ಅಶೋಕ ಚಕ್ರವತಿಯಾದ, ಭಾರತ ಬಲಹೀನವಾಯ್ತು

ಆರ್ಯ ಧರ್ಮದಲ್ಲಿ ಶಾಂತಿ ಮತ್ತು ಸಹನೆಗೆ ಕೊರತೆಯಿರಲಿಲ್ಲ. ಆದರೆ ಶಸ್ತ್ರಕ್ಕೂ ಅಷ್ಟೇ ಮಹತ್ವವಿತ್ತು. ಜನಕನಂತಹವರು ಋಷಿತುಲ್ಯ ಜ್ಞಾನಿಗಳಾಗಿದ್ದರೂ ಶಸ್ತ್ರದ ಮೂಲಕ ರಾಷ್ಟ್ರ ರಕ್ಷಿಸುವ ಹೊಣೆಯನ್ನು ಸಮ-ಸಮವಾಗಿ ನಿಭಾಯಿಸುತ್ತಿದ್ದರು. ಆದರೆ ಅಶೋಕ ಜ್ಞಾನಿಯೆನಿಸಿಕೊಳ್ಳುವ ತವಕದಲ್ಲಿ ಶಸ್ತ್ರವನ್ನೇ ಧಿಕ್ಕರಿಸಿದ. ಇದು ಚಾಣಕ್ಯನ ಏಕೀಕೃತ ಆಯರ್ಾವರ್ತದ ಮತ್ತು ಜಗತ್ತನ್ನೇ ವ್ಯಾಪಿಸಿದ ಸಾಮ್ರಾಜ್ಯದ ಕಲ್ಪನೆಗೆ ಬಲವಾದಪೆಟ್ಟುಕೊಟ್ಟಿತು. ಚಂದ್ರಗುಪ್ತ-ಬಿಂದುಸಾರರ ಕಾಲಕ್ಕೆ ಹಾಗೆ ನೋಡಿದರೆ ನಂದರ ಕಾಲಕ್ಕೂ ಮಗಧದ ಸೈನ್ಯವನ್ನು ಕಂಡರೆ ಹೆದರಿ ನಡುಗುತ್ತಿದ್ದ ಜಗತ್ತು ಈಗ ಆಕ್ರಮಣಕ್ಕೆ ತಯಾರಾಗಲಾರಂಭಿಸಿತು. ಗ್ರೀಕರು, ಶಕರು, ಹೂಣರು, ಕುಶಾನರು, ಪಹ್ಲವರು ಇವರೆಲ್ಲ ಭಾರತದೆಡೆಗೆ ದೃಷ್ಟಿ ಹಾಕಲು ಸಾಧ್ಯವಾಗಿದ್ದು ಬಹುಶಃ ಇದೇ ಕಾರಣಕ್ಕೇ. ಅಶೋಕ ತಾನು ಸಂತನಾದ, ದೇಶವನ್ನು ಬಲಹೀನಗೊಳಿಸಿಬಿಟ್ಟ.

001

ಕಳಿಂಗ ಕದನ ಅಶೋಕನ ಜೀವನದ ದಿಕ್ಕು ಬದಲಿಸಿದ ಘಟನೆ. ಅದರಂತೆ ಅಶೋಕ ಪಟ್ಟಕ್ಕೇರಿದ್ದು ಭಾರತದ ಐತಿಹಾಸಿಕ ಓಟದ ಮಾರ್ಗ ಬದಲಿಸಿದ ಘಟನೆ. ಅಶೋಕನಿಂದಾಗಿಯೇ ಭಾರತೀಯರ ಕ್ಷಾತ್ರತೇಜ ನಷ್ಟವಾಗಿ ಹೋಯಿತೆಂದು ಅನೇಕರ ಅಭಿಪ್ರಾಯ. ಅದಕ್ಕೇ ಆತ ಪಶ್ಚಿಮದ ಲೇಖಕರಿಗೆ ತನ್ಮೂಲಕ ಭಾರತೀಯ ಲೇಖಕರಿಗೂ ಬಲುಪ್ರಿಯ. ಲೇಖನ ಸರಣಿಯುದ್ದಕ್ಕೂ ಅದನ್ನು ಚಚರ್ಿಸೋಣ.
