ತೆರಿಗೆಯ ಪರೀಕ್ಷೆ; ಒಟ್ಟಾಗಿ ಬರೆಯೋಣ

ತೆರಿಗೆಯ ಪರೀಕ್ಷೆ; ಒಟ್ಟಾಗಿ ಬರೆಯೋಣ

‘ಭಾರತೀಯರು ತೆರಿಗೆ ತುಂಬುವುದಿಲ್ಲ’ ಎಂಬ ಆರೋಪವನ್ನು ಮಾಡುತ್ತಲೇ ನಾವು 70 ವರ್ಷ ಕಳೆದುಬಿಟ್ಟಿದ್ದೇವೆ. ಆ ಮೂಲಕ ನಮ್ಮನ್ನು ಮೋಸಗಾರರನ್ನಾಗಿ ಮಾಡಿ ತಾವು ಲೂಟಿ ಮಾಡಲು ಸಾಕಷ್ಟು ವ್ಯವಸ್ಥೆ ಮಾಡಿಕೊಳ್ಳುವ ಉಪಾಯ ಅದು. ರಸ್ತೆಯಲ್ಲಿ ಲಾರಿಯ ಚಾಲಕನಿಂದ 10 ರೂಪಾಯಿ ಲಂಚ ಪಡೆದ ಪೇದೆಗೆ ತನ್ನ ಮೇಲಧಿಕಾರಿ ಪಡೆಯುವ 10 ಸಾವಿರ ಲಂಚದ ಪ್ರಶ್ನೆ ಮಾಡುವ ನೈತಿಕತೆಯೇ ಇಲ್ಲ. ಇದೇ ತರ್ಕ ಆಳುವವರದ್ದು. ಹಾಗಂತಲೇ ನಂಬಿಸಿ ನಮ್ಮ ಕತ್ತು ಕೊಯ್ದದ್ದು ಅವರು. ಇದನ್ನು ಬುಡಮೇಲು ಮಾಡಿದ್ದು ನರೇಂದ್ರ ಮೋದಿ.

ದೇಶದಲ್ಲಿ ತೆರಿಗೆಯ ಕುರಿತಾದ ಚಚರ್ೆ ಜೋರಾಗಿದೆ. ಜಿ.ಎಸ್.ಟಿಯನ್ನು ಜಾರಿಗೆ ತರಲೇಬೇಕೆಂದು ಹಠ ಹಿಡಿದಿದ್ದ ಆಗಿನ ಆಡಳಿತ ಪಕ್ಷ ಕಾಂಗ್ರೆಸ್ಸು, ಬೇಡವೇ ಬೇಡ ಎಂದು ರಚ್ಚೆ ಹಿಡಿದಿದ್ದ ವಿರೋಧ ಪಕ್ಷ ಬಿಜೆಪಿ ಸ್ಥಾನ ಬದಲಾಯಿಸಿದೊಡನೆ ವರಸೆ ಬದಲಾಯಿಸಿದವು. ಈಗ ಜಾರಿಗೆ ತರಲು ಬಿಜೆಪಿಯ ಪ್ರಯಾಸ; ಬೇಡವೆನ್ನಲು ಕಾಂಗ್ರೆಸ್ಸಿನ ಆತುರ. ಮೂರು ವರ್ಷಗಳ ಬಡಿದಾಟದ ನಂತರ ಅಂತೂ-ಇಂತೂ ಇಂತಹುದೊಂದು ಮಹತ್ವದ ತೆರಿಗೆ ಸುಧಾರಣೆ ಬಂದೇ ಬಂತು. ಒಂದು ರಾಷ್ಟ್ರಕ್ಕೆ ಒಂದೇ ತೆರಿಗೆ ಎಂಬ ಆಡಳಿತ ಪಕ್ಷದ ಘೋಷಣೆ ಎಲ್ಲರಿಗೂ ಬಲು ಆಕರ್ಷಕವಾಗಿ ಕಂಡಿತ್ತು. ಆದರೆ ಇದು ಜಾರಿಗೆ ಬರುವ ದಿನ ಸ್ವತಃ ಪ್ರಧಾನಿ ಮೋದಿ ಮಾಜಿ ಪ್ರಧಾನಿಗಳನ್ನೆಲ್ಲ ಐತಿಹಾಸಿಕ ಘೋಷಣೆಗೆ ಆಹ್ವಾನಿಸಿದ್ದು ನೆನಪಿರಬೇಕು. ಅಂದಿನ ತಮ್ಮ ಭಾಷಣದಲ್ಲಿ ಈ ಜಿ.ಎಸ್.ಟಿಯ ಗೌರವವನ್ನು ಹಿಂದಿನ ಎಲ್ಲ ಸಕರ್ಾರಗಳಿಗೆ ಸಮಪರ್ಿಸಿ ದೊಡ್ಡತನ ಮೆರೆದಿದ್ದರು. ಅಂದೇ ಈ ಗೌರವವನ್ನು ಧಿಕ್ಕರಿಸಬಹುದಿತ್ತು ಕಾಂಗ್ರೆಸ್ಸು. ಆದರೆ ಗಾಳಿ ಬೀಸುವ ದಿಕ್ಕಿನೊಡನೆ ತಿರುಗಿ ನಿಂತು ಹವಾ ಅನುಭವಿಸುವ ಚಾಳಿ ಇರುವ ಕಾಂಗ್ರೆಸ್ಸಿಗೆ ಅಂದು ಇದರ ಶ್ರೇಯ ತನ್ನ ಮಡಿಲಿಗೆ ಹಾಕಿಕೊಳ್ಳುವುದು ಲಾಭವೆನಿಸಿತ್ತು. ನರೇಂದ್ರ ಮೋದಿ ಕಾಂಗ್ರೆಸ್ಸಿನ ಯೋಜನೆಗಳನ್ನೇ ತಮ್ಮದೆಂದು ಜಾರಿಗೆ ತಂದು ಮೆರೆಯುತ್ತಾರೆ ಎಂದೆಲ್ಲ ತನ್ನ ಬೆನ್ನು ತಾನು ಚಪ್ಪರಿಸಿಕೊಂಡಿತ್ತು. ಈಗ ಜಿಎಸ್ಟಿಯ ಆರಂಭದ ದಿನಗಳಲ್ಲಿ ಸ್ವಲ್ಪ ಎಡವಟ್ಟುಗಳಾದೊಡನೆ ‘ಇದು ತರಲೇ ಬಾರದಿತ್ತು’ ಎಂಬ ಅರಚಾಟ ಶುರುವಿಟ್ಟುಕೊಂಡಿದೆ. ಕನರ್ಾಟಕದ ಮಂತ್ರಿ ಮಹೋದಯರಂತೂ ಇದನ್ನು ಲಾಭದಾಯಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಜನರ ಮುಂದೆ ದೇಶದ ಪ್ರಧಾನಿಯನ್ನು ಅವಾಚ್ಯ ಶಬ್ದಗಳಲ್ಲಿ ನಿಂದಿಸಿ ಹೆಮ್ಮೆ ಅನುಭವಿಸಿಬಿಟ್ಟರು. ಒಟ್ಟಾರೆ ಗುಜರಾತ್ ಚುನಾವಣೆಯಲ್ಲಿ ಲಾಭವಾದೀತೆಂಬ ಏಕೈಕ ಆಕಾಂಕ್ಷೆ ಅಷ್ಟೇ.

