ಅಧಿಕಾರದೊಂದಿಗೆ ಬರುವ ಧಿಮಾಕೆಂಬ ರೋಗ!

ಅಧಿಕಾರದೊಂದಿಗೆ ಬರುವ ಧಿಮಾಕೆಂಬ ರೋಗ!

ಸುಮ್ಮನೆ ನಿಮ್ಮ ಕಣ್ಣೆದುರಿಗೆ ಹಾದು ಹೋಗುವ ನಾಯಕನ ವ್ಯಕ್ತಿತ್ವ ನೆನಪಿಸಿಕೊಳ್ಳಿ. ಆತ ಯಾವಾಗಲೂ ಮುಖ ಸಿಂಡರಿಸಿಕೊಂಡೇ ಇರುತ್ತಾನಾ? ತನ್ನಡಿಯಲ್ಲಿ ಕೆಲಸಮಾಡುತ್ತಿರುವವರ ಮೇಲೆ ಕೆಂಡ ಕಾರುತ್ತಿರುತ್ತಾನಾ? ಇತರರ ಕಷ್ಟವನ್ನು ಅರ್ಥ ಮಾಡಿಕೊಳ್ಳುವ ಸಾಮಥ್ರ್ಯವನ್ನು ಕಳೆದುಕೊಂಡಿದ್ದಾನಾ? ಹಿರಿಯರಿಗೆ ಗೌರವ ಕೊಡುವುದನ್ನು ಮರೆತಿದ್ದಾನಾ? ಹಾಗಾದರೆ ಈ ರೋಗ ಆತನನ್ನು ಸ್ಪಷ್ಟವಾಗಿ ಹಿಡಿದುಕೊಂಡಿದೆ ಅಂತಾನೇ ಅರ್ಥ. ಅವನನ್ನು ಯಾವ ಔಷಧಿಯೂ ಈ ಕಾಯಿಲೆಯಿಂದ ಪಾರು ಮಾಡಲಾರದು. ಒಂದೋ ಅವನು ಅಧಿಕಾರ ಕಳೆದುಕೊಳ್ಳಬೇಕು ಅಥವಾ ಗಳಿಸಿದ್ದು ನಾಮಾವಶೇಷವಾಗುವ ಅವಘಡ ಸಂಭವಿಸಬೇಕು.

ಹುಬ್ರಿಸ್ ಸಿಂಡ್ರೋಮ್
ಇದೊಂದು ಮಾನಸಿಕ ರೋಗ. ಅಧಿಕಾರದಲ್ಲಿರುವವರಿಗೆ, ನಾಯಕರೆನಿಸಿಕೊಂಡವರಿಗೆ, ಒಂದಷ್ಟು ಜನರನ್ನು ಮುನ್ನಡೆಸುವ ಕಂಪನಿಯ ಅಧಿಕಾರಿಗಳಿಗೆ ಇವರಿಗೆಲ್ಲ ಸಾಧಾರಣವಾಗಿ ಬರುವ ರೋಗ. ಮನಃಶಾಸ್ತ್ರದ ಕೆಲವು ಪುಟಗಳನ್ನು ತಿರುವಿ ಹಾಕುವಾಗ ಕಣ್ಣಿಗೆ ಬಿದ್ದ ಕಾಯಿಲೆ ಇದು. ಇದರ ಕುರಿತಂತೆ ನಡೆದಿರುವ ಸಂಶೋಧನೆಗಳನ್ನು ಗಮನಿಸಿ ಅವಾಕ್ಕಾಗಿಬಿಟ್ಟೆ. ಅದಕ್ಕೆ ಸರಿಯಾಗಿ ರಾಜ್ಯದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮನೆಯ ಮೇಲೆ ದಾಳಿಯಾಗಿತ್ತು. ಹಾಗಂತ ಈ ಲೇಖನಕ್ಕೂ ಅವರಿಗೂ ನಯಾಪೈಸೆಯ ಸಂಬಂಧವಿಲ್ಲ. ಇದೊಂದು ಸ್ಪಷ್ಟವಾದ ಮನಃಶಾಸ್ತ್ರಕ್ಕೆ ಸಂಬಂಧಿಸಿದ ಲೇಖನ.
