ಭಾರತದ ಮಾನವನ್ನು ನಿಜಕ್ಕೂ ಕಳೆಯುತ್ತಿರೋದು ಯಾರು!!

ಭಾರತದ ಮಾನವನ್ನು ನಿಜಕ್ಕೂ ಕಳೆಯುತ್ತಿರೋದು ಯಾರು!!

ಪ್ರಧಾನಮಂತ್ರಿಯ ಹುದ್ದೆಯ ಘನತೆಯನ್ನು ಕಡಿಮೆ ಮಾಡಿದ್ದು ನರೇಂದ್ರಮೋದಿಯಲ್ಲ, ಅದಕ್ಕೂ ಹಿಂದೆ ಪ್ರಧಾನಿಯಾಗಿದ್ದ ಮನಮೋಹನ ಸಿಂಗರು. ಸಂಸತ್ತಿನ ಕಾರಿಡಾರುಗಳಲ್ಲಿ ಪ್ರಧಾನಮಂತ್ರಿಗೆ ನಮಸ್ಕರಿಸದೇ ಅವರ ಹಿಂದೆ ಬರುತ್ತಿದ್ದ ಸೋನಿಯಾಗೆ ಸಾಷ್ಟಾಂಗವೆರಗುತ್ತಿದ್ದರಲ್ಲಾ ಕಾಂಗ್ರೆಸ್ಸಿಗರು ಅದು ಪ್ರಧಾನಿ ಹುದ್ದೆಯ ಘನತೆಗೆ ಮಾಡಿದ ಅವಮಾನ. ಮನಮೋಹನ ಸಿಂಗರು ಚೀನಾದ ಅಧ್ಯಕ್ಷರನ್ನು ಭೇಟಿ ಮಾಡುವಾಗ ತಲೆತಗ್ಗಿಸಿ ಕೈ ಕುಲುಕುತ್ತಿದ್ದರಲ್ಲಾ ಅದು ಪ್ರಧಾನಿ ಹುದ್ದೆಯ ಘನತೆಗೆ ಅವಮಾನ.

ಮೋದಿಯ ಮೇಲೆ ಸಿದ್ದರಾಮಯ್ಯ ಮಾನನಷ್ಟ ಮೊಕದ್ದಮೆ ಹಾಕಿ ಕೂತಿದ್ದಾರೆ. ನಮ್ಮಲ್ಲನೇಕರು ಮೋದಿ ಕಾಂಗ್ರೆಸ್ಸಿನ ಮೇಲೆ ವಾಗ್ದಾಳಿ ಮಾಡಿದ್ದು ತಪ್ಪು ಎನ್ನುತ್ತಿದ್ದಾರೆ. ಕೆಲವರಂತೂ ಪ್ರಧಾನಂತ್ರಿಯ ಹುದ್ದೆಯ ಘನತೆ ಎಂದೆಲ್ಲಾ ಬಡಬಡಾಯಿಸುತ್ತಿದ್ದಾರೆ. ಸಿದ್ದರಾಮಯ್ಯ ತಾವು ಹೋದ ಕಾರ್ಯಕ್ರಮದಲ್ಲೆಲ್ಲಾ ಕುಚರ್ಿಯ ಮೇಲೆ ಗಡದ್ದು ನಿದ್ದೆ ಹೊಡೆಯುತ್ತಿದ್ದರಲ್ಲ, ಅತ್ಯಂತ ಉಡಾಫೆಯ ಮಾತುಗಳನ್ನಾಡುತ್ತಿದ್ದರಲ್ಲ, ಹಿರಿಯರು-ಕಿರಿಯರೆನ್ನದೇ ಮನಸ್ಸಿಗೆ ಬಂದಂತೆ ಬಾಯಿಗೆ ಬಂದದ್ದನ್ನು ಹೇಳಿ ಬಿಡುತ್ತಿದ್ದರಲ್ಲ, ಆಗೆಲ್ಲಾ ಹುದ್ದೆಯ ಘನತೆ ಚಚರ್ೆಗೆ ಬರಲೇ ಇಲ್ಲವಲ್ಲ! ಕನರ್ಾಟಕದ 6 ಕೋಟಿ ಕನ್ನಡಿಗರ ಪ್ರತಿನಿಧಿಯಾಗಿದ್ದವ ಜಾಗತಿಕವಾಗಿ ಕನರ್ಾಟಕದ ಮಾನ ಕಳೆಯುತ್ತಿದ್ದಾನೆ ಎಂದು ಯಾರೂ ಮಾತನಾಡಲೇ ಇಲ್ಲವಲ್ಲಾ! ಬಿಪಿಓಗಳ ಮೂಲಕ ದಿನದ 24 ತಾಸೂ ಎದ್ದಿರುವ ಬೆಂಗಳೂರಿಗೆ ಸದಾ ನಿದ್ದೆ ಮಾಡುವ ಮುಖ್ಯಮಂತ್ರಿ ಘನತೆ ಮತ್ತು ಆದರ್ಶವಾಗಿದ್ದು ವಿಪಯರ್ಾಸ. ಹಾಗೆ ನೋಡಿದರೆ ನಮ್ಮ ಪ್ರತಿನಿಧಿಯಾಗಿ ರಾಜ್ಯದ ಮಾನ ಹರಾಜು ಹಾಕಿದ್ದಕ್ಕೆ ನಾವೆಲ್ಲರೂ ಅದೆಷ್ಟು ಕೋಟಿ ಮಾನ ಹಾನಿ ಪ್ರಕರಣ ದಾಖಲೆ ಮಾಡಬೇಕೋ ದೇವರೇ ಬಲ್ಲ. ಬಿಡಿ. ಅದರ ಬಗ್ಗೆ ತುಂಬ ಚಚರ್ಿಸಿ ಪ್ರಯೋಜನವಿಲ್ಲ. ನನಗೆ ಸದ್ಯಕ್ಕಂತೂ ಅದ್ಭುತ ಎನಿಸುವುದು ಈ ದೇಶದ ಪ್ರಧಾನಮಂತ್ರಿಯೇ.

1

ಮೋದಿ ಎನ್ನುವಂತಹ ಈ ಅಪರೂಪದ ಮತ್ತೊಂದು ಮಾಣಿಕ್ಯವನ್ನು ಪಡೆಯುವುದು ಬಹುಶಃ ದುಸ್ಸಾಧ್ಯವೇ ಸರಿ. 6 ದಿನಗಳಲ್ಲಿ ಕನರ್ಾಟಕದಲ್ಲಿ 21 ರ್ಯಾಲಿ ಮುಗಿಸಿ ಸೋಲಿನ ದವಡೆಯಲ್ಲಿದ್ದ ಬಿಜೆಪಿಯನ್ನು ಸಕರ್ಾರ ರಚಿಸುವಷ್ಟರ ಮಟ್ಟಿಗೆ ತಯಾರು ಮಾಡಿ, ಪುಣ್ಯಾತ್ಮ ಆಯಾಸವೆಂದು ಮನೆಯಲ್ಲಿ ಕೂತಿಲ್ಲ. ಅದಾಗಲೇ ನೇಪಾಳಕ್ಕೆ ಪ್ರಯಾಣ ಬೆಳೆಸಿಬಿಟ್ಟಿದ್ದಾರೆ! ನನಗೆ ಗೊತ್ತು. ಇಂದು ಚುನಾವಣೆ ಮುಗಿದೊಡನೆ ಅಭ್ಯಥರ್ಿಗಳು