ವಿತ್ತೀಯ ಕೊರತೆಯೆಂಬ ಗೂಳಿಯ ಸವಾರಿ

ವಿತ್ತೀಯ ಕೊರತೆಯೆಂಬ ಗೂಳಿಯ ಸವಾರಿ

ವಿದೇಶದಿಂದ ತಂದ ಸಾಲಕ್ಕೆ ಬಡ್ಡಿ ತೀರಿಸುವಲ್ಲಿ ಪ್ರತಿ ವರ್ಷದ ಆದಾಯದ ಬಹುಪಾಲನ್ನು ಎತ್ತಿಡಬೇಕು. ಉಳಿದ ಹಣದಲ್ಲಿ ಆಡಳಿತಾತ್ಮಕ ಖರ್ಚನ್ನು ಸಂಭಾಳಿಸಬೇಕು. ಆನಂತರ ಸೈನ್ಯದ ಆಧುನೀಕರಣಕ್ಕೆ ಪ್ರತೀ ವರ್ಷ ಆಥರ್ಿಕ ವ್ಯಯ ಇದ್ದದ್ದೇ. ಇವೆಲ್ಲವೂ ಕಳೆದು ಹಣ ಉಳಿದರೆ ಕೃಷಿಯ ಅಭಿವೃದ್ಧಿಗೆ, ರಸ್ತೆ ನಿಮರ್ಾಣಕ್ಕೆ, ಶಿಕ್ಷಣಕ್ಕೆ ಮುಂತಾದ ಜನೋಪಯೋಗಿ ಚಟುವಟಿಕೆಗಳಿಗೆ ವ್ಯಯಿಸಬೇಕು. ಹೀಗಾಗಿಯೇ ಪ್ರತೀ ವರ್ಷ ಅಭಿವೃದ್ಧಿಯ ನಿದರ್ಿಷ್ಟ ಗುರಿ ಮುಟ್ಟಲು ಈ ರಾಷ್ಟ್ರಕ್ಕೆ ಸಾಧ್ಯವೇ ಆಗಿಲ್ಲ. ಪ್ರತಿಯೊಂದು ಸಕರ್ಾರವೂ ಪ್ರತಿ ವರ್ಷ ಘೋಷಣೆ ಮತ್ತು ಅನುಷ್ಠಾನದ ವಿಚಾರದಲ್ಲಿ ಅಜಗಜಾಂತರ ಹೊಂದಿರುವುದರ ಹಿಂದೆ ಇಷ್ಟೆಲ್ಲಾ ಕಾರಣಗಳಿವೆ. ಪರಿಹಾರವೇನು?

depositphotos_1785499-stock-photo-bull-riding-at-rodeo

ಪ್ರತೀ ವರ್ಷ ಬಜೆಟ್ ಮಂಡನೆಯಾದ ಮೇಲೆ ನಾವೆಲ್ಲ ಪತ್ರಿಕೆಗಳ ಮೇಲೆ ಕಣ್ಣು ಹಾಯಿಸುವುದು ಯಾವುದರ ಬೆಲೆ ಹೆಚ್ಚಿತು, ಯಾವುದರದ್ದು ಕಡಿಮೆ ಆಯ್ತು ಎಂಬುದಕ್ಕಾಗಿ ಮಾತ್ರ! ಉಳಿದಂತೆ ನಮ್ಮ ದೈನಂದಿನ ಚಟುವಟಿಕೆಗಳಿಗೆ ಬಜೆಟ್ನಿಂದಾಗುವ ತೊಂದರೆ, ಉಪಕಾರ ಎರಡೂ ಅಷ್ಟಕ್ಕಷ್ಟೇ. ಆದರೆ ಸೂಕ್ಷ್ಮವಾಗಿ ಗಮನಿಸಲೇಬೇಕಾದ ಸಂಗತಿಯೊಂದಿದೆ. ಅದು ವಿತ್ತೀಯ ಕೊರತೆಯದ್ದು. ಪ್ರತೀ ವರ್ಷ ಭಾರತದ ಬಜೆಟ್ಟಿನಲ್ಲಿ ಆದಾಯಕ್ಕಿಂತ ಖಚರ್ೇ ಜಾಸ್ತಿ. ಭಾರತವಷ್ಟೇ ಅಲ್ಲ ಅಮೇರಿಕಾ-ಯೂರೋಪಿನಂತಹ ಮುಂದುವರಿದ ರಾಷ್ಟ್ರಗಳೂ ಅಪಾರ ವಿತ್ತೀಯ ಕೊರತೆಯೊಂದಿಗೇ ದಿನ ದೂಡುತ್ತವೆ. ಸಾಧಾರಣವಾಗಿ ಈ ಕೊರತೆ ಕಡಿಮೆ ತೆರಿಗೆ ಸಂಗ್ರಹದ ಕಾರಣದಿಂದಾಗಬಹುದು ಅಥವಾ ಬೆಲೆಗಳ ಏರುಪೇರಿನಿಂದಾಗಿ ಹೂಡಬೇಕಾದ ಬಂಡವಾಳ ಸಾಲದೇ ಹೆಚ್ಚು ಹಣ ತೆರಬೇಕಾದ ಸ್ಥಿತಿಯಿಂದ ನಿಮರ್ಾಣವಾಗಿರಬಹುದು. ಹೀಗೆ ಪ್ರತೀ ವರ್ಷ ಭಾರತದ ಪಾಲಿಗೆ ಐದಾರು ಲಕ್ಷ ಕೋಟಿಗಳ ವಿತ್ತೀಯ ಕೊರತೆಯ ಸವಾಲು ಇದ್ದದ್ದೇ! ಅರ್ಥಶಾಸ್ತ್ರಜ್ಞರು ಇದನ್ನು ದೇಶದ ಒಟ್ಟಾರೆ ಉತ್ಪನ್ನದ (ಜಿ.ಡಿ.ಪಿ) ಲೆಕ್ಕದಲ್ಲಿ ಅಳೆಯುತ್ತಾರೆ. ಜಿಡಿಪಿಯ ಎರಡೂವರೆ ಪ್ರತಿಶತದಷ್ಟಿದ್ದರೆ ವಿತ್ತೀಯ ಕೊರತೆ ಸಂಭಾಳಿಸಬಹುದಾದಂಥದ್ದು. ಅದನ್ನು ಮೀರುತ್ತ ಹೋದಂತೆ ಈ ಕೊರತೆ ಜೀವ ಹಿಂಡುತ್ತ ನಡೆಯುತ್ತದೆ. ಕ್ರಮೇಣ ದೇಶ ದಾಸ್ಯಕೂಪಕ್ಕೆ ತಳ್ಳಲ್ಪಡುತ್ತದೆ.
