ಆಳಿಕೊಳ್ಳಲು ಅಯೋಗ್ಯರೆಂದು ಸಾಬೀತು ಮಾಡಿದೆವು

ಆಳಿಕೊಳ್ಳಲು ಅಯೋಗ್ಯರೆಂದು ಸಾಬೀತು ಮಾಡಿದೆವು

ಸುಮಾರು 200 ವರ್ಷಗಳ ಕಾಲ ಭಾರತದಿಂದ ಇಂಗ್ಲೆಂಡಿಗೆ ಹರಿದು ಹೋದ ಈ ಸಂಪತ್ತು ಭಾರತದೆಡೆಗೆ ಮುಖ ಮಾಡಿದ್ದರೆ ಭಾರತ ಜಗತ್ತಿನ ಅತ್ಯಂತ ಶ್ರೀಮಂತ ರಾಷ್ಟ್ರವಾಗಿರುತ್ತಿತ್ತು.ಸ್ವಾತಂತ್ರ್ಯಾ ನಂತರ ನಮ್ಮವರೇ ಇಲ್ಲಿನ ಸಂಪತ್ತನ್ನು ಕಪ್ಪು ಹಣವಾಗಿಸಿ ವಿದೇಶಕ್ಕೊಯ್ದರು. ಆಗಲಾದರೂ ಶ್ರದ್ಧೆಯಿಂದ ದೇಶಕ್ಕಾಗಿ ದುಡಿದಿದ್ದರೆ ನಾವು ಈ ವೇಳೆಗಾಗಲೇ ಮತ್ತೊಮ್ಮೆ ಜಗತ್ತಿನ ಸಿರಿವಂತ ರಾಷ್ಟ್ರವಾಗಿರುತ್ತಿದ್ದೆವು.

ಆಳವಾಗಿ ಬೇರೂರಿರುವ ನಂಬಿಕೆಯೊಂದನ್ನು ನಾಶ ಮಾಡುವುದು ಮತ್ತು ಹಾಳಾಗಿದ್ದರೂ ನಾವು ಹೊಂದಿಕೊಂಡಿದ್ದೇವೆ ಎಂಬ ಒಂದೇ ಕಾರಣಕ್ಕೆ ವ್ಯವಸ್ಥೆಯನ್ನು ಬದಲಾಯಿಸದಿರುವುದು ಎರಡೂ ಬಲು ಕಷ್ಟದ ಮಾತು. ಬುಡ ಹಿಡಿದ ಮರವೊಂದನ್ನು ಅಲುಗಾಡಿಸಿದಾಗ ಅದನ್ನೇ ನಂಬಿಕೊಂಡ ಒಂದಷ್ಟು ಕಾಗೆ-ಗೂಬೆಗಳು ಅಲವತ್ತುಕೊಳ್ಳುವುದು ಸಹಜವೇ. ಆದರೆ ಆ ಮರ ಉರುಳಿಸುವುದರಿಂದ ಆಗುವ ದೂರಗಾಮಿ ಲಾಭದ ಅರಿವಿದ್ದವರು ಮಾತ್ರ ಉರುಳಿಸುವನ ಬೆಂಬಲಕ್ಕೆ ನಿಲ್ಲುತ್ತಾರೆ. ಹೌದು. ನಾನು ತೆರಿಗೆ ವ್ಯವಸ್ಥೆಯ ಬಗ್ಗೆಯೇ ಮಾತನಾಡುತ್ತಿರೋದು.

2

ಈ ದೇಶಕ್ಕೆ ವಿದೇಶದಿಂದ ಆಗಮಿಸಿದ ಆಕ್ರಮಣಕಾರಿಗಳು ಆರಂಭದಲ್ಲಿ ದೋಚಲಿಕ್ಕಷ್ಟೇ ಸೀಮಿತವಾಗಿದ್ದರು. ಇಲ್ಲೇ ಉಳಿಯಬೇಕಾದ ಸ್ಥಿತಿ ಬಂದಾಗ ವ್ಯವಸ್ಥೆಗಳನ್ನೆಲ್ಲ ತಮ್ಮ ಅನುಕೂಲಕ್ಕೆ ತಕ್ಕಂತೆ ರೂಪಿಸಿಕೊಂಡರು. ಮೊಘಲರ ಕಾಲದಲ್ಲಿ ಮುಸಲ್ಮಾನರಲ್ಲದವರು ತಮ್ಮ ಒಟ್ಟಾರೆ ಉತ್ಪನ್ನದ ಮೇಲೆ ಖರಾಜ್ ಎಂಬ ತೆರಿಗೆ ಕಟ್ಟಬೇಕಿತ್ತು. ಮುಸಲ್ಮಾನರ ಸಾಮ್ರಾಜ್ಯದಲ್ಲಿ ಹಿಂದುವಾಗಿ ಉಳಿದ ತಪ್ಪಿಗೆ ಜೇಸಿಯಾ ಎಂಬ ಕಂದಾಯ ತಲೆ ಮೇಲೆ ಬೀಳುತ್ತಿತ್ತು. ಮುಸಲ್ಮಾನರಾದರೆ ಕುರಾನಿನಲ್ಲಿ ಹೇಳಿರುವಂತಹ ಝಕಾತ್ ಕಟ್ಟಬೇಕಿತ್ತು. ಇದನ್ನು ಮೌಲ್ವಿಯೊಬ್ಬನ ನೇತೃತ್ವದಲ್ಲಿ ಇಟ್ಟು ಮುಸಲ್ಮಾನರ ಏಳ್ಗೆಗೆಂದೇ ಬಳಸಲಾಗುತ್ತಿತ್ತು. ಅಲ್ಲಾವುದ್ದೀನ್ ಖಿಲ್ಜಿ ಕಾಲಕ್ಕೆ ಮನೆಗಳ ಮೇಲೆ ಘರಿ ಎನ್ನುವ ತೆರಿಗೆ ಹಾಕಿದ. ಫಿರೋಜ್é್ ತುಘಲಕ್ ರೈತರಿಗೆ ನೀರಾವರಿ ಸೌಕರ್ಯ ಒದಗಿಸಲು ಹೊಸದೊಂದು ತೆರಿಗೆಯನ್ನು ಪರಿಚಯಿಸಿದ್ದ. ಮಧ್ಯ ಕಾಲದ ಭಾರತವನ್ನು ಗಣನೆಗೆ ತೆಗೆದುಕೊಳ್ಳುವುದಾದರೆ ವಿಜಯನಗರದ್ದೂ ಚಚರ್ೆಯಾಗಬೇಕು. ಮುಸಲರನ್ನು ಎದುರಿಸಲೆಂದೇ ನಿಮರ್ಾಣಗೊಂಡ ಸಾಮ್ರಾಜ್ಯ ಅದು. ಸಹಜವಾಗಿಯೇ ಬೇಕಾದ್ದೆಲ್ಲವನ್ನೂ ಹೊಸದಾಗಿಯೇ ನಿಮರ್ಿಸಿಕೊಳ್ಳಬೇಕಿತ್ತು. ಹೆಚ್ಚು ಕಡಿಮೆ ಇಂದಿನ ಸ್ಥಿತಿಯೇ ಅಂದೂ ಕೂಡ. ಹಿಂದಿನವರೆಲ್ಲ ಕೊಳ್ಳೆ ಹೊಡೆದು ಸಂಪತ್ತನ್ನು ಸೂರೆಗೈದುಬಿಟ್ಟಿದ್ದರು. ಈಗ ಹೊಸದಾದ ಸಾಮ್ರಾಜ್ಯ ಕಟ್ಟಬೇಕಿತ್ತು. ವಿದ್ಯಾರಣ್ಯರಂಥವರ ತಪಸ್ಸು, ರಾಜ-ಮಂತ್ರಿಗಳೆಲ್ಲರ ಬುದ್ಧಿಮತ್ತೆ ಮತ್ತು ಸಹಿಸಿಕೊಳ್ಳಬಲ್ಲ ಜನರ ಸಾಮಥ್ರ್ಯಗಳೆಲ್ಲ ಸೇರಿ ಅದನ್ನೊಂದು ಅದ್ಭುತ ಸಾಮ್ರಾಜ್ಯವಾಗಿ ರೂಪಿಸಿದವು.