ಬಿಡಿ ಅವರ ಪರವಾಗಿ ಕೆಲಸ ಮಾಡಿದವರೂ ರೆಸಾಟರ್್ಗಳನ್ನು ಹುಡುಕಿಕೊಂಡು ಹೋಗಿ ನಾಲ್ಕಾರು ದಿನ ಮಜವಾಗಿ ಕಾಲ ಕಳೆಯುತ್ತಾರೆ. ನರೇಂದ್ರಮೋದಿ ಮಾತ್ರ ರಾಷ್ಟ್ರದ ಗೌರವವನ್ನು ಹಿಗ್ಗಿಸಲು ಪುರುಸೊತ್ತಿಲ್ಲದೇ ದುಡಿಯುತ್ತಿದ್ದಾರೆ. ಇದು ಈಗ ಮಾತ್ರ ಅಲ್ಲ. ಲೋಕಸಭಾ ಚುನಾವಣೆಯಲ್ಲೂ ನರೇಂದ್ರಮೋದಿ ನೂರಾರು ರ್ಯಾಲಿಗಳಲ್ಲಿ ಪಾಲ್ಗೊಂಡು ಹಗಲು-ರಾತ್ರಿಯೆನ್ನದೇ ದುಡಿಯುತ್ತಾ ಜೀವವನ್ನು ತೇಯ್ದುಬಿಟ್ಟಿದ್ದರಲ್ಲಾ! ಅಂದೂ ಕೂಡ ಚುನಾವಣೆ ಮುಗಿದೊಡನೆ ಸುಮ್ಮನಾಗದ ಮನುಷ್ಯ ಪಿ.ಎ.ಸಂಗ್ಮಾರಂತಹ ಹಿರಿಯ ಮುತ್ಸದ್ಧಿಗಳನ್ನು ಭೇಟಿ ಮಾಡಿ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಚಚರ್ೆಗೆ ತೊಡಗಿದ್ದರು. ದೇವೇಗೌಡರಂತಹ ಹಿರಿಯರನ್ನೂ ಕೂಡ ಅವರು ಇದೇ ಆದರದಿಂದ ಕಾಣುತ್ತಾರೆ. ರಾಷ್ಟ್ರ ಕಟ್ಟುವಲ್ಲಿ ಈ ಹಿರಿಯರ ಅನುಭವವನ್ನು ಕ್ರೋಢೀಕರಿಸಿ ಹೊಸ ಪೀಳಿಗೆಗೆ ಅದನ್ನು ಮುಟ್ಟಿಸುವ ನಡು ಪೀಳಿಗೆಯ ಪ್ರತಿನಿಧಿಯಾಗಿ ಕಂಡು ಬರುತ್ತಾರೆ ಅವರು. ಇಷ್ಟಕ್ಕೂ 6 ದಿನಗಳಲ್ಲಿ 21 ರ್ಯಾಲಿ ತಮಾಷೆಯ ಮಾತಲ್ಲ. ದಿನಕ್ಕೆ ನಾಲ್ಕು-ನಾಲ್ಕು ಕಡೆಗಳಲ್ಲಿ ಭಾಷಣ ಮಾಡಿ, ಲಕ್ಷಾಂತರ ಜನರನ್ನುದ್ದೇಶಿಸಿ ಮಾತನಾಡುತ್ತಾ ಹೊಸದೊಂದು ತಂತ್ರಗಾರಿಕೆಯನ್ನು ರೂಪಿಸುತ್ತಾ ಪ್ರತಿಪಕ್ಷಗಳ ವ್ಯೂಹಕ್ಕೆ ಪ್ರತಿವ್ಯೂಹವನ್ನು ಹೆಣೆಯುತ್ತಾ ಸಾವಿರಾರು ಕಿಲೋಮೀಟರ್ಗಳ ಯಾತ್ರೆಯನ್ನೂ ಮಾಡಿ, ರಾತ್ರಿಯಾದೊಡನೆ ದೆಹಲಿಗೆ ಸೇರಿಕೊಂಡು ಮರುದಿನ ಮರಳಿ ಮತ್ತೆ ಬರುವುದಿದೆಯಲ್ಲಾ ಸಾಮಾನ್ಯನಾದವನ ಕೈಲಿ ಸಾಧ್ಯವೇ ಆಗದ ಸಂಗತಿ. ಅವರ ಮೇಲಿನ ಜವಾಬ್ದಾರಿಯೂ ಎಷ್ಟಿದೆಯೆಂದರೆ ಇಲ್ಲಿನ ಭಾಜಪದ ಮುಖ್ಯಮಂತ್ರಿ ಅಭ್ಯಥರ್ಿಯಿಂದ ಹಿಡಿದು ಬೂತ್ ಮಟ್ಟದ ಕಾರ್ಯಕರ್ತರವರೆಗೆ ಪ್ರತಿಯೊಬ್ಬರೂ ಮೋದಿ ಬರುತ್ತಾರೆ, ಬದಲಾವಣೆ ತರುತ್ತಾರೆ ಎಂದೇ ನಿರೀಕ್ಷೆಯಿಂದ ಕಾದು ಕುಳಿತಿದ್ದರು. ಭಾರತೀಯ ಕ್ರಿಕೆಟ್ ತಂಡ ವಿರಾಟ್ ಕೊಹ್ಲಿಯ ಬ್ಯಾಟಿಂಗನ್ನು ಮತ್ತು ಧೋನಿಯ ತಾಳ್ಮೆಯುತ ಆಟವನ್ನು ಕಾದುಕೊಂಡು ಕುಳಿತಿರುತ್ತಲ್ಲಾ ಹಾಗೆಯೇ ಪರಿಸ್ಥಿತಿ. ಹಾಗಂತ ಬರಿ ಎಲೆಕ್ಷನ್ ಗೆಲ್ಲಿಸುವುದಷ್ಟೇ ಅಲ್ಲವಲ್ಲ ಅವರ ಕೆಲಸ, ದೇಶದ ಹೊಣೆಗಾರಿಕೆಯೂ ಅವರ ಹೆಗಲ ಮೇಲೇ ಇದೆ. ಒಂದಿನಿತೂ ತಪ್ಪಾಗದಂತೆ ದೇಶವನ್ನು ಮುನ್ನಡೆಸುವುದು ಅವರ ಜವಾಬ್ದಾರಿಯೇ. ಕಳೆದ ನಾಲ್ಕು ವರ್ಷದಲ್ಲಿ ಅದೆಷ್ಟು ವಿಧಾನಸಭಾ ಚುನವಾಣೆಗಳಲ್ಲಿ ಅವರು ಸ್ಟಾರ್ ಪ್ರಚಾರಕರಾಗಿದ್ದಾಗ್ಯೂ ದೇಶದ ರೈಲು ಒಂದಿನಿತೂ ಹಳಿ ತಪ್ಪದಂತೆ ಮುನ್ನಡೆಸಿಕೊಂಡು ಹೋಗುತ್ತಿದ್ದಾರಲ್ಲಾ ಅವರ ಸಾಮಥ್ರ್ಯದ ಕುರಿತಂತೆ ಒಮ್ಮೆ ಆಲೋಚಿಸಿ ನೋಡಿ.

