ರೈತನ ಸ್ವಾಭಿಮಾನ, ನೀರಲ್ಲಿ ಹೋಮ!

ರೈತನ ಸ್ವಾಭಿಮಾನ, ನೀರಲ್ಲಿ ಹೋಮ!

 

ರೈತನ ಶಕ್ತಿಯೇ ಸಮೃದ್ಧವಾದ ನೀರು. ಅದನ್ನು ಕೊರತೆಯಾಗುವಂತೆ ಮಾಡಿ ಬ್ರಿಟೀಷರು ಅವನ ಬೆನ್ನುಮೂಳೆ ಮುರಿದರು. ಆಳುವ ಅಧಿಕಾರ ಪಡೆದ ನಮ್ಮವರು ಬ್ರಿಟೀಷರಿಗಿಂತ ಕ್ರೂರಿಗಳಾಗಿ ಅವನ ಬಡಿದರು. ಕಳೆದ 70 ವರ್ಷಗಳಲ್ಲಿ ನಾವು ಬಾವಿಗಳನ್ನು ಬತ್ತಿಸಿದೆವು, ಕೆರೆಗಳನ್ನು ನುಂಗಿದೆವು, ನದಿಗಳ ಆವರಣದಲ್ಲಿ ಮಳೆ ಕಡಿಮೆಯಾಗುವಂತೆ ಅರಣ್ಯ ನಾಶ ಮಾಡಿದೆವು. ಪರಿಣಾಮ, ಒಂದು ಕಾಲದಲ್ಲಿ ಬ್ರಿಟೀಷರಿಂದಲೂ ಹೊಗಳಿಸಿಕೊಂಡಿದ್ದ ಭಾರತದ ರೈತ ಬರಿಯ ಭಿಕ್ಷಾಪಾತ್ರೆ ಹಿಡಿದು ಸಾಲಕ್ಕೆ, ಬೀಜಕ್ಕೆ, ಗೊಬ್ಬರಕ್ಕೆ, ಯಂತ್ರಗಳಿಗೆ ಕೊನೆಗೆ ನೀರು-ಕರೆಂಟುಗಳಿಗೂ ಕೈಚಾಚಿ ಕುಳಿತಿದ್ದಾನೆ.

