ಪ್ರಣಬ್ ಮುಖಜರ್ೀ ಸಂಘ ಭೇಟಿ; ಲಾಭ ಯಾರಿಗೆ?

ಪ್ರಣಬ್ ಮುಖಜರ್ೀ ಸಂಘ ಭೇಟಿ; ಲಾಭ ಯಾರಿಗೆ?

ತಮ್ಮ ವಿರೋಧಿಗಳನ್ನು ಆಹ್ವಾನಿಸುವ ಪರಂಪರೆ ಸಂಘಕ್ಕೆ ಈಗ ಶುರುವಾದುದೇನಲ್ಲ. ಹಿಂದೂ ಮಹಾ ಸಭಾದ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿಂದುತ್ವದ ಚಿಂತನೆಗಳನ್ನು ಒಪ್ಪದ ಮಹಾತ್ಮಾ ಗಾಂಧೀಜಿಯವರು 1934 ರಲ್ಲಿಯೇ ಸಂಘ ವರ್ಗಕ್ಕೆ ಭೇಟಿ ಕೊಟ್ಟಿದ್ದರು. ಇಂದಿರಾರವರು ತುತರ್ು ಪರಿಸ್ಥಿತಿಯನ್ನು ಜಾರಿಗೊಳಿಸಿದಾಗ ಅದರ ವಿರುದ್ಧವಾಗಿ ಸಂಘ ರೂಪಿಸಿದ ಜನಾಂದೋಲನಕ್ಕೆ ಮಾರು ಹೋದ ಇದೇ ಜಯ ಪ್ರಕಾಶ್ ನಾರಾಯಣ್ 1977ರಲ್ಲಿ ಸಂಘದ ವರ್ಗದಲ್ಲಿ ಭಾಗವಹಿಸಿ ಸ್ವಯಂ ಸೇವಕರ ದೇಶಭಕ್ತಿಯನ್ನು ಮನಸಾರೆ ಕೊಂಡಾಡಿದರು.

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖಜರ್ಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘ ಶಿಕ್ಷಾ ವರ್ಗದ ಸಮಾರೋಪಕ್ಕೆ ಬರುವೆನೆಂದು ಹೇಳಿದ್ದು ಹದಿನೈದು ದಿನಗಳ ಕಾಲವಾದರೂ ದೇಶದ ತಲೆ ಕೆಡಿಸಿತ್ತು. ಕಾಂಗ್ರೆಸ್ಸಿನ ಕಟ್ಟಾಳುವಾಗಿ 5-6 ದಶಕಗಳ ಕಾಲ ಕಾಂಗ್ರೆಸ್ಸಿನ ಸೇವೆಗೈದವರು ಪ್ರಣಬ್ ಮುಖಜರ್ಿ. ಅಧಿಕಾರದಲ್ಲಿದ್ದಷ್ಟೂ ಕಾಲ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಟ್ಟಾ ವಿರೋಧಿಯಾಗಿದ್ದರು. ಅಂಥವರು ಈಗ ಚುನಾವಣೆಯ ವರ್ಷದಲ್ಲಿ ಸಂಘದ ಕಾರ್ಯಕ್ರಮವೊಂದಕ್ಕೆ ಹೋಗುವುದೆಂದರೆ ಕಾಂಗ್ರೆಸ್ಸಿಗೆ ಉತ್ತರಿಸಲು ಕಷ್ಟವಾಗುವ ಪ್ರಶ್ನೆಯೇ ಆಗಿತ್ತು. ಪ್ರಣಬ್ ಮುಖಜರ್ಿಯಂತಹ ಪ್ರಮುಖ ವ್ಯಕ್ತಿಯೇ ಸಂಘವನ್ನು ಒಪ್ಪಿಕೊಂಡು ಬಿಟ್ಟ ಮೇಲೆ ಇನ್ನು ಕಾಂಗ್ರೆಸ್ಸಿನ ಸಣ್ಣ-ಪುಟ್ಟ ಜನರ ದನಿಗೆ ಯಾವ ಬೆಲೆ? ಕಾಂಗ್ರೆಸ್ಸು ತಮಗೇ ಅರಿವಾಗದ ಬೇನೆಯಲ್ಲಿ ವಿಲವಿಲನೇ ಒದ್ದಾಡುತ್ತಿದ್ದುದು ಸ್ಪಷ್ಟವಾಗಿ ಗಮನಕ್ಕೆ ಬರುವಂತಿತ್ತು. ಹಾಗೆ ನೋಡಿದರೆ ಪ್ರಣಬ್ ಮುಖಜರ್ಿ ಒಂದು ಬಗೆಯಲ್ಲಿ ಅವಕಾಶ ವಂಚಿತರೇ. ಹಾಗಂತ ಕಾಂಗ್ರೆಸ್ಸಿನ ಪಡಸಾಲೆಯಲ್ಲಿ ಸೀತಾರಾಂ ಕೇಸರಿಯಂತೆ ಅವಮಾನಕ್ಕೆ ಒಳಗಾದವರಲ್ಲ. ತಮಗಾದ ನೋವನ್ನು ನುಂಗಿಕೊಂಡೇ ಪಕ್ಷ ನಿಷ್ಠೆಯನ್ನು ಮೆರೆಯುತ್ತಾ ಬಂದವರು. 