ಕನರ್ಾಟಕದ ಚುನಾವಣೆಗೂ ಮುನ್ನ ನೇಪಾಳದ ಪ್ರಧಾನಿಯನ್ನು ಭಾರತಕ್ಕೆ ಬರಮಾಡಿಕೊಂಡು ಅವರಿಗೆ ಭಾರತದ ರಾಜತಾಂತ್ರಿಕ ನಿಧರ್ಾರಗಳನ್ನು ವಿಷದಪಡಿಸಿದ್ದರು ಮೋದಿ. ನೇಪಾಳ ನಮ್ಮ ತೆಕ್ಕೆಯಿಂದ ಜಾರಿ ಚೀನಾದ ಬಗಲಿಗೆ ಹೋಗಿ ಬೀಳುವ ಎಲ್ಲ ಹೆದರಿಕೆಯೂ ಖಂಡಿತ ಕಾಡುತ್ತಿತ್ತು. ನೇಪಾಳದ ಮಾಧೇಷಿಗಳ ಹೋರಾಟದ ಹಿಂದೆ ಭಾರತದ್ದೇ ಕೈವಾಡವಿದೆ ಎಂಬ ಅಪನಂಬಿಕೆಯಿಂದ ಪ್ರಧಾನಿ ಕೆ.ಪಿ ಓಲಿ ಚೀನಾದ ಪರ ಹೇಳಿಕೆಗಳನ್ನೇ ಬಹುವಾಗಿ ಕೊಡುತ್ತಿದ್ದರು. ಈಗ ನೇಪಾಳದ ಪ್ರಧಾನಿಯನ್ನು ಕರೆಸಿ ಚೀನಾ ನೇಪಾಳದಲ್ಲಿ ನಡೆಸುತ್ತಿರುವ ಚಟುವಟಿಕೆಗಳ ಕುರಿತಂತೆ ಎಚ್ಚರಿಕೆಯ ಕಿವಿಮಾತನ್ನು ಹೇಳಿ ಅವರನ್ನು ಪ್ರೀತಿಯಿಂದ ಕಳಿಸಿಕೊಟ್ಟದ್ದಲ್ಲದೇ ತಾವೇ ನೇಪಾಳಕ್ಕೆ ಬರುವಂತ ಭರವಸೆಯನ್ನೂ ಕೊಟ್ಟರು. ಇತ್ತೀಚಿನ ದಿನಗಳಲ್ಲಿ ನೇಪಾಳವನ್ನು ಇಷ್ಟು ಸೂಕ್ಷ್ಮವಾಗಿ ಪರಿಗಣಿಸಿದ ಮತ್ತೊಬ್ಬ ಪ್ರಧಾನಿಯೇ ಇರಲಿಲ್ಲ. ಇದು ನೇಪಾಳಕ್ಕೂ ಹೆಮ್ಮೆಯ ಸಂಗತಿ. ನೆನಪಿಡಿ. ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಮಂತ್ರಿ ನೇಪಾಳಕ್ಕೆ ನೀಡುತ್ತಿರುವ ಮೂರನೇ ಭೇಟಿ ಇದು. ಚೀನಾದ ಮಹತ್ವಾಕಾಂಕ್ಷೆಯನ್ನು ಕಂಡಿರುವ ನೇಪಾಳ ಭಾರತದ ಈ ಬಗೆಯ ಬೆಂಬಲದಿಂದಾಗಿ ಚೀನಾದೊಂದಿಗೆ ಚೌಕಶಿಗೆ ಕುಳಿತಾಗ ಅದು ಸ್ವಲ್ಪ ಹೆಚ್ಚಿನದನ್ನು ಮತ್ತು ತಮಗೆ ಬೇಕಾದ್ದನ್ನು ಆಗ್ರಹಿಸಬಲ್ಲ ಸಾಮಥ್ರ್ಯವನ್ನಂತು ಖಂಡಿತ ಹೊಂದಿರುತ್ತದೆ. ಭಾರತದ ಬೆಂಬಲವಿಲ್ಲದೇ ಅಮೇರಿಕಾದ ಸಹಕಾರವನ್ನೂ ಕಳೆದುಕೊಂಡಿರುವ ಪಾಕಿಸ್ತಾನ ಚೀನಾದ ತಾಳಕ್ಕೆ ಕುಣಿಯಲೇಬೇಕಾದ ಅನಿವಾರ್ಯದ ಪರಿಸ್ಥಿತಿಯನ್ನು ತಲುಪಿಬಿಟ್ಟಿದೆಯಲ್ಲಾ ನೇಪಾಳಕ್ಕಂತೂ ಆ ಸ್ಥಿತಿ ಇರಲಾರದು. ಇದು ನೇಪಾಳಕ್ಕೆ ಖಂಡಿತ ಅರಿವಿದೆ.