ನಾವು ಪಶ್ಚಿಮದಿಂದ ರಾಜಕಾರಣದ ಮಾದರಿಯನ್ನಷ್ಟೇ ಆಮದು ಮಾಡಿಕೊಂಡೆವು. ಅಲ್ಲಿನ ರಾಜಕಾರಣಿಗಳ ಕಾಳಜಿಯನ್ನಲ್ಲ. ಇಂಗ್ಲೆಂಡಿನಂತೆ ನಮ್ಮಲ್ಲೂ ಮೇಲ್ಮನೆ ಕೆಳಮನೆಗಳಿವೆ. ನಮ್ಮ ಆಯ್ಕೆಯ ಪದ್ಧತಿಯೂ ಅಲ್ಲಿನಂತೇ! ನೀತಿ-ನಿಯಮ, ಸದನ-ಚಚರ್ೆ ಎಲ್ಲವೂ ಅಕ್ಷರಶಃ ನಕಲು. ಆದರೆ ಅದರಷ್ಟು ರಾಷ್ಟ್ರೀಯತೆ ನಮ್ಮಲಿಲ್ಲ. ದೇಶದ ಸಮಸ್ಯೆಗಳಿಗೆ ಪರಿಹಾರ ಹುಡುಕುವಾಗ ಅವರು ಒಂದಾಗುತ್ತಾರೆ. ಅಗತ್ಯ ಬಿದ್ದರೆ ಜೊತೆಯಾಗಿಯೇ ದೇಶವನ್ನೆದುರಿಸುತ್ತಾರೆ. ನಮ್ಮಲ್ಲಿ ಹಾಗಲ್ಲ. ಚಿಕ್ಕ ಚಿಕ್ಕ ವಿಷಯಗಳಿಗೂ ಕಿತ್ತಾಡುತ್ತೇವೆ. ವಿರೋಧಕ್ಕಾಗಿ ವಿರೋಧಿಸುತ್ತೇವೆ. ವೋಟು ಸಿಗುವುದಾದರೆ ದೇಶ ಒಡೆಯುವ ರೋಹಿಂಗ್ಯಾಗಳಿರಲಿ, ಬಾಂಗ್ಲಾದೇಶದ ನಿರಾಶ್ರಿತರೇ ಇರಲಿ ನಮಗೆ ಬೇಕು. ಅದಿಲ್ಲವಾದರೆ ಪಾಕೀಸ್ತಾನದಲ್ಲಿ ಬದುಕುವುದೇ ಅಸಾಧ್ಯವಾದ ಹಿಂದುಗಳು ಬಂದರೂ ನಮಗೆ ಬೇಡ. ಅಮೇರಿಕಾ, ಇಂಗ್ಲೆಂಡು, ಆಸ್ಟ್ರೇಲಿಯಾಗಳಲ್ಲೆಲ್ಲ ಆಡಳಿತ-ವಿರೋಧ ಪಕ್ಷಗಳು ಅತ್ಯಂತ ಗಂಭೀರ ಸಂದರ್ಭಗಳಲ್ಲಿ ಒಂದಾಗಿ ನಿಲ್ಲುತ್ತವೆ; ಯುದ್ಧದ ಹೊತ್ತಲ್ಲಿ ಶತ್ರು ರಾಷ್ಟ್ರದ ರಾಯಭಾರಿಯನ್ನು ಭೇಟಿ ಮಾಡುವ ದುಸ್ಸಾಹಸ ಮಾಡಲಾರವು!

1

ಬಿಡಿ. ತೆರಿಗೆ ಸುಧಾರಣೆಯ ವಿಚಾರಕ್ಕೆ ಬರೋಣ. ಈ ಹಿಂದಿನ ಎರಡೂ ಲೇಖನಗಳಲ್ಲಿ ವಿವರಿಸಿದಂತೆ ಅತ್ಯಂತ ಸರಳ ಮತ್ತು ವಿಕೇಂದ್ರಿಕೃತವಾದ ಭಾರತೀಯ ತೆರಿಗೆ ಪದ್ಧತಿಯನ್ನೂ ಸಂಕೀರ್ಣ ಮತ್ತು ಕೇಂದ್ರದಡಿಗೆ ತಂದ ಕೀತರ್ಿ ಬಿಳಿಯರಿಗೇ. ಭಿನ್ನ ಭಿನ್ನ ರಾಗಗಳನ್ನು ಹಾಡಿ ಅವರು ಇಲ್ಲಿನ ತೆರಿಗೆಯನ್ನು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಶೇಕಡಾ ಐವತ್ತನ್ನು ದಾಟಿಸಿದ್ದರು. ಲೂಟಿಗೈದು ತಮ್ಮ ದೇಶದ ಬೊಕ್ಕಸ ತುಂಬಿಸುವುದು ಅವರ ಕಾರ್ಯವಾಗಿತ್ತು. ಸ್ವಾತಂತ್ರ್ಯ ಬಂದ ನಂತರ ನಾವು ಅವರ ಎಲ್ಲ ಲೋಪಗಳನ್ನು ನಮ್ಮ ಹೆಗಲ ಮೇಲೇರಿಸಿಕೊಂಡೆವು. ಅವರ ದೋಷಗಳನ್ನೆಲ್ಲ ಅರಿದು ಕುಡಿದುಬಿಟ್ಟೆವು. ಭಾರತೀಯರ ಕುರಿತಂತೆ ಬಿಳಿಯರು ಏನೆಂದು ಭಾವಿಸಿದ್ದರೋ ನಮ್ಮ ನಾಯಕರೂ ಹಾಗೆಯೇ ನಂಬಿದ್ದರು. ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ‘ಕರಿಯ ತೊಗಲಿನ, ಬಿಳಿಯ ಬುದ್ಧಿಯ ಜನ’ ನಮ್ಮನ್ನು ಸ್ವಾತಂತ್ರ್ಯಾ ನಂತರ ಆಳಿದರು. ಅವರು ಭ್ರಷ್ಟಾಚಾರಿಗಳಾಗಿದ್ದರು, ಶೋಕಿಯ ದಾಸರಾಗಿದ್ದರು. ಅಧಿಕಾರವನ್ನು ತಮ್ಮಲ್ಲಿಯೇ ಇಟ್ಟುಕೊಳ್ಳಲು ಯಾವ ಹಂತಕ್ಕೆ ಬೇಕಿದ್ದರೂ ಹೋಗಬಲ್ಲವರಾಗಿದ್ದರು. ತೆರಿಗೆ ಕಳ್ಳತನ ಮಾಡಲು ದಾರಿ ಮಾಡಿಕೊಟ್ಟರು. ಅದನ್ನು ನೆಪವಾಗಿಸಿ ತಾವು ಕೋಟಿ-ಕೋಟಿ ಲೂಟಿಗೈದು ವಿದೇಶಕ್ಕೆ ಸಾಗಿಸಿದರು. ಅತಿಶಯೋಕ್ತಿ ಎನಿಸಿದರೂ ಸರಿಯೇ. ಮೊದಲ ಪ್ರಧಾನಿ ಇಂದಿನ ಪ್ರಧಾನ ಸೇವಕರಂತೆ ಭಾರತೀಯತೆಯ ಪ್ರತಿಪಾದಕರಾಗಿ ಇಲ್ಲಿನ ಪ್ರಜೆಗಳ ಮೇಲಿನ ವಿಶ್ವಾಸದ ಆಧಾರದ ಮೇಲೆ ರಾಷ್ಟ್ರ ನಿಮರ್ಾಣದ ಸಂಕಲ್ಪ ಕೈ ಗೊಂಡಿದ್ದರೆ ಇಂದಿನ ಭಾರತದ ಸ್ಥಿತಿ-ಗತಿಗಳೇ ಬೇರೆಯಾಗಿರುತ್ತಿದ್ದವು. ನಮ್ಮದು ದುದರ್ೈವ; ಹಾಗಾಗಲಿಲ್ಲ.

