ಬೆಂಗಳೂರು ಕೇಂದ್ರಿತ ಅಭಿವೃದ್ಧಿ ಮಾಡೆಲ್ಲು ಮುರಿದು ಬೀಳಲಿದೆ!

ಬೆಂಗಳೂರು ಕೇಂದ್ರಿತ ಅಭಿವೃದ್ಧಿ ಮಾಡೆಲ್ಲು ಮುರಿದು ಬೀಳಲಿದೆ!

ಹಾಗೇ ಸುಮ್ಮನೆ ಕನರ್ಾಟಕದ ಕುರಿತಂತೆ ಪ್ರಶ್ನೆ ಕೇಳಿಕೊಂಡು ನೋಡಿ. ತಮಿಳುನಾಡಿನಲ್ಲಿ ಬಟ್ಟೆಗೆಂದೇ ತಿರುಪುರ್, ಪಟಾಕಿಗೆಂದೇ ಶಿವಕಾಶಿ ಇರುವಂತೆ ನಮ್ಮಲ್ಲಿರುವ ವಿಶೇಷ ನಗರಗಳನ್ನು ಹೆಸರಿಸಿ ನೋಡೋಣ. ಬೆಂಗಳೂರು ಹುಬ್ಬಳ್ಳಿ ನಡುವೆ ದಾವಣಗೆರೆ-ಚಿತ್ರದುರ್ಗಗಳಿವೆಯಲ್ಲ ಅದನ್ನು ಬೆಂಗಳೂರಿನ ಐಟಿ ಹೊರೆ ಇಳಿಸಲು ಬಳಸಬಹುದಿತ್ತಲ್ಲ ಸಕರ್ಾರಗಳು. ಬೆಂಗಳೂರು ಕೇಂದ್ರಿತ ಕನರ್ಾಟಕದ ವಿಕಾಸದ ಮಾಡೆಲ್ಲು ಮುರಿದು ಬೀಳಲು ಇನ್ನು ನಾಲ್ಕಾರು ವರ್ಷ ಸಾಕಷ್ಟೇ.

ದೆಹಲಿಯ ಪರಿಸ್ಥಿತಿ ಬಲು ಭಯಾನಕವಾಗಿದೆ. ದೀಪಾವಳಿಗೆ ಅಲ್ಲಿ ಪಟಾಕಿಗಳನ್ನು ನಿಷೇಧಿಸಿದ್ದು ಒಳ್ಳೆಯದೇ ಆಯ್ತು. ಇಲ್ಲವಾದರೆ ಎಲ್ಲ ಬುದ್ಧಿಜೀವಿಗಳಿಗೆ ಹಿಂದೂ ಧರ್ಮವನ್ನು ವಿರೋಧಿಸಲು ಒಂದು ಅಸ್ತ್ರ ದೊರೆತಂತಾಗುತ್ತಿತ್ತು. ವಿಕಾಸದ ನಾಗಾಲೋಟದಲ್ಲಿ ಓಡುತ್ತಿರುವ ಭಾರತಕ್ಕೆ ದೆಹಲಿ ರಾಜಧಾನಿ ಎಂದು ಹೇಳಿಕೊಳ್ಳುವುದೇ ಕಷ್ಟವೆನಿಸುವ ಪರಿಸ್ಥಿತಿ ಈಗ. ದೂರದ ದೆಹಲಿ ಮಾತ್ರ ಹೀಗೆ ಎಂದು ಕೊಳ್ಳಬೇಡಿ. ಈ ಪರಿಸ್ಥಿಗೆ ನಾವೂ ಹೊರತಲ್ಲ ಎನ್ನುತ್ತದೆ ಇಂಡಿಯನ್ ಇನ್ಸ್ಟಿಟ್ಯೂಟ್ನ ಅಧ್ಯಯನ. ಕಳೆದ ವರ್ಷ ಅಲ್ಲಿನ ಪ್ರೊಫೆಸರ್ ಟಿವಿ ರಾಮಚಂದ್ರ ಮುಂದಿನ ಐದು ವರ್ಷಗಳಲ್ಲಿ ಬೆಂಗಳೂರು ಬದುಕಲು ಯೋಗ್ಯವಲ್ಲದ ನಗರವಾಗಿ ಮಾರ್ಪಡುತ್ತದೆ ಎಂದು ಎಚ್ಚರಿಸಿದ್ದರು. ಸಮುದ್ರ ಮಟ್ಟದಿಂದ ಮೂರು ಸಾವಿರ ಅಡಿ ಮೇಲಿರುವ ಬೆಂಗಳೂರು ಏರ್ಕಂಡಿಶನ್ ನಗರವೆಂದೇ ಖ್ಯಾತವಾಗಿತ್ತು. ಒಂದು ಕಾಲದಲ್ಲಿ ಉದ್ಯಾನ ನಗರಿ ಎಂದು ಬಿರುದಾಂಕಿತ ಬೆಂಗಳೂರು ಅದಾಗಲೇ ಶೇಕಡಾ ಎಂಭತ್ತರಷ್ಟು ಹಸಿರನ್ನು ಕಳೆದುಕೊಂಡು ಬರಡಾಗಿಬಿಟ್ಟಿದೆ. ಕೆರೆಗಳ ಆಗರವಾಗಿದ್ದ ಬೆಂಗಳೂರಿನಲ್ಲಿ ನದಿಯೂ ಹರಿಯುತ್ತಿದ್ದ ಕಾಲವಿತ್ತು. ಇಂದು ಮುಕ್ಕಾಲು ಭಾಗದಷ್ಟು ನೀರಿನ ಸ್ರೋತಗಳು ಧನದಾಹಿಗಳಿಗೆ ಆಹಾರವಾಗಿಬಿಟ್ಟಿದೆ. ಬೆಳೆದು ನಿಂತ ಈ ನಗರಕ್ಕೆ ಕುಡಿಯುವ ನೀರೂ ನೂರು ಕಿಮೀ ದೂರದ ಕಾವೇರಿಯಿಂದ ಪೈಪುಗಳಲ್ಲಿ ಬರಬೇಕು. ಅಕಸ್ಮಾತ್ ಕಾವೇರಿ ಸೊರಗಿದರೆ ಬೆಂಗಳೂರು ಒಣಗಿಯೇ ಹೋಗುತ್ತದೆ!