1750 ರ ದಾಖಲೆಗಳ ಪ್ರಕಾರ ಚೀನಾ ಮತ್ತು ಭಾರತವೆರಡೇ ಜಗತ್ತಿನ ಒಟ್ಟೂ ಕೈಗಾರಿಕಾ ಉತ್ಪನ್ನದ ಶೇ 73 ರಷ್ಟು ಪಾಲು ಹೊಂದಿದ್ದವು. 1830 ರ ದಾಖಲೆಯೂ ಈ ಎರಡೂ ರಾಷ್ಟ್ರಗಳಿಗೆ ಶೇ 60 ರಷ್ಟು ಪಾಲು ಕೊಟ್ಟಿದ್ದವು. ಆಗೆಲ್ಲಾ ತಮಿಳುನಾಡಿನ ಚೆಂಗಲ್ಪಟ್ಟು ಭಾಗದಲ್ಲಿ ಹೆಕ್ಟೇರಿಗೆ 50 ರಿಂದ 60 ಟನ್ ಭತ್ತ ಬೆಳೆಯುತ್ತಿದ್ದರು. ಜಗತ್ತು ಆ ಗುರಿ ಮುಟ್ಟಲು ಅನೇಕ ವರ್ಷಗಳ ತಪಸ್ಸನ್ನೇ ಮಾಡಬೇಕಾಗಿ ಬಂದಿತ್ತು. 1820 ರಲ್ಲಿ ಮೇಜರ್ ಜನರಲ್ ಅಲೆಕ್ಸಾಂಡರ್ ವಾಕರ್ ದಾಖಲಿಸಿದ ಅಂಶಗಳು ಈ ನಿಟ್ಟಿನಲ್ಲಿ ಬಲು ರೋಚಕ. ಆತ ಭಾರತೀಯ ಕೃಷಿ ಪದ್ಧತಿಯನ್ನು ಹಿಂದೂ ಕೃಷಿ ಪದ್ಧತಿ ಎಂದೇ ಗೌರವಿಸುತ್ತಾನೆ. ಗಿಡ, ಮರ, ಹಣ್ಣು, ಕಾಳುಗಳನ್ನು ಬೆಳೆಸುವಲ್ಲಿ ಆಧುನಿಕ ಯಂತ್ರಗಳನ್ನು, ಪ್ರಾಣಿಗಳನ್ನು ಬಳಸುವಲ್ಲಿ ಇಲ್ಲಿನವರ ಕೌಶಲವನ್ನು ಆತ ಕೊಂಡಾಡುತ್ತಾನೆ. ಹೀಗೆ ಕೃಷಿಯನ್ನು ಅತ್ಯಂತ ಶ್ರೇಷ್ಠ ದಜರ್ೆಯಲ್ಲಿಟ್ಟು ಗೌರವಿಸಿದ್ದರಿಂದಲೇ ಅದಕ್ಕೆ ಬೇಕಾದ ಎತ್ತುಗಳನ್ನು ದೇವರೆಂದು ಪೂಜಿಸುವ ಪರಿಪಾಠ ಬೆಳೆದಿರಬಹುದೆಂದು ಆತ ಅಂದಾಜಿಸುತ್ತಾನೆ. ಭಾರತೀಯರ ಉಳುಮೆಯ ಕೌಶಲ ಅಚ್ಚರಿ ಎನಿಸುವಷ್ಟು ವಿಶೇಷವಾಗಿತ್ತು. ಅದಕ್ಕೆ ಬೇಕಾದ ಯಂತ್ರಗಳ ತಾಂತ್ರಿಕತೆಯನ್ನೂ ರೈತ ಜೋರಾಗಿಯೇ ಬೆಳೆಸಿಕೊಂಡಿದ್ದ. ಅದಕ್ಕೆ ಪಯರ್ಾಯವಾಗಿ ಇಂಗ್ಲೆಂಡಿನಿಂದ ಆಮದಾದ ಉಳುವ ನೇಗಿಲುಗಳನ್ನು ಬಳಸಲು ಆತ ನಿರಾಕರಿಸಿದ್ದ. ಹಾಗೆ ನಿರಾಕರಿಸಲು ಕಾರಣ ಅನ್ಯ ತಂತ್ರಜ್ಞಾನ ಆತ ಒಪ್ಪುತ್ತಿರಲಿಲ್ಲವೆಂದಲ್ಲ, ಬದಲಿಗೆ ಇಂಗ್ಲೆಂಡಿನ ಉಳುವ ಯಂತ್ರಗಳು ಇಲ್ಲಿನ ಮಣ್ಣಿಗೆ ಸೂಕ್ತವೆನಿಸುತ್ತಿರಲಿಲ್ಲ ಅಂತ. ಬ್ರಿಟೀಷರು ಇದನ್ನು ಪ್ರಮಾಣಿಸಿ ನೋಡಲೆಂದೇ ಒಂದಷ್ಟು ರೈತರನ್ನು ತಮ್ಮ ಯಂತ್ರ ಬಳಸುವಂತೆ ಕೇಳಿಕೊಂಡರು. ಅದನ್ನು ಬಳಸಿ ಅದರಿಂದ ಹೆಚ್ಚು ಲಾಭ ಪಡೆಯಲಾಗದೆಂದು ತೋರಿಸಿಕೊಟ್ಟ ನಮ್ಮ ರೈತರು ಅದಕ್ಕೆ ವೈಜ್ಞಾನಿಕ ಕಾರಣಗಳನ್ನು ಪಟ್ಟಿ ಮಾಡಿದರು. ನೇಗಿಲು ಭಾರವಾಗಿದ್ದರೆ ಅದನ್ನು ಎತ್ತು ಎಳೆಯಲು ಸೋಲುತ್ತದೆ ಮತ್ತು ರೈತನೂ ಬಲು ಬೇಗ ನಿತ್ರಾಣನಾಗುತ್ತಾನೆ. ಹೀಗಾಗಿ ಕೆಲಸ ಕಡಿಮೆಯಾಗುವುದಲ್ಲದೇ ಉಳುಮೆಯೂ ಸಮ ಪ್ರಮಾಣದಲ್ಲಿ ನಡೆಯುವುದಿಲ್ಲ ಎಂದು ಸ್ಥಳೀಯ ರೈತರು ಕೊಟ್ಟ ವರದಿ ನೋಡಿ ಬಿಳಿಯರು ದಂಗಾದರು. ಬದಲಾವಣೆಗೆ ಸಿದ್ಧರಾದರು. ಈ ಘಟನೆ ಉಲ್ಲೇಖಿಸಿ ವರದಿ ಬರೆದ ವಾಕರ್ ‘ಭಾರತೀಯ ರೈತರನ್ನು ಅಜ್ಞಾನಿಗಳೆನ್ನಬೇಡಿ. ಅವರು ಕೃಷಿ ಉತ್ಪನ್ನ ಹೆಚ್ಚಿಸುವ, ಕಾಮರ್ಿಕರ ಪ್ರಮಾಣ ತಗ್ಗಿಸುವ ಎಂತಹ ನವೀನ ಮಾರ್ಗಗಳಿಗೂ ತೆರೆದುಕೊಂಡಿದ್ದಾರೆ’ ಎಂದ.

