ವಿವೇಕಾನಂದರ ರಥಕ್ಕೆ ಎಷ್ಟೊಂದು ಸಂಭ್ರಮದ ಸ್ವಾಗತ!

ವಿವೇಕಾನಂದರ ರಥಕ್ಕೆ ಎಷ್ಟೊಂದು ಸಂಭ್ರಮದ ಸ್ವಾಗತ!

ಯುವಾಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪತ್ರಿಷ್ಠಾನದ ಮೂಲಕ ಈ ಇಡಿಯ ವರ್ಷವನ್ನು ವಿಶೇಷವಾಗಿ ಆಚರಿಸಬೇಕೆಂದು ನಿಶ್ಚಯಿಸಿದಾಕ್ಷಣ ಮೊದಲಿಗೆ ಬಂದ ಆಲೋಚನೆಯೇ ರಥಯಾತ್ರೆಯದ್ದು. ನಾವೆಷ್ಟೇ ಆಧುನಿಕತೆಯ ಮಾತಾಡಿದರೂ ರಥಯಾತ್ರೆಯ ಗೌರವ ಒಂದಿನಿತೂ ಮಾಸಿಲ್ಲ. ಅದರಲ್ಲೂ ಸ್ವಾಮಿ ವಿವೇಕಾನಂದರನ್ನು ವೈಭವವಾಗಿ ಕೂರಿಸಿಕೊಂಡು ಹೊರಟ ರಥ ಸಾಮಾನ್ಯ ಜನರನ್ನು ಖಂಡಿತ ಸೆಳೆಯುವುದೆಂಬ ವಿಶ್ವಾಸವಿತ್ತು.

ಸ್ವಾಮಿ ವಿವೇಕಾನಂದರ ಚಿಕಾಗೊ ಭಾಷಣಕ್ಕೆ 125 ತುಂಬಿದುದರ ಸಂಭ್ರಮ ಜಗತ್ತಿನಾದ್ಯಂತ ರಂಗೇರಿದೆ. ಬಹುಶಃ ನನ್ನ ಕಾಲದ ಎಲ್ಲ ತರುಣರ ಭಾಗ್ಯವಿದು. ಗುಜರಾತಿನ ರಾಮಕೃಷ್ಣ ಮಿಷನ್ನಿಗೆ ಒಮ್ಮೆ ಭೇಟಿ ಕೊಟ್ಟಿದ್ದ ನರೇಂದ್ರಮೋದಿಯವರು ಅಲ್ಲಿನ ಪ್ರಮುಖರೊಂದಿಗೆ ಮಾತನಾಡುತ್ತಾ ವಿವೇಕಾನಂದರ 150 ನೇ ಜಯಂತಿಯ ವೇಳೆಗೆ ಗಾಂಧಿ ಚಲನಚಿತ್ರದಂತೆ ಅಂತರರಾಷ್ಟ್ರೀಯ ಮಟ್ಟದ ಚಲನಚಿತ್ರವೊಂದನ್ನು ನಾವು ಮಾಡಬೇಕಿತ್ತು. ಒಳ್ಳೆಯ ಅವಕಾಶವೊಂದು ಕೈ ತಪ್ಪಿ ಹೋಯ್ತು ಎಂದು ನೊಂದುಕೊಂಡಿದ್ದರು. ಅದೇ ಮಾತನ್ನು ಈ ಸಂದರ್ಭದಲ್ಲಿ ನಾವು ಹೇಳುವಂತಿಲ್ಲ. ನಾವೀಗ ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ವಿವೇಕಾನಂದರ ವಿಚಾರಧಾರೆಗಳನ್ನು ಸಮಾಜಕ್ಕೆ ಮುಟ್ಟಿಸುವುದಲ್ಲದೇ ಭಾರತ ವಿರೋಧಿ ಶಕ್ತಿಗಳ ಕುರಿತಂತೆ ಸ್ವಾಮೀಜಿ ಹೇಳಿರುವ ಮತ್ತು ಆದೇಶಿಸಿರುವ ಕೆಲಸಗಳ ಕುರಿತಂತೆ ವಿಶೇಷವಾಗಿ ಗಮನ ಹರಿಸಬೇಕಿದೆ.

