ಮೋದಿಯವರದ್ದು ಆರ್ಥಿಕ  ಪೋಖ್ರಾನ್!!

ಮೋದಿಯವರದ್ದು ಆರ್ಥಿಕ ಪೋಖ್ರಾನ್!!

ಎರಡೂವರೆ ವರ್ಷಗಳ ಹಿಂದೆ ಬಡ, ಹಳ್ಳಿಗರ ಅಕೌಂಟು ಮಾಡಿಸುವ ಈ ಯೋಜನೆ ಅವರು ರೂಪಿಸಿರದಿದ್ದರೆ ಈ ಇಪ್ಪತ್ತೈದು ಕೋಟಿ ಅಕೌಂಟು ಹೊಂದಿರುವವರು ನೋಟು ಅಮಾನ್ಯೀಕರಣದ ನಂತರ ತಮ್ಮ ದುಡ್ಡನ್ನು ಎಲ್ಲಿಗೊಯ್ಯಬೇಕಿತ್ತು? ಅವರು ಮೊದಲು ಅಕೌಂಟು ತೆಗೆಯಲು ಸಾಲು ನಿಲ್ಲಬೇಕಿತ್ತು, ಆಮೇಲೆ ಅದಕ್ಕೆ ದುಡ್ಡು ಹಾಕಲು ಮತ್ತೊಂದು ಸಾಲು. ಇನ್ನು ಖಾತೆ ತೆರೆವಾಗ ಆಧಾರ್ ಕಾಡರ್್ ಬೇಕೆಂದು ಕೇಳಿದರಂತೂ ಅತ್ತ ಧಾವಿಸಿ ಅಲ್ಲೊಂದು ಸಾಲು ನಿಂತು ಕಾಡರ್ು ಬರುವವರೆಗೆ ಕಾಯಬೇಕಿತ್ತು. ಒಟ್ಟಾರೆ ಎಲ್ಲವೂ ಅಯೋಮಯ. ವೆನಿಜುವೆಲಾದಲ್ಲಾದ ಗತಿಯೇ ಭಾರತದಲ್ಲೂ ಆಗಿಬಿಡುತ್ತಿತ್ತು. ಮೋದಿ ಜನರನ್ನು ಡಿಮಾನಿಟೈಸೇಶನ್ಗೆ ಹಂತ ಹಂತವಾಗಿ ತಯಾರು ಮಾಡಿಕೊಂಡೇ ಬಂದಿದ್ದರು.

7

‘ವೆನಿಜುವೆಲಾ’ ದಕ್ಷಿಣ ಅಮೇರಿಕಾದ ಒಂದು ರಾಷ್ಟ್ರ. ಅಲ್ಲಿನ ಅಧ್ಯಕ್ಷ ನಿಕೋಲಾಸ್ ಮಾದುರೋ ಭಾರತವನ್ನು ಅನುಸರಿಸಿ ಅಲ್ಲಿನ ಎಪ್ಪತ್ತೇಳು ಪ್ರತಿಶತ ಬಳಕೆಯಲ್ಲಿದ್ದ ನೂರು ಬೋಲಿವರ್ ನೋಟುಗಳನ್ನು ಅಮಾನ್ಯ ಮಾಡಿ ಅದರ 200 ಪಟ್ಟು ಅಧಿಕವಾದ 20 ಸಾವಿರ ಬೋಲಿವರ್ ನೋಟುಗಳನ್ನು ಬದಲಿಸಿ ಕೊಡುವ ಯೋಜನೆ ತಂದರು. 72 ಗಂಟೆಗಳ ಗಡುವು ಕೊಡಲಾಗಿತ್ತು. ಜನ ಏಕಾಕಿ ಗಾಬರಿಗೊಳಗಾದರು, ದೊಡ್ಡ ದೊಡ್ಡ ಡಬ್ಬಿಗಳಲ್ಲಿ ಹಳೆಯ ನೋಟುಗಳನ್ನು ಹೊತ್ತು ತಂದರು. ಬ್ಯಾಂಕಿನ ಹೊರಗೆ ಉದ್ದುದ್ದ ಸರತಿ ಸಾಲು. ಅಲ್ಲಿಯೇ ಕಳ್ಳತನಗಳಾದವು. ಅಂಗಡಿಗಳು ಲೂಟಿಯಾದವು. ವೆನಿಜುವೆಲಾವನ್ನು ಹೈರಾಣುಗೊಳಿಸಿರುವ ಮಾಫಿಯಾಗಳು ಈ ಅವಕಾಶವನ್ನು ಬಳಸಿಕೊಂಡು ಧಾಂಧಲೆ ನಡೆಸಿಬಿಟ್ಟವು. ಯೋಜನೆ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಅಲ್ಲೋಲ ಕಲ್ಲೋಲವೆದ್ದು ಅಧ್ಯಕ್ಷರು ನಿಧರ್ಾರವನ್ನು ಮರಳಿ ಪಡೆಯಬೇಕಾಯ್ತು.