ಡೆವಿಡ್ ಓವೆನ್ ಎಂಬ ಮನೋವಿಜ್ಞಾನಿ ತನ್ನ ಇನ್ ಸಿಕ್ನೆಸ್ ಅಂಡ್ ಇನ್ ಪವರ್ ಎಂಬ ಕೃತಿಯಲ್ಲಿ ಈ ಕಾಯಿಲೆಯ ಬಗ್ಗೆ ಸೂಕ್ಷ್ಮವಾಗಿ ವಿವರಿಸುತ್ತಾನೆ. ಹುಬ್ರಿಸ್ ಅನ್ನೋದು ದೀರ್ಘಕಾಲ ಅಧಿಕಾರದಲ್ಲಿರುವ ವ್ಯಕ್ತಿ ಅಥವಾ ದೀರ್ಘಕಾಲ ತನ್ನ ಅಧಿಕಾರ ಚಲಾಯಿಸುವ ವ್ಯಕ್ತಿಗೆ ತಂತಾನೆ ಅಮರಿಕೊಳ್ಳುವ ಮತ್ತು ಅಧಿಕಾರ ಕಳೆದುಕೊಳ್ಳುತ್ತಿದ್ದಂತೆ ತಂತಾನೆ ಇಳಿದು ಹೋಗುವ ರೋಗವಂತೆ. ಹುಬ್ರಿಸ್ನ್ನು ಅಧಿಕೃತವಾಗಿ ವೈದ್ಯಕೀಯ ಜಗತ್ತು ಒಪ್ಪಿಕೊಂಡಿಲ್ಲವೆನಿಸುತ್ತದೆ ಆದರೆ ಈ ಬಗೆಯ ಕಾಯಿಲೆಯ ಕುರಿತಂತೆ ಗ್ರೀಕ್ ಜಗತ್ತಿನಲ್ಲಿ ಉಲ್ಲೇಖವಿರುವುದನ್ನು ಓವೆನ್ ತಮ್ಮ ಕೃತಿಯಲ್ಲಿ ಗುರುತಿಸುತ್ತಾರೆ. ಅಧಿಕಾರಕ್ಕೆ ಬಂದೊಡನೆ ಹೆಚ್ಚು ದುರಹಂಕಾರದಿಂದ ಮೆರೆಯುವ, ಇತರರ ಮೇಲೆ ದರ್ಪ ತೋರುವ, ಇತರರನ್ನು ಕೆಳಗಿನ ದಜರ್ೆಯಲ್ಲಿ ಕಾಣುವಲ್ಲಿ ಆನಂದ ಪಡುವ ಗುಣಗಳು ಆವಾಹನೆಯಾಗುತ್ತವಲ್ಲ ಅದನ್ನು ‘ಹುಬ್ರಿಯಸ್’ ಅಂತ ಗ್ರೀಕ್ನಲ್ಲಿ ಹೇಳುತ್ತಿದ್ದರಂತೆ. ಅದೇ ಹೆಸರನ್ನು ಈ ರೋಗಕ್ಕಿಡಲಾಗಿದೆ. ಹಾಗಂತ ನಮ್ಮಲ್ಲಿ ಇದು ಇಲ್ಲವೆಂದೇನಲ್ಲ. ದುಯರ್ೋಧನನ ಪಾತ್ರ ಅಕ್ಷರಶಃ ಇದೇ ರೋಗದ್ದು. ತನಗಿಂತ ಹಿರಿಯರಿಲ್ಲ ಎಂಬ ರೀತಿಯ ಅವನ ಧೋರಣೆ, ಪಾಂಡವರನ್ನು ತುಚ್ಛವಾಗಿ ಕಾಣುವ ಅವನ ನಡೆ, ಅಧಿಕಾರವನ್ನು ಮನಸೋ ಇಚ್ಛೆ ಬಳಸುವ ರೀತಿ ಇವೆಲ್ಲವೂ ಹುಬ್ರಿಸ್ ಸಿಂಡ್ರೋಂನ ಲಕ್ಷಣಗಳೇ. ಅಧಿಕೃತವಾಗಿ ಈ ಸಿಂಡ್ರೋಂನಿಂದ ಬಳಲುವ ಜನ ಸಾಧ್ಯವಾದಷ್ಟೂ ಕುಚರ್ಿಗಾಗಿ ಹಪಹಪಿಸುತ್ತಾರೆ, ಸಿಕ್ಕಿದ್ದನ್ನು ಬಿಟ್ಟಿಳಿಯದಂತೆ ಕಾಪಾಡಿಕೊಳ್ಳಲು ಹೆಣಗಾಡುತ್ತಿರುತ್ತಾರೆ. ತಮ್ಮನ್ನು ಹೊಗಳುತ್ತ, ಮಾಡಿದ್ದೆಲ್ಲವನ್ನು ಸರಿ ಎನ್ನುವ ಜನರನ್ನೇ ಸುತ್ತ ಪೇರಿಸಿಕೊಂಡು ಅಂಥದ್ದೇ ವಾತಾವರಣ ರೂಪಿಸಿಕೊಂಡಿರುತ್ತಾರೆ. ಸಿಕ್ಕ ಅಧಿಕಾರವನ್ನು ಬಲು ಜೋರಾಗಿ ಪ್ರಯೋಗಿಸುತ್ತ ಅದನ್ನು ಸವರ್ಾಧಿಕಾರವಾಗಿ ಮಾರ್ಪಡಿಸಿಕೊಳ್ಳುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸಾಮಾನ್ಯರಂತೆ ಬದುಕುವುದನ್ನೇ ಮರೆತು ಬಿಡುತ್ತಾರೆ.

