2019ರ ಚುನಾವಣೆಗೆ ತಯಾರಿ ಶುರುವಾಗಿಬಿಡ್ತಾ?

2019ರ ಚುನಾವಣೆಗೆ ತಯಾರಿ ಶುರುವಾಗಿಬಿಡ್ತಾ?

ರಾಜಕೀಯದಲ್ಲಿ ಅನುಸರಿಸುವವರು ಸೋತಂತೆ. ಮೊದಲ ದಾಳ ಎಸೆವವರಿಗೇ ಗೆಲುವು ಕಟ್ಟಿಟ್ಟ ಬುತ್ತಿ. ಮೋದಿ ತಾವು ಒಂದು ಹೆಜ್ಜೆ ಮುಂದಿರುತ್ತಾರೆ, ಯಾವಾಗಲೂ. ಈ ಬಾರಿ ಸಂಸತ್ತನ್ನು ಮುಂದಿನ ಚುನಾವಣೆಗೆ ಬಳಸಿಕೊಳ್ಳುವ ಮೂಲಕ ಒಂದು ವರ್ಷದ ಮುನ್ನವೇ ಎರಡನೇ ಇನ್ನಿಂಗ್ಸ್ನ್ನು ಭರ್ಜರಿಯಾಗಿ ಆರಂಭಿಸಿದ್ದಾರೆ.

11ಅಂತೂ ಲೋಕಸಭೆಯಲ್ಲಿ ನರೇಂದ್ರಮೋದಿಯವರ ಒಂದೂವರೆ ಗಂಟೆಯ ಭಾಷಣದ ನಂತರ ಕಾಂಗ್ರೆಸ್ ಹೊಸ ದಾಳಗಳನ್ನು ಆಲೋಚಿಸುತ್ತಿದೆ. ಮೋದಿ ತಾವು 2019ರ ಚುನಾವಣೆಯ ಅಜೆಂಡಾ ಸಿದ್ಧಪಡಿಸುತ್ತಿರುವುದು ಈಗ ಸ್ಪಷ್ಟವಾಗಿದೆ. ಪ್ರಧಾನಿಯಾದ ಆರಂಭದಲ್ಲಿಯೇ ನಾಲ್ಕು ವರ್ಷದ ನಂತರ ನಿಮ್ಮೆದುರಿಗೆ ನಿಂತು ‘ರಿಪೋಟರ್್ ಕಾಡರ್್’ ಒಪ್ಪಿಸುವೆ ಎಂದವರು ಹೇಳಿದ್ದರು. ಅದಕ್ಕೆ ತಕ್ಕಂತೆಯೇ ತಮ್ಮ ಒಪ್ಪಿಸುವಿಕೆಯ ಮೊದಲ ಹಂತವನ್ನು ಲೋಕಸಭೆಯಿಂದಲೇ ಶುರು ಮಾಡಿದ್ದಾರೆ. ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಅವರು ಎಂದಿಗೂ ನಿಸ್ಸೀಮರು. ಈ ಹಿಂದೆ ಒಮ್ಮೆ ಇಲ್ಲಿನ ರಾಜ್ಯವೊಂದರ ಚುನಾವಣೆಗೆ ವಿದೇಶದ ನೆಲದಿಂದ ಭಾಷಣ ಮಾಡಿದ್ದು ಮರೆಯೋದು ಹೇಗೆ? ಅಲ್ಲಿರುವ ಭಾರತೀಯರನ್ನು ಸಂಬೋಧಿಸುವ ನೆಪದಲ್ಲಿ, ತಾನು ಮಾಡಿರುವ ಸಾಧನೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು ಮತ್ತು ಅದು ಪ್ರತಿಯೊಂದು ಚಾನೆಲ್ಲಿನಲ್ಲೂ ನೇರ ಪ್ರಸಾರಗೊಳ್ಳುವ ಅನಿವಾರ್ಯತೆಯನ್ನು ಸೃಷ್ಟಿಸಿದ್ದರು.