ಇದೊಂದು ರೀತಿ ಆದಾಯಕ್ಕಿಂತ ಹೆಚ್ಚು ಖಚರ್ು ಮಾಡುವ ಕುಟುಂಬಗಳಿದ್ದಂತೆ. ಮೊದ ಮೊದಲು ಸಾಲ ಕೇಳುತ್ತಾರೆ. ಆಮೇಲೆ ಮನೆ-ಮಠ ಮಾರಿಕೊಳ್ಳುತ್ತಾರೆ. ಕೊನೆಗೆ ನಿರ್ಲಜ್ಜರಾಗಿ ಕಂಡ-ಕಂಡವರ ಕಾಲು ಹಿಡಿದು ಅಸಹ್ಯ ಬದುಕು ಬಾಳುತ್ತಾರೆ! ದೇಶದ ಕಥೆಯೂ ಹಾಗೆಯೇ. ಚೀನಾದೆದುರು ಮನಮೋಹನ ಸಿಂಗರು ಯಾವಾಗಲೂ ನಯ-ವಿನಯದಿಂದ ನಡಕೊಳ್ಳುತ್ತಿದ್ದುದು ಏಕೆ ಗೊತ್ತೇ? ಆಥರ್ಿಕವಾಗಿ ಸದೃಢವಾದ ರಾಷ್ಟ್ರ ಅವರದ್ದು. ಅಷ್ಟೇ ಅಲ್ಲ. ಎರಡೂ ದೇಶಗಳ ನಡುವಿನ ವ್ಯಾಪಾರ ಕೊರತೆ 52 ಬಿಲಿಯನ್ ಡಾಲರ್ಗಳಷ್ಟಿದೆ. ಅಂದರೆ ಚೀನಾಕ್ಕೆ ರಫ್ತು ಮಾಡುವುದಕ್ಕಿಂತ ಅಲ್ಲಿಂದ ಆಮದು ಮಾಡಿಕೊಳ್ಳೋದೆ ಹೆಚ್ಚು ನಾವು. ಒಂದೆಡೆ ರಾಷ್ಟ್ರದ ಆದಾಯದಲ್ಲಿ ಕೊರತೆ ಮತ್ತೊಂದೆಡೆ ಇತರೆ ದೇಶಗಳೊಂದಿಗೆ ವ್ಯಾಪಾರದ ಕೊರತೆ. ಇವೆಲ್ಲ ಒಟ್ಟಾಗುತ್ತ ಹೋದಂತೆ ಉಸಿರುಗಟ್ಟಿಸುವ ವಾತಾವರಣ ನಿಮರ್ಾಣವಾಗಿಬಿಡುತ್ತದೆ. ಈ ಕೊರತೆಗಳಿಂದ ದೇಶವನ್ನು ಪಾರು ಮಾಡುವುದು ಪ್ರತೀ ಸಕರ್ಾರದ ಪಾಲಿಗೆ ಬಲು ದೊಡ್ಡ ಸವಾಲು. ಅದೊಂದು ಸಾಹಸದ ಚಕ್ರವೇ. ವಿದೇಶಗಳೊಂದಿಗಿನ ವ್ಯಾಪಾರದ ಕೊರತೆ ನೀಗಿಸಲು ಭಾರತದಲ್ಲಿ ಉತ್ಪಾದನೆ ಹೆಚ್ಚಬೇಕು, ರಫ್ತು ವೃದ್ಧಿಸಬೇಕು. ಅದಕ್ಕೆ ಹೂಡಲು ಹಣ ಬೇಕೆಂದರೆ ಮತ್ತೆ ಬಜೆಟ್ಟಿನಲ್ಲಿ ಕೊರತೆ! ಇರುವ ಪರಿಹಾರ ಒಂದೇ. ವಿದೇಶಗಳ ಬಳಿ ಬಡ್ಡಿಗೆ ಸಾಲ ಕೇಳಬೇಕು ಅಥವಾ ಬಂಡವಾಳ ಹೂಡಿ ಉತ್ಪಾದನೆ ವೃದ್ಧಿಸಿ ರಫ್ತು ಹೆಚ್ಚಿಸುವಂತೆ ವಿದೇಶೀ ಕಂಪೆನಿಗಳನ್ನು ಕೇಳಿಕೊಳ್ಳಬೇಕು. ‘ಮೇಕ್ ಇನ್ ಇಂಡಿಯಾ’ ಗೆ ಅಷ್ಟೊಂದು ಪ್ರಚಾರ ಸಿಕ್ಕಿದ್ದೇಕೆಂದು ಈಗ ಅರ್ಥವಾಗಿರಲಿಕ್ಕೆ ಸಾಕು. ಇವೆಲ್ಲಾ ವಿತ್ತೀಯ ಕೊರತೆಯೆಂಬ ಗೂಳಿಯ ಕೊಂಬನ್ನು ಹಿಡಿದು ಪಳಗಿಸುವ ಪ್ರಯತ್ನ ಮಾತ್ರ.