2

ಪೆಪ್ಸಿ ಕಂಪನಿಯ ಸಿ ಇ ಓ ಇಂದ್ರಾನೂಯಿ ಗೊತ್ತಿರಬೇಕಲ್ಲ? ಆಕೆ ಅನೇಕ ಕಡೆಗಳಲ್ಲಿ ಹೇಳಿದ ಕಥೆ ಈ ಕಾಯಿಲೆಯಿಂದ ದೂರವಿರುವ ಮಹತ್ವದ ಹೆದ್ದಾರಿ. ಆಕೆಗೆ ಪೆಪ್ಸಿ ಕಂಪನಿಯಲ್ಲಿ ದೊಡ್ಡ ಉದ್ಯೋಗ ಸಿಕ್ಕ ಸುದ್ದಿ ಗೊತ್ತಾದೊಡನೆ ತಾಯಿಯ ಬಳಿ ಓಡಿದಳಂತೆ. ಇದನ್ನು ಅಂದಾಜಿಸಿ ತಾಯಿ ಆಕೆಯಿಂದ ಸುದ್ದಿ ಕೇಳುವ ಮುನ್ನ ಮಾರುಕಟ್ಟೆಯಿಂದ ಸ್ವಲ್ಪ ತರಕಾರಿ ತಂದು ಆಮೇಲೆ ಸುದ್ದಿ ಕೊಡುವಂತೆ ತಾಕೀತು ಮಾಡಿದಳು. ಕೆಂಪು ಕೆಂಪಾದ ನೂಯಿ ಅಮ್ಮನೆದುರು ಸ್ವಲ್ಪ ಒರಟಾಗಿ ನಡೆದುಕೊಂಡಾಗ ತಾಯಿ ಹೇಳಿದ್ದೇನಂತೆ ಗೊತ್ತಾ? ‘ನಿನ್ನ ಕಿರೀಟವನ್ನು ಗ್ಯಾರೇಜಿನಲ್ಲಿಡು’ ಅಂತ. ಅದರರ್ಥ ಬಲು ಸ್ಪಷ್ಟ. ಸಾಮಾನ್ಯವಾಗಿ ಬದುಕುವುದನ್ನು ಮರೆತು ಧಿಮಾಕು ತರುವ ಅಧಿಕಾರದ ಕಿರೀಟ ಯಾವುದಾದರೇನು ಅದು ತಲೆ ಮೇಲೇರಿಸಿಕೊಳ್ಳಲು ಯೋಗ್ಯವಲ್ಲ, ಅದನ್ನು ಧಿಕ್ಕರಿಸಬೇಕಷ್ಟೇ. ಹುಬ್ರಿಸ್ ಸಿಂಡ್ರೋಂನಿಂದ ಪಾರಾಗಲು ಇರುವ ಏಕೈಕ ಮಾರ್ಗವೇ ಅಧಿಕಾರದ ಮದವನ್ನು ಇಳಿಸಬಲ್ಲ ಕಾಲಿಗೆ ಕಟ್ಟಿದ ಕಬ್ಬಿಣದ ಗುಂಡು. ಭಾರತದಲ್ಲಿ ಇದನ್ನು ಮೊದಲೇ ಗುರುತಿಸಿ ಪ್ರತಿ ರಾಜನಿಗೂ ಒಬ್ಬ ಕುಲ ಪುರೋಹಿತರನ್ನು ನೇಮಿಸಿರುತ್ತಿದ್ದರು. ಆತ ಬಹುಪಾಲು ತ್ಯಾಗಿಯೇ ಆಗಿದ್ದುದರಿಂದ ಇದ್ದುದನ್ನು ಇದ್ದಂತೆ ಹೇಳಬಲ್ಲ ಛಾತಿ ಇತ್ತು. ಚಾಣಕ್ಯ ಅಂಥವನೇ. ಈ ಕಾಯಿಲೆಗೆ ಒಳಗಾಗಬಹುದಾಗಿದ್ದ ಚಂದ್ರಗುಪ್ತ ಮೌರ್ಯನನ್ನು ಮುಲಾಜಿಲ್ಲದೇ ತಿದ್ದಿದ. ಸದಾ ಅಂತಮರ್ುಖಿ ತುಡಿತ ನಾಶವಾಗದಿರುವಂತೆ ನೋಡಿಕೊಂಡ. ಹೀಗಾಗಿ ಸಾಮಾನ್ಯ ಸ್ಥಿತಿಯಿಂದ ರಾಜನಾಗಿ ಬೆಳೆದು ನಿಂತ ಚಂದ್ರಗುಪ್ತ ಎಲ್ಲಿಯೂ ಸ್ಥಿಮಿತ ಕಳೆದುಕೊಳ್ಳಲಿಲ್ಲ. ಯುದ್ಧಗಳನ್ನು ಗೆಲ್ಲುವಾಗಲೇ ಅವನೊಳಗಿನ ಸನ್ಯಾಸದ ತುಡಿತವೂ ಜೋರಾಗಿಯೇ ಇತ್ತು.

