ನರೇಂದ್ರ ಮೋದಿಯವರದ್ದೊಂದು ಚುಕ್ಕಿ ಚಿತ್ರ!

ನರೇಂದ್ರ ಮೋದಿಯವರದ್ದೊಂದು ಚುಕ್ಕಿ ಚಿತ್ರ!

ನಾಲ್ಕೂವರೆ ವರ್ಷ ತಮ್ಮ ಮಾತಿನಿಂದಲೇ ಅಧಿಕಾರದ ಒಂದೊಂದೇ ಮೆಟ್ಟಿಲನ್ನೇರಿದ ನರೇಂದ್ರಮೋದಿ ಇಂದಿಗೂ ದೇಶದ ಪ್ರಭಾವಿ ಭಾಷಣಕಾರರೇ. ಅವರನ್ನು ವಿರೋಧಿಸುವ ಟಿವಿ ಚಾನೆಲ್ಲುಗಳೂ ಕೂಡ ಟಿಆರ್ಪಿಗಾಗಿ ಅವರದ್ದೇ ಭಾಷಣದ ಮೊರೆ ಹೋಗುತ್ತವೆ. ಹಿಂದೀ ದ್ವೇಷದ ಮಾತುಗಳನ್ನಾಡಿ ಮೋದಿಯನ್ನು ವಾಚಾಮಗೋಚರವಾಗಿ ಬೈಯ್ಯುವ ಕೆಲವು ಕನ್ನಡ ಭಕ್ತರ ಮನೆಯವರುಗಳನ್ನೂ ಮೋದಿ ಭಾಷಣಗಳು ಆಕಷರ್ಿಸಿದ್ದರೆ ಅಚ್ಚರಿ ಪಡಬೇಕಿಲ್ಲ.

ರಾಜಕಾರಣಿಗಳು ಎಂದಾಕ್ಷಣ ಸೊನ್ನೆಗಿಂತ ಕಡಿಮೆ ಅಂಕಗಳನ್ನೇ ಕೊಟ್ಟು ರೂಢಿಯಾಗಿ ಹೋಗಿರುವ ನಮಗೆ ನರೇಂದ್ರಮೋದಿಗೆ ಮಾತ್ರ ನೂರಕ್ಕೆ ಕಡಿಮೆ ಇಲ್ಲದಂತೆ ಅಂಕಗಳನ್ನು ಕೊಡಬೇಕೆನಿಸುತ್ತದಲ್ಲ ಸೋಜಿಗವಲ್ಲವೇ? ಹತ್ತು ವರ್ಷಗಳ ಕಾಲ ಕಾಂಗ್ರೆಸ್ಸಿನ ದುರಾಡಳಿತವನ್ನು ಮತ್ತು ತನ್ನೆದುರಿಗೆ ಲೂಟಿ ಹೊಡೆಯುತ್ತಿದ್ದ ಭ್ರಷ್ಟ ರಾಜಕಾರಣಿಗಳನ್ನು ಕಂಡು ಫೆವಿಕಾಲ್ನ ನುಂಗಿದವರಂತೆ ಸುಮ್ಮನಿದ್ದ ಮನಮೋಹನ ಸಿಂಗರ ನೋಡಿ ಬೇಸತ್ತಿತ್ತು ಜನತೆ. ಆ ವೇಳೆಗೇ ಕಡಕ್ಕು ಮಾತಿನ ಮೋದಿಯವರನ್ನು ಕಂಡು ಹುಚ್ಚೆದ್ದು ಕುಣಿದಿತ್ತು. ನನ್ನ ತಂದೆ ಮತ್ತು ತಾತನ ಕಾಲದ ಜನರಿಗೆ ನೆಹರೂ ಪರಿವಾರದ ಋಣ ಬಾಕಿಯಿತ್ತೆನಿಸುತ್ತದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ನೆಹರೂ ತಮ್ಮೆಲ್ಲವನ್ನು ಧಾರೆ ಎರೆದುಬಿಟ್ಟಿದ್ದಾರೆ ಎಂಬ ಸುಳ್ಳನ್ನು ಅವರು ನಂಬಿಕೊಂಡುಬಿಟ್ಟಿದ್ದರು. ಹೀಗಾಗಿಯೇ ಅವರು ಎಷ್ಟೇ ಕಷ್ಟ ಬಂದರೂ ಈ ಪರಿವಾರದಿಂದ ಮತ್ತೊಬ್ಬರಿಗೆ ಅಧಿಕಾರ ವಗರ್ಾಯಿಸುವುದಿಲ್ಲವೆಂಬ ಶಪಥವನ್ನೇ ಮಾಡಿಬಿಟ್ಟಿದ್ದರು. ಭಾರತದ ವಿಕಾಸವನ್ನೇ ಬಲಿಕೊಟ್ಟಾದರೂ ನೆಹರೂ ಪರಿವಾರದ ವಿಕಾಸಕ್ಕೆ ಅವರು ಕಟಿಬದ್ಧರಾಗಿದ್ದರು. ಆದರೆ ನಮ್ಮ ಕಾಲದ ತರುಣರು ಹಾಗಲ್ಲ. ಅವರಿಗೆ ಸತ್ಯವೇನೆಂಬುದು ಗೊತ್ತಿದೆ. ಇತಿಹಾಸವನ್ನು ಕತ್ತಲ ಕೋಣೆಯಿಂದ ಬೆಳಕಿಗೆ ತಂದು ಅವರು ಓದಿದ್ದಾರೆ. ಜಾಗತಿಕ ವಲಯದಲ್ಲಿ ಭಾರತಕ್ಕಾದ ಅನ್ಯಾಯ ಹೊರಗಿನವರಿಂದಲ್ಲ ನಮ್ಮವರಿದಂಲೇ ಎಂಬುದು ಅವರಿಗೆ ನಿಚ್ಚಳವಾಗಿದೆ. ಆ ಹೊತ್ತಿನಲ್ಲೇ ಭರವಸೆಯ ಆಶಾಕಿರಣವಾಗಿ ಕಂಡವರು ನರೇಂದ್ರಮೋದಿ. ಗುಜರಾತಿನಲ್ಲಿ ದಶಕಗಳಿಗೂ ಮಿಕ್ಕಿ ನರೇಂದ್ರಮೋದಿ ತೋರಿದ ಸಾಧನೆ, ತಮ್ಮ ಪ್ರಯತ್ನದಲ್ಲಿ ನಿರಂತರತೆಯನ್ನು ಕಾಪಾಡಿಕೊಂಡು ಬಂದಿದ್ದು, ನೆಹರೂ ಪರಿವಾರಕ್ಕೆ ಮುಲಾಜಿಲ್ಲದೇ ಸಡ್ಡು ಹೊಡೆದಿದ್ದು, ತುಷ್ಟೀಕರಣದ ನೀತಿಯಿಂದ ಸ್ವಾಭಿಮಾನಿ ಭಾರತದೆಡೆಗೆ ದೃಷ್ಟಿಕೋನ ಹರಿಸಿದ್ದು, ಇವೆಲ್ಲವೂ ಒಳಗಿಂದೊಳಗೇ ಭಾರತೀಯನ ಎದೆಯೊಳಗೆ ನರೇಂದ್ರಮೋದಿಯನ್ನು ಪ್ರತಿಷ್ಠಾಪಿಸುತ್ತಲಿತ್ತು. 2014ರಲ್ಲಿ ಇದೇ ತರುಣರ ಭಾಗವಹಿಸುವಿಕೆಯಿಂದ ಮೋದಿ ಅಭೂತಪೂರ್ವ ಜಯ ದಾಖಲಿಸಿದರು.

2016 G20 State Leaders Hangzhou Summit

ನಾಲ್ಕೂವರೆ ವರ್ಷ ತಮ್ಮ ಮಾತಿನಿಂದಲೇ ಅಧಿಕಾರದ ಒಂದೊಂದೇ ಮೆಟ್ಟಿಲನ್ನೇರಿದ ನರೇಂದ್ರಮೋದಿ ಇಂದಿಗೂ ದೇಶದ ಪ್ರಭಾವಿ ಭಾಷಣಕಾರರೇ. ಅವರನ್ನು ವಿರೋಧಿಸುವ ಟಿವಿ ಚಾನೆಲ್ಲುಗಳೂ ಕೂಡ ಟಿಆರ್ಪಿಗಾಗಿ ಅವರದ್ದೇ ಭಾಷಣದ ಮೊರೆ ಹೋಗುತ್ತವೆ. ಹಿಂದೀ ದ್ವೇಷದ ಮಾತುಗಳನ್ನಾಡಿ ಮೋದಿಯನ್ನು ವಾಚಾಮಗೋಚರವಾಗಿ ಬೈಯ್ಯುವ ಕೆಲವು ಕನ್ನಡ ಭಕ್ತರ ಮನೆಯವರುಗಳನ್ನೂ ಮೋದಿ ಭಾಷಣಗಳು ಆಕಷರ್ಿಸಿದ್ದರೆ ಅಚ್ಚರಿ ಪಡಬೇಕಿಲ್ಲ. ಮೈಸೂರಿಗೆ ಮೋದಿ ಬಂದಿದ್ದಾಗ ವೈಚಾರಿಕವಾಗಿ ಬಲಪಂಥೀಯರನ್ನು ವಿರೋಧಿಸುವ ಕನ್ನಡದ ಖ್ಯಾತ ಪತ್ರಿಕೆಯೊಂದರ ವರದಿಗಾರರು ತಮ್ಮ ಪರಿವಾರದವರಿಗಾಗಿ ಪಾಸ್ ಬೇಡಿ ಪಡೆದದ್ದು ನಗು ತರಿಸುವಂತಿತ್ತು. ಮೋದಿ ಉಂಟು ಮಾಡಿರುವ ಸಂಚಲನ ಅಂಥದ್ದು.

ಅವರ ಮಾತಿನ ಹಿಂದೆ ಒಂದು ನಿಖರವಾದ ಲಕ್ಷ್ಯವಿದೆ. ಗುಜರಾತಿನಲ್ಲಿ ಅಧಿಕಾರದಲ್ಲಿರುವಾಗಲೇ ತಮ್ಮ ಮುಂದಿನ ಗುರಿಯನ್ನು ನಿಶ್ಚಯಪಡಿಸಿಕೊಂಡಿದ್ದ ಮೋದಿ ನೇರವಾಗಿ ಪ್ರಧಾನಮಂತ್ರಿಗಳನ್ನೇ ಟೀಕೆಗೆ ಗುರಿಪಡಿಸುತ್ತಿದ್ದರು. ಅವರಿಗೆ ಮೌನಮೋಹನ ಸಿಂಗ್ ಎಂಬ ಬಿರುದು ಕೊಟ್ಟದ್ದೂ ಅವರೇ. ‘ಮೊದಲೆಲ್ಲಾ ಭ್ರಷ್ಟಾಚಾರದ ಮೂಲಕ ಲೂಟಿ ಹೊಡೆದು ಹಣವನ್ನು ತಾವು ಮತ್ತು ಪರಿವಾರದವರು ನುಂಗಿ ಹಾಕುತ್ತಿದ್ದರು. ನನಗೆ ಹಿಂದೂ-ಮುಂದೂ ಯಾರೂ ಇಲ್ಲ’ ಎಂದು ನರೇಂದ್ರಮೋದಿ ಕಲಾತ್ಮಕವಾಗಿ ವಿವರಿಸುವಾಗ ಗುಜರಾತಿನದ್ದೇನು ದೇಶದ ಜನರೇ ಸುಮಧುರವಾದ ಸಂಗೀತವೊಂದಕ್ಕೆ ತಲೆದೂಗುವಂತೆ ಮೈ ಮರೆಯುತ್ತಿದ್ದರು. ಹೀಗಾಗಿಯೇ ಆನಂತರದ ದಿನಗಳಲ್ಲಿ ಕಾಂಗ್ರೆಸ್ಸು ನರೇಂದ್ರಮೋದಿಯವರ ಮದುವೆಯ ಕುರಿತಂತೆ ವಿಚಾರಗಳನ್ನೆತ್ತಿ ಅವರ ಪತ್ನಿ ಇರುವುದನ್ನು ಖಚಿತಪಡಿಸಿ, ಹೆಂಡತಿ ಬಿಟ್ಟವರವರೆಂದು ಭಾವನಾತ್ಮಕವಾಗಿ ಸ್ತ್ರೀಯರನ್ನು ಸೆಳೆಯಲು ಪ್ರಯತ್ನ ಪಟ್ಟಿತ್ತು. ಎಸೆದ ಕಲ್ಲುಗಳನ್ನೆಲ್ಲಾ ಅಡಿಪಾಯ ಮಾಡಿಕೊಳ್ಳುವ ಅಭ್ಯಾಸ ಹೊಂದಿರುವ ನರೇಂದ್ರಮೋದಿ ಇದನ್ನೂ ವ್ಯರ್ಥವಾಗಲು ಬಿಡಲಿಲ್ಲ. ಯೌವ್ವನದ ತಮ್ಮ ರಾಷ್ಟ್ರಸೇವೆಯ ತುಡಿತ ಸಂಸಾರ ನಡೆಸುವ ಸಾಮಾನ್ಯರ ತುಡಿತಕ್ಕಿಂತ ದೊಡ್ಡದ್ದಾಗಿತ್ತು ಎಂಬುದು ಪ್ರತಿಧ್ವನಿಯಾಗುವಂತೆ ಮಾಡಿದರು. ಇದು ಹೊಸ ಪೀಳಿಗೆಯ ತರುಣರನ್ನು ಮತ್ತಷ್ಟು ಸೆಳೆದಿತಲ್ಲದೇ ನೆಹರೂ ಪರಿವಾರಕ್ಕೆ ತಮ್ಮನ್ನು ತಾವು ಒಪ್ಪಿಸಿಕೊಂಡಿದ್ದ ಹಿರಿಯರನ್ನೂ ಆಕಷರ್ಿಸಿತು. ನರೇಂದ್ರಮೋದಿಯವರ ಪತ್ನಿ ಈ ಕುರಿತಂತೆ ತನ್ನ ಆಕ್ಷೇಪವೇನೂ ಇಲ್ಲವೆಂಬುದನ್ನು ಖಾತ್ರಿ ಪಡಿಸಿದ್ದಲ್ಲದೇ ತನ್ನ ಪತಿಯ ಆರೋಗ್ಯಕ್ಕಾಗಿ, ಯಶಸ್ಸಿಗಾಗಿ ವ್ರತ ನಿಯಮಗಳನ್ನು ತಾನು ಕೈಗೊಳ್ಳುವ ಸಂಗತಿಯನ್ನು ಮಾಧ್ಯಮಗಳಿಗೆ ಬಿಚ್ಚಿಟ್ಟ ನಂತರ ವಿರೋಧಿಗಳ ಸದ್ದು ಅಡಗಿಯೇ ಹೋಗಿತ್ತು. ಎಡಪಂಥೀಯರ ಚಿಂತನೆಯ ಸ್ತ್ರೀವಾದ ಸೋತು ತನ್ನ ಪತಿಯನ್ನು ರಾಷ್ಟ್ರಕಾರ್ಯಕ್ಕೋಸ್ಕರ ಬಿಟ್ಟುಕೊಡುವ ಭಾರತೀಯ ಸ್ತ್ರೀವಾದ ವಿಜೃಂಭಿಸಿತು.

