ಮಾತೇ ಬಾರದವ ಬರೆದು ಸಾಧಿಸಿದ್ದು ಬೆಟ್ಟದಷ್ಟು!

ಮಾತೇ ಬಾರದವ ಬರೆದು ಸಾಧಿಸಿದ್ದು ಬೆಟ್ಟದಷ್ಟು!

ಸ್ಟೀಫನ್ ಬದುಕಿನ ಮಜಾ ಏನು ಅಂದರೆ, ಆತ ಎಂದಿಗೂ ಕತ್ತಲ ಕೋಣೆಯಲ್ಲಿ ಕಳೆಯದಿದ್ದುದು. ತನ್ನ ಬದುಕು ಮುಗಿಯಿತೆಂದು ಆತ ಎಂದಿಗೂ ಯೋಚಿಸಲೇ ಇಲ್ಲ. ರಾಕ್ಫೆಲ್ಲರ್ ಯುನಿವಸರ್ಿಟಿ ಹಾಕಿಂಗ್ನ ಕಾರ್ಯಕ್ರಮ ಆಯೋಜಿಸಿತ್ತು. ಭಾಷಣ, ಚಚರ್ೆಗಳ ನಂತರ ಪಾಟರ್ಿಯನ್ನೂ ಏರ್ಪಡಿಸಲಾಗಿತ್ತು. ಆದರೆ ಹಾಕಿಂಗ್ ಉಪನ್ಯಾಸದ ನಂತರ ನದಿಯ ದಂಡೆಯ ಮೇಲೆ ಹೋಗಿ ಕುಳಿತ. ‘ಇನ್ನು ಪಾಟರ್ಿಯ ಕತೆ ಮುಗಿದೇಹೋಯ್ತು. ಹಾಕಿಂಗ್ ನದಿಯ ಮುಂದೆ ರೋಧಿಸುತ್ತಾ ಕುಳಿತುಬಿಟ್ಟ’ ಎಂದು ಅಂದುಕೊಳ್ಳುತ್ತಿರುವಾಗಲೇ ಆತ ಮರಳಿ ಬಂದ.

ಸ್ಟೀಫನ್ಗೆ ಆಪರೇಶನ್ ಮಾಡಿದರೆ ಮಾತೇ ನಿಂತು ಹೋಗುತ್ತೆ. ಮಾಡದೇ ಹೋದರೆ ಉಸಿರೇ ನಿಂತು ಹೋಗುತ್ತೆ. ಆಕಾಶಕಾಯಗಳ ಅಧ್ಯಯನಕ್ಕಾಗಿ ಸ್ಟೀಫನ್ನ ಉಸಿರು ಗಟ್ಟಿಯಾಗಿರಬೇಕಾದ್ದು ಅವಶ್ಯ. ಆ ಅಧ್ಯಯನದ ಅಂಶಗಳನ್ನು ಇತರರಿಗೆ ತಿಳಿಸಲು ಮಾತೂ ಸ್ಫುಟವಾಗಿರಬೇಕು. ಹಾಗಾದ್ರೆ ಏನು ಮಾಡೋದು? ಜೇನ್ ಹಾಕಿಂಗ್ ತುಮುಲಕ್ಕೆ ಬಿದ್ದಳು. ಕೊನೆಗೊಂದು ನಿಧರ್ಾರಕ್ಕೆ ಬಂದಳು. ಸ್ಟೀಫನ್ಗೆ ಆಪರೇಶನ್ ಮಾಡಿಸಲಾಯ್ತು.

ಅವನ ಗಂಟಲ ನಾಳವನ್ನು ತುಂಡರಿಸಲಾಗಿತ್ತು. ಇಷ್ಟು ದಿನ ತೊದಲು ನುಡಿಗಳನ್ನಾಡುತ್ತಿದ್ದ ಸ್ಟೀಫನ್, ಈಗ ಅಕ್ಷರಶಃ ಶಾಂತನಾಗಿಬಿಟ್ಟ. ಬಾಯಿಂದ ಒಂದೇ ಒಂದು ಅಕ್ಷರ ಹೊರಡಿಸಲಾಗುತ್ತಿರಲಿಲ್ಲ. ಅವನ ಬದುಕು ಅಂಧಕಾರಮಯವಾಯ್ತು. ಗಂಟಲ ಭಾಗದಲ್ಲಿ ರಂಧ್ರವೊಂದನ್ನು ಕೊರೆದು ಅಲ್ಲಿಂದ ಉಸಿರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸ್ಟೀಫನ್ ಕುಗ್ಗಿಬಿಟ್ಟ. ತನ್ನ ಬದುಕು ಮುಗಿಯಿತೆಂದು ಹಲುಬತೊಡಗಿದ್ದ. ಜೇನ್ಳಿಗೆ ಅದೇನೆನ್ನಿಸಿತೋ ಏನೋ? ಆಸ್ಪತ್ರೆಯ ಸಿಬ್ಬಂದಿಗಳೊಂದಿಗೆ ಗಲಾಟೆ ಮಾಡಿ ಗಂಡನನ್ನು ಮನೆಗೆ ಕರೆತಂದಳು.

