ಸಿದ್ದರಾಮಯ್ಯನವರನ್ನು ಕೇಳಲು ಎಷ್ಟೊಂದು ಪ್ರಶ್ನೆಗಳಿವೆ!

ಸಿದ್ದರಾಮಯ್ಯನವರನ್ನು ಕೇಳಲು ಎಷ್ಟೊಂದು ಪ್ರಶ್ನೆಗಳಿವೆ!

ಇಂದು ಸಿದ್ದರಾಮಯ್ಯನವರಿಗೆ ಕೇಳಲು ಜನಸಾಮಾನ್ಯರ ಬಳಿ ಬೆಟ್ಟದಷ್ಟು ಪ್ರಶ್ನೆಗಳಿವೆ. ಕೇಂದ್ರದ ಅಪಾರ ಸಹಕಾರವನ್ನು ಪಡೆದುಕೊಂಡು ಕೇಂದ್ರದ ಎಲ್ಲ ಯೋಜನೆಗಳನ್ನು ತಮ್ಮದೆಂದು ಬಿಂಬಿಸಿಕೊಂಡ ಸಿದ್ದು ರಾಜ್ಯಕ್ಕೆ ಮಾಡಿದ್ದಾದರೂ ಏನು? ಕಾವೇರಿ-ಮಹಾದಾಯಿಗಳ ಸಮಸ್ಯೆ ಬಗೆಹರಿಸಲಿಲ್ಲ. ಬದಲಿಗೆ ಇರುವ ಕೆರೆಗಳನ್ನು ಅಭಿವೃದ್ಧಿ ಪಡಿಸದೇ ಬೆಂಗಳೂರಿನ ಬೆಳ್ಳಂದೂರು ಕೆರೆ ಹೊತ್ತಿಕೊಂಡು ಉರಿಯುವಂತೆ ನೋಡಿಕೊಂಡರು.

2

ಚುನಾವಣೆಯ ಕಣ ದಿನಕಳೆದಂತೆ ಕಾವೇರುತ್ತಿದೆ. ಆದರೆ ಈ ಬಾರಿಯ ಚುನಾವಣೆ ಹಿಂದಿನ ಎಲ್ಲ ಚುನಾವಣೆಗಿಂತಲೂ ಭಿನ್ನವಾಗಿದೆ. ಈ ಬಾರಿ ಎಲ್ಲಿಯೂ ಅಭ್ಯಥರ್ಿಗಳ ಫ್ಲೆಕ್ಸುಗಳ ಭರಾಟೆ ಇಲ್ಲ, ಪ್ಲಾಸ್ಟಿಕ್ ಧ್ವಜಗಳ ಹಾರಾಟವಿಲ್ಲ. ಎಲ್ಲ ಅಭ್ಯಥರ್ಿಗಳು ಸಾಮಾಜಿಕ ಜಾಲತಾಣಗಳ ಮೊರೆ ಹೋಗಬೇಕು ಇಲ್ಲವೇ ಮಾಧ್ಯಮಗಳ ಅವಲಂಬಿಸಬೇಕು. ಹೀಗಾಗಿಯೇ ಪತ್ರಿಕೆ ಟೀವಿಗಳಷ್ಟೇ ವಾಟ್ಸಪ್ ಫೇಸ್ಬುಕ್ಗಳಿಗೂ ಮಹತ್ವ ಬಂದುಬಿಟ್ಟಿದೆ. ರಾಜ್ಯದ ಚುನಾವಣೆಯ ಹಾದಿಯನ್ನು ಗಮನಿಸಿದರೆ ಆರು ತಿಂಗಳಿಂದೀಚೆಗಿನ ಬದಲಾವಣೆಗಳು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಆರು ತಿಂಗಳ ಮುಂಚೆ ಕೇಂಬ್ರಿಡ್ಜ್ ಅನಾಲಿಟಿಕಾದ ಮಾರ್ಗದರ್ಶನದಂತೆ ನಡೆಯುತ್ತಿದ್ದ ಕಾಂಗ್ರೆಸ್ಸು ಗುಜರಾತಿನಲ್ಲಿ ಪಡೆದುಕೊಂಡ ಅಭೂತಪೂರ್ವ ಗೆಲುವಿನಿಂದ ಬೀಗುತ್ತಿತ್ತು. 