ಇದೇ ಕಾಯಿಲೆಯಿಂದ ನರಳುವ ಧೃತರಾಷ್ಟ್ರ ದಾರಿ ತಪ್ಪುವುದು ದೃಗ್ಗೋಚರವಾದಾಗ ವಿದುರ ಎಚ್ಚರಿಕೆ ಕೊಡುತ್ತಿದ್ದುದು ನೆನಪಿದೆಯಲ್ಲ? ರಾವಣನಿಗೆ ವಿಭೀಷಣ ಮಾಡಿದ್ದೂ ಇದನ್ನೇ. ಅದಕ್ಕಾಗಿಯೇ ಭಾರತದಲ್ಲಿ ರಾಜನಾದವನು ಜ್ಞಾನಿಗಳನ್ನು ತನ್ನ ಆಸ್ಥಾನದಲ್ಲಿಟ್ಟುಕೊಂಡಿರುತ್ತಿದ್ದ. ಜನಕ ಮಹಾರಾಜನಂತೂ ಆಗಾಗ ಇಂಥವರನ್ನು ಕರೆಸಿಕೊಂಡು ತನ್ನ ಗೊಂದಲಗಳನ್ನು ಪರಿಹರಿಸಿಕೊಳ್ಳುತ್ತಿದ್ದ. ರಾಜ ಮಾರುವೇಷದಲ್ಲಿ ಪುರವನ್ನು ಅಡ್ಡಾಡುವ ಕಥೆಗಳನ್ನು ಓದಿದ್ದೇವಲ್ಲ ಅವೆಲ್ಲ ಈ ಸಿಂಡ್ರೋಮ್ನಿಂದ ಪಾರಾಗಲು ಇದ್ದ ಮಾರ್ಗಗಳಷ್ಟೇ. ಹಾಗಂತ ಈ ಧಿಮಾಕು ತಲೆಗೇರಲು ಅಧಿಕಾರ ದೊಡ್ಡ ಪ್ರಮಾಣದ್ದೇ ಆಗಬೇಕೆಂದೇನಿಲ್ಲ. ಅಮೇರಿಕದ ಅಧ್ಯಕ್ಷನಿಗೆ ಇರಬಹುದಾದ ಕಾಯಿಲೆಯಷ್ಟೇ ಪ್ರಮಾಣ ಊರಿನ ಪಂಚಾಯತ್ ಅಧ್ಯಕ್ಷನಿಗೂ ಇರಬಹುದು. ಪ್ರಧಾನ ಮಂತ್ರಿಯ ಪರ್ಸನಲ್ ಸೆಕ್ರೆಟರಿಗೆ ಅಮರಿಕೊಂಡಿರಬಹುದಾದ ರೋಗವೇ, ದೊಡ್ಡ ಮಠವೊಂದರ ಸಾಧುವನ್ನೂ ಆವರಿಸಿಕೊಳ್ಳಬಹುದು. ಅದು ಬೀರುವ ಪರಿಣಾಮದ ವ್ಯಾಪ್ತಿ ಬೇರೆ ಇರಬಹುದಷ್ಟೇ.

1

ಅಮೇರಿಕದ ಅಧ್ಯಕ್ಷ ವಿನ್ಸ್ಟನ್ ಚಚರ್ಿಲ್ನ ಹೆಂಡತಿ ಗಂಡನಿಗೆ ಈ ಕುರಿತಂತೆ ಎಚ್ಚರಿಕೆ ಕೊಟ್ಟು ಹೆಜ್ಜೆ ತಪ್ಪದಂತೆ ಕಾಪಾಡುತ್ತಿದ್ದುದು ಅವನ ಜೀವನ ಚಿತ್ರಗಳಲ್ಲಿ ದಾಖಲಾಗಿದೆ. ‘ಪ್ರಿಯ ವಿನ್ಸ್ಟನ್ ನಿನ್ನ ವರ್ತನೆ ಮೊದಲಿನಷ್ಟು ಸಿಹಿಯಾಗಿಲ್ಲ. ನಾನು ಸಾಕಷ್ಟು ಬದಲಾವಣೆಗಳನ್ನು ನೋಡುತ್ತಿದ್ದೇನೆ. ನಿನ್ನ ಅಧೀನರಾಗಿರುವವರೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಿರುವೆ. ಹೀಗೆ ಮುಂದುವರೆದರೆ ಒಳ್ಳೆಯದ್ದೋ, ಕೆಟ್ಟದ್ದೋ ಗೊತ್ತಿಲ್ಲ, ಆದರೆ ಒಳ್ಳೆಯ ಫಲಿತಾಂಶವಂತೂ ಬರಲಾರದು’ ಎಂದು ಗಂಡನನ್ನು ಎಚ್ಚರಿಸುವಷ್ಟು ಧೈರ್ಯವಿಟ್ಟುಕೊಂಡಿದ್ದಳು. ಇದನ್ನೇ ವಿವೇಕ ಪ್ರಜ್ಞೆ ಅಂತ ಕರೆದಿದ್ದು ಕೂಡ. ಕೆಲವು ನಾಯಕರಿರುತ್ತಾರೆ ಅವರು ಅಧಿಕಾರದ ಎತ್ತರದಲ್ಲಿದ್ದಾಗಲೂ ಪ್ರಯತ್ನಪಟ್ಟು ಸಾಮಾನ್ಯರಂತಿದ್ದುಬಿಡುತ್ತಾರೆ. ಬಿಜೆಪಿಯ ಪಡಸಾಲೆಯಿಂದ ಇಂದು ಹೊರಗಿರುವ ಕೆ.