ಮೆಹಬೂಬಾ ಮುಫ್ತಿಯೊಂದಿಗೆ ವಿಚ್ಛೇದನದ ಲಾಭ ಯಾರಿಗೆ?

ಮೆಹಬೂಬಾ ಮುಫ್ತಿಯೊಂದಿಗೆ ವಿಚ್ಛೇದನದ ಲಾಭ ಯಾರಿಗೆ?

2012-13 ರ ಎರಡು ವರ್ಷಗಳಲ್ಲಿ ಸುಮಾರು 130 ಭಯೋತ್ಪಾದಕರನ್ನು ಕೊಂದಿದ್ದರೆ ಭಾಜಪ ಅಧಿಕಾರಕ್ಕೆ ಬಂದ ಮೊದಲನೇ ವರ್ಷದಲ್ಲಿಯೇ 110, 2015 ರಲ್ಲಿ 108, 2016 ರಲ್ಲಿ 150, 2017 ರಲ್ಲಿ 217 ಮತ್ತು ಈ ಮೈತ್ರಿ ಮುರಿದು ಬೀಳುವ ಮುನ್ನ ಈ ವರ್ಷದಲ್ಲಿ ಅದಾಗಲೇ 75 ಭಯೋತ್ಪಾದಕರನ್ನು ಯಮಪುರಿಗೆ ಅಟ್ಟಿಬಿಟ್ಟಿದೆ. ಇದು ಪಿಡಿಪಿಯದ್ದೇ ಸಕರ್ಾರ ಇದ್ದಾಗಲೂ ಭಾಜಪ ಮಾಡಿದ ಅಪರೂಪದ ಸಾಧನೆ. ಮೇಲ್ನೋಟಕ್ಕೆ ನೋಡಲು ಪಿಡಿಪಿಯ ಸಕರ್ಾರ ಕೇಂದ್ರ ಸಕರ್ಾರದ ಮೇಲೆ ಏರಿ ಹೋಗಿದೆ ಎನಿಸುತ್ತದೆ.

ಜಮ್ಮು-ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆ ಶುರುವಾಗಿದೆ. ಹಾಗಂತ ಯಾವುದೂ ಅನಿರೀಕ್ಷಿತವಲ್ಲ. ಪ್ರತಿಯೊಂದು ವಿಚಾರಗಳಲ್ಲೂ ಮತ ಭೇದವನ್ನು ಹೊಂದಿರುವಂಥ ಎರಡು ಪಕ್ಷಗಳು ಒಂದಾಗಿ ಇಷ್ಟು ವರ್ಷ ಅಧಿಕಾರ ನಡೆಸಿದ್ದೇ ಅಚ್ಚರಿ. ಕೆಲವೊಮ್ಮೆ ಅಪವಿತ್ರ ಮೈತ್ರಿಗಳು ಏರ್ಪಟ್ಟುಬಿಡುತ್ತವೆ. ಕಿತ್ತಾಡಿಕೊಂಡೇ ಚುನಾವಣೆ ಮುಗಿಸಿದವರು ಫಲಿತಾಂಶದ ನಂತರ ಗದ್ದುಗೆಗಾಗಿ ಒಟ್ಟಾಗುತ್ತಾರೆ. ಹಾಗೆ ಒಟ್ಟಾಗುವುದಕ್ಕೆ ಅನೇಕ ಕಾರಣಗಳಿರುತ್ತವೆ. ಪಕ್ಷಗಳು ತಮ್ಮ ನಡುವಿನ ಭೇದಕ್ಕಿರುವ ಕಾರಣಗಳನ್ನು ಬದಿಗೆ ಸರಿಸಿ ಸಾಮಾನ್ಯ ಕ್ರಿಯಾ ಯೋಜನೆಯ ಮೇಲೆ ರಾಜ್ಯ, ರಾಷ್ಟ್ರಗಳ ಹಿತಾಸಕ್ತಿಗಾಗಿ ಒಂದಾಗುತ್ತವೆ. ಇಲ್ಲವಾದರೆ ಮಾಡಿರುವ ಲೂಟಿಯನ್ನು ಮರೆಸಲು ಹೊಸ ಸಕರ್ಾರ ಬರುದಂತೆ ಮಾಡಲು ಒಟ್ಟಾಗಿಬಿಡುತ್ತಾರೆ. ಬಿಜೆಪಿಗೆ ಜಮ್ಮು-ಕಾಶ್ಮೀರದಲ್ಲಿ ಪಿಡಿಪಿಯೊಂದಿಗೆ ಕೈ ಜೋಡಿಸಬೇಕಾದ ಅನಿವಾರ್ಯತೆ ಖಂಡಿತ ಇರಲಿಲ್ಲ. ಆದರೆ ಈ ಬಾರಿಯ ಚುನಾವಣೆಯಲ್ಲಿ ಹಿಂದೂ ಬಾಹುಳ್ಯದ ಜಮ್ಮು, ಬುದ್ಧಾನುಯಾಯಿಗಳ ಬಾಹುಳ್ಯದ ಲಡಾಖ್ ಬಿಜೆಪಿಯ ಪರವಾಗಿ ನಿಂತರೆ ಮುಸಲ್ಮಾನರೇ ಹೆಚ್ಚಿರುವ ಕಾಶ್ಮೀರ ಪೂರ್ಣ ಪ್ರಮಾಣದಲ್ಲಿ ಪಿಡಿಪಿಯೊಂದಿಗೆ ನಿಂತುಬಿಟ್ಟಿತು. ಒಟ್ಟಾರೆ ರಾಜ್ಯದ ಬೆಳವಣಿಗೆಗೆ ಅಧಿಕಾರಕ್ಕೆ ಬರುವುದು ಅನಿವಾರ್ಯವಾಗಿತ್ತು. ಕೊನೆಗೂ ಪಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿತು ಭಾಜಪ. ಈ ಬಾರಿ ಮೈತ್ರಿ ಮಾಡಿಕೊಳ್ಳುವಾಗ ಭಾಜಪ ಕೇಂದ್ರ ಸಕರ್ಾರವಷ್ಟೇ ಎಂಬ ಸಾಮಾನ್ಯ ಅಂಶವನ್ನಿಟ್ಟುಕೊಂಡು ಸಕರ್ಾರ ರಚಿಸಲಿಲ್ಲ. ಬದಲಿಗೆ ರಾಜ್ಯದ ಬಹುತೇಕ ಭೂಭಾಗವನ್ನು ಪ್ರತಿನಿಧಿಸುವ ಏಕೈಕ ಪಕ್ಷವಾಗಿ ಅಧಿಕೃತವಾಗಿ ಕೈಜೋಡಿಸಿತು. ಮೆಹಬೂಬಾ ಮುಫ್ತಿಗೂ ಕೂಡ ಈ ವಿಚಾರ ಬಲು ಚೆನ್ನಾಗಿಯೇ ಗೊತ್ತಿತ್ತು.

1

ಎಲ್ಲವೂ ಚೆನ್ನಾಗಿಯೇ ಇತ್ತು. ನರೇಂದ್ರಮೋದಿಯವರು ಆ ರಾಜ್ಯದ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂಪಾಯಿಯ ಪ್ಯಾಕೇಜುಗಳನ್ನು ಘೋಷಿಸಿದರು. ಜಮ್ಮು-ಕಾಶ್ಮೀರ ಪ್ರವಾಹಕ್ಕೆ ಸಿಲುಕಿದಾಗ ಖುದ್ದು ಅಲ್ಲಿಯೇ ಕೆಲವು ದಿನಗಳ ಕಾಲ ನೆಲೆಸಿ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಅಪಾರ ಶ್ರಮ ವಹಿಸಿದರು. ಮತಾಂಧತೆಯ ಅಗ್ನಿಯಲ್ಲಿ ಬೇಯುತ್ತಿರುವ ಕಾಶ್ಮೀರದ ಮುಸಲ್ಮಾನರಿಗೆ ಮೋದಿಯವರ ಈ ನಡೆಯಾಗಲಿ ದೇಶದ ಜನ ತೋರಿದ ಅಪಾರ ಪ್ರೀತಿಯಾಗಲೀ ತಂಪೆರೆಯಲಿಲ್ಲ. ನಾಲ್ಕು ದಿನ ಸುಮ್ಮನಿದ್ದು ಐದನೇ ದಿನ ಎಂದಿನ ತಮ್ಮ ಜೀಹಾದಿ ಬುದ್ಧಿ ತೋರಲಾರಂಭಿಸಿದರು. ಶ್ರೀನಗರದ ಸೋಪುರಿನ, ಬಾರಾಮುಲ್ಲ, ಉರಿಯ ಮನೆಗಳಲ್ಲಿ ಜೀಹಾದಿಗಳಿಗೆ ಬೆಂಬಲ ಕೊಡುವ ಘಟನೆಗಳು ನಡೆದೇ ಇದ್ದವು. ನರೇಂದ್ರಮೋದಿ ಅಚಾನಕ್ಕು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು ನವಾಜ್ ಶರೀಫರನ್ನು ತಬ್ಬಿಕೊಂಡಿದ್ದು ಕ್ಷಣಕಾಲ ಕಾಶ್ಮೀರದ ಕೊಳ್ಳದಲ್ಲಿ ಮಿಂಚಿನ ಸಂಚಾರ ಉಂಟು ಮಾಡಿತ್ತಾದರೂ ಮರುಕ್ಷಣವೇ ಬಲೂಚಿಸ್ತಾನದ ವಿಚಾರವಾಗಿ, ಸಿಂಧ್ನ ವಿಚಾರವಾಗಿ ಭಾರತ ತಳೆದ ಕಠಿಣ ನಿಲುವಿನಿಂದಾಗಿ ಉರಿದೆದ್ದ ಪಾಕಿಸ್ತಾನ ಜಮ್ಮು-ಕಾಶ್ಮೀರದ ತರುಣರನ್ನು ಭಡಕಾಯಿಸಲು ಶುರುಮಾಡಿತು. ಆಗಲೇ ಮುಂಚೂಣಿಗೆ ಬಂದು ನಿಂತವನು ಬುರ್ಹನ್ ವಾನಿ. ಫೇಸ್ಬುಕ್ನಲ್ಲಿ ತನ್ನ ತಂಡದ ಫೋಟೊ ಹಾಕಿದ ಬುರ್ಹನ್ ತಾಕತ್ತಿದ್ದರೆ ಹಿಡಿಯಿರಿ ಎಂದ. ಸೈನ್ಯವೂ ಮುಲಾಜಿಲ್ಲದೇ ಅವನನ್ನು ಅಟ್ಟಿಸಿಕೊಂಡು ಹೋಗಿ ಕೊಂದು ಬಿಸಾಡಿತು. ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಭಯೋತ್ಪಾದಕ ಸಂಘಟನೆಗಳು ಬಖರ್ಾದತ್ರಂತಹ ದೇಶ ವಿರೋಧೀ ಪತ್ರಕರ್ತರ ಮೂಲಕ ಬುರ್ಹನ್ ವನಿಯ ಕುರಿತಂತೆ ಅನುಕಂಪ ರೂಪೀ ಲೇಖನಗಳನ್ನು ಬರೆಸಿದವು. ಒಂದು ಹಂತದಲ್ಲ್ಲಂತೂ ಬಖರ್ಾ ಬುರ್ಹನ್ ವನಿಯನ್ನು ಬಡ ಮೇಷ್ಟರ ಮಗ ಎಂದು ಸಂಬೋಧಿಸಿದ್ದು ಅನೇಕರ ಹುಬ್ಬೇರಿಸುವಂತೆ ಮಾಡಿತ್ತು. ಈ ಘಟನೆಯ ನಂತರ ಕಾಶ್ಮೀರದಲ್ಲಿ ದೊಡ್ಡ ಪ್ರಮಾಣದ ತರುಣರು ಭಯೋತ್ಪಾದಕ ಸಂಘಟನೆಗಳಿಗೆ ಸೇರುತ್ತಿದ್ದಾರೆಂಬ ಪುಕಾರು ಹಬ್ಬಿಸಲಾಯ್ತು. ಭಯೋತ್ಪಾದಕ ಕೃತ್ಯಗಳಿಗೆ ಸೇರುವವರ ಸಂಖ್ಯೆ ಹೆಚ್ಚಾಗಿದ್ದು ನಿಜ. ಆದರೆ ಅದು ಬುದ್ಧಿಜೀವಿಗಳು ಹೇಳುವಷ್ಟು ದೊಡ್ಡ ಮಟ್ಟದ್ದಾಗಿರಲಿಲ್ಲ. ಈ ಅವಕಾಶವನ್ನು ಕಳೆದುಕೊಳ್ಳಲಿಚ್ಛಿಸದ ಸೇನೆ ಈ ಹಂತದಲ್ಲಿಯೇ ಆಪರೇಶನ್ ಆಲ್ ಔಟ್ ಅನ್ನು ಘೋಷಿಸಿ ಕಾಶ್ಮೀರ ಕೊಳ್ಳದ ಮನೆ-ಮನೆಯಲ್ಲೂ ಅಡಗಿದ್ದ ಭಯೋತ್ಪಾದಕರನ್ನು ಹುಡು-ಹುಡುಕಿ ಕೊಲ್ಲಲಾರಂಭಿಸಿತು. 2012-13 ರ ಎರಡು ವರ್ಷಗಳಲ್ಲಿ ಸುಮಾರು 130 ಭಯೋತ್ಪಾದಕರನ್ನು ಕೊಂದಿದ್ದರೆ ಭಾಜಪ ಅಧಿಕಾರಕ್ಕೆ ಬಂದ ಮೊದಲನೇ ವರ್ಷದಲ್ಲಿಯೇ 110, 2015 ರಲ್ಲಿ 108, 2016 ರಲ್ಲಿ 150, 2017 ರಲ್ಲಿ 217 ಮತ್ತು ಈ ಮೈತ್ರಿ ಮುರಿದು ಬೀಳುವ ಮುನ್ನ ಈ ವರ್ಷದಲ್ಲಿ ಅದಾಗಲೇ 75 ಭಯೋತ್ಪಾದಕರನ್ನು ಯಮಪುರಿಗೆ ಅಟ್ಟಿಬಿಟ್ಟಿದೆ. ಇದು ಪಿಡಿಪಿಯದ್ದೇ ಸಕರ್ಾರ ಇದ್ದಾಗಲೂ ಭಾಜಪ ಮಾಡಿದ ಅಪರೂಪದ ಸಾಧನೆ. ಮೇಲ್ನೋಟಕ್ಕೆ ನೋಡಲು ಪಿಡಿಪಿಯ ಸಕರ್ಾರ ಕೇಂದ್ರ ಸಕರ್ಾರದ ಮೇಲೆ ಏರಿ ಹೋಗಿದೆ ಎನಿಸುತ್ತದೆ. ಆದರೆ ವಾಸ್ತವ ಸ್ಥಿತಿಯಲ್ಲಿ ಭಾಜಪ ಕಾಶ್ಮೀರವನ್ನು ಭಯೋತ್ಪಾದಕ ಮುಕ್ತವಾಗಿಸಲು ಈ ನಾಲ್ಕು ವರ್ಷಗಳನ್ನು ಬಲು ಚೆನ್ನಾಗಿಯೇ ಬಳಸಿಕೊಂಡಿತು. ಒಂದು ಹಂತದಲ್ಲಂತೂ ಕಾಶ್ಮೀರದಲ್ಲಿ ಭಯೋತ್ಪಾದಕರಾಗುವುದಿರಲಿ ಅವರಿಗೆ ಬೆಂಬಲ ಕೊಡಲೂ ಹೆದರಿ ಜನ ತಟಸ್ಥರಾಗುವುದು ಶುರುವಾದಾಗಲೇ ಪಾಕಿಸ್ತಾನ ಆತಂಕಕ್ಕೊಳಗಾಯ್ತು ಮತ್ತು ಮೆಹಬೂಬಾ ಮುಫ್ತಿಯ ಮೇಲೆ ಪ್ರತ್ಯೇಕತಾವಾದಿಗಳ ತೂಗುಕತ್ತಿ ನೇತಾಡಲಾರಂಭಿಸಿತ್ತು.