2

ಕಳೆದ 70 ವರ್ಷಗಳ ಈ ಪದ್ಧತಿಯನ್ನು ತುಂಡರಿಸಿ ರಾಷ್ಟ್ರಕ್ಕೆ ಹೊಸ ದಿಕ್ಕು ತೋರುವ ನೆಪದಲ್ಲಿಯೇ ಶುರುವಾದುದು ನರೇಂದ್ರ ಮೋದಿಯವರ ಪ್ರಯತ್ನ. ಬಡವರೂ ಬ್ಯಾಂಕಿಗೆ ಬರುವಂತೆ ಮಾಡುವ ಅವರ ಮೊದಲ ಹೆಜ್ಜೆ ಜನ ಧನ ಯೋಜನಾ. ಆಧಾರನ್ನು ಬ್ಯಾಂಕ್ ಖಾತೆಗೆ ಜೋಡಿಸಿ ಸಕರ್ಾರಿ ಸವಲತ್ತುಗಳು ನೇರ ಅವರವರ ಖಾತೆಗೆ ಸೇರುವಂತೆ ಮಾಡಿದ್ದು ಮತ್ತೊಂದು ಹೆಜ್ಜೆ. ನೋಟು ಅಮಾನ್ಯೀಕರಣಗೊಳಿಸಿ ಕಳ್ಳ ನೋಟುಗಳ ಬಂಡಲುಗಳನ್ನು ಕೆಲಸಕ್ಕೆ ಬಾರದಂತೆ ಮಾಡಿ ಆಥರ್ಿಕತೆಗೆ ಬಲವಾದ ಶಕ್ತಿ ತುಂಬಿದ ಮೋದಿಜಿ ಆನಂತರ ತೆರಿಗೆ ಸುಧಾರಣೆಗೆ ಮಹತ್ವದ ಹೆಜ್ಜೆ ಇಟ್ಟರು. ‘ಭಾರತೀಯರು ತೆರಿಗೆ ತುಂಬುವುದಿಲ್ಲ’ ಎಂಬ ಆರೋಪವನ್ನು ಮಾಡುತ್ತಲೇ ನಾವು 70 ವರ್ಷ ಕಳೆದುಬಿಟ್ಟಿದ್ದೇವೆ. ಆ ಮೂಲಕ ನಮ್ಮನ್ನು ಮೋಸಗಾರರನ್ನಾಗಿ ಮಾಡಿ ತಾವು ಲೂಟಿ ಮಾಡಲು ಸಾಕಷ್ಟು ವ್ಯವಸ್ಥೆ ಮಾಡಿಕೊಳ್ಳುವ ಉಪಾಯ ಅದು. ರಸ್ತೆಯಲ್ಲಿ ಲಾರಿಯ ಚಾಲಕನಿಂದ 10 ರೂಪಾಯಿ ಲಂಚ ಪಡೆದ ಪೇದೆಗೆ ತನ್ನ ಮೇಲಧಿಕಾರಿ ಪಡೆಯುವ 10 ಸಾವಿರ ಲಂಚದ ಪ್ರಶ್ನೆ ಮಾಡುವ ನೈತಿಕತೆಯೇ ಇಲ್ಲ. ಇದೇ ತರ್ಕ ಆಳುವವರದ್ದು. ಹಾಗಂತಲೇ ನಂಬಿಸಿ ನಮ್ಮ ಕತ್ತು ಕೊಯ್ದದ್ದು ಅವರು. ಇದನ್ನು ಬುಡಮೇಲು ಮಾಡಿದ್ದು ನರೇಂದ್ರ ಮೋದಿ.

ಅವರ ದೃಷ್ಟಿ ಯಾವಾಗಲೂ ಜನ ಸಾಮಾನ್ಯರನ್ನು ಮುಖ್ಯವಾಹಿನಿಗೆ ತರುವ, ಭ್ರಷ್ಟಮುಕ್ತ ವ್ಯವಸ್ಥೆಯನ್ನು ರೂಪಿಸುವ ದಿಕ್ಕಿನಲ್ಲಿ ಇರುವಂಥದ್ದು. ಇಂತಹ ವಾತಾವರಣದಲ್ಲಿಯೇ ತರುಣರಿಗೆ ಮತ್ತು ಅವರ ಆಲೋಚನೆಗಳಿಗೆ ಬೆಲೆ ಬರೋದು. ಇಂತಹ ಪರಿಸರಕ್ಕೇ ವಿದೇಶದಿಂದ ಕಂಪನಿಗಳೂ ಧಾವಿಸಿ ಬರೋದು. ತೆರಿಗೆ ಸುಧಾರಣೆಯ ಪ್ರಯತ್ನ ಅದರದ್ದೇ ಮುಂದುವರಿದ ಭಾಗ. ಕಳೆದ 70 ವರ್ಷಗಳಲ್ಲಿ ಬಹುತೇಕ ಆಳ್ವಿಕೆ ಮಾಡಿದ ಕಾಂಗ್ರೆಸ್ಸು ವ್ಯವಸ್ಥೆಯನ್ನು ಸಾಧ್ಯವಾದಷ್ಟೂ ಭ್ರಷ್ಟವಾಗಿಸಿ ಲೂಟಿಗಾಗಿ ರಾಜ್ಯ ನಡೆಸಿತು. ಚುನಾವಣೆಗಿಂತ 2 ವರ್ಷಗಳ ಮುಂಚಿನಿಂದಲೇ ಕಂಡಕಂಡಲ್ಲಿ ಹಣ ಬಾಚುತ್ತ ಭಾರತವನ್ನು ಸೊರಗಿಸಿತು. ರಾಜ್ಯದ ಕಥೆಯೂ ಅದೇ ಅಲ್ಲವೇನು? ಚುನಾವಣೆ ಹತ್ತಿರ ಬರುತ್ತಿದ್ದಂತೆ ಸ್ಟೀಲ್ ಬ್ರಿಡ್ಜ್ ಬೇಡೆನಿಸುತ್ತದೆ; ವಿಧಾನ ಸೌಧದ ಸುವರ್ಣ ಮಹೋತ್ಸವ ವಿಜೃಂಭಣೆಯಿಂದ ಆಚರಿಸಬೇಕೆನಿಸುತ್ತದೆ. ಎತ್ತಿನ ಹೊಳೆ ಯೋಜನೆಗೆ ವೇಗ ಬರುತ್ತದೆ. ಒಂದೇ ಎರಡೇ. ತಿನ್ನ ಬಾರದೇ ಎಲ್ಲೆಡೆ ತುಂಬಿಬಿಟ್ಟಿದ್ದಾರೆ. ಅವರಿಗೆಲ್ಲ ಚುನಾವಣೆ ಗೆಲ್ಲಲು ಒಂದೇ ಮಾರ್ಗ. ಮೋದಿಯ ನೀತಿ ವಿರೋಧಿಸೋದು ಅಷ್ಟೇ.

Modi at Thiruvananthapuram

ಈಗ ಜಿಎಸ್ಟಿಯತ್ತ ಬನ್ನಿ. ಇದೇನು ಮೋದಿ ಜಗತ್ತಿನಲ್ಲಿಯೇ ಮೊದಲ ಬಾರಿಗೆ ಸಂಶೋಧಿಸಿ ಪ್ರಸ್ತುತ ಪಡಿಸಿದ ತೆರಿಗೆ ಪದ್ಧತಿಯಲ್ಲ. ಅನೇಕ ರಾಷ್ಟ್ರಗಳಲ್ಲಿ ಯಶಸ್ವಿಯಾಗಿ ಚಾಲ್ತಿಯಲ್ಲಿರುವ ತೆರಿಗೆ ಪದ್ಧತಿ. ಆಸ್ಟ್ರೇಲಿಯಾದಲ್ಲಿ ಅನೇಕ ವರ್ಷಗಳಿಂದ ಇದು ಆಚರಣೆಯಲ್ಲಿದೆ. ಸ್ಥಳೀಯ ವಸ್ತುಗಳಿಗೆ ಬಿಟ್ಟರೆ ಉಳಿದೆಲ್ಲ ವಸ್ತುಗಳಿಗೆ ಶೇಕಡಾ 10 ರಷ್ಟು ಒಂದೇ ತೆರಿಗೆ ಇಲ್ಲಿ. ಆದರೆ ಇದನ್ನುಳಿದೂ ಇನ್ನೂ ಸಾಕಷ್ಟು ತೆರಿಗೆ ಇದೆ. ಜಗತ್ತಿನ ಅತ್ಯಂತ ಹೆಚ್ಚು ತೆರಿಗೆ ಕಟ್ಟುವ ರಾಷ್ಟ್ರಗಳಲ್ಲಿ ಆಸ್ಟ್ರೇಲಿಯಾ ಕೂಡ ಒಂದು. ಸುಮಾರು 40 ರಿಂದ 50 ಶೇಕಡಾ ತೆರಿಗೆ ರೂಪದಲ್ಲಿಯೇ ಗಳಿಸಿದ್ದನ್ನು ವಾಪಸ್ಸು ಕಟ್ಟಬೇಕು. ಹಾಗಂತ ನಷ್ಟವೇನೂ ಇಲ್ಲ. ಇಲ್ಲಿನ ಕಾಮರ್ಿಕರ ಕಾನೂನುಗಳು ಸಾಕಷ್ಟು ಬಲವಾಗಿರುವುದರಿಂದ ದಿನಗೂಲಿಯೇ ಸಾಕಷ್ಟಿದೆ. ಜೀವನ ನಡೆಸಲು ಕಷ್ಟವಿಲ್ಲ. ಇನ್ನು ನಿರುದ್ಯೋಗದ ಪ್ರಮಾಣ ನಾಲ್ಕು ಪ್ರತಿಶತಕ್ಕಿಂತ ಹೆಚ್ಚಿಲ್ಲ. ಅಂದರೆ ನೂರಕ್ಕೆ ತೊಂಭತ್ತಾರು ಜನ ಉದ್ಯೋಗಸ್ಥರು! ಹಾಗಂತ ಅವರನ್ನು ನಮ್ಮೊಂದಿಗೆ ಹೋಲಿಸುವಂತೆಯೇ ಇಲ್ಲ. ಇಡಿಯ ಆಸ್ಟ್ರೇಲಿಯಾ ದೇಶದ ಜನಸಂಖ್ಯೆ ಮುಂಬೈನ ಒಟ್ಟಾರೆ ಜನಸಂಖ್ಯೆಗೆ ಸಮ. ಅಥವಾ ಬೆಂಗಳೂರಿನಲ್ಲಿ ಒಟ್ಟಾರೆ ಜನ ಸೇರುತ್ತಾರಲ್ಲ ಅದರ ಎರಡರಷ್ಟು ಆಗಬಹುದು ಅಷ್ಟೇ.

