ಬತ್ತುವ ಮುನ್ನ, ನಡೆದು ಬಿಡಲಿ ಕದನ!

ಬತ್ತುವ ಮುನ್ನ, ನಡೆದು ಬಿಡಲಿ ಕದನ!

ಜಗತ್ತೆಲ್ಲ ತಮ್ಮ ಪ್ರಾಕೃತಿಕ ಸಂಪತ್ತನ್ನು ಉಳಿಸಿಕೊಳ್ಳುವಲ್ಲಿ ಇಷ್ಟೊಂದು ಹೆಣಗಾಡುತ್ತಿರುವಾಗ ಭಾರತೀಯರು ನಾವು ಮಾತ್ರ ಕ್ಷಣಿಕ ಸುಖದಾಸೆಗೆ ಎಲ್ಲವನ್ನು ಬಲಿಕೊಡುತ್ತಿದ್ದೇವೆ. ಗಂಗಾ-ಕಾವೇರಿ ಜೋಡಣೆಯ ಕನಸನ್ನು ಪ್ರಧಾನಿಯೊಬ್ಬರು ಕಂಡ ಮಾತ್ರಕ್ಕೆ ಇಡಿಯ ದೇಶ ರೋಮಾಂಚಿತವಾಗಿಬಿಡುತ್ತದೆ. ಈ ಮಾರ್ಗದಲ್ಲಿ ಅದೆಷ್ಟು ಅರಣ್ಯ ನಾಶವಾಗಲಿದೆಯೆಂಬುದನ್ನು ಲೆಕ್ಕ ಹಾಕಲು ಯಾರಿಗೂ ಪುರಸೊತ್ತಿಲ್ಲ. ಮಂತ್ರಿಯೊಬ್ಬರು ನೇತ್ರಾವತಿಯನ್ನು ತಿರುಗಿಸಿ ಕಾಂಕ್ರೀಟ್ ಪೈಪುಗಳ ಮೂಲಕ ನೂರಾರು ಕಿ.ಮೀ ದೂರ ಹರಿಸುವ ಯೋಜನೆಗೆ ಹಣ ಬಿಡುಗಡೆ ಮಾಡಿಸುತ್ತಾರೆ. ನೇತ್ರಾವತಿಯಲ್ಲಿ ಅಷ್ಟು ದೂರ ಹರಿಯಬಲ್ಲಷ್ಟು ನೀರಿದೆಯಾ ಎಂಬುದನ್ನು ಯೋಚಿಸುವ ಗೋಜಿಗೂ ನಾವ್ಯಾರೂ ಹೋಗಲಾರೆವು. ಕಳಸಾ ಬಂಡೂರಿ ಯೋಜನೆಯ ಹೋರಾಟ ಶುರುವಾದಾಗಲಿಂದಲೂ ಅಕ್ಕಪಕ್ಕದ ಒಂದೆರಡು ಗುಡ್ಡಗಳನ್ನೇ ಕಾಡು ಮಾಡುವ ಪಣ ತೊಟ್ಟಿದ್ದರೆ ಇಂದು ನದಿ ಜೋಡಣೆಯ ಮಾತಾಡುವ ಅಗತ್ಯವೇ ಬರುತ್ತಿರಲಿಲ್ಲ. ಇಷ್ಟು ನಾವು ಮಾಡಿ, ಅತ್ತ ತಮಿಳುನಾಡು ಸಮುದ್ರದ ನೀರನ್ನು ಕುಡಿಯುವ ನೀರಾಗಿ ಮಾರ್ಪಡಿಸುವ ಪ್ರಯತ್ನಕ್ಕೆ ಕೈಹಾಕಿದ್ದರೆ ಕಾವೇರಿ ಬತ್ತುವ ಸಮಸ್ಯೆಯೇ ಇರಲಿಲ್ಲ.