ಎನ್.ಗೋವಿಂದಾಚಾರ್ಯ ಒಂದು ಕಾಲದ ಥಿಂಕ್ ಟ್ಯಾಂಕ್. ಅವರ ಜ್ಞಾನದ ಪರಿಧಿ ನಾವು ಊಹಿಸಲಾಗದಷ್ಟು ವಿಸ್ತಾರವಾದುದು. ಆಕಾಶದ ಕೆಳಗಿನ ಯಾವ ಸಂಗತಿಯೂ ಅವರಿಗೆ ಹೊಸತಲ್ಲ. ಆಧ್ಯಾತ್ಮದ ವಿಶ್ಲೇಷಣೆ ಮಾಡಿದಷ್ಟೇ ಲೀಲಾಜಾಲವಾಗಿ ಅವರು ಕಂಪ್ಯೂಟರ್ ಹ್ಯಾಕಿಂಗ್ ಕುರಿತಂತೆ ಮಾತಾಡುವುದೂ ನಾನು ಕೇಳಿದ್ದೇನೆ. ಅನೇಕ ಬಾರಿ ಚಚರ್ೆಯಲ್ಲಿ ತಾಕಲಾಟವಾಗಿ ಕದನದ ಕಾವು ಏರಿರುವಾಗ ಅವರು ನಿರಾಳವಾಗಿ ಅಲ್ಲಿಂದ ಎದ್ದು ಬಂದು ಅಲ್ಲಿಯೇ ಓಡಾಡುತ್ತಿರುವ ಮಗುವಿನೊಂದಿಗೆ ಕೆನ್ನೆಹಿಂಡಿ ಆಟವಾಡುತ್ತ ಇದ್ದುಬಿಡುವುದನ್ನು ನಾನೇ ನೋಡಿದ್ದೇನೆ. ಹೀಗೆ ಮಕ್ಕಳೊಂದಿಗೆ ಮಕ್ಕಳಾಗುವುದು, ಇತರರ ನೋವಿಗೆ ಸ್ಪಂದಿಸುವುದು, ಇತರರೊಂದಿಗೆ ತಮಾಷೆ ಮಾಡುತ್ತ ಆಗಾಗ ಹಗುರಾಗುವುದು, ತಮ್ಮ ಕೆಲಸಗಳನ್ನು ಬಿಡದೇ ಮಾಡಿಕೊಳ್ಳುವುದು ಇವೆಲ್ಲ ಅಧಿಕಾರದ ಅಮಲಿನಿಂದ ನಮ್ಮನ್ನು ರಕ್ಷಿಸುವ ಸಂಗತಿಗಳೆಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ. ಈಗ ಸುಮ್ಮನೆ ನಿಮ್ಮ ಕಣ್ಣೆದುರಿಗೆ ಹಾದು ಹೋಗುವ ನಾಯಕನ ವ್ಯಕ್ತಿತ್ವ ನೆನಪಿಸಿಕೊಳ್ಳಿ. ಆತ ಯಾವಾಗಲೂ ಮುಖ ಸಿಂಡರಿಸಿಕೊಂಡೇ ಇರುತ್ತಾನಾ? ತನ್ನಡಿಯಲ್ಲಿ ಕೆಲಸಮಾಡುತ್ತಿರುವವರ ಮೇಲೆ ಕೆಂಡ ಕಾರುತ್ತಿರುತ್ತಾನಾ? ಇತರರ ಕಷ್ಟವನ್ನು ಅರ್ಥ ಮಾಡಿಕೊಳ್ಳುವ ಸಾಮಥ್ರ್ಯವನ್ನು ಕಳೆದುಕೊಂಡಿದ್ದಾನಾ? ಹಿರಿಯರಿಗೆ ಗೌರವ ಕೊಡುವುದನ್ನು ಮರೆತಿದ್ದಾನಾ? ಹಾಗಾದರೆ ಈ ರೋಗ ಆತನನ್ನು ಸ್ಪಷ್ಟವಾಗಿ ಹಿಡಿದುಕೊಂಡಿದೆ ಅಂತಾನೇ ಅರ್ಥ. ಅವನನ್ನು ಯಾವ ಔಷಧಿಯೂ ಈ ಕಾಯಿಲೆಯಿಂದ ಪಾರು ಮಾಡಲಾರದು. ಒಂದೋ ಅವನು ಅಧಿಕಾರ ಕಳೆದುಕೊಳ್ಳಬೇಕು ಅಥವಾ ಗಳಿಸಿದ್ದು ನಾಮಾವಶೇಷವಾಗುವ ಅವಘಡ ಸಂಭವಿಸಬೇಕು.

download

ಈ ಅಧಿಕಾರಸಂಬಂಧಿ ಕಾಯಿಲೆ ಮನುಷ್ಯರಿಗಷ್ಟೇ ಅಲ್ಲ, ಅವರ ಕಾರಣದಿಂದಾಗಿ ರಾಷ್ಟ್ರಕ್ಕೂ ಅಂಟಿಬಿಡುತ್ತದೆ. ತಾನು ಎಲ್ಲರಿಗಿಂತಲೂ ಶ್ರೇಷ್ಠ ರಾಷ್ಟ್ರವೆಂಬ ದುರಹಂಕಾರ ಅಮೇರಿಕಕ್ಕೆ ಇದ್ದೇ ಇದೆ. ಡೊನಾಲ್ಡ್ ಟ್ರಂಪ್ ಮಾತಾಡುವದನ್ನು ಕೇಳಿ ನೋಡಿ. ಜಗತ್ತಿನ ಉದ್ಧಾರಕ್ಕೆ ತಾನೊಬ್ಬನೇ ಗತಿ ಎಂಬತಿದೆ ಅವನ ಧೋರಣೆ. ಈ ಹಿಂದೆ ಒಬಾಮಾ ಕೂಡ ಹಾಗೆಯೇ ಇದ್ದ. ಎಲ್ಲರಿಗೂ ಬೋಧಿಸುವುದಷ್ಟೇ. ತಾನು ಪಾಲಿಸಬೇಕಾದ್ದೇನೂ ಇಲ್ಲ ಎಂಬಂತಹ ಧಾಷ್ಟ್ರ್ಯ ಹುಬ್ರಿಸ್ ಸಿಂಡ್ರೋಂನ ನೇರ ಪರಿಣಾಮ. ನೆನಪು ಮಾಡಿಕೊಳ್ಳಿ. ಭಾರತವನ್ನು ಆಳುತ್ತಿದ್ದ ಬ್ರಿಟೀಷರಿಗೂ ಅದು ಇತ್ತು. ದೇವರೇ ಭಾರತೀಯರನ್ನು ಆಳಲೆಂದು ತಮ್ಮನ್ನು ಕಳಿಸಿದ್ದೆಂದು ಅವರು ನಂಬಿಕೊಂಡುಬಿಟ್ಟಿದ್ದರು. ಅತ್ಯಂತ ಕ್ರೂರವಾಗಿ ಜಗತ್ತಿನಲ್ಲೆಲ್ಲ ನಡೆದುಕೊಂಡರು. ಅವರು ಮಾಡಿದ ಕೊಲೆ-ಸುಲಿಗೆಗಳ ಲೆಕ್ಕವೇ ಇಲ್ಲ. ಆಫ್ರಿಕಾದ ಮೂಲನಿವಾಸಿಗಳನ್ನು ನಂಬಿಸಿ ಕತ್ತು ಕೊಯ್ಯುವಾಗಲೂ ಅವರಿಗೆಂದೂ ಪಾಪಪ್ರಜ್ಞೆ ಕಾಡಲೇ ಇಲ್ಲ. ಈಗ ನೋಡಿ. ಅಧಿಕಾರ ಕಳೆದ ಮೇಲೆ, ಅವರ ಪಾಡು ಹೇಳ ತೀರದಂತಾಗಿದೆ.
ಚೀನಾಕ್ಕಿರೋದೂ ಇದೇ ಸಿಂಡ್ರೋಂ. ಅದು ಕಾಮರ್ಿಕ ಶಕ್ತಿಯಿಂದ ಜಗತ್ತನನು ಗೆದ್ದು ಬಿಡುವ ಮಾತಾಡುತ್ತಿದೆ ಆದರೆ ತನ್ನ ದೇಶದಲ್ಲಿಯೇ ಕಾಮರ್ಿಕರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ. 