ಕಳಿಂಗವೆಂದು ಕರಿಯಲ್ಪಡುತ್ತಿದ್ದ ಈಗಿನ ಒರಿಸ್ಸಾ ಅತ್ಯಂತ ಪ್ರಾಚೀನ ರಾಜ್ಯ. ಕೂರ್ಮಪುರಾಣ, ಮಹಾಭಾರತಗಳಲ್ಲೂ ಕಳಿಂಗದ ಉಲ್ಲೇಖ ಬಂದಿದೆ. ಕಾಳಿದಾಸ ತನ್ನ ರಘುವಂಶದಲ್ಲಿ ಸಮುದ್ರ ತೀರದ ರಾಜ್ಯಗಳ ರಾಜಧಾನಿಯಾಗಿ ಇದನ್ನು ಗುರುತಿಸುತ್ತಾನೆ. ಮಹೇಂದ್ರ ಪರ್ವತವನ್ನು ಹೊಂದಿರುವ ಮತ್ತು ದಂಡಕಾರಣ್ಯವನ್ನು ಗಡಿಯಾಗಿ ಪಡೆದಿರುವ ರಾಜ್ಯವೆಂದು ಪರಿಚಯಿಸುತ್ತಾನೆ. ಸಮೃದ್ಧವಾದ ಕರಾವಳಿ ಭಾಗವನ್ನು ಪಡೆದಿರುವ ಕಳಿಂಗ ಸಮುದ್ರ ಮಾರ್ಗದ ಮೂಲಕ ಜಗತ್ತಿಗೆ ಭಾರತದ ಕೊಂಡಿಯಾಗಿತ್ತು. ದೇವನಾಂಪ್ರಿಯ ಅಶೋಕನಿಗೆ ಕಳಿಂಗವನ್ನು ಏರಿಹೋಗಲು ಇಷ್ಟು ಕಾರಣ ಸಾಕಿತ್ತು. ಕಳಿಂಗದ ಮೇಲೆ ದಾಳಿಗೈದ ಅಶೋಕ ಪೂರ್ಣ ರಾಜ್ಯವನ್ನು ಧ್ವಂಸಗೊಳಿಸಿದ. ಒಂದೂವರೆ ಲಕ್ಷ ಜನರನ್ನು ಬಂಧಿಸಿ ತಂದ. ಒಂದು ಲಕ್ಷ ಜನರನ್ನು ಯುದ್ಧದಲ್ಲಿ ಕೊಲ್ಲಲಾಯ್ತು. ಹೆಣಗಳ ರಾಶಿಯೇ ಅಲ್ಲಿ ಬಿತ್ತು. ಅಶೋಕ ಜಯಶಾಲಿಯಾದ ನಿಜ ಆದರೆ ಸತ್ತವರ ದೇಹಗಳನ್ನು ಕಂಡು ಅವನು ಮಮ್ಮಲಮರುಗಿದ. ಜನರ ನೈತಿಕ ಮತ್ತು ಸಾಮಾಜಿಕ ಬದುಕಿನ ಮೇಲಾದ ಆಘಾತ ಅವನ ಜೀವ ಹಿಂಡಿತು. ಸದಾ ಒಳಿತನ್ನೇ ಮಾಡುವ ಪರಿವ್ರಾಜಕರು, ಶ್ರಮಣರು, ಬೌದ್ಧ ಪಂಥೀಯರು, ಸಂನ್ಯಾಸಿಗಳು ಇವರನ್ನೂ ಯುದ್ಧ ಬಿಡದೇ ಕೊಂದಿತ್ತು. ಸೆರೆ ಸಿಕ್ಕವರಲ್ಲಿ ಅವರೂ ಇದ್ದರು. ಯುದ್ಧ ಗುಣಮಾಡಲಾಗದಂತಹ ಗಾಯವನ್ನು ಮಾಡಿರುವುದು ಅವನರಿವಿಗೆ ಬಂತು. ಈಗ ಆತ ಶಸ್ತ್ರದ ಗೆಲುವು ಗೆಲುವಲ್ಲವೆಂಬುದನ್ನು ಅರಿತ. ಧರ್ಮದ ಗೆಲುವೇ ನಿಜವಾದ ಗೆಲುವು ಎಂದು ನಿಶ್ಚಯಿಸಿದ. ಧರ್ಮ ವಿಜಯಕ್ಕಾಗಿ ಪಣ ತೊಟ್ಟ. ಅಲ್ಲಿಂದಾಚೆಗೆ ಆತ ಬುದ್ಧನ ಅನುಯಾಯಿಯಾದ ಎನ್ನುತ್ತವೆ ಕೆಲವು ಸಾಹಿತ್ಯಗಳು. ಆದರೆ ಅಶೋಕನೇ ಸ್ತಂಭವೊಂದರ ಬರಹದ ಮೇಲೆ ಆರಂಭದ ಒಂದೆರಡು ವರ್ಷ ನಾನು ಸಾಮಾನ್ಯವಾಗಿಯೇ ಎಲ್ಲರಂತೆ ಇದ್ದೆ. ಆನಂತರವೇ ನನ್ನಲ್ಲಿ ಬಹಳ ಬದಲಾವಣೆ ಬಂದಿದ್ದು ಎಂಬರ್ಥದ ಸಾಲು ಬರೆಸಿದ್ದಾನೆ. ಹೀಗಾಗಿಯೇ ಆತ ಮೊದಲೇ ಬುದ್ಧಾನುಯಾಯಿಯಾಗಿದ್ದ ಆನಂತರ ಕಳಿಂಗ ಯುದ್ಧ ಅವನನ್ನು ಶಾಂತಿ-ಅಹಿಂಸೆಗಳತ್ತ ತೀವ್ರವಾಗಿ ಸೆಳೆಯಿತು ಎಂಬುದನ್ನು ಒಪ್ಪಬಹುದೇನೋ?
