ಅರ್ಥಶಾಸ್ತ್ರದ ಪುಟ ತಿರುವಿ ಹಾಕುವ ಹೊತ್ತು!

ಅರ್ಥಶಾಸ್ತ್ರದ ಪುಟ ತಿರುವಿ ಹಾಕುವ ಹೊತ್ತು!

ನೋಟುಗಳ ಡೀಮಾನಿಟೈಸೇಷನ್ ಸರಿ. ಆದರೆ ಭಾರತದ ಸದೃಢ ಆಥರ್ಿಕತೆಗೆ ಇಡಬೇಕಾದ ಮೊದಲ ಹೆಜ್ಜೆಯೇ ತೆರಿಗೆ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆ. ಸದ್ಯದ ಮಟ್ಟಿಗೆ ಭಾರತದಲ್ಲಿ ಜನರ ಜೀವ ಹಿಂಡುತ್ತಿರುವ ವ್ಯವಸ್ಥೆ ಇದು. ನೇರ-ಪರೋಕ್ಷ ತೆರಿಗೆಗಳ ನೆಪದಲ್ಲಿ ಜನರ ಹಿಂಡಿ ಸಕರ್ಾರದ ಬೊಕ್ಕಸ ತುಂಬುವ ಕೆಲಸ ಮಾಡಲಾಗುತ್ತಿದೆ. 50ಕ್ಕೂ ಹೆಚ್ಚು ಬಗೆಯ ತೆರಿಗೆಗಳು ನಮ್ಮನ್ನು ಹೈರಾಣು ಮಾಡಿಬಿಟ್ಟಿವೆ. ಬೊಕ್ಕಸ ತುಂಬಿಸಲು ಜನಸಾಮಾನ್ಯರನ್ನು ಹೀಗೆ ಹಿಂಡುವ ದೊರೆಗಳು ತಾವು ಮಾತ್ರ ಐಷಾರಾಮಿ ಬದುಕನ್ನು ಸವೆಸುತ್ತ ದೊಡ್ಡ ಮೊತ್ತದ ಲೂಟಿ ಮಾಡುತ್ತ ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ. ಹೀಗಾಗಿಯೇ ತೆರಿಗೆಯನ್ನು ಕಟ್ಟದೇ ಹಣವನ್ನು ಮನೆಯೊಳಗೆ ನಿಧಿಯಾಗಿ ಅಡಗಿಸಿಡುವ ಜನ ಈ ದೇಶದಲ್ಲಿ ಹೆಚ್ಚಿರೋದು. ಅಂದರೆ ಅವರ್ಯಾರೂ ಸ್ವಭಾವತಃ ಮೋಸಗಾರರಲ್ಲ; ಕಳ್ಳರಲ್ಲ. ವ್ಯವಸ್ಥೆಯ ದೋಷ ಅವರನ್ನು ಕಳ್ಳರನ್ನಾಗಿಸಿದೆ. ಒಮ್ಮೆ ಈ ವ್ಯವಸ್ಥೆ ಸರಿಯಾಯಿತೆಂದರೆ ರಾಷ್ಟ್ರಕಟ್ಟುವ ಕಾಯಕದಲ್ಲಿ ಅವರೆಲ್ಲ ಹೆಗಲಿಗೆ ಹೆಗಲು ಜೋಡಿಸುತ್ತಾರೆ.

ಕಾಕತಾಳೀಯವೇ ಇರಬಹುದು. ನಾವು ಚಾಣಕ್ಯ, ಮೌರ್ಯ, ಬುದ್ಧ ಅಂತೆಲ್ಲಾ ಚಚರ್ಿಸುತ್ತಿರುವಾಗಲೇ ದೇಶ ಬಲು ಕಡಕ್ಕಾದ ನಿರ್ಣಯವೊಂದಕ್ಕೆ ಸಜ್ಜಾಗುತ್ತಿತ್ತು. ನಾವಿಲ್ಲಿ ಮನುಸ್ಮೃತಿಯ ಕುರಿತಂತೆ ಅಂಬೇಡ್ಕರರ ಮಾತುಗಳ ಜಾಡು ಹಿಡಿದು ಎಳೆ ಎಳೆಯಾಗಿ ಬಿಡಿಸಿ ನೋಡುವ ಪ್ರಯತ್ನ ಮಾಡುತ್ತಿರುವಾಗ ದೇಶ ಅದೇ ಅಂಬೇಡ್ಕರರ ಮಾತನ್ನು ಅನುಸರಿಸಿ ಹೊಸ ಆಥರ್ಿಕಸ್ಮೃತಿಗೆ ಸಜ್ಜಾಗಿತ್ತು. ಈ ವರ್ಷದ ನವೆಂಬರ್ 8 ಮುಂದಿನ ಅನೇಕ ವರ್ಷಗಳ ಕಾಲ ಮರೆಯಲಾಗದ ದಿನವಾಗಿ ನೆನಪಿನಲ್ಲಿ ಉಳಿದು ಬಿಡುತ್ತದೆ. ಭಾರತದ ವಿಶ್ವಗುರುತ್ವದ ಹಾದಿಯಲ್ಲಿ ಇದೊಂದು ಮಹತ್ವದ ಮೈಲುಗಲ್ಲಾದುದರಿಂದ ಮುಂದಿನ ಒಂದೆರಡು ವಾರ ವಿಸ್ತಾರವಾಗಿ ಅವಲೋಕಿಸುವ ಪ್ರಯತ್ನ ಮಾಡೋಣ.
