ಮುನಿಸು ತರವೇ? ಐನೂರು ಸಾವಿರದ ಮೇಲೆ!

ಮುನಿಸು ತರವೇ? ಐನೂರು ಸಾವಿರದ ಮೇಲೆ!

ಐನೂರು ಮತ್ತು ಸಾವಿರ ರೂಗಳ ನೋಟನ್ನು ಏಕಾಕಿ ನಿಷೇಧ ಮಾಡಿ ಅವರು ಹೊರಡಿಸಿದ ಘೋಷಣೆಗೆ ಕಳ್ಳ ಸಂಪತ್ತಿನ ಒಡೆಯರೆಲ್ಲ ಒಮ್ಮೆಗೇ ಎದೆ ಒಡೆದುಕೊಂಡರು. ಬಡಜನರ ಮಧ್ಯಮವರ್ಗದವರ ಮೇಲೆ ಕಾಳಜಿ ಇಲ್ಲದಿದ್ದರೆ ನಾಲ್ಕಾರು ದಿನದ ಗಡುವಷ್ಟೇ ಕೊಟ್ಟು ಎಲ್ಲರೂ ಹಣ ತಂದು ಕಟ್ಟಿರೆಂದು ಆದೇಶಿಸಬೇಕಿತ್ತು. ಆದರೆ ಪ್ರಧಾನಮಂತ್ರಿಗಳು ಈ ದೇಶದ ವಾಸ್ತವ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಐವತ್ತು ದಿನಗಳ ಸಮಯ ಕೊಟ್ಟರು. ದಿನಕ್ಕಿಷ್ಟು ಬದಲಾಯಿಸಿಕೊಳ್ಳಬೇಕೆಂಬ ಮಿತಿ ಹಾಕಿದರು. ಸಾಮಾನ್ಯರಲ್ಲಿ ಒಂದಷ್ಟು ಗೊಂದಲವಾಯಿತು ನಿಜ, ಕಪ್ಪು ಕುಳಗಳಲ್ಲಿ ಅದು ಮತ್ತೂ ಹೆಚ್ಚಾಗಿತ್ತು. ಸಾಲಕೊಟ್ಟು ದರ್ಪದಿಂದ ಮೆರೆಯುತ್ತಿದ್ದವರೆಲ್ಲ ಬಡ ಜನತೆಯ ಬಳಿ ಧಾವಿಸಿ ಬಂದು ಅವರ ಅಕೌಂಟುಗಳಲ್ಲಿರಿಸಲು ಮತ್ತು ಪ್ರತಿ ದಿನ ಬದಲಾಯಿಸಲು ಹಣ ಕೊಟ್ಟು ಹೋದರು! ಅನೇಕ ಪುಢಾರಿಗಳು ಮತ ಪತ್ರ ಪಡೆದು ಹತ್ತತ್ತು ಸಾವಿರ ಕೈಗಿಟ್ಟರು. ಉದ್ಯಮಿಗಳು ಮೂರು ತಿಂಗಳ ಸಂಬಳ ಮುಂಚಿತವಾಗಿಯೇ ಕೈಗಿಟ್ಟರು. ಅನೇಕ ಉದ್ಯೋಗಿಗಳಿಗೆ ಬೋನಸ್ ಕೂಡ ದೊರೆಯಿತು. ಕಮ್ಯುನಿಷ್ಟರು ಯಾವುದಕ್ಕಾಗಿ ಬಡಿದಾಡುತ್ತಿದ್ದರೋ ಅದು ಒಂದು ಘೋಷಣೆಯಿಂದ ತಾತ್ಕಾಲಿಕವಾಗಿಯಾದರೂ ಕಾರ್ಯರೂಪಕ್ಕೆ ಬಂದಿತ್ತು.

31

ರಕ್ಷಣಾ ಇಲಾಖೆಯ ಕುರಿತಂತೆ ಅಧ್ಯಯನ ನಡೆಸುವ ಸಂಸ್ಥೆಯೊಂದು 2014ರಲ್ಲಿ ವರದಿ ನೀಡಿತ್ತು, ‘ಛತ್ತೀಸ್ಗಢದಲ್ಲಿ ವ್ಯಾಪಾರಿಗಳು, ಕಾಂಟ್ರಾಕ್ಟರುಗಳು, ಅಧಿಕಾರಿಗಳನ್ನು ಲೂಟಿಗೈಯ್ಯುವ ನಕ್ಸಲರು ಕನಿಷ್ಠ 140 ಕೋಟಿ ಪ್ರತೀ ವರ್ಷ ಸಂಗ್ರಹಿಸುತ್ತಾರೆ’. ಆಂಧ್ರದಲ್ಲಿಯೂ ಇದೇ ಪ್ರಮಾಣದ ಹಣ ಲೂಟಿಗೈಯ್ಯುತ್ತಾರೆ. ಬರಿಯ ಶ್ರೀಮಂತರನ್ನಷ್ಟೇ ಲೂಟಿಗೈಯ್ಯುತ್ತಾರೆಂದು ಭಾವಿಸಬೇಡಿ. ಇವರ ಪ್ರಭಾವ ಜೋರಾಗಿರುವೆಡೆ ಮೊಬೈಲ್ ಅಂಗಡಿ ಇಟ್ಟ ಬಡವನೂ ತನ್ನ ರಕ್ಷಣೆಗೆಂದು 20 ಸಾವಿರ ರೂಪಾಯಿ ನಕ್ಸಲರಿಗೆ ಕಕ್ಕಲೇಬೇಕು. ನವೆಂಬರ್ 8 ರನಂತರ ಇವರುಗಳೆಲ್ಲ ಹೀಗೆ ಕೂಡಿಟ್ಟ ಹಣ ಕೆಲಸಕ್ಕೆ ಬಾರದಂತಾಗಿದೆ. ಯಾವ ‘ನಕ್ಸಲ್ ಉದ್ದಿಮೆ’ ನಿಗ್ರಹಕ್ಕೆ ದೇಶದ ಎಲ್ಲಾ ಸಕರ್ಾರಗಳು ಸಾವಿರಾರು ಕೋಟಿ ರೂಪಾಯಿ ವ್ಯಯಿಸಿದ್ದವೋ, ಅನೇಕ ಯೋಧರನ್ನು ಕಳಕೊಂಡಿತ್ತೋ ಅದೇ ನಕ್ಸಲರನ್ನು ಒಂದು ಘೋಷಣೆಯೊಂದಿಗೆ ಕೈಲಾಗದ ನಪುಂಸಕರನ್ನಾಗಿಸಿದರು ಈ ದೇಶದ ಪ್ರಧಾನಿ. ನೋಟು ಬ್ಯಾನಿನಿಂದ ಇಂದಿನವರೆಗೂ 564ಕ್ಕೂ ಹೆಚ್ಚು ನಕ್ಸಲರು ಮತ್ತು ಅವರ ಹಿತೈಷಿಗಳು ದೇಶದೆದುರು ಬಂದೂಕಿಟ್ಟು ಶರಣಾಗತರಾಗಿದ್ದಾರೆ. ಸಿಆರ್ಪಿಎಫ್ ಡಿಜಿ, ದುಗರ್ಾಪ್ರಸಾದರು ‘ನೋಟು ಬ್ಯಾನಿನಿಂದ ಶತಪಥ ಹಾಕುತ್ತಿರುವ ನಕ್ಸಲರು ತಮ್ಮ ಪರಿಚಯದ ಕಂಟ್ರಾಕ್ಟರು, ಉದ್ಯಮಿ, ಹಿತೈಷಿಗಳ ಮೂಲಕ ಈ ನೋಟುಗಳನ್ನು ಪರಿವತರ್ಿಸಲು ಹೆಣಗಾಡುತ್ತಿದ್ದಾರೆ’ ಎಂದು ಹೇಳಿದ್ದಲ್ಲದೇ ಅದು ಸಾಧ್ಯವಾಗದಾಗ ಶರಣಾಗತರಾಗಿ ನೆಮ್ಮದಿಯ ಬದುಕು ನಡೆಸಲು ಅನುಮತಿ ನೀಡುವಂತೆ ಸಕರ್ಾರವನ್ನು ಬೇಡುತ್ತಿದ್ದಾರೆ ಎಂದು ಸೇರಿಸಿದ್ದರು.
ಹೆಚ್ಚಿನ ಮೌಲ್ಯದ ನೋಟು ಕಪ್ಪುಹಣ ನಿಜ. ಆದರೆ ಇದೇ ಕೊನೆಯಲ್ಲ. ಈ ಕಪ್ಪುಹಣ ಕಪ್ಪು ಸಂಪತ್ತಾಗಿ ರೂಪುಗೊಳ್ಳುತ್ತದೆಯಲ್ಲ ಅದು ದೇಶಕ್ಕೆ ಹೊರೆ. ಕಪ್ಪುಹಣದಿಂದ ಹೆಚ್ಚಿನ ಬೆಲೆಗೆ ಜಮೀನು, ಬಂಗಾರ ಖರೀದಿಸುತ್ತಾರೆ, ಐಷಾರಾಮಿ ಜೀವನ ನಡೆಸುತ್ತಾರೆ. ಕೊನೆಗೆ ಜನಸಾಮಾನ್ಯರಿಗೆ ಬದುಕು ಕಷ್ಟವೆನಿಸುವಂತೆ ಮಾಡಿಬಿಡುತ್ತಾರೆ. ಹೀಗೆ ಸಂಪತ್ತು ಕ್ರೋಢೀಕರಿಸಿದವರು ಖದೀಮ ವೃತ್ತಿಗಿಳಿಯಲು, ಗೂಂಡಾಗಳನ್ನು ಸಾಕಿಕೊಳ್ಳಲೂ ಹೇಸದಿರುವುದರಿಂದ ಸಮಾಜ ಇಂಥವರಿಗೆದುರಾಡದೇ ಅವಡುಗಚ್ಚಿ ಸಹಿಸಿಕೊಳ್ಳುತ್ತದೆ. ಇವರುಗಳೇ ಚುನಾವಣೆಗೆ ನಿಂತು ಹೆದರಿಸಿ ಅಧಿಕಾರಕ್ಕೇರಿದ ಮೇಲೆ ದರ್ಪದಿಂದಲೇ ತಮ್ಮಿಚ್ಚೆಗೆ ಬಂದಂತೆ ಆಡಳಿತ ನಡೆಸುತ್ತಾರೆ. ಆಮಿಷ ತೋರಿಸಿ ಗೆದ್ದು ಬಿಡುತ್ತಾರೆ. ಸಜ್ಜನರೊಂದಿಷ್ಟು ಜನ ಮೂಲೆಯಲ್ಲಿ ಮುಲುಗುತ್ತ ಕೂತು ಬಿಡುತ್ತಾರೆ!
