ಚೀನಾವನ್ನು ಗೆಲ್ಲುವ ಸಮರ್ಥ ಉಪಾಯ ಇದೊಂದೇ!

ಚೀನಾವನ್ನು ಗೆಲ್ಲುವ ಸಮರ್ಥ ಉಪಾಯ ಇದೊಂದೇ!

ಭಾರತ ಈಗ ಮತ್ತೆ ಜಗತ್ತನ್ನು ಆಳಬೇಕಾದ ಹೊತ್ತು ಬಂದಿದೆ. ಯುದ್ಧ ಮಾಡುವ ಸಾಮಥ್ರ್ಯ ಹೊಂದಿದವನು ಮಾತ್ರ ಶಾಂತಿಯ ಮಾತಾಡಲು ಯೋಗ್ಯತೆ ಪಡೆದಿರುತ್ತಾನೆ. ಭಾರತ ಈಗ ಚೀನಾದ ಮೇಲೆ ತನ್ನ ಶಕ್ತಿಯನ್ನು ಸಾಬೀತು ಪಡಿಸಿದ ನಂತರ ಅದನ್ನು ಪಳಗಿಸುವ ಅಗತ್ಯವಿದೆ.ಅವರು ಅಪ್ಪಿಕೊಂಡ ಕ್ರಿಶ್ಚಿಯಾನಿಟಿ ಅವರನ್ನು ಪ್ರಪಾತದಂಚಿಗೆ ಒಯ್ದಿದೆ. ಇಸ್ಲಾಂ ರಾಷ್ಟ್ರವನ್ನೇ ಚೂರಾಗಿಸುವ ಹಂತದಲ್ಲಿದೆ. ತಾವೋಯಿಸ್ಮ್ ಈ ಶತ್ರುಗಳನ್ನು ಎದುರಿಸುವಷ್ಟು ಸಮರ್ಥವಾಗಿಲ್ಲ. ಅವರಿಗೀಗ ಶಕ್ತಿ ತುಂಬಬಲ್ಲದ್ದು ಹಿಂದೂ ಧರ್ಮ ಮಾತ್ರ.

ಚೀನಾ ಡೋಕ್ಲಾಂನಿಂದ ಹಿಂದೆ ಸರಿಯುವ ಮಾತಾಡುತ್ತಿದೆ. ನೂರು ಮೀಟರ್ ಹಿಂದೆ ಸರಿಯುತ್ತೇನೆ, ನೀವೂ ಹಿಂದೆ ಹೋಗಿ ಎನ್ನುವಾಗ ಭಾರತ ‘ಕನಿಷ್ಠ ಇನ್ನೂರೈವತ್ತು ಮೀಟರ್’ ಎನ್ನುತ್ತಿರುವುದು ನಿಜಕ್ಕೂ ಹೊಸ ಬೆಳವಣಿಗೆ. ಕಳೆದ ಅನೇಕ ವಾರಗಳಲ್ಲಿ ಚೀನಾ ಕುರಿತಂತೆ ಬರೆಯುವುದನ್ನು ಗಮನಿಸಿದ ಮಿತ್ರರೊಬ್ಬರು ಇಷ್ಟೊಂದು ಬರೆಯುವ ಅಗತ್ಯವಿದೆಯಾ ಅಂತ ಕೇಳಿದ್ದರು. ಚೀನಾವನ್ನು ನಾವು ಹೆಚ್ಚು ಪರಿಗಣಿಸಿದಷ್ಟೂ ಅದರ ಕುರಿತಂತಹ ಆತಂಕ ಹೆಚ್ಚಾಗುವುದಿಲ್ಲವೇ? ಎಂಬುದು ಅವರ ವಾದ. ಇರಬಹುದು, ಈ ಮಾತನ್ನು ಪೂತರ್ಿಯಾಗಿ ಅಲ್ಲಗಳೆಯಲಾಗುವುದಿಲ್ಲ. ಆದರೆ ನೆಹರು ಕಾಲದಲ್ಲಿ ಶುರುವಾದ ಚೀನಾ ಆತಂಕವನ್ನು ಕೊನೆಗೊಳಿಸಲು ಅದರೆದುರು ಬಲಾಢ್ಯವಾಗಿ ನಿಂತು ಒಮ್ಮೆ ಗದರಿಸುವುದಷ್ಟೇ ದಾರಿ. ಐವತ್ತು ವರ್ಷಗಳ ಹಿಂದಿನಿಂದಲೂ ಮಡುಗಟ್ಟಿದ್ದ ಅವಮಾನವನ್ನು ಪರಿಮಾರ್ಜನೆ ಮಾಡುವಲ್ಲಿ ಇದಕ್ಕಿಂತಲೂ ಸುಲಭದ ಮಾರ್ಗವಿಲ್ಲ.

