ಅಧಿಕಾರಕ್ಕಾಗಿ ಎಷ್ಟು ಬಾರಿ ದೇಶ ಒಡೆಯುತ್ತೀರಿ?

ಅಧಿಕಾರಕ್ಕಾಗಿ ಎಷ್ಟು ಬಾರಿ ದೇಶ ಒಡೆಯುತ್ತೀರಿ?

ತಮ್ಮ ಅನುಕೂಲಕ್ಕೆ ಬೇಕಾಗಿ ದೇಶವನ್ನು ಒಡೆಯುವ ಕಾಂಗ್ರೆಸ್ಸಿನ ಚಾಳಿ ಇಂದು ನಿನ್ನೆಯದಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ಇರುವಂಥದ್ದೇ. ಸುಭಾಷರ ಕಣ್ಮರೆ ನಿಗೂಢವಾಗಿಹೋದದ್ದು, ಪಟೇಲರು ನೇಪಥ್ಯಕ್ಕೆ ಸರಿದದ್ದು, ಲಾಲ್ ಬಹಾದೂರ್ ಶಾಸ್ತ್ರಿಯವರ ಸಾವು ಇವೆಲ್ಲವೂ ಅಧಿಕಾರ ದಾಹದ ಬಿಂದುಗಳಷ್ಟೇ. ಅಗತ್ಯ ಬಿದ್ದಾಗ ಮುಸಲ್ಮಾನರನ್ನು ಹಿಂದುಗಳ ವಿರುದ್ಧ ಎತ್ತಿ ಕಟ್ಟಿ, ತಮ್ಮ ಕೋಟೆಯನ್ನು ಭದ್ರಗೊಳಿಸುವ ಅವರ ಹುನ್ನಾರವೂ ಬ್ರಿಟೀಷರದಷ್ಟೇ ಹಳೆಯದು. ಕೊನೆಯ ಬ್ರಿಟಿಷ್ ವೈಸರಾಯ್ ನೆಹರೂ ಅಂತ ಸುಮ್ಮಸುಮ್ಮನೆ ಹೇಳಿದ್ದಲ್ಲ.

1

ಸ್ವಾಮಿ ಅಸೀಮಾನಂದ!
ನೆನಪಿದೆಯಾ ಹೆಸರು? ಕಳೆದ ಮಾಚರ್್ನಲ್ಲಿ ‘ಹಿಂದೂ ಭಯೋತ್ಪಾದನೆ’ಯ ಎಲ್ಲ ಆರೋಪಗಳಿಂದ ಮುಕ್ತರಾಗಿ ಹೊರಬಂದವರು. ಅವತ್ತು ಅವರ 92 ವರ್ಷದ ತಾಯಿ, ‘ನನ್ನ ಮಗನ ಮೇಲೆ ನನಗೆ ಯಾವಾಗಲೂ ಭರವಸೆ ಇತ್ತು. ಅವನು ಬಲು ಮುಗ್ಧ. ಗುಜರಾತಿನ ವನವಾಸಿ ಜನಾಂಗದವರಿಗಾಗಿ ತನ್ನ ಬದುಕನ್ನೇ ಮುಡುಪಾಗಿಟ್ಟವ ಯಾರನ್ನಾದರೂ ಕೊಲ್ಲಲು ಹೇಗೆ ಸಾಧ್ಯ? ನಾನು ಅವನನ್ನು ಕೊನೆಯ ಬಾರಿ ನೋಡಲೆಂದೇ ಬದುಕಿರೋದು’ ಎಂದದ್ದನ್ನು ಕೇಳಿದವನ ಕಣ್ಣಾಲಿಗಳು ತುಂಬಿ ಬರೋದು ಸಹಜವೇ. ಖಂಡಿತ ಅಸೀಮಾನಂದರ ನೆನಪಿಸಿಕೊಡುವುದು ನನ್ನ ಉದ್ದೇಶವಲ್ಲ, ಅವರ ಹೆಸರನ್ನು ಭಯೋತ್ಪಾದನೆಯ ಗಲಾಟೆಯಲ್ಲಿ ಎಳೆದು ತಂದು, ಹಿಂದುಗಳನ್ನು ಭಯೋತ್ಪಾದಕರೆಂದು ಬಿಂಬಿಸಿ ಚುನಾವಣೆ ಗೆಲ್ಲುವ ಸಂಚನ್ನು ರೂಪಿಸಿತ್ತಲ್ಲ ಕಾಂಗ್ರೆಸ್ಸು ಅದನ್ನು ಬಯಲಿಗೆಳೆಯೋದಷ್ಟೇ.