ಜಗತ್ತಿನಲ್ಲೆಲ್ಲಾ ಅರ್ಥಶಾಸ್ತ್ರದ ಎರಡು ವಿಚಾರಧಾರೆಗಳು ಪ್ರಮುಖವಾಗಿ ಗುರುತಿಸಲ್ಪಡುತ್ತವೆ. ಒಂದು ಭಾರತದ್ದೇ ಆದ ಚಾಣಕ್ಯನ ಅರ್ಥಶಾಸ್ತ್ರ ಮತ್ತೊಂದು ಪಶ್ಚಿಮದ ಕೊಡುಗೆ ಆಡಂ ಸ್ಮಿತ್ನ ಎಕಾನಾಮಿಕ್ಸ್. ಎರಡೂ ವಿಚಾರಧಾರೆಯ ಮೂಲಭೂತ ಕಲ್ಪನೆಯಲ್ಲಿಯೇ ವ್ಯತ್ಯಾಸವಿದೆ. ಇವುಗಳನ್ನು ಅರಿಯುತ್ತ ಹೋದಂತೆ ದೇಶ ಇಟ್ಟ ಮಹತ್ವದ ಹೆಜ್ಜೆಯ ಸಾಧಕ, ಬಾಧಕಗಳು ಮತ್ತು ಮುಂದಿನ ನಡೆಗಳ ಕುರಿತಂತೆ ನಿಚ್ಚಳ ಚಿತ್ರಣ ದೊರೆಯುತ್ತದೆ.

402px-adamsmith
ಆಡಂ ಸ್ಮಿತ್ ಮೂಲತಃ ಸ್ಕಾಟ್ಲ್ಯಾಂಡಿನವನು. ತನ್ನ ವೆಲ್ಥ್ ಆಫ್ ನೇಷನ್ಸ್ ಕೃತಿಯಿಂದ ಆಥರ್ಿಕ ಕ್ಷೇತ್ರದ ಮನೆ ಮಾತಾದವನು. ಶಿಕ್ಷಕ ವೃತ್ತಿಯ ಮೂಲಕ, ಸಾರ್ವಜನಿಕ ಉಪನ್ಯಾಸಗಳ ಮೂಲಕ ಜನರ ಮನಸೂರೆಗೊಂಡವನು. ದೇಶದ ಸಂಪತ್ತನ್ನು ಸಂಗ್ರಹಿಸುವ ತೆರಿಗೆಯ ನೀತಿ ಮಾರ್ಗವನ್ನು ರೂಪಿಸಿಕೊಟ್ಟದ್ದರಿಂದ ಆತನನ್ನು ಅರ್ಥಶಾಸ್ತ್ರದ ಪಿತಾಮಹ ಎಂದೇ ಸಂಬೋಧಿಸುತ್ತಾರೆ. ತೆರಿಗೆ ಸಂಗ್ರಹದ ನಾಲ್ಕು ಮೂಲ ಸೂತ್ರಗಳನ್ನು ಸ್ಮಿತ್ ವಿವರಿಸಿದ್ದಾನೆ. ಅದರಲ್ಲಿ ಮೊದಲನೆಯದೇ ‘ಪ್ರತೀ ರಾಷ್ಟ್ರದ ಪ್ರಜೆಯೂ ತನ್ನ ದುಡಿಮೆಗೆ ತಕ್ಕಂತೆ ಸಕರ್ಾರಕ್ಕೆ ಸಹಕಾರ ನೀಡಲೇಬೇಕು, ವಿಸ್ತಾರವಾದ ಜಮೀನನ್ನು ಹಂಚಿಕೊಂಡ ಬಾಡಿಗೆದಾರರು ತಂತಮ್ಮ ಪಾಲಿನದನ್ನು ಕೊಡಲೇ ಬೇಕಾಗಿರುವಂತೆಯೇ ಇದೂ ಕೂಡ’ ಎನ್ನುತ್ತಾನೆ ಆತ. ಅಂದರೆ ತೆರಿಗೆ ನೀಡುವುದು ಕಡ್ಡಾಯ ಮಾಡಬೇಕೆಂಬುದು ಆತನ ಅಂತರಾರ್ಥವಾಯಿತು. ಅನುಮಾನವೇ ಇಲ್ಲ, ರಾಷ್ಟ್ರವೊಂದರ ಅಭ್ಯುದಯದಲ್ಲಿ ಎಲ್ಲರ ಪಾಲೂ ಸಮ-ಸಮವೇ. ರಾಷ್ಟ್ರ ನಿಮರ್ಾಣ ಕೈಂಕರ್ಯದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಲೇಬೇಕು. ಆದರೆ ಇದನ್ನು ಕಡ್ಡಾಯವಾಗಿಸಿ ಜನರನ್ನು ಹಿಂಸೆಯಿಂದ ಬಂಧಿಸಬೇಕೋ ಅಥವಾ ಸ್ವತಃ ಜನರೇ ತೆರಿಗೆ ಮಹತ್ವವನ್ನರಿತು ಸಕರ್ಾರದೊಂದಿಗೆ ನಿಲ್ಲುವಂತೆ ಮಾಡಬೇಕೋ?