ಅದು ಯಾವಾಗಲೂ ಹಾಗೆಯೇ. ಆಸ್ಪತ್ರೆಯ ವಾತಾವರಣವೇ ಉಸಿರು ಕಟ್ಟಿಸುವಂಥದ್ದು. ಅಲ್ಲಿ ಬಹಳ ಕಾಲ ನಿಂತಷ್ಟೂ ಮನಸ್ಸು ಕುಗ್ಗುತ್ತದೆ. ಸ್ಮಶಾನ ವೈರಾಗ್ಯ ಹುಟ್ಟಿಬಿಡುತ್ತದೆ! ಬದುಕೇ ಸಾಕು ಎನಿಸಲಾರಂಭಿಸುತ್ತದೆ. ಸ್ಟೀಫನ್ ಕುಗ್ಗುತ್ತ ಹೋದುದನ್ನು ಕಂಡ ಜೇನ್ ಅವನನ್ನು ಮನೆಗೆ ಕರೆತಂದಳು. ಅವನ ಆರೈಕೆಯ ಹೊಣೆ ತಾನೇ ಹೊತ್ತಳು.

ಸರಿ ಆರೈಕೆಯೇನೋ ಮಾಡಬಹುದು. ಆದರೆ ಅದಕ್ಕೆ ತಗಲುವ ಹಣದ ಖರ್ಚನ್ನು ಭರಿಸುವವರಾರು? ಜೇನ್ ಕಾಲೇಜಿಗೆ ಬೇಡಿಕೆ ಇಟ್ಟಳು, ಸಕರ್ಾರಕ್ಕೆ ಗೋಗರೆದಳು. ಯಾರೂ ಪ್ರತಿಕ್ರಿಯಿಸಲಿಲ್ಲ. ಕೊನೆಗೆ ಅಮೆರಿಕದ ಸಂಸ್ಥೆಯೊಂದು ವರ್ಷಕ್ಕೆ 50 ಸಾವಿರ ಪೌಂಡುಗಳನ್ನು ಆರೋಗ್ಯದ ಖಚರ್ಿಗೆಂದು ನೀಡಲಾರಂಭಿಸಿತು. ಕ್ಯಾಲಿಫೋನರ್ಿಯಾದ ಕಂಪ್ಯೂಟರ್ ತಯಾರಿಕಾ ಅಗ್ರಣಿ ವಾಲ್ಟ್ ವೋಲ್ಟೋಸ್ ಸ್ಟೀಫನ್ಗಾಗಿ ಕಂಪ್ಯೂಟರ್ ಒಂದನ್ನು ಕಳುಹಿಸಿಕೊಟ್ಟ. ಈ ಕಂಪ್ಯೂಟರ್ನ ‘ಈಕ್ವೆಲೈಸರ್’ ಎನ್ನುವ ಪ್ರೋಗ್ರಾಂ ಪರದೆಯ ಮೇಲೆ ಪದವನ್ನು ಗುರುತಿಸಿ ವಾಕ್ಯವನ್ನು ರಚಿಸುವ ಶಕ್ತಿ ತುಂಬುತ್ತಿತ್ತು. ಕೈಯನ್ನು ಸಾಮಾನ್ಯವಾದ ಅಲುಗಾಟ-ಕುಲುಕಾಟಗಳಿಂದಲೇ ಆತ ಈ ಪದಗಳನ್ನು ಬರೆಯಬಹುದಿತ್ತು. ತಲೆಯ ಅಲುಗಾಟ-ಕಣ್ಣಿನ ತೀವ್ರ ನೋಟಗಳಿಂದಲೂ ಆತ ಈ ಕೆಲಸ ಮಾಡಬಹುದಿತ್ತು. ಆರಂಭದಲ್ಲಿ ಸ್ವಲ್ಪ ತೊಂದರೆ ಎನಿಸುತ್ತಿತ್ತು. ಆತ ನಿಮಿಷಕ್ಕೆ ಹತ್ತು ಪದಗಳನ್ನು ಬರೆಯಬಲ್ಲವನಾಗಿದ್ದ. ನಿರಂತರ ಅಭ್ಯಾಸದ ನಂತರ ನಿಮಿಷಕ್ಕೆ ಹದಿನೈದು ಪದಗಳನ್ನು ಬರೆಯುವಷ್ಟು ಸಿದ್ಧಿ ಪಡೆದ. ಅವನು ಬರೆದದ್ದನ್ನು ಕಂಪ್ಯೂಟರ್ ಓದಿ ಹೇಳುತ್ತಿತ್ತು. ಹಲವರಿಗೆ ಇದೇ ಸುಲಭ ಎನಿಸಲಾರಂಭಿಸಿತ್ತು. ಮೊದಲೆಲ್ಲ ಸ್ಟೀಫನ್ ಆಡಿದ ಮಾತುಗಳನ್ನು ಅಥರ್ೈಸಿಕೊಳ್ಳಲು ಮಧ್ಯವತರ್ಿಯ ಜರೂರತ್ತಿತ್ತು. ಈಗ ಆ ಸಮಸ್ಯೆ ಇರಲಿಲ್ಲ!