ಇವೆಲ್ಲಕ್ಕೂ ಒಂದು ಪರಿಹಾರ ಬೇಕಿತ್ತಲ್ಲ. ಅದು ಹೆಚ್ಚಿನ ಮೌಲ್ಯದ ನೋಟುಗಳ ಅಮಾನ್ಯೀಕರಣದ ರೂಪದಲ್ಲಿ ಬಂತು. ಇದರಿಂದೇನಾಗುತ್ತೆ ಅಂತ ಅನೇಕರು ಪ್ರಶ್ನಿಸುತ್ತಾರೆ. ಈ ‘ಅನೇಕರು’ ಯಾವಾಗಲೂ ಹಾಗೆಯೇ. ತಾಕತ್ತಿದ್ರೆ ಸಿರಿವಂತರನ್ನು ಹಿಡಿಯಲಿ ನೋಡೋಣ ಅಂದರು. ನೋಟ್ ಬ್ಯಾನ್ ಆಗುತ್ತಿದ್ದಂತೆ ತಡಬಡಾಯಿಸಿದರು. ಇವರಿಂದ ಬಡವರಿಗಷ್ಟೇ ನಷ್ಟ, ಸಿರಿವಂತರಿಗಲ್ಲ ಅಂತ ಕಿರಿಕಿರಿ ಮಾಡಿದರು. ತೆರಿಗೆ ಅಧಿಕಾರಿಗಳ ದಾಳಿಯ ಮೂಲಕ ದೊಡ್ಡ-ದೊಡ್ಡ ಕುಳಗಳನ್ನು ಮೋದಿ ಕೆಡವಿ ಬಿಸಾಡುತ್ತಿದ್ದಂತೆ ತೆಪ್ಪಗಾದರು. ಈ ಪ್ರಯೋಗದಿಂದ ಕಪ್ಪುಹಣ ನಿವಾರಣೆಯಾಗುವುದಿಲ್ಲವೆಂದು ತಗಾದೆ ತೆಗೆದರು. ರಿಯಲ್ ಎಸ್ಟೇಟ್ ಉದ್ದಿಮೆ ಕುಸಿದು, ಬಂಗಾರದ ಬೆಲೆ ಧರಾಶಾಯಿಯಾಗುತ್ತಿದ್ದಂತೆ ಮೂಕರಾದರು. ಪ್ರತಿ ಬಾರಿ ಇವರುಗಳು ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ಅದಕ್ಕೆ ಉತ್ತರ ಸಿಗುತ್ತಿದ್ದಂತೆ ಮತ್ತೊಂದು ಪ್ರಶ್ನೆಯೊಂದಿಗೆ ಮರಳಿ ಬರುತ್ತಾರೆ.