ಭಾರತದಲ್ಲಿ ಉದ್ಯೋಗ ದೊರಕಬೇಕೆಂದರೆ ಸಂಕೀರ್ಣಗೊಂಡ ವ್ಯವಸ್ಥೆಗಳು ಸರಳಗೊಳ್ಳಬೇಕು. ಸುಕ್ಕುಗಟ್ಟಿರುವ ಪದ್ಧತಿಗಳನ್ನು ಸೂಕ್ಷ್ಮವಾಗಿ ಬಿಡಿಸುತ್ತ ಹೋಗಬೇಕು. ಈ ಮೂಲಕ ಹಣವಿದ್ದವನಿಗೆ ಅದನ್ನು ಧೈರ್ಯವಾಗಿ ಹೂಡುವ ಮತ್ತು ಹೊರಗಿನವರು ಸಹಜವಾಗಿ ಒಳಬಂದು ವ್ಯಾಪಾರ ಮಾಡುವ ಹೊಸ ವ್ಯವಸ್ಥೆ ರೂಪಿಸಿಕೊಡಬೇಕು ಎಂದು ಆರಂಭದಲ್ಲಿಯೇ ನಿಶ್ಚಯಿಸಿದ್ದರು ಮೋದಿ. ಇತ್ತೀಚೆಗೆ ಪ್ರಣಬ್ ಮುಖಜರ್ಿ ಅವರ ಕುರಿತಂತೆ ಮಾತಾಡುತ್ತ ಹೇಳಿದರಲ್ಲ, ‘ಅವರ ದೃಷ್ಟಿ ನಿಚ್ಚಳವಾಗಿದೆ. ಅದಕ್ಕೆ ತಕ್ಕಂತೆ ದುಡಿಯುವ ಸಾಮಥ್ರ್ಯವೂ ಅವರಿಗಿದೆ’ ಅಂತ. ಮೋದಿ ವಿದೇಶ ಪ್ರವಾಸಗಳನ್ನು ಮಾಡುತ್ತಾ ಮೇಕ್ ಇನ್ ಇಂಡಿಯಾದ ಕಲ್ಪನೆ ಕಟ್ಟಿಕೊಡುವಾಗಿನಿಂದಲೂ ಜಿಎಸ್ಟಿ ಜಾರಿಯ ಕುರಿತಂತೆ ಆಗ್ರಹ ಮಂಡಿಸುತ್ತ ಬಂದಿದ್ದರು. ಆಗಲೇ ಈ ಸಂಕಲ್ಪ ಕೈ ಗೊಂಡಿದ್ದರೆ ಇಷ್ಟು ಹೊತ್ತಿಗೆ ತೆರಿಗೆ ವ್ಯವಸ್ಥೆಯ ಸುಧಾರಣೆಗಳೆಲ್ಲ ಪೂರ್ಣಗೊಂಡು ಜನ ಸಾಮಾನ್ಯರೂ ಅದಕ್ಕೆ ಹೊಂದಿಕೊಂಡು ಬಿಟ್ಟಿರುತ್ತಿದ್ದರು. ಸ್ವಲ್ಪ ಎಡವಟ್ಟಾಯಿತು.