1

ಎಲ್ಲ ಪರಿಸರವಾದಿಗಳ ಆರೋಪ ಬೆಂಗಳೂರಿನ ಅಭಿವೃದ್ಧಿಯತ್ತ ಬೆರಳು ಮಾಡುತ್ತದೆ. ಕಳೆದ ನಾಲ್ಕು ದಶಕಗಳಲ್ಲಿ ಬೆಂಗಳೂರಿನ ಅಭಿವೃದ್ಧಿ ಐದುನೂರು ಪಟ್ಟಾದರೂ ವೃದ್ಧಿಸಿದೆ. ಮಾಹಿತಿತಂತ್ರಜ್ಞಾನದ ಕ್ರಾಂತಿಗೆ ಬೆಂಗಳೂರು ಪ್ರತಿಸ್ಪಂದಿಸಿದ ರೀತಿಯಿಂದಾಗಿ ಇಂದು ಜಗತ್ತಿನ ಯಾವ ಮೂಲೆಗೆ ಹೋದರೂ ಬೆಂಗಳೂರು ಪ್ರತಿಯೊಬ್ಬರಿಗೂ ಗೊತ್ತಿರುವಂತಹ ನಗರವಾಗಿ ಮಾರ್ಪಟ್ಟಿದೆ. ಬ್ರ್ಯಾಂಡ್ ಬೆಂಗಳುರಿಗೆ ಸಾಕಷ್ಟು ಗೌರವವಿದೆ. ಇದರ ಬಹುಪಾಲು ಶ್ರೇಯ ಐಟಿ-ಬಿಟಿಗೇ ಸಲ್ಲಬೇಕು. ದೇಶದ ಎಲ್ಲೆಡೆಯಿಂದ ಕಾಮರ್ಿಕರನ್ನು, ಉದ್ಯೋಗಿಗಳನ್ನೂ ಆಕಷರ್ಿಸುವಲ್ಲಿ ಅದರ ಪಾತ್ರ ಬಲು ದೊಡ್ಡದ್ದು. ಆದರೆ ಅದೇ ಬೆಂಗಳೂರಿಗೆ ಶಾಪವೂ ಹೌದು. ಜಾಗತಿಕ ಲಕ್ಷ್ಯಕ್ಕೆ ತಕ್ಕಂತೆ ಬೆಂಗಳೂರನ್ನು ರೂಪಿಸುವಲ್ಲಿ ಸೋತು ಹೋಗಿದ್ದೇವೆ ನಾವು. ಸತತ ಎರಡನೇ ಬಾರಿ ಜಾಗತಿಕ ಹೂಡಿಕೆಯನ್ನು ಆಕಷರ್ಿಸುವ ರಾಜ್ಯಗಳಲ್ಲಿ ನಾವು ನಂಬರ್ ಒನ್ ಪಟ್ಟ ಅಲಂಕರಿಸಿದ್ದೇವೆ. ದೇಶದಲ್ಲಿ ಹೂಡಿಕೆಗೆ ಸಿಕ್ಕ ಅಶ್ವಾಸನೆಯ ಸುಮಾರು ಅರ್ಧ ಭಾಗ ಕನರ್ಾಟಕಕ್ಕೇ. ಹೀಗೆ ಕನರ್ಾಟಕಕ್ಕೆ ಬಂದ ಆಶ್ವಾಸನೆಯ ದೊಡ್ಡ ಭಾಗ ಬೆಂಗಳೂರಿಗೇ ಬಂದಿರೋದು! ವಿಕಾಸ ಒಂದೆಡೆ ಕೇಂದ್ರೀಕೃತವಾಗೋದು ರಾಜ್ಯವೊಂದರ ಪಾಲಿಗೆ ಬಲು ದೊಡ್ಡ ಹೊಡೆತ. ಎರಡನೇ ಮತ್ತು ಮೂರನೇ ಹಂತದ ನಗರಗಳನ್ನು ಸೂಕ್ತವಾಗಿ ಬೆಳೆಸದ ಯಾವ ರಾಜ್ಯಗಳೂ ಸಮ ಪ್ರಮಾಣದ ಅಭಿವೃದ್ಧಿ ಸಾಧಿಸುವುದು ಅಸಾಧ್ಯದ ಮಾತೇ ಸರಿ. ಹಾಗೆ ರಾಜಧಾನಿಯೊಂದಿಗೆ ಇತರೆ ನಗರಗಳ ಅಭಿವೃದ್ಧಿ ಸೂಕ್ತವಾಗಿ ಆಗಿರೋದು ಗುಜರಾತಿನಲ್ಲಿಯೇ. ಮಹಾರಾಷ್ಟ್ರದಲ್ಲೂ ಪೂಣೆ, ಕೊಲ್ಲಾಪುರಗಳು ಸ್ವಲ್ಪ ಬೆಳೆದಿವೆಯಾದರೂ ಮುಂಬೈಗೆ ಸಂವಾದಿಯಾಗಲಾರವು. ಅವಿಭಜಿತ ಆಂದ್ರದಲ್ಲಿ ಕರಾವಳಿ ಭಾಗದಲ್ಲಿ ಒಂದಷ್ಟು ಅಭಿವೃದ್ಧಿಗೆ ಪೂರಕ ಅವಕಾಶ ನಿಮರ್ಿಸುವ ಪ್ರಯತ್ನ ಮಾಡಲಾಗಿತ್ತು. ಹಾಗೇ ಸುಮ್ಮನೆ ಕನರ್ಾಟಕದ ಕುರಿತಂತೆ ಪ್ರಶ್ನೆ ಕೇಳಿಕೊಂಡು ನೋಡಿ. ತಮಿಳುನಾಡಿನಲ್ಲಿ ಬಟ್ಟೆಗೆಂದೇ ತಿರುಪುರ್, ಪಟಾಕಿಗೆಂದೇ ಶಿವಕಾಶಿ ಇರುವಂತೆ ನಮ್ಮಲ್ಲಿರುವ ವಿಶೇಷ ನಗರಗಳನ್ನು ಹೆಸರಿಸಿ ನೋಡೋಣ. ಮೈಸೂರನ್ನು ಜನ ನೋಡಲೆಂದು ಬರುತ್ತಾರೆ ನಿಜ ಆದರೆ ವ್ಯಾಪಾರಿಗಳು ಹುಡುಕಿಕೊಂಡು ಬರುವಂತಹದ್ದೇನನ್ನಾದರೂ ಅಲ್ಲಿ ಸೃಷ್ಟಿಸಲು ಸಾಧ್ಯವಾಗಿದೆಯಾ? ಹುಬ್ಬಳ್ಳಿಯನ್ನು ನಾವೊಂದು ಮುದ್ರಣ ಕ್ಷೇತ್ರದ ಮಹಾನಗರವಾಗಿ ಬೆಳೆಸಲು ಸಾಧ್ಯವಾಗಿದೆಯಾ? ಒಂದು ಕಾಲದಲ್ಲಿ ಹತ್ತಾರು ಪ್ರಕಾಶನ ಕ್ಷೇತ್ರಗಳು ಕ್ರಿಯಾಶೀಲವಾಗಿದ್ದ ಜಾಗವದು. ಮಂಗಳೂರಿನಲ್ಲಿ ಬಂದರು ಇದೆಯಲ್ಲ ಅದನ್ನು ಎಲ್ಲಿಂದಲೋ ತಂದ ವಸ್ತುಗಳನ್ನು ರಫ್ತು ಮಾಡಲು ಬಳಸುತ್ತಿದ್ದೇವೆಯೇ ಹೊರತು ಸುತ್ತಮುತ್ತಲೆಲ್ಲಾದರೂ ಉತ್ಪಾದನಾ ಕ್ಷೇತ್ರಗಳನ್ನು ತೆರೆದು ಜಾಗತಿಕ ಮಾರುಕಟ್ಟೆಯನ್ನು ಹುಡುಕಿಕೊಳ್ಳಲಾಗಲಿಲ್ಲವಲ್ಲ ಏಕೆ? ಹಾಗೆ ಸುಮ್ಮನೆ ನಾನಂದುಕೊಳ್ಳೋದು. ಹಾಡರ್್ವೇರ್ ಕ್ಷೇತ್ರದಲ್ಲಿ ಬಹಳ ಹಿಂದುಳಿದಿರುವ ಭಾರತದ ಕೊರತೆ ನೀಗಿಸಲು ಬುದ್ಧಿವಂತರ ನಾಡಾದ ಕನರ್ಾಟಕ ಒಂದು ಹೆಜ್ಜೆ ಮುಂದಿಡಬಹುದಿತ್ತು. ಉಡುಪಿ, ಮಂಗಳೂರಿನ ನಡುವೆ ಜಗತ್ತನ್ನು ಆಹ್ವಾನಿಸುವ ವಿಸ್ತಾರವಾದ ಹಾಡರ್್ವೇರ್ ಪಾಕರ್್ನ ಕನಸು ಕಟ್ಟಬಹುದಿತ್ತೇನೋ? ನಮಗಿರುವ ಮಂಗಳೂರಿನ ಬಂದರನ್ನು ಸರಿಯಾಗಿ ಬಳಸಿಕೊಂಡರೆ ಜಗತ್ತಿನ ಮುಕ್ಕಾಲು ಭಾಗವನ್ನು ಚೀನಾಕ್ಕಿಂತ ಮೊದಲು ಮುಟ್ಟಬಹುದು. ನೆನಪಿಡಿ, ಚೀನಾ ಜಗತ್ತನ್ನು ತಲುಪುವ ವೇಗ ಹೆಚ್ಚಿಸಿಕೊಳ್ಳಲೆಂದೇ ಪಾಕೀಸ್ತಾನದ ಮೂಲಕ ರಸ್ತೆ ಹುಡುಕುತ್ತಿರೋದು. ನಮಗೆ ಅನಾಯಾಸವಾಗಿ ಸಿಕ್ಕಿರುವ ಲಾಭ ಸಮುದ್ರ ಮಾರ್ಗ. ಅದನ್ನು ಬಳಸಿಕೊಂಡೇ ಇಲ್ಲವಲ್ಲ. ಬೆಂಗಳೂರು ಹುಬ್ಬಳ್ಳಿ ನಡುವೆ ದಾವಣಗೆರೆ-ಚಿತ್ರದುರ್ಗಗಳಿವೆಯಲ್ಲ ಅದನ್ನು ಬೆಂಗಳೂರಿನ ಐಟಿ ಹೊರೆ ಇಳಿಸಲು ಬಳಸಬಹುದಿತ್ತಲ್ಲ ಸಕರ್ಾರಗಳು. ಆಗ ಬೆಂಗಳೂರು ಅನಗತ್ಯವಾಗಿ ಬೆಳೆಯುವುದು ತಪ್ಪುತ್ತಿತ್ತು, ಜೊತೆಗೆ ಕನರ್ಾಟಕದ ಮಧ್ಯಭಾಗದಲ್ಲಿ ಬೆಳವಣಿಗೆ ಶುರುವಾಗಿದ್ದರೆ ಒಂದೆಡೆ ಶಿವಮೊಗ್ಗ, ಮತ್ತೊಂದೆಡೆ ಬಳ್ಳಾರಿಯವರೆಗಿನ ಉದ್ಯೋಗಾಕಾಂಕ್ಷಿಗಳಿಗೆ ಲಾಭವಾಗಿರುತ್ತಿತ್ತು.

ಬೆಂಗಳೂರು ಕೇಂದ್ರಿತ ಕನರ್ಾಟಕದ ವಿಕಾಸದ ಮಾಡೆಲ್ಲು ಮುರಿದು ಬೀಳಲು ಇನ್ನು ನಾಲ್ಕಾರು ವರ್ಷ ಸಾಕಷ್ಟೇ. ಅಷ್ಟರೊಳಗೆ ನಾವು ಇತರೆ ನಗರಗಳನ್ನು ಓಟದಲ್ಲಿ ಗೆಲ್ಲುವುದಕ್ಕೆ ಸಿದ್ಧ ಮಾಡಲೇಬೇಕು. ಅದು ಸಾಕಾರಗೊಳ್ಳಲು ನಾವು ರೂಪಿಸಲೇಬೇಕಾಗಿರುವ ಮಹತ್ವದ ಅಡಿಪಾಯ ಮೂಲಸೌಕರ್ಯದ್ದೇ. ಓಡಾಟಕ್ಕೆ ಅನುಕೂಲ, ಸದಾ ವಿದ್ಯುತ್ತು, ಶುದ್ಧ ನೀರು, ಪರಿಶುದ್ಧ ಆಹಾರ, ಶಿಕ್ಷಣ, ಆರೋಗ್ಯ ಇವೆಲ್ಲವನ್ನೂ ಒದಗಿಸಿಕೊಟ್ಟರೆ ಎಂತಹ ಉತ್ಪಾದಕ ಕಂಪನಿಗಳೂ ಧಾವಿಸಿ ಬರಬಲ್ಲವು. ಇದರೊಟ್ಟಿಗೆ ಕೌಶಲವುಳ್ಳ ಕಾಮರ್ಿಕರನ್ನು ಒದಗಿಸಿಕೊಟ್ಟರಂತೂ ಕಂಪನಿಗಳಿಗೆ ಹಬ್ಬ. ನಮ್ಮ ಬಳಿ ಏನಿಲ್ಲ ಹೇಳಿ? ಜನಸಂಖ್ಯೆ ಸಾಕಷ್ಟಿರುವುದರಿಂದ ನಮ್ಮಲ್ಲಿ ಕಡಿಮೆ ಬೆಲೆಗೆ ದುಡಿಯಬಲ್ಲ ಕುಶಲ ಶ್ರಮಿಕ ವರ್ಗ ದೊರೆಯುತ್ತದೆ. ನಿಸ್ಸಂಶಯವಾಗಿ ಈ ವಿಚಾರದಲ್ಲಿ ನಾವು ಚೀನಾವನ್ನು ಹಿಂದಿಕ್ಕಬಲ್ಲೆವು. ಇನ್ನು ಶಿಕ್ಷಣ, ಆರೋಗ್ಯಗಳ ವಿಚಾರದಲ್ಲಿ ನಾವು ಸಕರ್ಾರೇತರವಾಗಿ ವಿಕ್ರಮವನ್ನೇ ಸಾಧಿಸಿದ್ದೇವೆ. ಕೇಂದ್ರ ಸಕರ್ಾರದ ಅವಿರತ ಪ್ರಯತ್ನದಿಂದಾಗಿ ವಿದ್ಯುತ್ತಿಗೆ ಈಗ ಕೊರತೆಯಿಲ್ಲ. ಇನ್ನು ನೀರು ಮತ್ತು ಓಡಾಟಕ್ಕೆ ಬೇಕಾದ ಅನುಕೂಲವನ್ನು ಸಮರ್ಪಕಗೊಳಿಸಬೇಕಷ್ಟೇ.

