಮಿಗಳೆನಿಸಿಕೊಂಡ ಯಾವೊಬ್ಬನೂ ಈ ಹೇಳಿಕೆಯ ಕುರಿತಂತೆ ಚಕಾರವೆತ್ತದೆ ಬಾಯ್ಮುಚ್ಚಿಕೊಂಡು ಕುಳಿತಿರುವುದು. ಬದಲಾವಣೆಯ ಹೊತ್ತು ಈಗ ಬಂದಾಗಿದೆ. ನರೇಂದ್ರಮೋದಿಯವರ ಭಾರತದಲ್ಲಿ ಸದ್ಭಾವನೆಗೆ ವಿಶೇಷವಾದ ಮೌಲ್ಯವಿದೆ. ಹಾಗಂತ ಮೋಹನ್ಜೀಯವರದ್ದು ಅನ್ಯಮತೀಯರನ್ನು ಓಲೈಸುವ ತುಷ್ಟೀಕರಣದ ಭಾಷಣವಾಗಿರಲಿಲ್ಲ. ಜನಸಂಖ್ಯಾ ಸ್ಫೋಟದ ಕುರಿತಂತೆ ಕೇಳಲಾಗಿ ಕುಟುಂಬ ಯೋಜನೆಯ ಮಹತ್ವದ ಕುರಿತಂತೆ ಮಾತನಾಡಬೇಕಾದ ಪರಿಸ್ಥಿತಿ ಒದಗಿದಾಗ ಸರಸಂಘಚಾಲಕರು ಸ್ಪಷ್ಟವಾದ ಹೇಳಿಕೆಯನ್ನೇ ಕೊಟ್ಟರು. ಒಂದೇ ಜನಾಂಗದವರ ಸಂಖ್ಯೆ ಹೆಚ್ಚಾಗುತ್ತಾ ಜನಸಂಖ್ಯಾ ಪ್ರಮಾಣ ಏರುಪೇರಾಗುವುದನ್ನು ಸೂಕ್ಷ್ಮವಾಗಿ ಜನತೆಯ ಮುಂದಿರಿಸಿ ಮುಂದಿನ 50 ವರ್ಷಗಳಲ್ಲಿ ದೇಶದ ಬೆಳವಣಿಗೆಯ ದರ ಮತ್ತು ಧಾನ್ಯವನ್ನು ಪೂರೈಸಬಲ್ಲ ನಮ್ಮ ಸಾಮಥ್ರ್ಯ ಇವೆರಡನ್ನೂ ಗಮನದಲ್ಲಿಟ್ಟುಕೊಂಡು ನಾವೊಂದು ಜನಸಂಖ್ಯಾ ಯೋಜನೆಯನ್ನು ರೂಪಿಸಬೇಕೆಂದು ವೈಜ್ಞಾನಿಕವಾದ ಅಭಿಪ್ರಾಯವನ್ನು ಮುಂದಿಟ್ಟರು. ಅಷ್ಟೇ ಅಲ್ಲ, ಎಲ್ಲಿ ಸಮಸ್ಯೆ ವ್ಯಾಪಕವಾಗಿದೆಯೂ ಅಲ್ಲಿ ಮೊದಲು ಈ ಯೋಜನೆಯನ್ನು ಜಾರಿಗೆ ತರಬೇಕೆಂದು ಅವರು ಸ್ಪಷ್ಟ ನಿದರ್ೆಶನ ಕೊಟ್ಟಿದ್ದು ಅವರ ದೂರದೃಷ್ಟಿಗೆ ಹಿಡಿದ ಕೈಗನ್ನಡಿಯಾಗಿತ್ತು.

9

ಮೂರು ದಿನಗಳ ಈ ಕಾರ್ಯಕ್ರಮ ಸಂಘದ ಕುರಿತಂತೆ ಇದ್ದ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವಲ್ಲಿ ಬಲುದೊಡ್ಡ ಮಟ್ಟಿಗೆ ಯಶಸ್ವಿಯಾಯ್ತು ಏಕೆಂದರೆ ಸರಸಂಘಚಾಲಕರಿಗೆ ಕೇಳಲಾದ ಪ್ರಶ್ನೆಗಳ ಕುರಿತಂತೆಯಾಗಲೀ ಅವರು ನೀಡಿದ ಉತ್ತರದ ಕುರಿತಂತೆಯಾಗಲೀ ಆನಂತರ ಯಾವೊಬ್ಬ ಬುದ್ಧಿಜೀವಿಯೂ ಚಚರ್ೆಯೇ ಮಾಡಲಿಲ್ಲ. ಒಂದೋ ಆತನ ತಪ್ಪು ಕಲ್ಪನೆಗಳು ದೂರವಾಗಿರಬೇಕು. ಅಥವಾ ತಾನು ಮಾತನಾಡಲಾರಂಭಿಸಿದರೆ ಜನರ ತಪ್ಪು ಕಲ್ಪನೆಗಳೆಲ್ಲಾ ದೂರವಾಗಿಬಿಡಬಹುದೆಂಬ ಹೆದರಿಕೆ ಇರಬೇಕು. ಏನಾದರೂ ಲಾಭವೇ. ಮೋಹನ್ಜೀಯವರ ಈ ಕಾರ್ಯಕ್ರಮಕ್ಕೆ ಬಂದಿದ್ದವರೆಲ್ಲಾ ದೇಶದ ಗಣ್ಯಾತಿಗಣ್ಯರೇ ಆಗಿದ್ದರು. ಎಲ್ಲಾ ಜಾತಿ-ಜನಾಂಗಗಳಿಗೆ ಸೇರಿದ್ದವರೂ ಇದ್ದರು. ಪ್ರಶ್ನೋತ್ತರಗಳನ್ನು ಎಲ್ಲರೂ ಸ್ವೀಕಾರ ಮಾಡಿದ ರೀತಿಯೇ ಬದಲಾವಣೆಯ ಹೊಸ ದಿಕ್ಕಿನ ಮುನ್ಸೂಚನೆಯಾಗಿತ್ತು. ಒಟ್ಟಾರೆ ಭಾರತ ಪ್ರಕಾಶಮಯವಾಗಿ ಕಂಗೊಳಿಸುತ್ತಿದೆ. ನಮ್ಮ ದಿನ ಬಂದಾಗಿದೆ. ಅನುಮಾನವೇ ಇಲ್ಲ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s