ವಿಜಯನಗರದ ಅರಸರೆಲ್ಲ ಹಿಂದಿನವರಂತೆ ಮನಸೋ ಇಚ್ಛೆ ಲೂಟಿಗೈಯ್ಯಲಿಲ್ಲ; ಮಣ್ಣಿನ ಫಲವತ್ತತೆ ಮತ್ತು ನೀರಾವರಿ ಲಭ್ಯತೆಗೆ ಅನುಗುಣವಾಗಿ ತೆರಿಗೆ ನಿಗದಿ ಮಾಡಿದರು. ಮೊದಲೆಲ್ಲ ತೆರಿಗೆಯಿಂದ ತಪ್ಪಿಸಿಕೊಳ್ಳುತ್ತಿದ್ದ ಕೆಲವರಿಗೆ ಆಗೆಲ್ಲ ಹೆಚ್ಚಿನ ತೆರಿಗೆ ಕಟ್ಟಬೇಕಾಗಿ ಬಂದಿದ್ದಿರಬಹುದು ಅವರೂ ಕೋಪಿಸಿಕೊಂಡು ವಿಜಯನಗರ ಸಾಮ್ರಾಜ್ಯ ಸರಿ ಇಲ್ಲವೆಂದು ಜರಿದಿರಲೂಬಹುದು. ಆದರೆ ಬದಲಾವಣೆ ಬೇಕಿತ್ತು, ರಾಷ್ಟ್ರದ ಒಳಿತಿಗಾಗಿ ಬಲುದೊಡ್ಡ ಬದಲಾವಣೆ ಬರಲೇಕಿತ್ತು. ವಿಜಯನಗರದ ಕಾಲದಲ್ಲಿ ಜನರ ಕೊಳ್ಳುವ ಸಾಮಥ್ರ್ಯ ಹೆಚ್ಚಾಯಿತು, ದಿನ ಬಳಕೆಯ ವಸ್ತುಗಳ ಬೆಲೆ ಇಳಿಯಿತು. ರಾಷ್ಟ್ರದ ಸಂಪತ್ತು ಅಪಾರ ವೃದ್ಧಿ ಕಂಡಿತು. ಇಡಿಯ ಜಗತ್ತಿನ ಕಣ್ಣುಕುಕ್ಕುವಂತೆ ಬೆಳೆದಿತ್ತು ರಾಜ್ಯ. ಶಿವಾಜಿಯ ಕಾಲವೂ ಹಾಗೆಯೇ. ಸ್ವತಃ ಮಾವಳಿ ಪೋರರೊಂದಿಗೆ ಬೆಳೆದು ಬಂದಿದ್ದ ಶಿವಾಜಿ ಬಡತನವನ್ನು ಬಲು ಹತ್ತಿರದಿಂದ ಗಮನಿಸಿದ್ದರು. ರಾಜ್ಯಾಧಿಕಾರ ಸ್ವೀಕರಿಸಿದೊಡನೆ ತೆರಿಗೆ ಇಲಾಖೆಗಳಲ್ಲಿದ್ದ ಭ್ರಷ್ಟ ಅಧಿಕಾರಿಗಳನ್ನು ತೆಗೆದು ಹಾಕಿದ್ದರು. ಜೊತೆಗೆ ಅವರ ಲೆಕ್ಕಪತ್ರಗಳನ್ನು ಬಲು ಸೂಕ್ಷ್ಮವಾಗಿ ಗಮನಿಸುವ ವ್ಯವಸ್ಥೆ ಮಾಡಿದ್ದರು. ಬಡತನವನ್ನು ಉಂಡು ಬಂದವನಿಗೆ ಭ್ರಷ್ಟಾಚಾರದ ಕರಾಳ ರೂಪಗಳು ಬಲು ಬೇಗ ಅರಿವಾಗುತ್ತದಂತೆ. ಶಿವಾಜಿ ಮಹಾರಾಜರಿಗೂ ಹಾಗೆಯೇ ಆಗಿದ್ದಿರಬೇಕು. ಸಿರಿವಂತರ ಆಶ್ರಯದಲ್ಲಿ ಜಮೀನು ಇರುವುದನ್ನು ನಿದರ್ಾಕ್ಷಿಣ್ಯವಾಗಿ ವಿರೋಧಿಸಿದ್ದ ಅವರು ಜಮೀನ್ದಾರೀ ಪದ್ಧತಿಯನ್ನು ನಿಷೇಧಿಸಿದ್ದರು.. ಅದೊಂದು ರೀತಿ ಇಂದಿನ ದಿನಗಳಲ್ಲಿ ಬಲಗೊಂಡ ಬೇನಾಮಿ ಆಸ್ತಿ ನಿಷೇಧ ಕಾನೂನಿನಂತೆಯೇ! ಮೊಘಲರ ಕಾಲದ ಸಮಸ್ಯೆಗಳನ್ನು ಭಾರತೀಯ ರಾಜರು ಸರಿದೂಗಿಸಿ ಮತ್ತೆ ಭಾರತದ ಬೆಳವಣಿಗೆಯನ್ನು ಹಳಿಗೆ ತಂದು ನಿಲ್ಲಿಸಿದ್ದರು. ಅದೂ ಸರಿಯೇ. ರಾಜ ಭಾರತೀಯನೇ ಆಗಿದ್ದರೆ ಆತ ಭಾರತೀಯರಿಗಾಗಿ ಯೋಚಿಸಬಲ್ಲ. ಅವನು ಹೊರಗಿನವನಾಗಿದ್ದರೆ, ಸಂಪತ್ತನ್ನು ವಿದೇಶಕ್ಕೊಯ್ಯುವ ಆತುರವಿದ್ದರೆ ಆತ ವ್ಯವಸ್ಥೆಯನ್ನು ಸರಿ ಮಾಡುವಲ್ಲಿ ಆತುರ ತೋರುವ ಬದಲು, ಅದನ್ನು ಹಾಳಗೆಡವಿ ತನ್ನ ಪಾಲನ್ನು ಬಾಚಿಕೊಳ್ಳುವಲ್ಲಿ ಮಗ್ನನಾಗಿಬಿಡುತ್ತಾನೆ.

