ಇನ್ನಾದರೂ ಗುಲಾಮರಂತೆ ಯೋಚಿಸುವುದು ಬಿಡಿ

ಇನ್ನಾದರೂ ಗುಲಾಮರಂತೆ ಯೋಚಿಸುವುದು ಬಿಡಿ

ಗೋಹತ್ಯೆ ಯಾಂತ್ರಿಕ ಕಸಾಯಿ ಖಾನೆಗಳ ಮೂಲಕ ವ್ಯಾಪಕವಾಯ್ತು. ಗೋವು ನಮಗೆ ಮಾಂಸದ ಮೂಲಕ ಹಣ ತರುವ ವಸ್ತುವಾಯ್ತು. ಅಕ್ಷರಶಃ ಇವೆಲ್ಲವೂ ಬ್ರಿಟೀಷರು ನಮಗೆ ಬಿಟ್ಟು ಹೋದ ಬಳುವಳಿ. ಅವರದ್ದೇ ಮಾನಸಿಕತೆಯ ಮುಂದುವರೆದ ಭಾಗ. ಗುಲಾಮಿ ಮಾನಸಿಕತೆ ಅಂದರೆ ಇದೇ.

ಗೋವಿನ ಕುರಿತಂತೆ ಗಾಂಧಿವಾದಿ ಧರ್ಮಪಾಲರದು ವಿಶೇಷ ಅಧ್ಯಯನ ಮತ್ತು ಆಳವಾದ ಹೊಳಹು. ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಗೋವಿನ ಕುರಿತಂತೆ ರಚಿಸಿದ ವಿಶೇಷ ಸಮಿತಿಯಲ್ಲಿ ಅವರಿಗೆ ಪ್ರಧಾನ ಜವಾಬ್ದಾರಿ ಇತ್ತು. ಗೋಹತ್ಯಾ ನಿಷೇಧ ಕುರಿತಂತೆ ದೇಶದಾದ್ಯಂತ ವ್ಯಾಪಕ ಚಚರ್ೆ ಶುರುವಾಗಿ ಕಾನೂನುಗಳೇ ರಚನೆಗೊಳ್ಳುತ್ತಿರುವ ಈ ಹೊತ್ತಲ್ಲಿ ಅವರು ಮಂಡಿಸಿದ ಚಿಂತನೆಯನ್ನು ಮತ್ತೆ ಮೆಲುಕು ಹಾಕುವುದು ಸೂಕ್ತವೆನಿಸುತ್ತದೆ.
ಅನುಮಾನಕ್ಕೆಡೆಯಿಲ್ಲದಂತೆ ವಿಶೇಷ ಬುದ್ಧಿಯ ಕೆಲವು ಜೀವಿಗಳು ಬಿಟ್ಟರೆ ಉಳಿದೆಲ್ಲರೂ ಭಾರತವನ್ನು ಕೃಷಿ ಪ್ರಧಾನ ದೇಶವೆಂದು ಒಪ್ಪುತ್ತಾರೆ ಮತ್ತು ಕೃಷಿಗೆ ಗೋವು ಅಗತ್ಯವೆಂದೂ ಒಪ್ಪುತ್ತಾರೆ. ಹೀಗಾಗಿಯೇ ಇಲ್ಲಿ ಗೋವಿಗೆ ಇತರೆಲ್ಲ ಪ್ರಾಣಿಗಳಿಗಿಂತ ಹೆಚ್ಚು ಬೆಲೆ. ಗೋವಿನ ಹಾಲು ಬಿಡಿ ರೈತನಾದವ ಗೋಮೂತ್ರ ಮತ್ತು ಸಗಣಿಯನ್ನೂ ಕೃಷಿಗೆ ಬಳಸಿಕೊಳ್ಳುವುದರಿಂದ ಅವನು ಅದನ್ನು ದೇವರೆಂದು ಕರೆದು ಆರಾಧಿಸಿದ. ಇಷ್ಟಕ್ಕೂ ಉಪಕಾರ ಮಾಡಿದ ಪ್ರತಿಯೊಬ್ಬರನ್ನೂ ಸ್ಮರಿಸಿ ಕೃತಜ್ಞತೆ ಸಲ್ಲಿಸಿ ದೇವರೆಂದು ಆರಾಧಿಸುವ ಪರಂಪರೆಯಲ್ಲವೇನು ನಮ್ಮದು!

G1

ಇಲ್ಲಿನ ಮಣ್ಣು ಮೃದುವಾದುದರಿಂದ ನಮಗೆ ಉಳಲು ಬಲಾಢ್ಯ ಯಂತ್ರ ಬೇಕಾಗಲಿಲ್ಲ ಬದಲಿಗೆ ಎತ್ತುಗಳೇ ಸಾಕಾದವು. ರೈತ ವಿಕಸಿತಗೊಳಿಸಿದ ಕೃಷಿ ತಂತ್ರಜ್ಞಾನದಿಂದಾಗಿ ಅಂದಿನ ಕೇರಳ, ತಮಿಳುನಾಡು, ಕನರ್ಾಟಕಗಳ ಕೃಷಿ ಉತ್ಪನ್ನವೇ ಆಧುನಿಕ ಜಪಾನಿನ ಕೃಷಿ ಉತ್ಪನ್ನಕ್ಕಿಂತ ಹೆಚ್ಚಿತ್ತು. ಬರಿಯ ಕೃಷಿಗಷ್ಟೇ ಅಲ್ಲ. ಸರಕು ಸಾಗಾಣೆಗೂ ಭಾರತ ಗೋ ವಂಶದ ಮೇಲೆಯೇ ನಿರ್ಭರವಾಗಿದ್ದುದರಿಂದ ಅನ್ಯ ರಾಷ್ಟ್ರಗಳ ಮೇಲಿನ ಅವಲಂಬನೆ ಗೌಣವಾಗಿದ್ದು ಬಲಾಢ್ಯವಾಗಿತ್ತು ಭಾರತ. ಆಂಗ್ಲರು ಆಧಿಪತ್ಯ ಸ್ಥಾಪಿಸಿದ ಮೇಲೂ ಆಂಗ್ಲ ಸೇನೆಯ ಸರಕು ಸಾಗಣೆ ಹಳ್ಳಿಗರಿಂದ ಒತ್ತಾಯವಾಗಿ ಕಸಿದ ಎತ್ತುಗಳಿಂದಲೇ ಆಗುತ್ತಿತ್ತು. ರೈಲು ಸಂಚಾರ ಆರಂಭವಾಗುವವರೆಗೆ ಎತ್ತುಗಳ ಮೇಲಿನ ಅವಲಂಬನೆ ಹೀಗೆಯೇ ಇತ್ತು. ಹಾಗಂತ ಗೋವುಗಳನ್ನು ತಿನ್ನುವ ಪರಿಪಾಠ ಇರಲಿಲ್ಲವೇ? ಖಂಡಿತು ಇತ್ತು. ಅರಬ್ ಸಂಸ್ಕೃತಿಯಿಂದ ಪ್ರಭಾವಿತರಾದ ತುಕರ್ಿ, ಇರಾನ್, ಅರಬ್, ಆಫ್ಗಾನಿಸ್ತಾನ್ ಮುಂತಾದ ದೇಶಗಳ ಆಕ್ರಮಣಕ್ಕೆ ತುತ್ತಾಗುತ್ತಲೇ ಇದ್ದ ಭಾರತದಲ್ಲಿ ಅವರುಗಳ ವಿಜಯದ ನಂತರ ಗೋಮಾಂಸ ಭಕ್ಷಣೆ ಆರಂಭವಾಗಿರುವುದರಲ್ಲಿ ಅನುಮಾನವಿಲ್ಲ. ಹಾಗೆ ನೋಡಿದರೆ ಅರಬ್ರ ಸಂಸ್ಕೃತಿಯಲ್ಲೂ ಗೋವಿನ ಭಕ್ಷಣೆ ಇರಲಿಲ್ಲ. ಇಲ್ಲಿಗೆ ಬಂದ ನಂತರವೇ ಅವರು ರೂಢಿಸಿಕೊಂಡ ಅನಿಷ್ಟ ಪದ್ಧತಿ ಇದು. ಒಂಟೆಗಳ ಜಾಗದಲ್ಲಿ ಗೋವನ್ನು ಬಲಿಕೊಡುವ ಪರಂಪರೆ ಶುರುವಾದ ಮೇಲೆ ಬಹುಶಃ ಹಿಂದೂಗಳಿಗೆ ಮಾನಸಿಕ ಕಿರಿಕಿರಿ ಕೊಡುವ ಏಕೈಕ ಮಾರ್ಗವಿದು ಎಂದೆನಿಸಿ ಇದನ್ನು ವ್ಯಾಪಕಗೊಳಿಸಿರಬೇಕು ಅವರು. ಆಗಲೂ ಅಷ್ಟೇ, ಈಗಲೂ ಕೂಡ ಬಹುತೇಕ ಮುಸಲ್ಮಾನರಿಗೆ ಗೋವು ಆಹಾರವಲ್ಲ.