4

ಗುಜರಾತಿನಲ್ಲಿ ತಮ್ಮ ಭಾಷಣದ ವೇಳೆ ನರೇಂದ್ರಮೋದಿ ನೆಹರೂ ಪರಿವಾರಕ್ಕೆ ಗುಜರಾತಿಗಳನ್ನು ಕಂಂಡರಾಗುವುದಿಲ್ಲ ಎಂದದ್ದಲ್ಲದೇ ಸರದಾರ್ ಪಟೇಲರಿಗೆ ಮತ್ತು ಮೊರಾಜರ್ಿ ದೇಸಾಯಿಯವರಿಗೆ ಕಾಂಗ್ರೆಸ್ಸು ನೀಡಿದ ಕಿರುಕುಳವನ್ನು ನೆನಪಿಸಿಕೊಟ್ಟು ‘ಈಗ ನನ್ನ ಸರದಿ’ ಎಂದದ್ದು ಗುಜರಾತಿಗಳ ಮನಕಲಕುವಲ್ಲಿ ಸಾಕಾಗಿತ್ತು. ಇದು ಕಾಂಗ್ರೆಸ್ಸಿನದ್ದೇ ದಾಳ. ಆಯಾ ರಾಜ್ಯಗಳಲ್ಲಿ, ಆಯಾ ಜನಾಂಗಗಳನ್ನು ವಿಭಜಿಸಿ ಮತ ಪಡೆಯುವ ಅವರದ್ದೇ ತಂತ್ರವನ್ನು ನರೇಂದ್ರಮೋದಿ ಅವರಿಗೇ ತಿರುಗುಬಾಣವಾಗಿಸಿದ್ದರು. 2014 ರಲ್ಲಿ ಪ್ರಧಾನಮಂತ್ರಿ ಅಭ್ಯಥರ್ಿ ಎಂದು ಘೋಷಣೆಯಾದ ನಂತರ ಅವರ ಮಾತಿನ ವರಸೆಯೇ ಬದಲಾಯಿತು. ಅವರೀಗ ತಾವು ಬಾಲ್ಯದಲ್ಲಿ ಟೀ ಮಾರುತ್ತಿದ್ದುದನ್ನು ಮತ್ತೆ ಸ್ಮರಿಸಿಕೊಳ್ಳಲಾರಂಭಿಸಿದರು. ಬೆಳ್ಳಿಯ ಚಮಚವನ್ನೇ ಬಾಯಿಲ್ಲಿಟ್ಟುಕೊಂಡು ಬಂದ ನೆಹರೂ ಪರಿವಾರಕ್ಕೆದುರಾಗಿ ಭಾರತದ ಬಡವರ ಪ್ರತಿನಿಧಿಯಾಗಿ ಟೀ ಮಾರುತ್ತಿದ್ದ ತನ್ನನ್ನು ಪ್ರತಿಷ್ಠಾಪಿಸಿಕೊಂಡರು ಮೋದಿ. ಸಹಜವಾಗಿಯೇ ಬಲುಬೇಗ ಈ ದೇಶದ ಟೀ-ಕಾಫಿ ಕುಡಿಯುವ ಪ್ರತಿಯೊಬ್ಬನ ಹತ್ತಿರಕ್ಕೂ ಮೋದಿ ತಲುಪಿಬಿಟ್ಟರು.

ಅವರ 720 ಭಾಷಣ, ಮನ್ ಕಿ ಬಾತ್, ಸಂದರ್ಶನಗಳು ಇವುಗಳಿಂದ ಹೊರತೆಗೆದ ಹದಿನಾರು ಲಕ್ಷ ಪದಗಳ ಆಧಾರದ ಮೇಲೆ ಮೋದಿಯವರ ವ್ಯಕ್ತಿತ್ವವನ್ನು ಲಂಡನ್ನಿನ ಕಿಂಗ್ಸ್ ಇಂಡಿಯನ್ ಇನ್ಸ್ಟಿಟ್ಯೂಟ್ನ ಪ್ರೊಫೆಸರ್ ಕ್ರಿಸ್ಟೋಫರ್ ಸಂಶೋಧನೆಗೆ ಒಳಪಡಿಸಿ ಒಂದಷ್ಟು ವಿಶೇಷ ಸಂಗತಿಗಳನ್ನು ಹೊರಗೆಡವಿದ್ದಾರೆ. 2012 ರವರೆಗೆ ಅವರ ಭಾಷಣದಲ್ಲಿ ಕಂಡು ಬರುತ್ತಿದ್ದ ಹೆಚ್ಚು ಪದಗಳು ಸ್ತ್ರೀ, ಪುರುಷ ಮತ್ತು ಮಿತ್ರರೇ ಎಂಬುದಾಗಿತ್ತು. ಚುನಾವಣೆಯ ವೇಳೆಗೆ ಮಿತ್ರರೇ, ಕಾಂಗ್ರೆಸ್ ಮತ್ತು ಬಿಜೆಪಿ ಇದನ್ನು ಬಹುವಾಗಿ ಬಳಸಿದರು. ಅದು ಸಹಜವೂ ಬಿಡಿ. ಆದರೆ ಪ್ರಧಾನಮಂತ್ರಿಯಾದೊಡನೆ ನಮ್ಮ, ಸಹಕಾರ, ಮತ್ತು ಇಂಡಿಯಾ ಎನ್ನುವ ಪದಗಳು ಹಿಂದಿನ ಇಬ್ಬರು ಪ್ರಧಾನಿಗಳಿಗಿಂತಲೂ ಹೆಚ್ಚು ಬಳಕೆಯಾಯ್ತು. ಅವರ ಸ್ವಾತಂತ್ರ್ಯೋತ್ಸವ ಭಾಷಣಗಳನ್ನು ಕೆದಕಿ ನೋಡಿದರೆ ಸೋದರ, ಸೋದರಿಯರೆ ಮತ್ತು ಟೀಮ್ ಎಂಬ ಪದ ಢಾಳಾ ಢಾಳಾಗಿ ಕಂಡುಬರುತ್ತೆ. ಮನಮೋಹನ್ ಸಿಂಗರ ಸ್ವಾತಂತ್ರ್ಯೋತ್ಸವದ ಭಾಷಣಗಳಲ್ಲಿ ಬೆಳವಣಿಗೆ, ಶಿಕ್ಷಣ ಈ ಪದಗಳು ಇದ್ದರೆ ವಾಜಪೇಯಿಯವರು ಕಾಶ್ಮೀರವನ್ನು ಮತ್ತೆ ಮತ್ತೆ ಬಳಸುತ್ತಿದರು. ಅಚ್ಚರಿಯೇನು ಗೊತ್ತೇ? ನರೇಂದ್ರಮೋದಿಯವರ ಇಷ್ಟೂ ಭಾಷಣಗಳಲ್ಲಿ ಅತಿ ಕಡಿಮೆ ಬಳಕೆಯಾದ ಪದ ‘ಹಿಂದು’. ಇತ್ತೀಚೆಗಂತೂ ಅವರು ಹಳ್ಳಿ, ಬಡವ ಮತ್ತು ಸ್ತ್ರೀ ಈ ಪದಗಳನ್ನು ಅದೆಷ್ಟು ಬಳಸುತ್ತಿದ್ದಾರೆ ಎಂದರೆ 2019 ರ ಅವರ ಗುರಿ ಸ್ಪಷ್ಟವಾಗಿ ಗೋಚರವಾಗುತ್ತ್ತಿದೆ.