ಕಳಿಂಗ ಯುದ್ಧದ ನಂತರ ಅವನಲ್ಲಿ ಮಹತ್ತರವಾದ ಬದಲಾವಣೆ ಬಂದದ್ದನ್ನು ಕಳಿಂಗ ಶಾಸನದಲ್ಲಿ ಕಾಣಬಹುದು. ‘ಪ್ರತಿಯೊಬ್ಬರೂ ನನ್ನ ಮಕ್ಕಳಂತೆ. ಹೇಗೆ ನನ್ನ ಮಕ್ಕಳು ಇಹ ಮತ್ತು ಪರದಲ್ಲಿ ಸುಖ-ಸಮೃದ್ಧಿಯನ್ನು ಪಡೆಯಲೆಂದು ಆಶಿಸುತ್ತೇನೋ ಹಾಗೆಯೇ ಪ್ರತಿಯೊಬ್ಬನಿಗಾಗಿಯೂ ಪ್ರಾಥರ್ಿಸುತ್ತೇನೆ’ ಎಂದಿದೆ. ನಂದರ ಕಾಲದ ಮಗಧಕ್ಕೂ ಮೌರ್ಯರ ಕಾಲದ ಮಗಧಕ್ಕೂ ಇದ್ದ ಅಗಾಧ ವ್ಯತ್ಯಾಸ ಇದು. ಅಶೋಕ ಈ ಪರಿಯ ಪ್ರೇಮದಿಂದಲೇ ತನ್ನ ಪ್ರಜೆಗಳನ್ನು ಗೆದ್ದುಬಿಟ್ಟಿದ್ದ. ಇಲ್ಲವಾದಲ್ಲಿ ಅಷ್ಟು ವಿಸ್ತಾರವಾಗಿದ್ದ ಭೂಖಂಡವನ್ನು ಆಳುವುದು ತಮಾಷೆಯ ಮಾತಾಗಿರಲಿಲ್ಲ. ಇಡಿಯ ಸಾಮ್ರಾಜ್ಯ ಪ್ರಾಂತ್ಯಗಳಾಗಿ ವಿಭಜಿಸಲ್ಪಟ್ಟಿದ್ದವು. ಇವುಗಳಿಗೆ ರಾಜವಂಶದ ಕುಮಾರರು ಮುಖ್ಯಸ್ಥರಾಗಿ ನೇಮಿಸಲ್ಪಡುತ್ತಿದ್ದರು. ಒಬ್ಬ ಕುಮಾರ ತಕ್ಷಶಿಲೆ, ಮತ್ತೊಬ್ಬ ಸುವರ್ಣಗಿರಿಗೆ ನೇಮಿಸಲ್ಪಟ್ಟಿದ್ದರೆ ಮೂರನೆಯವ ಆಗ ತಾನೆ ವಶವಾಗಿದ್ದ ಕಳಿಂಗದ ಅಧಿಪತಿಯಾಗಿದ್ದ. ಉಜ್ಜಯನಿಗೆ ಮತ್ತೊಬ್ಬ. ಕುಮಾರರಲ್ಲದೇ ರಾಜ್ಯಪಾಲರೂ ಬೇರೆ ಬೇರೆ ಭಾಗಗಳಿಗೆ ಪ್ರಮುಖರಾಗಿ ನೇಮಿಸಲ್ಪಟ್ಟಿದ್ದರು. ಈ ಪ್ರಮುಖರು ಪ್ರಾಂತ್ಯಗಳೊಳಗಿನ ಬೇರೆ ಬೇರೆ ಜಿಲ್ಲೆಗಳಿಗೆ ಮಹಾಮಾತ್ರರೆಂಬ ಪ್ರಮುಖರನ್ನು ನೇಮಿಸಿಕೊಳ್ಳುತ್ತಿದ್ದರು. ಚಾಣಕ್ಯನ ಅರ್ಥಶಾಸ್ತ್ರದಲ್ಲಿ ಹೇಳಿರುವಂತೆಯೇ ಅಧಿಕಾರಿಗಳ ನೇಮಕವೂ ನಡೆದಿತ್ತು. ತೆರಿಗೆ ಸಂಗ್ರಹಿಸಲು ಜಿಲ್ಲಾ ಮಟ್ಟದಲ್ಲಿ ಯುಕ್ತ, ಉಪಯುಕ್ತರು; ಈಗಿನ ಸವರ್ೇ ಅಧಿಕಾರಿಗಳಂತೆ ಭೂಮಿ ಅಳತೆಗೆ ಹಗ್ಗ ಹಿಡಿದು ನಿಲ್ಲುವ ರಜ್ಜಕರು, ನ್ಯಾಯಸ್ಥಾನದಲ್ಲಿ ನ್ಯಾಯ ನೀಡುವ ಜವಾಬ್ದಾರಿ ಹೊತ್ತ ನಗರ ಅಥವಾ ಪೌರ ವ್ಯವಹಾರಕರು. ಇವರೆಲ್ಲ ಸೇರಿ ರಾಜ್ಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಅಶೋಕ ಚಾಣಕ್ಯ ಹೇಳಿದಂತೆ ಅಧಿಕಾರಿಗಳನ್ನು ನೇಮಿಸಿದ್ದಲ್ಲದೇ ಧರ್ಮ ಮಹಾಮಾತ್ರರನ್ನೂ ಎಲ್ಲೆಡೆ ಇರಿಸಿದ್ದ. ಬಹುಶಃ ಇವರು ಬುದ್ಧ ಧರ್ಮದ ಚಿಂತನೆಯನ್ನು, ಧರ್ಮ ವಿಜಯದ ಕಲ್ಪನೆಯನ್ನು ಜನರಲ್ಲಿ ತುಂಬುತ್ತಿದ್ದರೆನಿಸುತ್ತದೆ.