featured

ಹಾಗೆ ನೋಡಿದರೆ ಈ ಹಿಂದಿನ ಅವಧಿಗಳಲ್ಲಿ ಜಾರಿಗೆ ಬಂದ ವ್ಯಾಟ್ ಕೂಡ ತೆರಿಗೆ ಪದ್ಧತಿಯಲ್ಲಿ ಸುಧಾರಣೆಯೇ. ಆದರೆ ಅದು ಯಾವ ತೆರಿಗೆಯನ್ನೂ ಹೊಸಕಿ ಹಾಕದೇ ಜನರ ಮೇಲೆ ಹೇರಿದ ಹೊಸ ತೆರಿಗೆಯಾಯ್ತು ಅಷ್ಟೇ. ಅದನ್ನು ಅರ್ಥ ಮಾಡಿಕೊಳ್ಳೋದು ಸಲೀಸಾಗಿತ್ತು. ವಸ್ತುವೊಂದನ್ನು ತಯಾರು ಮಾಡಿದಾಗಿನಿಂದ ಮಾರಾಟ ಮಾಡುವವರೆಗೆ ಪ್ರತಿ ಕೈ ಬದಲಾದಾಗಲೂ ಮುಲಾಜಿಲ್ಲದೇ ತೆರಿಗೆ ಕಟ್ಟಿದರಾಯ್ತು. ಆದರೆ ಹೀಗೆ ತೆರಿಗೆ ಕಟ್ಟುವಾಗ ತೆರಿಗೆಯ ಮೇಲೂ ತೆರಿಗೆ ಕಟ್ಟುತ್ತೇವೆಂಬ ವಿಚಾರ ಚಚರ್ೆಗೆ ಬಂದಿತ್ತು. ಗಲಾಟೆಯೂ ಆಗಿತ್ತು. ಆದರೆ ಜಾರಿಗೆ ತರುವಲ್ಲಿ ಯಾರಿಗೂ ಕಿರಿಕಿರಿ ಇಲ್ಲವೆಂಬ ಒಂದೇ ಕಾರಣಕ್ಕೆ ಜನ ಸುಮ್ಮನೆ ಒಪ್ಪಿಕೊಂಡರು. ‘ನನಗೆ ಬಿಲ್ ಬೇಡ’ ಎಂದುಬಿಟ್ಟರೆ ಮುಗಿದೇ ಹೋಯ್ತು; ಸಮಸ್ಯೆಯೇ ಇರಲಾರದು ಎಂಬುದೂ ಅರಿವಿತ್ತು. ಈಗ ಹಾಗಿಲ್ಲ. ಸರಿಯಾಗಿ ಜಿಎಸ್ಟಿ ಅರ್ಥ ಮಾಡಿಕೊಂಡರೆ ಮೊದಲಿಗಿಂತ ಬಹುಪಾಲು ತೆರಿಗೆ ಕಡಿಮೆಯಾಗುವುದು ಎಂಥವನ ಗಮನಕ್ಕೂ ಬರುತ್ತದೆ. ಆದರೆ ಪ್ರತಿ ಕೈ ಬದಲಾಗುವಾಗಲೂ ಹಿಂದಿನವ ತೆರಿಗೆ ಕಟ್ಟಿದ್ದನ್ನೂ ಪಡೆದವ ಖಾತ್ರಿ ಪಡಿಸಿಕೊಳ್ಳುವ ಹೊಸ ವಿಧಾನ ಇದಾದ್ದರಿಂದ ಇಲ್ಲಿ ತೆರಿಗೆಗೆ ಮೋಸವೇ ಇಲ್ಲ. ತೆರಿಗೆ ಕಟ್ಟದವನ ಬಳಿ ವಸ್ತುಗಳನ್ನು ಖರೀದಿಸುವಂತೆಯೇ ಇಲ್ಲ. ಅಲ್ಲಿಗೆ ಕಟ್ಟುವ ತೆರಿಗೆಯ ಪ್ರಮಾಣ ಕಡಿಮೆಯಾದರೂ ಹೆಚ್ಚು ಜನ ತೆರಿಗೆ ಕಟ್ಟುವುದರಿಂದ ಸಂಗ್ರಹದ ಪ್ರಮಾಣವೂ ವೃದ್ಧಿಸುತ್ತದೆ. ಸಹಜವಾಗಿಯೇ ಆಥರ್ಿಕತೆ ಸದೃಢವಾಗುತ್ತದೆ. ಈ ದೇಶದ 99 ಪ್ರತಿಶತ ಜನ ತೆರಿಗೆ ಕಟ್ಟಲಾರರೆಂಬ ಆರೋಪವೂ ನಿಲ್ಲುತ್ತದೆ! ಹೀಗೆ ಸ್ವಯಂ ನಿರ್ಬಂಧದಿಂದ ಸರಳಗೊಂಡ ವ್ಯವಸ್ಥೆಯಿಂದಾಗಿ ದೇಶದ ಆಥರ್ಿಕ ಪರಿಸರ ಸ್ವಚ್ಛಗೊಂಡು ವಿದೇಶೀ ಹೂಡಿಕೆಗೆ ಪೂರಕ ವಾತಾವರಣ ನಿಮರ್ಿಸುತ್ತದೆ. ಆ ಮೂಲಕ ಹೊಸ ಹೊಸ ಕಾಖರ್ಾನೆಗಳು ನಿಮರ್ಾಣಗೊಳ್ಳುತ್ತವೆ. ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ತರುಣರು ಕೈ ತುಂಬಾ ಕೆಲಸ ಮಾಡುತ್ತ ದೇಶದ ಪ್ರಗತಿಯಲ್ಲಿ ಕೈ ಜೋಡಿಸುತ್ತಾರೆ.