 

ಹೌದು. ಈ ಮೊದಲು ಇದನ್ನು ಹೇಳಿದ್ದರೆ, ನಂಬುವವರು ಯಾರೂ ಇರಲಿಲ್ಲ. ಇತ್ತೀಚೆಗೆ ಖಾಸಗಿ ವಾಹಿನಿಯೊಂದು ಈ ಕುರಿತಂತೆ ಅಪರೂಪದ ಮಾಹಿತಿಗಳನ್ನು ಹೊರ ಹಾಕಿದಂತೆ ಎಲ್ಲರ ಹೃದಯ ಕಲಕುವಂತಹ ಸಂಗತಿಗಳು ಹೊರ ಬರುತ್ತಿವೆ. ಗೃಹ ಸಚಿವರಾಗಿದ್ದ ಶಿಂಧೆಯವರಿಗೆ ಅಂದಿನ ಸಕರ್ಾರ ಹಿಂದೂ ಭಯೋತ್ಪಾದನೆಯ ಕುರಿತಂತೆ ಸಾಕ್ಷಿಗಳನ್ನು ರೂಪಿಸಿ ಜನರ ಮುಂದಿರಿಸುವ ಜವಾಬ್ದಾರಿ ನೀಡಿತ್ತು ಎಂದು ಕೇಂದ್ರ ಮಂತ್ರಿ ರವಿಶಂಕರ್ ಪ್ರಸಾದ್ ಸ್ಫೋಟಕ ಮಾಹಿತಿ ಹೊರ ಹಾಕಿದ್ದಾರೆ. ಆದರೆ ಡಾ.ಸುಬ್ರಮಣಿಯನ್ ಸ್ವಾಮಿಯವರು ಬಿಚ್ಚಿಟ್ಟ ಸತ್ಯವನ್ನೂ ನಾವು ಒಪ್ಪಲೇಬೇಕು. ಅವರ ಪ್ರಕಾರ ಮೊದಲ ಬಾರಿಗೆ 2010ರಲ್ಲಿ ದೆಹಲಿಯ ಪೊಲೀಸ್ ಪ್ರಮುಖರೊಂದಿಗೆ ಮಾತನಾಡುತ್ತ ‘ಹಿಂದೂ ಭಯೋತ್ಪಾದನೆ’ಯ ಕುರಿತಂತೆ ಎಚ್ಚರವಾಗಿರುವಂತೆ ಮೊದಲ ಬಾರಿಗೆ ಹೇಳಿದ್ದೇ ಅಂದಿನ ಮಂತ್ರಿ ಪಿ. ಚಿದಂಬರಂ! ಅಂದಿನ ದಿನಗಳಲ್ಲಿ ಕಾಂಗ್ರೆಸ್ಸು ಭಯೋತ್ಪಾದನೆಗೆ ಧರ್ಮದ ಹಂಗಿಲ್ಲವೆನ್ನುವುದನ್ನು ಸಾಬೀತುಪಡಿಸುವ ಹಠಕ್ಕೆ ಬಿದ್ದಿತ್ತು. ಯಾವ ಖಾಸಗಿ ವಾಹಿನಿ ಇಂದು ಈ ಸುದ್ದಿಯನ್ನು ಬಯಲಿಗೆಳೆದಿದೆಯೋ, ಹಿಂದೊಮ್ಮೆ ಅದರದ್ದೇ ಮತ್ತೊಂದು ಮುಖವಾದ ಪತ್ರಿಕೆಯೊಂದು ಈ ಒಟ್ಟಾರೆ ಷಡ್ಯಂತ್ರದಲ್ಲಿ ಪಾಲ್ಗೊಂಡು ಜನರನ್ನು ತಪ್ಪುದಾರಿಗೆ ಎಳೆಯಲು ಪ್ರಯತ್ನಿಸಿತ್ತು. ಮುಂಬೈ ಭಯೋತ್ಪಾದನಾ ನಿಗ್ರಹ ದಳದವರು ಹಿಂದೂ ಭಯೋತ್ಪಾದನೆಯೆಂಬ ವರ್ಣರಂಜಿತ ಪದಕ್ಕೆ ರೆಕ್ಕೆ-ಪುಕ್ಕ ಕಟ್ಟಿ ಹಾರಿಬಿಟ್ಟ ದಿನವೇ ಆ ಪತ್ರಿಕೆ ಹತ್ತಕ್ಕೂ ಹೆಚ್ಚು ಈ ಬಗೆಯ ವರದಿಗಳನ್ನು ಪ್ರಕಟಿಸಿತ್ತು ಮತ್ತು ಅನವಶ್ಯಕವಾಗಿ ಸಿಕ್ಕಿಹಾಕಿಕೊಂಡು ಆಮೇಲಿನ ದಿನಗಳಲ್ಲಿ ನಿರಪರಾಧಿಯೆಂದು ಹೊರಬಂದ ಮುಸಲ್ಮಾನರ ಕುರಿತಂತೆಯೂ ಮನಕಲಕುವಂತೆ ವಿವರಿಸಿತ್ತು. ಒಟ್ಟಾರೆ ಸಕರ್ಾರದ ಉದ್ದೇಶ ಬಲು ಸ್ಪಷ್ಟವಾಗಿತ್ತು. ಹಿಂದೂಗಳನ್ನೂ ಭಯೋತ್ಪಾದಕರೆಂದು ಕರೆಯುವ ಮೂಲಕ ಅವರ ಆತ್ಮಸ್ಥೈರ್ಯವನ್ನು ಕಸಿದು ಬಿಡುವುದು, ಈ ಭಯೋತ್ಪಾದನೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಹೊಣೆಗಾರರನ್ನಾಗಿಸಿ 2014ರ ಚುನಾವಣೆಗೂ ಮುನ್ನ ಅದನ್ನು ಬಖರ್ಾಸ್ತುಗೊಳಿಸಿಬಿಡುವುದು. ಆ ಮೂಲಕ ಆಡಳಿತ ವಿರೋಧಿ ಅಲೆಯಲ್ಲೂ ಅಧಿಕಾರವನ್ನು ಭದ್ರಗೊಳಿಸಿಕೊಂಡು ಮೆರೆಯೋದು!

2

ಸ್ವಲ್ಪ ಆ ದಿನಗಳನ್ನು ನೆನಪಿಸಿಕೊಳ್ಳಿ. ಮಾಲೆಗಾಂವ್ ಸ್ಫೋಟಕ್ಕೆಂದು ಬಳಸಿದ ಬೈಕು ಸಾಧ್ವಿ ಪ್ರಜ್ಞಾಸಿಂಗ್ಗೆ ಸೇರಿದ್ದೆಂಬ ಕಾರಣಕ್ಕೆ ಆಕೆಯನ್ನು ಬಂಧಿಸಲಾಯ್ತು. ಆಕೆಯ ಆಕ್ರಮಕ ವ್ಯಕ್ತಿತ್ವದ ಕುರಿತಂತೆ ರಂಗು-ರಂಗಿನ ಕಥೆ ಹೆಣೆಯಲಾಯ್ತು. ಇಡಿಯ ಸ್ಫೋಟದ ಮುಖ್ಯ ರೂವಾರಿ ಆಕೆಯೆಂದೇ ನಂಬಿಸಲಾಯ್ತು. ಆದರೆ ಆಕೆಯಿಂದ ಒಂದೇ ಒಂದು ತಪ್ಪೊಪ್ಪಿಗೆಯ ಸಾಲು ಹೇಳಿಸಲಾಗದ ಭಯೋತ್ಪಾದನಾ ನಿಗ್ರಹ ದಳದ ಪ್ರಮುಖರೆಲ್ಲ ತಾವೇ ಸೋತು ಕೈಚೆಲ್ಲಿದರು. ಮತ್ತೊಂದು ಬಣ್ಣದ ಮಾತು ಹೊರಟಿತು. ಸಾಧ್ವಿ ಸದಾ ಧ್ಯಾನದಲ್ಲಿರುವುದರಿಂದ ಆಕೆ ಮಂಪರು ಪರೀಕ್ಷೆಯಲ್ಲೂ ಗುಟ್ಟು ಬಿಟ್ಟುಕೊಡುತ್ತಿಲ್ಲ. ನಾವು ಧ್ಯಾನದ ಶಕ್ತಿಯನ್ನು ಚಚರ್ಿಸಲಾರಂಭಿಸಿದೆವೇ ಹೊರತು ಎಂದಿಗಾದರೂ ಒಮ್ಮೆ ಇಷ್ಟು ಧ್ಯಾನ ಸಿದ್ಧಿ ಹೊಂದಿದ ಹೆಣ್ಣುಮಗಳೊಬ್ಬಳು ಕೊಲೆ ಮಾಡುವಂತಹ ನೀಚ ಮಟ್ಟಕ್ಕೆ ಇಳಿದಾಳಾ ಎಂದು ಪ್ರಶ್ನಿಸುವ ಗೊಡವೆಗೂ ಹೋಗಲಿಲ್ಲ. ಅದು ಬಿಡಿ, ಕೊಲೆ ಮಾಡಿದವ ಧ್ಯಾನವನ್ನು ಕಲಿತರೆ ಪೊಲೀಸರಿಗೆ ಸುಳಿವು ಕೊಡದಂತೆ ಬಚಾವಾಗಿಬಿಡಬಹುದಾ ಎಂಬುದರ ಕುರಿತಂತೆಯೂ ತಲೆಕೆಡಿಸಿಕೊಳ್ಳಲಿಲ್ಲ. ಭಯೋತ್ಪಾದನಾ ನಿಗ್ರಹ ದಳಕ್ಕೆ ಒತ್ತಡ ಹೆಚ್ಚುತ್ತಿದ್ದಂತೆ ಅವರು ಸಾಧ್ವಿಯನ್ನು ಪಕ್ಕಕ್ಕೆ ತಳ್ಳಿ, ಕರ್ನಲ್ ಪುರೋಹಿತರನ್ನು ಖೆಡ್ಡಾಕ್ಕೆ ಬೀಳಿಸಿದರು. ಹೆಚ್ಚು ಕಡಿಮೆ ನಾಮಾವಶೇಷವಾಗಿರುವ ಹಿಂದೂ ಮಹಾಸಭಾದ ಅಂಗವೆನ್ನುವಂತಿರುವ ಅಭಿನವ ಭಾರತ ಎಂಬ ಸಂಘಟನೆಯ ಮುಖ್ಯಸ್ಥರಾಗಿದ್ದರೆಂಬ ನೆಪ ಹೇಳಿ ಸೈನ್ಯದ ನಿವೃತ್ತ ಅಧಿಕಾರಿ ಪುರೋಹಿತರನ್ನು ಸಮಾಜದ ಮುಂದೆ ನಿಲ್ಲಿಸಿತು ಸಕರ್ಾರ. ಅಭಿನವ ಭಾರತ ಸಾವರ್ಕರರ ಪರಿಕಲ್ಪನೆಯ ಸಂಘಟನೆಯಾಗಿದ್ದರಿಂದ ಮತ್ತು ಸಾವರ್ಕರರು ಅಖಂಡ ಹಿಂದುತ್ವದ ಪ್ರತಿಪಾದಕರಾಗಿದ್ದರಿಂದ ಈ ಪ್ರಯತ್ನದಲ್ಲಿ ಯಶಸ್ಸು ಪಡೆಯುವ ವಿಶ್ವಾಸ ಮುಂಬೈ ಪೊಲೀಸರಿಗಿತ್ತು. ಮಿಲಿಟರಿ ಇಂಟೆಲಿಜೆನ್ಸ್ನಲ್ಲಿ ವಿಶೇಷ ಪರಿಣತಿ ಹೊಂದಿದ್ದ ಕರ್ನಲ್ ಸಾಹೇಬರನ್ನೇ ಈಗ ಇಡಿಯ ಮುಸ್ಲೀಂ ವಿರೋಧಿ ಭಯೋತ್ಪಾದನೆಯ ಮುಖ್ಯ ರೂವಾರಿ ಎಂದು ಕರೆಯಲಾಯಿತು. ಆ ಮೂಲಕ ಸಾಧ್ವಿ ಪ್ರಜ್ಞಾಸಿಂಗರ ಕಾರಣದಿಂದಾದ ಎಲ್ಲ ಹಿನ್ನಡೆಗಳನ್ನು ಮುಚ್ಚಿಕೊಳ್ಳುವ ಪ್ರಯತ್ನ ತಾತ್ಕಾಲಿಕವಾದ ಯಶಸ್ಸು ಕಂಡಿತ್ತು. ವಿರೋಧಕ್ಕಾಗಿ ಬೀದಿಗಿಳಿಯಬೇಕಾದ ಜನ ಕರ್ನಲ್ ಪುರೋಹಿತರ ಕುರಿತಂತೆ ಚಚರ್ಿಸಲಾರಂಭಿಸಿದರು. ಮಿಲಿಟರಿ ಇಂಟೆಲಿಜೆನ್ಸ್ನಲ್ಲಿ ಅವರ ಚಾಣಾಕ್ಷತೆಯನ್ನು ಕೊಂಡಾಡಿದರು. ಆದರೆ ಎಂದಿಗೂ ದೇಶದ ಏಕತೆ, ಅಖಂಡತೆಗಳಿಗಾಗಿ ತನ್ನ ಪ್ರಾಣ ಪಣಕ್ಕಿಟ್ಟು ಕಾದಾಡುವ ಸೈನಿಕ ಹೀಗೆ ದೇಶದೊಳಗೆ ಅರಾಜಕತೆ ಸೃಷ್ಟಿಸಲು ಕಾರಣನಾದಾನಾ ಅಂತ ಯೋಚಿಸಲೇ ಇಲ್ಲ. ಸ್ವತಃ ಸೈನ್ಯ ಯಾವುದೇ ವೈರುಧ್ಯದ ಹೇಳಿಕೆ ನೀಡದೇ ತಟಸ್ಥವಾಗಿ ಕಾದು ನೋಡುತ್ತೇನೆಂದಾಗಲೆ ನಮಗಿದು ಅರಿವಾಗಬೇಕಿತ್ತು. ಪೊಲೀಸರು ಹಠಕ್ಕೆ ಬಿದ್ದಿದ್ದರು. ಆಗಿನ ದಿನಗಳಲ್ಲಿ ಇವರಿಗೆಲ್ಲ ಕೊಟ್ಟ ಕಷ್ಟಗಳನ್ನು ನೀವು ಊಹಿಸಲೂ ಸಾಧ್ಯವಿಲ್ಲ. ದಿನಗಟ್ಟಲೇ ಏಟು, ವಾರಗಟ್ಟಲೇ ಉಪವಾಸ. ಬೆಳಕೇ ಇಲ್ಲದ ಪೆಟ್ರೋಲು ಟ್ಯಾಂಕುಗಳಂತಹ ಸೆಲ್ಲುಗಳಲ್ಲಿ ತಿಂಗಳುಗಟ್ಟಲೆ ಬಂಧನ. ಇಷ್ಟಾದರೂ ಪುರೋಹಿತರ ಬಾಯಿ ಬಿಡಿಸಲು ಸಾಧ್ಯವಾಗದಿದ್ದಾಗ ತಾವೇ ಕಥೆಯೊಂದನ್ನು ಹೆಣೆದರು. ಕರ್ನಲ್ ಪುರೋಹಿತರು ಮುಸಲ್ಮಾನ ಭಯೋತ್ಪಾದಕರಿಗೇ ಹಣಕೊಟ್ಟು ಈ ಸ್ಫೋಟಗಳನ್ನು ಮಾಡಿಸುವ ಯೋಜನೆ ಹಾಕಿಕೊಂಡಿದ್ದರಂತೆ. ಅದಕ್ಕೆ ಅವರು ನಕಾರಾತ್ಮಕವಾಗಿ ಸ್ಪಂದಿಸಿದಾಗ, ಅವರಿಂದಲೇ ಆರ್ಡಿಎಕ್ಸ್ಗಳನ್ನು ಖರೀದಿಸಿ ಅದನ್ನು ಬೈಕ್ ಮೇಲೆ ಕೊಂಡೊಯ್ದು ಸ್ಫೋಟಿಸಿದರಂತೆ.