ಆಥರ್ಿಕ ಮಹಾ ಸುಧಾರಣೆಗೆ ನೋಟುಬ್ಯಾನು ಮೊದಲ ಸಣ್ಣ ಹೆಜ್ಜೆ. ಆದರೆ ಅತ್ಯಂತ ಅಗತ್ಯವಾದುದು. ಸ್ವಾಮಿ ವಿವೇಕಾನಂದರು ತಮ್ಮ ರಾಜಯೋಗದಲ್ಲಿ ಒಂದು ಕಥೆ ಹೇಳುತ್ತಾರೆ. ರಾಜನಿಂದ ಶಿಕ್ಷೆಗೊಳಗಾದ ಮಂತ್ರಿಯನ್ನು ಎತ್ತರದ ಗೋಪುರವೊಂದರ ಮೇಲೆ ಕೂಡಿ ಹಾಕಲಾಯ್ತಂತೆ. ಆತ ತನ್ನ ಹೆಂಡತಿಗೆ ಜೀರುಂಡೆಯ ಮೀಸೆಗೆ ಜೇನು ಹಚ್ಚಿ ಅದರ ಕುತ್ತಿಗೆಗೆ ರೇಷ್ಮೆ ದಾರ ಕಟ್ಟಿ ಗೋಪುರದೆಡೆಗೆ ಮೇಲ್ಮುಖವಾಗಿ ಕಳಿಸಲು ಹೇಳಿದ. ಜೇನಿನ ಆಸೆಗೆ ಮೇಲ್ಮುಖವಾಗಿ ಚಲಿಸಿದ ಕೀಟ ಮಂತ್ರಿಯ ಕೈ ಸೇರಿತು. ಈ ರೇಷ್ಮೆಯ ದಾರದ ಇನ್ನೊಂದು ತುದಿಗೆ ಮಂತ್ರಿಯ ಹೆಂಡತಿ ಸ್ವಲ್ಪ ದಪ್ಪ ದಾರ ಕಟ್ಟಿದಳು. ಅದನ್ನೇ ಮೇಲೆಳೆದುಕೊಂಡ ಮಂತ್ರಿ ಈ ದಾರದ ತುದಿಗೆ ಹಗ್ಗ ಕಟ್ಟಿಸಿಕೊಂಡ. ಅದನ್ನು ಮೇಲೆಳೆದುಕೊಂಡು ಗೋಪುರದಲ್ಲಿ ಅದನ್ನು ಕಟ್ಟಿ ತಾನು ಅದನ್ನೇ ಹಿಡಿದು ಕೆಳಗಿಳಿದು ಬಂದ! ನೋಟು ಬಂದಿ ಮೊದಲ ರೇಷ್ಮೆಯದಾರ ಅಷ್ಟೇ. ಈ ಜಾಡು ಹಿಡಿದು ಕೆಡವಬೇಕಾದ್ದು ಇನ್ನೂ ಸಾಕಷ್ಟಿದೆ. ಮುಂದಿನ ನಿಧರ್ಾರಗಳು ಇನ್ನೂ ಕಠಿಣ ಅಂತಾರಲ್ಲ ಮೋದಿ, ಅದೇ!
ದೇಶವೊಂದಕ್ಕೆ ಎಷ್ಟು ಮೌಲ್ಯದ ನೋಟು ಇರಬೇಕು ಎನ್ನೋದು ಗೊತ್ತಾಗೋದು ಹೇಗೆ ಎನ್ನೋದು ಪ್ರಶ್ನೆ. ಇದಕ್ಕೆ ಇದಮಿತ್ಥಂ ಎನ್ನಬಲ್ಲಂತಹ ನಿಯಮವೇನೂ ಇಲ್ಲ. ಆದರೆ ಇತರೆ ದೇಶಗಳ ತುಲನೆ ಮಾಡಿ ನಾವು ಒಂದು ನಿರ್ಣಯಕ್ಕೆ ಬರಬಹುದು. ಅಮೇರಿಕಾದ ವ್ಯಕ್ತಿಯೊಬ್ಬನ ವಾಷರ್ಿಕ ಆದಾಯ ಸುಮಾರು ಐವತ್ತೈದು ಸಾವಿರ ಡಾಲರುಗಳು. ಅಲ್ಲಿನ ಅತ್ಯಂತ ದೊಡ್ಡ ಮೌಲ್ಯದ ನೋಟು ಯಾವುದು ಗೊತ್ತಾ ನೂರು ಡಾಲರ್ ಮಾತ್ರ! ವ್ಯಕ್ತಿಯ ಆದಾಯ ಮತ್ತು ದೊಡ್ಡ ಮೌಲ್ಯದ ನೋಟಿನ ಅನುಪಾತ 550 ಅಂತಾಯ್ತು. ಇಂಗ್ಲೇಂಡಿನಲ್ಲಿ ವ್ಯಕ್ತಿಯ ವಾಷರ್ಿಕ ಆದಾಯ ಸುಮಾರು 25 ಸಾವಿರ ಪೌಂಡುಗಳಾದರೆ ಇಲ್ಲಿನ ದೊಡ್ಡ ಮೌಲ್ಯದ ನೋಟು 50 ಸಾವಿರ ಪೌಂಡು ಮಾತ್ರ. ಇವುಗಳ ಅನುಪಾತ 500ರಷ್ಟು. ಜಪಾನಿನಲ್ಲಿ ಈ ಅನುಪಾತ 400ರಷ್ಟಿದೆ. ಆದರೆ ಭಾರತೀಯರ ವಾಷರ್ಿಕ ಆದಾಯ ಸುಮಾರು 90 ಸಾವಿರದಷ್ಟಾದರೆ ಇಲ್ಲಿರುವ ದೊಡ್ಡ ಮೌಲ್ಯದ ನೋಟು ಒಂದು ಸಾವಿರ ರೂಪಾಯಿಯದ್ದು. ಇದರ ಅನುಪಾತ ಬರಿಯ 90 ಮಾತ್ರ! ಈಗಿನ 2 ಸಾವಿರದ ನೋಟನ್ನೂ ಲೆಕ್ಕಕ್ಕೆ ಹಿಡಿದರೆ ಅನುಪಾತ 45ಕ್ಕಿಳಿಯುತ್ತದೆ. ನಮಗೂ ಅಮೇರಿಕಾಕ್ಕೂ ಅಜಗಜಾಂತರ.