ಹೌದು. ಇವೆಲ್ಲವೂ ಒಟ್ಟಿಗೇ ಆಗುವಂಥದ್ದಲ್ಲ. ಹಂತ ಹಂತವಾಗಿ ನಡೆಯುವಂಥದ್ದು. ಆದರೆ 70 ವರ್ಷಗಳ ಜಡ್ಡುಗಟ್ಟಿದ ವ್ಯವಸ್ಥೆಯೊಂದನ್ನು ತಿದ್ದಲು ಹೊರಟಾಗ ಒಂದಷ್ಟು ತೊಂದರೆಗಳಾಗುವುದು ಸಹಜ. ಅದನ್ನೇ ಬೆಟ್ಟವಾಗಿಸಿ ಸುಧಾರಣೆ ತಂದದ್ದೇ ತಪ್ಪೆಂದರೆ, ಮತ್ತೊಂದು ಕಾಂಗ್ರೆಸ್ ಸಕರ್ಾರ ಕಂಡಂತಾದೀತು. ಈ ವ್ಯವಸ್ಥೆಯ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ತೆರಿಗೆಯ ವ್ಯಾಪ್ತಿಗೆ ಸೇರ್ಪಡೆಯಾದವರಿಗೆ ಹೆಮ್ಮೆ ಮೂಡುವಂತೆ ಮಾಡಬೇಕಾದ ಜರೂರತ್ತಿದೆ. ಎಲ್ಲಕ್ಕೂ ಮಿಗಿಲಾಗಿ ತೆರಿಗೆ ಕಟ್ಟುವುದೆಂದರೆ ರಾಷ್ಟ್ರದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವ ನೇರ ಅವಕಾಶ ಎನ್ನುವ ಅಭಿಮಾನ ಉಕ್ಕುವಂತೆ ಮಾಡುವ ಕರ್ತವ್ಯ ನಮ್ಮೆಲ್ಲರಿಗೂ ಇದೆ. ಇದು ಪರೀಕ್ಷೆಯ ಸಮಯ. ಎಲ್ಲರೂ ಜೊತೆಗೂಡಿ ನಿಲ್ಲೋಣ.

2 thoughts on “ತೆರಿಗೆಯ ಪರೀಕ್ಷೆ; ಒಟ್ಟಾಗಿ ಬರೆಯೋಣ

  1. ಅಣ್ಣಾ ನಾನೊಬ್ಬ ನೇಕಾರ ಈ ಜಿಎಷ್ಟಿಯಿಂದ ಸಣ್ಣ ಮಟ್ಟದ ನೇಕಾರರಿಗೆ ತುಂಬಾ ಲಾಭದಾಯಕವಾಗಿದೆ.ಆದರೆ ನೇಕಾರಿಕೆಗೆ ಬೇಕಾಗುವ ಕಚ್ಚಾವಸ್ತು ಮಾರುವ ವರ್ತಕರು ಮೋಸ ಮಾಡುತ್ತಿದ್ದಾರೆ. ಹೇಗೆಂದರೆ ಜಿಎಸ್ಟಿ ಬರುವ ಮುನ್ನ ಒಂದು ಕಿಲೋ ಆರ್ಟ್ ಸಿಲ್ಕ್ ದರ 540 ರೂ ಇತ್ತು ಈಗ ಜಿಎಸ್ಟಿ ಸೇರಿದರು ಒಂದು ಕಿಲೋಗೆ 540 ರೂಗಳೇ ಆಗುತ್ತದೆ ಇದರಲ್ಲಿ ನಾವು ಕಟ್ಟುವ 18℅ ಜಿಎಸ್ಟಿ ಮೊತ್ತ ನಮಗೆ ರಿಟರ್ನ್ಸ್ ರೂಪದಲ್ಲಿ ಹಿಡಿರುಗುತ್ತದೆ ಆದ್ದರಿಂದ 18℅ ನಮಗೆ ಉಳಿತಾಯವಾದಂತಾಗುತ್ತದೆ ಆದರೆ ವರ್ತಕರು ಇಲ್ಲಿ ನಮಗೂ ಮತ್ತು ಸರ್ಕಾರಕ್ಕೂ ಮೋಸ ಮಾಡುತ್ತಿದ್ದಾರೆ ಹೇಗೆಂದರೆ ನಾವು 20 ಕಿಲೋ ಸಿಲ್ಕ್ ತೆಗೆದುಕೊಂಡರೆ ಅದರ ಮೊತ್ತ 10400 ರೂ ಆಗುತ್ತದೆ. ಆದರೆ ಬಿಲ್ ಕೊಡುವಾಗ ಅದೇ 10400 ರೂಗಳಿಗೆ 300 ರೂ ಕಿಲೋದಂತೆ 35 ಕಿಲೋಗೆ ಬಿಲ್ ಕೊಡುತ್ತಿದ್ದಾರೆ ಕೇಳಿದರೆ ಎಲ್ಲರೂ ಇದೆ ರೀತಿ ಕೊಡುವುದು ಎನ್ನುತ್ತಿದ್ದಾರೆ ಹೆಚ್ಚಿಗೆ ಮಾತನಾಡಿದರೆ ಐಟಂ ಕೊಡುವುದಿಲ್ಲ ಎನ್ನುತ್ತಿದ್ದಾರೆ. ಇದಕ್ಕೆ ಪರಿಹಾರ ತಿಳಿಸಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s