ಈಗ ಯುದ್ಧದ ಕಾಮರ್ೋಡಗಳು ಕಳಚಿದಂತಾದ ನಂತರ ಬೇರೊಂದು ರೂಪದಲ್ಲಿ ಆಲೋಚಿಸಬೇಕಾದ ಅಗತ್ಯವಿದೆ. ಚೀನಾ ಮತ್ತು ಭಾರತಗಳು ಶಾಶ್ವತ ವೈರಿಗಳಲ್ಲ, ಬದಲಿಗೆ ಸಾವಿರಾರು ವರ್ಷಗಳಿಂದ ಒಂದಕ್ಕೊಂದು ಪೂರಕವಾಗಿ ಬೆಸೆದುಕೊಂಡ ಮಿತ್ರ ರಾಷ್ಟ್ರಗಳು. ಪ್ರಾಚೀನ ಸಂಸ್ಕೃತಿ, ಪ್ರಾಚೀನ ನಾಗರೀಕತೆ ಎಂಬ ಗೌರವವನ್ನು ಸಮಾನವಾಗಿ ಹಂಚಿಕೊಂಡ ದೇಶಗಳು ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಮುಂದಿನ ಹೆಜ್ಜೆ ಇಡಬೇಕಿದೆ. ಇತ್ತೀಚೆಗೆ ಪ್ರೊಫೆಸರ್ ವೈದ್ಯನಾಥನ್ ಹೇಳಿರುವ ಮಾತು ಅಕ್ಷರಶಃ ಸತ್ಯ, ‘ಚೀನಾವನ್ನು ನಾವು ಪಶ್ಚಿಮದ ಕನ್ನಡಕ ಬಳಸಿ ನೋಡುವುದನ್ನು ಬಿಡಬೇಕಿದೆ’ಬಹುಶಃ ಈಗ ಹೇಳುತ್ತಿರುವುದು ಇಷ್ಟೂ ದಿನಗಳ ಚಿಂತನೆಗೆ ವಿರುದ್ಧವೆನಿಸಬಹುದು ಆದರೆ ಇವು ಪೂರಕವಾಗಿರುವಂಥದ್ದು. ಯುದ್ಧದ ಹೊತ್ತಲ್ಲಿ ಇರುವ ಆಕ್ರೋಶ ಆನಂತರವೂ ಮುಂದುವರಿದರೆ ನಾವು ಸದಾ ಕಾಲು ಕೆರೆದುಕೊಂಡು ಜಗಳವಾಡುವ ಇಸ್ಲಾಂ ರಾಷ್ಟ್ರಗಳಂತಾಗಿಬಿಡುತ್ತೇವೆ. ಯುದ್ಧದ ಕಾಲಕ್ಕೂ ಮಾತನಾಡದೇ ಸುಮ್ಮನಿದ್ದುಬಿಟ್ಟರೆ ನಾವು ಹೇಡಿಗಳಾಗಿಬಿಡುತ್ತೇವೆ. ಭಾರತ ಈಗ ಚೀನಾವನ್ನು ಹೆದರಿಸಿ ಏಷಿಯಾದಲ್ಲಿ ಗಳಿಸಿರುವ ನಂಬಿಕೆ ಅಪಾರ. ಬರಲಿರುವ ದಿನಗಳಲ್ಲಿ ಸಣ್ಣಪುಟ್ಟ ರಾಷ್ಟ್ರಗಳೂ ನಮ್ಮ ವಿಶ್ವಾಸದ ಮೇಲೆ ಚೀನಾದೆದುರು ಬಲವಾಗಿ ನಿಲ್ಲುತ್ತವೆ. ಇದು ಚೀನಾದ ಸಾರ್ವಭೌಮತೆಯ ಕನಸಿಗೆ ಬಲವಾದ ಹೊಡೆತ. ಏಷಿಯಾದಲ್ಲಷ್ಟೇ ಅಲ್ಲ, ಜಾಗತಿಕವಾಗಿಯೂ ಅದರ ಪ್ರಭಾವಕ್ಕೆ ಹಿನ್ನಡೆ ಉಂಟಾಗುವುದರಲ್ಲಿ ಅನುಮಾನವಿಲ್ಲ. ಈ ನಿವರ್ಾತವನ್ನು ತುಂಬುವ ಸಾಮಥ್ರ್ಯವಿರೋದು ಭಾರತಕ್ಕೆ ಮಾತ್ರ. ಅದಾಗಲೇ ಜಾಗತಿಕವಾಗಿ ಭಾರತ ಸಾಧಿಸಿರುವ ಪ್ರಗತಿಯನ್ನು ನೋಡಿದರೆ ಈ ಚೀನಾ ಗಲಾಟೆಯ ನಂತರ ನಮ್ಮ ಮೇಲಿನ ವಿಶ್ವಾಸ ನೂರು ಪಟ್ಟು ಅಧಿಕವಾಗಿರುತ್ತದೆ. ಅದು ಯಾವಾಗಲೂ ಹಾಗೆಯೇ. ಶಕ್ತಿಯುಳ್ಳವನನ್ನೇ ಅನುಸರಿಸೋದು ಜಗತ್ತು. ಅಮೇರಿಕಾ ಆಥರ್ಿಕವಾಗಿ ಚೀನಾಗಿಂತಲೂ ಬಲಾಢ್ಯವೇನಲ್ಲ ಆದರೆ ಜಗತ್ತಿನ ಹಿರಿಯಣ್ಣನೆಂದು ಕರೆಯಲ್ಪಡೋದು ಅದೇ. ಇಸ್ರೇಲ್ ತನ್ನ ಕದನದ ಶಕ್ತಿಯಿಂದಾಗಿಯೇ ಜಗತ್ತನ್ನು ಶಾಂತವಾಗಿರಿಸಿರೋದು. ಭಾರತ ಕಳೆದೆರಡು ತಿಂಗಳಲ್ಲಿ ಗಡಿ ಕದನದಿಂದ ಏಷಿಯಾದಲ್ಲಿಯೇ ತಾನು ಚೀನಾಕ್ಕಿಂತ ಬಲಶಾಲಿ ಎಂಬುದನ್ನು ಸಾಬೀತು ಪಡಿಸಿದೆ. ಜೊತೆಗೆ ಪಾಕಿಸ್ತಾನವೊಂದರೊಂದಿಗೆ ಬಿಟ್ಟು ಉಳಿದೆಲ್ಲ ರಾಷ್ಟ್ರಗಳೊಂದಿಗೂ ಸೌಹಾರ್ದ ಸಂಬಂಧವನ್ನು ಉಳಿಸಿಕೊಂಡಿರುವುದರಿಂದ ಚೀನಾಕ್ಕಿಂತಲೂ ಇತರೆಲ್ಲರನ್ನೂ ಆಕಷರ್ಿಸಬಲ್ಲ ಶಕ್ತಿಯನ್ನು ಪಡೆದುಕೊಂಡಿದೆ. ಈಗ ಭಾರತ ಏಷಿಯಾದ ಹಿರಿಯಣ್ಣನಾಗಿ ಹೊಸದೊಂದು ಆದರ್ಶವನ್ನು ಸ್ಥಾಪಿಸಬಲ್ಲ ವಿಶೇಷ ಅಧಿಕಾರ ಸಹಜವಾಗಿಯೇ ಪಡೆದುಕೊಂಡಿದೆ.

1

ಚೀನಾ ಇಂದು ಜಗತ್ತಿನ ಬಲು ದೊಡ್ಡ ಆಥರ್ಿಕ ಶಕ್ತಿ. 2014 ರಲ್ಲಿಯೇ ಅಮೇರಿಕಾವನ್ನು ಜಿಡಿಪಿಯಲ್ಲಿ ಹಿಂದಿಕ್ಕಿತ್ತು ಅದು. ಕೊಳ್ಳುವ ಶಕ್ತಿಯೂ ವೃದ್ಧಿಯಾಗಿದೆ ಅದರದ್ದು. ಹಾಗಂತ ಅದು ಆರೋಗ್ಯಕರವಾಗಿ ಆದ ಬೆಳವಣಿಗೆಯೇನಲ್ಲ. ಆಳುವ ಕಮ್ಯುನಿಸ್ಟ್ ಪಡೆಗಳು ಮೂಲ ಪರಂಪರೆಯನ್ನು ಧ್ವಂಸಗೈದು ಕಾಮರ್ಿಕ ನೀತಿಯ ಮೂಲಕ ಜನರನ್ನು ಮೈಬಗ್ಗಿಸಿ ದುಡಿಯುವುದಕ್ಕೆ ಹಚ್ಚಿದ ಮೇಲೆ ಆದ ಬದಲಾವಣೆಗಳು. ಈ ಓಟದಲ್ಲಿ ಚೀನಾ ಮಹಾ ಕಾಮರ್ಿಕ ಶಕ್ತಿಯಾಗಿ ಬೆಳೆದು ನಿಂತಿತು, ಜಗತ್ತಿನ ಅನೇಕ ರಾಷ್ಟ್ರಗಳು ಹೂಡಿಕೆಯ ನೆಪದಲ್ಲಿ ಕಡಿಮೆ ಬೆಲೆಯ ಕಾಮರ್ಿಕರನ್ನು ಬಳಸಿಕೊಳ್ಳಲು ಧಾವಿಸಿತು. ಆದರೆ ಚೀನಿಯರು ಬಲುವಾಗಿ ಬಯಸುವ ಪರಿವಾರದ ಕಲ್ಪನೆಯಿಂದ ದೂರವಾಗಿಬಿಟ್ಟರು. ಯಂತ್ರಗಳಂತೆ ದುಡಿಯುವುದು ಮತ್ತು ಸಕರ್ಾರದ ಕಟ್ಟುನಿಟ್ಟಿನ ನೀತಿಗಳಿಗೆ ತಲೆ ಬಾಗುವುದು ಇಷ್ಟೇ ಅವರ ಕಾಯಕವಾಯಿತು. ಧಾಮರ್ಿಕ ರೀತಿನೀತಿಗಳಿಗೆ ಕಮ್ಯುನಿಷ್ಟರ ವಿರೋಧವಿದ್ದುದರಿಂದ ಕಾಲಕ್ರಮದಲ್ಲಿ ಜನ ಪರಂಪರಾಗತ ನಂಬಿಕೆಗಳಿಂದ ದೂರ ಸರಿಯಬೇಕಾಯ್ತು. ಹೀಗೆ ಉಂಟಾದ ನಿವರ್ಾತವನ್ನು ತುಂಬಿದ್ದು ಕ್ರಿಶ್ಚಿಯನ್ನರು. ಚೀನಾದಲ್ಲಿ ಐದು ಪಂಥಗಳಿಗೆ ಮಾತ್ರ ಅಧಿಕೃತವಾಗಿ ಅವಕಾಶ. ತಾವೋ, ಬೌದ್ಧ, ಇಸ್ಲಾಂ, ಹಾಗೂ ಕ್ರಿಶ್ಚಿಯನ್ನರ ಪಂಥಗಳಾದ ಪ್ರೊಟೆಸ್ಟೇನಿಯರಿಸ್ಮ್ ಮತ್ತು ಕ್ಯಾಥೊಲಿಸ್ಮ್ಗಳಿಗೆ ಮಾತ್ರ. ಉಳಿದವೆಲ್ಲವೂ ಅಲ್ಲಿ ಅನಧಿಕೃತ ಪಂಥಗಳು. ಆದರೆ ಕಳೆದ ಆರೇಳು ದಶಕಗಳಿಂದ ಅಲ್ಲಿ ಕ್ರಿಶ್ಚಿಯನ್ನರ ಹಾವಳಿ ಅದೆಷ್ಟು ಜೋರಾಗಿದೆಯೆಂದರೆ ಇತ್ತೀಚೆಗೆ ದಕ್ಷಿಣ ಕೋರಿಯಾಕ್ಕೆ ಭೇಟಿ ಕೊಟ್ಟ ಪೋಪ್ ತನ್ನ ಸಾರ್ವಭೌಮತೆಯನ್ನು ಒಪ್ಪದ ಚೀನಿ ಆಡಳಿತದ ವಿರುದ್ಧ ಕೂಗಾಡಿ ಹೋದರು. ಚೀನಾದಲ್ಲಿ ಚಚರ್ುಗಳು ಸಾಕಷ್ಟು ತಲೆ ಎತ್ತಿವೆಯಾದರೂ ಅವುಗಳಲ್ಲಿ ಯಾವುವೂ ಪೋಪ್ನ ಅಡಿಯಲ್ಲಿಲ್ಲ. ಅವಕ್ಕೆ ಪ್ರತ್ಯೇಕ ಅಸ್ತಿತ್ವವಿರುವಂತೆ ಕಟ್ಟುನಿಟ್ಟಾಗಿ ಅದನ್ನು ಪಾಲಿಸಲಾಗಿದೆ. ಹಾಗಂತ ಅಂತರಾಷ್ಟ್ರೀಯ ಕ್ರಿಶ್ಚಿಯನ್ ಸಂಸ್ಥೆಗಳೇನು ಸುಮ್ಮನಿಲ್ಲ. ಅವು ಗುಪ್ತ ಚಚರ್ುಗಳ ಮೂಲಕ ಚೀನಾದ ಮೇಲೆ ಹಿಡಿತ ಸಾಧಿಸುವ ಪ್ರಯತ್ನ ಮಾಡುತ್ತಲೇ ಇವೆ. ಸಕರ್ಾರಕ್ಕೆ ಅಧಿಕೃತ ಮಾಹಿತಿ ಇರುವಂತೆ ಚೀನಾದಲ್ಲಿರುವ ಕ್ರಿಶ್ಚಿಯನ್ನರ ಸಂಖ್ಯೆ 2 ಕೋಟಿಯಷ್ಟಾದರೂ ವಾಸ್ತವವಾಗಿ ಅವರ ಸಂಖ್ಯೆ 13 ಕೋಟಿಗೂ ಅಧಿಕವಿದೆಯಂತೆ. ಮತ್ತಿದು ಏಳುವರೆ ಕೋಟಿಯಷ್ಟಿರುವ ಕಮ್ಯೂನಿಷ್ಟ್ ಸದಸ್ಯರಿಗಿಂತಲೂ ನಿಸ್ಸಂಶಯವಾಗಿ ಹೆಚ್ಚು. ಚೀನಾದಿಂದ ಹೊರಗೆ ಹೋಗುವ ವಿದ್ಯಾಥರ್ಿಗಳು ಮತಾಂತರವಾಗದಿದ್ದರೂ ತಮ್ಮನ್ನು ತಾವು ಕ್ರಿಶ್ಚಿಯನ್ನರೆಂದು ಪರಿಚಯಿಸಿಕೊಳ್ಳಲು ಹೆಚ್ಚು ಇಚ್ಛೆ ಪಡುತ್ತಾರೆಂಬುದು ಚೀನಾ ಆತಂಕ ಪಡಬೇಕಾದ ವಿಚಾರ. ಬರಿಯ ಕ್ರಿಶ್ಚಿಯಾನಿಟಿಯಷ್ಟೇ ಅಲ್ಲ. ಇಸ್ಲಾಂನಿಂದಲೂ ಕೂಡ ಇದೇ ಬಗೆಯ ಸಮಸ್ಯೆ ಚೀನಾ ಎದುರಿಸುತ್ತಿದೆ. ಚೀನಾದಲ್ಲಿ ಪ್ರತ್ಯೇಕತೆಯ ಮಾತಾಡುವ ಮುಸಲ್ಮಾನರು ಪಶ್ಚಿಮ ಚೀನಾದಲ್ಲಿ ಹೆಚ್ಚುತ್ತಿದ್ದಾರೆ. ಕಳೆದ ವರ್ಷ ಅಲ್ಲಿನ ಗಲಾಟೆಯಲ್ಲಿ ನೂರಕ್ಕೂ ಹೆಚ್ಚು ಮುಸಲ್ಮಾನರು ಪ್ರಾಣ ಕಳೆದುಕೊಂಡರು. ಅನೇಕ ಉಯ್ಘರ್ ಮುಸಲ್ಮಾನರು ಕದನವನ್ನು ಬೀಜಿಂಗ್ನವರೆಗೂ ಒಯ್ದು ಸದ್ದು ಮಾಡಿದ್ದರು. ಈ ದಂಗೆಕೋರರನ್ನು ನಿಯಂತ್ರಿಸಲು ಅದೀಗ ಹರಸಾಹಸ ಮಾಡುತ್ತಿದೆ. ಅವರ ಮೇಲೆ ನಿಯಂತ್ರಣಗಳನ್ನು ಹೇರಿ ಮೆಕ್ಕಾ ಕೇಂದ್ರಿತ ಇಸ್ಲಾಂ ಹಬ್ಬುವುದನ್ನು ತಡೆಗಟ್ಟಲು ಯತ್ನಿಸುತ್ತಿದೆ.

ಧರ್ಮವೆಂದರೆ ಅಫೀಮು ಎಂದು ಜಗತ್ತಿಗೆಲ್ಲ ಹಬ್ಬಿಸಿದ ಕಮ್ಯುನಿಷ್ಟ್ ಚೀನಾ ಅದಾಗಲೇ ತನ್ನ ವರಸೆ ಬದಲಾಯಿಸುತ್ತಿದೆ. ದಶಕದಷ್ಟು ಹಿಂದೆಯೇ ಹು ಜಿಂಟಾವೋ ಕಮ್ಯುನಿಷ್ಟ್ ಪಾಟರ್ಿಯ ಸಭೆಯಲ್ಲಿ ಮಾತನಾಡಿ ಪುರೋಹಿತರು, ಸಂತರು ಮತ್ತು ಆಸ್ತಿಕರು ಚೀನಾದ ಸಾಮಾಜಿಕ ಮತ್ತು ಆಥರ್ಿಕ ಬೆಳವಣಿಗೆಗೆ ಸಾಕಷ್ಟು ಕೊಡುಗೆ ಕೊಟ್ಟಿರುವುದರಿಂದ ಧರ್ಮ ಅಫೀಮೆಂಬ ಚಿಂತನೆಗೆ ಬದ್ಧವಾಗಿರಬೇಕೆಂಬ ಅಗತ್ಯವಿಲ್ಲ ಎಂಬರ್ಥದ ಮಾತುಗಳನ್ನಾಡಿದ್ದ. ಅಲ್ಲಿನ ಸಕರ್ಾರದ ಹಿಡಿತದಲ್ಲಿರುವ ಪತ್ರಿಕೆ ಧಾಮರ್ಿಕ ಸ್ವಾತಂತ್ರ್ಯದ ಬಗ್ಗೆ ಮಾತಾಡಿತ್ತು. ಧರ್ಮವೊಂದೇ ಸಮರಸದ ಜೀವನವನ್ನು ಸಾಕಾರ ಮಾಡಿಕೊಡಬಲ್ಲುದು ಎಂದಿತ್ತು. ಈ ಹಿನ್ನೆಲೆಯಲ್ಲಿಯೇ ಚೀನಿ ಸಕರ್ಾರ ತಮ್ಮ ಅಧಿಕೃತ ಪಂಥವಾದ ಕನ್ಫ್ಯೂಷಿಯಸ್ನ್ನು ಜಗತ್ತಿನಾದ್ಯಂತ ಹಬ್ಬಿಸಲು ಅನೇಕ ಪೀಠಗಳನ್ನು ಸ್ಥಾಪಿಸಿದೆ. ಹೀಗೆ ತಮ್ಮ ಪಂಥವನ್ನು ಒಯ್ದಾಗಲೆಲ್ಲ ಅವರು ಅದರೊಟ್ಟಿಗೆ ಬೌದ್ಧ ಮತವನ್ನು ಭಾರತೀಯತೆಯನ್ನು ಒಯ್ಯಲೇ ಬೇಕೆಂಬುದನ್ನು ಮರೆಯಬೇಡಿ. ಇದು ಭಾರತದ ಪಾಲಿಗೆ ನಿಜಕ್ಕೂ ಆಶಾಕಿರಣ. ಚೀನಾದ ಇತಿಹಾಸವನ್ನು ಕೆದಕಿದರೆ ಅನಾವರಣಗೊಳ್ಳೋದು ಭಾರತವೇ. ಕಮ್ಯುನಿಷ್ಟರು ಅದೆಷ್ಟೇ ಬೇಡವೆಂದರೂ ಇಂದಿಗೂ ಬಹುತೇಕ ಚೀನಿಯರು ಮರುಜನ್ಮ ಭಾರತದಲ್ಲಾಗಲೆಂದು ಪ್ರಾಥರ್ಿಸಿಕೊಳ್ಳುತ್ತಾರೆ. ಅದಕ್ಕೆ ಕಾರಣವೂ ಇದೆ. ಚೀನಾದ ಅತ್ಯಂತ ಪ್ರಾಚೀನ ಹಾನ್ ಸಾಮ್ರಾಜ್ಯವೇ ಭಾರತದ ಬೌದ್ಧಾಚಾರ್ಯರುಗಳಿಂದ ಪ್ರಭಾವಗೊಂಡಿತ್ತು. ರಾಜನರಮನೆಯಲ್ಲಿಯೇ ಬುದ್ಧನ ಆರಾಧನೆ ನಡೆಯುತ್ತಿದ್ದ ಕಾಲವಾಗಿತ್ತಂತೆ ಅದು. ಆನಂತರದ ರಾಜರೂ ಭಾರತದಿಂದ ಪಂಡಿತರನ್ನು ಕರೆಸಿಕೊಳ್ಳುವಲ್ಲಿ ಉತ್ಸುಕರಾಗಿದ್ದರು. ಅಷ್ಟೇ ಅಲ್ಲ, ನೂರರಲ್ಲಿ ಹತ್ತು ಜನರೂ ಮರಳಲಾಗದೇ ಕಾಣೆಯಾಗುವ ಬಲು ಕಠಿಣ ಯಾತ್ರೆಯಾಗಿದ್ದಾಗಲೂ ಅನೇಕ ಸಾಹಸಿಗಳು ಭಾರತಕ್ಕೆ ಬಂದು ಇಲ್ಲಿ ಅಧ್ಯಯನ ಮಾಡಿ ತಮ್ಮ ದೇಶಕ್ಕೆ ಮರಳುತ್ತಿದ್ದರಂತೆ. ಹೀಗೆ ಭಾರತಕ್ಕೆ ಭೇಟಿ ಕೊಟ್ಟು ಬಂದ ಯಾತ್ರಿಕ ಅಥವಾ ವಿದ್ಯಾಥರ್ಿಗೆ ಚೀನಾದಲ್ಲಿ ಅಪಾರವಾದ ಗೌರವವಿತ್ತು. ಚೀನಿಯರ ಭಾಷೆಯ ಮೇಲೆ ಭಾರತದ ಪ್ರಭಾವವಿದೆ. ಅಲ್ಲಿನ ಯುದ್ಧ ಕಲೆಯ ಮೇಲೆ ನಮ್ಮ ಪ್ರಭುತ್ವವಿದೆ. ಅಲ್ಲಿನ ಆಚಾರ-ವಿಚಾರಗಳು ನಮ್ಮೊಂದಿಗೆ ಸಾಮ್ಯತೆಯನ್ನು ತೋರುತ್ತವೆ. ಒಂದು ರೀತಿ ಚೀನಾ ಬುದ್ಧ ಭಾರತದ ವಸಾಹತು. ಹಾಗೆಂದೇ ಅಮೇರಿಕದಲ್ಲಿದ್ದ ಚೀನಿ ರಾಯಭಾರಿ ಹೂಶೀ ‘ಒಬ್ಬೇ ಒಬ್ಬ ಸೈನಿಕನನ್ನು ಕಳಿಸದೇ ಭಾರತ 2 ಸಾವಿರ ವರ್ಷಗಳ ಕಾಲ ನಮ್ಮನ್ನಾಳಿತು’ ಎಂದಿದ್ದ.