4

ಬ್ರಿಟೀಷರ ವಿಚಾರದಲ್ಲಿ ಆದ ಎಡವಟ್ಟು ಇದೇ! ಅವರ ಆಗಮನದಿಂದ ಈ ದೇಶದ ಲೂಟಿ ಮೊಘಲರ ಕಾಲವನ್ನೂ ಮೀರಿಸಿತು. ಹಿಂದೂ-ಮುಸಲ್ಮಾನರನ್ನು ಜಗಳಕ್ಕೆ ಹಚ್ಚಿ ಅವರು ತಾವು ಬಲಿಯುತ್ತ ಸಾಗಿದರು. ಯೂರೋಪಿನ ಭಿನ್ನ ಭಿನ್ನ ಭಾಗದ ಜನ ಇಲ್ಲಿಗೆ ಬಂದು ವ್ಯಾಪಾರ ಮಾಡುತ್ತ ಲಾಭ ಸಂಪಾದಿಸಿದರು. ಇಂಗ್ಲೀಷರು ಬಂದಿದ್ದು 1600ರಲ್ಲಿ. ಮೊದಲೆಲ್ಲ ಭಾರತೀಯರೆದುರು ಬಾಲ ಮುದುರಿಕೊಂಡಿದ್ದವರು ಬರಬರುತ್ತ ಕೊಬ್ಬಿ ಬೆಳೆದರು. 1757ರ ನಂತರ ಕಂಪನಿ ಸಕರ್ಾರ ಸ್ಥಳೀಯ ರಾಜರನ್ನು ಬೆದರಿಸಿ ತೆರಿಗೆಯ ನೆಪದಲ್ಲಿ ಲೂಟಿ ಮಾಡಲಾರಂಭಿಸಿತು. ಬಂಗಾಳದ ಬ್ರಿಟೀಷ್ ಆಡಳಿತಾಧಿಕಾರಿ ಎಫ್. ಜೆ. ಶೋರ್ ಲಂಡನ್ನಿನ ಹೌಸ್ ಆಫ್ ಕಾಮನ್ಸ್ನಲ್ಲಿ ಎದೆಯುಬ್ಬಿಸಿ ಮಾತನಾಡುತ್ತ, ‘ಇಂಗ್ಲೀಷರ ಮೂಲಭೂತ ಸಿದ್ಧಾಂತವೇ ಎಲ್ಲ ಮಾರ್ಗಗಳಿಂದಲೂ ಭಾರತವನ್ನು ಅವರ ಒಳಿತಿಗಾಗಿಯೇ ಶರಣಾಗತವಾಗುವಂತೆ ಮಾಡುವುದು. ಇದಕ್ಕಾಗಿಯೇ ಅವರಿಗೆ ಅತ್ಯಂತ ಹೆಚ್ಚು ಕರ ಭಾರವನ್ನು ಹೇರಲಾಗಿದೆ. ಪ್ರತಿಯೊಂದು ಪ್ರಾಂತವೂ ನಮ್ಮ ತೆಕ್ಕೆಗೆ ಬೀಳುತ್ತಿದ್ದಂತೆ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ತೆರಿಗೆಯನ್ನು ಸುಲಿಯುತ್ತೇವೆ. ಸ್ಥಳೀಯ ರಾಜರು ಎಷ್ಟು ಸಂಗ್ರಹ ಮಾಡುತ್ತಿದ್ದರೋ ಅದಕ್ಕಿಂತಲೂ ಹೆಚ್ಚು ಹಣ ಸಂಗ್ರಹಿಸುತ್ತೇವೆಂಬುದೇ ನಮಗೆ ಹೆಮ್ಮೆಯ ಸಂಗತಿ’ ಎಂದಿದ್ದ. ಅವರ ಪಾಲಿಗೆ ನ್ಯಾಯಯುತವಾದ ತೆರಿಗೆಯೇ ಆಗಬೇಕೆಂದಿರಲಿಲ್ಲ; ಭ್ರಷ್ಟಾಚಾರದ ಮಾರ್ಗವೂ ಸರಿಯೇ. ರಾಜನೊಬ್ಬನ ಎದುರಾಳಿಗಳನ್ನು ಮಟ್ಟ ಹಾಕಿ ಅಧಿಕಾರದಲ್ಲಿ ಕೂರಿಸಲು ಹಣ ಪಡೆಯುತ್ತಿದ್ದರು, ತಮ್ಮ ಸೇನೆಯನ್ನು ಆಯಾ ರಾಜ್ಯದಲ್ಲಿ ನೆಲೆ ನಿಲ್ಲುವಂತೆ ಮಾಡಿ ಅದಕ್ಕೆ ಅನೂಹ್ಯ ಪ್ರಮಾಣದ ಹಣ ಪಡೆಯುತ್ತಿದ್ದರು. ಹೈದರಾಬಾದಿನ ನಿಜಾಮನ ಬಳಿ ಅಂದಿನ ದಿನದಲ್ಲಿ ತಿಂಗಳಿಗೆ ಐದು ಸಾವಿರ ಡಾಲರ್ನಷ್ಟು ಪೀಕುತ್ತಿದ್ದರು. ಈ ಹಣ ಗವರ್ನರ್ ಜನರಲ್ ಸ್ಥಾಪಿಸಿದ ಬ್ಯಾಂಕಿನ ಬೊಕ್ಕಸಕ್ಕೆ ಜಮೆಯಾಗುತ್ತಿತ್ತು. ಅದನ್ನೇ ಶೇಕಡಾ 24ರಷ್ಟು ಬಡ್ಡಿಗೆ ಮತ್ತೆ ನವಾಬನಿಗೆ ನೀಡುತ್ತಿದ್ದರು. ಆಕರ್ಾಟಿನ ನವಾಬ ಹೀಗೇ ಸಾಲ ಪಡೆದು ತೀರಿಸಲಾಗದೇ ತನ್ನ ಪ್ರಾಂತದ ಅನೇಕ ಭಾಗಗಳನ್ನು ಕಂಪನಿಗೆ ಬಿಟ್ಟುಕೊಡಬೇಕಾಗಿ ಬಂದಿತ್ತು.