ಇವಿಷ್ಟನ್ನೂ ಈಗ ನೆನಪಿಸಲು ಕಾರಣವಿದೆ. ಭಾರತೀಯ ಕೃಷಿ ಪರಂಪರೆ ಅತ್ಯಂತ ಸಿರಿವಂತ ಮತ್ತು ಹೊಸ ತಂತ್ರಜ್ಞಾನಗಳಿಗೆ ಮುಕ್ತವಾದ ಪದ್ಧತಿಯಾಗಿತ್ತು. ಇಲ್ಲಿ ಉಳುವ ಯಂತ್ರದಿಂದ ಹಿಡಿದು ಭೂಮಿಗೆರಚುವ ಗೊಬ್ಬರದವರೆಗೆ ಪ್ರತಿಯೊಂದೂ ವೈಜ್ಞಾನಿಕವಾಗಿಯೇ ರೂಪಿಸಲ್ಪಡುತ್ತಿತ್ತು. ಎಲ್ಲಕ್ಕೂ ಮಿಗಿಲಾಗಿ ಕೃಷಿಕ ಬುದ್ಧಿವಂತನಾಗಿರುತ್ತಿದ್ದ, ಶ್ರೀಮಂತನೂ ಕೂಡ. ಗಾಂಧಿವಾದಿ ಧರ್ಮಪಾಲರ ಮಾತನ್ನು ಒಪ್ಪುವುದಾದರೆ ಹಳ್ಳಿಗಳಲ್ಲಿ ಶಾನುಭೋಗರ ಮನೆಯ ಜಗಲಿಗಿಂತ ರೈತನ ಮನೆಯ ಜಗಲಿಯೇ ದೊಡ್ಡದಿರುತ್ತಿತ್ತು. ಭಾರತೀಯರ ಶೇಕಡಾ 70ರಷ್ಟು ಉದ್ಯೋಗವನ್ನು ನಿರ್ಣಯಿಸುತ್ತಿದ್ದ ಕೃಷಿ ಸಹಜವಾಗಿಯೇ ದೇಶದ ಬೆನ್ನೆಲುಬಾಗಿತ್ತು. ಇದನ್ನು ನಾಶಪಡಿಸಿದರೆ ಭಾರತದ ಅಂತಃಸತ್ವ ನಾಶವಾಗುವುದೆಂದು ಇಂಗ್ಲೀಷರು ಸಮರ್ಥವಾಗಿ ಅಥರ್ೈಸಿದ್ದರು. ಧರ್ಮಪಾಲರೇ ಹೇಳುವಂತೆ ಭಾರತದ ಹವಾಗುಣ, ಮಿತಿಮೀರಿದ ಜನಸಂಖ್ಯೆ, ತಾಪಮಾನ ವೈಪರಿತ್ಯಗಳ ಕಾರಣದಿಂದ ಬೇರೆಡೆ ಮಾಡಿದಂತೆ ತಮ್ಮ ಜನರನ್ನು ಇಲ್ಲಿ ನೆಲೆಸುವಂತೆ ಮಾಡುವುದು ಬ್ರಿಟೀಷರಿಗೆ ಸುಲಭವಿರಲಿಲ್ಲ. ಅದಕ್ಕೇ ಭಾರತದ ಕೈಗಾರಿಕೆಗಳ ಉತ್ಪನ್ನಗಳನ್ನು ಮತ್ತು ತೆರಿಗೆಯ ರೂಪದಲ್ಲಿ ಸಂಪತ್ತನ್ನು ಇಂಗ್ಲೆಂಡಿಗೆ ತರುವುದು ಅವರ ಉಪಾಯವಾಯಿತು. ಇಂತಹುದೊಂದು ಸಿದ್ಧಾಂತವನ್ನು ಬ್ರಿಟೀಷ್ ಸಾಮ್ರಾಜ್ಯದ ಅಡಿಪಾಯವಾಗಿ ಹಾಕಿಟ್ಟವನು ಬ್ರಿಟೀಷ್ ಸಮಾಜಶಾಸ್ತ್ರದ ಪಿತಾಮಹ ಆಡಂ ಫಗ್ಯರ್ುಸನ್! ಆತ ಭಾರತವನ್ನು ಬ್ರಿಟೀಷರು ಆಳುವ ಉದ್ದೇಶವೇ ಅತಿ ಹೆಚ್ಚು ಸಂಪತ್ತನ್ನು ಭಾರತದಿಂದ ಇಂಗ್ಲೆಂಡಿನತ್ತ ಸೆಳೆತರುವುದಕ್ಕಾಗಿ ಎಂದಿದ್ದ. ಅದಕ್ಕೆ ಸಮರ್ಥ ಕುಟಿಲೋಪಾಯವನ್ನೂ ರೂಪಿಸಿದ್ದ. ನೇರವಾಗಿ ಬ್ರಿಟೀಷ್ ಸಕರ್ಾರದ ಅಧಿಕಾರಿಗಳು ಆಳಿದರೆ ಲೂಟಿಕಾರ್ಯಕ್ಕೆ ತೊಂದರೆ. ಏಕೆಂದರೆ ಈ ಅಧಿಕಾರಿಗಳು ಸಕರ್ಾರದ ಕಾನೂನುಗಳಿಂದ ಬಂಧಿತರಾಗಿರುತ್ತಾರೆ. ಕಾನೂನು ಮೀರಿದರೆ ಬ್ರಿಟೀಷ್ ಸಕರ್ಾರವೇ ಹೊಣೆಯಾಗಬೇಕಾಗುತ್ತದೆ. ಅದಕ್ಕೆ ಪಯರ್ಾಯವಾಗಿ ಈಸ್ಟ್ ಇಂಡಿಯಾ ಕಂಪನಿ ಭಾರತವನ್ನು ಆಳಲಿ. ಅವರು ಕಾನೂನು ಮುರಿದು ಲೂಟಿ ಮಾಡಿದರೂ ಕೊನೆಗೊಮ್ಮೆ ನಿರ್ಣಯ ಕೈಗೊಳ್ಳಲು ಸಕರ್ಾರ ಇದ್ದೇ ಇದೆ ಎಂಬುದು ಅವನ ಯೋಜನೆ. ಈ ಕಂಪನಿಯ ಒಟ್ಟಾರೆ ಉಸ್ತುವಾರಿ ನೋಡಿಕೊಳ್ಳಲು ಸಕರ್ಾರದ್ದೇ ಆದ ಒಂದು ಸಮಿತಿಯೂ 1784 ರಲ್ಲಿ ನೇಮಕವಾಯ್ತು. ಈ ಹಿನ್ನೆಲೆಯಲ್ಲಿ ಶುರುವಾದ ತೆರಿಗೆ ಪರ್ವ ಭಾರತೀಯ ಕೃಷಿಯನ್ನು ಉಧ್ವಸ್ತಗೊಳಿಸಿಬಿಟ್ಟಿತು.