2

ಕನರ್ಾಟಕದ ವಿಚಾರಕ್ಕೆ ಬಂದರೆ ನಮ್ಮ ರಸ್ತೆಗಳ ಪರಿಸ್ಥಿತಿ ಬಲು ಗಂಭಿರ. ಬೇರೆ ನಗರಗಳ ಕಥೆ ಬಿಡಿ, ಸ್ವತಃ ಬೆಂಗಳೂರಿನ ರಸ್ತೆಗಳೇ ಈ ಬಾರಿ ಮಳೆಗೆ ಕೊಚ್ಚಿ ಹೋದವು. ರಾಜಧಾನಿಯಿಂದ ಇತರೆಡೆಗೆ ಸಂಪಕರ್ಿಸುವ ರಸ್ತೆಗಳ ಪರಿಸ್ಥಿತಿ ಕೇಳಲೇಬೇಡಿ. ಮಂಗಳೂರಿಗೆ ಶಿರಾಡಿ ಘಾಟಿನ ಮೂಲಕ ಬರುವುದೆಂದರೆ ಜೀವವನ್ನೇ ಕೈಲಿ ಹಿಡಿದುಕೊಂಡಂತೆ. ಮಂಗಳೂರು ಸೇರಿಕೊಂಡ ನಂತರ ಒಂದಿಡೀ ದಿನ ದೇಹದ ಬೋಲ್ಟು-ನಟ್ಟುಗಳನ್ನು ಸರಿಪಡಿಸಿಕೊಳ್ಳಲೇ ಬೇಕು. ಹುಬ್ಬಳ್ಳಿ-ಬೆಳಗಾವಿಯೆಡೆಗಿನ ರಸ್ತೆ ಚೆನ್ನಾಗಿರುವುದು ನಿಜವಾದ ರೂಟೋಲ್ ಬೂತ್ಗಳಲ್ಲಿಯೇ ಉಳಿಸಿದ ಸಮಯವೆಲ್ಲ ಖಚರ್ಾಗಿ ಬಿಡುತ್ತದೆ. ಐಟಿ ಕೇಂದ್ರವಾಗಿರುವ ಕನರ್ಾಟಕದಲ್ಲಿ ಗಾಡಿಗಳಿಗೆ ಟ್ಯಾಗ್ ಅಳವಡಿಸುವ ತೀವ್ರಗತಿಯ ಆಲೋಚನೆ ಬಂದಿಲ್ಲವೆನ್ನೋದು ಆಶ್ಚರ್ಯ. ಇದನ್ನು ಕೇಂದ್ರದ ವ್ಯಾಪ್ತಿಯೆಂದು ತಳ್ಳಿಹಾಕಿಬಿಡಬೇಕಿಲ್ಲ. ನಮ್ಮ ರಾಜ್ಯದ ವೇಗಕ್ಕೆ ತಕ್ಕಂತೆ ನಾವು ಸೌಕರ್ಯಗಳನ್ನು ವೃದ್ಧಿ ಪಡಿಸಿಕೊಳ್ಳಲಿಲ್ಲವೆಂದರೆ ಓಟದಲ್ಲಿ ಹಿಂದುಳಿಯುವುದು ನಾವೇ. ಜಗತ್ತಿನ ಮುಂದುವರಿದ ರಾಷ್ಟ್ರಗಳ ರಸ್ತೆಗಳು ಅಂತರಾಷ್ಟ್ರೀಯ ಮಟ್ಟಕ್ಕಿವೆ. ಜನ ರಸ್ತೆ ನಿಯಮಗಳನ್ನು ಸೂಕ್ತವಾಗಿ ಅನುಸರಿಸುವುದರಿಂದ ಎಲ್ಲಿಯೂ ಕಿರಿಕಿರಿಯಿಲ್ಲ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾಗಳಲ್ಲೆಲ್ಲ ಜನ ಓಡಾಟಕ್ಕೆ ರಸ್ತೆ ಬಳಸುವುದಕ್ಕಿಂತ ವಿಮಾನಗಳನ್ನು ನೆಚ್ಚಿಕೊಳ್ಳುವುದೇ ಹೆಚ್ಚು. ಆಸ್ಟ್ರೇಲಿಯಾದಲ್ಲಿ ಒಂದು ನಗರದಿಂದ ಮತ್ತೊಂದು ನಗರಕ್ಕೆ ಬಸ್ಸಿಗಿಂತ ಕಡಿಮೆ ಖಚರ್ಿನಲ್ಲಿ ವಿಮಾನಗಳು ಸಂಚರಿಸುವಂತೆ ವ್ಯವಸ್ಥೆ ರೂಪಿಸಲಾಗಿದೆ. ದಿನವಿಡೀ ಸಂಚರಿಸುವ ರೈಲು, ರಾತ್ರಿಯಿಡೀ ಸಂಚರಿಸುವ ಬಸ್ಸುಗಳು ಜಗತ್ತಿನಿಂದ ಅದಾಗಲೇ ಕಾಣೆಯಾಗಿವೆ. ಒಂದೋ ರೈಲಿಗೆ ಬಲುವಾದ ವೇಗ ಬಂದಿದೆ ಅಥವಾ ಬಲುವೇಗದ ಕಾರುಗಳು ಚಲಿಸುವಂತಹ ರಸ್ತೆ ನಿಮರ್ಾಣಗೊಂಡಿದೆ. ನಾವಿನ್ನೂ ಪ್ರತಿವರ್ಷ ಶಿರಾಡಿ ಘಾಟನ್ನು ಎರಡು ತಿಂಗಳು ಮುಚ್ಚಿ ರಿಪೇರಿಗೆ ತೊಡಗುತ್ತೇವೆ!

