ಎಂದಿಗೂ ಬತ್ತದ ನೀರಿನ ಸೆಲೆ ಕನರ್ಾಟಕ!

ಎಂದಿಗೂ ಬತ್ತದ ನೀರಿನ ಸೆಲೆ ಕನರ್ಾಟಕ!

ಯಾವಾಗಲಾದರೂ ಬಾದಾಮಿ, ಐಹೊಳೆ, ಪಟ್ಟದಕಲ್ಲುಗಳಿಗೆ ಹೋಗಿ ಬಂದಿರುವಿರೇನು? ಜಗತ್ತಿನ ಅತ್ಯಂತ ಹೆಚ್ಚಿನ ಜನರ ಅಚ್ಚರಿಗೆ ಕಾರಣವಾಗಬಲ್ಲ ಸ್ಮಾರಕಗಳು ಇವು. ಕೇಂದ್ರ ಸಂಸತ್ತಿನ ಆಕಾರದ ಪ್ರೇರಣೆಯೂ ಇಲ್ಲಿಂದಲೇ ಬಂದಿರುವಂಥದ್ದು. ಭಾರತದ ಇತಿಹಾಸವನ್ನು ಅತ್ಯಂತ ವೈಭವಯುತವಾಗಿ ಮುಟ್ಟಿಸುವಲ್ಲಿ ಇವುಗಳದ್ದು ನಿಸ್ಸಂಶಯವಾಗಿ ಮಹತ್ವದ ಪಾತ್ರವಿದೆ. ಆದರೆ ಅಲ್ಲಿ ಸಕರ್ಾರ ಒದಗಿಸಿರುವ ವ್ಯವಸ್ಥೆಯ ಕುರಿತಂತೆ ಮಾತನಾಡದಿರುವುದೇ ಒಳಿತು.

ಚುನಾವಣೆಯ ಹೊತ್ತಿಗೆ ಸರಿಯಾಗಿ ತಮ್ಮ ಹಳೆಯ ಹಪ್ಪಟ್ಟು ಐಡಿಯಾಗಳನ್ನು ಮತ್ತೆ ಚಾಲ್ತಿಗೆ ತರುವ ಜನನಾಯಕರನ್ನು ನೋಡಿ ನೋಡಿ ಸಾಕಾಗಿ ಹೋಗಿದೆ. ಕನರ್ಾಟಕದ ಅಗತ್ಯಕ್ಕೆ ಸ್ಪಂದಿಸದವರನ್ನು ಸಹಿಸಿಕೊಳ್ಳೋದು ಕಷ್ಟವೇ. ಚುನಾವಣೆಯ ಹೊಸ್ತಿಲಲ್ಲಿಯೇ ಇವೆಲ್ಲವೂ ಚಚರ್ೆಗೆ ಬರಬೇಕು. ಪ್ರತಿಯೊಬ್ಬ ನಾಯಕನೂ ಕ್ಷೇತ್ರದ ಕುರಿತಂತಹ ತಮ್ಮ-ತಮ್ಮ ಅಭಿವೃದ್ಧಿಯ ಕನಸುಗಳನ್ನು ಜನರ ಮುಂದೆ ತೆರೆದಿಡಬೇಕು. ತಾವು ಇದುವರೆಗೂ ಮಾಡಿದ ಜನಸೇವೆಯ ಸತ್ಕರ್ಮಗಳನ್ನು ಲೆಕ್ಕ ಬರೆದು ಜನರೆದುರು ಇಡಲೇಬೇಕು. ಕೆಲಸದವನಿಗೆ ಐವತ್ತು ರೂಪಾಯಿ ಕೊಟ್ಟರೆ ಲೆಕ್ಕ-ಬಿಲ್ಲು ಕೇಳುವ ನಾವು ಐದೈದು ವರ್ಷ ಕ್ಷೇತ್ರವನ್ನೇ ಕೈಗಿಟ್ಟೆವಲ್ಲ; ಅವರ ಬಳಿ ಲೆಕ್ಕ ಕೇಳೋದು ಬೇಡವೇನು? ಪ್ರತೀ ಚುನಾವಣೆಯ ಸಮಯದಲ್ಲೂ ನಾವು ಹೀಗೆ ಪ್ರಶ್ನೆ ಮಾಡಲು ನಿಂತರೆ ಪ್ರತಿನಿಧಿಗಳು ನಿಯತ್ತಾಗಿ ಕೆಲಸ ಮಾಡುತ್ತಾರೆ. ಬೊಗಳೆ ಬಿಟ್ಟು ವಿಕಾಸದ ಮಾತಾಡುತ್ತಾರೆ!