1

ಹಿಂದೂ ಕೃಷಿ ಪದ್ಧತಿಯ ವೈಶಿಷ್ಟ್ಯವಿರುವುದು ಎತ್ತುಗಳ ಬಳಕೆಯಲ್ಲಿ ಮತ್ತು ನೀರಿನ ಸೂಕ್ತ ಸದುಪಯೋಗದಲ್ಲಿ. ಇಲ್ಲಿ ನೀರಾವರಿ ಕೃಷಿಯ ಭಾಗವಷ್ಟೇ ಅಲ್ಲ. ಜನಜೀವನದ ಒಂದು ಅಂಗವಾಗಿದೆ ಎನ್ನುತ್ತಾನೆ ವಾಕರ್. ಅಸಂಖ್ಯ ಕೆರೆಗಳು, ಶೇಖರಣಾಗಾರಗಳು, ಕೃತಕ ಸರೋವರಗಳು, ಕಾಲುವೆಗಳು ಮತ್ತು ಅಣೆಕಟ್ಟುಗಳು ಕೃಷಿ ಭೂಮಿಯನ್ನು ತೋಯಿಸಲು ಸದಾ ಸಜ್ಜಾಗಿರುತ್ತಿದ್ದವು. ಅಚ್ಚರಿಯೇನು ಗೊತ್ತೇ? ಆತನೇ ಹೇಳುವಂತೆ ಈ ಯಾವ ನೀರಿನ ಸ್ರೋತಗಳನ್ನೂ ಸಕರ್ಾರಿ ಹಣದಲ್ಲಿ ಕಟ್ಟಿದ್ದಲ್ಲವಂತೆ. ಸಿರಿವಂತರು, ಕೆಲವೊಮ್ಮೆ ಸ್ತ್ರೀಯರೂ ಇವುಗಳನ್ನು ಕಟ್ಟುತ್ತಿದ್ದರಂತೆ. ಸ್ವಲ್ಪ ಗಮನವಿಟ್ಟು ನಮ್ಮೂರಿನ ಕೆರೆಗಳನ್ನು ನೋಡಿದರೆ ಈ ಮಾತು ನಮ್ಮ ಅರಿವಿಗೆ ಬರುತ್ತದೆ. ಅವುಗಳಲ್ಲಿ ಅನೇಕವುಗಳಿಗೆ ಹೊಂದಿಕೊಂಡ ದೇವಸ್ಥಾನದ ದೇವರ ಹೆಸರಿವೆ ಇಲ್ಲವೇ ಕಟ್ಟಿದ ಸಿರಿವಂತರ ಹೆಸರಿವೆ. ಕೆಲವಂತೂ ಸೂಳೆ ಕೆರೆ ಎಂದೇ ಕರೆಯಲ್ಪಡುತ್ತವೆ. ಬಹುಶಃ ಕರ್ಮ ಸವೆಸಲು ಕೆರೆಗಳನ್ನು ಕಟ್ಟಬೇಕೆಂಬ ಪ್ರತೀತಿ ಇದ್ದಿರಬೇಕು. ಊರಿಗೆ ಒಳಿತಾಗಲೆಂದು ಕೆರೆ ಕಟ್ಟಲು ಬಲಿಯಾಗುತ್ತಿದ್ದ ಅನೇಕ ತಾಯಂದಿರ ಕಥೆಗಳು ಜನಪದ ಲೋಕದಲ್ಲಿ ಹರಿದಾಡುತ್ತವೆ. ವಾಕರ್ ತನ್ನ ವರದಿಯಲ್ಲಿ ಹೇಳುತ್ತಾನೆ, ‘ಭಾರತದ ಅವನತಿಯನ್ನು ದಾಖಲಿಸಬೇಕೆಂದರೆ ಈ ಚಟುವಟಿಕೆಗಳು ನಿಂತು ಹೋದುದನ್ನು ಗುರುತಿಸಿದರೆ ಸಾಕು’.