BJP party celebrations in Jammu

ಈ ಹೊತ್ತಿನಲ್ಲೇ ಜಮ್ಮುವಿನ ಕಥುವಾದಲ್ಲಿ ನಡೆದ ಅತ್ಯಾಚಾರದ ಘಟನೆಯನ್ನು ಅಗತ್ಯಕ್ಕಿಂತ ಉಬ್ಬಿಸಿ ಪ್ರಚಾರ ಮಾಡಲಾಯ್ತು. ಈ ಅತ್ಯಾಚಾರದ ಪ್ರಕರಣ ಹಿಂದುಗಳನ್ನು ಅವಮಾನಿತಗೊಳಿಸಲು ಬೇಕೆಂದೇ ರೂಪಿಸಲ್ಪಟ್ಟಿದುದು ಎಂದು ಗೊತ್ತಾದೊಡನೆ ಜಮ್ಮುವಿನಲ್ಲಿ ಭರ್ಜರಿ ಪ್ರತಿರೋಧ ವ್ಯಕ್ತವಾಯ್ತು. ಸಹಜವಾಗಿಯೇ ಸಕರ್ಾರದಲ್ಲಿ ಮಂತ್ರಿಗಳಾಗಿದ್ದವರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸಿಕ್ಕ ಅವಕಾಶವನ್ನು ಮೆಹಬೂಬಾ ಬಿಡಲು ಸಿದ್ಧವಿರಲಿಲ್ಲ. ಈ ಹೊತ್ತಲ್ಲಿ ಎಲ್ಲ ತಪ್ಪನ್ನು ಭಾಜಪದ ಮೇಲೆ ಹೊರಿಸಿ ಸಕರ್ಾರದಿಂದ ಆಚೆ ಬಂದುಬಿಡುವ ಆಲೋಚನೆ ಆಕೆ ಮಾಡಿದ್ದಳು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಂತ್ರಿಗಳನ್ನು ರಾಜಿನಾಮೆ ಕೊಡುವಂತೆ ಮಾಡದಿದ್ದರೆ ತಾನು ಸಕರ್ಾರದಲ್ಲಿ ಇರುವುದಿಲ್ಲವೆಂಬ ಸಂಗತಿಯನ್ನು ಭಾಜಪಕ್ಕೆ ಸ್ಪಷ್ಟವಾಗಿ ಮುಟ್ಟಿಸಿದಳು. ಆ ಹಂತದಲ್ಲಿ ಅಧಿಕಾರ ಕಳೆದುಕೊಂಡಿದ್ದರೆ ಭಾಜಪ ಜಾಗತಿಕ ಮಟ್ಟದಲ್ಲಿ ಅವಮಾನವನ್ನೆದುರಿಸಬೇಕಿತ್ತು. ಹೀಗಾಗಿಯೇ ಚಾಣಾಕ್ಷ ನಡೆ ಇರಿಸಿದ ನರೇಂದ್ರಮೋದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಂತ್ರಿಗಳ ರಾಜಿನಾಮೆ ಕೊಡಿಸಿ ವಿವಾದ ತಣ್ಣಗಾಗುವವರೆಗೂ ಕಾಯ್ದರು. ಎರಡು ವಾರ ಕಳೆಯುವುದರೊಳಗಾಗಿ ಈ ಇಡಿಯ ಅತ್ಯಾಚಾರ ಪ್ರಕರಣ ಪೂರ್ವ ನಿಯೋಜಿತವೆಂಬ ಸುದ್ದಿ ಹೊರಬಂದಿದ್ದಲ್ಲದೇ ಅದರ ಆಧಾರದ ಮೇಲೆ ಹಿಂದುಗಳ ವಿರುದ್ಧ ತಿರುಗಿಬಿದ್ದಿದ್ದವರೆಲ್ಲ ತಲೆತಗ್ಗಿಸಿ ನಿಲ್ಲುವಂತಾಯ್ತು. ಈಗ ಮತ್ತೆ ಸಕರ್ಾರಕ್ಕೆ ಆ ಮಂತ್ರಿಗಳನ್ನು ಸೇರಿಸಿದ್ದಲ್ಲದೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಂತ್ರಿಗೆ ಹೆಚ್ಚಿನ ಹುದ್ದೆಯನ್ನು ನೀಡಿ ಜಮ್ಮುವಿನಲ್ಲಿ ಕಳೆದುಹೋಗಿದ್ದ ಭಾಜಪದ ನೆಲೆಯನ್ನು ಅಮಿತ್ ಶಾ ಮತ್ತೊಮ್ಮೆ ಗಟ್ಟಿ ಮಾಡಿಬಿಟ್ಟರು. ಈ ಹೊತ್ತಿನಲ್ಲಿ ಸಕರ್ಾರದಿಂದ ಯಾರು ಹೊರಗೆ ಹೋಗಿದ್ದರೂ ಲಾಭ ಬಿಜೆಪಿಗೇ ಇತ್ತು. ಹಾಗಂತ ಆತುರ ತೋರಲಿಲ್ಲ ಮೋದಿ. ಕಾಶ್ಮೀರದ ಕೊಳ್ಳದ ಜನತೆಗೆ ಮತ್ತೂ ಒಂದು ಅವಕಾಶ ಕೊಡುವ ಸಂಕಲ್ಪ ಮಾಡಿದರು. ಆಪರೇಶನ್ ಆಲ್ ಔಟ್ ಅನ್ನು ರಂಜಾನಿನ ಒಂದು ತಿಂಗಳ ಕಾಲ ತಡೆಹಿಡಿದು ಶಾಂತಿಯುತವಾಗಿ ಹಬ್ಬವನ್ನಾಚರಿಸುವ ಅವಕಾಶವನ್ನು ಪ್ರಧಾನಮಂತ್ರಿಗಳು ಮಾಡಿಕೊಟ್ಟರು. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನಿರಾಕರಿಸಿದ್ದಾಗ್ಯೂ ಅಜಿತ್ ದೋವಲ್ರೊಂದಿಗೆ ಚಚರ್ಿಸಿ ಮೋದಿ ಮಹತ್ವದ ನಿರ್ಣಯ ಕೈಗೊಂಡಿದ್ದರು. ಹೊರ ನೋಟಕ್ಕೆ ಇದು ರಾಷ್ಟ್ರದ ಸೋಲೆನಿಸಬಹುದೇನೋ. ಆದರೆ ರಂಜಾನಿನ ಕದನ ವಿರಾಮದ ವೇಳೆಯೂ ಸೈನಿಕರನ್ನು ಭಡಕಾಯಿಸಿ ಅವರು ಪ್ರತಿಕ್ರಿಯಿಸದೇ ಹೋದಾಗ ಮೋಸದಿಂದ ಅಪಹರಿಸಿ ಕೊಲ್ಲುವವರೆಗೂ ಭಯೋತ್ಪಾದಕರು ಹೋಗಿದ್ದು ಜಾಗತಿಕ ಮಟ್ಟದಲ್ಲಿ ಅವರ ಪ್ರಭೆಯನ್ನು ಸಾಕಷ್ಟು ಕಡಿಮೆ ಮಾಡಿತ್ತು. ಯುನೈಟೆಡ್ ನೇಷನ್ಸ್ನ ಮಾನವ ಹಕ್ಕು ರಕ್ಷಣಾ ವಿಭಾಗ ಭಾರತದ ವಿರುದ್ಧ ವರದಿ ಕೊಟ್ಟಾಗ ಅದನ್ನು ಪಾಕಿಸ್ತಾನ ಬಿಟ್ಟರೆ ಮತ್ತ್ಯಾವ ರಾಷ್ಟ್ರವೂ ಅಭಿನಂದಿಸದೇ ಇದ್ದುದಕ್ಕೆ ಈ ಒಂದು ತಿಂಗಳ ಭಾರತದ ನಿರ್ಣಯವೇ ಮುಖ್ಯವಾಯ್ತು. ರಂಜಾನಿನ ಕೊನೆಯ ಹಂತದಲ್ಲಿ ಸೈನಿಕ ಔರಂಗಜೇಬ್ ನ ಕೊಲೆ ಮತ್ತು ಪ್ರತ್ಯೇಕತಾವಾದಿಗಳ ಪರವಾಗಿಯೇ ನಿಂತಿದ್ದ ಶೂಜತ್ ಭೂಖಾರಿಯ ಕೊಲೆ ಪಿಡಿಪಿ ಸಕರ್ಾರದ ಬಾಂಧವ್ಯವನ್ನು ಕಳೆದುಕೊಳ್ಳಲು