1984 ರಲ್ಲಿ ಇಂದಿರಾ ತೀರಿಕೊಂಡಾಗ ಅಂದಿನ ಕಾಂಗ್ರೆಸ್ಸಿನ ಹಿರಿಯ ವ್ಯಕ್ತಿ ಪ್ರಧಾನಿಯಾಗಬೇಕೆಂಬುದನ್ನು ಎಲ್ಲರೂ ಅಪೇಕ್ಷಿಸಿದ್ದರು. ಸಹಜವಾಗಿಯೇ ಅವಕಾಶವಿದ್ದುದು ಪ್ರಣಬ್ ಮುಖಜರ್ಿಯವರಿಗೇ. ಆದರೆ ಕಾಂಗ್ರೆಸ್ಸಿನ ಮನೆತನದ ರಾಜಕೀಯ ಬಿಡಲಿಲ್ಲ. ಪ್ರಣಬ್ ಮೂಲೆಗೆ ತಳ್ಳಲ್ಪಟ್ಟರು. 2004 ರಲ್ಲಿ ವಾಜಪೇಯಿಯವರಿಂದ ಅಧಿಕಾರವನ್ನು ಕಸಿದುಕೊಂಡ ಮೇಲಾದರೂ ಪ್ರಣಬ್ರಿಗೆ ಪ್ರಧಾನಿ ಪಟ್ಟ ಒಲಿಯುವುದೆಂದು ಭಾವಿಸಿದರೆ ಅದೂ ಸುಳ್ಳಾಯಿತು. ಸೋನಿಯಾ ತನ್ನ ಕೈಗೊಂಬೆಯಾಗಿರಬಲ್ಲ ವ್ಯಕ್ತಿಯನ್ನೇ ಪ್ರಧಾನಿ ಪಟ್ಟದಲ್ಲಿ ಕೂರಿಸಬೇಕೆಂದು ನಿರ್ಧರಿಸಿದರು. ಅಧಿಕಾರಕ್ಕೆ ತಾನೇರಲಿಲ್ಲವೆಂದರೂ ತನ್ನದ್ದೇ ಅಧಿಕಾರ ನಡೆಯುವಂತಹ ಛದ್ಮ ವ್ಯವಸ್ಥೆ ಅದು. ಹಣಕಾಸು ವಿಭಾಗದಲ್ಲಿ ತನ್ನ ಕೈಕೆಳಗೆ ದುಡಿದ ವ್ಯಕ್ತಿಯೊಬ್ಬನನ್ನು ಪ್ರಧಾನಮಂತ್ರಿಯಾಗಿ ಕಾಣುವುದು ಪ್ರಣಬ್ರಿಗೆ ಸುಲಭವಾಗಿರಲಿಲ್ಲ. ಹೀಗಾಗಿ ಅವರು ಮಂತ್ರಿಯಾಗಲೂ ಒಪ್ಪುವುದಿಲ್ಲವೆಂದು ಎಲ್ಲರೂ ಭಾವಿಸಿದ್ದರು. ಅವರನ್ನು ಪಕ್ಕಕ್ಕಿಡುವುದು ಕೆಟ್ಟ ಸಂದೇಶ ರವಾನಿಸಿದಂತಾಗುತ್ತದೆಂದು ಮಹತ್ವದ ಹುದ್ದೆಯನ್ನು ಕೊಟ್ಟು ಅವರನ್ನು ಸಕರ್ಾರದೊಳಕ್ಕೆ ಕೂರಿಸಿದ್ದು ಸೋನಿಯಾರೇ. ಹಾಗಂತ 2009 ರಲ್ಲೂ ಸೋನಿಯಾ ಪ್ರಣಬ್ರನ್ನು ಪ್ರಧಾನಿ ಮಾಡಲಿಲ್ಲ. ಪ್ರಣಬ್ ಮಂತ್ರಿಯಾಗಿಯೇ ಮುಂದುವರೆದರು. 2013 ರಲ್ಲಿ ಪ್ರತಿಭಾ ಪಾಟೀಲ್ರ ಜಾಗಕ್ಕೆ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸುವ ಹೊಸ ವ್ಯಕ್ತಿಯನ್ನು ಅರಸಲಾರಂಭಿಸಿದಾಗ ಪ್ರಣಬ್ ಆಸೆಗಳು ಚಿಗುರೊಡೆದಿದ್ದವು. ಮಮತಾ ಬ್ಯಾನಜರ್ಿ ಆ ಸ್ಥಾನಕ್ಕೆ ಅಬ್ದುಲ್ ಕಲಾಂ ಅಥವಾ ಪ್ರಣಬ್ ಮುಖಜರ್ಿ ಆಗಬಹುದೆಂದು ಸೂಚಿಸಿದ್ದರು. ಇನ್ನೇನು ಪ್ರಣಬ್ ರಾಷ್ಟ್ರಪತಿ ಆಗಿಯೇ ಬಿಡುತ್ತಾರೆ ಎನ್ನುವ ವೇಳೆಗೆ ಬದಲಾವಣೆಯ ಸುದ್ದಿ ತೇಲಿಬಂದು ಪ್ರಣಬ್ ಮುಖಜರ್ಿ ಅಕ್ಷರಶಃ ಮಾನಸಿಕ ಆಘಾತಕ್ಕೆ ಒಳಗಾಗಿದ್ದರು. ತಮ್ಮ ಇತ್ತೀಚಿನ ಪುಸ್ತಕ ದ ಕೋಯಿಲೇಶನ್ ಇಯರ್ಸನಲ್ಲಿ ಅವರು ತಮ್ಮೆಲ್ಲಾ ಮಾನಸಿಕ ತುಮುಲವನ್ನು ವಿವರವಾಗಿ ಬಿಚ್ಚಿಟ್ಟಿದ್ದಾರೆ. ರಾಜಕೀಯ ದಾಳಗಳ ಕುರಿತಂತೆ ಸೋನಿಯಾರಿಗೆ ಅಂದು ಅನೇಕರು ವಿವರಿಸಿರಲಿಕ್ಕೆ ಸಾಕು. ಮತ್ತೊಮ್ಮೆ ಚುನಾವಣೆ ಗೆದ್ದರೆ ರಾಹುಲ್ನನ್ನು ಪ್ರಧಾನಿಯಾಗಿಸಲು ಪ್ರಣಬ್ರವರೇ ಅಡ್ಡಗಾಲಾಗಬಹುದೆಂದು ಹೆದರಿದ ಸೋನಿಯಾ ಕೊನೆಗೂ ಅವರನ್ನು ರಾಷ್ಟ್ರಪತಿಯನ್ನಾಗಿಸಿ ಕೈತೊಳೆದುಕೊಂಡರು. ಅಲ್ಲಿಗೇ ಎಲ್ಲವೂ ಮುಗಿಯಿತು ಎಂದು ಅವರಂದುಕೊಂಡಿದ್ದರು ಆದರೆ ವಾಸ್ತವವಾಗಿ ಅಲ್ಲಿಂದಾಚೆಗೆ ಎಲ್ಲವೂ ಶುರುವಾಯ್ತು. ಕಾಂಗ್ರೆಸ್ಸಿನ ಪರವಾಗಿ ಬಲವಾದ ಪ್ರತಿಸ್ಪಧರ್ೆಯೇ ಇಲ್ಲವಾಗಿ ನರೇಂದ್ರಮೋದಿಯವರು ಅನಾಯಾಸದ ಗೆಲುವನ್ನು ಸಾಧಿಸಿದರು. ರಾಹುಲ್ನನ್ನು ದೇಶ ಪ್ರಧಾನಿಯೆಂದು ಒಪ್ಪಿಕೊಳ್ಳಲು ನಿರಾಕರಿಸಿತು. ಇತ್ತ ನರೇಂದ್ರಮೋದಿಯವರ ಆಡಳಿತವನ್ನು ಹತ್ತಿರದಿಂದ ಗಮನಿಸಿದ ರಾಷ್ಟ್ರಪತಿಗಳು ಅವರ ಪ್ರತಿಯೊಂದು ಕೆಲಸವನ್ನೂ ಹೊಗಳಲಾರಂಭಿಸಿದರು. ಸಹಜವಾಗಿಯೇ ಅಂತಹ ವ್ಯಕ್ತಿಯನ್ನು ತಯಾರು ಮಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುರಿತಂತೆ ಅವರಿಗೆ ಗೌರವ ಮೂಡಿರಲು ಸಾಕು. ಈ ಕಾರಣಕ್ಕಾಗಿಯೇ ಮೋಹನ್ ಭಾಗವತರೊಂದಿಗೆ ಅವರ ಸಂಬಂಧವೂ ವೃದ್ಧಿಸಿತು. ರಾಷ್ಟ್ರಪತಿ ಭವನಕ್ಕೆ ಅವರನ್ನು ಊಟಕ್ಕೂ ಆಹ್ವಾನಿಸಿದ್ದಲ್ಲದೇ ಪ್ರಣಬ್ ಮುಖಜರ್ಿ ಫೌಂಡೇಶನ್ನ ಉದ್ಘಾಟನೆಯ ಹೊತ್ತಲ್ಲೂ ಕೂಡ ವಿಶೇಷ ಆಹ್ವಾನವಿತ್ತು. ಇಂಡಿಯನ್ ಎಕ್ಸ್ಪ್ರೆಸ್ನ ವರದಿಯ ಪ್ರಕಾರ ಕಳೆದ ವರ್ಷದ ಸಂಘ ಶಿಕ್ಷಾ ವರ್ಗದ ಸಮಾರೋಪಕ್ಕೆ ರಾಷ್ಟ್ರಪತಿಗಳನ್ನು ಆಹ್ವಾನಿಸಲಾಗಿತ್ತಂತೆ. ಆದರೆ ಅಂದು ಅಸಹಾಯಕತೆ ತೋಡಿಕೊಂಡ ಪ್ರಣಬ್ ಮುಖಜರ್ಿ ಈ ಬಾರಿ ಆಹ್ವಾನವನ್ನು ನಿರಾಕರಿಸಲಿಲ್ಲ. ಬಲು ಪ್ರೀತಿಯಿಂದಲೇ ಒಪ್ಪಿಕೊಂಡು ಸಮಾರೋಪಕ್ಕೆ ಧಾವಿಸಿದರು.