ಇಡಿಯ ಲೇಖನದಲ್ಲಿ ವಿಸ್ತರಿಸಿ ಹೇಳಬೇಕಿರೋದು ಇದನ್ನೇ. ಹರಪ್ಪ ಮೆಹೆಂಜೊದಾರೋ ಕಾಲದಲ್ಲೂ ನೀರಾವರಿಯ ವಿಚಾರದಲ್ಲಿ ಅಪಾರ ಜ್ಞಾನ ಮೆರೆದಿದ್ದ ಭಾರತ ಬ್ರಿಟೀಷರ ಆಳ್ವಿಕೆಯ ಅವಧಿಯಲ್ಲಿ ಸ್ವಾಥರ್ಿಯಾಯ್ತು. ಆಳುವ ದೊರೆಗಳು ವಿಪರೀತ ತೆರಿಗೆ ಹೇರಿದರು. ಮದ್ರಾಸಿನಲ್ಲಿ ಅತ್ಯಂತ ಫಲವತ್ತು ಭೂಮಿಯ ಒಟ್ಟೂ ಉತ್ಪನ್ನಕ್ಕಿಂತ ತೆರಿಗೆಯೇ ಹೆಚ್ಚಿತ್ತು. 1800 ರಿಂದ 1850 ರ ಅವಧಿಯಲ್ಲಿ ನಡೆದ ಈ ತೆರಿಗೆ ಶೋಷಣೆ ಅದೆಷ್ಟು ಭಯಾನಕವಾಗಿತ್ತೆಂದರೆ ಆ ಭಾಗದ ಗವರ್ನರ್ ಲಂಡನ್ನಿನಲ್ಲಿದ್ದ ದೊರೆಗಳಿಗೆ ಬರೆದ ಪತ್ರದಲ್ಲಿ ‘ತೆರಿಗೆ ವ್ಯವಸ್ಥೆಯ ಮೂಲಕ ನಾವು ಈ ದೇಶವನ್ನು ಹೇಗೆ ಉಧ್ವಸ್ತಗೊಳಿಸಿದ್ದೇವೆಂದರೆ ಇದು ಇನ್ನೇನು ಬಡತನದ ಪ್ರಪಾತಕ್ಕೆ ಬೀಳುವುದರಲ್ಲಿದೆ’ ಎಂದಿದ್ದ. ಇದನ್ನೂ ಸಹಿಸಲಾಗದೇ ರೈತಾಪಿ ವರ್ಗ ವಾರಣಾಸಿಯಿಂದ ಹಿಡಿದು ಕನರ್ಾಟಕದ ಕೆನರಾ ಭಾಗಗಳವರೆಗೆ ಎಲ್ಲೆಡೆ ದಂಗೆಯೆದ್ದಿತ್ತು. ಸಾತ್ವಿಕ ಹೋರಾಟವೂ ಸುಲಭವಿರಲಿಲ್ಲ. ನ್ಯಾಯ ಕೇಳಲು ನ್ಯಾಯಾಲಯಕ್ಕೆ ಹೋಗಬೇಕೆಂದರೆ ಸ್ಟ್ಯಾಂಪ್ ಡ್ಯೂಟಿ, ಕೋಟರ್್ ಫೀಸು, ಓಡಾಟದ ಖಚರ್ು, ವಕೀಲರ ವೆಚ್ಚ ಎಲ್ಲವನ್ನೂ ಕಟ್ಟಬೇಕು. ಇವೆಲ್ಲ ತೆರಿಗೆಯನ್ನೂ ಮೀರಿಸುವಂಥದ್ದು. ಹೀಗಾಗಿ ಒಂದೋ ರೊಚ್ಚಿಗೇಳಬೇಕು ಇಲ್ಲವೇ ಸುತ್ತಲಿನವರ ಕಳಕಳಿ ಬಿಟ್ಟು ತಾನು ಬದುಕುವುದನ್ನಷ್ಟೇ ಯೋಚಿಸಬೇಕು. ಅನ್ನದಾತನಲ್ಲೂ ಸ್ವಾರ್ಥ ಇಣುಕಿದ್ದು ಹೀಗೆ.