4

ಭಾರತ ಈಗ ಮತ್ತೆ ಜಗತ್ತನ್ನು ಆಳಬೇಕಾದ ಹೊತ್ತು ಬಂದಿದೆ. ಯುದ್ಧ ಮಾಡುವ ಸಾಮಥ್ರ್ಯ ಹೊಂದಿದವನು ಮಾತ್ರ ಶಾಂತಿಯ ಮಾತಾಡಲು ಯೋಗ್ಯತೆ ಪಡೆದಿರುತ್ತಾನೆ. ಭಾರತ ಈಗ ಚೀನಾದ ಮೇಲೆ ತನ್ನ ಶಕ್ತಿಯನ್ನು ಸಾಬೀತು ಪಡಿಸಿದ ನಂತರ ಅದನ್ನು ಪಳಗಿಸುವ ಅಗತ್ಯವಿದೆ. ನೆನಪಿಡಿ. ಸಿಡಿಯಲು ಸಿದ್ಧವಾದ ಜ್ವಾಲಾಮುಖಿಯ ಮೇಲೆ ಕುಳಿತಿದೆ ಚೀನಾ. ಸ್ವತಃ ಪೀಪಲ್ಸ್ ಲಿಬರೇಶನ್ ಆಮರ್ಿ ಅಧಿಕಾರಸ್ಥರ ಅಡಿಯಾಳಾಗಿಲ್ಲ ಎಂಬ ಆತಂಕವೂ ಒಳಗಿಂದೊಳಗೆ ಬೇಯಿಸುತ್ತಿದೆ. ಭ್ರಷ್ಟಾಚಾರ ಮಿತಿ ಮೀರಿ ಆಡಳಿತ ನಡೆಸುವವರೂ ವಿಚಾರಣೆ ಎದುರಿಸಬೇಕಾದ ಪರಿಸ್ಥಿತಿ ನಿಮರ್ಾಣವಾಗಿ ಅವಮಾನಿತವಾಗಿತ್ತು ಎಡ ಪಡೆ. ಇವೆಲ್ಲಕ್ಕೂ ಮೂಲ ಕಾರಣ ಮೌಲ್ಯಗಳಿಂದ ದೂರವಾದ ತರುಣ ಪಡೆ ಎಂಬುದರಲ್ಲಿ ಯಾವ ಸಂಶಯವೂ ಅಲ್ಲಿನ ಪ್ರಜ್ಞಾವಂತರಿಗಿಲ್ಲ. ಅವರು ಅಪ್ಪಿಕೊಂಡ ಕ್ರಿಶ್ಚಿಯಾನಿಟಿ ಅವರನ್ನು ಪ್ರಪಾತದಂಚಿಗೆ ಒಯ್ದಿದೆ. ಇಸ್ಲಾಂ ರಾಷ್ಟ್ರವನ್ನೇ ಚೂರಾಗಿಸುವ ಹಂತದಲ್ಲಿದೆ. ತಾವೋಯಿಸ್ಮ್ ಈ ಶತ್ರುಗಳನ್ನು ಎದುರಿಸುವಷ್ಟು ಸಮರ್ಥವಾಗಿಲ್ಲ. ಅವರಿಗೀಗ ಶಕ್ತಿ ತುಂಬಬಲ್ಲದ್ದು ಹಿಂದೂ ಧರ್ಮ ಮಾತ್ರ. ಹೇಗೆ ಪೋಪ್ ಪ್ರವಾಸ ಕೈಗೊಂಡು ಕ್ರಿಸ್ತ ಧರ್ಮದ ಪ್ರಚಾರಕ್ಕೆ ನಿರತನಾಗಿದ್ದಾನೋ ಹಾಗೆಯೇ ಹಿಂದೂ ಧರ್ಮವನ್ನೂ ಮೂಲೆ ಮೂಲೆಗೆ ಕೊಂಡೊಯ್ಯುವ ನಮ್ಮ ಮಿಶನರಿ ಚಟುವಟಿಕೆ ತೀವ್ರಗೊಳ್ಳಬೇಕಿದೆ. ಬೇರೆಲ್ಲ ದೇಶಗಳ ಕುರಿತಂತೆ ಬೇಕಿದ್ದರೆ ಆಮೇಲೆ ಯೋಚಿಸೋಣ. ಸದ್ಯಕ್ಕೆ ಚೀನಾಕ್ಕಂತೂ ಭಾರತೀಯ ಸಂತ, ಜ್ಞಾನಿಗಳ ಪಡೆ ಧಾವಿಸಬೇಕಿದೆ. ರವಿಶಂಕರ್ ಗುರೂಜಿ, ಸದ್ಗುರು ಜಗ್ಗಿ ವಾಸುದೇವ್, ಬಾಬಾ ರಾಮದೇವ್, ಮಾತಾ ಅಮೃತಾನಂದಮಯಿಯಂತಹವರು ಈಗ ಚೀನಾದ ಪ್ರವಾಸ ಮಾಡಿ ಹಿಂದುತ್ವವನ್ನು ಬಿತ್ತಬೇಕಿದೆ. ನೆನಪಿಡಿ. ಚೀನಾದ ಬದುಕಿನ ಮೌಲ್ಯಗಳೆಲ್ಲ ಭಾರತಕ್ಕೆ ಬಲು ಹತ್ತಿರವಾದವು. ಕಮ್ಯನಿಸಂನ ಅತ್ಯಾಚಾರಗಳಿಂದ ಬೇಸತ್ತ ಹೊಸ ಪೀಳಿಗೆ ಸತ್ಯದೆಡೆಗೆ ಮುಖ ಮಾಡಿ ಆಸ್ಥೆಯಿಂದ ಕುಳಿತಿದೆ. ಅವರನ್ನು ಸೆಳೆದು ಮತ್ತೊಮ್ಮೆ ಚೀನಾವನ್ನು ವಸಾಹತಾಗಿಸಿಕೊಳ್ಳು ಸೂಕ್ತ ಸಮಯ ಈಗ ನಮ್ಮೆದುರಿಗಿದೆ.