FB_IMG_1537002761453
ಯುವಾಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪತ್ರಿಷ್ಠಾನದ ಮೂಲಕ ಈ ಇಡಿಯ ವರ್ಷವನ್ನು ವಿಶೇಷವಾಗಿ ಆಚರಿಸಬೇಕೆಂದು ನಿಶ್ಚಯಿಸಿದಾಕ್ಷಣ ಮೊದಲಿಗೆ ಬಂದ ಆಲೋಚನೆಯೇ ರಥಯಾತ್ರೆಯದ್ದು. ನಾವೆಷ್ಟೇ ಆಧುನಿಕತೆಯ ಮಾತಾಡಿದರೂ ರಥಯಾತ್ರೆಯ ಗೌರವ ಒಂದಿನಿತೂ ಮಾಸಿಲ್ಲ. ಅದರಲ್ಲೂ ಸ್ವಾಮಿ ವಿವೇಕಾನಂದರನ್ನು ವೈಭವವಾಗಿ ಕೂರಿಸಿಕೊಂಡು ಹೊರಟ ರಥ ಸಾಮಾನ್ಯ ಜನರನ್ನು ಖಂಡಿತ ಸೆಳೆಯುವುದೆಂಬ ವಿಶ್ವಾಸವಿತ್ತು. ಜಾತಿಗೊಬ್ಬ ಮಹಾಪುರಷರಿರುವ ಹೊತ್ತಲ್ಲಿ ಯಾವ ಜಾತಿಗೂ ಸೇರದ ವಿವೇಕಾನಂದರನ್ನು ಜನ ಸ್ವೀಕರಿಸುವರಾ ಎಂಬ ಆತಂಕವೂ ಇತ್ತು. ಈ ಆತಂಕ ದೂರವಾಗಿದ್ದು ಚಂದಾಪುರದಲ್ಲಿ ತರುಣರು ಪೇಟಧಾರಿಗಳಾಗಿ ಬೀದಿಗಿಳಿದಾಗಲೇ. ಅದನ್ನು ಮೀರಿಸಿದ್ದು ಕನಕಪುರದ ಸ್ವಾಗತ. ಅದನ್ನೊಂದು ರಿಪಬ್ಲಿಕ್ ಎಂದೇ ಭಾವಿಸಿರುವ ನಮ್ಮಲ್ಲನೇಕರಿಗೆ ಅಲ್ಲಿನ ಶಾಲಾ-ಕಾಲೇಜುಗಳು, ಸಾರ್ವಜನಿಕರು ವಿವೇಕಾನಂದರಿಗೆ ನೀಡಿದ ಅದ್ದೂರಿ ಸ್ವಾಗತ ಮೈ ಮರೆಸುವಂತಿತ್ತು. 2000 ಕ್ಕೂ ಹೆಚ್ಚಿನ ಸಂಖ್ಯೆಯ ತರುಣರು ಬೀದಿಗಿಳಿದು ಭಾರತ ಮಾತೆಗೆ ಜಯಘೋಷ ಕೂಗುತ್ತಾ ನಡೆಯುತ್ತಿದ್ದರೆ ರಾಷ್ಟ್ರದ ಭವಿಷ್ಯ ಸ್ಪಷ್ಟವಾಗಿ ಗೋಚರವಾಗುತ್ತಿತ್ತು. ಸಂಜೆಯ ಸಾರ್ವಜನಿಕ ಸಮಾರಂಭಕ್ಕೂ ಕಿಕ್ಕಿರಿದು ಸೇರಿದ್ದ ಜನತೆ ರಾಷ್ಟ್ರದ ಮನೋಗತ ಯಾವ ದಿಕ್ಕಿನಲ್ಲಿದೆ ಎಂದು ಸಾಬೀತುಪಡಿಸುವಂತಿತ್ತು. ಮಾಗಡಿ ರಸ್ತೆಯ ಮಾಚೊಹಳ್ಳಿ, ಪೀಣ್ಯಾ, ದಾಸರಹಳ್ಳಿ, ಮಾಲೂರು, ಕೋಲಾರ, ಚಿಂತಾಮಣಿ, ಹೊಸಕೋಟೆ, ಸೂಲಿಬೆಲೆ ಇಲ್ಲೆಲ್ಲಾ ವಿವೇಕಾನಂದ-ನಿವೇದಿತೆಯರಿಗೆ ಇಷ್ಟು ಅದ್ದೂರಿಯ ಸ್ವಾಗತ ದೊರೆಯಬಹುದೆಂಬ ಕಲ್ಪನೆ ಖಂಡಿತ ಇರಲಿಲ್ಲ. ವಿವೇಕಾನಂದ ಪ್ರಸ್ತುತ ಸಮಾಜಕ್ಕೆ ಅಗತ್ಯವಾಗಿ ಬೇಕಿರುವ ವ್ಯಕ್ತಿತ್ವ ಎಂಬುದು ನಮಗೆ ಸಾಬೀತಾಗಿ ಹೋಯ್ತು. ಈ ಆಧಾರದ ಮೇಲೆಯೇ ಸಪ್ಟೆಂಬರ್ 9 ರ ಭಾನುವಾರ ಮ್ಯಾರಥಾನ್ ಆಯೋಜಿಸಿದ್ದೆವು. ಕಬ್ಬಿಣದ ಮಾಂಸಖಂಡಗಳುಳ್ಳ ತರುಣರನ್ನೇ ಬಯಸುತ್ತಿದ್ದ ಸ್ವಾಮೀಜಿಯವರ ಕಲ್ಪನೆಗೆ ಅನುಸಾರವಾಗಿ ಈ ಮ್ಯಾರಥಾನ್ ರೂಪುಗೊಂಡಿತ್ತು. ಬೆಂಗಳೂರಿನ ಚುಮು-ಚುಮು ಚಳಿಯಲ್ಲಿ ಬೆಳಗಿನ 7 ಗಂಟೆಗೆ 5000 ಜನ ತರುಣ-ತರುಣಿಯರು ವಿವೇಕಾನಂದರ ಹೆಸರಿಗೆ ಒಟ್ಟಾಗಿ ಹಸಿರು ಟೀಶಟರ್್ ಹೊದ್ದು ಬಸವನಗುಡಿಯ ರಸ್ತೆಗಳಲ್ಲಿ ಓಡುತ್ತಿದ್ದರೆ ಅದೊಂದು ಕಣ್ಮನ ಕೋರೈಸುವ ದೃಶ್ಯವಾಗಿಬಿಟ್ಟಿತ್ತು. ಈ ಮ್ಯಾರಥಾನ್ನಲ್ಲಿ ಯಾರದ್ದೂ ಮಾತಿರಲಿಲ್ಲ. ಗಾಯನದ ಕಾರ್ಯಕ್ರಮವಿರಲಿಲ್ಲ. ಬೆನ್ನ ಹಿಂದೆ ವಿವೇಕಾನಂದರನ್ನು ಹೊತ್ತ ತರುಣ-ತರುಣಿಯರು ಓಡುವುದಷ್ಟೆ ಕಾರ್ಯಕ್ರಮವಾಗಿತ್ತು. ಅಚ್ಚರಿಯೇನು ಗೊತ್ತೇ? 4 ಕಿಲೋಮೀಟರ್ಗಳ ದೂರವನ್ನು 90 ಪ್ರತಿಶತಕ್ಕೂ ಹೆಚ್ಚು ಜನ ಓಡಿ ಕ್ರಮಿಸಿದ್ದರು. ದಾರಿಯುದ್ದಕ್ಕೂ ಭಾರತಮಾತೆಗೆ, ವಿವೇಕಾನಂದರಿಗೆ ಜೈಕಾರಗಳನ್ನು ಹಾಕುತ್ತಲೇ ಓಡಿದ್ದರು. ಬೆಂಗಳೂರಿನ ಪಾಲಿಗೆ ನಿಜಕ್ಕೂ ಇದೊಂದು ಸಂಚಲನವೇ.