1962ರಲ್ಲಿ ಭಾರತದ ನಾಯಕರ ತಪ್ಪಿನಿಂದಾಗಿ ನಮ್ಮ ಮೇಲೆ ಸೈನಿಕ ವಿಜಯವನ್ನು ದಾಖಲಿಸಿದಾಗಿನಿಂದ ಅದಕ್ಕೆ ತಲೆ ನೆಟ್ಟಗೆ ನಿಲ್ಲುತ್ತಲೇ ಇಲ್ಲ. ಅಕ್ಕಪಕ್ಕದ ಭೂಭಾಗವನ್ನು ಕಬಳಿಸುವ ತನ್ನ ವಿಸ್ತರಣಾ ನೀತಿಯನ್ನು ವಿಸ್ತರಿಸಿಕೊಳ್ಳುತ್ತಲೇ ಸಾಗುತ್ತಿದೆ. ಹಾಗಂತ ಅದರ ಈ ಧಿಮಾಕಿನ ಕಾಯಿಲೆಗೆ 1967ರಲ್ಲಿ ನಾಥೂಲಾ ಮತ್ತು ಚೋಲಾ ಪಾಸ್ಗಳ ಬಳಿ ಭಾರತದ ಸೈನಿಕರು ಸಮರ್ಥವಾಗಿಯೇ ಉತ್ತರಿಸಿದ್ದಾರೆ. ಆನಂತರ ರಷ್ಯಾ, ವಿಯೆಟ್ನಾಂಗಳೆದುರಿಗೂ ಅದಕ್ಕೆ ಸಹಿಸಲಸಾಧ್ಯವಾದ ಹೊಡೆತಬಿದ್ದಿದೆ. 1986-87ರಲ್ಲಿ ಭಾರತದೊಂದಿಗೆ ಮತ್ತೊಮ್ಮೆ ಕಾಲುಕೆದರಿಕೊಂಡು ಕದನಕ್ಕೆ ಬಂದ ಚೀನಾ ಏಕಪಕ್ಷೀಯವಾಗಿ ಕದನದಿಂದ ಹಿಂದೆ ಸರಿದಿರೋದರ ಹಿಂದೆ ಭಾರತೀಯ ಸೈನಿಕರ ಯುದ್ಧ ಸನ್ನದ್ಧತೆ ಮತ್ತು ಕೆಚ್ಚೆದೆಗಳೇ ಕಾರಣ. ಇಷ್ಟಾಗಿಯೂ ಈಗ ಅದು ಮತ್ತೆ ಯುದ್ಧದ ಮಾತನಾಡುತ್ತಿದೆಯೆಂದರೆ ಅದು ಕಾಯಿಲೆಯೇ ಅಲ್ಲದೇ ಮತ್ತೇನು ಅಲ್ಲ. ಈ ಕಾಯಿಲೆಯಿಂದ ಹೊರಗೆ ಬರಲು ಅದಕ್ಕಿರೋದು ಎರಡೇ ದಾರಿ. ಮೊದಲನೆಯದು ತನಗೆ ನೇರವಾಗಿ ಬುದ್ಧಿ ಹೇಳಬಲ್ಲ ರಾಷ್ಟ್ರಗಳ ಮಾತನ್ನು ಕೇಳೋದು ಅಥವಾ ಅವಘಡಕ್ಕೆ ತುತ್ತಾಗಿ ಅಧಿಕಾರ ಕಳೆದುಕೊಂಡು ಸರಿದಾರಿಗೆ ಬರೋದು. ಚೀನಾದ ಇಂದಿನ ಸ್ಥಿತಿ ನೋಡಿದರೆ ವಿವೇಕ ಪ್ರಜ್ಞೆ ತಂದುಕೊಂಡು ತನನ್ ತಾನು ಉಳಿಸಿಕೊಳ್ಳುವಂತೆ ಕಾಣುವುದಿಲ್ಲ. ಅದರ ಮೇಲೊಂದು ಐಟಿ ರೈಡ್ ಆಗಬೇಕಷ್ಟೇ. ಅಂದ ಮಾತ್ರಕ್ಕೆ ಇದು ಇನ್ಕಂ ಟ್ಯಾಕ್ಸ್ ರೈಡ್ ಅಲ್ಲ, ಇನ್ಫಮರ್ೇಶನ್ ಟೆಕ್ನಾಲಜಿಯ ರೈಡ್. ಇನ್ಕಂ ಟ್ಯಾಕ್ಸ್ ರೈಡ್ನಲ್ಲಿ ಮುಚ್ಚಿಟ್ಟ ಸಂಪತ್ತನ್ನು ಜಗಜ್ಜಾಹೀರುಗೊಳಿಸಲಾಗುತ್ತದೆ ಈ ರೈಡ್ನಲ್ಲಿ ಚೈನಾ ಪತ್ರಿಕಾ ಸ್ವಾತಂತ್ರ್ಯಕ್ಕೆ ನಿರ್ಬಂಧ ಹೇರಿ ಯಾವ ಸತ್ಯವನ್ನು ಜಗತ್ತಿಗೆ ಕಾಣದಂತೆ ಮುಚ್ಚಿಟ್ಟಿದೆಯೋ ಅದನ್ನು ಎಲ್ಲರಿಗೆ ಕಾಣುವಂತೆ ಹೇಳಬೇಕಿದೆ.

