ಮೂಗು ಹಿಡಿದರೆ ಬಾಯಿ ಬಿಡಲೇಬೇಕು!

ಮೂಗು ಹಿಡಿದರೆ ಬಾಯಿ ಬಿಡಲೇಬೇಕು!

ಕೂಡಿಟ್ಟ ಕಪ್ಪುಹಣದ ಬಲುದೊಡ್ಡ ಸಮಸ್ಯೆ ಇದು. ಈ ಹಣವನ್ನು ಯಾರಿಗೂ ತೋರುವಂತಿಲ್ಲ, ಹಾಗೆಂದು ಬಳಸದೇ ಇರುವಂತೆಯೂ ಇಲ್ಲ. ಅದಕ್ಕೇ ದೊಡ್ಡ ಮನೆ ಕಟ್ಟಲು, ಐಷಾರಾಮಿ ಕಾರು ಕೊಳ್ಳಲು, ಅತ್ಯಾಕರ್ಷಕ ಸೋಫಾ-ಟೀವಿಗಳ ಖರೀದಿಗೆಲ್ಲ ಇದನ್ನು ಬಳಸಿ ಆನಂದಿಸಿಬಿಡುತ್ತಾರೆ. ಯಾವುದಾದರೂ ಉದ್ದಿಮೆಯಲ್ಲಿ ತೊಡಗಿಸಿದರೆ ಸಕರ್ಾರಕ್ಕೆ ಲೆಕ್ಕ ಕೊಡಬೇಕಾದೀತೆಂದು ಈ ಹಣವನ್ನು ಆಥರ್ಿಕ ಚಟುವಟಿಕೆಯಲ್ಲಿ ಹೂಡದೇ ಅದಕ್ಕೆ ಮತ್ತೆ ಬ್ಯಾಂಕುಗಳ ಬಳಿ ಸಾಲ ಕೇಳುತ್ತಾರೆ ಮನೆಯೊಳಗೆ ಕೊಳೆತು ನಾರುವಷ್ಟು ಹಣವಿದ್ದರೂ ಕೊನೆಗೊಂದು ದಿನ ಬ್ಯಾಂಕಿನೆದುರು ಸಾಲ ಕಟ್ಟಲಾಗದೆಂದು ಸಾಲ ಮನ್ನಾಕ್ಕೆ ಬೇಡಿಕೆ ಇಡುತ್ತಾರೆ.

21

ರೈತರು ಆತ್ಮಹತ್ಯೆ ಮಾಡಿಕೊಳ್ಳೋಕೆ ಮಳೆಯಿಲ್ಲ ಎನ್ನುವುದು ಕಾರಣವೇ ಅಲ್ಲ. ಬೆಳೆಯಾಗಿಲ್ಲ ಅನ್ನೋದೂ ಅಲ್ಲ. ಉತ್ತರ ಕನರ್ಾಟಕದಲ್ಲಿ ಕಬ್ಬು ಬಂಗಾರದಂತೆ ಬೆಳೆದು ನಿಂತರೂ ರೈತ ಬೀದಿಗೆ ಬಂದು ನಿಂತಿರುತ್ತಾನೆ, ಸೂಕ್ತ ಬೆಲೆ ಸಿಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಏಕೆ? ಬಲು ಸರಳ. ಕಬ್ಬಿನ ಉತ್ಪಾದನಾ ವೆಚ್ಚಕ್ಕಿಂತ ಖರೀದಿಯ ಬೆಲೆ ಕಡಿಮೆ. ರೈತ ಹೇಳಿದಷ್ಟೂ ಹಣ ಕೊಟ್ಟು ಕೊಂಡರೆ ಸಕ್ಕರೆ ಬೆಲೆ ವಿಪರೀತ. ಅದರಿಂದ ಗಗನ ಮುಟ್ಟುವ ಹಣದುಬ್ಬರ, ಸಾಮಾನ್ಯನ ಬದುಕು ದುಸ್ತರ. ಹಣದುಬ್ಬರ ಹೆಚ್ಚಿದಂತೆ ರೂಪಾಯಿಯ ಮೌಲ್ಯ ಕುಸಿಯುತ್ತದೆ, ಸಾಲದ ಬಡ್ಡಿಯ ದರ ಹೆಚ್ಚುತ್ತದೆ. ಸಹಜವಾಗಿಯೇ ರೈತನ ಬಂಡವಾಳದ ಬೆಲೆ ಹೆಚ್ಚುವುದರಿಂದ ಆತನ ಬೆಳೆಯ ಬೆಲೆ ಹೆಚ್ಚುತ್ತಲೇ ಹೋಗುತ್ತದೆ. ಇದೊಂದು ವಿಷಚಕ್ರ. ಈ ಚಕ್ರದಿಂದ ಪಾರಾಗಲು ರೈತ ಆರಿಸಿಕೊಳ್ಳುವ ಮಾರ್ಗ ಆತ್ಮಹತ್ಯೆ. ನೆನಪಿಡಿ. ಒಂದು ದಿನ ಇದೇ ಬಗೆಯ ದುಶ್ಚಕ್ರಕ್ಕೆ ದೇಶವೇ ಸಿಲುಕಲಿದೆ. ಆಗ ದಾರಿ ಏನು? ಜಿಂಬಾಬ್ವೆಯಂತಹ ರಾಷ್ಟ್ರಗಳು ದಿವಾಳಿಯೆದ್ದು ಹೋಗಿದ್ದು ಹೀಗೆಯೇ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮುಂದಾಗಬಹುದಾದ ತೊಂದರೆಯನ್ನು ಈಗಲೇ ಊಹಿಸಿ ಇಟ್ಟಿರುವ ನೋಟುಬಂದಿಯ ಹೆಜ್ಜೆ ಈ ದೃಷ್ಟಿಯಿಂದ ಬಲು ಮಹತ್ವದ್ದು.