ಇವರೆಲ್ಲರೊಂದಿಗೆ ಸಂಪರ್ಕವಿಟ್ಟುಕೊಳ್ಳಲೆಂದೇ ಆಗಾಗ ಮಂತ್ರಿ ಪರಿಷದ್ ಸಭೆ ಸೇರುತ್ತಿದ್ದುದು. ಚಾಣಕ್ಯನ ದೃಷ್ಟಿಯಲ್ಲಿ ಮಂತ್ರಿಯೆಂದರೆ ‘ಇನ್ನು ಶುರುವಾಗಿರದ ಕೆಲಸವನ್ನು ಆರಂಭಿಸುವವನು ಮತ್ತು ಆರಂಭಗೊಂಡ ಕೆಲಸವನ್ನು ಪೂರ್ಣಗೊಳಿಸುವವನು’. ಹೀಗೆ ಮಂತ್ರಿ ಪರಿಷದ್ನೊಂದಿಗೆ ನಡೆದ ಚಚರ್ೆ ಮಹಾಮಾತ್ರರವರೆಗೆ ಸಲೀಸಾಗಿ ಮುಟ್ಟುವಂತಹ ವ್ಯವಸ್ಥೆ ಇತ್ತು.
ಅಶೋಕ ರಾಜ್ಯಭಾರವನ್ನು ಚೆನ್ನಾಗಿಯೇ ನಡೆಸುತ್ತಿದ್ದ. ಅವನೊಳಗೆ ಬುದ್ಧತ್ವದ ಪ್ರಕಟೀಕರಣ ಹೆಚ್ಚು ಹೆಚ್ಚಾದಂತೆ ಅವನು ದಾರಿತಪ್ಪಿದ. ಕಳಿಂಗ ಗೆದ್ದ ಒಂದೆರಡು ವರ್ಷಗಳ ಒಳಗೆ ಆತ ರಾಜನಾಗಿ ಕೈಗೊಳ್ಳುತ್ತಿದ್ದ ರಾಜನೈತಿಕ ಪ್ರವಾಸಗಳನ್ನು ನಿಲ್ಲಿಸಿದ, ಧಾಮರ್ಿಕ ಪ್ರವಾಸ ಹೆಚ್ಚು ಹೆಚ್ಚು ಮಾಡಿದ. ಬೋಧಿವೃಕ್ಷದ ಬಳಿ ಹೋಗಿ ಧರ್ಮಯಾತ್ರೆಯನ್ನು ಆರಂಭಿಸಿರುವ ಸೂಚನೆ ನೀಡಿದ. ಬರುಬರುತ್ತಾ ರಾಜ್ಯಭಾರದ ಆಸಕ್ತಿ ಕಡಿಮೆಯಾಗಿ ಆತ ಧರ್ಮಯಾತ್ರೆಗೇ ಹೆಚ್ಚು ಸಮಯ ಮೀಸಲಾಗಿಟ್ಟ. ರಾಜ್ಯ ನಡೆಸುವಲ್ಲಿ ಅವನಿಗೆ ಆಸಕ್ತಿ ಕಡಿಮೆಯಾಯ್ತು. ಬುದ್ಧಾನುಯಾಯಿಗಳಿಗೆ ಧಮ್ಮದಾನ ಕೊಡುವುದರಲ್ಲಿ ಅವನಿಗೆ ಎಲ್ಲಿಲ್ಲದ ಪ್ರೀತಿ. ತನ್ನ ಬಳಿಯಿದ್ದ ಚಿನ್ನವನ್ನೆಲ್ಲ ಕೊಟ್ಟ ಮೇಲೆ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುವ ಸ್ಥಿತಿಗೆ ಬಂದು ಬಿಟ್ಟಿದ್ದನಂತೆ ಅಶೋಕ. ಬೆಳ್ಳಿಯನ್ನೂ ಖಾಲಿ ಮಾಡಿಕೊಂಡ. ಇದ್ದ ಕಬ್ಬಿಣದ ಪಾತ್ರೆಗಳೂ ಮುಗಿದ ಮೇಲೆ ಊಟಕ್ಕೆ ನೆಲ್ಲಿಕಾಯಿ ಗತಿಯಾಯ್ತೆಂದೂ ಕೆಲವರು ಹೇಳುತ್ತಾರೆ!