ಈ ಪ್ರಶ್ನೆಗೆ ಚಾಣಕ್ಯ ಉತ್ತರಿಸುತ್ತಾನೆ. ‘ಹೇಗೆ ತನಗೆ ಬೇಕಾದಷ್ಟು ಮಕರಂದವನ್ನು ಮಾತ್ರ ಹೂವಿಗೂ ಅರಿವಾಗದಂತೆ ಸ್ವೀಕರಿಸಿ ದುಂಬಿ ಹಾರಿಹೋಗಿ ಬಿಡುತ್ತದೆಯೋ ಹಾಗೆಯೇ ರಾಜ ಜನರಿಂದ ಅರಿವಾಗದಂತೆ ತೆರಿಗೆ ಸಂಗ್ರಹಿಸಿ ಸಾಕಷ್ಟನ್ನು ಅವರಿಗೆ ಉಳಿಸಿಡಬೇಕು. ಮುಂದೆ ಈ ತೆರಿಗೆಯನ್ನು ಆಕಾಶದಿಂದ ಸುರಿಯುವ ಮಳೆಯಂತೆ ಜನರಿಗೆ ಮರಳಿಸಬೇಕು’ ಚಾಣಕ್ಯನ ಅರ್ಥ ತಂತ್ರದಲ್ಲಿ ರಾಜನಿಗೆ ಜವಾಬ್ದಾರಿ ಹೆಚ್ಚು. ಆತ ಪ್ರಜೆಗಳಿಗೆ ತೊಂದರೆ ನೀಡಿ ಕಸಿಯುವವನಲ್ಲ. ಆದರೆ ಅಲ್ಪ ಪ್ರಮಾಣದಲ್ಲಿ ಪಡೆದು ಮಳೆಯಾಗಿ ಅದನ್ನು ಸುರಿಸುವವನು! ರಾಜ ಅದೆಷ್ಟು ಜಾಣನೋ ಅಷ್ಟರ ಮಟ್ಟಿಗೆ ತೆರಿಗೆ ವ್ಯವಸ್ಥೆ ಯಶಸ್ವಿ, ಜನರಲ್ಲೂ ಆನಂದದ ಹೊಳೆ.

5
ಸ್ವಲ್ಪ ಆಳಕ್ಕೆ ಇಳಿಯೋಣ. ಧರ್ಮ, ಅರ್ಥ, ಕಾಮ, ಮೋಕ್ಷಗಳು ಪುರುಷಾರ್ಥಗಳು. ಧರ್ಮಮಾರ್ಗದಲ್ಲಿ ಹಣಗಳಿಸಿ, ಕಾಮನೆಯನ್ನು ಪೂರ್ಣಗೊಳಿಸಿಕೊಂಡು ಮೋಕ್ಷಕ್ಕೆ ಒಡೆಯನಾಗಬೇಕಾಗಿರುವುದು ಪ್ರತಿಯೊಬ್ಬನ ಗುರಿ. ಈ ರೀತಿಯ ಗುರಿಯನ್ನು ಈಡೇರಿಸಿಕೊಳ್ಳಲು ಅನೇಕರಿಗೆ ಸಹಕಾರಿಯಾಗುವ ವಾತಾವರಣ ರೂಪಿಸಿಕೊಡಬೇಕಿರುವುದು ರಾಜನಾದವನ ಕರ್ತವ್ಯ. ಈ ಮಾರ್ಗದಲ್ಲಿ ನಡೆಯಲು ಒಬ್ಬರು ಮತ್ತೊಬ್ಬರಿಗೆ ತೊಂದರೆ ಕೊಡದಿರಲೆಂದು ಆತ ಕಾನೂನು ರೂಪಿಸುತ್ತಾನೆ. ಅನ್ಯ ದೇಶದ ಜನರಿಂದ ಮೋಕ್ಷಮಾಗರ್ಿಗಳಿಗೆ ತೊಂದರೆಯಾಗದಿರಲೆಂದು ಗಡಿಯ ರಕ್ಷಣೆಗೆ ಸೈನಿಕರು. ಹಾಗೆಯೇ ವ್ಯವಸ್ಥೆಗಳು ಇದಕ್ಕೆ ಪೂರಕವಾಗಿರುವಂತೆ ನೋಡಿಕೊಳ್ಳಲು