fiscal_deficit
ವಿದೇಶದಿಂದ ತಂದ ಸಾಲಕ್ಕೆ ಬಡ್ಡಿ ತೀರಿಸುವಲ್ಲಿ ಪ್ರತಿ ವರ್ಷದ ಆದಾಯದ ಬಹುಪಾಲನ್ನು ಎತ್ತಿಡಬೇಕು. ಉಳಿದ ಹಣದಲ್ಲಿ ಆಡಳಿತಾತ್ಮಕ ಖರ್ಚನ್ನು ಸಂಭಾಳಿಸಬೇಕು. ಆನಂತರ ಸೈನ್ಯದ ಆಧುನೀಕರಣಕ್ಕೆ ಪ್ರತೀ ವರ್ಷ ಆಥರ್ಿಕ ವ್ಯಯ ಇದ್ದದ್ದೇ. ಇವೆಲ್ಲವೂ ಕಳೆದು ಹಣ ಉಳಿದರೆ ಕೃಷಿಯ ಅಭಿವೃದ್ಧಿಗೆ, ರಸ್ತೆ ನಿಮರ್ಾಣಕ್ಕೆ, ಶಿಕ್ಷಣಕ್ಕೆ ಮುಂತಾದ ಜನೋಪಯೋಗಿ ಚಟುವಟಿಕೆಗಳಿಗೆ ವ್ಯಯಿಸಬೇಕು. ಹೀಗಾಗಿಯೇ ಪ್ರತೀ ವರ್ಷ ಅಭಿವೃದ್ಧಿಯ ನಿದರ್ಿಷ್ಟ ಗುರಿ ಮುಟ್ಟಲು ಈ ರಾಷ್ಟ್ರಕ್ಕೆ ಸಾಧ್ಯವೇ ಆಗಿಲ್ಲ. ಪ್ರತಿಯೊಂದು ಸಕರ್ಾರವೂ ಪ್ರತಿ ವರ್ಷ ಘೋಷಣೆ ಮತ್ತು ಅನುಷ್ಠಾನದ ವಿಚಾರದಲ್ಲಿ ಅಜಗಜಾಂತರ ಹೊಂದಿರುವುದರ ಹಿಂದೆ ಇಷ್ಟೆಲ್ಲಾ ಕಾರಣಗಳಿವೆ. ಪರಿಹಾರವೇನು? ವಿದೇಶದಿಂದ ಹೆಚ್ಚು ಹೆಚ್ಚು ಸಾಲ ಅಥವಾ ಹೂಡಿಕೆ ತರುವ ಪ್ರಯತ್ನ. ಸಾಲ ತಂದಾಗ ಅದನ್ನು ಮರಳಿಸುವ ಹೊಣೆಗಾರಿಕೆ ನಮ್ಮದ್ದು. ಹೂಡಿಕೆಗೆ ವಾತಾವರಣ ಮಾಡಿಕೊಟ್ಟರೆ ರಾಷ್ಟ್ರೀಯ ಉತ್ಪನ್ನ ಹೆಚ್ಚಿಸಿ, ರಫ್ತು ವೃದ್ಧಿಯಾಗುವಂತೆ ನೋಡಿಕೊಂಡು ತಮ್ಮ ಬಂಡವಾಳ ಮತ್ತು ಲಾಭ ಎರಡನ್ನೂ ಮರಳಿ ಒಯ್ಯುವ ಜವಾಬ್ದಾರಿ ಹಣ ಹೂಡಿದವರದ್ದೇ. ಅದಕ್ಕೇ ಎಲ್ಲಾ ಸಕರ್ಾರಗಳು ಹೆಚ್ಚು-ಹೆಚ್ಚು ಹೂಡಿಕೆಯಾಗುವಂತೆ ಶತ ಪ್ರಯತ್ನ ಮಾಡೋದು. ಅದು ಸಮಾಜವಾದದ ಹಿನ್ನೆಲೆಯಿಂದ ಬಂದವರಿರಲಿ, ಸ್ವದೇಶೀ ಚಳವಳಿಯ ಅಗ್ರಣಿಗಳೇ ಆಗಿರಲಿ; ಎಡಪಂಥದವರಿರಲಿ, ದಶಕಗಳಿಂದಲೂ ಲೂಟಿ ಮಾಡಿದವರಿರಲಿ ಅಧಿಕಾರಕ್ಕೆ ಬಂದೊಡನೆ ಎಲ್ಲಾ ಆದರ್ಶಗಳನ್ನು ಮರೆತು ವಿದೇಶದಿಂದ ಹೂಡಿಕೆ ಸೆಳೆಯುವಲ್ಲಿ ಮುಂದೆ ನಿಲ್ಲುತ್ತಾರೆ. ಎಲ್ಲಕ್ಕೂ ಕಾರಣ ವಿತ್ತೀಯ ಕೊರತೆಯೇ! ಇದನ್ನು ನೀಗಿಸಲು ಸೋತೆವೆನಿಸಿದಾಗಲೇ ಸಕರ್ಾರ ಬಗೆಬಗೆಯ ತೆರಿಗೆ ಹೇರಿ ಬೊಕ್ಕಸ ತುಂಬಿಸಲು ಯತ್ನಿಸೋದು