2007ರಲ್ಲಿ ಚೀನಾದ ವಿಶ್ವವಿದ್ಯಾಲಯವೊಂದರ ಅಧ್ಯಾಪಕರು ಸವರ್ೇ ನಡೆಸಿ ಹೊರ ಹಾಕಿದ ಮಾಹಿತಿ ಅಚ್ಚರಿ ತರುವಂಥದ್ದಾಗಿತ್ತು. ಇಷ್ಟು ದೀರ್ಘ ಕಾಲದ ಧರ್ಮವಿರೋಧಿ, ನಾಸ್ತಿಕರ ಪಡೆಯ ಆಳ್ವಿಕೆಯ ನಂತರವೂ ಇಂದಿಗೂ ಸುಮಾರು ಮುವ್ವತ್ತೊಂದು ಪ್ರತಿಶತ ಜನ ಧರ್ಮಪರವಿರುವವರಂತೆ. 16-40 ರೊಳಗಿನ ಶೇಕಡಾ ಅರವತ್ತರಷ್ಟು ಜನ ಧರ್ಮಮಾಗರ್ಿಗಳಾಗಲು ಬಯಸುವವರಂತೆ. ಇವರ ಈ ಬಯಕೆಯನ್ನು ತಣಿಸಲು ಕ್ರೈಸ್ತ ಧರ್ಮ ನುಸುಳಿರುವುದು ಭಾರತದ ದೃಷ್ಟಿಯಿಂದ ಒಳಿತಲ್ಲ. ಅವರು ಒಮ್ಮ ಚೀನಾವನ್ನು ತಮ್ಮ ಮೂಲ ಪರಂಪರೆಯಿಂದ ದೂರ ತಂದರೆಂದರೆ ಅಲ್ಲಿಗೆ ಭಾರತ ಅದನ್ನು ಸೆಳೆದುಕೊಳ್ಳುವ ಅವಕಾಶವನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತದೆ.

5

ಚೀನಾದ ವಸ್ತುಗಳನ್ನು ವಿರೋಧಿಸುವುದರ ಜೊತೆಗೆ ಆಂತರಂಗಿಕವಾಗಿ ಚೀನಾವನ್ನು ನಮ್ಮತ್ತ ಸೆಳೆದುಕೊಳ್ಳುವ ಪ್ರಯತ್ನ ಮಾಡಬೇಕಿದೆ. ಅದಾಗಲೇ ನಮ್ಮ ಯೋಗ ಅಲ್ಲಿ ಸಾಕಷ್ಟು ಪ್ರಖ್ಯಾತವಾಗಿಬಿಟ್ಟಿದೆ. ಇಲ್ಲಿ ಒಪ್ಪೋ, ವಿವೋಗಳಿಗೆ ಸಿಗುವ ಪ್ರಚಾರಕ್ಕಿಂತ ಹೆಚ್ಚಿನ ಪ್ರಚಾರ ಅಲ್ಲಿ ನಮ್ಮ ಯೋಗಕ್ಕೆ ದೊರೆಯುತ್ತಿದೆ. ಈಗ ನಾವು ಭಾರತೀಯ ನೃತ್ಯ, ಸಂಗೀತ, ರಾಮಾಯಣ, ಮಹಾಭಾರತ, ಗೀತೆಗಳನ್ನೆಲ್ಲ ಅಲ್ಲಿನ ತರುಣ ಪೀಳಿಗೆಗೆ ಪರಿಚಯಿಸಬೇಕಿದೆ. ಒಟ್ಟಾರೆ ಆಗಬೇಕಿರೋದು ಒಂದೇ. ನಮ್ಮಿಬ್ಬರ ಸಾಂಸ್ಕೃತಿಕ ಬೇರುಗಳು ಒಂದೇ ಎಂಬುದನ್ನು ಅವರಿಗೆ ಮತ್ತೆ ನೆನಪಿಸಿಕೊಟ್ಟು ಮರೆತ ಮೌಲ್ಯಗಳನ್ನು ಮರು ಸ್ಥಾಪಿಸಲು ಬೇಕಾದ ಸ್ಮೃತಿಯನ್ನು ಮರಳಿ ತರಿಸಬೇಕಿದೆ ಅಷ್ಟೇ.

ನಾವು ಗೆಲ್ಲೋದು, ಜಗತ್ತನ್ನು ಗೆಲ್ಲಿಸೋದು ನಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಮಾತ್ರ. ಈಗ ಈ ಶಕ್ತಿಯನ್ನು ಮತ್ತೆ ಪ್ರಯೋಗಿಸಬೇಕಿದೆ.

3 thoughts on “ಚೀನಾವನ್ನು ಗೆಲ್ಲುವ ಸಮರ್ಥ ಉಪಾಯ ಇದೊಂದೇ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s