ಜನರಿಂದ ತೆರಿಗೆ ಸಂಗ್ರಹಣೆ ಅಷ್ಟೇ. ಇದು ಭಾರತದ ಸಿದ್ಧಾಂತ. ಹೀಗಾಗಿ ಅತಿಯಾದ ತೆರಿಗೆ ಸಂಗ್ರಹಣೆಯೂ ಸಲ್ಲದು, ಅತಿ ಕಡಿಮೆಯೂ ಒಪ್ಪಲಾಗದು ಎನ್ನುತ್ತಾನೆ ಚಾಣಕ್ಯ. ಆತ ಹಳ್ಳಿ, ನಗರ, ಗಣಿಗಾರಿಕೆ, ನೀರಾವರಿ, ಅರಣ್ಯ, ಪಶು ಸಂಗೋಪನೆ, ಮತ್ತು ಇತರೆ ವ್ಯಾಪಾರದ ಮೂಲಕ ಗಳಿಸುವ ತೆರಿಗೆಯ ಕುರಿತಂತೆ ಸಾಕಷ್ಟು ವಿವರವಾಗಿ ಚಚರ್ಿಸುತ್ತಾನೆ. ಸಕರ್ಾರವೇ ನಡೆಸುವ ವ್ಯಾಪಾರಿ ಚಟುವಟಿಕೆಗಳು ಮತ್ತು ಖಾಸಗಿಯಾಗಿ ನಡೆಯುವ ವಹಿವಾಟುಗಳ ಕುರಿತಂತೆಯೂ ಸೂಕ್ತ ಗಮನವಿತ್ತಿದ್ದಾನೆ. ಆತ ಹೇಳುವ ವಸ್ತುವಿನ ‘ಮೂಲ್ಯ’, ಅದರ ಲಾಭಾಂಶದಲ್ಲಿ ಸಕರ್ಾರದ ‘ಭಾಗ’, ವ್ಯಾಪಾರದ ತೆರಿಗೆ, ಅದರ ರಕ್ಷಣೆಗಾಗಿ ಪಡೆವ ತೆರಿಗೆ ಇವೆಲ್ಲವೂ ಆತನಿಗಿಂತ ಮುನ್ನವೂ ಇತ್ತಾದರೂ ಮೌರ್ಯರ ಕಾಲದಲ್ಲಿ ಅದಕ್ಕೊಂದು ಸೂಕ್ತ ರೂಪಕೊಟ್ಟು ಜನರಿಗೆ ಹೊರೆಯಾಗದಂತೆ ಅದನ್ನು ಆಚರಣೆಗೆ ತಂದವನು ಚಾಣಕ್ಯನೇ.
ಚಾಣಕ್ಯನ ಕಾಲ ಇಂದಿನ ಭಾರತದಂತೆಯೇ ಇತ್ತು. ನಂದರು ತಾವು ವೈಭವದ ದಿನಗಳನ್ನು ಕಳೆಯಲೆಂದು ಜನರನ್ನು ಸಾಕಷ್ಟು ಹಿಂಡಿ ಹಿಪ್ಪೆ ಮಾಡಿದ್ದರು. ಸಹಜವಾಗಿಯೇ ಆಳುವ ದೊರೆಗಳ ಈ ಬದುಕಿನಿಂದ ಬೇಸತ್ತ ಜನ ಭ್ರಷ್ಟಾಚಾರಿಗಳಾಗಿದ್ದರು. ತೆರಿಗೆ ವಂಚನೆ, ಲಂಚಕೋರತನ ಅಂದಿನ ದಿನಗಳಲ್ಲಿ ಸಾಮಾನ್ಯವಾಗಿದ್ದವು. ಶ್ರೇಷ್ಠಿಗಳು ಮನೆಯ ಕಂಬಗಳಲ್ಲಿ ಸಂಪತ್ತನ್ನು ಅಡಗಿಸಿಡುತ್ತಿದ್ದರಂತೆ. ಅನೇಕರು ಹಳ್ಳಿಗರ ಕೈಲಿ ತಮ್ಮ ಸಂಪತ್ತನ್ನಿಟ್ಟು ನಿರಾಳವಾಗಿರುತ್ತಿದ್ದರಂತೆ.