2

ಕಳೆದ ವಾರ ಪ್ರವಾಸೋದ್ಯಮದ ಕುರಿತಂತೆ ವಿಸ್ತಾರವಾದ ಚಚರ್ೆ ಮಾಡುತ್ತಿದ್ದೆವು. ಇಂದು ಇಡಿಯ ಜಗತ್ತು ಈ ಕುರಿತಂತೆ ಎಚ್ಚೆತ್ತುಕೊಂಡಿದೆ. 2014 ರಿಂದ 2024ರ ನಡುವಿನ ಒಂದು ದಶಕದಲ್ಲಿ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಯ ಕುರಿತಂತೆ ಒಂದು ಅಂಕಿ ಅಂಶ ಹೊರ ಬಂದಿತ್ತು. ಅದರ ಪ್ರಕಾರ ಭಾರತದಲ್ಲಿ ಈ ದಶಕದಲ್ಲಿ ಪ್ರತೀ ವರ್ಷ ಶೇಕಡಾ ಆರಕ್ಕಿಂತಲೂ ಅಧಿಕ ಬೆಳವಣಿಗೆಯ ದರ ಕಂಡು ಬರುವುದೆನ್ನಲಾಗಿತ್ತು. ಚೀನಾದಲ್ಲಿ ಇದೇ ಅವಧಿಯಲ್ಲಿ ಇದು ಶೇಕಡಾ ಏಳಕ್ಕಿಂತಲೂ ಅಧಿಕವೆಂದು ಊಹಿಸಲಾಗಿತ್ತು. ಅಂದರೆ ಪ್ರವಾಸೋದ್ಯಮದಲ್ಲಿ ನಮ್ಮ ಬೆಳವಣಿಗೆ ಓಟ ಜೋರಾಗಿರುವುದರಲ್ಲಿ ಯಾವ ಅನುಮಾನವೂ ಇಲ್ಲ. ಅದಕ್ಕೆ ತಕ್ಕಂತೆ ನಾವು ತಯಾರಾಗಿದ್ದೇವೆಯಾ ಅನ್ನೋದಷ್ಟೇ ಬಲು ದೊಡ್ಡ ಪ್ರಶ್ನೆ. ನಮ್ಮ ನಾಯಕರುಗಳಿಗೆ ಈ ಕುರಿತಂತೆ ಚಿಂತೆ ಯಾವಾಗಲೂ ಇಲ್ಲ. ಸಾಹಸ ಮಾಡಿ ಚುನಾವಣೆ ಗೆದ್ದು ಒಂದು ವರ್ಷ ಅದೇ ಗುಂಗಲ್ಲಿ ಕಳೆಯುತ್ತಾರೆ. ಕೆಲಸ ಅಥರ್ೈಸಿಕೊಳ್ಳಲು ಇನ್ನೊಂದು ವರ್ಷ. ಅಧಿಕಾರಿಗಳನ್ನು ದುಡಿಸಿಕೊಳ್ಳುವುದನ್ನು ಕಲಿಯಲು ಮತ್ತೊಂದು ವರ್ಷ ವ್ಯರ್ಥ. ನಾಲ್ಕನೇ ವರ್ಷ ಸ್ವಲ್ಪ ಕೆಲಸ ಮಾಡುವ ಆಲೋಚನೆ ಬರುವ ವೇಳೆಗಾಗಲೇ ಚುನಾವಣೆಯ ವರ್ಷ ಬಂದೇ ಬಿಡುತ್ತೆ. ಮತ್ತೆ ಗೆಲ್ಲುವ ಕಸರತ್ತುಗಳು, ಭರ್ಜರಿ ಭಾಷಣಗಳು, ಜಾತಿ ಲೆಕ್ಕಚಾರಗಳು.. ವಿಕಾಸ ಮಾತ್ರ ಮೂಲೆಯಲ್ಲಿ ಒಂಟಿಯಾಗಿ ಕುಳಿತಿರುತ್ತದೆ. ಹಾಗಂತ ಇದೇ ಪರಮಸತ್ಯವೇನಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ನರೇಂದ್ರ ಮೋದಿ ಎದುರಿಸಿರುವ ಚುನಾವಣೆಗಳೆಷ್ಟಾದವು ನೆನಪಿದೆಯಲ್ಲ! ಅದರಲ್ಲೂ ಉತ್ತರ ಪ್ರದೇಶ, ಬಿಹಾರ, ದೆಹಲಿ, ಗುಜರಾತುಗಳಂತೂ ಅವರ ತಲೆ ಹಿಂಡುವ ಸವಾಲುಗಳಾಗಿದ್ದವು. ಅವರ ಪಕ್ಷದವರೂ ಹೇಗಿದ್ದಾರೆಂದರೆ ಸಂಸದರ ಆಯ್ಕೆಯ ಚುನಾವಣೆಗೆ ಬಿಡಿ ಕೊನೆಗೆ ಗ್ರಾಮ ಪಂಚಾಯಿತಿ ಚುನಾವಣೆಯ ಪ್ರಚಾರಕ್ಕೂ ಅವರನ್ನೇ ಬಳಸಿಕೊಳ್ಳುತ್ತಾರೆ! ಆತ ಇವರೆಲ್ಲರಿಗೂ ಬಳಕೆಯಾಗುತ್ತಾರೆ ಹಾಗಂತ ತಮ್ಮ ಕೆಲಸ ಮಾತ್ರ ನಿಲ್ಲಿಸೋದಿಲ್ಲ. ತಮಗೆ ಇರೋದು ಐದೇ ವರ್ಷ ಎಂಬಂತೆ ಕೆಲಸ ಮಾಡುತ್ತಾರೆ. ಪ್ರಾಮಾಣಿಕರಾಗಿರುವುದರಿಂದ ಇತರರ ಬಳಿ ಮಾಡಿಸಿಕೊಳ್ಳುತ್ತಾರೆ. ಹೀಗಾಗಿಯೇ ಹೊಸ-ಹೊಸ ಆಲೋಚನೆಗಳು, ಕಲ್ಪನೆಗಳು ಅವರಿಗೆ ಗರಿಗೆದರುತ್ತವೆ ಮತ್ತು ಸಾಕಾರ ಮಾಡಿಕೊಳ್ಳುವ ಇಚ್ಛಾಶಕ್ತಿಯೂ ಅವರೊಳಗಿದೆ. ಇಷ್ಟರ ನಡುವೆಯೂ ಮೋದಿಯವರು ಇತ್ತೀಚೆಗೆ ಒಂದು ದೇಶಕ್ಕೆ ಒಂದೇ ಚುನಾವಣೆಯಿರಲಿ ಎಂದು ಚಚರ್ೆ ಹರಿಬಿಟ್ಟಿರೋದು ಇದೇ ಕಾರಣಕ್ಕಾಗಿ. ಇಲ್ಲವಾದರೆ ಪ್ರತೀ ಚುನಾವಣೆಯಲ್ಲೂ ಈ ವಾಕ್ಸಮರಗಳೇ ದೇಶದ ಅಮೂಲ್ಯ ಉತ್ಪಾದನಾ ಸಮಯವನ್ನು ತಿಂದು ಹಾಕಿಬಿಡುತ್ತವೆ!