ಕಳೆದ ಹತ್ತು ವರ್ಷಗಳ ಹಿಂದೆ 2006 ರಲ್ಲಿ ಕೊಡಗು ಜಿಲ್ಲೆಯಲ್ಲಿ ಮೂರುಸಾವಿರ ಮಿಲೀಮೀಟರ್ ಮಳೆಯಾಗಿತ್ತು. ಈ ವರ್ಷ ಬರೋಬ್ಬರಿ ಅದರರ್ಧ ಸಾವಿರದೈದುನೂರು ಮಿಮೀನಷ್ಟು. ಪರಿಸರ ನಾಶದ ವೇಗ ಇದೇ ರೀತಿ ಮುಂದುವರಿದರೆ ಮುಂದಿನ ಐದು ವರ್ಷಗಳಲ್ಲಿ ಅದರರ್ಧ, ಅಲ್ಲಿಂದಾಚೆಗೆ ಮತ್ತರ್ಧ. ಹೆಚ್ಚೆಂದರೆ ಇನ್ನು ಹತ್ತು ವರ್ಷ ಮಾತ್ರ. ಆಮೇಲೆ ಕಾವೇರಿ ನೀರನ್ನು ತಮಿಳುನಾಡು ಕೇಳಲಾರದು, ನಾವು ನೀಡುವ ಸ್ಥಿತಿಯಲ್ಲಿರಲಾರೆವು. ಹೌದು ಈಗೊಂದು ಭೀಕರ ಕದನ ನಡೆಯಲೇಬೇಕಿದೆ.

ಇದ್ದಕ್ಕಿದ್ದಂತೆ ಮಾತಾಡುವ ಮಹಾಶೂರರು ಹೆಚ್ಚಾಗಿಬಿಟ್ಟಿದ್ದಾರೆ. ಅವರ್ಯಾರಿಗೂ ವಾಸ್ತವ ಸ್ಥಿತಿಯನ್ನು ಅರಿಯುವ ಮತ್ತು ಭವಿಷ್ಯದ ಸಮಸ್ಯೆಯನ್ನು ತಪ್ಪಿಸುವ ವ್ಯವಧಾನವೂ ಇಲ್ಲ. ಕಳೆದ ವರ್ಷ ತಮಿಳುನಾಡಿಗೆ ನೀರು ಬಿಟ್ಟೂ ನಾವು ನೆಮ್ಮದಿಯಿಂದಿದ್ದೆವು. ಈ ವರ್ಷ ನೀರು ಬಿಟ್ಟರೆ ಕೆಟ್ಟೆವು ಎನ್ನುವಂತಹ ಸ್ಥಿತಿಗೆ ಬಂದಿದ್ದಾದರೂ ಏಕೆಂದು ಯೋಚಿಸುವ ಗೋಜಿಗೂ ಯಾರೂ ಹೋಗುತ್ತಿಲ್ಲ. ಇರಲಿ. ಕಳೆದ ಒಂದು ವರ್ಷದ ಅವಧಿಯಲ್ಲಿ ಕೇರಳಕ್ಕೆ ವಿದ್ಯುತ್ ಕೊಡಬೇಕೆಂಬ ಹಿನ್ನೆಲೆಯಲ್ಲಿ ಸರಕಾರವೇ ಅನುಮತಿ ಕೊಟ್ಟು ಕೊಡಗಿನಲ್ಲಿ ಒಂದು ಲಕ್ಷ ಮರ ಕಡಿಸಿತಲ್ಲ. ಆಗ ಯಾರಾದರೂ ಬೊಬ್ಬೆ ಇಟ್ಟಿದ್ದರಾ? ಇಷ್ಟಕ್ಕೂ ಸಕರ್ಾರದಲ್ಲಿರುವ ಕೇರಳ ಪರ ಮಂತ್ರಿಯನ್ನು ಒಮ್ಮೆಯಾದರೂ ಕೇಳಬೇಕೆನಿಸಿತ್ತಾ ಅವರಿಗೆ? ಒಂದಷ್ಟು ಕೊಡಗಿನ ಜನ ಮತ್ತು ಅಲ್ಲಿಯವರೆಗೂ ಪಾದಯಾತ್ರೆ ಮಾಡಿದ ಮಂಡ್ಯದ ಕೆಲವಷ್ಟು ಜನ ಬಿಟ್ಟರೆ ಉಳಿದವರು ಪ್ರತಿಕ್ರಿಯಿಸಲೂ ಇಲ್ಲ. ಕರಾವಳಿಯ ದಿಕ್ಕಿನಿಂದ ಕೇರಳಕ್ಕೆ ಹೋಗಬಹುದಾಗಿದ್ದ ಈ ವಿದ್ಯುತ್ ತಂತಿಗಳು ಅದೇಕೆ ಕೊಡಗಿನ ಘನವಾದ ಕಾಡಿನ ಮೂಲಕ ಹಾದು ಹೋದವೆಂಬ ಸಣ್ಣ ಪ್ರಶ್ನೆ ಕೇಳಿಕೊಂಡರೂ ಸಾಕು. ಇದಕ್ಕೆ ಕಾರಣರಾದವರನ್ನು ಬಡಿದು ಬಿಸಾಡೋಣ ಎನಿಸಿಬಿಡುತ್ತೆ.

 

0001

ಇಷ್ಟಕ್ಕೂ ಕೊಡಗು ಕಾವೇರಿಯ ಮೂಲ. ಅರ್ಧದಷ್ಟು ಕಾವೇರಿಯ ನೀರಿನ ಸ್ರೋತ ಅಲ್ಲಿನದೇ. ಒಟ್ಟಾರೆ ಕಾವೇರಿ 8 ಕೋಟಿ ಜನರ ಜೀವನಾಡಿ, ಬೆಂಗಳೂರಿಗರ ಪಾಲಿಗೆ ಜೀವಜಲ. 600 ದೊಡ್ಡ ಕಾಖರ್ಾನೆಗಳ ಉಸಿರು ಅದು. ರೈತರಿಗಂತೂ ಕಾವೇರಿ ಬದುಕು. ಹೀಗಿರುವಾಗ ಈ ಜಲಾನಯನ ಪ್ರದೇಶವನ್ನು ಸೂಕ್ಷ್ಮವೆಂದು ಘೋಷಿಸಿ ಅದರ ರಕ್ಷಣೆಗೆ ನಿಲ್ಲಬೇಕಿದ್ದ ಸಕರ್ಾರ ಟಿಂಬರ್ ಲಾಬಿಗೆ ಮಣಿದು ಇಷ್ಟು ಪ್ರಮಾಣದ ಕಾಡುನಾಶ ಮಾಡಿಬಿಟ್ಟಿತ್ತಲ್ಲ, ಸತ್ಯ ಹೇಳಿ ಇದರ ನಿಜವಾದ ಫಲಾನುಭವಿಗಳು ಯಾರು?
ಸುಮ್ಮನೆ ಲೆಕ್ಕಾಚಾರಕ್ಕಿರಲಿ ಅಂತ ಹೇಳುತ್ತಿರೋದು. ಒಂದು ಬೆಳೆದ ಮರ ಕನಿಷ್ಠ 30 ರಿಂದ 40 ಸಾವಿರ ಲೀಟರ್ ನೀರನ್ನು ಹಿಡಿದಿಡುತ್ತದೆ. ಅದರ ಬೇರು ಭೂಮಿಯ ಆಳಕ್ಕೆ ಈ ನೀರನ್ನು ಇಳಿಬಿಟ್ಟು ಅಂತರ್ಜಲವಾಗಿ ಪರಿವತರ್ಿಸುವಲ್ಲಿ ಸಹಕರಿಸುತ್ತದೆ. ಅಷ್ಟೇ ಅಲ್ಲ. ಎಲೆಗಳು ನೀರಿನ ಹನಿಗಳನ್ನು ಪರಿಸರಕ್ಕೆ ಚಿಮ್ಮಿಸಿ ಎಲ್ಲೆಲ್ಲೂ ತಂಪು ವಾತಾವರಣ ಇರುವಂತೆ ನೋಡಿಕೊಳ್ಳುತ್ತದೆ. ಈ ತಂಪು ವಾತಾವರಣಕ್ಕೇ ಘನೀಭವಿಸಿದ ಮೋಡಗಳು ಆಕಷರ್ಿತವಾಗಿ ಮಳೆ ಸುರಿಸೋದು. ಕಳೆದ ಹದಿನೈದು ದಿನಗಳಿಂದ ಆಕಾಶದಲ್ಲಿ ಹರಳುಗಟ್ಟಿದ ಮೋಡಗಳು ನೀರು ಸುರಿಸದೇ ಓಡುತ್ತಿರೋದು ಏಕೆಂದು ಈಗ ಅರ್ಥವಾಯಿತೇ? ಆ ಮರಗಳನ್ನೆಲ್ಲಾ ಕಡಿದು ನಾಶಮಾಡಿ ನೀರು ಬೇಕೆಂದರೆ ಎಲ್ಲಿಂದ ತರೊದು.