5

ಅವರ ಭಾಷಣ ಎಲ್ಲರೂ ಮೆಚ್ಚುವುದೇಕೆ ಎಂಬುದನ್ನು ಅನೇಕ ಬಾರಿ ವಿಶ್ಲೇಷಣಾತ್ಮಕ ದೃಷ್ಟಿಯಿಂದ ನಾನೂ ಕೇಳಿದ್ದೇನೆ. ಕೆಲವೊಂದು ಬೌದ್ಧಿಕ ವಲಯದ ಭಾಷಣಗಳನ್ನು ಬಿಟ್ಟರೆ ಉಳಿದ ಭಾಷಣಗಳಲ್ಲಿ ಅವರು ನೇರವಾಗಿ ಪ್ರತಿಯೊಬ್ಬ ವ್ಯಕ್ತಿಯನ್ನೂ ಮುಟ್ಟಿಬಿಡುತ್ತಾರೆ. ಅವರು ಪದೇ ಪದೇ ಮಿತ್ರೋ ಎನ್ನುವಾಗ ನಮ್ಮೆಲ್ಲರನ್ನೂ ಒಳಗೊಂಡಿರುವಂತೆ ಭಾಸವಾಗುತ್ತದೆ. ಪ್ರತಿ ಭಾಷಣದಲ್ಲೂ ಲೆಕ್ಕವಿಡಲು ಕಷ್ಟವೆನಿಸುವಷ್ಟು ಬಾರಿ ‘ನೀವು ಹೇಳಿ’ ಎನ್ನುವ ಮೂಲಕ ನೆರೆದಿದ್ದ ಜನರನ್ನು ತಮ್ಮ ಭಾಷಣದಲ್ಲಿ ಒಂದು ಮಾಡಿಕೊಂಡುಬಿಡುತ್ತಾರೆ. ಅತ್ಯಂತ ಕಠಿಣ ಸಂಗತಿಗಳನ್ನು ಸರಳವಾಗಿ ವಿವರಿಸುವಲ್ಲಿ ಮೋದಿ ನಿಸ್ಸೀಮರು. ಬಹುಶಃ ಅವರಿಗೆ ಇಂಗ್ಲೀಷ್ ಬರದೇ ಇದ್ದುದರ ಲಾಭವೇ ಅದು. ವಿಕಾಸಕ್ಕೆ ಸಂಬಂಧಪಟ್ಟ ಅನೇಕ ತಾಂತ್ರಿಕ ಸಂಗತಿಗಳನ್ನು ಅವರು ಇಂಗ್ಲೀಷಿನಲ್ಲಿ ಅಥರ್ೈಸಿಕೊಳ್ಳದೇ ತಮ್ಮ ಭಾಷೆಯಲ್ಲಿ ತಮಗರ್ಥವಾಗುವಂತೆ ತಿಳಿದುಕೊಳ್ಳುವುದರಿಂದಲೇ ಮುಂದೆ ಜನಸಾಮಾನ್ಯರ ಭಾಷೆಯಲ್ಲಿ ಅವರಿಗರ್ಥವಾಗುವಂತೆ ತಿಳಿಹೇಳಬಲ್ಲರು. ಜಾಗತಿಕ ಯುನಿವಸರ್ಿಟಿಗಳ ಡಿಗ್ರಿ ಪಡೆದಿದ್ದ ಮನಮೋಹನ್ ಸಿಂಗರು ಅಭಿವೃದ್ಧಿ, ಬೆಳವಣಿಗೆ, ಯೋಜನೆ, ಸಂಸ್ಥೆ ಈ ಪದಗಳನ್ನು ಬಳಸುತ್ತಿದ್ದರೆ ಮೋದಿ ವಿದ್ಯುತ್ತು, ರೂಪಾಯಿ, ಹಳ್ಳಿ, ಹಣ, ಬಡತನ ಈ ಪದಗಳನ್ನೇ ಬಳಸಿ ತಮ್ಮ ಸಾಧನೆಯ ಪ್ರತಿ ಹೆಜ್ಜೆಯನ್ನೂ ಸಾಮಾನ್ಯನಿಗೂ ವಿವರಿಸುವಲ್ಲಿ ಸಫಲರಾಗಿಬಿಡುತ್ತಾರೆ. ಈ ಬಾರಿ ಮೋದಿಯವರ ಭಾಷಣ ಕೇಳುವಾಗ ಆ ಓಘದಲ್ಲಿ ಕೊಚ್ಚಿಹೋಗಿಬಿಡಬೇಡಿ. ಚಿಕಿತ್ಸಕ ದೃಷ್ಟಿಯಿಂದ ಆಲಿಸಿ ನೋಡಿ. ರಾಷ್ಟ್ರ ಸಾಗುತ್ತಿರುವ ಹಾದಿಯನ್ನು ಕೊನೆಯ ವ್ಯಕ್ತಿಯವರೆಗೂ ಮುಟ್ಟಿಸಲು ಅವರು ಅದೆಂತಹ ಮಾತಿನ ಕಸರತ್ತು ನಡೆಸುತ್ತಾರೆಂಬುದು ನಿಮಗೇ ಅರ್ಥವಾಗಿಬಿಡುತ್ತದೆ. ಅದಕ್ಕೆ ಕಾಂಗ್ರೆಸ್ಸು ನರೇಂದ್ರಮೋದಿ ತಾನು ಮಾಡಿರುವ ಕೆಲಸವನ್ನು ಸಮರ್ಥವಾಗಿ ಮುಟ್ಟಿಸಬಲ್ಲ ಕಲೆಗಾರ ಎಂದು ಹೊಟ್ಟೆ ಉರಿಸಿಕೊಳ್ಳುತ್ತದೆ.