ಪ್ರವಾಸೋದ್ಯಮ ಜಗತ್ತಿನಲ್ಲಿಯೇ ಕಡಿಮೆ ಹೂಡಿಕೆಯ ಆದರೆ ಅತಿ ಹೆಚ್ಚಿನ ಹಣ ತರುವ ಮತ್ತು ಉದ್ಯೋಗ ಸೃಷ್ಟಿಸುವ ಉದ್ಯಮ. ಒಂದು ಅಂದಾಜಿನ ಪ್ರಕಾರ ಇಂದು ತೈಲ ಮಾರುಕಟ್ಟೆಯ ರಫ್ತಿಗಿಂತಲೂ ಹೆಚ್ಚಿನ ಹಣ ಪ್ರವಾಸೋದ್ಯಮದಲ್ಲಿದೆ. 2016ರಲ್ಲಿ 7.6 ಟ್ರಿಲಿಯನ್ ಅಮೇರಿಕನ್ ಡಾಲರುಗಳಷ್ಟು ವಹಿವಾಟು ನಡೆಸಿತ್ತು ಈ ವಿಭಾಗ. ವಸತಿ, ಪ್ರಯಾಣ, ಮನೋರಂಜನೆಯೇ ಮೊದಲಾದ ಆಕರ್ಷಣೆಗಳ ನೇರ ಲಾಭವೇ ಎರಡೂ ಕಾಲು ಟ್ರಿಲಿಯನ್ಗಿಂತಲೂ ಹೆಚ್ಚಾಗಿತ್ತು ಎನ್ನುತ್ತದೆ ಸ್ಟ್ಯಾಟಿಸ್ಟಾ. ಕಳೆದ ವರ್ಷ ಜಗತ್ತಿನಾದ್ಯಂತ ನೂರೊಂಭತ್ತು ಮಿಲಿಯನ್ ನೇರ ಉದ್ಯೋಗಗಳು, ಸುಮಾರು ಮೂರು ಕೋಟಿ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. ಎಲ್ಲಕ್ಕೂ ಬಲು ಮುಖ್ಯವಾದ ಸಂಗತಿ ಎಂದರೆ ಕಳೆದ ವರ್ಷ ಜಾಗತಿಕ ಪ್ರವಾಸಿಗರಲ್ಲಿ ಕಾಲು ಭಾಗದಷ್ಟು ಜನ ಮಾತ್ರ ಉದ್ಯಮದ ದೃಷ್ಟಿಯಿಂದ ಪ್ರಯಾಣ ಮಾಡಿದವರು. ಮುಕ್ಕಾಲು ಪಾಲು ಜನ ಆನಂದಕ್ಕಾಗಿ, ಪ್ರೇಕ್ಷಣೀಯ ಸ್ಥಳಗಳ ದರ್ಶನಕ್ಕಾಗಿ ಓಡಾಡಿದವರು. ಅದರರ್ಥ ಕನರ್ಾಟಕ ಬೆಂಗಳೂರನ್ನು ಬಿಟ್ಟು ಇತರೆ ಭಾಗಗಳನ್ನು ಬೆಳೆಸುವಲ್ಲಿ ಜಗತ್ತಿನ ಮುಕ್ಕಾಲು ಪಾಲು ಯಾತ್ರಿಕರು ಬೆಂಬಲ ನೀಡುವುದು ಖಾತ್ರಿಯೆಂದಾಯ್ತು.

1

ಯಾವಾಗಲಾದರೂ ಬಾದಾಮಿ, ಐಹೊಳೆ, ಪಟ್ಟದಕಲ್ಲುಗಳಿಗೆ ಹೋಗಿ ಬಂದಿರುವಿರೇನು? ಜಗತ್ತಿನ ಅತ್ಯಂತ ಹೆಚ್ಚಿನ ಜನರ ಅಚ್ಚರಿಗೆ ಕಾರಣವಾಗಬಲ್ಲ ಸ್ಮಾರಕಗಳು ಇವು. ಕೇಂದ್ರ ಸಂಸತ್ತಿನ ಆಕಾರದ ಪ್ರೇರಣೆಯೂ ಇಲ್ಲಿಂದಲೇ ಬಂದಿರುವಂಥದ್ದು. ಭಾರತದ ಇತಿಹಾಸವನ್ನು ಅತ್ಯಂತ ವೈಭವಯುತವಾಗಿ ಮುಟ್ಟಿಸುವಲ್ಲಿ ಇವುಗಳದ್ದು ನಿಸ್ಸಂಶಯವಾಗಿ ಮಹತ್ವದ ಪಾತ್ರವಿದೆ. ಆದರೆ ಅಲ್ಲಿ ಸಕರ್ಾರ ಒದಗಿಸಿರುವ ವ್ಯವಸ್ಥೆಯ ಕುರಿತಂತೆ ಮಾತನಾಡದಿರುವುದೇ ಒಳಿತು. ಅಲ್ಲಿಗೆ ಬರುವ ರಸ್ತೆ ಸಮರ್ಪಕವಾಗಿಲ್ಲ, ಅಲ್ಲಿಗೆ ಬಂದರೆ ಸೂಕ್ತ ಮಾಹಿತಿ ದೊರಕುವುದಿಲ್ಲ. ಅಲ್ಲಿ ಸ್ಮಾರಕಗಳನ್ನು ಕಾಯುವುದರಿಂದ ಹಿಡಿದು, ವಿವರಗಳನ್ನು ನೀಡುವವರೆಗೆ ಪ್ರತಿಯೊಬ್ಬರಿಗೂ ಅದರ ಮೇಲೆ ಅಭಿಮಾನ ಉಕ್ಕುವಂತಹ ಮುಖಭಾವವಿಲ್ಲ. ಇಂತಹುದೊಂದು ಪರಂಪರೆಯ ವಾರಸುದಾರರು ನಾವು ಎಂಬ ಹೆಮ್ಮೆ ನಮಗೇ ಇಲ್ಲವೆಂದ ಮೇಲೆ ಅದನ್ನು ನೋಡಲೆಂದು ಬಂದವರ ಪರಿಸ್ಥಿತಿ ಹೇಗಿರಬೇಕು ಹೇಳಿ!