ಕಳೆದ ಕೆಲವು ದಶಕಗಳಿಂದ ಅಂತರರಾಷ್ಟ್ರೀಯ ಮಾಫಿಯಾ ಡಾನುಗಳ ಅಡ್ಡಾ ಆಗಿ, ಇಟಲಿಯ ಸಂಘಟಿತ ಲೂಟಿಕೋರರ ಹಿಡಿತಕ್ಕೆ ಸಿಲುಕಿ, ಕಳ್ಳ ನೋಟುಗಳ ಹಾವಳಿಯಿಂದ ಬಳಲುತ್ತಿದ್ದ ವೆನಿಜುವೆಲಾಕ್ಕೆ ತುತರ್ು ನೆಮ್ಮದಿ ಬೇಕೇ ಬೇಕಿತ್ತು. ದಿನ ನಿತ್ಯದ ಶೂಟೌಟುಗಳು, ಏರುತ್ತಿರುವ ಹಣದುಬ್ಬರ, ಹಿಡಿತಕ್ಕೆ ಸಿಗದ ಆಡಳಿತ, ಮಿತಿಮೀರಿದ ಭ್ರಷ್ಟಾಚಾರ ಇವೆಲ್ಲವುಗಳಿಂದ ದೇಶವನ್ನು ಹೊರತರುವ ತಕ್ಷಣದ ಉಪಾಯ ಅಗತ್ಯವಿತ್ತು. ಆಗಲೇ ನರೇಂದ್ರ ಮೋದಿಯವರ ನೋಟು ಅಮಾನ್ಯೀಕರಣದಿಂದ ಪ್ರೇರಣೆ ಪಡೆದಿದ್ದು ಮಾದುರೋ. ಅವರು ಮುಂಚೆಯೂ ಇದನ್ನು ಯೋಚಿಸಿದ್ದಿರಬಹುದು. ಆದರೆ ಯೋಜನೆ ಜಾರಿಗೆ ತರುವ ಧೈರ್ಯ ಬಂದಿದ್ದು ಮಾತ್ರ ನರೇಂದ್ರಮೋದಿಯವರು ದಿಟ್ಟ ಹೆಜ್ಜೆ ಇಟ್ಟ ನಂತರವೇ. ಆದರೆ ಮಾದುರೋ ಭಾರತ ಮಾಡಿದಂತೆ ಪೂರ್ವ ತಯಾರಿ ಮಾಡಿಕೊಳ್ಳುವಲ್ಲಿ ಸೋತುಹೋಗಿದ್ದರು ಅಷ್ಟೇ.

wpid-pm-jdylogo-jpg
ನರೇಂದ್ರ ಮೋದಿ ನೋಟು ಅಮಾನ್ಯೀಕರಣದ ಈ ಕನಸು ಕಟ್ಟಿದ್ದು ಒಂದೆರಡು ತಿಂಗಳ ಹಿಂದೆಯಲ್ಲ. ಎಲ್ಲರೂ ಹೇಳುವಂತೆ ಇದು ಆತುರದ ನಿರ್ಣಯವಂತೂ ಅಲ್ಲವೇ ಅಲ್ಲ. ಬರೋಬ್ಬರಿ ಎರಡೂವರೆ ವರ್ಷಗಳ ಹಿಂದೆ ಕಟ್ಟಿಕೊಂಡ ಕಲ್ಪನೆ ಇದು. ಅಧಿಕಾರಕ್ಕೆ ಬಂದ ಮೊದಲ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿಯೇ ಪ್ರಧಾನ ಮಂತ್ರಿಗಳು ದೇಶದ ಎಲ್ಲಾ ಜನರನ್ನು ಆಥರ್ಿಕ ಅಪ್ಪುಗೆಗೆ ಅಳವಡಿಸಿಕೊಳ್ಳುವ ಮಾತುಗಳನ್ನು ಕೆಂಪುಕೋಟೆಯ ಮೇಲೆ ನಿಂತು ಆಡಿದ್ದರು. ಅಲ್ಲಿಯವರೆಗೂ ಈ ದೇಶದ ಬಹುತೇಕರಿಗೆ ಫೈನಾನ್ಶಿಯಲ್ ಇನ್ಕ್ಲುಶನ್ ಎಂಬ ಪದದ ಅರ್ಥವೇ ಗೊತ್ತಿರಲಿಲ್ಲ. 60 ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ಸು