2018 ರ ಕನರ್ಾಟಕ ಬಿಡಿ 2019 ರ ಲೋಕಸಭೆ ಚುನಾವಣೆಯನ್ನೂ ತಾನೇ ಗೆದ್ದುಬಿಡುವೆನೆಂಬ ಧಿಮಾಕಿನಲ್ಲಿತ್ತು ಅದು. ಆದರೆ ಎಲ್ಲವೂ ತಿರುವು-ಮುರುವಾಯಿತು. ಕೇಂಬ್ರಿಡ್ಜ್ ಅನಾಲಿಟಿಕಾದ ದತ್ತಾಂಶ ಕಳವು ಪ್ರಕರಣ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ ಕಾಂಗ್ರೆಸ್ ಅನಿವಾರ್ಯವಾಗಿ ಒಪ್ಪಂದದಿಂದ ದೂರ ಸರಿಯಬೇಕಾಯ್ತು. ಅಲ್ಲಿಯವರೆಗೂ ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಿರ-ಮಿರ ಮಿಂಚುತ್ತಿದ್ದರು. ಫೇಸ್ಬುಕ್ಕಿನ ಯಾವ ಪೇಜುಗಳನ್ನು ತೆರೆದರೂ, ಯಾವ ವೆಬ್ಸೈಟ್ ತೆರೆದು ಕುಳಿತರೂ, ಮುಖ್ಯಮಂತ್ರಿಗಳ ಗುಣಗಾನದ ಜಾಹಿರಾತು ತುಂಬಿತ್ತು. ಆನಂತರ ಬದಲಾವಣೆಯ ಪರ್ವ ಶುರುವಾಯ್ತು ನೋಡಿ. ಸಿದ್ದರಾಮಯ್ಯನವರ ವಿರುದ್ಧದ ಆಕ್ರೋಶ ಹಳ್ಳಿ-ಹಳ್ಳಿಗಳಲ್ಲೂ ಪ್ರತಿಧ್ವನಿಸಲಾರಂಭಿಸಿತು. ಅಷ್ಟೂ ದಿನ ಅವರು ಹೇಳಿದ ಸುಳ್ಳುಗಳನ್ನು ಬಿಜೆಪಿ ಬಯಲಿಗೆಳೆಯುವುದಿರಲಿ ಜನರೇ ಮಾತನಾಡಿಕೊಳ್ಳಲಾರಂಭಿಸಿದರು. ಪರಿಸ್ಥಿತಿ ಎಲ್ಲಿಯವರೆಗೂ ಕಾಂಗ್ರೆಸ್ಸಿನ ಪಾಲಿಗೆ ವಿಕಟವಾಯಿತೆಂದರೆ ಸ್ವತಃ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಪ್ರಚಾರಕ್ಕೆಂದು ಹೋದಾಗ ಊರಿನ ಜನ ಬಾಗಿಲೇ ತೆರೆಯಲಿಲ್ಲ! ಅಷ್ಟೇ ಅಲ್ಲ. ಇಲ್ಲಿನವರೊಂದಿಗೆ ಆತ್ಮೀಯತೆ ಹೊಂದಿದ್ದೇನೆ ಎಂದು ತೋರಿಸಿಕೊಳ್ಳುವ ಭರದಲ್ಲಿ ಕೈಯಲ್ಲಿ ಚೀಟಿ ಹಿಡಿದು ಅದರಲ್ಲಿರುವ ಹೆಸರುಗಳನ್ನು ಓದಿ ಅವರ ಮೂಲಕ ಕೆಲಸ ಮಾಡಿಸಿಕೊಳ್ಳುವ ನಾಟಕ ಮಾಡಲು ಹೊರಟ ಸಿದ್ದರಾಮಯ್ಯನವರಿಗೆ ಮರಿಗೌಡರು ಕೊಟ್ಟ ತಪರಾಕಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಸಾಮಾಜಿಕ ಜಾಲತಾಣಗಳ ಒಂದು ವಿಶೇಷವೇನೆಂದರೆ ಅದು ಧನಾತ್ಮಕ ಅಂಶಗಳನ್ನು ಹಬ್ಬಿಸಿದಷ್ಟೇ ವೇಗವಾಗಿ ಋಣಾತ್ಮಕ ಅಂಶಗಳನ್ನೂ ಹಬ್ಬಿಸುತ್ತದೆ. ಹಾಗೆ ನೋಡಿದರೆ ನೆಗೆಟಿವ್ ಒಂದು ಕೈ ಮೇಲಾಗಿಯೇ ಹಬ್ಬುತ್ತದೆ. ಚಾಮುಂಡೇಶ್ವರಿಯಲ್ಲಿ ಹುಟ್ಟಿದ ಈ ಆಕ್ರೋಶ ಇಡಿಯ ಕ್ಷೇತ್ರದಲ್ಲಿ, ಅಷ್ಟೇ ಅಲ್ಲದೇ ರಾಜ್ಯಕ್ಕೂ ಬೆಂಕಿಯಾಗಿ ಹಬ್ಬಿರುವುದರಲ್ಲಿ ಅಚ್ಚರಿಯೇ ಇಲ್ಲ. ಅತ್ಯಂತ ಸಾಮಾನ್ಯರೂ ಕೂಡ ಸಿದ್ದರಾಮಯ್ಯನವರನ್ನು ಪ್ರಶ್ನೆ ಕೇಳಲು ತುದಿಗಾಲಲ್ಲಿ ನಿಂತಿದ್ದಾರೆ. ಸಿದ್ದರಾಮಯ್ಯನವರು ಸಿಗಲಿಲ್ಲವೆಂದರೆ ರಾಹುಲ್ರನ್ನೇ ಅಡ್ಡಗಟ್ಟಲು ಇವರು ಸಿದ್ಧ. ಕರಾವಳಿ ಭಾಗದಲ್ಲಿ ಹಿಂದೂಗಳು ನಿರಂತರವಾಗಿ ಕೊಲೆಗೀಡಾಗುತ್ತಿರುವಾಗ ಸಿದ್ದರಾಮಯ್ಯ ಅಧಿಕಾರ ದರ್ಪದಿಂದ ಮಾತನಾಡಿದ್ದರು. ಅವರ ಎಡ-ಬಲದಲ್ಲಿ ಕುಳಿತು ಹಿಂದುತ್ವ ವಿರೋಧಿ ಚಿಂತನೆಗಳನ್ನೇ ಬಿತ್ತುತ್ತಿದ್ದವರ ಮಾತುಗಳನ್ನು ಕೇಳಿ ಸಿದ್ದರಾಮಯ್ಯನವರು