2

ಅತ್ತ ಕನರ್ಾಟಕದ ಚುನಾವಣೆಗೆ ಮುನ್ನವೇ ಚೀನಾಕ್ಕೆ ಹೋದ ಮೋದಿ ಅಲ್ಲಿಯೂ ಕೂಡ ತಲೆಯನ್ನು ತಗ್ಗಿ ಬಾಗಿಸದೇ ಭಾರತದ ಘನತೆ-ಗೌರವಗಳನ್ನು ಹೆಚ್ಚಿಸಿಯೇ ಬಂದಿದ್ದಾರೆ. ಸಿದ್ದರಾಮಯ್ಯನವರಿಗೆ ಅಂತರರಾಷ್ಟ್ರೀಯ ವಿಚಾರಗಳ ಕುರಿತಂತ ಮಾಹಿತಿಯ ಕೊರತೆ ಇದೆ ಎನಿಸುತ್ತದೆ. ಪ್ರಧಾನಮಂತ್ರಿಯ ಹುದ್ದೆಯ ಘನತೆಯನ್ನು ಕಡಿಮೆ ಮಾಡಿದ್ದು ನರೇಂದ್ರಮೋದಿಯಲ್ಲ, ಅದಕ್ಕೂ ಹಿಂದೆ ಪ್ರಧಾನಿಯಾಗಿದ್ದ ಮನಮೋಹನ ಸಿಂಗರು. ಸಂಸತ್ತಿನ ಕಾರಿಡಾರುಗಳಲ್ಲಿ ಪ್ರಧಾನಮಂತ್ರಿಗೆ ನಮಸ್ಕರಿಸದೇ ಅವರ ಹಿಂದೆ ಬರುತ್ತಿದ್ದ ಸೋನಿಯಾಗೆ ಸಾಷ್ಟಾಂಗವೆರಗುತ್ತಿದ್ದರಲ್ಲಾ ಕಾಂಗ್ರೆಸ್ಸಿಗರು ಅದು ಪ್ರಧಾನಿ ಹುದ್ದೆಯ ಘನತೆಗೆ ಮಾಡಿದ ಅವಮಾನ. ಮನಮೋಹನ ಸಿಂಗರು ಚೀನಾದ ಅಧ್ಯಕ್ಷರನ್ನು ಭೇಟಿ ಮಾಡುವಾಗ ತಲೆತಗ್ಗಿಸಿ ಕೈ ಕುಲುಕುತ್ತಿದ್ದರಲ್ಲಾ ಅದು ಪ್ರಧಾನಿ ಹುದ್ದೆಯ ಘನತೆಗೆ ಅವಮಾನ. ವಿಶ್ವಸಂಸ್ಥೆಯಲ್ಲಿ ಮಾತನಾಡುವಾಗ ನೀರಸವಾದ ಸತ್ವವಿಲ್ಲದ ಭಾಷಣಗಳನ್ನು ಪ್ರಧಾನಮಂತ್ರಿ ಓದುತ್ತಿದ್ದರಲ್ಲ ಆಗ ನಡೆಯುತ್ತಿದ್ದುದು ಹುದ್ದೆಯ ಘನತೆಗೆ ಅವಮಾನ. ಪಕ್ಕದ ಪ್ರಧಾನಿ ನವಾಜ್ ಶರೀಫ್ ಭಾರತದ ಪ್ರಧಾನಿಯನ್ನು ಹಳ್ಳಿಯ ಹೆಂಗಸಿಗಿಂತ ಕಡೆ ಎಂದು ಮೂದಲಿಸಿದನಲ್ಲ; ಹಾಗೆಂದಾಗಲೂ ಬಾಯಿ ಮುಚ್ಚಿಕೊಂಡಿದ್ದರಲ್ಲಾ ಕಾಂಗ್ರೆಸ್ಸಿಗರು ಅದು ಪ್ರಧಾನಿ ಹುದ್ದೆಗಷ್ಟೇ ಅಲ್ಲ, 120 ಕೋಟಿಗೂ ಹೆಚ್ಚು ಭಾರತೀಯರಿಗೆ ಮಾಡಿದ ಅವಮಾನ. ಅದನ್ನು ಧಿಕ್ಕರಿಸಿ ನವಾಜ್ ಶರೀಫರಿಗೆ ಅಂದೂ ಝಾಡಿಸಿದ್ದೂ ಇನ್ನೂ ಪ್ರಧಾನಿಯೇ ಆಗಿರದಿದ್ದ ನರೇಂದ್ರಮೋದಿಯೇ ಎಂಬುದನ್ನು ಸಿದ್ದರಾಮಯ್ಯನವರು ಮರೆಯದಿದ್ದರೆ ಸಾಕು.