ಈ ಯೋಜನೆ ಘೋಷಣೆಯಾದ ಮುವ್ವತ್ತೇ ದಿನದಲ್ಲಿ ಬ್ಯಾಂಕಿಗೆ ಹರಿದು ಬಂದ ಹನ್ನೊಂದು ಲಕ್ಷ ಕೋಟಿ ರೂಪಾಯಿ ಯಾವುದರ ಸಂಕೇತ ಗೊತ್ತೇನು? ರೈತನ, ಉದ್ಯಮಿಯ, ಸ್ಟಾಟರ್್ ಅಪ್ ಕನಸು ಹೊತ್ತ ತರುಣನ, ಅಧ್ಯಯನ ಶೀಲನ ಭವಿಷ್ಯಕ್ಕೆ ಸಾಲವಾಗಿ ಬಳಕೆಯಾಗಬೇಕಿದ್ದ ಹಣ ಮನೆ-ಮನೆಗಳಲ್ಲಿ ಕೊಳೆಯುತ್ತಿದ್ದುದರ ಸಂಕೇತ. ಬ್ಯಾಂಕಿನ ವಿಶೇಷತೆ ಏನು ಗೊತ್ತಾ? ನಾವು ಇಟ್ಟ ಹಣವನ್ನು ನಾಲ್ಕು ಪಟ್ಟು, ಎಂಟು ಪಟ್ಟು ಮಾಡುವ ಸಾಮಥ್ರ್ಯ ಅದಕ್ಕಿದೆ. ಅರ್ಥವಾಗಲಿ ಅಂತ ಹೇಳುವೆ. 2 ಸಾವಿರ ರೂಪಾಯಿಗಳನ್ನು ನಾನು ಬ್ಯಾಂಕಿನಲ್ಲಿ ಠೇವಣಿಯಾಗಿರಿಸಿದರೆ, ಬ್ಯಾಂಕು ರಿಸವರ್್ ಬ್ಯಾಂಕಿನಲ್ಲಿ 200 ರೂಪಾಯಿ (ಅಂದಾಜು 10%)ಯನ್ನು ಕ್ಯಾಶ್ ರಿಸವರ್್ ಆಗಿಟ್ಟು ಉಳಿದ 1800 ರೂಗಳನ್ನು ಮತ್ತೊಬ್ಬರಿಗೆ ಸಾಲ ನೀಡಲು ಬಳಸುತ್ತದೆ. ಹೀಗೆ ಕೊಟ್ಟ ಸಾಲ ನಗದಿನಲ್ಲಿರದೇ ಚೆಕ್ ರೂಪದಲ್ಲಿರುವುದರಿಂದ ಅದನ್ನು ಪಡೆದವ ಮತ್ತೆ ಬ್ಯಾಂಕಿಗೇ ಅದನ್ನು ಮರಳಿಸುತ್ತಾನೆ. ಅದು ಈಗ ಬ್ಯಾಂಕಿನಲ್ಲಿ ಹೊಸ ಠೇವಣಿಯಾಗುತ್ತದೆ. ಇದರಲ್ಲಿ ಶೇಕಡ 10ನ್ನು ರಿಸವರ್್ ಕ್ಯಾಶ್ ಆಗಿ ಬ್ಯಾಂಕು ಉಳಿಸಿ ಉಳಿದ 1620 ರೂಗಳನ್ನು ಮತ್ತೊಬ್ಬರಿಗೆ ಸಾಲವಾಗಿ ಕೊಡುತ್ತದೆ. ಹೀಗೆ ರಿಸವರ್್ ಬ್ಯಾಂಕಿನಲ್ಲಿಟ್ಟ ಕ್ಯಾಶ್ ರಿಸವರ್್ 2000 ರೂಗಳಾಗುವವರೆಗೆ ಪ್ರಕ್ರಿಯೆ ಮುಂದುವರಿಯುತ್ತದೆ. ಅಲ್ಲಿಗೆ ಒಟ್ಟಾರೆ ಠೇವಣಿ 20 ಸಾವಿರಗಳಾಗುತ್ತದೆ. ಸರಳವಾಗಿ ಹೇಳಬೇಕೆಂದರೆ ನಾವಿಟ್ಟ 2 ಸಾವಿರ ರೂಪಾಯಿ 20 ಸಾವಿರ ರೂಪಾಯಿಗಳಾಗಿ ದೇಶದ ಬೆಳವಣಿಗೆಗೆ ಮಾಧ್ಯಮವಾಗುತ್ತದೆ. ಇತ್ತೀಚೆಗೆ ಆಥರ್ಿಕ ತಜ್ಞರೊಬ್ಬರು ಹೇಳಿದ ಪ್ರಕಾರ ದೇಶದ 