ಈ ವರ್ಷ ಮುಂಗಾರಿನ ನಂತರ ಮಳೆಯೇ ಇಲ್ಲ. ಹಿಂಗಾರು ಪೂರ್ಣ ವಿಫಲವಾಯ್ತು. ಒಟ್ಟಾರೆ ವಷರ್ಾಋತು ಮೂನರ್ಾಲ್ಕು ತಿಂಗಳಿಂದ ಹದಿನೈದು ದಿನಗಳಿಗಿಳಿದುಬಿಟ್ಟಿದೆ. ಕೆ.ಆರ್.ಎಸ್ನಲ್ಲಿ ನೀರಿಲ್ಲವೆಂದು ಕೂಗಾಡುತ್ತೇವೆ. ಅದಕ್ಕೆ ಮೂಲ ಕಾರಣ ಕೊಡಗಿನಲ್ಲಿ ಮಳೆಯ ಕೊರತೆ ಮತ್ತು ಈ ಕೊರತೆಯ ಹಿನ್ನೆಲೆ ಇರುವುದು ಸಕರ್ಾರದ ಮಂತ್ರಿಯೊಬ್ಬರ ತಿಜೋರಿಯಲ್ಲಿ ಎಂಬುದು ಎಷ್ಟು ಜನರಿಗೆ ಗೊತ್ತು ಹೇಳಿ? ಹಾಗಂತ ಯಾವುದೇ ಒಂದು ಪಕ್ಷದವರ ಕೈವಾಡವಲ್ಲ ಇದು. ಟಿಂಬರ್ ಲಾಬಿಗೆ ಪಕ್ಷಭೇದ ಇಲ್ಲ. ಮೈಸೂರಿನಿಂದ ಕೊಡಗಿಗೆ ರೈಲುಹಳಿ ಹಾಕಬೇಕೆಂಬ ಕೂಗು ಜೋರಾಗಿದೆ. ಈ ನೆಪದಲ್ಲಿ ಕಡಿಯಲ್ಪಡುವ ಮರಗಳ ಸಂಖ್ಯೆಯಂತೂ ಲೆಕ್ಕವಿಲ್ಲದಷ್ಟು. ಆಥರ್ಿಕವಾಗಿ ಲಾಭದಾಯಕವಲ್ಲದ ಯೋಜನೆಯೆಂದು ನನೆಗುದಿಗೆ ಬಿದ್ದಿದ್ದ ರೈಲು ಕಾಮಗಾರಿಯನ್ನು ಮತ್ತೆ ಚುರುಕುಗೊಳಿಸಿ ರೈಲು ಹರಿಬಿಟ್ಟರೆ ಕೊಡಗಿನವರು ಮೈಸೂರಿಗೆ ಆರಾಮಾಗಿ ಬರಬಹುದೇನೋ? ಆದರೆ ಕಾವೇರಿ ಸರಾಗವಾಗಿ ಹರಿಯಲಾರಳು. ಹಾಗಂತ ಮೈಸೂರು-ಮಂಡ್ಯ ಮತ್ತು ಬೆಂಗಳೂರಿಗರ ಲಾಭಕ್ಕಾಗಿ ನಾವೇಕೆ ರೈಲಿನಿಂದ ವಂಚಿತರಾಗಬೇಕೆಂದು ಕೊಡಗಿನವರು ಕೂಗಾಡಿ ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟರೆ ಉತ್ತರಿಸುವವರು ಯಾರು?
