ಬದುಕಿಗೆ ಬೆಳಕು ಕೊಟ್ಟ ಕಪ್ಪು ರಂಧ್ರಗಳು!

ಬದುಕಿಗೆ ಬೆಳಕು ಕೊಟ್ಟ ಕಪ್ಪು ರಂಧ್ರಗಳು!

1980 ರ ಆರಂಭವಿರಬಹುದು. ಹಾಕಿಂಗ್ನ ಮಾತು ಅಸ್ಪಷ್ಟವಾಯ್ತು. ಆತ ಮಾತನಾಡುವಾಗ ತಡವರಿಸುತ್ತಿದ್ದ. ಬಹುಕಾಲ ಜೊತೆಯಲ್ಲಿದ್ದವರಿಗೆ ಮಾತ್ರ ಅವನ ಮಾತು ಅರ್ಥವಾಗುತ್ತಿತ್ತು. ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಟಿರೋಸಿಸ್ ರೋಗದ ಮತ್ತೊಂದು ಲಕ್ಷಣ ಅದು. ಮೊದಲು ಕೈ ಕಾಲುಗಳ ಸ್ವಾಧೀನ ತಪ್ಪುತ್ತದೆ, ಆನಂತರ ಮಾತು ನಿಲ್ಲುತ್ತದೆ. ಹಾಕಿಂಗ್ನ ಅದೃಷ್ಟವೆಂದರೆ ರೋಗದ ಎರಡೂ ಲಕ್ಷಣಗಳ ನಡುವೆ ದೀರ್ಘಕಾಲದ ಅಂತರವಿತ್ತು. ಆತನ ಕೈಕಾಲುಗಳು ಸೋತು ಬಸವಳಿದಿದ್ದರೂ ಮಾತು ಗಟ್ಟಿಯಾಗಿತ್ತು. ಆದರೆ ಈಗ ಮಾತೇ ಕೈಕೊಟ್ಟಿತು.

ಕಣ್ಣಿಗೆ ಕಾಣದ ಕಪ್ಪು ರಂಧ್ರಗಳನ್ನು ಕಂಡು, ಅವುಗಳ ಉಗಮ-ಬದುಕು-ಸಾವು ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಸ್ಟೀಫನ್ ವಣರ್ಿಸಿದ್ದು ಗೊತ್ತೇ ಇದೆ ತಾನೆ? ಕಪ್ಪು ರಂಧ್ರಗಳು ಕೊನೆಗೊಮ್ಮೆ ಸ್ಫೋಟಗೊಳ್ಳುತ್ತವೆ ಎನ್ನುವ ಅವನ ವಾದವನ್ನು ಕೆಲವು ವಿಜ್ಞಾನಿಗಳು ‘ರಬ್ಬಿಶ್’ ಎಂದಿದ್ದರು. ಹಾಗೆಂದರೆ ಮೂರ್ಖತನದ ಪರಮಾವಧಿ ಎಂದರ್ಥ! ಇದೇ ರಬ್ಬಿಶ್ ಸಿದ್ಧಾಂತ ಪ್ರಸಿದ್ಧ ವೈಜ್ಞಾನಿಕ ಪತ್ರಿಕೆ ‘ನೇಚರ್’ನಲ್ಲಿ ಪ್ರಕಟವಾದ ನಂತರ ಜಾಗತಿಕ ಮಟ್ಟದ ವಿಜ್ಞಾನಿಗಳ ನಡುವೆ ಆ ಸಿದ್ಧಾಂತ ಚಚರ್ೆಗೆ ಬಂದುಬಿಟ್ಟಿತ್ತು. ಅದರೊಟ್ಟಿಗೇ ಸ್ಟೀಫನ್ ಕೂಡ ಖ್ಯಾತಿಗೆ ಬಂದುಬಿಟ್ಟ.

ಅವನ ದೈಹಿಕ ಸಮಸ್ಯೆಯನ್ನು ಆಗ ತೀಕ್ಷ್ಣವಾಗಿ ಗ್ರಹಿಸಿದ ಕಾಲೇಜು ಅವನಿಗೊಂದು ವಿಶಾಲವಾದ ಮನೆ ಕೊಟ್ಟಿತು. ಕಾಲೇಜಿಗೆ ಹತ್ತಿರವಿದ್ದ ಈ ಮನೆಯಿಂದಾಗಿ ಅವನ ಓಡಾಟವೂ ಕಡಿಮೆಯಾಗಿತ್ತು. ಅಷ್ಟಕ್ಕೇ ತೃಪ್ತಿಪಡದ ಕಾಲೇಜು, ಅವನ ದೈನಂದಿನ ಒತ್ತಡಗಳಿಂದ ಅವನನ್ನು ಮುಕ್ತಗೊಳಿಸಿತು. ಸ್ಟೀಫನ್ ಈಗ ಎಲ್ಲ ವಿದ್ಯಾಥರ್ಿಗಳಿಗೂ ಪಾಠ ಮಾಡಬೇಕಿಲ್ಲ. ಹಿರಿಯ ವಿದ್ಯಾಥರ್ಿಗಳಿಗೆ ಆಗಾಗ ಒಂದು ತರಗತಿ ತೆಗೆದುಕೊಂಡರೂ ಸಾಕಿತ್ತು. ಆತ ಕಾಲೇಜಿನ ಪಠ್ಯ ಸಂಬಂಧಿ ದಾಖಲೆಗಳನ್ನು ನಿತ್ಯ ಬರೆದಿಡಬೇಕಿರಲಿಲ್ಲ. ಅದನ್ನು ಅವನ ಸಹೋದ್ಯೋಗಿಗಳಿಗೆ ವಹಿಸಿಕೊಡಲಾಗಿತ್ತು. ಸ್ಟೀಫನ್ ಹೆಚ್ಚು ಕಾಲ ಸಂಶೋಧನೆಗಳಿಗೆ ಮೀಸಲಿಡಬೇಕೆಂದು ಕಾಲೇಜಿನ ಇಚ್ಛೆ. ಅದಕ್ಕೆ ಅಗತ್ಯ ಬಿದ್ದ ಎಲ್ಲ ಸೌಕರ್ಯಗಳೂ ಅವನಿಗೆ ದೊರೆತವು.

ವಿಶೇಷವಾದ ಕಂಪ್ಯೂಟರ್ ಒಂದು ಆತನಿಗಾಗಿ ಸಿದ್ಧವಾಯಿತು. ಆತ ಅದನ್ನು ಬೋಡರ್ಿನಂತೆ ಬಳಸಲು ಅನುಕೂಲವಿತ್ತು. ತನ್ನ ಸಂಶೋಧನೆಯ ವಿವರಗಳನ್ನು ಗಣಿತಾತ್ಮಕವಾಗಿ ವಿವರಿಸಲು ಅದು ಆತನಿಗೆ ಬಹಳ ಸಹಕಾರಿಯೂ ಆಗಿತ್ತು. ಮೊದಲ ಬಾರಿಗೆ ಕೇಂಬ್ರಿಡ್ಜ್ನ ಗೋಡೆಗಳು ಗಾಲಿ ಕುಚರ್ಿಯ ಸದ್ದು ಕೇಳುವಂತಾಗಿತ್ತು. ಸ್ಟೀಫನ್ ಖ್ಯಾತಿಗೇರುತ್ತಿದ್ದಂತೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯವೂ ಆತನಿಗೆ ಹೆಚ್ಚು ಹೆಚ್ಚು ಸಹಾಯಕವಾಗಿ ನಿಂತಿತು.