ಕಾಂಗ್ರೆಸ್ಸಿಗೆ ಮೋದಿಯವರನ್ನು ಎದುರಿಸಲು ಹೊಸದೊಂದು ಸಮರ್ಥ ಮೇಷ್ಟ್ರು ಬೇಕಾಗಿದ್ದಾರೆ. ರಮ್ಯಾ ಪ್ರಯೋಗಿಸಿದ ಆಲೋಚನೆಗಳು, ನಡೆಗಳೂ ಕೂಡ ಅದಾಗಲೇ ಹಳೆಯವಾದವು. ರಾಷ್ಟ್ರ ಮಟ್ಟದಲ್ಲಿ ಫೇಕ್ ಐಡಿಗಳನ್ನು ಸೃಷ್ಟಿಸಿ ಗುಜರಾತಿನ ಚುನಾವಣೆಗೂ ಮುನ್ನ ಉತ್ಪಾತ ಉಂಟುಮಾಡಲೆತ್ನಿಸಿದ್ದ ಆಕೆಗೆ ಅಲ್ಲಿ ಸ್ವಲ್ಪ ಮುನ್ನಡೆ ದೊರೆತಿದ್ದು ನಿಜ. ಅದನ್ನೇ ಇಲ್ಲಿಗೂ ಬಳಸಿ ಫೇಕ್ ಐಡಿಗಳ ಮೂಲಕ ಭಯೋತ್ಪಾದಕರಂತೆ ಛದ್ಮ ಯುದ್ಧ ನಡೆಸಲು ಸಜ್ಜಾಗಿದ್ದುದು ಆಕೆಯ ಅರಿವಿಗೇ ಇಲ್ಲದಂತೆ ಹೊರಗೆ ಬಂದೆರಗಿತು. ಕಾಂಗ್ರೆಸ್ಸಿನ ಪ್ರತಿಯೊಬ್ಬ ಅನುಯಾಯಿಯೂ ಈಗ ಅಕ್ಷರಶಃ ನಕಲಿಯಾಗಿಬಿಟ್ಟ, ರಮ್ಯಳ ಕಾರಣದಿಂದಾಗಿ ಅನಾಥನಾಗಿಬಿಟ್ಟ! ಗುಜರಾತಿನ ಲೆಕ್ಕಾಚಾರ ಇಲ್ಲಿ ಇನ್ನು ಕೆಲಸ ಮಾಡುವುದಿಲ್ಲ.

2

ಅತ್ತ ತಮ್ಮ ಹೊಸ ಪ್ರಯೋಗದಂತೆ ಸಂಸತ್ತಿನಲ್ಲಿ ಮೋದಿಯ ಮಾತಿಗೆ ಉದ್ದಕ್ಕೂ ತಡೆಯೊಡ್ಡಬೇಕೆಂದು ನಿದರ್ೇಶಿಸಿದ್ದೇ ರಾಹುಲನಂತೆ. ಸ್ವತಃ ಸೋನಿಯಾ ಮಧ್ಯೆ ಮಧ್ಯೆ ಚಾಕಲೇಟುಗಳನ್ನು ಕೊಟ್ಟು ಕೂಗುತ್ತಿದ್ದವರಿಗೆ ಬಾಯಿ ತೇವವಾಗಿಡಲು ಸಹಕರಿಸುತ್ತಿದ್ದರಂತೆ. ಆದರೆ ನಿರಂತರ ಅರಚಾಟಗಳ ನಂತರವೂ ನರೇಂದ್ರ ಮೋದಿಯವರು ಒಂದರೆಕ್ಷಣ ಸ್ಥಿಮಿತ ಕಳೆದುಕೊಳ್ಳದೇ ಮಾತನಾಡಿದ್ದು ಕಾಂಗ್ರೆಸ್ಸಿಗರ ಅರ್ಧ ನಿದ್ದೆ ಕೆಡಿಸಿತ್ತು. ಅಷ್ಟೇ ಅಲ್ಲ, ಸ್ವಾತಂತ್ರ್ಯಕ್ಕೂ ಮುನ್ನಿನ ಭಾರತದ ಗಣತಂತ್ರ ವ್ಯವಸ್ಥೆಯನ್ನೆಲ್ಲ ತೆರೆದಿಟ್ಟ ಮೋದಿ ನೆಹರೂ ಅದನ್ನು ಹಾಳು ಮಾಡಿದ್ದು ಹೇಗೆಂದು ಎಳೆಎಳೆಯಾಗಿ ಬಿಡಿಸಿಟ್ಟರು. ಕಾಂಗ್ರೆಸ್ಸು ಪ್ರಜಾಪ್ರಭುತ್ವಕ್ಕೆ ಬೆಲೆ ಕೊಟ್ಟಿದ್ದರೆ ಸದರ್ಾರ್ ಪಟೇಲರು ಪ್ರಧಾನ ಮಂತ್ರಿಯಾಗಬೇಕಿತ್ತು ಮತ್ತು ಕಾಶ್ಮೀರದ ಸಮಸ್ಯೆ ಈ ಮಟ್ಟಕ್ಕೆ ಬೆಳೆದೇ ಇರುತ್ತಿರಲಿಲ್ಲ ಎಂದರು. ಅವರು ಈ ಭಾಷಣಕ್ಕೆ ವ್ಯವಸ್ಥಿತ ತಯಾರಿ ಮಾಡಿಸಿಕೊಂಡೇ ಬಂದಿದ್ದರು. ಕೈಲಿರುವ ನೋಟ್ಸ್ಗಳನ್ನು ತಿರುವಿಹಾಕುತ್ತ ಝಾಡಿಸುತ್ತಿದ್ದುದು ನೋಡಿದರೆ ಅವರ ಮನೋಗತ ಅರ್ಥವಾಗುವಂತಿತ್ತು. ಕಾಂಗ್ರೆಸ್ಸಿನ ವರ್ತನೆಯಿಂದ ಇತರ ಯಾರಾಗಿದ್ದರೂ ತಾಳ್ಮೆ ಕಳೆದುಕೊಳ್ಳಬೇಕಿತ್ತು. ಹಾಗೆ ತಾಳ್ಮೆ ಕಳೆದುಕೊಂಡಿದ್ದರೆ ಅದೇ ಸುದ್ದಿಯಾಗಿ ರಾಹುಲ್ ತಂತ್ರ ಯಶಸ್ವಿಯಾಗಿರುತ್ತಿತ್ತು. ಮುಂದಿನ ತೊಂಭತ್ತು ನಿಮಿಷಗಳ ಕಾಲ ಮೋದಿ ದೇಶದ ಎಲ್ಲ ಸಮಸ್ಯೆಗಳಿಗೂ ಕಾಂಗ್ರೆಸ್ಸು ಹೇಗೆ ಕಾರಣ ಎಂಬುದನ್ನು ಸಾದ್ಯಂತವಾಗಿ ವಿವರಿಸಿದರು. ಅದೇಕೆ ಗೊತ್ತೇ? ನಾಲ್ಕು ವರ್ಷದಲ್ಲಿ ತಾನು ಈ ಎಲ್ಲ ಕೊರತೆಗಳನ್ನು ಮೀರಿನಿಂತು ವಿಕಾಸದ ಹಾದಿಯಲ್ಲಿ ಹೆಜ್ಜೆ ಹಾಕುವುದು ಅದೆಷ್ಟು ಕಷ್ಟವಾಗಿತ್ತೆಂಬುದನ್ನು ಸಮಾಜಕ್ಕೆ ಒಪ್ಪಿಸಬೇಕಿತ್ತು ಅವರು. ಅದು 2019ರ ಚುನಾವಣೆಗೆ ಅಡಿಪಾಯ! ಲೋಕಸಭೆಯಲ್ಲಿ ಮಾತನಾಡಲು ಸಿಕ್ಕ ಅವಕಾಶವನ್ನು ಅವರು ಬಳಸಿಕೊಂಡ ರೀತಿ ಕಾಂಗ್ರೆಸ್ಸು ಕಲಿಯಲು ಇನ್ನು ಅದೆಷ್ಟು ಶತಮಾನಗಳು ಬೇಕೋ?

ಮರುದಿನದ ಎಲ್ಲ ಪತ್ರಿಕೆಗಳಲ್ಲೂ ಮೋದಿಯ ಭಾಷಣದ್ದೇ ಚಚರ್ೆ. ಮೋದಿಯ ಇತ್ತೀಚಿನ ಭಾಷಣಗಳು ಬೋರಾಗಿವೆ ಎನ್ನುತ್ತಿದ್ದವರೆಲ್ಲ ಮತ್ತೆ ಕಿವಿಗೊಟ್ಟು ಆಲಿಸಲಾರಂಭಿಸಿದರು. ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಅವರ ಭಾಷಣಗಳ ತುಣುಕು ತುಂಬಿ ಹರಿದಾಡಿತು. ಟಿವಿ ಡಿಬೇಟುಗಳ ಬಹುಪಾಲು ಸಮಯ ಮೋದಿ ಆಕ್ರಮಿಸಿಕೊಂಡರು. ಸ್ವತಃ ಕಾಂಗ್ರೆಸಿಗರೇ ಮೋದಿ ಭಾಷಣಕ್ಕೆ ರಾಹುಲ್ ಮಾರ್ಗದರ್ಶನದ ಮೇರೆಗೆ ಸಾಂಸದರು ಅಡ್ಡಿಪಡಿಸಿದ್ದನ್ನು ಸಮಥರ್ಿಸಿಕೊಳ್ಳುವ ಧೈರ್ಯ ತೋರಲಿಲ್ಲ. ಮೋದಿ ಮತ್ತೊಮ್ಮೆ ಗೆದ್ದಿದ್ದರು. ಆದರೆ ಪ್ರತೀ ಪರೀಕ್ಷೆಯಲ್ಲಿ ನಪಾಸಾಗಿಯೇ ಅನುಭವವಿರುವ ರಾಹುಲ್ ಇಲ್ಲೂ ಕಾಂಗ್ರೆಸ್ಸಿಗೆ ಸೋಲು ತಂದಿಟ್ಟರು.

3

ರಾಜ್ಯ ಸಭೆಯ ಕಥೆಯೇ ಬೇರೆ. ಅದು ಪ್ರಜ್ಞಾವಂತರ ಸಭೆ. ಅಲ್ಲಿ ರೇಣುಕಾ ಚೌಧರಿ ಅತ್ಯಂತ ವಿಕಾರವಾಗಿ ನಗುತ್ತ ಸಭೆಯ ವಾತಾವರಣವನ್ನು ಕೆಡಿಸಲು ಪ್ರಯತ್ನಿಸಿದ್ದರು. ಒಟ್ಟಾರೆ ಮೋದಿಯ ಸುನಾಮಿಯನ್ನು ತಡೆಯುವುದಷ್ಟೇ ಅವರ ಉದ್ದೇಶ. ಮೋದಿಯನ್ನು ತಪ್ಪು ಮಾಡಲು ಪ್ರೇರೇಪಿಸುವುದು ಅವರ ಆದ್ಯ ಕರ್ತವ್ಯವಾಗಿತ್ತು. ಅದು ಯಾವಾಗಲೂ ಹಾಗೆಯೇ. ಅಲ್ಲಾವುದ್ದೀನ್ ಖಿಲ್ಜಿ ತಪ್ಪು ಮಾಡಿದರೆ ಇತಿಹಾಸ ಪ್ರಶ್ನಿಸುವುದಿಲ್ಲ; ರತನ್ ಸಿಂಗ್ ತಪ್ಪು ಹೆಜ್ಜೆ ಇಟ್ಟರೆ ಮಾತ್ರ ರಜಪೂತನಾಗಿ ಹೀಗೆ ಮಾಡಬಹುದಿತ್ತೇ ಎಂಬ ಪ್ರಶ್ನೆ ಕೇಳಲಾಗುತ್ತದೆ. ಅದೇ ಬೆಟ್ಟವಾಗಿ ನಿಲ್ಲುತ್ತದೆ. ಆದರೆ ಮೋದಿ ತಮ್ಮ ವ್ಯವಸ್ಥಿತ ಲೆಕ್ಕಾಚಾರದಿಂದ ತಾವು ಜನರಿಗೆ ಸಂದೇಶ ತಲುಪಿಸಿದರು. ತಾವು ಎಡವುವುದಿರಲಿ, ಕಾಂಗ್ರೆಸ್ಸನ್ನು ತಾವೇ ತೋಡಿದ ಖೆಡ್ಡಾದೊಳಗೆ ಬೀಳುವಂತೆ ಮಾಡಿದರು. ರೇಣುಕಾ ಚೌಧರಿಯಂತೂ ಅತ್ಯಂತ ವಿಕಾರವಾಗಿ ನಕ್ಕು ಸದನದ ಮಯರ್ಾದೆಯನ್ನು ಹಾಳು ಮಾಡುವಾಗ ಸ್ವತಃ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ವೈದ್ಯರ ಬಳಿ ತೋರಿಸಿಕೊಳ್ಳಿರೆಂದು ಆಕ್ರೋಶದಿಂದ ನುಡಿದರು. ಆದರೆ ಮೋದಿ ತಲೆ ಕೆಡಿಸಿಕೊಳ್ಳಲಿಲ್ಲ. ಅತ್ಯಂತ ಸಾವಧಾನವಾಗಿ ರಾಮಾಯಣ ಕಾಲದ ನಗು ಕೇಳಿ ಬಹಳ ದಿನವಾಗಿತ್ತು ಎಂದು ವಾಕ್ಪಟಾಕಿ ಸಿಡಿಸಿದರು. ಸದನ ಮುಂದಿನ ಕೆಲವು ಕಾಲ ನಗೆಗಡಲಲ್ಲಿ ತೇಲಿಹೋಯ್ತು. ಅಲ್ಲಿಂದಾಚೆಗೆ ರೇಣುಕಮ್ಮನಿಗೆ ತನ್ನ ಹೆಣ್ತನದ ನೆನಪಾಯ್ತು. ಹೊರಗೆ ಬಂದೊಡನೆ ಮೋದಿ ಹೆಣ್ಣುಮಕ್ಕಳಿಗೆ ಅವಮಾನ ಮಾಡಿದ್ದಾರೆಂದಳು. ತನ್ನನ್ನು ರಾಕ್ಷಸಿಗೆ ಹೋಲಿಸಿದ್ದಾರೆಂದಳು. ಸಿಕ್ಕ ಅವಕಾಶವನ್ನು ಬಿಟ್ಟಾರೆಯೇ? ಕೆಲವರು ಆಕೆಯನ್ನು ಶೂರ್ಪನಖಿಯೊಂದಿಗೆ ತುಲನೆ ಮಾಡಿದರೆ, ಮತ್ತೂ ಕೆಲವರು ತಾಟಕಿಯೆಂದರು. ರಾವಣನಿಗೂ ಹೋಲಿಸಿ ಮೋದಿ ಹೀಗೆ ನಿಂದಿಸಬಾರದಿತ್ತೆಂದರು ಮತ್ತೂ ಕೆಲವರು. ಒಟ್ಟಾರೆ ಬಯಲಿಗೆ ಬಂದದ್ದು ಮಾತ್ರ ರೇಣುಕಾ ಚೌಧರಿಯ ಬಂಡವಾಳವೇ. ಈ ಪರಿಯ ಅವಮಾನ ಆಕೆಗೆ ಜೀವಮಾನದಲ್ಲಿ ಆಗಿರಲಿಕ್ಕಿಲ್ಲ.