ಕೆಲವೊಮ್ಮೆ ಅರ್ಥವಾಗದ ಸಂಗತಿಯೊಂದಿದೆ. ಜಗತ್ತೆಲ್ಲ ತಮ್ಮ ಪ್ರಾಕೃತಿಕ ಸಂಪತ್ತನ್ನು ಉಳಿಸಿಕೊಳ್ಳುವಲ್ಲಿ ಇಷ್ಟೊಂದು ಹೆಣಗಾಡುತ್ತಿರುವಾಗ ಭಾರತೀಯರು ನಾವು ಮಾತ್ರ ಕ್ಷಣಿಕ ಸುಖದಾಸೆಗೆ ಎಲ್ಲವನ್ನು ಬಲಿಕೊಡುತ್ತಿದ್ದೇವೆ. ಗಂಗಾ-ಕಾವೇರಿ ಜೋಡಣೆಯ ಕನಸನ್ನು ಪ್ರಧಾನಿಯೊಬ್ಬರು ಕಂಡ ಮಾತ್ರಕ್ಕೆ ಇಡಿಯ ದೇಶ ರೋಮಾಂಚಿತವಾಗಿಬಿಡುತ್ತದೆ. ಈ ಮಾರ್ಗದಲ್ಲಿ ಅದೆಷ್ಟು ಅರಣ್ಯ ನಾಶವಾಗಲಿದೆಯೆಂಬುದನ್ನು ಲೆಕ್ಕ ಹಾಕಲು ಯಾರಿಗೂ ಪುರಸೊತ್ತಿಲ್ಲ. ಮಂತ್ರಿಯೊಬ್ಬರು ನೇತ್ರಾವತಿಯನ್ನು ತಿರುಗಿಸಿ ಕಾಂಕ್ರೀಟ್ ಪೈಪುಗಳ ಮೂಲಕ ನೂರಾರು ಕಿ.ಮೀ ದೂರ ಹರಿಸುವ ಯೋಜನೆಗೆ ಹಣ ಬಿಡುಗಡೆ ಮಾಡಿಸುತ್ತಾರೆ. ನೇತ್ರಾವತಿಯಲ್ಲಿ ಅಷ್ಟು ದೂರ ಹರಿಯಬಲ್ಲಷ್ಟು ನೀರಿದೆಯಾ ಎಂಬುದನ್ನು ಯೋಚಿಸುವ ಗೋಜಿಗೂ ನಾವ್ಯಾರೂ ಹೋಗಲಾರೆವು. ಕಳಸಾ ಬಂಡೂರಿ ಯೋಜನೆಯ ಹೋರಾಟ ಶುರುವಾದಾಗಲಿಂದಲೂ ಅಕ್ಕಪಕ್ಕದ ಒಂದೆರಡು ಗುಡ್ಡಗಳನ್ನೇ ಕಾಡು ಮಾಡುವ ಪಣ ತೊಟ್ಟಿದ್ದರೆ ಇಂದು ನದಿ ಜೋಡಣೆಯ ಮಾತಾಡುವ ಅಗತ್ಯವೇ ಬರುತ್ತಿರಲಿಲ್ಲ. ಇಷ್ಟು ನಾವು ಮಾಡಿ, ಅತ್ತ ತಮಿಳುನಾಡು ಸಮುದ್ರದ ನೀರನ್ನು ಕುಡಿಯುವ ನೀರಾಗಿ ಮಾರ್ಪಡಿಸುವ ಪ್ರಯತ್ನಕ್ಕೆ ಕೈಹಾಕಿದ್ದರೆ ಕಾವೇರಿ ಬತ್ತುವ ಸಮಸ್ಯೆಯೇ ಇರಲಿಲ್ಲ.