ಈ ರೀತಿಯ ಪ್ರಾಚೀನ ಪರಂಪರೆಯ ಸ್ಮಾರಕಗಳ ಭಾಗ್ಯ ಇರೋದು ಪೂರ್ವದ ರಾಷ್ಟ್ರಗಳಿಗೆ ಮಾತ್ರ. ಅದರಲ್ಲೂ ಚೀನಾ-ಭಾರತಗಳಿಗೆ ಬಂಪರ್. ನಮ್ಮ ಪೂರ್ವಜರೆಲ್ಲ ಆಕ್ರಮಣಕಾರರೊಂದಿಗೆ ಬಡಿದಾಡಿ ಈ ಸಿರಿವಂತಿಕೆಯನ್ನು ನಮಗೆ ಉಳಿಸಿಹೋಗಿದ್ದಾರೆ. ಅವುಗಳನ್ನು ಬಳಸಿಕೊಂಡು ನಮ್ಮ ಕ್ಷಾತ್ರತೇಜದ ಮತ್ತು ವೈಜ್ಞಾನಿಕ ಸಾಧನೆಯ ಇತಿಹಾಸವನ್ನು ಸಮರ್ಥವಾಗಿ ಮತ್ತೊಮ್ಮೆ ತೆರೆದಿಡಬೇಕಾದ ಜವಾಬ್ದಾರಿ ನಮ್ಮದ್ದು. ನನಗೆ ಗೊತ್ತು. ನನ್ನ ಕನಸುಗಳು ಅದೆಷ್ಟು ದೊಡ್ಡವೆಂದರೆ ಸರಿಯಾದ ಪಾಕರ್ಿಂಗ್ ವ್ಯವಸ್ಥೆಯನ್ನೂ ನಿಭಾಯಿಸಲು ಹೆಣಗಾಡುತ್ತಿರುವವರ ನಡುವೆ ಚಂದ್ರನನ್ನೇ ತಂದು ಕೊಡುವಂತೆ ಕೇಳುತ್ತಿದ್ದೇನೆ! ಆದರೆ ಸಮರ್ಥ ನಾಯಕನೊಬ್ಬ ಬಂದರೆ ಇವ್ಯಾವನ್ನೂ ಸಾಧಿಸುವುದು ಅಸಾಧ್ಯವಲ್ಲ. ಕಲ್ಬುಗರ್ಿಯಲ್ಲಿ ಅಲ್ಲಿನ ಪ್ರಜ್ಞಾವಂತರೊಂದಿಗೆ ಮಾತನಾಡುತ್ತಿರುವಾಗ ತರುಣ ಮಿತ್ರರೊಬ್ಬರು ಅಲ್ಲಿನ ಕೋಟೆಯ ಮೇಲೆ ರೈಲನ್ನು ಚಲಾಯಿಸುವ ಕನಸನ್ನು ತೆರೆದಿಟ್ಟರು. ಅದು ಸುಲಭವಲ್ಲವೆಂದು ಗೊತ್ತಿದ್ದರೂ ಆ ಕನಸೇ ಅದ್ಭುತವೆನಿಸಿತ್ತು, ರೋಮಾಂಚನವಾಯ್ತು. ಬೀದರ್ನ ಕೋಟೆಯೊಳಗೆ ಒಮ್ಮೆ ಹೊಕ್ಕು ಬನ್ನಿ. ಜಗತ್ತಿನ ಅನೇಕ ಸ್ಮಾರಕಗಳನ್ನು ನಾಚಿಸುವಷ್ಟು ವಿಶಾಲ ಮತ್ತು ಭವ್ಯ ಆಕೃತಿ ಅದು.

3

ನಾವು ಕನರ್ಾಟಕವನ್ನು ಆಳಿದ ರಾಜ ಮನೆತನಗಳ ಅರಮನೆಗಳನ್ನು, ಆಯಾ ಸ್ಥಳಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಸೋತಿದ್ದೇವೆ. ಕದಂಬರು ಆಳಿದ ಬನವಾಸಿ ನಮ್ಮ ಆಸ್ತಿಯಾಗಬೇಕಿತ್ತು. ರಾಷ್ಟ್ರಕೂಟರ ರಾಜಧಾನಿ ಮಾನ್ಯಖೇಟ ಎಲ್ಲಿದೆ ಎಂದು ಕೇಳಿದರೆ ಇತಿಹಾಸದ ಅಧ್ಯಾಪಕರೂ ಒಮ್ಮೆ ತಲೆ ಕೆರೆದುಕೊಳ್ಳುತ್ತಾರೆ. ಕನ್ನಡದ ಕೀತರ್ಿಯನ್ನು ನಾಡಿನಗಲ ಪಸರಿಸಿದ ಕವಿಗಳ, ಸಾಹಿತಿಗಳ, ಸಂಗೀತಗಾರರ ಮನೆಗಳನ್ನಾದರೂ ಅಭಿವೃದ್ಧಿಪಡಿಸಿ ಸಾಹಿತ್ಯದ ಆಸಕ್ತಿಯನ್ನು ವೃದ್ಧಿಸಲೆತ್ನಿಸಿದೆವೇನು? ವರ್ಷಕ್ಕೊಮ್ಮೆ ಅವರವರ ಸಾಹಿತ್ಯ-ಸಂಗೀತಗಳ ಉತ್ಸವಗಳನ್ನು ಆಯಾ ಸ್ಥಳಗಳಲ್ಲಿ ನಡೆಸಿದ್ದರೆ ಅದು ಸಕರ್ಾರದ ಹಸ್ತಕ್ಷೇಪವಿಲ್ಲದೇ (ಇಲ್ಲವಾದರೆ ಚಂಪಾರಂಥವರು ಮುಂಚೂಣಿಯಲ್ಲಿ ನಿಲ್ಲುವ ಎಲ್ಲ ಅಪಾಯಗಳೂ ಇದ್ದೇ ಇರುತ್ತವೆ) ತಾವೇ ತಾವಾಗಿ ನಡೆಯುವಂತೆ ಮಾಡಿದ್ದರೆ ಇಂದು ಈ ನಾಡಿನ ಮೂಲೆ ಮೂಲೆಗಳಲ್ಲಿ ಸಾಹಿತ್ಯ ಕೃಷಿ ನಡೆದಿರುತ್ತಿತ್ತು ಜೊತೆಗೆ ಆಯಾ ಪ್ರದೇಶಗಳಲ್ಲಿ ಆ ತರಂಗಗಳು ಉಳಿಯಲು ಪ್ರೇರಣೆಯಾಗಿರುತ್ತಿತ್ತು. ನಾವು ಶರಣರ, ದಾಸರ, ರಾಜಮನೆತನಗಳ, ಕವಿಗಳ ಯಾತ್ರೆಗಳ ಸಕ್ಯರ್ುಟ್ನ್ನೇ ರೂಪಿಸಿ ಹೊರಗಿನವರಲ್ಲದಿದ್ದರೆ ಬಿಡಿ ಒಳಗಿನ ಯಾತ್ರಿಕರಿಗೇ ಒಂದು ವ್ಯವಸ್ಥಿತವಾದ ಪ್ರವಾಸದ ಅನುಭವ ಕೊಡಬಹುದಿತ್ತು.

ಅರಣ್ಯ ಪ್ರವಾಸದ ದೃಷ್ಟಿಯಿಂದಲೂ ಕನರ್ಾಟಕಕ್ಕೆ ವಿಸ್ತಾರವಾದ ಅವಕಾಶವಿದೆ. ನಾಗರಹೊಳೆ ಅಭಯಾರಣ್ಯಕ್ಕೆ ಹೋದಷ್ಟೇ ವೇಗವಾಗಿ ಜನ ಮರಳಿ ಬರುತ್ತಾರೆ. ದಾಂಡೇಲಿಗೆ ಕಾಡನ್ನು ನೋಡುವ ಕುತೂಹಲಕ್ಕಿಂತ ಹೆಚ್ಚು ರೆಸಾಟರ್್ನಲ್ಲಿ ಕುಡಿದು ಕುಪ್ಪಳಿಸುವುದಕ್ಕೇ ಜನ ಹೋಗೋದು. ಅದಕ್ಕೆ ಕಾರಣವೂ ಇಲ್ಲದಿಲ್ಲ. ಸಿಂಗಪೂರದ ಜುರೊಂಗ್ ಬಡರ್್ ಪಾಕರ್್ನ್ನು ಒಮ್ಮೆ ಗೂಗಲ್ ಮಾಡಿ ನೋಡಿ. ಒಳ ಹೊಕ್ಕರೆ ಪೂತರ್ಿ ಆನಂದಿಸಿ ಹೊರಬರಲು ಒಂದು ದಿನವೇ ಬೇಕು. ಅಲ್ಲಿ ಬರಿ ಗೂಡಿನಲ್ಲಿ ದೂಡಿಬಿಟ್ಟ ಪಕ್ಷಿ-ಪ್ರಾಣಿಗಳಷ್ಟೇ ಇಲ್ಲ; ಅವುಗಳನ್ನು ತರಬೇತುಗೊಳಿಸಿ ನೀಡುವ ಪ್ರದರ್ಶನಗಳೂ ವಿಶೇಷವಾಗಿ ನಡೆಯುತ್ತವೆ. ಛಾಯಾಗ್ರಹಣದ ಆಸಕ್ತಿಯಿಂದ ಹೋದರಂತೂ ಆತನಿಗೆ ಹುಚ್ಚೇ ಹಿಡಿದುಬಿಡುತ್ತದೆ. ಅಲ್ಲಿ ಪಕ್ಷಿ ಪ್ರಾಣಿಗಳ ಕುರಿತಂತೆ ವಿಶೇಷ ಶಿಕ್ಷಣ ನೀಡುವ ವ್ಯವಸ್ಥೆಯೂ ಇದೆ. ಮತ್ತು ಈ ಬಡರ್್ ಪಾಕರ್್ ತನ್ನ ಸ್ವರೂಪವನ್ನು ತಿದ್ದಿಕೊಳ್ಳುತ್ತಲೇ ಇರುತ್ತದೆ. ಸ್ವಲ್ಪ ಬನ್ನೇರುಘಟ್ಟದ ರಾಷ್ಟ್ರೀಯ ಉದ್ಯಾನವನದೊಂದಿಗೆ ತಾಳೆ ಹಾಕಿ ನೋಡಿ. ಅಲ್ಲಿಗೆ ಅನಿವಾರ್ಯಕ್ಕೆ ಹೋಗಬೇಕಷ್ಟೇ. ಅನೇಕ ವರ್ಷಗಳಿಂದ ಒಂದೇ ಗೂಡಿನಲ್ಲಿ ಕೂಡಿ ಹಾಕಲ್ಪಟ್ಟು ಸೊರಗಿಹೋಗಿರುವ ಪ್ರಾಣಿ-ಪಕ್ಷಿಗಳನ್ನು ನೋಡಿ ಆನಂದವಲ್ಲ, ಕನಿಕರ ಹುಟ್ಟಬೇಕು. ಅಂತರಾಷ್ಟ್ರೀಯ ಮಟ್ಟದ ಯಾವ ಘನತೆಗೂ ನಿಲುಕದ ಇಂತಹ ಪಾಕರ್ುಗಳನ್ನೇ ಕನ್ನಡಿಗರು ಆನಂದಿಸಬೇಕಲ್ಲ ಎನ್ನುವ ದುಃಖ ಮುಖ್ಯಮಂತ್ರಿಗಳಿಗೂ ಇಲ್ಲ; ಇತರೆ ನಾಯಕರುಗಳಿಗೂ ಇಲ್ಲ. ಶನಿವಾರ, ಭಾನುವಾರಗಳು ಬಂತೆಂದರೆ ಪಾಕರ್ಿನ ಹೊರಗೆ ಟಿಕೆಟ್ಟಿಗಾಗಿ ಗಂಟೆಗಟ್ಟಲೆ ಸಾಲು ನಿಲ್ಲುವ ಜನರನ್ನು ನೋಡಿದರೆ ಇನ್ನೂ ಅದ್ಯಾವ ಶತಮಾನದಲ್ಲಿದ್ದೇವೆಂದು ಕೇಳಬೇಕೆನಿಸುತ್ತದೆ.