2
ಋಗ್ವೇದ ಕಾಲದಲ್ಲಿ ಚಾಲ್ತಿಯಲ್ಲಿದ್ದ ನಾಣ್ಯಗಳು, ಮಹಾಜನಪದಗಳ ಕಾಲದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿತ್ತು. ನಂದರು ಮುದ್ರೆಯೊತ್ತಿದ ನಾಣ್ಯಗಳನ್ನು ಕೇಂದ್ರದಲ್ಲಿ ಮುದ್ರಿಸಿ ಎಲ್ಲೆಡೆ ತಲುಪಿಸುವ ಯತ್ನ ಮಾಡಿದ್ದರು. ಆದರೆ ಕಾಲಕ್ರಮದಲ್ಲಿ ನಾಣ್ಯಗಳಲ್ಲಿ ಬಳಕೆಯಾದ ಲೋಹಗಳಲ್ಲಿ ಏರುಪೇರು ಮಾಡಿ ಖೋಟಾ ನಾಣ್ಯಗಳನ್ನು ಸೃಷ್ಟಿಸುವವರ ಜಾಲವೂ ಬೆಳೆದಿತ್ತೆನ್ನುತ್ತಾರೆ. ಚಾಣಕ್ಯ ಈ ಹಂತದಲ್ಲಿ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಸಾಹಸಕ್ಕೆ ಕೈ ಹಾಕಿದ. ಕಳೆದು ಹೋಗಿದ್ದ ಜನರ ನಂಬಿಕೆಯನ್ನು ಮತ್ತೆ ರಾಜ್ಯ ಗಳಿಸಬೇಕಿತ್ತಲ್ಲ ಅದಕ್ಕೆ ಮುಂದಡಿ ಇಟ್ಟ. ಮೊದಲು ರಾಜಾಶ್ರಯದಲ್ಲಿರುವ ಅಧಿಕಾರಿಗಳ ಮೇಲೆ ತನ್ನ ಹದ್ದಿನ ಕಣ್ಣು ಬೀರಿದ. ಪ್ರಾಮಾಣಿಕರೆನಿಸಿದವರನ್ನು ಆರಿಸಿಕೊಂಡು ಹತ್ತಿರ ಮಾಡಿಕೊಂಡ. ಬೇಹುಗಾರರನ್ನು ಬಳಸಿ ಅಧಿಕಾರಿಗಳ ಹಿಂದೆ ಓಡಿಸಿದ. ಕೆಲವೊಮ್ಮೆ ಬೇಹುಗಾರರ ಹಿಂದೆಯೂ ಗೂಢಚಯರ್ೆ ನಡೆಸುವವರನ್ನು ನೇಮಿಸಿದ. ಅಧಿಕಾರಿ ವರ್ಗದಲ್ಲಿ ನಡೆಯುವ ಭ್ರಷ್ಟಾಚಾರರ ಕುರಿತಂತೆ ಮತ್ತು ಅದನ್ನು ನಿವಾರಿಸುವ ಕುರಿತಂತೆ ಆತ ವಿಸ್ತಾರವಾಗಿ ಬರೆದ ಶ್ಲೋಕಗಳೇ ಇದಕ್ಕೆ ಸಾಕ್ಷಿ. ತೆರಿಗೆ ಕಳ್ಳರನ್ನು ಮುಲಾಜಿಲ್ಲದೇ ಶಿಕ್ಷಿಸಿದ. ಸಕರ್ಾರದ ದೌರ್ಬಲ್ಯದ ಲಾಭ ಪಡೆದು ಮೆರೆಯುತ್ತಿದ್ದವರನ್ನು ಕಠಿಣವಾಗಿ ದಂಡಿಸುತ್ತಿದ್ದಂತೆ ಉಳಿದವರು ಪ್ರಾಮಾಣಿಕರಾಗಿರುವ ಸಂಕಲ್ಪ ಮಾಡಿದರು. ವ್ಯವಸ್ಥೆ ಸರಿಹಂತಕ್ಕೆ ಬಂತು. ಅಷ್ಟಕ್ಕೇ ನಿಲ್ಲದ ಚಾಣಕ್ಯ ಪ್ರತೀ ನಾಣ್ಯದಲ್ಲೂ ಇರಬೇಕಾದ ಬೆಳ್ಳಿ ಮತ್ತು ತಾಮ್ರದ ಅಂಶಗಳನ್ನು ಸ್ಪಷ್ಟ ಮಾಡಿದ. ಖೋಟಾ ನಾಣ್ಯ ತಯಾರಕರ ಹಿಡಿದು ದಂಡಿಸಿದ್ದಲ್ಲದೇ ಸಕರ್ಾರಿ ಖಜಾನೆಗೆ ಖೋಟಾನಾಣ್ಯ ತುಂಬಿದವರಿಗೆ ಮರಣ ದಂಡನೆಯೇ ಶಿಕ್ಷೆಯಾಗಿಸಿದ. ಅಲ್ಲಿಗೆ ಅನೇಕ ಸಮಸ್ಯೆಗಳು ಪರಿಹಾರ ಕಂಡವು. ಪ್ರಾಮಾಣಿಕರು ಮೌರ್ಯ ಸಾಮ್ರಾಜ್ಯದಲ್ಲಿ ಉಸಿರಾಡುವಂತಾಯ್ತು!
ಖೋಟಾ ನಾಣ್ಯಗಳು ಸಾಕಷ್ಟು ಚಲಾವಣೆಯಲ್ಲಿದ್ದುದರಿಂದ ನಿಜ ನಾಣ್ಯಗಳ ಮೌಲ್ಯವೂ ಕಡಿಮೆಯಾಗಿಬಿಟ್ಟಿತ್ತು. ಹೀಗಾಗಿ ಅನೇಕರು ನಾಣ್ಯಗಳ ಬದಲು ವಸ್ತುಗಳನ್ನು ವಿನಿಮಯಕ್ಕೆ ಬಳಸುತ್ತಿದ್ದರು. ಚಾಣಕ್ಯ ವಿಶ್ವಾಸ ಮೂಡಿಸಿದ ಮೇಲೆ ಜನ ಮತ್ತೆ ನಾಣ್ಯಗಳನ್ನು ಬಳಸಲಾರಂಭಿಸಿದರು. ನಿಧಾನವಾಗಿ ಜನಜೀವನ ಹಳಿಗೆ ಮರಳಿತು. ಸಕರ್ಾರದ ಖಜಾನೆಯೂ ಈ ಕಾರಣಕ್ಕಾಗಿ ತುಂಬಲಾರಂಭಿಸಿತು. ಒಮ್ಮೆ ಖಜಾನೆ ತುಂಬಿದೊಡನೆ ಮೌರ್ಯ ಸಾಮ್ರಾಜ್ಯ ಜನಜೀವನವನ್ನು ಸುಧಾರಿಸುವಲ್ಲಿ ಗಮನ ಹರಿಸಿತು ಮತ್ತು ಬಲಾಢ್ಯವಾದ ಸೇನೆಯನ್ನು ಕಟ್ಟಿ ಭಾರತವನ್ನು ಅಭೇದ್ಯವನ್ನಾಗಿಸಿತು.