ಹೌದು! ನಾವಾಗಿಯೇ ಪಾಠ ಕಲಿಯಲಿಲ್ಲವೆಂದರೆ ಬದುಕು ಕಲಿಸಿಬಿಡುತ್ತದೆ. ಮತ್ತು ಬದುಕು ತಾನಾಗಿಯೇ ಪಾಠ ಕಲಿಸಿದರೆ ಅದರ ಹೊಡೆತ ಬಲು ಘೋರ. ಅದಕ್ಕಾಗಿಯೇ ಯಾವ ಎತ್ತರಕ್ಕೇರಿದರೂ ಸಾಮಾನ್ಯರಾಗಿರೋದನ್ನು ಪ್ರಯತ್ನಪಟ್ಟಾದರೂ ಅಭ್ಯಾಸಮಾಡಬೇಕು. ಅಬ್ದುಲ್ ಕಲಾಂ ಮಿಸೈಲ್ ಮ್ಯಾನ್ ಅಭಿದಾನಕ್ಕೆ ಪಾತ್ರರಾಗಿದ್ದಾಗಲೂ ತಮ್ಮ ಸಹೋದ್ಯೋಗಿಗಳೊಂದಿಗೆ ನಡೆದುಕೊಳ್ಳುತ್ತಿದ್ದ ರೀತಿ ಇದೆಯಲ್ಲ ಅದು ಅಕ್ಷರಶಃ ಅನುಸರಣೆ ಯೋಗ್ಯ. ರಾಮಕೃಷ್ಣಾಶ್ರಮದ ಪ್ರಖ್ಯಾತ ಸಂತರಾಗಿದ್ದ, ಅಭಿನವ ವಿವೇಕಾನಂದರೆಂದೇ ಹೆಸರು ಪಡೆದಿದ್ದ ಸ್ವಾಮಿ ರಂಗನಾಥಾನಂದ ಜಿ, ಕರಾಚಿಯ ಆಶ್ರಮದ ಅಧ್ಯಕ್ಷರಾಗಿ ನಿಯುಕ್ತಿಗೊಂಡಿದ್ದರು. ದೇಶ ವಿಭಜನೆಯಾದಾಗ ಆ ಆಶ್ರಮವನ್ನು ತೊರೆದು ಬರಬೇಕಾಯ್ತು. ಅವರಿಗೆ ವಿಮಾನದಲ್ಲಿ ಬರುವ ಎಲ್ಲ ವ್ಯವಸ್ಥೆಗಳನ್ನು ಮಾಡಿದಾಗ್ಯೂ ಸ್ವಾಮಿಜಿ ಅದನ್ನು ಧಿಕ್ಕರಿಸಿದರು. ತಮ್ಮೊಂದಿಗೆ ಇಷ್ಟೂದಿನ ಇದ್ದ ಅಲ್ಲಿನ ಇತರ ಜನರೊಂದಿಗೇ ತಾನೂ ಬರುವೆನೆಂದು ಹಠ ಹಿಡಿದು ಎಲ್ಲರೊಡನೆ ಯಮಯಾತನೆ ಅನುಭವಿಸುತ್ತ ನಡೆದುಕೊಂಡೇ ಬಂದು ಕೋಲ್ಕತ್ತ ಸೇರಿದರು. ಮುಂದೊಮ್ಮೆ ಅವರಿಗೆ ಮಹತ್ವದ ಪ್ರಶಸ್ತಿಯ ಘೋಷಣೆಯಾದಾಗ ಸ್ವಾಮಿ ಎಂಬ ಅಭಿದಾನಕ್ಕಿಂತ ಯಾವುದೂ ದೊಡ್ಡದಲ್ಲ ಎಂದು ಅದನ್ನು ಧಿಕ್ಕರಿಸಿದ್ದರು. ನಾಯಕತ್ವ ಅಂದರೆ ಅದು. ಇಂತಹ ಗುಣವಿರುವವರನ್ನು ಹುಬ್ರಿಸ್ ಎಂದಿಗೂ ಬಾಧಿಸಲಾರದು. ಎಷ್ಟು ಸರಳತೆ, ಮಾಧುರ್ಯ, ಹೃದಯದ ತುಂಬ ಪ್ರೇಮವನ್ನು ಇಟ್ಟುಕೊಂಡಿರುತ್ತೇವೆಯೋ ಅಷ್ಟರ ಮಟ್ಟಿಗೆ ದೀರ್ಘಕಾಲ ನೆನಪಿಟ್ಟುಕೊಂಡಿರುವಂತಹ ನಾಯಕರಾಗಿ ನಿಲ್ಲವುದು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಅಧಿಕಾರ ಇದ್ದಷ್ಟು ಕಾಲ ದರ್ಪ ತೋರಿ ಕಣ್ಮರೆಯಾಗಬೇಕಾಗುತ್ತಷ್ಟೇ.
ಅಂದಹಾಗೆ ಹುಬ್ರಿಸ್ ಅಂದಾಕ್ಷಣ ಬೆರೆ ಯಾರನ್ನೋ ಊಹಿಸಿಕೊಳ್ಳಬೇಡಿ. ಆಗಾಗ ಕನ್ನಡಿ ನೋಡಿಕೊಳ್ಳುತ್ತಿರಿ.

ಯಾರಿಗ್ಗೊತ್ತು?ನಾವೂ ಇದಕ್ಕೆ ಬಲಿಯಾಗಿರಬಹುದು.

5 thoughts on “ಅಧಿಕಾರದೊಂದಿಗೆ ಬರುವ ಧಿಮಾಕೆಂಬ ರೋಗ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s