1

ಕಂಪ್ಯೂಟರ್ ಮೇಲಿನ ಹಿಡಿತ ಕುದುರುತ್ತಿದ್ದಂತೆ ಹಾಕಿಂಗ್ ತನ್ನ ಪುಸ್ತಕ ರಚನೆಯ ಕಾರ್ಯವನ್ನು ಮುಂದುವರಿಸಿದ. ಮತ್ತೆ ಮತ್ತೆ ತಿದ್ದಿದ. ಕೊನೆಗೊಂದು ದಿನ ‘ಬ್ರೀಫ್ ಹಿಸ್ಟರಿ ಆಫ್ ಟೈಮ್’ ಪ್ರಕಟವೂ ಆಯಿತು. ಪ್ರಕಾಶಕರು ದಂಗಾಗಿಬಿಡುವಷ್ಟರಮಟ್ಟಿಗೆ ಪುಸ್ತಕಕ್ಕೆ ಬೇಡಿಕೆ ಬಂತು. ನೋಡುತ್ತ ನೋಡುತ್ತಲೇ ಹತ್ತುಲಕ್ಷ ಪ್ರತಿಗಳು ಖಚರ್ಾದವು. ಈ ಪುಸ್ತಕ ಎಲ್ಲ ಹಳೆಯ ಮಾರಾಟ ದಾಖಲೆಗಳನ್ನು ಮುರಿದು ಹಲವಾರು ತಿಂಗಳುಗಳ ಕಾಲ ‘ನಂಬರ್ ಒನ್’ ಪಟ್ಟದಲ್ಲಿಯೇ ಇತ್ತು.

ಸ್ಟೀಫನ್ನ ತೆಕ್ಕೆಗೆ ಹಣದ ಸುರಿಮಳೆಯೇ ಆಯ್ತು. ಜಗತ್ತಿನಾದ್ಯಂತ ಪುಸ್ತಕಕ್ಕೆ ಬೇಡಿಕೆ ಬಂತು. ನೀವು ಬಹುಶಃ ನಂಬುವುದಿಲ್ಲ. ವರ್ಷ ಕಳೆಯುವುದರೊಳಗೆ ಎಂಭತ್ತು ಲಕ್ಷ ಪ್ರತಿ ಮಾರಾಟವಾಯ್ತು. ಬೇರೆ ಬೇರೆ ಭಾಷೆಗಳಿಗೆ ಆ ಪುಸ್ತಕ ಅನುವಾದಗೊಂಡಿತು. ಸಾವಿರಾರು ಜನ ಪುಸ್ತಕದ ಅಧ್ಯಯನ ಮಾಡಿದರು. ಹಾಕಿಂಗ್ ಹೋದೆಡೆಯೆಲ್ಲ ಆ ಪುಸ್ತಕದ್ದೇ ಚಚರ್ೆಯಾಗುತ್ತಿತ್ತು. ವಿಮಾನ ನಿಲ್ದಾಣದ ಬುಕ್ ಸ್ಟಾಲುಗಳಲ್ಲಿ ಪುಸ್ತಕ ಸಿಗಬೇಕೆಂಬ ಹಾಕಿಂಗ್ನ ಕನಸು ನನಸಾಗಿತ್ತು.

ಈ ಪುಸ್ತಕ ಪ್ರಭಾವಳಿ ಬೆಳಗಿದ್ದರಿಂದಲೇ ಮತ್ತೊಂದು ಪುಸ್ತಕ ರಚನೆಯ ಸಾಹಸಕ್ಕೆ ಸ್ಟೀಫನ್ ಕೈ ಹಾಕಿದ್ದು.