ಕನರ್ಾಟಕ ಆಕಾಶ ಮಾರ್ಗವನ್ನು ಬಲು ಆಸ್ಥೆಯಿಂದ ಗಮನಿಸಬೇಕಾದ ಹೊತ್ತು ಈಗ ಬಂದಿದೆ. ಅದಕ್ಕೆ ಕಾರಣವೂ ಇದೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಂತದರ್ೇಶೀಯ ಪ್ರಯಾಣಿಕರ ಸಂಖ್ಯೆಶೇಕಡಾ ಹನ್ನೊಂದರಷ್ಟು ಹೆಚ್ಚಿದೆ. ಕಳೆದ ವರ್ಷ ಈ ಹೊತ್ತಿಗೆ ಆರುವರೆಕೋಟಿಯಷ್ಟು ಜನ ವಿಮಾನ ಪ್ರಯಾಣ ಮಾಡಿದ್ದರೆ ಈ ವರ್ಷ ಅದು ಏಳೂವರೆ ಕೋಟಿದಾಟಿದೆ. ವಸ್ತುಗಳ ಸಾಗಾಣಿಕೆಯೂ ಇದೇ ಪ್ರಮಾಣದ ಹೆಚ್ಚಳ ತೋರಿಸಿರುವುದು ಭವಿಷ್ಯದಲ್ಲಿ ಆಮದು-ರಫ್ತು ಆಕಾಶ ಮಾರ್ಗದಲ್ಲಿಯೇ ಹೆಚ್ಚುತ್ತಿರುವುದರ ಸಂಕೇತವಾಗಿದೆ. ಕಳೆದ ವರ್ಷ 395 ವಿಮಾನಗಳು ಓಡಾಟ ನಡೆಸಿದ್ದರೆ ಈ ವರ್ಷಅದಾಗಲೇ 496 ವಿಮಾನಗಳು ಕಾರ್ಯಕ್ಷೇತ್ರಕ್ಕಿಳಿದಿವೆ. ಕಳೆದ ಹದಿನೇಳು ವರ್ಷಗಳಲ್ಲಿ ವಿದೇಶೀ ನೇರ ಹೂಡಿಕೆ ಈ ಕ್ಷೇತ್ರದಲ್ಲಿ ಒಂದು ಶತಕೋಟಿ ಡಾಲರುಗಳನ್ನು ದಾಟಿದೆ. ಅಂತರಾಷ್ಟ್ರೀಯ ಸಂಸ್ಥೆಗಳ ಅಧ್ಯಯನದ ಪ್ರಕಾರ ಮುಂದಿನ ಒಂದು ದಶಕದಲ್ಲಿ ಈ ಕ್ಷೇತ್ರದಲ್ಲಿ 25 ಶತಕೋಟಿ ಡಾಲರುಗಳಷ್ಟು ಹೂಡಿಕೆಯಾಗಲಿದೆ. ಆಕಾಶಯಾನದ ಟ್ರಾಫಿಕ್ಕು ಕನಿಷ್ಠ ಶೇಕಡಾ ಹದಿನಾರರಷ್ಟು ಏರಿಕೆಯಾಗಲಿದೆ.

4

ಇವಿಷ್ಟೂ ಭಾರತದ ಕಥೆಯಾದರೆ ಜಗತ್ತಿನಾದ್ಯಂತ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸುವಲ್ಲಿ ತಂತ್ರಜ್ಞಾನದ ಬಳಕೆಗೆ ವಿಶೇಷ ಆಸ್ಥೆ ವಹಿಸಲಾಗುತ್ತಿದೆ. ನಮ್ಮ ಸಿವಿಲ್ ಮತ್ತು ಮಾಹಿತಿ ಇಂಜಿನಿಯರುಗಳು ಹೊಸ ಕಲ್ಪನೆಗಳನ್ನು ಹೊತ್ತು ತಂದು ಮಾದರಿಗಳನ್ನು ನಿಮರ್ಿಸಿದ್ದೇ ಆದರೆ ಅದಕ್ಕೆ ಬಲುವಾದ ಬೇಡಿಕೆ ಬರುವ ಸಾಧ್ಯತೆ ಇದೆ. ವಾತಾವರಣ ರೂಪಿಸಿಕೊಡಬೇಕಷ್ಟೇ. ನಾವೀಗ ಭವಿಷ್ಯವನ್ನು ಊಹಿಸಿ ಮುಂದಡಿಯಿಡಬೇಕು. ಪ್ರಧಾನಿ ನರೇಂದ್ರ ಮೋದಿಯವರು ಗೆಲ್ಲುವುದು ಅಲ್ಲೇ. ಅದಾಗಲೇ ಏರ್ಪೋಟರ್್ ಅಥಾರಿಟಿ ಆಫ್ ಇಂಡಿಯಾ ಲಖ್ನೌ, ದೇವ್ಘರ್, ರಾಜ್ಕೋಟ್, ಪ್ರಯಾಗದ ವಿಮಾನ ನಿಲ್ದಾಣಗಳನ್ನು ಉತ್ಕೃಷ್ಟ ದಜರ್ೆಗೇರಿಸುವ ಯೋಜನೆ ರೂಪಿಸಿದೆ. ಪ್ರಯಾಗಕ್ಕೆ ಹರಿದು ಬರಲಿರುವುದು ಸುಮಾರು ಸಾವಿರದಿನ್ನೂರುಕೋಟಿ ರೂಪಾಯಿ. ವರ್ಷಕ್ಕೆ ಸುಮಾರು ಅರವತ್ತೈದು ಲಕ್ಷ ಪ್ರಯಾಣಿಕರನ್ನು ನಿರ್ವಹಣೆ ಮಾಡಬಲ್ಲ ಸಾಮಥ್ರ್ಯ ಬರಲಿದೆ ಆ ನಿಲ್ದಾಣಕ್ಕೆ. ಇಲ್ಲಿಯೇ ಕುಂಭಮೇಳಕ್ಕೂ ಮುನ್ನ ನೂರಿಪ್ಪತ್ತೈದುಕೋಟಿ ವೆಚ್ಚದಲ್ಲಿ ಸ್ಥಳೀಯ ನಿಲ್ದಾಣವೊಂದನ್ನು ನಿಮರ್ಿಸಿ ಅಂತದರ್ೇಶೀಯ ಓಡಾಟಕ್ಕೆ ಅನುಕೂಲ ಕಲ್ಪಿಸುವ ಯೋಜನೆ ಭರದಿಂದ ನಡೆಯುತ್ತಿದೆ. ಇಂಫಾಲದ ವಿಮಾನ ನಿಲ್ದಾಣಕ್ಕೆ ಹಣ ಹೂಡಿ ವಸ್ತು ಸಾಗಾಣಿಕೆಯ ಸಾಮಥ್ರ್ಯ ಹೆಚ್ಚಿಸುವ ಯೋಜನೆ ಹಾಕಿಕೊಂಡಿದೆ. ಇದು ಆಸಿಯಾನ್ ರಾಷ್ಟ್ರಗಳೊಂದಿಗೆ ನಮ್ಮ ವ್ಯಾಪಾರ ಸಂಬಂಧ ವೃದ್ಧಿಸುವಲ್ಲಿ ಸಹಕಾರಿಯಾಗಲಿದೆ.