ಇಡಿಯ ಕಥೆ ಪೊಗೊ ಚಾನೆಲ್ಲಿಗೂ ವಸ್ತುವಾಗುವುದಕ್ಕೆ ಲಾಯಕ್ಕಿರಲಿಲ್ಲ. ಸೈನ್ಯದ ಮಿಲಿಟರಿ ಇಂಟೆಲಿಜೆನ್ಸ್ನಲ್ಲಿ ಸೇವೆ ಸಲ್ಲಿಸಿದ ದಕ್ಷ ಅಧಿಕಾರಿಯೊಬ್ಬ ಇಷ್ಟು ಬಾಲಿಶವಾಗಿ ಯೋಚಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಪೊಲೀಸರು ಉತ್ತರ ಕೊಡುವ ವೇಳೆಗೆ ಹೈರಾಣಾಗಿಬಿಟ್ಟಿದ್ದರು. ಅವರಿಗೀಗ ಮತ್ತೊಂದು ದೊಡ್ಡ ಹೆಸರೇ ಬೇಕಿತ್ತು. ಕೇಂದ್ರ ಸಕರ್ಾರದ ಆಕಾಂಕ್ಷೆಗಳಿಗೆ ನೀರೆರೆಯುವಂತಹ ಮಹತ್ವದ ವ್ಯಕ್ತಿಯನ್ನು ಹಿಡಿದು ಕೂಡಿಹಾಕಬೇಕಿತ್ತು. ಆಗ ಸಿಕ್ಕಿದವರು ಸ್ವಾಮಿ ಅಸೀಮಾನಂದ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿದ್ದರು ಮತ್ತು ಆಗಾಗ ಮೊಬೈಲ್ ನಂಬರುಗಳನ್ನು ಬದಲಾಯಿಸುವ ಖಯಾಲಿ ಇದ್ದವರೆಂಬುದೊಂದೇ ಪೊಲೀಸರಿಗಿದ್ದ ಸಾಕ್ಷಿ. ಅದನ್ನೇ ಮುಂದಿಟ್ಟುಕೊಂಡು ಕರ್ನಲ್ ಪುರೋಹಿತರಿಗೆ ಬಾಂಬು ಸ್ಫೋಟಿಸುವ ದೈವಿಕ ಶಕ್ತಿಯನ್ನು ಕೊಟ್ಟವರೇ ಇವರು ಎಂದಿತು ಪೊಲೀಸು ಪಡೆ. ಅಲ್ಲಿಗೆ ಎರಡು ದಿಕ್ಕಿನ ಪ್ರಹಾರವಾಗಿತ್ತು. ಇಸ್ಲಾಂ ಉಗ್ರಗಾಮಿಗಳಿಗೆ ಕುರಾನ್ ಪ್ರೇರಣೆ ಎಂದು ಹೇಗೆ ಜಗತ್ತಿನಲ್ಲಿ ಸಾಬೀತಾಗಿದೆಯೋ ಹಾಗೆಯೇ ಹಿಂದೂ ಉಗ್ರಗಾಮಿಗಳಿಗೆ ಕಾವಿಧಾರಿ ಸಂತರು ಎನ್ನುವುದಕ್ಕೆ ಪುರಾವೆ ಹೊಂದಿಸಿಯಾಗಿತ್ತು. ಎರಡನೆಯದು ಇವೆಲ್ಲವುಗಳ ಹಿಂದಿರುವುದು ಸಂಘವೇ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಜನ ಅದರಿಂದ ದೂರವಿರುವಂತೆ ಮಾಡುವುದು ಮತ್ತು ಅದನ್ನು ನಿಷೇಧಿಸಿದಾಗ ಜನ ಬೆಂಬಲ ಇಲ್ಲದಿರುವಂತೆ ನೋಡಿಕೊಳ್ಳುವುದು.