ಮತ್ತು ನೇರ ತೆರಿಗೆಗಿಂತ ಜನರಿಗೆ ಅರ್ಥವಾಗದ ರೀತಿಯಲ್ಲಿ ಅವರ ಜೇಬಿಗೆ ಕೈ ಹಾಕಿ ಕಿತ್ತುಕೊಳ್ಳುವ ಪರೋಕ್ಷ ತೆರಿಗೆಯನ್ನು ಹೇರೋದು. ಆಗಲೇ ಭ್ರಷ್ಟಾಚಾರ ಮಿತಿ ಮೀರಿ ನಡೆದು ತೆರಿಗೆ ಕಟ್ಟಬೇಕಿದ್ದವನೂ ಕದ್ದು ಸಂಗ್ರಹಣೆಗೆ ಶುರುಮಾಡೋದು. ಅಲ್ಲಿಗೆ ಜಮೀನು ಮಾರಿ ಒಂದು ಲಕ್ಷ ಸಕರ್ಾರಕ್ಕೆ ಗೊತ್ತಿಲ್ಲದಂತೆ ಮನೆಯಲ್ಲಿಟ್ಟುಕೊಂಡವನೂ ಭ್ರಷ್ಟನೇ, ಬೊಕ್ಕಸಕ್ಕೆ ಕನ್ನ ಹಾಕಿ ಸಾವಿರಾರು ಕೋಟಿ ಹಗರಣ ಮಾಡಿದವನೂ ಭ್ರಷ್ಟನೇ. ಯಾರೊಬ್ಬರೂ ಬಾಯಿಬಿಚ್ಚದೇ, ರಾಷ್ಟ್ರ ಸಾಗುತ್ತಿರುವ ಹಾದಿಯನ್ನು ತೆಗಳುತ್ತಾ ‘ನಮ್ಮ ಕಾಲ ಹೇಗಿತ್ತು ಗೊತ್ತಾ?’ ಎಂದು ಹಲುಬುತ್ತಾ ಕೂರುತ್ತಾರೆ. ಅದಕ್ಕೇ ಸ್ವಾತಂತ್ರ್ಯದ ಹೊಸ್ತಿಲಲ್ಲಿ ಪ್ರಾಮಾಣಿಕತೆ ಸಹಜವಾದ ಗುಣವಾಗಿತ್ತು. ಇಂದು ಜಿಲ್ಲಾಧಿಕಾರಿ ಕಚೇರಿಯ ಅತ್ಯಂತ ಪ್ರಾಮಾಣಿಕ ವ್ಯಕ್ತಿ ಎಂದು ಯಾರನ್ನಾದರೂ ಕರೆತಂದು ಸನ್ಮಾನಿಸಿದರೆ ಕರತಾಡನದ ಸುರಿಮಳೆ.

ಇಷ್ಟಕ್ಕೂ ಬೊಕ್ಕಸದಲ್ಲಿ ಹಣದ ಕೊರತೆಯಿಂದ ಆಗುವ ಬಹುಮುಖ್ಯ ಸಮಸ್ಯೆಗಳೇನು ಗೊತ್ತಾ?
1. ದೇಶದ ಅಭಿವೃದ್ಧಿಗೆ ಹಣದ ಕೊರತೆಯಾಗುವುದರಿಂದ ಸಕರ್ಾರ ರಸ್ತೆ, ನೀರು, ವಿದ್ಯುತ್ನಂತಹ ಮೂಲ ಸೌಕರ್ಯ ಒದಗಿಸಲಾರದು. ಹೀಗಾಗಿ ಸ್ಥಳೀಯ ಕಾಖರ್ಾನೆಗಳು ಉತ್ಪಾದನೆಯಲ್ಲಿ ಹಿಂದುಳಿಯುತ್ತವೆ. ಇತ್ತ ಈ ಪರಿಸ್ಥಿತಿಯನ್ನು ನಿಭಾಯಿಸಲು ವಿದೇಶದಿಂದ ಹೂಡಿಕೆಯ ಆಕರ್ಷಣೆಗೆಂದು ಅವರಿಗೆ ಬೇಕಾದ ಪರಿಸರ ನಿಮರ್ಿಸಲಾಗುತ್ತದೆ. ಅವರಿಗೆ ನೀರು, ವಿದ್ಯುತ್, ರಸ್ತೆಗಳನ್ನು ವಿಶೇಷವಾಗಿ ಒದಗಿಸಲಾಗುತ್ತದೆ, ತೆರಿಗೆ ವಿನಾಯತಿಯನ್ನೂ ಘೋಷಿಸಲಾಗುತ್ತದೆ. ಸಹಜವಾಗಿಯೇ ಇಷ್ಟೊಂದು ಸೌಲಭ್ಯಗಳನ್ನು ಪಡೆಯದ ಸ್ಥಳೀಯ ಉದ್ದಿಮೆಗಳು ವಿದೇಶಿಗರೊಡನೆ ಸೆಣಸಲಾಗದೆ ಸೊರಗುತ್ತವೆ. ನಮ್ಮವರು ಕೂಲಿಕಾಮರ್ಿಕರಾಗಿ ಉಳಿದುಬಿಡುತ್ತಾರೆ.