002
ಅಶೋಕನ ಕಾಲಕ್ಕೆ ಪಾಟಲಿಪುತ್ರದಲ್ಲಿ ಬುದ್ಧಾನುಯಾಯಿಗಳ ಮೂರನೇ ಬೃಹತ್ ಸಭೆ ನಡೆದಿತ್ತಂತೆ. ಬುದ್ಧನ ಮಾತುಗಳ ಮೇಲಿನ ಚಚರ್ೆಗೆ, ಅನುಮಾನಗಳ ನಿವಾರಣೆಗಾಗಿ ಈ ಸಭೆ. ಇಷ್ಟಾದರೂ ಸಂಘಗಳು ಬುದ್ಧನನ್ನು ಅರಿತು ಆಚರಿಸುವಲ್ಲಿ ಸೋಲುತ್ತಿದ್ದವು. ಹೀಗಾಗಿಯೇ ಬೇಸತ್ತ ಅಶೋಕ ಸಂಘಗಳಲ್ಲಿನ ಒಡಕಿನ ಕುರಿತಂತೆ ಶಾಸನವನ್ನು ಬರೆಸಿದ. ಬುದ್ಧನ ಆಶಯಗಳಿಗೆ ತಕ್ಕಂತೆ ನಡೆದುಕೊಳ್ಳದ ಭಿಕ್ಷು, ಭಿಕ್ಷುಣಿಯರನ್ನು ಕಿತ್ತೊಗೆಯಲಾಗುವುದು ಎಂದೂ ಎಚ್ಚರಿಸಿದ. ಒಟ್ಟಾರೆ ಅಶೋಕ ಬೌದ್ಧ ಮತದ ಬೆಳವಣಿಗೆಗೆಂದು ತಾನು ಎಷ್ಟು ಪ್ರಯತ್ನ ಪಟ್ಟನೋ ಅಷ್ಟೇ ಮಟ್ಟಿಗೆ ಅದು ಅವನತಿಯತ್ತ ಸಾಗಿತು.
ಹೌದು. ನಿಸ್ಸಂಶಯವಾಗಿ. ಭಾರತದಲ್ಲಿ ರಾಜನೆಂದಿಗೂ ತನ್ನ ಧರ್ಮವನ್ನೇ ಅನುಸರಿಸಬೇಕೆಂದು ಯಾರಿಗೂ ತಾಕೀತು ಮಾಡಿದ್ದಿಲ್ಲ. ಎಷ್ಟೋ ಬಾರಿ ಹೊರಗೆ ಅವನನ್ನು ನೋಡಿ ಅವನ ಮತ ಗುರುತಿಸೋದು ಕಷ್ಟವಾಗುತ್ತಿತ್ತು. ಆದರೆ ರಾಜನ ಆಶ್ರಯವಿದೆಯೆಂದರೆ ಆ ಮತಾನುಯಾಯಿಗಳು ಸಹಜವಾಗಿಯೇ ಇತರರ ಕಿರಿಕಿರಿಯಿಂದ ಪಾರಾಗಿ ಸಹಜ ಬದುಕು ನಡೆಸುತ್ತಿದ್ದರು. ಅಶೋಕ ಯಾರನ್ನೂ ಬುದ್ಧಾನುಯಾಯಿಗಳಾಗುವಂತೆ ಪ್ರೇರೇಪಿಸಲಿಲ್ಲವಾದರೂ ತಾನು ಅವರಿಗೆ ಸಾಕಷ್ಟು ಸವಲತ್ತು ಕೊಟ್ಟ. ಬಹುಮಾನಗಳನ್ನು ಕೊಟ್ಟ. ಅವರ ತೆರಿಗೆ ಕಡಿಮೆ ಮಾಡಿದ. ಇದು ಸಹಜವಾಗಿಯೇ ಸಮಾಜದ ಇತರೆ ವರ್ಗಗಳನ್ನು ಆಕಷರ್ಿಸಿತು. ಅನೇಕರು ಬೌದ್ಧ ಮತ ಸ್ವೀಕರಿಸಿದರು. ಒಳಗೆ ಹಳೆಯ ಪದ್ಧತಿಯಂತೆ ಬದುಕಿದರು ಹೊರಗೆ ಎಲ್ಲರನ್ನೂ ಮೆಚ್ಚಿಸುವ ಸೋಗು ಹಾಕಿಕೊಂಡರು. ಪರಿಣಾಮ ಬುದ್ಧ ಸಂಘಕ್ಕೆ ಎಂಥೆಂಥವರೋ ಸೇರಿಕೊಂಡು ಅದರ ಪಾವಿತ್ರ್ಯ ಹಾಳಾಗಿ ಜನ ಮಾನಸದಿಂದ ದೂರವಾಗತೊಡಗಿತು. ಕೊನೆಗೆ ಈ ರಾಷ್ಟ್ರದಿಂದಲೇ ಕಾಲುಕೀಳಬೇಕಾಯ್ತು. ಅವಕ್ಕೆಲ್ಲಾ ಮೂಲ ಕಾರಣವಾಗಿದ್ದು ಅಶೋಕನೇ. ಸಾಹಿತ್ಯಗಳಲ್ಲಿ ಅಶೋಕನನ್ನು ಬುದ್ಧನ ನಂತರದ ಮೇರು ವ್ಯಕ್ತಿ ಎಂದು ಬಣ್ಣಿಸುವುದು ನಿಜವೇ ಆದರೂ ಆತ ಅಥರ್ೈಸಿಕೊಂಡ ಬುದ್ಧ ಆತನ ನಾಡಿನಲ್ಲಿಯೇ ಉಳಿಯಲಿಲ್ಲ.