ನನಗೆ ಗೊತ್ತು. ಇಷ್ಟನ್ನೂ ಹೇಳಿದರೆ ಅನೇಕರಿಗೆ ಕಿರಿಕಿರಿ ಎನಿಸಬಹುದು. ಸದ್ಯದ ಕತೆಗೆ ಬನ್ನಿ ಎನ್ನಬಹುದು. ನಾವು ಒಂದು ವರ್ಷದ ನಂತರದ ಮಾತಾಡುತ್ತಿದ್ದೇವೆ. ಹತ್ತು ವರ್ಷದ ನಂತರದ ಕರಾಳ ದಿನಗಳನ್ನು ಊಹಿಸುತ್ತಿದ್ದೇವೆ. ಅದಕ್ಕೇ ಎರಡು ವರ್ಷದ ಹಿಂದೆ ಬಾಗಲಕೋಟೆಯ ಹಳಿಂಗಳಿಯ ಗುಡ್ಡದ ಮೇಲೆ ಸಾವಿರಾರು ಸಸಿಗಳನ್ನು ಒಂದು ಸಾವಿರ ತರುಣರು ಸೇರಿ ನೆಟ್ಟು ಬಂದಿದ್ದೆವು. ಇಂದು ಅವು ಮರಗಳಾಗಿ ಬೆಳೆಯುವ ಎಲ್ಲಾ ಲಕ್ಷಣಗಳನ್ನು ತೋರುತ್ತಿವೆ. ಇನ್ನೊಂದು ಹತ್ತು ವರ್ಷಗಳ ನಂತರ ಈ ಮರಗಳು ತಡೆಯುವ ಮೋಡಗಳು ಕನ್ನಡ ನಾಡಿನ ಪಾಲಿಗೆ ನೀರಿನ ಸ್ರೋತವಾಗಲಿವೆ. ಕೆರೆಯ ಹೂಳೆತ್ತುವುದಂತೂ ನಮ್ಮಿಂದಾಗಲಾರದು. ಕೊನೆಗೆ ಒತ್ತುವರಿಯಾದರೂ ತಡೆಯೋಣವೆಂದು ಕೆ.ಆರ್.ಪೇಟೆಯ ಭಾರತೀಪುರದಲ್ಲಿ ನೆಟ್ಟ ಮೂರ್ನಾಲ್ಕು ಸಾವಿರ ಸಸಿಗಳಲ್ಲಿ ಅರ್ಧದಷ್ಟು ಇಂದು ಪೊಗದಸ್ತಾಗಿ ಬೆಳೆದು ನಿಂತಿದೆ. ಅವು ಮೋಡ ತಡೆಯುವಷ್ಟು ಬೆಳೆದು ನಿಂತರೆ ಮಂಡ್ಯ ಭಾಗಕ್ಕೆ ಮನ ತುಂಬುವಷ್ಟು ಮಳೆಯಾಗಬಹುದು. ಅಷ್ಟಂತೂ ನಮಗೆ ತೃಪ್ತಿಯಿದೆ. ಹಾಗಂತ ಮಳೆಗಾಲದಲ್ಲಿ ಸುಮ್ಮನಿರುವ ಜಾಯಮಾನವಲ್ಲ ನಮ್ಮದು. ಮೈಸೂರಿನಲ್ಲಿಯೇ ನೀರಿಂಗಿಸುವ ಕುರಿತಂತೆ ಕಾಯರ್ಾಗಾರ ಮಾಡಿ ನಮ್ಮ ನಮ್ಮ ಮನೆಗಳಲ್ಲಿ ಅದನ್ನು ಜಾರಿಗೆ ತಂದು, ಇತರರಿಂದಲೂ ಅದನ್ನು ಮಾಡಿಸಿರುವ ಹೆಮ್ಮೆ ನಮಗಿದೆ. ಕುಡಿದ ಕಾವೇರಿ, ತುಂಗೆ, ಕೃಷ್ಣೆಯ ನೀರಿಗೆ ನಾವು ನೀರಿಂಗಿಸಿ ನಮ್ಮ ಅತ್ಯಲ್ಪ ಪ್ರಮಾಣದ ಋಣವನ್ನಾದರೂ ತೀರಿಸಿರುವ ಸಂತಸವಿದೆ. ಮಾತಾಡುವವರಾದರೋ ಒಂದು ದಿನ ನಮ್ಮೊಂದಿಗೆ ಕಲ್ಯಾಣಿಯ ಕೆಲಸಕ್ಕೆ ಇಳಿದವರಲ್ಲ. ಅದಕ್ಕೇ ಅವರ ವೀರಾವೇಷವನ್ನು ಕಂಡಾಗ ನಗೆ ಉಕ್ಕೋದು.