4

ನಾವು ಚಿಕ್ಕಮಗಳೂರು, ಶಿರಸಿ ಮತ್ತು ಶಿವಮೊಗ್ಗಗಳನ್ನು ಆಯುವರ್ೇದ ಆರೋಗ್ಯದ ಕೇಂದ್ರವಾಗಿ ರೂಪಿಸಲು ಸಕರ್ಾರ ಪ್ರೋತ್ಸಾಹಿಸಿದರೆ ಅದೆಷ್ಟು ಲಾಭವಾಗಬಹುದು ಯೋಚಿಸಿ. ಅದಾಗಲೇ ಅನೇಕ ವೈದ್ಯರು ಸ್ವಯಂಪ್ರೇರಿತವಾಗಿ ಇಲ್ಲಿ ಅಯುವರ್ೇದ ಧಾಮಗಳನ್ನು ಕಟ್ಟಿ ವಿದೇಶಗಳಿಂದಲೂ ಜನರನ್ನು ಆಕಷರ್ಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ವಲ್ಪ ಪೂರಕ ಬೆಂಬಲ ದೊರೆತರೆ ಅಲ್ಲಿ ಹೆಚ್ಚಿನ ಖಚರ್ಿಲ್ಲದೇ ಅಪಾರ ಉದ್ಯೋಗದ ಸೃಷ್ಟಿ ಮಾಡಬಹುದು. ನೆನಪಿಡಿ, ಈ ನೆಪದಲ್ಲಿ ಆಯುವರ್ೇದ ಔಷಧಿಗಳ ಉತ್ಪಾದನೆ ಚುರುಕಾದರೆ ರಾಷ್ಟ್ರದ ಗಮನವನ್ನು ಸೆಳೆಯುವುದು ನಮಗೆ ದೊಡ್ಡದಲ್ಲ. ಪ್ರವಾಸೋದ್ಯಮದೊಂದಿಗೆ ಔಷಧೋದ್ಯಮವೂ ಬೆಳೆಯುವಂತಹ ಸಾಧ್ಯತೆ ಇದೆ ಅಲ್ಲಿ.