85 ಪ್ರತಿಶತ ಹಣ ಬ್ಯಾಂಕಿಗೆ ಬರದೇ ಹೊರಗೇ ಇರುವಾಗಲೇ ನಮ್ಮ ಬ್ಯಾಂಕುಗಳಲ್ಲಿರುವ ಒಟ್ಟಾರೆ ಠೇವಣಿ ಇಂದು 97 ಲಕ್ಷ ಕೋಟಿ ರೂಪಾಯಿ ಆಗಿ ವಹಿವಾಟಿನಲ್ಲಿದೆ. ಇನ್ನು ದೇಶದ ಅಷ್ಟೂ ಮುದ್ರಿತ ಹಣ ಬ್ಯಾಂಕಿಗೇ ಬರುವುದು ನಿಶ್ಚಿತವಾದರೆ ದೇಶದ ಅಭಿವೃದ್ಧಿ ಪಥದ ದೃಶ್ಯ ಹೇಗಿರಬಹುದು. ಈಗಾಗಲೇ ಒಳ ಬಂದಿರುವ 11 ಲಕ್ಷ ಕೋಟಿಯಷ್ಟು ಹಣ ಮುಂದಿನ ನಾಲ್ಕಾರು ವರ್ಷಗಳಲ್ಲಿ ಮುವ್ವತ್ತು-ನಲವತ್ತು ಲಕ್ಷ ಕೋಟಿಯಷ್ಟಾಗುವುದೆಂದಾದರೆ ಎಷ್ಟು ಜನರಿಗೆ ಕಡಿಮೆ ಬಡ್ಡಿಯ ಸಾಲ ದೊರೆಯಬಹುದೆಂದು ಒಂದು ಕ್ಷಣ ಆಲೋಚಿಸಿ. ಈಗಾಗಲೇ ರೆಪೊ ದರದ ಕುರಿತಂತೆ ಚಿಂತನೆ ನಡೆಸಿರುವ ಆರ್ಬಿಐ ಸದ್ಯದಲ್ಲಿ ದೊಡ್ಡ ಪ್ರಮಾಣದ ಘೋಷಣೆಗೆ ಅಣಿಯಾಗುತ್ತಿದೆ!

22
ವಾಜಪೇಯಿಯವರ ಕಾಲದಲ್ಲಿ ಅತಿ ಕಡಿಮೆ ಬಡ್ಡಿ ದರಕ್ಕೆ ಸಾಲ ಸಿಗುತ್ತಿದ್ದುದು, ಬ್ಯಾಂಕ್ ಮ್ಯಾನೇಜರ್ಗಳು ಮನೆಗೇ ಬಂದು ‘ಸಾಲ ಬೇಕೇ?’ ಎಂದು ಕೇಳುತ್ತಿದ್ದುದನ್ನೆಲ್ಲಾ ನೆನಪಿಸಿಕೊಳ್ಳಿ. ಆಗ ಹಣದುಬ್ಬರ ಅತಿ ಕಡಿಮೆ ಮಟ್ಟದಲ್ಲಿತ್ತು. ಜಿಡಿಪಿ ದರ ಈಗಿನದ್ದಕ್ಕಿಂತ ಸಾಕಷ್ಟು ಕಡಿಮೆಯಿದ್ದರೂ ಆಥರ್ಿಕ ಚಟುವಟಿಕೆಗಳು ಏರುಗತಿಯಲ್ಲಿದ್ದವು. ಉದ್ಯೋಗಗಳು ದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾಗಿದ್ದವು. ಚಿದಂಬರಂ ಕಾಲದಲ್ಲಿ ಜಿಡಿಪಿ ವೃದ್ಧಿಯಾದರೂ ಉದ್ಯೋಗ ಸೃಷ್ಟಿಯಾಗಲಿಲ್ಲವೇಕೆಂದರೆ ಆಥರ್ಿಕ ಚಟುವಟಿಕೆಗಳೆಲ್ಲ ವೈಯಕ್ತಿಕ ಸಂಪತ್ತು ವೃದ್ಧಿಸುವ ರಿಯಲ್ ಎಸ್ಟೇಟ್ ಅಭಿವೃದ್ಧಿಯಲ್ಲಿ ಕ್ರೋಢೀಕರಣಗೊಂಡಿದ್ದವು. ಶೇರ್ ಮಾರುಕಟ್ಟೆಯಲ್ಲಿ ಪಾಟರ್ಿಸಿಪೇಟರಿ ನೋಟುಗಳ ಮೂಲಕ ಬೆಳಕು ಕಂಡಿದ್ದವು ಮತ್ತು