ಧಿಮಾಕಿನಿಂದ ಆಡಿದ ಪ್ರತಿಯೊಂದು ಮಾತು ಬಿಸಿ ಮುಟ್ಟಿಸಿದ್ದು ಮಾತ್ರ ರಾಹುಲ್ಗೆ. ಹೊನ್ನಾವರದ ರೋಡ್ಶೋ ವೇಳೆಗೆ ಮೋದಿ ಪರ ಘೋಷಣೆ ಕೂಗಿದ ಸ್ಥಳೀಯರು ರಾಹುಲ್ಗೆ ಭಾಷಣ ಮಾಡುವುದು ಬಿಡಿ ರ್ಯಾಲಿ ನಡೆಸಲೂ ಅವಕಾಶ ಕೊಡಲಿಲ್ಲವೆಂಬುದು ಆಳುವ ಪಕ್ಷಕ್ಕೆ ಸುಲಭ ಗ್ರಾಹ್ಯ ಸಂಗತಿಯಂತೂ ಅಲ್ಲ. ಹಾಗಂತ ಜನರ ಆಕ್ರೋಶ ಇಲ್ಲಿಗೇ ನಿಂತಿತೆಂದು ಭಾವಿಸಬೇಡಿ. ಹಾಸನದ ಅರಕಲಗೂಡಿನಲ್ಲಿ ಶಾಸಕ ಎ.ಮಂಜು ಜನರ ಬಳಿ ಮತ ಕೇಳಲು ಹೋದಾಗ ಹಳ್ಳಿಯೊಂದರಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೇ ಓಡಿ ಹೋದ ಪ್ರಕರಣ ವರದಿಯಾಯ್ತು. ಶಿರಾದಲ್ಲಿ ಕಾನೂನು ಸಚಿವ ಟಿ.ಜಿ ಜಯಚಂದ್ರ ಅಲ್ಲಿನ ವಕೀಲರ ಬಳಿ ಮತ ಕೇಳಲೆಂದು ನಿಂತಾಗ ಆ ವಕೀಲರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡಲಾಗದೇ ತಡಬಡಾಯಿಸಿದ್ದು ಕಣ್ಣಿಗೆ ರಾಚುವಂತಿತ್ತು. ನನಗೂ ಒಂದು ಕನಸಿದೆ ಎಂದು ಪತ್ರಿಕೆಗಳಲ್ಲಿ ಪುಟಗಟ್ಟಲೆ ಜಾಹಿರಾತು ಕೊಟ್ಟ ಸಿದ್ದರಾಮಯ್ಯನವರು ಆ ಮೂಲಕ ಮಂತ್ರಿಗಳನ್ನು ಊರೂರಿಗೆ ತರುಣರೊಂದಿಗೆ ಮಾತನಾಡಲು ಕಳಿಸುವೆನೆಂದು ಭರವಸೆ ಕೊಟ್ಟಿದ್ದರು. ಅವರೇನೋ ಕಳಿಸಿಯಾರು. ಆದರೆ ಹೋಗಿ ಅವರೊಂದಿಗೆ ಮಾತನಾಡಬಲ್ಲ ತಾಕತ್ತು ಸದ್ಯಕ್ಕಂತೂ ಯಾವ ನಾಯಕನಿಗೂ ಉಳಿದಂತಿಲ್ಲ. 5 ವರ್ಷಗಳ ದುರಾಡಳಿತಕ್ಕೆ ಈಗ ಸಿದ್ದರಾಮಯ್ಯ ಬೆಲೆ ತೆರುತ್ತಿದ್ದಾರೆ.

ಅಧಿಕಾರವೆಂದರೇನೆ ಹಾಗೆ. ಅದರ ಅಮಲು ಇಳಿದಾಗ ಎದುರಿಗಿರುವುದ್ಯಾವುದೂ ಕಾಣುವುದಿಲ್ಲ. ಸುತ್ತಲೂ ಇದ್ದವರು ಏನು ಹೇಳುತ್ತಾರೋ ಅದೇ ಸತ್ಯವೆನಿಸುತ್ತದೆ. ಅಧಿಕಾರ ಇರುವಷ್ಟು ದಿನ ಜನರೂ ತಲೆ ಬಾಗಿಯೇ ನಿಂತಿರುತ್ತಾರೆ. ಪ್ರತಿಯೊಬ್ಬರಿಗೂ ತಮ್ಮ ಬದುಕು ಸಹಜವಾಗಿ ಸುಗಮವಾಗಿರಬೇಕೆಂಬುದೇ ಆಸೆ. ಆದರೆ ಅವಕಾಶಕ್ಕಾಗಿ ಅವರು ಕಾಯುತ್ತಿರುತ್ತಾರೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆ ಅಂಥದೊಂದು ಬಂಗಾರದ ಅವಕಾಶವನ್ನು ಸೃಷ್ಟಿಸಿಕೊಡುತ್ತದೆ. ಅದರಲ್ಲೂ ಕೇಂದ್ರದಲ್ಲಿ ಮೋದಿಯಂಥವರು ಅಧಿಕಾರದಲ್ಲಿದ್ದು ಜನ ಸಾಮಾನ್ಯರ ಕೂಗಿಗೆ ಪ್ರತಿಸ್ಪಂದಿಸುವ ಆಡಳಿತವನ್ನು ಕೊಡುವಾಗ ತಾವಂದುಕೊಂಡದ್ದೇ ನಡೆಯಬೇಕೆನ್ನುವ ಸವರ್ಾಧಿಕಾರಿ ಪ್ರವೃತ್ತಿಯ ಸಿದ್ದರಾಮಯ್ಯನಂಥವರನ್ನು ಸಹಿಸುವುದಾದರೂ ಹೇಗೆ ಸಾಧ್ಯ?! ಅದಕ್ಕೆ ಪ್ರತಿರೋಧದ ಕಿಡಿ ಈಗ ಉರಿಯುತ್ತಿರೋದು. ಕೇಂದ್ರದ ಸಕರ್ಾರ ಜನ ಸಾಮಾನ್ಯರ ಸಣ್ಣದೊಂದು ಟ್ವೀಟಿಗೂ ಪ್ರತಿಸ್ಪಂದಿಸುತ್ತಾ, ಶಾಲೆಯ ಹುಡುಗಿಯೊಂದು ಬರೆದ ಪತ್ರಕ್ಕೆ ಅಭಿವೃದ್ಧಿಯ ದಿಕ್ಕನ್ನೇ ಬದಲಾಯಿಸುತ್ತಾ, ಸಮಾಜದ ಕಾಳಜಿಯುಳ್ಳವನೊಬ್ಬ ಆಡಿದ ಮಾತಿಗೆ ಕಾನೂನನ್ನೇ ಬದಲಾಯಿಸುತ್ತಾ, ನಿಜವಾದ ಪ್ರಜಾಪ್ರಭುತ್ವದ ಅನುಭೂತಿಯನ್ನು ಕೊಡುತ್ತಿರುವಾಗ ‘ನಾನು ಹೇಳಿದ್ದನ್ನೆಲ್ಲಾ ಕೇಳಿಕೊಂಡು ಬಿದ್ದಿರಬೇಕು’ ಎಂಬ ಧಾಟಿಯ ಮುಖ್ಯಮಂತ್ರಿಗೆ ಪಾಠ ಕಲಿಸಲು ಜನ ಕಾಯುತ್ತಲೇ ಇರುತ್ತಾರೆ.