ಇಸ್ಲಾಮಿ ರಾಜ್ಯ ಸ್ಥಾಪನೆಯಾದಲ್ಲೆಲ್ಲಾ ಗೋಮಾಂಸ ಭಕ್ಷಣೆ ಆರಂಭವಾಯಿತಾದರೂ ಆ ಕಾರಣಕ್ಕಾಗಿಯೇ ಜನಮಾನಸದ ಬೆಂಬಲ ಕಡಿಮೆಯಾಗಿ ಆಳ್ವಿಕೆಯೂ ಕಷ್ಟವಾಗತೊಡಗಿತು. ಹೀಗಾಗಿಯೇ ಕಾಲಕ್ರಮದಲ್ಲಿ ಮುಸ್ಲೀಂ ರಾಜರೂ ಗೋಹತ್ಯೆ ನಿಷೇಧದತ್ತ ಒಲವು ತೋರಿದರು. ಬಾಬರ್, ಹುಮಾಯೂನ್, ಜಹಾಂಗೀರ್, ಔರಂಗಜೇಬರೂ ಈ ನಿಷೇಧಕ್ಕೆ ಮನಸ್ಸು ಮಾಡಿದ್ದರೆನ್ನುತ್ತಾರೆ ಧರ್ಮಪಾಲ್ಜೀ. ಈ ಕಾರಣದಿಂದಾಗಿಯೇ ಔರಂಗಜೇಬನ ನಂತರ ಗೋವಧೆ ಹೆಚ್ಚು ಕಡಿಮೆ ನಿಂತೇ ಹೋಗಿತ್ತು ಎನ್ನುತ್ತದೆ ಇತಿಹಾಸ. ಆನಂತರ ಬಂದ ಯೂರೋಪಿಯನ್ನರಿಂದಾಗಿ ಗೋವಿನ ದೆಸೆ ಮತ್ತೆ ಬದಲಾಯ್ತು. ವ್ಯಾಪಕವಾದ ಗೋಹತ್ಯೆ ಶುರುವಾಯ್ತು. ಆರಂಭದಲ್ಲಿ ಆಂಗ್ಲರು ಇಂಗ್ಲೆಂಡಿನಿಂದ ಒಣಗಿದ ಗೋಮಾಂಸ ತರಿಸಿಕೊಂಡು ತಿನ್ನುತ್ತಿದ್ದರು. ಅವರ ಕೈ ಭಾರತದ ಮೇಲೆ ಬಲವಾಗುತ್ತಿದ್ದಂತೆ ಇಲ್ಲಿಯೇ ಗೋಹತ್ಯೆ ಆರಂಭಿಸಿದರು. ಗೋಮಾಂಸದಿಂದ ಶಕ್ತಿ ವೃದ್ಧಿಯಾಗುತ್ತದೆಂಬ ರಷ್ಯಾದ ನಂಬಿಕೆಯೇ ಅವರನ್ನು ಗೋಭಕ್ಷಣೆಗೆ ಪ್ರೇರೇಪಿಸಿರಬಹುದು ಅಥವಾ ಅವರ ತಣ್ಣಗಿನ ವಾತಾವರಣವೇ ಗೋಮಾಂಸಕ್ಕೆ ಬೇಡಿಕೆ ಹೆಚ್ಚಿಸಿರಬಹುದು ಎನ್ನುತ್ತಾರೆ ಧರ್ಮಪಾಲ್ಜಿ. ಗೋಹತ್ಯೆ ಎಷ್ಟು ಎಗ್ಗಿಲ್ಲದೇ ನಡೆಯಿತೆಂದರೆ ಮಹಾತ್ಮಾ ಗಾಂಧೀಜಿ 1871 ರಲ್ಲಿ ಆಂಗ್ಲ ಶಾಸನದ ಕಾಲದಲ್ಲಿ ಪ್ರತಿನಿತ್ಯ 30 ಸಾವಿರ ಗೋವುಗಳ ಹತ್ಯೆಯಾಗುತ್ತಿತ್ತು ಎಂದಿದ್ದರು.

cattle-trafficking-3

ಆರಂಭದಲ್ಲಿ ಆಂಗ್ಲ ಸೈನಿಕರಿಗಾಗಿ ಶುರುವಾದ ಗೋವಧೆ ಕಾಲಕ್ರಮದಲ್ಲಿ ಸೈನ್ಯದಲ್ಲಿರದ ಆಂಗ್ಲರಿಗೂ ವಿಸ್ತಾರಗೊಂಡಿತು. 1800 ರ ವೇಳೆಗೆ ಆಂಗ್ಲ ಸೈನಿಕರ ಸಂಖ್ಯೆ 20 ಸಾವಿರದಷ್ಟಿದ್ದರೆ ಸೈನಿಕರಲ್ಲದವರು ಒಂದೆರಡು ಲಕ್ಷವಾದರೂ ಇದ್ದರು. ಇವರಿಗೆ ಗೋಮಾಂಸ ಪೂರೈಸಲೆಂದು ಸೈನಿಕ ವಲಯದೊಳಗೆ ದೊಡ್ಡ ದೊಡ್ಡ ಕಸಾಯಿಖಾನೆ ತೆರೆಯಲಾಯ್ತು. ಭಾರತದಲ್ಲಿ ಗೋವಧೆಯ ಆರಂಭದ ಹೆಜ್ಜೆಗಳು ಹೀಗಿದ್ದವು. ಆರಂಭದಲ್ಲಿ ಇತರೆ ಮಾಂಸ ಕಡಿಯುವ ಕಟುಕರನ್ನೇ ಆಮಿಷವೊಡ್ಡಿ ಈ ಕಾರ್ಯಕ್ಕೆ ನೇಮಿಸಲಾಯಿತು. ಬರುಬರುತ್ತ ಆಂಗ್ಲ ಸೈನಿಕರ ಸಂಖ್ಯೆ ಮತ್ತು ಇತರ ಬಿಳಿಯರ ಸಂಖ್ಯೆ ಬೆಳೆಯುತ್ತಿದ್ದಂತೆ ಗೋವು ಕಡಿಯುವ ಕಟುಕರ ಸಂಖ್ಯೆ 30 ಪಟ್ಟು ವೃದ್ಧಿಯಾಯಿತು. ಈ ಕಟುಕರನ್ನು ಮುಂದಿರಿಸಿಕೊಂಡು ಮುಸಲ್ಮಾನರ ವಿರುದ್ಧ ಹಿಂದೂಗಳನ್ನು ಎತ್ತಿ ಕಟ್ಟುವ ಪ್ರಯತ್ನ ಬಿಳಿಯರದಿತ್ತು. ಇಷ್ಟಾದಾಗ್ಯೂ ಸತ್ಯದ ಅರಿವು ಅವರಿಗಿದ್ದೇ ಇತ್ತು. 1893 ರಲ್ಲಿ ವಿಕ್ಟೋರಿಯಾ ರಾಣಿ ವೈಸರಾಯ್ಗೆ ಬರೆದ ಪತ್ರದಲ್ಲಿ ‘ಭಾರತದಲ್ಲಿ ಗೋಹತ್ಯೆಯ ವಿರುದ್ಧ ನಡೆದಿರುವ ಆಂದೋಲನ ಮುಸಲ್ಮಾನರ ವಿರುದ್ಧವಲ್ಲ, ನಮ್ಮ ವಿರುದ್ಧವೇ, ಏಕೆಂದರೆ ಬಹಳಷ್ಟು ಗೋವಧೆ ಮಾಡುವವರು ನಾವೇ’ ಎಂದು ಸ್ಪಷ್ಟವಾಗಿ ಹೇಳುತ್ತಾರೆ.