ಇರಾನಿನಿಂದ ನಾವು ಪೆಟ್ರೋಲ್ ತರಿಸಿಕೊಳ್ಳುತ್ತಿದ್ದೇವಲ್ಲ ಅದರ ಸಾಲವೂ ಹೀಗೇ ಬೆಟ್ಟದಷ್ಟಾಗಿ ಬೆಳೆದು ನಿಂತಿತ್ತು. ನರೇಂದ್ರ ಮೋದಿ ಕಳೆದ ವರ್ಷ ಅಲ್ಲಿನ ಪ್ರಧಾನಿಯನ್ನು ಸ್ವಾಗತಿಸಿ, ಗೌರವಿಸಿ ಐದು ಸಾವಿರ ಕೋಟಿಯ ಮೊದಲ ಕಂತನ್ನು ಮರಳಿಸಿದ್ದರು. ಇಂಧನದ ಬೆಲೆ ಕಡಿಮೆಯಾಗುತ್ತಿಲ್ಲವೇಕೆಂದು ಅನೇಕರು ಕೇಳುತ್ತಾರೆ. ಸಾಲ ತೀರಿಸಿದ್ದು, ಇದಕ್ಕೂ ಹತ್ತಾರು ಪಟ್ಟು ಸಾಲ ಇನ್ನೂ ಬಾಕಿ ಇರುವುದು ಮಾತ್ರ ಯಾರ ಅರಿವಿಗೂ ಇಲ್ಲ. ಸಾಲ ತೀರಿಸಲಾಗದ ದೈನೇಸಿ ಸ್ಥಿತಿಯಲ್ಲಿ ಭಾರತವನ್ನು ನೋಡುವುದು ಹೇಗೆ ಸಾಧ್ಯ? ಆಕರ್ಾಟಿನ ನವಾಬ ಮಾಡಿದಂತೆ ಒಂದೊಂದೇ ಪ್ರಾಂತವನ್ನು ಒತ್ತೆ ಇಡಬೇಕಷ್ಟೇ!

ತೆರಿಗೆ ಸಂಗ್ರಹದ ವೇಳೆ ಬ್ರಿಟೀಷರ ಪ್ರಹಾರ ಮೊದಲು ಶುರುವಾಗಿದ್ದೇ ರೈತರ ಮೇಲೆ. ಇಲ್ಲಿ ಹಳ್ಳಿಗಳೇ ಬಹಳ ಆದರೆ ತೆರಿಗೆ ಸಂಗ್ರಹಕಾರರು ಕೆಲವಷ್ಟೇ ಮಂದಿ. ಅವರನ್ನೂ ನಂಬದ ಕಂಪನಿ ತೆರಿಗೆ ಸಂಗ್ರಹಕ್ಕೆ ನಿಯಮಗಳನ್ನು ಮಾಡಿತು. ಮೊದಲೆಲ್ಲ ಸ್ಥಳೀಯ ನಾಯಕರು ಸ್ಥಳೀಯರ ಸಮಸ್ಯೆಗಳನ್ನು ಅರಿತು ತೆರಿಗೆ ಸಂಗ್ರಹಿಸುತ್ತಿದ್ದರು. ಮನೆಗಳಲ್ಲಿ ಮದುವೆಗಳಾದಾಗ, ಮಳೆಯಿಲ್ಲದೇ ಬೆಳೆ ಕಡಿಮೆಯಾದಾಗ, ಊರಿನಲ್ಲಿ ಜಾತ್ರೆಯಾದ ಹೊತ್ತಲೆಲ್ಲ ಜನರ ಬಳಿ ಹಣದ ಕೊರತೆಯಾಗಿರುವುದನ್ನು ಗಮನಿಸಿ ತೆರಿಗೆಯ ಸಂಗ್ರಹವನ್ನು ಸ್ವಲ್ಪ ಸಡಿಲಗೊಳಿಸುತ್ತಿದ್ದರು. ಈಗ ಹಾಗಲ್ಲ. ನಿಯಮ ಪುಸ್ತಕ ಏನು ಹೇಳುತ್ತದೆಯೋ ಹಾಗೆ ನಡೆದು ಕೊಳ್ಳಬೇಕಷ್ಟೇ. ಮೊದಲಿನಂತೆ ಅಹವಾಲು ಕೇಳುವವರು ಯಾರೂ ಇರಲಿಲ್ಲ; ನಿಯಮದ ಪುಸ್ತಕವೇ ಎಲ್ಲ. ಭಾರತೀಯರನ್ನು ಮಾತನಾಡಿಸದೇ ಅವರನ್ನು ಸುಲಿಯುವ ಪರಂಪರೆಗೆ ಈ ನಿಯಮದ ಪುಸ್ತಕಗಳು ನಾಂದಿ ಹಾಡಿದವು. ದುದರ್ೈವವೇನು ಗೊತ್ತೆ? ಸ್ವಾತಂತ್ರ್ಯಾನಂತರವೂ ನಾವು ಬದಲಾಗಲಿಲ್ಲ. ಕಣ್ಣೊರೆಸುವ ತಂತ್ರ ಮಾಡಿದ್ದಷ್ಟೇ. ಬಗೆಬಗೆಯ ತೆರಿಗೆಗಳನ್ನು ಪರೋಕ್ಷವಾಗಿ ಹೇರಿ ನಿಯಮಗಳ ಭಾರದಲ್ಲಿ ಸಾಮಾನ್ಯ ಭಾರತೀಯ ನಲುಗುವಂತೆ ಮಾಡಿಬಿಟ್ಟೆವು.

6

1793ರಲ್ಲಿ ಬಿಳಿಯರು ರೈತರಿಂದ ತೆರಿಗೆ ಸಂಗ್ರಹಿಸುವ ಪದ್ಧತಿಯನ್ನು ಸುಧಾರಿಸಿದರು! ಅಲ್ಲಿಯವರೆಗೂ ಬೆಳೆದ ಬೆಳೆಗೆ ತಕ್ಕಂತೆ ಕಂದಾಯ ಕೊಡಬೇಕಿತ್ತು. ಈಗ ಅವರ ಜಮೀನಿಗೇ ಬಾಡಿಗೆ ಕೊಡುವಂತೆ ಕಾನೂನು ರೂಪಿಸಲಾಯ್ತು. ಮಳೆಯಾಗಲೀ, ಕ್ಷಾಮ ಅಪ್ಪಳಿಸಲಿ; ಬೆಳೆಯಾಗಲಿ, ಒಣಗಿ ಹೋಗಲಿ ರೈತ ತೆರಿಗೆ ಕಟ್ಟಲೇ ಬೇಕಿತ್ತು. ಈ ಕಂದಾಯವೂ ಜಮೀನಿನ ಬೆಳೆ ತೆಗೆಯುವ ಸಾಮಥ್ರ್ಯದ ಮೇಲೆ ನಿಧರ್ಾರಿತವಾಗುತ್ತಿರಲಿಲ್ಲ ಬದಲಿಗೆ ಆ ಜಮೀನಿನ ಮಾರಾಟದ ಬೆಲೆಯ ಮೇಲೆ ನಿಧರ್ಾರಿತವಾಗುತ್ತಿತ್ತು. ಈ ಎಲ್ಲ ಕಿರಿಕಿರಿಗಳಿಗೆ ತುಪ್ಪ ಸುರಿದಂತೆ ಎಲ್ಲ ಬಗೆಯ ತೆರಿಗೆಗಳನ್ನು ಹಣದ ರೂಪದಲ್ಲಿಯೇ ಕಟ್ಟಬೇಕೆಂದು ತಾಕೀತು ಮಾಡಿತು ಕಂಪನಿ. ಮುವ್ವತ್ತು ವರ್ಷಗಳಲ್ಲಿ ಈ ರೀತಿಯ ಭೂ ಕಂದಾಯದ ಸಂಗ್ರಹ ಬಂಗಾಳವೊಂದರಲ್ಲಿಯೇ ಸುಮಾರು ಎಂಟೂಕಾಲು ಲಕ್ಷ ಪೌಂಡುಗಳಿಂದ, ಸುಮಾರು ಇಪ್ಪತ್ತೇಳು ಲಕ್ಷ ಪೌಂಡುಗಳಿಗೆ ಏರಿತ್ತು. ಈ ಹಣ ಜನರ ಬಳಕೆಗೆ ಬರುತ್ತದೆಂದರೆ ಸುಮ್ಮನಾದರೂ ಇರಬಹುದಿತ್ತು, ಅದು ನೇರವಾಗಿ ಲಂಡನ್ನಿನ ಬೊಕ್ಕಸ ಸೇರುತ್ತಿತ್ತು. ಈ ಹಿಂದೆ ಆಳುವವರು ಇಲ್ಲಿ ಲೂಟಿ ಮಾಡಿದ್ದನ್ನು ವಿದೇಶದ ಬ್ಯಾಂಕುಗಳಲ್ಲಿ ಪೇರಿಸಿಡುತ್ತಿದ್ದರಲ್ಲ ಹಾಗೆಯೇ ಇದೂ ಕೂಡ. ಅನೇಕ ರೈತರು ತೆರಿಗೆ ಕಟ್ಟಲಾಗದೇ ತಮ್ಮ ಜಮೀನುಗಳನ್ನು ಬಿಟ್ಟು ಓಡಿ ಹೋಗುತ್ತಿದ್ದರು. ರಸ್ತೆ, ಕಟ್ಟಡ, ಸೇತುವೆ, ಕಾಲುವೆ, ಅಣೇಕಟ್ಟುಗಳ ನೆಪದಲ್ಲಿ ಇನ್ನೊಂದಷ್ಟು ಕರಭಾರ ಹೇರಿ ಅದನ್ನು ನಿರಂತರವಾಗಿ ಪಡೆಯುತ್ತಿದ್ದ ಸಕರ್ಾರ ಮಾಡಬೇಕಾದ ಕೆಲಸವನ್ನು ಮಾತ್ರ ಮರೆತೇ ಹೋಗಿರುತ್ತಿತ್ತು. 