2. ಹಣದ ಕೊರತೆಯಿಂದಾಗಿ ಕೃಷಿ ವಸ್ತುಗಳ ಮೇಲಿನ ಸಬ್ಸಿಡಿ ಕಡಿತವಾಗುತ್ತದೆ. ಆಗಲೇ ಉತ್ಪಾದನಾ ವೆಚ್ಚ ಹೆಚ್ಚಿ ಸೂಕ್ತ ಬೆಲೆ ಮಾರುಕಟ್ಟೆಯಲ್ಲಿ ಸಿಗದಂತಾಗುವುದು. ಇದರಿಂದ ಹಳ್ಳಿಗರ ಕೊಳ್ಳುವ ಶಕ್ತಿ ಕ್ಷೀಣಿಸುತ್ತದೆ. ಸಹಜವಾಗಿಯೇ ಸ್ಥಳೀಯ ಕಾಖರ್ಾನೆಗಳು, ಉದ್ದಿಮೆಗಳು ಅರಳುವ ವಾತಾವರಣವಿಲ್ಲದೇ ನರಳುತ್ತವೆ.
3. ಕೊರತೆ ಬಜೆಟ್ ಮಂಡಿಸಿದ ಕಾರಣಕ್ಕೆ ಹಣದ ಹರಿವಿಗೆ ಹಪಹಪಿಸುವ ಸಕರ್ಾರ ಬ್ಯಾಂಕುಗಳಲ್ಲಿ ಹೆಚ್ಚು ಹಣ ಬರುವಂತೆ ಮಾಡಲು ಡಿಪಾಸಿಟ್ಗಳ ಮೇಲೆ ಬಡ್ಡಿ ಹೆಚ್ಚಿಸುತ್ತದೆ. ಅದರ ಪರಿಣಾಮವಾಗಿ ಸಾಲದ ಮೇಲಿನ ಬಡ್ಡಿಯೂ ಅಧಿಕವಾಗುತ್ತದೆ. ಒಮ್ಮೆ ಸಾಲದ ಬಡ್ಡಿದರ ಹೆಚ್ಚಾದರೆ, ಸ್ಥಳೀಯ ಬಂಡವಾಳಕ್ಕೆ ಕೊರತೆಯಾಗಿ ಹೊಸ ಸವಾಲುಗಳನ್ನು ಸ್ವೀಕರಿಸಲು ಹಿಂಜರಿಯುವ ತರುಣರು ಉದ್ಯೋಗ ಅರಸಿ ಸುಖವಾಗಿರಲು ಬಯಸುತ್ತಾರೆ. ಹೀಗಾಗಿ ಒಟ್ಟಾರೆ ರಾಷ್ಟ್ರೀಯ ಉತ್ಪನ್ನ ಕುಂಠಿತವಾಗುತ್ತದೆ. ಇದರ ನಡುವೆಯೂ ಹೊಸ ಕಲ್ಪನೆಯ ಅನುಷ್ಠಾನಕ್ಕೆ ಕೈ ಹಾಕುವ ಸಾಹಸ ಮಾಡಿ ಸಾಲ ಪಡೆದವನು ಬಡ್ಡಿ ತೀರಿಸಲಾಗದೇ ಹೈರಾಣಾಗುತ್ತಾನೆ, ಬದುಕಿರುವಾಗಲೇ ಇತರರ ಕಂಗಳಲ್ಲಿ ವ್ಯರ್ಥವೆನಿಸಿಕೊಳ್ಳುತ್ತಾನೆ.
4. ಜನ ಬರದೇ ಕಂಗಾಲಾಗುವ ಬ್ಯಾಂಕುಗಳು ಸಾಲ ನೀಡುವ ಮುನ್ನ ನೂರೆಂಟು ಪ್ರಶ್ನೆ ಕೇಳುತ್ತವೆ. ಬೇಸತ್ತ ಜನ ಉಳ್ಳವರ ಬಳಿ ಸಾಲಕ್ಕೆಂದು ಸಾಲು ನಿಲ್ಲುತ್ತಾರೆ. ಹೆಚ್ಚಿನ ಮೊತ್ತಕ್ಕೆ ತುತರ್ಾಗಿ ಪಡೆಯುವ ಈ ಹಣ ತೀರಿಸಲಾಗದೇ ರೈತ ಆತ್ಮಹತ್ಯೆಗೆ ಶರಣಾಗುತ್ತಾನೆ. ಸಾಮಾಜಿಕ ಜನಜೀವನ ಛಿದ್ರಗೊಳ್ಳುತ್ತದೆ.