1974 ರವರೆಗೂ ಹಾಕಿಂಗ್ ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳುವಷ್ಟು ಸಮರ್ಥನಿದ್ದ. ಆದರೆ ಅದು ಸಾಧ್ಯವಾಗದಾದಾಗ ತನ್ನ ವಿದ್ಯಾಥರ್ಿಗಳನ್ನು ಕರೆದುಕೊಂಡು ಮನೆಗೆ ಬರುತ್ತಿದ್ದ. ಹೀಗೆ ಬಂದ ವಿದ್ಯಾಥರ್ಿಗಳಿಗೆ ಸ್ಟೀಫನ್ ಅತಿ ಹತ್ತಿರದಿಂದ ಮಾರ್ಗದರ್ಶನ ಮಾಡುತ್ತಿದ್ದನಾದ್ದರಿಂದ ಹತ್ತಾರು ವಿದ್ಯಾಥರ್ಿಗಳು ಆತನ ಸೇವೆಗೆ ಸಿದ್ಧರಾಗಿ ನಿಂತಿರುತ್ತಿದ್ದರು.

1980 ರ ಆರಂಭವಿರಬಹುದು. ಹಾಕಿಂಗ್ನ ಮಾತು ಅಸ್ಪಷ್ಟವಾಯ್ತು. ಆತ ಮಾತನಾಡುವಾಗ ತಡವರಿಸುತ್ತಿದ್ದ. ಬಹುಕಾಲ ಜೊತೆಯಲ್ಲಿದ್ದವರಿಗೆ ಮಾತ್ರ ಅವನ ಮಾತು ಅರ್ಥವಾಗುತ್ತಿತ್ತು. ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಟಿರೋಸಿಸ್ ರೋಗದ ಮತ್ತೊಂದು ಲಕ್ಷಣ ಅದು. ಮೊದಲು ಕೈ ಕಾಲುಗಳ ಸ್ವಾಧೀನ ತಪ್ಪುತ್ತದೆ, ಆನಂತರ ಮಾತು ನಿಲ್ಲುತ್ತದೆ. ಹಾಕಿಂಗ್ನ ಅದೃಷ್ಟವೆಂದರೆ ರೋಗದ ಎರಡೂ ಲಕ್ಷಣಗಳ ನಡುವೆ ದೀರ್ಘಕಾಲದ ಅಂತರವಿತ್ತು. ಆತನ ಕೈಕಾಲುಗಳು ಸೋತು ಬಸವಳಿದಿದ್ದರೂ ಮಾತು ಗಟ್ಟಿಯಾಗಿತ್ತು. ಆದರೆ ಈಗ ಮಾತೇ ಕೈಕೊಟ್ಟಿತು. ಒಬ್ಬ ಮಧ್ಯವತರ್ಿ ಬೇಕಾಯಿತು. ಹಾಕಿಂಗ್ನ ಮಾತುಗಳನ್ನು ಕೇಳಲು ಬಾಯಿಯ ಬಳಿಗೆ ಹೋಗಿ ಕುಳಿತುಕೊಳ್ಳಬೇಕಾಗುತ್ತಿತ್ತು. ಆತನ ವಾಕ್ಯ ಮುಗಿದಿದೆ ಎಂದೆನಿಸುವ ವೇಳೆಗೆ ಹಾಕಿಂಗ್ ಒಂದು ಪದವನ್ನು ಮಾತ್ರ ಹೇಳಿ ಮುಗಿಸಿರುತ್ತಿದ್ದ.