ವಾಕರ್ ತನ್ನ ವರದಿಯಲ್ಲಿ ಒಂದೆಡೆ, ಬ್ರಿಟೀಷರ ಆಳ್ವಿಕೆಯ ವೇಳೆಗೇ ರೈತ ಕೆರೆಯ ಅತಿಕ್ರಮಣ ಮಾಡಿ ಅಲ್ಲಿ ಬೆಳೆ ತೆಗೆಯಲು ಯತ್ನಿಸುತ್ತಿದ್ದನ್ನು ದಾಖಲಿಸಿದ್ದಾರೆ. ತನ್ನದಲ್ಲದ ಭೂಮಿಯಲ್ಲಿ ಕೃಷಿ ಮಾಡಿ ತೆರಿಗೆ ಕಟ್ಟುವ ಭಾರದಿಂದ ತಪ್ಪಿಸಿಕೊಳ್ಳುವ ಪ್ರತೀತಿ ಶುರುವಾಗಿದ್ದು ಆಗಲೇ. ಕಂಪನಿ ಸಕರ್ಾರ ಕಾನೂನು ಮೀರಲು ಜನರನ್ನು ಪ್ರಚೋದಿಸಿ ಅದೇ ಕಾನೂನಿನ ಮೂಲಕ ಅವರನ್ನು ಹೆದರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿತ್ತು. ಅಧಿಕಾರದ ದುರುಪಯೋಗ ಮತ್ತು ಭ್ರಷ್ಟಾಚಾರದ ಮೊದಲ ಹೆಜ್ಜೆ ಇದು.

ಈಗ ವಾಸ್ತವಕ್ಕೆ ಬನ್ನಿ. ಅಂದಿನ ವರದಿಯನ್ನು ಓದುತ್ತ ಸಾಗಿದಂತೆ ಇದು ಇಂದಿನ ಕಥನವನ್ನೇ ಹೇಳುವಂತಿಲ್ಲವೇ? ಸುಮಾರು ಹತ್ತು ವರ್ಷಗಳ ಹಿಂದಿನ ವಿಸ್ತೃತ ಅಧ್ಯಯನ ವರದಿಯೊಂದನ್ನು ಹರವಿಕೊಂಡು ಕುಳಿತಿದ್ದೇನೆ. ಅದರ ಪ್ರಕಾರ ಕನರ್ಾಟಕದಲ್ಲಿ 36 ಸಾವಿರಕ್ಕೂ ಹೆಚ್ಚು ಕೆರೆಗಳಿದ್ದು 7 ಲಕ್ಷ ಹೆಕ್ಟೇರು ಭೂಮಿಗೆ ಹರಡಿತ್ತು. ಇದರಲ್ಲಿ ಸುಮಾರು 40 ಶೇಕಡದಷ್ಟು 4 ಹೆಕ್ಟೇರು ವಿಸ್ತಾರದ ಕೆರೆಯಾಗಿದ್ದರೆ, ಶೇಕಡಾ 50 ರಷ್ಟು ಕೆರೆಗಳು ಸುಮಾರು 40 ಹೆಕ್ಟೇರುಗಳವರೆಗೆ ಚಾಚಿಕೊಂಡಿವೆ. ಉಳಿದ ಶೇಕಡಾ 10 ರಷ್ಟು ಇದಕ್ಕಿಂತಲೂ ವಿಸ್ತಾರವಾದುದು!

dry-lake

ಆದರೆ ಜನಜೀವನಕ್ಕೆ ಆಧಾರವಾಗಿರಲೆಂದು ಕಟ್ಟಿದ ಈ ಕೆರೆಗಳು ಕೊಳವೆ ಬಾವಿಗಳ ಕಾಲಕ್ಕೆ ಮೌಲ್ಯ ಕಳೆದುಕೊಳ್ಳಲಾರಂಭಿಸಿದವು. ಅಷ್ಟೇ ಅಲ್ಲ. ಎಲ್ಲರ ಕಾಳಜಿ ವಹಿಸುತ್ತಿದ್ದ ರೈತ ಊರ ಉಸಾಬರಿ ತನಗೆ ಬೇಡವೆಂದು ನಿಶ್ಚಯಿಸಿ ಎಲ್ಲ ಜವಾಬ್ದಾರಿಯನ್ನೂ ಸಕರ್ಾರದ ಹೆಗಲಿಗೇರಿಸಿ ನಿರಾಳವಾಗಿಬಿಟ್ಟ. ಆಗಿನಿಂದ ಕೆರೆಗಳು ಹೂಳು ತುಂಬಿಕೊಂಡವು, ಕೆರೆಗಳಿಗೆ ಬರುತ್ತಿದ್ದ ನೀರಿನ ಹರಿವು ನಿಂತಿತು, ಕೊನೆಗೆ ಕೆರೆಗಳ ಅತಿಕ್ರಮಣವೂ ವ್ಯಾಪಕವಾಯ್ತು. ಅನೇಕ ಕಡೆಗಳಲ್ಲಿ ಕೆರೆಗಳು ಕಾಣೆಯಾಗಿ ಬಡಾವಣೆಗಳು ಮೇಲೆದ್ದವು. ಬೆಂಗಳೂರಿನಂತಹ ನಗರ ನಿಮರ್ಾಣಗೊಂಡಿದ್ದೇ ಕೆರೆಗಳ ಸಮಾಧಿಯ ಮೇಲೆ. ನಮ್ಮ ಪೂರ್ವಜರು ಮಣ್ಣನ್ನು ಅಗೆದು ತೆಗೆದು ಕೆರೆಗಳ ನಿಮರ್ಾಣ ಮಾಡಿದ್ದರೆ ಕೆಲವು ಸಿರಿವಂತರು ರಾಜಕಾರಣಿಗಳ ಸಹಕಾರದಿಂದ ಈ ಕೆರೆಗಳಿಗೆ ಮಣ್ಣು ತುಂಬಿ ರಿಯಲ್ ಎಸ್ಟೇಟ್ ಧಂಧೆಗೆ ನಿಂತುಬಿಟ್ಟಿದ್ದಾರೆ. ನೀರಿನ ಸಮತೋಲನ ಕಾಪಾಡುವ ಈ ಸಂಗ್ರಹಾಗಾರಗಳನ್ನು ನಾಶಮಾಡುವುದರ ಭವಿಷ್ಯವೇನೆಂದು ಇವರಿಗೆ ಗೊತ್ತಿದೆಯೇ?
ಮಳೆಯ ನೀರನ್ನು ಹಿಡಿದಿಡುವ ವ್ಯವಸ್ಥೆ ಮಾಡಿಕೊಳ್ಳದೇ ಅಡ್ಡಾದಿಡ್ಡಿಯಾಗಿ ಚೆನ್ನೈಯನ್ನು ಬೆಳೆಸಿದ ಪ್ರಮಾದದಿಂದಾಗಿಯೇ ಪ್ರವಾಹ ಆವರಿಸಿಕೊಂಡಿದ್ದು ಎಂಬುದನ್ನು ನಾವು ಮರೆತಿದ್ದೇವೆ. ಈಗಲೂ ಜೋರು ಮಳೆಯಾದರೆ ಬೆಂಗಳೂರಿನ ಅನೇಕ ಪ್ರದೇಶಗಳ ಮನೆಗಳಿಗೆ ನೀರು ನುಗ್ಗುವುದನ್ನೂ ನಾವು ಕಂಡಿದ್ದೇವೆ. ಒಂದೆಡೆ ತೀವ್ರ ಮಳೆ ತಾಳಲಾಗದ ಸ್ಥಿತಿಯಾದರೆ ಮತ್ತೊಂದೆಡೆ ಬೇಸಿಗೆಗೆ ಕುಡಿಯುವ ನೀರಿಗೂ ತತ್ವಾರವಾಗುವಂತಹ ಸ್ಥಿತಿ. ಏಕೆಂದರೆ ನೀರು ಹಿಡಿದಿಡಬೇಕಾದ ಕೆರೆಗಳೇ ಇಲ್ಲವಾಗಿವೆ ಮತ್ತು ನಿರಂತರವಾಗಿ ಕಾವೇರಿ ಬತ್ತುತ್ತಿದೆ. ಹೇಳಿ, ಮುಂದೇನು ಮಾಡೋಣ? ರಾಜಕಾಲುವೆಯನ್ನು ಒತ್ತಿಕೊಂಡವರು ಎನ್ನುತ್ತ ಜನಸಾಮಾನ್ಯರ ಮನೆಗಳನ್ನೇನೋ ಒಡೆದರು, ಪ್ರಭಾವಿಗಳ ಮನೆ ಅಡ್ಡ ಬಂದೊಡನೆ ಕೆಲಸವೇ ನಿಂತು ಹೋಯಿತು. ಬ್ರಿಟೀಷ್ ಅಧಿಕಾರಿಗಳು ಕಾನೂನು ಮೀರುವ ಆನಂತರ ಅದರ ಆಧಾರದ ಮೇಲೆ ಬೆದರಿಸಿ ಅಧಿಕಾರ ಸ್ಥಾಪಿಸುವ ಯೋಜನೆ ತಂದಿದ್ದರಲ್ಲ; ಇಂದಿಗೂ ಅದೇ ಮುಂದುವರೆದಿದೆ ಎಂದರೆ ತಪ್ಪೆನಿಸುವುದೇನು?