ಚಿನ್ನ-ಜಮೀನುಗಳ ಖರೀದಿಯಲ್ಲೇ ಪರ್ಯವಸಾನ ಗೊಂಡಿದ್ದವು. ಒಟ್ಟಿನಲ್ಲಿ ಕಪ್ಪುಹಣ, ಕಪ್ಪು ಸಂಪತ್ತಾಗಿ ಸಾಕಷ್ಟು ಪ್ರಮಾಣದಲ್ಲಿ ಪರಿವರ್ತನೆಯಾಗಿಬಿಟ್ಟಿತ್ತು! ಈ ಹಂತದಲ್ಲಿಯೇ ಇವೆಲ್ಲಕ್ಕೂ ಸೂಕ್ತ ಕಡಿವಾಣ ಹಾಕದಿದ್ದರೆ ಬೇಕು ಬೇಕೆನ್ನುವ ಚಟದ ಕೊಳ್ಳು ಬಾಕಗಳು ಬಡವರ, ಮಧ್ಯಮವರ್ಗದವರ ಬದುಕನ್ನು ದುಸ್ತರಗೊಳಿಸಿಬಿಡುತ್ತಿದ್ದರು.
ಖಂಡಿತ ಸುಳ್ಳಲ್ಲ. ಕಳೆದ ಹತ್ತು ವರ್ಷಗಳಲ್ಲಿ ರಿಯಲ್ ಎಸ್ಟೇಟ್ ಧಂಧೆ ಭೂತಾಕಾರವಾಗಿ ಬೆಳೆದು ನಿಂತು ಜಮೀನಿನ ಬೆಲೆ ಶೇಕಡಾ 300 ರಿಂದ 400 ರವರೆಗೂ ವೃದ್ಧಿಯಾಯ್ತು. ಚಿನ್ನದ ಬೆಲೆಯೂ ಸಾಮಾನ್ಯರು ಕೊಳ್ಳಲಾಗದಷ್ಟು ಮಟ್ಟಕ್ಕೆ ಹೋಯ್ತು. ಕೋಟಿಗಳ ಮೌಲ್ಯದ ಮನೆಗಳೂ ಮಾರಾಟಕ್ಕೆ ಬಂದವು. ಹೀಗೆ ಕೊಳ್ಳುವಾಗ ಅರ್ಧ ಹಣ ಸಕರ್ಾರಕ್ಕೆ ಗೊತ್ತಾಗುವಂತೆ ಕೊಟ್ಟರೆ ಉಳಿದರ್ಧ ಅರಿವಿಗೇ ಬರದಂತೆ ನೀಡುವ ಕಪ್ಪು ಹಣವಾಗಿರುತ್ತಿತ್ತು!
ಕೂಡಿಟ್ಟ ಕಪ್ಪುಹಣದ ಬಲುದೊಡ್ಡ ಸಮಸ್ಯೆ ಇದು. ಈ ಹಣವನ್ನು ಯಾರಿಗೂ ತೋರುವಂತಿಲ್ಲ, ಹಾಗೆಂದು ಬಳಸದೇ ಇರುವಂತೆಯೂ ಇಲ್ಲ. ಅದಕ್ಕೇ ದೊಡ್ಡ ಮನೆ ಕಟ್ಟಲು, ಐಷಾರಾಮಿ ಕಾರು ಕೊಳ್ಳಲು, ಅತ್ಯಾಕರ್ಷಕ ಸೋಫಾ-ಟೀವಿಗಳ ಖರೀದಿಗೆಲ್ಲ ಇದನ್ನು ಬಳಸಿ ಆನಂದಿಸಿಬಿಡುತ್ತಾರೆ. ಯಾವುದಾದರೂ ಉದ್ದಿಮೆಯಲ್ಲಿ ತೊಡಗಿಸಿದರೆ ಸಕರ್ಾರಕ್ಕೆ ಲೆಕ್ಕ ಕೊಡಬೇಕಾದೀತೆಂದು ಈ ಹಣವನ್ನು ಆಥರ್ಿಕ ಚಟುವಟಿಕೆಯಲ್ಲಿ ಹೂಡದೇ ಅದಕ್ಕೆ ಮತ್ತೆ ಬ್ಯಾಂಕುಗಳ ಬಳಿ ಸಾಲ ಕೇಳುತ್ತಾರೆ ಮನೆಯೊಳಗೆ ಕೊಳೆತು ನಾರುವಷ್ಟು ಹಣವಿದ್ದರೂ ಕೊನೆಗೊಂದು ದಿನ ಬ್ಯಾಂಕಿನೆದುರು ಸಾಲ ಕಟ್ಟಲಾಗದೆಂದು ಸಾಲ ಮನ್ನಾಕ್ಕೆ ಬೇಡಿಕೆ ಇಡುತ್ತಾರೆ.