3

ಇಂದು ಸಿದ್ದರಾಮಯ್ಯನವರಿಗೆ ಕೇಳಲು ಜನಸಾಮಾನ್ಯರ ಬಳಿ ಬೆಟ್ಟದಷ್ಟು ಪ್ರಶ್ನೆಗಳಿವೆ. ಕೇಂದ್ರದ ಅಪಾರ ಸಹಕಾರವನ್ನು ಪಡೆದುಕೊಂಡು ಕೇಂದ್ರದ ಎಲ್ಲ ಯೋಜನೆಗಳನ್ನು ತಮ್ಮದೆಂದು ಬಿಂಬಿಸಿಕೊಂಡ ಸಿದ್ದು ರಾಜ್ಯಕ್ಕೆ ಮಾಡಿದ್ದಾದರೂ ಏನು? ಕಾವೇರಿ-ಮಹಾದಾಯಿಗಳ ಸಮಸ್ಯೆ ಬಗೆಹರಿಸಲಿಲ್ಲ. ಬದಲಿಗೆ ಇರುವ ಕೆರೆಗಳನ್ನು ಅಭಿವೃದ್ಧಿ ಪಡಿಸದೇ ಬೆಂಗಳೂರಿನ ಬೆಳ್ಳಂದೂರು ಕೆರೆ ಹೊತ್ತಿಕೊಂಡು ಉರಿಯುವಂತೆ ನೋಡಿಕೊಂಡರು. ಬೆಂಗಳೂರನ್ನು ಡ್ರಗ್ಸ್ ರಾಜಧಾನಿಯಾಗಿ ಮಾಡಿಬಿಟ್ಟರು. ಇಂದು ಮುಂಬೈ, ಹೈದರಾಬಾದ್, ಕೇರಳ ತಮಿಳುನಾಡು ಮತ್ತು ಗೋವಾದಿಂದ ಬರುವ ಈ ಮಾದಕದ್ರವ್ಯ ಬೆಂಗಳೂರಿನ ಮೂಲಕವೇ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಸಾಗಿಸಲ್ಪಡುತ್ತಿದೆ. ಅಲ್ಲಿಗೇ ನಿಲ್ಲುವುದಿಲ್ಲ ಬೆಂಗಳೂರಿನ ಸಾಧನೆ. ದೇಶದ ಎರಡನೇ ದೊಡ್ಡ ಕ್ರೈಂ ಸಿಟಿಯಾಗಿ ಬೆಂಗಳೂರು ಬೆಳೆದು ನಿಂತಿದೆ. ಟ್ರಾಫಿಕ್ ಜ್ಯಾಮ್ನ ಸಮಸ್ಯೆಯಂತೂ ಬೆಂಗಳೂರು ಬಿಡಿ ಮಂಗಳೂರು, ಹುಬ್ಬಳ್ಳಿ, ಬೆಳಗಾವಿಗಳಿಗೂ ಹಬ್ಬಿಬಿಟ್ಟಿದೆ. ನಗರಾಭಿವೃದ್ಧಿಗೆ ಸಚಿವರು ಹೆಸರಿಗೆ ಮಾತ್ರ. ಅವರು ಸ್ವಂತ ಅಭಿವೃದ್ಧಿ ಮಾಡಿಕೊಂಡಿದ್ದೇ ಬಂತು. ಕನರ್ಾಟಕದಲ್ಲಿ ಸಿದ್ದರಮಾಯ್ಯನವರ ಐದೇ ಐದು ವರ್ಷದಲ್ಲಿ 871 ಅಪಹರಣಗಳಾದವು, 462 ಲೈಂಗಿಕ ಹಲ್ಲೆ ಅತ್ಯಾಚಾರ ಪ್ರಕರಣಗಳು ದಾಖಲಾದವು. ಕನರ್ಾಟಕದ ರಾಜಧಾನಿ ಬೆಂಗಳೂರಿನಲ್ಲಿ ವಿಬ್ಗಯಾರ್ ಶಾಲೆಯ 6 ವರ್ಷದ ಮಗುವಿನ ಮೇಲೆ ಅತ್ಯಾಚಾರವಾದಾಗಲೇ ಸಿದ್ದು ತಮ್ಮ ದೀರ್ಘ ನಿದ್ದೆಯಿಂದ ಎದ್ದಿದ್ದರೆ ಖಂಡಿತ ನಮ್ಮ ಸ್ಥಿತಿ ಹೀಗಿರುತ್ತಿರಲಿಲ್ಲ. ಇಂದು ಕನರ್ಾಟಕದ ರಸ್ತೆಗಳು ಗಬ್ಬೆದ್ದುಹೋಗಿವೆ, ಒಳಚರಂಡಿ ವ್ಯವಸ್ಥೆ ನಾಶವಾಗಿದೆ. ದೇಶವೆಲ್ಲಾ ದಿನದ 24 ಗಂಟೆಯೂ ಕರೆಂಟ್ ಕಾಣುತ್ತಿದ್ದರೆ ಕನರ್ಾಟಕ ಬಿಡಿ ರಾಜಧಾನಿ ಬೆಂಗಳೂರಿನಲ್ಲೇ ಇಂದಿಗೂ ಪವರ್ ಕಟ್ ಆಗುತ್ತಿದೆ. ರಾಜ್ಯಕ್ಕೆ ದೊಡ್ಡ ಮೊತ್ತದ ಹೂಡಿಕೆಯನ್ನು ತಂದೆನೆಂದು ಬೀಗುವ ಸಕರ್ಾರ ಅಮೇಜಾನ್ ಮೈಕ್ರೊಸಾಫ್ಟ್ಗಳು ಏಕೆ ಪಕ್ಕದ ರಾಜ್ಯಕ್ಕೆ ವಲಸೆ ಹೋದವು ಎಂಬುದನ್ನು ಉತ್ತರಿಸುವಲ್ಲಿ ಸೋತಿದೆ.