6

ಇದನ್ನು ತಡೆಯುವ ಮಾರ್ಗವಿಲ್ಲವೇ? ಖಂಡಿತ ಇದೆ. ನಮ್ಮ ನೀರು ನಮ್ಮ ಹಕ್ಕು ಜೊತೆಗೆ ನಮ್ಮ ನೀರು ನಮ್ಮ ಕರ್ತವ್ಯವೂ ಕೂಡ. ಒಂದೊಂದು ಹನಿ ನೀರನ್ನೂ ಉಳಿಸುವ, ಕಾಪಾಡುವ ಹೊಣೆಗಾರಿಕೆ ನಮ್ಮದೇ. ಮನೆಯ ತಾರಸಿಯ ಮೇಲಿನ ಅಷ್ಟೂ ನೀರನ್ನು ಉಳಿಸಿಕೊಂಡರೆ, ಇಂಗಿಸಿದರೆ ವೈಯಕ್ತಿಕ ಜವಾಬ್ದಾರಿ ಮೆರೆದಂತೆಯೇ. ಜೊತೆಗೆ ನೀರಿಂಗಿಸುವ ಸಾರ್ವಜನಿಕ ತಾಣಗಳನ್ನು ರಕ್ಷಿಸಬೇಕಾದ್ದು ನಮ್ಮದೇ ಕರ್ತವ್ಯ. ನಮ್ಮ ಪೂರ್ವಜರು ಕಟ್ಟಿದ ಕಲ್ಯಾಣಿ-ಪುಷ್ಕರಣಿ-ಸರೋವರಗಳನ್ನು ಸ್ವಚ್ಛವಾಗಿಡಲು ಯಾವುದೇ ಸಕರ್ಾರದ ಯೋಜನೆಗಳು ಬೇಕಿಲ್ಲ. ಊರಿನವರೆಲ್ಲ ಸೇರಿಕೊಂಡರೆ ಕೆರೆಗಳ ಪುನರುಜ್ಜೀವನಕ್ಕೂ ಮಂತ್ರಿ ಮಾಗಧರು ಖಂಡಿತ ಅವಶ್ಯಕತೆ ಇಲ್ಲ. ಅನೇಕ ಸಂಘ ಸಂಸ್ಥೆಗಳು, ಸಿನಿಮಾ ನಟರು ಈ ಚಟುವಟಿಕೆಯಲ್ಲಿ ತೀವ್ರವಾಗಿ ತೊಡಗಿಕೊಂಡು ಪಯರ್ಾಯ ಸಕರ್ಾರದಂತೆ ಕಾರ್ಯನಿರ್ವಹಿಸುತ್ತಿದ್ದಾರೆ.
ರೈತನ ಶಕ್ತಿಯೇ ಸಮೃದ್ಧವಾದ ನೀರು. ಅದನ್ನು ಕೊರತೆಯಾಗುವಂತೆ ಮಾಡಿ ಬ್ರಿಟೀಷರು ಅವನ ಬೆನ್ನುಮೂಳೆ ಮುರಿದರು. ಆಳುವ ಅಧಿಕಾರ ಪಡೆದ ನಮ್ಮವರು ಬ್ರಿಟೀಷರಿಗಿಂತ ಕ್ರೂರಿಗಳಾಗಿ ಅವನ ಬಡಿದರು. ಕಳೆದ 70 ವರ್ಷಗಳಲ್ಲಿ ನಾವು ಬಾವಿಗಳನ್ನು ಬತ್ತಿಸಿದೆವು, ಕೆರೆಗಳನ್ನು ನುಂಗಿದೆವು, ನದಿಗಳ ಆವರಣದಲ್ಲಿ ಮಳೆ ಕಡಿಮೆಯಾಗುವಂತೆ ಅರಣ್ಯ ನಾಶ ಮಾಡಿದೆವು. ಪರಿಣಾಮ, ಒಂದು ಕಾಲದಲ್ಲಿ ಬ್ರಿಟೀಷರಿಂದಲೂ ಹೊಗಳಿಸಿಕೊಂಡಿದ್ದ ಭಾರತದ ರೈತ ಬರಿಯ ಭಿಕ್ಷಾಪಾತ್ರೆ ಹಿಡಿದು ಸಾಲಕ್ಕೆ, ಬೀಜಕ್ಕೆ, ಗೊಬ್ಬರಕ್ಕೆ, ಯಂತ್ರಗಳಿಗೆ ಕೊನೆಗೆ ನೀರು-ಕರೆಂಟುಗಳಿಗೂ ಕೈಚಾಚಿ ಕುಳಿತಿದ್ದಾನೆ. ನಿಜವಾಗಿ ಹೇಳಬೇಕೆಂದರೆ ಭೂಮಿಯ ಸೇವೆಯಿಂದ ಎದೆಯೆತ್ತಿ ಬೀಗಬೇಕಿದ್ದ ರೈತನ ಸ್ವಾಭಿಮಾನ ನೀರಲ್ಲಿಯೇ ಹೋಮವಾಗಿಬಿಟ್ಟಿದೆ!!

One thought on “ರೈತನ ಸ್ವಾಭಿಮಾನ, ನೀರಲ್ಲಿ ಹೋಮ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s