2
ಹಾಗಂತ ತಮ್ಮ ವಿರೋಧಿಗಳನ್ನು ಆಹ್ವಾನಿಸುವ ಪರಂಪರೆ ಸಂಘಕ್ಕೆ ಈಗ ಶುರುವಾದುದೇನಲ್ಲ. ಹಿಂದೂ ಮಹಾ ಸಭಾದ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿಂದುತ್ವದ ಚಿಂತನೆಗಳನ್ನು ಒಪ್ಪದ ಮಹಾತ್ಮಾ ಗಾಂಧೀಜಿಯವರು 1934 ರಲ್ಲಿಯೇ ಸಂಘ ವರ್ಗಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲಿರುವ ತರುಣರನ್ನೆಲ್ಲಾ ಮಾತನಾಡಿಸಿ ಆನಂದಿತರಾಗಿ ‘ಇಲ್ಲಿನ ಶಿಸ್ತು ಮತ್ತು ಅಸ್ಪೃಶ್ಯತೆಯ ಆಚರಣೆಯಿಲ್ಲದಿರುವುದನ್ನು ಕಂಡು ನನಗೆ ಬಲು ಸಂತೋಷವಾಗಿದೆ’ ಎಂದು ಉದ್ಗಾರವೆತ್ತಿದ್ದರು. ಮಹಾತ್ಮಾ ಗಾಂಧೀಜಿಯವರ ಹತ್ಯೆಯಲ್ಲಿ ಸಂಘದ ಪಾತ್ರವಿದೆ ಎಂಬ ಆರೋಪದ ಆಧಾರದ ಮೇಲೆ ಸಂಘವನ್ನು ನಿಷೇಧಿಸಲಾಗಿತ್ತು. ಆದರೆ ಭಾರತ-ಪಾಕಿಸ್ತಾನ ಯುದ್ಧದ ಹೊತ್ತಲ್ಲಿ ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸುವಲ್ಲಿ ಸಂಘದ ಸರ ಸಂಘಚಾಲಕರಾಗಿದ್ದ ಗುರೂಜಿಯವರ ಪಾತ್ರವನ್ನು ಅರಿತಿದ್ದ ಸದರ್ಾರ್ ಪಟೇಲ್ರು ಆನಂತರದ ದಿನಗಳಲ್ಲಿ ಸಂಘದ ಕುರಿತಂತೆ ಸದ್ಭಾವನೆ ತಳೆದಿದ್ದರು. ಸದರ್ಾರ್ ಪಟೇಲರು ಸಂಘದೊಂದಿಗೆ ಮೃದು ಧೋರಣೆ ಹೊಂದಿದ್ದಾರೆ ಎಂಬ ಆರೋಪ ಮಾಡಿದ್ದ ಸಾಮಾಜಿಕ ಕ್ರಾಂತಿಯ ಹರಿಕಾರ ಜಯ ಪ್ರಕಾಶ್ ನಾರಾಯಣ್ ಮಹಾತ್ಮಾ ಹತ್ಯೆಯಲ್ಲಿ ಭಾಗಿಯಾಗಿರುವ ಸಂಘದ ಮಂತ್ರಿಗಳು ಸಕರ್ಾರಕ್ಕೆ ರಾಜಿನಾಮೆ ಕೊಟ್ಟು ಹೊರನಡೆಯಬೇಕೆಂದು ಆಗ್ರಹಿಸಿದ್ದರೂ ಕೂಡ. ಆನಂತರದ ದಿನಗಳಲ್ಲಿ ಪರಿಪೂರ್ಣವಾದ ವಿಚಾರಣೆ ನಡೆದು ಸಂಘ ನಿದರ್ೋಶಿ ಎಂದು ಸಾಬೀತಾಯ್ತು. ಮುಂದೆ ಇಂದಿರಾರವರು ತುತರ್ು ಪರಿಸ್ಥಿತಿಯನ್ನು ಜಾರಿಗೊಳಿಸಿದಾಗ ಅದರ ವಿರುದ್ಧವಾಗಿ ಸಂಘ ರೂಪಿಸಿದ ಜನಾಂದೋಲನಕ್ಕೆ ಮಾರು ಹೋದ ಇದೇ ಜಯ ಪ್ರಕಾಶ್ ನಾರಾಯಣ್ 1977ರಲ್ಲಿ ಸಂಘದ ವರ್ಗದಲ್ಲಿ ಭಾಗವಹಿಸಿ ಸ್ವಯಂ ಸೇವಕರ ದೇಶಭಕ್ತಿಯನ್ನು ಮನಸಾರೆ ಕೊಂಡಾಡಿದರು. ಸಂಘದ ಪ್ರಚಾರಕರಾಗಿದ್ದ ಮತ್ತು ಜಯಪ್ರಕಾಶರಿಗಿಂತಲೂ 40 ವರ್ಷ ಚಿಕ್ಕವರಾಗಿದ್ದ ಕೆ.