ಕಳೆದ ವರ್ಷ ಆಸ್ಟ್ರೋಸ್ಪೀಕ್ನ ನಿಶಾ ಘಾಯ್ ನರೇಂದ್ರಮೋದಿಯವರ ಕೈಗಳನ್ನು ಗಮನಿಸಿ ಹಸ್ತ ಸಾಮುದ್ರಿಕಾ ಶಾಸ್ತ್ರದ ಆಧಾರದ ಮೇಲೆ ಒಂದಷ್ಟು ವ್ಯಕ್ತಿತ್ವ ದರ್ಶನ ಮಾಡಿಸಿದ್ದರು. ನೀಳವಾದ ಬೆರಳುಳ್ಳ ಅವರ ಕೈಗಳು ಅವರನ್ನು ಸಮಚಿತ್ತದ ವ್ಯಕ್ತಿಯನ್ನಾಗಿಸಿದೆ. ತಿಳಿಗೆಂಪು ಬಣ್ಣದ ಕೈಗಳಲ್ಲಿ ಸಮಾನ ದೂರಕ್ಕಿರುವ ಬೆರಳುಗಳು ಇತರೆಲ್ಲರಿಗಿಂತ ಭಿನ್ನವಾದ ವ್ಯಕ್ತಿತ್ವವುಳ್ಳವರಾಗಿಸಿದೆ. ಉದ್ದನೆಯ ಹೆಬ್ಬೆರಳು ಬಲವಾದ ಇಚ್ಛಾಶಕ್ತಿಯ ಪ್ರತೀಕವಾದರೆ ಚೂಪಾಗಿರುವ ಹೆಬ್ಬೆರಳು ಎಲ್ಲಾ ಗೊತ್ತಿದ್ದೂ ಮುಗುಮ್ಮಾಗಿರುವ ಅವರ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತದೆ. ಅವರ ಹೆಬ್ಬೆರಳು ನಿಸ್ಸಂಶಯವಾಗಿ ದೂರದೃಷ್ಟಿಯುಳ್ಳ ಯೋಜನೆಗಳನ್ನು ಸಾಕಾರಗೊಳಿಸಬಲ್ಲ, ಸಹಜವಾಗಿಯೇ ನಾಯಕನಾಗಿರುವ ವ್ಯಕ್ತಿತ್ವದ ದ್ಯೋತಕವಾಗಿದೆ. ಅವರ ಮಧ್ಯಬೆರಳು ಬಲು ವಿಶೇಷವಾಗಿದ್ದು ಅವರನ್ನು ಚುರುಕು ಬುದ್ಧಿಯ ಜ್ಞಾನಿಯಾಗಿರುವುದನ್ನು ಸಮಥರ್ಿಸುತ್ತದೆ. ಅಂಗೈಯ್ಯಲ್ಲಿರುವ ಗುರುಕ್ಷೇತ್ರ ಉಬ್ಬಿರುವುದು ಮೋದಿ ಮಹತ್ವಾಕಾಂಕ್ಚಿ ಎಂಬುದನ್ನು ಸೂಚಿಸುವುದಲ್ಲದೇ ಸಮರ್ಥ ಆಡಳಿತಗಾರ ಎಂಬುದನ್ನು ಪ್ರತಿನಿಧಿಸುತ್ತದೆ. ಅವರ ಕೈಗಳಲ್ಲಿರುವ ಶಿರೋರೇಖೆ ತುಂಡು-ತುಂಡಾಗಿರುವುದರಿಂದ ಅವರು ಪದೇ ಪದೇ ಆಥರ್ಿಕ ಸಮಸ್ಯೆಗೆ ಒಳಗಾಗುತ್ತಾರೆ ಎಂದು ಉಲ್ಲೇಖಿಸಲಾಗುತ್ತದೆ. ಇದನ್ನು ಅಲ್ಲಗಳೆಯುವುದು ಕಷ್ಟವೇ. ಈಗಲೂ ಆಥರ್ಿಕ ಸ್ಥಿತಿ ಮೋದಿಯವರನ್ನು ಕಾಡುತ್ತಲೇ ಇದೆ. ಜಾಗತಿಕ ಮಟ್ಟದಲ್ಲಿ ಮೌಲ್ಯವಧರ್ಿಸಿಕೊಳ್ಳುತ್ತಿರುವ ಡಾಲರ್ನ ಎದುರಿಗೆ ರೂಪಾಯಿ ಕುಸಿಯುತ್ತಿರುವುದು ಎಂಥವನಿಗೂ ಆತಂಕ ತುರುವಂಥದ್ದೇ.