FB_IMG_1537003551464
ಅದಾದ ಎರಡು ದಿನಗಳಲ್ಲೇ ವಿದ್ಯಾಪೀಠದ ಬಳಿ ಕೃಷ್ಣ ಕಾಲೇಜಿನಲ್ಲಿ ರಥಯಾತ್ರೆಗೆ ಅಧಿಕೃತ ಚಾಲನೆ ಸಿಕ್ಕಿತು. ಉಚ್ಚ ನ್ಯಾಯಾಲಯದ ನ್ಯಾಯಮೂತರ್ಿಗಳಾದ ಶ್ರೀಯುತ ಬೂದಿಹಾಳರು ಉದ್ಘಾಟನಾ ನುಡಿಯ ಮೂಲಕ ವರ್ಷವಿಡೀ ನಡೆಯುವ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರೆ ಪರಮಪೂಜ್ಯ ಪೇಜಾವರ ಶ್ರೀಗಳು ಅಕ್ಕ ನಿವೇದಿತಾ ಮತ್ತು ಸ್ವಾಮಿ ವಿವೇಕಾನಂದರಿಗೆ ಹೂ ಎರಚುವುದರ ಮೂಲಕ ರಥಯಾತ್ರೆಗೆ ಹಸಿರು ನಿಶಾನೆ ತೋರಿದರು. ಆಮೇಲೆ ನಡೆದದ್ದೇ ಇಂದ್ರಜಾಲ. ಸಾವಿರಕ್ಕೂ ಮಿಕ್ಕಿ ತರುಣ-ತರುಣಿಯರು ಬಿಳಿಯ ಬಟ್ಟೆ ಧರಿಸಿ ಕೇಸರಿ ಪೇಟ ಏರಿಸಿಕೊಂಡು ಬೀದಿಗಿಳಿದಿದ್ದರು. ವಿದ್ಯಾಪೀಠದಿಂದ ಬಸವನಗುಡಿಯ ರಾಮಕೃಷ್ಣಾಶ್ರಮದವರೆಗೆ ವಿವೇಕಾನಂದ ನಿವೇದಿತೆಯರನ್ನು ಹೊತ್ತ ರಥವನ್ನು ಹಿಂದಿಟ್ಟುಕೊಂಡು ತಾವು ಮುಂದೆ ಹೆಜ್ಜೆ ಹಾಕುತ್ತಿದ್ದರು. ರಥ ಹೊರಡುವ ಮುನ್ನ 50 ಕ್ಕೂ ಹೆಚ್ಚು ಜನ ಶಂಖೋದ್ಘೋಷ ಮಾಡಿದರು. ಈ ಉದ್ಘೋಷ ಸರಿಯಾಗಿ 3.30ಕ್ಕೆ ಆಗಿದ್ದು ಅದು ಚಿಕಾಗೊದಲ್ಲಿ ವಿವೇಕಾನಂದರು ಭಾಷಣ ಮಾಡಿದ ಸಮಯವೂ ಆಗಿತ್ತು. ಹತ್ತಾರು ಕಲಾ ತಂಡಗಳು ಮೆರವಣಿಗೆಯುದ್ದಕ್ಕೂ ತಮ್ಮ ಪ್ರದರ್ಶನದ ಮೂಲಕ ರಥಯಾತ್ರೆಯ ವೈಭವವನ್ನು ಹೆಚ್ಚಿಸಿತು. ದಾರಿಯುದ್ದಕ್ಕೂ ಕರಪತ್ರವನ್ನು ಹಂಚುತ್ತಾ ಸಾಗುತ್ತಿದ್ದ ತರುಣರು ಇದನ್ನೊಂದು ಸಾಮಾನ್ಯ ರಥಯಾತ್ರೆಯನ್ನಾಗಿಸದೇ ಇದರ ಮಹತ್ವವನ್ನೂ ತಿಳಿಸುತ್ತಾ ಸಾಗಿದುದು ವೈಶಿಷ್ಟ್ಯಪೂರ್ಣವೆನಿಸಿತ್ತು. ಎಲ್ಲಿಯೂ ಟ್ರಾಫಿಕ್ ಹತ್ತು ನಿಮಿಷಕ್ಕಿಂತ ಹೆಚ್ಚು ನಿಲ್ಲದಂತೆ ರಥವನ್ನು, ತರುಣರನ್ನು ವೇಗವಾಗಿ ಸಾಗುವಂತೆ ಪ್ರಯತ್ನ ಮಾಡುತ್ತಿದ್ದ ಕಾರ್ಯಕರ್ತರು ಪೊಲೀಸರಿಂದಲೂ ಮೆಚ್ಚುಗೆಗೆ ಪಾತ್ರವಾದರು. ಅದೂ ಸರಿಯೇ ಅಲ್ಲವೇ. ಇತರರಿಗೆ ತೊಂದರೆ ಕೊಟ್ಟು ನಡೆಸುವ ಪ್ರಾರ್ಥನೆ, ಶೋಭಾಯಾತ್ರೆ ಇವಕ್ಕೆಲ್ಲ ಬೆಲೆ ಎಲ್ಲಿಯದು? ಟ್ರಾಫಿಕ್ನಲ್ಲಿ ಬಂಧಿತರಾಗಿದ್ದ ಅನೇಕರು ಕಾರ್ಯಕರ್ತರಿಂದ ಕರಪತ್ರ ಪಡೆದು ಅದರಲ್ಲಿರುವ ವಿವೇಕಾನಂದರ ಮತ್ತು ನಿವೇದಿತೆಯರ ವಿಚಾರಗಳನ್ನು ಓದುತ್ತಾ ಸಮಯ ಸದುಪಯೋಗ ಪಡಸಿಕೊಂಡಿದ್ದು ಹೆಮ್ಮೆಯೆನಿಸುವಂತಿತ್ತು.

ಶೋಭಾಯಾತ್ರೆಯುದ್ದಕ್ಕೂ ಕಾರ್ಯಕರ್ತರು ಕೊಟ್ಟ ಬಿಡಿ ಹೂವುಗಳನ್ನು ವಿವೇಕಾನಂದರ ಮತ್ತು ನಿವೇದಿತೆಯರ ಪ್ರತಿಮೆಗೆ ಎರಚುತ್ತಿದ್ದ ಪುಟ್ಟ ಮಕ್ಕಳನ್ನು, ವಯೋವೃದ್ಧರನ್ನು, ತಾಯಂದಿರನ್ನು ಅಕ್ಕ-ಪಕ್ಕದ ಅಂಗಡಿಯವರನ್ನು ಕಂಡಾಗ ಒಮ್ಮೆ ರೋಮಾಂಚನವೆನಿಸುತ್ತಿದ್ದುದು ನಿಜ. ಇಡಿಯ ಈ ಯಾತ್ರೆಯಲ್ಲಿ ಉತ್ಸಾಹ ಭರಿತರಾದ ತರುಣರು ಎಲ್ಲಿಯೂ ಪಟಾಕಿ ಸಿಡಿಸದೇ ತಮ್ಮ ಸಂಭ್ರಮಕ್ಕೂ ಒಂದು ಚೌಕಟ್ಟು ಹಾಕಿಕೊಂಡಿದ್ದನ್ನು ಮೆಚ್ಚಲೇಬೇಕಾದ್ದು. ಅಷ್ಟೇ ಅಲ್ಲ. ನಾಲ್ಕು ಜನ ಕಾರ್ಯಕರ್ತರು ಕೈಯಲ್ಲಿ ಪೊರಕೆ ಮತ್ತು ಚೀಲಗಳನ್ನು ಹಿಡಿದುಕೊಂಡು ರಥದ ಹಿಂದೆ ಅಗತ್ಯ ಬಿದ್ದೆಡೆಯೆಲ್ಲಾ ಕಸ ಗುಡಿಸುತ್ತಾ ಬಂದಿದ್ದು ಕಣ್ಸೆಳೆಯುವಂತಿತ್ತು.