ಎನ್. ಗೋಂವಿದಾಚಾರ್ಯರನ್ನು ಕೇಳದೇ ಜಯಪ್ರಕಾಶ್ ನಾರಾಯಣರು ಭಾಷಣವನ್ನೂ ಮಾಡುತ್ತಿರಲಿಲ್ಲ ಎನ್ನುವುದು ಆಗೆಲ್ಲಾ ಜನಜನಿತವಾದ ಮಾತು. ಸಂಘವೆಂದರೆ ಉರಿದು ಬೀಳುತ್ತಿದ್ದ ಜವಾಹರಲಾಲ್ ನೆಹರೂ 1962 ರ ಚೀನಿ ಯುದ್ಧದ ವೇಳೆಗೆ ಸಂಘ ತೋರಿದ ರಾಷ್ಟ್ರಭಕ್ತಿಯನ್ನು ಕಂಡು 1963 ರ ಗಣರಾಜ್ಯೋತ್ಸವದ ಪಥ ಸಂಚಲನಕ್ಕೆ 3000 ಸ್ವಯಂ ಸೇವಕರನ್ನು ಆಹ್ವಾನಿಸಿದ್ದರು. ಕಾಂಗ್ರೆಸ್ಸಿಗರು ಪ್ರಶ್ನೆ ಎತ್ತಿದ್ದಾಗ ‘ದೇಶಭಕ್ತ ಭಾರತೀಯರನ್ನು ನಾನು ಕರೆದಿದ್ದೇನೆ’ ಎಂದು ಉತ್ತರಿಸಿದ್ದರು. 1965 ರ ಪಾಕಿಸ್ತಾನ ಯುದ್ಧ ಆರಂಭವಾದಾಗ ಶಾಸ್ತ್ರೀಜಿ ಸರ್ವ ನಾಯಕರ ಸಭೆ ಕರೆದಿದ್ದರಲ್ಲಾ ಸಂಘದ ಸರಸಂಘಚಾಲಕರಾಗಿದ್ದ ಗುರೂಜಿಯವರಿಗೂ ಆಹ್ವಾನವಿತ್ತು. ಬಾಬಾ ಸಾಹೇಬ್ ಅಂಬೇಡ್ಕರ್ರಿಗೂ ಸಂಘದ ಕುರಿತಂತೆ ಗೌರವವಿದ್ದುದಲ್ಲದೇ ಪ್ರಚಾರಕರಾಗಿದ್ದ ದತ್ತೋಪಂಥ ಠೇಂಗಡಿಯವರಿಗೆ ‘ನಿಮ್ಮ ಶಾಖೆಗಳ ಸಂಖ್ಯೆ ಹೆಚ್ಚಬೇಕು ಅದು ಇನ್ನೂ ವಿಸ್ತಾರವಾಗಬೇಕು’ ಎಂದು ಯಾವಾಗಲೂ ತಾಕೀತು ಮಾಡುತ್ತಿದ್ದರು. ದೂರನಿಂತು ತನ್ನ ಕಂಡರೆ ಆಗದೆಂದು ನಿಂತವರನ್ನು ಹತ್ತಿರ ಸೆಳೆದು ಕಾರ್ಯಶೈಲಿಯನ್ನು ತೋರಿಸಿ ಅವರಿಂದಲೂ ಶಹಬ್ಬಾಸ್ ತೆಗೆದುಕೊಳ್ಳುವುದು ಸಂಘಕ್ಕೆ ಹೊಸದೇನಲ್ಲ. 2007 ರಲ್ಲಿ ನಿವೃತ್ತ ಏರ್ಚೀಫ್ ಮಾರ್ಶಲ್ ಟಿಪ್ನಿಸ್ ಸಂಘ ಶಿಕ್ಷಾ ವರ್ಗಕ್ಕೆ ಬಂದು ಸಂಘದ ಕುರಿತಂತೆ ಗುರುತರವಾದ ಆರೋಪಗಳನ್ನೇ ಮಾಡಿದ್ದರು. ಅಂದಿನ ಸರಸಂಘ ಚಾಲಕರಾದ ಸುದರ್ಶನ್ಜೀ ಪ್ರತಿಯೊಂದು ಪ್ರಶ್ನೆಗೂ ಸಮರ್ಥವಾದ ಉತ್ತರವನ್ನು ಕೊಟ್ಟು ಟಿಪ್ನಿಸ್ರಿಗೆ ತಿಳಿಹೇಳಿದರು. ಇದೇ ಸಂಘ ಶಿಕ್ಷಾ ವರ್ಗಕ್ಕೆ ಪರಮಪೂಜ್ಯ ನಿರ್ಮಲನಾಥಾನಂದ ಸ್ವಾಮೀಜಿ, ಶ್ರೀ ರವಿಶಂಕರ್ಜೀ, ಶ್ರೀ ವೀರೇಂದ್ರ ಹೆಗ್ಡೆಯವರೆಲ್ಲ ಭಾಗವಹಿಸಿದ್ದರು. ಆದರೆ ಪ್ರಣಬ್ ಮುಖಜರ್ಿ ಹೋದಾಗ ಆದಷ್ಟು ರಾದ್ಧಾಂತ ಹಿಂದೆಂದೂ ಆಗಿರಲಿಲ್ಲ. ಏಕೆಂದರೆ ಚುನಾವಣೆಯ ವರ್ಷದಲ್ಲಿ ಕಾಂಗ್ರೆಸ್ಸು ಹೆಣೆಯಬೇಕೆಂದುಕೊಂಡಿದ್ದ ಎಲ್ಲ ಸುಳ್ಳುಗಳಿಗೂ ಮಾಜಿ ರಾಷ್ಟ್ರಪತಿಗಳು ಒಂದೇ ಮಾತಿನಲ್ಲಿ ಉತ್ತರ ಕೊಟ್ಟಂತಾಗಿತ್ತು.

3

ಅರುಂಧತಿ ರಾಯ್ ಬಿಬಿಸಿ ಗೆ ಸಂದರ್ಶನ ಕೊಟ್ಟು ಮೋದಿಯ ಆಡಳಿತದಲ್ಲಿ ಭಾರತ ಅತ್ಯಂತ ಕೆಟ್ಟ ದಿನಗಳನ್ನು ಕಾಣುತ್ತಿದೆ ಎಂದು ಹೇಳಿ ಆ ಮೂಲಕ ಸಂಘವನ್ನು ಕಟಕಟೆಯಲ್ಲಿ ನಿಲ್ಲಿಸುವ ಪ್ರಯತ್ನ ಮಾಡುತ್ತಿದ್ದರೆ ಇಲ್ಲಿ ಮಾಜಿ ರಾಷ್ಟ್ರಪತಿಗಳು ಸಂಘ ಶಿಕ್ಷಾ ವರ್ಗದಲ್ಲೇ ನಿಂತು ಸಂಘದ ಕಾರ್ಯಶೈಲಿಯನ್ನು ಹೊಗಳುವ ಪರಿಸ್ಥಿತಿ ಕಾಂಗ್ರೆಸ್ಸಿಗರಿಗೇ ಎಂತಹ ಮುಜುಗರ ಉಂಟು ಮಾಡಿರಬಹುದೆಂದು ಊಹಿಸಿದರೂ ಅರ್ಥವಾಗುತ್ತದೆ. ಹಾಗೆಂದೇ ಜಾಫರ್ ಶರೀಫ್, ಜಯರಾಮ್ ರಮೇಶ್ ಪ್ರಣಬ್ ಮುಖಜರ್ಿಯವರಿಗೆ ಪತ್ರ ಬರೆದು ಹೋಗಬಾರದೆಂಬ ಸಲಹೆ ಕೊಟ್ಟಿದ್ದು. ಅಹ್ಮೆದ್ ಪಟೇಲ್, ಮೊಯ್ಲಿ ಅಲ್ಲದೇ ಸ್ವತಃ ಪ್ರಣಬ್ರ ಮಗಳು ಶಮರ್ಿಷ್ಠಾ ಅಪ್ಪನ ವಿರುದ್ಧ ಟ್ವಿಟರ್ನಲ್ಲಿ ಬೆಂಕಿಯುಂಡೆ ಹೊರಹಾಕಿದಳು. ವೀರಪ್ಪ ಮೋಯ್ಲಿಯಂತೂ ಕಾಂಗ್ರೆಸ್ಸಿನ ಆದರ್ಶಗಳು ಸಂಘದ ಆದರ್ಶಗಳಿಗಿಂತ ಭಿನ್ನವಾಗಿರುವುದರಿಂದ ಪ್ರಣಬ್ ಹೋಗಬಾರದು ಎಂಬ ಹೊಸ ಸಿದ್ಧಾಂತವನ್ನು ಮುಂದಿಟ್ಟು ನಗೆ ಪಾಟಲಿಗೀಡಾಗಿದ್ದರು. ಏಕೆ ಗೊತ್ತೇ? ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕಾದರೂ ಸಿದ್ಧಾಂತ, ಆದರ್ಶ ಎಂಬುದೆಲ್ಲಾ ಇದೆ. ಕೊನೆ ಪಕ್ಷ ಹಿಂದುತ್ವ ತಮ್ಮ ಆಧಾರವೆಂದು ಧೈರ್ಯದಿಂದ ಹೇಳಿಕೊಳ್ಳುತ್ತಾರೆ. ಕಾಂಗ್ರೆಸ್ಸಿಗೆ ಅಂಥ ಆಧಾರ ಯಾವುದು? ಅಧಿಕಾರ ದಾಹವಾ? ಅಲ್ಪ ಸಂಖ್ಯಾತರ ತುಷ್ಟೀಕರಣವಾ, ದೇಶದ ಸಂಪತ್ತನ್ನು ಲೂಟಿ ಮಾಡಿ ವಿದೇಶದಲ್ಲಿ ಕೂಡಿಡುವುದಾ, ಯಾವುದು? ಸ್ವಾತಂತ್ರ್ಯ ಬಂದು ಮೊದಲೈದು ದಶಕಗಳ ಕಾಲ ಭಾರತವನ್ನು ವಿಕಾಸದ ಪಥದಿಂದ ಆಚೆಗೊಯ್ದದ್ದು ಕಾಂಗ್ರೆಸ್ಸಿನ ನೀತಿಯೇ ಇಲ್ಲದ ರಾಜಕಾರಣ. ನೆಹರೂ ತಮಗಿಚ್ಛೆಬಂದಂತೆ ಆಡಳಿತ ನಡೆಸಿದರು. ಇಂದಿರಾ ಸವರ್ಾಧಿಕಾರಿಯಾದರು. ರಾಜೀವ್ ಅರ್ಹತೆಯೇ ಇಲ್ಲದೆ ಗದ್ದುಗೆ ಏರಿದರು. ಸೋನಿಯಾ ತಾನು ಹೇಳಿದಂತೆ ಕೇಳುವ ವ್ಯಕ್ತಿಯ ಮೂಲಕ ಸಂಪತ್ತನ್ನು ಸೂರೆಗೈದರು. ಒಟ್ಟಾರೆಯಾಗಿ ಭಾರತ ಹಿಂದುಳಿಯಿತು. ಈ ನಡುವೆ ಸದಾ ಭಾರತವನ್ನು ಜಾಗತಿಕ ಪಥದಲ್ಲಿ ಮುಂಚೂಣಿಯಲ್ಲಿ ನಿಲ್ಲಿಸಬೇಕೆಂದು ಪ್ರಯತ್ನಿಸುತ್ತಿದ್ದ ಸಂಘ ಮಾತ್ರ ಒಂದು ಶತಮಾನಗಳ ಕಾಲ ಏಕೈಕ ಉದ್ದೇಶದಿಂದ ಗುರುತರವಾಗಿ ಶ್ರಮಿಸಿತು.

ಜಯಪ್ರಕಾಶರ ಆಂದೋಲನ ನಡೆಯುವಾಗ ಜೈಲಿನಲ್ಲಿದ್ದ ಬಾಳಾ ಸಾಹೇಬ್ ದೇವರಸರಿಗೆ ವೈಮನಸ್ಯ ತೊರೆದು ಅಧಿಕಾರ ಪಡೆಯಲು ಸಹಕರಿಸಿರೆಂದು ಇಂದಿರಾ ಕೇಳಿಕೊಂಡಿದ್ದರಂತೆ. ಅದನ್ನು ನಿರಾಕರಿಸಿದ ಸಂಘ ಇಂದಿಗೂ ರಾಷ್ಟ್ರಮುಖಿಯಾಗಿ ಬದುಕಿದೆ. ಆದರೆ ಜಯಪ್ರಕಾಶ ನಾರಾಯಣರ ಜೊತೆಯಲ್ಲಿದ್ದೂ ಇಂದಿರಾ ವಿರೋಧಿಯಾಗಿ ಬೆಳೆದು ಅಧಿಕಾರ ಗಿಟ್ಟಿಸಿಕೊಂಡ ಅನೇಕರು ಇಂದು ಮಹಾಘಟಬಂಧನದಲ್ಲಿ ಒಟ್ಟಾಗಿ ನಿಂತಿದ್ದಾರೆ. ಇಂದಿರಾ ತನ್ನೆಲ್ಲಾ ದ್ವೇಷವನ್ನು ಸಂಘದ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ತೀರಿಸಿಕೊಂಡುಬಿಟ್ಟರು. ಆಳುವವರ ಈ ಬಗೆಯ ಧಾಷ್ಟ್ರ್ಯವನ್ನು ನುಂಗಿಕೊಂಡು ಸಂಘ ಮಾತ್ರ ಬಲವಾಗಿ ಬೆಳೆದು ನಿಂತಿತು. 