ಕಾಂಗ್ರೆಸ್ಸಿನ ವಕ್ತಾರೆ ಪ್ರಿಯಾಂಕಾ ಚತುವರ್ೇದಿ, ‘ಈ ಸಮಾಜವೇ ಪುರುಷ ಪ್ರಧಾನ ಸಮಾಜ; ಸಂಸತ್ತು ಅದರ ಪ್ರತಿಧ್ವನಿಯಷ್ಟೇ. ಕಡಿಮೆ ಸಂಖ್ಯೆಯಲ್ಲಿರುವ ಹೆಣ್ಣುಮಕ್ಕಳಿಗೆ ಇಲ್ಲಿ ಸಿಗುವ ಗೌರವ ಇಂಥದ್ದೇ’ ಎಂದೆಲ್ಲ ಹೇಳಿದ್ದನ್ನು ಕೇಳಿದರೆ ಸಾಧು ಕೋಕಿಲರವರೂ ಒಮ್ಮೆ ಕಣ್ಣೀರು ಸುರಿಸಿಬಿಡಬೇಕು! ಈ ಪರಿಯ ವಿಕಾರನಗುವಿನಿಂದ ವಾತಾವರಣವನ್ನು ಹಾಳು ಮಾಡುವವನನ್ನು ಗಂಡೆಂದು ಕರೆಯುವುದೇ ಕಷ್ಟವಿರುವಾಗ, ಹೆಣ್ಣೆಂದು ಕರೆಯುವುದು ಹೇಗೆಂಬ ಪ್ರಶ್ನೆಯನ್ನು ಅವರ್ಯಾರೂ ತಮಗೆ ತಾವು ಕೇಳಿಕೊಳ್ಳಲಿಲ್ಲ. ಇಷ್ಟಕ್ಕೂ ಮಾಡುವುದೆಲ್ಲ ಮಾಡಿ ಆಮೇಲೆ ಶೋಷಿತರ ಪೋಸು ಕೊಡುವುದು ಇವರಿಗೇನೂ ಹೊಸತಲ್ಲ. ಇವರ ನಿರಂತರ ಅರಚಾಟಗಳಿಗೆದುರಾಗಿ ಮೋದಿ ‘ಒಬ್ಬ ಹಿಂದುಳಿದ ವರ್ಗದ ವ್ಯಕ್ತಿ ಮಾತನಾಡಲು ನಿಂತಾಗ ನೀವು ಹೀಗೆ ಅಡ್ಡಿಪಡಿಸುವುದು ಮೇಲ್ವರ್ಗದವರ ಅಹಂಕಾರದ ಪ್ರದರ್ಶನ ಮತ್ತು ಶೋಷಿತರ ದನಿಯನ್ನು ಅಡಗಿಸುವ ಪ್ರಯತ್ನ’ ಎಂದು ತಾವೊಂದು ಬಾಣ ಹಾರಿಸಿದ್ದರೆ, ಜನಿವಾರಧಾರಿ ಹಿಂದೂ ಎನಿಸಿಕೊಂಡ ರಾಹುಲ್ ಮತ್ತವನ ಮಿತ್ರಬಳಗದ ಸ್ಥಿತಿ ಹೇಗಿರುತ್ತಿತ್ತು ಒಮ್ಮೆ ಊಹಿಸಿಕೊಳ್ಳಿ. ಆದರೆ ಜಾತಿ-ಮತ-ಪಂಥಗಳ ವಿಷಬೀಜ ಬಿತ್ತಿ ಬೆಳೆ ತೆಗೆಯುವ ಕೆಟ್ಟಚಾಳಿ ಇರುವುದು ಕಾಂಗ್ರೆಸ್ಸಿಗೆ ಮಾತ್ರ. ಅದು ಆಯಾ ಸಂವತ್ಸರಕ್ಕೆ, ಆಯಾ ಋತುವಿಗೆ ಬಣ್ಣವನ್ನು