ಭಾರತೀಯರ ಸಂಘಟನೆಯ ಕುರಿತಂತೆ ವಿವೇಕಾನಂದರಿಗೆ ಯಾವಾಗಲೂ ಆಕ್ಷೇಪವಿದ್ದೇ ಇತ್ತು. ಪಶ್ಚಿಮದಲ್ಲಿ ಒಂದು ಸಂಘಟನೆಗಾಗಿ ಮೂರು ಜನ ಒಟ್ಟಾಗುತ್ತಾರೆ. ಆದರೆ ಭಾರತದಲ್ಲಿ ಮೂರು ಜನ ಸೇರಿದರೆ ನಾಲ್ಕು ಸಂಘಟನೆಯಾಗುತ್ತಾರೆ ಎಂದು ಅವರು ಮೂದಲಿಸುತ್ತಿದ್ದರು. ವಾಸ್ತವವಾಗಿ ನಮ್ಮ ತರುಣರಲ್ಲಿ ಶಕ್ತಿಯ ಕೊರತೆಯಿಲ್ಲ. ಅದನ್ನು ಸೂಕ್ತ ದಿಕ್ಕಿನೆಡೆಗೆ ತಿರುಗಿಸುವವರದ್ದೇ ಕೊರತೆ. ನರೇಂದ್ರಮೋದಿಯವರು ಅಧಿಕಾರಕ್ಕೆ ಬಂದೊಡನೆ ಮಾಡಿದ ಕೆಲಸವೇ ಇರುವ ಶಕ್ತಿಗೊಂದು ದಿಕ್ಕು ತೋರಿದ್ದು. ಹೀಗಾಗಿಯೇ ಕೋಟ್ಯಂತರ ಜನ ಇಂದು ತಮ್ಮ ತಮ್ಮ ವ್ಯಾಪ್ತಿಯಲ್ಲಿ ರಾಷ್ಟ್ರದ ಒಳಿತಿಗಾಗಿ ದುಡಿಯುವಂತಾಗಿದೆ. ಈ ಹಿನ್ನೆಲೆಯಲ್ಲಿಯೇ ಇಂದಿನ ತರುಣ ಪೀಳಿಗೆಯನ್ನು ಸಮರ್ಥವಾಗಿ ಮುನ್ನಡೆಸಬಲ್ಲ ಶಕ್ತಿ ವಿವೇಕಾನಂದರ ವಿಚಾರಧಾರೆಗಳಿಗಿದೆ ಎಂದು ಮತ್ತೆ ಮತ್ತೆ ಹೇಳಬೇಕೆನಿಸೋದು.