ಕಪ್ಪುಹಣವನ್ನು ಹೂಡಲೇ ಬೇಕೆಂದವರು ಶೇರು ಮಾರುಕಟ್ಟೆಗೆ ನುಗ್ಗುತ್ತಾರೆ. ಅದೂ ಎಷ್ಟು ಸಲೀಸು ಗೊತ್ತೇ? ಇಲ್ಲಿರುವ ಕ್ರೋಢೀಕೃತ ಹಣವನ್ನು ಹವಾಲಾ ಏಜೆಂಟುಗಳ ಕೈಲಿ ಕೊಟ್ಟರೆ ಅವರು ಅಮೇರಿಕಾದಲ್ಲೋ ಯೂರೋಪಿನಲ್ಲೋ ಅದಕ್ಕೆ ಸಮಾನವಾದ ಡಾಲರುಗಳನ್ನು ನಿಮ್ಮ ಕೈಲಿಡುತ್ತಾರೆ. ಈ ಹಣವನ್ನು ಅಲ್ಲಿರುವ ಹೂಡಿಕೆದಾರ ಸಂಸ್ಥೆಗಳ ಕೈಲಿಟ್ಟು ಅವರಿಂದ ಅಷ್ಟು ಹಣದ ಪಾಟರ್ಿಸಿಪೇಟರಿ ನೋಟೆಂಬ ಹೆಸರು-ವಿಳಾಸ-ಗುರುತು ಯಾವುದೂ ಇಲ್ಲದ ಹಣದ ಸಂಖ್ಯೆಯಷ್ಟೇ ದಾಖಲಾಗಿರುವ ಹಾಳೆ ತಂದರಾಯ್ತು. ಅದನ್ನು ದೇಶದ ಸ್ಟಾಕ್ ಮಾರುಕಟ್ಟೆಗೆ ತಂದು ಯಾವ ಕಂಪನಿಯ ಮೇಲೆ ಬೇಕಿದ್ದರೂ ಹೂಡಬಹುದು! ಕಷ್ಟಪಟ್ಟು ದುಡಿದು ಹಣ ಹೂಡುವ ದೇಶದ ಸಾಮಾನ್ಯ ಪ್ರಜೆ ಪ್ಯಾನ್ ಕಾಡರ್್ ಕೊಡಬೇಕು, ತನ್ನ ಬ್ಯಾಂಕ್ ದಾಖಲೆಗಳನ್ನು ಸೆಬಿಗೆ ತೋರಿಸಬೇಕು. ಆದರೆ ದೇಶದ ಸಂಪತ್ತು ಲೂಟಿ ಮಾಡಿ ವಿದೇಶಕ್ಕೊಯ್ದು ಹಣ ಮರಳಿ ತರುವ ಈ ಅಯೋಗ್ಯರು ತಮ್ಮ ಹೆಸರೂ ನಮೂದಿಸಿರದ ಬಿಳಿ ಹಾಳೆ ತಂದು ಹಣ ಹೂಡಬಹುದು. ಈ ಹಣವನ್ನು ಅಮೇರಿಕಾ-ಯೂರೋಪುಗಳಿಂದ ತಂದು ಹೂಡಿದರೆ, ಹಣ ಮರಳಿ ಪಡೆವಾಗ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಆದರೂ ಕಟ್ಟಬೇಕು. ಅದನ್ನೂ ಬೈಪಾಸ್ ಮಾಡಲೆಂದು ಮಾರಿಶಸ್ ದೇಶದೊಂದಿಗೆ ಒಪ್ಪಂದ ಮಾಡಿಕೊಂಡ ಭಾರತ ಅಲ್ಲಿನ ಕಂಪನಿಗಳ ಮುಖಾಂತರ ಹೂಡಿದರೆ ತೆರಿಗೆ ಕಟ್ಟುವ ಅಗತ್ಯವಿಲ್ಲವೆಂದಿತು. ಸರಳವಾಗಿ ಹೇಳಬೇಕೆಂದರೆ ದೇಶಕ್ಕೆ ಮೋಸ ಮಾಡಿ ಕೂಡಿಟ್ಟ ಕಪ್ಪುಹಣವನ್ನು ಹವಾಲಾದ ಮೂಲಕ ವಿದೇಶಕ್ಕೊಯ್ದು ಡಾಲರುಗಳಾಗಿ ಪರಿವತರ್ಿಸಿಕೊಳ್ಳಿ. ಮೊದಲೇ ತೆರಿಗೆ ವಂಚಿಸಿದ ಕಳ್ಳ ಹಣ. ಇದನ್ನು ತೆರಿಗೆ ವಂಚಿಸಿಯೇ ವಿದೇಶಕ್ಕೊಯ್ದರು. ಅಲ್ಲಿಂದ ಮಾರಿಶಸ್ಗೆ ತಂದು ಈ ಹಣವನ್ನು ಅಲ್ಲಿನ ಕಂಪನಿಯ ಮೂಲಕ ಭಾರತದ ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಬಿಟ್ಟರು. ನೆನಪಿಡಿ. ಶೇರ್ಗಳಲ್ಲಿ ಹೂಡಿದ ಹಣ ನಿಜವಾದ ಆಥರ್ಿಕ ಚಟುವಟಿಕೆಗೆ ಬರುವುದೇ ಇಲ್ಲ ಮತ್ತು ಹೀಗೆ ಹೂಡುವ ಕಾಳಧಂಧೆಕೋರರು ನಮ್ಮ ಬ್ಯಾಂಕುಗಳ ಮೂಲಕ ನಿಜ ಹಣವನ್ನೂ ಹೂಡುವುದಿಲ್ಲ. ಪಾಟರ್ಿಸಿಪೇಟರಿ ನೋಟುಗಳನ್ನು ತರುತ್ತಾರೆ, ಮಧ್ಯಮ ವರ್ಗದವರ ಬಿಳಿ ಹಣದೊಂದಿಗೆ ಪರಾರಿಯಾಗಿಬಿಡುತ್ತಾರೆ! ಹೀಗೆ ಪಡಕೊಂಡ ಹಣಕ್ಕೆ ತೆರಿಗೆ ಕಟ್ಟದೇ ಅಲ್ಲೂ ದೇಶವನ್ನು ವಂಚಿಸುತ್ತಾರೆ! ಇಂತಹ ವಂಚನೆಯ ಮಹಾ ಯೋಜನೆ ರೂಪುಗೊಂಡಿದ್ದು ಮಾಜಿ ವಿತ್ತ ಸಚಿವ ಚಿದಂಬರಂ ತಲೆಯಲ್ಲಿ.
ಹೂಡಿಕೆಗಳ ಮೇಲೆ ನಿಗಾ ಇಟ್ಟು ನಿಯಂತ್ರಿಸುವ ಸೆಬಿಗೆ ಈ ಪಾಟರ್ಿಸಿಪೇಟರಿ ನೋಟುಗಳನ್ನು ತಂದು ದುಡ್ಡು ಸುರಿದವರಾರೆಂಬ ಸಾಮಾನ್ಯ ಮಾಹಿತಿಯೂ ಇರುವುದಿಲ್ಲ. ಕಳೆದ ಒಂದು ದಶಕದಲ್ಲಿ ಸೆಬಿಯ ಎಲ್ಲಾ ಪ್ರತಿಭಟನೆಯನ್ನೂ ಲೆಕ್ಕಿಸದೇ ಕೆಲವರ ಅನುಕೂಲಕ್ಕಾಗಿ ಸಕರ್ಾರ ದೇಶದ ಹಣವನ್ನು ಲೂಟಿ ಮಾಡಿದ ಪರಿ ಇದು. ಇದೇ ಮಾರ್ಗವನ್ನು ಬಳಸಿಕೊಂಡು ಹವಾಲಾದ ಮೂಲಕ ಭಯೋತ್ಪಾದಕರಿಗೂ ಹಣ ಪೂರೈಕೆ ಮಾಡಲಾಗುತ್ತಿದೆ ಎಂದು ನ್ಯಾಶನಲ್ ಸೆಕ್ಯುರಿಟಿ ಏಜೆನ್ಸಿ ಕಂಪ್ಲೇಂಟ್ ಮಾಡಿದ ಮೇಲೂ ಬದಲಾವಣೆಗೆ ಕೇಂದ್ರ ಒಪ್ಪಲೇ ಇಲ್ಲ. ನೆನಪಿಡಿ. ಭಯೋತ್ಪಾದನೆಗೆ ನೂರಾರು ಕೋಟಿ ಬೇಕಿಲ್ಲ. ಕಸಬ್ ನೀಡಿರುವ ಹೇಳಿಕೆಯ ಪ್ರಕಾರ ಮುಂಬೈ ದಾಳಿಯ ಇಡೀ ಯೋಜನೆಗೆ ಒಬ್ಬ ಭಯೋತ್ಪಾದಕನಿಗೆ ಖಚರ್ಾದ ಒಟ್ಟೂ ಹಣ 4000 ಡಾಲರುಗಳು ಮಾತ್ರ. ಅಂದರೆ ಇಷ್ಟು ಹಣದಲ್ಲಿ ಅವರು 160 ಕ್ಕೂ ಹೆಚ್ಚು ಜನರನ್ನು ಕೊಂದರು. 300ಕ್ಕೂ ಹೆಚ್ಚು ಜನ ಗಾಯಾಳುಗಳಾದರು. 