ಪ್ರಧಾನಮಂತ್ರಿ ನರೇಂದ್ರಮೋದಿಯವರು ದೇಶ ಕಟ್ಟುವ ಕಾಯಕದಲ್ಲಿ ತೊಂದರೆ ಕೊಡುವ ಪ್ರತಿಯೊಬ್ಬರನ್ನೂ ಅವಮಾನಿಸುತ್ತಿದ್ದಾರೆ. ಆದರೆ ಯಾರು ರಾಷ್ಟ್ರೋನ್ನತಿಯ ಕಾರ್ಯದಲ್ಲಿ ಜೊತೆಯಲ್ಲಿದ್ದಾರೋ ಅವರನ್ನು ತಲೆಯ ಮೇಲೆ ಹೊತ್ತು ಮೆರೆಸುತ್ತಾರೆ. ಹೀಗಾಗಿಯೇ ಅವರ ಭಾಷಣದಲ್ಲಿ ತಮ್ಮ ಹೆಸರು ಪ್ರಸ್ತಾಪವಾದೊಡನೆ, ಅವರು ಮಾಡುವ ಟ್ವೀಟುಗಳಲ್ಲಿ ತಮ್ಮ ಕುರಿತಂತೆ ಬಂದೊಡನೆ ದೇಶದ ಜನ ಕುಣಿದಾಡಿಬಿಡುತ್ತಾರೆ.

3

ಬಿಡಿ. ಚುನಾವಣೆ ಮುಗಿದೊಡನೆ ಸಿದ್ದರಾಮಯ್ಯನವರಿಗೆ ತಮ್ಮದ್ದೇ ಆದ ರಾಜಕೀಯ ಲೆಕ್ಕಾಚಾರಗಳು ಬೇರೆ ಇರಬಹುದೇನೋ. ಆದರೆ ನರೇಂದ್ರಮೋದಿಯವರಿಗೆ ಬೆಟ್ಟದಷ್ಟು ಕೆಲಸ ಇದೆ. ಹೀಗಾಗಿಯೇ ಅವರು ಕನರ್ಾಟಕದ ಪ್ರಚಾರ ಭಾಷಣ ಮುಗಿಸಿ ಮರುದಿನವೇ ನೇಪಾಳಕ್ಕೆ ತೆರಳಿದ್ದು. ನೇಪಾಳದ ಪ್ರಧಾನಿ ಓಲಿಯನ್ನು ಭಾರತದೆಡೆಗೆ ಒಲಿಸಿಕೊಳ್ಳಲು ಸಾಧ್ಯವಾದರೆ ಅದು ನರೇಂದ್ರಮೋದಿಯವರ ದೊಡ್ಡ ಸಾಧನೆಯೇ. ಏಕೆಂದರೆ ಪಾಕಿಸ್ತಾನದ ಮೂಲಕ ದೇಶಕ್ಕೆ ನುಸುಳುತ್ತಿರುವ ಖೋಟಾ ನೋಟು, ಮಾದಕ ದ್ರವ್ಯ ಮೊದಲಾದವುಗಳಿಗೆ ನೇಪಾಳವೇ ಹೆಬ್ಬಾಗಿಲು. ಚೀನಾ ಬೆಂಬಲಿತ ಮಾವೋವಾದಿ ನಕ್ಸಲರಿಗೆ ನೇಪಾಳವೇ ಸೇತುವೆ. ಮುಂದಿನ ಮೂರ್ನಾಲ್ಕು ತಿಂಗಳೊಳಗೆ ಇಲ್ಲಿರುವಂಥ ನಕ್ಸಲರನ್ನು ಪೂರ್ಣ ಮುಗಿಸಬೇಕೆಂದರೆ ನೇಪಾಳ ಮಯನ್ಮಾರ್ಗಳ ಸಹಕಾರ ಬೇಕೇ ಬೇಕು. ಅದಾಗಲೇ ಮಯನ್ಮಾರನ್ನು ತಮ್ಮತ್ತ ಒಲಿಸಿಕೊಂಡಿರುವ ಭಾರತಕ್ಕೆ ನೇಪಾಳವೇ ದೊಡ್ಡ ಸವಾಲು. ಚೀನಾಕ್ಕೆ ಹೋಗಿ ಚೀನಿಯನ್ನರೊಂದಿಗೆ ಮಾತನಾಡಿ ಬಂದ ನರೇಂದ್ರ ಮೋದಿ ಈಗ ನೇಪಾಳಕ್ಕೆ ಕಾಲಿಟ್ಟಿದ್ದಾರೆಂದರೆ ಅದರ ಹಿಂದೆ ಬಲುದೊಡ್ಡ ಕಾರ್ಯಯೋಜನೆ ಇದೆ.
ಇದನ್ನೆಲ್ಲಾ ಅರ್ಥ ಮಾಡಿಕೊಳ್ಳಲಾಗದೇ ಜಾತಿ-ಮತ, ಹೆಂಡ-ಹಣ ಇವುಗಳನ್ನೇ ಮುಂದಿಟ್ಟುಕೊಂಡು ನರೇಂದ್ರಮೋದಿಗೇಕೆ ಮತ ಹಾಕಬೇಕು ಎನ್ನುವವರ ಕುರಿತಂತೆ ಖಂಡಿತವಾಗಿಯೂ ಅನುಕಂಪವಿದೆ. ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಒಂದೇ ಇರುವುದು ಅಭಿವೃದ್ಧಿಯ ರಾಜಮಾರ್ಗ ನಿಮರ್ಾಣ ಮಾಡಿದಂತೆ. ಹಾಗೆಯೇ ಮೋದಿ ತೆಗೆದುಕೊಳ್ಳಬೇಕೆಂದಿರುವ ಅನೇಕ ನಿರ್ಣಯಗಳಿಗೆ ರಾಜ್ಯ ಸಭೆಯಲ್ಲಿ ಬೆಂಬಲ ಬೇಕೆಂದರೆ ಕನರ್ಾಟಕವೂ ಅವರಿಗೆ ಕೊಡುಗೆಯಾಗಿ ದಕ್ಕಲೇಬೇಕು. ನಮಗಾಗಿ ಬಿಡುವಿಲ್ಲದೇ 18 ಗಂಟೆ ಕೆಲಸ ಮಾಡುವ ಪುಣ್ಯಾತ್ಮನಿಗಾಗಿ ನಾವು ಈ ಒಂದು ದಿನ ಕೈ ಜೋಡಿಸಬೇಕಿದೆ. ಇಂದು ಆದಷ್ಟು ಬೇಗ ಮತ ಹಾಕೋಣ. ಮತ್ತು ಇತರರಿಂದಲೂ ಮತ ಹಾಕಿಸೋಣ.

ಈ ಬಾರಿ ಮತ ಹಾಕಿ, ಭಾರತವನ್ನು ಗೆಲ್ಲಿಸೋಣ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s