ಈಗ ಪ್ರಶ್ನೆ ಕೇಳುವ ಸರದಿ ನಮ್ಮದ್ದು. ಅಕ್ಕ-ಪಕ್ಕದ ರಾಜ್ಯಗಳೆಲ್ಲಾ ಹೊಸ-ಹೊಸ ಕನಸುಗಳೊಂದಿಗೆ ತಮ್ಮ ರಾಜ್ಯವನ್ನು ದೇಶದಲ್ಲೇ ಅಗ್ರಣಿಯಾಗಿಸಲು ಹೊರಟಿರುವಾಗ ನಾವಿನ್ನೂ ಉಚಿತ ಭಾಗ್ಯಗಳನ್ನು ಕೊಡುತ್ತಿದ್ದೇವೆ ಎಂಬುದನ್ನೇ ಹೆಮ್ಮೆಯಿಂದ ಹೇಳಿಕೊಂಡು ತಿರುಗಾಡುತ್ತಿದ್ದೇವೆ. ನಮ್ಮ ವಾಷರ್ಿಕ ಬಜೆಟ್ಟಿನ ಎರಡರಷ್ಟು ಸಾಲವನ್ನೇ ಮಾಡಿ ಉಚಿತ ಕೊಡುಗೆಗಳನ್ನು ಹಂಚುವಂತ ಮತ್ತೊಬ್ಬ ಮುಖ್ಯಮಂತ್ರಿ ಸಿಗುವುದು ಕಷ್ಟ. ಸಿದ್ದರಾಮಯ್ಯನವರಿಗೇನು ಅವರು ಚಾಮುಂಡೇಶ್ವರಿ ಬಾದಾಮಿ ಎರಡು ಕ್ಷೇತ್ರದಲ್ಲಿ ಸೋತರೂ ಅವರ ಮಗ ವರುಣಾದಲ್ಲಿ ಗೆಲ್ಲುವನೆಂಬ ಭರವಸೆಯಿದೆ. ಹಾಗಾದರೆ ಆಳುವ ಅವರ ಪರಂಪರೆ ಮುಂದುವರಿದಂತೆಯೇ. ಅವರ ಮಗ ಮತ್ತೆ ರಾಜ್ಯದ ನೆಪ ಹೇಳಿ ಸಾಲ ಮಾಡುವ ಅವಕಾಶವನ್ನು ಪಡೆದುಕೊಳ್ಳುತ್ತಾನೆ. ಆದರೆ ತೀರಿಸಬೇಕಾದ್ದು ಮಾತ್ರ ನಾನು ಮತ್ತು ನೀವೇ! ಒಂದು ಉಚಿತ ಭಾಗ್ಯವನ್ನು ನಾವ್ಯಾರೂ ಅನುಭವಿಸದೇ ಹೋದರೂ ಅದರ ಹೊರೆಯನ್ನು ಹೊರಬೇಕಾದಂತ ಈ ವಿಕಟ ಪರಿಸ್ಥಿತಿ ಇದೆಯಲ್ಲಾ ಇದು ಸಿದ್ದರಾಮಯ್ಯನವರು ಕೊಟ್ಟಿರುವಂಥ ಬಲುದೊಡ್ಡ ಕೊಡುಗೆ. ನಮ್ಮೆಲ್ಲ ತೆರಿಗೆ ಕಟ್ಟುವವರ ಬದುಕನ್ನು ಮುಂದಿನ ಅನೇಕ ವರ್ಷಗಳ ಕಾಲ ಅಸಹನೀಯಗೊಳಿಸಿದರಲ್ಲ ಈ ಕಾರಣಕ್ಕಾಗಿಯೇ ನಾವೀಗ ಅವರನ್ನು ಪ್ರಶ್ನಿಸಬೇಕಿರೋದು.