ನರೇಂದ್ರಮೋದಿಯವರಿಗೆ ಬಲು ದೊಡ್ಡ ಅಸ್ತ್ರ ಒದಗಿಸಿತು. ಸಂಬಂಧ ಕಡಿದುಕೊಂಡೊಡನೆ ಮೋದಿ ಮಾಡಿದ ಮೊದಲನೇ ಕೆಲಸವೇ ಸೈನ್ಯಕ್ಕೆ ಮುಕ್ತ ಪರವಾನಗಿ ನೀಡಿದ್ದು. ಒಮ್ಮೆ ಸೈನ್ಯ ಬೀದಿಗಿಳಿದೊಡನೆ ಕಲ್ಲೆಸೆತಗಾರರೆಲ್ಲ ತೆಪ್ಪಗಾಗಿ ಮನೆ ಸೇರಿಬಿಟ್ಟಿದ್ದಾರೆ. ಗಡಿ ಭಾಗದಲ್ಲಿ ಪಾಕಿಸ್ತಾನಕ್ಕೆ ಬಲವಾದ ಏಟು ಬೀಳುತ್ತಿರುವುದರಿಂದ ನುಸುಳುಕೋರರೂ ತಣ್ಣಗಾಗಿ ಬಿಟ್ಟಿದ್ದಾರೆ. ಇನ್ನೀಗ ಅಡಗಿ ಕುಳಿತಿರುವ ಭಯೋತ್ಪಾದಕರನ್ನು ಹುಡು-ಹುಡುಕಿ ಕೊಲ್ಲಬೇಕಷ್ಟೇ. ಮನೆಯೊಳಗೆ ನುಗ್ಗಿ ಗುರುತಿಸಿ ಕೊಲ್ಲಬಲ್ಲ ವಿಶೇಷ ಅಧ್ಯಯನ ನಡೆಸಿರುವ ಎನ್ಎಸ್ಜಿ ಕಮಾಂಡೊ ಪಡೆಗಳನ್ನೇ ಈ ಕಾರ್ಯಕ್ಕೆ ನೇಮಿಸಿರುವುದಂತೂ ಬಲು ದೊಡ್ಡ ಸಾಧನೆ. ಇನ್ನು ಆಗಬೇಕಾಗಿರುವುದು ಎರಡೇ ಕೆಲಸ. ಮೊದಲನೆಯದು ಸಂವಿಧಾನದ 370 ನೇ ವಿಧಿಯನ್ನು ತೆಗೆದು ಹಾಕುವುದು. ಎರಡನೆಯದು ತಮ್ಮ ಆಸ್ತಿ ಬಿಟ್ಟು ಓಡಿ ಹೋಗಿರುವ ಪಂಡಿತರನ್ನು ಕಾಶ್ಮೀರದಲ್ಲಿ ನೆಲೆ ನಿಲ್ಲುವಂತೆ ಮಾಡುವುದು. ಮುಂದಿನ ಏಳೆಂಟು ತಿಂಗಳುಗಳಲ್ಲಿ ರಾಜ್ಯಪಾಲರ ಅಧಿಕಾರಾವಧಿಯಲ್ಲಿ ಭಾರತ ಒಂದೆರಡು ಕಠೋರ ನಿರ್ಣಯಗಳನ್ನು ತೆಗೆದುಕೊಂಡು ಬಿಟ್ಟರೆ ಜಮ್ಮು-ಕಾಶ್ಮೀರವಂತೂ ತೆಕ್ಕೆಗೆ ಬಿದ್ದಂತೆಯೇ. ಇಡಿಯ ರಾಷ್ಟ್ರದಲ್ಲೂ ಅದರ ಪ್ರಭಾವ ಕಂಡು ಬರುವುದು ಅಸಾಧ್ಯವೇನಲ್ಲ.

4

ನೆನಪಿಡಿ. ಅಮಿತ್ ಶಾ ಮತ್ತು ಮೋದಿ ಲೆಕ್ಕಾಚಾರ ಇಲ್ಲದೇ ಯಾವ ಕೆಲಸವನ್ನೂ ಮಾಡುವವರಲ್ಲ. ಪಿಡಿಪಿಯೊಂದಿಗಿನ ವಿಚ್ಛೇದನದಲ್ಲೂ ಬಲುದೊಡ್ಡ ಲೆಕ್ಕಾಚಾರವಿದೆ. ಆದರೆ ಅವರ ಎಲ್ಲಾ ಕೂಡು ಕಳೆಯುವಿಕೆಗಳು ರಾಷ್ಟ್ರದ ಒಳಿತಿಗಾಗಿ ಮಾತ್ರ ಎನ್ನುವುದು ಹೆಮ್ಮೆಯ ಸಂಗತಿಯಷ್ಟೇ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s