ಹಾಗಂತ ಆಂಗ್ಲರು ಮುಸಲ್ಮಾನ ಆಡಳಿತಗಾರರಂತೆ ಭಂಡತನದಿಂದ ಇದನ್ನು ಮಾಡಲಿಲ್ಲ. ಬದಲಿಗೆ ಭಾರತೀಯ ಗೋತಳಿ ಕೆಲಸಕ್ಕೆ ಬಾರದ್ದೆಂದು ಇಲ್ಲಿನ ಬುದ್ಧಿವಂತರನ್ನು ನಂಬಿಸಿದರು. ಗೋತಳಿಯಷ್ಟೇ ಏಕೆ? ಇಲ್ಲಿನ ಮನುಷ್ಯ, ಅವನ ಜೀವನ, ಇಲ್ಲಿನ ಕಲೆ, ಪ್ರಕೃತಿ ಎಲ್ಲವೂ ಕಳಪೆ ದಜರ್ೆಯದೆಂದು ಮತ್ತೆ ಮತ್ತೆ ಹೇಳಿ ಒಪ್ಪಿಸಿದರು. ನಾವು ಅದನ್ನು ನಂಬಿ ಇತರರಿಗೆ ಬೋಧಿಸಲು ಶುರು ಮಾಡಿದೆವು. ಹಾಗೆಂದೇ ಪ್ರೇಮಚಂದರು ತಮ್ಮ ಕಥೆಯೊಂದರಲ್ಲಿ ರೈತನ ಬಾಯಲ್ಲಿ ‘ಹಸುವಿನ ತಳಿ ವಿದೇಶದ್ದಾಗಿರಬೇಕು’ ಎಂದು ಹೇಳಿಸಿದ್ದು! 1928 ರಲ್ಲಿ ಆಂಗ್ಲರೇ ರಚಿಸಿದ ಕೃಷಿ ಆಯೋಗ ಭಾರತೀಯ ಪಶುಗಳು ಕಳಪೆ ಎಂಬುದನ್ನು ಬೇಕಂತಲೇ ಎತ್ತಿ ಹಿಡಿಯಿತು. ಅದಾದ ಮೇಲೆಯೇ ಭಾರತಕ್ಕೆ ವಿದೇಶೀ ತಳಿಯ ಹಸುಗಳು ಕಾಲಿರಿಸಿದ್ದು.