120 ಬಿಲಿಯನ್ ಡಾಲರುಗಳಷ್ಟು ಹಣ ಭಾರತಕ್ಕೆ ಹೊರೆಯಾಯ್ತು. ಅರ್ಥ ಬಲು ಸ್ಪಷ್ಟ ಹವಾಲಾದ ಒಂದೊಂದು ರೂಪಾಯಿಯೂ ಭಾರತದ ನಾಶಕ್ಕೆ ಷರಾ ಬರೆಯುವಂಥದ್ದೇ. ಸೆಪ್ಟೆಂಬರ್ 11ರ ದಾಳಿಯ ನಂತರ ಅಮೇರಿಕದಲ್ಲಿ ಭಯೋತ್ಪಾದಕರು ಬಾಲ ಬಿಚ್ಚದಿರಲು ಕಾರಣವೇನು ಗೊತ್ತೇನು? ಅವರು ಭಯೋತ್ಪಾದನೆಗೆ ಒದಗುತ್ತಿದ್ದ ಹಣದ ಮೂಲವನ್ನೇ ತುಂಡರಿಸಿಬಿಟ್ಟಿದ್ದಾರೆ (ಅಠಟಛಚಿಣ ಜಿಟಿಚಿಟಿಛಿಟಿರ ಠಜಿ ಣಜಡಿಡಿಠಡಿಟ).ಭಯೋತ್ಪಾದನೆಯ ವಿರುದ್ಧ ಹೋರಾಡಿದಷ್ಟೇ ದೊಡ್ಡ ಸವಾಲು ಇದು. ಭಾರತ ಇದರಲ್ಲಿ ಸತತವಾಗಿ ಸೋಲುತ್ತಲೇ ಬಂದಿದೆ ಏಕೆಂದರೆ ಆಳುವ ನಾಯಕರಿಗೆ ತಮ್ಮ ಕಪ್ಪುಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿ ಹಣಗಳಿಸುವ ತವಕ. ಅದಕ್ಕಾಗಿ ದೇಶವನ್ನೇ ಬಲಿಕೊಟ್ಟರೂ ಸರಿಯೇ. ನವೆಂಬರ್ 8ರ ನಂತರ ಒಂದು ರೂಪಾಯಿಯ ಹಣ ಅತ್ತಿಂದಿತ್ತ ಹವಾಲಾದ ಮೂಲಕ ಸಂಚರಿಸಿಲ್ಲ. ನರೇಂದ್ರ ಮೋದಿ ಭಯೋತ್ಪಾದನೆಯ ಬುಡಕ್ಕೇ ಕೊಳ್ಳಿ ಇಟ್ಟಿದ್ದಾರೆ. ವಿದೇಶೀ ಕಂಪನಿಗಳ ಮೂಲಕ ಹಣ ಹೂಡುತ್ತಿದ್ದ ಕೆಲವು ಧೂರ್ತರಿಗೂ ಕಣ್ಣೀರು ತರಿಸಿದ್ದಾರೆ.
ಒಟ್ಟಾರೆ ಅನಗತ್ಯ ವೆಚ್ಚಕ್ಕೆ ಬಳಕೆಯಾಗುವ, ಹವಾಲಾದ ಮೂಲಕ ವಿದೇಶಕ್ಕೆ ಓಡಿ ಹೋಗುವ, ಮರಳಿ ಪಾಟರ್ಿಸಿಪೇಟರಿ ನೋಟುಗಳ ಮೂಲಕ ಗವಾಕ್ಷೀಲಿ ನುಗ್ಗುವ ಈ ಕಪ್ಪುಹಣ, ಕೆಲವೊಮ್ಮೆ ದಾವೂದ್ ಇಬ್ರಾಹೀಂರಂಥವರ ಮೂಲಕ ದುಬೈ ಮಾರ್ಗವಾಗಿ ವಿದೇಶೀ ಬ್ಯಾಂಕುಗಳಲ್ಲಿ ಶೇಖರವಾಗುತ್ತವೆ. ನಮ್ಮನ್ನು ಲೂಟಿ ಮಾಡಿದ ದುಡ್ಡಿನಲ್ಲಿಯೇ ನಮ್ಮ ದೇಶದ ಬಲುದೊಡ್ಡ ಶತ್ರು ಐಷಾರಾಮಿ ಬದುಕನ್ನು ಬದುಕುತ್ತಿದ್ದಾನೆ. ಇದಕ್ಕೆಲ್ಲವೂ ಮೂಲ ಸ್ರೋತವೇ ಈ ಕ್ರೋಢೀಕೃತ ಕಪ್ಪುಹಣ. ನರೇಂದ್ರಮೋದಿಯವರು ನವೆಂಬರ್ 8ರಂದು ನೋಟು ಬ್ಯಾನ್ ಮಾಡಿದಾಗ ಜನ ಸಾಮಾನ್ಯರಿಗೆ ತೊಂದರೆಯೆಂದು ಬೀದಿಗಿಳಿದವರು ಅನೇಕರಿದ್ದರಲ್ಲ, ವಾಸ್ತವವಾಗಿ ಅಂದಿನಿಂದ ಇಂದಿನವರೆಗೂ ಜನತೆ ಅನುಭವಿಸಿದ ಕಷ್ಟ ನಗಣ್ಯ. ಕಪ್ಪುಹಣ ತನ್ಮೂಲಕ ಕಪ್ಪು ಸಂಪತ್ತಿನ ಒಡೆಯರಾಗಿ ಮೆರೆದಿದ್ದವರೆಲ್ಲ ವಿಲವಿಲ ಒದ್ದಾಡುತ್ತಿದ್ದಾರೆ. ಅವರ ಸಂಕಟ ಹೇಳತೀರದು.