ಬಿಡಿ. ಇನ್ನು ರಾಜಕೀಯವೇ ಮಾತನಾಡಬೇಕೆಂದರೆ, ಪ್ರತಿಯೊಂದು ಸಕರ್ಾರಕ್ಕೂ ರಾಜ್ಯದ ಹಿತಾಸಕ್ತಿಯೊಂದಿರಬೇಕು. ಸುಪ್ರೀಂಕೊಟರ್್ನಲ್ಲಿ ಅದಕ್ಕಾಗಿ ಬಡಿದಾಡುವ ಗೆಲ್ಲುವ ವ್ಯವಸ್ಥಿತ ಉಪಾಯಗಳನ್ನು ರೂಪಿಸಿಕೊಳ್ಳಬೇಕು. ಅದನ್ನು ಬಿಟ್ಟು ಕುಚರ್ಿ ಕಾಳಗದಲ್ಲಿದ್ದು ಕೇಂದ್ರದೊಂದಿಗೆ, ತಮಿಳುನಾಡಿನೊಂದಿಗೆ ಮೊದಲೇ ಮಾತನಾಡಿಕೊಳ್ಳದೇ ನ್ಯಾಯಾಲಯದಲ್ಲಿ ಸೋತಿದ್ದು ಯಾರು? ಅದು ಬಿಡಿ. ತೀಪರ್ು ಬಂದ ಮೊದಲ ದಿನ ಹೊತ್ತಿದ ಬೆಂಕಿ ಆನಂತರ ಕಾಣಲೇ ಇಲ್ಲವಲ್ಲ ಏಕೆ? ಇಡಿಯ ರಾಜ್ಯ ಕಾವೇರಿಯ ಕದನದಲ್ಲಿದ್ದಾಗ ಕೊಡಗಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಅಧಿಕಾರಿ ಗಣಪತಿಯ ಸಾವಿಗೆ ಕಾರಣರಾಗಿದ್ದ ಮಂತ್ರಿಗಳಿಗೆ ಕ್ಲೀನ್ ಚಿಟ್ ದಕ್ಕಿಬಿಟ್ಟಿತಲ್ಲ. ಅಷ್ಟೇ ಅಲ್ಲ. ಈ ನಡುವೆಯೇ ಸದ್ದಿಲ್ಲದೇ ಅವರನ್ನು ಮಂತ್ರಿ ಪದವಿಗೆ ವಾಪಸ್ಸು ಕರೆದು ಕೂರಿಸಿಬಿಟ್ಟಿತಲ್ಲ ಸರಕಾರ! ಕಾಡುಕಡಿಸಿ ಲಾಭ ಮಾಡಿಕೊಂಡು, ನೀರಿನ ಸೆಲೆಗೆ ಬೆಂಕಿ ಹಚ್ಚಿ, ಅದರ ಮಧ್ಯದಿಂದಲೇ ಆರೋಪ ಮುಕ್ತರಾಗಿ ಅಧಿಕಾರದ ಪಡಸಾಲೆಗೆ ಮರಳಿ ಬಂದ ಮಂತ್ರಿಯ ಕುರಿತಂತೆ ಯಾರೂ ಚಕಾರವೆತ್ತಲೇ ಇಲ್ಲ. ಕಾವೇರಿಯನ್ನೂ ಸಕರ್ಾರ ಬಳಸಿಕೊಂಡುಬಿಟ್ಟಿತು, ಛೇ!