ಬಡತನದ ಕುರಿತಂತೆ ಭಾಷಣ ಮಾಡಿತ್ತೇ ಹೊರತು ಬ್ಯಾಂಕಿಂಗ್ ವ್ಯವಹಾರದೊಳಕ್ಕೆ ಬಡವರನ್ನೂ ಕರೆತಂದು ಸ್ಥಳೀಯ ಬಡ್ಡಿ ವ್ಯವಹಾರದಿಂದ ಅವರನ್ನು ಬಚಾವು ಮಾಡುವ ಪ್ರಯತ್ನ ಮಾಡಿರಲಿಲ್ಲ. ಭಾರತದಲ್ಲಿ ಹಳ್ಳಿಗಳೇ ಹೆಚ್ಚು ಮತ್ತು ಅವರಲ್ಲಿ ಬಹುತೇಕರು ಅನಕ್ಷರಸ್ಥರು ಎನ್ನುವುದನ್ನೇ ಮುಂದಿಟ್ಟುಕೊಂಡ ಈ ಪುಢಾರಿಗಳು ಆಥರ್ಿಕ ಪ್ರಗತಿಯನ್ನು ಸಾರ್ವತ್ರಿಕವಾಗದಂತೆ ಕಾಪಾಡಿಕೊಂಡರು. ನರೇಂದ್ರಮೋದಿ ಈ ಕೋಟೆಯನ್ನು ಭೇದಿಸಿ 2014 ರ ಆಗಸ್ಟ್ 28ಕ್ಕೆ ಜನಧನ್ ಯೋಜನೆ ಘೋಷಿಸಿದರು. ಬ್ಯಾಂಕಿಗೆ ಬರುವ ಗೋಜಿಗೇ ಹೋಗಿರದ ಬಡತನ ರೇಖೆಗಿಂತ ಕೆಳಗಿದ್ದವರನ್ನು ಬ್ಯಾಂಕಿಗೆ ಸೆಳೆಯಲೆಂದೇ ಮೋದಿ ಶೂನ್ಯ ಬ್ಯಾಲೆನ್ಸಿನ ಅಕೌಂಟು ತೆರೆಯಲು ಪ್ರೇರೇಪಣೆ ನೀಡಿದರು. ಅಲ್ಲಿಯವರೆಗೂ ಭಾರತದಲ್ಲಿ ಸುಮಾರು ನಲವತ್ತು ಕೋಟಿಗಿಂತಲೂ ಕಡಿಮೆ ಜನರ ಬಳಿ ಅಕೌಂಟುಗಳಿದ್ದವು. ಅದರಲ್ಲೂ ಅರ್ಧದಷ್ಟು ಒಮ್ಮೆ ತೆರೆದು ವಹಿವಾಟು ಮಾಡದೇ ಹಾಗೇ ಬಿಟ್ಟವು, ಅಂದರೆ ನೂರಕ್ಕೆ ಇಪ್ಪತ್ತು ಜನ ಮಾತ್ರ ಬ್ಯಾಂಕಿಂಗ್ ವ್ಯವಹಾರ ಬಲ್ಲವರೆಂದಾಯ್ತು. ತಮಿಳುನಾಡು, ಬಿಹಾರ್ ರಾಜ್ಯಗಳಲ್ಲಿ ಈ ಪ್ರಮಾಣ ಇಪ್ಪತ್ತು ಪ್ರತಿಶತದ ಆಸುಪಾಸಿದ್ದರೆ, ಗುಜರಾತ್, ಕನರ್ಾಟಕ, ಮಹಾರಾಷ್ಟ್ರಗಳು ಐವತ್ತು ಪ್ರತಿಶತ ದಾಟಿರಲಿಲ್ಲ. ಅತಿ ಹೆಚ್ಚು ಜನ ಅಂದರೆ ಸುಮಾರು ನೂರಕ್ಕೆ ಅರವತ್ತು ಜನ ಬ್ಯಾಂಕ್ ಅಕೌಂಟು ಹೊಂದಿರುವ ರಾಜ್ಯಗಳಲ್ಲಿ ಪಂಜಾಬು, ಹರಿಯಾಣಾ, ಹಿಮಾಚಲ್ ಪ್ರದೇಶ, ಉತ್ತರಾಂಚಲಗಳು ಸೇರಿದ್ದವು. ಅಂದರೆ ವ್ಯಾಪಾರಿಗಳೇ ಹೆಚ್ಚಿರುವ ಗುಜರಾತಿಗಿಂತಲೂ ರೈತರೇ ತುಂಬಿರುವ ಪಂಜಾಬು ಬ್ಯಾಂಕಿನೊಂದಿಗೆ ಘನಿಷ್ಠ ಸಂಬಂಧ ಹೊಂದಿತ್ತು. ಎಲ್ಲೋ ಒಂದೆಡೆ ಎಲ್ಲರನ್ನೂ ಆಥರ್ಿಕತೆಯ ಸೆರಗಿನೊಳಗೆ ಸೆಳೆದುಕೊಳ್ಳುವ ಪ್ರಯತ್ನ ಮಾಡಲೇ ಬೇಕಿತ್ತಲ್ಲ, ಜನಧನ್ ಅತ್ತ ಹೆಜ್ಜೆ ಇಟ್ಟಿತು. ನೋಡನೋಡುತ್ತಲೇ ಎರಡೂವರೆ ವರ್ಷದಲ್ಲಿ ಸುಮಾರು 25 ಕೋಟಿ 78 ಲಕ್ಷ ಜನಧನ್ ಅಕೌಂಟುಗಳಾದವು. ಅವುಗಳಲ್ಲಿ ಸುಮಾರು 48 ಸಾವಿರ ಕೋಟಿ ರೂಪಾಯಿ ಹಣ ಜಮೆಯಾಯಿತು. ಭಾರತದಲ್ಲಷ್ಟೇ ಅಲ್ಲ ಜಗತ್ತಿನಲ್ಲಿಯೇ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರನ್ನು ಆಥರ್ಿಕ ಅಪ್ಪುಗೆಗೆ ಒಳಪಡಿಸಿದ್ದು ದಾಖಲೆಯಾಗಿತ್ತು. ಅನೇಕ ಬ್ಯಾಂಕ್ ಉದ್ಯೋಗಿಗಳು ಒಲ್ಲದ ಮನಸ್ಸಿನಿಂದಲೇ ಕೆಲಸ ಮಾಡಿ ಗುರಿ ಮೀರಿದ್ದರು. ಇಷ್ಟಕ್ಕೇ ತೃಪ್ತರಾಗದ ಪ್ರಧಾನಮಂತ್ರಿಗಳು ಭ್ರಷ್ಟಾಚಾರ ತಡೆಯ ಉದ್ದೇಶದಿಂದ ನರೇಗಾ ಯೋಜನೆಯ ಹಣವನ್ನು ನೇರವಾಗಿಯೇ ಫಲಾನುಭವಿಗಳಿಗೆ ತಲುಪಿಸುವ ಉಪಾಯ ರೂಪಿಸಿದರು. ಕಳೆದ ಏಪ್ರಿಲ್ 1 ರಿಂದ ಎಲೆಕ್ಟ್ರಾನಿಕ್ ಫಂಡ್ ಮ್ಯಾನೇಜ್ಮೆಂಟ್ ಸಿಸ್ಟಮ್ನ್ನು ಕಡ್ಡಾಯಗೊಳಿಸಿದರು. ಆಧಾರ್ ಹೊಂದಿಸಿದ ಅಕೌಂಟುಗಳಿಗೆ ನೇರ ಹಣ ವಗರ್ಾವಣೆಯಾಗುವಂತೆ ನೋಡಿಕೊಂಡರು. ಈ ಫಲಾನುಭವಿಗಳಿಗೆ ಹಣ ತಲುಪಿಸುವಲ್ಲಿ ಕೈಚಳಕ ತೋರುತ್ತಿದ್ದ ಗುತ್ತಿಗೆದಾರರು, ಪಂಚಾಯತ್ ಅಧಿಕಾರಿಗಳಿಗೆ ಇದು ನೇರ ಹೊಡೆತವಾಗಿತ್ತು. ಜನಧನ್ ನಂತರದ, ಈ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಯೋಜನೆ ಜಾಗತಿಕ ದಾಖಲೆಗೆ ಮುನ್ನುಡಿ ಬರೆದಿತ್ತು. ಆ ನಂತರ ಗ್ಯಾಸ್ ಸಬ್ಸಿಡಿಯೂ ನೇರ ಅಕೌಂಟಿಗೇ ಬರಲಾರಂಭಿಸಿತು. ಹಳ್ಳಿಗಳ ಜನ ಈಗ ಸಹಜವಾಗಿ ಬ್ಯಾಂಕಿಗೆ ಬಂದು ಹಣಕಟ್ಟುವ, ತೆಗೆಯುವ ಕ್ರಿಯೆಗೆ ಒಗ್ಗಿಕೊಂಡರು.