ಮೋದಿಯವರ ಹುಬ್ಬು ತಿದ್ದಿ ತೀಡಿದಂಥದ್ದು. ಸೂಕ್ತವಾಗಿ ಹರಡಲ್ಪಟ್ಟಿರುವ ಕೇಶಗಳು ನಿಚ್ಚಳವಾಗಿ ಕಾಣುವಂತಿವೆ. ಇದು ಪ್ರತಿಯೊಂದು ವಿಚಾರವನ್ನೂ ಅವರು ಆಳಕ್ಕಿಳಿದು ವಿಶ್ಲೇಷಿಸುವುದರ ಸಂಕೇತವಾಗಿದೆ. ಅವರ ಮುಖವನ್ನು ಹತ್ತಿರದಿಂದ ನೋಡಿದವರು ಹೇಳುವ ಒಂದು ಅಚ್ಚರಿಯ ಸಂಗತಿಯೆಂದರೆ ಎಡ ಕಿವಿ ಬಲಗಿವಿಗಿಂತ ದೊಡ್ಡದಂತೆ. ಬಲಗಿವಿ ಆಡಳಿತಾತ್ಮಕ ನಿರ್ಣಯಗಳಲ್ಲಿ ನರೇಂದ್ರಮೋದಿಯವರ ನಿಧರ್ಾರದ ಕ್ಷಮತೆಯನ್ನು ಸೂಚಿಸಿದರೆ ಸ್ವಲ್ಪ ಎತ್ತರವಾಗಿರುವ ಎಡಗಿವಿ ಪರಿವಾರದ ಕುರಿತಂತೆ ನಿರ್ಣಯವನ್ನು ಕೈಗೊಳ್ಳುವಲ್ಲಿ ವೇಗ ಮತ್ತು ನಿಖರತೆಯ ಪ್ರತಿನಿಧಿಯಂತೆ. ಬಹುಶಃ ಈ ವಿಚಾರದಲ್ಲಿ ಎರಡು ಮಾತಿಲ್ಲ. ರಾಷ್ಟ್ರಕಾರ್ಯಕ್ಕಾಗಿ ಪತ್ನಿಯಿಂದ ದೂರವಿರುವಾಗ, ತನ್ನ ಸ್ವಂತ ಸಹೋದರರನ್ನು ಅಧಿಕಾರದ ಪರಿಧಿಯಿಂದ ದೂರವಿಡುವ ನಿರ್ಣಯ ಕೈಗೊಳ್ಳುವಾಗ ಮೋದಿ ಒಂದು ನಿಮಿಷವೂ ಯೋಚಿಸಿರಲಿಕ್ಕಿಲ್ಲ. ಮೋದಿಯವರ ಕಂಗಳ ಕುರಿತಂತೆ ದೇಶದ ನೂರು ಕೋಟಿ ಜನರೂ ಹೇಳಬಲ್ಲರು. ಕಂಗಳಲ್ಲಿರುವ ಆಳ ವಿಸ್ತಾರಗಳು ಎಂಥವನ ಎದೆಯನ್ನೂ ಇರಿಯಬಲ್ಲವು. ವೇದಿಕೆಯ ಮೇಲೆ ನಿಂತು ಅವರು ಮಾತನಾಡುತ್ತಿದ್ದರೆ ಒಂದು ಲಕ್ಷ ಜನರೇ ಇದ್ದರು ಪ್ರತಿಯೊಬ್ಬರಿಗೂ ಮೋದಿ ತನ್ನನ್ನೇ ನೋಡುತ್ತಿದ್ದಾರೆಂಬ ಭರವಸೆಯನ್ನು ಹುಟ್ಟಿಸಿಬಿಡಬಲ್ಲದು ಆ ಕಂಗಳು. ಬಲವಾದ ದವಡೆಗಳು ಅವರ ಕಡು ವ್ಯಕ್ತಿತ್ವದ ಪ್ರತಿನಿಧಿಯಾದರೆ ಥಳ-ಥಳಿಸುವ ಕಪೋಲಗಳು ಆತ್ಮಶಕ್ತಿಯ ಪ್ರತಿನಿಧಿ.

6

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s