FB_IMG_1537002824213
ರಥವೇನೋ ರಾಜ್ಯಾದ್ಯಂತ ಸಂಚರಿಸಲಿದೆ. ಕೊಡಗೊಂದನ್ನು ಬಿಟ್ಟು ಉಳಿದೆಲ್ಲ ಜಿಲ್ಲೆಗಳನ್ನು ಮುಟ್ಟಿಬರಲಿದೆ. ಎಲ್ಲೆಲ್ಲಿ ರಥದ ಗಾಲಿ ಉರುಳುತ್ತದೋ ಅಲ್ಲೆಲ್ಲಾ ವಿವೇಕಾನಂದರ ಚಿಂತನೆಯ ಸಿಂಚನ ಮಾಡಿಸಲು ತರುಣ ಪಡೆ ಸಜ್ಜಾಗಿ ನಿಂತಿದೆ. ಜನರೂ ಅಷ್ಟೇ. ಜಾತಿ-ಮತ ಮೀರಿದ ರಾಷ್ಟ್ರ ಚಿಂತನೆಯ ಮಹಾಪುರುಷನೊಬ್ಬನ ಬರುವಿಗಾಗಿ ಹಾತೊರೆದು ನಿಂತಿದ್ದಾರೆ. ಚಿಕಾಗೊದಲ್ಲಿ ದಿಗ್ವಿಜಯ ಸಾಧಿಸಿ ಭಾರತಕ್ಕೆ ಮರಳಿದ್ದ ಸ್ವಾಮಿ ವಿವೇಕಾನಂದರಿಗೆ ಯಾವ ಗೌರವ ಸಿಕ್ಕಿತ್ತೊ ಇಂದು ಮತ್ತೆ ಅದೇ ಗೌರವ ದೊರಕಿಸಿಕೊಡುವಲ್ಲಿ ನಾವೆಲ್ಲರೂ ಶ್ರಮಿಸಬೇಕಿದೆ. ಏಕೆಂದರೆ ಅಂದು ವಿವೇಕಾನಂದರ ರಥದ ಕುದುರೆಗಳನ್ನು ಬಿಡಿಸಿ ರಥವನ್ನು ತಾವೇ ಎಳೆದ ಆ ತರುಣರು ಮುಂದೆ ಭಾರತದ ಸ್ವಾತಂತ್ರ್ಯದ ಜ್ಯೋತಿಯನ್ನು ಹೊತ್ತೊಯ್ಯುವ ಕ್ರಾಂತಿಕಿಡಿಗಳಾಗಿ ರೂಪುಗೊಂಡಿದ್ದರು. ಇಂದು ಮತ್ತೆ ವಿವೇಕಾನಂದರ ರಥಕ್ಕೆ ಸ್ವಾಗತ ತೋರುವ ನಾವುಗಳು ಹೊಸ ಭಾರತದ ನಿಮರ್ಾಣಕ್ಕೆ ಅಡಿಪಾಯವಾಗಲಿದ್ದೇವೆ. ಭಾರತ ಹಿಂದೆಂದಿಗಿಂತಲೂ ವೈಭವಯುತವಾಗಿ ಮೆರೆಯುವುದು ನಿಸ್ಸಂಶಯ. ಹಾಗೆಂದು ಸ್ವಾಮೀಜಿಯೇ ಹೇಳಿದ್ದಾರೆ. ಹೀಗಿರುವಾಗ ಆ ವೈಭವದಲ್ಲಿ ನಮ್ಮದ್ದೂ ಒಂದು ಪಾಲಿರಬೇಕೆಂದು ಬಯಸುವುದರಲ್ಲಿ ತಪ್ಪೇನಿದೆ? ಚಿಕಾಗೊ 125 ರ ನೆನಪು ಎಂದರೆ ಅದು ಭಾರತದ ವೈಭವವನ್ನು ಮರಳಿ ತಂದುಕೊಟ್ಟ ಯೋಧನ ನೆನಪು. ಹಿಂದೂಧರ್ಮವನ್ನು ಪುನರ್ಪ್ರತಿಷ್ಠಾಪಿಸಿದ ಸಂತನ ಸ್ಮರಣೆ. ನಮ್ಮೆಲ್ಲರಿಗೂ ಸದ್ಯಕ್ಕೆ ಅದೇ ಪ್ರೇರಣೆ.
ಬನ್ನಿ, ಹೊಸ ನಾಡು ಕಟ್ಟೋಣ. ವಿಶ್ವಗುರು ಭಾರತದ ಇಟ್ಟಿಗೆಗಳಾಗೋಣ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s