23
ಒಂದೇ ಕ್ಷಣ ಯೋಚನೆ ಮಾಡಿ ನೋಡಿ. ನೋಟ್ ಬ್ಯಾನ್ ಆಗುವುದರೊಂದಿಗೆ ಕಾಶ್ಮೀರದಲ್ಲಿ ಸೈನಿಕರಿಗೆ ಕಲ್ಲೆಸೆಯುತ್ತಿದ್ದ ತರುಣರು ಬೀದಿಗೆ ಬರುತ್ತಲೇ ಇಲ್ಲ. ಬ್ಯಾಂಕಿಗೆ ಹೋಗಿ ಯಾರೂ ತಮ್ಮ ನೋಟುಗಳನ್ನು ಬದಲಾಯಿಸಿಕೊಳ್ಳಬಾರದೆಂದು ಭಯೋತ್ಪಾದಕರು ಆಜ್ಞೆ ಮಾಡಿದ ನಂತರವೂ ಅಲ್ಲಿನ ತರುಣರು ಬ್ಯಾಂಕಿನ ಹೊರಗೆ, ಎಟಿಎಂ ಗಳ ಹೊರಗೆ ಜಮಾಯಿಸಿ ಸಕರ್ಾರದ ವ್ಯವಸ್ಥೆಯೊಂದಿಗೆ ನಿಲ್ಲುವ ಛಾತಿ ತೋರಿದರಲ್ಲ ಏಕೆ? ಭಯೋತ್ಪಾದನೆಯಿಂದ ಬೆಂದು ಮುಚ್ಚಿದ್ದ ಶಾಲೆಗಳು ತೆರೆದು ಪರೀಕ್ಷೆ ನಡೆಸಿದಾಗ ಹಿಂದಿನ ಎಲ್ಲಾ ರೆಕಾಡರ್ುಗಳನ್ನು ಮುರಿದು 92% ವಿದ್ಯಾಥರ್ಿಗಳು ಪರೀಕ್ಷೆ ಬರೆದರಲ್ಲ, ಏಕೆ? ನಾವು ಪ್ರವಾಸಿಗರನ್ನು ನಂಬಿಕೂತವರಲ್ಲ ಎಂದು ಧಿಮಾಕಿನಿಂದ ಮೆರೆಯುತ್ತಿದ್ದ ಕಾಶ್ಮೀರದ ಪ್ರತ್ಯೇಕತಾವಾದಿಗಳು ಮೂರ್ನಾಲ್ಕು ದಿನಗಳ ಹಿಂದೆ ದೇಶದ ಎಲ್ಲ ಪ್ರವಾಸಿಗರನ್ನೂ ಕೈಬೀಸಿ ಕರೆದು ‘ನಾವು ಸಹಕರಿಸುತ್ತೇವೆ’ ಎಂದು ಪತ್ರಿಕಾ ಗೋಷ್ಠಿ ನಡೆಸಿದರಲ್ಲ, ಹೇಗೆ? ಇವರಲ್ಲಿ ಈ ಬದಲಾವಣೆ ಏಕಾಕಿ ಹೇಗಾಯ್ತು? ಅತ್ತಲಿಂದ ಬರುತ್ತಿದ್ದ ಹಣದ ಥೈಲಿ ನಿಲ್ಲುತ್ತಿದ್ದಂತೆ ಯಾಸಿನ್ ಮಲಿಕ್ರಂಥವರಿಗೆ ಭಾರತದ ಜನ ನೆನಪಾದರಲ್ಲ! ಮೂಗು ಹಿಡಿದರೆ ಬಾಯಿ ತೆರೆಯುತ್ತಾರೆ ಅನ್ನೋದು ಅದಕ್ಕೇ.
ಹೇಳಲಿಕ್ಕೆ ಸಾಕಷ್ಟಿದೆ. 500 ಮತ್ತು 1000 ಎಷ್ಟು ದೊಡ್ಡ ಮೊತ್ತವೆಂದರೆ ಅದು ತನ್ನೊಳಗೆ ಸಾಕಷ್ಟು ಕಥೆಗಳನ್ನು ಅಡಗಿಸಿಟ್ಟುಕೊಂಡಿದೆ. ಎಳೆ ಎಳೆಯಾಗಿ ಬಿಚ್ಚೋಣ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s