ಇಷ್ಟಕ್ಕೂ ಅಸೀಮಾನಂದರು ವನವಾಸಿ ಬುಡಕಟ್ಟು ಜನಾಂಗದವರಿಗಾಗಿ ಅಪಾರವಾದ ಸೇವೆಗೈದು ಸಾಕಷ್ಟು ಖ್ಯಾತಿ ಪಡೆದವರು. ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಷ್ಟೇ ಅಲ್ಲದೇ, ಇತ್ತ ಗುಜರಾತಿನ ಡಾಂಗ್ ಜಿಲ್ಲೆಯ ಆದಿವಾಸಿಗಳ ನಡುವೆ ನೆಲೆನಿಂತು ಅವರ ಪಾಲಿನ ಪ್ರೀತಿಯ ಸಂತರಾಗಿಬಿಟ್ಟಿದ್ದರು. ನೆನಪಿಡಿ. ಅತ್ಯಂತ ಹೆಚ್ಚು ಆದಿವಾಸಿಗಳು ಕ್ರಿಶ್ಚಿಯಾನಿಟಿಗೆ ಮತಾಂತರ ಹೊಂದಿದ ಡಾಂಗ್ ಜಿಲ್ಲೆಯಲ್ಲಿ ಇವರು ಕೆಲಸ ಮಾಡಲಾರಂಭಿಸಿದ ನಂತರ ಅವರೆಲ್ಲ ಮಾತೃ ಧರ್ಮಕ್ಕೆ ಮರಳಿದ್ದರು. ಈ ಕುರಿತಂತೆ ಕ್ರಿಶ್ಚಿಯನ್ ಮಿಶನರಿಗಳಿಗೆ ಸಹಿಸಲಸಾಧ್ಯ ಆಕ್ರೋಶವಿತ್ತು. ಆಗಾಗ ಅವರ ವಿರುದ್ಧ ಪತ್ರಿಕೆಗಳಲ್ಲಿ ಈ ಕುರಿತಂತೆ ವಿಷವನ್ನೂ ಕಾರಿಕೊಳ್ಳಲಾಗುತ್ತಿತ್ತು. ಅಗೋ! ಈಗ ಏಕಕಾಲಕ್ಕೆ ಎಲ್ಲಕ್ಕೂ ಪರಿಹಾರ ದಕ್ಕಿತು. ಅಸೀಮಾನಂದರನ್ನು ಬಂಧಿಸಿ ಹೊತ್ತೊಯ್ದ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಕೊಟ್ಟ ಕಿರುಕುಳವನ್ನು ಅನುಭವಿಸುವುದು ದೂರದ ಮಾತು, ಕೇಳುವುದೂ ಸಾಧ್ಯವಾಗಲಾರದು. ಜರ್ಝರಿತವಾದ ದೇಹ ಮ್ಯಾಜಿಸ್ಟ್ರೇಟರ ಮುಂದೆ ಎಲ್ಲಕ್ಕೂ ತಾನೇ ಹೊಣೆಯೆಂದು ಒಪ್ಪಿಕೊಂಡಿತು. ಆ ಮೂಲಕ ಪೊಲೀಸರ ಕಿರುಕುಳದಿಂದ ಪಾರಾಗಿ ಕೋಟರ್ಿನಲ್ಲಿ ವಾದ ಮಾಡುವ ಅವಕಾಶ ಪಡೆಯುವ ಆಸೆ ಇದ್ದಿರಬೇಕು ಅವರದ್ದು. ಈ ಹೊತ್ತನಲ್ಲಿಯೇ ಬೋಡರ್ಿಗೂ ಇಲ್ಲದ ‘ಕ್ಯಾರವಾನ್’ ಎಂಬ ಪತ್ರಿಕೆ ಅಸೀಮಾನಂದರ ಸಂದರ್ಶನವನ್ನು ಪ್ರಕಟಿಸಿ, ಅದರಲ್ಲಿ ಅವರ ಬಾಯಿಂದ ಸಂಘದ ಸರಸಂಘಚಾಲಕ ಮೋಹನ್ ಭಾಗ್ವತರ ಹೆಸರನ್ನು ಉಲ್ಲೇಖಿಸುವಂತೆ ನೋಡಿಕೊಂಡಿತು. ಕೇಂದ್ರ ಸಕರ್ಾರಕ್ಕೆ ಬೇಕಿದ್ದ ಅಸ್ತ್ರ ದಕ್ಕಿತ್ತು. ಸಂಘದ ಪ್ರಚಾರಕ ಇಂದ್ರೇಶ್ ಕುಮಾರ್ರನ್ನು ಅದಾಗಲೇ ಈ ಗಲಾಟೆಗಳೊಂದಿಗೆ ತಳುಕು ಹಾಕಲೆತ್ನಿಸಿದ ಸಕರ್ಾರಕ್ಕೆ ಈಗ ಹಬ್ಬ. ಸಾಧ್ವಿ ಮಾಲೆಗಾಂವ್ನ ಸ್ಫೋಟದ ಮಾಸ್ಟರ್ ಬ್ರೇನ್ ಆದರೆ ಆಕೆಯ ಹಿಂದಿನ ಶಕ್ತಿ ಕರ್ನಲ್ ಪುರೋಹಿತ್. ಅವರ ಹಿಂದಿರುವ ದೈವೀ ಚಿಂತನೆ ಸ್ವಾಮಿ ಅಸೀಮಾನಂದರದಾದರೆ ಇವರಿಗೆ ಬೆನ್ನೆಲುಬು ಮೋಹನ್ ಭಾಗ್ವತರು ಎನ್ನುವುದನ್ನು ಜನರಿಗೆ ಒಪ್ಪಿಸ ಹೊರಟಿತ್ತು ಸಕರ್ಾರ. ಆದರೆ ಎಡವಟ್ಟಾಗಿ ಹೋಯ್ತು. ಈ ವೇಳೆಗಾಗಲೇ ಕೇಂದ್ರದಲ್ಲಿ ಕುಳಿತ ಸಕರ್ಾರದ ಈ ಕೆಡುಕು ಬುದ್ಧಿ ಅರಿವಿಗೆ ಬಂದಿದ್ದರಿಂದ ಜನ ಸಂಘಕ್ಕೆ ಹಿಂದಿಗಿಂತಲೂ ಬಲವಾಗಿ ಆತುಕೊಂಡರು.