5. ಹಣ ಗಳಿಸಲು ಸಕರ್ಾರ ತನ್ನದೇ ಸ್ವಾಮ್ಯದ ಉದ್ದಿಮೆಗಳಿಂದ ಬಂಡವಾಳ ಹಿಂದೆಗೆಯುತ್ತದೆ. ಹೀಗಾಗಿ ಅಗತ್ಯ ವಸ್ತುಗಳ ಉತ್ಪಾದನೆ, ಬೆಲೆಗಳ ಮೇಲೆ ಸಕರ್ಾರದ ನಿಯಂತ್ರಣ ತಪ್ಪಿ ಉಳ್ಳವರು ಮಾರುಕಟ್ಟೆಯಲ್ಲಿ ಮನಸೋ ಇಚ್ಛೆ ಲೂಟಿ ಮಾಡುತ್ತಾರೆ. ಬಡವ ಹೈರಾಣಾಗುತ್ತಾನೆ. ಹಾಗೆ ಸುಮ್ಮನೆ ಊಹಿಸಿ. ಸಾಲ ತೀರಿಸಲಾಗದೇ ರಾಜ್ಯ ಸಕರ್ಾರ, ಸಾರ್ವಜನಿಕ ಸಾರಿಗೆ ಸಂಸ್ಥೆಯನ್ನು ಖಾಸಗಿಯವರಿಗೆ ಮಾರಿಬಿಟ್ಟರೆ ಅವರು ಲಾಭವಿಲ್ಲದ ದಾರಿಯಲ್ಲಿ ಬಸ್ ಸಂಚಾರ ನಡೆಸಬಹುದೇ? ಸಿರಿವಂತ ಸ್ವಂತ ಕಾರಿನಲ್ಲಿ ಓಡಾಡುತ್ತಾನೆ, ಬಡವನೇನು ಮಾಡಬೇಕು ಹೇಳಿ!
6. ಸಕರ್ಾರ ತೆರಿಗೆಯನ್ನು ವಸೂಲು ಮಾಡಿದ ನಂತರವೂ ಅಭಿವೃದ್ಧಿಗೆ ಹಣ ಸಾಲದೆಂದು ಸಿರಿವಂತರ ಜೊತೆ ಸೇರಿ ಬೆಳವಣಿಗೆ ಕೈಗೊಂಡು ಮತ್ತೆ ಲೂಟಿ ಮಾಡುವ ಕೀಲಿಕೈಯನ್ನು ಸಿರಿವಂತರಿಗೇ ನೀಡುತ್ತದೆ. ರಸ್ತೆ ತೆರಿಗೆ ಕಟ್ಟಿದ ನಂತರವೂ ಟೋಲ್ ಕಟ್ಟುವಂತೆ ಇದು! ಪರಿಸ್ಥಿತಿ ಹೀಗೆಯೇ ಮುಂದುವರಿದರೆ ದುಡ್ಡಿಲ್ಲದವ ರಸ್ತೆಗೇ ಬರುವಂತಿಲ್ಲ ಎಂದು ನಿಯಮ ಬಂದರೂ ಅಚ್ಚರಿಯಿಲ್ಲ. ಹ್ಞಾಂ. ಈ ನಡುವೆಯೇ ಹೇಳಿ ಬಿಡುತ್ತೇನೆ. ಎಂದಾದರೂ ಟೋಲ್ ಬೂತ್ಗಳಲ್ಲಿ ರಸ್ತೆಗಾಗಿ ಹೂಡಿದ ಹಣವೆಷ್ಟು, ಇದುವರೆಗೂ ಸಂಗ್ರಹವಾದುದೆಷ್ಟೆಂದು ತಿಂಗಳಿಗೊಮ್ಮೆ ಲೆಕ್ಕಾಚಾರ ಮುಂದಿಡುವ ವ್ಯವಸ್ಥೆ ಮಾಡಿದ್ದಾರೇನು? ಹೂಡಿಕೆಯ ನಾಲ್ಕಾರು ಪಟ್ಟು ಹಣ ಬಂದ ನಂತರವೂ ಲೂಟಿ ಎಗ್ಗಿಲ್ಲದೇ ನಡೆಯುತ್ತಲೇ ಇರುತ್ತದೆ. ಆಳುವ ಧಣಿಗಳಿಗೆ ಪಾಸು ಕೊಡುತ್ತಾರೆ, ಜನಸಾಮಾನ್ಯರು ಮಾತ್ರ ನಿಯತ್ತಿನಿಂದ ದುಡಿಯುವುದಲ್ಲದೇ ಈ ಪರಿಯ ಲೂಟಿಗೆ ಜೇಬನ್ನು ತೆರೆದುಕೊಂಡೇ ಕೂರುತ್ತಾರೆ.
7. ಹಣಗಳಿಕೆಗೆ ಸಕರ್ಾರವೇ ಹೆಂಡ, ಸಿಗರೇಟು, ಗುಟ್ಕಾ, ಲಾಟರಿ, ಕುದುರೆ ರೇಸುಗಳನ್ನು ತಾನೇ ನಡೆಸುತ್ತದೆ ಇಲ್ಲವೇ ಸಮರ್ಥನೆಗೆ ನಿಂತು ಬಿಡುತ್ತದೆ. ಮತ್ತಿದು ನೇರ ಜನಸಾಮಾನ್ಯನ ಆರೋಗ್ಯಕ್ಕೆ ಹೊಡೆತ. ಅದನ್ನು ನಿಭಾಯಿಸಲು ಹಳ್ಳಿಗಳಲ್ಲಿ ಆಸ್ಪತ್ರೆ ತೆರೆಯುವ ಸಾಮಥ್ರ್ಯ ಸಕರ್ಾರಕ್ಕಿಲ್ಲ. ಒಟ್ಟಾರೆ ಬಡವರು, ಹಳ್ಳಿಗರಿಂದ ಹಿಂಡಿ ಹಣ ಗಳಿಸುವ ಸಕರ್ಾರ ಅವರ ಜೀವನ ಶೈಲಿಯನ್ನು ಬಲು ಕೆಟ್ಟದಾಗುವಂತೆ ಮಾಡಿ ಬಿಡುತ್ತದೆ. ಆಮೇಲೆ ಕಣ್ಣೀರೊರೆಸುವ ನಾಟಕ! ಚುನಾವಣೆಗಳಲ್ಲಿ ಭರವಸೆಗಳು. ಅಲ್ಲೊಂದಿಷ್ಟು ಹೆಂಡದ ಆಮಿಷ, ನೋಟು ಚೆಲ್ಲಿ ವೋಟು ಪಡೆದು ಮತ್ತೆ ಇದೇ ಚಕ್ರದ ಮುಂದುವರಿಕೆ.