ನಾವೀಗ ಕ್ರಿಯಾಶೀಲರಾಗಬೇಕು. ನಮ್ಮ ಕುಶಲಕಮರ್ಿಗಳು, ವ್ಯಾಪಾರಿಗಳು, ಕಲಾವಿದರು, ಯಾತ್ರಿಕರು ಮತ್ತು ಸಾಮಾನ್ಯ ಜನರೂ ಕೂಡ ದಿನಗಟ್ಟಲೆ ಮಾರ್ಗದಲ್ಲಿ ಕಳೆಯುವ ಬದಲು ಕಡಿಮೆ ವೆಚ್ಚದಲ್ಲಿ ವೇಗವಾಗಿ ಗಮ್ಯ ತಲುಪಿ ಕೆಲಸ ಮುಗಿಸಿಕೊಂಡು ಮರಳಿ ಬಂದುಬಿಡಬೇಕು. ವಾರಾಂತ್ಯ ಸಿಕ್ಕರೆ ಸಾಕೆಂದು ನಮ್ಮವರೆಲ್ಲ ಹಪಹಪಿಸುವುದು ಏಕೆ ಗೊತ್ತೇನು? ಪ್ರಯಾಣದ ಅವಧಿಯನ್ನು ಸರಿದೂಗಿಸಲು ಎರಡು ದಿನ ರಜೆಯೇ ಬೇಕೆಂಬುದು ಅವರಿಗೆ ಗೊತ್ತು. ಈ ಸ್ಥಿತಿಯನ್ನು ಬದಲಾಯಿಸುವ ಸಮಯ ಈಗ. ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಮತ್ತು ಕಲ್ಬುಗರ್ಿ-ಬೀದರುಗಳಲ್ಲಿ ವಾಯುಯಾನಕ್ಕೆ ಸಂಬಂಧಿಸಿದ ಮೂಲ ಸೌಕರ್ಯವನ್ನು ಅಭಿವೃದ್ಧಿಗೈಯ್ಯಲು ಕೇಂದ್ರ ಸಕರ್ಾರವನ್ನು ಒತ್ತಾಯಿಸಲು ಶುರುಮಾಡಬೇಕು. ಅದೇ ಸಮಯಕ್ಕೆ ಅಂತರಾಷ್ಟ್ರೀಯ ಹೂಡಿಕೆ ಸಮಾವೇಶಗಳಲ್ಲಿ ನಮ್ಮ ದ್ವಿತೀಯ ಮತ್ತು ತೃತೀಯ ಹಂತದ ನಗರಗಳನ್ನು ಪರಿಚಯಿಸಿ ಅಲ್ಲಿಗೆ ಬೃಹತ್ ಹೂಡಿಕೆದಾರರು ಬರುವಂತೆ ಪೂರ್ಣ ಪ್ರಮಾಣದ ಪ್ರಯತ್ನ ಹಾಕಬೇಕು. ಹ್ಞಾಂ! ಭ್ರಷ್ಟಾಚಾರವಿಲ್ಲದ ಸ್ವಚ್ಛ ಆಡಳಿತ ಮೊದಲ ಗುರಿಯಾಗಬೇಕು. ಆಗ ಮಾತ್ರ ಹೂಡಿಕೆದಾರರು ಧಾವಿಸಿ ಬರುತ್ತಾರೆ. ನೀತಿ ಆಯೋಗದ ವರದಿಯ ಪ್ರಕಾರ ವ್ಯಾಪಾರಗೈಯ್ಯುವಲ್ಲಿ ಸುಲಭಗೊಳಿಸುವ ವಾತಾವರಣದ ನಮ್ಮ ಸೂಚ್ಯಂಕ ಇಳಿಕೆ ಕಂಡಿದೆ. ಕಳೆದ ವರ್ಷ ಇದ್ದ ಒಂಭತ್ತನೇ ಸ್ಥಾನ ಕಳೆದುಕೊಂಡು ಈಗ ಹದಿಮೂರನೇ ಸ್ಥಾನಕ್ಕೆ ಕುಸಿದಿದ್ದೇವೆ. ಹೀಗಾಗಿ ಹೂಡಿಕೆಯ ಭರವಸೆ ಕೊಟ್ಟಿರುವವರು ಹೂಡಿಕೆ ಮಾಡಬಹುದೆಂಬ ವಿಶ್ವಾಸವೇನೂ ಇಲ್ಲ.