4
ಖಾಸಗಿ ವಾಹಿನಿಯ ಸ್ಟಿಂಗ್ ಆಪರೇಶನ್ ನಂಬುವುದಾದರೆ, ಮುಂಬೈ ಸ್ಫೋಟಗಳನ್ನೇ ಸಂಘದ ತಲೆಗೆ ಕಟ್ಟ ಹೊರಟಿತ್ತಂತೆ ಸಕರ್ಾರ. ತುಕಾರಾಮ್ ಒಂಬ್ಳೆಯ ಸಾಹಸದಿಂದಾಗಿ ಕಸಬ್ ಸಿಕ್ಕಿಬಿದ್ದಿದುರಿಂದ ಅವರ ಎಲ್ಲ ಆಲೋಚನೆಗಳೂ ತಲೆಕೆಳಗಾದವಷ್ಟೇ. ಅನುಮಾನವೇ ಇಲ್ಲ. ಅಂದಿನ ಸಕರ್ಾರಕ್ಕೆ ಅದೆಷ್ಟು ಧಾವಂತವಿತ್ತೆಂದರೆ ಶತಾಯಗತಾಯ ಹಿಂದೂಗಳನ್ನು ಭಯೋತ್ಪಾದಕರೆಂದು ಸಾಬೀತುಪಡಿಸಿಬಿಡಬೇಕಿತ್ತು. ಇಲ್ಲವಾದರೆ 2008ರಲ್ಲಿ ಸಿಮಿ ಮುಖ್ಯಸ್ಥ ಸಫ್ದರ್ ನಾಗೋರಿ ಯಾವ ಸಂಝೋತಾ ಸ್ಫೋಟಗಳ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡಿದ್ದನೋ ಅದೇ ಸ್ಫೋಟಗಳ ಹೊಣೆಗಾರಿಕೆಯನ್ನು 2010ರಲ್ಲಿ ಅಸೀಮಾನಂದರಿಗೆ ಹೊರಿಸಬೇಕಾದ ಅಗತ್ಯವಿರಲಿಲ್ಲ. ಇದರದ್ದೇ ಮುಂದುವರೆದ ಭಾಗವಾಗಿ 2012 ರಲ್ಲಿ ಅಜ್ಮೇರ್ನ ದಗರ್ಾ ಶರೀಫ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದ ಇಬ್ಬರು ಭೋಪಾಲ್ ನ್ಯಾಯಾಲಯದಲ್ಲಿ ರಾಷ್ಟ್ರೀಯ ತನಿಖಾ ದಳದ ವಿರುದ್ಧ ಖಟ್ಲೆ ಹೂಡಿದ್ದರು.