ಪ್ರಶ್ನಿಸುವ ಆಸೆ ನನಗೂ ಇದೆ. ಅಧಿಕಾರದಲ್ಲಿದ್ದಾಗ ಕೇಳಿದ ಪ್ರಶ್ನೆಗೆಲ್ಲಾ ಉಡಾಫೆಯ ಉತ್ತರ ಕೊಡುತ್ತಿದ್ದರಲ್ಲಾ ಈಗ ಚುನಾವಣೆಯ ಹೊಸ್ತಿಲಲ್ಲಿ ಹೇಗೆ ಉತ್ತರಿಸುವರೋ ನೋಡಬೇಕಿದೆ. ಕಂಡ-ಕಂಡಲ್ಲಿ ನಿದ್ದೆ ಮಾಡುತ್ತಿದ್ದ ಸಿದ್ದರಾಮಯ್ಯನವರು ಈಗ ನಿದ್ದೆ ಕಳೆದುಕೊಂಡು ಅಲೆದಾಡುತ್ತಿದ್ದಾರೆ. ಏಕೆಂದರೆ ಆರು ತಿಂಗಳ ಹಿಂದಿನ ಸಮೀಕ್ಷೆ ಸಿದ್ದರಾಮಯ್ಯನವರ ಪಾಳಯಕ್ಕೆ 125 ಕ್ಷೇತ್ರಗಳನ್ನು ಖಾತ್ರಿಯಾಗಿಸಿತ್ತು. 20 ದಿನಗಳ ಹಿಂದಿನ ಸಮೀಕ್ಷೆ ಅದನ್ನು 85 ಕ್ಕಿಳಿಸಿದೆ. ಮತ್ತು ಈಗಿನ ಸಮೀಕ್ಷೆಗಳು ಇನ್ನೂ ಭಯಾನಕವಾದ ಸ್ಥಿತಿಯನ್ನು ಹೊರಗೆಡುವುತ್ತಿದೆ. ನರೇಂದ್ರಮೋದಿ ಪ್ರಚಾರಕ್ಕೆ ಆಗಮಿಸುವ ಮುನ್ನವೇ ಈ ರೀತಿಯ ಪರಿಸ್ಥಿತಿಯಾದರೆ ಇನ್ನು ನರೇಂದ್ರ ಮೋದಿಯವರು ಬಂದು ಹೋದ ನಂತರ ಕಾಂಗ್ರೆಸ್ಸಿನ ಸ್ಥಿತಿ ಏನಾಗಬಹುದೆಂದು ಊಹಿಸಿ!

ಅದಕ್ಕೇ ಹೇಳಿದ್ದು ಚುನಾವಣಾ ಕಣ ಈ ಬಾರಿ ಭಿನ್ನವಾಗಿದೆ. ಫಲಿತಾಂಶವೂ ವಿಶೇಷವಾಗಿರಲೇಬೇಕು!!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s