ಬದಲಾಯಿಸುತ್ತದೆ. ಕನರ್ಾಟಕದಲ್ಲಿ ಹಸಿರು ಹೊದ್ದುಕೊಂಡು ಚುನಾವಣೆಗೆ ಧಾವಿಸುವ ಕಾಂಗ್ರೆಸ್ಸು ಗುಜರಾತಿನಲ್ಲಿ ಕೇಸರಿ ಶಾಲು ಧರಿಸಿ ಮಂದಿರಕ್ಕೆ ಓಡುತ್ತದೆ. ಒರಿಸ್ಸಾದಲ್ಲಿ ಪಕ್ಕಾ ಬುಡಕಟ್ಟು ಜನರೆಂದು ಬಿಂಬಿಸಿಕೊಳ್ಳುವ ಈ ಜನ ರಾಜಸ್ಥಾನದಲ್ಲಿ ರಜಪೂತರಾಗಿ ಕಾಣಿಸಿಕೊಳ್ಳುತ್ತಾರೆ. ಬಹುರೂಪಿಗಳು ಇವರು. ಇವರಿಗೆ ಶಕ್ತಿ ತುಂಬಲು ಎಡ ಚಿಂತಕರು ಬೇರೆ. ಕವಿತಾ ಕೃಷ್ಣನ್ ಮೋದಿಯವರ ಮಾತಿಗೆ ಪ್ರತಿಕ್ರಿಯೆ ಕೊಡುತ್ತಾ ಲಕ್ಷ್ಮಣನಂಥವರು ರೇಖೆ ಎಳೆಯೋದೇ ಸೀತೆಯಂಥವರನ್ನು ಕಟ್ಟಿಹಾಕಲು ಎಂದಳು. ರಕ್ಷಣೆ ನೀಡುತ್ತೇವೆ ಎನ್ನುವುದೆಲ್ಲ ಪುರುಷ ಪ್ರಧಾನ ಸಮಾಜದಲ್ಲಿ ಬೊಗಳೆ ಎನ್ನುವುದು ಆಕೆಯ ವಾದ. ಒಟ್ಟಾರೆ ಬಜೆಟ್ನ ವಿಚಾರದಲ್ಲಿ ಮೋದಿಯವರನ್ನು ಪ್ರಶ್ನಿಸಿ ಗೊಂದಲಕ್ಕೆ ಸಿಲುಕಿಸಬೇಕಿದ್ದ ಕಾಂಗ್ರೆಸ್ಸು ತಾನೇ ಬಿಡಿಸಲಾಗದ ಸಿಕ್ಕಿನೊಳಗೆ ಸಿಲುಕಿ ನರಳಾಡುತ್ತಿದೆ!

ರಾಜಕೀಯದಲ್ಲಿ ಅನುಸರಿಸುವವರು ಸೋತಂತೆ. ಮೊದಲ ದಾಳ ಎಸೆವವರಿಗೇ ಗೆಲುವು ಕಟ್ಟಿಟ್ಟ ಬುತ್ತಿ. ಮೋದಿ ತಾವು ಒಂದು ಹೆಜ್ಜೆ ಮುಂದಿರುತ್ತಾರೆ, ಯಾವಾಗಲೂ. ಈ ಬಾರಿ ಸಂಸತ್ತನ್ನು ಮುಂದಿನ ಚುನಾವಣೆಗೆ ಬಳಸಿಕೊಳ್ಳುವ ಮೂಲಕ ಒಂದು ವರ್ಷದ ಮುನ್ನವೇ ಎರಡನೇ ಇನ್ನಿಂಗ್ಸ್ನ್ನು ಭರ್ಜರಿಯಾಗಿ ಆರಂಭಿಸಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s