ಹಾಗೆ ಎರಡೂವರೆ ವರ್ಷಗಳ ಹಿಂದೆ ಬಡ, ಹಳ್ಳಿಗರ ಅಕೌಂಟು ಮಾಡಿಸುವ ಈ ಯೋಜನೆ ಅವರು ರೂಪಿಸಿರದಿದ್ದರೆ ಈ ಇಪ್ಪತ್ತೈದು ಕೋಟಿ ಅಕೌಂಟು ಹೊಂದಿರುವವರು ನೋಟು ಅಮಾನ್ಯೀಕರಣದ ನಂತರ ತಮ್ಮ ದುಡ್ಡನ್ನು ಎಲ್ಲಿಗೊಯ್ಯಬೇಕಿತ್ತು? ಅವರು ಮೊದಲು ಅಕೌಂಟು ತೆಗೆಯಲು ಸಾಲು ನಿಲ್ಲಬೇಕಿತ್ತು, ಆಮೇಲೆ ಅದಕ್ಕೆ ದುಡ್ಡು ಹಾಕಲು ಮತ್ತೊಂದು ಸಾಲು. ಇನ್ನು ಖಾತೆ ತೆರೆವಾಗ ಆಧಾರ್ ಕಾಡರ್್ ಬೇಕೆಂದು ಕೇಳಿದರಂತೂ ಅತ್ತ ಧಾವಿಸಿ ಅಲ್ಲೊಂದು ಸಾಲು ನಿಂತು ಕಾಡರ್ು ಬರುವವರೆಗೆ ಕಾಯಬೇಕಿತ್ತು. ಒಟ್ಟಾರೆ ಎಲ್ಲವೂ ಅಯೋಮಯ. ವೆನಿಜುವೆಲಾದಲ್ಲಾದ ಗತಿಯೇ ಭಾರತದಲ್ಲೂ ಆಗಿಬಿಡುತ್ತಿತ್ತು. ಮೋದಿ ಜನರನ್ನು ಡಿಮಾನಿಟೈಸೇಶನ್ಗೆ ಹಂತ ಹಂತವಾಗಿ ತಯಾರು ಮಾಡಿಕೊಂಡೇ ಬಂದಿದ್ದರು.

maxresdefault
ಹಾಗಂತ ಅವರ ಉದ್ದೇಶ ಬರಿ ನೋಟಿನ ಅಮಾನ್ಯೀಕರಣವಷ್ಟೇ ಅಲ್ಲ. ಬದಲಿಗೆ ಜನರನ್ನು ಅತಿ ಕಡಿಮೆ ನಗದು ವ್ಯವಹಾರದತ್ತ ಒಯ್ದು ಲೆಸ್ ಕ್ಯಾಶ್ ಆಗಿಸುವ ಪ್ರಯತ್ನವಿತ್ತು. ನ್ಯಾಶನಲ್ ಪೇಮೆಂಟ್ ಕಾಪರ್ೋರೇಶನ್ ಆಫ್ ಇಂಡಿಯಾದ ಮೂಲಕ ಕಳೆದ ಆಗಸ್ಟ್ನಲ್ಲಿ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ ಯೋಜನೆ ಘೋಷಿಸಿದರು ಮೋದಿ. 19 ಬ್ಯಾಂಕುಗಳು ಮೊಬೈಲ್ ಅಪ್ಲಿಕೇಶನ್ಗಳನ್ನು ರೂಪಿಸಿಕೊಂಡವು. ಬ್ಯಾಂಕಿನಿಂದ ಬ್ಯಾಂಕಿಗೆ ನಡೆಯುವ ವ್ಯವಹಾರಗಳೆಲ್ಲ ಬೆರಳ ತುದಿಯಲ್ಲಿ ನಡೆಯುವಂತೆ ಬ್ಯಾಂಕುಗಳನ್ನು ತಾಂತ್ರಿಕವಾಗಿ ತಯಾರು ಮಾಡಿದರು. ಈ ಅಪ್ಲಿಕೇಶನ್ಗಳ ಮೂಲಕ ಸಕರ್ಾರಕ್ಕೆ ಪಾವತಿಸಬೇಕಾದ ನೀರಿನ, ಕರೆಂಟಿನ, ಫೋನಿನ ಬಿಲ್ಲುಗಳನ್ನು ಮನೆಯಲ್ಲಿ ಕುಳಿತೇ ಪಾವತಿಸಬಹುದಾದಂತಹ ವ್ಯವಸ್ಥೆ ಜಾರಿಗೆ ತರಲಾಯ್ತು. ರೂಪೇ ಕಾಡರ್ುಗಳು ಜನರ ಕೈಗೆ ಸಿಗಲಾರಂಭಿಸಿದ್ದೂ ಆಗಲೇ. ಈ ರೀತಿಯ ಆನ್ಲೈನ್ ವ್ಯವಹಾರಗಳ ಸುರಕ್ಷತೆಯ ಬಗ್ಗೆಯೂ ಎಚ್ಚರಿಕೆ ವಹಿಸಬೇಕಿತ್ತಲ್ಲ; ನರೇಂದ್ರಮೋದಿ ಅದಕ್ಕೆ ಬೇಕಾದ ವ್ಯವಸ್ಥೆಯನ್ನೂ ರೂಪಿಸಿಕೊಂಡರು. ನೂರು ಕೋಟಿ ಜನ ಡಿಜಿಟಲ್ ಬ್ಯಾಂಕಿಂಗ್ಗೆ ಲಗ್ಗೆ ಇಟ್ಟರೆ ಡಿಜಿಟಲ್ ಕಳ್ಳರ ಸಂಖ್ಯೆಯೂ ಅಷ್ಟೇ ವೃದ್ಧಿಸುವುದು ಖಾತ್ರಿ. ಸದ್ಯ ಭಾರತದಲ್ಲಿರುವುದು ಸುಮಾರು 150 ಸೈಬರ್ ಸೆಕ್ಯುರಿಟಿ ಕಂಪನಿಗಳು ಮಾತ್ರ. ಇದನ್ನು ಆಲೋಚಿಸಿಯೇ ಮೋದಿ ಕಳೆದ ಆಗಸ್ಟ್ನಲ್ಲೇ ಸೈಬರ್ ಸೆಕ್ಯುರಿಟಿಯಲ್ಲಿ ಅಗ್ರಣಿಯಾಗಿರುವ ಇಸ್ರೇಲ್ನೊಂದಿಗೆ ಒಪ್ಪಂದ ಮಾಡಿಕೊಂಡು ಡಿಜಿಟಲ್ ರಕ್ಷಣೆ ನೀಡುವುದಷ್ಟೇ ಅಲ್ಲ, ಮುಂಬೈ, ದೆಹಲಿ ಮತ್ತು ಹೈದರಾಬಾದುಗಳಲ್ಲಿ ಇದರ ತರಬೇತಿ ನೀಡುವ ಸಂಸ್ಥೆಗಳನ್ನು ಆರಂಭಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ನರೇಂದ್ರಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ಕಾಳಧನಿಕರಿಗೆ ನಿದ್ದೆಯಿಲ್ಲ. ಎರಡು ವರ್ಷಗಳಲ್ಲಿ ಐಟಿ ದಾಳಿಗಳ ಮುಖಾಂತರ 56 ಸಾವಿರ ಕೋಟಿ ರೂಪಾಯಿ ವಸೂಲಿಯಾಗಿದ್ದರೆ, ತೆರಿಗೆ ವಂಚಿಸಿದ್ದವರಿಗೆ ನೋಟೀಸು ಕಳಿಸಿ 16 ಸಾವಿರ ಕೋಟಿ ರೂಪಾಯಿ ಬೊಕ್ಕಸಕ್ಕೆ ತುಂಬಿಸಲಾಗಿದೆ. ಇಷ್ಟಲ್ಲದೇ ಆದಾಯ ಘೋಷಣೆ ಯೋಜನೆಯ ಮೂಲಕ 65 ಸಾವಿರ ಕೋಟಿ ಘೋಷಿಸಲು ಪ್ರೇರೇಪಣೆ ನೀಡಲಾಗಿದೆ. ಹೀಗೆ ಆದಾಯ ಘೋಷಿಸಲು ಕಳೆದ ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿತ್ತು. ಪದೇ ಪದೇ ಈ ಕುರಿತಂತೆ ಉಲ್ಲೇಖ ಮಾಡುತ್ತಿದ್ದ ಪ್ರಧಾನ ಮಂತ್ರಿಗಳು ಕೊನೆಗೊಮ್ಮೆ ಸ್ಪಷ್ಟ ಮಾತುಗಳಲ್ಲಿ ‘ನಿಮ್ಮ ಕಪ್ಪುಹಣ ಘೋಷಣೆ ಮಾಡಿ ಇಲ್ಲವೇ ಮುಖಕ್ಕೆ ಮಸಿ ಬಳಿದುಕೊಳ್ಳಲು ಸಿದ್ಧರಾಗಿ’ ಎಂದಿದ್ದರು.