ಈ ಹಂತದಲ್ಲಿಯೇ ಸಕರ್ಾರ ತೆರಿಗೆ ಕಾನೂನುಗಳನ್ನು ಬಲಗೊಳಿಸುತ್ತದೆ. ಹೊಸ ಹೊಸ ಮಾರ್ಗಗಳನ್ನು ಹುಡುಕಿ ಜನ ಗಳಿಸಿದ್ದನ್ನು ಬೊಕ್ಕಸದೆಡೆಗೆ ಸೆಳೆಯುವ ಚುಂಬಕವನ್ನು ತಯಾರಿಸುತ್ತದೆ. ಜನರೂ ಕಡಿಮೆಯಲ್ಲ. ತಾವು ರಂಗೋಲಿಯ ಕೆಳಗೆ ನುಸುಳಿಯಾದರೂ ತೆರಿಗೆ ವಂಚಿಸುತ್ತಾರೆ. ಕಪ್ಪುಹಣ ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾಗಿ ಅದು ತಾನೇ ಪಯರ್ಾಯ ಆಥರ್ಿಕ ಶಕ್ತಿಯಾಗಿ ನಿಂತುಬಿಡುತ್ತದೆ. ಆಗಲೇ ಸಕರ್ಾರಿ ವ್ಯವಸ್ಥೆಗಳು ಬಲಹೀನವಾಗಿ ಕಪ್ಪು ಹಣದ ಒಡೆಯ ಬಲಾಢ್ಯವಾಗೋದು. ಕೆಲವೆಡೆ ಠಾಣೆಯಲ್ಲಿರುವ ಪೋಲೀಸರಿಗಿಂತ ರೌಡಿಗಳನ್ನು ಸಾಕಿಕೊಂಡ ಪುಢಾರಿಯೇ ಬಲಿಷ್ಠವಾಗಿರೋದು ಇದೇ ಕೃಷ್ಣ ಸುಂದರಿಯ ಮದದಿಂದ. ಸ್ಥಳೀಯ ಮಟ್ಟದಲ್ಲಿ ಹೀಗಾದರೆ ರಾಷ್ಟ್ರಮಟ್ಟದಲ್ಲಿ ಮಾಫಿಯಾ ಡಾನುಗಳು, ತಮಗಿಷ್ಟಬಂದಂತೆ ರಾಷ್ಟ್ರವನ್ನು ನಿಯಂತ್ರಿಸುತ್ತಾರೆ. ತಮ್ಮ ಕಪ್ಪುಹಣದ ರಕ್ಷಣೆಗಾಗಿ ಅವರ ಕಪಿಮುಷ್ಟಿಗೆ ಸಿಲುಕಿರುವ ರಾಜಕಾರಣಿಗಳು, ಅಧಿಕಾರಿಗಳು, ಇವರ ತಾಳಕ್ಕೆ ಕುಣಿಯುತ್ತ ರಾಷ್ಟ್ರದ ನಿಯಮಾವಳಿಗಳನ್ನು ರೂಪಿಸುತ್ತಾರೆ. ಅವರು ಹೇಳಿದಂತೆ ಕೇಳುವ ಸಿನಿಮಾ-ಕ್ರಿಕೇಟ್ ತಾರೆಗಳು ಸಿಗುತ್ತಾರೆ. ಎಲ್ಲಕ್ಕೂ ಮೂಲ ಅದೇ ಕಪ್ಪುಹಣ.