ಮೌರ್ಯ ಸಾಮ್ರಾಜ್ಯದ ಈ ಕಥನವನ್ನು ಓದುತ್ತಿದ್ದಂತೆಲ್ಲ ಇಂದಿನ ಭಾರತ ಕಣ್ಮುಂದೆ ಹಾದು ಹೋಗುತ್ತದೆ. ಮಿತಿಮೀರಿದ ಭ್ರಷ್ಟಾಚಾರ, ಆಳುವ ದೊರೆಗಳ ಐಷಾರಾಮದ ಬದುಕು, ತೆರಿಗೆ ಕಳ್ಳರು-ಖೋಟಾನೋಟುಗಳ ಹಾವಳಿ ಇವಕ್ಕೆಲ್ಲ ಪರಿಹಾರ ಇದ್ದಿದ್ದು ಆಡಂ ಸ್ಮಿತ್ನ ಕಡ್ಡಾಯ ತೆರಿಗೆಯಲ್ಲಲ್ಲ ಬದಲಿಗೆ ಚಾಣಕ್ಯನ ದುಂಬಿ ಹೀರುವ ಮಕರಂದದ ಮಾದರಿಯ ತೆರಿಗೆ ವ್ಯವಸ್ಥೆಯಲ್ಲಿ. ದೇಶದ ಪ್ರಧಾನಿ ನರೇಂದ್ರ ಮೋದಿಯವರು ಇಟ್ಟಿರುವ ಒಂದೊಂದು ಹೆಜ್ಜೆಯೂ ಅದೇ ಹಾದಿಯಲ್ಲಿ ನಡೆಯುವಂತೆ ಕಾಣುತ್ತಿದೆ. ಹೀಗಾಗಿ ಪರಿಣಾಮಗಳೂ ಅದೇ ರೀತಿಯದ್ದಾದರೆ ಅಚ್ಚರಿ ಪಡಬೇಕಿಲ್ಲ. ಮೊದಲು ತನ್ನೆಲ್ಲಾ ಮಂತ್ರಿಗಳನ್ನು ಕಡಕ್ಕು ಹೆಡ್ ಮೇಷ್ಟ್ರಂತೆ ನಿಭಾಯಿಸಿದರು. ಅವರಲ್ಲಿ ಯಾರೂ ಭ್ರಷ್ಟಾಚಾರ ಮಾಡದಂತೆ ಸದಾ ಕ್ರಿಯಾಶೀಲರಾಗಿರುವಂತೆ ಪ್ರೇರೇಪಿಸಿ ಮಾದರಿಯಾದರು. ಹಿಂದಿನ ಸಕರ್ಾರವೇ ಆಯ್ದು ಕೂರಿಸಿದ್ದ ಅಧಿಕಾರಿಗಳನ್ನು ಆಯಕಟ್ಟಿನಿಂದ ಖಾಲಿಮಾಡಿಸಿದರು. ಜಾಗತಿಕ ಮಟ್ಟದಲ್ಲಿ ವಿಶ್ವಾಸ ಗಳಿಸಿ ಸ್ಥಳೀಯ ಮಟ್ಟದಲ್ಲಿ ಜನ ಮನ್ನಣೆ ಗಳಿಸಿಕೊಂಡರು. ಕೊನೆಗೊಮ್ಮೆ ನೋಟುಬಂದಿ ಜಾರಿಗೆ ತರುವಾಗ ಆಪ್ತರಿಗೂ ಈ ಸುದ್ದಿ ಗೊತ್ತಾಗದಂತೆ ನೋಡಿಕೊಂಡು ಜನರ ನಂಬಿಕೆಯನ್ನು ಸ್ಥಿರವಾಗಿಸಿದರು. ಹೀಗಾಗಿಯೇ ಯೋಜನೆಯ ಘೋಷಣೆಯಿಂದ ಇಂದಿನವರೆಗೂ ಎಷ್ಟೇ ಕಷ್ಟ ಬಂದರೂ ಸಹಿಸುವ ಮಾತನ್ನು ಜನ ತಾವಾಗಿಯೇ ಆಡುತ್ತಿರೋದು!