ಸ್ಟೀಫನ್ ಬದುಕಿನ ಮಜಾ ಏನು ಅಂದರೆ, ಆತ ಎಂದಿಗೂ ಕತ್ತಲ ಕೋಣೆಯಲ್ಲಿ ಕಳೆಯದಿದ್ದುದು. ತನ್ನ ಬದುಕು ಮುಗಿಯಿತೆಂದು ಆತ ಎಂದಿಗೂ ಯೋಚಿಸಲೇ ಇಲ್ಲ. ರಾಕ್ಫೆಲ್ಲರ್ ಯುನಿವಸರ್ಿಟಿ ಹಾಕಿಂಗ್ನ ಕಾರ್ಯಕ್ರಮ ಆಯೋಜಿಸಿತ್ತು. ಭಾಷಣ, ಚಚರ್ೆಗಳ ನಂತರ ಪಾಟರ್ಿಯನ್ನೂ ಏರ್ಪಡಿಸಲಾಗಿತ್ತು. ಆದರೆ ಹಾಕಿಂಗ್ ಉಪನ್ಯಾಸದ ನಂತರ ನದಿಯ ದಂಡೆಯ ಮೇಲೆ ಹೋಗಿ ಕುಳಿತ. ‘ಇನ್ನು ಪಾಟರ್ಿಯ ಕತೆ ಮುಗಿದೇಹೋಯ್ತು. ಹಾಕಿಂಗ್ ನದಿಯ ಮುಂದೆ ರೋಧಿಸುತ್ತಾ ಕುಳಿತುಬಿಟ್ಟ’ ಎಂದು ಅಂದುಕೊಳ್ಳುತ್ತಿರುವಾಗಲೇ ಆತ ಮರಳಿ ಬಂದ. ಪಾಟರ್ಿಯ ಆಯೋಜಕರನ್ನು ಕರೆದು ನಾನು ‘ಸಾಕು’ ಎನ್ನುವವರೆಗೆ ಪಾಟರ್ಿ ನಿಲ್ಲಿಸುವಂತಿಲ್ಲ ಎಂದ.

ಎಲ್ಲರಿಗೂ ಅಚ್ಚರಿ. ಹಾಕಿಂಗ್ ವ್ಹೀಲ್ ಚೇರ್ನೊಂದಿಗೇ ನೃತ್ಯದ ಅಖಾಡಕ್ಕಿಳಿದ. ಎಲ್ಲರೊಂದಿಗೂ ನೃತ್ಯ ಮಾಡಿದ. ಇಡಿಯ ರಾತ್ರಿ ಆತ ಇದೇ ಮೂಡಲ್ಲಿದ್ದ!

ಹೌದು. ಸ್ಟೀಫನ್ ಮತ್ತು ಜೇನ್ರ ಬದುಕಲ್ಲಿ ಇದೊಂದು ಹೊಸ ಅಧ್ಯಾಯ. ಅವರ ಬದುಕಿಗೆ ಬೇಕಾಗುವಷ್ಟು ಹಣ ಹರಿದು ಬರಲಾರಂಭಿಸಿತ್ತು. ಬಡತನ ಮಾಯವಾಗಿತ್ತು. ಅದರೊಟ್ಟಿಗೆ ಬದುಕಿನ ಶೈಲಿಯನ್ನೂ ಅನಿವಾರ್ಯವಾಗಿ ಬದಲಿಸಿಕೊಳ್ಳಬೇಕಾದ ಪರಿಸ್ಥಿತಿಯೂ ಬಂದುಬಿಟ್ಟಿತ್ತು. ಅದೇ ಬದುಕಿನ ವೈಪರೀತ್ಯ. ಇಂದು ಇದ್ದದ್ದು ನಾಳೆ ಇರುವುದಿಲ್ಲ. ಆದರೆ ಆ ನಾಳೆಯ ದಿನಕ್ಕೆ ನಾವು ಒಗ್ಗಿ ಹೋಗಿ ಇಂದಿನ ಬದುಕನ್ನು ಮರೆಯಬಾರದು ಅಷ್ಟೇ!

ಸ್ಟೀಫನ್-ಜೇನ್ ಸರಳತೆಯನ್ನು ಮೈಗೂಡಿಸಿಕೊಂಡಿದ್ದರು. ಅದರ ನಡುವೆಯೇ ಪುಟವಿಟ್ಟ ಚಿನ್ನದಂತೆ ಬೆಳಗಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s