1940 ರಲ್ಲಿ ಕಾಂಗ್ರೆಸ್ಸು ನೆಹರೂ ನೇತೃತ್ವದಲ್ಲಿ ರಾಷ್ಟ್ರೀಯ ಯೋಜನಾ ಸಮಿತಿಯೊಂದನ್ನು ರಚಿಸಿತು. ಅದರ ಅನೇಕ ಉಪಸಮಿತಿಗಳಲ್ಲಿ ಒಂದು ಕೃಷಿ ಮತ್ತು ಗೋವಿನ ಕುರಿತಂತೆಯೇ ಆಗಿತ್ತು. ಈ ಸಮಿತಿಯ ಸಲಹೆಯಂತೆ ಭಾರತದ ಕೃಷಿ ಬೆಳವಣಿಗೆಗೆ ಗೋಹತ್ಯೆ ಸಂಪೂರ್ಣ ನಿಷೇಧವಾಗಬೇಕಿತ್ತು. ಆದರೆ ವಾಣಿಜ್ಯಕ್ಕೆ ಸಂಬಂಧಿಸಿದ ಮತ್ತೊಂದು ಉಪ ಸಮಿತಿ ವಿದೇಶೀ ವಿನಿಮಯ ಗಳಿಸಲು ಗೋಮಾಂಸ ರಫ್ತು ಮಾಡಲೇಬೇಕು ಎಂದಿತ್ತು. ಹೀಗೆ ಗೋವು ಕೃಷಿ ಉತ್ಪನ್ನ ವೃದ್ಧಿಸುವ ಸಾಧನದಿಂದ ವಿದೇಶೀ ವಿನಿಮಯ ಉಳಿಸುವ ಸಾಧನವಾಗಿ ಉಳಿದುಬಿಟ್ಟಿತು. 1948 ರ ದಾತಾರ್ಸಿಂಗ್ ನೇತೃತ್ವದ ಸಮಿತಿ ಮೊದಲ ಹಂತದಲ್ಲಿ 15 ವರ್ಷಕ್ಕಿಂತ ಕಡಿಮೆ ಆಯಸ್ಸಿನ ಕ್ರಮೇಣ ಪೂರ್ಣ ಗೋಹತ್ಯಾ ನಿಷೇಧ ಆಗಬೇಕೆಂದು ಸಲಹೆ ನೀಡಿತ್ತು. ಊಹೂಂ. ಸಕರ್ಾರ ತಲೆ ಕೆಡಿಸಿಕೊಳ್ಳಲಿಲ್ಲ. 1950 ರ ವರದಿಯೂ ಮೂಲೆಗುಂಪಾಯ್ತು. ಸ್ವತಃ ಸಂವಿಧಾನ ರೂಪಿಸುವ ಹೊತ್ತಲ್ಲಿ ಬಿಸಿ ಬಿಸಿ ಚಚರ್ೆಗಳಾದರೂ ನಾಲ್ಕಾರು ಮುಸಲ್ಮಾನರಾದಿಯಾಗಿ ಬಹುತೇಕರು ಗೋಹತ್ಯಾ ನಿಷೇಧದ ಪರವಾಗಿ ಮಾತನಾಡಿದ್ದರೂ ಆಂಗ್ಲ ಮಾನಸಿಕತೆಯಿಂದ ಪ್ರಭಾವಿತರಾಗಿದ್ದ ಆಳುವ ಧಣಿಗಳು ಕೇಳಿಸಿಕೊಳ್ಳಲಿಲ್ಲ. ಗೋಹತ್ಯಾ ನಿಷೇಧ ರಾಜ್ಯಕ್ಕೆ ಸಂಬಂಧ ಪಟ್ಟ ವಿಷಯವಾಗಲೆಂದು ಕಾನೂನು ರೂಪಿಸಿ ತೇಪೆ ಹಚ್ಚಿಬಿಟ್ಟಿತು. ಅಷ್ಟೇ ಅಲ್ಲ. ಭಾರತೀಯ ಕೃಷಿ ಮತ್ತು ಗೋವನ್ನು ಆಧುನಿಕ ಗೊಳಿಸುವ ವಿಚಾರವನ್ನು ಸಂವಿಧಾನದಲ್ಲಿ ತುರುಕಲಾಯಿತು. ಅದಾದ ಮೇಲೆಯೇ ಭಾರೀ ಪ್ರಮಾಣದ ರಾಸಾಯನಿಕ ಗೊಬ್ಬರಗಳ ಆಮದು ಶುರುವಾಗಿದ್ದು. ಆನಂತರವೇ ಹೈಬ್ರೀಡ್ ಬೀಜ ಬಳಕೆ ಶುರುವಾಗಿದ್ದು. ಗೋವಿಗೆ ಅಪ್ರಾಕೃತಿಕ ರೀತಿಯ ಗರ್ಭದಾನ ವ್ಯಾಪಕವಾಗಿ ಶುರುವಾಗಿದ್ದೂ ಆನಂತರವೇ. 