5

ನಾವೀಗ ಆಲೋಚನಾ ದಿಸೆಯನ್ನು ಬದಲಾಯಿಸಬೇಕಿದೆ. ಬೆಂಗಳೂರು ನಗರಕ್ಕೆ ಹತ್ತಿರವಿರುವಂತೆ ಮೆಟ್ರೋ ಕೊನೆಯಾಗುವ ಕಡೆ ಅಂತದರ್ೇಶೀಯ ವಿಮಾನ ನಿಲ್ದಾಣ ನಿಮರ್ಿಸಬೇಕಿದೆ. ಮೆಟ್ರೋದಲ್ಲಿ ಅಲ್ಲಿಗೆ ಬಂದು ಒಂದು ಗಂಟೆಯೊಳಗೆ ಮಂಗಳೂರಿಗೋ, ಹುಬ್ಬಳ್ಳಿಗೋ ಹೋಗುವಂತಹ ವಾತಾವರಣ ರೂಪಿಸಬೇಕಿದೆ. ಹಾಗೇನಾದರೂ ಆದರೆ ಈಗಿನ ಲೆಕ್ಕಾಚಾರದ ಪ್ರಕಾರ ಬೆಂಗಳೂರಿಂದ ಹೊರಗೆ ನೆಲಮಂಗಲ ಸೇರಿಕೊಳ್ಳುವ ಮುನ್ನ ನಾವು ಮಂಗಳೂರನ್ನು ತಲುಪಿಬಿಡಬಹುದು. ತುಮಕೂರಿಗೆ ತಲುಪುವ ಸಮಯದೊಳಗೆ ಬೀದರ್, ಗುಲ್ಬಗರ್ಾಗಳನ್ನೇ ಸೇರಿಕೊಂಡುಬಿಡಬಹುದು. ಪ್ರಯಾಸ ಸ್ವಲ್ಪ ಯಶಸ್ವಿಯಾದರೆ ಈಗಿನ ವಿಮಾನ ನಿಲ್ದಾಣ ಸೇರಿಕೊಂಡು ವಿಮಾನ ಹತ್ತುವುದರೊಳಗೆ ಮುಂಬೈ ತಲುಪಿಕೊಂಡರೂ ಅಚ್ಚರಿಯಿಲ್ಲ. ಇಂದಿನ ದಿನ ಮಾನದ ಪ್ರಮುಖ ಸಂಗತಿಯೇ ವೇಗ. ಮಾಡಬೇಕೆಂದಿರುವ ಕೆಲಸವನ್ನು ಆದಷ್ಟು ಬೇಗ ಮುಗಿಸಿ ಹೊಸದೊಂದು ಕೆಲಸಕ್ಕೆ ಸಿದ್ಧರಾಗಬೇಕು. ಹಾಗಂತ ಇದೇನು ಹೊಸ ಕನಸಲ್ಲ. ಈ ದೇಶದ ಪ್ರಧಾನಿ ಉಡಾನ್ ಯೋಜನೆ ತಂದಿರುವುದೇ ಅದಕ್ಕೇ. ಈಗಾಗಲೇ ಬಜೆಟ್ನಲ್ಲಿ ವಿಮಾನ ಯಾನಕ್ಕಾಗಿಯೇ ಸಾಕಷ್ಟು ಹಣ ಮೀಸಲಾಗಿಡಲಾಗಿದೆ. ಇಂಡಿಗೋ ಜೆಟ್ನಂತಹ ಕಂಪನಿಗಳೂ ಹಣ ಹೂಡಿಕೆಗೆ ಸಿದ್ಧವಾಗಿವೆ. ನಮ್ಮ ಕೆಲಸ ಪ್ರೇರಣೆ ಕೊಟ್ಟು ಕನರ್ಾಟಕದೊಳಗಿನ ಪ್ರಯಾಣಕ್ಕೆ ವಾತಾವರಣ ರೂಪಿಸುವುದಷ್ಟೇ. ಹಾಗೆ ಮಾಡಿದರೆ ಅನಗತ್ಯವಾದ ಬೆಳವಣಿಗೆಯ ಹೊರೆ ಹೊರುತ್ತಿರುವ ಬೆಂಗಳೂರು ಸ್ವಲ್ಪ ಉಸಿರಾಡೀತು ಮತ್ತು ಜಗತ್ತಿನ ಕಣ್ಣು ಕನರ್ಾಟಕದ ಬೇರೆ ಜಿಲ್ಲೆಗಳತ್ತಲೂ ತಿರುಗೀತು. ಚುನಾವಣೆಯ ಹೊತ್ತಲ್ಲಿ ಮನೆಗೆ ಓಟು ಕೇಳಲು ಬರುವ ನಾಯಕರನ್ನು ಈ ಕುರಿತಂತೆ ಕೇಳಿ. ಇಷ್ಟು ದಿನ ಸ್ವಂತದ ಕನಸನ್ನು ಸಾಕಾರಗೊಳಿಸಿಕೊಂಡವರು ಈಗ ಸ್ವಲ್ಪರಾಜ್ಯದ ಕನಸುಗಳನ್ನು ಈಡೇರಿಸಲಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s