1925 ರಲ್ಲಿ ಹುಟ್ಟಿದ ಸಂಘ 1940 ರ ವೇಳೆಗೆ ಎಲ್ಲಾ ರಾಜ್ಯವನ್ನೂ ಮುಟ್ಟಿತು. 1980 ರ ವೇಳೆಗೆ ಎಲ್ಲಾ ಜಿಲ್ಲೆಗಳನ್ನು ತಲುಪಿದ್ದಲ್ಲದೇ ಇಂದು 10 ಕೋಟಿಗೂ ಹೆಚ್ಚು ಸಂಖ್ಯೆಯ ಮೂಲಕ ಜಗತ್ತಿನ ಬಲು ದೊಡ್ಡ ಸಕರ್ಾರೇತರ ಸಂಸ್ಥೆಯಾಗಿ ಬೆಳೆದು ನಿಂತಿದೆ. ಸಂಪ್ರದಾಯವಾದಿ ಎಂದು ಮೂದಲಿಸಿಕೆಗೆ ಒಳಗಾಗುವ ಆರ್ಎಸ್ಎಸ್ನ ಕೆಲವು ಸರಸಂಘಚಾಲಕರುಗಳು ಅಪಾರ ಬುದ್ಧಿಮತ್ತೆಯವರು ಮತ್ತು ವಿಜ್ಞಾನವನ್ನೇ ಅಧ್ಯಯನ ಮಾಡಿದವರು. ಎರಡನೇ ಸರಸಂಘಚಾಲಕರಾದ ಗುರೂಜಿಯವರು ಎಂಎಸ್ಸಿ ಅಧ್ಯಯನ ಮಾಡಿದ್ದರೆ, ರಜ್ಜು ಭಯ್ಯಾ ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದರಲ್ಲದೇ ಅಣುವಿಭಾಗದ ವಿಜ್ಞಾನಿಯೂ ಆಗಿದ್ದರು.

1

ಇದೇ ಸಂಘದ ಕಾರ್ಯಕ್ರಮಕ್ಕೆ ಮಾಜಿ ರಾಷ್ಟ್ರಪತಿಗಳು ಭೇಟಿಕೊಟ್ಟು ರಾಷ್ಟ್ರೀಯತೆ, ಭಾರತೀಯ, ಸಭ್ಯತೆ ನಾಗರೀಕತೆಗಳ ಕುರಿತಂತೆ ಮನ ಮುಟ್ಟುವಂತೆ ಮಾತನಾಡಿದ್ದಾರೆ. ಮಾಜಿ ರಾಷ್ಟ್ರಪತಿಗಳಿಗೂ ಮುನ್ನ ಮಾತನಾಡಿದ ಸರಸಂಘಚಾಲಕರು ಭಾರತದ ಯಾವ ವೈವಿಧ್ಯವನ್ನು ಕೊಂಡಾಡಿದ್ದರೋ ಅದಕ್ಕೆ ಪೂರಕವಾಗಿಯೇ ಪ್ರಣಬ್ ಮುಖಜರ್ಿಯವರು ಮಾತನಾಡಿದ್ದು ಎಲ್ಲರ ಹುಬ್ಬೇರಿಸುವಂತಾಗಿತ್ತು. ರಾಜಕೀಯ ಲೆಕ್ಕಾಚಾರಗಳು ಎಷ್ಟೆಲ್ಲಾ ವೇಗವಾಗಿ ಕೂಡುವ ಕಳೆಯುವ ಪ್ರಕ್ರಿಯೆ ಮಾಡಿತ್ತೆಂದರೆ ಶಿವಸೇನಾದ ಮುಖವಾಣಿ ಸಾಮ್ನಾ ಮೋದಿಗೆ ಬಹುಮತ ಕೊರತೆಯಾದರೆ ಸಂಘದ ಆಯ್ಕೆ ಪ್ರಣಬ್ ಮುಖಜರ್ಿ ಎಂದೂ ಹೇಳಿಬಿಟ್ಟತು. ಈ ಎಲ್ಲ ಕದನಗಳಲ್ಲಿ ಮನೆ-ಮನೆ ಮುಟ್ಟಿ ತನ್ನ ತಾನು ಪ್ರತಿಯೊಬ್ಬರೆದುರಿಗೆ ಮತ್ತೊಮ್ಮೆ ಅನಾವರಣಗೊಳಿಸುವ ಅವಕಾಶ ಪಡೆದದ್ದು ಮಾತ್ರ ರಾಷ್ಟ್ರೀಯ ಸ್ವಯಂ ಸೇವಕ ಸಂಘವೇ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s