ಮನಸ್ಸು ಮಾಡಿದರೆ ನಾವು ಕೃಷಿ ಪ್ರವಾಸೋದ್ಯಮಕ್ಕೂ ಶಕ್ತಿ ತುಂಬಬಹುದು. ಕಾಪರ್ೋರೇಟು ಬದುಕಿನಲ್ಲಿ ಬೇಸತ್ತಿರುವ ಜನರನ್ನು ಕೃಷಿ ಭೂಮಿಗೆ ಎಳೆತಂದು ಗುಡಿಸಲ ವಾಸದ ಅನುಭೂತಿ ಕೊಡಿಸುವಂತಾದರೆ ಸಮರ್ಥ ಪ್ರಯೋಗವಾಗಬಹುದು. ದೂರದೃಷ್ಟಿಯ ನಾಯಕರೊಂದಷ್ಟು ಸೂಕ್ಷ್ಮವಾಗಿ ಆಲೋಚಿಸಬೇಕಷ್ಟೇ.
ಇವೆಲ್ಲವನ್ನೂ ಒತ್ತಟಿಗಿಟ್ಟು ಪ್ರವಾಸೋದ್ಯಮಕ್ಕೆ ದಿಕ್ಸೂಚಿಯನ್ನು ಕೊಡುವ ಒಂದು ಆಲೋಚನೆಯನ್ನು ಕನರ್ಾಟಕ ಮಾಡಬೇಕಿದೆ. ನಾವು ಎಲ್ಲೆಲ್ಲೂ ಗೂಗಲ್ ಮ್ಯಾಪ್ ಬಳಸಿ ಓಡಾಡಲು ಶುರು ಮಾಡಿದ್ದೇವಲ್ಲ; ತಂತ್ರಜ್ಞಾನವನ್ನು ವಿಸ್ತರಿಸಿ ಯಾವ ಸ್ಥಳಕ್ಕೆ ಹೋಗುತ್ತಾರೋ ಅಲ್ಲಿ ಮೊಬೈಲ್ ವಿಡಿಯೋ ಕ್ಯಾಮೆರ ತೆರೆದೊಡನೆ ಆಯಾ ಸ್ಥಳಗಳ ರಿಯಲ್ ಟೈಮ್ ಡಾಟಾ ಸಿಗುವಂತೆ ಮಾಡಬೇಕು. ಸಾಧ್ಯವಾದರೆ ಐಹೊಳೆ, ಪಟ್ಟದ ಕಲ್ಲುಗಳು ವೈಭವದ ಕಾಲದಲ್ಲಿ ಹೇಗಿದ್ದಿರಬಹುದೆನ್ನುವುದಕ್ಕೆ ಅಲ್ಲಿಯೇ ರಿಯಲ್ ಟೈಮ್ ವಿಡಿಯೋ ದೊರೆಯುವಂತೆ ಮಾಡಬೇಕು. ಒಟ್ಟಾರೆ ಈ ಬಗೆಯ ತಂತ್ರಜ್ಞಾನವನ್ನು ಜಾಗತಿಕವಾಗಿ ಮೊದಲು ರೂಪಿಸುವ ಸವಾಲು ಸ್ವೀಕರಿಸಬೇಕು ಕನರ್ಾಟಕ. ಆಗ ಐಟಿ ಸಿಟಿ ಬೆಂಗಳೂರು ನಮ್ಮಲ್ಲಿರುವುದಕ್ಕೂ ಸಾರ್ಥಕತೆ ಬರುತ್ತದೆ. ಜಗದ ಜನರ ಚಿತ್ತವನ್ನು ಕನರ್ಾಟಕದತ್ತ ಸೆಳೆಯಲು ನಾವೀಗ ಹೊಸ ಬಗೆಯ ಪ್ರಯೋಗಗಳನ್ನು ಮಾಡಲೇ ಬೇಕಿದೆ. ನರೇಂದ್ರ ಮೋದಿ ಗಾಳಿಪಟ ಹಾರಿಸುವ ಹಬ್ಬವನ್ನು ಆಚರಿಸುವ ನೆಪದಲ್ಲಿ ಗುಜರಾತಿಗೆ ಸಿನಿಮಾ ನಟರನ್ನೆಳೆದು ತಂದು ಎಲ್ಲರ ಕಣ್ಸೆಳೆಯಲಿಲ್ಲವೇ? ಪಾ ಸಿನಿಮಾಕ್ಕಾಗಿ ರಿಯಾಯಿತಿ ಕೇಳಹೋದ ಅಮಿತಾಭ್ರನ್ನು ಬಲು ಪ್ರೀತಿಯಿಂದ ಮಾತನಾಡಿಸಿ ನಿಮ್ಮ ಒಂದೆರಡು ಸಿನಿಮಾಗಳನ್ನು ಇಲ್ಲಿಯೇ ಚಿತ್ರೀಕರಿಸಿರೆಂದ ಮೋದಿ ಗುಜರಾತಿನ ಪ್ರವಾಸೋದ್ಯಮದ ರಾಯಭಾರಿಯಾಗಲು ಒಪ್ಪಿಸಿಯೇಬಿಟ್ಟರಲ್ಲ! ಅಮಿತಾಭ್ ಒಪ್ಪಿದೊಡನೆ ಒಂದಿನಿತೂ ತಡಮಾಡದೇ ಆಗಿಂದಾಗ್ಯೇ ಚಿತ್ರೀಕರಣಕ್ಕೆ ಬೇಕಾದ ವ್ಯವಸ್ಥೆ ಮಾಡಿಸಿ ಗುಜರಾತ್ ಪ್ರವಾಸೋದ್ಯಮಕ್ಕೆ ಚುರುಕು ತಂದುಬಿಟ್ಟರಲ್ಲ. ಕನರ್ಾಟಕದ ಈಗಿನ ಮುಖ್ಯಮಂತ್ರಿಗಳಿಂದ ಇಷ್ಟೆಲ್ಲ ಚಾಣಾಕ್ಷ ನಡೆಯನ್ನು ನಿರೀಕ್ಷಿಸಬಹುದೇ?

ಕನರ್ಾಟಕ ಪ್ರವಾಸೋದ್ಯಮ ಬತ್ತದ ನೀರಿನ ಸೆಲೆಯಿದ್ದಂತೆ. ನೀರು ತೆಗೆದು ಎಲ್ಲರಿಗೂ ಸಮಾನವಾಗಿ ಹಂಚಬಲ್ಲ, ಆರೂವರೆ ಕೋಟಿ ಕನ್ನಡಿಗರ ಬದುಕನ್ನು ಹಸನಾಗಿಸುವ ವಿಕಾಸದ ಕನಸು ಹೊತ್ತ ನಾಯಕನ ಜರೂರತ್ತಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s