ನವೆಂಬರ್ 8ರಂದು ನರೇಂದ್ರ ಮೋದಿಯವರು ಇಂತಹ ಅನೇಕ ದುಷ್ಟ ಶಕ್ತಿಗಳಿಗೆ ಚುರುಕು ಮುಟ್ಟಿಸಿದ್ದಾರೆ. ಇವರು ಸಕರ್ಾರದ ತಿಜೋರಿಗೆ ಕನ್ನಹಾಕಿ ಲೂಟಿ ಮಾಡಿದ್ದಷ್ಟೇ ಅಲ್ಲ, ಬಡ ಬಗ್ಗರ ಜೀವನವನ್ನು ದುಸ್ತರಗೊಳಿಸಿಬಿಟ್ಟಿದ್ದರು. ಪರಿಸ್ಥಿತಿ ಹೀಗೆಯೇ ಮುಂದುವರಿದಿದ್ದರೆ ಮುಂದಿನ ಪೀಳಿಗೆ ಪಾಕೀಸ್ತಾನಕ್ಕಿಂತಲೂ ಕೆಟ್ಟ ರೀತಿಯಲ್ಲಿ ಬದುಕಬೇಕಿತ್ತು. ಸಿರಿವಂತರೇನೋ ದೇಶ ಬಿಟ್ಟು ದೂರ ಹೋಗಿ ನೆಮ್ಮದಿಯಿಂದ ಜೀವನ ನಡೆಸಿರುತ್ತಿದ್ದರು. ಹಳ್ಳಿಗರ, ಬಡ-ಬಗ್ಗರ ಕಥೆ ಏನು? ಅದಕ್ಕಾಗಿಯೇ ಇಟ್ಟ ದಿಟ್ಟ ಹೆಜ್ಜೆ ನೋಟ್ ಬಂದಿ. ಹೆಚ್ಚು ಮುಖಬೆಲೆಯ ನೋಟುಗಳನ್ನು ಮರಳಿ ಪಡೆದು ಕೂಡಿಟ್ಟವರ ನಿದ್ದೆಗೆಡಿಸುವುದು ತನ್ಮೂಲಕ ಆಥರ್ಿಕ ಚಟುವಟಿಕೆಯನ್ನು ಚುರುಕುಗೊಳಿಸಿ ಜನಸಾಮಾನ್ಯರು ಬ್ಯಾಂಕಿಗೆ ಬಂದು ಅಧಿಕೃತವಾಗಿ ಆಥರ್ಿಕ ಸಂಪನ್ನತೆಯ ಹಕ್ಕುದಾರರಾಗುವುದು, ಇದು ಅವರ ಉದ್ದೇಶವಾಗಿತ್ತು. ಆರಂಭದ ಪ್ರಯತ್ನದಲ್ಲಿ ಜನ ಬೆಂಬಲ ನೋಡಿದರೆ ಪ್ರಧಾನ ಮಂತ್ರಿಗಳು ಯಶಸ್ವಿಯಾಗಿರುವುದಂತೂ ಸತ್ಯ. ಅದಾಗಲೇ ಬ್ಯಾಂಕಿನೊಳಗೆ ಬಂದಿರುವ 6 ಲಕ್ಷ ಕೋಟಿಗೂ ಅಧಿಕ ಹಣ ನಮ್ಮ ಬ್ಯಾಂಕುಗಳನ್ನು ಸಿರಿವಂತಗೊಳಿಸಿವೆ. ಆರು ಲಕ್ಷಕೋಟಿಯೆಂದರೆ ಸಾಮಾನ್ಯವಲ್ಲ. ಕನರ್ಾಟಕದ ಬಜೆಟ್ಟಿನ ನಾಲ್ಕು ಪಟ್ಟಿಗೂ ಅಧಿಕ. ಪ್ರತೀ ವರ್ಷದ ನಮ್ಮ ವಿತ್ತೀಯ ಕೊರತೆ ಸರಿಸುಮಾರು ಇಷ್ಟೇ ಪ್ರಮಾಣದ್ದು. ಇನ್ನೂ ಒಳಗೆ ಬರಬೇಕಾಗಿರುವ ಹಣ ಕನಿಷ್ಠ ಸುಮಾರು 8 ಲಕ್ಷ ಕೋಟಿ. ಅಂದರೆ ಈ ವರ್ಷ ವಿತ್ತೀಯ ಕೊರತೆ ಇಲ್ಲದ ಬಜೆಟ್ಟು ಮಂಡಿಸಬಹುದು ಅಥವಾ ವಿತ್ತೀಯ ಕೊರತೆಯ ಪ್ರಮಾಣ ಹಿಂದೆಂದಿಗಿಂತಲೂ ಕಡಿಮೆಯಾದೀತು. ಅದರ ಲಾಭವೇನು? ಎಂಬ ಪ್ರಶ್ನೆಗೆ ಈ ಲೇಖನ ಮತ್ತೊಮ್ಮೆ ಓದಿ. ವಿತ್ತೀಯ ಕೊರತೆಯಿಂದ ಆಗುತ್ತಿದ್ದ ತೊಂದರೆಗಳೆಲ್ಲ ಕಾಣೆಯಾಗಿ ಕ್ರಮೇಣ ಬದಲಾವಣೆ ಕಂಡುಬರಲಿದೆ. ಅಂದರೆ ಬಡವನ ಜೀವನ ಹಿಂದೆಂದಿಗಿಂತಲೂ ಸುಭಿಕ್ಷವಾಗಲಿದೆ. ಅತಿಶಯೋಕ್ತಿ ಎನಿಸಿದರೂ ಸರಿಯೆ ಚಂದ್ರಗುಪ್ತನ ಕಾಲ ಮರುಕಳಿಸಿದರೆ ಅಚ್ಚರಿಯಿಲ್ಲ.
ಎಲ್ಲದರ ನಡುವೆ ಒಂದು ಪ್ರಶ್ನೆ ಹಾಗೆಯೇ ಉಳಿಯಿತು. ದೊಡ್ಡ ಮೌಲ್ಯದ ನೋಟುಗಳಿಗೆ ಬಂಧನ ಹೇರುವುದರಿಂದ ಆಥರ್ಿಕತೆ ಸುಧಾರಿಸುವುದು ಹೇಗೆ? ಹಾಗಿದ್ದರೆ ಅದನ್ನು ಚಲಾವಣೆಗೆ ತಂದಿದ್ದಾದರೂ ಏಕೆ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s