1857ರಲ್ಲಿ ಭಾರತೀಯರೆಲ್ಲ ಸೇರಿ ಕಂಪನಿ ಸಕರ್ಾರವನ್ನು ಮೂಲೋತ್ಪಾಟನೆ ಮಾಡುವವರೆಗೂ ಅದು ಅಪಾರ ಲಾಭಗಳಿಕೆ ಮಾಡುತ್ತಲೇ ಇತ್ತು. ಆಮೇಲೇ ಸ್ವತಃ ಬ್ರಿಟನ್ನಿನ ರಾಣಿ ಅಧಿಕಾರ ಸ್ವೀಕಾರ ಮಾಡಿದಳಲ್ಲ, ಆಕೆ ಮಾಡಿದ ಮೊದಲ ಕೆಲಸವೇನು ಗೊತ್ತೇ? ಇಡಿಯ ಯುದ್ಧದ ಖರ್ಚನ್ನು ಬಡ್ಡಿ ಸಮೇತ ಭಾರತೀಯರ ಮೇಲೆ ತೆರಿಗೆಯಾಗಿ ಹೇರಿದ್ದು. ತೆರಿಗೆಯ ಕಿರಿಕಿರಿ ಹೊಸ ರೂಪದಲ್ಲಿ ಮುಂದುವರೆಯಿತು, ಅಷ್ಟೇ.

‘ಹತ್ತೊಂಭತ್ತನೇ ಶತಮಾನದ ವೇಳೆಗೆ ಭಾರತ ಬ್ರಿಟೀಷರ ಪಾಲಿನ ಬಲುದೊಡ್ಡ ತೆರಿಗೆ ತಂದುಕೊಡುವ ರಾಷ್ಟ್ರವಾಗಿತ್ತು. ಬ್ರಿಟೀಷರ ಉತ್ಪಾದನೆಯ ಬಲುದೊಡ್ಡ ಖರೀದಿದಾರನೂ ಆಗಿತ್ತು. ಬ್ರಿಟೀಷರ ಅಧಿಕಾರಿಗಳಿಗೆ ಮತ್ತು ಸೈನಿಕರಿಗೆ ಹೆಚ್ಚಿನ ಸಂಬಳ ಕೊಟ್ಟು ಭಾರತವೇ ಸಾಕಿಕೊಂಡಿತ್ತು. ಒಂದೇ ಮಾತಿನಲ್ಲಿ ಹೇಳುವುದಾದರೆ ತನ್ನ ಆಳಲು ಬ್ರಿಟೀಷರನ್ನು ಭಾರತ ತಾನೇ ದುಡ್ಡು ಕೊಟ್ಟು ಕರೆಸಿಕೊಂಡಂತಿತ್ತು’ ಎನ್ನುತ್ತಾರೆ ಶಶಿ ತರೂರು. ಅದು ಹಾಗೆಯೇ ಆಗಿತ್ತು ಕೂಡ. ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ತೆರಿಗೆ ಕಟ್ಟುತ್ತಿದ್ದ ರಾಷ್ಟ್ರವಾಗಿದ್ದೆವು ನಾವು. ಅಲ್ಲಿಂದ ಇಲ್ಲಿಗೆ ಬಂದು ದುಡಿಯುತ್ತಿದ್ದ ಅಧಿಕಾರಿಗಳು ನಾಲ್ಕು ವರ್ಷಗಳ ರಜೆಯನ್ನು ಒಳಗೊಂಡಂತೆ ಇಪ್ಪತ್ನಾಲ್ಕು ವರ್ಷಗಳ ಕಾಲ ಇಲ್ಲಿ ಇದ್ದು ಹೋದರೆ, ಇದ್ದಷ್ಟೂ ಕಾಲ ಕೈತುಂಬಾ ಸಂಬಳ ಪಡೆಯುತ್ತಿದ್ದುದು ಬಿಡಿ; ನಿವೃತ್ತರಾದ ಮೇಲೆ ಪಿಂಚಣಿಯನ್ನೂ ಕೈತುಂಬಾ ಪಡೆಯುತ್ತಿದ್ದರು. ಒಂದು ಅಂದಾಜಿನ ಪ್ರಕಾರ 1920ರ ವೇಳೆಗೆ ಏಳೂವರೆ ಸಾವಿರ ಬ್ರಿಟೀಷ್ ಅಧಿಕಾರಿಗಳು ಎರಡು ಕೋಟಿ ಪೌಂಡ್ಗಳಷ್ಟು ಪಿಂಚಣಿಯನ್ನು ಭಾರತದ ಜನರ ತೆರಿಗೆಯಲ್ಲಿ ಪಡೆಯುತ್ತಿದ್ದರು! ಬ್ರಿಟೀಷರು ಜಗತ್ತಿನಾದ್ಯಂತ ನಡೆಸಿದ ಯುದ್ಧಗಳಿಗೂ ನಾವು ಜನರನ್ನು ಮತ್ತು ಹಣವನ್ನು ಕೊಟ್ಟಿದ್ದೇವೆ. 1922ರಲ್ಲಿ ಭಾರತದಿಂದ ಸಂಗ್ರಹಗೊಂಡ ಒಟ್ಟಾರೆ ತೆರಿಗೆಯಲ್ಲಿ ಸುಮಾರು ಅರವತ್ತೈದರಷ್ಟನ್ನು ವಿದೇಶಕ್ಕೆ ಕಳಿಸಲ್ಪಟ್ಟ ಬ್ರಿಟೀಷ್ ಸೇನೆಗೆಂದೇ ಖಚರ್ು ಮಾಡಲಾಗಿತ್ತು.ಇವೆಲ್ಲದರಿಂದ ರೋಸಿ ಹೋಗಿದ್ದ ದಾದಾಭಾಯಿ ನವರೋಜಿಯವರು ಕೊನೆಗೊಮ್ಮೆ ಇಂಗ್ಲೆಂಡಿಗೆ ಒಟ್ಟಾರೆ ಸೋರಿಹೋದ ಹಣದ ಕುರಿತಂತೆ ಸುದೀರ್ಘ ಅಧ್ಯಯನ ನಡೆಸಿ ‘1835ರಿಂದ 1872ರ ವೇಳೆಗೆ ಪ್ರತಿವರ್ಷ ಒಂದು ಕೋಟಿ ಮುವ್ವತ್ತು ಲಕ್ಷ ಪೌಂಡುಗಳಷ್ಟು ವಸ್ತುವನ್ನು ಭಾರತ ರಫ್ತು ಮಾಡಿತು ಬದಲಿಗೆ ಅಲ್ಲಿಂದ ಬಂದದ್ದೇನೂ ಇರಲಿಲ್ಲ’ ಎಂದು ವಾದ ಮಂಡಿಸಿದ್ದರು. ಸುಮಾರು 200 ವರ್ಷಗಳ ಕಾಲ ಭಾರತದಿಂದ ಇಂಗ್ಲೆಂಡಿಗೆ ಹರಿದು ಹೋದ ಈ ಸಂಪತ್ತು ಭಾರತದೆಡೆಗೆ ಮುಖ ಮಾಡಿದ್ದರೆ ಭಾರತ ಜಗತ್ತಿನ ಅತ್ಯಂತ ಶ್ರೀಮಂತ ರಾಷ್ಟ್ರವಾಗಿರುತ್ತಿತ್ತು.

ಸ್ವಾತಂತ್ರ್ಯಾ ನಂತರ ನಮ್ಮವರೇ ಇಲ್ಲಿನ ಸಂಪತ್ತನ್ನು ಕಪ್ಪು ಹಣವಾಗಿಸಿ ವಿದೇಶಕ್ಕೊಯ್ದರು. ಆಗಲಾದರೂ ಶ್ರದ್ಧೆಯಿಂದ ದೇಶಕ್ಕಾಗಿ ದುಡಿದಿದ್ದರೆ ನಾವು ಈ ವೇಳೆಗಾಗಲೇ ಮತ್ತೊಮ್ಮೆ ಜಗತ್ತಿನ ಸಿರಿವಂತ ರಾಷ್ಟ್ರವಾಗಿರುತ್ತಿದ್ದೆವು. ನಾವು ಆಳಿಕೊಳ್ಳಲು ಅಯೋಗ್ಯರೆಂದು ಬ್ರಿಟೀಷರು ಹೇಳಿದಂತೆ ನಡೆದುಕೊಂಡೆವು ನಾವು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s