1952 ರಲ್ಲಿ ಮತ್ತೆ ಗೋಹತ್ಯಾ ನಿಷೇಧ ಚಚರ್ೆ ಸದನದಲ್ಲಿ ತೀವ್ರಗೊಂಡಿತು. ವಾದ-ವಾಗ್ವಾದಗಳ ನಡುವೆ ಗೋವನ್ನು ಉಳಿಸಬೇಕೆಂದವರ ಸಂಖ್ಯೆಯೇ ಹೆಚ್ಚಾದಾಗ ನೆಹರೂ ಮಧ್ಯೆ ಪ್ರವೇಶಿಸಿ ಈ ಪ್ರಸ್ತಾವ ಸ್ವೀಕೃತವಾದರೆ ರಾಜೀನಾಮೆ ಕೊಡುತ್ತೇನೆ ಎಂದುಬಿಟ್ಟರು. ಪ್ರಸ್ತಾವ ಬಿದ್ದು ಹೋಯಿತು.

1

1954 ರಲ್ಲಿ ಭಾರತ ಸಕರ್ಾರ ರಚಿಸಿದ ಸಮಿತಿಯಂತೂ ನಮ್ಮ ದೇಶದಲ್ಲಿ 40 ಪ್ರತಿಶತ ಗೋವುಗಳನ್ನು ಮಾತ್ರ ಸಾಕಲು ಸಾಧ್ಯ ಎಂದು ವರದಿ ಕೊಟ್ಟಿತು. ಅದರ ಪ್ರಕಾರ ಶೇ 60 ರಷ್ಟು ಗೋವುಗಳು ಮಾಂಸವಾಗಲು ಯೋಗ್ಯವೆಂದಾಗಿತ್ತು. ಇದೇ ಬಗೆಯ ಮಾನಸಿಕತೆ ವೃದ್ಧಿಯಾಗುತ್ತ ನಡೆದಂತೆ ಗೋಹತ್ಯೆ ಯಾಂತ್ರಿಕ ಕಸಾಯಿ ಖಾನೆಗಳ ಮೂಲಕ ವ್ಯಾಪಕವಾಯ್ತು. ಗೋವು ನಮಗೆ ಮಾಂಸದ ಮೂಲಕ ಹಣ ತರುವ ವಸ್ತುವಾಯ್ತು. ಅಕ್ಷರಶಃ ಇವೆಲ್ಲವೂ ಬ್ರಿಟೀಷರು ನಮಗೆ ಬಿಟ್ಟು ಹೋದ ಬಳುವಳಿ. ಅವರದ್ದೇ ಮಾನಸಿಕತೆಯ ಮುಂದುವರೆದ ಭಾಗ. ಗುಲಾಮಿ ಮಾನಸಿಕತೆ ಅಂದರೆ ಇದೇ. ಗೋಹತ್ಯೆಯ ನಿಷೇಧವೆಂದರೆ ಈ ಗುಲಾಮಿ ಚಿಂತನೆಯನ್ನು ಕೊಡವಿಕೊಂಡು ಏಳುವುದೇ. ಆ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ ಭಾರತ. ಜೊತೆಗೆ ನಿಲ್ಲಬೇಕಿದೆ ಅಷ್ಟೇ.

One thought on “ಇನ್ನಾದರೂ ಗುಲಾಮರಂತೆ ಯೋಚಿಸುವುದು ಬಿಡಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s