ಇಷ್ಟಕ್ಕೂ ದೊಡ್ಡ ಮೌಲ್ಯದ ನೋಟು ಮುದ್ರಿಸಲು ಸಕರ್ಾರ ಕೊಡುವ ಕಾರಣವೇನು ಗೊತ್ತೇ? ಮೊದಲನೆಯದು ಏರುತ್ತಿರುವ ಹಣದುಬ್ಬರ. ಎರಡನೆಯದು ಮುದ್ರಣ ವೆಚ್ಚ. ಹಣದುಬ್ಬರ ಹೆಚ್ಚುವುದರಿಂದ ಬೆಲೆಗಳು ಹೆಚ್ಚುತ್ತೆ. ಹೀಗಾಗಿ ಜೇಬಿನಲ್ಲಿ ಎಷ್ಟು ಹಣವಿದ್ದರೂ ಕಡಿಮೆಯೇ. ಅದಕ್ಕೇ ಜನರ ಜೇಬಿನ ಹೊರೆ ಇಳಿಸಲು ಐನೂರು ರೂಪಾಯಿಯ ನೋಟು ಬೇಕು, ಸಾವಿರದ್ದೂ ಬೇಕು. ಈ ಹಿಂದಿನ ರಿಸವರ್್ ಬ್ಯಾಂಕಿನ ಗವರ್ನರ್ ಐದು ಸಾವಿರದ, ಹತ್ತು ಸಾವಿರದ ನೋಟುಗಳನ್ನೂ ಮುದ್ರಿಸುವಂತೆ ಕೇಳಿಕೊಂಡಿದ್ದರು.
ದೊಡ್ಡ ಮೌಲ್ಯದ ನೋಟು ಮುದ್ರಣಕ್ಕೆ ಕಡಿಮೆ ಹಣ ಸಾಕು ಎಂದು ಸಕರ್ಾರ ವಾದ ಮುಂದಿಡುತ್ತದೆ. ಅದು ಸತ್ಯ ಕೂಡ. ಯಾವುದೇ ನೋಟಿನ ಮುದ್ರಣಕ್ಕೆ 3 ರಿಂದ 4 ರೂಪಾಯಿ ವೆಚ್ಚವಾಗುತ್ತೆಂದು ಭಾವಿಸಿದರೆ. ನೂರರ ಹತ್ತು ನೋಟಿಗೆ ಮುವ್ವತ್ತು ರೂಪಾಯಿಯಾಯ್ತು. ಸಾವಿರದ ಒಂದು ನೋಟಿಗೆ ಬರಿ ನಾಲ್ಕು ರೂಪಾಯಿ ಮಾತ್ರ! ಕನಿಷ್ಠ ಇಪ್ಪತ್ತಾರು ರೂಪಾಯಿಗಳ ಉಳಿತಾಯ. ಮುದ್ರಣವಾಗುವ ಒಟ್ಟು ಮೌಲ್ಯವನ್ನು ಗಣನೆಗೆ ತೆಗೆದುಕೊಂಡರೆ ಇದು ಬಲು ದೊಡ್ಡ ಮೊತ್ತವೇ ಸರಿ. ಈ ಹಣವನ್ನು ಉಳಿಸುವ ನೆಪದಲ್ಲಿ ಈ ದುರಾತ್ಮರು ಮುದ್ರಿಸಿರುವ ಒಟ್ಟೂ ನೋಟುಗಳೆಷ್ಟು ಗೊತ್ತೇ? ಸುಮಾರು ನಲವತ್ತು ಪ್ರತಿಶತದಷ್ಟು ಸಾವಿರದ್ದು ಮತ್ತು ನಲವತ್ತೈದು ಪ್ರತಿಶತದಷ್ಟು ಐನೂರರದ್ದು. ಅಂದರೆ ಒಟ್ಟು ನೋಟುಗಳಲ್ಲಿ ಸುಮಾರು ಎಂಭತ್ತೈದರಷ್ಟು ಇವೇ ಆಯಿತು. ಇವಕ್ಕೆ ಸುಮಾರು ಹತ್ತು ಪ್ರತಿಶತದಷ್ಟಿರುವ ನೂರರ ನೋಟುಗಳನ್ನೂ ಸೇರಿಸಿದರೆ ಚಲಾವಣೆಯಲ್ಲಿರುವ ತೊಂಭತ್ತೈದು ಭಾಗ ಇವೇ! ಊರ ತುಂಬಾ ಬಡವರ ಕುರಿತಂತೆ ಮಾತನಾಡುವ ದೊಡ್ಡ ವರ್ಗ ಹುಟ್ಟಿಬಿಟ್ಟಿದೆಯಲ್ಲ ಈ ಬಡವರಿಗೆ ಬೇಕಾಗುವ ಐವತ್ತು ಮತ್ತು ಅದಕ್ಕಿಂತ ಕೆಳಗಿನ ನೋಟುಗಳನ್ನು ನಾವು ಮುದ್ರಿಸಿರುವುದು ಬರಿ ಐದು ಪ್ರತಿಶತದಷ್ಟು ಮಾತ್ರ.

33
ನಿಮಗೆ ಗೊತ್ತಿರಲಿ. ಹಳೆಯ ಸಕರ್ಾರ ಬಡತನ ರೇಖೆಯನ್ನೆಳೆದು ಹಳ್ಳಿಗಳಲ್ಲಿ ದಿನವೊಂದಕ್ಕೆ 27 ಮತ್ತು ಪಟ್ಟಣದಲ್ಲಿ 33 ರೂಪಾಯಿ ಖಚರ್ು ಮಾಡಲಾಗದವ ಬಡವನೆಂದಿತ್ತು. ಇಂಥ ಬಡವರ ಸಂಖ್ಯೆ ದೇಶದಲ್ಲಿ ಶೇಕಡಾ 30ರಷ್ಟಿದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ದಿನಕ್ಕೆ ಐವತ್ತು ರೂಪಾಯಿಯೂ ಬೇಡದ ಜನ ಇಷ್ಟು ದೊಡ್ಡ ಸಂಖ್ಯೆಯಲ್ಲಿದ್ದಾರೆ. ದಿನಕ್ಕೆ ಐವತ್ತರ ಎರಡು ನೋಟು ಸಾಕೆನ್ನುವ ಕನಿಷ್ಠ 70 ಪ್ರತಿಶತ ಜನರಿದ್ದಾರೆ. ಅಂದ ಮೇಲೆ ಅವರ ಬೇಡಿಕೆಯನ್ನೆಲ್ಲ ಬದಿಗೊತ್ತಿ ಉಳಿದ ಕೆಲವರಿಗಾಗಿ ಶೇಕಡಾ ತೊಂಭತ್ತೈದು ನೋಟುಗಳನ್ನು ಮುದ್ರಿಸಿದ್ದು ಅದೆಷ್ಟು ಸರಿ? ಸಮಾಜವಾದ ಅದ್ಯಾವ ಹುತ್ತ ಅಡಗಿ ಕುಳಿತು ಬಿಡ್ತು ಹೇಳಿ ನೋಡೋಣ! ಬಡವರ ನೋಟಿಗೆ ಬೆಲೆ ಕೊಡಿಸುವ ದೊಡ್ಡ ಸಾಹಸ ಮಾಡಿದ್ದು ನರೇಂದ್ರ ಮೋದಿಯೇ. ಅದಕ್ಕೇ ನಿಜವಾದ ಸಮಾಜವಾದ ಅವರದ್ದೇ ಅನ್ನೋದು.
ಪ್ರತೀ ವರ್ಷ ರಿಸವರ್್ ಬ್ಯಾಂಕು ಮುದ್ರಿಸಿದ ನೋಟುಗಳು ಅಲ್ಲಿಂದ ಹೊರಬಿದ್ದೊಡನೆ ಸಿರಿವಂತರ ತಿಜೋರಿ ಸೇರಿಬಿಡುತ್ತಿತ್ತು. ಸುಮಾರು 85 ಪ್ರತಿಶತದಷ್ಟು ಐನೂರು, ಸಾವಿರದ ನೋಟುಗಳು ಮರಳಿ ಬ್ಯಾಂಕಿಗೆ ಬರುತ್ತಲೇ ಇರಲಿಲ್ಲ. ಅದು ಸಕರ್ಾರಿ ವ್ಯವಸ್ಥೆಯಿಂದ ಹೊರಗಿದ್ದೇ ಸಮಾನಾಂತರ ಅರ್ಥ ವ್ಯವಸ್ಥೆಗೆ ಕಾರಣವಾಗುತ್ತಿತ್ತು. ಇದು ಪುಢಾರಿಗಳಿಗೆ, ಗೂಂಡಾಗಳಿಗೆ, ಸಮಾಜ ಕಂಟಕರಿಗೆ ಲಾಭವೇ. ಹೀಗಾಗಿಯೇ ಕಳೆದ ಏಳು ದಶಕಗಳಿಂದ ಬ್ಯಾಂಕುಗಳು ವಿಸ್ತಾರವಾಗದಂತೆ, ಜನ ಬ್ಯಾಂಕಿಗೆ ಬರದಂತೆ, ಆಥರ್ಿಕ ಸ್ವಾತಂತ್ರ್ಯದ ಅರಿವಾಗದಂತೆ ಸಕರ್ಾರಗಳು ಆಡಳಿತ ನಡೆಸಿದವು. ಬಡಜನತೆ ಬ್ಯಾಂಕಿನಿಂದ ದೂರವಾದಂತೆ ಅವು ಗಗನ ಕುಸುಮವಾದವು. ಅವುಗಳಲ್ಲೂ ಹಣದ ಕೊರತೆಯಾಯ್ತು. ಬ್ಯಾಂಕಿನಲ್ಲಿರಬೇಕಾದ ಹಣ ಮನೆಯಲ್ಲಿ ಕೊಳೆತಂತೆ ಡಿಪಾಸಿಟ್ಟುಗಳಿಗಾಗಿ ಬ್ಯಾಂಕುಗಳೇ ಮನೆಗೆ ಬಂದವು. ಅವರಿಗೆ ಬಡ್ಡಿ ಕೊಡುವ ನೆಪದಲ್ಲಿ ಜನ ಪಡೆದ ಸಾಲಕ್ಕೆ ಹೆಚ್ಚು ಬಡ್ಡಿ ವಿಧಿಸಬೇಕಾಯ್ತು. ಅಷ್ಟೇ ಅಲ್ಲ. ಸಾಲ ಕೊಡುವ ಮುನ್ನ ನೂರಾರು ಪ್ರಶ್ನೆ ಕೇಳಿ ಹೈರಾಣು ಮಾಡಲೇಬೇಕಾದ ಅನಿವಾರ್ಯತೆ ಬಂತು. ಹೀಗಾಗಿ ಬ್ಯಾಂಕಿನಿಂದ ದೂರವುಳಿದ ಬಡ ಜನ ಮತ್ತದೇ ಕಪ್ಪುಹಣದ ಒಡೆಯರೆದುರು ನಿಂತು ಹೆಚ್ಚಿನ ಬಡ್ಡಿಗೆ ತುತರ್ು ಸಾಲ ಪಡೆದರು, ಕಟ್ಟಲಾಗದೇ ಕಣ್ಣೀರಿಟ್ಟರು. ಮನೆ-ಮಠ ಎಲ್ಲವನ್ನೂ ಕಳಕೊಂಡು ಬೀದಿ ಪಾಲಾದರು. ಕಪ್ಪುಹಣ ಕಪ್ಪು ಸಂಪತ್ತಾಗಿ ಪರಿವರ್ತನೆಗೊಳ್ಳೋದು ಹೀಗೆಯೇ. ಈ ಕಪ್ಪುಹಣಕ್ಕೇ ಕಡಿವಾಣ ಹಾಕಿಬಿಟ್ಟರೇ? ಅದನ್ನೇ ಮೊದಲ ಹೆಜ್ಜೆಯಾಗಿ ನರೇಂದ್ರ ಮೋದಿ ಮಾಡಿದ್ದು!
ಐನೂರು ಮತ್ತು ಸಾವಿರ ರೂಗಳ ನೋಟನ್ನು ಏಕಾಕಿ ನಿಷೇಧ ಮಾಡಿ ಅವರು ಹೊರಡಿಸಿದ ಘೋಷಣೆಗೆ ಕಳ್ಳ ಸಂಪತ್ತಿನ ಒಡೆಯರೆಲ್ಲ ಒಮ್ಮೆಗೇ ಎದೆ ಒಡೆದುಕೊಂಡರು. ಬಡಜನರ ಮಧ್ಯಮವರ್ಗದವರ ಮೇಲೆ ಕಾಳಜಿ ಇಲ್ಲದಿದ್ದರೆ ನಾಲ್ಕಾರು ದಿನದ ಗಡುವಷ್ಟೇ ಕೊಟ್ಟು ಎಲ್ಲರೂ ಹಣ ತಂದು ಕಟ್ಟಿರೆಂದು ಆದೇಶಿಸಬೇಕಿತ್ತು. ಆದರೆ ಪ್ರಧಾನಮಂತ್ರಿಗಳು ಈ ದೇಶದ ವಾಸ್ತವ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಐವತ್ತು ದಿನಗಳ ಸಮಯ ಕೊಟ್ಟರು. ದಿನಕ್ಕಿಷ್ಟು ಬದಲಾಯಿಸಿಕೊಳ್ಳಬೇಕೆಂಬ ಮಿತಿ ಹಾಕಿದರು. ಸಾಮಾನ್ಯರಲ್ಲಿ ಒಂದಷ್ಟು ಗೊಂದಲವಾಯಿತು ನಿಜ, ಕಪ್ಪು ಕುಳಗಳಲ್ಲಿ ಅದು ಮತ್ತೂ ಹೆಚ್ಚಾಗಿತ್ತು. ಸಾಲಕೊಟ್ಟು ದರ್ಪದಿಂದ ಮೆರೆಯುತ್ತಿದ್ದವರೆಲ್ಲ ಬಡ ಜನತೆಯ ಬಳಿ ಧಾವಿಸಿ ಬಂದು ಅವರ ಅಕೌಂಟುಗಳಲ್ಲಿರಿಸಲು ಮತ್ತು ಪ್ರತಿ ದಿನ ಬದಲಾಯಿಸಲು ಹಣ ಕೊಟ್ಟು ಹೋದರು! ಅನೇಕ ಪುಢಾರಿಗಳು ಮತ ಪತ್ರ ಪಡೆದು ಹತ್ತತ್ತು ಸಾವಿರ ಕೈಗಿಟ್ಟರು. ಉದ್ಯಮಿಗಳು ಮೂರು ತಿಂಗಳ ಸಂಬಳ ಮುಂಚಿತವಾಗಿಯೇ ಕೈಗಿಟ್ಟರು. ಅನೇಕ ಉದ್ಯೋಗಿಗಳಿಗೆ ಬೋನಸ್ ಕೂಡ ದೊರೆಯಿತು. ಕಮ್ಯುನಿಷ್ಟರು ಯಾವುದಕ್ಕಾಗಿ ಬಡಿದಾಡುತ್ತಿದ್ದರೋ ಅದು ಒಂದು ಘೋಷಣೆಯಿಂದ ತಾತ್ಕಾಲಿಕವಾಗಿಯಾದರೂ ಕಾರ್ಯರೂಪಕ್ಕೆ ಬಂದಿತ್ತು.