ಹಾಗೆ ನೋಡಿದರೆ ಈ ಬಾರಿಯ ಬಜೆಟ್ ಮಂಡನೆಯಾದಾಗಿನಿಂದಲೂ ನರೇಂದ್ರಮೋದಿ ಭಾರತವನ್ನು ಆಥರ್ಿಕ ಶಕ್ತಿಯಾಗಿಸಲು ಕಠಿಣ ನಿಯಮಗಳನ್ನು ರೂಪಿಸುವ ಅವಶ್ಯಕತೆ ಇದೆ ಎಂದು ಎಚ್ಚರಿಸಿದರಲ್ಲದೇ ತಯಾರಾಗಿರುವಂತೆ ಜನರಿಗೆ ತಾಕೀತು ಮಾಡುತ್ತಲೇ ಇದ್ದರು. ಅವರಿಗೆ ಅಡ್ಡಗಾಲಾಗಿದ್ದುದು ರಿಸವರ್್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ರಘುರಾಮ್ ರಾಜನ್ ಮಾತ್ರ. ಚಾಣಾಕ್ಷ ಮೋದಿ ಅವರ ಅವಧಿ ಮುಗಿಯುವ ಮುನ್ನವೇ ಅವರನ್ನು ಕರೆಸಿ ಭಾರತದಲ್ಲಿ ಮುದ್ರಣಗೊಳ್ಳಬೇಕಾದ ನೋಟುಗಳ ಕುರಿತಂತೆ ಕೇಳಿಕೊಂಡರು. ರಘುರಾಮ್ ರಾಜನ್ರ ಸಲಹೆ ಐದು ಮತ್ತು ಹತ್ತು ಸಾವಿರ ನೋಟುಗಳ ಮುದ್ರಣವೂ ಆಗಬೇಕೆಂಬುದಾಗಿತ್ತು. ಪ್ರಧಾನ ಮಂತ್ರಿಗಳು ಅದನ್ನು ತಿರಸ್ಕರಿಸಲಿಲ್ಲ. ಅವುಗಳೊಟ್ಟಿಗೆ ಎರಡು ಸಾವಿರವನ್ನೂ ಸೇರಿಸಿ ವಿನ್ಯಾಸ ಆರಂಭಿಸುವಂತೆ ಆದೇಶಿಸಿದರು.
ಮೂರ್ನಾಲ್ಕು ಕಲಾವಿದರು ರಿಸವರ್್ ಬ್ಯಾಂಕಿನ ನೋಟುಗಳ ವಿನ್ಯಾಸಕ್ಕೆಂದು ಕುಳಿತರು. ಸುರಕ್ಷತೆಯ ಕ್ರಮಗಳ ಕುರಿತಂತೆ ಗಂಭೀರವಾಗಿ ಆಲೋಚಿಸಲಾಯ್ತು. ಈ ವೇಳೆಗೆ ಸರಿಯಾಗಿ ರಘುರಾಮ್ ರಾಜನ್ರ ಅವಧಿ ಮುಗಿದಿತ್ತು. ಒಂದು ವರ್ಷಕ್ಕೆ ಅವರನ್ನು ವಿಸ್ತರಿಸುವ ಅವಕಾಶವಿದ್ದಾಗ್ಯೂ ಮೋದಿ ತಿರಸ್ಕರಿಸಿ ಗೌರವದಿಂದಲೇ ಅವರನ್ನು ಬೀಳ್ಕೊಟ್ಟು ಊಜರ್ಿತ್ ಪಟೇಲರಿಗೆ ಪಟ್ಟ ಕಟ್ಟಿದರು. ಈಗ ಡಿಮಾನಿಟೈಸೇಶನ್ಗೆ ವೇಗ ದಕ್ಕಿತು. ನೋಟುಗಳು ಆರ್ಬಿಐನ ಮೈಸೂರು ಮುದ್ರಣಾಲಯದಲ್ಲಿ ಭರದಿಂದ ಮುದ್ರಿಸಲ್ಪಟ್ಟವು. ಅವುಗಳನ್ನು ಕೆಲವು ದಿನಗಳ ಮುಂಚೆಯೇ ದೆಹಲಿಯ ಕೇಂದ್ರ ಕಚೇರಿಗೆ ತರಿಸಿಕೊಳ್ಳಲಾಯಿತು. ನವೆಂಬರ್ 8 ರ ಸಂಜೆ ಸೈನ್ಯದ ಮುಖ್ಯಸ್ಥರೊಂದಿಗೆ, ಅಜಿತ್ ದೋವೆಲ್ರೊಂದಿಗೆ ಚಚರ್ೆ ಮುಗಿಸಿ, ಕ್ಯಾಬಿನೆಟ್ ಮೀಟಿಂಗ್ ಕರೆದು ಸಹೋದ್ಯೋಗಿಗಳಿಗೆ ಈ ವಿಚಾರ ತಿಳಿಸಲಾಯಿತು. ಆನಂತರ ರಾಷ್ಟ್ರಪತಿಗಳಿಗೆ ಯೋಜನೆಯ ವಿವರ ಒಪ್ಪಿಸಿ ಒಪ್ಪಿಗೆ ಪಡೆದು ದೇಶವನ್ನುದ್ದೇಶಿಸಿ ಮಾತನಾಡುವ ಇಂಗಿತ ವ್ಯಕ್ತ ಪಡಿಸಿದರು ಮೋದಿ. ಇಷ್ಟೂ ನಡೆ ಮೇಲ್ನೋಟಕ್ಕೆ ಪಾಕೀಸ್ತಾನದೊಂದಿಗೆ ಯುದ್ಧದ ತಯಾರಿಯಂತೆಯೇ ಇತ್ತು. ಮಾಧ್ಯಮಗಳು, ರಾಜಕೀಯ ವಿಶ್ಲೇಷಕರು ಅದನ್ನೇ ಆಲೋಚಿಸಿದ್ದರು ಕೂಡ. ಆದರೆ ರಾತ್ರಿ ನರೇಂದ್ರಮೋದಿಯವರ ಮಾತುಗಳು ಎಲ್ಲರ ಆಲೋಚನೆಯನ್ನು ತಲೆಕೆಳಗು ಮಾಡಿದವು. ಅಂದು ರಾತ್ರಿಯಿಂದಲೇ ಐನೂರು ಮತ್ತು ಸಾವಿರದ ನೋಟುಗಳು ನ್ಯಾಯಬದ್ಧ ನೋಟುಗಳಲ್ಲವಾಯ್ತು. ಅದನ್ನು ಬದಲಾಯಿಸಿಕೊಳ್ಳಬೇಕಾದ, ತಂತಮ್ಮ ಅಕೌಂಟುಗಳಿಗೆ ತಂದು ತುಂಬಬೇಕಾದ ಹೊಣೆ ಎಲ್ಲರ ಹೆಗಲೇರಿತು.