ನೋಟುಗಳ ಡೀಮಾನಿಟೈಸೇಷನ್ ಸರಿ. ಆದರೆ ಭಾರತದ ಸದೃಢ ಆಥರ್ಿಕತೆಗೆ ಇಡಬೇಕಾದ ಮೊದಲ ಹೆಜ್ಜೆಯೇ ತೆರಿಗೆ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆ. ಸದ್ಯದ ಮಟ್ಟಿಗೆ ಭಾರತದಲ್ಲಿ ಜನರ ಜೀವ ಹಿಂಡುತ್ತಿರುವ ವ್ಯವಸ್ಥೆ ಇದು. ನೇರ-ಪರೋಕ್ಷ ತೆರಿಗೆಗಳ ನೆಪದಲ್ಲಿ ಜನರ ಹಿಂಡಿ ಸಕರ್ಾರದ ಬೊಕ್ಕಸ ತುಂಬುವ ಕೆಲಸ ಮಾಡಲಾಗುತ್ತಿದೆ. ಇನ್ಕಂ ಟ್ಯಾಕ್ಸ್, ವೆಲ್ತ್ ಟ್ಯಾಕ್ಸ್, ಎಕ್ಸ್ಪೆಂಡಿಚರ್ ಟ್ಯಾಕ್ಸ್, ಕ್ಯಾಪಿಟಲ್ ಗೇನ್ ಟ್ಯಾಕ್ಸ್, ಸೆಕ್ಯುರಿಟಿ ಟ್ರಾನ್ಸಾಕ್ಷನ್ ಟ್ಯಾಕ್ಸ್ ಗಳಂತಹ ನೇರ ತೆರಿಗೆಯನ್ನು ಕಟ್ಟಿದ ನಂತರವೂ ಸೇಲ್ಸ್, ಸವರ್ಿಸ್, ವ್ಯಾಟ್ ತರದ ಪರೋಕ್ಷ ತೆರಿಗೆಯನ್ನೂ ಕಟ್ಟಬೇಕು. ಐಸ್ಕ್ರೀಂ ತಿಂದರೆ ಲಕ್ಷುರಿ ಟ್ಯಾಕ್ಸ್, ಸಿನಿಮಾ ನೋಡಿದರೆ ಎಂಟರ್ಟೈನ್ಮೆಂಟ್ ಟ್ಯಾಕ್ಸ್, ಗಾಡಿ ತೊಗೊಂಡರೆ ರೋಡ್ ಟ್ಯಾಕ್ಸ್ ಅದನ್ನು ರಸ್ತೆಗಿಳಿಸಿದರೆ ಟೋಲ್ ಟ್ಯಾಕ್ಸ್; ಪ್ರತೀ ಲೀಟರು ಪೆಟ್ರೋಲಿನ ಮೇಲೆ ಕೃಷಿ ಕಲ್ಯಾಣ, ಸ್ವಚ್ಛ ಭಾರತತರಹದ ಸೆಸ್ಗಳು! ಓಹ್. 50ಕ್ಕೂ ಹೆಚ್ಚು ಬಗೆಯ ತೆರಿಗೆಗಳು ನಮ್ಮನ್ನು ಹೈರಾಣು ಮಾಡಿಬಿಟ್ಟಿವೆ. ಬೊಕ್ಕಸ ತುಂಬಿಸಲು ಜನಸಾಮಾನ್ಯರನ್ನು ಹೀಗೆ ಹಿಂಡುವ ದೊರೆಗಳು ತಾವು ಮಾತ್ರ ಐಷಾರಾಮಿ ಬದುಕನ್ನು ಸವೆಸುತ್ತ ದೊಡ್ಡ ಮೊತ್ತದ ಲೂಟಿ ಮಾಡುತ್ತ ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ. ಹೀಗಾಗಿಯೇ ತೆರಿಗೆಯನ್ನು ಕಟ್ಟದೇ ಹಣವನ್ನು ಮನೆಯೊಳಗೆ ನಿಧಿಯಾಗಿ ಅಡಗಿಸಿಡುವ ಜನ ಈ ದೇಶದಲ್ಲಿ ಹೆಚ್ಚಿರೋದು. ಅಂದರೆ ಅವರ್ಯಾರೂ ಸ್ವಭಾವತಃ ಮೋಸಗಾರರಲ್ಲ; ಕಳ್ಳರಲ್ಲ. ವ್ಯವಸ್ಥೆಯ ದೋಷ ಅವರನ್ನು ಕಳ್ಳರನ್ನಾಗಿಸಿದೆ. ಒಮ್ಮೆ ಈ ವ್ಯವಸ್ಥೆ ಸರಿಯಾಯಿತೆಂದರೆ ರಾಷ್ಟ್ರಕಟ್ಟುವ ಕಾಯಕದಲ್ಲಿ ಅವರೆಲ್ಲ ಹೆಗಲಿಗೆ ಹೆಗಲು ಜೋಡಿಸುತ್ತಾರೆ.