ಅಷ್ಟೇ ಅಲ್ಲ. ನೋಟ್ ಬಂದಿಯ ನಂತರ ಸಕರ್ಾರಕ್ಕೆ ಉಳಿಸಿಕೊಂಡಿದ್ದ ಸಾಲವನ್ನು ಅನೇಕರು ತೀರಿಸಿದರು. ಬಿಬಿಎಂಪಿ, ಬೆಸ್ಕಾಂಗಳಿಗೆ ದೀರ್ಘಕಾಲದಿಂದ ಉಳಿಸಿಕೊಂಡಿದ್ದ ಸಾಲವನ್ನು ತೀರಿಸಿದವರು ಸಾಕಷ್ಟು ಜನ. ಲಕ್ನೌನಲ್ಲಿ ಧನಲಕ್ಷ್ಮಿ ಬ್ಯಾಂಕಿಗೆ ಒಂದೇ ಉಸಿರಿನಲ್ಲಿ ಓಡಿ ಬಂದು ಉದ್ಯಮಿಯೊಬ್ಬ 3 ಕೋಟಿ ಸಾಲ ಮರುಪಾವತಿಸಿದ್ದ. ಲಕ್ಷ, ಐವತ್ತು ಲಕ್ಷಗಳಿಗಂತೂ ಲೆಕ್ಕವೇ ಇಲ್ಲ. ಭಾರತೀಯರು ಸಾಲ ತೀರಿಸದ ಮೋಸಗಾರರೆಂಬ ಹಣೆಪಟ್ಟಿ ಇತ್ತಲ್ಲ, ಅದು ಒಂದು ಘೋಷಣೆಯಲ್ಲಿ ಕಳೆದೇಹೋಯ್ತು. ಪ್ರತಿಯೊಬ್ಬರೂ ಸ್ವಯಂ ಪ್ರಾಮಾಣಿಕರಾಗಿದ್ದರು. ಭಾರತ ಬದಲಾಗಲಾರಂಭಿಸಿತ್ತು.
ಹಾಗಂತ ಈ ನಿರ್ಣಯ ತೆಗೆದುಕೊಳ್ಳುವುದು ಸುಲಭದ ಮಾತಾಗಿರಲಿಲ್ಲ. ಕನಿಷ್ಠ 15 ಲಕ್ಷ ಕೋಟಿಗಳಷ್ಟು ಹಣ ಮಾರುಕಟ್ಟೆಯಲ್ಲಿ ಅಡ್ಡಾಡುತ್ತಿತ್ತು, ತಿಜೋರಿಗಳಲ್ಲಿ, ಬಾಥ್ರೂಮುಗಳಲ್ಲಿ ಬೆಚ್ಚಗೆ ಮಲಗಿತ್ತು. ಇವಿಷ್ಟನ್ನೂ ತಂದು ಬೊಕ್ಕಸಕ್ಕೆ ತಂದು ಸೇರಿಸುವಲ್ಲಿ ಬಲು ದೊಡ್ಡ ತಯಾರಿಯೇ ಬೇಕಿತ್ತು. ಒಂದೆರಡಲ್ಲ ಮೋದಿ ಬರೋಬ್ಬರಿ ಎರಡೂವರೆ ವರ್ಷಗಳ ಕಾಲ ಈ ಘೋಷಣೆಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತಂದು ವಿಶ್ವಾಸ ಪಡಕೊಂಡ ಮೇಲೆಯೇ ನೋಟು ನಿಷೇಧ ಮಾಡಿದ್ದು! 2014 ಆಗಸ್ಟ್ 28ರ ಜನ್ಧನ್ ಯೋಜನೆಯಿಂದ 2016 ನವೆಂಬರ್ 8 ರ ಘೋಷಣೆಯವರೆಗಿನ ನೋಟ್ ಬಂದಿಯ ಹೆಜ್ಜೆ ಗುರುತು ಅನನ್ಯವಾದುದು, ರೋಚಕವಾದುದು! ಮುಂದಿನ ವಾರಕ್ಕಿರಲಿ..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s