ಆದರೆ ಈ ಕಸರತ್ತುಗಳ ನಡುವೆ ಹಾಕಿಂಗ್ ಅತಿ ಗಹನ ವಿಚಾರಗಳನ್ನು ಅತಿ ಕಡಿಮೆ ಪದಗಳಿಗಾಗಿ ಹೇಳಿ ಮುಗಿಸುವುದನ್ನು ಕಲಿತ. ಆತ ಹೇಳುವ ಆ ಕಡಿಮೆ ಪದಗಳಿಗಾಗಿ ಇಡಿ ವೈಜ್ಞಾನಿಕ ಜಗತ್ತು ಆಸಕ್ತಿಯಿಂದ ಕೇಳುತ್ತ ಕುಳಿತಿರುತ್ತಿತ್ತು. ಈ ವೇಳೆಯಲ್ಲಿಯೇ ಹಾಕಿಂಗ್ ಅನೇಕ ಪ್ರಬಂಧಗಳನ್ನು ಡಿಕ್ಟೇಟ್ ಮಾಡಿ ಬರೆಸಿಕೊಂಡಿದ್ದು. ಕಪ್ಪು ರಂಧ್ರಗಳ ಸ್ಫೋಟದ ವರ್ಣನೆ ಮಾಡಿದ ನಂತರ ಸ್ಟೀಫನ್ಗೆ ಸಿಗುವ ಪುರಸ್ಕಾರಗಳು-ಗೌರವಗಳ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಅತಿಗಣ್ಯ ವಿಜ್ಞಾನಿಗಳ ರಾಯಲ್ ಸೊಸೈಟಿಯ ಸದಸ್ಯತ್ವವೂ ಆತನಿಗೆ ದೊರೆಯಿತು.

1

ರಾಯಲ್ ಸೊಸೈಟಿಯಲ್ಲಿ ಒಂದು ದೊಡ್ಡ ಪುಸ್ತಕವಿದೆ. ಅದರಲ್ಲಿ ಇಂದಿನವರೆಗಿನ ಎಲ್ಲ ಸದಸ್ಯರ ಸಹಿ ಇದೆ. ಆರಂಭದ ಪುಟಗಳಲ್ಲಿ ನ್ಯೂಟನ್ರಂತಹ ಮಹಾವಿಜ್ಞಾನಿಯ ಸಹಿ ಹೊತ್ತ ಪುಸ್ತಕ ಅದು. ಹಾಕಿಂಗ್ ಆ ಸಂಸ್ಥೆಯ ಸದಸ್ಯನಾದ ನಂತರ, ಸಂಸ್ಥೆಯ ಅಧ್ಯಕ್ಷರಾಗಿದ್ದ ನೊಬೆಲ್ ಪ್ರಶಸ್ತಿ ವಿಜೇತ ಸರ್ ಅಲಾನ್ ಹಾಡ್ಕಿನ್ ಆ ಪುಸ್ತಕವನ್ನು ತಾನೇ ಹೊತ್ತುಕೊಂಡು ಬಂದು ಸ್ಟೀಫನ್ನನ ಮುಂದೆ ನಿಂತಿದ್ದರು. ಎಲ್ಲಾ ಶಿಷ್ಟಾಚಾರವನ್ನು ಮೀರಿ ಸಹಿ ಹಾಕುವಂತೆ ತಾವೇ ಕೇಳಿಕೊಂಡರು. ಆಗ ಹಾಕಿಂಗ್ನ ಕೈಯಲ್ಲಿ ತ್ರಾಣವಿರಲಿಲ್ಲ. ಆತ ಬಹಳ ಕಷ್ಟಪಟ್ಟು ನಾಲ್ಕಾರು ನಿಮಿಷಗಳ ಕಾಲ ಸಹಿ ಮಾಡಿದ. ಅಷ್ಟೂ ಹೊತ್ತು ತಾಳ್ಮೆಯಿಂದ ಕುಳಿತಿದ್ದ ವಿಜ್ಞಾನಿಗಳು ಸಹಿ ಮಾಡಿ ಆಗಸದತ್ತ ನೋಟ ನೆಟ್ಟ ಸ್ಟೀಫನ್ನನ್ನು ಅಭಿನಂದಿಸಿದರು. ಆತ್ಮೀಯ ಸ್ವಾಗತ ಕೋರಿದರು.