ಈ ಅವಕಾಶದಲ್ಲಿಯೇ ಒಂದಷ್ಟು ಜನ ಪ್ರತ್ಯೇಕ ರಾಷ್ಟ್ರದ ಮಾತನಾಡುತ್ತಿದ್ದಾರೆ. ಯಾವ ಕಾವೇರಿಗಾಗಿ ಪ್ರತ್ಯೇಕಗೊಂಡೆವೋ ಅದೇ ದಶಕಗಳ ನಂತರ ಇಲ್ಲವಾಗಿಬಿಟ್ಟರೆ ಒಕ್ಕೂಟದಿಂದ ಹೊರಬಂದ ಲಾಭವಾದರೂ ಏನು? ಅದಕ್ಕೆ ಕಾವೇರಿ ಬತ್ತುವ ಮುನ್ನ ಒಂದು ಕದನ ನಡೆಸೋಣ. ಅದು ನದಿ ಬತ್ತದಂತೆ ಮಾಡುವ ಕದನ. ಕಾಡು ಉಳಿಸಲು, ನೀರು ಉಳಿಸಲು ನಮ್ಮ ನಡುವೆಯೇ ನಡೆಯಬೇಕಾದ ಕದನ. ಸದ್ಯದ ಅಗತ್ಯ ಅದೇ.

One thought on “ಬತ್ತುವ ಮುನ್ನ, ನಡೆದು ಬಿಡಲಿ ಕದನ!

  1. There is a long way to think like you sir…. 🙂 learning from mistakes…. hehehe….
    ಹೌದು ನೀವು – ನಿಮ್ಮ ವಿಚಾರಧಾರೆ ಸದಾ ಅರ್ಥಗರ್ಭಿತವಾಗಿರುತ್ತದೆ… ಕೆಲವು ಸಾರಿ ಮೌನ ಹಲವಾರು ಅರ್ಥಗಳನ್ನ ನೀಡುತ್ತದೆ… ಕಾವೇರಿಯ ವಿಚಾರವಾಗಿ ಆದದ್ದು ಅದೇ… (ಕೆಲವರಿಗೆ)… ಆದರೆ ನನಗೆ, ನಿಮ್ಮ ಮುಂದಿನ ನಡೆಯ ಕುರಿತಾಗಿ ಕುತೂಹಲ ಇದ್ದದು ಖಂಡಿತ ಹೌದು… ಬಹಳಷ್ಟು ಮಂದಿ ತಮಗೆ ತೋರಿದ ರೀತಿ ಅರುಹಿದರು ಕೂಡ…. ಹಾಗೆಲ್ಲ ನೀವು ಮೌನಿಯಾಗಿ ಉಳಿದದ್ದು ಸ್ವಲ್ಪ ಕಸಿವಿಸಿಯಾಗಿತ್ತು… ಆದರೆ ಈ ಕುರಿತಾದ ದ್ವಾನಿಮುದ್ರಣ ಹೊರಬಿದ್ದಾಗ… ನಿಜಕ್ಕೂ ನಾವು ಯೋಚಿಸುವ ದಿಕ್ಕಿನ ಗತಿಯನ್ನೇ ಬದಲಿಸಿತ್ತು… ಗಂಭೀರ ಸ್ವರೂಪದ ಚಿಂತನೆಯನ್ನು ಮನಸ್ಸಿನ ಆಳಕ್ಕೆ ಇಳಿಸುವ ರೀತಿಯಲ್ಲಿ ನಿಮ್ಮ ಪ್ರೌಢತ್ವವನ್ನು ತೋರುತ್ತದೆ. ಧನ್ಯವಾದಗಳು…. s… Need to learn a lot… the way you tackle the situations…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s