pokhran-033

ಎರಡೂವರೆ ವರ್ಷಗಳಿಂದ ತಮ್ಮ ಮನದಿಂಗಿತವನ್ನು ಯಾರಿಗೂ ತಿಳಿಸದೇ ಕೆಲವು ತಜ್ಞರೊಂದಿಗೆ ಮಾತನಾಡುತ್ತ ಅತ್ಯಂತ ಗುಪ್ತವಾಗಿ ಈ ಯೋಜನೆ ರೂಪಿಸಿದರಲ್ಲಾ ಅದೇ ನರೇಂದ್ರ ಮೋದಿಯವರ ಸಾಹಸ! ಖ್ಯಾತ ಅರ್ಥಚಿಂತಕ ಎಸ್ ಗುರುಮೂತರ್ಿ ಇದನ್ನು ‘ಆಥರ್ಿಕ ಪೋಖ್ರಾನ್’ ಅಂತ ಕರೆದಿದ್ದುದರ ಹಿನ್ನೆಲೆ ಈಗ ಅರ್ಥವಾಗಿರಬೇಕು. ಈ ನೋಟು ಅಮಾನ್ಯೀಕರಣದ ಒಟ್ಟಾರೆ ಗೆಲುವು ಇರುವುದೇ ಅದರ ಗೌಪ್ಯತೆಯಲ್ಲಿ ಮತ್ತು ಅದನ್ನು ನಿಭಾಯಸುವ ದೀರ್ಘಕಾಲದ ಸೂತ್ರದಲ್ಲಿ. ವೆನಿಜುವೆಲಾ ಎರಡನೆಯದರಲ್ಲಿ ಸೋತು ಹೋಯ್ತು. ಈಗ ಆಸ್ಟ್ರೇಲಿಯಾ ಮತ್ತು ಪಾಕೀಸ್ತಾನಗಳು ಈ ದಿಕ್ಕಿನತ್ತ ಹೆಜ್ಜೆ ಇಡಲು ನಿಶ್ಚಯಿಸಿವೆ. ಆದರೆ ಮೊದಲನೆಯದರಲ್ಲಿಯೇ ಸೋತಿವೆ. ಭಾರತ ಮಾತ್ರ ಸದ್ಯದವರೆಗೂ ಗೆದ್ದಿದೆ. 128 ಕೋಟಿ ಜನರ ನಾಡಾಗಿದ್ದು, ಬ್ಯಾಂಕಿನ ವ್ಯವಸ್ಥೆಗೇ ಬರದ ಬಹುತೇಕರು ಇರುವಾಗಲೂ ಮತ್ತು ಬಹುಪಾಲು ವ್ಯವಹಾರ ನಗದಿನ ರೂಪದಲ್ಲಿ ನಡೆಯುವ ಸ್ಥಿತಿ ಇರುವಾಗಲೂ ಹೀಗೊಂದು ಗುಪ್ತ ಯೋಜನೆಯನ್ನು ಇದಕ್ಕಿಂತ ಸುಂದರವಾಗಿ ಅನುಷ್ಠಾನಕ್ಕೆ ತರಲು ಸಾಧ್ಯವೇ ಇರಲಿಲ್ಲವೆನಿಸುತ್ತದೆ.

3 thoughts on “ಮೋದಿಯವರದ್ದು ಆರ್ಥಿಕ ಪೋಖ್ರಾನ್!!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s