ಅದರೊಟ್ಟಿಗೆ ಹಾಕಿಂಗ್ನ ಖ್ಯಾತಿ ಬೆಳೆಯತೊಡಗಿತ್ತು. ಕ್ಯಾಲಿಫೋನರ್ಿಯಾದ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಕಿಂಗ್ನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಿತು. ಐನ್ಸ್ಟೀನ್ ಅವಾಡರ್್ ಸೇರಿದಂತೆ ಆರು ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿಗಳು ಹಾಕಿಂಗ್ನ ಗೌರವವನ್ನು ಹೆಚ್ಚಿಸಿದವು. ಆಕ್ಸ್ಫಡರ್್ನ ಅಲ್ಮಾಮ್ಯಾಟರ್ನ ಗೌರವ ಡಾಕ್ಟರೇಟೂ ಸೇರಿದಂತೆ ಆರು ಡಾಕ್ಟರೇಟುಗಳು ಅವನ ಪಾಲಾದವು. ಇಂಗ್ಲೆಂಡಿನ ರಾಣಿಯಂತೂ ‘ಕಮ್ಯಾಂಡರ್ ಆಫ್ ದಿ ಬ್ರಿಟಿಷ್ ಎಂಪೈರ್’ ಎಂದು ಗೌರವಿಸಿದಳು. ಅಂದಿನಿಂದ ಸ್ಟೀಫನ್ ಹಾಕಿಂಗ್ ಎನ್ನುವ ಹೆಸರಿನ ಮುಂದೆ ಸಿಬಿಇ ಎಂದು ಬರೆದುಕೊಳ್ಳುವ ಹೆಮ್ಮೆ ಅವರದಾಯಿತು.

ಅಲ್ಲಿಯವರೆಗೂ ಕೇಂಬ್ರಿಡ್ಜ್ನಲ್ಲಿ ಹಾಕಿಂಗ್ ಮಾಮೂಲಿ ಅಧ್ಯಾಪಕ ಅಷ್ಟೇ. ಆದರೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಅವನಿಗೆ ಲುಕೇಶಿಯನ್ ಪ್ರೊಫೆಸರ್ ಆಫ್ ಮ್ಯಾಥ್ಮ್ಯಾಟಿಕ್ಸ್ ಎಂಬ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಿದ ನಂತರ ಆತ ಪ್ರೊಫೆಸರ್ ಹುದ್ದೆಗೇರಿದ್ದ. ಅವನಿಗಾಗಿಯೇ ಪ್ರತ್ಯೇಕ ಛೇಂಬರ್ ದೊರೆಯಿತು. ಜಗತ್ತಿನ ಕಣ್ಣು ಕುಕ್ಕುತ್ತಿರುವ ವಿಜ್ಞಾನಿ ನಮ್ಮ ಕಾಲೇಜಿನಲ್ಲಿದ್ದಾನೆ ಎಂದು ಹೇಳಿಕೊಳ್ಳುವುದು ಕಾಲೇಜಿನ ಪಾಲಿಗೆ ಹೆಮ್ಮೆಯ ವಿಚಾರವಾಯ್ತು.

ವೈದ್ಯರು ಹಿಂದೊಮ್ಮೆ ಅವನಿಗೆ ಹೇಳಿದ್ದರು ‘ಹೆಚ್ಚೆಂದರೆ ನಾಲ್ಕು ವರ್ಷ ಬದುಕಬಹುದು’ ಅಂತ. ಆ ವ್ಯಕ್ತಿ ವೈದ್ಯರ ಮಾತನ್ನು ಮೀರಿ ಬದುಕಿದ್ದ. ಜಗತ್ತಿನ ವಿಜ್ಞಾನ ಸಾಗರದಲ್ಲಿ ತನ್ನದೊಂದು ಬೃಹತ್ ಹಡಗನ್ನೇ ತೇಲಿಬಿಟ್ಟಿದ್ದ. ಅವನ ಸಾಧನೆಗೆ ಈಗ ಯಾರೂ ಸಾಟಿಯಲ್ಲ ಎನ್ನುವಂತಾಗಿತ್ತು.

ಕಪ್ಪು ರಂಧ್ರಗಳು ಅವನ ಬದುಕಿಗೆ ಬೆಳ್ಳಂಬೆಳಕನ್ನೇ ತಂದಿದ್ದವು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s