ಅಶೋಕ ಕಳಿಂಗ ಯುದ್ಧದ ನಂತರ ಭಿಕ್ಷುವಾಗಿಬಿಟ್ಟಿದ್ದರೆ ಚೆನ್ನಾಗಿತ್ತು. ಆತ ರಾಜನಾಗಿ ಬಲಾಢ್ಯ ಮೌರ್ಯ ಸಾಮ್ರಾಜ್ಯದ ಚಕ್ರವತರ್ಿಯಾಗಿ, ಸಂತತ್ವವನ್ನೂ ಜೊತೆಗೂಡಿಸಿಕೊಂಡಿದ್ದು ಭಾರತದ ರಾಷ್ಟ್ರೀಯತೆಯನ್ನು ಕೊಚ್ಚಿ ಹಾಕಿತ್ತು. ರಾಜಕೀಯವಾಗಿ ಒಂದು ಬಲಾಢ್ಯ ಶಕ್ತಿಯಾಗಿದ್ದ ಭಾರತ ಈಗ ಬರಿಯ ಸಂಮಿಶ್ರ ಸಂಸ್ಕೃತಿಯ, ಮಾನವತೆಯ ಮಹಾಶಕ್ತಿಯಾಗಿಯಷ್ಟೇ ಉಳಿದುಬಿಟ್ಟಿತು. ಭಿಕ್ಷುಗಳ ಸಂಖ್ಯೆ ವೃದ್ಧಿಸಿದಂತೆ ಭಾರತದ ತಾಂತ್ರಿಕ ಕೌಶಲ್ಯ ಕುಸಿಯಿತು. ಕಾಖರ್ಾನೆಗಳು ಮುಚ್ಚಲ್ಪಟ್ಟವು. ಜಗತ್ತಿನ ಪಾಲಿಗೆ ಬಲುದೊಡ್ಡ ಉತ್ಪಾದಕ ಮತ್ತು ರಫ್ತು ರಾಷ್ಟ್ರವಾಗಿದ್ದ ಭಾರತ ಈಗ ಮತ ರಫ್ತು ಮಾಡುವ ರಾಷ್ಟ್ರವಾಗಿ ಉಳಿಯಿತು. ಬೌದ್ಧ ಮತದ ಪ್ರಭಾವ ಮುಂದೆ ಜ್ಯೂಗಳ ಮೇಲೆ ಕ್ರಿಶ್ಚಿಯನ್ನರ ಮೇಲೆ ಸಾಕಷ್ಟಾಯಿತೆನ್ನುವುದು ನಿಜವಾದರೂ ಭಾರತದ ಸೈನಿಕ ಶಕ್ತಿ ಕುಂದಲಾರಂಭಿಸಿತ್ತು. ಅಪರಾಧಗಳಿಗೆ ಮಾನವೀಯ ದೃಷ್ಟಿಯಿಂದ ಶಿಕ್ಷೆ ಕಡಿಮೆ ಇದ್ದುದರಿಂದ ಅಪರಾಧಿಗಳೂ ಹೆಚ್ಚಾದರು.
ಇವುಗಳ ನಡುವೆಯೂ ಅಶೋಕನ ದಾನದ ಗುಣ ಕಡಿಮೆಯಾಗಿರಲಿಲ್ಲ. ಮಂತ್ರಿಗಳು ಅವನಿಗೆ ಪರಿಪರಿಯಾಗಿ ತಿಳಿ ಹೇಳಿದರೂ ಕೇಳುವ ಸ್ಥಿತಿಯಲ್ಲಿ ಅವನಿರಲಿಲ್ಲ. ಬರುಬರುತ್ತ ಅಶೋಕ ಮೂಲೆಗುಂಪಾಗಿಬಿಟ್ಟ. ಅವನ ಮಾತನ್ನು ಈಗ ಯಾರೂ ಕೇಳುತ್ತಿರಲಿಲ್ಲ. ‘ಮೊದಲೆಲ್ಲ ನಾನು ಆಜ್ಞೆ ಮಾಡಿದರೆ ಅದನ್ನು ವಿರೋಧಿಸುವವರು ಯಾರೂ ಇರಲಿಲ್ಲ, ಈಗ ನನ್ನ ಆಜ್ಞೆ ಪಾಲಿಸುವವರೇ ಇಲ್ಲ’ ಎಂದು ಅವನು ಅಲವತ್ತುಕೊಂಡದ್ದನ್ನು ಕೆಲವು ಇತಿಹಾಸಕಾರರು ಗುರುತಿಸಿದ್ದಾರೆ. ಹಾಗೊಂದು ಮಾತು ‘ಸೂತ್ರಾಲಂಕಾರ’ ಕೃತಿಯಲ್ಲೂ ಉಲ್ಲೇಖಗೊಂಡಿದೆ.