ವಿಷಯ ಏನಿತ್ತು ಗೊತ್ತೇ? ಈ ಸ್ಫೋಟದಲ್ಲಿ ಮತ್ತು ಸ್ವಯಂ ಸೇವಕ ಸುನೀಲ್ ಜೋಶಿಯವರ ಕೊಲೆಯಲ್ಲಿ ಸಂಘದ ಹಿರಿಯರ ಪಾತ್ರವಿದೆ ಎಂದು ಹೇಳಿಕೆ ನೀಡಲು ಒಂದು ಕೋಟಿ ರೂಪಾಯಿ ಆಮಿಷವನ್ನು ಸ್ವತಃ ರಾಷ್ಟ್ರೀಯ ತನಿಖಾ ದಳವೇ ಒಡ್ಡಿತ್ತು. ಈ ವಿಚಾರ ರಾಷ್ಟ್ರ ಮಟ್ಟದಲ್ಲಿ ಉತ್ಪಾತವನ್ನೇ ಸೃಷ್ಟಿಸಿ, ಸಕರ್ಾರ ಒಂದು ಹೆಜ್ಜೆ ಹಿಂದೆ ಹೋಗಿ ನಿಂತು ಬಿಟ್ಟಿತು. ಆರೆಸ್ಸೆಸ್ಸು ಮತ್ತು ಸಿಮಿಗಳು ಸಮಾನವೆಂದು ರಾಹುಲ್ ಗಾಂಧಿ ಕೊಟ್ಟ ಹೇಳಿಕೆಯನ್ನು ಸಾಬೀತು ಮಾಡುವ ಕೇಂದ್ರದ ಧಾವಂತ ತಿರುಗುಬಾಣವಾಗಿಬಿಟ್ಟಿತ್ತು.

ತಮ್ಮ ಅನುಕೂಲಕ್ಕೆ ಬೇಕಾಗಿ ದೇಶವನ್ನು ಒಡೆಯುವ ಕಾಂಗ್ರೆಸ್ಸಿನ ಚಾಳಿ ಇಂದು ನಿನ್ನೆಯದಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ಇರುವಂಥದ್ದೇ. ಸುಭಾಷರ ಕಣ್ಮರೆ ನಿಗೂಢವಾಗಿಹೋದದ್ದು, ಪಟೇಲರು ನೇಪಥ್ಯಕ್ಕೆ ಸರಿದದ್ದು, ಲಾಲ್ ಬಹಾದೂರ್ ಶಾಸ್ತ್ರಿಯವರ ಸಾವು ಇವೆಲ್ಲವೂ ಅಧಿಕಾರ ದಾಹದ ಬಿಂದುಗಳಷ್ಟೇ. ಅಗತ್ಯ ಬಿದ್ದಾಗ ಮುಸಲ್ಮಾನರನ್ನು ಹಿಂದುಗಳ ವಿರುದ್ಧ ಎತ್ತಿ ಕಟ್ಟಿ, ತಮ್ಮ ಕೋಟೆಯನ್ನು ಭದ್ರಗೊಳಿಸುವ ಅವರ ಹುನ್ನಾರವೂ ಬ್ರಿಟೀಷರದಷ್ಟೇ ಹಳೆಯದು. ಕೊನೆಯ ಬ್ರಿಟಿಷ್ ವೈಸರಾಯ್ ನೆಹರೂ ಅಂತ ಸುಮ್ಮಸುಮ್ಮನೆ ಹೇಳಿದ್ದಲ್ಲ. ಕನರ್ಾಟಕದಲ್ಲಿ ಈಗ ನಡೆಯುತ್ತಿರೋದು ಅದೇ. ಅದಾಗಲೇ ಅಕ್ಕ-ಪಕ್ಕದ ರಾಜ್ಯಗಳೊಂದಿಗಿನ ಸೌಹಾರ್ದ ಸಂಬಂಧ ಕಳೆದುಕೊಂಡಿದ್ದೇವೆ. ಸಾಲದೆಂದು ಪ್ರತ್ಯೇಕ ಧ್ವಜದ ಕಲ್ಪನೆ ಹರಿಬಿಟ್ಟಿದ್ದೇವೆ. ಉರಿಯುವ ಬೆಂಕಿಗೆ ತುಪ್ಪ ಸುರಿಯಲೆಂದೇ ಜಾತಿಯ ಗಣತಿ ಮಾಡಿಸಿ, ಪ್ರತ್ಯೇಕ ಧರ್ಮದ ಝಂಡಾ ಹಾರುವಂತೆ ನೋಡಿಕೊಳ್ಳಲಾಗಿದೆ!

ಒಂದಂತೂ ಸತ್ಯ. ಜನ ಈಗ ಬುದ್ದಿವಂತರಾಗಿದ್ದಾರೆ.

One thought on “ಅಧಿಕಾರಕ್ಕಾಗಿ ಎಷ್ಟು ಬಾರಿ ದೇಶ ಒಡೆಯುತ್ತೀರಿ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s