ನರೇಂದ್ರ ಮೋದಿಯವರು ಗ್ಯಾಸ್ ಸಬ್ಸಿಡಿಯನ್ನು ತ್ಯಜಿಸಲು ಕೊಟ್ಟ ಕರೆಗೆ ಈ ದೇಶದ ಜನ ಸ್ಪಂದಿಸಿದ ರೀತಿ ನೆನಪಿಸಿಕೊಳ್ಳಿ. ಒಂದು ಕೋಟಿಗೂ ಹೆಚ್ಚು ಜನ ಕಳೆದ ಏಪ್ರಿಲ್ ವೇಳೆಗೆ ತಮ್ಮ ಸಬ್ಸಿಡಿಯನ್ನು ಬಿಟ್ಟುಕೊಟ್ಟು ಪ್ರಾಮಾಣಿಕತೆಯನ್ನು ಮೆರೆದಿದ್ದರು. ಅಂದರೆ ವ್ಯವಸ್ಥೆಯ ಮೇಲೆ ನಂಬಿಕೆ ಬಂದರೆ ಜನ ಎಂತಹ ತ್ಯಾಗಕ್ಕೂ ಸಿದ್ಧ. ನರೇಂದ್ರ ಮೋದಿಯವರು ಜನರ ಈ ನಂಬಿಕೆಯನ್ನು ಮತ್ತೆ-ಮತ್ತೆ ಪರೀಕ್ಷಿಸಿ ವಿಶ್ವಾಸ ಬಂತೆನಿಸಿದಾಗಲೇ ನೋಟ್ ಬಂದಿಗೆ ಕೈ ಹಾಕಿದ್ದು. ಮೋಸದಿಂದ ನಿಧಿ ಕೂಡಿಟ್ಟು ಮೆರೆಯುತ್ತಿದ್ದವರಿಂದ ಹಣ ಕಕ್ಕಿಸಿ ಬೊಕ್ಕಸ ತುಂಬಿಸಿದ ಮೋದಿಯವರು ಜನಸಾಮಾನ್ಯನ ಮೇಲೆ ಹಾಕಬಹುದಾಗಿದ್ದ ಹೊರೆಯನ್ನಂತೂ ಕಡಿಮೆ ಮಾಡಿದ್ದಾರೆ. ಇದೇ ಪ್ರಯತ್ನವನ್ನು ಮುಂದುವರಿಸಿ ಅವರು ತೆರಿಗೆ ಸುಧಾರಣೆಗೆಂದು ಒಂದು ಹೆಜ್ಜೆ ಮುಂದಡಿಯಿಟ್ಟು ಎಲ್ಲಾ ಬಗೆಯ ನೇರ-ಪರೋಕ್ಷ ತೆರಿಗೆಯನ್ನೂ ತೆಗೆದು ಹಾಕಿಬಿಟ್ಟರೆ? ಹೌದು. ಒಮ್ಮೆಗೆ ರೋಮಾಂಚಿತಗೊಳಿಸಿಬಿಡುವ ಈ ಆಲೋಚನೆ ಅಪರೂಪದ್ದು. ಹದಿನೈದು ವರ್ಷಗಳ ಹಿಂದೆ ಅರ್ಥಕ್ರಾಂತಿಯೆಂಬ ಹೆಸರಲ್ಲಿ ಸಂಶೋಧನೆಯಾಗಿ ಹೊರಬಂದ ಈ ಚಿಂತನೆ ಪೇಟೆಂಟ್ ಪಡೆದು ಹೆಸರು ಮಾಡಿದೆ. ಅಮೇರಿಕದ ಸೆನೇಟ್ನಲ್ಲೂ ಇದಕ್ಕೆ ಹತ್ತಿರವಾದ ಪ್ರಸ್ತಾವನೆಯನ್ನು ಚಚರ್ೆಗೆ ಕೈಗೆತ್ತಿಕೊಂಡ ಉದಾಹರಣೆಯೂ ಇದೆ. ವ್ಯವಸ್ಥೆಯ ಒತ್ತಡಕ್ಕೆ ಸಿಲುಕಿ ಕಪ್ಪುಹಣದ ಒಡೆಯರಾದವರಿಗೆಲ್ಲ ನೋಟ್ ಬಂದಿಯಿಂದ ಚುರುಕು ಮುಟ್ಟಿಸಿದ ಪ್ರಧಾನಿಗಳು ಇಂತಹುದೊಂದು ಯೋಜನೆಯ ಮೂಲಕ ಪ್ರಾಮಾಣಿಕರಾಗಿ ಎದೆಯೆತ್ತಿ ನಡೆಯುವ ಅವಕಾಶ ಮಾಡಿಕೊಡಬಲ್ಲರೆ?
ಅದು ಸರಿ. ಯಾವ ತೆರಿಗೆಯೂ ಇಲ್ಲವೆಂದರೆ ಸಕರ್ಾರದ ಬೊಕ್ಕಸ ತುಂಬಿಸುವುದಾದರೂ ಹೇಗೆ? ಜನಜೀವನಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಡುವುದು ಹೇಗೆ? ಅರ್ಥಕ್ರಾಂತಿಯ ಉತ್ತರ ರೋಚಕವಾಗಿದೆ.

2 thoughts on “ಅರ್ಥಶಾಸ್ತ್ರದ ಪುಟ ತಿರುವಿ ಹಾಕುವ ಹೊತ್ತು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s