ಭಿಕ್ಷುಗಳಿಗೆ ತಮ್ಮ ಒಡೆಯನ ಈ ಪರಿಯ ದಾರುಣ ಸ್ಥಿತಿ ದುಃಖ ತಂದಿರಲೇಬೇಕು. ಹೀಗಾಗಿ ಅವರಂತೂ ಅಶೋಕನ ಸ್ಥಾನ ಕಸಿಯುವ ಪ್ರಯತ್ನದಲ್ಲಿದ್ದ ಮಂತ್ರಿಗಳ ಮೇಲೆ ಗೂಬೆ ಕೂರಿಸುತ್ತಾರೆ. ಕೆಲವರಂತೂ ಕೊನೆಗಾಲದಲ್ಲಿ ದಂಗೆ ನಡೆದು ಅಶೋಕನನ್ನು ಕೆಳಗಿಳಿಸಲಾಯ್ತು ಎಂದೂ ಆರೋಪಿಸುತ್ತಾರೆ. ಸತ್ಯಾಸತ್ಯತೆ ಏನೇ ಇರಲಿ. ಕೊನೆಯ ದಿನಗಳಲ್ಲಿ ಆತ ಸಾಕಷ್ಟು ಕಿರಿಕಿರಿಗೊಳಗಾಗಿದ್ದ. ಅನೇಕ ಪ್ರಾಂತ್ಯಗಳು ಪ್ರತ್ಯೇಕಗೊಳ್ಳುವ ಬಯಕೆಯಿಂದ ದಂಗೆಯೆದ್ದಿದ್ದವು. ಬರಿ ಅಶೋಕನ ವಿರುದ್ಧ ಮಾತ್ರವಲ್ಲ ಬುದ್ಧ ಧರ್ಮದ ವಿರುದ್ಧವೂ ಪ್ರತಿಭಟನೆಗಳಾದವು. ಮೌರ್ಯ ಪರಂಪರೆಯನ್ನು ಧಿಕ್ಕರಿಸಿ ಒಂದೇ ಮತಕ್ಕೆ ಆತುಕೊಂಡ ಅಶೋಕನ ಮೇಲಿನ ಆಕ್ರೋಶ ಅದು. ಯಾವುದೇ ಒಂದು ಮತದ ತುಷ್ಟೀಕರಣಕ್ಕೆ ಮುಖ್ಯಮಂತ್ರಿಗಳು ನಿಂತಾಗ ರಾಜ್ಯದ ಜನತೆಯ ಆಕ್ರೋಶವೆಲ್ಲ ಮತಾನುಯಾಯಿಗಳ ಮೇಲೆ ತಿರುಗುವುದಿಲ್ಲವೇ ಹಾಗೆಯೇ ಇದು. ದಿವ್ಯಾವಧಾನ ಕೃತಿಯ ಪ್ರಕಾರ ವೈದಿಕ ಮತಾನುಯಾಯಿಗಳು, ಜೈನರು ಮತ್ತು ಅಶೋಕನ ನಡುವೆ ತೀವ್ರವಾದ ಕಾಳಗವೇ ನಡೆದುಹೋಯಿತು. ಸ್ವತಃ ಅಶೋಕನ ಪತ್ನಿ ಆತನ ವಿರುದ್ಧವಾಗಿ ನಿಂತು ಅನೇಕ ಚಟುವಟಿಕೆ ನಡೆಸಿದ್ದನ್ನೂ ಕೆಲವು ಶಾಸನಗಳ ಮೂಲಕ ಪತ್ತೆ ಹಚ್ಚಬಹುದು.
ಚಾಣಕ್ಯ ಆಯರ್ಾವರ್ತದ ನಿಮರ್ಾಣದ ಕನಸನ್ನು ಕಟ್ಟಿ ಅದಕ್ಕಾಗಿ ತನ್ನ ಬುದ್ಧಿಮತ್ತೆಯನ್ನು ಧಾರೆಯೆರೆದು ಚಂದ್ರಗುಪ್ತನ ಕೈಲಿ ಅದನ್ನು ನಿಮರ್ಿಸಿದ್ದ. ಅದರ ಮೂಲಸತ್ತ್ವವನ್ನೇ ಅರಿಯದೇ ಅಶೋಕ ಶಾಂತಿಯ ಭ್ರಮೆಯಿಂದಲೇ ಆಯರ್ಾವರ್ತವನ್ನು ಛಿದ್ರಛಿದ್ರಗೊಳಿಸಲು ಅಣಿಯಾಗಿದ್ದ. ರಾಷ್ಟ್ರೀಯ ಏಕತೆಯ ಭಾವ ಗಟ್ಟಿಯಾಗಲು ಒಂದು ಬಲವಾದ ರಾಜಕೀಯ ಶಕ್ತಿ ಬೇಕು. ಚಂದ್ರಗುಪ್ತ, ಬಿಂದುಸಾರರು ಅದನ್ನು ಒದಗಿಸಿಕೊಟ್ಟಿದ್ದರು. ಅಶೋಕ ಅದನ್ನು ಅಥರ್ೈಸಿಕೊಳ್ಳಲಾರದೇ ಹೋದ. ರಾಷ್ಟ್ರವೊಂದಕ್ಕೆ ಬಲಾಢ್ಯವಾದ ಸೇನೆ ಬೇಕು. ಅದು ಗಡಿಯ ರಕ್ಷಣೆಗೆ, ವಿಸ್ತಾರಕ್ಕಷ್ಟೇ ಅಲ್ಲ. ರಾಷ್ಟ್ರದ ಪರಂಪರೆ, ಇತಿಹಾಸವನ್ನು ಉಳಿಸಲು! ಕಳಿಂಗ ಯುದ್ಧದ ನಂತರ ‘ಈ ನೋವಿನ ನೂರನೇ ಒಂದು ಪಾಲು, ಸಾವಿರದ ಒಂದನೇ ಪಾಲು ನೋವು ಯಾರಿಗಾದರೂ ಆದರೂ ಅದು ನನಗೆ ಸಹಿಸಲಾಗದ ವೇದನೆ ತರುವುದು’ ಎಂದು ಹೇಳುವ ಮೂಲಕ ಅಶೋಕ ಇವೆಲ್ಲವನ್ನೂ ಗಾಳಿಗೆ ತೂರಿಬಿಟ್ಟ. ಅದಕ್ಕೂ ಮಿಗಿಲಾಗಿ ತನ್ನದೇ ಸೈನಿಕರ ಆತ್ಮಸ್ಥೈರ್ಯ ಕಸಿದುಬಿಟ್ಟ. ಅವನೀಗ ಧರ್ಮದ ಡೋಲು ಬಡಿಯಲಾರಂಭಿಸಿದ್ದ. ತನ್ನ ಮಕ್ಕಳು, ಮೊಮ್ಮಕ್ಕಳಿಗೆಲ್ಲ ಗಡಿ ವಿಸ್ತಾರದ ಕನಸನ್ನು ಬಿಟ್ಟು ಧಮ್ಮವಿಜಯದ ಕನಸು ಕಾಣಿರೆಂದು ತಾಕೀತು ಮಾಡಿದ.
ಆರ್ಯ ಧರ್ಮದಲ್ಲಿ ಶಾಂತಿ ಮತ್ತು ಸಹನೆಗೆ ಕೊರತೆಯಿರಲಿಲ್ಲ. ಆದರೆ ಶಸ್ತ್ರಕ್ಕೂ ಅಷ್ಟೇ ಮಹತ್ವವಿತ್ತು. ಜನಕನಂತಹವರು ಋಷಿತುಲ್ಯ ಜ್ಞಾನಿಗಳಾಗಿದ್ದರೂ ಶಸ್ತ್ರದ ಮೂಲಕ ರಾಷ್ಟ್ರ ರಕ್ಷಿಸುವ ಹೊಣೆಯನ್ನು ಸಮ-ಸಮವಾಗಿ ನಿಭಾಯಿಸುತ್ತಿದ್ದರು. ಆದರೆ ಅಶೋಕ ಜ್ಞಾನಿಯೆನಿಸಿಕೊಳ್ಳುವ ತವಕದಲ್ಲಿ ಶಸ್ತ್ರವನ್ನೇ ಧಿಕ್ಕರಿಸಿದ. ಇದು ಚಾಣಕ್ಯನ ಏಕೀಕೃತ ಆಯರ್ಾವರ್ತದ ಮತ್ತು ಜಗತ್ತನ್ನೇ ವ್ಯಾಪಿಸಿದ ಸಾಮ್ರಾಜ್ಯದ ಕಲ್ಪನೆಗೆ ಬಲವಾದಪೆಟ್ಟುಕೊಟ್ಟಿತು. ಚಂದ್ರಗುಪ್ತ-ಬಿಂದುಸಾರರ ಕಾಲಕ್ಕೆ ಹಾಗೆ ನೋಡಿದರೆ ನಂದರ ಕಾಲಕ್ಕೂ ಮಗಧದ ಸೈನ್ಯವನ್ನು ಕಂಡರೆ ಹೆದರಿ ನಡುಗುತ್ತಿದ್ದ ಜಗತ್ತು ಈಗ ಆಕ್ರಮಣಕ್ಕೆ ತಯಾರಾಗಲಾರಂಭಿಸಿತು. ಗ್ರೀಕರು, ಶಕರು, ಹೂಣರು, ಕುಶಾನರು, ಪಹ್ಲವರು ಇವರೆಲ್ಲ ಭಾರತದೆಡೆಗೆ ದೃಷ್ಟಿ ಹಾಕಲು ಸಾಧ್ಯವಾಗಿದ್ದು ಬಹುಶಃ ಇದೇ ಕಾರಣಕ್ಕೇ. ಅಶೋಕ ತಾನು ಸಂತನಾದ, ದೇಶವನ್ನು ಬಲಹೀನಗೊಳಿಸಿಬಿಟ್ಟ. ಅದಕ್ಕೆ ಕಳಿಂಗಯುದ್ಧ ಅಶೋಕನ ಬದುಕಿಗೆ ತಿರುವಾದರೆ, ಅಶೋಕ ಭಾರತದ ರಾಜನಾಗಿದ್ದು ಭಾರತದ ಪಾಲಿಗೇ ಬಲುದೊಡ್ಡ ತಿರುವು ಅಂತ ಆರಂಭದಲ್ಲಿಯೇ ಹೇಳಿದ್ದು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s